ಹೋಮ್ / ಹೆಲ್ತ್ ಇನ್ಶೂರೆನ್ಸ್ / ಎನರ್ಜಿ ಹೆಲ್ತ್ ಇನ್ಶೂರೆನ್ಸ್
Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • FAQ

ಎನರ್ಜಿ- ನಿಮ್ಮ ಡಯಾಬಿಟಿಸ್‌ಗಾಗಿ ಒಂದು ವಿಶೇಷ ಪ್ಲಾನ್

 

ಎಲ್ಲವೂ ಸಕ್ಕರೆ ರಹಿತ, ಪಾರ್ಟಿಗಳನ್ನು ತಪ್ಪಿಸುವುದು,ಚಹಾ ಕಡಿಮೆ ಮಾಡುವುದು, ಆರ್ಥೋಪೆಡಿಕ್ ಶೂಗಳು, ಇನ್ಸುಲಿನ್ ಬ್ಯಾಗ್‌ಗಳು, ಹಾಗಲ ಕಾಯಿ (ಕರೇಲಾ) ಜ್ಯೂಸ್ ಮತ್ತು ಇನ್ನಷ್ಟು. ಮಧುಮೇಹದೊಂದಿಗೆ ಬದುಕುವುದು ಕೆಲವೊಮ್ಮೆ ಒಂಟಿತನ ಮತ್ತು ನೋವಿನಿಂದ ಕೂಡಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಇನ್ನು ಮುಂದೆ ಆ ರೀತಿ ಇರಬೇಕಾಗಿಲ್ಲ. ಎಚ್‌ಡಿಎಫ್‌ಸಿ ಎರ್ಗೋದ ಎನರ್ಜಿ ಹೆಲ್ತ್ ಪ್ಲಾನ್ ಅನ್ನು ವಿಶೇಷವಾಗಿ ಡಯಾಬಿಟಿಸ್ ಮತ್ತು ಅಧಿಕ ಒತ್ತಡದ ಜನರಿಗೆ ವಿನ್ಯಾಸಗೊಳಿಸಲಾಗಿದೆ. ಎನರ್ಜಿ ಪ್ಲಾನ್ ನಿಮ್ಮ ಮಧುಮೇಹ ಮತ್ತು ಅದರ ತೊಂದರೆಗಳನ್ನು ಕವರ್ ಮಾಡುತ್ತದೆ; ಇದು ಡಯಾಬಿಟಿಸ್‌ನೊಂದಿಗೆ ಯಶಸ್ವಿಯಾಗಿ ಬದುಕಲು ಕೂಡ ನಿಮಗೆ ಪಾಲುದಾರಿಕೆ ನೀಡುತ್ತದೆ. ಮಧುಮೇಹವನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಹೆಲ್ತ್ ಇನ್ಶೂರೆನ್ಸ್ ಪ್ಲಾನ್. ಇದು ಸಿಹಿ ಆಗಿಲ್ಲವೇ?

