ಕಾರ್ಪೊರೇಟ್ ಸಾಮಾಜಿಕ ತೊಡಗುವಿಕೆಗಳು - ಸಾಮಾಜಿಕ ಬದಲಾವಣೆಯ ಬಲವರ್ಧನೆ

ಎಚ್‌ಡಿಎಫ್‌ಸಿ ಎರ್ಗೋ ಸಮುದಾಯದ ಆರ್ಥಿಕ ಪ್ರಗತಿಗೆ ಸಕ್ರಿಯ ಕೊಡುಗೆ ನೀಡುತ್ತದೆ. ನಾವು ಸಾಮಾಜಿಕ ಬದಲಾವಣೆ ತರಲು, ಶಿಕ್ಷಣವನ್ನು ಉತ್ತೇಜಿಸಲು ಮತ್ತು ಸುಸ್ಥಿರ ಪರಿಸರವನ್ನು ಸೃಷ್ಟಿಸಲು ಪ್ರಮಾಣ ಮಾಡುತ್ತೇವೆ. ಗ್ರಾಹಕ, ಬಿಸಿನೆಸ್ ಪಾಲುದಾರ, ಮರು-ವಿಮಾದಾತ, ಷೇರುದಾರ, ಉದ್ಯೋಗಿ ಮತ್ತು ಸಮಾಜದಂತಹ ನಮ್ಮ ಎಲ್ಲಾ ಹಿತಚಿಂತಕರ ಒಳಿತನ್ನು ಪರಿಗಣನೆಗೆ ತೆಗೆದುಕೊಂಡು, ವ್ಯಾವಹಾರಿಕ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, SEED ಎಂಬ ತತ್ವಕ್ಕೆ, ಅಂದರೆ, ಸೂಕ್ಷ್ಮತೆ, ಉನ್ನತಿ, ನೈತಿಕತೆ ಮತ್ತು ಕ್ರಿಯಾತ್ಮಕತೆಗೆ ಬದ್ದರಾಗಿರುತ್ತೇವೆ.. ಲಕ್ಷಾಂತರ ಮುಖಗಳಲ್ಲಿ ಮಾಸದ ನಗು ಮೂಡಿಸುವುದೇ, ಈ ತೊಡಗುವಿಕೆಯ ಉದ್ದೇಶವಾಗಿದೆ.

ನನ್ನ ಹಳ್ಳಿ ಕಾರ್ಯಕ್ರಮ (ಗ್ರಾಮೀಣ ಶಿಕ್ಷಣವನ್ನು ಉತ್ತೇಜಿಸುವ ತೊಡಗುವಿಕೆ)

ನಮ್ಮ CSR ಚಟುವಟಿಕೆಯು "ನನ್ನ ಹಳ್ಳಿ" ಎಂಬ ನಮ್ಮ ಪ್ರಮುಖ ತೊಡಗುವಿಕೆಯ ಕಡೆಗೆ ಕೇಂದ್ರಿತವಾಗಿದ್ದು, ಆಯ್ದ ಹಳ್ಳಿಗಳಲ್ಲಿನ ಈಗಿನ ಶಿಕ್ಷಣದ ಮಟ್ಟ ಮತ್ತು ಸ್ವಚ್ಛತೆಯ ಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿದೆ.


ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ


ಶಾಲೆಯು ಮಕ್ಕಳಿಗೆ ಇನ್ನೊಂದು ಮನೆ ಇದ್ದಂತೆ ಎಂದು ಹೇಳಲಾಗುತ್ತದೆ. ಸರ್ಕಾರ ನಡೆಸುತ್ತಿರುವ ಅನೇಕ ಶಾಲೆಗಳು, ನೀರು, ವಿದ್ಯುತ್ ಅಥವಾ ಸ್ವಚ್ಛತೆಯ ಕೊರತೆಯಿಂದ ಕೆಟ್ಟ ಪರಿಸ್ಥಿತಿಯಲ್ಲಿವೆ ಹಾಗೂ ಹಾಳುಬಿದ್ದಿವೆ. ಕೆಲವು ಸರ್ಕಾರಿ ಶಾಲೆಗಳು ಶುದ್ಧ ಕುಡಿಯುವ ನೀರು, ಟಾಯ್ಲೆಟ್‌ಗಳು, ಲೈಬ್ರರಿಗಳಂತಹ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ ಮತ್ತು ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳೂ ಇಲ್ಲ.


ಈ ಅಂತರವನ್ನು ಕಡಿಮೆ ಮಾಡಲು, ಎಚ್‌ಡಿಎಫ್‌ಸಿ ಎರ್ಗೋದ "ನನ್ನ ಹಳ್ಳಿ" ಕಾರ್ಯಕ್ರಮ ಸುಸ್ಥಿರ ಶೈಕ್ಷಣಿಕ ಮೂಲಸೌಕರ್ಯಗಳನ್ನು ನೀಡುವ ಗುರಿಯನ್ನು ಹೊಂದಿದೆ. ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಗುರಿಯ (SDG) ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ, ಗ್ರಾಮೀಣ ಭಾರತದ ಸರ್ಕಾರಿ ಶಾಲೆಗಳ ಮರುನಿರ್ಮಾಣ ಕೈಗೊಂಡು, ಭೌತಿಕ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಕಂಪನಿ ಹೂಡಿಕೆ ಮಾಡಿದೆ. ಓದಿಗೆ ನೆರವಾಗುವ ಕಟ್ಟಡ ಮಾರ್ಗಸೂಚಿಗಳ ಅಡಿಯಲ್ಲಿ (ಬಾಲ ಮಾರ್ಗಸೂಚಿಗಳು) ಹೊಸ ಶಾಲಾ ಕಟ್ಟಡಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ಮತ್ತು ಮೋಜಿನ ವಾತಾವರಣವನ್ನು ನಿರ್ಮಿಸುವ ಮೂಲಕ ಇದು ಶಿಕ್ಷಣ ಗುಣಮಟ್ಟದ ಸುಧಾರಣೆಯನ್ನು ಗುರಿಯಾಗಿಸಿಕೊಂಡಿದೆ. ಆ ಮೂಲಕ, ತರಗತಿಗಳಲ್ಲಿ ಸಾಕಷ್ಟು ಗಾಳಿ-ಬೆಳಕನ್ನು ಖಾತ್ರಿಪಡಿಸಲು ಹೊರಟಿದೆ. ಹೊಸದಾಗಿ ನಿರ್ಮಾಣವಾದ ಶಾಲೆಗಳು ಬೆಂಚ್‌, ಡೆಸ್ಕ್‌, ಗ್ರೀನ್ ಬೋರ್ಡ್‌, ಕಿಚನ್, ಭೋಜನಶಾಲೆ ಸೌಲಭ್ಯಗಳು, ಲೈಬ್ರರಿಗಳು ಮತ್ತು ಕಂಪ್ಯೂಟರ್ ರೂಮ್‌ಗಳಿಂದ ಸುಸಜ್ಜಿತವಾಗಿವೆ.

