10,000 + ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ, ಕ್ಲೈಮ್ ಸೆಟಲ್ಮೆಂಟ್ ತುಂಬಾ ಸುಲಭವಾಗುತ್ತದೆ !

ಹೋಮ್ / ಹೆಲ್ತ್ ಇನ್ಶೂರೆನ್ಸ್ / ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಾಲಿಸಿ
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • FAQ

ವೈಯಕ್ತಿಕ ಆಕ್ಸಿಡೆಂಟ್ ಇನ್ಶೂರೆನ್ಸ್

ಅಪಘಾತಗಳಿಂದ ಜನರು ಮಾನಸಿಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಕುಗ್ಗುತ್ತಾರೆ. ಜೀವನ-ಪೂರ್ತಿ ಉಳಿತಾಯ ಮಾಡಿದ್ದೆಲ್ಲಾ ಖರ್ಚಾಗುತ್ತದೆ. ನಿಮ್ಮ ನಗುಮುಖ ಬಾಡುತ್ತದೆ, ಆಘಾತ ಮತ್ತು ಆರ್ಥಿಕ ಹೊರೆ ಮನಸನ್ನು ಘಾಸಿ ಮಾಡುತ್ತದೆ. ಆದರೆ ಎದೆಗುಂದಬೇಡಿ. ಇಂತಹ ಸಂದರ್ಭವನ್ನು ಧೈರ್ಯವಾಗಿ ಎದುರಿಸಲು, ಎಚ್‌ಡಿಎಫ್‌ಸಿ ಎರ್ಗೋ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಅನ್ನು ಪ್ರಸ್ತುತಪಡಿಸುತ್ತಿದೆ. ಈ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಆಕ್ಸಿಡೆಂಟಲ್ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಒಂದೇ ಬಾರಿಗೆ ಅಷ್ಟೂ ಮೊತ್ತದ ಲಂಪ್-ಸಮ್ ಪರಿಹಾರ ನೀಡುತ್ತದೆ. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬದ ದೈನಂದಿನ ಜೀವನಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು, ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಡೆಯುವುದು ಅತ್ಯಗತ್ಯ.

ಎಚ್‌ಡಿಎಫ್‌ಸಿ ಎರ್ಗೋ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಆಯ್ಕೆ ಮಾಡಲು ಕಾರಣಗಳು

ಜಗತ್ತಿನಾದ್ಯಂತ ಕವರೇಜ್
ಜಗತ್ತಿನಾದ್ಯಂತ ಕವರೇಜ್
ನಿಮ್ಮ ಪಾಲಿಸಿಯು ನಿಮ್ಮ ದೇಶದಲ್ಲಿ ಮಾತ್ರವೇ ಪ್ರಯೋಜನಕ್ಕೆ ಬರುತ್ತದೆ ಎಂಬ ಚಿಂತೆಯೇ? ಚಿಂತಿಸಬೇಡಿ, ನಮ್ಮ ಪಾಲಿಸಿಗಳು ಪ್ರಪಂಚದಾದ್ಯಂತ ಕವರೇಜ್ ಒದಗಿಸುತ್ತವೆ.
ಕುಟುಂಬವನ್ನು ಕವರ್ ಮಾಡುವ ಸೌಲಭ್ಯ
ಕುಟುಂಬವನ್ನು ಕವರ್ ಮಾಡುವ ಸೌಲಭ್ಯ
ನಿಮ್ಮ ಬೆಳೆಯುತ್ತಿರುವ ಕುಟುಂಬವನ್ನು ಕವರ್ ಮಾಡುವ ಬಗ್ಗೆ ಯೋಚಿಸುತ್ತಿದ್ದೀರಾ? ನಾವು ಕುಟುಂಬ ಬಾಂಧವ್ಯವನ್ನು ಗೌರವಿಸುತ್ತೇವೆ. ಹೀಗಾಗಿ, ಒಂದೇ ಪಾಲಿಸಿಯಲ್ಲಿ ನಿಮ್ಮ ಇಡೀ ಕುಟುಂಬವನ್ನು ಕವರ್ ಮಾಡುವ ಪಾಲಿಸಿಗಳನ್ನು ತಂದಿದ್ದೇವೆ.
ಆಜೀವ ನವೀಕರಣ
ಆಜೀವ ನವೀಕರಣ
ವಯಸ್ಸಿನ ಮಿತಿಯಿಂದ ನಿಮ್ಮ ಪಾಲಿಸಿಯನ್ನು ನವೀಕರಿಸಲು ಆಗುತ್ತಿಲ್ಲವೇ? ನಮ್ಮ ಆಜೀವ ಪಾಲಿಸಿ ನವೀಕರಣ ಸೌಲಭ್ಯದಿಂದ, ವಯಸ್ಸಿನ ಮಿತಿಯ ಬಗ್ಗೆ ಚಿಂತಿಸದೇ ನಿರಾತಂಕವಾಗಿ ಜೀವಿಸಿ.
ಯಾವುದೇ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ
ಯಾವುದೇ ವೈದ್ಯಕೀಯ ತಪಾಸಣೆಯ ಅಗತ್ಯವಿಲ್ಲ
ಪಾಲಿಸಿ ಪಡೆಯಲು ನೂರಾರು ವೈದ್ಯಕೀಯ ತಪಾಸಣೆ ಮಾಡಿಸಿ ಬೇಸತ್ತಿದ್ದೀರಾ? ಇಲ್ಲಿದೆ ಸಿಹಿ ಸುದ್ದಿ. ಇನ್ನು ವೈದ್ಯಕೀಯ ತಪಾಸಣೆಗಳ ಅಗತ್ಯವಿಲ್ಲ.

