ಹೋಮ್ / ಟ್ರಾವೆಲ್ ಇನ್ಶೂರೆನ್ಸ್ / USA ಗೆ ಟ್ರಾವೆಲ್ ಇನ್ಶೂರೆನ್ಸ್
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • FAQ

USA ಗಾಗಿ ಟ್ರಾವೆಲ್ ಇನ್ಶೂರೆನ್ಸ್ (ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ)

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಎಲ್ಲವೂ ಸುಂದರವಾಗಿದೆ. ನೀಲಿಯಾದ ಸಮುದ್ರ ಮತ್ತು ಬೀಚ್‌ಗಳು, ಹಿಮ ತುಂಬಿರುವ ಬೆಟ್ಟಗಳು, ಹಾಗೂ ನೋಡಿದರೆ ಪ್ರೀತಿಯಾಗುವ ನಗರಗಳೂ ಅಲ್ಲಿವೆ. ಸದಾ ಕಂಗೊಳಿಸುವ ಈ ಭೂಮಿ, ನಿಮ್ಮನ್ನು ತೆರೆದ ಬಾಹುಗಳಿಂದ ಹತ್ತಿರ ಸೆಳೆಯುತ್ತದೆ. ಇಲ್ಲಿನ ಅದ್ಭುತವಾದ ಜಾಗಗಳು ಮತ್ತು ಪ್ರವಾಸಿ ತಾಣಗಳು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತವೆ. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಡಿಯಲ್ಲಿ ಪಟ್ಟಿ ಮಾಡಲಾದ ದೇಶಗಳಲ್ಲಿ ಸುತ್ತಾಟ ನಡೆಸುವಾಗ, ಆ ದೇಶಗಳನ್ನು ನೋಡಿದ ಪ್ರತಿಯೊಬ್ಬರು "ವಾವ್" ಎನ್ನಲೇಬೇಕು. ಫ್ಲೋರಿಡಾಗೆ ಸೋಲೋ ಟ್ರಿಪ್‌, ಅಲಾಸ್ಕಾಗೆ ಬ್ಯಾಕ್‌ಪ್ಯಾಕಿಂಗ್, ಗ್ರ್ಯಾಂಡ್ ಕ್ಯಾನ್ಯನ್‌ಗೆ ಫ್ಯಾಮಿಲಿ ಟ್ರಿಪ್ ಅಥವಾ ಲಾಸ್ ವೇಗಾಸ್‌ಗೆ ಸ್ನೇಹಿತರೊಂದಿಗಿನ ಪ್ರವಾಸವೇ ಆದರೂ, USA ಯಲ್ಲಿ ನೋಡಲು ಅನೇಕ ಪ್ರೇಕ್ಷಣೀಯ ಸ್ಥಳಗಳಿವೆ. USA ಸುತ್ತಾಮುತ್ತಲು ಸುತ್ತಾಟ ನಡೆಸುವುದೇ ಒಂದು ಮೋಜು. ಆದಾಗ್ಯೂ, ಟ್ರಾವೆಲ್ ಇನ್ಶೂರೆನ್ಸ್ ಇಲ್ಲದೆ ಪ್ರವಾಸ ಮಾಡುವುದು ಅಪಾಯಕಾರಿಯಾಗಿದೆ. ಒಳ್ಳೆಯ ಪ್ರವಾಸವನ್ನು ಪ್ಲಾನ್ ಮಾಡುವ ಮೊದಲು, USA ಗೆ ಆನ್ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಹುಡುಕಿಕೊಂಡು, ನಿಮ್ಮ ಪ್ರವಾಸವನ್ನು ಇನ್ಶೂರ್‌ ಮಾಡುವ ಸೂಕ್ತ ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡಿ.


USA ಗೆ ಪ್ರಯಾಣಿಸುವ ಮೊದಲು ತಿಳಿದಿರಬೇಕಾಗಿರುವುದು


ವರ್ಗ:  ಬಿಡುವು/ ಬಿಸಿನೆಸ್/ ಶಿಕ್ಷಣ 

ಕರೆನ್ಸಿ: US ಡಾಲರ್

ಪ್ರವಾಸ ಮಾಡಲು ಉತ್ತಮ ಸಮಯ: ಮೇ ಯಿಂದ ಸೆಪ್ಟೆಂಬರ್

ಭಾರತೀಯರಿಗೆ ವೀಸಾ ವಿಧ: ಪೂರ್ವ-ಅನುಮೋದಿತ

ನೋಡಲೇಬೇಕಾದ ಸ್ಥಳಗಳು: ಫ್ಲೋರಿಡಾ, ಗ್ರ್ಯಾಂಡ್ ಕ್ಯಾನ್ಯನ್, ಲಾಸ್ ವೇಗಾಸ್, ನ್ಯೂಯಾರ್ಕ್ ಮತ್ತು ಡಿಸ್ನಿ ಲ್ಯಾಂಡ್.

