Knowledge Centre
Happy Customer
#1.4 ಕೋಟಿ+

ಸಂತೋಷಭರಿತ ಗ್ರಾಹಕರು

Cashless network
ಸುಮಾರು 15000+

ನಗದುರಹಿತ ನೆಟ್ವರ್ಕ್

Customer Ratings
ಪ್ರೀಮಿಯಂ ಆರಂಭ

ದಿನಕ್ಕೆ ಕೇವಲ ₹ 26 **

2 Claims settled every minute
2 ಕ್ಲೈಮ್‌ಗಳನ್ನು ಸೆಟಲ್ ಮಾಡಲಾಗಿದೆ

ಪ್ರತಿ ನಿಮಿಷ*

ಹೋಮ್ / ಹೆಲ್ತ್ ಇನ್ಶೂರೆನ್ಸ್

ಹೆಲ್ತ್ ಇನ್ಶೂರೆನ್ಸ್

ನಿಮ್ಮ ಪಾಲಿಸಿಯಲ್ಲಿ ವಿವರಿಸಿದಂತೆ ವೈದ್ಯಕೀಯ ತುರ್ತುಸ್ಥಿತಿಗಳ ಸಮಯದಲ್ಲಿ ನಿಮ್ಮ ಎಲ್ಲಾ ವೆಚ್ಚಗಳನ್ನು ಕವರ್ ಮಾಡುವ ಮೂಲಕ ಹಣಕಾಸಿನ ತೊಂದರೆಗಳಿಂದ ಹೆಲ್ತ್ ಇನ್ಶೂರೆನ್ಸ್ ನಿಮ್ಮನ್ನು ರಕ್ಷಿಸುತ್ತದೆ. ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುವುದು ನಗದುರಹಿತ ಆಸ್ಪತ್ರೆ ದಾಖಲಾತಿ, ಹೊರರೋಗಿ ವಿಭಾಗದ (OPD) ವೆಚ್ಚಗಳು, ದೈನಂದಿನ ನಗದು ಭತ್ಯೆಗಳು, ಡಯಾಗ್ನಸ್ಟಿಕ್ ವೆಚ್ಚಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ಪ್ರಯೋಜನಗಳನ್ನು ಒದಗಿಸುತ್ತದೆ. ಪಾಲಿಸಿಯಲ್ಲಿನ ಎಲ್ಲಾ ಕುಟುಂಬದ ಸದಸ್ಯರನ್ನು ಒಳಗೊಂಡಂತೆ ನಿಮ್ಮ ಪ್ಲಾನ್ ಎಲ್ಲವನ್ನೂ ಒಳಗೊಂಡಿರಲು ನೀವು ಆ್ಯಡ್-ಆನ್‌ಗಳು ಅಥವಾ ರೈಡರ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

ನಮ್ಮ ಸೇವೆಗಳೊಂದಿಗೆ ನಿಮ್ಮ ಜೀವನವನ್ನು ಸುಲಭಗೊಳಿಸಲು ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಾವು ಬದ್ಧರಾಗಿದ್ದೇವೆ. ನೀವು ಸರಿಯಾದ ಬೆಂಬಲ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ನಿಮಿಷದಲ್ಲಿ ಒಂದು ಕ್ಲೈಮ್ ಸೆಟಲ್ ಮಾಡುವ ಮೂಲಕ ಕ್ಲೈಮ್‌ಗಳ ತಡೆರಹಿತ ಸೆಟಲ್ಮೆಂಟ್ ಅನ್ನು ನಾವು ಖಚಿತಪಡಿಸುತ್ತೇವೆ*. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಶ್ರೇಣಿಯು ಪ್ರತಿದಿನ ಬೆಳೆಯುತ್ತಿರುವ ಸಂಖ್ಯೆಯೊಂದಿಗೆ 1.4 ಕೋಟಿ ಸಂತೋಷಭರಿತ ಗ್ರಾಹಕರ ಮೊಗದಲ್ಲಿ ಮಂದಹಾಸವನ್ನು ತಂದಿದೆ. ನಮ್ಮ ಮೈ:ಆಪ್ಟಿಮಾ ಸೆಕ್ಯೂರ್ ಪ್ಲಾನ್‌ನೊಂದಿಗೆ, ನೀವು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 4X ಕವರೇಜ್ ಪಡೆಯುತ್ತೀರಿ. ಹೆಚ್ಚುವರಿಯಾಗಿ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ನಗದುರಹಿತ ಆಸ್ಪತ್ರೆ ದಾಖಲಾತಿ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80d ಅಡಿಯಲ್ಲಿ ತೆರಿಗೆ ಉಳಿತಾಯ ಮತ್ತು ನೋ-ಕ್ಲೈಮ್ ಬೋನಸ್ ಸೇರಿದಂತೆ ವಿವಿಧ ಪ್ರಯೋಜನಗಳನ್ನು ನೀಡುತ್ತವೆ. ಆದ್ದರಿಂದ, ನಿಮ್ಮ ಪ್ರೀತಿಪಾತ್ರರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಮೂಲಕ ಅವರ ಭವಿಷ್ಯವನ್ನು ಸುರಕ್ಷಿತವಾಗಿರಿಸುವ ಕಡೆಗೆ ಒಂದು ಹೆಜ್ಜೆ ಮುಂದಿಡಿ.

Did you know
ಹೆಲ್ತ್ ಇನ್ಶೂರೆನ್ಸ್ ಹೊಂದುವ ಪ್ರಯೋಜನಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಬಯಸುವಿರಾ?
ನಮ್ಮ ತಜ್ಞರಿಗೆ 022-6242 6242 ನಲ್ಲಿ ಕರೆ ಮಾಡಿ
022-6242 6242 ನಲ್ಲಿ ನಮ್ಮ ತಜ್ಞರಿಗೆ ಕರೆ ಮಾಡಿ

ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನ ವಿಧಗಳು

slider-right
ಯಾವುದೇ ವೆಚ್ಚವಿಲ್ಲದ ಕಂತು ಲಭ್ಯವಿದೆ*^ my:Optima Secure Family Health Insurance Plans by HDFC ERGO

ಮೈ:ಆಪ್ಟಿಮಾ ಸೆಕ್ಯೂರ್

ನೀವು ಯಾವಾಗಲೂ ಬಯಸುವ ಹೆಚ್ಚುವರಿ ಕವರೇಜ್ ನೀಡುವ ಹೊಸ ಆ್ಯಡ್-ಆನ್‌ಗಳನ್ನು ಪರಿಚಯಿಸುವ ಮೂಲಕ ನಾವು ಮುಂದಿನ ಹಂತಕ್ಕೆ ರಕ್ಷಣೆಯನ್ನು ಒದಗಿಸಿದ್ದೇವೆ. ನಮ್ಮ ಹೊಸದಾಗಿ ಪ್ರಾರಂಭಿಸಲಾದ ಮೈ:ಆಪ್ಟಿಮಾ ಸೆಕ್ಯೂರ್ ಪ್ಲಾನ್ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 4X ಹೆಲ್ತ್ ಕವರೇಜನ್ನು ಒದಗಿಸುತ್ತದೆ, ಅಂದರೆ ನಿಮ್ಮ ಆದ್ಯತೆಯ ವಿಮಾ ಮೊತ್ತದ ವೆಚ್ಚದಲ್ಲಿ ನೀವು ನಿಜವಾಗಿಯೂ 4X ಹೆಲ್ತ್ ಕವರ್ ಪಡೆಯುತ್ತೀರಿ.

ಈಗಲೇ ಖರೀದಿಸಿ ಇನ್ನಷ್ಟು ತಿಳಿಯಿರಿ
ಇದೀಗ ಲಾಂಚ್ ಆಗಿದೆ Optima Lite

ಆಪ್ಟಿಮಾ ಲೈಟ್

ಸಾಕಷ್ಟು ಮೂಲ ವಿಮಾ ಮೊತ್ತದೊಂದಿಗೆ ಕೈಗೆಟುಕುವ ಪ್ರೀಮಿಯಂಗಳಲ್ಲಿ ಅಗತ್ಯ ಕವರೇಜನ್ನು ನೀಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಯಾವಾಗಲೂ ಬಯಸಿದ್ದಿರಾ? ಸರಿ, ನಾವು ನಿಮ್ಮ ಮಾತನ್ನು ಕೇಳಿಸಿಕೊಂಡಿದ್ದೇವೆ. 5 ಲಕ್ಷ ಅಥವಾ 7.5 ಲಕ್ಷಗಳ ಮೂಲ ವಿಮಾ ಮೊತ್ತದೊಂದಿಗೆ ಆಪ್ಟಿಮಾ ಲೈಟ್ ಅನ್ನು ಪರಿಚಯಿಸಲಾಗುತ್ತಿದೆ. ಆದ್ದರಿಂದ ನಿಮ್ಮ ಆರೋಗ್ಯವನ್ನು ಭದ್ರಪಡಿಸಿಟ್ಟುಕೊಳ್ಳಲು ನೀವು ರಾಜಿಯಾಗುವ ಅಗತ್ಯವಿಲ್ಲ.

ಈಗಲೇ ಖರೀದಿಸಿ ಇನ್ನಷ್ಟು ತಿಳಿಯಿರಿ
ಇದೀಗ ಲಾಂಚ್ ಆಗಿದೆ My:Optima Secure Global

ಮೈ:ಆಪ್ಟಿಮಾ ಸೆಕ್ಯೂರ್ ಗ್ಲೋಬಲ್ ಪ್ಲಾನ್‌ಗಳು

4X ಹೆಲ್ತ್ ಕವರೇಜ್‌ನೊಂದಿಗೆ, ಈ ಪ್ಲಾನ್ ಜಾಗತಿಕ ಕವರ್ ಅನ್ನು ಒದಗಿಸುತ್ತದೆ, ಇದು ಭಾರತದ ಒಳಗೆ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳಿಗೆ ಕವರೇಜ್ ಮತ್ತು ವಿದೇಶಗಳಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಮಾತ್ರ ಕವರೇಜ್ ಅನ್ನು ಒಳಗೊಂಡಿದೆ. ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ವಿದೇಶಗಳಲ್ಲಿ ಪ್ರಯಾಣಿಸುವಾಗ ನೀವು ಮೆಡಿಕಲ್ ಇನ್ಶೂರೆನ್ಸ್‌ನಲ್ಲಿ ಪ್ರತ್ಯೇಕವಾಗಿ ಹೂಡಿಕೆ ಮಾಡಬೇಕಾಗಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ಈಗಲೇ ಖರೀದಿಸಿ ಇನ್ನಷ್ಟು ತಿಳಿಯಿರಿ
health insurance policy for family

ಕುಟುಂಬಕ್ಕಾಗಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್

ನಿಮ್ಮ ಜೀವನವು ನಿಮ್ಮ ಕುಟುಂಬದ ಸುತ್ತ ಸುತ್ತುತ್ತದೆ. ಹಾಗಿದ್ದರೆ ಅವರ ಆರೋಗ್ಯಕ್ಕೆ ಭದ್ರತೆ ಏಕೆ ನೀಡಬಾರದು? ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ ಮತ್ತು ಪ್ರತಿ ಸದಸ್ಯರ ವೈದ್ಯಕೀಯ ಅಗತ್ಯಗಳನ್ನು ಪೂರೈಸುವ ನಮ್ಮ ವಿಶೇಷ ಪ್ರಯೋಜನಗಳಾದ, ಅನಿಯಮಿತ ಡೇ ಕೇರ್ ಚಿಕಿತ್ಸೆಗಳು ಮತ್ತು ವಿಮಾ ಮೊತ್ತದ ಮರುಸ್ಥಾಪನೆಯಂತಹ ಪ್ರಯೋಜನಗಳನ್ನು ಪಡೆಯಿರಿ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
medical insurance policy for Individual

ವ್ಯಕ್ತಿಗಳಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್

ನೀವು ಹಣಕಾಸಿನ ಯೋಜನೆ ರೂಪಿಸುವಾಗ, ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಮರೆಯಬೇಡಿ. ಫಿಟ್ನೆಸ್ ರಿಯಾಯಿತಿ ಮತ್ತು ವಿಮಾ ಮೊತ್ತದ ಮರುಪಾವತಿಯಂತಹ ಪ್ರಯೋಜನಗಳನ್ನು ಪಡೆಯಿರಿ. ನಮ್ಮ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು, ವೈದ್ಯಕೀಯ ವೆಚ್ಚಗಳು ನಿಮ್ಮ ಉಳಿತಾಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುತ್ತವೆ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
online health insurance for ageing parents

ಪೋಷಕರಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್

ನಿಮ್ಮ ಪೋಷಕರು ಇಲ್ಲಿಯವರೆಗೆ ನಿಮ್ಮ ಆರೈಕೆ ಮಾಡಿದ್ದಾರೆ. ಈಗ ನಿಮ್ಮ ಸರದಿ. ಹೆಚ್ಚುತ್ತಿರುವ ಅವರ ವೈದ್ಯಕೀಯ ವೆಚ್ಚಗಳಿಗೆ ಭದ್ರತೆ ನೀಡಿ. ಪೋಷಕರಿಗಾಗಿ ಇರುವ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್, ಅವರ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಜೀವಮಾನದ ನವೀಕರಣ ಮತ್ತು ಆಯುಷ್ ಪ್ರಯೋಜನಗಳನ್ನು ಒದಗಿಸುತ್ತದೆ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
online health insurance for senior citizens

ಹಿರಿಯ ನಾಗರಿಕರಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಇದು ನಿಮ್ಮ ಚಿಂತೆಗಳನ್ನು ದೂರಮಾಡಿ, ನೆಮ್ಮದಿಯಿಂದ ಇರುವ ಜೀವನಘಟ್ಟ. ಹಾಗಿದ್ದ ಮೇಲೆ, ನಿಮಗೆ ವೈದ್ಯಕೀಯ ವೆಚ್ಚವನ್ನು ಪಾವತಿಸುವ ಒತ್ತಡ ಏಕೆ? ರೂಮ್ ಬಾಡಿಗೆಯಂತಹ ಉಪಮಿತಿಗಳನ್ನು ಅನ್ವಯಿಸುವ ಮತ್ತು ಜೀವಮಾನವಿಡೀ ನವೀಕರಿಸಬಹುದಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ನಿಮ್ಮದಾಗಿಸಿಕೊಳ್ಳಿ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
online health insurance for employees

ಕಾರ್ಪೊರೇಟ್ ಉದ್ಯೋಗಿಗಳಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ನೀವು ಈಗಾಗಲೇ ಕಾರ್ಪೊರೇಟ್ ಹೆಲ್ತ್ ಇನ್ಶೂರೆನ್ಸ್ ಹೊಂದಿದ್ದರೆ, ಅದು ನೀವು ಕೆಲಸದಲ್ಲಿರುವಾಗ ಮಾತ್ರ ಕವರೇಜ್ ನೀಡುತ್ತದೆ ಮತ್ತು ರಾಜೀನಾಮೆ ನೀಡಿದ ನಂತರ ನಿರುಪಯೋಗಿ ಆಗುತ್ತದೆ. ಆದ್ದರಿಂದ, ಉದ್ಯೋಗಿಗಳಿಗಾಗಿ ಇರುವ ನಮ್ಮ ಸಮಗ್ರ ಆರೋಗ್ಯ ಕವರ್ ಅಡಿಯಲ್ಲಿ ರಕ್ಷಣೆ ಪಡೆದು, ವೈದ್ಯಕೀಯ ವೆಚ್ಚಗಳಿಂದ ಉಂಟಾಗುವ ಹಣಕಾಸಿನ ಚಿಂತೆಗಳನ್ನು ದೂರ ಮಾಡಿ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
online health insurance for diabetic

ಡಯಾಬಿಟಿಕ್‌ಗಾಗಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ಸಕ್ಕರೆ ಕಾಯಿಲೆ ಇರುವವರಿಗೆ ವಿಶೇಷ ವೈದ್ಯಕೀಯ ಆರೈಕೆಯ ಅಗತ್ಯವಿರುವುದು ಎಲ್ಲರಿಗೂ ತಿಳಿದಿದೆ! ನೀವು ನಿಮ್ಮ ಬ್ಲಡ್ ಶುಗರ್ ಕೌಂಟ್ ಟ್ರ್ಯಾಕ್ ಮಾಡುವಾಗ ಮತ್ತು ಸಕ್ಕರೆ ಕಾಯಿಲೆಯನ್ನು ನಿಭಾಯಿಸುತ್ತಿರುವಾಗ, ನಿಮಗಾಗಿ ನಾವು ಎನರ್ಜಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ಆಸ್ಪತ್ರೆ ದಾಖಲಾತಿಯ ಚಿಂತೆಯ ಭಾರವನ್ನು ಹೊರುತ್ತೇವೆ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
online health insurance for womens

ಮಹಿಳೆಯರಿಗಾಗಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್

ನೀವು ವಿಶೇಷ ಶಕ್ತಿಯನ್ನು ಹೊಂದಿರುವ ಸೂಪರ್ ವುಮನ್ ಎಂಬುದೇನೋ ನಿಜ. ಆದರೆ, ಜೀವನದ ಕೆಲವು ಸಂದರ್ಭಗಳಲ್ಲಿ ನಿಮಗೂ ಸಹ ವೈದ್ಯಕೀಯ ಆರೈಕೆಯ ಅಗತ್ಯವಿದೆ. ಮೈ:ಹೆಲ್ತ್ ವಿಮೆನ್ ಸುರಕ್ಷಾ ಮೂಲಕ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಣೆ ಪಡೆದು, ಆರ್ಥಿಕ ಸಬಲತೆ ಸಾಧಿಸಿ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
slider-left
Optima Secure Global
Get More Benefits, More Peace with The Promise of Optima Secure

ಒಂದೇ ನೋಟದಲ್ಲಿ ನಮ್ಮ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿ

  • ಯಾವುದೇ ವೆಚ್ಚವಿಲ್ಲದ ಕಂತು ಲಭ್ಯವಿದೆ*^
    optima Secure health insurance policy

    ಆಪ್ಟಿಮಾ ಸೆಕ್ಯೂರ್

  • ಇದೀಗ ಲಾಂಚ್ ಆಗಿದೆ
    Optima Lite

    ಆಪ್ಟಿಮಾ ಲೈಟ್

  • ಇದೀಗ ಲಾಂಚ್ ಆಗಿದೆ
    optima Secure Global health insurance policy

    ಆಪ್ಟಿಮಾ ಸೆಕ್ಯೂರ್ ಗ್ಲೋಬಲ್

  • optima restore health insurance policy

    ಆಪ್ಟಿಮಾ ರಿಸ್ಟೋರ್

  • my:                                         health medisure super top-up plan

    ಮೈ:ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್

  • critical health insurance policy

    ಗಂಭೀರ ಅನಾರೋಗ್ಯ ಇನ್ಶೂರೆನ್ಸ್

  • iCan cancer insurance

    ಐಕ್ಯಾನ್ ಕ್ಯಾನ್ಸರ್ ಇನ್ಶೂರೆನ್ಸ್

ಇದೀಗ ಲಾಂಚ್ ಆಗಿದೆ
tab1
ಆಪ್ಟಿಮಾ ಸೆಕ್ಯೂರ್
Cashless hospitals network
4X ಕವರೇಜ್*
Wider Pre & Post Hospitalisation
ವಿಸ್ತರಿತ ಮೊದಲು ಮತ್ತು ನಂತರದ ಆಸ್ಪತ್ರೆ ದಾಖಲಾತಿ
free preventive health check-ups with optima restore
ಉಚಿತ ಮುಂಜಾಗೃತಾ ಆರೋಗ್ಯ-ಪರಿಶೀಲನೆಗಳು

ಪ್ರಮುಖ ಫೀಚರ್‌ಗಳು

  • ಸುರಕ್ಷಿತ ಪ್ರಯೋಜನ: 1 ದಿನದಿಂದಲೇ 2X ಕವರೇಜ್ ಪಡೆಯಿರಿ.
  • ರಿಸ್ಟೋರ್ ಪ್ರಯೋಜನ: 100% ನಿಮ್ಮ ಮೂಲ ಕವರೇಜನ್ನು ರಿಸ್ಟೋರ್ ಮಾಡುತ್ತದೆ
  • ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಈಗ ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆಯನ್ನು ಆರಿಸಿಕೊಳ್ಳಬಹುದು
  • ಒಟ್ಟು ಕಡಿತಗೊಳಿಸಬಹುದುದು: ಸ್ವಲ್ಪ ಹೆಚ್ಚು ಪಾವತಿಸಲು ಆಯ್ಕೆ ಮಾಡುವ ಮೂಲಕ ನೀವು ಪ್ರತಿ ವರ್ಷ 50% ವರೆಗೆ ರಿಯಾಯಿತಿಯನ್ನು ಆನಂದಿಸಬಹುದು. ಈ ಪಾಲಿಸಿಯ ಅಡಿಯಲ್ಲಿ 5 ವರ್ಷಗಳ ಪೂರ್ಣಗೊಳಿಸಿದ ನಂತರ ನವೀಕರಣದಲ್ಲಿ ನಿಮ್ಮ ಆಯ್ಕೆ ಮಾಡಿದ ಕಡಿತವನ್ನು ವಜಾಗೊಳಿಸಲು ನೀವು ಸೂಪರ್ ಪವರ್ ಅನ್ನು ಹೊಂದಿದ್ದೀರಿ.@
ಇದೀಗ ಲಾಂಚ್ ಆಗಿದೆ
tab1
ಆಪ್ಟಿಮಾ ಲೈಟ್
Preferred Choice of Base Sum Insured – 5 Lac or 7.5 Lac
ಮೂಲ ವಿಮಾ ಮೊತ್ತದ ಆದ್ಯತೆಯ ಆಯ್ಕೆ - 5 ಲಕ್ಷ ಅಥವಾ 7.5 ಲಕ್ಷ
All Day Care Procedures Covered
ಎಲ್ಲಾ ಡೇ ಕೇರ್ ಪ್ರಕ್ರಿಯೆಗಳನ್ನು ಕವರ್ ಮಾಡಲಾಗುತ್ತದೆ
Unlimited Automatic Restore
ಅನಿಯಮಿತ ಆಟೋಮ್ಯಾಟಿಕ್ ರಿಸ್ಟೋರ್

ಪ್ರಮುಖ ಫೀಚರ್‌ಗಳು

  • ಮೂಲ ವಿಮಾ ಮೊತ್ತದ ಆಯ್ಕೆ: ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ 5 ಲಕ್ಷ ಅಥವಾ 7.5 ಲಕ್ಷದ ಪ್ಲಾನ್ ಆಯ್ಕೆಮಾಡಿ
  • ಆಟೋಮ್ಯಾಟಿಕ್ ರಿಸ್ಟೋರ್: ವಿಮಾ ಮೊತ್ತದ ಸಂಪೂರ್ಣ ಅಥವಾ ಭಾಗಶಃ ಬಳಕೆಯ ನಂತರ ಮೂಲ SI ನ 100% ತ್ವರಿತ ಸೇರ್ಪಡೆ
  • ಕ್ಯುಮುಲೇಟಿವ್ ಬೋನಸ್: ನೀವು ಪಾಲಿಸಿಯನ್ನು ನವೀಕರಿಸಿದ ನಂತರ ಪ್ರತಿ ವರ್ಷ ಮೂಲ SI ನ 10% ಬೋನಸ್ ಗರಿಷ್ಠ 100% ವರೆಗೆ
  • ರಕ್ಷಣಾ ಪ್ರಯೋಜನ: IRDAI ಪಟ್ಟಿ ಮಾಡಿದ 68 ವೈದ್ಯಕೀಯೇತರ ವೆಚ್ಚಗಳಿಗೆ ಕವರೇಜ್
ಇದೀಗ ಲಾಂಚ್ ಆಗಿದೆ
tab1
ಆಪ್ಟಿಮಾ ಸೆಕ್ಯೂರ್ ಗ್ಲೋಬಲ್
Cashless hospitals network
ಭಾರತದಲ್ಲಿ ಮಾಡಿದ ಕ್ಲೈಮ್‌ಗಳಿಗೆ 4X ಕವರೇಜ್
Wider Pre & Post Hospitalisation
ವಿದೇಶಿ ಚಿಕಿತ್ಸೆಯನ್ನು ಕವರ್ ಮಾಡಲಾಗುತ್ತದೆ
free preventive health check-ups with optima restore
ಉಚಿತ ಮುಂಜಾಗೃತಾ ಆರೋಗ್ಯ-ಪರಿಶೀಲನೆಗಳು

ಪ್ರಮುಖ ಫೀಚರ್‌ಗಳು

  • ಜಾಗತಿಕ ಆರೋಗ್ಯ ಕವರ್: ಭಾರತದಲ್ಲಿ ವೈದ್ಯಕೀಯ ವೆಚ್ಚಗಳು ಮತ್ತು ವಿದೇಶಿ ವೈದ್ಯಕೀಯ ಚಿಕಿತ್ಸೆ ವೆಚ್ಚಗಳಿಗೆ ಸಮಗ್ರ ಆರೋಗ್ಯ ಕವರ್
  • ಪ್ಲಸ್ ಪ್ರಯೋಜನ: 2 ವರ್ಷಗಳ ನಂತರ ಕವರೇಜ್‌ 100% ನಷ್ಟು ಹೆಚ್ಚಾಗುತ್ತದೆ
  • ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆ: ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಈಗ ನೋ ಕಾಸ್ಟ್ ಇನ್‌ಸ್ಟಾಲ್‌ಮೆಂಟ್*^ ಆಯ್ಕೆಯನ್ನು ಆರಿಸಿಕೊಳ್ಳಬಹುದು
  • ಪ್ರೊಟೆಕ್ಟ್ ಪ್ರಯೋಜನ: ಪಟ್ಟಿ ಮಾಡಲಾದ ವೈದ್ಯಕೀಯವಲ್ಲದ ವೆಚ್ಚಗಳ ಮೇಲೆ ಶೂನ್ಯ ಕಡಿತಗಳು
tab1
ಆಪ್ಟಿಮಾ ರಿಸ್ಟೋರ್
Cashless hospitals network
16000+ ನಗದುರಹಿತ ನೆಟ್ವರ್ಕ್
Cashless Claims Settled in 20 Mins
ನಗದುರಹಿತ ಕ್ಲೇಮ್‌ಗಳನ್ನು 38 ನಿಮಿಷಗಳಲ್ಲಿ ಸೆಟಲ್ ಮಾಡುತ್ತೇವೆ.*~
free preventive health check-ups with optima restore
ಉಚಿತ ಮುಂಜಾಗೃತಾ ಆರೋಗ್ಯ-ಪರಿಶೀಲನೆಗಳು

ಪ್ರಮುಖ ಫೀಚರ್‌ಗಳು

  • 100% Restored Benefit: Get 100% of your cover restored instantly after your first claim.
  • 2x ಪಟ್ಟು ಪ್ರಯೋಜನ: ನೋ ಕ್ಲೈಮ್ ಬೋನಸ್ ರೂಪದಲ್ಲಿ 100% ವರೆಗೆ ಹೆಚ್ಚುವರಿ ಪಾಲಿಸಿ ಕವರ್ ಪಡೆಯಿರಿ.
  • ನಿಮ್ಮ ಆಸ್ಪತ್ರೆಗೆ ದಾಖಲಾದ ನಂತರ 60 ದಿನಗಳ ಮೊದಲು ಮತ್ತು 180 ದಿನಗಳ ಸಂಪೂರ್ಣ ಕವರೇಜ್. ಇದು ನಿಮ್ಮ ಆಸ್ಪತ್ರೆಗೆ ದಾಖಲಾಗುವಿಕೆಯನ್ನು ಸರಿಯಾಗಿ ಯೋಜಿಸುವುದನ್ನು ಖಚಿತಪಡಿಸುತ್ತದೆ.
tab4
ಮೈ:ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್
higher cover at low premium with my: health medisure super top-up plan
ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರ್
compliments existing health insurance with my: health medisure super top-up plan
ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್‌ಗೆ ಸೇರಿಸಬಹುದು
no premium hike post 61 years with my: health medisure super top-up plan
61 ವರ್ಷಗಳ ನಂತರ ಪ್ರೀಮಿಯಂನಲ್ಲಿ ಯಾವುದೇ ಹೆಚ್ಚಳವಿಲ್ಲ