ಏನನ್ನು ಒಳಗೊಂಡಿದೆ?

ದುರ್ಘಟನೆಯಲ್ಲಿ ಮರಣ
ದುರ್ಘಟನೆಯಲ್ಲಿ ಮರಣ

ಗಂಭೀರ ಅಪಘಾತಗಳಿಂದ ಸಾವು ಉಂಟಾಗಬಹುದು. ಇನ್ಶೂರ್ಡ್ ವ್ಯಕ್ತಿಯು ಆಕ್ಸಿಡೆಂಟ್‌ನಲ್ಲಿ ಮರಣ ಹೊಂದಿದರೆ ನಮ್ಮ ಪಾಲಿಸಿಯು ವಿಮಾ ಮೊತ್ತದ 100% ವರೆಗೆ ಕವರ್ ಒದಗಿಸುತ್ತದೆ.

ಒಟ್ಟು ಶಾಶ್ವತ ಅಂಗವಿಕಲತೆ
ಒಟ್ಟು ಶಾಶ್ವತ ಅಂಗವಿಕಲತೆ

ಪ್ರಮುಖ ಅಪಘಾತಗಳು ಭವಿಷ್ಯವನ್ನೇ ನಿರ್ಧರಿಸುತ್ತವೆ. ಇನ್ಶೂರ್ಡ್ ವ್ಯಕ್ತಿಯು ಆಕ್ಸಿಡೆಂಟ್‌ನಲ್ಲಿ ಶಾಶ್ವತವಾಗಿ ಅಂಗವಿಕಲರಾದರೆ, ನಾವು ವಿಮಾ ಮೊತ್ತವನ್ನು ಆಧರಿಸಿ ಪರಿಹಾರ ಒದಗಿಸುತ್ತೇವೆ.

ಮೂಳೆ ಮುರಿತ
ಮೂಳೆ ಮುರಿತ

ಮೂಳೆಗಳಿಲ್ಲದೆ ಓಡಾಡಲು ಸಾಧ್ಯವಿಲ್ಲ. ಆಕ್ಸಿಡೆಂಟ್‌ನಲ್ಲಿ ಮೂಳೆಗಳು ಮುರಿದರೆ, ನಮ್ಮ ಪಾಲಿಸಿಯು ವಿಮಾ ಮೊತ್ತವನ್ನು ಆಧರಿಸಿ ಪರಿಹಾರ ಒದಗಿಸುತ್ತದೆ.

ಸುಟ್ಟಗಾಯಗಳು
ಸುಟ್ಟಗಾಯಗಳು

ಬೆಂಕಿ ನಿಮ್ಮ ಚೈತನ್ಯವನ್ನೇ ಉಡುಗಿಸಬಹುದು. ವಿಮಾದಾರರು ಬೆಂಕಿ ಅಪಘಾತಕ್ಕೆ ತುತ್ತಾದರೆ ವಿಮಾ ಮೊತ್ತವನ್ನು ಆಧರಿಸಿ ನಮ್ಮ ಪಾಲಿಸಿ ಪರಿಹಾರ ಒದಗಿಸುತ್ತದೆ ಇನ್ನಷ್ಟು ತಿಳಿದುಕೊಳ್ಳಿ...

