ವಾಪಸ್ ಕರೆ ಮಾಡಬೇಕೇ?

ಶೀಘ್ರದಲ್ಲೇ ನಮ್ಮ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ
  • ಬಿಸಿನೆಸ್ ಸುರಕ್ಷಾ ಕ್ಲಾಸಿಕ್
  • ಸಾಗರ ಇನ್ಶೂರೆನ್ಸ್
  • ಉದ್ಯೋಗಿ ಪರಿಹಾರ
  • ಕಳ್ಳತನ ಮತ್ತು ಕೊಳ್ಳೆ ಇನ್ಶೂರೆನ್ಸ್ ಪಾಲಿಸಿ
  • ಸ್ಟ್ಯಾಂಡರ್ಡ್ ಬೆಂಕಿ ಮತ್ತು ವಿಶೇಷ ಅಪಾಯಗಳು
  • ಇತರ ಇನ್ಶೂರೆನ್ಸ್
  • Bharat Griha Raksha Plus-Long Term
  • ಸಾರ್ವಜನಿಕ ಹೊಣೆಗಾರಿಕೆ
  • ಬಿಸಿನೆಸ್ ಸೆಕ್ಯೂರ್ (ಸೂಕ್ಷ್ಮ)
  • ಸಾಗರ ಇನ್ಶೂರೆನ್ಸ್
  • ಲೈವ್‌ಸ್ಟಾಕ್ (ಜಾನುವಾರು) ಇನ್ಶೂರೆನ್ಸ್
  • ಸಾಕು ಪ್ರಾಣಿಗಳಿಗೆ ವಿಮೆ
  • ಸೈಬರ್ ಸ್ಯಾಚೆಟ್
  • ಮೋಟಾರ್ ಇನ್ಶೂರೆನ್ಸ್
Property & Misc InsuranceProperty & Misc Insurance

ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳು

ಬಿಸಿನೆಸ್ ಸೆಕ್ಯೂರ್ (ಸೂಕ್ಷ್ಮ)
ಈ ಪಾಲಿಸಿಯು ಬೆಂಕಿ, ಭೂಕಂಪ, ಸೈಕ್ಲೋನ್, ಪ್ರವಾಹ, ಸಿಡಿಲು, ಭೂಕುಸಿತ, ಮುಂತಾದವುಗಳಿಂದ ಯಾವುದೇ ವಾಣಿಜ್ಯ ಆಸ್ತಿಗಳ ಅಪಾಯಗಳ ವಿರುದ್ಧ ಸ್ಟಾಕ್‌ಗಳನ್ನು ಒಳಗೊಂಡಂತೆ ಇನ್ಶೂರ್ಡ್ ಆಸ್ತಿ ಮತ್ತು/ಅಥವಾ ಸ್ವತ್ತುಗಳಿಗೆ ಉಂಟಾದ ಭೌತಿಕ ನಷ್ಟ ಅಥವಾ ಹಾನಿಯನ್ನು1 ವರ್ಷದವರೆಗೆ ಕವರ್ ಮಾಡುತ್ತದೆ. ಈ ಪಾಲಿಸಿಯಲ್ಲಿ ಫೈರ್ ಕವರ್ ಕಡ್ಡಾಯವಾಗಿದೆ. ಹೆಚ್ಚುವರಿಯಾಗಿ, ಬಿಸಿನೆಸ್ ಅವಶ್ಯಕತೆಗೆ ಅನುಗುಣವಾಗಿ ದರೋಡೆ, ಯಂತ್ರೋಪಕರಣಗಳ ಬ್ರೇಕ್‌ಡೌನ್, ಪ್ಲೇಟ್ ಗ್ಲಾಸ್ ಮುಂತಾದ ವಿಭಾಗಗಳನ್ನು ಸೇರಿಸುವ ಮೂಲಕ ಪ್ಲಾನ್ ಅನ್ನು ಕಸ್ಟಮೈಜ್ ಮಾಡಬಹುದು. ಇದು ನಮ್ಮ ಬೇಸ್ ಆಫರಿಂಗ್ (ಕನಿಷ್ಠ ಅಗತ್ಯ ಕವರೇಜ್) ಆಗಿದೆ. ಪರ್ಯಾಯದೊಂದಿಗೆ ಹೋಲಿಕೆ ಮಾಡಿ


