NCB in car insurance
MOTOR INSURANCE
Premium starts at ₹2094 ^

ಪ್ರೀಮಿಯಂ ಆರಂಭವಾಗುತ್ತದೆ

₹2094ರಿಂದ*
9000+ cashless Garagesˇ

9000+ ನಗದುರಹಿತ

ಗ್ಯಾರೇಜುಗಳುˇ
Over Night Vehicle Repairs¯

ಓವರ್‌ನೈಟ್

ವಾಹನ ರಿಪೇರಿಗಳು
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಕಾರಿಗೆ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್

Standalone Own Damage Car Insurance

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್‌ನೊಂದಿಗೆ, ನಿಮ್ಮ ವಾಹನದ ಸ್ವಂತ ಹಾನಿಗೆ ನೀವು ಕವರೇಜ್ ಪಡೆಯುತ್ತೀರಿ. ಈ ಪಾಲಿಸಿ ಇಲ್ಲದೆ, ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ವಾಹನದಿಂದಾಗಿ ಉಂಟಾಗುವ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಮಾತ್ರ ಇನ್ಶೂರರ್ ಕವರ್ ಮಾಡುತ್ತಾರೆ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಪ್ರತಿ ವಾಹನ ಮಾಲೀಕರಿಗೆ ಥರ್ಡ್ ಪಾರ್ಟಿ ಕವರ್ ಹೊಂದುವುದು ಕಡ್ಡಾಯವಾಗಿದೆ, ಆದಾಗ್ಯೂ, ಯಾವುದೇ ಅನಿರೀಕ್ಷಿತ ಘಟನೆಗಳಿಂದಾಗಿ ವೆಚ್ಚ ನಷ್ಟವನ್ನು ತಪ್ಪಿಸಲು ನಿಮ್ಮ ವಾಹನಕ್ಕೆ ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಹೊಂದುವುದು ಸೂಕ್ತವಾಗಿದೆ. ಭೂಕಂಪ, ಪ್ರವಾಹ, ಸೈಕ್ಲೋನ್ ಅಥವಾ ಗಲಭೆಗಳು, ಭಯೋತ್ಪಾದನೆಯಂತಹ ಯಾವುದೇ ಮಾನವ ನಿರ್ಮಿತ ವಿಪತ್ತುಗಳು ನಿಮ್ಮ ಕಾರನ್ನು ತುಂಬಾ ವಿಸ್ತರಿತವಾಗಿ ಹಾನಿ ಮಾಡಬಹುದು, ಇದರಿಂದಾಗಿ ಭಾರಿ ದುರಸ್ತಿ ಬಿಲ್‌ಗಳಿಗೆ ಕಾರಣವಾಗುತ್ತದೆ. ಆದ್ದರಿಂದ, ನಿಮ್ಮ ಸ್ವಂತ ವಾಹನವನ್ನು ರಕ್ಷಿಸಲು ಮತ್ತು ಭಾಗಗಳ ಬದಲಾವಣೆ ಅಥವಾ ಬಿಡಿಭಾಗಗಳ ಸಂಗ್ರಹಣೆಯ ವೆಚ್ಚಗಳನ್ನು ಕವರ್ ಮಾಡಲು, ನೀವು ಸ್ವಂತ ಹಾನಿ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕು.

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿ ಹೇಗೆ ಕೆಲಸ ಮಾಡುತ್ತದೆ?

ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಅಥವಾ ನವೀಕರಿಸುವಾಗ, ಅದರ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಹಂತವಾರು ಮಾರ್ಗದರ್ಶಿ ಇಲ್ಲಿದೆ

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಒಂದು ಐಚ್ಛಿಕ ಕವರ್ ಆಗಿದ್ದು, ಇದನ್ನು ನೀವು ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನೊಂದಿಗೆ ಖರೀದಿಸಬಹುದು. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ನಿಮ್ಮ ಇನ್ಶೂರೆನ್ಸ್ ಮಾಡಿದ ವಾಹನದಿಂದಾಗಿ ಥರ್ಡ್ ಪಾರ್ಟಿಗೆ ಆದ ಯಾವುದೇ ಹಾನಿಗೆ ಕವರೇಜನ್ನು ಒದಗಿಸುತ್ತದೆ. ಆದಾಗ್ಯೂ, ಇದು ಸ್ವಂತ ಹಾನಿಗೆ ಕವರ್ ಒದಗಿಸುವುದಿಲ್ಲ. ಕೆಲವೊಮ್ಮೆ, ಅನಿರೀಕ್ಷಿತ ಘಟನೆಗಳಿಂದಾಗಿ ನಿಮ್ಮ ಕಾರನ್ನು ಹಾನಿಗಳಿಂದ ರಕ್ಷಿಸಬೇಕಾಗುತ್ತದೆ ಮತ್ತು ಆದ್ದರಿಂದ, ನೀವು ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿಯನ್ನು ಹೊಂದಿರಬೇಕು.

ನಿಮ್ಮ ಕಾರನ್ನು ವಿವಿಧ ಹಾನಿಗಳಿಂದ ರಕ್ಷಿಸಲು OD ಇನ್ಶೂರೆನ್ಸ್ - ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಮಾಡದಿರುವ ಕೆಲವು ವಿಷಯಗಳು - ಮತ್ತು ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕವರೇಜನ್ನು ವಿಸ್ತರಿಸಲು ನೀವು ಆ್ಯಡ್-ಆನ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

ಉದಾಹರಣೆ - ಮಿ. ಎ ತನ್ನ ವಾಹನಕ್ಕಾಗಿ ಕಾರ್ ಇನ್ಶೂರೆನ್ಸ್ ಖರೀದಿಸಲು ಬಯಸುತ್ತಾರೆ. ಅವರು ಇನ್ಶೂರರ್ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ, ಅವರು ಥರ್ಡ್ ಪಾರ್ಟಿ ಕವರ್‌ನೊಂದಿಗೆ ಸ್ವಂತ ಹಾನಿ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿದ್ದಾರೆ. ಅವರು ಅದನ್ನು ಆಯ್ಕೆ ಮಾಡಿದರೆ, ಅವರು ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜ್ ಪಡೆಯುತ್ತಾರೆ. ಆದಾಗ್ಯೂ, ಅವರು ಥರ್ಡ್ ಪಾರ್ಟಿ ಕವರ್‌ ಮಾತ್ರ ಬಯಸಿದರೆ, ಪ್ರವಾಹ, ಭೂಕಂಪ, ಬೆಂಕಿ, ಕಳ್ಳತನ ಅಥವಾ ಯಾವುದೇ ಅನಿರೀಕ್ಷಿತ ಘಟನೆಗಳಿಂದಾಗಿ ವಾಹನಕ್ಕೆ ಉಂಟಾಗುವ ಹಾನಿಗೆ ಅವರು ಕವರೇಜ್ ಪಡೆಯುವುದಿಲ್ಲ.

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು

ಖರೀದಿದಾರರಾಗಿ, ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಏನು ಕವರ್ ಆಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ

Covered in Car insurance policy - Accidents

ಅಪಘಾತಗಳು

ಆಕ್ಸಿಡೆಂಟ್ ಅಥವಾ ಘರ್ಷಣೆಯಿಂದಾಗಿ ಉಂಟಾಗುವ ಸ್ವಂತ ಹಾನಿ ಇನ್ಶೂರೆನ್ಸ್ ಹಾನಿಗಳನ್ನು ಕವರ್ ಮಾಡುತ್ತದೆ.

Covered in Car insurance policy - fire explosion

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟದಿಂದಾಗಿ ವಾಹನದ ಹಾನಿಯನ್ನು ಕೂಡ OD ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.

Covered in Car insurance policy - theft

ಕಳ್ಳತನ

ನಿಮ್ಮ ಕಾರಿನ ಕಳ್ಳತನವು ಬಹಳಷ್ಟು ಹಣಕಾಸಿನ ಒತ್ತಡವನ್ನು ಉಂಟುಮಾಡಬಹುದು, ಆದರೆ ನೀವು ಸ್ವತಂತ್ರ ಸ್ವಂತ ಹಾನಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನಿಮ್ಮ ನಷ್ಟವನ್ನು ಕವರ್ ಮಾಡುವುದರಿಂದ ನೀವು ಮನಸ್ಸಿನ ಶಾಂತಿಯನ್ನು ಹೊಂದಬಹುದು.

Covered in Car insurance policy - Calamities

ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು

ಭೂಕಂಪ, ಪ್ರವಾಹ ಇತ್ಯಾದಿಗಳಂತಹ ನೈಸರ್ಗಿಕ ವಿಕೋಪಗಳು ಮತ್ತು ಗಲಭೆಗಳು ಮತ್ತು ವಿಧ್ವಂಸದಂತಹ ಮಾನವ ನಿರ್ಮಿತ ವಿಕೋಪಗಳು ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತವೆ.