ನನ್ನ ಹಳ್ಳಿ ಕಾರ್ಯಕ್ರಮ: ಶಾಲೆಯ ಪುನರಾಭಿವೃದ್ಧಿ ತೊಡಗುವಿಕೆ ಬಗ್ಗೆ ತಿಳಿಯೋಣ

com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಮಚಲ ಚೋಪ್ಡಾ ಹಳ್ಳಿಯ ಶಾಲೆ, ಜಲಗಾಂವ್, ಮಹಾರಾಷ್ಟ್ರ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಮಚಲ ಚೋಪ್ಡಾ ಹಳ್ಳಿಯ ಶಾಲೆ, ಜಲಗಾಂವ್, ಮಹಾರಾಷ್ಟ್ರ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ರಾಮನ್ ಹಳ್ಳಿಯ ಶಾಲೆ, ಕುಲ್ಲು, ಹಿಮಾಚಲ ಪ್ರದೇಶ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ರಾಮನ್ ಹಳ್ಳಿಯ ಶಾಲೆ, ಕುಲ್ಲು, ಹಿಮಾಚಲ ಪ್ರದೇಶ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಸರ್ಸಾಯಿ ಹಳ್ಳಿಯ ಶಾಲೆ, ಕುಲ್ಲು ಜಿಲ್ಲೆ, ಹಿಮಾಚಲ ಪ್ರದೇಶ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಸರ್ಸಾಯಿ ಹಳ್ಳಿಯ ಶಾಲೆ, ಕುಲ್ಲು ಜಿಲ್ಲೆ, ಹಿಮಾಚಲ ಪ್ರದೇಶ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಟಂಡಿಯ ಹಳ್ಳಿಯ ಶಾಲೆ, ವಾರಾಣಸಿ, ಉತ್ತರ ಪ್ರದೇಶ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಟಂಡಿಯ ಹಳ್ಳಿಯ ಶಾಲೆ, ವಾರಾಣಸಿ, ಉತ್ತರ ಪ್ರದೇಶ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಅಗ್ರಹಾರಂ ಶಾಲೆ, ಅನಂತಪುರ, ಆಂಧ್ರಪ್ರದೇಶ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಅಗ್ರಹಾರಂ ಶಾಲೆ, ಅನಂತಪುರ, ಆಂಧ್ರಪ್ರದೇಶ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಕೊಲಂಬ ಚೋಪ್ಡಾ ಹಳ್ಳಿಯ ಶಾಲೆ, ಜಲಗಾಂವ್, ಮಹಾರಾಷ್ಟ್ರ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಕೊಲಂಬ ಚೋಪ್ಡಾ ಹಳ್ಳಿಯ ಶಾಲೆ, ಜಲಗಾಂವ್, ಮಹಾರಾಷ್ಟ್ರ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಗಡೆವಾಡಿಯ ಶಾಲೆ, ಸತಾರಾ, ಮಹಾರಾಷ್ಟ್ರ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಗಡೆವಾಡಿಯ ಶಾಲೆ, ಸತಾರಾ, ಮಹಾರಾಷ್ಟ್ರ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಪಂಡಿಯಾಪಥರ್‌ನ ಶಾಲೆ, ಗಂಜಾಮ್, ಒರಿಸ್ಸಾ
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಪಂಡಿಯಾಪಥರ್‌ನ ಶಾಲೆ, ಗಂಜಾಮ್, ಒರಿಸ್ಸಾ
com-pre
ಅಭಿವೃದ್ಧಿಗೆ ಮುಂಚಿನ ಪರಿಸ್ಥಿತಿ:
ಸಿಂಗನೇರಿ ತಿರುನಲ್ವೇಲಿ ಶಾಲೆ, ತಮಿಳುನಾಡು
com-pre
com-pre
ಅಭಿವೃದ್ಧಿ ಕೆಲಸದ ನಂತರದ ಚಿತ್ರಣ:
ಸಿಂಗನೇರಿ ತಿರುನಲ್ವೇಲಿ ಶಾಲೆ, ತಮಿಳುನಾಡು

ನಮ್ಮ ಸಾಧನೆ: ಜೀವನವನ್ನು ಉತ್ತಮವಾಗಿಸಲು ಕೆಲಸ ಮಾಡುತ್ತಿದ್ದೇವೆ

 

ನಮ್ಮ ಸಾಧನೆ: ಒಗ್ಗಟ್ಟಾಗಿ ಕೆಲಸ ಮಾಡುವುದು ಮತ್ತು ಜೀವನವನ್ನು ಉತ್ತಮವಾಗಿಸುವುದು

 

ಗ್ರಾಮೀಣ ಪ್ರದೇಶದ ಮಕ್ಕಳಿಗಾಗಿ ಶಾಲೆಗಳನ್ನು ಮರುನಿರ್ಮಾಣ ಮಾಡುವ ಮೂಲಕ ನಮ್ಮ ವ್ಯಾಪ್ತಿಯನ್ನು 10 ರಾಜ್ಯಗಳಿಗೆ ಹೆಚ್ಚಿಸಿಕೊಂಡಿದ್ದೇವೆ

ಇತರೆ ತೊಡಗುವಿಕೆಗಳು

 

ಕೋವಿಡ್ 19 ಪರಿಹಾರ ಕ್ರಮಗಳು


  • ಬೃಹನ್‌-ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ನಡೆಸುವ ನಾಯರ್ ಆಸ್ಪತ್ರೆಗೆ N95 ರೆಸ್ಪಿರೇಟರ್‌ಗಳನ್ನು ನೀಡಿದ್ದೇವೆ.

  • ಮುಂಬೈ ಪೊಲೀಸರಿಗೆ ಹತ್ತಿಯ ಮಾಸ್ಕ್ ಮತ್ತು ಸ್ಯಾನಿಟೈಜರ್‌ ವಿತರಣೆ.

  • ದೆಹಲಿ ಮತ್ತು ಗುರ್ಗಾಂವ್‌ನ ಆಸ್ಪತ್ರೆಗಳಿಗೆ ವೆಂಟಿಲೇಟರ್‌ ವ್ಯವಸ್ಥೆ.

  • ಕೋವಿಡ್ 19ರ ಕಾರಣದಿಂದ ಜೀವನೋಪಾಯ ಕಳೆದುಕೊಂಡ ಮುಂಬೈನ 1000 ಬಡ ಕುಟುಂಬಗಳಿಗೆ ರೇಷನ್ ಕಿಟ್ ವಿತರಿಸಿದ್ದೇವೆ

  • ಅಸ್ಸಾಂನ ಚಿರಂಗ್ ಜಿಲ್ಲೆಯ ರೋಮರಿ ಗ್ರಾಮದ, 5,000 ಬುಡಕಟ್ಟು ಮಕ್ಕಳಿಗೆ ತೊಳೆದು ಉಪಯೋಗಿಸಬಲ್ಲ ಹತ್ತಿ ಮಾಸ್ಕ್‌ಗಳನ್ನು ಒದಗಿಸಿದ್ದೇವೆ.

ಶಿಕ್ಷಣ


  • ವಿದ್ಯಾರ್ಥಿವೇತನ ನೀಡುವ ಜೊತೆಗೆ ಅಗತ್ಯ ಕೌಶಲ್ಯಗಳನ್ನು ಕಲಿಸಿ 28 ಹೆಣ್ಣು ಮಕ್ಕಳ ಎಂಜಿನಿಯರಿಂಗ್ ಓದಿಗೆ ನೆರವಾಗಿ, ಅವರನ್ನು ಆರ್ಥಿಕವಾಗಿ ಸ್ವತಂತ್ರವಾಗಿಸಿದ್ದೇವೆ.

  • ಕರ್ನಾಟಕದ ಗ್ರಾಮೀಣ ಮತ್ತು ಬುಡಕಟ್ಟು ಪ್ರದೇಶದ 10 ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರಾಯೋಜಿಸಿದ್ದೇವೆ

  • ಮಹಿಮ್‌ನಲ್ಲಿರುವ ಸರಸ್ವತಿ ಎಜುಕೇಶನ್ ಸೊಸೈಟಿ ಶಾಲೆಯ, ಎರಡು ಅಂತಸ್ತುಗಳನ್ನು ಸೌಂಡ್‌ಪ್ರೂಫ್‌ ಮಾಡಿದ್ದೇವೆ. ಅದರ ಮೂಲಕ ಶಾಲೆಯ ವಾತಾವರಣವು ಓದಿಗೆ ಪೂರಕವಾಗಿ 1,200 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.

