NCB in car insurance
MOTOR INSURANCE
Up to

100% ಕ್ಲೈಮ್

ಸೆಟಲ್ಮೆಂಟ್ ಅನುಪಾತ^
8700+ Cashless Network Garages ^

8700+ ನಗದುರಹಿತ

ಗ್ಯಾರೇಜುಗಳುˇ
Overnight Car Repair Services ^

ಓವರ್‌ನೈಟ್

ವಾಹನ ರಿಪೇರಿಗಳು
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ವಾಹನಕ್ಕಾಗಿ ಮೋಟಾರ್ ಇನ್ಶೂರೆನ್ಸ್

Motor Insurance

ಪ್ರತಿ ಪಾಲಿಸಿದಾರರು ಅನಿರೀಕ್ಷಿತ ಘಟನೆಗಳಿಂದ ವಾಹನಕ್ಕೆ ಆಗುವ ಹಾನಿ ನಷ್ಟಗಳಿಂದಾಗಿ ತಮ್ಮ ವೆಚ್ಚಗಳನ್ನು ರಕ್ಷಿಸಲು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಮೋಟಾರ್ ವಾಹನ ಇನ್ಶೂರೆನ್ಸ್ ನಿಮ್ಮ ವಾಹನವನ್ನು ಮನಶ್ಶಾಂತಿಯಿಂದ ಸವಾರಿ ಮಾಡಲು ಸಹಾಯ ಮಾಡುತ್ತದೆ. ನಿಮ್ಮ ವಾಹನವು ನಿಮ್ಮ ಹೃದಯದಲ್ಲಿ ವಿಶೇಷ ಸ್ಥಳವನ್ನು ಹೊಂದಿದೆ. ಅನಿರೀಕ್ಷಿತ ಹಾನಿಗಳು ಅಥವಾ ನಷ್ಟದ ವಿರುದ್ಧ ನಿಮ್ಮ ವಾಹನಗಳನ್ನು ರ‍್ಯಾಪ್ ಮಾಡಲು ನಿಮಗೆ ಸಾಧ್ಯವಾಗದಿದ್ದರೂ, ಮೋಟಾರ್ ಇನ್ಶೂರೆನ್ಸ್‌ನೊಂದಿಗೆ ಅವುಗಳ ಭದ್ರತೆಯನ್ನು ನೀವು ಖಚಿತಪಡಿಸಿಕೊಳ್ಳಬಹುದು. ಇನ್ನು ಮುಂದೆ ನೋಡಬೇಡಿ, ಎಚ್‌ಡಿಎಫ್‌ಸಿ ಎರ್ಗೋ ಮೋಟಾರ್ ವಾಹನ ಇನ್ಶೂರೆನ್ಸ್‌ಗೆ ನಿಮ್ಮ ಕಾರು ಅಥವಾ ನಿಮ್ಮ ಟೂ ವೀಲರ್ ವಾಹನಕ್ಕಾಗಿ ನಿಮ್ಮ ಒನ್ ಸ್ಟಾಪ್ ಪರಿಹಾರವಾಗಿದೆ.

ಅಪಘಾತಗಳು ಮತ್ತು ರಸ್ತೆ ದುರ್ಘಟನೆಗಳನ್ನು ತಪ್ಪಿಸಲಾಗದಿದ್ದರೂ, ನಿಮ್ಮ ಪ್ರೀತಿಪಾತ್ರ ಕಾರು/ಬೈಕಿಗೆ ಮೋಟಾರ್ ಇನ್ಶೂರೆನ್ಸ್ ಹೊಂದಿರುವುದರಿಂದ ನಿಮ್ಮ ವಾಹನಕ್ಕೆ ಹೆಚ್ಚಿನ ರಿಪೇರಿ ಬಿಲ್ ಪಾವತಿಸುವುದರಿಂದ ನಿಮ್ಮನ್ನು ರಕ್ಷಿಸಬಹುದು. ಭೂಕಂಪ, ಪ್ರವಾಹ, ಭೂಕುಸಿತ ಇತ್ಯಾದಿಗಳಂತಹ ನೈಸರ್ಗಿಕ ವಿಕೋಪದಿಂದಾಗಿ ಅಥವಾ ಮಾನವ ನಿರ್ಮಿತ ವಿಪತ್ತುಗಳಿಂದಾಗಿ ನಿಮ್ಮ ವಾಹನಕ್ಕೆ ಉಂಟಾಗಬಹುದಾದ ಹಾನಿಗಳಿಗೆ ನೀವು ಸರಿಯಾದ ಮೋಟಾರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವಾಗ ಪರಿಹಾರ ನೀಡಬಹುದು. ನೀವು ವಾಹನವನ್ನು ಖರೀದಿಸಿದಾಗ, ಇನ್ಶೂರೆನ್ಸ್ ಖರೀದಿಸುವುದು ಕೇವಲ ಕಾನೂನು ಮ್ಯಾಂಡೇಟ್ ಮಾತ್ರವಲ್ಲದೆ, ಅತೀ ಅಗತ್ಯದ ವಿಷಯವಾಗಿದೆ. ನಿಮ್ಮ ಕಾರ್/ಬೈಕ್ ಅನುಭವಿಸಿದ ದುರಸ್ತಿಯ ವೆಚ್ಚಗಳನ್ನು ಕವರ್ ಮಾಡಲು ಕವರೇಜ್ ನಿಮಗೆ ಸಹಾಯ ಮಾಡುತ್ತದೆ. ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್ಲೈನಿನಲ್ಲಿ ಮೋಟಾರ್ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪ್ಲಾನ್ ಆಯ್ಕೆ ಮಾಡಬಹುದು.

ವಾಹನಕ್ಕಾಗಿ ನೀಡುವ ಮೋಟಾರ್ ಇನ್ಶೂರೆನ್ಸ್ ವಿಧಗಳು

ನಿಮ್ಮ ಕಾರ್/ಬೈಕ್ ರಕ್ಷಣೆಗೆ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ. ನೀವು ಆಯ್ಕೆ ಮಾಡಲು ಲಭ್ಯವಿರುವ ಪ್ಲಾನ್‌ಗಳ ವಿಧಗಳು ಇಲ್ಲಿವೆ

ಕಾರ್ ಇನ್ಶೂರೆನ್ಸ್ ಅಥವಾ ಫೋರ್-ವೀಲರ್ ಇನ್ಶೂರೆನ್ಸ್ ಎಂದರೆ ಇನ್ಶೂರೆನ್ಸ್ ಪೂರೈಕೆದಾರರು ಪ್ರೀಮಿಯಂಗೆ ಪ್ರತಿಯಾಗಿ, ಮಾಲೀಕರ ಕಾರಿಗೆ ಅಪಘಾತಗಳು, ನೈಸರ್ಗಿಕ ವಿಕೋಪಗಳು, ಕಳ್ಳತನ ಇತ್ಯಾದಿಗಳಿಂದ ಉಂಟಾದ ಹಾನಿ ಅಥವಾ ವೆಚ್ಚಗಳ ವಿರುದ್ಧ ಕವರೇಜ್ ಒದಗಿಸುವ ಒಪ್ಪಂದವಾಗಿದೆ. ಔಪಚಾರಿಕ ಒಪ್ಪಂದಕ್ಕೆ ಎರಡೂ ಪಕ್ಷಗಳು ಸಹಿ ಮಾಡುವ ಮೂಲಕ, ಇದು ಕಾನೂನು ಇನ್ಶೂರೆನ್ಸ್ ಕವರ್ ಆಗುತ್ತದೆ. ಕೆಲವು ವಿಧದ ಕಾರ್ ಇನ್ಶೂರೆನ್ಸ್‌ಗಳನ್ನು ಕೆಳಗೆ ನೀಡಲಾಗಿದೆ:

1
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್
To reduce the financial strain on vehicle owners, the government mandates a minimum of third party liability insurance coverage under the Motor Vehicle Act 1988. Third party car insurance pays the unanticipated accidental damage or losses incurred to a third person because of the policyholder’s car. This coverage includes accidental expense, damage to the property, disability, or death.
2
ಸಮಗ್ರವಾದ ಕಾರ್ ಇನ್ಶೂರೆನ್ಸ್
ಸಮಗ್ರ ಕಾರ್ ಇನ್ಶೂರೆನ್ಸ್ ನಿಮ್ಮ ಕಾರಿಗೆ ಸಂಪೂರ್ಣ ಕವರೇಜ್ ಆಗಿದೆ. ಇದು ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಸ್ವಂತ ಹಾನಿ ಕವರೇಜನ್ನು ಒಳಗೊಂಡಿದೆ. ಇದರರ್ಥ ನಿಮ್ಮ ಗಾಡಿ ಅನಿರೀಕ್ಷಿತವಾಗಿ ಯಾರಿಗಾದರೂ ಗುದ್ದಿದರೆ, ನಿಮ್ಮ ಕಾರಿಗೆ ಮತ್ತು ನೀವು ಗುದ್ದಿದ ವ್ಯಕ್ತಿಗೆ ಆದ ಆಕಸ್ಮಿಕ ಹಾನಿಗೆ ಪರಿಹಾರ ನೀಡಲಾಗುತ್ತದೆ. ನೀವು ಆ್ಯಡ್-ಆನ್‌ಗಳನ್ನು ಕೂಡ ಆಯ್ಕೆ ಮಾಡಬಹುದು. ರಿಪೇರಿ ಶುಲ್ಕಗಳ ಮೇಲೆ ಹೆಚ್ಚಿನ ಮೊತ್ತದ ಹಣವನ್ನು ಖರ್ಚು ಮಾಡಲು ನೀವು ಬಯಸದಿದ್ದರೆ ಸಮಗ್ರ ಕಾರ್ ಇನ್ಶೂರೆನ್ಸ್ ಅನ್ನು ಶಿಫಾರಸು ಮಾಡಲಾಗುತ್ತದೆ.
3
ಬಂಡಲ್ಡ್ ಕಾರ್ ಇನ್ಶೂರೆನ್ಸ್
ಪ್ಲಾನ್ (1+3)
ಹೊಸ ಇನ್ಶೂರೆನ್ಸ್ ನಿಯಮಗಳ ಪ್ರಕಾರ, ಸೆಪ್ಟೆಂಬರ್ 2019 ನಂತರ ಖರೀದಿಸಿದ ಕಾರು ಬಂಡಲ್ಡ್ ಮೋಟಾರ್ ಇನ್ಶೂರೆನ್ಸ್ ಹೊಂದಿರಬೇಕು, ಅದು 3 ವರ್ಷಗಳ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರೇಜ್ ಮತ್ತು 1 ವರ್ಷಗಳ ಸ್ವಂತ ಹಾನಿಯನ್ನು ಒಳಗೊಂಡಿರುತ್ತದೆ. ವಾರ್ಷಿಕ ಆಧಾರದ ಮೇಲೆ ಸ್ವಂತ ಹಾನಿ ಕವರ್ ಅನ್ನು ಅದೇ ವಿಮಾದಾತರಿಂದ ಬಂಡಲ್ಡ್ ಪ್ಲಾನ್ ಆಗಿ ಅಥವಾ ಬೇರೆ ವಿಮಾದಾತರ ಬಳಿ ನವೀಕರಿಸಬಹುದು.
4
ಸ್ಟ್ಯಾಂಡ್‌ಅಲೋನ್ ಕಾರ್ ಇನ್ಶೂರೆನ್ಸ್
ಸ್ಟ್ಯಾಂಡ್‌ಅಲೋನ್ ಕಾರ್ ಇನ್ಶೂರೆನ್ಸ್ ಕಾರಿಗೆ ನಿಮ್ಮಿಂದಾದ ಸ್ವಂತ ಹಾನಿಯಿಂದ ನಿಮ್ಮನ್ನು ರಕ್ಷಿಸುತ್ತದೆ. ಆದಾಗ್ಯೂ, ತಮ್ಮ ಕಾರಿಗೆ ಮಾನ್ಯ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದಿರುವವರಿಗೆ ಮಾತ್ರ ಈ ಇನ್ಶೂರೆನ್ಸ್ ಪ್ಲಾನ್ ಒದಗಿಸಲಾಗುತ್ತದೆ. ಈ ಕವರೇಜ್ ಆಕ್ಸಿಡೆಂಟಲ್ ಕವರ್, ನೈಸರ್ಗಿಕ ವಿಪತ್ತುಗಳು, ಬೆಂಕಿ ಮತ್ತು ಕಳ್ಳತನವನ್ನು ಕವರ್ ಮಾಡುತ್ತದೆ. ಆದ್ದರಿಂದ, ಎಲ್ಲಾ ಹೊಸ ಕಾರ್ ಇನ್ಶೂರೆನ್ಸ್ ಮಾಲೀಕರು ಎರಡನೇ ವರ್ಷದಿಂದ ಸ್ಟ್ಯಾಂಡ್‌ಅಲೋನ್ ಕಾರ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಬಹುದು. ಏಕೆಂದರೆ ಅವರ ಬಂಡಲ್ಡ್ ಕಾರ್ ಇನ್ಶೂರೆನ್ಸ್ ಪಾಲಿಸಿಯು 3 ವರ್ಷಗಳ ಥರ್ಡ್ ಪಾರ್ಟಿ ಕವರೇಜ್ ಒದಗಿಸುತ್ತದೆ.