ನಿಮ್ಮ ಡಯಾಬಿಟಿಸ್‌ಗಾಗಿ ಎನರ್ಜಿ ಹೆಲ್ತ್ ಇನ್ಶೂರೆನ್ಸ್ ಆಯ್ಕೆ ಮಾಡಲು ಕಾರಣಗಳು

Active Wellness Program
ಆ್ಯಕ್ಟಿವ್ ವೆಲ್ನೆಸ್ ಪ್ರೋಗ್ರಾಮ್
ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ನಿಮಗೆ ಸಹಾಯ ಮಾಡಲು ವೆಲ್ನೆಸ್ ಪ್ರೋಗ್ರಾಮ್ ಮತ್ತು ವೈಯಕ್ತಿಕಗೊಳಿಸಿದ ಹೆಲ್ತ್ ಕೋಚ್. ಈ ಪ್ಲಾನ್ ರಿವಾರ್ಡ್ ಪಾಯಿಂಟ್‌ಗಳನ್ನು ಕೂಡ ಒದಗಿಸುತ್ತದೆ, ಇದು ಆರೋಗ್ಯಕರವಾಗಿ ಉಳಿಯಲು ನಿಮಗೆ 25% ನವೀಕರಣ ಪ್ರೀಮಿಯಂ ರಿಯಾಯಿತಿಯನ್ನು ನೀಡುತ್ತದೆ.
No Waiting Periods
ಯಾವುದೇ ಕಾಯುವ ಅವಧಿಗಳಿಲ್ಲ
ಮಧುಮೇಹ ಮತ್ತು ಅಧಿಕ ಒತ್ತಡದಿಂದ ಉಂಟಾಗುವ ಎಲ್ಲಾ ಆಸ್ಪತ್ರೆಗೆ ದಾಖಲಾತಿಗಾಗಿ ಎನರ್ಜಿ ಹೆಲ್ತ್ ಪ್ಲಾನ್ 1 ದಿನದಿಂದ ನಿಮಗೆ ಕವರೇಜ್ ನೀಡುತ್ತದೆ.
Reward Bucket
ರಿವಾರ್ಡ್ ಬಕೆಟ್
ನಿಮ್ಮ ವೈದ್ಯಕೀಯ ಪರೀಕ್ಷೆಗಳು ಮತ್ತು BMI, BP, HbA1c ಮತ್ತು ಕೊಲೆಸ್ಟ್ರಾಲ್‌ನಂತಹ ನಿರ್ಣಾಯಕ ಆರೋಗ್ಯ ಮಾನದಂಡಗಳ ಫಲಿತಾಂಶಗಳ ಆಧಾರದ ಮೇಲೆ, ಆರೋಗ್ಯಕರವಾಗಿ ಉಳಿಯಲು ನಾವು ನಿಮಗೆ ಪ್ರೋತ್ಸಾಹಕಗಳನ್ನು ಒದಗಿಸುತ್ತೇವೆ.
Sum Insured Restore
ವಿಮಾ ಮೊತ್ತದ ಮರುಸ್ಥಾಪನೆ
ಅನಾರೋಗ್ಯಗಳ ಚಿಕಿತ್ಸೆಗೆ ವಿಮಾ ಮೊತ್ತದ ಕೊರತೆಯ ಬಗ್ಗೆ ಚಿಂತೆಯೇ? ಇನ್ಶೂರೆನ್ಸ್ ಮೊತ್ತದ ರಿಬೌಂಡಿನೊಂದಿಗೆ, ನಿಮ್ಮ ಮೊದಲ ಕ್ಲೈಮ್‌ನಲ್ಲಿ ನಿಮ್ಮ ಕವರ್‌ಗೆ ಅಗತ್ಯವಿರುವ 100% ಮೊತ್ತದ ತ್ವರಿತ ಸೇರ್ಪಡೆಯನ್ನು ನೀವು ಪಡೆಯುತ್ತೀರಿ.

ಡಯಾಬಿಟಿಸ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನು ಕವರ್ ಆಗುತ್ತದೆ?

Hospitalization expenses

ವೆಚ್ಚಗಳಿಂದ ನಿಮ್ಮ ಕುಟುಂಬವನ್ನು ರಕ್ಷಿಸಿ

ಇತರ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‍ಗಳಂತೆ ಅನಾರೋಗ್ಯ ಮತ್ತು ಗಾಯಗಳಿಗಾಗಿ ಆಸ್ಪತ್ರೆಗೆ ದಾಖಲಾಗುವುದಕ್ಕೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.

Pre and post-hospitalisation

ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರ

ಡಯಾಗ್ನಸಿಸ್, ತಪಾಸಣೆಯ ವೆಚ್ಚಗಳನ್ನು ಕೂಡ ಕವರ್ ಮಾಡಲಾಗುತ್ತದೆ. ದಾಖಲಾತಿಗಿಂತ 30 ದಿನಗಳ ಮೊದಲು ಮತ್ತು ಡಿಸ್ಚಾರ್ಜ್ ನಂತರದ 60 ದಿನಗಳವರೆಗೆ ನಿಮ್ಮ ಎಲ್ಲಾ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಸೇರಿಸಲಾಗುತ್ತದೆ.

Day-care procedures

ಡೇ-ಕೇರ್ ಪ್ರಕ್ರಿಯೆಗಳು

ತಾಂತ್ರಿಕ ಪ್ರಗತಿಯಿಂದಾಗಿ ಆಸ್ಪತ್ರೆ/ಡೇ ಕೇರ್ ಸೆಂಟರ್‌ನಲ್ಲಿ 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ತೆಗೆದುಕೊಳ್ಳಲಾದ ಡೇ ಕೇರ್ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ.