  • 3E ಶಿಕ್ಷಣ ಟ್ರಸ್ಟ್‌ಗೆ ಸ್ಕೂಲ್ ಬಸ್‌ ಒದಗಿಸಲಾಗಿದೆ.

  • ನೆರವಿನ ಅಗತ್ಯವಿದ್ದ ಕೇರಳದ 451 ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಿಸಲಾಗಿದೆ


ಹೆಲ್ತ್ ಕೇರ್


  • ಮಾನಸಿಕ ಬೆಳವಣಿಗೆ ಇಲ್ಲದ ಹಿರಿಯರ ಚಿಕಿತ್ಸೆ, ತರಬೇತಿ ಮತ್ತು ಪುನರ್ವಸತಿಗೆ ನೆರವು ನೀಡಿದ್ದೇವೆ.

  • ಅಕ್ಯೂಟ್ ಲಿಂಫೋಬ್ಲಾಸ್ಟಿಕ್ ಲ್ಯುಕೇಮಿಯಾ ಮತ್ತು ಹುಟ್ಟಿನಿಂದ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳ ವೈದ್ಯಕೀಯ ಚಿಕಿತ್ಸೆಗೆ ಪ್ರಾಯೋಜಿಸಿದ್ದೇವೆ.

  • ಆರ್ಥಿಕವಾಗಿ ಹಿಂದುಳಿದ ಮಕ್ಕಳ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್ ಮತ್ತು ಕಾಕ್ಲಿಯರ್ ಟ್ರಾನ್ಸ್‌ಪ್ಲಾಂಟ್‌ಗೆ ನೆರವಾಗಿದ್ದೇವೆ.

  • ಗ್ರಾಮೀಣ ಭಾರತದ 10,000 ಹುಡುಗಿಯರಿಗೆ 2 ವರ್ಷಗಳ ಕಾಲ ಸ್ಯಾನಿಟರಿ ನ್ಯಾಪ್‌ಕಿನ್‌ಗಳನ್ನು ಒದಗಿಸಿದ್ದೇವೆ.

  • ಪಂಜಾಬ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ವಾಸಿಸುತ್ತಿರುವ ಗ್ರಾಮೀಣ ಜನರ ಕಣ್ಣಿನ ಪರೀಕ್ಷೆಯನ್ನು ನಡೆಸಿದ್ದೇವೆ. ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ ಖರ್ಚು ಭರಿಸಲಾಗದವರಿಗೆ ಹಣದ ಸಹಾಯ ಮಾಡಿದ್ದೇವೆ.

  • ಡಯಾಗ್ನಸ್ಟಿಕ್ ಸಲಕರಣೆಗಳನ್ನು ಒದಗಿಸುವ ಮೂಲಕ ಪುಲ್ವಾಮಾದ (ಜಮ್ಮು ಕಾಶ್ಮೀರ) ಸಮುದಾಯ ಆರೋಗ್ಯ ಕೇಂದ್ರವನ್ನು ಸುಧಾರಣೆ ಮಾಡಿದ್ದೇವೆ

  • ಮಹಾರಾಷ್ಟ್ರ, ಬಿಹಾರ್, ಜಾರ್ಖಂಡ್, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ 15 ಜಲಶುದ್ಧೀಕರಣದ ಘಟಕಗಳನ್ನು ಅಳವಡಿಸಿದ್ದೇವೆ.

  • ಸುಧಾರಿತ ಕ್ಷಯ ರೋಗ ಪತ್ತೆ ಮತ್ತು ನಿಯಂತ್ರಣ ಸಲಕರಣೆಗಳನ್ನು ಒದಗಿಸುವ ಮೂಲಕ ಮುಂಬೈ ಆಸ್ಪತ್ರೆಯ ಪ್ಯಾಥಾಲಜಿ ಲ್ಯಾಬ್‌ ಸುಧಾರಣೆ ಮಾಡಿದ್ದೇವೆ.


ವಿಪತ್ತು ಪರಿಹಾರ


  • ಕೊಲ್ಹಾಪುರದ ಪ್ರವಾಹದಿಂದ ಹಾನಿಗೊಳಗಾದ 4 ಹಳ್ಳಿಗಳಲ್ಲಿನ 500 ಕುಟುಂಬಗಳಿಗೆ ಪಾತ್ರೆ ಕಿಟ್‌ಗಳನ್ನು ನೀಡಿದ್ದೇವೆ

  • ನಮ್ಮ ಬರ ಪರಿಹಾರ ಕಾರ್ಯಕ್ರಮದ ಮೂಲಕ, ಮಹಾರಾಷ್ಟ್ರದ ಬೀಡ್ ಜಿಲ್ಲೆಯ 14 ಹಳ್ಳಿಗಳ 3,144 ಕ್ಕೂ ಹೆಚ್ಚು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗಿದೆ.

  • ಹಿಮ ಬಿದ್ದು ತೊಂದರೆ ಅನುಭವಿಸಿದ್ದ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ 4 ಹಳ್ಳಿಗಳಿಗೆ ಸೋಲಾರ್‌ ದೀಪಗಳನ್ನು ನೀಡಿದ್ದೇವೆ.

ಇತರ ಮುಖ್ಯ ತೊಡಗುವಿಕೆಗಳು


  • ಸೌಲಭ್ಯವಿಲ್ಲದ ಮಕ್ಕಳಿಗೆ ಪೌಷ್ಟಿಕ ಆಹಾರಗಳನ್ನು ನೀಡಿದ್ದೇವೆ.

  • ದೆಹಲಿಯ 8 ಸರ್ಕಾರಿ ಶಾಲೆಗಳಲ್ಲಿ 10,000 ಪೊಲ್ಯೂಶನ್ ಮಾಸ್ಕ್‌ಗಳನ್ನು ವಿತರಿಸಿದ್ದೇವೆ.

  • ರಸ್ತೆ ಸುರಕ್ಷತೆ ಸಪ್ತಾಹಗಳಲ್ಲಿ, ಸಮುದಾಯ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.

  • ಮುಂಬೈ ಟ್ರಾಫಿಕ್ ಪೊಲೀಸರಿಗೆ 5,000 ರೈನ್‌ಕೋಟ್‌ಗಳನ್ನು ವಿತರಿಸಿದ್ದೇವೆ.

  • ಮುಂಬೈನಲ್ಲಿನ 3 ಟ್ರಾಫಿಕ್ ಐಲ್ಯಾಂಡ್‌ಗಳಲ್ಲಿ ಗಿಡಗಳನ್ನು ನೆಡುವುದರ ಜೊತೆಗೆ ಶುಚಿತ್ವದ ಕೆಲಸವನ್ನೂ ಮಾಡಿದ್ದೇವೆ.

  • ವಾತಾವರಣದ ಶಬ್ದ ಮತ್ತು ವಾಯು ಮಾಲಿನ್ಯದ ಅವಲೋಕನಕ್ಕಾಗಿ ಪುಣೆಯಲ್ಲಿ ಲ್ಯಾಬ್‌ ಸ್ಥಾಪಿಸಲು ಪರಿಸರ ಸಂರಕ್ಷಣೆ ಸಂಘಟನೆಗೆ ನೆರವಾಗಿದ್ದೇವೆ.

  • 750 ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿದ್ದೇವೆ.

