ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ ನವೀಕರಿಸಿ

ಕಾರ್ ಇನ್ಶೂರೆನ್ಸ್ ನವೀಕರಣ

ಆಕ್ಸಿಡೆಂಟ್, ನೈಸರ್ಗಿಕ ವಿಪತ್ತುಗಳು ಅಥವಾ ಮನುಷ್ಯ ಮಾಡಿದ ಅನಾಹುತ, ಇತ್ಯಾದಿ ಅನಿರೀಕ್ಷಿತ ಘಟನೆಗಳಿಂದ ಉಂಟಾಗಬಹುದಾದ ಹೊಣೆಗಾರಿಕೆಗಳ ವಿರುದ್ಧ ಕಾರ್ ಇನ್ಶೂರೆನ್ಸ್, ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ.. ಅದರ ಗಡುವು ದಿನಾಂಕಕ್ಕಿಂತ ಮೊದಲು ನಿಮ್ಮ ಪಾಲಿಸಿಯನ್ನು ನವೀಕರಿಸಲು ನಿಮಗೆ ಸಾಧ್ಯವಾಗದಿದ್ದರೆ ಅದು ಲ್ಯಾಪ್ಸ್ ಆಗುತ್ತದೆ ಮತ್ತು ಈ ಅವಧಿಯಲ್ಲಿ ಮಾಡಲಾದ ಯಾವುದೇ ಕ್ಲೇಮ್ ಅನ್ನು ತಿರಸ್ಕರಿಸಲಾಗುತ್ತದೆ.. ಜೊತೆಗೆ, ಮೋಟಾರ್ ವಾಹನ ಕಾಯ್ದೆ 1988 ಮತ್ತು ಇತ್ತೀಚೆಗೆ ಜಾರಿಯಾದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯಿದೆ 2019 ರ ಅಡಿಯಲ್ಲಿ ಎಲ್ಲಾ ಕಾರ್ ಚಾಲಕರು ಸದಾಕಾಲ ಸರಿಯಾದ ಕಾರ್ ಇನ್ಶೂರೆನ್ಸ್ ಹೊಂದಿರಬೇಕಾದ್ದು ಕಡ್ಡಾಯವಾಗಿದೆ.

ಕಾರ್ ಇನ್ಶೂರೆನ್ಸ್ ಪ್ಲಾನ್ ನವೀಕರಣ ಏಕೆ ಅಗತ್ಯವಿದೆ?

ಎಲ್ಲಾ ಕಾರ್ ಚಾಲಕರು ಸದಾಕಾಲ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರತಕ್ಕದ್ದು ಕಡ್ಡಾಯ ಕಾನೂನು ಅಗತ್ಯವಾಗಿದೆ.. ನಿಮ್ಮ ಇನ್ಶೂರೆನ್ಸ್ ಪ್ಲಾನ್ ನವೀಕರಿಸದೇ ಇದ್ದರೆ ಭಾರೀ ಬೆಲೆ ತೆರಬೇಕಾದೀತು. ಆಕ್ಸಿಡೆಂಟ್ ಸಂದರ್ಭದಲ್ಲಿ ನಿಮ್ಮ ಬಳಿ ಸರಿಯಾದ ಕಾರ್ ಇನ್ಶೂರೆನ್ಸ್ ಇಲ್ಲದಿದ್ದರೆ. ಥರ್ಡ್ ಪಾರ್ಟಿಗೆ ಅಥವಾ ಥರ್ಡ್ ಪಾರ್ಟಿ ಆಸ್ತಿಗೆ ಉಂಟಾದ ಯಾವುದೇ ಹಾನಿಗೆ ಸಂಬಂಧಿಸಿದ ವೆಚ್ಚಗಳನ್ನು ನೀವು ಕೈಯಾರೆ ಪಾವತಿಸಬೇಕಾಗುತ್ತದೆ.. ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ನವೀಕರಿಸುವ ಸೌಲಭ್ಯದ ಮೂಲಕ, ಗಡುವು ದಿನಾಂಕಕ್ಕಿಂತ ಮೊದಲೇ ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಇನ್ನಷ್ಟು ಅನುಕೂಲಕರ ಮತ್ತು ಸುಲಭವಾಗಿದೆ.

  • ದಯವಿಟ್ಟು ಗಮನಿಸಿ: ಇತ್ತೀಚೆಗೆ ಜಾರಿಯಾದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯಿದೆ 2019 ರ ಪ್ರಕಾರ, ಇನ್ಶೂರೆನ್ಸ್ ಮಾಡದ ಕಾರನ್ನು ಚಾಲನೆ ಮಾಡಿದರೆ, ನಿಮಗೆ ₹2,000 ದಂಡ ಅಥವಾ 3 ತಿಂಗಳವರೆಗೆ ಜೈಲುಶಿಕ್ಷೆ ವಿಧಿಸಲಾಗುತ್ತದೆ.

  • ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆನ್ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ಇದು ನಿಮ್ಮ ಸಮಯ ಮತ್ತು ಶ್ರಮ ಉಳಿಸುತ್ತದೆ

  • ನೀವು ಯಾವಾಗಲೂ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಗಡುವಿನ ದಿನಾಂಕಕ್ಕಿಂತ ಮೊದಲೇ ನವೀಕರಿಸಲು ಪ್ರಯತ್ನಿಸಬೇಕು, ಒಂದು ವೇಳೆ ನೀವು ಪಾಲಿಸಿಯನ್ನು ನವೀಕರಿಸಲು ವಿಫಲವಾದರೆ, ಅದು ಲ್ಯಾಪ್ಸ್ ಆಗುತ್ತದೆ ಮತ್ತು ಈ ಅವಧಿಯಲ್ಲಿ ಮಾಡಲಾದ ಯಾವುದೇ ಕ್ಲೈಮ್‌ಗಳನ್ನು ವಿಮಾದಾತರು ತಿರಸ್ಕರಿಸುತ್ತಾರೆ.

  • ಕಾರ್ ಇನ್ಶೂರೆನ್ಸ್ ಪಾಲಿಸಿಯು 90 ದಿನಗಳಿಗಿಂತ ಹೆಚ್ಚು ಕಾಲ ಲ್ಯಾಪ್ಸ್ ಆದ ಸ್ಥಿತಿಯಲ್ಲಿದ್ದರೆ, ನೀವು ನಿಮ್ಮ ನೋ ಕ್ಲೈಮ್ ಬೋನಸ್ ಕಳೆದುಕೊಳ್ಳುತ್ತೀರಿ.