ಗುತ್ತಿಗೆದಾರರ ಎಲ್ಲಾ ರಿಸ್ಕ್‌
ಸಮಗ್ರ ಪಾಲಿಸಿಯು ಗುತ್ತಿಗೆದಾರರು/ಪ್ರಧಾನ ವ್ಯಕ್ತಿಗಳನ್ನು ಆಸ್ತಿ, ಕಾರ್ಖಾನೆ, ಯಂತ್ರೋಪಕರಣಗಳು ಮತ್ತು ಸಲಕರಣೆಗಳು, ಯೋಜನೆಯ ಸ್ಥಳಕ್ಕೆ ತಂದ ಸಾಮಗ್ರಿಗಳು/ಅಗತ್ಯ ಸಂಪನ್ಮೂಲಗಳು ಹಾಗೂ ಕೆಲಸದ ಸ್ಥಳದಲ್ಲೇ ಮಾಡಲಾದ ತಾತ್ಕಾಲಿಕ ನಿರ್ಮಾಣಕ್ಕೆ ಆದ ನಷ್ಟ ಅಥವಾ ಹಾನಿಗಳಿಂದ ಮತ್ತು ಕೆಲಸದ ಸ್ಥಳದಲ್ಲಿ ನಡೆಯುವ ಕೆಲಸಗಳಿಗೆ ಸಂಬಂಧಿಸಿದ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಂದಲೂ ಕವರ್‌ ಮಾಡುತ್ತದೆ.


ಗುತ್ತಿಗೆದಾರರ ಕಾರ್ಖಾನೆ ಮತ್ತು ಯಂತ್ರೋಪಕರಣಗಳು
ಬಾಹ್ಯ ಅಪಾಯಗಳಿಂದ ಉಂಟಾಗುವ ಆಕ್ಸಿಡೆಂಟ್‌ನಿಂದ ನಿರ್ಮಾಣಕ್ಕೆ ಬಳಸುವ ಯಂತ್ರೋಪಕರಣಗಳು, ಸಲಕರಣೆಗಳು ಮತ್ತು ಸಾಧನಗಳಿಗೆ ಸಂಭವಿಸಬಹುದಾದ ನಷ್ಟ ಅಥವಾ ಹಾನಿಗಳಿಂದ ರಕ್ಷಿಸಲು ಈ ಪಾಲಿಸಿಯು ತೊಂದರೆ-ರಹಿತ ದಾರಿ ಒದಗಿಸುತ್ತದೆ.


ಕಳ್ಳತನ ಮತ್ತು ಕೊಳ್ಳೆ ಇನ್ಶೂರೆನ್ಸ್ ಪಾಲಿಸಿ
ಹೋಲ್ಡ್‌-ಅಪ್‌ ರಿಸ್ಕ್‌ ಅಂದರೆ ಸ್ವಾರ್ಥ ಮತ್ತು ಸ್ವಹಿತಾಸಕ್ತಿಯಿಂದ ಆದ ಹಾನಿ ಸೇರಿದಂತೆ ಕಳ್ಳತನ, ಕೊಳ್ಳೆಯಂತಹ ಪ್ರಕರಣಗಳಲ್ಲಿ ಈ ಪಾಲಿಸಿ ಕವರೇಜ್‌ ನೀಡುತ್ತದೆ.


ಸಾಂದರ್ಭಿಕ ನಷ್ಟ - ಬೆಂಕಿ ಅವಘಡ
ಬೆಂಕಿ ಅವಘಡದ ನಂತರ ನಿಮ್ಮ ಬಿಸಿನೆಸ್‌ಗೆ ಆಗುವ ತೊಂದರೆಯಿಂದ ಸಂಭವಿಸುವ ನಷ್ಟಗಳನ್ನು ಈ ಪಾಲಿಸಿ ಕವರ್ ಮಾಡುತ್ತದೆ.


ಬಿಸಿನೆಸ್ ಸುರಕ್ಷಾ
ಇದೊಂದು ವಿಶೇಷ ಪ್ಯಾಕೇಜ್ ಪಾಲಿಸಿಯಾಗಿದ್ದು, ಒಂದೇ ಪ್ಯಾಕೇಜ್ ಪಾಲಿಸಿ ಅಡಿಯಲ್ಲಿ ಎಲ್ಲಾ ರೀತಿಯ ಕವರ್‌ಗಳ ಆಯ್ಕೆಯನ್ನು ಒದಗಿಸುತ್ತದೆ.