USA ಪ್ರವಾಸಕ್ಕೆ ಟ್ರಾವೆಲ್ ಇನ್ಶೂರೆನ್ಸ್: USA ಪ್ರವಾಸಿ-ಸ್ನೇಹಿ ದೇಶವಾಗಿದ್ದರೂ, ನಿಮ್ಮ ವಸ್ತುಗಳನ್ನು ಮತ್ತು ಪ್ರಯಾಣದ ಕಾರ್ಯಸೂಚಿಯನ್ನು ಸುರಕ್ಷಿತಗೊಳಿಸುವುದು ಮುಖ್ಯವಾಗಿದೆ. ಬ್ಯಾಗೇಜ್ ನಷ್ಟ ಅಥವಾ ವಿಮಾನ ವಿಳಂಬಗಳಂತಹ ಸಾಮಾನ್ಯ ದುರ್ಘಟನೆಗಳು ನಿಮ್ಮ ಪ್ರವಾಸದ ಪ್ಲಾನ್ ಮೇಲೆ ತೀವ್ರವಾಗಿ ಪರಿಣಾಮ ಬೀರಬಹುದು; ಆದ್ದರಿಂದ ನಿಮ್ಮ ಮುಂದಿನ U.S.A ಪ್ರವಾಸಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಮುಖ್ಯವಾಗಿದೆ.

 

#ಮೇಲ್ಕಂಡ ವಿಷಯಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ನಿಮ್ಮ ಪ್ರವಾಸವನ್ನು ಪ್ಲಾನ್‌ ಮಾಡುವ ಮೊದಲು, ನಿಮ್ಮ ಟ್ರಾವೆಲ್ ಏಜೆಂಟ್ ಅಥವಾ ಆಯಾ ಎಂಬಸಿಯನ್ನು ದಯವಿಟ್ಟು ಸಂಪರ್ಕಿಸಿ

ಏನನ್ನು ಒಳಗೊಂಡಿದೆ?

ವೈದ್ಯಕೀಯ ಸಂಬಂಧಿತ ಕವರೇಜ್

cov-acc

ತುರ್ತು ವೈದ್ಯಕೀಯ ವೆಚ್ಚಗಳು

ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.

cov-acc

ದಂತ ಚಿಕಿತ್ಸೆಯ ವೆಚ್ಚಗಳು

ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.

cov-acc

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.

ಬ್ಯಾಗ್‌ಗಳಿಗೆ ಸಂಬಂಧಿತ ಕವರೇಜ್

cov-acc

ಚೆಕ್-ಇನ್ ಬ್ಯಾಗೇಜ್ ನಷ್ಟ

ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಚೆಕ್-ಇನ್ ಬ್ಯಾಗೇಜ್ ವಿಳಂಬ

ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.

cov-acc

ಬ್ಯಾಗೇಜ್ ಮತ್ತು ಅದರ ವಸ್ತುಗಳ ಕಳ್ಳತನ

ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಪ್ರಯಾಣ ಸಂಬಂಧಿತ ಕವರೇಜ್

cov-acc

ವಿಮಾನ ವಿಳಂಬ ಮತ್ತು ರದ್ದತಿ

ವಿಮಾನ ವಿಳಂಬಗಳು ಅಥವಾ ರದ್ದತಿಗಳು ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಅವುಗಳಿಂದಾಗಿ ಎದುರಾಗುವ ದುರ್ಬಲತೆಗಳನ್ನು ಕಡಿಮೆಗೊಳಿಸಲು ಸಹಾಯ ಮಾಡಲು ನಾವು ಸ್ವಲ್ಪ ಕೆಲಸ ಮಾಡಬಹುದು ಎಂದು ಖಚಿತಪಡಿಸುತ್ತೇವೆ. ನಮ್ಮ ವೆಚ್ಚ ಮರಳಿ ನೀಡುವ ಫೀಚರ್ ನಿಮಗೆ ಹಿನ್ನಡೆಯಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

cov-acc

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ

ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ನಕಲಿ ಪಾಸ್‌ಪೋರ್ಟ್ ಮತ್ತು/ಅಥವಾ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

cov-acc

ಟ್ರಿಪ್ ಮೊಟಕುಗೊಳಿಸುವಿಕೆ

ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

cov-acc

ವೈಯಕ್ತಿಕ ಹೊಣೆಗಾರಿಕೆ

ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ತುರ್ತು ಹೋಟೆಲ್ ವಸತಿ

ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು.. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ಆ ವಿಷಯ ನಮಗೆ ಬಿಡಿ. ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ತಪ್ಪಿಹೋದ ಫ್ಲೈಟ್ ಕನೆಕ್ಷನ್

ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಹೈಜಾಕ್ ಅಪಾಯದ ಭತ್ಯೆ

ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.

cov-acc

ತುರ್ತು ನಗದು ಸಹಾಯ ಸೇವೆ

ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ನೀವು USA ಗೆ ಹೋಗುತ್ತಿದ್ದರೆ, ಪ್ರಯಾಣದಲ್ಲಿ ನೀವು ಎದುರಿಸಬಹುದಾದ ಹಣಕಾಸಿನ ಹೊಣೆಗಾರಿಕೆಗಳನ್ನು ಪ್ಲಾನ್ ಕವರ್ ಮಾಡುವುದರಿಂದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವುದು ಸೂಕ್ತವಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ವಿವಿಧ ಖರೀದಿ ವಿಧಾನಗಳನ್ನು ಒದಗಿಸುವುದರಿಂದ, USA ಟ್ರಿಪ್‌ಗಾಗಿ ಟ್ರಾವೆಲ್ ಪ್ಲಾನ್ ಖರೀದಿಸುವುದು ತುಂಬಾ ಸರಳವಾಗಿದೆ. ಅಂತಹ ವಿಧಾನಗಳು ಈ ಕೆಳಗಿನಂತಿವೆ –

● ಆಫ್ಲೈನ್ ಮೋಡ್

ನೀವು ಹತ್ತಿರದ ಎಚ್‌ಡಿಎಫ್‌ಸಿ ಎರ್ಗೋ ಶಾಖೆ ಆಫೀಸ್‌ಗೆ ಭೇಟಿ ನೀಡಬಹುದು ಮತ್ತು USA ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗೆ ಅಪ್ಲೈ ಮಾಡಬಹುದು. ನೀವು ಪ್ರಸ್ತಾವನೆ ಫಾರ್ಮ್ ಅನ್ನು ಭರ್ತಿ ಮಾಡಬೇಕು ಮತ್ತು ಅದನ್ನು ಪ್ರೀಮಿಯಂ ಮೊತ್ತದೊಂದಿಗೆ ಕಂಪನಿಗೆ ಸಲ್ಲಿಸಬೇಕು. ಕಂಪನಿಯು ಪಾಲಿಸಿಯನ್ನು ಅಂಡರ್‌ರೈಟ್ ಮಾಡುತ್ತದೆ ಮತ್ತು ಯಶಸ್ವಿ ಅಂಡರ್‌ರೈಟಿಂಗ್ ನಂತರ ಅದನ್ನು ನೀಡುತ್ತದೆ.

● ಆನ್ಲೈನ್ ಮೋಡ್

ಆನ್ಲೈನ್ ಮೋಡ್, USA ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಸರಳ ಪರ್ಯಾಯವಾಗಿದೆ. ನೀವು ಎಚ್‌ಡಿಎಫ್‌ಸಿ ಎರ್ಗೋದ ಆನ್ಲೈನ್ ವೆಬ್‌ಸೈಟ್ ಮೂಲಕ ತ್ವರಿತವಾಗಿ ಪಾಲಿಸಿಯನ್ನು ಖರೀದಿಸಬಹುದು. ಪ್ರಕ್ರಿಯೆಯು ಈ ಕೆಳಗಿನಂತಿವೆ –

https://www.hdfcergo.com/travel-insurance ಗೆ ಭೇಟಿ ನೀಡಿ ಮತ್ತು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ

● ಆನ್ಲೈನ್ ಪ್ರಸ್ತಾವನೆ ಫಾರ್ಮ್‌ನಲ್ಲಿ, ನೀವು ಕೈಗೊಳ್ಳುತ್ತಿರುವ ಪ್ರಯಾಣದ ಪ್ರಕಾರವನ್ನು (ವೈಯಕ್ತಿಕ ಟ್ರಾವೆಲ್, ಫ್ಯಾಮಿಲಿ ಟ್ರಾವೆಲ್ ಅಥವಾ ಸ್ಟೂಡೆಂಟ್ ಟ್ರಾವೆಲ್) , ನಿಮ್ಮೊಂದಿಗೆ ಪ್ರಯಾಣಿಸುವ ಸದಸ್ಯರು, ಅವರ ವಯಸ್ಸನ್ನು ಭರ್ತಿ ಮಾಡಿ ಮತ್ತು 'ಮುಂದುವರೆಯಿರಿ' ಮೇಲೆ ಕ್ಲಿಕ್ ಮಾಡಿ

● ನಂತರ ದೇಶವನ್ನು USA ಎಂದು ನಿರ್ದಿಷ್ಟಪಡಿಸಿ ಮತ್ತು ನಿಮ್ಮ ನಿರ್ಗಮನ ಮತ್ತು ಆಗಮನದ ದಿನಾಂಕಗಳನ್ನು ನಮೂದಿಸಿ

● ಕವರೇಜ್ ಆಯ್ಕೆಗಳು ಮತ್ತು ನೀವು ಪಾವತಿಸಬೇಕಾದ ಪ್ರೀಮಿಯಂಗಳನ್ನು ಪರಿಶೀಲಿಸಲು 'ಕೋಟ್‌ಗಳನ್ನು ನೋಡಿ' ಮೇಲೆ ಕ್ಲಿಕ್ ಮಾಡಿ

● ಸೂಕ್ತ ಪ್ಲಾನ್ ಆಯ್ಕೆಮಾಡಿ ಮತ್ತು ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸಿ

ಒಮ್ಮೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ತಕ್ಷಣವೇ ನೀಡಲಾಗುತ್ತದೆ ಮತ್ತು ಪ್ರಯಾಣದ ಅವಧಿಯಲ್ಲಿ ನಿಮ್ಮನ್ನು ಕವರ್ ಮಾಡಲಾಗುತ್ತದೆ.

USA ಕವರ್ ಮಾಡುವ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನ ಪ್ರೀಮಿಯಂ ಮೊತ್ತವು ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.

ಪ್ರಯಾಣಿಸುವ ಸದಸ್ಯರ ಸಂಖ್ಯೆ

● ಅವರ ವಯಸ್ಸು

ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನ ಪ್ರೀಮಿಯಂ ನೇರವಾಗಿ ವಯಸ್ಸಿಗೆ ಅನುಗುಣವಾಗಿದೆ. ಹೆಚ್ಚಿನ ವಯಸ್ಸಿನವರಿಗೆ ಪ್ರೀಮಿಯಂಗಳು ಹೆಚ್ಚಾಗಿರುತ್ತವೆ ಮತ್ತು ಕಡಿಮೆ ವಯಸ್ಸಿನವರಿಗೆ ಪ್ರೀಮಿಯಂ ಕಡಿಮೆಯಾಗಿರುತ್ತದೆ.

● ವಿಮಾ ಮೊತ್ತ

ಪ್ರೀಮಿಯಂ ನೇರವಾಗಿ ವಿಮಾ ಮೊತ್ತಕ್ಕೆ ಅನುಗುಣವಾಗಿದೆ. ಹೆಚ್ಚಿನ ವಿಮಾ ಮೊತ್ತಕ್ಕೆ ಪ್ರೀಮಿಯಂ ಹೆಚ್ಚಿರುತ್ತದೆ ಮತ್ತು ಕಡಿಮೆಯದ್ದಕ್ಕೆ ಪ್ರೀಮಿಯಂ ಕಡಿಮೆಯಿರುತ್ತದೆ.

● ಪ್ರಯಾಣದ ಅವಧಿ

ಪ್ರಯಾಣದ ಅವಧಿ ಹೆಚ್ಚಾಗಿದ್ದರೆ, ಪ್ರೀಮಿಯಂ ಹೆಚ್ಚಾಗಿರುತ್ತದೆ.