ನಮ್ಮ ಕಾರ್ ಇನ್ಶೂರೆನ್ಸ್ ನವೀಕರಣ ಪ್ಲಾನ್‌ಗಳು

ಒಂದು ವರ್ಷದ ಸಮಗ್ರ ಕಾರ್ ಇನ್ಶೂರೆನ್ಸ್
ಒಂದು ವರ್ಷದ ಸಮಗ್ರ ಕಾರ್ ಇನ್ಶೂರೆನ್ಸ್
  • ನಿಮ್ಮ ಕಾರನ್ನು 1 ವರ್ಷಕ್ಕೆ ನವೀಕರಿಸಿ. ಆಕ್ಸಿಡೆಂಟ್, ಕಳ್ಳತನ, ನೈಸರ್ಗಿಕ ವಿಕೋಪಗಳು, ಮಾನವ-ನಿರ್ಮಿತ ವಿಕೋಪಗಳು ಮತ್ತು ಥರ್ಡ್ ಪಾರ್ಟಿಗೆ ಆದ ಯಾವುದೇ ನಷ್ಟದ ವಿರುದ್ಧ ಕವರೇಜ್ ಪಡೆಯಿರಿ
>ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕವರ್ - ಖಾಸಗಿ ಕಾರು
ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕವರ್ - ಖಾಸಗಿ ಕಾರು
  • ಅಪಘಾತ, ಕಳ್ಳತನ, ನೈಸರ್ಗಿಕ ವಿಕೋಪ ಮತ್ತು ಮಾನವ-ನಿರ್ಮಿತ ವಿಕೋಪಗಳ ವಿರುದ್ಧ ಮಾತ್ರ ನಿಮ್ಮ ಕಾರನ್ನು ಕವರ್ ಮಾಡಲು ಬಯಸಿದರೆ ಸ್ಟ್ಯಾಂಡ್‌ಅಲೋನ್ ಇನ್ಶೂರೆನ್ಸ್ ಆಯ್ಕೆ ಮಾಡಿ.
ದೀರ್ಘಾವಧಿಯ ಸಮಗ್ರ ಕಾರ್ ಇನ್ಶೂರೆನ್ಸ್
ದೀರ್ಘಾವಧಿಯ ಸಮಗ್ರ ಕಾರ್ ಇನ್ಶೂರೆನ್ಸ್
  • ಈಗ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಬರೋಬ್ಬರಿ 3 ವರ್ಷಗಳವರೆಗೆ ಒಂದೇ ಸಲ ನವೀಕರಿಸಿ!! ಆಕ್ಸಿಡೆಂಟ್, ಕಳ್ಳತನ, ನೈಸರ್ಗಿಕ ವಿಕೋಪಗಳು ಮತ್ತು ಮನುಷ್ಯನಿಂದಾದ ಅನಾಹುತಗಳು ಹಾಗೂ ಥರ್ಡ್ ಪಾರ್ಟಿಗೆ ಆದ ಯಾವುದೇ ನಷ್ಟದ ವಿರುದ್ಧ ಕವರ್ ಪಡೆದುಕೊಳ್ಳಿ
ಥರ್ಡ್ ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್
ಥರ್ಡ್ ಪಾರ್ಟಿ ಲಯಬಿಲಿಟಿ ಕಾರ್ ಇನ್ಶೂರೆನ್ಸ್
  • ಥರ್ಡ್ ಪಾರ್ಟಿ ಅಥವಾ ಥರ್ಡ್ ಪಾರ್ಟಿ ಆಸ್ತಿಗೆ ಆದ ಯಾವುದೇ ಭೌತಿಕ ಹಾನಿಯ ವಿರುದ್ಧ ಕವರೇಜ್ ಪಡೆಯಿರಿ.
why-hdfc-ergo

ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ನಮ್ಮ ಗ್ರಾಹಕರ ಬಳಗದ ಕಡೆ ಒಮ್ಮೆ ಕಣ್ಣು ಹಾಯಿಸಿ. 1 ಕೋಟಿಗೂ ಹೆಚ್ಚು ನಗುಮುಖಗಳನ್ನು ನೋಡಿ ನೀವೇ ನಿಬ್ಬೆರಗಾಗುತ್ತೀರಿ! IAAA ಮತ್ತು ICRA ರೇಟಿಂಗ್‌ಗಳು ಸೇರಿದಂತೆ ನಾವು ಪಡೆದ ಅನೇಕ ಪ್ರಶಸ್ತಿಗಳು, ನಮ್ಮ ವಿಶ್ವಾಸಾರ್ಹತೆ, ನಂಬಿಕೆ ಮತ್ತು ಗರಿಷ್ಠ ಕ್ಲೇಮ್ ಪಾವತಿ ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತವೆ.!
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ತಡ ರಾತ್ರಿ ವಾಹನ ರಿಪೇರಿಗಳು¯

ನಕ್ಷತ್ರಗಳು ಹೊಳೆಯಲು ನಿರಾಕರಿಸಬಹುದು, ಆದರೆ ರಿಪೇರಿಯನ್ನು ನಾವು ಎಂದಿಗೂ ನಿರಾಕರಿಸುವುದಿಲ್ಲ! ನಾವು ಯಾವುದೇ ತೊಂದರೆಯಿಲ್ಲದೆ ಬೆಳಗಿನಿಂದ ಸಂಜೆಯವರೆಗೆ ಸಣ್ಣ ಅಪಘಾತದ ಹಾನಿಗಳನ್ನು ದುರಸ್ತಿ ಮಾಡುತ್ತೇವೆ. ನೀವು ನಮ್ಮನ್ನು ಸಂಪರ್ಕಿಸಿದರೆ ಸಾಕು; ನಾವು ರಾತ್ರಿ ಹೊತ್ತು ನಿಮ್ಮ ಕಾರನ್ನು ಕೊಂಡೊಯ್ದು, ರಿಪೇರಿ ಮಾಡಿ, ಬೆಳಗ್ಗೆ ಹೊತ್ತಿಗೆ ನಿಮ್ಮ ಮನೆಬಾಗಿಲಿಗೆ ತಂದು ನಿಲ್ಲಿಸುತ್ತೇವೆ . ನಾವು ಈ ಸೇವೆಗಳನ್ನು ಸದ್ಯಕ್ಕೆ 13 ನಗರಗಳಲ್ಲಿ ನೀಡುತ್ತಿದ್ದೇವೆ!
why-hdfc-ergo
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಪಾರದರ್ಶಕತೆಯೇ ನಮ್ಮ ಟ್ರಾನ್ಸಾಕ್ಷನ್‌ಗಳ ಮೂಲಾಧಾರ. ನಾವು ನಿಮಗೆ ಖಂಡಿತವಾಗಿಯೂ ತಡೆರಹಿತ ಕ್ಲೈಮ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ.. 30 ನಿಮಿಷಗಳ** ಕ್ಲೈಮ್ ಅನುಮೋದನೆ ಮತ್ತು QR ಕೋಡ್ ಆಧಾರಿತ ಆನ್ಲೈನ್ ಕ್ಲೈಮ್ ಮಾಹಿತಿಯ ಮೂಲಕ ನಾವು ನಮ್ಮ ಗ್ರಾಹಕರ ಮುಖದಲ್ಲಿ ನಗು ಮೂಡಿಸುತ್ತಿದ್ದೇವೆ.
why-hdfc-ergo
why-hdfc-ergo
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಪ್ರತಿ ದಿನ, ಪ್ರತಿ ವಾರ, ನಿಮಗೆ ಅಗತ್ಯ ಬಂದಾಗಲೆಲ್ಲಾ ತೊಂದರೆ-ರಹಿತ ಬೆಂಬಲ ಪಡೆಯಿರಿ! ನಮ್ಮ ವಿಶೇಷ ಆಂತರಿಕ ಕ್ಲೈಮ್ ತಂಡ ಮತ್ತು ಗ್ರಾಹಕ ಸೇವೆ ಮೂಲಕ, ಪ್ರತಿಯೊಂದು ಕರೆಗೂ ತಪ್ಪದೇ ಉತ್ತರಿಸುತ್ತೇವೆ. ಅದ್ಭುತ ಅಲ್ಲವೇ? ನಡುರಾತ್ರಿಯಲ್ಲೂ ನಿಮ್ಮ ಬೆಂಬಲಕ್ಕೆ ಒಬ್ಬರು ನಿಲ್ಲುತ್ತಾರೆ ಎಂಬುದು ಎಷ್ಟು ಒಳ್ಳೆಯ ವಿಷಯ ಅಲ್ಲವೇ?
why-hdfc-ergo
why-hdfc-ergo
why-hdfc-ergo
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ! ತಡೆರಹಿತ!

ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಕೆಲಸಗಳನ್ನೂ ಪೇಪರ್‌ಲೆಸ್ ಮಾಡಿರುವಾಗ ಕಂತೆಕಂತೆ ಡಾಕ್ಯುಮೆಂಟ್‌ಗಳನ್ನು ಹೊತ್ತೊಯ್ಯುವ ಚಿಂತೆ ಯಾಕೆ? ಆನ್ಲೈನ್ ಟ್ರಾನ್ಸಾಕ್ಷನ್‌ಗಳು ನಿಮ್ಮ ಬೇರೆ ಕೆಲಸಗಳಿಗೆ ಅಡ್ಡಿಪಡಿಸುವುದಿಲ್ಲ! 'ಎಚ್‌ಡಿಎಫ್‌ಸಿ ಎರ್ಗೋ'ಗೆ ನಿಮ್ಮ ಸಮಯ ಬಹಳ ಅಮೂಲ್ಯ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
why-hdfc-ergo

ಸುರಕ್ಷಿತ 1.5+ ಕೋಟಿ ನಗು!@

ನಮ್ಮ ಗ್ರಾಹಕರ ಬಳಗದ ಕಡೆ ಒಮ್ಮೆ ಕಣ್ಣು ಹಾಯಿಸಿ. 1 ಕೋಟಿಗೂ ಹೆಚ್ಚು ನಗುಮುಖಗಳನ್ನು ನೋಡಿ ನೀವೇ ನಿಬ್ಬೆರಗಾಗುತ್ತೀರಿ! IAAA ಮತ್ತು ICRA ರೇಟಿಂಗ್‌ಗಳು ಸೇರಿದಂತೆ ನಾವು ಪಡೆದ ಅನೇಕ ಪ್ರಶಸ್ತಿಗಳು, ನಮ್ಮ ವಿಶ್ವಾಸಾರ್ಹತೆ, ನಂಬಿಕೆ ಮತ್ತು ಗರಿಷ್ಠ ಕ್ಲೇಮ್ ಪಾವತಿ ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತವೆ.!
why-hdfc-ergo

ತಡರಾತ್ರಿಯ ಕಾರ್ ರಿಪೇರಿ ಸೇವೆಗಳು***

ನಕ್ಷತ್ರಗಳು ಹೊಳೆಯಲು ನಿರಾಕರಿಸಬಹುದು, ಆದರೆ ನಾವು ಎಂದಿಗೂ ರಿಪೇರಿಯನ್ನು ನಿರಾಕರಿಸುವುದಿಲ್ಲ.! ನಾವು ಯಾವುದೇ ತೊಂದರೆಯಿಲ್ಲದೆ ಬೆಳಗಿನಿಂದ ರಾತ್ರಿಯವರೆಗೆ ಸಣ್ಣ ಅಪಘಾತದ ಹಾನಿಗಳನ್ನು ದುರಸ್ತಿ ಮಾಡುತ್ತೇವೆ.. ನೀವು ನಮ್ಮನ್ನು ಸಂಪರ್ಕಿಸಿದರೆ ಸಾಕು; ನಾವು ರಾತ್ರಿಯಲ್ಲಿ ನಿಮ್ಮ ಕಾರನ್ನು ಕೊಂಡೊಯ್ಯುತ್ತೇವೆ, ರಿಪೇರಿ ಮಾಡುತ್ತೇವೆ, ಮಾರನೇ ದಿನ ಬೆಳಗ್ಗೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಮಾಡುತ್ತೇವೆ. ನಾವು ಈ ಸೇವೆಗಳನ್ನು ಸದ್ಯಕ್ಕೆ 13 ನಗರಗಳಲ್ಲಿ ಒದಗಿಸುತ್ತಿದ್ದೇವೆ.!
why-hdfc-ergo

ಅತ್ಯುತ್ತಮ ಪಾರದರ್ಶಕತೆ

ಪಾರದರ್ಶಕತೆಯೇ ನಮ್ಮ ಟ್ರಾನ್ಸಾಕ್ಷನ್‌ಗಳ ಮೂಲಾಧಾರ. ನಾವು ನಿಮಗೆ ಖಂಡಿತವಾಗಿಯೂ ತಡೆರಹಿತ ಕ್ಲೈಮ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ.. 30 ನಿಮಿಷಗಳ** ಕ್ಲೈಮ್ ಅನುಮೋದನೆ ಮತ್ತು QR ಕೋಡ್ ಆಧಾರಿತ ಆನ್ಲೈನ್ ಕ್ಲೈಮ್ ಮಾಹಿತಿಯ ಮೂಲಕ ನಾವು ನಮ್ಮ ಗ್ರಾಹಕರ ಮುಖದಲ್ಲಿ ನಗು ಮೂಡಿಸುತ್ತಿದ್ದೇವೆ.
why-hdfc-ergo

ನಿಮಗೆ ಬೇಕಾದ ಎಲ್ಲಾ ಬೆಂಬಲ - 24 x 7!

ಪ್ರತಿ ದಿನ, ಪ್ರತಿ ವಾರ, ನಿಮಗೆ ಅಗತ್ಯ ಬಂದಾಗಲೆಲ್ಲಾ ತೊಂದರೆ-ರಹಿತ ಬೆಂಬಲ ಪಡೆಯಿರಿ! ನಮ್ಮ ಸಮರ್ಪಿತ ಆಂತರಿಕ ಕ್ಲೈಮ್ ತಂಡ ಮತ್ತು ಗ್ರಾಹಕ ಸೇವೆ ಮೂಲಕ, ಪ್ರತಿಯೊಂದು ವಿಚಾರಣೆಗೂ ತಪ್ಪದೇ ಪ್ರತಿಕ್ರಿಯೆ ನೀಡುತ್ತೇವೆ. ನಡುರಾತ್ರಿಯಲ್ಲೂ ನಿಮ್ಮ ಬೆಂಬಲಕ್ಕೆ ಒಬ್ಬರು ನಿಲ್ಲುತ್ತಾರೆ ಎಂಬುದು ಎಷ್ಟು ಒಳ್ಳೆಯ ವಿಷಯ ಅಲ್ಲವೇ?
why-hdfc-ergo

ಕಾಗದರಹಿತ! ತಡೆರಹಿತ!

ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಕೆಲಸಗಳನ್ನೂ ಪೇಪರ್‌ಲೆಸ್ ಮಾಡಿರುವಾಗ ಕಂತೆಕಂತೆ ಡಾಕ್ಯುಮೆಂಟ್‌ಗಳನ್ನು ಹೊತ್ತೊಯ್ಯುವ ಚಿಂತೆ ಯಾಕೆ? ಆನ್ಲೈನ್ ಟ್ರಾನ್ಸಾಕ್ಷನ್‌ಗಳು ನಿಮ್ಮ ಬೇರೆ ಕೆಲಸಗಳಿಗೆ ಅಡ್ಡಿಪಡಿಸುವುದಿಲ್ಲ! 'ಎಚ್‌ಡಿಎಫ್‌ಸಿ ಎರ್ಗೋ'ಗೆ ನಿಮ್ಮ ಸಮಯ ಬಹಳ ಅಮೂಲ್ಯ!

ಆ್ಯಡ್ ಆನ್ ಕವರ್‌ಗಳು

ಶೂನ್ಯ ಸವಕಳಿ ಕವರ್
ಜೀರೋ ಡಿಪ್ರಿಸಿಯೇಶನ್ ಕವರ್ ಮೂಲಕ ಸಂಪೂರ್ಣ ಮೊತ್ತವನ್ನು ಪಡೆಯಿರಿ!

ಸಾಮಾನ್ಯವಾಗಿ, ನಿಮ್ಮ ಪಾಲಿಸಿಯು ಸವಕಳಿ ಮೊತ್ತವನ್ನು ಕಡಿತಗೊಳಿಸಿದ ನಂತರ ಉಳಿಯುವ ಕ್ಲೇಮ್ ಮೊತ್ತವನ್ನು ಮಾತ್ರ ಪಾವತಿಸುತ್ತದೆ. ನಿಮ್ಮ ಪಾಲಿಸಿ ವಿವರಗಳು ಸವಕಳಿಯ ವಿವರಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ!


ಇದು ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಕಾರು ಹಾನಿಗೊಳಗಾಗಿದ್ದು, ಕ್ಲೇಮ್ ಮೊತ್ತ ₹15,000 ಆಗಿದೆ ಎಂದುಕೊಳ್ಳೋಣ. ಇನ್ಶೂರೆನ್ಸ್ ಕಂಪನಿಯು ಪಾಲಿಸಿ ಹೆಚ್ಚುವರಿ/ಕಡಿತವನ್ನು ಹೊರತುಪಡಿಸಿ ಸವಕಳಿ ಮೊತ್ತವಾಗಿ ₹7000 ಪಾವತಿಸಬೇಕು ಎಂದು ಹೇಳುತ್ತದೆ. ಆದರೆ, ನೀವು ಈ ಆ್ಯಡ್-ಆನ್ ಕವರ್ ಖರೀದಿಸಿದರೆ, ಇನ್ಶೂರೆನ್ಸ್ ಕಂಪನಿಯು ಸಂಪೂರ್ಣ ಮೌಲ್ಯಮಾಪನ ಮೊತ್ತವನ್ನು ಪಾವತಿಸುತ್ತದೆ. ಆದಾಗ್ಯೂ, ಪಾಲಿಸಿ ಹೆಚ್ಚುವರಿ/ಕಡಿತವನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ, ಇದು ತುಂಬಾ ಕಡಿಮೆ ಮೊತ್ತವಾಗಿರುತ್ತದೆ.
ಕ್ಲೈಮ್ ಇಲ್ಲದ ಬೋನಸ್ ರಕ್ಷಣೆ
ನಿಮ್ಮ NCB ಯನ್ನು ರಕ್ಷಿಸಲು ಒಂದು ಮಾರ್ಗವಿದೆ

ಹೊರಗಿನ ಅಂಶಗಳು, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಪಾರ್ಕ್ ಮಾಡಿದ ವಾಹನಕ್ಕೆ ಅಥವಾ ವಿಂಡ್‌ಶೀಲ್ಡ್ ಗ್ಲಾಸ್‌ಗೆ ಉಂಟಾದ ಹಾನಿಗಾಗಿ ಕ್ಲೈಮ್ ಸಲ್ಲಿಸಿದಾಗ, ಈ ಆ್ಯಡ್ ಆನ್ ಕವರ್ ನೀವು ಇಲ್ಲಿಯವರೆಗೆ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುವುದು ಮಾತ್ರವಲ್ಲದೇ, ಅದನ್ನು ಮುಂದಿನ NCB ಸ್ಲ್ಯಾಬ್‌ಗೆ ಕೊಂಡೊಯ್ಯುತ್ತದೆ .


ಇದು ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಪಾರ್ಕ್ ಮಾಡಿದ ಕಾರಿಗೆ ಯಾರಾದರೂ ಡಿಕ್ಕಿ ಹೊಡೆದು ಅಥವಾ ನೈಸರ್ಗಿಕ ವಿಕೋಪ ಸಂಭವಿಸಿ ಹಾನಿಗೊಳಗಾಗಿದೆ ಎಂದುಕೊಳ್ಳಿ, ಆಗ ನೋ ಕ್ಲೈಮ್ ಬೋನಸ್ ರಕ್ಷಣೆಯು ಅದೇ ವರ್ಷದಲ್ಲಿ ನಿಮ್ಮ 20% NCB ಯನ್ನು ರಕ್ಷಿಸುತ್ತದೆ ಮತ್ತು ಮುಂದಿನ ವರ್ಷ 25% ಶ್ರೇಣಿಗೆ ಸುಗಮವಾಗಿ ಕೊಂಡೊಯ್ಯುತ್ತದೆ. ಈ ಕವರ್ ಅನ್ನು ಸಂಪೂರ್ಣ ಪಾಲಿಸಿ ಅವಧಿಯಲ್ಲಿ ಗರಿಷ್ಠ 3 ಸಲ ಕ್ಲೇಮ್ ಮಾಡಬಹುದು.
ತುರ್ತು ಸಹಾಯ ಕವರ್
ನಾವು ನಿಮ್ಮನ್ನು ಸುರಕ್ಷಿತವಾಗಿಸಿದ್ದೇವೆ.!

ನಿಮ್ಮ ಕಾರಿನ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ! ಹಾನಿಯಾದ ಸ್ಥಳದಲ್ಲಿ ಸಣ್ಣ ರಿಪೇರಿ, ಕೀ ಕಳೆದುಹೋದಾಗ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್‌, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳು ಈ ತುರ್ತು ಸಹಾಯ ಕವರ್‌ನಲ್ಲಿ ಸೇರಿವೆ! 