  • ಸಾಂಬಾರು ಬೆಳೆಗಳ ಕೃಷಿ ಮತ್ತು ಹೈನುಗಾರಿಕೆ ಅಭಿವೃದ್ಧಿಯ ಮೇಲೆ ವೃತ್ತಿ ತರಬೇತಿಗಳನ್ನು ನಡೆಸಿದ್ದೇವೆ.



ಮೇಲಿನ ಚಟುವಟಿಕೆಗಳ ಜೊತೆಜೊತೆಗೆ, ನಮ್ಮ ಉದ್ಯೋಗಿಗಳು ಕೆಲವು ಸಕ್ರಿಯವಾಗಿ ಭಾಗವಹಿಸಿದ ತೊಡಗುವಿಕೆಗಳು.

Quarantine Process
ಉದ್ಯೋಗಿಗಳು ಊಟ ಬಡಿಸಿದರು

ಮುಂಬೈನ ಸುತ್ತಮುತ್ತಲಿನ ಸೌಲಭ್ಯವಂಚಿತ ಮಕ್ಕಳಿಗೆ ನಮ್ಮ ಉದ್ಯೋಗಿಗಳು ಕಾಸ್ಮಿಕ್ ಡಿವೈನ್ ಸೊಸೈಟಿಯ ಜೊತೆಗೂಡಿ ಪೌಷ್ಟಿಕ ಆಹಾರವನ್ನು ಒದಗಿಸಿದರು.

Self Insolation
ನಮ್ಮ ಉದ್ಯೋಗಿಗಳು ಕಣ್ಣಿನ ಆರೋಗ್ಯ ತಪಾಸಣೆ ಕ್ಯಾಂಪ್‌ಗಳಲ್ಲಿ ಭಾಗಿಯಾದರು

ಚೆನೈ, ದೆಹಲಿ, ನೋಯ್ಡಾ, ಘಾಜಿಯಾಬಾದ್, ಬೆಂಗಳೂರು ಮತ್ತು ಚಂಡೀಗಢದಲ್ಲಿ ನಡೆಸಲಾದ ಕಣ್ಣಿನ ಆರೋಗ್ಯ ತಪಾಸಣೆ ಕ್ಯಾಂಪ್‌ಗಳಲ್ಲಿ ಉದ್ಯೋಗಿಗಳು ಭಾಗಿಯಾದರು. ಗ್ರಾಮೀಣ ಜನರಿಗೆ ಕಣ್ಣಿನ ಪೊರೆ, ಗ್ಲಾಕೋಮಾ, ಡಯಾಬಿಟಿಕ್ ರೆಟಿನೋಪತಿ, ರೆಟಿನಲ್ ರೋಗಗಳು ಮತ್ತು ಇತರ ಕಣ್ಣಿನ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ಕಣ್ಣಿನ ಕ್ಯಾಂಪ್‌ನ ಒಂದು ಉದ್ದೇಶವಾಗಿತ್ತು.


Social Distancing
ಶ್ರಮದಾನಕ್ಕೆ ನೆರವಾದ ಉದ್ಯೋಗಿಗಳು

ಪುಣೆಯ ಗರಾಡೆ ಹಳ್ಳಿಯಲ್ಲಿ ವಾಟರ್‌ಶೆಡ್‌ಗಳನ್ನು ನಿರ್ಮಿಸಲು HT ಪಾರೇಖ್ ಫೌಂಡೇಶನ್‌ ಮತ್ತು ಪಾನಿ ಫೌಂಡೇಶನ್‌ ಜೊತೆ ಸೇರಿಕೊಂಡು ಎಚ್‌ಡಿಎಫ್‌ಸಿ ಎರ್ಗೋ ಉದ್ಯೋಗಿಗಳು ಕೆಲಸಕ್ಕೆ ಹೆಗಲು ಕೊಟ್ಟರು. ಒಂದು ಸಲಕ್ಕೆ ಸುಮಾರು 30,000 ಲೀಟರ್‌ಗಳಷ್ಟು ನೀರನ್ನು ಕೊಂಡೊಯ್ಯುವ, 1,45,000 ಲೀಟರ್‌ಗಳ ಒಟ್ಟು ಸಾಮರ್ಥ್ಯವನ್ನು ಹೊಂದಿರುವ 03 ಕಂಪಾರ್ಟ್ಮೆಂಟ್ ಬಂಡ್‌ಗಳನ್ನು ನಿರ್ಮಿಸಲು ನಮ್ಮ ಉದ್ಯೋಗಿಗಳು ನೆರವಾದರು.