ಪ್ರಮುಖ ಫೀಚರ್‌ಗಳು

  • ಒಟ್ಟು ಕಡಿತದಲ್ಲಿ ಕಾರ್ಯ ನಿರ್ವಹಿಸುತ್ತದೆ: ವರ್ಷದಲ್ಲಿ ನಿಮ್ಮ ಆಲ್ ರೌಂಡ್ ಒಟ್ಟು ಕ್ಲೈಮ್ ಮೊತ್ತವು ಒಟ್ಟು ಕಡಿತವನ್ನು ತಲುಪಿದ ನಂತರ, ಈ ಹೆಲ್ತ್ ಪ್ಲಾನ್ ಕಾರ್ಯರೂಪಕ್ಕೆ ಬರುತ್ತದೆ. ಇತರ ಟಾಪ್-ಅಪ್ ಪ್ಲಾನ್‌ಗಳಂತೆ ಇದರಲ್ಲಿ ಒಂದೇ ಕ್ಲೈಮ್‌ ಕಡಿತವನ್ನು ಪೂರೈಸುವ ಅಗತ್ಯವಿಲ್ಲ.
  • 55ನೇ ವಯಸ್ಸಿನವರೆಗೆ ಯಾವುದೇ ಆರೋಗ್ಯ ತಪಾಸಣೆಗಳಿಲ್ಲ : ಮುಂದೆ ಪಶ್ಚಾತ್ತಾಪ ಪಡುವ ಬದಲು ಇಂದೇ ಜಾಗರೂಕರಾಗಿರಿ! ನೀವು ಹರೆಯದಲ್ಲಿದ್ದಾಗಲೇ ನಿಮ್ಮ ಆರೋಗ್ಯವನ್ನು ಸುರಕ್ಷಿತಗೊಳಿಸಿ, ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವುದನ್ನು ತಪ್ಪಿಸಿ.
  • ಕಡಿಮೆ ಪಾವತಿಸಿ, ಹೆಚ್ಚು ಪಡೆಯಿರಿ: 2 ವರ್ಷಗಳ ದೀರ್ಘಾವಧಿ ಪಾಲಿಸಿ ಆಯ್ಕೆ ಮಾಡಿ, 5% ರಿಯಾಯಿತಿ ಪಡೆಯಿರಿ.
critical health insurance policy
ಗಂಭೀರ ಅನಾರೋಗ್ಯ ಇನ್ಶೂರೆನ್ಸ್
covers 15 critical illnesses
15 ಗಂಭೀರ ಅನಾರೋಗ್ಯಗಳನ್ನು ಕವರ್ ಮಾಡುತ್ತದೆ
lumpsum payouts benefit
ದೊಡ್ಡ ಮೊತ್ತದ ಪಾವತಿಗಳು
affordable premiums
ಕೈಗೆಟುಕುವ ಪ್ರೀಮಿಯಂಗಳು

ಪ್ರಮುಖ ಫೀಚರ್‌ಗಳು

  • ಯಾವುದೇ ವೈದ್ಯಕೀಯ ತಪಾಸಣೆಗಳಿಲ್ಲ: 45 ವರ್ಷಗಳ ವಯಸ್ಸಿನವರೆಗೆ ಯಾವುದೇ ವೈದ್ಯಕೀಯ ತಪಾಸಣೆಗಳಿಲ್ಲ.
  • ಲೈಫ್‌ಟೈಮ್ ನವೀಕರಣ: ಈ ಪಾಲಿಸಿಯನ್ನು ಜೀವಮಾನದ ಅವಧಿಗೆ ನವೀಕರಿಸಬಹುದು.
  • ಫ್ರೀ ಲುಕ್ ಅವಧಿ: ಪಾಲಿಸಿ ಡಾಕ್ಯುಮೆಂಟ್ ಪಡೆದ ದಿನಾಂಕದಿಂದ 15 ದಿನಗಳ ಫ್ರೀ ಲುಕ್ ಅವಧಿಯನ್ನು ನಾವು ಒದಗಿಸುತ್ತೇವೆ.
iCan cancer insurance
ಐಕ್ಯಾನ್ ಕ್ಯಾನ್ಸರ್ ಇನ್ಶೂರೆನ್ಸ್
all stages cancer cover
ಕ್ಯಾನ್ಸರ್‌ನ ಎಲ್ಲಾ ಹಂತಗಳಿಗೂ ಕವರ್
lumpsum payouts with iCan plan
ದೊಡ್ಡ ಮೊತ್ತದ ಪಾವತಿಗಳು
lifelong renewable
ಜೀವಮಾನವಿಡೀ ನವೀಕರಿಸಬಹುದಾದ

ಪ್ರಮುಖ ಫೀಚರ್‌ಗಳು

  • ಮೈ ಕೇರ್ ಪ್ರಯೋಜನ: ಕೀಮೋಥೆರಪಿಯಿಂದ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್‌ವರೆಗೆ, ಐಕ್ಯಾನ್ ಸಾಂಪ್ರದಾಯಿಕ ಮತ್ತು ಸುಧಾರಿತ ಚಿಕಿತ್ಸೆಗಳಿಗೆ ಸಂಪೂರ್ಣ ಕವರ್ ಒದಗಿಸುತ್ತದೆ.
  • CritiCare Benefits: Get an additional 60% of the sum insured, as a lump sum payment if cancer is detected of specified severity.
  • Follow-Up Care: Cancer treatments often have side-effects. Follow up care benefit gives you reimbursement up to ₹3,000 twice a year.
ಕೋಟ್‌ಗಳನ್ನು ಹೋಲಿಕೆ ಮಾಡಿ
buy a health insurance plan
Worried About One-Time Premiums? Explore Our No Cost Installment *^ Plans From Optima Secure
ನಿಮ್ಮ ಪ್ಲಾನನ್ನು ಕಸ್ಟಮೈಸ್ ಮಾಡಿ

ನಿಮ್ಮ ನಾಳೆ ಸುರಕ್ಷಿತವಾಗಿರಿಸಲು ಇಂದೇ ನಿಮ್ಮ ಆರೋಗ್ಯದಲ್ಲಿ ಹೂಡಿಕೆ ಮಾಡಿ

ಆರೋಗ್ಯವಾಗಿರುವುದು ಏಕೆ ಜಾಗರೂಕ ಆಯ್ಕೆಯಾಗಿರಬೇಕು ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡಲು ಕೆಲವು ಡೇಟಾ ಇಲ್ಲಿದೆ

India’s Load of Chronic Diseases
ಭಾರತದ ದೀರ್ಘಕಾಲದ ಕಾಯಿಲೆಗಳ ಹೊರೆ

ದೀರ್ಘಕಾಲದ ಕಾಯಿಲೆಗಳು ಅಂದಾಜು 53% ಸಾವುಗಳಿಗೆ ಮತ್ತು 44% ಅಂಗವಿಕಲತೆ-ಹೊಂದಾಣಿಕೆಯ ಜೀವಿತಾವಧಿಯ ನಷ್ಟಕ್ಕೆ ಕಾರಣವಾಗಿವೆ. ನಗರ ಪ್ರದೇಶಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಮಧುಮೇಹ ಹೆಚ್ಚಾಗಿ ಕಂಡುಬರುತ್ತವೆ. ಎಲ್ಲಾ ಕ್ಯಾನ್ಸರ್‌ಗಳಲ್ಲಿ ತಂಬಾಕು ಸಂಬಂಧಿತ ಕ್ಯಾನ್ಸರ್‌ಗಳು ಹೆಚ್ಚಿನ ಪ್ರಮಾಣದಲ್ಲಿವೆ.
ಇನ್ನಷ್ಟು ಓದಿ

India’s Cancer Risk
ಭಾರತದ ಕ್ಯಾನ್ಸರ್ ಅಪಾಯ

2022 ರಲ್ಲಿ ಭಾರತದಲ್ಲಿ ಅಂದಾಜು 14,61,427 ಕ್ಯಾನ್ಸರ್ ಪ್ರಕರಣಗಳು ಕಂಡುಬಂದಿವೆ. ಭಾರತದಲ್ಲಿ, ಒಂಬತ್ತು ಜನರಲ್ಲಿ ಒಬ್ಬರಿಗೆ ಅವರ ಜೀವಿತಾವಧಿಯಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆಯಿದೆ. ಪುರುಷರು ಮತ್ತು ಮಹಿಳೆಯರಲ್ಲಿ ಶ್ವಾಸಕೋಶ ಮತ್ತು ಸ್ತನ ಕ್ಯಾನ್ಸರ್‌ಗಳು ಕ್ರಮವಾಗಿ ಕ್ಯಾನ್ಸರ್‌ನ ಪ್ರಮುಖ ತಾಣಗಳಾಗಿವೆ. 2020 ಕ್ಕೆ ಹೋಲಿಸಿದರೆ 2025 ರಲ್ಲಿ ಕ್ಯಾನ್ಸರ್ ಪ್ರಮಾಣ ಶೇ.12.8 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಇನ್ನಷ್ಟು ಓದಿ

Viral Hepatitis Becoming a Public Health Threat
ವೈರಲ್ ಹೆಪಟೈಟಿಸ್ ಸಾರ್ವಜನಿಕ ಆರೋಗ್ಯಕ್ಕೆ ಅಪಾಯವಾಗಿದೆ

ವಿಶ್ವ ಆರೋಗ್ಯ ಸಂಸ್ಥೆಯ (WHO) 2024 ಗ್ಲೋಬಲ್ ಹೆಪಟೈಟಿಸ್ ವರದಿಯ ಪ್ರಕಾರ 2022 ರಲ್ಲಿ ಭಾರತವು ವಿಶ್ವದ ಹೆಪಟೈಟಿಸ್ ಪ್ರಕರಣಗಳಲ್ಲಿ 11.6 ಪ್ರತಿಶತವನ್ನು ಹೊಂದಿದೆ, 29.8 ಮಿಲಿಯನ್ ಹೆಪಟೈಟಿಸ್ B ಮತ್ತು 5.5 ಮಿಲಿಯನ್ ಹೆಪಟೈಟಿಸ್ C ಪ್ರಕರಣಗಳೊಂದಿಗೆ. ದೀರ್ಘಕಾಲದ ಹೆಪಟೈಟಿಸ್ B ಮತ್ತು C ಸೋಂಕಿನ ಅರ್ಧ ಹೊರೆ 30-54 ವರ್ಷ ವಯಸ್ಸಿನ ಜನರಲ್ಲಿದೆ ಮತ್ತು ಎಲ್ಲಾ ಪ್ರಕರಣಗಳಲ್ಲಿ ಪುರುಷರು 58 ಪ್ರತಿಶತದಷ್ಟಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನಷ್ಟು ಓದಿ

Accelerated Cost of Living with Diabetes
ಮಧುಮೇಹದೊಂದಿಗೆ ಜೀವನ ವೆಚ್ಚದ ಏರಿಕೆ

ಡಯಾಬಿಟಿಸ್ (ಟೈಪ್ 2) ನಿಂದ ಬಳಲುತ್ತಿರುವ 18 ವರ್ಷಕ್ಕಿಂತ ಮೇಲ್ಪಟ್ಟ ಅಂದಾಜು 77 ಮಿಲಿಯನ್ ಜನರು ಮತ್ತು ಸುಮಾರು 25 ಮಿಲಿಯನ್ ಜನರು ಪ್ರೀಡಿಯಾಬಿಟಿಕ್ಸ್ ಆಗಿರುವ ಜಾಗತಿಕ ಡಯಾಬಿಟಿಸ್ ಕ್ಯಾಪಿಟಲ್ ಎಂದು ಭಾರತವನ್ನು ಪರಿಗಣಿಸಲಾಗುತ್ತದೆ. ಭಾರತದಲ್ಲಿ, ಡಯಾಬಿಟಿಸ್ ಕೇರ್‌ಗೆ ಸಂಬಂಧಿಸಿದ ಮಧ್ಯಮ ಸರಾಸರಿ ವಾರ್ಷಿಕ ನೇರ ಮತ್ತು ಪರೋಕ್ಷ ವೆಚ್ಚಗಳನ್ನು ಕ್ರಮವಾಗಿ ₹ 25,391 ಮತ್ತು ₹ 4,970 ಎಂದು ಅಂದಾಜಿಸಲಾಗಿದೆ. ಭಾರತೀಯ ಜನಸಂಖ್ಯೆಯಲ್ಲಿ, 2010 ರಲ್ಲಿ ಮಧುಮೇಹದ ವಾರ್ಷಿಕ ವೆಚ್ಚ 31.9 ಬಿಲಿಯನ್ US ಡಾಲರ್ ಎಂದು ಕಂಡುಬಂದಿದೆ.
ಇನ್ನಷ್ಟು ಓದಿ

India’s threat to Communicable Diseases
ಸಾಂಕ್ರಾಮಿಕ ರೋಗಗಳಿಗೆ ಭಾರತದಲ್ಲಿ ಅಪಾಯದ ಮಟ್ಟ

2021 ರಲ್ಲಿ, ಭಾರತದಲ್ಲಿ ಸಾಂಕ್ರಾಮಿಕ ರೋಗಗಳಿಂದ ಸಾವಿಗೆ ನ್ಯುಮೋನಿಯಾ ಪ್ರಮುಖ ಕಾರಣವಾಗಿದ್ದು, 14,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ತೀವ್ರ ಉಸಿರಾಟದ ಸೋಂಕುಗಳು ಸಾವಿಗೆ ಎರಡನೇ ಪ್ರಮುಖ ಕಾರಣವಾಗಿದ್ದು, 9,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇನ್ನಷ್ಟು ಓದಿ

The Burden Of Cardiovascular Diseases
ಕಾರ್ಡಿಯೋವಾಸ್ಕುಲರ್ ರೋಗಗಳ ಹೊರೆ

ಭಾರತವು ವಿಶ್ವದಾದ್ಯಂತ ಕಾರ್ಡಿಯೋವಾಸ್ಕುಲರ್ ರೋಗದ (CVD) ಅತ್ಯಧಿಕ ಸಂಖ್ಯೆಗಳನ್ನು ಹೊಂದಿದೆ. ಭಾರತದಲ್ಲಿ CVD ಯಿಂದ ವಾರ್ಷಿಕ ಸಾವುಗಳ ಸಂಖ್ಯೆಯು 2.26 ಮಿಲಿಯನ್ (1990) ರಿಂದ 4.77 ಮಿಲಿಯನ್ (2020) ಗೆ ಹೆಚ್ಚಾಗಿರುವುದನ್ನು ತೋರಿಸುತ್ತದೆ. ಭಾರತದಲ್ಲಿ ಕೊರೋನರಿ ಹೃದಯ ರೋಗದ ವ್ಯಾಪ್ತಿಯ ದರಗಳನ್ನು ಕಳೆದ ಹಲವಾರು ದಶಕಗಳಲ್ಲಿ ಅಂದಾಜು ಮಾಡಲಾಗಿದೆ ಮತ್ತು ಗ್ರಾಮೀಣ ಜನಸಂಖ್ಯೆಯಲ್ಲಿ 1.6% ರಿಂದ 7.4% ವರೆಗೆ ಮತ್ತು ನಗರ ಜನಸಂಖ್ಯೆಯಲ್ಲಿ 1% ರಿಂದ 13.2% ವರೆಗೆ ಇದೆ.
ಇನ್ನಷ್ಟು ಓದಿ

ಎಚ್‌ಡಿಎಫ್‌ಸಿ ಎರ್ಗೋದಿಂದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ನಗದುರಹಿತ ಆಸ್ಪತ್ರೆ ನೆಟ್ವರ್ಕ್ ಭಾರತದಾದ್ಯಂತ 16000+
ತೆರಿಗೆ ಉಳಿತಾಯಗಳು ₹ 1 ಲಕ್ಷದವರೆಗೆ****
ನವೀಕರಣದ ಪ್ರಯೋಜನ ನವೀಕರಣದ 60 ದಿನಗಳ ಒಳಗೆ ಉಚಿತ ಹೆಲ್ತ್ ಚೆಕ್-ಅಪ್
ಕ್ಲೈಮ್ ಸೆಟಲ್ಮೆಂಟ್ ದರ 2 ಕ್ಲೈಮ್‌ಗಳು/ನಿಮಿಷ*
ಕ್ಲೈಮ್ ಅನುಮೋದನೆ 38*~ ನಿಮಿಷಗಳ ಒಳಗೆ
ಕವರೇಜ್ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು, ಡೇ ಕೇರ್ ಚಿಕಿತ್ಸೆಗಳು, ಮನೆ ಚಿಕಿತ್ಸೆಗಳು, ಆಯುಷ್ ಚಿಕಿತ್ಸೆ, ಅಂಗ ದಾನಿ ವೆಚ್ಚಗಳು
ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ ಆಸ್ಪತ್ರೆಗೆ ದಾಖಲಾಗುವ ಮುಂಚಿನ 60 ದಿನಗಳ ವೈದ್ಯಕೀಯ ವೆಚ್ಚಗಳು ಹಾಗೂ ಡಿಸ್ಚಾರ್ಜ್ ಆದ 180 ದಿನಗಳವರೆಗಿನ ಖರ್ಚುಗಳು ಕವರ್ ಆಗುತ್ತವೆ

ಹೆಲ್ತ್ ಇನ್ಶೂರೆನ್ಸ್ ಕವರೇಜ್: ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನನ್ನು ಕವರ್ ಮಾಡಲಾಗುತ್ತದೆ?

hospitalization expenses covered by hdfc ergo

ವೆಚ್ಚಗಳಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ

ಇತರ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಂತೆ, ಆಕ್ಸಿಡೆಂಟ್ ಅಥವಾ ಯೋಜಿತ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದಾಗ ರೂಮ್ ಬಾಡಿಗೆ, ICU ಶುಲ್ಕಗಳು, ತಪಾಸಣೆಗಳು, ಶಸ್ತ್ರಚಿಕಿತ್ಸೆ, ವೈದ್ಯರ ಸಮಾಲೋಚನೆಗಳು ಮುಂತಾದ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕೂಡ ನಾವು ಕವರ್ ಮಾಡುತ್ತೇವೆ.

mental healthcare covered in HDFC ERGO health insurance

ಮಾನಸಿಕ ಆರೋಗ್ಯ ರಕ್ಷಣೆ

ಮಾನಸಿಕ ಆರೋಗ್ಯ ರಕ್ಷಣೆಯು ದೈಹಿಕ ಅನಾರೋಗ್ಯ ಅಥವಾ ಗಾಯದಷ್ಟೇ ಮುಖ್ಯವಾಗಿದೆ ಎಂದು ನಾವು ನಂಬುತ್ತೇವೆ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಮಾನಸಿಕ ಅನಾರೋಗ್ಯಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ಕವರ್ ಮಾಡುವ ವಿಧಾನದಲ್ಲಿ ವಿನ್ಯಾಸಗೊಳಿಸಲಾಗಿದೆ.

pre & post hospitalisation covered

ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

ನಮ್ಮ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಗಳು ನಿಮ್ಮ ಎಲ್ಲಾ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು 60 ದಿನಗಳವರೆಗಿನ ಮತ್ತು ಡಿಸ್ಚಾರ್ಜ್ ನಂತರದ 180 ದಿನಗಳವರೆಗಿನ ವೆಚ್ಚಗಳನ್ನು ಒಳಗೊಂಡಿವೆ

daycare procedures covered

ಡೇ ಕೇರ್ ಚಿಕಿತ್ಸೆಗಳು

ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ ಮತ್ತು ಯೋಚಿಸಿ ಹೇಳಿ ಏನು? ಅದಕ್ಕಾಗಿ ನಿಮ್ಮನ್ನು ಕವರ್ ಮಾಡಲು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ನಾವು ಡೇಕೇರ್ ಚಿಕಿತ್ಸೆಗಳನ್ನು ಸೇರಿಸಿದ್ದೇವೆ.

cashless home health care covered by hdfc ergo

ಹೋಮ್ ಹೆಲ್ತ್‌ಕೇರ್

ಆಸ್ಪತ್ರೆ ಬೆಡ್‌ಗಳು ಲಭ್ಯವಿಲ್ಲದ ಸಂದರ್ಭದಲ್ಲಿ, ವೈದ್ಯರು ಮನೆಯಲ್ಲಿ ಚಿಕಿತ್ಸೆಯನ್ನು ಅನುಮೋದಿಸಿದರೆ, ನಮ್ಮ ಮೆಡಿಕಲ್ ಇನ್ಶೂರೆನ್ಸ್ ಪಾಲಿಸಿಯು ಅದಕ್ಕಾಗಿ ಕೂಡ ನಿಮ್ಮನ್ನು ಕವರ್ ಮಾಡುತ್ತದೆ. ಆದ್ದರಿಂದ, ನಿಮ್ಮ ಮನೆಯಲ್ಲೇ ಕುಳಿತು ನೀವು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತೀರಿ.

sum insured rebound covered

ವಿಮಾ ಮೊತ್ತದ ರಿಯಂಬ್ರಸ್ಮೆಂಟ್

ಈ ಪ್ರಯೋಜನವು ಮ್ಯಾಜಿಕಲ್ ಬ್ಯಾಕಪ್‌ನಂತೆ ಕಾರ್ಯನಿರ್ವಹಿಸುತ್ತದೆ, ಇದು ಕ್ಲೈಮ್ ನಂತರವೂ ವಿಮಾ ಮೊತ್ತದವರೆಗೆ ನಿಮ್ಮ ಮುಗಿದ ಹೆಲ್ತ್ ಕವರ್ ಅನ್ನು ರಿಚಾರ್ಜ್ ಮಾಡುತ್ತದೆ. ಈ ಅನನ್ಯ ಫೀಚರ್ ಅಗತ್ಯವಿರುವ ಸಮಯದಲ್ಲಿ ತಡೆರಹಿತ ವೈದ್ಯಕೀಯ ಕವರೇಜನ್ನು ಖಚಿತಪಡಿಸುತ್ತದೆ.

organ donor expenses

ಅಂಗ ದಾನಿ ವೆಚ್ಚಗಳು

ಅಂಗಾಂಗ ದಾನವು ಒಂದು ಉದಾತ್ತ ಕಾರಣವಾಗಿದೆ ಮತ್ತು ಕೆಲವೊಮ್ಮೆ ಇದು ಜೀವ ಉಳಿಸುವ ಶಸ್ತ್ರಚಿಕಿತ್ಸೆಯಾಗಿರಬಹುದು. ಇದಕ್ಕಾಗಿಯೇ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ದಾನಿಯ ದೇಹದಿಂದ ಪ್ರಮುಖ ಅಂಗವನ್ನು ಸಂಗ್ರಹಿಸುವಾಗ ಅಂಗ ದಾನಿಯ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ವೆಚ್ಚಗಳನ್ನು ಕವರ್ ಮಾಡುತ್ತವೆ.

recovery benefits covered

ರಿಕವರಿ ಪ್ರಯೋಜನ

ಒಂದು ವೇಳೆ ನೀವು 10 ದಿನಗಳಿಗಿಂತ ಹೆಚ್ಚು ಸಮಯದವರೆಗೆ ಆಸ್ಪತ್ರೆಯಲ್ಲೇ ಉಳಿಯಬೇಕಾಗಿ ಬಂದಾಗ, ನಿಮ್ಮ ಅನುಪಸ್ಥಿತಿಯಿಂದ ಮನೆಯಲ್ಲಿ ಆಗಿರಬಹುದಾದಾ ಇತರ ಹಣಕಾಸು ನಷ್ಟಗಳನ್ನೂ ನಾವು ಪಾವತಿಸುತ್ತೇವೆ.. ನಮ್ಮ ಪ್ಲಾನ್‌ಗಳಲ್ಲಿನ ಈ ಫೀಚರ್ ಆಸ್ಪತ್ರೆಗೆ ದಾಖಲಾಗಿರುವ ಸಮಯದಲ್ಲಿಯೂ ನೀವು ನಿಮ್ಮ ಇತರ ವೆಚ್ಚಗಳನ್ನು ನೋಡಿಕೊಳ್ಳಬಹುದು ಎಂಬುದನ್ನು ಖಚಿತಪಡಿಸುತ್ತದೆ.

ayush benefits covered

ಆಯುಷ್ ಪ್ರಯೋಜನಗಳು

ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಪರ್ಯಾಯ ಚಿಕಿತ್ಸೆಗಳಲ್ಲಿ ನೀವು ನಂಬಿಕೆ ಹೊಂದಿದ್ದರೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಆಯುಷ್ ಚಿಕಿತ್ಸೆ ಗಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ನಾವು ಕವರ್ ಮಾಡುವುದರಿಂದ ನಿಮ್ಮ ನಂಬಿಕೆಗೆ ತೊಂದರೆಯಾಗದಂತೆ ಉಳಿದುಕೊಳ್ಳಿ.

free renewal health check-up

ನವೀಕರಣದ ನಂತರ ಉಚಿತ ಆರೋಗ್ಯ ತಪಾಸಣೆ

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಫಿಟ್ ಆಗಿರಲು ಮತ್ತು ಸಕ್ರಿಯವಾಗಿರಲು ಮತ್ತು ಅನಾರೋಗ್ಯಗಳನ್ನು ತಡೆಗಟ್ಟಲು ನಿಮಗೆ ಸಹಾಯ ಮಾಡಲು ಕಾಂಪ್ಲಿಮೆಂಟರಿ ವಾರ್ಷಿಕ ಹೆಲ್ತ್ ಚೆಕಪ್ ಅನ್ನು ಒದಗಿಸುತ್ತವೆ. ಈ ಚೆಕಪ್‌ಗಳು ಲಿವರ್ ಫಂಕ್ಷನ್ ಟೆಸ್ಟ್‌ಗಳು, ಲಿಪಿಡ್ ಪ್ರೊಫೈಲ್‌ಗಳು ಮತ್ತು ವಿಟಮಿನ್ ಕೊರತೆ ಟೆಸ್ಟ್‌ಗಳಂಥ ಅನೇಕ ಡಯಾಗ್ನಸ್ಟಿಕ್ ಟೆಸ್ಟ್‌ಗಳನ್ನು ಒಳಗೊಂಡಿವೆ.

lifetime renewability

ಆಜೀವ ನವೀಕರಣ

ಒಮ್ಮೆ ನೀವು ನಮ್ಮಲ್ಲಿ ನಿಮ್ಮನ್ನು ಸುರಕ್ಷಿತಗೊಳಿಸಿದ ನಂತರ, ಹಿಂತಿರುಗಿ ನೋಡುವ ಅಗತ್ಯವಿಲ್ಲ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಬ್ರೇಕ್-ಫ್ರೀ ನವೀಕರಣಗಳ ಮೂಲಕ ಜೀವಮಾನದ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಸುರಕ್ಷಿತವಾಗಿರಿಸುವುದು ಮುಂದುವರೆಸುತ್ತವೆ.

lifetime
                                                    renewability

ಮಲ್ಟಿಪ್ಲೈಯರ್ ಪ್ರಯೋಜನ

ಪಾಲಿಸಿ ಅವಧಿಯಲ್ಲಿ ಮಾಡಿದ ಯಾವುದೇ ಕ್ಲೈಮ್‌ಗಳನ್ನು ಲೆಕ್ಕಿಸದೆ, ಗಡುವು ಮುಗಿಯುತ್ತಿರುವ ಪಾಲಿಸಿಯಿಂದ ಮೂಲ ವಿಮಾ ಮೊತ್ತದ 50% ಗೆ ಸಮನಾದ ಮಲ್ಟಿಪ್ಲೈಯರ್ ಪ್ರಯೋಜನವನ್ನು ನವೀಕರಣದ ಸಮಯದಲ್ಲಿ ಒದಗಿಸಲಾಗುತ್ತದೆ. ಈ ಪ್ರಯೋಜನವು ಮೂಲ ವಿಮಾ ಮೊತ್ತದ ಗರಿಷ್ಠ 100% ವರೆಗೆ ಒಳಗೊಳ್ಳಬಹುದು.

ನಮ್ಮ ಕೆಲವು ಹೆಲ್ತ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಲಾದ ಕವರೇಜ್ ಲಭ್ಯವಿಲ್ಲದಿರಬಹುದು. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ವಾಕ್ಯಗಳು, ಬ್ರೋಶರ್ ಮತ್ತು ವಿವರಣೆ ಓದಿ.

adventure sport injuries

ಸಾಹಸ ಕ್ರೀಡೆಯ ಹಾನಿಗಳು

ಸಾಹಸಗಳಿಂದ ನಿಮಗೆ ಮಾನಸಿಕ ಉತ್ತೇಜನ ಸಿಗಬಹುದು. ಆದರೆ, ಅದರಿಂದ ಹಾನಿಗಳು ಆದಾಗ, ಅದು ಅಪಾಯಕಾರಿಯಾಗುತ್ತದೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆಗುವ ಅವಘಡಗಳಿಗೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರೇಜ್‌ ನೀಡುವುದಿಲ್ಲ.

self-inflicted injuries not covered

ಸ್ವಯಂ-ಕಾರಣದಿಂದ ಆದ ಗಾಯಗಳು

ನೀವೇ ನಿಮ್ಮ ದೇಹಕ್ಕೆ ಹಾನಿ ಮಾಡಿಕೊಂಡರೆ, ದುರದೃಷ್ಟವಶಾತ್ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನೀವೇ ಮಾಡಿಕೊಂಡ ಹಾನಿಗಳಿಗೆ ಕವರೇಜ್‌ ನೀಡುವುದಿಲ್ಲ.

injuries in war is not covered

ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯುದ್ಧಗಳಿಂದ ಆಗುವ ಯಾವುದೇ ಕ್ಲೇಮ್‌ಗೆ ಕವರೇಜ್‌ ನೀಡುವುದಿಲ್ಲ.