ಅಂತೆಯೇ, ಆನ್ಲೈನ್ ಪ್ರೀಮಿಯಂ ಕ್ಯಾಲ್ಕುಲೇಟರ್‌ನಲ್ಲಿ ನಿಮ್ಮ ಪ್ರಯಾಣ ಸಂಬಂಧಿತ ವಿವರಗಳನ್ನು ನೀವು ನಮೂದಿಸಿದ ನಂತರ, USA ಗಾಗಿ ಟ್ರಾವೆಲ್ ಪ್ಲಾನ್ ಖರೀದಿಸಲು ನೀವು ಪಾವತಿಸಬೇಕಾದ ಮೊತ್ತವನ್ನು ನೀವು ಕಂಡುಕೊಳ್ಳಬಹುದು. ಉದಾಹರಣೆಗೆ, ನೀವು ಮತ್ತು ನಿಮ್ಮ ಸಂಗಾತಿ, ಅನುಕ್ರಮವಾಗಿ 36 ಮತ್ತು 35 ವರ್ಷಗಳ ವಯಸ್ಸಿನವರಾಗಿದ್ದರೆ, 4 ದಿನಗಳವರೆಗೆ ಪ್ರಯಾಣಿಸುತ್ತಿದ್ದರೆ, ಪ್ರೀಮಿಯಂ ಈ ರೀತಿಯಾಗಿರುತ್ತದೆ –

● ಸಿಲ್ವರ್ – ವಿಮಾ ಮೊತ್ತ USD 50,000 – ಪ್ರೀಮಿಯಂ ₹ 948 (ತೆರಿಗೆಗಳನ್ನು ಹೊರತುಪಡಿಸಿ)

● ಚಿನ್ನ - ವಿಮಾ ಮೊತ್ತ USD 100,000 – ಪ್ರೀಮಿಯಂ ₹ 1141 (ತೆರಿಗೆಗಳನ್ನು ಹೊರತುಪಡಿಸಿ)

● ಪ್ಲಾಟಿನಂ – ವಿಮಾ ಮೊತ್ತ USD 200,000 – ಪ್ರೀಮಿಯಂ ₹ 1339 (ತೆರಿಗೆಗಳನ್ನು ಹೊರತುಪಡಿಸಿ)

● ಟೈಟಾನಿಯಂ - ವಿಮಾ ಮೊತ್ತ USD 500,000 – ಪ್ರೀಮಿಯಂ ₹ 1729 (ತೆರಿಗೆಗಳನ್ನು ಹೊರತುಪಡಿಸಿ).

USA ಗೆ ಭೇಟಿ ನೀಡುವಾಗ ಮೆಡಿಕಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಕಡ್ಡಾಯವಲ್ಲ. ಹಾಗೆ ಹೇಳಿದರೂ, USA ಯಲ್ಲಿ ವೈದ್ಯಕೀಯ ವೆಚ್ಚಗಳು ತುಂಬಾ ದುಬಾರಿಯಾಗಿವೆ. ಸರಳವಾದ ಆಸ್ಪತ್ರೆ ದಾಖಲಾತಿಯಿಂದ ಕೂಡಾ ಲಕ್ಷಗಟ್ಟಲೆ ಹಣ ಖರ್ಚಾಗಬಹುದು ಮತ್ತು ನೀವು ಯಾವುದೇ ಚಿಕಿತ್ಸೆಗೆ ಒಳಗಾದರೆ, ವೈದ್ಯಕೀಯ ಬಿಲ್‌ಗಳು ಗಣನೀಯವಾಗಿರಬಹುದು. USA ಗೆ ಪ್ರಯಾಣಿಸುವಾಗ, ನೀವು ವೈದ್ಯಕೀಯ ತುರ್ತುಸ್ಥಿತಿಗಳನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ನೀವು ಅನಾರೋಗ್ಯಕ್ಕೆ ಒಳಗಾಗಿ ಅಥವಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವ ಅಗತ್ಯ ಬೀಳಬಹುದು. ಅಂತಹ ಸಂದರ್ಭಗಳಲ್ಲಿ, ವೈದ್ಯಕೀಯ ಬಿಲ್‌ಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. USA ನಲ್ಲಿ ತೆಗೆದುಕೊಳ್ಳಲಾದ ದುಬಾರಿ ಚಿಕಿತ್ಸೆಗಳಿಗೆ ಪಾವತಿಸಲು ನಿಮ್ಮ ಉಳಿತಾಯದ ಹಣವನ್ನು ಬಳಸಬೇಕಾಗಬಹುದು ಮತ್ತು ಲೋನ್ ಪಡೆಯಬೇಕಾಗಬಹುದು. ಈ ರೀತಿಯಲ್ಲಿ ವೈದ್ಯಕೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಇಲ್ಲದಿದ್ದರೆ, ನೀವು ಗಣನೀಯ ಹಣಕಾಸಿನ ನಷ್ಟಗಳನ್ನು ಎದುರಿಸಬಹುದು.