Did you know
ಸಮಗ್ರ ಪಾಲಿಸಿ ಇಲ್ಲದಿದ್ದರೆ, ನೀವು ದೊಡ್ಡ ಆರ್ಥಿಕ ನಷ್ಟ ಉಂಟುಮಾಡುವ ಅಪಾಯಗಳಿಗೆ ಗುರಿಯಾಗಬಹುದು!

ಸ್ವಂತ ಹಾನಿ (OD) ಇನ್ಶೂರೆನ್ಸ್ ಪಾಲಿಸಿಯ ಪ್ರಯೋಜನಗಳು

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ನಿಮಗೆ ಹೇಗೆ ಸಹಾಯ ಮಾಡುತ್ತದೆ ಎಂಬ ಬಗ್ಗೆ ಕುತೂಹಲವಿದೆಯೇ? ಟಾಪ್ ಪ್ರಯೋಜನಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:

ಆಕ್ಸಿಡೆಂಟಲ್ ಹಾನಿ: ಅಪಘಾತದಿಂದಾಗಿ ಉಂಟಾದ ಹಾನಿಯಿಂದ ಒಡಿ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಕಾರನ್ನು ರಕ್ಷಿಸುತ್ತದೆ

ಅನಿರೀಕ್ಷಿತ ಘಟನೆಗಳಿಂದಾಗಿ ಹಾನಿ: ಸ್ವತಂತ್ರ ಸ್ವಂತ ಹಾನಿ ಪಾಲಿಸಿಯೊಂದಿಗೆ ನಿಮ್ಮ ಕಾರನ್ನು ಬೆಂಕಿ, ಕಳ್ಳತನ, ನೈಸರ್ಗಿಕ ವಿಪತ್ತುಗಳು, ವಿಧ್ವಂಸ, ಗಲಭೆಗಳು ಮುಂತಾದ ಅನಿರೀಕ್ಷಿತ ಘಟನೆಗಳ ವಿರುದ್ಧ ಕವರ್ ಮಾಡಲಾಗುತ್ತದೆ.

ಆ್ಯಡ್-ಆನ್‌ಗಳು: ನೀವು ವಿವಿಧ ಆ್ಯಡ್-ಆನ್‌ಗಳೊಂದಿಗೆ ಸ್ವಂತ ಹಾನಿ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು. ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್‌ನಂತಹ ಕೆಲವು ಆ್ಯಡ್ ಆನ್‌ಗಳು ಮತ್ತು ನೀವು ಡ್ರೈವ್ ಮಾಡಿದಂತೆ ಪಾವತಿಸಿ ಇವುಗಳು ಕಾರ್ ಇನ್ಶೂರೆನ್ಸ್ ಪಾಲಿಸಿ ನವೀಕರಣದ ಸಮಯದಲ್ಲಿ ನಿಮಗೆ ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತವೆ.

ಥರ್ಡ್ ಪಾರ್ಟಿ ಹೊಣೆಗಾರಿಕೆಗಳು: ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಇನ್ಶೂರ್ಡ್ ವ್ಯಕ್ತಿಯ ವಾಹನವನ್ನು ಒಳಗೊಂಡಿರುವ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕೂಡ ಕವರೇಜ್ ಪಡೆಯುತ್ತೀರಿ.

ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಕಾರಿಗೆ ಸ್ವಂತ ಹಾನಿ (ಒಡಿ) ಇನ್ಶೂರೆನ್ಸ್ ಏಕೆ ಖರೀದಿಸಬೇಕು?

ಎಚ್‌ಡಿಎಫ್‌ಸಿ ಎರ್ಗೋ ವ್ಯಾಪಕವಾಗಿ ಹೆಸರಾಂತ ಮತ್ತು ಸ್ವೀಕೃತಿ ಪಡೆದ ಇನ್ಶೂರೆನ್ಸ್ ಪೂರೈಕೆದಾರರಾಗಿದ್ದು, ಇದರಿಂದಾಗಿ 1.6 ಕೋಟಿಗೂ ಹೆಚ್ಚು ಸಂತೋಷ ಭರಿತ ಗ್ರಾಹಕರು ತಮ್ಮ ಸೇವೆಗಳನ್ನು ಪಡೆದುಕೊಳ್ಳುತ್ತಾರೆ. ಎಚ್‌ಡಿಎಫ್‌ಸಿ ಎರ್ಗೋ ವಾಹನ ಇನ್ಶೂರೆನ್ಸ್‌ನ ಅಪಾರ ಜನಪ್ರಿಯತೆಗೆ ಹಲವಾರು ಕಾರಣಗಳಿವೆ. ಅದರಲ್ಲಿ ಕೆಲವು ಹೇಗಿವೆ;:

Cashless Garages

ನಗದುರಹಿತ ಗ್ಯಾರೇಜುಗಳು

ನೀವು ಪಡೆದ ಸೇವೆಗಳಿಗೆ ಯಾವುದೇ ಮುಂಗಡ ಮೊತ್ತವನ್ನು ಪಾವತಿಸಬೇಕಾದ ಅಗತ್ಯವಿಲ್ಲದೆ ಭಾರತದಾದ್ಯಂತ ನಿಮಗೆ ಸೇವೆಗಳನ್ನು ಒದಗಿಸಲು ಹೆಚ್ಚುತ್ತಲೇ ಇರುವ 9000+ ನಗದುರಹಿತ ಗ್ಯಾರೇಜ್‌ಗಳು.

Overnight service

ಓವರ್‌ನೈಟ್ ಸೇವೆ

ತಡರಾತ್ರಿಯ ವಾಹನ ದುರಸ್ತಿ¯ಹಲವಾರು ಸಂದರ್ಭಗಳಲ್ಲಿ ಲಭ್ಯವಿರುತ್ತದೆ, ಇದು ಮುಂದಿನ ದಿನ ನಿಮ್ಮ ವಾಹನದ ರಿಪೇರಿ ಮತ್ತು ರಿಟರ್ನ್ ಅನ್ನು ಖಚಿತಪಡಿಸುತ್ತದೆ.

24x7 roadside assistance °°

24x7 ರಸ್ತೆಬದಿಯ ಸಹಾಯ °°

24x7 ರಸ್ತೆಬದಿಯ ಸಹಾಯ °°ರಜಾದಿನಗಳಲ್ಲಿ ಕೂಡ ನೀವು ಎಲ್ಲಾದರು ನಡುವೆ ಸಿಕ್ಕಿಹಾಕಿಕೊಂಡಾಗ ಅಥವಾ ದಿನದ ಕೆಟ್ಟ ಸಮಯದಲ್ಲಿ ಅಪಘಾತವನ್ನು ಎದುರಿಸಿದಾಗ ಮತ್ತು ಸಹಾಯದ ಅಗತ್ಯವಿರುವಾಗ ತುಂಬಾ ಉಪಯುಕ್ತವಾಗಿದೆ.

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿ ಆ್ಯಡ್-ಆನ್‌ಗಳು

ಈ ಕೆಳಗಿನ ಆ್ಯಡ್ ಆನ್ ಕವರ್‌ಗಳೊಂದಿಗೆ ನೀವು ನಿಮ್ಮ ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪ್ಲಾನನ್ನು ಕಸ್ಟಮೈಸ್ ಮಾಡಬಹುದು

Boost your coverage
Zero Depreciation Cover in Car Insurance

ಶೂನ್ಯ ಸವಕಳಿ ಆ್ಯಡ್ ಆನ್ ಕವರ್‌ನೊಂದಿಗೆ ನಿಮ್ಮ od ಇನ್ಶೂರೆನ್ಸ್‌ನೊಂದಿಗೆ ನೀವು ನಿಮ್ಮ ಕಾರಿನ ಮೌಲ್ಯಮಾಪನ ವೆಚ್ಚವನ್ನು ಉಳಿಸಬಹುದು, ಅಂದರೆ ಸವಕಳಿಯಿಂದಾಗಿ ಉಂಟಾದ ನಷ್ಟಕ್ಕೆ ನೀವು ಪಾವತಿಸದೆ ರಿಪೇರಿಯ ಸಂಪೂರ್ಣ ವೆಚ್ಚವನ್ನು ಕವರ್ ಮಾಡಲಾಗುತ್ತದೆ.

Return to Invoice Cover in Car Insurance

RTI ಆ್ಯಡ್ ಆನ್ ಕವರ್ ಅಡಿಯಲ್ಲಿ ನೀವು ಖರೀದಿಸಿದಾಗ ನಿಮ್ಮ ವಾಹನದ ಇನ್ವಾಯ್ಸ್ ಮೌಲ್ಯಕ್ಕೆ ಸಮನಾದ ಕವರೇಜ್ ಮೊತ್ತವನ್ನು ಪಡೆಯುತ್ತೀರಿ. ನಿಮ್ಮ ಕಾರನ್ನು ಸರಿಪಡಿಸಲಾಗುವುದಿಲ್ಲ ಅಥವಾ ಕಳ್ಳತನ ಮಾಡಲಾಗಿದೆ ಎಂದು ಘೋಷಿಸಲಾದರೆ ಇದು ನಡೆಯುತ್ತದೆ.