ಎಲೆಕ್ಟ್ರಾನಿಕ್ ಸಲಕರಣೆ
ಈ ಪಾಲಿಸಿಯು ನಿಮ್ಮ ಬಿಸಿನೆಸ್ ಸುಗಮವಾಗಿ ಕಾರ್ಯನಿರ್ವಹಿಸಲು ಪ್ರಮುಖವಾಗಿರುವ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳು ಮತ್ತು ಡೇಟಾ ಸ್ವತ್ತುಗಳನ್ನು ಕವರ್ ಮಾಡುತ್ತದೆ.


ನಿರ್ಮಾಣದ ಎಲ್ಲಾ ರಿಸ್ಕ್
ಈ ಪಾಲಿಸಿಯು ಸ್ಥಳದಲ್ಲಿ ಆಗುವ ಸಂಗ್ರಹಣೆ, ಜೋಡಣೆ/ನಿರ್ಮಾಣ, ಪರೀಕ್ಷೆ ಮತ್ತು ನಿಯೋಜನೆ, ಹೊಸ ಗ್ರೀನ್‌ ಫೀಲ್ಡ್‌ ಯೋಜನೆಗಳು ಅಥವಾ ಅದರ ಕೆಡವುವಿಕೆ ಮತ್ತು ಮರು-ನಿರ್ಮಾಣಕ್ಕೆ ಸಮಗ್ರ ಕವರೇಜ್ ಒದಗಿಸುತ್ತದೆ.


ವಿಶ್ವಾಸ ಖಾತರಿ
ಈ ಪಾಲಿಸಿಯು ಉದ್ಯೋಗಿಗಳು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಾಗ ಮಾಡಿದ ವಂಚನೆ ಅಥವಾ ಅಪ್ರಮಾಣಿಕ ಕೆಲಸಗಳ ಕಾರಣದಿಂದ ಉಂಟಾದ ಹಣಕಾಸಿನ ನಷ್ಟವನ್ನು ಕವರ್ ಮಾಡುತ್ತದೆ.


ಬೆಂಕಿ ಅವಘಡ ಮತ್ತು ವಿಶೇಷ ಅಪಾಯಗಳು
ಈ ಪಾಲಿಸಿಯು "ಹೆಸರಿಸಿದ ಅಪಾಯಗಳಿಂದ" ಉಂಟಾಗುವ ಹಣಕಾಸಿನ ನಷ್ಟಗಳಿಂದ ನಿಮ್ಮನ್ನು ರಕ್ಷಿಸುತ್ತದೆ


ಕೈಗಾರಿಕೆಯ ಎಲ್ಲಾ ರಿಸ್ಕ್
ಇದು ಒಂದು ಸಮಗ್ರ ಪ್ಯಾಕೇಜ್ ಪಾಲಿಸಿಯಾಗಿದ್ದು, ಇದು ಆಸ್ತಿಗೆ ಆಕಸ್ಮಿಕ ಹಾನಿಯನ್ನು ಒಳಗೊಂಡಂತೆ ಇದು ಅದರ ಕಾರ್ಯಾಚರಣೆಯಲ್ಲಿ ದೊಡ್ಡ ಉದ್ಯಮವು ಎದುರಿಸಬಹುದಾದ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ಕವರ್ ಒದಗಿಸುತ್ತದೆ.


ಯಂತ್ರೋಪಕರಣಗಳ ಕೆಡುವಿಕೆ
ಆಂತರಿಕ ಮತ್ತು ಬಾಹ್ಯ ಕಾರಣಗಳ ಪರಿಣಾಮವಾಗಿ ಯಂತ್ರೋಪಕರಣ ಮತ್ತು ಸಲಕರಣೆಗಳ ಆಕ್ಸಿಡೆಂಟಲ್‌, ಎಲೆಟ್ರಿಕಲ್‌ ಮತ್ತು ಮೆಕ್ಯಾನಿಕಲ್‌ ಕೆಡುವಿಕೆಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುತ್ತದೆ.