ಇದು ಹೇಗೆ ಕೆಲಸ ಮಾಡುತ್ತದೆ? ಈ ಆ್ಯಡ್-ಆನ್ ಕವರ್ ಅಡಿಯಲ್ಲಿ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಉದಾಹರಣೆಗೆ, ನೀವು ನಿಮ್ಮ ವಾಹನವನ್ನು ಚಾಲನೆ ಮಾಡುತ್ತಿದ್ದಾಗ ಹಾನಿ ಉಂಟಾದರೆ, ಅದನ್ನು ಗ್ಯಾರೇಜ್‌ಗೆ ಸಾಗಿಸಬೇಕಾಗುತ್ತದೆ. ಈ ಆ್ಯಡ್-ಆನ್ ಕವರ್‌ ಮೂಲಕ, ನೀವು ವಿಮಾದಾತರಿಗೆ ಕರೆ ಮಾಡಿದರೆ, ಅವರು ನಿಮ್ಮ ಘೋಷಿತ ನೋಂದಾಯಿತ ವಿಳಾಸದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಹತ್ತಿರದ ಗ್ಯಾರೇಜ್‌ಗೆ ನಿಮ್ಮ ವಾಹನವನ್ನು ಸಾಗಿಸುತ್ತಾರೆ.
ರಿಟರ್ನ್ ಟು ಇನ್ವಾಯ್ಸ್
IDV ಮತ್ತು ವಾಹನದ ಇನ್ವಾಯ್ಸ್ ಮೌಲ್ಯದ ನಡುವಿನ ವ್ಯತ್ಯಾಸದ ಮೊತ್ತವನ್ನು ನೀಡುತ್ತದೆ

ಒಂದು ದಿನ ಅಚಾನಕ್ಕಾಗಿ ನಿಮ್ಮ ಕಾರು ಕಳುವಾಗಿದೆ ಅಥವಾ ಸಂಪೂರ್ಣವಾಗಿ ಜಖಂಗೊಂಡಿದೆ ಎಂಬ ಸುದ್ಧಿ ಕೇಳುವುದಕ್ಕಿಂತ ಕೆಟ್ಟ ವಿಷಯ ಏನಿದೆ? ನಿಮ್ಮ ಪಾಲಿಸಿಯು ಯಾವಾಗಲೂ ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್‌ ವ್ಯಾಲ್ಯೂ) ಅನ್ನು ಪಾವತಿಸುತ್ತದೆ. IDV ವಾಹನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ. ಆದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಮೂಲಕ, ನೀವು ಇನ್ವಾಯ್ಸ್ ಮೌಲ್ಯ ಮತ್ತು IDV ನಡುವಿನ ವ್ಯತ್ಯಾಸವನ್ನು ಕೂಡ ಪಡೆಯುತ್ತೀರಿ! ನೀವು FIR ಫೈಲ್ ಮಾಡಿದ್ದೀರಿ ಮತ್ತು ಘಟನೆ ನಡೆದ 90 ದಿನಗಳ ಒಳಗೆ ಕಾರನ್ನು ಮರುಪಡೆಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.


ಇದು ಹೇಗೆ ಕೆಲಸ ಮಾಡುತ್ತದೆ? ನೀವು 2007 ರಲ್ಲಿ ಒಂದು ವಾಹನ ಖರೀದಿಸಿದ್ದು, ಅದರ ಪರ್ಚೇಸ್ ಇನ್ವಾಯ್ಸ್ ₹7.5 ಲಕ್ಷ ಎಂದುಕೊಳ್ಳೋಣ. ಎರಡು ವರ್ಷಗಳ ನಂತರ, ಇನ್ಶೂರ್ಡ್‌ ಡಿಕ್ಲೇರ್ಡ್ ವ್ಯಾಲ್ಯೂ (IDV) ₹5.5 ಲಕ್ಷ ಆಗಿರುತ್ತದೆ. ಆ ಕಾರು ರಿಪೇರಿ ಮಾಡಲಾಗದಷ್ಟು ಹಾಳಾಗಿದೆ ಅಥವಾ ಕಳುವಾಗಿದೆ ಎಂದಾಗ, ನೀವು ಮೂಲ ಪರ್ಚೇಸ್ ಇನ್ವಾಯ್ಸ್ ₹7.5 ಲಕ್ಷಗಳನ್ನು ಪಡೆಯುತ್ತೀರಿ. ಇದರ ಜೊತೆಗೆ, ನೀವು ನೋಂದಣಿ ಶುಲ್ಕಗಳು ಮತ್ತು ಅನ್ವಯವಾಗುವ ತೆರಿಗೆಗಳನ್ನು ಕೂಡ ಪಡೆಯುತ್ತೀರಿ. ಪಾಲಿಸಿ ಶೆಡ್ಯೂಲ್ ಪ್ರಕಾರ ಹೆಚ್ಚುವರಿ/ಕಡಿತಗೊಳಿಸಬಹುದಾದ ಮೊತ್ತವನ್ನು ನೀವೇ ಭರಿಸಬೇಕಾಗುತ್ತದೆ.
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ಮಳೆ ಅಥವಾ ಪ್ರವಾಹದ ಸಮಯದಲ್ಲಿ ಎಂಜಿನ್‌ಗೆ ನೀರು ನುಗ್ಗಿದಾಗ, ನಿಮ್ಮ ಕಾರ್ ಎಂಜಿನ್‌ಗೆ ಆದ ಹಾನಿಯನ್ನು ಕವರ್ ಮಾಡುತ್ತದೆ

ಭಾರೀ ಮಳೆಯಿರಲಿ ಅಥವಾ ಭೋರ್ಗರೆವ ಪ್ರವಾಹವೇ ಬರಲಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್‌ ಮೂಲಕ ನಿಮ್ಮ ವಾಹನದ ಗೇರ್‌ಬಾಕ್ಸ್ ಮತ್ತು ಎಂಜಿನ್‌ಗೆ ಸುಭದ್ರ ಕವರೇಜ್‌ ಸಿಗುತ್ತದೆ.! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಕೂಡ ಕವರ್ ಮಾಡುತ್ತದೆ.


ಇದು ಹೇಗೆ ಕೆಲಸ ಮಾಡುತ್ತದೆ? ಭಾರಿ ಮಳೆ ಇರುವಾಗ ಆಕ್ಸಿಡೆಂಟ್ ಆಗಿ, ಎಂಜಿನ್/ಗೇರ್ ಬಾಕ್ಸ್‌ಗೆ ಹಾನಿಯಾಗಿದೆ ಮತ್ತು ಎಂಜಿನ್ ಆಯಿಲ್ ಲೀಕ್ ಆಗುವ ಸಾಧ್ಯತೆ ಇದೆ ಎಂದುಕೊಳ್ಳಿ. ಅಂತಹ ಸಂದರ್ಭದಲ್ಲಿ, ನೀವು ವಾಹನ ಚಾಲನೆಯನ್ನು ಮುಂದುವರೆಸಿದರೆ, ಎಂಜಿನ್ ಸೀಜ್ ಆಗುತ್ತದೆ. ಅಂತಹ ಹಾನಿಯು ಸ್ಟ್ಯಾಂಡರ್ಡ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗದಿರುವ ಪರಿಣಾಮಕಾರಿ ನಷ್ಟದ ಫಲವಾಗಿದೆ. ಈ ಆ್ಯಡ್-ಆನ್ ಕವರ್ ಮೂಲಕ, ನಿಮ್ಮ ಕಾರಿನ ಎಂಜಿನ್ ಮತ್ತು ಗೇರ್‌ಬಾಕ್ಸ್‌ನ ಆಂತರಿಕ ಭಾಗಗಳಿಗೆ ಕವರೇಜ್ ಸಿಗುತ್ತದೆ.
ಕೀಲಿ ಬದಲಿ ಕವರ್
ಕೀ ಕಾಣೆಯಾಗಿದೆಯೇ/ಕಳುವಾಗಿದೆಯೇ? ಕೀ ರಿಪ್ಲೇಸ್‌ಮೆಂಟ್ ಕವರ್ ನಿಮಗೆ ಸಹಾಯ ಮಾಡುತ್ತದೆ.!