Emergency Road Ambulance

ತುರ್ತು ರಸ್ತೆ ಆಂಬ್ಯುಲೆನ್ಸ್

ತುರ್ತುಸ್ಥಿತಿಯಲ್ಲಿ, ಅಗತ್ಯವಿದ್ದರೆ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ. ಪ್ರತಿ ಬಾರಿಯ ಆಸ್ಪತ್ರೆ ದಾಖಲಾತಿಗೆ ಆಂಬ್ಯುಲೆನ್ಸ್ ವೆಚ್ಚಗಳು ₹2000 ದವರೆಗೆ ಕವರ್ ಆಗುತ್ತವೆ.

Organ Donor Expenses

ಅಂಗ ದಾನಿ ವೆಚ್ಚಗಳು

ಅಂಗ ದಾನ ಒಂದು ಶ್ರೇಷ್ಠ ಕೆಲಸ. ಹೀಗಾಗಿ ನಾವು ಪ್ರಮುಖ ಅಂಗಗಳ ಜೋಡಣೆಯ ಸಂದರ್ಭದಲ್ಲಿ ಅಂಗ ದಾನಿಗಳ ಆಸ್ಪತ್ರೆ ಖರ್ಚುಗಳು ಹಾಗೂ ಶಸ್ತ್ರಚಿಕಿತ್ಸೆಯ ಖರ್ಚುಗಳನ್ನು ಕವರ್ ಮಾಡುತ್ತೇವೆ.

Lifelong renewability

ಆಜೀವ ನವೀಕರಣ

ಒಮ್ಮೆ ನೀವು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮೂಲಕ ಸುರಕ್ಷಿತರಾದರೆ, ಮತ್ತೆ ಹಿಂತಿರುಗಿ ನೋಡುವ ಪ್ರಮೇಯವಿಲ್ಲ. ತಡೆರಹಿತ ನವೀಕರಣಗಳೊಂದಿಗೆ ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಜೀವಮಾನದುದ್ದಕ್ಕೂ ಮುಂದುವರೆಯುತ್ತದೆ.

Save Tax

ತೆರಿಗೆ ಉಳಿತಾಯ ಮಾಡಿ

ನಿಮಗೆ ಗೊತ್ತೇ? ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕೇವಲ ನಿಮ್ಮ ಉಳಿತಾಯವನ್ನು ಸುರಕ್ಷಿತಗೊಳಿಸುವುದಷ್ಟೇ ಅಲ್ಲದೆ, ನಿಮ್ಮ ತೆರಿಗೆಯನ್ನೂ ಉಳಿಸಬಲ್ಲದು ಹೌದು, ನೀವು ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ₹ 75,000 ವರೆಗೆ ತೆರಿಗೆ ಉಳಿತಾಯ ಮಾಡಬಹುದು.

HbA1C Benefit

HbA1C ಪ್ರಯೋಜನ

ನಿಮ್ಮ HbA1C ಟೆಸ್ಟ್‌ಗಳ ವೆಚ್ಚಗಳನ್ನು ಪ್ರತಿ ಪಾಲಿಸಿ ವರ್ಷಕ್ಕೆ ₹ 750 ವರೆಗೆ ಕವರ್ ಮಾಡಲಾಗುತ್ತದೆ. ವೆಲ್ನೆಸ್ ಟೆಸ್ಟ್ ಎಂದು ಕರೆಯಲ್ಪಡುವ ಎರಡು ಸಂಪೂರ್ಣ ವೈದ್ಯಕೀಯ ಚೆಕ್-ಅಪ್‌ಗಳು ನಗದುರಹಿತ ಆಧಾರದ ಮೇಲೆ ಗೋಲ್ಡ್ ಪ್ಲಾನಿಗೆ ₹2000 ವರೆಗೆ ಪಾವತಿಸಬೇಕಾಗುತ್ತದೆ.