No Claim Bonus in Car Insurance

ಈ ಆ್ಯಡ್ ಆನ್ ಕವರ್‌ನೊಂದಿಗೆ, ಪಾಲಿಸಿ ಅವಧಿಯಲ್ಲಿ ನೀವು ಕ್ಲೈಮ್ ಮಾಡಿದರೂ ಸಹ, ನೀವು NCB ಪ್ರಯೋಜನವನ್ನು ಕಳೆದುಕೊಳ್ಳುವುದಿಲ್ಲ. ಪಾಲಿಸಿ ನವೀಕರಣದ ಸಮಯದಲ್ಲಿ ರಿಯಾಯಿತಿ ಪಡೆಯಲು ಇದು ನಿಮಗೆ ಸಹಾಯ ಮಾಡುತ್ತದೆ.

Car Insurance Add On Coverage
Engine and gearbox protector cover in car insurance

ಎಂಜಿನ್ ಮತ್ತು ಗೇರ್‌ಬಾಕ್ಸ್ ಕವರ್ ನಿಮ್ಮ ಕಾರ್ ಎಂಜಿನ್‌ಗೆ ಆದ ಹಾನಿಯಿಂದಾಗಿ ಉಂಟಾದ ಹಣಕಾಸಿನ ನಷ್ಟಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಕಾರ್ ಎಂಜಿನ್‌ಗೆ ಆದ ಹಾನಿಯು ಬಹಳ ಹೆಚ್ಚಿನ ದುರಸ್ತಿ ವೆಚ್ಚಕ್ಕೆ ಕಾರಣವಾಗಬಹುದು, ಆದ್ದರಿಂದ, ಈ ಆ್ಯಡ್ ಆನ್ ಕವರ್ ಖರೀದಿಸುವುದು ಉತ್ತಮ.

Downtime protection cover in car insurance

ಈ ಆ್ಯಡ್ ಆನ್ ಕವರ್‌ನೊಂದಿಗೆ, ನಿಮ್ಮ ವಾಹನವು ಸರ್ವೀಸಿಂಗ್‌ಗೆ ಹೋಗಿದ್ದರೆ ನೀವು ಸಂವಹನ ವೆಚ್ಚಕ್ಕಾಗಿ ಕವರೇಜ್ ಪಡೆಯುತ್ತೀರಿ.

Pay as you drive cover

ನೀವು ಡ್ರೈವ್ ಮಾಡಿದಂತೆ ಪಾವತಿಸಿ ಆ್ಯಡ್ ಆನ್ ಕವರ್ ಜೊತೆಗೆ, ಪಾವತಿಸುವ ಪ್ರೀಮಿಯಂ ನಿಮ್ಮ ಕಾರಿನ ನಿಜವಾದ ಬಳಕೆಯ ಆಧಾರದ ಮೇಲೆ ಇರುತ್ತದೆ. ಈ ಕವರ್ ಅಡಿಯಲ್ಲಿ, ನೀವು 10,000 KM ಗಿಂತ ಕಡಿಮೆ ಡ್ರೈವ್ ಮಾಡಿದರೆ ಪಾಲಿಸಿ ಅವಧಿಯ ಕೊನೆಯಲ್ಲಿ ಮೂಲಭೂತ ಸ್ವಂತ-ಹಾನಿಯ ಪ್ರೀಮಿಯಂನ 25% ವರೆಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.

ಹೋಲಿಕೆ: ಥರ್ಡ್ ಪಾರ್ಟಿ ಇನ್ಶೂರೆನ್ಸ್, OD ಇನ್ಶೂರೆನ್ಸ್ ಮತ್ತು ಕಾರಿಗೆ ಸಮಗ್ರ ಇನ್ಶೂರೆನ್ಸ್

ಮಾನದಂಡಗಳು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸ್ಟ್ಯಾಂಡ್ಅಲೋನ್ ಓನ್‌ ಡ್ಯಾಮೇಜ್‌ ಕಾರ್ ಇನ್ಶೂರೆನ್ಸ್ ಸಮಗ್ರ ಇನ್ಶೂರೆನ್ಸ್
ಇನ್ಶೂರೆನ್ಸ್ ಕವರೇಜ್ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ಕವರ್ ಮಾಡುತ್ತದೆ.ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್ ವಾಹನಕ್ಕೆ ಸ್ವಂತ ಹಾನಿಗಾಗಿ ನಿಮ್ಮ ಇನ್ಶೂರ್ ಮಾಡಿದ ವಾಹನಕ್ಕೆ ಕವರೇಜನ್ನು ಒದಗಿಸುತ್ತದೆ.ಸಮಗ್ರ ಇನ್ಶೂರೆನ್ಸ್ ವಾಹನಕ್ಕೆ ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹಾನಿಗಳಿಗೆ ಕವರೇಜನ್ನು ಒದಗಿಸುತ್ತದೆ.
ವ್ಯಾಖ್ಯಾನಥರ್ಡ್ ಪಾರ್ಟಿ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವಾಹನ ಅಥವಾ ಆಸ್ತಿಗೆ ಹಾನಿ ಮತ್ತು ಇನ್ಶೂರ್ಡ್ ವ್ಯಕ್ತಿಯ ವಾಹನವನ್ನು ಒಳಗೊಂಡಿರುವ ಥರ್ಡ್ ಪಾರ್ಟಿ ವ್ಯಕ್ತಿಯ ಗಾಯಗಳನ್ನು ಕವರ್ ಮಾಡುತ್ತದೆ.OD ಇನ್ಶೂರೆನ್ಸ್ ನಿಮ್ಮ ಇನ್ಶೂರೆನ್ಸ್ ಮಾಡಿದ ವಾಹನಕ್ಕೆ ರಕ್ಷಣೆ ಒದಗಿಸುತ್ತದೆಈ ಪಾಲಿಸಿಯು ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಸ್ವಂತ ಹಾನಿಯನ್ನು ಒಂದೇ ಪಾಲಿಸಿ ಪ್ರೀಮಿಯಂ ಅಡಿಯಲ್ಲಿ ಕವರ್ ಮಾಡುತ್ತದೆ.
ಪ್ರಯೋಜನಗಳುಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕಡ್ಡಾಯ ಕವರ್ ಆಗಿರುವುದರಿಂದ, ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಿಮ್ಮನ್ನು ಕಾನೂನು ಟ್ರಾಫಿಕ್ ದಂಡಗಳಿಂದ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆ ವೆಚ್ಚಗಳಿಂದ ರಕ್ಷಿಸುತ್ತದೆ.ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿಯು ನೈಸರ್ಗಿಕ ವಿಪತ್ತುಗಳು ಮತ್ತು ಮಾನವ ನಿರ್ಮಿತ ವಿಪತ್ತುಗಳಿಂದಾಗಿ ವಾಹನದ ಹಾನಿಗೆ ರಿಪೇರಿ ವೆಚ್ಚವನ್ನು ಕವರ್ ಮಾಡುತ್ತದೆ. ವಿವಿಧ ಆ್ಯಡ್ ಆನ್ ಕವರ್‌ಗಳನ್ನು ಖರೀದಿಸುವ ಮೂಲಕ ಕೂಡ ನೀವು ಈ ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು.ಸಮಗ್ರ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಮತ್ತು ಸ್ವಂತ ಹಾನಿಯ ವೆಚ್ಚಗಳನ್ನು ಕವರ್ ಮಾಡುತ್ತದೆ. ನೋ ಕ್ಲೈಮ್ ಬೋನಸ್ ರಕ್ಷಣೆ, ಶೂನ್ಯ ಸವಕಳಿ ಇತ್ಯಾದಿಗಳಂತಹ ಆ್ಯಡ್-ಆನ್‌ಗಳೊಂದಿಗೆ ಕವರೇಜನ್ನು ಹೆಚ್ಚಿಸಲು ಇದು ನಿಮಗೆ ಅನುವು ಮಾಡಿಕೊಡುತ್ತದೆ.
ಸವಕಳಿ ದರಇನ್ಶೂರೆನ್ಸ್ ಪ್ರೀಮಿಯಂ IRDAI ನಿಯಮಗಳ ಪ್ರಕಾರ ಇರುತ್ತದೆ ಮತ್ತು ಇದು ಸವಕಳಿಯಿಂದ ಪರಿಣಾಮ ಬೀರುವುದಿಲ್ಲ.ಸವಕಳಿ ದರವು ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಪರಿಣಾಮ ಬೀರುತ್ತದೆ.ಸಮಗ್ರ ಇನ್ಶೂರೆನ್ಸ್ ಅಡಿಯಲ್ಲಿ ಸವಕಳಿ ದರವು ಕ್ಲೈಮ್ ಸಮಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಇನ್ಶೂರೆನ್ಸ್ ಪ್ರೀಮಿಯಂ ಮೊತ್ತಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಇದ್ದಾಗ, ನೀಡಲಾಗುವ ಕವರೇಜ್ ಕೂಡ ಸೀಮಿತವಾಗಿರುತ್ತದೆ.ಕಾರಿಗೆ ಸ್ವಂತ ಹಾನಿ ಇನ್ಶೂರೆನ್ಸ್ ಆರಂಭದಲ್ಲಿ ಹೆಚ್ಚಾಗಿರುತ್ತದೆ ಆದರೆ ಕಾರು ಹಳೆಯದಾದಂತೆ ಕಡಿಮೆಯಾಗುತ್ತದೆ.ಥರ್ಡ್ ಪಾರ್ಟಿ ಮತ್ತು ಸ್ವಂತ ಹಾನಿಯ ಪ್ರೀಮಿಯಂಗಳನ್ನು ಒಳಗೊಂಡಿರುವುದರಿಂದ ಈ ಇನ್ಶೂರೆನ್ಸ್ ಕವರ್‌ನ ಪ್ರೀಮಿಯಂ ಅತ್ಯಧಿಕವಾಗಿದೆ.

ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳು ಇಲ್ಲಿವೆ

1
ವಾಹನದ IDV (ವಿಮಾ ಘೋಷಿತ ಮೌಲ್ಯ)

ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯವಾಗಿದೆ. ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ನಿರ್ಧರಿಸಲು ಇದು ಪ್ರಮುಖ ಅಂಶವಾಗಿದೆ. ನೀವು ನಿಮ್ಮ ಕಾರಿಗೆ ಹೆಚ್ಚಿನ IDV ಯನ್ನು ಆಯ್ಕೆ ಮಾಡಿದರೆ ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಹೆಚ್ಚಾಗಿರುತ್ತದೆ.

2
ಎಷ್ಟು ವರ್ಷಗಳ ಕಾರ್

ಕಾರಿನ ವರ್ಷ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂಗೆ ಪ್ರೀಮಿಯಂ ಅನ್ನು ಕೂಡ ನಿರ್ಧರಿಸುತ್ತದೆ. ಕಾರು ಹಳೆಯದಾದಷ್ಟೂ, ಪ್ರೀಮಿಯಂ ಕಡಿಮೆ ಇರುತ್ತದೆ. ಹಳೆಯ ಕಾರಿನ ನಷ್ಟದ ಮೌಲ್ಯವು ಸವಕಳಿಗೆ ಒಳಗಾಗುತ್ತದೆ.

3
NCB

ಪಾಲಿಸಿ ವರ್ಷದಲ್ಲಿ ನಿಮ್ಮ ಕಾರಿಗೆ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ಕಾರ್ ಇನ್ಶೂರೆನ್ಸ್ ಪಾಲಿಸಿ ನವೀಕರಣದ ಮೇಲೆ ನಿಮ್ಮ ಪ್ರೀಮಿಯಂಗಳ ಮೇಲೆ ನೋ ಕ್ಲೈಮ್ ಬೋನಸ್ ರಿಯಾಯಿತಿಗೆ ನೀವು ಅರ್ಹರಾಗುತ್ತೀರಿ. ಆದ್ದರಿಂದ, ಈ ಕ್ಲೈಮ್‌ಗಳನ್ನು ಸಲ್ಲಿಸದಿರುವುದರಿಂದ ನಿಮ್ಮ ಸ್ವತಂತ್ರ ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುತ್ತದೆ, ಆದಾಗ್ಯೂ, NCB ಪ್ರಯೋಜನಗಳನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಅದರ ಗಡುವು ಮುಗಿದ 90 ದಿನಗಳ ಒಳಗೆ ನಿಮ್ಮ ಪಾಲಿಸಿಯನ್ನು ನವೀಕರಿಸುವುದನ್ನು ಖಚಿತಪಡಿಸಿಕೊಳ್ಳಿ.

4
ಕಾರ್ ಮೇಕ್ ಮಾಡೆಲ್

ನೀವು ಉನ್ನತ ಮಟ್ಟದ ಅಥವಾ ಐಷಾರಾಮಿ ಕಾರಿನ ಮಾಲೀಕರಾಗಿದ್ದರೆ, ಅಂತಹ ಕಾರಿಗೆ ಪ್ರೀಮಿಯಂ ಹೆಚ್ಚಾಗಿರುತ್ತದೆ. ಈ ಕಾರಿನ ಯಾವುದೇ ಆಕಸ್ಮಿಕ ಹಾನಿಯು ತುಂಬಾ ದುಬಾರಿ ದುರಸ್ತಿ ವೆಚ್ಚಕ್ಕೆ ಕಾರಣವಾಗುತ್ತದೆ, ಆದ್ದರಿಂದ ಸಾಮಾನ್ಯ ಮಧ್ಯಮ ಗಾತ್ರ ಅಥವಾ ಹ್ಯಾಚ್‌ಬ್ಯಾಕ್ ವಾಹನಕ್ಕೆ ಹೋಲಿಸಿದರೆ ಹೈ ಎಂಡ್ ಕಾರಿಗೆ ಪ್ರೀಮಿಯಂಗಳು ಹೆಚ್ಚಾಗಿರುತ್ತವೆ.

5
ಕಾರಿನ ಕ್ಯೂಬಿಕ್ ಸಾಮರ್ಥ್ಯ

OD ಇನ್ಶೂರೆನ್ಸ್ ಪ್ರೀಮಿಯಂಗಳನ್ನು ನಿರ್ಧರಿಸುವಲ್ಲಿ ನಿಮ್ಮ ಕಾರಿನ ಎಂಜಿನ್‌ನ ಕ್ಯೂಬಿಕ್ ಸಾಮರ್ಥ್ಯವು ಪ್ರಮುಖ ಪಾತ್ರವನ್ನು ವಹಿಸುತ್ತದೆ. 1500cc ಗಿಂತ ಹೆಚ್ಚು ಕ್ಯೂಬಿಕ್ ಸಾಮರ್ಥ್ಯ ಹೊಂದಿರುವ ಕಾರುಗಳು 1500cc ಗಿಂತ ಕಡಿಮೆ ಎಂಜಿನ್ ಸಾಮರ್ಥ್ಯದೊಂದಿಗಿನ ಕಾರುಗಳಿಗೆ ಹೋಲಿಸಿದರೆ ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೆಚ್ಚಿಸುತ್ತದೆ.

6
ಆ್ಯಡ್-ಆನ್‌ಗಳು

ಶೂನ್ಯ ಸವಕಳಿ, ಎಂಜಿನ್ ಗೇರ್‌ಬಾಕ್ಸ್ ರಕ್ಷಣೆ, ರಸ್ತೆಬದಿಯ ನೆರವು ಮುಂತಾದ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್ ಅನ್ನು ಕಸ್ಟಮೈಜ್ ಮಾಡಬಹುದು. ಆದರೆ ಈ ಆ್ಯಡ್-ಆನ್‌ಗಳು ಹೆಚ್ಚುವರಿ ಪ್ರೀಮಿಯಂನಲ್ಲಿ ಬರುವುದರಿಂದ, ನೀವು ಈ ಆ್ಯಡ್-ಆನ್‌ಗಳನ್ನು ಜಾಣತನದಿಂದ ಆಯ್ಕೆ ಮಾಡಬೇಕು.

7
ನಿಮ್ಮ ಲೊಕೇಶನ್

ನಿಮ್ಮ ಕಾರಿನ ಲೊಕೇಶನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪ್ರೀಮಿಯಂನ ಪ್ರೀಮಿಯಂ ಅನ್ನು ಕೂಡ ನಿರ್ಧರಿಸುತ್ತದೆ. ನೀವು ನೈಸರ್ಗಿಕ ವಿಕೋಪಗಳು ಅಥವಾ ರಸ್ತೆ ಅಪಘಾತಗಳಿಗೆ ಗುರಿಯಾಗುವ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಪ್ರೀಮಿಯಂ ಹೆಚ್ಚಾಗಿರುತ್ತದೆ.

8
ಕಾರ್ ಇಂಧನ ಬಗೆ

ಪೆಟ್ರೋಲ್ ಕಾರುಗಳನ್ನು ನಿರ್ವಹಿಸುವುದು ಸುಲಭ. ಆದಾಗ್ಯೂ, CNG ಮತ್ತು ಡೀಸೆಲ್ ಕಾರುಗಳ ಸಂದರ್ಭದಲ್ಲಿ, ನಿರ್ವಹಣಾ ವೆಚ್ಚಗಳು ಹೆಚ್ಚಾಗಿರುತ್ತವೆ ಮತ್ತು ಆದ್ದರಿಂದ, ಈ ರೀತಿಯ ವಾಹನಗಳಿಗೆ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್‌ಗೆ ಪ್ರೀಮಿಯಂ ಹೆಚ್ಚಾಗಿರುತ್ತದೆ.

ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ (OD) ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಹೇಗೆ?

ನಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಮೂಲಕ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್‌ಗೆ ಪ್ರೀಮಿಯಂ ಲೆಕ್ಕ ಹಾಕಬಹುದು. ನಿಮ್ಮ ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ತಿಳಿದುಕೊಳ್ಳಲು, ನೀವು ನಿಮ್ಮ ಕಾರಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ತಿಳಿದುಕೊಳ್ಳಬೇಕು, ಇದು ನಿಮ್ಮ ಕಾರಿನ ಪ್ರಸ್ತುತ ಮಾರುಕಟ್ಟೆ ಮೌಲ್ಯವಾಗಿದೆ. ಈ ಕೆಳಗಿನ ಫಾರ್ಮುಲಾದೊಂದಿಗೆ ನೀವು ನಿಮ್ಮ ಕಾರಿನ IDV ಯನ್ನು ಲೆಕ್ಕ ಹಾಕಬಹುದು:

IDV = (ವಾಹನದ ಶೋರೂಮ್ ಬೆಲೆ - ಸವಕಳಿ ವೆಚ್ಚ) + (ಯಾವುದೇ ಕಾರ್ ಪರಿಕರಗಳ ವೆಚ್ಚ - ಸವಕಳಿ ವೆಚ್ಚ)

ನಿಮ್ಮ ಕಾರಿನ IDV ಅನ್ನು ನೀವು ಹೊಂದಿದ ನಂತರ, ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಪಾಲಿಸಿ ಪ್ರೀಮಿಯಂ ಲೆಕ್ಕ ಹಾಕಲು ನೀವು ಈ ಕೆಳಗಿನ ಫಾರ್ಮುಲಾವನ್ನು ಬಳಸಬಹುದು:

ಸ್ವಂತ ಹಾನಿ ಪ್ರೀಮಿಯಂ = IDV X (ಪ್ರೀಮಿಯಂ ದರ) + ಆ್ಯಡ್-ಆನ್ ಕವರ್‌ಗಳು - ಪಾಲಿಸಿಯ ಮೇಲೆ ರಿಯಾಯಿತಿಗಳು ಮತ್ತು ಪ್ರಯೋಜನಗಳು

ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಹೇಗೆ ಕಡಿಮೆ ಮಾಡುವುದು ಎಂಬುದರ ಬಗ್ಗೆ ಸಲಹೆಗಳು

1
IDV ಯನ್ನು ಬುದ್ಧಿವಂತಿಕೆಯಿಂದ ಆಯ್ಕೆಮಾಡಿ

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತದ ಮೇಲೆ IDV ಪರಿಣಾಮ ಬೀರುತ್ತದೆ. ಆದ್ದರಿಂದ, IDV ಕಡಿಮೆ ಮಾಡುವುದರಿಂದ ಪ್ರೀಮಿಯಂ ಕಡಿಮೆಯಾಗುತ್ತದೆ ಆದರೆ ಕ್ಲೈಮ್ ಸೆಟಲ್ಮೆಂಟ್ ಸಮಯದಲ್ಲಿ ಪಾವತಿಸಬೇಕಾದ ಮೊತ್ತವನ್ನು ಹೆಚ್ಚಿಸುತ್ತದೆ ಮತ್ತು ಹಾಗೆಯೇ ವಿಲೋಮವಾಗಿರುತ್ತದೆ. ಆದ್ದರಿಂದ, ಕವರೇಜ್ ಮತ್ತು ಪ್ರೀಮಿಯಂ ಮೊತ್ತವನ್ನು ಬ್ಯಾಲೆನ್ಸ್ ಮಾಡಲು IDV ಮೊತ್ತವನ್ನು ಜಾಣತನದಿಂದ ಆಯ್ಕೆ ಮಾಡುವುದು ಅಗತ್ಯವಾಗಿದೆ.

2
ಕಡಿತಗಳು

ಸ್ವಯಂಪ್ರೇರಿತ ಕಡಿತಗಳು ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರುತ್ತವೆ. ನೀವು ಸ್ವಯಂಪ್ರೇರಿತ ಕಡಿತ ಮಾಡಬಹುದಾದ ಮೊತ್ತವನ್ನು ಹೆಚ್ಚಿಸಿದರೆ, ಅದು ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡುತ್ತದೆ. ಆದಾಗ್ಯೂ, ಕಾರ್ ಇನ್ಶೂರೆನ್ಸ್ ಕ್ಲೈಮ್ ಸೆಟಲ್ಮೆಂಟ್ ಸಮಯದಲ್ಲಿ ಇದು ಪಾಕೆಟ್‌ನಿಂದಾಚೆಗಿನ ವೆಚ್ಚಗಳನ್ನು ಕೂಡ ಹೆಚ್ಚಿಸುತ್ತದೆ.

3
ಸಂಬಂಧಿತ ಆ್ಯಡ್-ಆನ್‌ಗಳನ್ನು ಆಯ್ಕೆಮಾಡಿ

ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಸಂಬಂಧಿಸಿದ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಿ. ಅನಗತ್ಯ ಆ್ಯಡ್ ಆನ್ ಕವರ್ ಆಯ್ಕೆ ಮಾಡುವುದರಿಂದ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್‌ಗೆ ಪ್ರೀಮಿಯಂ ಮೊತ್ತವನ್ನು ಹೆಚ್ಚಿಸುತ್ತದೆ.

4
NCB ರಿಯಾಯಿತಿ ಬಳಸಿ

ಪಾಲಿಸಿ ಅವಧಿಯಲ್ಲಿ ನೀವು ಯಾವುದೇ ಕ್ಲೈಮ್ ಮಾಡದಿದ್ದರೆ, ನೋ ಕ್ಲೈಮ್ ಬೋನಸ್ ಪ್ರಯೋಜನದ ಸರಿಯಾದ ಬಳಕೆಯನ್ನು ಮಾಡಿ. NCB ಪ್ರಯೋಜನವು ಪಾಲಿಸಿ ನವೀಕರಣದ ಮೇಲೆ ರಿಯಾಯಿತಿ ಪಡೆಯಲು ಸಹಾಯ ಮಾಡುತ್ತದೆ ಮತ್ತು ಇದರಿಂದಾಗಿ ಕಾರಿಗೆ OD ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಆಗುತ್ತದೆ. ಸತತ ಐದು ಕ್ಲೈಮ್-ಮುಕ್ತ ವರ್ಷಗಳ ಸಂದರ್ಭದಲ್ಲಿ ಈ ರಿಯಾಯಿತಿಯು 50% ವರೆಗೆ ಹೋಗಬಹುದು.

Did you know
ಕಾರಿನ ಪೇಂಟ್‌ ಕಿತ್ತು ಬಂದಾಗ ಅದನ್ನು ಸರಿಪಡಿಸಲು ಇರುವ ಉತ್ತಮ ಮಾರ್ಗವೆಂದರೆ,
with nail polish.

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು WHO ಪಡೆಯಬೇಕು?

ನೀವು ಇತ್ತೀಚೆಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ್ದರೆ, ನಿಮ್ಮ ಸ್ವಂತ ವಾಹನವನ್ನು ಹಾನಿಗಳು ಮತ್ತು ನಷ್ಟಗಳಿಂದ ರಕ್ಷಿಸಲು ನೀವು ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಖರೀದಿಸಬೇಕು. ಎರಡೂ ಪಾಲಿಸಿಗಳನ್ನು ಒಬ್ಬರೇ ಇನ್ಶೂರೆನ್ಸ್ ಪೂರೈಕೆದಾರರಿಂದ ಖರೀದಿಸುವ ಅಗತ್ಯವಿಲ್ಲ. ಅಂದರೆ, ನೀವು ಯಾವುದೇ ಇತರ ವಿಮಾದಾತರ ಬಳಿ ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಖರೀದಿಸಿದ್ದರೂ ಸಹ, ಎಚ್‌ಡಿಎಫ್‌ಸಿ ಎರ್ಗೋ ಆಥವಾ ನಿಮ್ಮ ಆಯ್ಕೆಯ ಇತರ ವಿಮಾದಾತರಿಂದ ಸ್ಟ್ಯಾಂಡ್ಅಲೋನ್ OD ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು.. ನಿಮ್ಮ ಪ್ಲಾನ್ ಮತ್ತು ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವ ಮೊದಲು, ಅದರಲ್ಲಿ ಇರುವ ಮತ್ತು ಇಲ್ಲದಿರುವ ಅಂಶಗಳು, ಫೀಚರ್‌ಗಳು ಹಾಗೂ ಇತರ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿರಿ.. ಇದಲ್ಲದೆ, ಎಚ್‌ಡಿಎಫ್‌ಸಿ ಎರ್ಗೋದಿಂದ ಸ್ಟ್ಯಾಂಡ್‌ಅಲೋನ್ OD ಕಾರ್ ಇನ್ಶೂರೆನ್ಸ್ ಖರೀದಿಸಬೇಕಾದ ಜನರ ಕೆಟಗರಿಗಳು ಇಲ್ಲಿವೆ.