ತುರ್ತು ಆಸ್ಪತ್ರೆ ದಾಖಲಾತಿಗೆ ಕವರೇಜ್ ಹೊರತುಪಡಿಸಿ, USA ಗಾಗಿ ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು ಹಲವಾರು ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತವೆ. ಚೆಕ್-ಇನ್ ಸಾಮಾನು ನಷ್ಟ ಅಥವಾ ವಿಳಂಬ, ಆಸ್ಪತ್ರೆ ದೈನಂದಿನ ಭತ್ಯೆ, ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ಕಾರಣದಿಂದ ಸ್ವದೇಶ ವಾಪಸಾತಿ, ಆಕಸ್ಮಿಕ ಸಾವು ಅಥವಾ ಅಂಗವೈಕಲ್ಯ, ವೈಯಕ್ತಿಕ ಹೊಣೆಗಾರಿಕೆ, ತುರ್ತು ಸಹಾಯ, ಹೈಜಾಕ್ ಭತ್ಯೆ ಇತ್ಯಾದಿಗಳಿಗೆ ನೀವು ಕವರ್ ಪಡೆಯಬಹುದು. ಆದ್ದರಿಂದ, ಅನಿರೀಕ್ಷಿತ ತುರ್ತು ಸ್ಥಿತಿಗಳಲ್ಲಿ, ಪಾಲಿಸಿಯು ಹಣಕಾಸಿನ ನೆರವು ನೀಡುತ್ತದೆ.

USA ದುಬಾರಿ ದೇಶವಾಗಿರುವುದರಿಂದ, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಸಣ್ಣ ಮತ್ತು ಕೈಗೆಟಕುವ ಪ್ರೀಮಿಯಂನಲ್ಲಿ, ನೀವು ಪ್ರಯಾಣ ಸಂಬಂಧಿತ ಅನಿಶ್ಚಿತತೆಗಳ ವಿರುದ್ಧ ಗಣನೀಯ ಕವರೇಜ್ ಪಡೆಯಬಹುದು.

USA ಯಲ್ಲಿ ಹೆಲ್ತ್‌ಕೇರ್ ಎಂಬುದು ಖಾಸಗಿ ಮತ್ತು ಸರ್ಕಾರಿ ಪ್ರಾಯೋಜಿತ ಆರೋಗ್ಯ ಕಾರ್ಯಕ್ರಮಗಳ ಮಿಶ್ರಣವಾಗಿದೆ. ಹೀಗಾಗಿ, ಹಣ ಪಾವತಿಸಬೇಕಾದ ಮತ್ತು ಉಚಿತ ಕ್ಲಿನಿಕ್‌ಗಳು ಮತ್ತು ಆಸ್ಪತ್ರೆಗಳು ಇಲ್ಲಿವೆ. ಆದಾಗ್ಯೂ, ಸರ್ಕಾರಿ ಪ್ರಾಯೋಜಿತ ಉಚಿತ ಹೆಲ್ತ್‌ಕೇರ್ ಸೌಲಭ್ಯವನ್ನು ದೇಶದ ನಾಗರಿಕರಿಗೆ ನೀಡಲಾಗುತ್ತದೆ. ಪ್ರವಾಸಿಗಳು ಅಥವಾ ಭೇಟಿ ನೀಡುವವರು ಉಚಿತ ಹೆಲ್ತ್‌ಕೇರ್ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ, USA ಗೆ ಪ್ರಯಾಣಿಸುವಾಗ, ನೀವು ಯಾವುದೇ ವೈದ್ಯಕೀಯ ತುರ್ತುಸ್ಥಿತಿಯಿಂದ ಬಳಲುತ್ತಿದ್ದರೆ ಮತ್ತು ಸಹಾಯದ ಅಗತ್ಯವಿದ್ದರೆ, ನೀವು ಅದಕ್ಕಾಗಿ ಪಾವತಿಸಬೇಕಾಗುತ್ತದೆ.