ನಿಮ್ಮ ಕೀ ಕಳುವಾಗಿದೆಯೇ ಅಥವಾ ಕಾಣೆಯಾಗಿದೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ.!


ಇದು ಹೇಗೆ ಕೆಲಸ ಮಾಡುತ್ತದೆ? ನೀವು ನಿಮ್ಮ ಕಾರಿನ ಕೀ ಕಳೆದುಕೊಂಡಿದ್ದರೆ ಅಥವಾ ಅದು ಕಾಣೆಯಾದರೆ ಈ ಆ್ಯಡ್-ಆನ್ ಕವರ್ ನಿಮ್ಮ ಆಪ್ತರಕ್ಷಕನಾಗುತ್ತದೆ.
ಬಳಸಬಹುದಾದ ವಸ್ತುಗಳ ವೆಚ್ಚ

ನಿಮ್ಮ ಕಾರಿನಲ್ಲಿ ಬಳಸಲಾದ ಎಲ್ಲಾ ಬಳಕೆ ಮಾಡಬಹುದಾದ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ಇದು ನಿಮಗೆ ಈಗಲೇ ಅಗತ್ಯವಿದೆ!! ಇದು ನಟ್‌, ಬೋಲ್ಟ್‌, ಸೇರಿದಂತೆ ಎಲ್ಲಾ ಮರುಬಳಕೆ ಮಾಡಲಾಗದ ವಸ್ತುಗಳಿಗೆ ಪಾವತಿಸುತ್ತದೆ ....


ಇದು ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಕಾರಿಗೆ ಆಕ್ಸಿಡೆಂಟ್ ಆಗಿದ್ದು, ರಿಪೇರಿಯ ಅಗತ್ಯವಿದ್ದರೆ, ಅಂತಹ ಸಂದರ್ಭದಲ್ಲಿ ನಿಮ್ಮ ಕಾರನ್ನು ರಿಪೇರಿ ಮಾಡಿಸಲು ನಟ್‌, ಬೋಲ್ಟ್‌ನಂತಹ ಮರು-ಬಳಕೆ ಮಾಡಲಾಗದ ವಸ್ತುಗಳನ್ನು ಖರೀದಿಸಬೇಕಾಗಬಹುದು. ವಾಶರ್‌, ಸ್ಕ್ರೂ, ಲ್ಯೂಬ್ರಿಕೆಂಟ್‌, ಇತರೆ ಆಯಿಲ್‌ಗಳು, ಬೇರಿಂಗ್‌, ನೀರು, ಗ್ಯಾಸ್ಕೆಟ್‌, ಸೀಲಂಟ್‌, ಫಿಲ್ಟರ್‌, ಸೇರಿದಂತೆ ಹಲವಾರು ಭಾಗಗಳು ಮೋಟಾರ್ ಇನ್ಶೂರೆನ್ಸ್ ಕವರ್ ಅಡಿಯಲ್ಲಿ ಕವರ್ ಆಗಿರುವುದಿಲ್ಲ. ಅದರ ವೆಚ್ಚವನ್ನು ಇನ್ಶೂರ್ಡ್‌ ವ್ಯಕ್ತಿಯೇ ಭರಿಸಬೇಕು. ಆದರೆ ಈ ಆ್ಯಡ್-ಆನ್ ಕವರ್‌ನೊಂದಿಗೆ ನಾವು ಅಂತಹ ವೆಚ್ಚವನ್ನು ಪಾವತಿಸುತ್ತೇವೆ ಮತ್ತು ನಿಮ್ಮ ಚಿಂತೆಯನ್ನು ದೂರ ಮಾಡುತ್ತೇವೆ.
ಬಳಕೆಯ ನಷ್ಟ - ಡೌನ್‌ಟೈಮ್ ರಕ್ಷಣೆ

ನಿಮ್ಮ ಕಾರನ್ನು ರಿಪೇರಿಗೆ ಕೊಟ್ಟು ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದಿರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .


ಇದು ಹೇಗೆ ಕೆಲಸ ಮಾಡುತ್ತದೆ? ನಿಮ್ಮ ವಾಹನಕ್ಕೆ ಆಕ್ಸಿಡೆಂಟ್ ಆಗಿ, ಅದನ್ನು ರಿಪೇರಿಗೆ ನೀಡಲಾಗಿದೆ ಎಂದುಕೊಳ್ಳೋಣ! ಈಗ ನಿಮ್ಮ ಬಳಿ ವಾಹನ ಇಲ್ಲದಿರುವುದರಿಂದ, ಬೇರೆ ದಾರಿಯಿಲ್ಲದೆ ನೀವು ಕ್ಯಾಬ್‌ನಲ್ಲಿ ಪ್ರಯಾಣಿಸುತ್ತೀರಿ! ಆದರೆ ಒಂದು ವಿಷಯ ಗೊತ್ತೇ? ಯೂಸ್-ಡೌನ್‌ಟೈಮ್ ರಕ್ಷಣೆಯು ನೀವು ಕ್ಯಾಬ್‌ ಪ್ರಯಾಣಕ್ಕಾಗಿ ಮಾಡಿದ ಎಲ್ಲಾ ಖರ್ಚುಗಳನ್ನು ಕವರ್ ಮಾಡುತ್ತದೆ. ಹೌದು! ಇದು ಪಾಲಿಸಿ ಶೆಡ್ಯೂಲ್‌ನಲ್ಲಿ ನಮೂದಿಸಿದಂತೆ ಇರುತ್ತದೆ!