ಟೂ ವೀಲರ್ ಇನ್ಶೂರೆನ್ಸ್ ಅನಿರೀಕ್ಷಿತ ಅಪಘಾತಗಳು, ನೈಸರ್ಗಿಕ ವಿಪತ್ತುಗಳು ಇತ್ಯಾದಿಗಳಿಂದ ಬೈಕ್ ಮಾಲೀಕರಿಗೆ ಕವರೇಜ್ ಒದಗಿಸುತ್ತದೆ. ಕೆಳಗಿನ ಕೆಲವು ವಿಧದ ಟೂ ವೀಲರ್ ಇನ್ಶೂರೆನ್ಸ್‌ಗಳು ಹೀಗಿವೆ:

1
ಥರ್ಡ್ ಪಾರ್ಟಿ ಟೂ ವೀಲರ್
ಇನ್ಶೂರೆನ್ಸ್
ಮೋಟಾರ್ ವಾಹನ ಕಾಯ್ದೆ 1988 ರ ಪ್ರಕಾರ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಭಾರತದಾದ್ಯಂತ ಎಲ್ಲಾ ಬೈಕ್ ಮಾಲೀಕರಿಗೆ ಕಡ್ಡಾಯ ಇನ್ಶೂರೆನ್ಸ್ ಕವರ್ ಆಗಿದೆ. ನಿಮ್ಮ ಬೈಕ್‌ನೊಂದಿಗೆ ಅನಿರೀಕ್ಷಿತ ಘರ್ಷಣೆಯಿಂದಾಗಿ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಅವರ ಆಸ್ತಿಗೆ ಉಂಟಾದ ನಷ್ಟಗಳ ವಿರುದ್ಧ ಇದು ಭದ್ರತೆಯನ್ನು ಒದಗಿಸುತ್ತದೆ. ಇದು ಸಾವಿನ ಕವರೇಜ್ ಕೂಡ ಒದಗಿಸುತ್ತದೆ. ಆದಾಗ್ಯೂ, ನಿಮ್ಮ ಬೈಕ್‌ಗೆ ಆದ ಹಾನಿಗಳನ್ನು TP ಕವರ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
2
ಸಮಗ್ರ ಟೂ
ವೀಲರ್ ಇನ್ಶೂರೆನ್ಸ್
ಸಮಗ್ರ ಟೂ ವೀಲರ್ ಇನ್ಶೂರೆನ್ಸ್, ಹೆಸರೇ ಸೂಚಿಸುವಂತೆ, ನಿಮ್ಮ ಬೈಕ್ ಅನಿರೀಕ್ಷಿತ ಆಕಸ್ಮಿಕ ಹಾನಿಗಳು, ಬೆಂಕಿ ಅಥವಾ ಕಳ್ಳತನದಿಂದಾಗಿ ಉಂಟಾದ ಹಾನಿ, ನೈಸರ್ಗಿಕ ವಿಪತ್ತುಗಳು ಮತ್ತು ಗಲಭೆಗಳಂತಹ ವಿವಿಧ ಹಾನಿಗಳ ವಿರುದ್ಧ ವ್ಯಾಪಕ ಶ್ರೇಣಿಯ ಕವರೇಜ್ ಆಗಿದೆ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರೇಜ್ ಒಳಗೊಂಡಿದೆ.
3
ಬಂಡಲ್ಡ್ ಟೂ ವೀಲರ್
ಇನ್ಶೂರೆನ್ಸ್ (1+5)
ಸೆಪ್ಟೆಂಬರ್ 2019 ರ ನಂತರ ಖರೀದಿಸಿದ ಬೈಕ್‌ಗಳು ಬಂಡಲ್ಡ್ ಬೈಕ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡಬೇಕು, ಇಲ್ಲಿ ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು 5 ವರ್ಷಗಳವರೆಗೆ ಕವರ್ ಮಾಡಲಾಗುತ್ತದೆ ಮತ್ತು ಸ್ವಂತ ಹಾನಿಯಗಳಿಗೆ 1 ವರ್ಷಕ್ಕೆ ಕವರೇಜ್ ನೀಡಲಾಗುತ್ತದೆ. ಬೈಕ್ ಮಾಲೀಕರು ತಮ್ಮ ಆಯ್ಕೆಯ ಇನ್ಶೂರೆನ್ಸ್ ಕಂಪನಿಯಿಂದ ತಮ್ಮ ಸ್ವಂತ ಹಾನಿ ಕವರ್‌ನ ವಾರ್ಷಿಕ ಮೋಟಾರ್ ಇನ್ಶೂರೆನ್ಸ್ ನವೀಕರಣವನ್ನು ಪಡೆಯಬಹುದು.
4
ಬಹು-ವಾರ್ಷಿಕ ಟೂ ವೀಲರ್ ಇನ್ಶೂರೆನ್ಸ್
ದೀರ್ಘಾವಧಿಯ ಟೂ ವೀಲರ್ ಇನ್ಶೂರೆನ್ಸ್ ಕವರ್‌ನೊಂದಿಗೆ, ನೀವು ನಿಮ್ಮ ಬೈಕನ್ನು ಎರಡು ಅಥವಾ ಮೂರು ವರ್ಷಗಳವರೆಗೆ ರಕ್ಷಿಸಬಹುದು. ವಾರ್ಷಿಕ ನವೀಕರಣಗಳ ತೊಂದರೆಯಿಂದ ನೀವು ನಿಮ್ಮನ್ನು ಉಳಿಸಬಹುದು ಮಾತ್ರವಲ್ಲದೆ ಪ್ರೀಮಿಯಂ ವೆಚ್ಚಗಳ ಮೇಲೆ ಗಣನೀಯವಾಗಿ ಉಳಿತಾಯ ಮಾಡಬಹುದು.
5
ಸ್ಟ್ಯಾಂಡ್‌ಅಲೋನ್ ಟೂ ವೀಲರ್ ಇನ್ಶೂರೆನ್ಸ್
ಸ್ಟ್ಯಾಂಡ್‌ಅಲೋನ್ ಟೂ ವೀಲರ್ ಇನ್ಶೂರೆನ್ಸ್ ಅನ್ನು ಈಗಾಗಲೇ ಮಾನ್ಯ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದಿರುವ ವ್ಯಕ್ತಿಗಳು ಮಾತ್ರ ತೆಗೆದುಕೊಳ್ಳಬಹುದು. ಇದು ಅಪಘಾತಗಳು, ಕಳ್ಳತನ, ನೈಸರ್ಗಿಕ ವಿಕೋಪಗಳು, ಬೆಂಕಿ ಇತ್ಯಾದಿಗಳ ವಿರುದ್ಧ ಕವರೇಜ್ ಒದಗಿಸುತ್ತದೆ.

ವಾಹನ ಇನ್ಶೂರೆನ್ಸ್‌ನ ಆನ್ಲೈನ್ ಫೀಚರ್‌ಗಳು

ಫೀಚರ್ ವಿವರಣೆ
ಥರ್ಡ್-ಪಾರ್ಟಿ ಹಾನಿಮೋಟಾರ್ ವಾಹನ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿ ಹಾನಿ ಮತ್ತು ದೈಹಿಕ ಗಾಯವನ್ನು ಕವರ್ ಮಾಡುತ್ತದೆ
the accident caused by the insured car.
ಸ್ವಂತ ಹಾನಿಯ ಕವರ್ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಬೆಂಕಿಯಿಂದಾಗಿ ನಿಮ್ಮ ಕಾರಿಗೆ ಉಂಟಾದ ಹಾನಿಗೆ ಕವರೇಜನ್ನು ಒದಗಿಸುತ್ತದೆ,
collision, man-made disasters and natural disasters.
ನೋ ಕ್ಲೈಮ್ ಬೋನಸ್ಪಾಲಿಸಿ ಅವಧಿಯಲ್ಲಿ ನೀವು ಯಾವುದೇ ಕ್ಲೈಮ್‌ಗಳನ್ನು ಸಲ್ಲಿಸದಿದ್ದರೆ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯು ನಂತರದ ಪ್ರೀಮಿಯಂಗಳಲ್ಲಿ 50% ವರೆಗೆ ಕಡಿತವನ್ನು ನೀಡುತ್ತದೆ.
ಪಾಕೆಟ್-ಫ್ರೆಂಡ್ಲಿ ಪ್ರೀಮಿಯಂಗಳುಎಚ್‌ಡಿಎಫ್‌ಸಿ ಎರ್ಗೋ ಮೋಟಾರ್ ಇನ್ಶೂರೆನ್ಸ್ ಕೈಗೆಟಕುವಂತಿದೆ. ಕಾರ್ ಇನ್ಶೂರೆನ್ಸ್ ₹ 2094 ರಿಂದ ಲಭ್ಯವಿರುವಾಗ ಮೋಟಾರ್ ಬೈಕ್ ಇನ್ಶೂರೆನ್ಸ್ ₹ 538 ರಿಂದ ಆರಂಭವಾಗುತ್ತದೆ.
ನಗದುರಹಿತ ಗ್ಯಾರೇಜುಗಳುಕಾರಿಗೆ ಉಚಿತ ನಿರ್ವಹಣೆ ಮತ್ತು ಬದಲಿ ಸೇವೆಗಳನ್ನು ಒದಗಿಸಲು ಎಚ್‌ಡಿಎಫ್‌ಸಿ ಎರ್ಗೋ 8700+ ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಒದಗಿಸುತ್ತದೆ. ಇದಕ್ಕಾಗಿ
ಟೂ ವೀಲರ್‌ನಲ್ಲಿ 2000 ಪ್ಲಸ್ ಗ್ಯಾರೇಜ್‌ಗಳಿವೆ.
ಕ್ಲೈಮ್ ಸೆಟಲ್ಮೆಂಟ್ ಅನುಪಾತಎಚ್‌ಡಿಎಫ್‌ಸಿ ಎರ್ಗೋ ತನ್ನ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಳಿಗೆ 100% ಕ್ಲೈಮ್ ಸೆಟಲ್ಮೆಂಟ್ ಅನುಪಾತದ ದಾಖಲೆಯನ್ನು ಹೊಂದಿದೆ.