Personalized wellness portal

ವೈಯಕ್ತಿಕಗೊಳಿಸಿದ ವೆಲ್ನೆಸ್ ಪೋರ್ಟಲ್

ನಿಮ್ಮ ಎಲ್ಲಾ ವೈದ್ಯಕೀಯ ದಾಖಲೆಗಳನ್ನು ಟ್ರ್ಯಾಕ್ ಮಾಡುವ ಮತ್ತು ಸಂಗ್ರಹಿಸುವ ವೈಯಕ್ತಿಕ ವೆಲ್ನೆಸ್ ವೆಬ್ ಪೋರ್ಟಲ್‌ಗೆ ಅಕ್ಸೆಸ್ ಪಡೆಯಿರಿ. ಇದು ನಿಮ್ಮ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಅಗತ್ಯವಿರುವ ಹೆಲ್ತ್ ಪ್ರಾಡಕ್ಟ್‌ಗಳನ್ನು ಖರೀದಿಸಲು ವಿಶೇಷ ಆಫರ್‌ಗಳನ್ನು ಒದಗಿಸುತ್ತದೆ.

Health Coach

ಹೆಲ್ತ್ ಕೋಚ್

ನಿಮ್ಮ ಪೋಷಣೆ ಮತ್ತು ಫಿಟ್ನೆಸ್ ಯೋಜನೆಗಳಿಗೆ ಮಾರ್ಗದರ್ಶನ ನೀಡಲು, ನೆನಪಿಸಲು ಮತ್ತು ರಚಿಸಲು ವೈಯಕ್ತಿಕಗೊಳಿಸಿದ ಹೆಚ್ಚು ತರಬೇತಿ ಪಡೆದ ಹೆಲ್ತ್ ಕೋಚ್ ಪಡೆಯಿರಿ.

Wellness Support

ವೆಲ್‌‌ನೆಸ್ ಸಪೋರ್ಟ್

ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಲಭ್ಯವಿರುವ ಕೇಂದ್ರೀಕೃತ ಸಹಾಯವಾಣಿಗೆ ಅಕ್ಸೆಸ್ ಪಡೆಯಿರಿ. ಆರೋಗ್ಯ ರಕ್ಷಣೆ ಮತ್ತು ನಿರ್ವಹಣೆಯ ಬಗ್ಗೆ ಮೌಲ್ಯಯುತ ಮಾಹಿತಿಯನ್ನು ನಿಮಗೆ ಒದಗಿಸಲು ಮಾಸಿಕ ಸುದ್ದಿಪತ್ರಗಳು

Reward points

ರಿವಾರ್ಡ್ ಪಾಯಿಂಟ್‌ಗಳು

ನಿಮ್ಮ ವೈದ್ಯಕೀಯ ಪರೀಕ್ಷೆಗಳು ಮತ್ತು BMI, BP, HbA1c ಮತ್ತು ಕೊಲೆಸ್ಟ್ರಾಲ್‌ನಂತಹ ನಿರ್ಣಾಯಕ ಆರೋಗ್ಯ ಮಾನದಂಡಗಳ ಫಲಿತಾಂಶಗಳ ಆಧಾರದ ಮೇಲೆ, ನಾವು ನಿಮಗೆ 25% ವರೆಗಿನ ನವೀಕರಣ ಪ್ರೀಮಿಯಂ ರಿಯಾಯಿತಿಗಳನ್ನು ಒದಗಿಸುತ್ತೇವೆ.

ಡಯಾಬಿಟಿಸ್ ಹೆಲ್ತ್ ಇನ್ಶೂರೆನ್ಸ್ ಪ್ಲಾನಿನಲ್ಲಿ ಏನನ್ನು ಒಳಗೊಂಡಿಲ್ಲ?

Other Pre-existing diseases
ಮುಂಚಿತ-ಅಸ್ತಿತ್ವದಲ್ಲಿರುವ ಇತರ ರೋಗಗಳು

ಮೊದಲೇ-ಅಸ್ತಿತ್ವದಲ್ಲಿರುವ ಯಾವುದೇ ಸ್ಥಿತಿಯನ್ನು (ಡಯಾಬಿಟಿಸ್ ಅಥವಾ ಹೈಪರ್‌ಟೆನ್ಶನ್ ಹೊರತುಪಡಿಸಿ) 2 ವರ್ಷಗಳ ಕಾಯುವ ಅವಧಿಯ ನಂತರ ಕವರ್ ಮಾಡಲಾಗುತ್ತದೆ.