ನಮ್ಮ CSR ಪಾಲುದಾರರ ಪಕ್ಷಿನೋಟ

ಚಾರಿಟೀಸ್ ಏಯ್ಡ್ ಫೌಂಡೇಶನ್ (CAF) ಇಂಡಿಯಾ
ಚಾರಿಟೀಸ್ ಏಯ್ಡ್ ಫೌಂಡೇಶನ್ (CAF) 1998 ರಲ್ಲಿ ಸ್ಥಾಪಿಸಲಾದ ಒಂದು ನೋಂದಾಯಿತ, ಲಾಭರಹಿತ, ಚಾರಿಟಬಲ್ ಟ್ರಸ್ಟ್ ಆಗಿದ್ದು, ಕಾರ್ಪೊರೇಟ್, ವ್ಯಕ್ತಿಗಳು ಮತ್ತು NGOಗಳಿಗೆ ಕಾರ್ಯತಂತ್ರ ಮತ್ತು ನಿರ್ವಹಣಾ ಸಹಕಾರವನ್ನು ನೀಡುತ್ತದೆ. ಆ ಮೂಲಕ, ಅವರು ಕೈಗೊಳ್ಳುವ ನೆರವಿನ ಕೆಲಸ ಕಾರ್ಯಗಳಿಗೆ ಮತ್ತು CSR ಹೂಡಿಕೆಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. CAF ಇಂಡಿಯಾ ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಭಾರತ, ರಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇರಿದಂತೆ ಒಂಬತ್ತು ದೇಶಗಳಲ್ಲಿನ ಕಚೇರಿಗಳಿರುವ ಅಂತರರಾಷ್ಟ್ರೀಯ ನೆಟ್‌ವರ್ಕ್‌ನ ಭಾಗವಾಗಿದೆ. ವಿಶ್ವದಾದ್ಯಂತ 90 ಕ್ಕೂ ಹೆಚ್ಚು ದೇಶಗಳಿಗೆ ಇದು ಹಣವನ್ನು ವಿತರಿಸುತ್ತದೆ. CAF ಇಂಡಿಯಾ, ತನ್ನ ತಜ್ಞರ ತಂಡದೊಂದಿಗೆ, ಈ 'ನೀಡುವಿಕೆಯನ್ನು' ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಅಭಿವೃದ್ಧಿ ಕ್ಷೇತ್ರದ ಜ್ಞಾನ ಮತ್ತು ಅನುಭವವನ್ನು ಬಳಸಿಕೊಳ್ಳುತ್ತದೆ.
ಯುವ ಅನ್‌ಸ್ಟಾಪೆಬಲ್‌
ಯುವ ಅನ್‌ಸ್ಟಾಪೆಬಲ್‌ ಒಂದು ಲಾಭರಹಿತ ನೋಂದಾಯಿತ ಸಂಸ್ಥೆಯಾಗಿದ್ದು, ಬಡತನ ರೇಖೆಗಿಂತ ಕೆಳಗಿನ ಹಂತದ ಮಕ್ಕಳ ಜೀವನದಲ್ಲಿ ಒಳಿತನ್ನು ತರುವ ಉದ್ದೇಶ ಹೊಂದಿರುವ ಸಂಸ್ಥೆಯಾಗಿದೆ. 100 ಉನ್ನತ ಕಾರ್ಪೊರೇಟ್ ಪಾಲುದಾರರೊಂದಿಗೆ ಕೆಲಸ ಮಾಡುತ್ತಿರುವ ಇವರು, ಎಳೆಯರ ಸಣ್ಣ-ಸಣ್ಣ ವಿಷಯಗಳೂ ಸೇರಿದಂತೆ, ಮಕ್ಕಳ ಉನ್ನತಿ, ಸಂತೋಷ ಮತ್ತು ಅವರಲ್ಲಿ ಜಾಗೃತಿ ಮೂಡಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವ ಅನ್‌ಸ್ಟಾಪೆಬಲ್‌ ಸಂಸ್ಥೆಯನ್ನು ಉತ್ಸಾಹಿ ವ್ಯಕ್ತಿಗಳ ತಂಡವೊಂದು 2005ರಲ್ಲಿ ಅಮಿತಾಬ್ ಶಾ ಅವರ ಜೊತೆಗೂಡಿ ಸ್ಥಾಪಿಸಿತ್ತು. ಕರುಣೆಯ ಸಂದೇಶವನ್ನು ಜಗತ್ತಿಗೆ ನೀಡುವುದು ಸಂಸ್ಥೆಯ ಉದ್ದೇಶವಾಗಿದೆ. ದೇಶದ ಸುಮಾರು 14 ರಾಜ್ಯಗಳಲ್ಲಿ ಅಂದಾಜು 1500 ಸರ್ಕಾರಿ ಶಾಲೆಗಳ 6 ಲಕ್ಷಕ್ಕಿಂತ ಹೆಚ್ಚು ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ,1.5 ಲಕ್ಷಕ್ಕೂ ಹೆಚ್ಚು ಯುವ ರಾಯಭಾರಿಗಳು, ಬದಲಾವಣೆ ತರುವ ಉತ್ಸಾಹಿಗಳು ಮತ್ತು ಛಲ ಹೊಂದಿರುವ ಯುವ ಸಮೂಹವನ್ನು ಈ ಸಂಸ್ಥೆ ಈಗ ಹೊಂದಿದೆ.
ವಿಷನ್ ಫೌಂಡೇಶನ್ ಆಫ್ ಇಂಡಿಯಾ
ಭಾರತವನ್ನು ಕುರುಡು ಮುಕ್ತ ದೇಶವಾಗಿಸಬೇಕು ಎಂಬ ಗುರಿಯಿಂದ 1994ರಲ್ಲಿ ಡಾ. ಕುಲಿನ್ ಕೊತ್ತಾರಿ ಅವರು ವಿಷನ್‌ ಫೌಂಡೇಶನ್‌ ಆಫ್‌ ಇಂಡಿಯಾ (VFI) ಸ್ಥಾಪಿಸಿದರು. ಈ ಸಂಸ್ಥೆ 4,87,537 ಜನರ ಗುಣಪಡಿಸಬಲ್ಲ ಕುರುಡುತನವನ್ನು ದೂರ ಮಾಡಲು ಶಸ್ತ್ರಚಿಕಿತ್ಸೆಗೆ ಹಣದ ನೆರವನ್ನು ಮೇ 2020ರವರೆಗೂ ಒದಗಿಸಿದೆ. ಅಂದಿನಿಂದ, ಕಡು ಬಡವರ ಚಿಕಿತ್ಸೆ, ಮುಖ್ಯವಾಗಿ ಭಾರತದ ವಿವಿಧ ಭಾಗಗಳ ಕೆಳ ಹಂತದ ಜನರ ಚಿಕಿತ್ಸೆಗೆ VFI ನೆರವಾಗುತ್ತಾ ಬಂದಿದೆ. ಅತ್ಯಾಧುನಿಕ ಮೂಲಸೌಕರ್ಯ ಮತ್ತು ಸಾಧನಗಳನ್ನು ಬಳಸಿ, ಕೆಳ ಹಂತದ ಜನರಿಗೆ ಕಣ್ಣಿನ ಆರೋಗ್ಯದ ಉಚಿತ ಸೌಲಭ್ಯಗಳನ್ನು ನೀಡುತ್ತಾ, ವಿಷನ್‌ ಫೌಂಡೇಶನ್‌ ಆಫ್‌ ಇಂಡಿಯಾ ಇಂತಹ ಜನರನ್ನು ಶಕ್ತವಾಗಿಸಿದೆ.. ಹಣದ ಕೊರತೆ ಕಡಿಮೆ ದೃಷ್ಟಿ ಅಥವಾ ಸಂಪೂರ್ಣ ಕುರುಡುತನಕ್ಕೆ ಕಾರಣವಾಗಬಾರದು ಎಂಬುದು ಸಂಸ್ಥೆಯ ನಂಬಿಕೆಯಾಗಿದೆ.
ಆಧಾರ್ - ಬುದ್ಧಿಮಾಂದ್ಯ ಮಕ್ಕಳ ಪೋಷಕರ ಸಂಘ