ಆನ್ಲೈನ್‌ನಲ್ಲಿ ಮೋಟಾರ್ ಇನ್ಶೂರೆನ್ಸ್‌ನ ಪ್ರಯೋಜನಗಳು

ಮೋಟಾರ್ ವಾಹನ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಪ್ರಯೋಜನಗಳು:

ಪ್ರಯೋಜನ ವಿವರಣೆ
ಸಮಗ್ರ ಕವರೇಜ್ಮೋಟಾರ್ ವಾಹನ ಇನ್ಶೂರೆನ್ಸ್ ನಿಮ್ಮ ವಾಹನಕ್ಕೆ ಹಾನಿ ಮಾಡಬಹುದಾದ ಪ್ರತಿಯೊಂದು ಸಂದರ್ಭಗಳನ್ನು ಪ್ರಾಯೋಗಿಕವಾಗಿ ಕವರ್ ಮಾಡುತ್ತದೆ. ಆದಾಗ್ಯೂ, ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್
and comprehensive cover provide coverage for own damage of the vehicle.
ಕಾನೂನು ಶುಲ್ಕಗಳುನಿಮ್ಮ ಕಾರನ್ನು ಒಳಗೊಂಡಿರುವ ಅಪಘಾತಕ್ಕೆ ಯಾರಾದರೂ ಕಾನೂನು ವಿಧಿಸಲಾದರೆ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಕೀಲರಿಗೆ ಪಾವತಿಸಲಾದ ಕಾನೂನು ಶುಲ್ಕವನ್ನು ಕವರ್ ಮಾಡುತ್ತದೆ.
ಕಾನೂನು ಅನುಸರಣೆಥರ್ಡ್ ಪಾರ್ಟಿ ವಾಹನದ ಕವರೇಜ್ ಕಾನೂನುಬದ್ಧವಾಗಿ ಕಡ್ಡಾಯವಾಗಿರುವುದರಿಂದ ದಂಡಗಳನ್ನು ತಪ್ಪಿಸಲು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯು ಸಹಾಯ ಮಾಡುತ್ತದೆ. ಗಡುವು ಮುಗಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಡ್ರೈವ್ ಮಾಡಿದರೆ,
ನಿಮಗೆ ₹ 4000 ವರೆಗೆ ದಂಡ ವಿಧಿಸಬಹುದು.
ಫ್ಲೆಕ್ಸಿಬಲ್ ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಕವರ್, ಶೂನ್ಯ ಸವಕಳಿ, ರಸ್ತೆಬದಿಯ ನೆರವು ಮುಂತಾದ ಸೂಕ್ತ ಆ್ಯಡ್ ಆನ್ ಕವರ್ ಆಯ್ಕೆ ಮಾಡುವ ಮೂಲಕ ನೀವು ಕವರೇಜ್ ವ್ಯಾಪ್ತಿಯನ್ನು ಸಲ್ಲಿಸಬಹುದು.

ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

Covered in Car insurance policy - Accidents

ಅಪಘಾತಗಳು

ಆಕ್ಸಿಡೆಂಟ್‌ನಿಂದ ಉಂಟಾಗುವ ಹಾನಿಗಳು ಈ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ. ಚಿಂತೆ ಬಿಟ್ಟು, ನಿಮ್ಮ ಡ್ರೈವ್ ಆನಂದಿಸಿ!

Covered in Car insurance policy - fire explosion

ಬೆಂಕಿ ಮತ್ತು ಸ್ಫೋಟ

ಒಂದು ಅನಿರೀಕ್ಷಿತ ಬೆಂಕಿ ಅಥವಾ ಸ್ಫೋಟವು ನಿಮ್ಮ ರೈಡ್ ಅನ್ನು ಭಸ್ಮ ಮಾಡಬಹುದು, ಆದರೆ ನಿಮ್ಮ ಹಣಕಾಸನ್ನು ರಕ್ಷಿಸುವ ಜವಾಬ್ದಾರಿ ನಮ್ಮದು!

Covered in Car insurance policy - theft

ಕಳ್ಳತನ

ಕಾರ್ ಅಥವಾ ಬೈಕ್ ಕಳ್ಳತನದ ಚಿಂತೆ ನಿಮ್ಮ ನಿದ್ರೆ ಕಸಿದುಕೊಳ್ಳಲು ಅವಕಾಶ ನೀಡಬೇಡಿ. ನಿಮ್ಮ ವಾಹನ ಕಳುವಾದರೆ, ಅದರಿಂದ ಉಂಟಾದ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ.

Covered in Car insurance policy - Calamities

ನೈಸರ್ಗಿಕ ವಿಕೋಪಗಳು,

ನೈಸರ್ಗಿಕ ವಿಕೋಪದಂತಹ ಪರಿಸ್ಥಿತಿಗಳ ಮೇಲೆ ನಮಗೆ ನಿಯಂತ್ರಣವಿಲ್ಲದಿದ್ದರೂ, ನಿರೀಕ್ಷೆಯಂತೂ ಇದ್ದೇ ಇರುತ್ತದೆ. ಪ್ರವಾಹ ಅಥವಾ ಭೂಕಂಪದಂತಹ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನಿಮ್ಮ ಕಾರ್ ಅಥವಾ ಬೈಕ್‌ಗೆ ಆದ ಹಾನಿಗಳನ್ನು ನಾವು ಕವರ್ ಮಾಡುತ್ತೇವೆ

Covered in Car insurance policy - Personal accident

ವೈಯಕ್ತಿಕ ಆಕ್ಸಿಡೆಂಟ್

ಆಕ್ಸಿಡೆಂಟ್‌ನಿಂದ ನಿಮಗೆ ಗಾಯಗಳಾಗಿದ್ದರೆ, ನಿಮ್ಮ ಚಿಕಿತ್ಸೆ ವೆಚ್ಚವನ್ನು ಕವರ್ ಮಾಡಲು ನಾವು ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಒದಗಿಸುತ್ತೇವೆ. ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ!

Covered in Car insurance policy - third party liability

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಆಸ್ತಿಗೆ ಯಾವುದೇ ಹಾನಿ ಅಥವಾ ಗಾಯಗಳನ್ನು ನಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಫೀಚರ್ ಮೂಲಕ ಕವರ್ ಮಾಡಲಾಗುತ್ತದೆ

ನಿಮ್ಮ ವಾಹನಕ್ಕಾಗಿ ನಿಮಗೆ ಮೋಟಾರ್ ಇನ್ಶೂರೆನ್ಸ್ ಏಕೆ ಬೇಕು?

ಜಾಗರೂಕ ಚಾಲಕರಾಗಿದ್ದರೂ, ಭಾರತೀಯ ರಸ್ತೆಗಳಲ್ಲಿ ವಾಹನಗಳ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ನೀವು ಯಾವಾಗಲೂ ಅಪಘಾತದ ಅಪಾಯದಲ್ಲಿರುತ್ತೀರಿ. ರಸ್ತೆಯಲ್ಲಿ ಕೇವಲ ಚಾಲಕರ ನಿರ್ಲಕ್ಷ್ಯ ಮಾತ್ರವಲ್ಲ, ಅಡ್ಡಾದಿಡ್ಡಿ ಓಡಾಡುವ ಪಾದಚಾರಿಗಳು, ಹೈವೇಯಲ್ಲಿ ಅಡ್ಡ ಸಿಗುವ ಪ್ರಾಣಿಗಳು ಅಥವಾ ರಸ್ತೆಯಲ್ಲಿ ಓಡುತ್ತಿರುವ ಮಕ್ಕಳನ್ನು ಉಳಿಸಲು ಪ್ರಯತ್ನಿಸುವುದು ಅಪಘಾತಕ್ಕೆ ಕಾರಣ. ಅಪಘಾತಗಳು ಎಲ್ಲಿಯಾದರೂ, ಯಾವುದೇ ಸಮಯದಲ್ಲಾದರೂ ಸಂಭವಿಸಬಹುದು. ಮೋಟಾರ್ ಇನ್ಶೂರೆನ್ಸ್ ಅನ್ನು ಅರ್ಥಮಾಡಿಕೊಳ್ಳುವುದು ಮೋಟಾರ್ ಇನ್ಶೂರೆನ್ಸ್ ಹೊಂದುವುದು ಯಾಕೆ ಅಗತ್ಯ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ನಿಮ್ಮ ಮೋಟಾರ್ ಇನ್ಶೂರೆನ್ಸ್ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡಿ:

It is a legal mandate

ಇದು ಕಾನೂನು ಪ್ರಕಾರ ಕಡ್ಡಾಯವಾಗಿದೆ

ಮೋಟಾರ್ ವಾಹನ ಕಾಯ್ದೆ 1961 ಪ್ರತಿ ವಾಹನ ಮಾಲೀಕರಿಗೆ ಭಾರತೀಯ ರಸ್ತೆಗಳಲ್ಲಿ ತಮ್ಮ ವಾಹನವನ್ನು ಚಲಾಯಿಸಲು ಕನಿಷ್ಠ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಕವರೇಜ್ ಹೊಂದುವುದನ್ನು ಕಡ್ಡಾಯಗೊಳಿಸುತ್ತದೆ. ಹೀಗಾಗಿ, ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯ ಅವಶ್ಯಕತೆ ಎಂದು ಪರಿಗಣಿಸಲಾಗುತ್ತದೆ.

Save yourself and others

ನಿಮ್ಮನ್ನು ಮತ್ತು ಇತರರನ್ನು ಸೇವ್ ಮಾಡಿ

ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯು ಅಪಘಾತದ ಸಂದರ್ಭದಲ್ಲಿ ನಿಮ್ಮ ವಾಹನ ಮತ್ತು ಇತರರ ವಾಹನಕ್ಕೆ ತಗುಲಿದ ರಿಪೇರಿ ವೆಚ್ಚವನ್ನು ಕವರ್ ಮಾಡಲು ಸಹಾಯ ಮಾಡುತ್ತದೆ.

Cover from unpredictable disasters

ಅನಿರೀಕ್ಷಿತ ವಿಪತ್ತುಗಳಿಂದ ಕವರೇಜ್

ಮನುಷ್ಯರ ಚಟುವಟಿಕೆಗಳಿಂದಾಗಿ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯಿಂದ ಕವರ್ ಮಾಡಲಾಗುತ್ತದೆ.

Cover the legal liabilities

ಕಾನೂನು ಹೊಣೆಗಾರಿಕೆಗಳನ್ನು ಕವರ್ ಮಾಡಿ

ನಿಮ್ಮ ತಪ್ಪು/ನಿರ್ಲಕ್ಷ್ಯದಿಂದಾಗಿ ಉಂಟಾದ ಅಪಘಾತದಿಂದಾಗಿ ಉಂಟಾಗುವ ಕಾನೂನು ಹೊಣೆಗಾರಿಕೆಗಳನ್ನು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ

ಎಚ್‌ಡಿಎಫ್‌ಸಿ ಎರ್ಗೋ ಮೋಟಾರ್ ಇನ್ಶೂರೆನ್ಸ್ ಅನ್ನೇ ಆಯ್ಕೆ ಮಾಡಲು 6 ಕಾರಣಗಳು

Motor Insurance Premium
ಕೇವಲ ₹2072 ರಿಂದ ಆರಂಭವಾಗುವ ಪ್ರೀಮಿಯಂ*
ನಮ್ಮಂತಹ ವಿಶ್ವಾಸಾರ್ಹ ಬ್ರಾಂಡ್‌ನೊಂದಿಗೆ, ನಿಮ್ಮ ರೈಡ್‌ ಅನ್ನು ನಂಬಲಾಗದಷ್ಟು ಕಡಿಮೆ ಬೆಲೆಯಲ್ಲಿ ಇನ್ಶೂರ್ ಮಾಡಿಸಿ!
Upto 70%^ off on premium
ಪ್ರೀಮಿಯಂ ಮೇಲೆ 70% ವರೆಗೆ ರಿಯಾಯಿತಿ
ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಖರೀದಿಸಲು ಎರಡನೇ ಉತ್ತಮ ಕಾರಣ? ನಿಮ್ಮ ಪ್ರೀಮಿಯಂ ಮೇಲೆ ಭಾರೀ ರಿಯಾಯಿತಿಗಳು. ಮತ್ತಿನ್ನೇನು ಬೇಕು?
Network of 8500+ Cashless Garages:**
8700+ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್**
8700+ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್‌ ಮೂಲಕ, ನೀವು ಓಡಾಡುವ ರಸ್ತೆಯ ಪ್ರತಿ ಮೈಲಿಗಲ್ಲಿನಲ್ಲೂ ನಮ್ಮ ಸೇವೆ ಸಿಗುತ್ತದೆ
Buy Motor Insurance Policy
3 ನಿಮಿಷಕ್ಕಿಂತ ಕಡಿಮೆ ಸಮಯದಲ್ಲಿ ಪಾಲಿಸಿಯನ್ನು ಖರೀದಿಸಿ
ನೀವು ಪಾಲಿಸಿಯನ್ನು ಮೂರು ನಿಮಿಷಗಳಲ್ಲಿ ಖರೀದಿಸಲು ಸಾಧ್ಯವಿರುವಾಗ, ಹಳೆಯ ವಿಧಾನಗಳಿಗೆ ಏಕೆ ಜೋತು ಬೀಳುತ್ತೀರಿ?
Motor Insurance Policy
ಶೂನ್ಯ ಡಾಕ್ಯುಮೆಂಟೇಶನ್ ಮತ್ತು ತ್ವರಿತ ಪಾಲಿಸಿ:
ನಮ್ಮ ಆನ್ಲೈನ್ ಇನ್ಶೂರೆನ್ಸ್ ಖರೀದಿ ಪ್ರಕ್ರಿಯೆ ಮೂಲಕ, ಪೇಪರ್‌ಲೆಸ್ ಪ್ರಕ್ರಿಯೆ ಮನ್ನಣೆ ಪಡೆಯುತ್ತಿದೆ.
Overnight repair service^
24x7 ರಸ್ತೆಬದಿಯ ನೆರವು
ನಮ್ಮ 24x7 ರಸ್ತೆಬದಿಯ ಸಹಾಯದೊಂದಿಗೆ, ನಿಮ್ಮ ಪ್ರಯಾಣಕ್ಕೆ ಯಾವ ಅಡೆತಡೆಯೂ ಬರದಂತೆ ನೋಡಿಕೊಳ್ಳುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಮೋಟಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿ

ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಥರ್ಡ್ ಪಾರ್ಟಿ ಅಥವಾ ಸಮಗ್ರ ಅಥವಾ ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಕವರ್ ಅನ್ನು ಆಯ್ಕೆ ಮಾಡಬಹುದು. ಈ ಮೂರು ಪ್ಲಾನ್‌ಗಳನ್ನು ಹೋಲಿಕೆ ಮಾಡಿ

ಮೋಟಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್‌ಗಳು ಸಮಗ್ರ ಕವರ್ ಥರ್ಡ್ ಪಾರ್ಟಿ ಕವರ್ ಸ್ಟ್ಯಾಂಡ್ಅಲೋನ್ ಓನ್‌ ಡ್ಯಾಮೇಜ್‌ ಕವರ್
ನೈಸರ್ಗಿಕ ವಿಕೋಪಗಳಿಂದಾದ ಹಾನಿ - ಭೂಕಂಪ, ಸೈಕ್ಲೋನ್, ಪ್ರವಾಹ ಇತ್ಯಾದಿ.ಒಳಗೊಂಡಿದೆಸೇರುವುದಿಲ್ಲಒಳಗೊಂಡಿದೆ
ಬೆಂಕಿ, ಕಳ್ಳತನ, ವಿಧ್ವಂಸಕ ಕೃತ್ಯ ಇತ್ಯಾದಿಗಳಿಂದಾದ ಹಾನಿ.ಒಳಗೊಂಡಿದೆಸೇರುವುದಿಲ್ಲಒಳಗೊಂಡಿದೆ
ದೊರೆಯುವ ಆ್ಯಡ್-ಆನ್‌ಗಳು - ಶೂನ್ಯ ಸವಕಳಿ, NCB ರಕ್ಷಣೆ ಇತ್ಯಾದಿ.ಒಳಗೊಂಡಿದೆಸೇರುವುದಿಲ್ಲಒಳಗೊಂಡಿದೆ
ಕಾರ್ ಮೌಲ್ಯದ ಕಸ್ಟಮೈಸೇಶನ್ಒಳಗೊಂಡಿದೆಸೇರುವುದಿಲ್ಲಒಳಗೊಂಡಿದೆ
Personal accident cover of Rs. 15 Lakhs~*ಒಳಗೊಂಡಿದೆಒಳಗೊಂಡಿದೆಒಳಗೊಂಡಿದೆ
ಥರ್ಡ್ ಪಾರ್ಟಿ ವಾಹನ/ಆಸ್ತಿಗೆ ಹಾನಿಒಳಗೊಂಡಿದೆಒಳಗೊಂಡಿದೆಸೇರುವುದಿಲ್ಲ
ಥರ್ಡ್ ಪಾರ್ಟಿ ವ್ಯಕ್ತಿಗಾದ ದೈಹಿಕ ಗಾಯಒಳಗೊಂಡಿದೆಒಳಗೊಂಡಿದೆಸೇರುವುದಿಲ್ಲ

ನಿಮ್ಮ ವಾಹನದ ಒಟ್ಟಾರೆ ರಕ್ಷಣೆಗಾಗಿ ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗಾಗಿ ದೀರ್ಘಾವಧಿಯ ಸಮಗ್ರ ಪ್ಲಾನ್ ಖರೀದಿಸುವುದು ಸೂಕ್ತವಾಗಿದೆ. ಆದಾಗ್ಯೂ, ನೀವು ಈಗಾಗಲೇ ಥರ್ಡ್ ಪಾರ್ಟಿ ಕವರ್ ಹೊಂದಿದ್ದರೆ, ನೀವು ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಕವರ್ ಖರೀದಿಸಬಹುದು ಮತ್ತು ಯಾವುದೇ ಇನ್ಶೂರೆಬಲ್ ಅಪಾಯದಿಂದಾಗಿ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಗೆ ವೆಚ್ಚಗಳನ್ನು ಸುರಕ್ಷಿತವಾಗಿರಿಸಬಹುದು.

ನಮ್ಮ ಮೋಟಾರ್ ಇನ್ಶೂರೆನ್ಸ್ ಆ್ಯಡ್-ಆನ್ ಕವರ್‌ಗಳೊಂದಿಗೆ ಹೆಚ್ಚುವರಿ ರಕ್ಷಣೆ ಪಡೆಯಿರಿ

Boost your coverage
Zero Depreciation Cover - Insurance for Vehicle
ಶೂನ್ಯ ಸವಕಳಿ ಕವರ್

ಒಂದು ವೇಳೆ ನಿಮ್ಮ ಕಾರು ಅಥವಾ ಬೈಕ್ ಹಾನಿಗೊಳಗಾದರೆ, ಈ ಆ್ಯಡ್-ಆನ್ ಮೂಲಕ ಯಾವುದೇ ಡಿಪ್ರಿಸಿಯೇಶನ್ ಕಡಿತವಿಲ್ಲದೇ ನೀವು ಪೂರ್ಣ ಕ್ಲೈಮ್ ಮೊತ್ತವನ್ನು ಪಡೆಯುತ್ತೀರಿ.

NCB protection (for cars) - Car insurance renewal
NCB ರಕ್ಷಣೆ (ಕಾರುಗಳಿಗಾಗಿ)

ಈ ಆ್ಯಡ್-ಆನ್ ನೀವು ಇಲ್ಲಿಯವರೆಗೆ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುತ್ತದೆ ಮತ್ತು ಮುಂದಿನ ಸ್ಲ್ಯಾಬ್‌ಗೆ ಅದನ್ನು ಕೊಂಡೊಯ್ಯುತ್ತದೆ, ಆದ್ದರಿಂದ ನೀವು ಪ್ರೀಮಿಯಂನಲ್ಲಿ ದೊಡ್ಡ ರಿಯಾಯಿತಿಯನ್ನು ಪಡೆಯುತ್ತೀರಿ.

Emergency Assistance Cover - Car insurance claim
ತುರ್ತು ಸಹಾಯ ಕವರ್

ನಿಮ್ಮ ಕಾರ್ ಅಥವಾ ಬೈಕ್ ಅನಿರೀಕ್ಷಿತವಾಗಿ ಕೆಟ್ಟು ನಿಂತರೆ, ಈ ಆ್ಯಡ್-ಆನ್ ನಿಮಗೆ ಸದಾಕಾಲ ಸಹಾಯ ಮಾಡುತ್ತದೆ.

Emergency Assistance Cover - Car insurance claim
ವೈಯಕ್ತಿಕ ವಸ್ತುಗಳ ನಷ್ಟ

ಈ ಆ್ಯಡ್ ಆನ್ ಕವರ್‌ನೊಂದಿಗೆ ಬಟ್ಟೆಗಳು, ಲ್ಯಾಪ್‌ಟಾಪ್‌ಗಳು, ಮೊಬೈಲ್ ಮತ್ತು ನೋಂದಣಿ ಪ್ರಮಾಣಪತ್ರಗಳಂತಹ ವಾಹನ ಡಾಕ್ಯುಮೆಂಟ್‌ಗಳನ್ನು ನಿಮ್ಮ ವೈಯಕ್ತಿಕ ವಸ್ತುಗಳ ನಷ್ಟಕ್ಕೆ ನೀವು ಕವರೇಜ್ ಪಡೆಯುತ್ತೀರಿ.

Boost your coverage
Return to Invoice (for cars) - insurance policy of car
ರಿಟರ್ನ್ ಟು ಇನ್ವಾಯ್ಸ್ (ಕಾರುಗಳಿಗಾಗಿ)

ನಿಮ್ಮ ಕಾರು ಸಂಪೂರ್ಣವಾಗಿ ಜಖಂ ಆಗಿದೆಯೇ ಅಥವಾ ಕಳುವಾಗಿದೆಯೇ? ಚಿಂತೆ ಬೇಡ, ಈ ಆ್ಯಡ್-ಆನ್ ನಿಮ್ಮ ಇನ್ವಾಯ್ಸ್ ಮೌಲ್ಯವನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ.

Engine and gearbox protector by best car insurance provider
ಎಂಜಿನ್ ಮತ್ತು ಗೇರ್‌ಬಾಕ್ಸ್ ರಕ್ಷಣೆ (ಕಾರುಗಳಿಗಾಗಿ)

ಹಾನಿಗೊಳಗಾದ ಎಂಜಿನ್‌ನ ರಿಪೇರಿ ತುಂಬಾ ದುಬಾರಿಯಾಗಬಹುದು. ಆದರೆ ಈ ಆ್ಯಡ್-ಆನ್‌ನೊಂದಿಗೆ, ಅಂತಹ ಭಯವೇ ಬೇಡ.

Downtime protection - best car insurance in india
ಡೌನ್‌ಟೈಮ್ ಪ್ರೊಟೆಕ್ಷನ್ (ಕಾರುಗಳಿಗಾಗಿ)

ಒಂದು ವೇಳೆ ನಿಮ್ಮ ಕಾರನ್ನು ವಿಮಾದಾತರ ನೆಟ್ವರ್ಕ್ ಗ್ಯಾರೇಜಿನಲ್ಲಿ ರಿಪೇರಿ ಮಾಡಬೇಕಾದ ಸಂದರ್ಭ ಬಂದಲ್ಲಿ, ನೀವು ಬೇರೆ ವಾಹನದಲ್ಲಿ ಪ್ರಯಾಣಿಸಲು ಮಾಡಿದ ಖರ್ಚನ್ನು ನಾವು ವಾಪಸ್ ನೀಡುತ್ತೇವೆ.

Downtime protection - best car insurance in india
ಬಳಕೆಯ ವಸ್ತುಗಳ ವೆಚ್ಚ

ಮೋಟಾರ್ ವಾಹನ ಇನ್ಶೂರೆನ್ಸ್‌ನೊಂದಿಗೆ ಈ ಆ್ಯಡ್ ಆನ್ ಕವರ್ ಲೂಬ್ರಿಕೆಂಟ್‌ಗಳು, ಎಂಜಿನ್ ಆಯಿಲ್, ಬ್ರೇಕ್ ಆಯಿಲ್ ಮುಂತಾದ ಬಳಕೆ ಮಾಡಬಹುದಾದ ವಸ್ತುಗಳಿಗೆ ಕವರೇಜನ್ನು ಒದಗಿಸುತ್ತದೆ.

ಮೋಟಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಅಥವಾ ನವೀಕರಿಸುವಾಗ, ಅದರ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ.
ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಹಂತವಾರು ಮಾರ್ಗದರ್ಶಿ ಇಲ್ಲಿದೆ

ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ನೀವು ನಮ್ಮ ಕಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಅಥವಾ ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಬಹುದು. ಇದಲ್ಲದೆ ನಮ್ಮ ಕಾರ್ ಇನ್ಶೂರೆನ್ಸ್ ಅಥವಾ ಬೈಕ್ ಇನ್ಶೂರೆನ್ಸ್ ಪುಟಕ್ಕೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಮೋಟಾರ್ ಇನ್ಶೂರೆನ್ಸ್ ಕೋಟ್ ಅನ್ನು ಆನ್ಲೈನಿನಲ್ಲಿ ನೋಡಬಹುದು.

ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಒಂದು ತ್ವರಿತ ಆನ್ಲೈನ್ ಟೂಲ್ ಆಗಿದ್ದು, ಇದು ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಗೆ ನೀವು ಪಾವತಿಸಬೇಕಾದ ಪ್ರೀಮಿಯಂ ಹಣವನ್ನು ಲೆಕ್ಕ ಹಾಕಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಹೆಸರು, ಮೊಬೈಲ್ ನಂಬರ್, ವಾಹನ ಮತ್ತು ನಗರದ ವಿವರಗಳು ಮತ್ತು ಆದ್ಯತೆಯ ಪಾಲಿಸಿ ಪ್ರಕಾರದಂತಹ ಕೆಲವು ವಿವರಗಳನ್ನು ನೀವು ಇರಿಸಬೇಕು. ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಕ್ಯಾಲ್ಕುಲೇಟರ್ ನಿಮಗೆ ನಿಖರವಾದ ಪ್ರೀಮಿಯಂ ಮೊತ್ತವನ್ನು ನೀಡುತ್ತದೆ.

ವಾಹನ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡುವುದು ಹೇಗೆ

ಮೋಟಾರ್ ವಾಹನ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡಲು ಕೆಲವು ಮಾರ್ಗಗಳು ಇಲ್ಲಿವೆ:

It is a legal mandate

ಮೋಟಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿ

ಮೋಟಾರ್ ವಾಹನ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಸುವುದು ಎಲ್ಲಾ ಖರೀದಿದಾರರು ತಪ್ಪದೆ ಕೈಗೊಳ್ಳಬೇಕಾದ ವಿಷಯವಾಗಿದೆ. ಪಾಲಿಸಿಗಳನ್ನು ಹೋಲಿಕೆ ಮಾಡುವುದರಿಂದ ವಿವಿಧ ಪ್ಲಾನ್‌ಗಳನ್ನು ಮೌಲ್ಯಮಾಪನ ಮಾಡಲು ನಿಮಗೆ ಅನುಮತಿ ನೀಡುತ್ತದೆ, ಇದರಲ್ಲಿ ಹೆಚ್ಚಿನವು ನಿಮ್ಮ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ನೀವು ತಪ್ಪಿಸಿಕೊಂಡಿರುತ್ತೀರಿ. ನೀವು ಮೋಟಾರ್ ಇನ್ಶೂರೆನ್ಸ್ ಕೋಟ್ ಅನ್ನು ಆನ್ಲೈನಿನಲ್ಲಿ ಪರಿಶೀಲಿಸಬಹುದು. ಇನ್ಶೂರೆನ್ಸ್ ಪ್ರೀಮಿಯಂಗಳು ಸಾಮಾನ್ಯವಾಗಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ವ್ಯತ್ಯಾಸದೊಂದಿಗೆ ಮತ್ತು ಅವುಗಳು ಒದಗಿಸುವ ಕವರೇಜ್ ವ್ಯಾಪ್ತಿಯೊಂದಿಗೆ ಭಿನ್ನವಾಗಿರುತ್ತವೆ.

Save yourself and others

ಆ್ಯಂಟಿ-ಥೆಫ್ಟ್ ಡಿವೈಸ್‌ಗಳನ್ನು ಪಡೆಯಿರಿ

ನಿಮ್ಮ ವಾಹನದಲ್ಲಿ ಆ್ಯಂಟಿ-ಥೆಫ್ಟ್ ಡಿವೈಸ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ, ನೀವು ಕಳ್ಳತನ ಅಥವಾ ದರೋಡೆಯ ಸಂಭಾವ್ಯತೆಯ ದರವನ್ನು ಕಡಿಮೆ ಮಾಡಬಹುದು. ಇದು ಮೋಟಾರ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಮಾಡುವ ಸಾಧ್ಯತೆಗಳನ್ನು ಕೂಡ ಕಡಿಮೆ ಮಾಡುತ್ತದೆ (ಕಳ್ಳತನ ಅಥವಾ ದರೋಡೆಗೆ ಸಂಬಂಧಿಸಿದಂತೆ). ಆದ್ದರಿಂದ, ಇನ್ಶೂರೆನ್ಸ್ ಕಂಪನಿಗಳು ತಮ್ಮ ಕಾರುಗಳಲ್ಲಿ ಆ್ಯಂಟಿ-ಥೆಫ್ಟ್ ಸಾಧನಗಳನ್ನು ಇನ್ಸ್ಟಾಲ್ ಮಾಡಿದ ವಾಹನ ಮಾಲೀಕರಿಗೆ ಕೆಲವು ರಿಯಾಯಿತಿಗಳನ್ನು ಒದಗಿಸುತ್ತವೆ.

Cover from unpredictable disasters

ಸಣ್ಣ ಕ್ಲೈಮ್‌ಗಳನ್ನು ಮಾಡಬೇಡಿ

ಪಾಲಿಸಿದಾರರು ಯಾವುದೇ ಕ್ಲೈಮ್‌ಗಳನ್ನು ಮಾಡಿರದಿದ್ದರೆ ವಿಮಾದಾತರು ಅವರಿಗೆ ಇನ್ಶೂರೆನ್ಸ್ ಅವಧಿಗೆ NCB ಗಳ (ನೋ ಕ್ಲೈಮ್ ಬೋನಸ್) ರೂಪದಲ್ಲಿ ಪ್ರಯೋಜನಗಳನ್ನು ಗರಿಷ್ಠಗೊಳಿಸಲು ಅನುಮತಿ ನೀಡುತ್ತಾರೆ. ಈ ಪ್ರಯೋಜನಗಳನ್ನು ಸಾಮಾನ್ಯವಾಗಿ ಕಡಿಮೆ ಪ್ರೀಮಿಯಂಗಳ ರೂಪದಲ್ಲಿ ನೀಡಲಾಗುತ್ತದೆ ಮತ್ತು ಪಾಲಿಸಿ ನವೀಕರಣಗಳ ಸಮಯದಲ್ಲಿ ಇನ್ಶೂರ್ಡ್ ವ್ಯಕ್ತಿಯು ಪಾಲಿಸಿ ವರ್ಷದ ಕೊನೆಯಲ್ಲಿ ಅದನ್ನು ಪಡೆಯಬಹುದು.

Cover the legal liabilities

ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿ ಲ್ಯಾಪ್ಸ್ ಆಗಲು ಬಿಡಬೇಡಿ

ನೀವು ಸಮಯಕ್ಕೆ ಸರಿಯಾಗಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ನವೀಕರಿಸುವುದನ್ನು ಮರೆಯುವ ಮೂಲಕ ಮತ್ತು ಅದನ್ನು ಲ್ಯಾಪ್ಸ್ ಮಾಡುವ ಮೂಲಕ, ನೀವು ಮತ್ತೊಮ್ಮೆ ಹೊಸ ಪ್ಲಾನ್ ಖರೀದಿಸಬೇಕಾಗಿರುವುದು ಮಾತ್ರವಲ್ಲ, ದಂಡವನ್ನು ಕೂಡ ಪಾವತಿಸಬೇಕಾಗಬಹುದು. ಅಲ್ಲದೆ, ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳನ್ನು ಮಾಡಿರದ ಹೊರತಾಗಿಯೂ, ನೀವು ನೋ ಕ್ಲೈಮ್ ಬೋನಸ್‌ಗೆ ಅನರ್ಹರಾಗುತ್ತೀರಿ. ಆದಾಗ್ಯೂ, ಗಡುವು ಮುಗಿದ 90 ದಿನಗಳ ಒಳಗೆ ನೀವು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸದಿದ್ದರೆ, NCB ಪ್ರಯೋಜನ ಲ್ಯಾಪ್ಸ್ ಆಗುತ್ತದೆ. ನೀವು ಯಾವುದೇ ಅಡೆತಡೆಗಳಿಲ್ಲದೆ ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಮೋಟಾರ್ ಇನ್ಶೂರೆನ್ಸ್ ಅನ್ನು ಸುಲಭವಾಗಿ ನವೀಕರಿಸಬಹುದು.

Cover from unpredictable disasters

ಅನಗತ್ಯ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವುದನ್ನು ತಪ್ಪಿಸಿ

ಅಗತ್ಯವಿರುವ ಕವರೇಜ್ ಮೊತ್ತವನ್ನು ಮಾತ್ರ ಆಯ್ಕೆ ಮಾಡುವ ಮೂಲಕ ಪಾಲಿಸಿದಾರರು ತಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು. ಅನಗತ್ಯ ಆ್ಯಡ್ ಆನ್ ಖರೀದಿಸುವುದರಿಂದ ನಿಮ್ಮ ಪ್ರೀಮಿಯಂ ಹೆಚ್ಚಾಗುತ್ತದೆ.

ನಿಮ್ಮ ವಾಹನಕ್ಕಾಗಿ ಆನ್ಲೈನ್‌ನಲ್ಲಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಹೇಗೆ

ಹೊಸ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಖರೀದಿಸಲು

1. ನಿಮ್ಮ ವಾಹನ ನೋಂದಣಿ ನಂಬರ್, ಮೊಬೈಲ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ಮಾಹಿತಿಯನ್ನು ಭರ್ತಿ ಮಾಡಲು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ನೀವು ಆಯ್ಕೆ ಮಾಡಲು ಬಯಸುವ ಪಾಲಿಸಿ ವಿವರಗಳು ಮತ್ತು ಆ್ಯಡ್-ಆನ್ ಅನ್ನು ನಮೂದಿಸಿ.

3. ಆನ್ಲೈನ್ ಪಾವತಿ ಮೂಲಕ ಪ್ರೀಮಿಯಂ ಮೊತ್ತವನ್ನು ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಪಾಲಿಸಿಯ ಜೊತೆಗೆ ಒಂದು ದೃಢೀಕರಣದ ಮೇಲ್ ಅನ್ನು ನಿಮಗೆ ಮೇಲ್ ಮಾಡಲಾಗುತ್ತದೆ.

ನಿಮ್ಮ ಮೋಟಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ನವೀಕರಿಸುವುದು ಹೇಗೆ

ಅಸ್ತಿತ್ವದಲ್ಲಿರುವ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ನವೀಕರಿಸಲು

1. ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಪಾಲಿಸಿಯನ್ನು ನವೀಕರಿಸಿ ಆಯ್ಕೆಮಾಡಿ.

2. ವಿವರಗಳನ್ನು ನಮೂದಿಸಿ, ಆ್ಯಡ್ ಆನ್ ಕವರ್‌ಗಳನ್ನು ಸೇರಿಸಿ/ಹೊರತುಪಡಿಸಿ ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

3. ನವೀಕರಿಸಲಾದ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ IDಗೆ ಮೇಲ್ ಮಾಡಲಾಗುತ್ತದೆ.

ಮೋಟಾರ್ ಇನ್ಶೂರೆನ್ಸ್ ರಿನೀವಲ್ ಪ್ರಾಮುಖ್ಯತೆ

ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಆನ್ಲೈನಿನಲ್ಲಿ ಮೋಟಾರ್ ಇನ್ಶೂರೆನ್ಸ್ ನವೀಕರಿಸುವ ಕೆಲವು ಪ್ರಯೋಜನಗಳು ಇಲ್ಲಿವೆ