1
ಹೊಸ ಕಾರು ಮಾಲೀಕರು

ನೀವು ಹೊಸ ಕಾರಿನ ಮಾಲೀಕರಾಗಿದ್ದರೆ, ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಖರೀದಿಸುವುದು ಸೂಕ್ತವಾಗಿದೆ. ನಿಮ್ಮ ಹೊಸ ಕಾರಿಗೆ ಹಾನಿಯಾದ ಸಂದರ್ಭದಲ್ಲಿ ರಿಪೇರಿ ಬಿಲ್‌ಗಳನ್ನು ಉಳಿಸಲು ಸ್ಟ್ಯಾಂಡ್‌ಅಲೋನ್ OD ಇನ್ಶೂರೆನ್ಸ್ ಪಾಲಿಸಿ ನಿಮಗೆ ಸಹಾಯ ಮಾಡುತ್ತದೆ

2
ಹೊಸ ಡ್ರೈವರ್‌ಗಳು

ಹೊಸ ಕಾರು ಚಾಲಕರು, ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮನ್ನು ಸುರಕ್ಷಿತಗೊಳಿಸುವುದು ಸೂಕ್ತವಾಗಿದೆ.

3
ದುಬಾರಿ ಕಾರು ಹೊಂದಿದವರು

ಅಪಘಾತದ ಸಂದರ್ಭದಲ್ಲಿ ಐಷಾರಾಮಿ ಕಾರಿನ ದುರಸ್ತಿ ಭಾಗಗಳು ದುಬಾರಿ ವ್ಯವಹಾರವಾಗಬಹುದು. ಆದ್ದರಿಂದ, ಭಾರಿ ರಿಪೇರಿ ಬಿಲ್‌ಗಳನ್ನು ಪಾವತಿಸುವುದನ್ನು ತಪ್ಪಿಸಲು ಅಂತಹ ವರ್ಗದ ಜನರು ಸ್ವಂತ ಹಾನಿಯ ಕಾರ್ ಇನ್ಶೂರೆನ್ಸ್ ಪ್ಲಾನ್ ಹೊಂದಿರಬೇಕು.

ಎಚ್‌ಡಿಎಫ್‌ಸಿ ಎರ್ಗೋದಿಂದ OD ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು/ನವೀಕರಿಸುವುದು ಹೇಗೆ?

ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಖರೀದಿಸಲು ನೀವು ಈ ಕೆಳಗಿನಂತೆ ಸರಳ ಹಂತಗಳನ್ನು ಅನುಸರಿಸಬೇಕು:

1. ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ನಿಮ್ಮ ಕಾರ್ ನೋಂದಣಿ ಸಂಖ್ಯೆ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ವಿಳಾಸವನ್ನು ಒಳಗೊಂಡಂತೆ ವಿವರಗಳನ್ನು ಭರ್ತಿ ಮಾಡಿ.

2. ಸಮಗ್ರ, ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಕವರ್ ನಡುವೆ ಆಯ್ಕೆ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ನೀವು ಈಗಾಗಲೇ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಪ್ಲಾನನ್ನು ಆಯ್ಕೆ ಮಾಡಿ.

2. ನೀವು ಆಯ್ಕೆ ಮಾಡಲು ಬಯಸುವ ಪಾಲಿಸಿ ವಿವರಗಳು ಮತ್ತು ಆ್ಯಡ್-ಆನ್ ಅನ್ನು ನಮೂದಿಸಿ.

3. ಆನ್ಲೈನ್ ಪಾವತಿ ಮೂಲಕ ಪ್ರೀಮಿಯಂ ಮೊತ್ತವನ್ನು ಪಾವತಿಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಪಾಲಿಸಿಯ ಜೊತೆಗೆ ಒಂದು ದೃಢೀಕರಣದ ಮೇಲ್ ಅನ್ನು ನಿಮಗೆ ಮೇಲ್ ಮಾಡಲಾಗುತ್ತದೆ.

ಅಸ್ತಿತ್ವದಲ್ಲಿರುವ ಸ್ವಂತ ಹಾನಿ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ನವೀಕರಿಸಲು

1. ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಪಾಲಿಸಿಯನ್ನು ನವೀಕರಿಸಿ ಆಯ್ಕೆಮಾಡಿ.

2. ವಿವರಗಳನ್ನು ನಮೂದಿಸಿ, ಆ್ಯಡ್ ಆನ್ ಕವರ್‌ಗಳನ್ನು ಸೇರಿಸಿ/ಹೊರತುಪಡಿಸಿ ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸುವ ಮೂಲಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

3. ನವೀಕರಿಸಲಾದ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ IDಗೆ ಮೇಲ್ ಮಾಡಲಾಗುತ್ತದೆ.

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಕ್ಲೈಮ್‌ಗಾಗಿ ಫೈಲ್ ಮಾಡುವುದು ಹೇಗೆ??

ಕ್ಲೈಮ್ ಪ್ರಕ್ರಿಯೆಯನ್ನು, ಬಳಕೆದಾರರಿಗೆ ಸರಳ ಮತ್ತು ತಡೆರಹಿತ ಅನುಭವವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ನೀವು ಕ್ಲೈಮ್ ಫೈಲಿಂಗ್ ಪ್ರಾರಂಭಿಸುವ ಮೊದಲು ನಿಮ್ಮ RC ಬುಕ್, ನಿಮ್ಮ ಡ್ರೈವಿಂಗ್ ಲೈಸೆನ್ಸ್ ಮತ್ತು ಇನ್ಶೂರೆನ್ಸ್ ಪುರಾವೆ ಡಾಕ್ಯುಮೆಂಟ್‌ಗಳನ್ನು ಹೊಂದಿರಬೇಕು. ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್‌ಗೆ ಕ್ಲೈಮ್ ಸಲ್ಲಿಸಲು, ನೀವು ಈ ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಬಹುದು:

1. ಅಪಘಾತದ ನಂತರ, ಘಟನೆಯ ಮತ್ತು ಹಾನಿಯ ಚಿತ್ರಗಳು ಮತ್ತು ವಿಡಿಯೋಗಳಂಥ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿ, ಇದು fir ಫೈಲ್ ಮಾಡುವಾಗ ನಿಮ್ಮ ದೃಷ್ಟಿಕೋನದಲ್ಲಿ ಅಪಘಾತದ ವಿವರಣೆ ನೀಡಲು ಸಹಾಯ ಮಾಡುತ್ತದೆ ಮತ್ತು ಸುಲಭ ಸೆಟಲ್ಮೆಂಟ್‌ಗಾಗಿ ಕ್ಲೈಮ್ ಫೈಲಿಂಗ್‌ನೊಂದಿಗೆ ನೀವು ಇದನ್ನು ಲಗತ್ತಿಸಬಹುದು.

2. ನೀವು ಸಾಕಷ್ಟು ಪುರಾವೆಯನ್ನು ಸಂಗ್ರಹಿಸಿದ ಮತ್ತು FIR ಫೈಲ್ ಮಾಡಿದ ನಂತರ, ಎಚ್‌ಡಿಎಫ್‌ಸಿ ಎರ್ಗೋದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಕ್ಲೈಮ್ ನೋಂದಣಿ ಮಾಡಿಕೊಳ್ಳಿ, ನೀವು ಗ್ರಾಹಕ ಸಹಾಯ ಸೇವೆಯನ್ನು ಕೂಡ ತೆಗೆದುಕೊಳ್ಳಬಹುದು.

3. ಕ್ಲೈಮ್ ನೋಂದಣಿಯಾದ ನಂತರ, ಕ್ಲೈಮ್ ರೆಫರೆನ್ಸ್/ನೋಂದಣಿ ನಂಬರ್ ಅನ್ನು ಜನರೇಟ್ ಮಾಡಲಾಗುತ್ತದೆ ಮತ್ತು ನಿಮ್ಮ ಕಾರನ್ನು ರಿಪೇರಿ ಮಾಡಲು ಹತ್ತಿರದ ನೆಟ್ವರ್ಕ್ ಗ್ಯಾರೇಜ್ ಬಗ್ಗೆ ವಿವರಗಳನ್ನು ನೀಡಲು ಎಚ್‌ಡಿಎಫ್‌ಸಿ ಎರ್ಗೋದ ಗ್ರಾಹಕ ಸಹಾಯ ಕೇಂದ್ರ ನಿಮಗೆ ಸಹಾಯ ಮಾಡುತ್ತದೆ. ಒಂದು ವೇಳೆ ನಿಮ್ಮ ಕಾರು ಗ್ಯಾರೇಜ್‌ ತಲುಪಲು ಸಾಧ್ಯವಾಗದ ಸ್ಥಿತಿಯಲ್ಲಿದ್ದರೆ, ಅವರು ಕಾರನ್ನು ನೆಟ್ವರ್ಕ್ ಗ್ಯಾರೇಜಿಗೆ ಟೋ ಮಾಡಲು ಸಹಾಯ ಮಾಡುತ್ತಾರೆ.