ಆಧಾರ್ ಎನ್ನುವುದು ಬುದ್ಧಿಮಾಂದ್ಯ ಮಕ್ಕಳ ಪೋಷಕರ ಸಂಘವಾಗಿದ್ದು, ಇಂತಹ ವಿಶೇಷಚೇತನ ಮಕ್ಕಳ ಆರೈಕೆಯನ್ನು ಬದುಕಿರುವವರೆಗೂ ನೋಡಿಕೊಳ್ಳುವ ಮೂಲಕ, ಅಂತಹ ಮಕ್ಕಳಿಗೆ ನೆರವಾಗುವ ಮುಖಾಂತರ, ವಸತಿ ಸಂಸ್ಥೆಯಾಗಿ ನೆರವನ್ನು ಒದಗಿಸಿ, ಅಂತಹ ಮಕ್ಕಳ ಪೋಷಕರಿಗೆ ಭೌತಿಕ, ಮಾನಸಿಕ ಮತ್ತು ಆರ್ಥಿಕ ನೆರವನ್ನು ನೀಡುವ ಸಂಘವಾಗಿದೆ. 1990ರಲ್ಲಿ ಇಂತಹ ಹಿರಿಯ ವಿಶೇಷಚೇತನರ ಸುಮಾರು 25 ಪೋಷಕರು, ದಿವಂಗತ ಶ್ರೀ M.G. ಗೋರೆಯವರ ನಾಯಕತ್ವದ ಅಡಿಯಲ್ಲಿ ಒಂದಾಗಿ, ಅಂತಹ ಮಕ್ಕಳ ಪೋಷಕರು ಸದಾ ಚಿಂತಿಸುವುದನ್ನು ದೂರ ಮಾಡುವಂತಹ ಒಂದು ಶಾಶ್ವತ ಪರಿಹಾರ ಪಡೆದುಕೊಂಡರು. ಇಂದು, ಮನೋವೈದ್ಯರು, ಮನೋತಜ್ಞರು, ಫಿಸಿಯೋಥೆರಪಿಸ್ಟ್‌, ವೃತ್ತಿಪರ ಥೆರಪಿಸ್ಟ್‌ಗಳು, ವೈದ್ಯಕೀಯ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ವಿಶೇಷ ಶಿಕ್ಷಕರು ಮತ್ತು ಆರೈಕೆದಾರರ ನೆರವಿನಿಂದ, 325 ವಯಸ್ಕ ವಿಶೇಷಚೇತನರಿಗೆ ಸಹಾಯ ಮಾಡುತ್ತಿದ್ದಾರೆ.
ಜೆನೆಸಿಸ್ ಫೌಂಡೇಶನ್
ಜೆನೆಸಿಸ್ ಫೌಂಡೇಶನ್ (GF) ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಚಿಕಿತ್ಸೆ ಪಡೆಯಲು ಹಣಕಾಸಿನ ಕೊರತೆ ಉಂಟಾಗಿ ಯಾವುದೇ ಮಗು ಸಾಯಬಾರದು ಎಂಬ ಸರಳ ಯೋಚನೆಯೊಂದಿಗೆ ಸ್ಥಾಪನೆಯಾಗಿರುವಂತದ್ದು.. CHDಯಿಂದ ಬಳಲುತ್ತಿರುವ ಗಂಭೀರ ಕಾಯಿಲೆಗೆ ತುತ್ತಾದ ಸೌಲಭ್ಯವಿಲ್ಲದ ಮಕ್ಕಳಿಗೆ ವೈದ್ಯಕೀಯ ಚಿಕಿತ್ಸೆಯನ್ನು GF ಒದಗಿಸುತ್ತದೆ.. ನಿರ್ದಿಷ್ಟ ಶಸ್ತ್ರಚಿಕಿತ್ಸೆಗಳು (ನವಜಾತ ಮಕ್ಕಳಿಗೂ ಕೂಡ), ಕ್ಯಾಥ್‌ ಲ್ಯಾಬ್‌ ಮೇಲ್ವಿಚಾರಣೆ, ಶಸ್ತ್ರಚಿಕಿತ್ಸೆ ನಂತರ ಚೇತರಿಕೆ ಮತ್ತು ಸುಧಾರಣೆಯಂತಹ ಅಗತ್ಯ ನೆರವನ್ನು ಸಂಸ್ಥೆ ನೀಡುತ್ತದೆ.. ಫೌಂಡೇಶನ್‌ ನೆರವು ನೀಡುತ್ತಿರುವ ಮಕ್ಕಳು, ತಿಂಗಳಿಗೆ ₹10,000 ವರೆಗಿನ ಆದಾಯ ಇರುವ ಕುಟುಂಬಗಳಿಗೆ ಸೇರಿದವರಾಗಿದ್ದಾರೆ.. GF ಸಂಸ್ಥೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12-A ಮತ್ತು ಸೆಕ್ಷನ್ 80-G ಅಡಿಯಲ್ಲಿ ನೋಂದಣಿಯಾಗಿದೆ. ಅದರ ಪ್ಯಾನ್ ನಂಬರ್ AAATG5176H. ಸಂಸ್ಥೆಯು ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು 1976ರ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಅಡಿಯಲ್ಲಿ ನೋಂದಣಿ ಸಂಖ್ಯೆ 172270037 ಯೊಂದಿಗೆ ನೋಂದಣಿಯಾಗಿದೆ.
ಲೀಲಾ ಪೂನವಾಲಾ ಫೌಂಡೇಶನ್
ಸಮಾಜದಿಂದ ದೂರವಾದ ಮತ್ತು ಹಣಕಾಸಿನ ನೆರವಿಲ್ಲದ ಮಹಿಳೆಯರನ್ನು ಮುಂದೆ ತರುವ ದೃಷ್ಟಿಯಿಂದ 1995ರಲ್ಲಿ ಲೀಲಾ ಪೂನವಾಲಾ ಫೌಂಡೇಶನ್ (ಫೌಂಡೇಶನ್) ಹುಟ್ಟುಹಾಕಲಾಯಿತು. ವೃತ್ತಿಪರ ಪದವಿಯಲ್ಲಿ ಓದನ್ನು ಮುಂದುವರಿಸಿ, ಆ ಮೂಲಕ ಅವರು ಆರ್ಥಿಕವಾಗಿ ಸ್ವತಂತ್ರರಾಗಲು ಈ ಸಂಸ್ಥೆ ಸಹಾಯ ಮಾಡುತ್ತದೆ. ಅದು ಗುಣಮಟ್ಟದ ಶಿಕ್ಷಣ ಮತ್ತು ಲಿಂಗ ಸಮಾನತೆಯ ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸಲು ನೆರವಾಗುತ್ತದೆ. ಆರಂಭದಿಂದ ಇಲ್ಲಿಯವರೆಗೆ, 8500ಕ್ಕೂ ಹೆಚ್ಚಿನ ಹುಡುಗಿಯರಿಗೆ ಅಂದಾಜು ₹78 ಕೋಟಿಗಳ ಸ್ಕಾಲರ್‌ಶಿಪ್‌ ನೀಡುವ ಮೂಲಕ ಈ ಸಂಸ್ಥೆ ಅವರಿಗೆ ನೆರವಾಗಿದೆ. ಈ ಫೌಂಡೇಶನ್ ಸೌಲಭ್ಯವಂಚಿತ ಹೆಣ್ಣುಮಕ್ಕಳಿಗೆ ಅಗತ್ಯಕ್ಕೆ ತಕ್ಕಂತೆ ಮತ್ತು ಮೆರಿಟ್‌ ಆಧಾರದ ಮೇಲೆ ಸ್ಕಾಲರ್‌ಶಿಪ್‌ ನೀಡುವ ಮೂಲಕ, ಶಾಲಾ ಶಿಕ್ಷಣ, ಪದವಿ ವಿದ್ಯಾಭ್ಯಾಸ ಮತ್ತು ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ನೆರವಾಗಿದೆ. ಪುಣೆ, ಅಮರಾವತಿ, ವರ್ಧ ಮತ್ತು ನಾಗ್ಪುರದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಫೌಂಡೇಶನ್ ನೆರವಾಗುತ್ತಿದೆ.
ರೇ ಆಫ್ ಲೈಟ್ ಫೌಂಡೇಶನ್