Self-inflicted injuries
ಸ್ವಯಂ-ಕಾರಣದಿಂದ ಆದ ಗಾಯಗಳು

ಮದ್ಯಪಾನ ಮತ್ತು ಮಾದಕದ್ರವ್ಯಗಳ ಬಳಕೆ ಹಾಗೂ ದುರುಪಯೋಗ, ಸ್ವಯಂಕೃತ ಹಾನಿಗೆ ಕಾರಣವಾಗುತ್ತದೆ. ನಮ್ಮ ಪಾಲಿಸಿಯು ಸ್ವಯಂಕೃತ ಹಾನಿಯನ್ನು ಕವರ್ ಮಾಡುವುದಿಲ್ಲ.

War
ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.

Treatment of obesity or cosmetic surgery
ಬೊಜ್ಜಿನ ಸಮಸ್ಯೆ ಅಥವಾ ಕಾಸ್ಮೆಟಿಕ್ ಸರ್ಜರಿಯ ಚಿಕಿತ್ಸೆ

ಈ ಇನ್ಶೂರೆನ್ಸ್ ಪಾಲಿಸಿಯು ಬೊಜ್ಜಿನ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ.

Venereal or Sexually transmitted diseases
ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ರೋಗಗಳು

ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.

ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್‌ ಬ್ರೋಶರ್‌/ಪಾಲಿಸಿ ವಾಕ್ಯಗಳನ್ನು ನೋಡಿ

ಕಾಯುವಿಕೆ ಅವಧಿಗಳು

First 24 Months From Policy Inception
ಪಾಲಿಸಿ ಆರಂಭದಿಂದ ಮೊದಲ 24 ತಿಂಗಳು

ಡಯಾಬಿಟಿಸ್ ಮತ್ತು ಹೈಪರ್‌ಟೆನ್ಶನ್ ಹೊರತುಪಡಿಸಿ ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳನ್ನು ಎರಡು ವರ್ಷಗಳ ಪಾಲಿಸಿ ವಿತರಣೆಯ ನಂತರ ಕವರ್ ಮಾಡಲಾಗುತ್ತದೆ.