4. ನೆಟ್ವರ್ಕ್ ಗ್ಯಾರೇಜ್‌ನಲ್ಲಿ, ನಿಮ್ಮ ಕಾರನ್ನು ರಿಪೇರಿ ಮಾಡಲು ತಗುಲುವ ನಿರೀಕ್ಷಿತ ವೆಚ್ಚವನ್ನು ತಿಳಿಸುವ ರಶೀದಿಯನ್ನು ನೀವು ಪಡೆಯುತ್ತೀರಿ, ಮತ್ತು ನೀವು ಅಲ್ಲಿ ನಗದುರಹಿತ ಕ್ಲೈಮ್ ಪಡೆಯಬಹುದು.

5. ನೀವು ಕಾರನ್ನು ನೆಟ್ವರ್ಕ್ ಗ್ಯಾರೇಜಿಗೆ ಕೊಂಡೊಯ್ಯಲು ಸಾಧ್ಯವಾಗದಿದ್ದರೆ, ಎಲ್ಲಾ ರಿಪೇರಿ ಶುಲ್ಕಗಳನ್ನು ಪಾವತಿಸಿ. ಇವುಗಳನ್ನು ನಂತರ ರಿಯಂಬ್ರಸ್ಮೆಂಟ್ ಮಾಡಲಾಗುತ್ತದೆ. ಎಲ್ಲಾ ರಶೀದಿಗಳು, ಬಿಲ್‌ಗಳು ಮತ್ತು ಇತರ ಡಾಕ್ಯುಮೆಂಟ್‌ಗಳನ್ನು ಸರಿಯಾಗಿ ಇರಿಸಲು ನೆನಪಿಡಿ.

6. ಎಲ್ಲಾ ಡಾಕ್ಯುಮೆಂಟ್‌ಗಳನ್ನು ಅಟ್ಯಾಚ್ ಮಾಡಿ ಮತ್ತು ನೀಡಲಾದ ಕ್ಲೈಮ್ ನೋಂದಣಿ ನಂಬರ್ ಜೊತೆಗೆ ಕ್ಲೈಮ್ ಪೋರ್ಟಲ್‌ನಲ್ಲಿ ಅವುಗಳನ್ನು ಸಲ್ಲಿಸಿ

7. ಕಾರ್ ಇನ್ಶೂರೆನ್ಸ್ ಕಂಪನಿಯು ನಂತರ ನಿಮ್ಮ ಕ್ಲೈಮ್ ಅನ್ನು ಪರಿಶೀಲಿಸುತ್ತದೆ ಮತ್ತು ಅದನ್ನು ಸೆಟಲ್ ಮಾಡುವಾಗ, ಸವಕಳಿಗೆ ಸಂಬಂಧಿಸಿದ ಯಾವುದೇ ಶುಲ್ಕಗಳು, ಅಪಘಾತಕ್ಕೆ ಸಂಬಂಧಿಸದ ರಿಪೇರಿಗಳು ಮತ್ತು ಇತರ ಕಡ್ಡಾಯ ಕಡಿತಗಳನ್ನು ನಿಮ್ಮ ಫೈಲ್ ಮಾಡಿದ ಕ್ಲೈಮ್‌ನಿಂದ ಕಡಿತಗೊಳಿಸಲಾಗುತ್ತದೆ.

8. ಆದಾಗ್ಯೂ, ನೆಟ್ವರ್ಕ್ ಗ್ಯಾರೇಜ್‌ನ ರಿಪೇರಿ ಸೇವೆಯ ನಿಮ್ಮ ಅನುಭವವನ್ನು ನಮೂದಿಸುವ ಪ್ರತಿಕ್ರಿಯೆ ಪತ್ರಕ್ಕೆ ನೀವು ಸಹಿ ಮಾಡಬೇಕು.

9. ಕಳ್ಳತನದಿಂದಾಗಿ ನೀವು ನಿಮ್ಮ ಕಾರನ್ನು ಕಳೆದುಕೊಂಡರೆ, ಎಚ್‌ಡಿಎಫ್‌ಸಿ ಎರ್ಗೋಗೆ ಡಾಕ್ಯುಮೆಂಟ್‌ಗಳನ್ನು ಪರಿಶೀಲಿಸಲು ಮತ್ತು ಖಚಿತಪಡಿಸಲು ತನಿಖಾಧಿಕಾರಿಯ ಅಗತ್ಯವಿರುವುದರಿಂದ ಕ್ಲೈಮ್ ಸೆಟಲ್ಮೆಂಟ್ ಸುಮಾರು 60 ದಿನಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ

GET A FREE QUOTE NOW
ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಿದ್ಧರಿದ್ದೀರಾ? ಅದಕ್ಕೆ ಕೆಲವೇ ನಿಮಿಷಗಳು ಸಾಕು!

ಸ್ಟ್ಯಾಂಡ್‌ಅಲೋನ್ OD ಕಾರ್ ಇನ್ಶೂರೆನ್ಸ್‌ನಲ್ಲಿ IDV ಎಂದರೇನು?

ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ನಿಮ್ಮ ವಾಹನದ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಸೂಚಿಸುತ್ತದೆ. ಇದು OD ಇನ್ಶೂರೆನ್ಸ್ ಖರೀದಿಸುವಾಗ ವಾಹನದ ಅಂದಾಜು ಮೌಲ್ಯ ಮತ್ತು ಪಾಲಿಸಿಯ ವಿಮಾ ಮೊತ್ತವನ್ನು ಸೂಚಿಸುತ್ತದೆ. ನಿಮ್ಮ ಕಾರು ಕಳ್ಳತನವಾದರೆ ಅಥವಾ ಅದಕ್ಕೆ ಸರಿಪಡಿಸಲಾಗದ ನಷ್ಟವಾದರೆ, ಸವಕಳಿ ವೆಚ್ಚಗಳನ್ನು ಕಡಿತಗೊಳಿಸಿದ ನಂತರ ನೀವು IDV ಮೊತ್ತವನ್ನು ಕ್ಲೈಮ್ ಸೆಟಲ್ಮೆಂಟ್ ಆಗಿ ಪಡೆಯುತ್ತೀರಿ. ಅಲ್ಲದೆ, IDV ಮೊತ್ತವು ನಿಮ್ಮ ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. IDV ಹೆಚ್ಚಾದಷ್ಟೂ, ಪ್ರೀಮಿಯಂ ಹೆಚ್ಚಾಗಿರುತ್ತದೆ.

9000+ cashless Garagesˇ Across India

ಇತ್ತೀಚಿನ ಕಾರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

Third Party Car Insurance & Own Damage Insurance: What You Need to Know

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಮತ್ತು ಸ್ವಂತ ಹಾನಿ ಇನ್ಶೂರೆನ್ಸ್: ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

ಪೂರ್ತಿ ಓದಿ
ಮಾರ್ಚ್ 10, 2025 ರಂದು ಪ್ರಕಟಿಸಲಾಗಿದೆ
A guide to filing own damage claim in case you meet with an accident

ಒಂದು ವೇಳೆ ನೀವು ಅಪಘಾತಕ್ಕೆ ಈಡಾದರೆ ಸ್ವಂತ ಹಾನಿ ಕ್ಲೈಮ್ ಸಲ್ಲಿಸುವ ಮಾರ್ಗದರ್ಶಿ

ಪೂರ್ತಿ ಓದಿ
ಆಗಸ್ಟ್ 6, 2021 ರಂದು ಪ್ರಕಟಿಸಲಾಗಿದೆ
Understanding IDV in car insurance and why more is better

ಕಾರ್ ಇನ್ಶೂರೆನ್ಸ್‌ನಲ್ಲಿ IDV ಅರ್ಥಮಾಡಿಕೊಳ್ಳುವುದು ಮತ್ತು ಹೆಚ್ಚು ಯಾಕೆ ಉತ್ತಮವಾಗಿದೆ

ಪೂರ್ತಿ ಓದಿ
ಮಾರ್ಚ್ 1, 2021 ರಂದು ಪ್ರಕಟಿಸಲಾಗಿದೆ
All You Should Know about IRDAI’s withdrawal of long-term own damage cover for motor insurance

ಮೋಟಾರ್ ಇನ್ಶೂರೆನ್ಸ್‌ಗಾಗಿ IRDAI ದೀರ್ಘಾವಧಿಯ ಸ್ವಂತ ಹಾನಿ ಕವರ್ ವಿತ್‌ಡ್ರಾವಲ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ಪೂರ್ತಿ ಓದಿ
ಜುಲೈ 13, 2020 ರಂದು ಪ್ರಕಟಿಸಲಾಗಿದೆ
slider-right
slider-left
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿ ಕುರಿತು ಆಗಾಗ ಕೇಳುವ ಪ್ರಶ್ನೆಗಳು