ರೇ ಆಫ್ ಲೈಟ್ ಫೌಂಡೇಶನ್ ಅನ್ನು 2002ರಲ್ಲಿ ಸ್ಥಾಪಿಸಲಾಯಿತು. ಅದು ತನ್ನ ಸೇವಾಕಾರ್ಯದಲ್ಲಿ ಮಕ್ಕಳ ಆರೈಕೆಯ ಜವಾಬ್ದಾರಿ ವಹಿಸಿಕೊಂಡು, ಮಗುವಿನ ಉಳಿವಿಗೆ ಅವಶ್ಯಕವಾದ ಚಿಕಿತ್ಸೆಯನ್ನು ಒದಗಿಸಿಕೊಡುತ್ತದೆ. 1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12AA ಅಡಿಯಲ್ಲಿ ರೇ ಆಫ್‌ ಲೈಟ್ ಫೌಂಡೇಶನ್ ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ನೋಂದಣಿಯಾಗಿದೆ.
ದಿವ್ಯಾಂಗ ಮಕ್ಕಳ ಪುನರ್ವಸತಿ ಸೊಸೈಟಿ (SRCC)
SRCC ಆಸ್ಪತ್ರೆ ಮುಂಬೈನಲ್ಲಿದ್ದು, ಅದನ್ನು ಕಳೆದ ಎರಡು ವರ್ಷಗಳಿಂದ ನಾರಾಯಣ ಹೆಲ್ತ್‌ ನಿರ್ವಹಿಸುತ್ತಿದೆ. 1950ರ ಬಾಂಬೆ ಪಬ್ಲಿಕ್ ಟ್ರಸ್ಟ್ ಕಾಯ್ದೆ ಅಡಿಯಲ್ಲಿ ಸಾರ್ವಜನಿಕ ಟ್ರಸ್ಟ್ ಆಗಿ SRCC ನೋಂದಣಿಯಾಗಿದೆ. ಉತ್ಸಾಹಿ ಸ್ವಯಂಸೇವಕರ ಗುಂಪು 1947ರಲ್ಲಿ ಒಟ್ಟಾಗಿ, ಪೋಲಿಯೋಮೈಲೈಟಿಸ್‌ನಿಂದ ಬಾಧಿತರಾದ ಮಕ್ಕಳಿಗೆ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯರೊಬ್ಬರ ವೈಟಿಂಗ್‌ ರೂಮ್‌ನಲ್ಲಿ ಸಣ್ಣ ಕ್ಲಿನಿಕ್ ಪ್ರಾರಂಭಿಸಿತು. ಮಕ್ಕಳಿಗೆ ಸೂಕ್ತ ವೈದ್ಯಕೀಯ ನೆರವು ಸಿಗುವ ಜಾಗಗಳಾದ ಕ್ಲಿನಿಕ್‌ ಅಥವಾ ಆಸ್ಪತ್ರೆಯಲ್ಲಿ ಅವರನ್ನು ನೋಡಿಕೊಂಡು, ಮಕ್ಕಳ ರೋಗನಿರ್ಣಯ ಮತ್ತು ಚಿಕಿತ್ಸೆಗಳನ್ನು ಸಂಯೋಜಿಸುವ ಗುರಿಯನ್ನು SRCC ಹೊಂದಿದೆ. SRCC ಉತ್ತಮ ಆರೋಗ್ಯ, ಭರವಸೆ ಮತ್ತು ಸಂತೋಷವನ್ನು ಹಂಚುತ್ತಾ ಬಂದಿದೆ. ಅವರು ನಡೆಸುವ ಮಕ್ಕಳ ಬೆಳವಣಿಗೆ ಕೇಂದ್ರದಿಂದ ಒಂದು ಲಕ್ಷಕ್ಕಿಂತ ಹೆಚ್ಚಿನ ಮಕ್ಕಳಿಗೆ ಸಹಾಯ ಮಾಡಿದ್ದಾರೆ.
CSC ಅಕಾಡೆಮಿ
CSC ಅಕಾಡೆಮಿಯು ದೆಹಲಿ ಕೇಂದ್ರಾಡಳಿತ ಪ್ರದೇಶಕ್ಕೆ ಅನ್ವಯಿಸುವ 1860ರ ಸೊಸೈಟಿ ನೋಂದಣಿ ಕಾಯ್ದೆ ಅಡಿಯಲ್ಲಿ ನೋಂದಣಿಯಾದ ಸೊಸೈಟಿ. ಸಾಮರ್ಥ್ಯ, ಕೌಶಲ್ಯ ಉನ್ನತಿ, ಕಲಿಕೆ ಮತ್ತು ಓದುಗರ ಬೆಳವಣಿಗೆ, ವಿಶೇಷವಾಗಿ ಗ್ರಾಮೀಣ ಮಟ್ಟದ ಉದ್ಯಮಿಗಳನ್ನು ಉತ್ತೇಜಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ, ವಿತರಣೆ ಚೌಕಟ್ಟು ಮತ್ತು ಶಿಕ್ಷಣದ ವ್ಯಾಪ್ತಿಯ ವ್ಯಾಪಕ ಬಳಕೆಯಿಂದ ಸಾಮಾನ್ಯ ಸೇವಾ ಕೇಂದ್ರ ಮತ್ತು ಅದರ ಇತರ ಪಾಲುದಾರರು ಪ್ರಯೋಜನ ಪಡೆಯುತ್ತಾರೆ. ಅವರು ವಿಶೇಷ ಕೋರ್ಸ್‌ಗಳು/ತರಬೇತಿ ಕಾರ್ಯಕ್ರಮಗಳನ್ನು ಒದಗಿಸುತ್ತಾರೆ. ಭಾರತದಾದ್ಯಂತ, ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಇರುವ ಕಲಿಕೆಯಲ್ಲಿ ಆಸಕ್ತಿ ಹೊಂದಿರುವವರಿಗೆ, ದೊಡ್ಡ ಪ್ರಮಾಣದ ಇ-ಲರ್ನಿಂಗ್ ಅವಕಾಶಗಳನ್ನು ಒದಗಿಸುತ್ತಾ, CSC ಆನ್ಲೈನ್ ಕಲಿಕೆ ವಿಧಾನವನ್ನು ಅಭಿವೃದ್ಧಿಪಡಿಸುತ್ತದೆ, ನಿರ್ವಹಿಸುತ್ತದೆ ಮತ್ತು ಅದಕ್ಕೆ ನೆರವು ನೀಡುತ್ತದೆ.
ಕಾಸ್ಮಿಕ್ ಡಿವೈನ್ ಸೊಸೈಟಿ
ಕಾಸ್ಮಿಕ್ ಡಿವೈನ್ ಸೊಸೈಟಿಯು ಒಂದು ನೋಂದಾಯಿತ ವೆಲ್ಫೇರ್ ಸೊಸೈಟಿಯಾಗಿದ್ದು, ಆಹಾರಕ್ಕಾಗಿ ಒದ್ದಾಡುವ ಮಕ್ಕಳನ್ನು ಉಳಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ. ಇದು "ಹಸಿವನ್ನು ನೀಗಿಸುವೆಡೆಗೆ" ನಿರಂತರ ಪ್ರಯತ್ನ ಮಾಡುತ್ತಿದೆ ಹಾಗೂ ಭಾರತದಿಂದ ಸಾಮಾಜಿಕವಾಗಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಸಿವನ್ನು ದೂರ ಮಾಡಿ, ಉತ್ತಮ ಸಮಾಜ ನಿರ್ಮಿಸಲು ಕೈಜೋಡಿಸಿದೆ. ಉತ್ತಮ ಪೋಷಕಾಂಶ ಇರುವ, ತಿನ್ನಲು ತಯಾರಾದ ಮಧ್ಯಾಹ್ನದ ಊಟಗಳು ನೇರವಾಗಿ ಮಕ್ಕಳ ಮನೆಬಾಗಿಲಿಗೆ, ವ್ಯವಸ್ಥಿತವಾಗಿ ಪ್ರತಿದಿನ, ಯಾವುದೇ ತಡೆ ಇಲ್ಲದೆ ನಿರ್ದಿಷ್ಟ ಸಮಯಕ್ಕೆ ಸರಿಯಾಗಿ, ಮೊಬೈಲ್‌ ವ್ಯಾನ್‌ಗಳ ಮೂಲಕ ತಲುಪುವಂತೆ ಸೊಸೈಟಿ ನೋಡಿಕೊಳ್ಳುತ್ತದೆ.