ನಮ್ಮ ನಗದುರಹಿತ
ಆಸ್ಪತ್ರೆ ನೆಟ್ವರ್ಕ್

15000+

ಆಸ್ಪತ್ರೆ ಲೊಕೇಟರ್
ಅಥವಾ
ನಿಮ್ಮ ಹತ್ತಿರದ ಆಸ್ಪತ್ರೆಗಳನ್ನು ಹುಡುಕಿ

ತಡೆರಹಿತ ಮತ್ತು ಸುಲಭ ಕ್ಲೈಮ್‌ಗಳು! ಖಚಿತ


ನಮ್ಮ ವೆಬ್‌ಸೈಟ್ ಮೂಲಕ ಕ್ಲೈಮ್‌ಗಳ ನೋಂದಣಿ ಮತ್ತು ಟ್ರ್ಯಾಕಿಂಗ್‌ ಮಾಡಿ

ನಿಮ್ಮ ಹತ್ತಿರದ ನೆಟ್ವರ್ಕ್ ಆಸ್ಪತ್ರೆಗಳನ್ನು ಹುಡುಕಿ

ನಿಮ್ಮ ಮೊಬೈಲ್‌ನಲ್ಲಿಯೇ ನಿಯಮಿತ ಕ್ಲೈಮ್ ಅಪ್ಡೇಟ್ ಪಡೆಯಿರಿ

ನಿಮ್ಮ ಆದ್ಯತೆಯ ಕ್ಲೈಮ್ ಸೆಟಲ್ಮೆಂಟ್ ವಿಧಾನವನ್ನು ಪಡೆದುಕೊಳ್ಳಿ

ಆಗಾಗ ಕೇಳುವ ಪ್ರಶ್ನೆಗಳು

ಎಚ್‌ಡಿಎಫ್‌ಸಿ ಎರ್ಗೋದ ಎನರ್ಜಿಯು ಡಯಾಬಿಟಿಸ್ ಅಥವಾ ಹೈಪರ್‌ಟೆನ್ಶನ್‌‌‌ನಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ರೂಪಿಸಲಾದ ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ.
ಎನರ್ಜಿ ಯೋಜನೆಯ ಪ್ರಯೋಜನಗಳನ್ನು ಎರಡು ವರ್ಗಗಳಾಗಿ ವರ್ಗೀಕರಿಸಬಹುದು:
ಡಯಾಬಿಟಿಸ್/ಹೈಪರ್‌ಟೆನ್ಶನ್ ನಿರ್ದಿಷ್ಟ ಪ್ರಯೋಜನಗಳ- ಕವರೇಜ್ ಡಯಾಬಿಟಿಸ್ ಅಥವಾ ಹೈಪರ್‌ಟೆನ್ಶನ್, ವೈಯಕ್ತಿಕಗೊಳಿಸಿದ ವೆಲ್ನೆಸ್ ಪ್ರೋಗ್ರಾಮ್, ವೆಲ್ನೆಸ್ ಇನ್ಸೆಂಟಿವ್‌ಗಳು, ಪರ್ಸನಲ್ ಹೆಲ್ತ್ ಕೋಚ್, ಇಂಟಿಗ್ರೇಟೆಡ್ ವೆಬ್ ಪೋರ್ಟಲ್ ಮತ್ತು ಇತರವುಗಳಿಂದ ಉಂಟಾಗುವ ಒಳ-ರೋಗಿ ವೆಚ್ಚಗಳಿಗೆ ಕವರೇಜ್ ನೀಡುತ್ತದೆ.
ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪ್ರಯೋಜನಗಳು- ಆಕಸ್ಮಿಕ ಗಾಯಗಳು, ಗಂಭೀರ ಅನಾರೋಗ್ಯಗಳು, ರಿಸ್ಟೋರ್ ಪ್ರಯೋಜನ, ನೋ ಕ್ಲೈಮ್ ಬೋನಸ್, ತೆರಿಗೆ ಪ್ರಯೋಜನಗಳು, ಅಂಗ ದಾನಿ ವೆಚ್ಚಗಳು, ಸಹ-ಪಾವತಿ (ಐಚ್ಛಿಕ) ಮತ್ತು ಇತರವುಗಳಿಗೆ ಕವರೇಜ್.
ಎಚ್‌ಡಿಎಫ್‌ಸಿ ಎರ್ಗೋದ ಎನರ್ಜಿ ಪ್ಲಾನ್ 18-65 ವರ್ಷಗಳ ನಡುವಿನ ವಯಸ್ಸಿನವರಿಗಾಗಿದೆ. ಇದನ್ನು ಡಯಾಬಿಟಿಸ್ ಟೈಪ್ 1 ಡಯಾಬಿಟಿಸ್, ಟೈಪ್ 2 ಮೆಲಿಟಸ್, ಇಂಪೇರ್ಡ್ ಫಾಸ್ಟಿಂಗ್ ಗ್ಲೂಕೋಸ್ (IFG), ಇಂಪೇರ್ಡ್ ಗ್ಲೂಕೋಸ್ ಟಾಲರೆನ್ಸ್ (IGT), ಪ್ರಿ-ಡಯಾಬಿಟಿಸ್ (IFG, IGT) ಅಥವಾ ಹೈಪರ್‌ಟೆನ್ಶನ್‌ನಿಂದ ಬಳಲುತ್ತಿರುವವರಿಗಾಗಿ ವಿನ್ಯಾಸಗೊಳಿಸಲಾಗಿದೆ.