Participation in defence operations not covered

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ (ಸೇನೆ/ನೌಕಾಪಡೆ/ವಾಯುಪಡೆ) ಕಾರ್ಯಾಚರಣೆಗಳಲ್ಲಿ ಭಾಗವಹಿಸುವಾಗ ಆಗುವ ಆಕಸ್ಮಿಕ ಹಾನಿಗಳನ್ನು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವುದಿಲ್ಲ.

venereal or sexually transmitted diseases

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳನ್ನು ಕವರ್ ಮಾಡುವುದಿಲ್ಲ.

treatment of obesity or cosmetic surgery not covered

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅಡಿ, ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆಯು ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

Get hdfc ergo health insurance plan
In Just a Few Clicks, Secure Yourself & Your Family with Customised Health Insurance Plans from HDFC ERGO

13,000+
ನಗದುರಹಿತ ನೆಟ್ವರ್ಕ್
ಭಾರತದಾದ್ಯಂತ

ನಿಮ್ಮ ಹತ್ತಿರದ ನಗದುರಹಿತ ನೆಟ್ವರ್ಕ್‌ಗಳನ್ನು ಹುಡುಕಿ

search-icon
ಅಥವಾನಿಮ್ಮ ಹತ್ತಿರದಲ್ಲಿರುವ ಆಸ್ಪತ್ರೆಯನ್ನು ಪತ್ತೆಹಚ್ಚಿ
Find 13,000+ network hospitals across India
ಜಸ್ಲೋಕ್ ಮೆಡಿಕಲ್ ಸೆಂಟರ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ರೂಪಾಲಿ ಮೆಡಿಕಲ್
ಸೆಂಟರ್ ಪ್ರೈವೇಟ್ ಲಿಮಿಟೆಡ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ಜಸ್ಲೋಕ್ ಮೆಡಿಕಲ್ ಸೆಂಟರ್

ವಿಳಾಸ

C-1/15A ಯಮುನಾ ವಿಹಾರ್, ಪಿನ್‌ಕೋಡ್-110053

ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಮಾಡುವುದು ಹೇಗೆ

ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ಹಣಕಾಸಿನ ನೆರವು ಪಡೆಯುವುದು ಹೆಲ್ತ್‌ ಇನ್ಶೂರೆನ್ಸ್‌ ಪ್ಲಾನ್‌ ಅನ್ನು ಖರೀದಿಸುವ ಏಕೈಕ ಉದ್ದೇಶವಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ಗಳು ಮತ್ತು ವೆಚ್ಚ ತುಂಬಿಕೊಡುವ ಕ್ಲೈಮ್ ಕೋರಿಕೆಗಳಿಗೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.

ಹೆಲ್ತ್ ಇನ್ಶೂರೆನ್ಸ್ ಕ್ಯಾಶ್‌ಲೆಸ್ ಕ್ಲೈಮ್‌ಗಳು 38*~ ನಿಮಿಷಗಳ ಒಳಗೆ ಅನುಮೋದನೆ ಪಡೆಯುತ್ತವೆ

Fill pre-auth form for cashless approval
1

ಸೂಚನೆ

ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ

approval status for health claim
2

ಅನುಮೋದಿತ/ತಿರಸ್ಕೃತ

ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ

Hospitalization after approval
3

ಆಸ್ಪತ್ರೆಗೆ ದಾಖಲಾಗುವುದು

ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು

medical claims settlement with the hospital
4

ಕ್ಲೈಮ್ ಸೆಟಲ್ಮೆಂಟ್

ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್‌ ಮಾಡುತ್ತೇವೆ

ನಾವು ರಿಯಂಬ್ರಸ್ಮೆಂಟ್ ಕ್ಲೈಮ್‌ಗಳನ್ನು 2.9 ದಿನಗಳ ಒಳಗೆ~* ಸೆಟಲ್ ಮಾಡುತ್ತೇವೆ

Hospitalization
1

ನಾನ್‌-ನೆಟ್ವರ್ಕ್ ಆಸ್ಪತ್ರೆಯಲ್ಲಿ ಆಸ್ಪತ್ರೆ ದಾಖಲಾತಿ

ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು

claim registration
2

ಕ್ಲೈಮ್ ನೋಂದಣಿ ಮಾಡಿ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ

claim verifcation
3

ಪರಿಶೀಲನೆ

ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ

claim approval
4

ಕ್ಲೈಮ್ ಸೆಟಲ್ಮೆಂಟ್

ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.

ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ರಿಯಂಬ್ರಸ್ಮೆಂಟ್ಗಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಕ್ಲೈಮ್ ಮಾಡುವಾಗ ನೀವು ಹೊಂದಿರಬೇಕಾದ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ. ಆದಾಗ್ಯೂ, ಯಾವುದೇ ಪ್ರಮುಖ ಡಾಕ್ಯುಮೆಂಟ್ ಅನ್ನು ತಪ್ಪಿಸಿಕೊಳ್ಳದೇ ಇರಲು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ.

  • ನಿಮ್ಮ ಸಹಿ ಮತ್ತು ಮಾನ್ಯ ಗುರುತಿನ ಪುರಾವೆಯೊಂದಿಗೆ ಕ್ಲೈಮ್ ಫಾರ್ಮ್.
  • ಆಸ್ಪತ್ರೆ ದಾಖಲಾತಿ, ಡಯಾಗ್ನಸ್ಟಿಕ್ ಪರೀಕ್ಷೆಗಳು ಮತ್ತು ಔಷಧಿಗಳನ್ನು ತಿಳಿಸುವ ವೈದ್ಯರ ಪ್ರಿಸ್ಕ್ರಿಪ್ಷನ್.
  • ರಸೀತಿಗಳೊಂದಿಗೆ ಮೂಲ ಆಸ್ಪತ್ರೆ, ಡಯಾಗ್ನಸ್ಟಿಕ್, ಡಾಕ್ಟರ್‌ಗಳು ಮತ್ತು ಔಷಧಿ ಬಿಲ್‌ಗಳು.
  • ಡಿಸ್ಚಾರ್ಜ್ ಸಾರಾಂಶ, ಕೇಸ್ ಪೇಪರ್‌ಗಳು, ತನಿಖಾ ವರದಿಗಳು.
  • ಅನ್ವಯವಾದರೆ ಪೊಲೀಸ್ FIR/ವೈದ್ಯಕೀಯ ಕಾನೂನು ವರದಿ (MLC) ಅಥವಾ ಪೋಸ್ಟ್-ಮಾರ್ಟಂ ವರದಿ .
  • ಚೆಕ್ ಕಾಪಿ/ಪಾಸ್‌ಬುಕ್/ಬ್ಯಾಂಕ್ ಸ್ಟೇಟ್ಮೆಂಟ್‌ನಂತಹ ಹೆಸರಿನ ಬ್ಯಾಂಕ್ ಅಕೌಂಟ್‍ನ ಪುರಾವೆ
Get health insurance plan for your family
ಕೆಲವು ಕಾಯಿಲೆಗಳಿಗೆ ನಿಮ್ಮ ಮೇಲೆ ಬೀರಿದ ಅಪಾಯವನ್ನು ಮೌಲ್ಯಮಾಪನ ಮಾಡಲು ನಿಮ್ಮ BMI ನಿಮಗೆ ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ತೆರಿಗೆ ಉಳಿಸಿ

dual benefit on health insurance policy

ಎರಡು ಪ್ರಯೋಜನ

ಹೆಲ್ತ್ ಇನ್ಶೂರೆನ್ಸ್ ಪ್ಲಾನ್ not only covers your medical expenses but also offers tax benefits ಇದರಿಂದ ನೀವು ₹ 1 ಲಕ್ಷ**** ವರೆಗೆ ಉಳಿತಾಯ ಮಾಡಬಹುದು, ಸೆಕ್ಷನ್ 80D ಆದಾಯ ತೆರಿಗೆ ಕಾಯ್ದೆ 1961 ಪ್ರಕಾರ. ನಿಮ್ಮ ಹಣಕಾಸನ್ನು ಯೋಜಿಸುವಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸುತ್ತದೆ.

tax deduction on medical insurance premium paid

ಪಾವತಿಸಿದ ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಆಧಾರದಲ್ಲಿ ತೆರಿಗೆ ಕಡಿತ

ನಿಮಗಾಗಿ ಹೆಲ್ತ್‌ ಇನ್ಶೂರೆನ್ಸ್‌ ಪ್ಲಾನ್‌ ಖರೀದಿಸುವ ಮೂಲಕ, 1961 ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80D ಅಡಿ ವೈದ್ಯಕೀಯ ಇನ್ಶೂರೆನ್ಸ್‌ ಪ್ರೀಮಿಯಂ ಮೇಲೆ ಪ್ರತಿ ಬಜೆಟ್ ವರ್ಷಕ್ಕೆ ₹ 25,000 ವರೆಗೆ ಕಡಿತ ಪಡೆಯಬಹುದು.

deduction on preventive                                         health check-ups

ಪೋಷಕರಿಗೆ ಪಾವತಿಸಿದ ಮೆಡಿಕಲ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಕಡಿತ

ನೀವು ಪೋಷಕರಿಗೆ ವೈದ್ಯಕೀಯ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಪಾವತಿಸುತ್ತಿದ್ದರೆ, ನೀವು ಪ್ರತಿ ಬಜೆಟ್ ವರ್ಷದಲ್ಲಿ ₹ 25,000 ವರೆಗಿನ ಹೆಚ್ಚುವರಿ ಕಡಿತವನ್ನು ಕೂಡ ಪಡೆಯಬಹುದು. ನಿಮ್ಮ ಪೋಷಕರು ಅಥವಾ ಅವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿದ್ದರೆ, ಈ ಮಿತಿಯು ₹ 50,000 ವರೆಗೆ ಹೋಗಬಹುದು.

save tax on medical insurance premium paid for parents

ಮುಂಜಾಗೃತಾ ಹೆಲ್ತ್ ಚೆಕ್-ಅಪ್‌ಗಳ ಮೇಲೆ ಕಡಿತ

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ನೀವು ವಾರ್ಷಿಕವಾಗಿ ಮುಂಜಾಗೃತಾ ಆರೋಗ್ಯ ತಪಾಸಣೆಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ಕೂಡ ಕ್ಲೈಮ್ ಮಾಡಬಹುದು. ನೀವು ಕ್ಲೈಮ್ ಮಾಡಬಹುದು ಪ್ರತಿ ಬಜೆಟ್ ವರ್ಷಕ್ಕೆ ವೆಚ್ಚಗಳಾಗಿ ₹ 5,000 ವರೆಗೆ incurred for preventive health check-ups, while filing your ಆದಾಯ ತೆರಿಗೆ ರಿಟರ್ನ್ಸ್.

ಮೇಲೆ ತಿಳಿಸಲಾದ ಪ್ರಯೋಜನಗಳು, ದೇಶದಲ್ಲಿ ಚಾಲ್ತಿಯಲ್ಲಿರುವ ಪ್ರಸ್ತುತ ತೆರಿಗೆ ಕಾನೂನುಗಳ ಪ್ರಕಾರ ಇವೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ತೆರಿಗೆ ಪ್ರಯೋಜನಗಳು ತೆರಿಗೆ ಕಾನೂನುಗಳಿಗೆ ಒಳಪಟ್ಟು ಬದಲಾಗಬಹುದು. ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಅದನ್ನೇ ಮರು ದೃಢೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೌಲ್ಯದಿಂದ ಮುಕ್ತವಾಗಿದೆ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ತೆರಿಗೆಯನ್ನು ಉಳಿಸಿ ಬೇಗ ಮಾಡಿಸಿದಷ್ಟೂ, ಲಾಭ ಜಾಸ್ತಿ

ಯಾವುದೇ ಮುಂಚಿತ ಸೂಚನೆ ಇಲ್ಲದೆ, ಯಾವುದೇ ಸಮಯದಲ್ಲಿ ಬೇಕಾದರೂ ಆರೋಗ್ಯ ತುರ್ತುಸ್ಥಿತಿಗಳು ಎದುರಾಗಬಹುದಾದ್ದರಿಂದ ಸಾಧ್ಯವಾದಷ್ಟು ಬೇಗ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಯಾವಾಗಲೂ ಉತ್ತಮವಾಗಿದೆ. ಸಣ್ಣ ವಯಸ್ಸಿನಲ್ಲಿಯೇ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಯಾಕೆ ಮುಖ್ಯ ಎಂಬುದನ್ನು ಈ ಕೆಳಗಿನ ಅಂಶಗಳು ಸ್ಪಷ್ಟವಾಗಿ ವಿವರಿಸುತ್ತವೆ:

1

ತುಲನಾತ್ಮಕವಾಗಿ ಕಡಿಮೆ ಪ್ರೀಮಿಯಂ

ನೀವು ಕಡಿಮೆ ವಯಸ್ಸಿನಲ್ಲಿ ಹೆಲ್ತ್ ಪಾಲಿಸಿಯನ್ನು ಪಡೆದಾಗ ಪ್ರೀಮಿಯಂ ತುಲನಾತ್ಮಕವಾಗಿ ಕಡಿಮೆಯಾಗುತ್ತದೆ ಇದಕ್ಕೆ ಕಾರಣವೇನೆಂದರೆ ಇನ್ಶೂರೆನ್ಸ್ ಕಂಪನಿಗೆ, ವಿಮಾದಾರರ ವಯಸ್ಸು ಕಡಿಮೆ ಇದ್ದಷ್ಟೂ ಆರೋಗ್ಯದ ಅಪಾಯವು ಕಡಿಮೆಯಾಗಿರುತ್ತದೆ.

2

ಕಡ್ಡಾಯ ಆರೋಗ್ಯ ತಪಾಸಣೆಯನ್ನು ಸ್ಕಿಪ್ ಮಾಡಿ

ಕೆಲವು ಸಂದರ್ಭಗಳಲ್ಲಿ, ನಿರ್ದಿಷ್ಟ ವಯಸ್ಸಿನ ಜನರು ಹೆಲ್ತ್ ಇನ್ಶೂರೆನ್ಸ್ ಪಡೆಯಲು ಕಡ್ಡಾಯವಾಗಿ ಮಾಡಿಸಬೇಕಾದ ಹೆಲ್ತ್ ಚೆಕ್-ಅಪ್‌ಗಳಿಂದ ನಿಮಗೆ ವಿನಾಯಿತಿ ಸಿಗಬಹುದು.

3

ಕಡಿಮೆ ಕಾಯುವ ಅವಧಿ

ಕೆಲವು ಆರೋಗ್ಯ ಪರಿಸ್ಥಿತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಕಾಯುವ ಅವಧಿಗಳನ್ನು ಹೊಂದಿವೆ. ನೀವು ಯೌವನದಲ್ಲಿದ್ದಾಗ ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸಿದರೆ, ನೀವು ಅವುಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುತ್ತೀರಿ.

ಜನರು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದನ್ನು ತಪ್ಪಿಸಲು ಕಾರಣಗಳು

ನಮ್ಮಲ್ಲಿ ಹಲವರು ಉದ್ಯೋಗಿ ಹೆಲ್ತ್‌ ಇನ್ಶೂರೆನ್ಸ್‌ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳುವ ಸುರಕ್ಷಿತ ಕವರ್ ಎಂದು ಪರಿಗಣಿಸಿರುತ್ತೇವೆ. ಆದಾಗ್ಯೂ, ಉದ್ಯೋಗದಾತರ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಕೆಲಸದ ಅವಧಿಯಲ್ಲಿ ಮಾತ್ರ ನಿಮ್ಮನ್ನು ಕವರ್ ಮಾಡುತ್ತದೆ ಎಂದು ತಿಳಿದುಕೊಳ್ಳಬೇಕು. ನೀವು ಕಂಪನಿಯನ್ನು ಬಿಟ್ಟ ನಂತರ ಅಥವಾ ಕೆಲಸಗಳನ್ನು ಬದಲಿಸಿದ ಮೇಲೆ, ನೀವು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ. ಕೆಲವು ಕಂಪನಿಗಳು ಆರಂಭಿಕ ಪ್ರೊಬೇಶನ್ ಅವಧಿಯಲ್ಲಿ ಹೆಲ್ತ್‌ ಕವರ್ ಒದಗಿಸುವುದಿಲ್ಲ. ನೀವು ಮಾನ್ಯ ಕಾರ್ಪೊರೇಟ್ ಹೆಲ್ತ್ ಕವರ್ ಹೊಂದಿದ್ದರೂ ಕೂಡ, ಅದು ಕಡಿಮೆ ವಿಮಾ ಮೊತ್ತವನ್ನು ಒದಗಿಸಬಹುದು, ಆಧುನಿಕ ವೈದ್ಯಕೀಯ ಕವರೇಜ್ ಹೊಂದಿಲ್ಲದೆ ಇರಬಹುದು ಮತ್ತು ಕ್ಲೇಮ್‌ಗಳಿಗೆ ಸಹ-ಪಾವತಿ ಮಾಡಲು ನಿಮ್ಮನ್ನು ಕೇಳಬಹುದು. ಆದ್ದರಿಂದ, ಹೆಚ್ಚು ಜಾಗೃತೆ ವಹಿಸುವ ಮೂಲಕ ಯಾವಾಗಲೂ ನಿಮಗಾಗಿ ಮತ್ತು ನಿಮ್ಮ ಕುಟುಂಬಕ್ಕಾಗಿ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಯೋಜನೆ ಪಡೆದುಕೊಳ್ಳಿ.

ನೀವು EMI, ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸುವಂತೆ, ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಅಥವಾ ಒಂದು ಉತ್ತಮ ಹಣಕಾಸಿನ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಲೈಫ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಪ್ರೀಮಿಯಂ ಪಾವತಿಸುವಂತೆಯೇ, ನೀವು ದೀರ್ಘಾವಧಿಯಲ್ಲಿ ನಿಮ್ಮ ಉಳಿತಾಯವನ್ನು ಸುರಕ್ಷಿತಗೊಳಿಸಲು ಹೆಲ್ತ್ ಇನ್ಶೂರೆನ್ಸ್ ಖರೀದಿಸಬೇಕಾಗುತ್ತದೆ. ನಮ್ಮನ್ನು ಅಥವಾ ನಮ್ಮ ಸುತ್ತಮುತ್ತಲಿನ ಆಪ್ತರನ್ನು ಯಾವುದೇ ಕಠಿಣ ಪರಿಸ್ಥಿತಿಯು ಬಾಧಿಸುವವರೆಗೆ, ಹೆಲ್ತ್‌ ಇನ್ಶೂರೆನ್ಸ್‌ನ ಪ್ರಾಮುಖ್ಯತೆಯು ನಮಗೆ ಅರಿವಾಗುವುದಿಲ್ಲ. ಅನಿರೀಕ್ಷಿತ ವೈದ್ಯಕೀಯ ವೆಚ್ಚವು ಎದುರುಗೊಂಡಾಗ, ಜಾಗೃತಿಯ ಕೊರತೆಯು ನಿಮ್ಮ ಉಳಿತಾಯವನ್ನು ಹಾಳುಮಾಡಬಹುದು.

ನೀವು ಮೆಟ್ರೋ ನಗರದಲ್ಲಿ ವಾಸಿಸುತ್ತಿದ್ದರೆ, ಅಲ್ಲಿನ ವೈದ್ಯಕೀಯ ಚಿಕಿತ್ಸೆ ವೆಚ್ಚಗಳು ಹೆಚ್ಚಾಗಿರುವುದರಿಂದ, ಹೆಚ್ಚಿನ ವಿಮಾ ಮೊತ್ತದ ಅಗತ್ಯವಿದೆ ಎಂದು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಒಂದು ವರ್ಷದಲ್ಲಿ ಒಮ್ಮೆ ಆಸ್ಪತ್ರೆಗೆ ದಾಖಲಾದಾಗ ನಿಮ್ಮ ವಿಮಾ ಮೊತ್ತವು ಸಂಪೂರ್ಣ ಖರ್ಚಾದರೆ, ಆಗ ನೀವು ಹೆಚ್ಚಿನ ವಿಮಾ ಮೊತ್ತದ ಆಯ್ಕೆಯನ್ನು ಪರಿಗಣಿಸಬೇಕು. ಕೇವಲ ಹೆಲ್ತ್ ಇನ್ಶೂರೆನ್ಸ್ ಖರೀದಿಯಷ್ಟೇ ದೀರ್ಘಾವಧಿಯಲ್ಲಿ ಸಹಾಯಕ್ಕೆ ಬರುವುದಿಲ್ಲ. ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಸಾಕಾಗುವಷ್ಟು ವಿಮಾ ಮೊತ್ತವನ್ನು ಪಡೆಯುವುದು ಕೂಡ ಅಷ್ಟೇ ಮುಖ್ಯವಾಗಿದೆ. ಅಲ್ಲದೆ, ನೀವು ಕುಟುಂಬದ ಹೆಚ್ಚಿನ ಸದಸ್ಯರನ್ನು ಕವರ್ ಮಾಡುತ್ತಿದ್ದರೆ, 10 ಲಕ್ಷಕ್ಕಿಂತ ಹೆಚ್ಚಿನ ವಿಮಾ ಮೊತ್ತದೊಂದಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳುವುದನ್ನು ಪರಿಗಣಿಸಬಹುದು.

ನೀವು ಕೇವಲ ಪ್ರೀಮಿಯಂ ನೋಡಿ, ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ಖರೀದಿಸಬಹುದೇ ಎಂಬ ಅನುಮಾನದಲ್ಲೇ ಹಿಂದೇಟು ಹಾಕಬೇಡಿ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮುನ್ನ, ಅದರ ಕವರೇಜ್ ಮತ್ತು ಪ್ರಯೋಜನಗಳ ಪಟ್ಟಿಯನ್ನು ಅಲಕ್ಷ್ಯ ಮಾಡದೆ ನೋಡುವುದು ತುಂಬಾ ಮುಖ್ಯವಾಗಿದೆ. ನೀವು ಕಡಿಮೆ ಪ್ರೀಮಿಯಂ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಯೋಚಿಸಿದ್ದರೆ, ನೀವು ಮಹತ್ವದ ಕವರೇಜ್‌ ಅನ್ನು ಕಳೆದುಕೊಳ್ಳುವ ಹೆಚ್ಚಿನ ಅವಕಾಶಗಳಿವೆ. ಭವಿಷ್ಯದಲ್ಲಿ, ಕೆಲವು ಕವರೇಜ್ ಮುಖ್ಯವೆಂದು ನೀವು ಭಾವಿಸಬಹುದು, ಆದರೆ ನಿಮ್ಮ ಪಾಲಿಸಿಯು ಅದನ್ನು ಕವರ್ ಮಾಡಿರುವುದಿಲ್ಲ. ಹಣದ ಉಳಿತಾಯವನ್ನು ಮಾತ್ರ ಮಾಡದೆ, ಹಣದ ಮೌಲ್ಯ ಕಾಪಾಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಾಗಿ ಹುಡುಕಾಡಿ.

ನಾವು ಅನೇಕರು ಸೆಕ್ಷನ್ 80 D ಅಡಿಯಲ್ಲಿ ತೆರಿಗೆ ಉಳಿತಾಯ ಮಾಡಲು ಹೆಲ್ತ್ ಇನ್ಶೂರೆನ್ಸ್ ಖರೀದಿಸುತ್ತೇವೆ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮಗೆ ₹ 1 ಲಕ್ಷದವರೆಗೆ ತೆರಿಗೆ ಉಳಿತಾಯ ಮಾಡಲು ಸಹಾಯ ಮಾಡುತ್ತದೆ****. ಆದಾಗ್ಯೂ, ತೆರಿಗೆಗಳನ್ನು ಉಳಿಸುವುದಕ್ಕಿಂತಲೂ ಹೆಚ್ಚಿನದ್ದಿದೆ. ಮಹತ್ವದ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವ, ದೀರ್ಘಾವಧಿಯಲ್ಲಿ ಹಣಕಾಸನ್ನು ಉಳಿಸಲು ಸಹಾಯ ಮಾಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ಪಡೆಯಿರಿ. ಸಂಪೂರ್ಣ ಹಣಕಾಸು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ನಿಮ್ಮ ಪೋಷಕರು, ಸಂಗಾತಿ ಮತ್ತು ಮಕ್ಕಳಿಗಾಗಿ ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ಪಡೆಯಬೇಕು.

ಒಂದು ವೇಳೆ ನೀವು ಸಣ್ಣ ವಯೋಮಾನದವರಾಗಿದ್ದು, ಸದೃಢರಾಗಿ, ಆರೋಗ್ಯವಂತರಾಗಿದ್ದರೆ, ಈಗಲೇ ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ ಕಡಿಮೆ ಪ್ರೀಮಿಯಂಗಳನ್ನು ಪಡೆದುಕೊಳ್ಳಬಹುದು. ಎರಡನೆಯದಾಗಿ, ನೀವು ಹೆಲ್ತ್ ಇನ್ಶೂರೆನ್ಸ್ ಕವರ್ ಖರೀದಿಸಿದ ನಂತರ ಕ್ಲೇಮ್‌ಗಳನ್ನು ಮಾಡದ ಪಕ್ಷದಲ್ಲಿ, ನೀವು ಕ್ಯುಮುಲೇಟಿವ್ ಅಂದರೆ ಒಗ್ಗೂಡಿಕೆಯ ಬೋನಸ್ ಪಡೆಯುತ್ತೀರಿ. ಆ ಮೂಲಕ, ನೀವು ಫಿಟ್ ಇರುವುದರಿಂದ, ಹೆಚ್ಚುವರಿ ಪ್ರೀಮಿಯಂ ಇಲ್ಲದೆಯೇ, ವಿಮಾ ಮೊತ್ತದಲ್ಲಿ ಹೆಚ್ಚಳವನ್ನು ಪಡೆದುಕೊಳ್ಳಬಹುದು. ಮೂರನೆಯದಾಗಿ, ಪ್ರತಿ ಹೆಲ್ತ್ ಪಾಲಿಸಿಯು ಕಾಯುವಿಕೆ ಅವಧಿಯೊಂದಿಗೆ ಬರುತ್ತದೆ. ಆದ್ದರಿಂದ, ನೀವು ಸಣ್ಣ ಪ್ರಾಯದಲ್ಲಿಯೇ ಹೆಲ್ತ್ ಇನ್ಶೂರೆನ್ಸ್ ಖರೀದಿಸಿದರೆ, ಆರಂಭಿಕ ವರ್ಷಗಳಲ್ಲೇ ನಿಮ್ಮ ಕಾಯುವಿಕೆ ಅವಧಿಯು ಮುಗಿದು ಹೋಗುತ್ತದೆ. ನಂತರ, ನಿಮಗೆ ಯಾವುದೇ ಕಾಯಿಲೆ ಬಂದರೂ, ನಿಮ್ಮ ಪಾಲಿಸಿಯು ನಿಮ್ಮನ್ನು ತಡೆರಹಿತವಾಗಿ ಕವರ್ ಮಾಡುತ್ತದೆ. ಕೊನೆಯದಾಗಿ, ಪ್ಯಾಂಡೆಮಿಕ್ ಪರಿಸ್ಥಿತಿ ಎದುರಾಗಿರುವುದರಿಂದ, ಯಾವುದೇ ಸಮಯದಲ್ಲಿ ಬೇಕಾದರೂ, ಯಾವುದೇ ವ್ಯಕ್ತಿಯು ಆಕಸ್ಮಿಕ ಹಾನಿಯಿಂದಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಬಹುದು ಎಂಬ ಸಾಧ್ಯತೆಯೂ ಇದೆ; ಆದ್ದರಿಂದ, ತಯಾರಾಗಿರುವುದು ಮುಖ್ಯವಾಗಿದೆ.

ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆ ಮಾಡುವುದು ಹೇಗೆ

ನೀವು ಪ್ರತಿ ಬಾರಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹುಡುಕುವಾಗಲೂ, ಯಾವುದು ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ ಎಂದು ಚಿಂತಿಸುತ್ತೀರಾ? ಆನ್ಲೈನ್‌ನಲ್ಲಿ ಅತ್ಯುತ್ತಮ ಹೆಲ್ತ್ ಪ್ಲಾನ್ ಆಯ್ಕೆ ಮಾಡುವುದು ಹೇಗೆ? ಅದು ಯಾವ ಕವರೇಜ್ ಹೊಂದಿರಬೇಕು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಇನ್ನಷ್ಟು ಓದಿ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಲು ಇರುವ ಹ್ಯಾಕ್‌ಗಳನ್ನು ಡೀಕೋಡ್ ಮಾಡೋಣ.

1

ಸಾಕಷ್ಟು ವಿಮಾ ಮೊತ್ತವನ್ನು ಖಚಿತಪಡಿಸಿಕೊಳ್ಳಿ

ನೀವು ನಿಮಗಾಗಿ ಇನ್ಶೂರೆನ್ಸ್ ಹುಡುಕುತ್ತಿದ್ದರೆ 7 ರಿಂದ 10 ಲಕ್ಷಗಳ ನಡುವಿನ ವಿಮಾ ಮೊತ್ತದ ಹೆಲ್ತ್ ಇನ್ಶೂರೆನ್ಸ್ ಪ್ಲಾನನ್ನು ಪರಿಗಣಿಸಿ. ಕುಟುಂಬಕ್ಕೆ ಒಂದು ಪಾಲಿಸಿಯ ವಿಮಾ ಮೊತ್ತವು ಫ್ಲೋಟರ್ ಆಧಾರದ ಮೇಲೆ 8 ರಿಂದ 15 ಲಕ್ಷಗಳ ನಡುವೆ ಇರಬಹುದು. ನೆನಪಿಡಿ, ಒಂದು ವರ್ಷದಲ್ಲಿ ಸಂಭವಿಸಬಹುದಾದ ಒಂದಕ್ಕಿಂತ ಹೆಚ್ಚು ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡಲು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಸಾಕಾಗುತ್ತದೆ.