ಪ್ರಯೋಜನ ವಿವರಣೆ
ಥರ್ಡ್ ಪಾರ್ಟಿ ಕವರೇಜ್ಇನ್ಶೂರ್ಡ್ ವ್ಯಕ್ತಿಯ ವಾಹನವನ್ನು ಒಳಗೊಂಡಿರುವ ಆಕ್ಸಿಡೆಂಟ್‌ನಲ್ಲಿ, ಥರ್ಡ್ ಪಾರ್ಟಿ ಆಸ್ತಿ/ವ್ಯಕ್ತಿಯ ಹಾನಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ವಿಮಾದಾತರು ಭರಿಸುತ್ತಾರೆ
if you renew motor insurance policy on time.
ಸಮಗ್ರ ಕವರೇಜ್ಗಡುವು ಮುಗಿದ ಮೋಟಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ನವೀಕರಿಸುವ ಮೂಲಕ, ನೀವು ನೈಸರ್ಗಿಕ ವಿಕೋಪಗಳು ಮತ್ತು ಮಾನವ ನಿರ್ಮಿತ ವಿಪತ್ತುಗಳ ವಿರುದ್ಧ ಕವರೇಜ್ ಪಡೆಯುವುದನ್ನು ಮುಂದುವರೆಸುತ್ತೀರಿ.
ಬೆಂಕಿ ಮತ್ತು ಇತರ ಇನ್ಶೂರೆಬಲ್ ಅಪಾಯದಿಂದಾಗಿ ವಾಹನಕ್ಕೆ ಆಗುವ ಹಾನಿಗೂ ಕೂಡ ನೀವು ಕವರೇಜ್ ಪಡೆಯುತ್ತೀರಿ.
ನೋ ಕ್ಲೈಮ್ ಬೋನಸ್ (NCB)ಪಾಲಿಸಿ ಅವಧಿಯಲ್ಲಿ ಕ್ಲೈಮ್ ಮಾಡದೆ ನೀವು ಮೋಟಾರ್ ಇನ್ಶೂರೆನ್ಸ್ ನವೀಕರಿಸಿದಾಗ, ನೀವು NCB ಪ್ರಯೋಜನಕ್ಕೆ ಅರ್ಹರಾಗುತ್ತೀರಿ. ಇದು ಒಂದು ಬಗೆಯ ರಿಯಾಯಿತಿಯಾಗಿದೆ
on insurance premium, you can use during motor insurance policy renewal.
ಕಾರ್ ಇನ್ಶೂರೆನ್ಸ್ ಆನ್ಲೈನ್ಆನ್ಲೈನ್‌ನಲ್ಲಿ ಮೋಟಾರ್ ಇನ್ಶೂರೆನ್ಸ್ ನವೀಕರಣವನ್ನು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ಮಾಡಬಹುದು. ನಿಮ್ಮ ವಾಹನದ ಬಗ್ಗೆ ನೀವು ಕೆಲವು ವಿವರಗಳು,
previous policy and buy the policy online within few minutes.
ಸುರಕ್ಷತೆಸಮಯಕ್ಕೆ ಸರಿಯಾಗಿ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸುವ ಮೂಲಕ ನೀವು ನೆಮ್ಮದಿಯಿಂದ ಚಾಲನೆ ಮಾಡಬಹುದು ಮತ್ತು ಹಣಕಾಸಿನ ವಿಚಾರಗಳ ಬಗ್ಗೆ ಚಿಂತಿಸಬೇಕಾಗಿರುವುದಿಲ್ಲ
implications of an accident.
ಟ್ರಾಫಿಕ್ ದಂಡನಿಮ್ಮ ಪಾಲಿಸಿಯನ್ನು ನವೀಕರಿಸುವ ಮೂಲಕ ನೀವು RTO ಗೆ ಟ್ರಾಫಿಕ್ ದಂಡಗಳನ್ನು ಪಾವತಿಸುವುದನ್ನು ತಪ್ಪಿಸಬಹುದು. ಗಡುವು ಮುಗಿದ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ
1988 ರ ಮೋಟಾರ್ ವಾಹನಗಳ ಕಾಯಿದೆ.

ನಿಮಗಾಗಿ ಸರಳಗೊಳಿಸಲಾದ ಮೋಟಾರ್ ಇನ್ಶೂರೆನ್ಸ್ ಕ್ಲೇಮ್‌ಗಳು

ಇದಕ್ಕಿಂತ ಸರಳವಾಗಿ ಪಡೆಯಲು ಸಾಧ್ಯವೇ ಇಲ್ಲ! ನಮ್ಮ 4 ಹಂತದ ಪ್ರಕ್ರಿಯೆಯು ನಿಮ್ಮ ಕ್ಲೈಮ್ ಸಂಬಂಧಿತ ಪ್ರಶ್ನೆಗಳನ್ನು ನಿವಾರಿಸುತ್ತದೆ:

  • Motor Insurance Claims
    ಹಂತ #1
    ಪೇಪರ್‌ವರ್ಕ್ ಗೊಡವೆಯೇ ಇಲ್ಲ! ಕ್ಲೈಮ್ ನೋಂದಣಿ ಮಾಡಿ ಅಗತ್ಯ ಡಾಕ್ಯುಮೆಂಟ್‌ಗಳನ್ನು ಆನ್ಲೈನ್‌ನಲ್ಲಿ ಹಂಚಿಕೊಳ್ಳಿ.
  • Motor Self Inspection
    ಹಂತ #2
    ನೀವು ಸ್ವಯಂ ತಪಾಸಣೆಯನ್ನು ಅಥವಾ ಸರ್ವೇಯರ್/ವರ್ಕ್‌ಶಾಪ್ ಪಾರ್ಟ್‌ನರ್‌ ನಡೆಸುವ ಆ್ಯಪ್‌-ಆಧರಿತ ಡಿಜಿಟಲ್ ತಪಾಸಣೆಯನ್ನು ಆಯ್ಕೆ ಮಾಡಬಹುದು.
  • Motor Insurance Claim Status
    ಹಂತ #3
    ಕ್ಲೈಮ್ ಟ್ರ್ಯಾಕರ್ ಮೂಲಕ ಕ್ಲೈಮ್ ಸ್ಥಿತಿಯನ್ನು ಸುಲಭವಾಗಿ ಟ್ರ್ಯಾಕ್ ಮಾಡಿ.
  • Motor Insurance Claims Approved
    ಹಂತ #4
    ನಿಮ್ಮ ಕ್ಲೈಮ್ ಅನುಮೋದನೆಯಾಗುವ ಹಾಗೂ ನೆಟ್ವರ್ಕ್ ಗ್ಯಾರೇಜ್‌ಗಳೊಂದಿಗೆ ಇತ್ಯರ್ಥವಾಗುವ ಸಮಯದಲ್ಲಿ ಆರಾಮಾಗಿರಿ!

ಕ್ಲೈಮ್ ಕುರಿತು ಆತಂಕವಿದೆಯೇ? ಇನ್ನು ಮುಂದೆ ಆತಂಕ ಬೇಡ!

ವಾಹನ ಖರೀದಿಸಿದ ಮೇಲೆ ಅದಕ್ಕೆ ಸಂಬಂಧಿಸಿದ ಜವಾಬ್ದಾರಿ ಮತ್ತು ಆತಂಕಗಳೂ ಹೆಗಲೇರುತ್ತವೆ, ನಿಮ್ಮ ಕಾರ್ ಅಥವಾ ಬೈಕ್‌ಗೆ ಆದ ಹಾನಿಗೆ ಕ್ಲೈಮ್ ಮಾಡಬೇಕಾದಾಗ ಎದುರಾಗುವ ತೊಂದರೆಯೂ ಇವುಗಳಲ್ಲಿ ಒಂದು. ಎಚ್‌ಡಿಎಫ್‌ಸಿ ಎರ್ಗೋ ಮೂಲಕ ನಿಮ್ಮ ಕ್ಲೈಮ್ ಸಂಬಂಧಿತ ಆತಂಕಗಳಿಗೆ ವಿದಾಯ ಹೇಳಿ. ನಮ್ಮ ತುತ್ತೂರಿಯನ್ನು ನಾವೇ ಊದುತ್ತಿದ್ದೇವೆ ಎಂದುಕೊಳ್ಳಬೇಡಿ, ಇದನ್ನು ಓದಿದ ಮೇಲೆ ನೀವೇ ತೀರ್ಮಾನಿಸಿ:

ಸನ್ನಿವೇಶ 1
ನಾವು 80% ಕಾರ್‌ ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಸೆಟಲ್ ಮಾಡುತ್ತೇವೆ ˇ
ತುಂಬಾ ಹೊತ್ತು ಕಾಯುವುದು ಯಾರಿಗೂ ಇಷ್ಟವಿಲ್ಲ ಎಂಬುದು ನಮಗೆ ಗೊತ್ತು! ಅದಕ್ಕಾಗಿಯೇ, ನಾವು 80% ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಪ್ರಕ್ರಿಯೆಗೊಳಿಸುತ್ತೇವೆ.
ಸನ್ನಿವೇಶ 2
ನಾವು ಮಿತಿಯಿಲ್ಲದಷ್ಟು ಕ್ಲೈಮ್‌ಗಳನ್ನು ಒದಗಿಸುತ್ತೇವೆ
ನಿಮ್ಮ ಕ್ಲೇಮ್‌ಗಳನ್ನು ಆಗಾಗ್ಗೆ ತಿರಸ್ಕರಿಸಲಾಗುತ್ತಿದೆಯೇ? ನಾವು ನಿಮ್ಮ ಕಾರು ಅಥವಾ ಟೂ ವೀಲರ್ ಹಾನಿಗಳಿಗೆ ಅನಿಯಮಿತ ಕ್ಲೈಮ್‌ಗಳನ್ನು ಒದಗಿಸುವುದರಿಂದ ಯಾವುದೇ ಆತಂಕ ನಿಮ್ಮನ್ನು ಕಾಡಲು ಅವಕಾಶ ನೀಡುವುದಿಲ್ಲ.
ಸನ್ನಿವೇಶ 3
iAAA ರೇಟಿಂಗ್: ಅತಿಹೆಚ್ಚು ಕ್ಲೈಮ್‌ ಪಾವತಿ ಸಾಮರ್ಥ್ಯ
ನಾವು ಅದನ್ನು ಹೇಳುವುದಿಲ್ಲ, ಅವರು ಮಾಡುತ್ತಾರೆ! ಹೌದು, ನೀವು ಕೇಳಿರುವುದು ಸರಿಯಾಗಿದೆ !! ನಮ್ಮ ಗರಿಷ್ಠ ಕ್ಲೈಮ್ ಪಾವತಿ ಸಾಮರ್ಥ್ಯಕ್ಕೆ ICRA ಯ iAAA ರೇಟಿಂಗ್ ಪಡೆದಿದ್ದೇವೆ.
ಸನ್ನಿವೇಶ 4
AI-ಬೆಂಬಲಿತ ಟೂಲ್
ಇಡೀ ಜಗತ್ತು ಡಿಜಿಟಲ್ ಆಗಿದೆ, ನಮ್ಮ ಕ್ಲೈಮ್ ಪ್ರಕ್ರಿಯೆಯೂ ಕೂಡಾ.. ನೀವು ಕ್ಲೈಮ್ ಸಲ್ಲಿಸಿದ ನಂತರ, ನಮ್ಮ AI-ಬೆಂಬಲದ ಟೂಲ್ ಮೂಲಕ ಅದರ ಸ್ಥಿತಿಗತಿ ಟ್ರ್ಯಾಕ್ ಮಾಡುವುದು ತುಂಬಾ ಸುಲಭ. ಕಷ್ಟಕರ ಕ್ಲೈಮ್ ಪ್ರಕ್ರಿಯೆಗೆ ವಿದಾಯ ಹೇಳಿ!
ಸನ್ನಿವೇಶ 5
ಕಾಗದರಹಿತ ಕ್ಲೈಮ್‌ಗಳು
ಇನ್ಶೂರೆನ್ಸ್ ಅನ್ನು ಹಂತಹಂತವಾಗಿ ಸರಳವಾಗಿಸುವುದೇ ನಮ್ಮ ಗುರಿ! ಈಗ ನಮ್ಮ ಕ್ಲೈಮ್‌ಗಳು ಪೇಪರ್‌ಲೆಸ್ ಆಗಿವೆ ಮತ್ತು ಸ್ಮಾರ್ಟ್‌ಫೋನ್‌ನಲ್ಲೂ ಸಿಗುತ್ತವೆ. ಈಗ ವಿಡಿಯೋ ತಪಾಸಣೆ ಮೂಲಕ ನೀವೇ ಹಾನಿಗಳನ್ನು ಪರಿಶೀಲಿಸಿ ಹಾಗೂ ಮೊಬೈಲ್ ಮೂಲಕ ನಿಮ್ಮ ಕ್ಲೈಮ್ ಸಲ್ಲಿಸಲು ಮಾರ್ಗದರ್ಶಿ ಪ್ರಕ್ರಿಯೆಯನ್ನು ಅನುಸರಿಸಿ. ಎಷ್ಟೊಂದು ಸರಳ, ಅಲ್ಲವೇ?
ನಾವು 80% ಕಾರ್‌ ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಸೆಟಲ್ ಮಾಡುತ್ತೇವೆ ˇ
ತುಂಬಾ ಹೊತ್ತು ಕಾಯುವುದು ಯಾರಿಗೂ ಇಷ್ಟವಿಲ್ಲ ಎಂಬುದು ನಮಗೆ ಗೊತ್ತು! ಅದಕ್ಕಾಗಿಯೇ, ನಾವು 80% ಕ್ಲೈಮ್‌ಗಳನ್ನು ಸ್ವೀಕರಿಸಿದ ಒಂದು ದಿನದೊಳಗೆ ಪ್ರಕ್ರಿಯೆಗೊಳಿಸುತ್ತೇವೆ.
ನಾವು ಮಿತಿಯಿಲ್ಲದಷ್ಟು ಕ್ಲೈಮ್‌ಗಳನ್ನು ಒದಗಿಸುತ್ತೇವೆ
ನಿಮ್ಮ ಕ್ಲೇಮ್‌ಗಳನ್ನು ಆಗಾಗ್ಗೆ ತಿರಸ್ಕರಿಸಲಾಗುತ್ತಿದೆಯೇ? ನಾವು ನಿಮ್ಮ ಕಾರು ಅಥವಾ ಟೂ ವೀಲರ್ ಹಾನಿಗಳಿಗೆ ಅನಿಯಮಿತ ಕ್ಲೈಮ್‌ಗಳನ್ನು ಒದಗಿಸುವುದರಿಂದ ಯಾವುದೇ ಆತಂಕ ನಿಮ್ಮನ್ನು ಕಾಡಲು ಅವಕಾಶ ನೀಡುವುದಿಲ್ಲ.
iAAA ರೇಟಿಂಗ್: ಅತಿಹೆಚ್ಚು ಕ್ಲೈಮ್‌ ಪಾವತಿ ಸಾಮರ್ಥ್ಯ
ನಾವು ಅದನ್ನು ಹೇಳುವುದಿಲ್ಲ, ಅವರು ಮಾಡುತ್ತಾರೆ! ಹೌದು, ನೀವು ಕೇಳಿರುವುದು ಸರಿಯಾಗಿದೆ !! ನಮ್ಮ ಗರಿಷ್ಠ ಕ್ಲೈಮ್ ಪಾವತಿ ಸಾಮರ್ಥ್ಯಕ್ಕೆ ICRA ಯ iAAA ರೇಟಿಂಗ್ ಪಡೆದಿದ್ದೇವೆ.
AI-ಬೆಂಬಲಿತ ಟೂಲ್
ಇಡೀ ಜಗತ್ತು ಡಿಜಿಟಲ್ ಆಗಿದೆ, ನಮ್ಮ ಕ್ಲೈಮ್ ಪ್ರಕ್ರಿಯೆಯೂ ಕೂಡಾ.. ನೀವು ಕ್ಲೈಮ್ ಸಲ್ಲಿಸಿದ ನಂತರ, ನಮ್ಮ AI-ಬೆಂಬಲದ ಟೂಲ್ ಮೂಲಕ ಅದರ ಸ್ಥಿತಿಗತಿ ಟ್ರ್ಯಾಕ್ ಮಾಡುವುದು ತುಂಬಾ ಸುಲಭ. ಕಷ್ಟಕರ ಕ್ಲೈಮ್ ಪ್ರಕ್ರಿಯೆಗೆ ವಿದಾಯ ಹೇಳಿ!
ಕಾಗದರಹಿತ ಕ್ಲೈಮ್‌ಗಳು
ಇನ್ಶೂರೆನ್ಸ್ ಅನ್ನು ಹಂತಹಂತವಾಗಿ ಸರಳವಾಗಿಸುವುದೇ ನಮ್ಮ ಗುರಿ! ಈಗ ನಮ್ಮ ಕ್ಲೈಮ್‌ಗಳು ಪೇಪರ್‌ಲೆಸ್ ಆಗಿವೆ ಮತ್ತು ಸ್ಮಾರ್ಟ್‌ಫೋನ್‌ನಲ್ಲೂ ಸಿಗುತ್ತವೆ. ಈಗ ವಿಡಿಯೋ ತಪಾಸಣೆ ಮೂಲಕ ನೀವೇ ಹಾನಿಗಳನ್ನು ಪರಿಶೀಲಿಸಿ ಹಾಗೂ ಮೊಬೈಲ್ ಮೂಲಕ ನಿಮ್ಮ ಕ್ಲೈಮ್ ಸಲ್ಲಿಸಲು ಮಾರ್ಗದರ್ಶಿ ಪ್ರಕ್ರಿಯೆಯನ್ನು ಅನುಸರಿಸಿ. ಎಷ್ಟೊಂದು ಸರಳ, ಅಲ್ಲವೇ?

ನಿಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ನೀವು ಓಡಿಸುವ SUV, ನಿಮ್ಮ ವಾಸಸ್ಥಳ, ಸೇರಿದಂತೆ ಹಲವಾರು ಅಂಶಗಳು ನಿಮ್ಮ ಸ್ಕ್ರೀನ್‌ನಲ್ಲಿ ಕಾಣುವ ಮೋಟಾರ್ ಇನ್ಶೂರೆನ್ಸ್ ಕೋಟ್ ಮೇಲೆ ಪರಿಣಾಮ ಬೀರುತ್ತವೆ. ನಿಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಬಹುಮುಖ್ಯ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ:

How old is your vehicle? premiums

ನಿಮ್ಮ ವಾಹನ ಎಷ್ಟು ಹಳೆಯದು?

ನೀವು ಓಡಿಸುತ್ತಿರುವುದು ನಿಮ್ಮ ಪೋಷಕರು ಹತ್ತಾರು ವರ್ಷಗಳ ಹಿಂದೆ ನೀವು ಡಿಗ್ರಿ ಪೂರ್ಣಗೊಳಿಸಿದಾಗ ಕೊಡಿಸಿದ ಕಾರನ್ನೋ? ಅಥವಾ 90 ರ ದಶಕದಲ್ಲಿ ನಿಮ್ಮ ಮೊದಲ ಸಂಬಳ ಪಡೆದಾಗ ಖರೀದಿಸಿದ ಬೈಕನ್ನೋ?? ನೀವು ಪಾವತಿಸುವ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವಲ್ಲಿ ಈ ಪ್ರಶ್ನೆಗಳು ತುಂಬಾ ಮುಖ್ಯವಾಗಿವೆ. ಏಕೆಂದರೆ, ನಿಮ್ಮ ವಾಹನ ಹಳೆಯದಾದಷ್ಟೂ ನೀವು ಕಟ್ಟುವ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ.

Which vehicle do you drive?-Car insurance

ನೀವು ಯಾವ ವಾಹನ ಓಡಿಸುತ್ತೀರಿ?

ನೀವು ಓಡಿಸುವುದು ಹಳೆಕಾಲದ ಸ್ಕೂಟರ್ ಆಗಿರಲಿ ಅಥವಾ ದುಬಾರಿ ಸೆಡಾನ್ ಆಗಿರಲಿ, ನಿಮ್ಮ ವಾಹನದ ಮೇಕಿಂಗ್ ಮತ್ತು ಮಾಡೆಲ್‌ಗೆ ತಕ್ಕಂತೆ ಪ್ರೀಮಿಯಂ ಮೊತ್ತವೂ ಭಿನ್ನವಾಗಿರುತ್ತದೆ.

Where do you reside?

ನೀವು ಎಲ್ಲಿ ವಾಸಿಸುತ್ತೀರಿ?

ನೀವು ವಾಸಿಸುವುದು ಸುಭದ್ರವಾದ ಗೇಟೆಡ್ ಕಮ್ಯೂನಿಟಿಯಲ್ಲೋ ಅಥವಾ ಅಪರಾಧ ಕೃತ್ಯಗಳಿಗೆ ಕುಖ್ಯಾತವಾದ ಏರಿಯಾದಲ್ಲೋ? ನಿಮ್ಮ ಕಾರು ಅಥವಾ ಟೂ ವೀಲರ್ ಇನ್ಶೂರೆನ್ಸ್‌ ಗೆ ನೀವು ಎಷ್ಟು ಪಾವತಿಸುತ್ತೀರಿ ಎಂಬುದು ನಿಮ್ಮ ಉತ್ತರವನ್ನು ಆಧರಿಸಿದೆ

What is your vehicle’s engine capacity and fuel type?

ನಿಮ್ಮ ವಾಹನದ ಎಂಜಿನ್ ಸಾಮರ್ಥ್ಯ ಮತ್ತು ಇಂಧನದ ಪ್ರಕಾರ ಯಾವುದು?

ನೀವು ಎಲೆಕ್ಟ್ರಿಕ್ ಸ್ಕೂಟರ್ ಓಡಿಸುವ ಪರಿಸರ-ಪ್ರೇಮಿ ಆಗಿರಬಹುದು ಅಥವಾ ಹೆಚ್ಚಿನ ಹಾರ್ಸ್‌ ಪವರ್ ಬಯಸುವ ವೇಗಧೂತ ಆಗಿರಬಹುದು, ನಿಮ್ಮ ವಾಹನದ ಎಂಜಿನ್ ಸಾಮರ್ಥ್ಯ ಮತ್ತು ಬಳಸುವ ಇಂಧನವು ನಿಮ್ಮ ವಾಹನ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವ ಪ್ರಮುಖ ಅಂಶಗಳಾಗಿವೆ.

ಭಾರತದಲ್ಲಿ ಮೋಟಾರ್ ಇನ್ಶೂರೆನ್ಸ್ ಏಕೆ ಕಡ್ಡಾಯವಾಗಿದೆ?

ಭಾರತದಲ್ಲಿ ಸಂಭವಿಸುವ ಹೆಚ್ಚಿನ ಸಂಖ್ಯೆಯ ಮೋಟಾರ್ ವಾಹನ ಅಪಘಾತಗಳನ್ನು ಪರಿಗಣಿಸಿ ಮೋಟಾರ್ ವಾಹನ ಇನ್ಶೂರೆನ್ಸ್ ಕಡ್ಡಾಯವಾಗಿದೆ. ಸಾರ್ವಜನಿಕ ಆಸಕ್ತಿಯನ್ನು ರಕ್ಷಿಸುವುದು, ಸುರಕ್ಷಿತ ಚಾಲನಾ ಹವ್ಯಾಸಗಳನ್ನು ಉತ್ತೇಜಿಸುವುದು ಮತ್ತು ಕಾರು ಮಾಲೀಕರಿಗೆ ಹಣಕಾಸಿನ ರಕ್ಷಣೆಯನ್ನು ಒದಗಿಸುವುದು ಮುಖ್ಯ ಕಾರಣವಾಗಿದೆ. ಕಾನೂನನ್ನು ಅನುಸರಿಸಲು ಮತ್ತು ಯಾವುದೇ ಅನಿರೀಕ್ಷಿತ ಘಟನೆಗಳ ಸಂದರ್ಭದಲ್ಲಿ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಮಾನ್ಯ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಅಗತ್ಯವಾಗಿದೆ.

ಭಾರತದಲ್ಲಿ, 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಾಹನಗಳು ಮೋಟಾರ್ ವಾಹನ ಇನ್ಶೂರೆನ್ಸ್‌ನ ಥರ್ಡ್ ಪಾರ್ಟಿ ಕವರ್ ಹೊಂದಿರಬೇಕು.

IRDAI ನಿಂದ ಮೋಟಾರ್ ವಾಹನ ನಿಯಮದ ಅಪ್ಡೇಶನ್

IRDAI ಯ ತಿದ್ದುಪಡಿ ಮಾಡಲಾದ ನಿಯಮಗಳು ಈ ಕೆಳಗಿನಂತಿವೆ:

• ದೀರ್ಘಾವಧಿಯ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಲು, ಪಾಲಿಸಿ ಅವಧಿಯು ಕನಿಷ್ಠ ಮೂರು ವರ್ಷಗಳಾಗಿರಬೇಕು.

• ಥರ್ಡ್ ಪಾರ್ಟಿ ದೀರ್ಘಾವಧಿ ಪಾಲಿಸಿಯನ್ನು ಮಾತ್ರ ಖರೀದಿಸುವ ಮೂಲಕ ನೀವು ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಬಹುದು.

• ವಾರ್ಷಿಕ ಆಧಾರದ ಮೇಲೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಸ್ಟ್ಯಾಂಡ್ಅಲೋನ್ ಸ್ವಂತ-ಹಾನಿ ಕವರ್ ಖರೀದಿಸಬಹುದು.

• ಎಲ್ಲಾ ಇನ್ಶೂರೆನ್ಸ್ ಕಂಪನಿಗಳಿಗೆ NCB ಸ್ಲ್ಯಾಬ್‌ನ ಗ್ರಿಡ್ ಒಂದೇ ಆಗಿದೆ.