ಇಲ್ಲ, ನಿಮ್ಮ ಇಷ್ಟಾನುಸಾರವಾಗಿ, ಸ್ಟ್ಯಾಂಡ್ಅಲೋನ್ OD ಒದಗಿಸುವ ಯಾವುದೇ ಇನ್ಶೂರೆನ್ಸ್‌ ಪೂರೈಕೆದಾರರಿಂದ ಈ ಪ್ಲಾನ್ ಖರೀದಿಸಬಹುದು. ಪ್ಲಾನ್ ಆಯ್ಕೆ ಮಾಡುವ ಮೊದಲು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳ ಕೂಲಂಕುಷ ಮೌಲ್ಯಮಾಪನ ಮತ್ತು ಹೋಲಿಕೆ ಮಾಡಬೇಕು.
ಮಾನ್ಯವಾದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವ ಯಾವುದೇ ವಾಹನಗಳಿಗೆ, ಸ್ಟ್ಯಾಂಡ್ಅಲೋನ್ OD ಪ್ಲಾನ್‌ ಖರೀದಿಸಬಹುದು.
ಮೂರು ಅತ್ಯಂತ ಸಾಮಾನ್ಯ ರೀತಿಯ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಥರ್ಡ್ ಪಾರ್ಟಿ, ಸ್ವತಂತ್ರ ಸ್ವಂತ ಹಾನಿಗಳು ಮತ್ತು ಸಮಗ್ರ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒಳಗೊಂಡಿವೆ.
ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಅತಿ ಕಡಿಮೆ ಪ್ರೀಮಿಯಂ ಹೊಂದಿರುವ ಮೂಲಭೂತ ಪಾಲಿಸಿ. ಇದು ಭಾರತೀಯ ಕಾನೂನುಗಳ ಪ್ರಕಾರ ಒಂದು ಕಡ್ಡಾಯ ಅವಶ್ಯಕತೆಯಾಗಿದೆ.
ಅಪ್ಡೇಟ್ ಆದ ನಿಯಮಾವಳಿಗಳು ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಕಡ್ಡಾಯ ಅಗತ್ಯವನ್ನಾಗಿಸಿವೆ. ಇದನ್ನು ನಿಮ್ಮ OD ಪಾಲಿಸಿ ಖರೀದಿಸುವಾಗ ಸೇರಿಸಿಕೊಳ್ಳಬಹುದು. ಆದರೆ ಖರೀದಿಸುವ ಮುನ್ನ ಅದನ್ನು ಈಗಾಗಲೇ ನಿಮ್ಮ ಥರ್ಡ್ ಪಾರ್ಟಿ ಕವರ್‌ನಲ್ಲಿ ಸೇರಿಸಲಾಗಿದೆಯೇ ಎಂದು ಪರಿಶೀಲಿಸುವ ಮೂಲಕ, ಎರಡೆರಡು ಸಲ ಖರೀದಿಸುವುದನ್ನು ತಪ್ಪಿಸಬಹುದು.
ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಲ್ಲ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಥರ್ಡ್ ಪಾರ್ಟಿ ಕವರ್ ಹೊಂದುವುದು ಕಡ್ಡಾಯವಾಗಿದೆ. ಆದಾಗ್ಯೂ, ಯಾವುದೇ ಇನ್ಶೂರೆಬಲ್ ಅಪಾಯದಿಂದಾಗಿ ವಾಹನಕ್ಕೆ ಆಗುವ ಹಾನಿಯಿಂದ ಸಂಪೂರ್ಣ ರಕ್ಷಣೆಯನ್ನು ಪಡೆಯಲು ನಿಮ್ಮ ಥರ್ಡ್ ಪಾರ್ಟಿ ಕವರ್‌ನೊಂದಿಗೆ ಸ್ವಂತ ಹಾನಿ ಇನ್ಶೂರೆನ್ಸ್ ಆಯ್ಕೆ ಮಾಡುವುದು ಸೂಕ್ತವಾಗಿದೆ.
ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ಒಂದು ವರ್ಷಕ್ಕೆ ಮಾನ್ಯವಾಗಿರುತ್ತದೆ ಮತ್ತು ವಾರ್ಷಿಕವಾಗಿ ನವೀಕರಿಸಬೇಕು. ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾದ (IRDAI) ಇತ್ತೀಚಿನ ನಿರ್ದೇಶನದ ಪ್ರಕಾರ, ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಕವರ್ ಅನ್ನು ವಾರ್ಷಿಕ ಆಧಾರದ ಮೇಲೆ ನೀಡಬಹುದು ಮತ್ತು ನಂತರ ಪ್ರತಿ ವರ್ಷ ನವೀಕರಿಸಬಹುದು.
ಸ್ವಂತ ಹಾನಿ (OD) ಇನ್ಶೂರೆನ್ಸ್ ಒಂದು ರೀತಿಯ ಮೋಟಾರ್ ಇನ್ಶೂರೆನ್ಸ್ ಆಗಿದ್ದು, ಅಪಘಾತದಲ್ಲಿ ಹಾನಿಗೊಳಗಾದರೆ, ಕಳ್ಳತನವಾದರೆ ಅಥವಾ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳಿಂದ ಹಾನಿಗೊಳಗಾದರೆ ನಿಮ್ಮ ವಾಹನದ ದುರಸ್ತಿ ವೆಚ್ಚಕ್ಕೆ ಕವರೇಜ್ ಒದಗಿಸುತ್ತದೆ.
ಇನ್ಶೂರೆಬಲ್ ಅಪಾಯದಿಂದಾಗಿ ವಾಹನಕ್ಕೆ ಉಂಟಾಗುವ ಯಾವುದೇ ರೀತಿಯ ಹಾನಿಗೆ ಸ್ವಂತ ಹಾನಿ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ. ಸಮಗ್ರ ಕವರ್‌ಗೆ ಹೋಲಿಸಿದರೆ ಇದು ತುಲನಾತ್ಮಕವಾಗಿ ಕಡಿಮೆ ಬೆಲೆಯಾಗಿದೆ. ನಿಮ್ಮ ಮಾರುತಿ ಸ್ವಿಫ್ಟ್‌ಗೆ ನೀವು ಕಡ್ಡಾಯ ಥರ್ಡ್ ಪಾರ್ಟಿ ಕವರ್ ಹೊಂದಿದ್ದರೆ, ಅದಕ್ಕೆ ಸ್ವಂತ ಹಾನಿ ಕವರ್ ಸೇರಿಸುವುದನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ.
ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ (OD) ಕಾರ್ ಇನ್ಶೂರೆನ್ಸ್ ಪಾಲಿಸಿಯು ಒಂದು ವರ್ಷದ ಮಾನ್ಯತೆಯನ್ನು ಹೊಂದಿದೆ ಮತ್ತು ವಾರ್ಷಿಕವಾಗಿ ನವೀಕರಿಸಬೇಕಾಗುತ್ತದೆ.
ನಿಮ್ಮ ವಿಮಾದಾತರ ವೆಬ್‌ಸೈಟ್ ಅಥವಾ ಆ್ಯಪ್‌ ಮೂಲಕ ಅಥವಾ ವಾಹನ್ ಪೋರ್ಟಲ್ ಮೂಲಕ ಆನ್ಲೈನ್‌ನಲ್ಲಿ ನೀವು ನಿಮ್ಮ ಸ್ವಂತ ಹಾನಿ ಇನ್ಶೂರೆನ್ಸ್ ಸ್ಟೇಟಸ್ ಅನ್ನು ಪರಿಶೀಲಿಸಬಹುದು.
ಕಾರ್ ಇನ್ಶೂರೆನ್ಸ್‌ನ ಸ್ವಂತ ಹಾನಿ (OD) ಪ್ರೀಮಿಯಂ ಅನ್ನು ಕಾರ್‌ನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಶೇಕಡಾವಾರು ಎಂದು ಲೆಕ್ಕ ಹಾಕಲಾಗುತ್ತದೆ. ಶೋರೂಮ್ ಬೆಲೆಗೆ ಯಾವುದೇ ಅಕ್ಸೆಸರಿಗಳ ವೆಚ್ಚವನ್ನು ಸೇರಿಸಿ, ಸವಕಳಿ ಮೌಲ್ಯವನ್ನು ಕಡಿತಗೊಳಿಸಿದ ನಂತರ ಸಿಗುವ ಮೌಲ್ಯವನ್ನು IDV ಎಂದು ಲೆಕ್ಕ ಹಾಕಲಾಗುತ್ತದೆ. ನಂತರ ಈ ಕೆಳಗಿನ ಫಾರ್ಮುಲಾವನ್ನು ಬಳಸಿ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ:
• OD ಪ್ರೀಮಿಯಂ = IDV x (ಪ್ರೀಮಿಯಂ ದರ + ಆ್ಯಡ್-ಆನ್‌ಗಳು) - (ರಿಯಾಯಿತಿ ಮತ್ತು ಪ್ರಯೋಜನ)
ನಿಮ್ಮ ಸ್ವಂತ ಹಾನಿ ಕವರ್ ಕ್ಲೈಮ್ ಮಾಡಲು, ನೀವು ಮೊದಲು ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಬೇಕು ಮತ್ತು ನಂತರ ಅಪಘಾತದ ಬಗ್ಗೆ ನಿಮ್ಮ ವಿಮಾದಾತರಿಗೆ ತಿಳಿಸಬೇಕು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

slider-right
slider-left
ಎಲ್ಲಾ ಪ್ರಶಸ್ತಿಗಳನ್ನು ನೋಡಿ