2

ಸರಿಯಾದ ಪ್ರೀಮಿಯಂ ಆಯ್ಕೆಮಾಡಿ

ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ತುಂಬಾ ಕೈಗೆಟಕುವಂತಿವೆ. ಆದ್ದರಿಂದ ನೀವು ಪ್ಲಾನ್ ಆಯ್ಕೆ ಮಾಡಿದಾಗ, ಕಡಿಮೆ ಮೊತ್ತದ ವಿಮಾ ಮೊತ್ತಕ್ಕೆ ಕಡಿಮೆ ಪ್ರೀಮಿಯಂಗಳನ್ನು ಪಾವತಿಸುವ ಮತ್ತು ನಂತರ ನಿಮ್ಮ ಆಸ್ಪತ್ರೆಯ ಬಿಲ್‌ಗಳನ್ನು ಸಹ-ಪಾವತಿ ಮಾಡುವಂತಹ ಆತುರದ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ನಿಮ್ಮ ವೈದ್ಯಕೀಯ ಬಿಲ್‌ಗಳಿಗೆ ನೀವು ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗಬಹುದು. ಬದಲಾಗಿ, ನಿಮ್ಮ ಜೇಬಿಗೆ ಸುಲಭವಾದ ಸಹ-ಪಾವತಿ ಷರತ್ತುಗಳನ್ನು ಪರಿಶೀಲಿಸಿ.

3

ಆಸ್ಪತ್ರೆಗಳ ನೆಟ್ವರ್ಕ್ ಪರಿಶೀಲಿಸಿ

ಇನ್ಶೂರೆನ್ಸ್ ಕಂಪನಿಯು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನಿನಲ್ಲಿ ಸೇರಿಸಲಾದ ನೆಟ್ವರ್ಕ್ ಆಸ್ಪತ್ರೆಗಳ ವಿಶಾಲ ಪಟ್ಟಿಯನ್ನು ಹೊಂದಿದೆಯೇ ಎಂದು ಯಾವಾಗಲೂ ಪರಿಶೀಲಿಸಿ. ಅಲ್ಲದೆ, ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯವನ್ನು ಇನ್ಶೂರೆನ್ಸ್ ಕಂಪನಿಯಲ್ಲಿ ಪಟ್ಟಿ ಮಾಡಲಾಗಿದೆಯೇ ಎಂದು ಪರಿಶೀಲಿಸಿ, ಆದ್ದರಿಂದ ಇದು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಾವು 12,000+ ನಗದುರಹಿತ ಆರೋಗ್ಯ ರಕ್ಷಣಾ ಕೇಂದ್ರಗಳ ದೊಡ್ಡ ನೆಟ್ವರ್ಕ್ ಹೊಂದಿದ್ದೇವೆ.

4

ಉಪ-ಮಿತಿ ಇಲ್ಲದಿರುವ ಸಹಾಯ

ಸಾಮಾನ್ಯವಾಗಿ ನಿಮ್ಮ ವೈದ್ಯಕೀಯ ವೆಚ್ಚಗಳು, ನಿಮ್ಮ ರೂಮ್ ಬಗೆ ಮತ್ತು ಕಾಯಿಲೆಯನ್ನು ಅವಲಂಬಿಸಿರುತ್ತವೆ. ಆಸ್ಪತ್ರೆ ರೂಮ್ ಬಾಡಿಗೆಯ ಮೇಲೆ ಉಪಮಿತಿಗಳನ್ನು ಹೊಂದಿರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಇದರಿಂದಾಗಿ, ನೀವು ನಿಮಗೆ ಆರಾಮದಾಯಕ ಎನ್ನಿಸುವ ಆಸ್ಪತ್ರೆ ಕೊಠಡಿಯನ್ನು ಆಯ್ಕೆ ಮಾಡಬಹುದು. ನಮ್ಮ ಹೆಚ್ಚಿನ ಪಾಲಿಸಿಗಳು ಕಾಯಿಲೆ ಉಪಮಿತಿ ಸೂಚಿಸುವುದಿಲ್ಲ; ಇದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ಪ್ರಮುಖ ಅಂಶವಾಗಿದೆ.

5

ಕಾಯುವಿಕೆ ಅವಧಿಗಳನ್ನು ಪರಿಶೀಲಿಸಿ

ನೀವು ಕಾಯುವಿಕೆ ಅವಧಿಯನ್ನು ಪೂರ್ಣಗೊಳಿಸದೇ ಇರುವಾಗ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಚಾಲತಿಗೆ ಬರುವುದಿಲ್ಲ. ಆನ್ಲೈನಿನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು ಮುಂಚಿತ-ಅಸ್ತಿತ್ವದಲ್ಲಿರುವ ಕಾಯಿಲೆಗಳು ಮತ್ತು ಮೆಟರ್ನಿಟಿ ಕವರ್ ಪ್ರಯೋಜನಗಳಿಗಾಗಿ ಕಡಿಮೆ ಕಾಯುವ ಅವಧಿಗಳೊಂದಿಗೆ ಯಾವಾಗಲೂ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಪರಿಶೀಲಿಸಿ.

6

ವಿಶ್ವಾಸಾರ್ಹ ಬ್ರ್ಯಾಂಡ್ ಆಯ್ಕೆಮಾಡಿ

ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಯಾವಾಗಲೂ ಆಯ್ಕೆ ಮಾಡಿ. ನೀವು ಭವಿಷ್ಯದಲ್ಲಿ ಮಾಡಬಹುದಾದ ಕ್ಲೇಮ್‌ಗಳನ್ನು ಬ್ರ್ಯಾಂಡ್ ಅನುಮೋದಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು,‌ ನೀವು ಕಸ್ಟಮರ್‌ ಬೇಸ್‌ ಮತ್ತು ಕ್ಲೇಮ್‌ ಪಾವತಿ ಸಾಮರ್ಥ್ಯವನ್ನು ಗಮನಿಸಬೇಕು. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ಪಾಲಿಸಿದಾರರು ಮತ್ತು ವಿಮಾದಾತರ ಬದ್ಧತೆಯಾಗಿದೆ, ಆದ್ದರಿಂದ ನಿರ್ಧಾರವನ್ನು ಶಾಂತವಾಗಿ ತೆಗೆದುಕೊಳ್ಳಿ.

protect against coronavirus hospitalization expenses
About 28% Indian Households face catastrophic health expenditure (CHE). Protect Your Family with Health Insurance from such financial distress

ಇಂದಿನ ದಿನಮಾನದಲ್ಲಿ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಹೊಂದಿರುವುದು ಏಕೆ ಮುಖ್ಯವಾಗಿದೆ

ತಂತ್ರಜ್ಞಾನ, ಚಿಕಿತ್ಸೆ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ಲಭ್ಯತೆಯ ಅಭಿವೃದ್ಧಿಯಿಂದ ಆರೋಗ್ಯ ರಕ್ಷಣೆಯ ವೆಚ್ಚ ತೀರಾ ಹೆಚ್ಚಾಗಿದೆ.
ಈ ಎಲ್ಲಾ ಹೆಚ್ಚಳಗಳಿಂದ ನಿಮ್ಮ ಉಳಿತಾಯದ ಮೇಲೆ ಹೊರೆ ಉಂಟಾಗಿ, ಅನೇಕರಿಗೆ ಆರೋಗ್ಯ ರಕ್ಷಣೆ ಕೈಗೆಟುಕದಂತಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಸಮಯದಲ್ಲೇ ಉಪಯೋಗಕ್ಕೆ ಬರುತ್ತವೆ. ಏಕೆಂದರೆ, ಅವುಗಳು ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ಶುಲ್ಕಗಳನ್ನು ನೋಡಿಕೊಳ್ಳುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಸಿಗುತ್ತದೆ.

ತಂತ್ರಜ್ಞಾನ, ಚಿಕಿತ್ಸೆ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ಲಭ್ಯತೆಯ ಅಭಿವೃದ್ಧಿಯಿಂದ ಆರೋಗ್ಯ ರಕ್ಷಣೆಯ ವೆಚ್ಚ ತೀರಾ ಹೆಚ್ಚಾಗಿದೆ. ಈ ಎಲ್ಲಾ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುವುದರಿಂದ, ಅನೇಕರಿಗೆ ಹೆಲ್ತ್‌ಕೇರ್ ಕೈಗೆಟುಕದಂತೆ ಆಗಿದೆ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಸಮಯದಲ್ಲೇ ಉಪಯೋಗಕ್ಕೆ ಬರುತ್ತವೆ. ಏಕೆಂದರೆ, ಅವುಗಳು ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ಶುಲ್ಕಗಳನ್ನು ನೋಡಿಕೊಳ್ಳುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಸಿಗುತ್ತದೆ. ಈಗಲೇ ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆದುಕೊಳ್ಳಿ.

my: health Suraksha silver health insurance plan

ನಾವು ನಿಮಗೆ ECB ಮತ್ತು ರಿಬೌಂಡ್‌ನೊಂದಿಗೆ ಮೈ:ಹೆಲ್ತ್ ಸುರಕ್ಷಾ ಇನ್ಶೂರೆನ್ಸ್ ಸಿಲ್ವರ್ ಅನ್ನು ಶಿಫಾರಸು ಮಾಡುತ್ತೇವೆ

ಈ ಕೈಗೆಟಕುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮಗೆ ದೊಡ್ಡ ಕವರೇಜ್‌ ನೀಡುತ್ತದೆ. ಇದು ನಿಮಗೆ ತೆರಿಗೆಯನ್ನು ಉಳಿಸಲು ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ, ನೀವು ಈ ಪ್ಲಾನಿಗೆ ನಿಮ್ಮ ಸಂಗಾತಿ ಮತ್ತು ಮಗುವನ್ನು ಸೇರಿಸಬಹುದು.

ರಿಬೌಂಡ್ ಪ್ರಯೋಜನ

ಅದೇ ಪಾಲಿಸಿ ಅವಧಿಯಲ್ಲಿ ಸಂಭವಿಸಬಹುದಾದ ಭವಿಷ್ಯದ ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುವ ಮೂಲಕ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಮುಗಿದ ವಿಮಾ ಮೊತ್ತವನ್ನು ಮರಳಿ ತರುವ ಮ್ಯಾಜಿಕಲ್ ಟೂಲ್ ಆಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ, ನೀವು ಒಂದೇ ವಿಮಾ ಮೊತ್ತಕ್ಕೆ ಮಾತ್ರ ಪಾವತಿಸಿದ್ದರೂ, ಯಾವಾಗಲೂ ಡಬಲ್ ರಕ್ಷಣೆ ಹೊಂದಿರುತ್ತೀರಿ.

ಹೆಚ್ಚಾದ ಒಗ್ಗೂಡಿತ ಬೋನಸ್

ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ವಿಮಾ ಮೊತ್ತವನ್ನು ಬೋನಸ್ ಆಗಿ 10% ಹೆಚ್ಚಿಸಲಾಗುತ್ತದೆ ಅಥವಾ ಗರಿಷ್ಠ 100% ವರೆಗೆ ರಿವಾರ್ಡ್ ನೀಡಲಾಗುತ್ತದೆ.

ತಮ್ಮ ಮೊದಲ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಿದ್ಧರಾಗಿರುವ ಎಲ್ಲರಿಗೂ ನಾವು ಹೆಚ್ಚಾಗಿ ಶಿಫಾರಸು ಮಾಡುವ ಪ್ಲಾನ್ ಇದಾಗಿದೆ.

ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ನೀವು ಏನು ಪಡೆಯುತ್ತೀರಿ?

  • ಯಾವುದೇ ಆಸ್ಪತ್ರೆ ರೂಮ್ ಬಾಡಿಗೆ ನಿರ್ಬಂಧವಿಲ್ಲ
  • Cashless claims approved within 38*~ minutes

ನಿಮ್ಮ ಉದ್ಯೋಗದಾತರು ನಿಮಗೆ ಕವರ್ ಮಾಡಿದ್ದರೂ, ನಿಮ್ಮ ಹೆಚ್ಚುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ಅದನ್ನು ಕಸ್ಟಮೈಜ್ ಮಾಡುವ ಸ್ವಾತಂತ್ರ್ಯ ನಿಮ್ಮ ಕೈಯಲ್ಲಿರುವುದಿಲ್ಲ; ಅದಲ್ಲದೇ, ನೀವು ನಿಮ್ಮ ಕೆಲಸವನ್ನು ಬಿಟ್ಟರೆ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕವರೇಜ್‌ ಅಲ್ಲಿಗೆ ಮುಗಿಯುತ್ತದೆ. ಆದ್ದರಿಂದ, ನೀವು ನಿಮಗಾಗಿ ಒಂದು ಹೆಲ್ತ್‌ ಕವರ್‌ ಪಡೆಯುವುದು ಸುಲಭವಾಗಿರುವಾಗ, ಉದ್ಯೋಗದಾತರೇ ನಿಮಗೆ ನೀಡಿರುವ ಹೆಲ್ತ್‌ ಕವರ್‌ ಅನ್ನು ಏಕೆ ಅವಲಂಬಿಸಿ ರಿಸ್ಕ್‌ ತೆಗೆದುಕೊಳ್ಳಬೇಕು.

my: health Suraksha silver health insurance plan

ನಾವು ನಿಮಗೆ ಮೈ:ಹೆಲ್ತ್ ಸುರಕ್ಷಾ ಸಿಲ್ವರ್ ಸ್ಮಾರ್ಟ್ ಶಿಫಾರಸು ಮಾಡುತ್ತೇವೆ

ಆದಾಗ್ಯೂ, ನಿಮ್ಮ ಉದ್ಯೋಗದಾತರ ಹೆಲ್ತ್‌ ಕವರ್ ಅಥವಾ ಚಾಲ್ತಿಯಲ್ಲಿರುವ ಹೆಲ್ತ್‌ ಕವರ್ ಉತ್ತಮವಾಗಿ ಹೊಂದುತ್ತದೆ ಎಂದು ನೀವು ಈಗಲೂ ಭಾವಿಸಿದ್ದರೇ, ಅದನ್ನು ಅತೀ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್‌ ನೀಡುವಂತೆ ಟಾಪ್‌-ಅಪ್‌ ಮಾಡುವುದರಲ್ಲಿ ಯಾವುದೇ ಹಾನಿ ಇಲ್ಲ.

medisure super Top-up health insurance plan

ನಾವು ನಿಮಗೆ ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್: ಶಿಫಾರಸು ಮಾಡುತ್ತೇವೆ

ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮಗೆ ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರ್ ನೀಡುತ್ತದೆ. ನಿಮ್ಮ ಚಾಲ್ತಿಯಲ್ಲಿರುವ ಹೆಲ್ತ್ ಇನ್ಶೂರೆನ್ಸ್‌ಗೆ ಇದು ಟಾಪ್-ಅಪ್ ಆಗಿ ಕಾರ್ಯನಿರ್ವಹಿಸುತ್ತದೆ.

ಮೆಡಿಶ್ಯೂರ್ ಸೂಪರ್ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

  • ಹಾಸ್ಪಿಟಲೈಸೇಶನ್‌ ಕವರ್‌ಗಳು
  • ದಿನದ ಆರೈಕೆಯ ಕಾರ್ಯವಿಧಾನಗಳು
  • ಕಡಿಮೆ ಪ್ರೀಮಿಯಂನಲ್ಲಿ ಹೆಚ್ಚಿನ ಕವರ್

ನೀವು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹುಡುಕುತ್ತಿದ್ದರೆ, ನಿಮ್ಮ ಕುಟುಂಬದ ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯತೆಗಳನ್ನು ಸುರಕ್ಷಿತವಾಗಿಸುವ ಗುರಿಯನ್ನು ಹೊಂದಿರುವ ಅತ್ಯುತ್ತಮ ಮಾರಾಟದ ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಿರಿ.

my: health suraksha gold insurance plan

ಆಪ್ಟಿಮಾ ರಿಸ್ಟೋರ್ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ನಾವು ನಿಮಗೆ ಶಿಫಾರಸು ಮಾಡುತ್ತೇವೆ

ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ವಿಮಾ ಮೊತ್ತದ ಮರುಸ್ಥಾಪನಾ ಪ್ರಯೋಜನವನ್ನು ನೀಡಿ ನಿಮ್ಮ ಕುಟುಂಬದ ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯತೆಗಳನ್ನು ನೋಡಿಕೊಳ್ಳುತ್ತದೆ. ಇದರಿಂದಾಗಿ, ನೀವು ಯಾವಾಗಲೂ ಹೆಲ್ತ್ ಕವರ್ ಹೊಂದಿರುತ್ತೀರಿ. ನೀವು ಕ್ಲೈಮ್‌ಗಳನ್ನು ಮಾಡದಿದ್ದಾಗ, ವಿಮಾ ಮೊತ್ತದ ಹೆಚ್ಚಳವನ್ನು ಪಡೆಯಲು 2x ಮಲ್ಟಿಪ್ಲೈಯರ್‌ ಪ್ರಯೋಜನವನ್ನೂ ನೀಡುತ್ತದ.

ಆಪ್ಟಿಮಾ ರಿಸ್ಟೋರ್ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಬೇಕು?

  • 12,000+ ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳು
  • ಆಸ್ಪತ್ರೆ ದಾಖಲಾತಿಯ ಮುಂಚಿನ 60 ದಿನಗಳಿಗೆ ಮತ್ತು ಆಸ್ಪತ್ರೆ ದಾಖಲಾತಿಯ ನಂತರದ 180 ದಿನಗಳವರೆಗೆ ಕವರ್ ಮಾಡಲಾಗುತ್ತದೆ
  • 1 ಲಕ್ಷದವರೆಗೆ ತೆರಿಗೆ ಉಳಿತಾಯ****

ನಿಮ್ಮ ಪೋಷಕರ ಹೆಚ್ಚುತ್ತಿರುವ ವಯಸ್ಸಿನ ಬಗ್ಗೆ ಮತ್ತು ಅವರಿಗೆ ಕವರೇಜ್‌ ನೀಡುವುದರ ಬಗ್ಗೆ ನೀವು ಸಾಕಷ್ಟು ಕಾಳಜಿವಹಿಸಿದ್ದೀರಿ ಎಂದು ನಾವು ತಿಳಿದುಕೊಂಡಿದ್ದೇವೆ. ಆಸ್ಪತ್ರೆ ಬಿಲ್‌ಗಳನ್ನು ಪಾವತಿಸಲು ಅವರು ತಮ್ಮ ಜೀವಮಾನದ ಉಳಿತಾಯವನ್ನು ಖರ್ಚು ಮಾಡಿಕೊಳ್ಳದಂತೆ ಮಾಡಲು, ಅವರಿಗೆ ಹೆಲ್ತ್‌ ಇನ್ಶೂರೆನ್ಸ್‌ ಪ್ಲಾನ್‌ ಅನ್ನು ಬಳುವಳಿಯಾಗಿ ನೀಡುವುದು ಮುಖ್ಯವಾಗಿದೆ.

my: health suraksha silver insurance plan

ನಾವು ನಿಮಗೆ ಮೈ:ಹೆಲ್ತ್ ಸುರಕ್ಷಾ ಸಿಲ್ವರ್ ಶಿಫಾರಸು ಮಾಡುತ್ತೇವೆ

ಹಿರಿಯ ನಾಗರಿಕರಾಗಿರುವ ಅಥವಾ ಹಿರಿಯ ನಾಗರಿಕರಲ್ಲದ ನಿಮ್ಮ ಪೋಷಕರಿಗೆ. ಇದು ಸರಳವಾದ ಗೊಂದಲವಿಲ್ಲದ ಪಾಕೆಟ್ ಫ್ರೆಂಡ್ಲಿ ಪ್ರೀಮಿಯಂನಲ್ಲಿ ಎಲ್ಲಾ ಪ್ರಮುಖ ಕವರೇಜ್‌ ನೀಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ.

ಪೋಷಕರಿಗಾಗಿನ ಮೈ: ಹೆಲ್ತ್ ಸುರಕ್ಷಾ ಸಿಲ್ವರ್ ಹೆಲ್ತ್ ಇನ್ಶೂರೆನ್ಸ್ ಅನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

  • ರೂಮ್ ಬಾಡಿಗೆ ನಿರ್ಬಂಧಗಳಿಲ್ಲ
  • ಅನುಕೂಲಕ್ಕಾಗಿ ಹೋಮ್ ಹೆಲ್ತ್ ಕೇರ್
  • ಆಯುರ್ವೇದ, ಹೋಮಿಯೋಪತಿ, ಯುನಾನಿ ಮತ್ತು ಸಿದ್ಧದಂತಹ ಪರ್ಯಾಯ ಚಿಕಿತ್ಸೆಗಳನ್ನು ಕವರ್‌ ಮಾಡಲಾಗುತ್ತದೆ
  • ಸುಮಾರು 12,000+ ನಗದುರಹಿತ ಆಸ್ಪತ್ರೆಗಳು
  • ಆಸ್ಪತ್ರೆಗೆ ದಾಖಲಾತಿ, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.

ಅಂತಹ ಆತ್ಮವಿಶ್ವಾಸದ, ಸ್ವಂತ ಕಾಲಿನ ಮೇಲೆ ನಿಂತಿರುವ ಮಹಿಳೆಯರಿಗೆ,

my: women health Suraksha silver health insurance plan recommendation

ನಾವು ಮೈ:ಹೆಲ್ತ್ ವಿಮೆನ್ ಸುರಕ್ಷಾದ ವಿನ್ಯಾಸ ಮಾಡಿದ್ದೇವೆ

ಅದರ ಅಡಿಯಲ್ಲಿ ಮಹಿಳೆಯರಿಗೆ ಸಂಬಂಧಿಸಿದ 41 ಗಂಭೀರ ಅನಾರೋಗ್ಯಗಳು, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಕ್ಯಾನ್ಸರ್ ಕವರ್ ಮಾಡುತ್ತೇವೆ.

ಮೈ:ಹೆಲ್ತ್ ವಿಮೆನ್ ಸುರಕ್ಷಾ ಏಕೆ ಆಯ್ಕೆ ಮಾಡಿಕೊಳ್ಳಬೇಕು?

  • ದೊಡ್ಡ ಮೊತ್ತದ ಪ್ರಯೋಜನವನ್ನು ಒದಗಿಸುತ್ತದೆ
  • ಸಣ್ಣ ಅನಾರೋಗ್ಯದ ಕ್ಲೈಮ್ ಪಾವತಿಸಿದ ನಂತರವೂ ಮುಂದುವರಿಯಿರಿ.
  • ಬಹುತೇಕ ಎಲ್ಲಾ ಮಹಿಳೆಯರ ಸಂಬಂಧಿತ ಕಾಯಿಲೆಗಳನ್ನೂ ಒಳಗೊಂಡಿದೆ.
  • ಸುಲಭವಾಗಿ ಕೈಗೆಟುಕುವ ಪ್ರೀಮಿಯಂ.
  • ಕೆಲಸದ ನಷ್ಟ, ಗರ್ಭಧಾರಣೆ ಮತ್ತು ನವಜಾತ ಮಗುವಿನ ಸಮಸ್ಯೆಗಳು, ಹಾಗೂ ಡಯಾಗ್ನಸಿಸ್ ನಂತರದ ಬೆಂಬಲದ ಅಂಶಗಳ ಆಯ್ದ ಕವರ್‌‌ಗಳು.

ದೀರ್ಘಾವಧಿಯ ಚಿಕಿತ್ಸೆ ವಿಧಾನದಿಂದ ಅಥವಾ ಹಣಕಾಸಿನ ಅವಶ್ಯಕತೆಗಳಿಂದಾಗಿ ನಿಮ್ಮ ಜೀವನವನ್ನು ನಿಲ್ಲಿಸಲು ಒಂದೇ ಗಂಭೀರ ಅನಾರೋಗ್ಯವು ಸಾಕಾಗುತ್ತದೆ. ನಾವು ನಿಮಗೆ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಸಹಾಯ ಮಾಡುತ್ತೇವೆ. ಇದರಿಂದಾಗಿ ನೀವು ಸುಧಾರಿಸಿಕೊಳ್ಳುವುದರ ಮೇಲೆ ಮಾತ್ರ ಗಮನಕೊಡಬಹುದು.

critical health insurance plan

ಗಂಭೀರ ಅನಾರೋಗ್ಯದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನಾವು ನಿಮಗೆ ಶಿಫಾರಸು ಮಾಡುತ್ತೇವೆ

ಇದು 15 ಪ್ರಮುಖ ಗಂಭೀರ ಅನಾರೋಗ್ಯಗಳ ಜೊತೆಗೆ ಸ್ಟ್ರೋಕ್, ಕ್ಯಾನ್ಸರ್, ಕಿಡ್ನಿ-ಲಿವರ್ ವೈಫಲ್ಯ ಮತ್ತು ಇನ್ನೂ ಅನೇಕ ಸಮಸ್ಯೆಗಳಿಂದ ಸುರಕ್ಷತೆ ಒದಗಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

  • ಒಂದೇ ವಹಿವಾಟಿನಲ್ಲಿ ದೊಡ್ಡ ಮೊತ್ತದ ಪಾವತಿ
  • ಕೆಲಸದ ನಷ್ಟದ ಸಂದರ್ಭದಲ್ಲಿ ಬೆಂಬಲ ನೀಡಲು ಸಹಾಯ ಮಾಡುತ್ತದೆ
  • ನೀವು ನಿಮ್ಮ ಸಾಲಗಳನ್ನೂ ಪಾವತಿಸಬಹುದು ಮತ್ತು ಹಣಕಾಸಿನ ಜವಾಬ್ದಾರಿಗಳನ್ನೂ ಪೂರೈಸಬಹುದು.
  • ತೆರಿಗೆಯ ಪ್ರಯೋಜನಗಳು.

ನಾನು ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಅರ್ಹನಾಗಿದ್ದೇನೆಯೇ

ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವಾಗ, ಅರ್ಹತೆ, ಅಗತ್ಯವಿರುವ ವೈದ್ಯಕೀಯ ಪರೀಕ್ಷೆಗಳು ಮತ್ತು ವಯಸ್ಸಿನ ಮಾನದಂಡಗಳನ್ನು ಒಳಗೊಂಡಿರಬಹುದಾದ ಸಾಮಾನ್ಯ ಪ್ರಶ್ನೆಗಳು ಎದುರಾಗಬಹುದು. ಆದಾಗ್ಯೂ, ಈ ದಿನಗಳಲ್ಲಿ ಆನ್ಲೈನಿನಲ್ಲಿ ಖರೀದಿ ಮಾಡುವ ಮೊದಲು ಭಾರತದಲ್ಲಿ ನಿರ್ದಿಷ್ಟ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ನಿಮ್ಮ ಅರ್ಹತೆಯನ್ನು ಪರಿಶೀಲಿಸುವುದು ಸುಲಭ.
ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ, ನೀವು ಹೊಂದಿರಬಹುದಾದ ಯಾವುದೇ ಮುಂಚಿತ ಆರೋಗ್ಯ ಪರಿಸ್ಥಿತಿಗಳನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ. ಇದು ಫ್ಲೂ ಅಥವಾ ತಲೆನೋವುಗಳಂತಹ ಸಾಮಾನ್ಯ ಕಾಯಿಲೆಗಳನ್ನು ಮಾತ್ರವಲ್ಲದೆ ಗಂಭೀರ ಕಾಯಿಲೆಗಳು, ಹುಟ್ಟಿನ ದೋಷಗಳು, ಶಸ್ತ್ರಚಿಕಿತ್ಸೆಗಳು ಅಥವಾ ಕ್ಯಾನ್ಸರ್‌ಗಳನ್ನು ಒಳಗೊಂಡಿದೆ. ಬಹಿರಂಗಪಡಿಸುವಲ್ಲಿ ವಿಫಲವಾದರೆ ಕೆಲವು ಸ್ಥಿತಿಗಳನ್ನು ಶಾಶ್ವತವಾಗಿ ಕವರೇಜ್‌ನಿಂದ ಹೊರಗಿಡಲಾಗಬಹುದು ಅಥವಾ ಕಾಯುವ ಅವಧಿ ಅಥವಾ ಹೆಚ್ಚುವರಿ ಪ್ರೀಮಿಯಂನೊಂದಿಗೆ ಕವರ್ ಮಾಡಲಾಗುತ್ತದೆ. ಪೂರ್ತಿ ಕವರೇಜ್ ಖಚಿತಪಡಿಸಿಕೊಳ್ಳಲು ಯಾವುದೇ ಮುಂಚಿತ-ಅಸ್ತಿತ್ವದಲ್ಲಿರುವ ಸ್ಥಿತಿಗಳ ಬಗ್ಗೆ ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸುವುದು ಮುಖ್ಯವಾಗಿದೆ.

ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಲು ನಿಮ್ಮ ಅರ್ಹತೆಯನ್ನು ನಿರ್ಧರಿಸುವ ಪ್ರಮುಖ ಅಂಶಗಳು

1

ಹಿಂದಿನ ವೈದ್ಯಕೀಯ ಪರಿಸ್ಥಿತಿಗಳು / ಮುಂಚಿನಿಂದ ಇದ್ದ ಅನಾರೋಗ್ಯಗಳು

ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಎಲ್ಲಾ ಪಾಲಿಸಿ ಪೂರ್ವ ಅನಾರೋಗ್ಯಗಳನ್ನು ಘೋಷಿಸಲು ನೀವು ಪ್ರಾಮಾಣಿಕರಾಗಿರಬೇಕು. ಈ ಅನಾರೋಗ್ಯಗಳು ನಿಮ್ಮ ಸಾಮಾನ್ಯ ಜ್ವರ, ಫ್ಲೂ ಅಥವಾ ತಲೆನೋವುಗಳು ಆಗಿರಬೇಕಾಗಿಲ್ಲ. ಆದಾಗ್ಯೂ, ಹಿಂದೆ ನೀವು ಯಾವುದೇ ಕಾಯಿಲೆ, ಹುಟ್ಟಿನ ದೋಷಗಳ ಡಯಾಗ್ನೈಸ್ ಆಗಿದ್ದರೆ, ಶಸ್ತ್ರಚಿಕಿತ್ಸೆ ಅಥವಾ ಯಾವುದೇ ಗಂಭೀರತೆಯ ಕ್ಯಾನ್ಸರ್‌ನಿಂದ ಬಾಧಿತರಾಗಿದ್ದರೆ, ನಿಮ್ಮ ಮೆಡಿಕಲ್ ಇನ್ಶೂರೆನ್ಸ್ ಕಂಪನಿಗೆ ತಿಳಿಸುವುದು ಮುಖ್ಯವಾಗಿದೆ. ಏಕೆಂದರೆ, ಶಾಶ್ವತ ಹೊರಗಿಡುವಿಕೆಯ ಅಡಿಯಲ್ಲಿ ಅನೇಕ ಕಾಯಿಲೆಗಳನ್ನು ಪಟ್ಟಿ ಮಾಡಲಾಗಿದೆ. ಕೆಲವನ್ನು ಕಾಯುವಿಕೆ ಅವಧಿಯೊಂದಿಗೆ ಕವರ್ ಮಾಡಲಾಗುತ್ತದೆ ಮತ್ತು ಇನ್ನೂ ಕೆಲವನ್ನು ಕಾಯುವಿಕೆ ಅವಧಿಯ ಜೊತೆಗೆ ಹೆಚ್ಚುವರಿ ಪ್ರೀಮಿಯಂ ವಿಧಿಸುವ ಮೂಲಕ ಕವರ್ ಮಾಡಲಾಗುತ್ತದೆ. ಇದನ್ನೂ ಓದಿ : ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ನೀವು ಮುಂಚಿತ-ಅಸ್ತಿತ್ವದಲ್ಲಿರುವ ಅನಾರೋಗ್ಯಗಳನ್ನು ಬಹಿರಂಗಪಡಿಸಬೇಕೇ?

2

ವಯಸ್ಸು

ನೀವು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ನೀವು ಸುಲಭವಾಗಿ ನಿಮಗೋಸ್ಕರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ನಾವು ನವಜಾತ ಶಿಶುಗಳಿಗೂ ಕವರೇಜ್‌ ನೀಡುತ್ತೇವೆ. ಆದರೆ, ಪೋಷಕರು ನಮ್ಮೊಂದಿಗೆ ಮೆಡಿಕ್ಲೈಮ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ನೀವು ಹಿರಿಯ ನಾಗರಿಕರಾಗಿದ್ದರೆ, ನೀವು 65 ವರ್ಷಗಳ ವಯಸ್ಸಿನವರೆಗೆ ಇನ್ಶೂರೆನ್ಸ್ ಪಡೆಯಬಹುದು. ಇದನ್ನೂ ಓದಿ : ಹೆಲ್ತ್ ಇನ್ಶೂರೆನ್ಸ್ ಪಡೆಯಲು ವಯಸ್ಸಿನ ಮಿತಿ ಇದೆಯೇ?

ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಿ – ಕೆಲವೇ ಕ್ಲಿಕ್‌ಗಳಲ್ಲಿ ನಿಮ್ಮನ್ನು ಸುರಕ್ಷಿತವಾಗಿರಿಸಿ

buy health insurance policy from anywhere, anytime

ಅನುಕೂಲಕರ

ನಿಮ್ಮ ಬಳಿ ಯಾರಾದರೂ ಬಂದು ಪಾಲಿಸಿಯನ್ನು ವಿವರಿಸುತ್ತಾರೆ ಎಂದು ಕಾಯುವ ದಿನಗಳು ಮುಗಿದಿವೆ, ಈಗ ಖರೀದಿಯ ನಿರ್ಧಾರದ ಹೊಣೆ ನಿಮ್ಮದೇ. ಜಗತ್ತಿನ ಡಿಜಿಟಲ್ ಟ್ರೆಂಡ್‌ಗಳನ್ನು ಗಮನಿಸುತ್ತಾ, ಜಗತ್ತಿನ ಯಾವ ಪ್ರದೇಶದಿಂದಾದರೂ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಖರೀದಿಸಬಹುದು. ಅದರಿಂದ ಸಮಯ, ಶಕ್ತಿ ಮತ್ತು ಶ್ರಮದ ಉಳಿತಾಯ ಮಾಡಲು ಸಾಧ್ಯವಾಗುತ್ತದೆ.

secured payment mode

ಸುರಕ್ಷಿತ ಪಾವತಿ ವಿಧಾನಗಳು

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ನೀವು ನಗದು ಅಥವಾ ಚೆಕ್‌ನಲ್ಲಿ ಪ್ರೀಮಿಯಂಗಳನ್ನು ಪಾವತಿಸಬೇಕಾಗಿಲ್ಲ! ಡಿಜಿಟಲ್ ಆಗಿ ಪಾವತಿಸಿ! ಅನೇಕ ಸುರಕ್ಷಿತ ಪಾವತಿ ವಿಧಾನಗಳ ಮೂಲಕ ಆನ್ಲೈನ್‌ನಲ್ಲಿ ಪಾವತಿ ಮಾಡಲು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ.

instant quotes & policy issuance

ತ್ವರಿತ ಕೋಟ್‌ಗಳು ಮತ್ತು ಪಾಲಿಸಿ ವಿತರಣೆ

ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನೀವು ತಕ್ಷಣವೇ ಪ್ರೀಮಿಯಂ ಲೆಕ್ಕ ಹಾಕಬಹುದು, ಸದಸ್ಯರನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು, ಪ್ಲಾನ್‌ಗಳನ್ನು ಕಸ್ಟಮೈಜ್ ಮಾಡಬಹುದು ಮತ್ತು ನಿಮ್ಮ ಬೆರಳತುದಿಯಲ್ಲಿ ಕವರೇಜ್ ಅನ್ನು ಪರಿಶೀಲಿಸಬಹುದು.

 get instant policy documents

ನೀವು ಏನನ್ನು ನೋಡುತ್ತೀರೋ ಅದನ್ನೇ ಪಡೆಯುತ್ತೀರಿ

ನೀವು ಇನ್ನು ಮುಂದೆ ಭೌತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಕಾಯಬೇಕಾಗಿಲ್ಲ. ನೀವು ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸಿದ ತಕ್ಷಣ, ನಿಮ್ಮ ಪಾಲಿಸಿಯ PDF ಪ್ರತಿ ನಿಮ್ಮ ಮೇಲ್‌ಬಾಕ್ಸಿಗೆ ಬರುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನೀವು ನಿಮ್ಮ ಪಾಲಿಸಿಯನ್ನು ಪಡೆದುಕೊಳ್ಳುತ್ತೀರಿ.

instant quotes & policy issuance

ನಿಮ್ಮ ಬೆರಳ ತುದಿಯಲ್ಲೇ ವೆಲ್ನೆಸ್ ಮತ್ತು ವ್ಯಾಲ್ಯೂ ಆ್ಯಡೆಡ್‌ ಸೇವೆಗಳು

ನಮ್ಮ ಮೈ:ಹೆಲ್ತ್ ಸರ್ವೀಸಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳು, ಬ್ರೋಶರ್ ಮತ್ತು ಇತರ ದಾಖಲೆಗಳಿಗೆ ಅಕ್ಸೆಸ್ ಪಡೆಯಿರಿ. ಆನ್ಲೈನ್ ಕನ್ಸಲ್ಟೇಷನ್‌ಗಳನ್ನು ಬುಕ್ ಮಾಡಲು, ನಿಮ್ಮ ಆಹಾರ ಸೇವನೆಯ ಕ್ಯಾಲೋರಿ ಮತ್ತು BMI ಕೂಡಾ ಟ್ರ್ಯಾಕ್ ಮಾಡಲು ನಮ್ಮ ವೆಲ್ನೆಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.

ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ?

ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸುವ ಸುಲಭ ಮತ್ತು ಅನುಕೂಲಕರ ಮಾರ್ಗವೆಂದರೆ ಅದನ್ನು ಆನ್ಲೈನ್‌ನಲ್ಲಿ ಖರೀದಿಸುವುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:

  • ಎಚ್‌ಡಿಎಫ್‌ಸಿ ಎರ್ಗೋದ ಹೆಲ್ತ್ ಇನ್ಶೂರೆನ್ಸ್ ಪುಟಕ್ಕೆ ಭೇಟಿ ನೀಡಿ.
  • ಮೇಲ್ಭಾಗದಲ್ಲಿ, ನಿಮಗೆ ಫಾರ್ಮ್ ಸಿಗುತ್ತದೆ. ಸಂಪರ್ಕ ವಿವರಗಳು, ಪ್ಲಾನ್ ಪ್ರಕಾರ ಮುಂತಾದ ನಿಮ್ಮ ಮೂಲಭೂತ ಮಾಹಿತಿಯನ್ನು ಟೈಪ್ ಮಾಡಿ. ನಂತರ ಪ್ಲಾನ್‌ಗಳನ್ನು ನೋಡಿ ಬಟನ್ ಮೇಲೆ ಕ್ಲಿಕ್ ಮಾಡಿ
  • ಒಮ್ಮೆ ನೀವು ಪ್ಲಾನ್‌ಗಳನ್ನು ನೋಡಿದ ನಂತರ, ಆದ್ಯತೆಯ ವಿಮಾ ಮೊತ್ತ, ಪಾಲಿಸಿ ನಿಯಮಗಳು ಮತ್ತು ಇತರ ಮಾಹಿತಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಪಾಲಿಸಿಯನ್ನು ಕಸ್ಟಮೈಜ್ ಮಾಡಿ.
  • ಆನ್ಲೈನ್ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ನಮ್ಮ ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪಾವತಿ ಮಾಡಿ.
Explore our health insurance premium rates
Prioritising Health Insurance Needs Planning. Let Us Help you.

ಮೆಡಿಕ್ಲೈಮ್ ಪಾಲಿಸಿ ಎಂದರೇನು?

Mediclaim insurance

ಮೆಡಿಕ್ಲೈಮ್ ಪಾಲಿಸಿಯು ವೈದ್ಯಕೀಯ ವೆಚ್ಚಗಳಿಗೆ ಹಣಕಾಸಿನ ಕವರೇಜನ್ನು ಒದಗಿಸುವ ಒಂದು ರೀತಿಯ ಇನ್ಶೂರೆನ್ಸ್ ಆಗಿದೆ. ರೂಮ್ ಶುಲ್ಕಗಳು, ಔಷಧಿ ಮತ್ತು ಇತರ ಚಿಕಿತ್ಸೆ ವೆಚ್ಚಗಳನ್ನು ಒಳಗೊಂಡಂತೆ ಎಲ್ಲಾ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುತ್ತದೆ. ಆದಾಗ್ಯೂ, ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಹೋಲಿಸಿದರೆ ಮೆಡಿಕ್ಲೈಮ್ ಪಾಲಿಸಿಯಲ್ಲಿ ವಿಮಾ ಮೊತ್ತವು ಸೀಮಿತವಾಗಿದೆ. ನೀವು ಪಡೆಯುವ ಕವರೇಜ್ ಮೊತ್ತವು ನೀವು ಆಯ್ಕೆ ಮಾಡಿದ ವಿಮಾ ಮೊತ್ತವನ್ನು ಅವಲಂಬಿಸಿರುತ್ತದೆ, ಇದು ಸಾಮಾನ್ಯವಾಗಿ ಕೆಲವು ಲಕ್ಷಗಳವರೆಗೆ ಇರುತ್ತದೆ. ಕ್ಲೈಮ್ ಸಮಯದಲ್ಲಿ, ಕೆಲವು ಸಂದರ್ಭಗಳಲ್ಲಿ, ನೀವು ಆಸ್ಪತ್ರೆ ಬಿಲ್‌ಗಳು ಅಥವಾ ಡಿಸ್ಚಾರ್ಜ್ ರಿಪೋರ್ಟ್‌ಗಳಂತಹ ವೆಚ್ಚಗಳ ಪುರಾವೆಯನ್ನು ಒದಗಿಸಬೇಕಾಗಬಹುದು.
ಮೆಡಿಕ್ಲೈಮ್ ಇನ್ಶೂರೆನ್ಸ್ ಹೆಲ್ತ್ ಇನ್ಶೂರೆನ್ಸ್‌ನಂತೆಯೇ ಹೆಲ್ತ್‌ಕೇರ್ ವೆಚ್ಚಗಳಿಗೆ ಹಣಕಾಸಿನ ಕವರೇಜ್ ಅನ್ನು ಒದಗಿಸುತ್ತದೆ. ಆದಾಗ್ಯೂ, ಮೆಡಿಕ್ಲೈಮ್ ಪಾಲಿಸಿಯ ಅಡಿಯಲ್ಲಿ, ಪ್ರಯೋಜನಗಳನ್ನು ಪಡೆಯಲು ನೀವು ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಾಗಬೇಕು. ಇದರರ್ಥ ನಿಜವಾಗಿಯೂ ಆಸ್ಪತ್ರೆಗೆ ದಾಖಲಾಗದೆ ನೀವು ಹೋಮ್ ಹೆಲ್ತ್‌ಕೇರ್ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದಿರಬಹುದು. ಹೆಚ್ಚುವರಿಯಾಗಿ, ಮೆಡಿಕ್ಲೈಮ್ ಪಾಲಿಸಿಗಳು ಸಾಮಾನ್ಯವಾಗಿ ಕುಟುಂಬದ ಸದಸ್ಯರನ್ನು ಸೇರಿಸಲು, ವಿಮಾ ಮೊತ್ತವನ್ನು ಹೆಚ್ಚಿಸಲು ಅಥವಾ ಅಗತ್ಯವಿರುವಂತೆ ಹೆಚ್ಚುವರಿ ಪ್ರಯೋಜನಗಳನ್ನು ಸೇರಿಸಲು ಅವಕಾಶವನ್ನು ಒದಗಿಸುವುದಿಲ್ಲ. ಒಟ್ಟಾರೆಯಾಗಿ, ಮೆಡಿಕ್ಲೈಮ್ ಪಾಲಿಸಿಗಳನ್ನು ಸಾಮಾನ್ಯವಾಗಿ ಕಸ್ಟಮೈಜ್ ಮಾಡಲಾಗುವುದಿಲ್ಲ. ಮತ್ತೂ ಓದಿ: ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಮತ್ತು ಮೆಡಿಕ್ಲೈಮ್ ನಡುವಿನ ವ್ಯತ್ಯಾಸವನ್ನು ತಿಳಿಯಿರಿ.

ಭಾರತದಲ್ಲಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ನೀಡುವ ಫೀಚರ್‌ಗಳು ಮತ್ತು ಪ್ರಯೋಜನಗಳು

ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ವಿಷಯದಲ್ಲಿ ಮಾರುಕಟ್ಟೆಯಲ್ಲಿ ಹಲವಾರು ಆಯ್ಕೆಗಳು ಲಭ್ಯವಿವೆ ಆದರೆ ಭಾರತದಲ್ಲಿ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ನಿಮ್ಮ ಕೈಗಳಲ್ಲಿದೆ. ಕೆಲವು ಇನ್ಶೂರೆನ್ಸ್ ಪ್ಲಾನ್‌ಗಳು ಹೆಚ್ಚಿನ ಪ್ರೀಮಿಯಂ ಮತ್ತು ಕಡಿಮೆ ಕವರೇಜ್‌ಗಳನ್ನು ಏಕೆ ಹೊಂದಿವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ, ಆದರೆ ಕೆಲವರು ಹೆಚ್ಚಿನ ಕವರೇಜ್‌ಗಳನ್ನು ಹೊಂದಿರಬಹುದು ಆದರೆ ಕಡಿಮೆ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿರಬಹುದು? ಸಮಗ್ರ ಕವರೇಜ್‌ಗಳು ಮತ್ತು ಕೈಗೆಟಕುವ ಪ್ರೀಮಿಯಂ ಆಫರ್ ಮಾಡುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಅನ್ನು ಕಂಡುಕೊಳ್ಳುವುದು ಸೂಕ್ತವಾಗಿದೆ, ಆನ್ಲೈನಿನಲ್ಲಿ ಸಂಶೋಧನೆ ಮಾಡುವ ಮೂಲಕ ನೀವು ಅವುಗಳನ್ನು ಕಂಡುಕೊಳ್ಳಬಹುದು. ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಈ ಕೆಳಗಿನವುಗಳನ್ನು ಒಳಗೊಂಡಿರಬೇಕು:

1

ದೊಡ್ಡ ಸಂಖ್ಯೆಯ ನೆಟ್ವರ್ಕ್ ಆಸ್ಪತ್ರೆಗಳು

ನೆಟ್ವರ್ಕ್ ಆಸ್ಪತ್ರೆಯಲ್ಲಿ ನೀವು ದಾಖಲಾದಾಗ, ನಿಮ್ಮ ಕ್ಲೈಮ್ ಪ್ರಕ್ರಿಯೆ ತುಂಬಾ ಸರಳ ಮತ್ತು ವೇಗವಾಗಿ ಆಗುತ್ತದೆ. ಇನ್ಶೂರೆನ್ಸ್ ಕಂಪನಿಯು ಹೆಚ್ಚಿನ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ ಹೊಂದಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ. ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯ ಕೇಂದ್ರವನ್ನು ಇನ್ಶೂರೆನ್ಸ್ ಕಂಪನಿಯು ಪಟ್ಟಿ ಮಾಡಿದ್ದರೆ, ಅದು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.

2

ನಗದುರಹಿತ ಆಸ್ಪತ್ರೆ ದಾಖಲಾತಿ ಸೌಲಭ್ಯ

ಭಾರತದಲ್ಲಿ ನಗದುರಹಿತ ಹೆಲ್ತ್ ಇನ್ಶೂರೆನ್ಸ್ ಅನ್ನು ಇಂದಿನ ಸಮಯದಲ್ಲಿ ಹೊಂದಿರಲೇಬೇಕು. ಆಸ್ಪತ್ರೆ ಮತ್ತು ಇನ್ಶೂರೆನ್ಸ್ ಕಂಪನಿಯು ಆಂತರಿಕವಾಗಿ ಸೆಟಲ್ ಮಾಡಿಕೊಳ್ಳುವುದರಿಂದ, ನೀವು ಬಿಲ್ ಬಗ್ಗೆ ಚಿಂತಿಸಬೇಕಾಗಿಲ್ಲ.

3

ಉತ್ತಮ ಕ್ಲೈಮ್ ಸೆಟಲ್ಮೆಂಟ್ ಅನುಪಾತ

ಕ್ಲೈಮ್‌ಗಳು ನಿರಂತರವಾಗಿ ತಿರಸ್ಕೃತವಾಗುತ್ತಿದ್ದರೆ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವುದರ ಉಪಯೋಗವೇನು? ಆದ್ದರಿಂದ ಭಾರತದ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಉತ್ತಮ ಕ್ಲೈಮ್‌ ಸೆಟಲ್ಮೆಂಟ್ ಅನುಪಾತವನ್ನು ಹೊಂದಿರಬೇಕು.

4

ವಿಮಾ ಮೊತ್ತದ ಶ್ರೇಣಿ

ನಿಮ್ಮ ಅವಶ್ಯಕತೆಯ ಆಧಾರದಲ್ಲಿ ನೀವು ಮೊತ್ತವನ್ನು ಆಯ್ಕೆ ಮಾಡುವುದರಿಂದ, ಆಯ್ಕೆ ಮಾಡಲು ವಿಮಾ ಮೊತ್ತದ ಶ್ರೇಣಿಯನ್ನು ಹೊಂದಿರುವುದು ಸಹಾಯಕವಾಗಬಹುದು. ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ನಿಮ್ಮ ವಿಮಾ ಮೊತ್ತವು ನಿಮಗೆ ಹಣಕಾಸಿನ ನೆರವು ಒದಗಿಸಬೇಕು.

5

ಗ್ರಾಹಕರ ರಿವ್ಯೂಗಳು

ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ಉತ್ತಮ ರಿವ್ಯೂಗಳು ಮತ್ತು ರೇಟಿಂಗ್‌ಗಳನ್ನು ನೀಡುವುದರ ಮೂಲಕ, ಎಲ್ಲಾ ಗ್ರಾಹಕರು ಉತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೆಚ್ಚು ಶಿಫಾರಸು ಮಾಡುತ್ತಾರೆ. ಉತ್ತಮ ನಿರ್ಧಾರ ತೆಗೆದುಕೊಳ್ಳಲು ನೀವು ಆನ್ಲೈನ್‌ನಲ್ಲಿ ಲಭ್ಯವಿರುವ ರೇಟಿಂಗ್‌ಗಳು ಮತ್ತು ರಿವ್ಯೂಗಳನ್ನು ನೋಡಬೇಕು.

6

ಹೋಮ್ ಕೇರ್ ಸೌಲಭ್ಯ

ವೈದ್ಯಕೀಯ ವಿಜ್ಞಾನವು ತುಂಬಾ ಬೆಳವಣಿಗೆ ಕಂಡಿದ್ದೂ, ಮನೆಯಲ್ಲಿಯೇ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದು. ಆದ್ದರಿಂದ, ಭಾರತದಲ್ಲಿನ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೋಮ್ ಕೇರ್ ಸೌಲಭ್ಯವನ್ನು ಒಳಗೊಂಡಿರಬೇಕು. ಏಕೆಂದರೆ, ಮನೆಯಲ್ಲಿ ಉಂಟಾಗುವ ವೈದ್ಯಕೀಯ ವೆಚ್ಚಗಳನ್ನೂ ಸಹ ಕವರ್ ಮಾಡಲಾಗುತ್ತದೆ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ಗಳು

ಕರಪತ್ರ ಕ್ಲೈಮ್ ಫಾರ್ಮ್ ಪಾಲಿಸಿ ನಿಯಮಾವಳಿಗಳು
ಅವರ ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ ವಿವಿಧ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ವಿವರಗಳನ್ನು ಪಡೆಯಿರಿ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಕವರ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹೆಲ್ತ್ ಕೆಟಗರಿಗೆ ಭೇಟಿ ನೀಡಿ. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಮಾಡಲು ಬಯಸುವಿರಾ? ಹೆಲ್ತ್ ಪಾಲಿಸಿ ಕ್ಲೈಮ್ ಫಾರ್ಮ್ ಡೌನ್ಲೋಡ್ ಮಾಡಿ ಮತ್ತು ವೇಗವಾದ ಕ್ಲೈಮ್ ಅನುಮೋದನೆ ಮತ್ತು ಸೆಟಲ್ಮೆಂಟ್‌ಗಾಗಿ ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ನಿಯಮ ಮತ್ತು ಷರತ್ತುಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಗಳನ್ನು ನೋಡಿ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಒದಗಿಸುವ ಕವರೇಜ್ ಮತ್ತು ಫೀಚರ್‌ಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಿರಿ.
Willing to Buy A medical insurance Plan?
Don’t Delay Happiness. Customise Your Health Insurance Plan, Now!

ಹೆಲ್ತ್ ಇನ್ಶೂರೆನ್ಸ್ ನಿಯಮಗಳು ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

1

ಅವಲಂಬಿತರು

ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಅವಲಂಬಿತರು ಅವಲಂಬಿತರು ಪಾಲಿಸಿದಾರರಿಗೆ ಸಂಬಂಧಿಸಿರುವ ವ್ಯಕ್ತಿ. ಇನ್ಶೂರ್ಡ್ ವ್ಯಕ್ತಿಯು ತಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಹೆಲ್ತ್ ಇನ್ಶೂರೆನ್ಸ್ ಕವರೇಜನ್ನು ಒದಗಿಸಲು ಬಯಸುವ ಯಾವುದೇ ಕುಟುಂಬದ ಸದಸ್ಯರನ್ನು ಅವಲಂಬಿತರಾಗಿ ಸೇರಿಸಬಹುದು. ಸರಳವಾಗಿ, ಅವಲಂಬಿತ ವ್ಯಕ್ತಿಯು ಕುಟುಂಬದ ಸದಸ್ಯರು ಅಥವಾ ವಿಮಾದಾರರ ಸಂಬಂಧಿಯಾಗಿರುವ ವ್ಯಕ್ತಿಯಾಗಿದ್ದಾರೆ.

2

ಕಡಿತಗಳು

ಹೆಲ್ತ್ ಇನ್ಶೂರೆನ್ಸ್‌ನ ಈ ಕಾಂಪೊನೆಂಟ್ ಅನ್ನು ಹೊಂದಿರುವುದರಿಂದ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ಕಡಿಮೆ ಮಾಡಬಹುದು, ಆದರೆ ಇನ್ಶೂರೆನ್ಸ್ ಕ್ಲೈಮ್ ಸಮಯದಲ್ಲಿ ನೀವು ನಿಗದಿತ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದರ್ಥ. ಆದ್ದರಿಂದ, ಕಡಿತಗೊಳಿಸಬಹುದಾದ ಷರತ್ತಿಗೆ ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಓದಿ ಮತ್ತು ಚಿಕಿತ್ಸೆಯ ವೆಚ್ಚವನ್ನು ಭರಿಸಲು ನೀವು ಸಿದ್ಧವಾಗುವವರೆಗೆ ಅದನ್ನು ಒಳಗೊಂಡಿರದ ಒಂದನ್ನು ಆಯ್ಕೆಮಾಡಿ.

3

ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಮಾ ಮೊತ್ತವು ಒಂದು ಪಾಲಿಸಿ ಅವಧಿಯೊಳಗೆ ಇನ್ಶೂರ್ಡ್ ವ್ಯಕ್ತಿಯ ಕವರ್ ಆದ ವೈದ್ಯಕೀಯ ವೆಚ್ಚಗಳಿಗೆ ಇನ್ಶೂರೆನ್ಸ್ ಕಂಪನಿಯು ಪಾವತಿಸುವ ಗರಿಷ್ಠ ಮೊತ್ತವಾಗಿದೆ. ಉದಾಹರಣೆಗೆ, ನಿಮ್ಮ ವಿಮಾ ಮೊತ್ತವು ₹ 5 ಲಕ್ಷವಾಗಿದ್ದರೆ, ವಿಮಾದಾತರು ₹5 ಲಕ್ಷದವರೆಗಿನ ಆಸ್ಪತ್ರೆ ಬಿಲ್‌ಗಳು ಮತ್ತು ಚಿಕಿತ್ಸೆಗಳನ್ನು ಕವರ್ ಮಾಡುತ್ತಾರೆ. ನಿಮ್ಮ ಬಿಲ್‌ಗಳು ಅದಕ್ಕಿಂತ ಹೆಚ್ಚಾಗಿದ್ದರೆ, ಆ ಹೆಚ್ಚುವರಿ ಮೊತ್ತವನ್ನು ನೀವೇ ಪಾವತಿಸಬೇಕಾಗುತ್ತದೆ.

4

ಕೋ-ಪೇಮೆಂಟ್

ಕೆಲವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಸಹ-ಪಾವತಿ ಅಥವಾ ಸಹ-ಪಾವತಿ ಷರತ್ತುಗಳನ್ನು ಹೊಂದಿವೆ. ಇದು ಆರೋಗ್ಯ ಸೇವೆಯನ್ನು ಪಡೆಯುವ ಮೊದಲು ಪಾಲಿಸಿದಾರರು ಇನ್ಶೂರೆನ್ಸ್ ಕಂಪನಿಗೆ ಪಾವತಿಸಬೇಕಾದ ನಿಗದಿತ ಶೇಕಡಾವಾರು ಮೊತ್ತವಾಗಿದೆ. ಇದನ್ನು ಮೊದಲೇ ನಿರ್ಧರಿಸಲಾಗಿದೆ ಮತ್ತು ಪಾಲಿಸಿ ನಿಯಮಾವಳಿಗಳಲ್ಲಿ ನಮೂದಿಸಲಾಗಿದೆ, ಉದಾಹರಣೆಗೆ, ಕ್ಲೈಮ್ ಸಮಯದಲ್ಲಿ ಯಾರಾದರೂ 20% ಸಹ-ಪಾವತಿಯನ್ನು ಮಾಡಲು ಒಪ್ಪಿದರೆ, ಪ್ರತಿ ಬಾರಿ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳುವಾಗ, ಅವರು ಆ ಮೊತ್ತವನ್ನು ಪಾವತಿಸಬೇಕಾಗುತ್ತದೆ.

5

ಕ್ರಿಟಿಕಲ್ ಇಲ್ನೆಸ್

ಗಂಭೀರ ಅನಾರೋಗ್ಯಗಳು ವೈದ್ಯಕೀಯ ಪರಿಸ್ಥಿತಿಗಳು ಕ್ಯಾನ್ಸರ್, ಮೂತ್ರಪಿಂಡ ವೈಫಲ್ಯ ಮತ್ತು ಹೃದಯ ರೋಗಗಳಂತಹ ಮಾರಣಾಂತಿಕ ವೈದ್ಯಕೀಯ ರೋಗಗಳನ್ನು ಸೂಚಿಸುತ್ತವೆ. ಈ ಅನಾರೋಗ್ಯಗಳನ್ನು ಕವರ್ ಮಾಡುವ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳಿವೆ. ಅವುಗಳನ್ನು ರೈಡರ್ ಅಥವಾ ಆ್ಯಡ್-ಆನ್ ಕವರ್ ಆಗಿ ಕೂಡ ಖರೀದಿಸಬಹುದು.