ಹೆಲ್ತ್‌ಕೇರ್ ಸೌಲಭ್ಯಗಳ ವಿಷಯಕ್ಕೆ ಬಂದಾಗ, USA ಅತ್ಯುತ್ತಮ ಚಿಕಿತ್ಸೆಗಳು ಮತ್ತು ವೈದ್ಯಕೀಯ ತಂತ್ರಜ್ಞಾನವನ್ನು ಹೊಂದಿದೆ. ಆದಾಗ್ಯೂ, ಸೌಲಭ್ಯಗಳು ಅಗ್ಗವಾಗಿಲ್ಲ. ಆಸ್ಪತ್ರೆ ದಾಖಲಾತಿ ಮತ್ತು ಚಿಕಿತ್ಸೆಗಳ ವೆಚ್ಚವು ತುಂಬಾ ದುಬಾರಿಯಾಗಿದೆ ಮತ್ತು ಭಾರತೀಯ ಕರೆನ್ಸಿಯಲ್ಲಿ ಸುಲಭವಾಗಿ ಲಕ್ಷಗಳನ್ನು ತಲುಪಬಹುದು. ಅದಕ್ಕಾಗಿಯೇ, ನೀವು USA ಗೆ ಪ್ರಯಾಣಿಸುವಾಗ, ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ.

ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ವೈದ್ಯಕೀಯ ತುರ್ತುಸ್ಥಿತಿಗಳನ್ನು ಕವರ್ ಮಾಡುತ್ತದೆ ಮತ್ತು ನಿಮ್ಮ ವೈದ್ಯಕೀಯ ಬಿಲ್‌ಗಳಿಗೆ ಪಾವತಿಸುತ್ತದೆ. ಹೀಗಾಗಿ, ಟ್ರಾವೆಲ್ ಪ್ಲಾನ್‌ನೊಂದಿಗೆ ನೀವು ಪ್ರಯಾಣದ ಸಮಯದಲ್ಲಿ ಉಚಿತ ಹೆಲ್ತ್‌ಕೇರ್ ಸೌಲಭ್ಯಗಳ ಬಗ್ಗೆ ಹುಡುಕಬೇಕಾಗಿಲ್ಲ ಅಥವಾ ಚಿಂತಿಸಬೇಕಾಗಿಲ್ಲ. ನೀವು ಅಗತ್ಯ ಚಿಕಿತ್ಸೆಗಳನ್ನು ಪಡೆಯಬಹುದು ಮತ್ತು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್, ಒಳಗೊಂಡಿರುವ ವೆಚ್ಚಗಳನ್ನು ಕವರ್ ಮಾಡುತ್ತದೆ.

ಯುಎಸ್ಎಗಾಗಿ ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ –

● ತುರ್ತು ವೈದ್ಯಕೀಯ ವೆಚ್ಚಗಳು

● ದೈನಂದಿನ ಆಸ್ಪತ್ರೆ ನಗದು ಭತ್ಯೆ

● ತುರ್ತು ವೈದ್ಯಕೀಯ ಸ್ಥಳಾಂತರ ಮತ್ತು ಸ್ವದೇಶಕ್ಕೆ ವಾಪಸಾತಿ

● ಆಕಸ್ಮಿಕ ಸಾವು ಮತ್ತು ಅಂಗವಿಕಲತೆ

● ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವುದು

ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಪ್ಲಾನ್ ತುಂಬಾ ಸಮಗ್ರವಾಗಿದೆ ಮತ್ತು ಒಳಗೊಂಡಿರುವ ವೆಚ್ಚಗಳ ಬಗ್ಗೆ ಚಿಂತಿಸದೆ ಅತ್ಯುತ್ತಮ ಹೆಲ್ತ್‌ಕೇರ್ ಸೌಲಭ್ಯಗಳನ್ನು ಪಡೆಯಲು ನಿಮಗೆ ಅನುಮತಿ ನೀಡಬಹುದು.

ಹೌದು, ವಿದೇಶಿಗರು USA ನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಬಹುದು. ಎಲ್ಲರಿಗೂ ಲಭ್ಯವಿರುವ ಹಲವಾರು ಹೆಲ್ತ್ ಇನ್ಶೂರೆನ್ಸ್ ಪರಿಹಾರಗಳನ್ನು ದೇಶವು ಒದಗಿಸುತ್ತದೆ.