ಆಗಾಗ ಕೇಳುವ ಪ್ರಶ್ನೆಗಳು

ಕಾರ್ ಇನ್ಶೂರೆನ್ಸ್, ನೈಸರ್ಗಿಕ ವಿಕೋಪಗಳು ಮತ್ತು ಮನುಷ್ಯ ಮಾಡಿದ ಅನಾಹುತಗಳಿಂದ ಉಂಟಾಗುವ ಯಾವುದೇ ಹಾನಿ ಮತ್ತು ಥರ್ಡ್ ಪಾರ್ಟಿಗೆ ಉಂಟಾದ ಹಾನಿಯ ವಿರುದ್ಧ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ. ಇನ್ಶೂರೆನ್ಸ್ ಇಲ್ಲದೆ ನಿಮ್ಮ ಕಾರನ್ನು ಮೂಲ ಸ್ಥಿತಿಗೆ ತರಲು ತುಂಬಾ ಖರ್ಚಾಗುತ್ತದೆ. ಅದಲ್ಲದೇ, ಮೋಟಾರ್ ವಾಹನಗಳ ಕಾಯ್ದೆ 1988 ಮತ್ತು ಇತ್ತೀಚೆಗೆ ಜಾರಿಯಾದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯಿದೆ 2019 ಪ್ರಕಾರ, ಸದಾಕಾಲ ಸರಿಯಾದ ಕಾರ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ
ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ಬಹಳ ಅನುಕೂಲಕರ ಮತ್ತು ಸುಲಭ.. ನೀವು ಪಾಲಿಸಬೇಕಾದ ಹಂತಗಳು ಹೀಗಿವೆ
  • ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ
  • ನಿಮ್ಮ ವಿವರಗಳನ್ನು ನಮೂದಿಸಿ
  • ನೀವು ಬಯಸುವ ಯಾವುದೇ ಆ್ಯಡ್-ಆನ್‌ಗಳನ್ನು ಆಯ್ಕೆಮಾಡಿ ಮತ್ತು
  • ಪಾವತಿ ಮಾಡಿ
ನಿಮ್ಮ ಗಡುವು ಮುಗಿದ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು - ಇದಕ್ಕೆ ಯಾವುದೇ ತಪಾಸಣೆ ಅಗತ್ಯವಿಲ್ಲ ಮತ್ತು ನೀವು ನಿಮ್ಮ ಪಾಲಿಸಿಯ ವಿವರಗಳನ್ನು ಲಾಗಿನ್ ಮಾಡಿದರೆ ಸಾಕು.. ಭರ್ತಿ ಮಾಡಿದ ನಂತರ, ನವೀಕರಣದ ಪ್ರೀಮಿಯಂ ಬಗ್ಗೆ ನಿಮ್ಮ ಇನ್ಶೂರರ್ ನಿಮಗೆ ತಿಳಿಸುತ್ತಾರೆ. ಪಾವತಿ ಮಾಡಿದ ಕೆಲವೇ ನಿಮಿಷಗಳಲ್ಲಿ ನೀವು ಪಾಲಿಸಿ ಕಾಪಿ ಸ್ವೀಕರಿಸುತ್ತೀರಿ.
ಪಾಲಿಸಿಯ ಗಡುವು ದಿನಾಂಕ ತಿಳಿದುಕೊಳ್ಳಲು ನಿಮ್ಮ ಇನ್ಶೂರೆನ್ಸ್ ಅಕೌಂಟ್‌ಗೆ ಲಾಗಿನ್ ಆಗಿ, ಪಾಲಿಸಿ ವಿವರಗಳನ್ನು ನೋಡಬಹುದು ಅಥವಾ ಕಾಲ್ ಸೆಂಟರ್‌ಗೆ ಕರೆ ಮಾಡಿ ನಿಮ್ಮ ಪಾಲಿಸಿ ವಿವರಗಳನ್ನು ಕೇಳಬಹುದು. ನೀವು ನಿಮ್ಮ ಟೂ ವೀಲರ್ ಪಾಲಿಸಿಯ ಗಡುವು ದಿನಾಂಕ ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಅದು ಗಡುವಿನ ದಿನಾಂಕಕ್ಕಿಂತ ಮುಂಚೆಯೇ ನಿಮ್ಮ ಪಾಲಿಸಿಯನ್ನು ನವೀಕರಿಸಲು ನೆರವಾಗುತ್ತದೆ
ನಿಮ್ಮ ಕಾರು, ಆಟೋಮೊಬೈಲ್ ರಿಸರ್ಚ್ ಅಸೋಸಿಯೇಶನ್ ಆಫ್ ಇಂಡಿಯಾ (ARAI) ಅನುಮೋದಿಸಿದ ಸಾಧನಗಳನ್ನು ಹೊಂದಿದ್ದರೆ, ಓನ್ ಡ್ಯಾಮೇಜ್ ಪ್ರೀಮಿಯಂ ಮೇಲೆ ರಿಯಾಯಿತಿ ನೀಡಲಾಗುತ್ತದೆ.
ಕಾರಿಗೆ ಆಕಸ್ಮಿಕ ನಷ್ಟ/ ಹಾನಿಯಾಗಿದ್ದು, ಅದರ ರಿಪೇರಿಗೆ ತಗಲುವ ಖರ್ಚು ನಿಮ್ಮ ಪಾಲಿಸಿಯ ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV) ನ 75% ಗಿಂತ ಹೆಚ್ಚಾಗಿದ್ದರೆ, ಅದನ್ನು ರಚನಾತ್ಮಕ ಒಟ್ಟು ನಷ್ಟ ಎನ್ನುತ್ತಾರೆ. ನೀವು ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಪೂರ್ಣ ಕ್ಲೇಮ್ ಮೊತ್ತಕ್ಕೆ ಅರ್ಹರಾಗಿರುತ್ತೀರಿ. ಪಾಲಿಸಿ ಡಾಕ್ಯುಮೆಂಟ್ ಪ್ರಕಾರ, ಯಾವುದೇ ಹೆಚ್ಚುವರಿ ಅಥವಾ ಕಡಿತಗೊಳಿಸಬಹುದಾದ ಮೊತ್ತವನ್ನು ನೀವೇ ಭರಿಸಬೇಕು.
ಅಗತ್ಯವಿರುವ ಡಾಕ್ಯುಮೆಂಟ್‌ಗಳು - ಸಹಿ ಮಾಡಲಾದ ಕ್ಲೈಮ್ ಫಾರ್ಮ್, ಮಾನ್ಯ RC ಕಾಪಿ, ಕಳ್ಳತನದ ಸಂದರ್ಭದಲ್ಲಿ ಮಾನ್ಯ ಡ್ರೈವಿಂಗ್ ಲೈಸೆನ್ಸ್, ಪೋಲೀಸ್ ಕಾಪಿ, FIR ಕಾಪಿ ಮತ್ತು ಬಿಲ್‌ ಪುರಾವೆ, ಬಿಡುಗಡೆ ಮತ್ತು ನಗದು ರಸೀತಿಯ ಅಗತ್ಯವಿರುತ್ತದೆ
ಸರಳವಾಗಿ, ಕ್ಲೈಮ್-ರಹಿತ ವರ್ಷದ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸುವಾಗ ಪಾವತಿಸಬೇಕಾದ ಸ್ವಂತ ಹಾನಿ ಪ್ರೀಮಿಯಂನಲ್ಲಿ ಸಿಗುವ ರಿಯಾಯಿತಿಯಾಗಿದೆ. ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಇದು ಪ್ರೋತ್ಸಾಹಕವಾಗಿದೆ.
ಎಲ್ಲಾ ಬಗೆಯ ವಾಹನಗಳುಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ %
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ20%
ಇನ್ಶೂರೆನ್ಸ್‌‌‌‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ25%
ಇನ್ಶೂರೆನ್ಸ್‌‌‌‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ35%
ಇನ್ಶೂರೆನ್ಸ್‌‌‌‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ45%