6

ಪೂರ್ವ-ಅಸ್ತಿತ್ವದಲ್ಲಿರುವ ಕಾಯಿಲೆಗಳು

COPD, ಹೈಪರ್‌ಟೆನ್ಶನ್, ಡಯಾಬಿಟಿಸ್, ಕಿಡ್ನಿ ಸಮಸ್ಯೆಗಳು, ಕಾರ್ಡಿಯೋವಾಸ್ಕುಲರ್ ಸಮಸ್ಯೆಗಳು ಮತ್ತು ಇತರ ಅಂಡರ್‌ಲೈಯಿಂಗ್ ರೋಗಗಳಂತಹ ಆರೋಗ್ಯ ಸಮಸ್ಯೆಗಳನ್ನು ಹೆಲ್ತ್ ಇನ್ಶೂರೆನ್ಸ್ ವಿಷಯದಲ್ಲಿ ಅಪಾಯದ ಅಂಶಗಳಾಗಿ ಪರಿಗಣಿಸಲಾಗುತ್ತದೆ. ಮೇಲೆ ತಿಳಿಸಿದಂತೆ ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ರೋಗಿಗಳನ್ನು ಹೆಚ್ಚಿನ ಅಪಾಯದಲ್ಲಿ ಪರಿಗಣಿಸಲಾಗುತ್ತದೆ ಮತ್ತು ಆದ್ದರಿಂದ ಹೆಚ್ಚಿನ ಪ್ರೀಮಿಯಂ ವಿಧಿಸಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದಿಂದ ಹಿಯರ್ - ನಿಜಕ್ಕೂ ಪ್ರಯೋಜನಕಾರಿ.

Here by HDFC ERGO

ಅನೇಕ ಜನರ ಬಳಿ ನಿಮ್ಮ ಸಂದೇಹಗಳಿಗೆ ಉತ್ತರ ಕೇಳುತ್ತಾ ಸುಸ್ತಾಗಿದ್ದೀರಾ?? ಜೀವನದಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮಗೆ ಸಹಾಯ ಮಾಡುವ ಪರಿಹಾರವಿದೆ ಎಂದು ನಾವು ನಿಮಗೆ ಹೇಳಿದರೆ ಏನಾಗುತ್ತದೆ.

 

ಹಿಯರ್‌. ಆ್ಯಪ್‌‌ನ ಟಾಪ್ ಹೆಲ್ತ್ ಫೀಚರ್‌ಗಳು

Trending Healthcare Content

ಪ್ರಚಲಿತ ಹೆಲ್ತ್‌ಕೇರ್ ಮಾಹಿತಿ

ವಿಶ್ವಾದ್ಯಂತದ ಆರೋಗ್ಯ ತಜ್ಞರು ಮತ್ತು ವೈದ್ಯರು ಬರೆದ ಆರೋಗ್ಯ ವಿಷಯಗಳ ಕುರಿತಾದ ಪರಿಶೀಲಿಸಿದ ಲೇಖನಗಳು ಮತ್ತು ವಿಡಿಯೋಗಳನ್ನು ಅಕ್ಸೆಸ್ ಮಾಡಿ.

Exclusive Discounts on Medicines & Diagnostic Tests

ಔಷಧಿಗಳು ಮತ್ತು ಡಯಾಗ್ನಸ್ಟಿಕ್ ಪರೀಕ್ಷೆಗಳ ಮೇಲೆ ವಿಶೇಷ ರಿಯಾಯಿತಿಗಳು

ಪಾಲುದಾರ ಇ-ಫಾರ್ಮಸಿಗಳು ಮತ್ತು ಡಯಾಗ್ನಸ್ಟಿಕ್ ಸೆಂಟರ್‌ಗಳ ಶ್ರೇಣಿಯ ಆಫರ್‌ಗಳೊಂದಿಗೆ ಆರೋಗ್ಯ ರಕ್ಷಣೆಯನ್ನು ಕೈಗೆಟಕುವಂತೆ ಮಾಡಿ.

Talk To Someone Who Has Recently Been Through a Similar Surgery

ಇತ್ತೀಚೆಗೆ ಇದೇ ರೀತಿಯ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಯೊಂದಿಗೆ ಮಾತನಾಡಿ

ಇದೇ ರೀತಿಯ ವೈದ್ಯಕೀಯ ಅನುಭವ ಪಡೆದ ಪರಿಶೀಲಿತ ಸ್ವಯಂಸೇವಕರನ್ನು ಸಂಪರ್ಕಿಸಿ.

ಹೆಲ್ತ್ ಇನ್ಶೂರೆನ್ಸ್ ರಿವ್ಯೂಗಳು ಮತ್ತು ರೇಟಿಂಗ್‌ಗಳು

4.4/5 ಸ್ಟಾರ್‌ಗಳು
rating

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

slider-right
quote-icons
male-face
ಸಾಕೇತ್ ಶರ್ಮಾ

ಆಪ್ಟಿಮಾ ಸೆಕ್ಯೂರ್ ಫ್ಯಾಮಿಲಿ ಫ್ಲೋಟರ್

ಜನವರಿ 2025

ಗುರ್‌ಗಾಂವ್/ಹರಿಯಾಣ

ಎಚ್‌ಡಿಎಫ್‌ಸಿ ಎರ್ಗೋದ ಹೆಲ್ತ್ ಇನ್ಶೂರೆನ್ಸ್ ಸಲಹೆಗಾರರಾದ ಜಿಶನ್ ಕಾಜಿ (EMP ID: 19004) ಅವರು ಒದಗಿಸಿದ ಅತ್ಯುತ್ತಮ ಸೇವೆಗಾಗಿ, ಅವರನ್ನು ಪ್ರಶಂಸಿಸುತ್ತೇನೆ. ನನ್ನ ಹೆಲ್ತ್ ಇನ್ಶೂರೆನ್ಸ್ ಖರೀದಿ ಪ್ರಯಾಣಕ್ಕೆ ಅವರು ಮಾರ್ಗದರ್ಶನ ನೀಡಿದ ರೀತಿಯಲ್ಲಿ ಅವರ ತಾಳ್ಮೆ, ವೃತ್ತಿಪರತೆ ಮತ್ತು ಬದ್ಧತೆಯು ಎದ್ದು ಕಾಣುತ್ತದೆ. ಜಿಶನ್ ನನ್ನ ಪ್ರಶ್ನೆಗಳನ್ನು ಉತ್ತಮ ಕಾಳಜಿಯಿಂದ ನಿರ್ವಹಿಸಿದರು ಹಾಗೂ ಶಾಂತವಾಗಿ ಮತ್ತು ದಕ್ಷವಾಗಿ ಕಳಕಳಿಗಳನ್ನು ಪರಿಹರಿಸುವ ಅವರ ಸಾಮರ್ಥ್ಯ ಮನ ಮುಟ್ಟಿತು. ಸುಗಮ ಅನುಭವವನ್ನು ಖಚಿತಪಡಿಸಿಕೊಳ್ಳಲು ಅವರು ನಿರೀಕ್ಷೆ ಮೀರಿ ಪ್ರಯತ್ನಿಸಿದರು. ಅವರು ನಿಮ್ಮ ತಂಡಕ್ಕೆ ಅಮೂಲ್ಯ ಆಸ್ತಿಯಾಗಿದ್ದಾರೆ ಮತ್ತು ಅವರ ಹುದ್ದೆಯಲ್ಲಿ ಉತ್ತಮವಾಗಿ ಮುಂದುವರಿಯುತ್ತಾರೆ ಎಂದು ನಾನು ನಂಬುತ್ತೇನೆ

quote-icons
male-face
ಅರುಣ್ A

ಎಚ್‌ಡಿಎಫ್‌ಸಿ ಇಂಡಿವಿಜುವಲ್ ಎನರ್ಜಿ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್

ಡಿಸೆಂಬರ್ 2024

ನನ್ನ ತಾಯಿಗಾಗಿ ಎಚ್‌ಡಿಎಫ್‌ಸಿ ಇಂಡಿವಿಜುವಲ್ ಎನರ್ಜಿ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಪಡೆಯಲು ನನಗೆ ಸಹಾಯ ಮಾಡುವಲ್ಲಿ ಶ್ರೀ ಕಮಲೇಶ್ ಕೆ (ಉದ್ಯೋಗಿ ID: 24668) ಒದಗಿಸಿದ ಅತ್ಯುತ್ತಮ ಸೇವೆಯನ್ನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಕಳೆದ ಎರಡು ತಿಂಗಳುಗಳಲ್ಲಿ, ಶ್ರೀ ಕಮಲೇಶ್ ಅಸಾಧಾರಣ ವೃತ್ತಿಪರತೆ ಮತ್ತು ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಅವರು ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ನನಗೆ ತಾಳ್ಮೆಯಿಂದ ಮಾರ್ಗದರ್ಶನ ನೀಡಿದರು, ನನ್ನ ಎಲ್ಲಾ ಪ್ರಶ್ನೆಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದರು ಮತ್ತು ನಿಯಮಿತವಾಗಿ ಫಾಲೋ ಅಪ್ ಮಾಡಿದರು. ಇನ್ಶೂರೆನ್ಸ್ ಪ್ರಾಡಕ್ಟ್‌ಗಳ ಬಗ್ಗೆ ಅವರ ಅಪಾರ ವಿಷಯ ಜ್ಞಾನ ಮತ್ತು ಗ್ರಾಹಕ ಸೇವೆಗೆ ತೋರುವ ಬದ್ಧತೆಯು ಪ್ರಕ್ರಿಯೆಯನ್ನು ತುಂಬಾ ಸರಳ ಮತ್ತು ತೊಂದರೆ-ರಹಿತವಾಗಿಸಿತು. ದಯವಿಟ್ಟು ಶ್ರೀ ಕಮಲೇಶ್‌ಗೆ ನನ್ನ ಕೃತಜ್ಞತೆಯನ್ನು ತಿಳಿಸಿ. ಉನ್ನತ ಗುಣಮಟ್ಟದ ಗ್ರಾಹಕ ಸೇವೆ ನೀಡಿದ್ದಕ್ಕಾಗಿ ಧನ್ಯವಾದಗಳು.

quote-icons
male-face
ನೀಲಾಂಜನ್ ಕಲಾ

ಆಪ್ಟಿಮಾ ಸೂಪರ್ ಸೆಕ್ಯೂರ್ 

ಡಿಸೆಂಬರ್ 2024

ದಕ್ಷಿಣ ದೆಹಲಿ, ದೆಹಲಿ

ನನ್ನ ಖರೀದಿ ಪ್ರಯಾಣದಲ್ಲಿ ತುಂಬಾ ಸಹಾಯಕವಾಗಿದ್ದ ಶ್ರೀ ಅರವಿಂದ್‌ಗೆ ನನ್ನ ಪ್ರಾಮಾಣಿಕ ಧನ್ಯವಾದಗಳು, ಅವರ ಮಾರ್ಗದರ್ಶನದ ರೀತಿಯು ನನ್ನ ಇನ್ಶೂರೆನ್ಸ್ ಪೂರೈಕೆದಾರರಾಗಿ ಎಚ್‌ಡಿಎಫ್‌ಸಿ ಎರ್ಗೋವನ್ನೇ ಆಯ್ಕೆ ಮಾಡಲು ಪ್ರೇರೇಪಿಸಿತು. ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಜೊತೆಗೆ ಅವರು ಪ್ರತಿ ಸಣ್ಣ ವಿಷಯಗಳನ್ನೂ ವಿವರಿಸಿದರು. 3 ವರ್ಷಗಳವರೆಗೆ 50 ಲಕ್ಷದ ಕವರ್ ಪಡೆಯುವ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಅವರ ಮಾರ್ಗದರ್ಶನ ಸಹಾಯ ಮಾಡಿತು. ಅವರ ಕೆಲಸದಲ್ಲಿ ನಮಗೆ ಅಪಾರ ವಿಶ್ವಾಸವಿತ್ತು ಮತ್ತು ಅವರು ಉತ್ತಮ ಸೇಲ್ಸ್‌ಮ್ಯಾನ್ ಎಂಬುದನ್ನು ನಾನಿಲ್ಲಿ ಹೇಳಲೇಬೇಕು.

quote-icons
male-face
ಸಂದೀಪ್ ಅಂಗಡಿ 

ಆಪ್ಟಿಮಾ ಸೂಪರ್ ಸೆಕ್ಯೂರ್

ಡಿಸೆಂಬರ್ 2024

ಬೆಂಗಳೂರು, ಕರ್ನಾಟಕ

ಶೆಹ್ನಾಜ್ ಬಾನೋಗೆ ನನ್ನ ಹೃದಯಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ನನ್ನ ಪಾಲಿಸಿಯನ್ನು ಪಡೆಯುವಲ್ಲಿ ಅವರ ಸಹಾಯವನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ. ಪ್ಲಾನ್ ಬಗ್ಗೆ ಅವರ ಜ್ಞಾನವು ಉತ್ತಮವಾಗಿದೆ. ಪಾಲಿಸಿ ಖರೀದಿಸುವ ಮೊದಲು ಅವರು ಪ್ಲಾನ್‌ನ ವಿವರಗಳನ್ನು ಸ್ಪಷ್ಟತೆಯೊಂದಿಗೆ ವಿವರಿಸಿದರು. ಅವರ ಪ್ರಯತ್ನಗಳನ್ನು ಮೇಲಧಿಕಾರಿಯು ಗುರುತಿಸಲಿ ಎಂದು ನಾನು ಬಯಸುತ್ತೇನೆ. ಉತ್ತಮ ಕೆಲಸವನ್ನು ಮುಂದುವರಿಸಿ. ಧನ್ಯವಾದಗಳು!

quote-icons
male-face
ಮಯೂರೇಶ್ ಅಭ್ಯಂಕರ್ 

ಆಪ್ಟಿಮಾ ಸೆಕ್ಯೂರ್

ಡಿಸೆಂಬರ್ 2024

ಮುಂಬೈ, ಮಹಾರಾಷ್ಟ್ರ

ನನ್ನ ಇನ್ಶೂರೆನ್ಸ್ ಪಡೆಯಲು ನನಗೆ ಸಹಾಯ ಮಾಡಲು ನಿಮ್ಮ ತಂಡದ ಸದಸ್ಯ ಪುನೀತ್ ಕುಮಾರ್ ಅವರ ಪ್ರಯತ್ನಗಳನ್ನು ಹೈಲೈಟ್ ಮಾಡಲು ಬಯಸುತ್ತೇನೆ. ನನಗೆ ಸಂಪೂರ್ಣ ಪ್ರಕ್ರಿಯೆಯನ್ನು ವಿವರಿಸಲು 2 ಗಂಟೆಗಳ ಕಾಲ ಅವರು ನನ್ನೊಂದಿಗೆ ಕರೆಯಲ್ಲಿದ್ದರು ಮತ್ತು ನನ್ನ ಅಗತ್ಯಗಳಿಗೆ ಸರಿಯಾದುದನ್ನು ಆಯ್ಕೆ ಮಾಡಲು ನನಗೆ ಸಹಾಯ ಮಾಡುವ ವಿವಿಧ ಪಾಲಿಸಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸಿದರು. ಅದೇ ಕರೆಯಲ್ಲಿ ಡೀಲ್ ಕೊನೆಗೊಳಿಸಲು ಅವರು ಹೆಚ್ಚಿನ ಶ್ರಮ ಹಾಕಿದರು. ಅವರು ವೇತನ ಹೆಚ್ಚಳ ಮತ್ತು ಬಡ್ತಿಗೆ ಅರ್ಹರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಪುನೀತ್, ನಿಮ್ಮ ಮುಂದಿನ ಪ್ರಯತ್ನಗಳಿಗಾಗಿ ಶುಭಾಶಯಗಳು.

quote-icons
male-face
ಸನೂಬ್ ಕುಮಾರ್ 

ಆಪ್ಟಿಮಾ ಸೆಕ್ಯೂರ್

ಡಿಸೆಂಬರ್ 2024

ಬೆಂಗಳೂರು, ಕರ್ನಾಟಕ

ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನನ್ನ ಕುಟುಂಬಕ್ಕೆ (ಇದು ನನ್ನ ಅತ್ಯಂತ ಪ್ರಮುಖ ಆದ್ಯತೆಯಾಗಿದೆ) ಹೆಲ್ತ್ ಇನ್ಶೂರೆನ್ಸ್ ಕವರೇಜ್ ಪಡೆಯಲು ಅಮೂಲ್ಯವಾದ ಸಹಾಯವನ್ನು ಒದಗಿಸಿದ ಶ್ರೀ ಮೊಹಮ್ಮದ್ ಅಲಿ ಅವರನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಸಂಪೂರ್ಣ ಪ್ರಕ್ರಿಯೆಯಲ್ಲಿ ಅವರ ಪರಿಣತಿ ಮತ್ತು ಮಾರ್ಗದರ್ಶನವು ನಿಜವಾಗಿಯೂ ಅಸಾಧಾರಣವಾಗಿತ್ತು. ಅವರು ವಿವಿಧ ಪ್ಲಾನ್‌ಗಳನ್ನು ತಾಳ್ಮೆಯಿಂದ ವಿವರಿಸಿದರು, ನನ್ನ ಎಲ್ಲಾ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದರು ಮತ್ತು ಪ್ರತಿ ಪಾಲಿಸಿಯ ಸೂಕ್ಷ್ಮತೆಗಳನ್ನು ಅರ್ಥ ಮಾಡಿಕೊಳ್ಳಲು ನನಗೆ ಸಹಾಯ ಮಾಡಿದರು. ಅವರ ಪ್ರಯತ್ನಗಳಿಗೆ ಧನ್ಯವಾದಗಳು, ಸಮಗ್ರ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಕವರೇಜ್‌ನೊಂದಿಗೆ ನನ್ನ ಕುಟುಂಬವು ಸುರಕ್ಷಿತವಾಗಿದೆ ಎಂದು ಈಗ ನಾನು ವಿಶ್ವಾಸ ಹೊಂದಿದ್ದೇನೆ.

quote-icons
male-face
ವಿಜಯ್ ಕುಮಾರ್ ಸುಖ್ಲೇಚಾ

ಆಪ್ಟಿಮಾ ಸೆಕ್ಯೂರ್

ಡಿಸೆಂಬರ್ 2024

ಬೆಂಗಳೂರು, ಕರ್ನಾಟಕ

ಶುಭಂ ಅನ್ನು ಪ್ರಶಂಸಿಸಲು ನಾನು ಸ್ವಲ್ಪ ಸಮಯ ತೆಗೆದುಕೊಳ್ಳಲು ಬಯಸುತ್ತೇನೆ. ವಿಷಯದ ಬಗ್ಗೆ ಅವರ ಆಳವಾದ ಜ್ಞಾನ ಮತ್ತು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವ ಅವರ ತಾಳ್ಮೆಯನ್ನು ನಾನು ನಿಜವಾಗಿಯೂ ಮೆಚ್ಚುತ್ತೇನೆ. ಅವರ ಪ್ರತಿಕ್ರಿಯೆಗಳನ್ನು ಮೌಲ್ಯೀಕರಿಸಲು ನಾನು ಕೆಲವು ಪ್ರಶ್ನೆಗಳನ್ನು ಪುನರಾವರ್ತಿಸಿದಾಗಲೂ, ಅವರು ಅದೇ ತಾಳ್ಮೆ ಹಾಗೂ ವಿಷಯ ಜ್ಞಾನ ಪ್ರದರ್ಶಿಸಿದರು. ಅವರು ಎಚ್‌ಡಿಎಫ್‌ಸಿ ಕುಟುಂಬಕ್ಕೆ ಮೌಲ್ಯಯುತ ಆಸ್ತಿಯಾಗಿದ್ದಾರೆ, ಅವರಿಗೆ ಉಜ್ವಲ ಮತ್ತು ಯಶಸ್ವಿ ವೃತ್ತಿಜೀವನವನ್ನು ಬಯಸುತ್ತೇನೆ.

quote-icons
male-face
ಬಟ್ಟಾ ಮಹೇಂದ್ರ

ಆಪ್ಟಿಮಾ ಸೆಕ್ಯೂರ್

ಡಿಸೆಂಬರ್ 2024

ಅನಂತಪುರ, ಆಂಧ್ರಪ್ರದೇಶ

ಎಚ್‌ಡಿಎಫ್‌ಸಿ ಎರ್ಗೋ ನೀಡುವ ವಿವಿಧ ಪಾಲಿಸಿಗಳ ಬಗ್ಗೆ ಅವರ ವಿವರಣೆ ಮತ್ತು ಜ್ಞಾನಕ್ಕಾಗಿ ನಾನು ಅರವಿಂದ್‌ಗೆ ತುಂಬಾ ಕೃತಜ್ಞನಾಗಿದ್ದೇನೆ. ಅವರ ಹೋಲಿಕೆಯು ಸರಿಯಾದ ಪಾಲಿಸಿಯನ್ನು ಆಯ್ಕೆ ಮಾಡಲು ನನಗೆ ತುಂಬಾ ಸಹಾಯ ಮಾಡಿದೆ. ಸಧ್ಯಕ್ಕೆ ನಾನು ಎಚ್‌ಡಿಎಫ್‌ಸಿ ಆಪ್ಟಿಮಾ ಸೆಕ್ಯೂರ್‌ನೊಂದಿಗೆ ಮುಂದುವರೆಯುತ್ತಿದ್ದೇನೆ.

slider-left

ಇತ್ತೀಚಿನ ಹೆಲ್ತ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

slider-right
How is Osteoarthritis Detected?

How is Osteoarthritis Detected?

ಇನ್ನಷ್ಟು ತಿಳಿಯಿರಿ
8 ಮೇ 2025 ರಂದು ಪ್ರಕಟಿಸಲಾಗಿದೆ
How is Typhoid Detected?

How is Typhoid Detected?

ಇನ್ನಷ್ಟು ತಿಳಿಯಿರಿ
8 ಮೇ 2025 ರಂದು ಪ್ರಕಟಿಸಲಾಗಿದೆ
How is Leprosy Detected and Diagnosed Early

How is Leprosy Detected and Diagnosed Early

ಇನ್ನಷ್ಟು ತಿಳಿಯಿರಿ
8 ಮೇ 2025 ರಂದು ಪ್ರಕಟಿಸಲಾಗಿದೆ
How is Meningitis Detected? Key Tests Explained

How is Meningitis Detected? Key Tests Explained

ಇನ್ನಷ್ಟು ತಿಳಿಯಿರಿ
8 ಮೇ 2025 ರಂದು ಪ್ರಕಟಿಸಲಾಗಿದೆ
How is Psoriasis Detected? Symptoms and Diagnosis

How is Psoriasis Detected? Symptoms and Diagnosis

ಇನ್ನಷ್ಟು ತಿಳಿಯಿರಿ
8 ಮೇ 2025 ರಂದು ಪ್ರಕಟಿಸಲಾಗಿದೆ
slider-left

ಇತ್ತೀಚಿನ ಆರೋಗ್ಯ ಸುದ್ದಿಗಳು

slider-right
IRDAI Asks Health Insurance Companies to Standardise Premium Rates For Seniors2 ನಿಮಿಷದ ಓದು

ಹಿರಿಯರ ಪ್ರೀಮಿಯಂ ದರಗಳನ್ನು ಪ್ರಮಾಣೀಕೃತಗೊಳಿಸುವಂತೆ IRDAI ಹೆಲ್ತ್ ಇನ್ಶೂರೆನ್ಸ್ ಕಂಪನಿಗಳಿಗೆ ಸೂಚನೆ ನೀಡಿದೆ

ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಸ್ಕೀಮ್ ಮಾದರಿಯಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ದರಗಳನ್ನು ಪ್ರಮಾಣೀಕರಿಸಲು ಬೇಕಾದ ಕ್ರಮಗಳನ್ನು ಅಳವಡಿಸಿಕೊಳ್ಳುವಂತೆ ಭಾರತೀಯ ಇನ್ಶೂರೆನ್ಸ್ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ವು ಇನ್ಶೂರೆನ್ಸ್ ಕಂಪನಿಗಳಿಗೆ ನಿರ್ದೇಶಿಸಿದೆ.

ಇನ್ನಷ್ಟು ಓದಿ
ಫೆಬ್ರವರಿ 28, 2025 ರಂದು ಪ್ರಕಟಿಸಲಾಗಿದೆ
ICMR Warns Women are at Higher Risk of Cancer2 ನಿಮಿಷದ ಓದು

ಮಹಿಳೆಯರು ಕ್ಯಾನ್ಸರ್‌ನ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ICMR ಎಚ್ಚರಿಕೆ ನೀಡಿದೆ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಬಿಡುಗಡೆ ಮಾಡಿದ ಮತ್ತು ಲ್ಯಾನ್ಸೆಟ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿಯಂತೆ, ಕಳೆದ ದಶಕದಲ್ಲಿ ಕ್ಯಾನ್ಸರ್ ಪ್ರಕರಣಗಳು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬಂದಿವೆ ಮತ್ತು ಮುಂದಿನ ಎರಡು ದಶಕಗಳಲ್ಲಿ ಈ ಟ್ರೆಂಡ್ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಊಹಿಸಿವೆ. ಕ್ಯಾನ್ಸರ್ ಡಯಾಗ್ನಸಿಸ್ ಬಳಿಕ ಭಾರತದ ಪ್ರತಿ 5 ವ್ಯಕ್ತಿಗಳಲ್ಲಿ 3 ಜನರು ಸಾವಿಗೀಡಾಗುತ್ತಾರೆ ಎಂದು ಸಂಶೋಧಕರು ಅಧ್ಯಯನದಲ್ಲಿ ಕಂಡುಕೊಂಡಿದ್ದಾರೆ.

ಇನ್ನಷ್ಟು ಓದಿ
ಫೆಬ್ರವರಿ 28, 2025 ರಂದು ಪ್ರಕಟಿಸಲಾಗಿದೆ
India’s First Bird Flu Case in Cats Raises Health Concerns Among Humans2 ನಿಮಿಷದ ಓದು

ಭಾರತದ ಮೊದಲ ಹಕ್ಕಿ ಜ್ವರ ಪ್ರಕರಣವು ಬೆಕ್ಕುಗಳಲ್ಲಿ ಕಂಡುಬಂದಿದ್ದು, ಇದು ಮನುಷ್ಯರಲ್ಲಿ ಆರೋಗ್ಯದ ಕಳಕಳಿಗಳನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಭಾರತದ ಮಹಾರಾಷ್ಟ್ರ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಮರುಕಳಿಸಿದೆ. ಈ ಬಳಿಕ ಪೌಲ್ಟ್ರಿ ಫಾರ್ಮ್‌ಗಳಲ್ಲಿ ಕಣ್ಗಾವಲು ಮತ್ತು ಜೈವಿಕ ಭದ್ರತಾ ಪ್ರೋಟೋಕಾಲ್‌ಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳನ್ನು ಒತ್ತಾಯಿಸಿದೆ.

ಇನ್ನಷ್ಟು ಓದಿ
ಫೆಬ್ರವರಿ 28, 2025 ರಂದು ಪ್ರಕಟಿಸಲಾಗಿದೆ
Screening For Cervical Cancer Should Be An Integral Part of The Ayushman Arogya Mandirs, Says Minister2 ನಿಮಿಷದ ಓದು

Screening For Cervical Cancer Should Be An Integral Part of The Ayushman Arogya Mandirs, Says Minister

ಕೇಂದ್ರ ಆರೋಗ್ಯ ರಾಜ್ಯ ಸಚಿವrರಾದ ಪ್ರತಾಪ್‌ರಾವ್ ಜಾಧವ್ ಪ್ರಕಾರ ಭಾರತದಲ್ಲಿ ಗರ್ಭಾಶಯದ ಕ್ಯಾನ್ಸರ್‌ನಿಂದಾಗಿ ಸಾವುಗಳ ಸಂಖ್ಯೆ 2022 ರಲ್ಲಿ 34,806, 2021 ರಲ್ಲಿ 33,938, 2020 ರಲ್ಲಿ 33,095 ಮತ್ತು 2019 ರಲ್ಲಿ 32,246 ಆಗಿತ್ತು. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ-ರಾಷ್ಟ್ರೀಯ ಕ್ಯಾನ್ಸರ್ ನೋಂದಣಿ ಪ್ರೋಗ್ರಾಮ್ (ICMR-NCRP) ಒದಗಿಸಿದ ಇತ್ತೀಚಿನ ಡೇಟಾದ ಪ್ರಕಾರ ದೇಶದಲ್ಲಿ 2023 ರಲ್ಲಿ ಗರ್ಭಾಶಯದ ಕ್ಯಾನ್ಸರ್ ಪ್ರಕರಣಗಳಿಂದಾಗಿ ಅಂದಾಜು 35,691 ಜನರ ಸಾವು ಸಂಭವಿಸಿತ್ತು.

ಇನ್ನಷ್ಟು ತಿಳಿಯಿರಿ
ಫೆಬ್ರವರಿ 6, 2025 ರಂದು ಪ್ರಕಟಿಸಲಾಗಿದೆ
Researchers Praise India’s Food Assistance Program2 ನಿಮಿಷದ ಓದು

Researchers Praise India’s Food Assistance Program

Malnutrition in India has been a long-standing problem. Recently researchers at UC Santa Barbara, the Indian Institute of Management and the University of Calgary examined the impacts of the world’s largest food assistance program to understand its effectiveness. Their results, published in the American Economic Journal, reveal health and economic benefits that reach far beyond the caloric content of the subsidized food.