ಆದಾಗ್ಯೂ, USA ಯಲ್ಲಿ ಹೆಲ್ತ್ ಇನ್ಶೂರೆನ್ಸ್ ಅಗ್ಗವಾಗಿಲ್ಲ. ಇದರಿಂದಾಗಿ ಗಣನೀಯ ಮೊತ್ತದ ಹಣವನ್ನು ಖರ್ಚು ಮಾಡಬೇಕಾಗಬಹುದು. ಅದಕ್ಕಾಗಿಯೇ, ನೀವು ಭಾರತೀಯ ನಾಗರಿಕರಾಗಿದ್ದು, ವಿದ್ಯಾರ್ಥಿಯಾಗಿ ಅಥವಾ ಪ್ರವಾಸಿಗರಾಗಿ USA ಗೆ ಪ್ರಯಾಣಿಸುತ್ತಿದ್ದರೆ, ನೀವು ಭಾರತದಲ್ಲೇ ಒಂದು ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ USA ಗೆ ಪ್ರಯಾಣಿಸುತ್ತಿರುವ ಭಾರತೀಯ ನಾಗರಿಕರಿಗೆ ವಿದೇಶಿ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ. ಪಾಲಿಸಿಯು ಒಂದು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ನಿಮ್ಮ ಟ್ರಿಪ್ ಅವಧಿಯನ್ನು ಕವರ್ ಮಾಡುತ್ತದೆ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ ಕವರೇಜ್ ಒದಗಿಸುತ್ತದೆ. USA ಗೆ ಪ್ರಯಾಣಿಸುವಾಗ ನೀವು ಆಸ್ಪತ್ರೆಗೆ ದಾಖಲಾಗಿದ್ದರೆ, ಪಾಲಿಸಿಯು ಆಸ್ಪತ್ರೆಯ ಬಿಲ್‌ಗಳನ್ನು ಪಾವತಿಸುತ್ತದೆ. ಇದಲ್ಲದೆ, USA ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಈ ಕೆಳಗಿನವುಗಳಿಗೆ ಕವರೇಜ್ ಕೂಡ ಲಭ್ಯವಿದೆ –

● ವೈದ್ಯಕೀಯ ಸ್ಥಳಾಂತರ ಮತ್ತು ಸ್ವದೇಶಕ್ಕೆ ವಾಪಸಾತಿ

● ಆಸ್ಪತ್ರೆಗೆ ದಾಖಲಾಗುವ ಪ್ರತಿದಿನಕ್ಕೆ ಆಸ್ಪತ್ರೆ ನಗದು ಭತ್ಯೆ

● ಆಕಸ್ಮಿಕ ಸಾವು

● ಅಪಘಾತದಲ್ಲಿ ಉಂಟಾದ ಶಾಶ್ವತ ಸಂಪೂರ್ಣ ಅಂಗವಿಕಲತೆ

● ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವುದು

ವೈಯಕ್ತಿಕ ಅಥವಾ ಬಿಸಿನೆಸ್ ಪ್ರಯಾಣಕ್ಕಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋದ USA ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಮೂರು ರೀತಿಯ ಪ್ಲಾನ್‌ಗಳು ಲಭ್ಯವಿವೆ –

● USA ಗೆ ಪ್ರಯಾಣಿಸುವ ಒಬ್ಬ ವ್ಯಕ್ತಿಯನ್ನು ಕವರ್ ಮಾಡುವ ವೈಯಕ್ತಿಕ ಟ್ರಾವೆಲ್ ಪ್ಲಾನ್

● ಒಂದೇ ಪ್ಲಾನ್‌ನಲ್ಲಿ ಸಂಪೂರ್ಣ ಕುಟುಂಬವನ್ನು ಕವರ್ ಮಾಡುವ ಫ್ಯಾಮಿಲಿ ಟ್ರಾವೆಲ್ ಪ್ಲಾನ್

● ಉನ್ನತ ಶಿಕ್ಷಣಕ್ಕಾಗಿ USA ಗೆ ಪ್ರಯಾಣಿಸುವ ವಿದ್ಯಾರ್ಥಿಯನ್ನು ಕವರ್ ಮಾಡುವ ಸ್ಟೂಡೆಂಟ್ ಟ್ರಾವೆಲ್ ಪ್ಲಾನ್

ಹೆಲ್ತ್ ಇನ್ಶೂರೆನ್ಸ್ ಕವರೇಜ್ ಹೊರತುಪಡಿಸಿ, USA ಗಾಗಿ ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಇತರ ಕವರೇಜ್ ಪ್ರಯೋಜನಗಳನ್ನು ಸಹ ನೀವು ಆನಂದಿಸಬಹುದು. ವಿವಿಧ ಪ್ಲಾನ್ ರೂಪಾಂತರಗಳು ಕೂಡ ಇವೆ, ಇದರಿಂದಾಗಿ ನಿಮ್ಮ ಅವಶ್ಯಕತೆಗಳನ್ನು ಪೂರೈಸುವ ಕವರೇಜ್ ಅನ್ನು ನೀವು ಆಯ್ಕೆ ಮಾಡಬಹುದು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x