ವಿದೇಶಕ್ಕೆ ಪ್ರಯಾಣಿಸುವಾಗ ಅನಿರೀಕ್ಷಿತ ವೆಚ್ಚಗಳ ವಿರುದ್ಧ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಅಗತ್ಯ ಕವಚವಾಗಿದೆ. ಇನ್ಶೂರ್ಡ್ (ಅಂದರೆ, ಪ್ಲಾನ್ ಅಡಿಯಲ್ಲಿ ಕವರ್ ಆಗುವ ಜನರು) ವೈದ್ಯಕೀಯ ತುರ್ತುಸ್ಥಿತಿಯನ್ನು ಎದುರಿಸಿದರೆ ಅಥವಾ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದಾದ ಯಾವುದೇ ಸಮಸ್ಯೆಗಳನ್ನು ಎದುರಿಸಿದರೆ ಇದು ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ.
ಟ್ರಾವೆಲ್ ಇನ್ಶೂರೆನ್ಸ್ ಸಹಾಯಕ ಮಾತ್ರವಲ್ಲದೆ 29 ಷೆಂಗೆನ್ ದೇಶಗಳಲ್ಲಿ (ಇಟಲಿ, ಪೋಲೆಂಡ್, ನೆದರ್ಲ್ಯಾಂಡ್ಸ್, ಸ್ಪೇನ್, ಸ್ವಿಟ್ಜರ್‌ಲ್ಯಾಂಡ್ ಮತ್ತು 24+ ದೇಶಗಳು) ಸೇರಿದಂತೆ ಹಲವಾರು ದೇಶಗಳಲ್ಲಿ ಕಡ್ಡಾಯ ಕೂಡ ಆಗಿದೆ. ಟರ್ಕಿ ಮತ್ತು ಕ್ಯೂಬಾದಂತಹ ಇತರ ದೇಶಗಳಲ್ಲಿಯೂ ಇದು ಕಡ್ಡಾಯವಾಗಿದೆ.[12][13][14][15]
ವಿದೇಶದಲ್ಲಿರುವಾಗ ಆರೋಗ್ಯ ತುರ್ತುಸ್ಥಿತಿಯೊಂದಿಗೆ ವ್ಯವಹರಿಸುವುದು ಅಥವಾ ಅಗತ್ಯ ವಸ್ತುಗಳನ್ನು ಕಳೆದುಕೊಳ್ಳುವುದು ನಿಮ್ಮ ಪ್ರಯಾಣಕ್ಕೆ ಅಡಚಣೆ ಉಂಟು ಮಾಡಬಹುದು, ಅಲ್ಲದೆ ನಿಮ್ಮ ಜೇಬನ್ನೂ ಖಾಲಿ ಮಾಡಬಹುದು. ವಿದೇಶಗಳಲ್ಲಿ ಹೆಲ್ತ್‌ಕೇರ್ ವೆಚ್ಚಗಳು ಸಾಮಾನ್ಯವಾಗಿ ತುಂಬಾ ಹೆಚ್ಚಾಗಿರುತ್ತವೆ. ಅದಕ್ಕಾಗಿಯೇ ಸರಿಯಾದ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಔಪಚಾರಿಕತೆಗಿಂತ ಹೆಚ್ಚಿನದಾಗಿದ್ದು,; ಇದೊಂದು ಅಗತ್ಯವಾಗಿದೆ. [1]
- ಸರಿಯಾದ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ:
- • ವಿದೇಶದಲ್ಲಿ ತುರ್ತು ವೈದ್ಯಕೀಯ ವೆಚ್ಚಗಳು
- • ಆಸ್ಪತ್ರೆ ದಾಖಲಾತಿ ಮತ್ತು ವೈದ್ಯಕೀಯ ಸ್ಥಳಾಂತರ
- • ದಂತ ಚಿಕಿತ್ಸೆಗಳು
- • ವೈಯಕ್ತಿಕ ಅಪಘಾತ ಕವರ್
- • ಪಾಸ್‌ಪೋರ್ಟ್ ಅಥವಾ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ನಷ್ಟ
- • ವಿಳಂಬವಾದ ಅಥವಾ ಕಳೆದುಹೋದ ಬ್ಯಾಗೇಜ್
- • ಪ್ರಯಾಣದ ವಿಳಂಬ ಮತ್ತು ರದ್ದತಿ
- • ತಡವಾದ ಅಥವಾ ರದ್ದುಗೊಂಡ ವಿಮಾನಗಳು
- • ಹೈಜಾಕ್ ಅಪಾಯದ ಭತ್ಯೆ
- • ವೈಯಕ್ತಿಕ ಹೊಣೆಗಾರಿಕೆ ಕವರ್ ಮತ್ತು ಇನ್ನೂ ಹೆಚ್ಚಿನವು.
ನೀವು ಭಾರತದಿಂದ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ನೀವು ಎಲ್ಲಿದ್ದರೂ, ನೆಮ್ಮದಿಯನ್ನು ಖಚಿತಪಡಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡಬಹುದು.
ಜೊತೆಗೆ, ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬಂದ ಇತ್ತೀಚಿನ GST ಸುಧಾರಣೆಯಿಂದಾಗಿ, ಭಾರತದಲ್ಲಿ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು ಈಗ 0% GST ಹೊಂದಿದ್ದು, ಈ ನಿರ್ಣಾಯಕ ರಕ್ಷಣೆಯನ್ನು ಹಿಂದೆಂದಿಗಿಂತಲೂ ಹೆಚ್ಚು ಕೈಗೆಟಕುವಂತೆ ಮಾಡಿದೆ.[2]
ಆದ್ದರಿಂದ, ನಿಮ್ಮ ರಜಾದಿನದ ಪ್ರಯಾಣಕ್ಕಾಗಿ ಬ್ಯಾಗ್‌ಗಳನ್ನು ಪ್ಯಾಕ್ ಮಾಡುವ ಮೊದಲು, ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಿ. ಕೊರೋನಾ ವೈರಸ್ ಆಸ್ಪತ್ರೆ ದಾಖಲಾತಿಗೆ ಕವರೇಜ್ ಪಡೆಯಿರಿ ಮತ್ತು ವಿಶ್ವದಾದ್ಯಂತ 1 ಲಕ್ಷ+ ನಗದುರಹಿತ ಆಸ್ಪತ್ರೆಗಳಿಗೆ ಅಕ್ಸೆಸ್ ಪಡೆಯಿರಿ. ನಿಮ್ಮ ಪ್ರಯಾಣಗಳನ್ನು ಸುರಕ್ಷಿತ, ತಡೆರಹಿತ ಮತ್ತು ಚಿಂತೆ-ಮುಕ್ತವಾಗಿರಿಸಿ.












