ಇನ್ನಷ್ಟು ತಿಳಿಯಿರಿ
ಫೆಬ್ರವರಿ 6, 2025 ರಂದು ಪ್ರಕಟಿಸಲಾಗಿದೆ
Budget 2025-26: Government Includes Gig Workers in Health Scheme2 ನಿಮಿಷದ ಓದು

ಬಜೆಟ್ 2025-26: ಸರ್ಕಾರವು ಆರೋಗ್ಯ ಸ್ಕೀಮ್‌ನಲ್ಲಿ GIG ಕೆಲಸಗಾರರನ್ನು ಸೇರಿಸಿದೆ

The union finance minister Nirmala Sitharaman announced in her Budget speech on Saturday that gig workers will be provided healthcare under the government’s flagship health assurance scheme Ayushman Bharat Pradhan Mantri Jan Arogya Yojana (AB-PMJAY).

ಇನ್ನಷ್ಟು ತಿಳಿಯಿರಿ
ಫೆಬ್ರವರಿ 6, 2025 ರಂದು ಪ್ರಕಟಿಸಲಾಗಿದೆ
slider-left

ನಮ್ಮ ವೆಲ್‌‌ನೆಸ್ ಸಲಹೆಗಳೊಂದಿಗೆ ಆರೋಗ್ಯಕರವಾಗಿರಿ ಮತ್ತು ಫಿಟ್ ಆಗಿರಿ

slider-right
Managing Cold and Cough During Monsoon

ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ನಿವಾರಣೆ

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
What are the Health Benefits of Blackberries

ಬ್ಲ್ಯಾಕ್‌ಬೆರಿಗಳ ಆರೋಗ್ಯ ಪ್ರಯೋಜನಗಳು ಯಾವುವು

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
Top 6 Benefits of Baobab Fruit and Powder

ಬಾವ್ಬಾಬ್ ಹಣ್ಣು ಮತ್ತು ಪೌಡರ್‌ನ ಪ್ರಮುಖ 6 ಪ್ರಯೋಜನಗಳು

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
 Yoga for Breast Cancer Patients

ಸ್ತನ ಕ್ಯಾನ್ಸರ್ ರೋಗಿಗಳಿಗೆ ಯೋಗ

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
How Yoga Can Help You Sleep Better?

ಯೋಗ ನಿಮಗೆ ಉತ್ತಮ ನಿದ್ರೆ ಮಾಡಲು ಹೇಗೆ ಸಹಾಯ ಮಾಡುತ್ತದೆ?

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
6 DHT Blocker Foods for Hair Loss

ಕೂದಲು ಉದುರುವುದನ್ನು ತಡೆಯಲು 6DHT ಬ್ಲಾಕರ್ ಆಹಾರ ಪದಾರ್ಥಗಳು

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
All About Cyclical Ketogenic Diet (CKD)

ಸೈಕ್ಲಿಕಲ್ ಕೀಟೋಜೆನಿಕ್ ಡಯಟ್ (CKD) ಬಗ್ಗೆ ಎಲ್ಲವೂ

ಇನ್ನಷ್ಟು ತಿಳಿಯಿರಿ
ಮಾರ್ಚ್ 28, 2025 ರಂದು ಪ್ರಕಟಿಸಲಾಗಿದೆ
ಓದಲು ಬೇಕಾದ ಅಂದಾಜು ಸಮಯ: 3 ನಿಮಿಷಗಳು
slider-left

ಹೆಲ್ತ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಹೌದು, ಪ್ರತ್ಯೇಕ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿರುವುದು ಮುಖ್ಯವಾಗಿದೆ. ನೀವು ಸಂಸ್ಥೆಯಲ್ಲಿ ಕೆಲಸ ಮಾಡುವವರೆಗೆ ಮಾತ್ರ ನಿಮ್ಮ ಉದ್ಯೋಗಿ ಹೆಲ್ತ್ ಇನ್ಶೂರೆನ್ಸ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. ನೀವು ಕಂಪನಿಯನ್ನು ಬಿಟ್ಟ ನಂತರ, ನಿಮ್ಮ ಪಾಲಿಸಿಯ ಅವಧಿ ಮುಗಿಯುತ್ತದೆ. ವೈದ್ಯಕೀಯ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ವೈದ್ಯಕೀಯ ಅಗತ್ಯಗಳಿಗೆ ಅನುಗುಣವಾಗಿ ಪರ್ಸನಲ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಮುಖ್ಯವಾಗಿದೆ. ಅಲ್ಲದೆ, ಕಾರ್ಪೊರೇಟ್ ಹೆಲ್ತ್ ಪ್ಲಾನ್ ಎಲ್ಲಾ ಉದ್ಯೋಗಿಗಳಿಗೆ ವಿನ್ಯಾಸಗೊಳಿಸಲಾದ ಒಂದು ಸಾಮಾನ್ಯ ಪ್ಲಾನ್ ಆಗಿದೆ.

ಹೆಲ್ತ್ ಇನ್ಶೂರೆನ್ಸ್ ಪೋರ್ಟಬಿಲಿಟಿಯು ಹೊಸ ಕಾಯುವ ಅವಧಿಯನ್ನು ಪೂರ್ಣಗೊಳಿಸದೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಬದಲಾಯಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಪ್ರಸ್ತುತ ಪ್ಲಾನ್ ಹೆಚ್ಚುತ್ತಿರುವ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಬೇಕಾದಷ್ಟು ಇಲ್ಲದಿದ್ದರೆ ಒಬ್ಬ ವಿಮಾದಾತರಿಂದ ಇನ್ನೊಂದಕ್ಕೆ ಸುಗಮ ಟ್ರಾನ್ಸ್‌ಫರ್ ಮಾಡಬಹುದು.

ನಗದುರಹಿತ ಆಸ್ಪತ್ರೆಗಳು ಎಂದು ಕರೆಯಲ್ಪಡುವ ನೆಟ್ವರ್ಕ್ ಆಸ್ಪತ್ರೆಗಳು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಒಪ್ಪಂದವನ್ನು ಹೊಂದಿವೆ, ಇದರಿಂದಾಗಿ ನೀವು ನಗದುರಹಿತ ಆಸ್ಪತ್ರೆ ದಾಖಲಾತಿ ಪ್ರಯೋಜನವನ್ನು ಪಡೆಯಬಹುದು. ಮತ್ತೊಂದೆಡೆ, ನೀವು ನೆಟ್ವರ್ಕ್-ಅಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ನೀವು ಮೊದಲು ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ರಿಯಂಬ್ರಸ್ಮೆಂಟ್ ಕ್ಲೈಮ್‌ಗೆ ಅಪ್ಲೈ ಮಾಡಬೇಕು. ಆದ್ದರಿಂದ, ದೊಡ್ಡ ನೆಟ್ವರ್ಕ್ ಆಸ್ಪತ್ರೆಯ ಟೈ-ಅಪ್ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಖರೀದಿಸುವುದು ಯಾವಾಗಲೂ ಸೂಕ್ತವಾಗಿರುತ್ತದೆ.

ನಗದುರಹಿತ ಆಸ್ಪತ್ರೆ ದಾಖಲಾತಿಯು ಒಂದು ವಿಧಾನವಾಗಿದ್ದು, ಇದರಲ್ಲಿ ಪಾಲಿಸಿದಾರರು ಆಸ್ಪತ್ರೆಗೆ ದಾಖಲಾದರೆ ಅಥವಾ ಶಸ್ತ್ರಚಿಕಿತ್ಸೆಗೆ ಒಳಗಾದರೆ ತಮ್ಮ ಜೇಬಿನಿಂದ ವೈದ್ಯಕೀಯ ವೆಚ್ಚಗಳನ್ನು ಪಾವತಿಸಬೇಕಾಗಿಲ್ಲ. ಆದಾಗ್ಯೂ, ಡಿಸ್ಚಾರ್ಜ್ ಸಮಯದಲ್ಲಿ ಕೆಲವು ಕಡಿತಗಳು ಅಥವಾ ವೈದ್ಯಕೀಯವಲ್ಲದ ವೆಚ್ಚಗಳಿವೆ, ಅವುಗಳನ್ನು ಪಾಲಿಸಿಯ ನಿಯಮಗಳಲ್ಲಿ ಸೇರಿಸಲಾಗಿಲ್ಲ, ಡಿಸ್ಚಾರ್ಜ್ ಸಮಯದಲ್ಲಿ ಅವುಗಳನ್ನು ಪಾವತಿಸಬೇಕಾಗುತ್ತದೆ.

ಒಂದು ವೇಳೆ ನೀವು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಿದ್ದರೆ, ಆಸ್ಪತ್ರೆ ದಾಖಲಾತಿಗೆ ಮುಂಚೆ ಡಯಾಗ್ನಸಿಸ್ ವೆಚ್ಚ, ಸಮಾಲೋಚನೆ, ಮುಂತಾದ ಕೆಲವು ವೆಚ್ಚಗಳು ಇರುತ್ತವೆ. ಹಾಗೆಯೇ, ಡಿಸ್ಚಾರ್ಜ್ ಆದ ನಂತರದ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಬೇಕಾದ ವೆಚ್ಚಗಳು ಇರಬಹುದು. ಈ ವೆಚ್ಚಗಳನ್ನು ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳು ಎಂದು ಕರೆಯಲಾಗುತ್ತದೆ.

ಪಾಲಿಸಿ ಅವಧಿಯಲ್ಲಿ ನೀವು ಎಷ್ಟು ಸಲ ಬೇಕಾದರೂ ಕ್ಲೈಮ್‌ಗಳನ್ನು ಫೈಲ್ ಮಾಡಬಹುದು. ಆದರೆ ಅದು ವಿಮಾ ಮೊತ್ತದ ಮಿತಿಯೊಳಗೆ ಇರಬೇಕಷ್ಟೆ. ಪಾಲಿಸಿದಾರರು ವಿಮಾ ಮೊತ್ತದವರೆಗೆ ಮಾತ್ರ ಕವರೇಜ್ ಪಡೆಯಬಹುದು.

ಹೌದು, ಒಂದಕ್ಕಿಂತ ಹೆಚ್ಚು ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಾಧ್ಯವಾಗುತ್ತದೆ. ಇದು ಸಂಪೂರ್ಣವಾಗಿ ವ್ಯಕ್ತಿಯ ಅಗತ್ಯತೆ ಮತ್ತು ಕವರೇಜ್ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ.

ಹೌದು, ಹೆಲ್ತ್ ಇನ್ಶೂರೆನ್ಸ್‌ನಲ್ಲಿ ಮೆಡಿಕಲ್ ಬಿಲ್‌ಗಳನ್ನು ಕ್ಲೈಮ್ ಮಾಡಬಹುದು. ಆದರೆ ಅದು ವಿಮಾ ಮೊತ್ತದ ಮಿತಿಯಲ್ಲಿ ಇರಬೇಕಷ್ಟೇ. ಹೆಚ್ಚಿನ ಮಾಹಿತಿಗಾಗಿ, ಪಾಲಿಸಿ ವರ್ಡಿಂಗ್ ಡಾಕ್ಯುಮೆಂಟ್ ಓದಿ.

ಎಲ್ಲಾ ಡಾಕ್ಯುಮೆಂಟ್‌ಗಳು ಸಿದ್ಧವಾಗಿದ್ದರೆ, ಕ್ಲೈಮ್ ಸೆಟಲ್ ಮಾಡಲು ಸಾಮಾನ್ಯವಾಗಿ 7 ಕೆಲಸದ ದಿನಗಳು ಬೇಕಾಗುತ್ತವೆ.

ನೀವು ವಿಮಾದಾತರ ಸೆಲ್ಫ್‌-ಹೆಲ್ಪ್ ಪೋರ್ಟಲ್‌ ಅಥವಾ ಮೊಬೈಲ್ ಆ್ಯಪ್‌ ಮೂಲಕ ನಿಮ್ಮ ಕ್ಲೈಮ್ ಸ್ಟೇಟಸ್ ಪರಿಶೀಲಿಸಬಹುದು.

ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಮೊದಲು ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಬಹುದು. ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ, ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯವಿದ್ದರೆ ಅಥವಾ 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ವೈದ್ಯಕೀಯ ಪರೀಕ್ಷೆಗಳು ಅಗತ್ಯವಿರುತ್ತವೆ.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಅಥವಾ ನವೀಕರಿಸುವ ಸಮಯದಲ್ಲಿ, ನೀವು ನಿಮ್ಮ ಕುಟುಂಬದ ಸದಸ್ಯರನ್ನು ಸೇರಿಸಬಹುದು.

ಹೌದು, ಮಕ್ಕಳನ್ನು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನಿಗೆ ಸೇರಿಸಬಹುದು. ಜನಿಸಿದ 90 ದಿನಗಳಿಂದ ಹಿಡಿದು 21 ಅಥವಾ 25 ವರ್ಷಗಳವರೆಗಿನ ಮಕ್ಕಳನ್ನು ಸೇರಿಸಬಹುದು. ಇದು ಕಂಪನಿಯಿಂದ ಕಂಪನಿಗೆ ಬದಲಾಗುತ್ತದೆ, ಆದ್ದರಿಂದ ದಯವಿಟ್ಟು ಪ್ರಾಡಕ್ಟ್ ಬ್ರೋಶರ್‌ನಿಂದ ಪ್ಲಾನ್ ಅರ್ಹತೆಯನ್ನು ನೋಡಿ.

ನೀವು ಕಡಿಮೆ ಪ್ರೀಮಿಯಂ ಮತ್ತು ಹೆಚ್ಚಿನ ಪ್ರಯೋಜನಗಳನ್ನು ಪಾವತಿಸಲು ಅರ್ಹರಾಗಿರುತ್ತೀರಿ. ಮೊದಲೇ ಅಸ್ತಿತ್ವದಲ್ಲಿರುವ ಅನಾರೋಗ್ಯವನ್ನು ಹೊಂದುವ ಸಾಧ್ಯತೆ ಕಡಿಮೆ ಇರುವುದರಿಂದ, ಕಾಯುವ ಅವಧಿಗಳು ನಿಮ್ಮ ಮೇಲೆ ಪರಿಣಾಮ ಬೀರುವುದಿಲ್ಲ. ಇದಲ್ಲದೆ, ಫ್ಲೂ ಅಥವಾ ಆಕಸ್ಮಿಕ ಗಾಯಗಳಂತಹ ಸಾಮಾನ್ಯ ರೋಗಗಳು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು, ಆದ್ದರಿಂದ ನೀವು ಯುವಕರಾಗಿದ್ದಾಗ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಮುಖ್ಯವಾಗಿದೆ.

ಹೌದು. ಪ್ರತಿಯೊಂದು ಪ್ಲಾನ್ ಭಿನ್ನವಾಗಿ ಕೆಲಸ ಮಾಡುತ್ತದೆ ಮತ್ತು ವಿವಿಧ ಪ್ರಯೋಜನಗಳನ್ನು ನೀಡುತ್ತದೆ. ಹಾಗಾಗಿ, ಅಗತ್ಯತೆ ಮತ್ತು ಕವರೇಜ್ ಅವಶ್ಯಕತೆಗಳ ಆಧಾರದ ಮೇಲೆ ನೀವು ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೊಂದಿರಬಹುದು.

ನಿರ್ದಿಷ್ಟ ಅನಾರೋಗ್ಯಕ್ಕಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಂದ ಹೆಲ್ತ್ ಇನ್ಶೂರೆನ್ಸ್‌ನ ಕೆಲವು ಅಥವಾ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲದ ಸಮಯವನ್ನು ಕಾಯುವ ಅವಧಿ ಎಂದು ಕರೆಯಲಾಗುತ್ತದೆ. ಆದ್ದರಿಂದ, ಮೂಲತಃ, ನೀವು ಕ್ಲೈಮ್‌ಗಾಗಿ ಕೋರಿಕೆ ಸಲ್ಲಿಸುವ ಮೊದಲು ನಿರ್ದಿಷ್ಟ ಸಮಯದವರೆಗೆ ಕಾಯಬೇಕು.

ಈ ಫ್ರೀ ಲುಕ್ ಅವಧಿಯಲ್ಲಿ, ನಿಮಗೆ ನಿಮ್ಮ ಪಾಲಿಸಿಯು ಪ್ರಯೋಜನಕಾರಿ ಎನಿಸದಿದ್ದರೆ, ಯಾವುದೇ ದಂಡ ಪಾವತಿಸದೆ ನಿಮ್ಮ ಪಾಲಿಸಿಯನ್ನು ರದ್ದುಪಡಿಸುವ ಆಯ್ಕೆಯೂ ನಿಮಗೆ ಇರುತ್ತದೆ. ಇನ್ಶೂರೆನ್ಸ್ ಕಂಪನಿ ಮತ್ತು ನೀಡಲಾದ ಪ್ಲಾನ್ ಆಧಾರದ ಮೇಲೆ, ಫ್ರೀ ಲುಕ್ ಅವಧಿಯು 10-15 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದವರೆಗೆ ಇರಬಹುದು. ಫ್ರೀ ಲುಕ್ ಅವಧಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇನ್ನಷ್ಟು ತಿಳಿಯಿರಿ ಓದಿರಿ.

ನಗದುರಹಿತ ಆಸ್ಪತ್ರೆಗಳು ಎಂದು ಕರೆಯಲ್ಪಡುವ ನೆಟ್ವರ್ಕ್ ಆಸ್ಪತ್ರೆಗಳು ನಿಮ್ಮ ಇನ್ಶೂರೆನ್ಸ್ ಕಂಪನಿಯೊಂದಿಗೆ ಒಪ್ಪಂದವನ್ನು ಹೊಂದಿವೆ, ಇದರಿಂದಾಗಿ ನೀವು ನಗದುರಹಿತ ಆಸ್ಪತ್ರೆ ದಾಖಲಾತಿ ಪ್ರಯೋಜನವನ್ನು ಪಡೆಯಬಹುದು. ಮತ್ತೊಂದೆಡೆ, ನೀವು ನೆಟ್ವರ್ಕ್-ಅಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ನೀವು ಮೊದಲು ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ರಿಯಂಬ್ರಸ್ಮೆಂಟ್ ಕ್ಲೈಮ್‌ಗೆ ಅಪ್ಲೈ ಮಾಡಬೇಕು. ಆದ್ದರಿಂದ, ದೊಡ್ಡ ನೆಟ್ವರ್ಕ್ ಆಸ್ಪತ್ರೆಯ ಟೈ-ಅಪ್ ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಖರೀದಿಸುವುದು ಯಾವಾಗಲೂ ಸೂಕ್ತವಾಗಿರುತ್ತದೆ.

ಪಾಲಿಸಿದಾರರು ಆಸ್ಪತ್ರೆಗೆ ದಾಖಲಾಗದ ಸ್ಥಿತಿಯಲ್ಲಿದ್ದಾಗ ಅಥವಾ ಆಸ್ಪತ್ರೆಯಲ್ಲಿ ರೂಮ್ ಲಭ್ಯವಿಲ್ಲದ ಕಾರಣದಿಂದಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ತೆಗೆದುಕೊಳ್ಳಲಾಗುತ್ತದೆ, ಇದನ್ನು ಡೊಮಿಸಿಲಿಯರಿ ಆಸ್ಪತ್ರೆ ದಾಖಲಾತಿ ಎಂದು ಕರೆಯಲಾಗುತ್ತದೆ

ಆಸ್ಪತ್ರೆ ದಾಖಲಾತಿ ಕವರ್‌ನಲ್ಲಿ, ನಿಮ್ಮ ಡಯಾಗ್ನಸ್ಟಿಕ್ ಟೆಸ್ಟ್‌ಗಳು, ಸಮಾಲೋಚನೆಗಳು ಮತ್ತು ಔಷಧಿ ವೆಚ್ಚಗಳು, ಮುಂತಾದ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ನಾವು ICU, ಬೆಡ್ ಶುಲ್ಕಗಳು, ಔಷಧಿ ವೆಚ್ಚ, ನರ್ಸಿಂಗ್ ಶುಲ್ಕಗಳು ಮತ್ತು ಆಪರೇಶನ್ ಥಿಯೇಟರ್ ವೆಚ್ಚಗಳನ್ನೂವ್ಯಾಪಕವಾಗಿ ಕವರ್ ಮಾಡುತ್ತೇವೆ.

ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯಾವುದೇ ಸರಿಯಾದ ಅಥವಾ ಸರಿಯಲ್ಲದ ವಯಸ್ಸು ಎಂಬುದು ಇಲ್ಲ. ಆದಾಗ್ಯೂ, ಕಡಿಮೆ ಪ್ರೀಮಿಯಂಗಳನ್ನು ಪಡೆಯಲು ಮುಂಚಿತವಾಗಿ ಹೆಲ್ತ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಒಮ್ಮೆ ನೀವು 18 ವರ್ಷ ವಯಸ್ಸನ್ನು ತಲುಪಿದ ತಂತರ, ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಅದಕ್ಕಿಂತ ಮೊದಲು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಹೆಲ್ತ್‌ಕೇರ್ ವೆಚ್ಚಗಳನ್ನು ಕವರ್ ಮಾಡಬಹುದು.

ಇಲ್ಲ, ಅಪ್ರಾಪ್ತರು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ. ಆದರೆ ಅವರು ತಮ್ಮ ಪೋಷಕರು ಖರೀದಿಸಿದ ಫ್ಯಾಮಿಲಿ ಫ್ಲೋಟರ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗಬಹುದು

ಒಂದು ವೇಳೆ ನೀವು ನೆಟ್ವರ್ಕ್ ಅಲ್ಲದ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಮೊದಲು ನಿಮ್ಮ ಜೇಬಿನಿಂದ ಬಿಲ್‌ಗಳನ್ನು ಪಾವತಿಸಬೇಕು ಮತ್ತು ನಂತರ ನಿಮ್ಮ ಇನ್ಶೂರೆನ್ಸ್ ಕಂಪನಿಯಿಂದ ರಿಯಂಬ್ರಸ್ಮೆಂಟ್ ಕ್ಲೈಮ್ ಮಾಡಬೇಕು. ಆದಾಗ್ಯೂ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯು ವಿಮಾ ಮೊತ್ತದವರೆಗೆ ಮಾತ್ರ ಮರುಪಾವತಿಯನ್ನು ಒದಗಿಸುತ್ತದೆ. 

ವಾರ್ಷಿಕ ವಿಮಾ ಮೊತ್ತವು ಒಂದು ನೀಡಲಾದ ಪಾಲಿಸಿ ವರ್ಷದಲ್ಲಿ ಸ್ವೀಕಾರಾರ್ಹ ವೈದ್ಯಕೀಯ ವೆಚ್ಚಗಳಿಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾವತಿಸುವ ಗರಿಷ್ಠ ಮೊತ್ತವಾಗಿದೆ. ಉದಾಹರಣೆಗೆ, ವಾರ್ಷಿಕ ವಿಮಾ ಮೊತ್ತವು ₹5 ಲಕ್ಷವಾಗಿದ್ದರೆ ಮತ್ತು ನೀವು ಆಸ್ಪತ್ರೆಗೆ ದಾಖಲಾಗಬೇಕಾದ ಅನಾರೋಗ್ಯದಿಂದ ಬಳಲುತ್ತಿದ್ದರೆ ಮತ್ತು ಬಿಲ್ ಸುಮಾರು ₹6 ಲಕ್ಷವಾಗಿದ್ದರೆ, ವಿಮಾದಾತರು ₹5 ಲಕ್ಷವನ್ನು ಮಾತ್ರ ಪಾವತಿಸುತ್ತಾರೆ.

ಹೌದು, ವಿಮಾ ಮೊತ್ತದ [SI] ಮೊತ್ತದ ಹೆಚ್ಚಿಸಿದ ಭಾಗಕ್ಕೆ ಕಾಯುವ ಅವಧಿಗಳು ಹೊಸದಾಗಿ ಅನ್ವಯವಾಗುತ್ತವೆ. ಒಂದು ವೇಳೆ ನಿಮ್ಮ ಮೂಲ ವಿಮಾ ಮೊತ್ತವು ₹5 ಲಕ್ಷವಾಗಿದ್ದರೆ, ಮತ್ತು ಘೋಷಿತ ಮುಂಚಿತ-ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಗೆ [PED] ಪ್ಲಾನ್ 3 ವರ್ಷದ ಕಾಯುವ ಅವಧಿಯನ್ನು ಹೊಂದಿದ್ದರೆ. ಒಂದು ವರ್ಷದ ನಂತರ, ನವೀಕರಣದ ಸಮಯದಲ್ಲಿ ನೀವು ವಿಮಾ ಮೊತ್ತವನ್ನು ₹5 ಲಕ್ಷದಿಂದ ₹15 ಲಕ್ಷಕ್ಕೆ ಹೆಚ್ಚಿಸಿದರೆ, ನಂತರ ಮೂಲ SI ₹5 ಲಕ್ಷಕ್ಕೆ 2 ವರ್ಷಗಳ PED ಕಾಯುವ ಅವಧಿ ಅನ್ವಯವಾಗುತ್ತದೆ, ಆದರೆ ಹೆಚ್ಚಿದ ₹10 ಲಕ್ಷ ಭಾಗಕ್ಕೆ 3 ವರ್ಷಗಳ ಹೊಸ PED ಕಾಯುವ ಅವಧಿ ಅನ್ವಯವಾಗುತ್ತದೆ.

ಹೌದು. ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ಡಿಸ್ಚಾರ್ಜ್ ನಂತರದ ಡಯಾಗ್ನಸ್ಟಿಕ್ ಶುಲ್ಕಗಳನ್ನು ಕವರ್ ಮಾಡುತ್ತವೆ.

ಎಲ್ಲಾ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಆಸ್ಪತ್ರೆ ದಾಖಲಾತಿ ಸಮಯದ, ಆಸ್ಪತ್ರೆ ದಾಖಲಾತಿಗೆ ಮುಂಚಿನ ಮತ್ತು ಡಿಸ್ಚಾರ್ಜ್ ನಂತರದ ಡಯಾಗ್ನಸ್ಟಿಕ್ ಶುಲ್ಕಗಳನ್ನು ಕವರ್ ಮಾಡುತ್ತವೆ.

ಹೌದು. ನಿಮ್ಮ ನಿರ್ದಿಷ್ಟ ಕಾಯುವ ಅವಧಿಯು ಮುಗಿದ ನಂತರ ನಿಮಗೆ ಮೊದಲೇ ಇದ್ದ ಕಾಯಿಲೆಗಳಿಗೆ ಕವರೇಜ್ ಸಿಗುತ್ತದೆ. ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳಿಗೆ ಕವರೇಜ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಈ ಬ್ಲಾಗನ್ನು ಓದಿ.

ನೀವು ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಪರಿಶೀಲಿಸಬೇಕು ಹಾಗೂ ಅವರ ಹೆಸರು ಮತ್ತು ವಯಸ್ಸನ್ನು ನಮೂದಿಸುವ ಮೂಲಕ ನಿಮ್ಮ ಕುಟುಂಬ ಸದಸ್ಯರನ್ನು ನೋಂದಾಯಿಸಬೇಕು.

ಆನ್ಲೈನ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಆಫ್ಲೈನಿನಲ್ಲಿ ಖರೀದಿಸುವುದಕ್ಕಿಂತ ಭಿನ್ನವಾಗಿಲ್ಲ. ವಾಸ್ತವವಾಗಿ ಆನ್ಲೈನ್ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ತ್ವರಿತ ಮತ್ತು ತೊಂದರೆ ರಹಿತವಾಗಿದೆ. ಕೊರಿಯರ್/ಪೋಸ್ಟಲ್ ಸೇವೆಗಳ ಮೂಲಕ ನಗದುರಹಿತ ಕಾರ್ಡನ್ನು ನಿಮಗೆ ಒದಗಿಸಲಾಗುತ್ತದೆ. ಇನ್ನಷ್ಟು ತಿಳಿದುಕೊಳ್ಳಲು, ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಡಯಲ್ ಮಾಡಿ.

ರಕ್ತ ಪರೀಕ್ಷೆ, CT ಸ್ಕ್ಯಾನ್, MRI, ಸೋನೋಗ್ರಫಿ ಮುಂತಾದ ಪ್ರಮುಖ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಆಸ್ಪತ್ರೆ ರೂಮ್ ಬಾಡಿಗೆ, ಬೆಡ್ ಶುಲ್ಕಗಳು, ನರ್ಸಿಂಗ್ ಶುಲ್ಕಗಳು, ಔಷಧಿಗಳು ಮತ್ತು ವೈದ್ಯರ ಭೇಟಿಗಳು ಇತ್ಯಾದಿಗಳನ್ನು ಸಹ ಕವರ್ ಮಾಡಬಹುದು.

ಹೌದು. ಇದು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ಆಧುನಿಕ ಚಿಕಿತ್ಸೆ ಮತ್ತು ರೋಬೋಟಿಕ್ ಶಸ್ತ್ರಚಿಕಿತ್ಸೆಗಳಿಗೆ ಕವರೇಜನ್ನು ಒದಗಿಸುತ್ತವೆ.