ಇನ್ಶೂರೆನ್ಸ್‌‌‌‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ50%
ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಸ್ವಯಂ ತಪಾಸಣೆ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. ಡಾಕ್ಯುಮೆಂಟ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಅನುಮೋದಿಸಿದ ನಂತರ, ಪಾವತಿ ಲಿಂಕ್ ಕಳುಹಿಸಲಾಗುತ್ತದೆ ಮತ್ತು ಪಾಲಿಸಿಯನ್ನು ನವೀಕರಿಸಲು ನೀವು ಈ ಲಿಂಕ್‌ನಲ್ಲಿ ಪಾವತಿ ಮಾಡಬೇಕು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಸ್ವೀಕರಿಸುತ್ತೀರಿ.
ಹಿಂದಿನ ಪಾಲಿಸಿ ಗಡುವು ಮುಗಿದ ನಂತರ 90 ದಿನಗಳವರೆಗೆ ನೋ ಕ್ಲೈಮ್ ಬೋನಸ್ ಮಾನ್ಯವಾಗಿರುತ್ತದೆ. 90 ದಿನಗಳ ಒಳಗೆ ಪಾಲಿಸಿಯನ್ನು ನವೀಕರಿಸದಿದ್ದರೆ, ನೋ ಕ್ಲೈಮ್ ಬೋನಸ್ 0% ಆಗುತ್ತದೆ ಮತ್ತು ನವೀಕರಿಸಲಾದ ಪಾಲಿಸಿಗೆ ಯಾವುದೇ ಪ್ರಯೋಜನಗಳನ್ನು ಪಾಸ್ ಮಾಡಲಾಗುವುದಿಲ್ಲ.
ವಾಹನದ ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV) ಅನ್ನು 'ವಿಮಾ ಮೊತ್ತ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪ್ರತಿ ಇನ್ಶೂರ್ಡ್‌ ವಾಹನಕ್ಕೆ ಪ್ರತಿ ಪಾಲಿಸಿ ಅವಧಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ.
ವಾಹನದ IDVಯನ್ನು ಆ ಬ್ರ್ಯಾಂಡ್‌ನ ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆ ಮತ್ತು ಇನ್ಶೂರೆನ್ಸ್/ನವೀಕರಣ ಪ್ರಾರಂಭದಲ್ಲಿ ಇನ್ಶೂರೆನ್ಸ್‌ಗಾಗಿ ಪ್ರಸ್ತಾಪಿಸಲಾದ ವಾಹನದ ಮಾಡೆಲ್ ಆಧಾರದ ಮೇಲೆ ನಿಗದಿಪಡಿಸಬೇಕು ಹಾಗೂ ಅದನ್ನು ಸವಕಳಿಗೆ ಸರಿಹೊಂದಿಸಬೇಕು (ಕೆಳಗೆ ನಿರ್ದಿಷ್ಟಪಡಿಸಿದ ಶೆಡ್ಯೂಲ್ ಪ್ರಕಾರ). ಸೈಡ್ ಕಾರ್ (ಗಳು) ಮತ್ತು/ಅಥವಾ ಅಕ್ಸೆಸರಿಗಳ IDV, ಯಾವುದಾದರೂ ಇದ್ದಲ್ಲಿ, ಅದನ್ನು ವಾಹನದ ಉತ್ಪಾದಕರ ಪಟ್ಟಿ ಮಾಡಿದ ಮಾರಾಟ ಬೆಲೆಯಲ್ಲಿ ಸೇರಿಸಲಾಗಿಲ್ಲ ಎಂದಾದರೆ, ಅದನ್ನೂ ಇದೇ ರೀತಿಯಲ್ಲಿ ನಿಗದಿಪಡಿಸಬೇಕು.
ವಾಹನದ ವಯಸ್ಸುIDV ಫಿಕ್ಸ್ ಮಾಡಲು ಸವಕಳಿ %
6 ತಿಂಗಳು ಮೀರದ5%
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ15%
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ20%
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ30%
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ40%
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ50%
ಈಗ ಸಿಗುವ ಪ್ಲಾನ್‌ಗಳೆಂದರೆ ಥರ್ಡ್ ಪಾರ್ಟಿ ಹೊಣೆಗಾರಿಕೆ, ಸಮಗ್ರ ಇನ್ಶೂರೆನ್ಸ್ ಪಾಲಿಸಿ ಮತ್ತು ಸ್ವಂತ ಹಾನಿ ಇನ್ಶೂರೆನ್ಸ್ ಪ್ಲಾನ್.
ಯಾವುದೇ ಪೇಪರ್‌ವರ್ಕ್ ಮತ್ತು ಫಿಸಿಕಲ್ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ. ನೀವು ತಕ್ಷಣವೇ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.
ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಒಂದು ಅನುಮೋದನೆ ಪಾಸ್ ಮಾಡುವ ಮೂಲಕ ಖರೀದಿದಾರರ ಹೆಸರಿಗೆ ವರ್ಗಾಯಿಸಬಹುದು. ಅಸ್ತಿತ್ವದಲ್ಲಿರುವ ಪಾಲಿಸಿಯ ಅಡಿಯಲ್ಲಿ ಅನುಮೋದನೆಯನ್ನು ಪಾಸ್ ಮಾಡಲು ಮಾರಾಟ ಪತ್ರ/ಫಾರ್ಮ್ 29/30/NOC/NCB ಮರುಪಡೆಯುವಿಕೆ ಮೊತ್ತ, ಮತ್ತಿತರ ಬೆಂಬಲಿತ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ. ಅಥವಾ ನೀವು ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ರದ್ದುಗೊಳಿಸಬಹುದು. ಪಾಲಿಸಿಯನ್ನು ರದ್ದುಗೊಳಿಸಲು ಮಾರಾಟ ಪತ್ರ/ ಫಾರ್ಮ್ 29/30 ಯಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಅತ್ಯಗತ್ಯ.
ನಮ್ಮ ವೆಬ್‌ಸೈಟ್ hdfcergo.com ಮೂಲಕ ನೀವು ನಿಮ್ಮ ಪಾಲಿಸಿ ವಿವರಗಳನ್ನು ಆನ್ಲೈನ್‌ನಲ್ಲಿ ಬದಲಾಯಿಸಬಹುದು. ವೆಬ್‌ಸೈಟ್‌ನ 'ಸಹಾಯ' ವಿಭಾಗಕ್ಕೆ ಭೇಟಿ ನೀಡಿ, ಕೋರಿಕೆ ಸಲ್ಲಿಸಿ. ಕೋರಿಕೆ ಸಲ್ಲಿಸಲು ಅಥವಾ ಸೇವೆಗಳನ್ನು ಅನ್ವೇಷಿಸಲು, ಇಲ್ಲಿ ಕ್ಲಿಕ್ ಮಾಡಿ
x