 

ಪ್ರಶಂಸಾಪತ್ರಗಳು

Expert Image
ಅತುಲ್ ಗುಜರಾತಿ, ಮೋಟಾರ್ ಕ್ಲೇಮ್ಸ್‌ ಮುಖ್ಯಸ್ಥರು
ನನ್ನ ಹಳ್ಳಿ ಕಾರ್ಯಕ್ರಮದ ಅಡಿಯಲ್ಲಿ, ನಾನು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಕೋಲಂಬಾ ಮತ್ತು ಮಚಲಾ ಹಳ್ಳಿಗಳನ್ನು ನಾಮಿನೇಟ್ ಮಾಡಿದ್ದೇನೆ. ಎಚ್‌ಡಿಎಫ್‌ಸಿ ಎರ್ಗೋ ಶಾಲೆಗಳನ್ನು ಸರಿಯಾದ ರೀತಿ ಮರುನಿರ್ಮಿಸಿರುವುದಕ್ಕೆ ಧನ್ಯವಾದಗಳು. ಎಲ್ಲವೂ ಉತ್ತಮ ರೀತಿಯಲ್ಲಿ ಬದಲಾಗುತ್ತಿದೆ. ನನ್ನ ಪಾಲಿಗೆ ಇದು ಗ್ರಾಮೀಣ ಅಭಿವೃದ್ಧಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಅತಿದೊಡ್ಡ ಕೊಡುಗೆಯಾಗಿದೆ.
Expert Image
ನೀಲಂಛಲ ಗೌಡ, ಸರ್ಪಂಚ್- ಪಂಡಿಯಾಪಥರ್ ಗಂಜಾಮ್ ಒರಿಸ್ಸಾ
ಎಚ್‌ಡಿಎಫ್‌ಸಿ ಎರ್ಗೋಗೆ ಮತ್ತು ಶಾಲೆ ನಿರ್ಮಾಣಕ್ಕೆ ಸಂಬಂಧಿಸಿದ ಸದಸ್ಯರಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ. ಹಳ್ಳಿಯ ಜನರ ಪರವಾಗಿ, ನನ್ನ ಕೃತಜ್ಞತೆ ಮತ್ತು ಅಭಿನಂದನೆ ಸಲ್ಲಿಸುತ್ತೇನೆ.
Expert Image
ಬಯಮಾನ ಪಾಂಡಾ, ಮುಖ್ಯೋಪಾಧ್ಯಾಯರು, ಜಯ ದುರ್ಗಾ ಶಾಲೆ, ಒರಿಸ್ಸಾ
ಪಂಡಿಯಾಪಥರ್‌ನಲ್ಲಿರುವ ನನ್ನ ಶಾಲೆಯನ್ನು ಮರುನಿರ್ಮಿಸಿದಕ್ಕೆ ಎಚ್‌ಡಿಎಫ್‌ಸಿ ಎರ್ಗೋಗೆ ನನ್ನ ಮನದಾಳದ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಚ್‌ಡಿಎಫ್‌ಸಿ ಎರ್ಗೋದಿಂದ "ನನ್ನ ಹಳ್ಳಿ" ಅಡಿಯಲ್ಲಿ ನಡೆದ ಈ ಹೊಸ ನಿರ್ಮಾಣದ ಕೆಲಸ ಅಥವಾ ಶಾಲಾ ಮರುನಿರ್ಮಾಣದ ಕಾರ್ಯಕ್ರಮವು, ನಗರ ಮತ್ತು ಗ್ರಾಮದ ನಡುವಿನ ಅಂತರವನ್ನು ಹಾಗೂ ಶ್ರೀಮಂತ ಮತ್ತು ಬಡವ ಎನ್ನುವ ವಿದ್ಯಾರ್ಥಿಗಳ ಮನೋಭಾವವನ್ನು ದೂರ ಮಾಡುವಲ್ಲಿ ಸಫಲವಾಗಿದೆ.
Expert Image
ಅಶೋಕ್ ಆಚಾರಿ, ಮ್ಯಾನೇಜರ್ ರಿಟೇಲ್ ಆಪರೇಶನ್ಸ್ ಮುಂಬೈ
ನನ್ನ ಹಳ್ಳಿ ಪಾಂಡಿಯಾಪಥರ್‌ನಲ್ಲಿ ಫೆಬ್ರವರಿ 2020ರಲ್ಲಾದ CSRನ ನನ್ನ ಹಳ್ಳಿ ತೊಡಗುವಿಕೆಯು, ಹಳ್ಳಿಯ ಜನರ ಮೇಲೆ ಅಪಾರ ಪರಿಣಾಮ ಬೀರಿತು. ನನ್ನ ಹಳ್ಳಿಯಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವ ಅವಕಾಶವನ್ನು ನನಗೆ ನೀಡಿರುವುದಕ್ಕಾಗಿ, ಎಚ್‌ಡಿಎಫ್‌ಸಿ ಎರ್ಗೋ ತಂಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
Expert Image
ಪಿಯೂಷ್ ಸಿಂಗ್, ಸೀನಿಯರ್ ಮ್ಯಾನೇಜರ್ - ರೂರಲ್ ಅಂಡ್ ಅಗ್ರಿ ಬಿಸಿನೆಸ್, ಲಕ್ನೋ
ನನ್ನ ಹಳ್ಳಿ ತೊಡಗುವಿಕೆ ಅಡಿಯಲ್ಲಿ, ನಾನು UP ರಾಜ್ಯದ ವಾರಣಾಸಿ ಜಿಲ್ಲೆಯ ನನ್ನ ಹಳ್ಳಿ ತಂಡಿಯಾವನ್ನು ನಾಮಿನೇಟ್ ಮಾಡಿದ್ದೆ ಮತ್ತು ಎಚ್‌ಡಿಎಫ್‌ಸಿ ಎರ್ಗೋ ನನ್ನ ನಾಮಿನೇಶನ್‌ ಪರಿಗಣಿಸಿ, ನನ್ನ ಹಳ್ಳಿಯ ಪ್ರಾಥಮಿಕ ಶಾಲೆಯನ್ನು ಮರುನಿರ್ಮಾಣ ಮಾಡಿತು. ನಮ್ಮ ಪ್ರಾಥಮಿಕ ಶಾಲೆಯ ಮರುನಿರ್ಮಾಣದಲ್ಲಿ ನನ್ನ ಪಾತ್ರ ಇದೆ ಎಂಬುದು ನನಗೆ ತೃಪ್ತಿ ಮತ್ತು ಸಂತೋಷ ನೀಡುತ್ತದೆ.
Expert Image
ರಾಘವೇಂದ್ರ K, ಅಸಿಸ್ಟೆಂಟ್ ಮ್ಯಾನೇಜರ್ - ಕಾರ್ಪೊರೇಟ್ ಕ್ಲೈಮ್ಸ್, ಬೆಂಗಳೂರು
ನನ್ನ ಹಳ್ಳಿ ತೊಡಗುವಿಕೆಯು ನಾನು ಹುಟ್ಟಿದ ಜಾಗವಾದ ಅಗ್ರಹಾರಂ, ಅನಂತಪುರ, ಆಂಧ್ರಪ್ರದೇಶಕ್ಕೆ ಸೂಕ್ತವಾಗಿ ನೆರವಾಗಲು ನನಗೆ ಉತ್ತಮ ದಾರಿ ಮಾಡಿಕೊಟ್ಟಿತು. ಈ ಕಾರ್ಯಕ್ರಮದ ಅಡಿಯಲ್ಲಿ ಒಂದು ಶಾಲೆಯನ್ನು ಮರುನಿರ್ಮಿಸಲಾಯಿತು. ಈಗ ಆ ಶಾಲೆ ಹೊಚ್ಚ ಹೊಸದಾಗಿ ಕಾಣುತ್ತಿದೆ.

ನಮ್ಮನ್ನು ಸಂಪರ್ಕಿಸಿ

ಎಚ್‌ಡಿಎಫ್‌ಸಿ ಎರ್ಗೋ CSR ಮುಂದೊಡಗುಗಳ ಬಗ್ಗೆ ಪ್ರಶ್ನೆಗಳು, ಸಲಹೆಗಳು ಮತ್ತು ಅನಿಸಿಕೆಗಳಿಗಾಗಿ, ನಮ್ಮನ್ನು ಇಲ್ಲಿ ಸಂಪರ್ಕಿಸಿ: csr.initiative@hdfcergo.com

 
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x