ಹೌದು. ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಕೊರೋನಾ ವೈರಸ್ (ಕೋವಿಡ್-19) ಗಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ಕವರ್ ಮಾಡುತ್ತದೆ. ಕೋವಿಡ್-19 ಚಿಕಿತ್ಸೆಗಾಗಿ ಪಾಲಿಸಿ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾಗುವುದಕ್ಕಾಗಿ ನಾವು ಈ ಕೆಳಗಿನ ವೈದ್ಯಕೀಯ ವೆಚ್ಚಗಳನ್ನು ಪಾವತಿಸುತ್ತೇವೆ:

ಒಂದು ವೇಳೆ ನೀವು 24 ಗಂಟೆಗಳಿಗಿಂತ ಹೆಚ್ಚು ಸಮಯದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದರೆ, ನಿಮ್ಮ ವೈದ್ಯಕೀಯ ಬಿಲ್‌ಗಳನ್ನು ನಮ್ಮಿಂದ ಕವರ್ ಮಾಡಲಾಗುತ್ತದೆ. ನಾವು ಅದರ ಕಾಳಜಿ ವಹಿಸುತ್ತೇವೆ:

• ಉಳಿದುಕೊಳ್ಳುವ ಶುಲ್ಕಗಳು (ಐಸೋಲೇಶನ್ ರೂಮ್ / ICU)

• ನರ್ಸಿಂಗ್ ಶುಲ್ಕಗಳು

• ಚಿಕಿತ್ಸೆ ನೀಡುವ ಡಾಕ್ಟರ್ ಭೇಟಿಯ ಶುಲ್ಕಗಳು

• ತಪಾಸಣೆಗಳು (ಲ್ಯಾಬ್‌ಗಳು/ರೇಡಿಯಲಾಜಿಕಲ್)

• ಆಕ್ಸಿಜನ್ / ಮೆಕ್ಯಾನಿಕಲ್ ವೆಂಟಿಲೇಶನ್ ಶುಲ್ಕಗಳು (ಅಗತ್ಯವಿದ್ದರೆ)

• ರಕ್ತ / ಪ್ಲಾಸ್ಮಾ ಶುಲ್ಕಗಳು (ಅಗತ್ಯವಿದ್ದರೆ)

• ಫಿಸಿಯೋಥೆರಪಿ (ಅಗತ್ಯವಿದ್ದರೆ)

• ಫಾರ್ಮಸಿ (ವೈದ್ಯಕೀಯ-ಅಲ್ಲದ/ಅಗತ್ಯ ವೈದ್ಯಕೀಯ ವಸ್ತುಗಳನ್ನು ಹೊರತುಪಡಿಸಿ)

• PPE ಕಿಟ್ ಶುಲ್ಕಗಳು (ಸರ್ಕಾರಿ ಮಾರ್ಗಸೂಚಿಗಳ ಪ್ರಕಾರ)

ಇಲ್ಲ, ನಮ್ಮ ಹೆಲ್ತ್ ಪಾಲಿಸಿಗಳಲ್ಲಿ ಹೋಮ್ ಐಸೋಲೇಶನ್ ಕವರ್ ಆಗುವುದಿಲ್ಲ. ಆಸ್ಪತ್ರೆ ಅಥವಾ ನರ್ಸಿಂಗ್ ಹೋಮ್‌ನಲ್ಲಿ ಕೈಗೊಳ್ಳಲಾದ ವೈದ್ಯಕೀಯ ಚಿಕಿತ್ಸೆಗಾಗಿ ಮಾತ್ರ ನೀವು ಕ್ಲೈಮ್ ಮಾಡಬಹುದು. ಚಿಕಿತ್ಸೆಯು ಸಲಹೆಯ ಮೇಲೆ ಇರಬೇಕು ಮತ್ತು ಅರ್ಹ ವೈದ್ಯರು ಸಕ್ರಿಯವಾಗಿ ನಿರ್ವಹಿಸಬೇಕು.

ಪಾಲಿಸಿಯ ಅಡಿಯಲ್ಲಿ ಕವರ್ ಆಗಿರುವ ಪ್ರತಿ ಇನ್ಶೂರ್ಡ್ ಸದಸ್ಯರಿಗೆ ಆಸ್ಪತ್ರೆಗೆ ದಾಖಲಾದರೆ ಮಾತ್ರ ಪರೀಕ್ಷಾ ಶುಲ್ಕಗಳನ್ನು ಕವರ್ ಮಾಡಲಾಗುತ್ತದೆ.

ಮಗು ಜನಿಸಿದ 90 ದಿನಗಳ ಬಳಿಕ ಮತ್ತು 25 ವರ್ಷ ವಯಸ್ಸಿನವರೆಗೆ ನಿಮ್ಮನ್ನು ಅವಲಂಬಿಸಿದ ಮಕ್ಕಳನ್ನು ನೀವು ಫ್ಯಾಮಿಲಿ ಫ್ಲೋಟರ್ ಪಾಲಿಸಿಯಲ್ಲಿ ಸೇರಿಸಬಹುದು.

ಇದನ್ನು ಮಾಡಬಹುದು. ನಾಮಿನಿ ವಿವರಗಳಲ್ಲಿ ಬದಲಾವಣೆಗಾಗಿ ಪಾಲಿಸಿದಾರರು ಅನುಮೋದನೆ ಕೋರಿಕೆಯನ್ನು ಸಲ್ಲಿಸಬೇಕು.

ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ನಿಮ್ಮ ಪಾಲಿಸಿ ಅವಧಿ ಮುಗಿದರೆ ಚಿಂತಿಸಬೇಡಿ, ಏಕೆಂದರೆ ಪಾಲಿಸಿ ಲ್ಯಾಪ್ಸ್ ಆದ ನಂತರ ನೀವು 30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ಆದಾಗ್ಯೂ, ಗ್ರೇಸ್ ಅವಧಿಯೊಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸದಿದ್ದರೆ ಮತ್ತು ಗ್ರೇಸ್ ಅವಧಿಯ ನಂತರ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯ ಉಂಟಾದರೆ, ನೀವು ವೈದ್ಯಕೀಯ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ.

ಪ್ರತಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಆರಂಭದಲ್ಲಿ, ಕಾಯುವ ಅವಧಿಗಳನ್ನು ಅನ್ವಯಿಸಲಾಗುತ್ತದೆ. ಇದು ನವೀಕರಣದೊಂದಿಗೆ ಬದಲಾಗುವುದಿಲ್ಲ. ಆದಾಗ್ಯೂ, ಪ್ರತಿ ನವೀಕರಣದಲ್ಲಿ, ನೀವು ಯಾವುದೇ ಕಾಯುವ ಅವಧಿಯನ್ನು ಹೊಂದಿಲ್ಲದಿರುವಾಗ ಮತ್ತು ಹೆಚ್ಚಿನ ಚಿಕಿತ್ಸೆಗಳನ್ನು ಕವರೇಜ್ ಒಳಗೊಂಡಿರುವವರೆಗೆ ಕಾಯುವ ಅವಧಿಯನ್ನು ಮನ್ನಾ ಮಾಡಲಾಗುತ್ತದೆ.

ನಿಮ್ಮ ಮಗು ಭಾರತೀಯ ನಾಗರಿಕರಾಗಿದ್ದರೆ, ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಇಲ್ಲದಿದ್ದರೆ, ನೀವು ನಿಮ್ಮ ಮಗುವಿಗೆ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡಬೇಕು.

ತಂಬಾಕು ಬಳಕೆದಾರರು ಹೆಚ್ಚಿನ ಆರೋಗ್ಯ ಅಪಾಯಗಳಿಗೆ ಗುರಿಯಾಗುತ್ತಾರೆ. ಯಾವುದೇ ರೂಪದಲ್ಲಿ ತಂಬಾಕನ್ನು ಬಳಸಿದರೆ, ವ್ಯಕ್ತಿಯ ಜೀವನದಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಮತ್ತು ಇದರರ್ಥ ನೀವು ಚಿಕಿತ್ಸೆಯ ವೆಚ್ಚವನ್ನು ಕ್ಲೈಮ್ ಮಾಡಬೇಕಾಗಬಹುದು. ಆದ್ದರಿಂದ, ಈ ವ್ಯಕ್ತಿಗಳನ್ನು ಇನ್ಶೂರೆನ್ಸ್ ಕಂಪನಿಯಿಂದ ಹೆಚ್ಚಿನ ಅಪಾಯವಾಗಿ ವರ್ಗೀಕರಿಸಲಾಗುತ್ತದೆ ಮತ್ತು ಅವರಿಂದ ಹೆಚ್ಚಿನ ಪ್ರೀಮಿಯಂಗಳನ್ನು ವಿಧಿಸಲಾಗುತ್ತದೆ.

ಒಬ್ಬ ವ್ಯಕ್ತಿಯು ಫಿಟ್ ಆಗಿ ಇದ್ದ ಕಾರಣದಿಂದಾಗಿ ಮತ್ತು ಕ್ಲೈಮ್ ಫೈಲ್ ಮಾಡದಿರುವ ಕಾರಣದಿಂದಾಗಿ ಪಡೆಯುವ ಮೊತ್ತವನ್ನು ಬೋನಸ್/ರಿವಾರ್ಡ್ ಅನ್ನು ಒಟ್ಟುಗೂಡಿಸಿದ ಬೋನಸ್ ಎಂದು ಕರೆಯಲಾಗುತ್ತದೆ. ಪ್ರತಿ ಕ್ಲೈಮ್-ರಹಿತ ವರ್ಷಕ್ಕೆ ಒಂದು ನಿರ್ದಿಷ್ಟ ವರ್ಷದವರೆಗೆ ಮಾತ್ರ ವಿಮಾ ಮೊತ್ತವನ್ನು ಹೆಚ್ಚಿಸುವ ಮೂಲಕ ನವೀಕರಣ ವರ್ಷದಲ್ಲಿ ಒಟ್ಟುಗೂಡಿಸಿದ ಬೋನಸ್ ಪ್ರಯೋಜನವನ್ನು ನೀಡಲಾಗುತ್ತದೆ. ಯಾವುದೇ ಹೆಚ್ಚುವರಿ ಮೊತ್ತವನ್ನು ಪಾವತಿಸದೆ ಹೆಚ್ಚಿನ ವಿಮಾ ಮೊತ್ತವನ್ನು ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಒಂದೇ ಹೆಲ್ತ್ ಪ್ಲಾನ್ ಅಡಿಯಲ್ಲಿ ನೀವು 2 ಅಥವಾ ಅದಕ್ಕಿಂತ ಹೆಚ್ಚು ಕುಟುಂಬದ ಸದಸ್ಯರನ್ನು ಕವರ್ ಮಾಡಿದರೆ ಅನೇಕ ಕಂಪನಿಗಳು ಫ್ಯಾಮಿಲಿ ರಿಯಾಯಿತಿಯನ್ನು ನೀಡಬಹುದು. 2-3 ವರ್ಷಗಳಿಗಿಂತ ಹೆಚ್ಚಿನ ಸಮಯಕ್ಕೆ ಹೆಲ್ತ್ ಇನ್ಶೂರೆನ್ಸ್ ಖರೀದಿಸಿದಾಗ ದೀರ್ಘಾವಧಿಯ ಪಾಲಿಸಿ ರಿಯಾಯಿತಿಗಳನ್ನು ಕೂಡ ಪಡೆದುಕೊಳ್ಳಬಹುದು. ಕೆಲವು ವಿಮಾದಾತರು ನವೀಕರಣಗಳಲ್ಲಿ ಫಿಟ್ನೆಸ್ ರಿಯಾಯಿತಿಗಳನ್ನು ಕೂಡ ನೀಡುತ್ತಾರೆ.

ಇಲ್ಲ. ಭಾರತೀಯ ನಾಗರಿಕರು ಮಾತ್ರ ದೇಶದಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಬಹುದು.

ಫ್ರೀ ಲುಕ್ ಅವಧಿಯೊಳಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ರದ್ದುಗೊಳಿಸಿದರೆ, ಅಂಡರ್‌ರೈಟಿಂಗ್ ವೆಚ್ಚ ಮತ್ತು ಮುಂಚಿತ-ಅಂಗೀಕಾರದ ವೈದ್ಯಕೀಯ ವೆಚ್ಚಗಳನ್ನು ಸರಿಹೊಂದಿಸಿದ ನಂತರ ನಿಮ್ಮ ಪ್ರೀಮಿಯಂಗಳನ್ನು ನಿಮಗೆ ರಿಫಂಡ್ ಮಾಡಲಾಗುತ್ತದೆ.

ಹೌದು. ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿ ಮತ್ತು ನೆಟ್ವರ್ಕ್ ಆಸ್ಪತ್ರೆಗಳ ನಡುವೆ ಪೂರ್ವ-ನಿರ್ಧರಿತ ಒಪ್ಪಂದವಿರುತ್ತದೆ ಮತ್ತು ಇದರಿಂದಾಗಿ ಪ್ರತಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ನಗದುರಹಿತ ಚಿಕಿತ್ಸೆ ಸೌಲಭ್ಯ ಲಭ್ಯವಿದೆ.

ನಿಮ್ಮ ವಿಮಾ ಮೊತ್ತವು ಮುಗಿಯುವವರೆಗೆ, ನೀವು ಬಯಸುವಷ್ಟು ಬಾರಿ ಕ್ಲೈಮ್ ಮಾಡಬಹುದು. ವಿಮಾ ಮೊತ್ತವು ಮುಗಿದ ನಂತರ ನಿಮಗೆ ಸಹಾಯ ಮಾಡುವ ಪ್ಲಾನ್‌ಗಳನ್ನು ಖರೀದಿಸುವುದು ಉತ್ತಮ ಮಾರ್ಗವಾಗಿದೆ. ಇದು ಒಂದು ವರ್ಷದಲ್ಲಿ ಹೆಚ್ಚಿನ ಕ್ಲೈಮ್‌ಗಳನ್ನು ನೋಂದಾಯಿಸಲು ನಿಮಗೆ ಸಹಾಯ ಮಾಡುತ್ತದೆ.

ಹೌದು. ಪಾಲಿಸಿದಾರರು ಹೊರಗಿಡಲಾದ ಕಾಯಿಲೆ/ ರೋಗಕ್ಕಾಗಿ ಕ್ಲೈಮ್ ಫೈಲ್ ಮಾಡಿದರೆ, ಅದು ಕಾಯುವ ಅವಧಿಯಲ್ಲಿ ಬರುತ್ತಿದ್ದರೆ ಅಥವಾ ವಿಮಾ ಮೊತ್ತವನ್ನು ಈಗಾಗಲೇ ಬಳಸಿದ್ದರೆ ನಗದುರಹಿತ ಕ್ಲೈಮ್‌ಗಾಗಿ ಪೂರ್ವ-ಅಧಿಕೃತ ಕೋರಿಕೆಯನ್ನು ತಿರಸ್ಕರಿಸಬಹುದು.

ರಿಯಂಬ್ರಸ್ಮೆಂಟ್ ಕ್ಲೈಮ್‌ಗಳ ಸಂದರ್ಭದಲ್ಲಿ, ಡಿಸ್ಚಾರ್ಜ್ ನಂತರ 30 ದಿನಗಳ ಅವಧಿಯೊಳಗೆ ಇನ್ಶೂರೆನ್ಸ್ ಕಂಪನಿಗೆ ತಿಳಿಸಬೇಕು.

ಇನ್ಶೂರೆನ್ಸ್ ಕಂಪನಿಯು ಒಟ್ಟು ಕ್ಲೈಮ್‌ಗಳಿಂದ ಒಂದು ಹಣಕಾಸು ವರ್ಷದಲ್ಲಿ ಪಾವತಿಸಿದ ಕ್ಲೈಮ್‌ಗಳ ಸಂಖ್ಯೆಯ ಶೇಕಡಾವಾರನ್ನು ಕ್ಲೈಮ್ ಸೆಟಲ್ಮೆಂಟ್ ಅನುಪಾತ (ಸಿಎಸ್ಆರ್) ಎಂದು ಕರೆಯಲಾಗುತ್ತದೆ. ವಿಮಾದಾತರು ತನ್ನ ಕ್ಲೈಮ್‌ಗಳಿಗೆ ಪಾವತಿಸಲು ಆರ್ಥಿಕವಾಗಿ ಸಾಕಷ್ಟು ಸುರಕ್ಷಿತವಾಗಿದ್ದಾರೆ ಎಂಬುದನ್ನು ಇದು ಪ್ರತಿಬಿಂಬಿಸುತ್ತದೆ.

 

ನಿಮ್ಮ ಪಾಲಿಸಿ ಅವಧಿಯು ಸಾಮಾನ್ಯವಾಗಿ ಮುಂದುವರೆಯುತ್ತದೆ, ಆದರೆ ನೀವು ಕ್ಲೈಮ್ ಮಾಡಿದ ಮೊತ್ತವು ನಿಮ್ಮ ವಿಮಾ ಮೊತ್ತದಿಂದ ಕಡಿತಗೊಳ್ಳುತ್ತದೆ. ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನವೀಕರಣದ ನಂತರ, ನವೀಕರಣದ ಸಮಯದಲ್ಲಿ ನೀವು ಆಯ್ಕೆ ಮಾಡಿದ ಮೊತ್ತಕ್ಕೆ ನಿಮ್ಮ ವಿಮಾ ಮೊತ್ತವನ್ನು ಮತ್ತೊಮ್ಮೆ ಹಿಂತಿರುಗಿಸಲಾಗುತ್ತದೆ.

ಇದು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತದೆ. ನೀವು ₹1 ಕೋಟಿಯ ಹೆಲ್ತ್ ಕವರ್ ಹೊಂದಿದ್ದರೆ, ಇದು ಸಾಧ್ಯವಾದಷ್ಟು ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.

ನೆಟ್ವರ್ಕ್ ಆಸ್ಪತ್ರೆ ಅಥವಾ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಕಂಪನಿಯಲ್ಲಿ ಇನ್ಶೂರೆನ್ಸ್ ಇಲಾಖೆಯನ್ನು ಸಂಪರ್ಕಿಸುವ ಮೂಲಕ ನಗದುರಹಿತ ಕ್ಲೈಮ್ ಕೋರಿಕೆಯನ್ನು ಸಲ್ಲಿಸಬಹುದು. ರಿಯಂಬ್ರಸ್ಮೆಂಟ್ ಕ್ಲೈಮ್‌ಗಳಿಗಾಗಿ, ಡಿಸ್ಚಾರ್ಜ್ ಆದ ನಂತರ, ನೀವು ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರಿಗೆ ಇನ್ವಾಯ್ಸ್‌ಗಳನ್ನು ಕಳುಹಿಸಬೇಕು.

ಡಿಸ್ಚಾರ್ಜ್ ನಂತರ 30 ದಿನಗಳ ಒಳಗೆ. ಯಾವುದೇ ವಿಳಂಬವಿಲ್ಲದೆ ಸಾಧ್ಯವಾದಷ್ಟು ಬೇಗ ಇನ್ಶೂರೆನ್ಸ್ ಪೂರೈಕೆದಾರರೊಂದಿಗೆ ಕ್ಲೈಮ್ ಮಾಡಬೇಕು.

ಮೆಡಿಕ್ಲೈಮ್ ಪ್ರಕ್ರಿಯೆಯು ಒಂದು ಆಧುನಿಕ ರಿಯಂಬ್ರಸ್ಮೆಂಟ್ ಪ್ರಕ್ರಿಯೆಯಾಗಿದ್ದು, ಇದರಲ್ಲಿ ನೀವು ಡಿಸ್ಚಾರ್ಜ್ ನಂತರ ಮೂಲ ಬಿಲ್‌ಗಳು ಮತ್ತು ಚಿಕಿತ್ಸೆ ಡಾಕ್ಯುಮೆಂಟ್‌ಗಳನ್ನು ನೀಡುವ ಮೂಲಕ ಕ್ಲೈಮ್ ಸಲ್ಲಿಸುತ್ತೀರಿ.

ಕಾಯುವ ಅವಧಿಗಳು ಪಾಲಿಸಿಯ ನಿಯಮ ಮತ್ತು ಷರತ್ತುಗಳನ್ನು ಅವಲಂಬಿಸಿರುತ್ತವೆ. ನಿರ್ದಿಷ್ಟ ಕಾಯಿಲೆಗಳು/ರೋಗಗಳಿಗೆ ಕಾಯುವ ಅವಧಿ ಇದೆ, ಅದು 2-4 ವರ್ಷಗಳವರೆಗೆ ಇರಬಹುದು.

ನೀವು www.hdfcergo.com ಗೆ ಭೇಟಿ ನೀಡಬಹುದು ಅಥವಾ ನಮ್ಮ ಸಹಾಯವಾಣಿ 022 62346234/0120 62346234 ಗೆ ಕರೆ ಮಾಡಿ ಕೋವಿಡ್-19 ಗಾಗಿ ಹೆಲ್ತ್ ಇನ್ಶೂರೆನ್ಸ್ ಅನ್ನು ಕ್ಲೈಮ್ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿ ಹೆಚ್ಚು ಓದಿ.

ನೀವು ನಾನ್-ನೆಟ್ವರ್ಕ್ ಆಸ್ಪತ್ರೆಗೆ ದಾಖಲಾದಾಗ, ಮೊದಲು ಬಿಲ್‌ ಪಾವತಿಸಿ, ನಂತರ ವೆಚ್ಚ ಮರಳಿ ಪಡೆಯಲು ಕ್ಲೈಮ್ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋ ಸುಮಾರು 15000+ ನಗದುರಹಿತ ನೆಟ್ವರ್ಕ್ ಹೊಂದಿದೆ.

ಈ ಎಲ್ಲಾ ಡಾಕ್ಯುಮೆಂಟ್‌ಗಳು ಅಗತ್ಯವಿರುತ್ತದೆ:

1. ಟೆಸ್ಟ್ ರಿಪೋರ್ಟ್‌ಗಳು (ಸರ್ಕಾರಿ ಅನುಮೋದಿತ ಪ್ರಯೋಗಾಲಯಗಳಿಂದ)

2. ಮಾಡಿರುವ ಟೆಸ್ಟ್‌ಗಳ ಬಿಲ್‌ಗಳು

3. ಡಿಸ್ಚಾರ್ಜ್ ಸಾರಾಂಶ

4. ಆಸ್ಪತ್ರೆ ಬಿಲ್‌ಗಳು

5. Medicine bills

6. ಎಲ್ಲಾ ಪಾವತಿ ರಸೀತಿಗಳು

7. ಕ್ಲೈಮ್ ಫಾರ್ಮ್

ಒರಿಜಿನಲ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು

ತಂತ್ರಜ್ಞಾನ, ಚಿಕಿತ್ಸೆ ವಿಧಾನಗಳು ಮತ್ತು ಹೆಚ್ಚು ಪರಿಣಾಮಕಾರಿ ಔಷಧಗಳ ಲಭ್ಯತೆಯ ಅಭಿವೃದ್ಧಿಯಿಂದ ಆರೋಗ್ಯ ರಕ್ಷಣೆಯ ವೆಚ್ಚ ತೀರಾ ಹೆಚ್ಚಾಗಿದೆ. ಈ ಎಲ್ಲಾ ಹೆಚ್ಚಳದಿಂದ ಗ್ರಾಹಕರಿಗೆ ಹೊರೆಯಾಗುವುದರಿಂದ, ಅನೇಕರಿಗೆ ಹೆಲ್ತ್‌ಕೇರ್ ಕೈಗೆಟುಕದಂತೆ ಆಗಿದೆ. ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಇಂತಹ ಸಮಯದಲ್ಲೇ ಉಪಯೋಗಕ್ಕೆ ಬರುತ್ತವೆ. ಏಕೆಂದರೆ, ಅವುಗಳು ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆ ಶುಲ್ಕಗಳನ್ನು ನೋಡಿಕೊಳ್ಳುತ್ತವೆ. ಇದರಿಂದಾಗಿ, ಗ್ರಾಹಕರಿಗೆ ಹಣಕಾಸಿನ ತೊಂದರೆಗಳಿಂದ ಬಿಡುಗಡೆ ಸಿಗುತ್ತದೆ. ಈಗಲೇ ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆದುಕೊಳ್ಳಿ.

ನೀವು ಕೆಲವೇ ನಿಮಿಷಗಳಲ್ಲಿ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ನವೀಕರಿಸಬಹುದು. ಈಗಲೇ ನವೀಕರಿಸಲು ಇಲ್ಲಿ ಕ್ಲಿಕ್ ಮಾಡಿ.

ಹೌದು. ನಿಮ್ಮ ಕಾಯುವ ಅವಧಿಗಳ ಮೇಲೆ ಪರಿಣಾಮ ಬೀರದೆ ನೀವು ಯಾವುದೇ ಇತರ ವಿಮಾದಾತರಿಗೆ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ವರ್ಗಾಯಿಸಬಹುದು.

ಕಾಯುವ ಅವಧಿಯನ್ನು ಪಾಲಿಸಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ, ಇದು ವಿಮಾ ಮೊತ್ತದ ಮೇಲೆ ಅವಲಂಬಿತವಾಗಿರುವುದಿಲ್ಲ. ಆದ್ದರಿಂದ, ನೀವು ನಿಮ್ಮ ಇನ್ಶೂರೆನ್ಸ್ ಮೊತ್ತವನ್ನು ಹೆಚ್ಚಿಸಿದರೂ ಸಹ ನಿಮ್ಮ ಕಾಯುವ ಅವಧಿಯು ನಿರೀಕ್ಷಣೆ ಅವಧಿಯನ್ನು ತಪ್ಪಿಸುವವರೆಗೆ ಮುಂದುವರೆಯುತ್ತದೆ.

ಹೌದು. ನೀವು ಒಂದೂ ಕ್ಲೈಮ್ ಮಾಡಿಲ್ಲದಿದ್ದರೆ ಒಟ್ಟುಗೂಡಿದ ಬೋನಸ್ ಪಡೆಯುತ್ತೀರಿ. ಅಂದರೆ ಯಾವುದೇ ಹೆಚ್ಚುವರಿ ಪಾವತಿಯಿಲ್ಲದೇ ನಿಮ್ಮ ವಿಮಾ ಮೊತ್ತ ಹೆಚ್ಚಾಗುತ್ತದೆ. ನಿಮ್ಮ BMI, ಡಯಾಬಿಟಿಸ್, ಬ್ಲಡ್ ಪ್ರೆಶರ್ ಮುಂತಾದ ನಿಮ್ಮ ಮಾನದಂಡಗಳು ಸುಧಾರಿಸಿದರೆ, ನೀವು ಫಿಟ್ನೆಸ್ ರಿಯಾಯಿತಿಯನ್ನು ಕೂಡಾ ಪಡೆಯಬಹುದು.

ಹೌದು. ನೀವು ಗ್ರೇಸ್ ಅವಧಿಯೊಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸದಿದ್ದರೆ, ನಿಮ್ಮ ಪಾಲಿಸಿಯು ಲ್ಯಾಪ್ಸ್ ಆಗುವ ಸಾಧ್ಯತೆ ಇದೆ.

ಹೌದು. ನವೀಕರಣದ ಸಮಯದಲ್ಲಿ ನೀವು ಐಚ್ಛಿಕ/ಆ್ಯಡ್-ಆನ್ ಕವರ್ ಅನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು. ಪಾಲಿಸಿ ಅವಧಿಯಲ್ಲಿ ಇದಕ್ಕೆ ಅನುಮತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಈ ಬ್ಲಾಗನ್ನು ಓದಿ.

ಸಾಮಾನ್ಯವಾಗಿ ಇದು 5 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಆದರೆ ನಿಮ್ಮ ಪಾಲಿಸಿ ನಂಬರ್ ಮತ್ತು ಇತರ ಮಾಹಿತಿಯಂತಹ ವಿವರಗಳನ್ನು ನೀವು ಸಿದ್ಧವಾಗಿಟ್ಟುಕೊಳ್ಳಬೇಕು.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಲು ನೀವು 15-30 ದಿನಗಳ ಗ್ರೇಸ್ ಅವಧಿಯನ್ನು ಪಡೆಯುತ್ತೀರಿ. ನೀವು ಆ ಅವಧಿಯೊಳಗೆ ನವೀಕರಿಸಬೇಕು. ಆದರೆ, ನಿಮ್ಮ ಗ್ರೇಸ್ ಅವಧಿಯು ಕೂಡ ಮುಗಿದಿದ್ದರೆ, ನಿಮ್ಮ ಪಾಲಿಸಿಯ ಅವಧಿ ಮುಗಿಯುತ್ತದೆ. ನಂತರ, ನೀವು ಹೊಸ ಕಾಯುವ ಅವಧಿ ಮತ್ತು ಇತರ ಪ್ರಯೋಜನಗಳನ್ನು ಹೊಂದಿರುವ ಹೊಸ ಪಾಲಿಸಿಯನ್ನು ಖರೀದಿಸಬೇಕು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

Image

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಅವಾರ್ಡ್ಸ್ 2014-15

Image

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್ 2015

Image

iAAA ರೇಟಿಂಗ್

Image

ISO ಪ್ರಮಾಣೀಕರಣ

Image

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

Scroll Right
Scroll Left
ಎಲ್ಲಾ ಪ್ರಶಸ್ತಿಗಳನ್ನು ನೋಡಿ
willing to buy a healthinsurance plan?
ಓದು ಮುಗಿಸಿದ್ದೀರಾ? ಹೆಲ್ತ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?