ಆಂಬ್ಯುಲೆನ್ಸ್ ವೆಚ್ಚಗಳು
ಆಂಬ್ಯುಲೆನ್ಸ್ ವೆಚ್ಚಗಳು

ಸಮಯಕ್ಕೆ ಸರಿಯಾಗಿ ಸಹಾಯ ದೊರೆಯದಿದ್ದರೆ, ಅನಾಹುತ ಆಗಬಹುದು. ನಮ್ಮ ಪಾಲಿಸಿಯು ಹತ್ತಿರದ ಆಸ್ಪತ್ರೆ ತಲುಪಲು ಬೇಕಾದ ಸಾರಿಗೆ ವೆಚ್ಚವನ್ನು ಭರಿಸುತ್ತದೆ, ಇನ್ನಷ್ಟು ತಿಳಿಯಿರಿ...

ಹಾಸ್ಪಿಟಲ್ ಕ್ಯಾಶ್
ಹಾಸ್ಪಿಟಲ್ ಕ್ಯಾಶ್

ಆಕ್ಸಿಡೆಂಟ್‌ನಿಂದ ಹಣದ ಕೊರತೆ ಉಂಟಾಗಬಹುದು. ಆಕ್ಸಿಡೆಂಟ್‌ನಿಂದ ಆಸ್ಪತ್ರೆಗೆ ಸೇರಬೇಕಾದ ಸಂದರ್ಭದಲ್ಲಿ ನಾವು ದೈನಂದಿನ ನಗದು ಭತ್ಯೆ ನೀಡುತ್ತೇವೆ.

ಗಂಭೀರ ಅನಾರೋಗ್ಯ ಇನ್ಶೂರೆನ್ಸ್ ಏನನ್ನು ಕವರ್ ಮಾಡುವುದಿಲ್ಲ?

ಸಾಹಸ ಕ್ರೀಡೆಯ ಹಾನಿಗಳು
ಸಾಹಸ ಕ್ರೀಡೆಯ ಹಾನಿಗಳು

ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.

ಸ್ವಯಂ-ಕಾರಣದಿಂದ ಆದ ಗಾಯಗಳು
ಸ್ವಯಂ-ಕಾರಣದಿಂದ ಆದ ಗಾಯಗಳು

ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.

ಯುದ್ಧ
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು
ರಕ್ಷಣಾ ಕಾರ್ಯಾಚರಣೆಗಳಲ್ಲಿ ಭಾಗವಹಿಸುವುದು

ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.

ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಖರೀದಿಸುವುದು ಏಕೆ ಮುಖ್ಯ?

ಎಲ್ಲ ಸಮಯದಲ್ಲೂ ಕವರೇಜ್
ಎಲ್ಲ ಸಮಯದಲ್ಲೂ ಕವರೇಜ್

ರಾತ್ರಿಯಾದ ಕೂಡಲೇ ಇಡೀ ಪ್ರಪಂಚ ಮಲಗುತ್ತದೆ. ಆದರೆ ನಾವು ಹಗಲು ರಾತ್ರಿ ಎನ್ನದೇ ನಿಮಗೆ 24 ಗಂಟೆ ಕವರೇಜ್ ಸಿಗುವಂತೆ ನೋಡಿಕೊಳ್ಳುತ್ತೇವೆ

18-70 ವಯೋಮಾನಕ್ಕೆ ಕವರೇಜ್
18-70 ವಯೋಮಾನಕ್ಕೆ ಕವರೇಜ್

ನಿಮ್ಮ ಪೋಷಕರ ಬಗ್ಗೆ ನಿಮಗೆ ಕಾಳಜಿ ಇದೆ ಎಂದು ನಮಗೆ ಗೊತ್ತು. 70 ವರ್ಷದೊಳಗಿನ ನಿಮ್ಮ ಪೋಷಕರಿಗೆ ಮತ್ತು 65 ವರ್ಷದೊಳಗಿನ ಯಾರಿಗೇ ಆಗಲಿ ಕವರೇಜ್ ನೀಡುವ ಮೂಲಕ ನಾವು ನಿಮ್ಮನ್ನು ಬೆಂಬಲಿಸುತ್ತೇವೆ.

ಜಗತ್ತಿನಾದ್ಯಂತ ಕವರೇಜ್
ಜಗತ್ತಿನಾದ್ಯಂತ ಕವರೇಜ್

ನಾವು ದೇಶ ವಿದೇಶಗಳ ಗಡಿ ಮೀರಿ, ನಿಮಗೆ ಪ್ರಪಂಚದಾದ್ಯಂತ ಕವರೇಜ್ ನೀಡುತ್ತೇವೆ.