ಮನಿ ಇನ್ಶೂರೆನ್ಸ್
ಇನ್ಶೂರ್ಡ್ ವ್ಯಕ್ತಿ ಅಥವಾ ಅವರ ಅಧಿಕೃತ ಉದ್ಯೋಗಿ(ಗಳು), ಅಥವಾ ಇನ್ಶೂರ್ಡ್ ವ್ಯಕ್ತಿಯ ಸುಪರ್ಧಿಯಲ್ಲಿ ಸುರಕ್ಷಿತವಾಗಿರಿಸಿದ ಹಣವನ್ನು ಕೊಂಡೊಯ್ಯುತ್ತಿರುವಾಗ ಆಗುವ ಹಣದ ನಷ್ಟವನ್ನು ಪಾಲಿಸಿಯು ಕವರ್ ಮಾಡುತ್ತದೆ.


ನಿಯಾನ್ ಸೂಚನೆ ದೀಪಗಳು
ಆಕಸ್ಮಿಕ ಬಾಹ್ಯ ಕಾರಣಗಳು, ಬೆಂಕಿ ಅವಘಡ, ಸಿಡಿಲು, ಹೊರಾಂಗಣ ಸ್ಫೋಟ, ಕಳ್ಳತನ ಅಥವಾ ದುರುದ್ದೇಶಪೂರಿತ ಕ್ರಿಯೆಯಿಂದ ನಿಯಾನ್ ಸೂಚನೆ ನಿಯಾನ್ ಸೂಚನೆ ದೀಪಗಳಿಗೆ ಉಂಟಾಗುವ ನಷ್ಟ ಅಥವಾ ಹಾನಿಯನ್ನು ಈ ಪಾಲಿಸಿ ಕವರ್ ಮಾಡುತ್ತದೆ.


ಪ್ಲೇಟ್ ಗ್ಲಾಸ್ ಇನ್ಶೂರೆನ್ಸ್
ಈ ಪಾಲಿಸಿಯು ಇನ್ಶೂರ್ಡ್ ವ್ಯಕ್ತಿ ಇರುವ ಕಟ್ಟಡದ ಮುಂಭಾಗ ಅಥವಾ ಒಳಾಂಗಣದಲ್ಲಿ ಬಳಸಲಾದ ಗಾಜಿನ ಆಕಸ್ಮಿಕ ಒಡೆಯುವಿಕೆಯನ್ನು ಕವರ್ ಮಾಡುತ್ತದೆ.


ವಿಸ್ತರಿತ ವಾರಂಟಿ
ವಿಸ್ತರಿತ ವಾರಂಟಿ ಅವಧಿಯಲ್ಲಿ ಉತ್ಪಾದನಾ ದೋಷಗಳಿಂದ ಇನ್ಶೂರ್ಡ್ ವ್ಯಕ್ತಿಯ ಸ್ವತ್ತಿನ ರಿಪೇರಿ ಅಥವಾ ಬದಲಾವಣೆ ವೆಚ್ಚಗಳನ್ನು ಈ ಪಾಲಿಸಿ ಕವರ್‌ ಮಾಡುತ್ತದೆ.


ಸಹಜ ದೋಷಗಳ ಇನ್ಶೂರೆನ್ಸ್ ಪಾಲಿಸಿ
ಇನ್ಶೂರ್ಡ್ ವ್ಯಕ್ತಿಯ ಕಟ್ಟಡ ಸಹಜ ತೊಂದರೆಗಳಿಂದ ಹಾನಿಗೆ ಒಳಗಾದಾಗ, ಅದರ ರಿಪೇರಿ, ಮರುನಿರ್ಮಾಣ ಅಥವಾ ಅದನ್ನು ಸಧೃಡಗೊಳಿಸಲು ಬೇಕಾದ ವೆಚ್ಚಗಳಿಂದ ಈ ಪಾಲಿಸಿಯು ರಕ್ಷಣೆ ಒದಗಿಸುತ್ತದೆ.


ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
SKOCH Order-of-MeritBest Employer Brand AwardHR Excellence through technology award 2012Insurance AwardBest Insurance Company in Private Sector - General 2014Insurance Award iAAA ratingInsurance AwardInsurance AwardGold Shield ICAI Awards 2012-13ICAI Awards 2015-16Insurance AwardInsurance Award
x