• ಒಟ್ಟು ನಷ್ಟ ಅಥವಾ ಕಳ್ಳತನದ ಕ್ಲೈಮ್‌ಗಳ ಸಂದರ್ಭದಲ್ಲಿ, ನೋಂದಣಿ ಪ್ರಮಾಣಪತ್ರ (RC) ರದ್ದಾಗುತ್ತದೆ ಮತ್ತು ಪಾಲಿಸಿದಾರರು RC ಯನ್ನು ಇನ್ಶೂರೆನ್ಸ್ ಕಂಪನಿಗಳಿಗೆ ಕಳುಹಿಸಬೇಕು.

• ಕಡ್ಡಾಯ ಕಡಿತಗಳು ಮತ್ತು ಸ್ಟ್ಯಾಂಡರ್ಡ್ ಕಡಿತಗಳು ಈಗ ಒಂದೇ ಆಗಿವೆ.

• 1500CC ಅಥವಾ ಅದಕ್ಕಿಂತ ಕಡಿಮೆಯ ಮತ್ತು 1500CC ಅಥವಾ ಅದಕ್ಕಿಂತ ಹೆಚ್ಚಿನ ಎಂಜಿನ್ ಡಿಸ್‌ಪ್ಲೇಸ್ಮೆಂಟ್ ಸಾಮರ್ಥ್ಯದ ಕಾರುಗಳಿಗೆ, ಸ್ಟ್ಯಾಂಡರ್ಡ್ ಡಿಡಕ್ಟಿಬಲ್ ಅನ್ನು ಕ್ರಮವಾಗಿ ₹ 1000 ಮತ್ತು ₹ 2000 ರಲ್ಲಿ ನಿಗದಿಪಡಿಸಲಾಗುತ್ತದೆ.

• IRDAI ಶಿಫಾರಸು ಪ್ರಕಾರ ಇನ್ಶೂರೆನ್ಸ್ ಮಾಡಿದ ವಾಹನದಲ್ಲಿ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರಿಗೆ ₹ 25,000 ಇನ್ಶೂರೆನ್ಸ್ ಕವರ್ ಕಡ್ಡಾಯವಾಗಿದೆ.

Cashless garage network

ಇತ್ತೀಚಿನ ಮೋಟಾರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

This guide will help you understand the basics of motor insurance

ಮೋಟಾರ್ ಇನ್ಶೂರೆನ್ಸ್‌ನ ಮೂಲಭೂತ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಈ ಮಾರ್ಗದರ್ಶಿ ನಿಮಗೆ ಸಹಾಯ ಮಾಡುತ್ತದೆ

ಪೂರ್ತಿ ಓದಿ
ಜುಲೈ 19, 2021 ರಂದು ಪ್ರಕಟಿಸಲಾಗಿದೆ
Factors Affecting Motor Insurance Premium

ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಪೂರ್ತಿ ಓದಿ
ಫೆಬ್ರವರಿ 18, 2020 ರಂದು ಪ್ರಕಟಿಸಲಾಗಿದೆ
Importance of Having a Valid Motor Insurance

ಸರಿಯಾದ ಮೋಟಾರ್ ಇನ್ಶೂರೆನ್ಸ್ ಹೊಂದುವ ಪ್ರಾಮುಖ್ಯತೆ

ಪೂರ್ತಿ ಓದಿ
ಸೆಪ್ಟೆಂಬರ್ 6, 2019 ರಂದು ಪ್ರಕಟಿಸಲಾಗಿದೆ
How well do you know these motor insurance terms?

ಈ ಮೋಟಾರ್ ಇನ್ಶೂರೆನ್ಸ್ ನಿಯಮಗಳನ್ನು ನೀವು ಎಷ್ಟು ಚೆನ್ನಾಗಿ ತಿಳಿದುಕೊಳ್ಳುತ್ತೀರಿ?

ಪೂರ್ತಿ ಓದಿ
ಫೆಬ್ರವರಿ 20, 2019 ರಂದು ಪ್ರಕಟಿಸಲಾಗಿದೆ
How Can You Maximize The Use Of Your Motor Insurance Policy?

ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಬಳಕೆಯನ್ನು ನೀವು ಹೇಗೆ ಹೆಚ್ಚಿಸಬಹುದು?

ಪೂರ್ತಿ ಓದಿ
ಫೆಬ್ರವರಿ 20, 2019 ರಂದು ಪ್ರಕಟಿಸಲಾಗಿದೆ
slider-right
slider-left
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ
GET A FREE QUOTE NOW
ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಿದ್ಧರಿದ್ದೀರಾ? ಅದಕ್ಕೆ ಕೆಲವೇ ನಿಮಿಷಗಳು ಸಾಕು!

ಮೋಟಾರ್ ಇನ್ಶೂರೆನ್ಸ್ FAQ ಗಳು


ನೀವು ಆಕಸ್ಮಿಕವಾಗಿ ಥರ್ಡ್ ಪಾರ್ಟಿ ಆಸ್ತಿ/ವ್ಯಕ್ತಿಗೆ ಹಾನಿ ಮಾಡಿದಾಗ ಉಂಟಾಗಬಹುದಾದ ಥರ್ಡ್ ಪಾರ್ಟಿ ಹಾನಿ ಹೊಣೆಗಾರಿಕೆಯನ್ನು ಮೋಟಾರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ. ಆದಾಗ್ಯೂ, ನೀವು ಸಮಗ್ರ ಇನ್ಶೂರೆನ್ಸ್ ಆಯ್ಕೆ ಮಾಡಿದರೆ, ನಿಮ್ಮ ವಾಹನದ ಬಹುತೇಕ ಎಲ್ಲಾ ಹಾನಿಗಳನ್ನು ಕೂಡ ಕವರ್ ಮಾಡಲಾಗುತ್ತದೆ.
ನಿಮ್ಮ ಮೋಟಾರ್ ಇನ್ಶೂರೆನ್ಸ್ ಕ್ಲೈಮ್ ಫಾರ್ಮ್ ರದ್ದುಗೊಳಿಸಲು, ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಸಂಪರ್ಕಿಸಬೇಕು, ಅಥವಾ ನೀವು ನೇರವಾಗಿ ಅವರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಅದನ್ನು ರದ್ದುಗೊಳಿಸಬಹುದು.
ಹೌದು, ಮಾನ್ಯ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಕಡ್ಡಾಯವಾಗಿದೆ. ಮೋಟಾರ್ ವಾಹನ ಕಾಯ್ದೆ 1988 ಅಡಿಯಲ್ಲಿ, ಭಾರತದಲ್ಲಿ ಪ್ರತಿ ವಾಹನ ಮಾಲೀಕರು ಭಾರತೀಯ ರಸ್ತೆಗಳಲ್ಲಿ ತಮ್ಮ ವಾಹನ ಚಲಾಯಿಸುವ ಮುನ್ನ ಮಾನ್ಯ ಥರ್ಡ್ ಪಾರ್ಟಿ ಮೋಟಾರ್ ಇನ್ಶೂರೆನ್ಸ್ ಪ್ಲಾನ್ ಹೊಂದಿರಬೇಕು. ಇದು ಕಾನೂನು ಅವಶ್ಯಕತೆಯಾಗಿದೆ. ಆದಾಗ್ಯೂ, ನಿಮ್ಮ ಸ್ವಂತ ವಾಹನವನ್ನು ಕೂಡ ಕವರ್ ಮಾಡುವುದು ಸೂಕ್ತವಾಗಿದೆ, ಇದರಿಂದಾಗಿ ನಿಮ್ಮ ಸ್ವಂತ ವಾಹನಕ್ಕೆ ಆದ ಹಾನಿಗಳನ್ನು ವಿಮಾದಾತರು ಪಾವತಿಸುತ್ತಾರೆ ಮತ್ತು ನೀವು ಅದನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗಿಲ್ಲ. ಹೀಗಾಗಿ, ನಿಮ್ಮ ವಾಹನವು ಸಂಪೂರ್ಣ ಕವರ್ ಆಗುವುದನ್ನು ಖಚಿತಪಡಿಸಿಕೊಳ್ಳಲು ಸಮಗ್ರ ಮೋಟಾರ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ಸೂಕ್ತವಾಗಿದೆ.
ನೀವು ನಿಮ್ಮ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ಹೊಸ ವಾಹನಕ್ಕೆ ವರ್ಗಾಯಿಸಬಹುದು; ಆದಾಗ್ಯೂ, ವಾಹನದ ಅಪ್ಗ್ರೇಡ್ ಇದ್ದರೆ ಕವರೇಜ್ ಸಾಕಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ನೀವು ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡುತ್ತಿದ್ದರೆ, ನಿಮ್ಮ ಅಸ್ತಿತ್ವದಲ್ಲಿರುವ ವಿಮಾದಾತರಿಂದ ನೋ ಕ್ಲೈಮ್ ಬೋನಸ್ ಸರ್ಟಿಫಿಕೇಟ್ ಪಡೆಯಬಹುದು ಮತ್ತು ನಂತರ ಅದನ್ನು ನಿಮ್ಮ ಹೊಸ ವಾಹನಕ್ಕೆ ಟ್ರಾನ್ಸ್‌ಫರ್ ಮಾಡಲು ಅಪ್ಲೈ ಮಾಡಬಹುದು. ಯಾಕೆಂದರೆ NCB ಎಂಬುದು ಡ್ರೈವರ್‌ಗೆ ಸಂಬಂಧಿಸಿದ್ದೇ ಹೊರತು ವಾಹನಕ್ಕೆ ಅಲ್ಲ. ಹೊಸ ವಾಹನಕ್ಕಾಗಿ ಆನ್ಲೈನ್‌ನಲ್ಲಿ ನೀವು ಮೋಟಾರ್ ಇನ್ಶೂರೆನ್ಸ್ ಖರೀದಿಸಿದಾಗ ಇದು ಹಣ ಉಳಿಸಲು ನಿಮಗೆ ಸಹಾಯ ಮಾಡುತ್ತದೆ. ಆನ್ಲೈನ್‌ನಲ್ಲಿ ಹೊಸ ಮೋಟಾರ್ ಇನ್ಶೂರೆನ್ಸ್ ಖರೀದಿಸಲು ಯೋಜಿಸುವಾಗ ಮೋಟಾರ್ ಇನ್ಶೂರೆನ್ಸ್ ಕೋಟ್‌ಗಳನ್ನು ಹೋಲಿಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಮೇಕ್, ಮಾಡೆಲ್, ವಾಹನದ ರೂಪಾಂತರ, ಇಂಧನ ಪ್ರಕಾರ, ವಯಸ್ಸು ಮತ್ತು ಎಂಜಿನ್ ಸಾಮರ್ಥ್ಯದಂತಹ ಹಲವಾರು ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಪಾಲಿಸಿದಾರರ ವಯಸ್ಸು ಕೂಡ ಪ್ರೀಮಿಯಂ ನಿರ್ಧರಿಸುವಲ್ಲಿ ಪಾತ್ರವನ್ನು ವಹಿಸಬಹುದು. ನಿಮ್ಮ ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ನೀವು ಮೋಟಾರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸಬಹುದು. ಮೋಟಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಒಂದು ಉಚಿತ ಆನ್ಲೈನ್ ಟೂಲ್ ಆಗಿದ್ದು, ಇದನ್ನು ನೀವು ಬಯಸುವಷ್ಟು ಬಾರಿ ಬಳಸಬಹುದು.
ಮೋಟಾರ್ ವಾಹನ ಕಾಯ್ದೆ 1988 ಪ್ರಕಾರ, ಭಾರತದಾದ್ಯಂತ ಇರುವ ಪ್ರತಿ ವಾಹನ ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ವಾಹನ ಇನ್ಶೂರೆನ್ಸ್ ಕವರ್ ಹೊಂದಿರಬೇಕು. ಇಲ್ಲದಿದ್ದರೆ, ವ್ಯಕ್ತಿಗೆ ₹ 2,000 ಅಥವಾ ಅದಕ್ಕಿಂತ ಹೆಚ್ಚಿನ ದಂಡ ವಿಧಿಸಬಹುದು ಮತ್ತು/ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಕಳುಹಿಸಬಹುದು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

slider-right
slider-left
ಎಲ್ಲಾ ಪ್ರಶಸ್ತಿಗಳನ್ನು ನೋಡಿ