ಆಜೀವ ನವೀಕರಣ
ಆಜೀವ ನವೀಕರಣ

ನಮ್ಮ ಪಾಲಿಸಿಗಳನ್ನು ಆಜೀವ ನವೀಕರಿಸಬಹುದಾಗಿದೆ. ಹೀಗಾಗಿ, ನಿಮ್ಮ ವಯಸ್ಸು ಹೆಚ್ಚಾದಂತೆ, ನಿಮ್ಮ ಪಾಲಿಸಿ ನವೀಕರಿಸಲು ನಾವು ಸಹಾಯ ಮಾಡುತ್ತೇವೆ.

ಫ್ರೀ ಲುಕ್ ರದ್ದತಿ
ಫ್ರೀ ಲುಕ್ ರದ್ದತಿ

ನಿಮಗೆ ಸೇವೆ ನೀಡಲು ನಮಗೆ ಆಸೆಯಿದ್ದರೂ, ಯಾವಾಗ ಬೇಕಾದರೂ ನಮ್ಮ ಪಾಲಿಸಿ ರದ್ದುಪಡಿಸುವ ಆಯ್ಕೆ ನಿಮ್ಮದು. ಫ್ರೀ ಲುಕ್ ರದ್ದತಿಗೆ ನಮ್ಮಲ್ಲಿ ಅನುಮತಿ ಇದೆ.

ದೀರ್ಘಾವಧಿ ರಿಯಾಯಿತಿ
ದೀರ್ಘಾವಧಿ ರಿಯಾಯಿತಿ

ನೀವು ನಮ್ಮ ಮೇಲಿಟ್ಟ ನಂಬಿಕೆಯನ್ನು ನಾವು ಗೌರವಿಸುತ್ತೇವೆ ಹಾಗೂ ದೀರ್ಘಾವಧಿಯ ಪಾಲಿಸಿಗಳಿಗೆ ರಿಯಾಯಿತಿಗಳ ಭರವಸೆ ನೀಡುತ್ತೇವೆ.

ಆಗಾಗ ಕೇಳುವ ಪ್ರಶ್ನೆಗಳು

ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಮೂಲಕ, ಈಗ ಇಡೀ ಕುಟುಂಬವನ್ನು ಆಕಸ್ಮಿಕ ಅಪಘಾತದಿಂದ ರಕ್ಷಿಸಿ. ಈ ಪಾಲಿಸಿಯು, ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ, ಅಪಘಾತದಿಂದ ಉಂಟಾದ ಸಾವು, ಶಾಶ್ವತ ಅಂಗವೈಕಲ್ಯ, ಮೂಳೆ ಮುರಿತ ಹಾಗೂ ಸುಟ್ಟ ಗಾಯಗಳಿಗೆ ಕವರೇಜ್ ನೀಡುತ್ತದೆ. ಇದು ಆಂಬ್ಯುಲೆನ್ಸ್ ಖರ್ಚು ಮತ್ತು ಆಸ್ಪತ್ರೆ ಭತ್ಯೆಯನ್ನೂ ನೀಡುತ್ತದೆ.
ಫ್ಯಾಮಿಲಿ ಪ್ಲಾನ್ ಅಡಿಯಲ್ಲಿ ನಿಮ್ಮ ಸಂಗಾತಿ ಮತ್ತು ಇಬ್ಬರು ಅವಲಂಬಿತ ಮಕ್ಕಳನ್ನು ಸೇರಿಸಬಹುದು.
ಹೌದು, ನೀವು ನಿಮ್ಮ 70 ವರ್ಷದೊಳಗಿನ ಅವಲಂಬಿತ ಪೋಷಕರನ್ನು ಪಾಲಿಸಿಗೆ ಸೇರಿಸಬಹುದು. ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಕೈಗೆಟಕುವ ಫ್ಲಾಟ್ ದರದೊಂದಿಗೆ ನಿಮ್ಮ ಅವಲಂಬಿತ ಪೋಷಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ಒದಗಿಸುತ್ತದೆ. ಅವರು ನಿಮಗಾಗಿ ತೋರಿಸಿದ ಪ್ರೀತಿ ಮತ್ತು ಕಾಳಜಿಯನ್ನು, ನೀವೀಗ ಸ್ವಲ್ಪವಾದರೂ ಮರಳಿ ನೀಡಬಹುದು.
ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ₹2.5 ಲಕ್ಷದಿಂದ 15 ಲಕ್ಷದವರೆಗೆ ವಿಮಾ ಮೊತ್ತದ ಸೌಲಭ್ಯ ಹೊಂದಿರುವ ನಾಲ್ಕು ಪ್ಲಾನ್‌ಗಳ ಆಯ್ಕೆ ನೀಡುತ್ತದೆ.
  1. ಸೆಲ್ಫ್ ಪ್ಲಾನ್
  2. ವೈಯಕ್ತಿಕ ಮತ್ತು ಕುಟುಂಬ ಯೋಜನೆ
  3. ವೈಯಕ್ತಿಕ ಮತ್ತು ಅವಲಂಬಿತ ಪೋಷಕರ ಆ್ಯಡ್-ಆನ್.
  4. ವೈಯಕ್ತಿಕ ಮತ್ತು ಫ್ಯಾಮಿಲಿ ಪ್ಲಾನ್+ಅವಲಂಬಿತ ಪೋಷಕರ ಆ್ಯಡ್-ಆನ್
ಅವಲಂಬಿತ ಮಗು ಎಂದರೆ ಇನ್ಶೂರ್ಡ್ ವ್ಯಕ್ತಿಯೊಂದಿಗೆ ವಾಸವಾಗಿರುವ 3 ತಿಂಗಳಿನಿಂದ 18 ವರ್ಷದವರೆಗಿನ ಅಥವಾ ಪೂರ್ಣಾವಧಿ ಶಿಕ್ಷಣ ಪಡೆಯುತ್ತಿದ್ದರೆ 21 ವರ್ಷದವರೆಗಿನ ಮದುವೆಯಾಗದ ಮಕ್ಕಳು ಎಂದರ್ಥ
18 ರಿಂದ 65 ವರ್ಷದವರೆಗಿನ ಪ್ರತಿಯೊಬ್ಬರೂ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಡೆದುಕೊಳ್ಳಬಹುದು.
ನೀವು 022-6234 6234 ಗೆ (ಭಾರತದಿಂದ ಮಾತ್ರ) ಅಥವಾ 022 66384800 ಗೆ (ಸ್ಥಳೀಯ/STD ಶುಲ್ಕಗಳು ಅನ್ವಯಿಸುತ್ತವೆ) ಕರೆ ಮಾಡುವ ಮೂಲಕ ಕ್ಲೇಮ್ ಸಲ್ಲಿಸಬಹುದು. ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ ಮತ್ತು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, 7 ಕೆಲಸದ ದಿನಗಳ ಒಳಗೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಫಾರ್ಮ್‌ ಪಡೆದು, ಪ್ರೀಮಿಯಂ ಪಾವತಿಸಿದ ದಿನಾಂಕದಿಂದ 15 ದಿನಗಳ ಒಳಗೆ ಪಾಲಿಸಿ ಪ್ರಾರಂಭವಾಗುತ್ತದೆ.
ತೊಂದರೆ-ರಹಿತ ಡಾಕ್ಯುಮೆಂಟೇಶನ್, ಈ ಪಾಲಿಸಿಯ ಅತ್ಯುತ್ತಮ ಅಂಶ. ಇದು ಎಷ್ಟು ಸರಳ ಎಂದರೆ, ನೀವು ಅಗತ್ಯ ವಿವರಗಳೊಂದಿಗೆ ಪ್ರಪೋಸಲ್ ಫಾರ್ಮ್ ತುಂಬಿ, ಅದರಲ್ಲಿ ಸಹಿ ಮಾಡಿ, ಯಾವುದಾದರೂ ಒಂದು ಪ್ಲಾನ್ ಟಿಕ್ ಮಾಡಿ, ಚೆಕ್ ಲಗತ್ತಿಸಬೇಕು ಅಥವಾ ಫಾರ್ಮ್‌ನಲ್ಲಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ಭರ್ತಿ ಮಾಡಬೇಕು. ಅಷ್ಟೇ!.
ಆಕ್ಸಿಡೆಂಟ್‌ನಿಂದ ಮೂಳೆಗಳು ಮುರಿದರೆ, ವಿಮಾ ಮೊತ್ತದ 10%of ವರೆಗೆ (ಅವಲಂಬಿತ ಪೋಷಕರಿಗೆ) ಹಾಗೂ ₹50,000 ಮೀರದಂತೆ ಪರಿಹಾರ ನೀಡಲಾಗುತ್ತದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x