ಇಲ್ಲ, ಯಾವುದೇ ಅನಾರೋಗ್ಯ, ಸಮಸ್ಯೆಗಳು ಅಥವಾ ಕಾಯಿಲೆಗಳಿಗೆ ಅಥವಾ ಟೈಪ್ 1 ಡಯಾಬಿಟಿಸ್, ಟೈಪ್ 2 ಡಯಾಬಿಟಿಸ್ ಅಥವಾ ಹೈಪರ್‌ಟೆನ್ಶನ್ ಕನೆಕ್ಟ್ ಆದ ಸ್ಥಿತಿಗಳಿಗೆ ಯಾವುದೇ ಕಾಯುವ ಅವಧಿಗಳಿಲ್ಲ ಮತ್ತು 1 ದಿನದಿಂದ ಕವರ್ ಆಗುತ್ತದೆ. ಅದರ ಹೊರತಾಗಿ:
  • ನಿರ್ದಿಷ್ಟ ಅನಾರೋಗ್ಯಗಳು/ಶಸ್ತ್ರಚಿಕಿತ್ಸೆಗಳಿಗಾಗಿ 2 ವರ್ಷಗಳ ಕಾಯುವ ಅವಧಿ
  • PED ಗಳ ಮೇಲೆ 2 ವರ್ಷಗಳ ಕಾಯುವ ಅವಧಿ
ಹೌದು, ನಿಮ್ಮ ಎನರ್ಜಿ ಪ್ಲಾನ್ ಆಕಸ್ಮಿಕ ಗಾಯಗಳು ಮತ್ತು ಇತರ ಗಂಭೀರ ಅನಾರೋಗ್ಯಗಳು ಇತ್ಯಾದಿಗಳಿಂದ ಉಂಟಾಗುವ ನಿಮ್ಮ ಒಳ-ರೋಗಿ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡುತ್ತದೆ.
ಎನರ್ಜಿಯು ಡಯಾಬಿಟಿಸ್ ಅಥವಾ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿದೆ. ಇದು ನಿಯಮಿತ ಹೆಲ್ತ್ ಇನ್ಶೂರೆನ್ಸ್ ಪ್ಲಾನಿನ ಎಲ್ಲಾ ಪ್ರಯೋಜನಗಳನ್ನು ಹೊಂದಿದೆ ಮತ್ತು ಡಯಾಬಿಟಿಕ್‌ಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ಕೂಡ ನೀಡುತ್ತದೆ.
ಎನರ್ಜಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ ಎರಡು ವೈವಿಧ್ಯಗಳಲ್ಲಿ ಲಭ್ಯವಿವೆ:
1. Silver (excludes the cost of wellness test)
2. Gold (includes the cost of wellness test)
ಸಕ್ರಿಯ ವೆಲ್ನೆಸ್ ಕಾರ್ಯಕ್ರಮವು ಎನರ್ಜಿ ಪ್ಲಾನಿನ ಬೆನ್ನೆಲುಬಾಗಿದೆ. ನಿಮ್ಮ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಲು, ನಿಮ್ಮ ಫಿಟ್ನೆಸ್ ಗುರಿಗಳನ್ನು (ಆಹಾರ ಮತ್ತು ವ್ಯಾಯಾಮ) ಟ್ರ್ಯಾಕ್ ಮಾಡಲು ಮತ್ತು ಸಾಧಿಸಲು ಇದು ನಿಮಗೆ ಸಹಾಯ ಮಾಡುತ್ತದೆ, ಮತ್ತು ಆರೋಗ್ಯಕರವಾಗಿ ಉಳಿಯಲು ನಿಮಗೆ ರಿವಾರ್ಡ್‌ಗಳನ್ನು ನೀಡುತ್ತದೆ. ಇದು ಒಳಗೊಳ್ಳುತ್ತದೆ:
ವೆಲ್ನೆಸ್ ಟೆಸ್ಟ್‌ಗಳು
ಪಾಲಿಸಿ ವರ್ಷದಲ್ಲಿ ಎರಡು ಸಂಪೂರ್ಣ ವೈದ್ಯಕೀಯ ತಪಾಸಣೆಗಳೊಂದಿಗೆ ಆರಂಭಿಸಿ.
  • ವೆಲ್‌‌ನೆಸ್ ಟೆಸ್ಟ್ 1: HbA1c, ಬ್ಲಡ್ ಪ್ರೆಶರ್ ಮಾನಿಟರಿಂಗ್, BMI
  • ವೆಲ್ನೆಸ್ ಟೆಸ್ಟ್ 2: HbA1c, FBS, ಒಟ್ಟು ಕೊಲೆಸ್ಟ್ರಾಲ್, ಕ್ರಿಯಾಟಿನೈನ್, ಹೈ-ಡೆನ್ಸಿಟಿ ಲಿಪೋಪ್ರೊಟೀನ್ (HDL), ಲೋ-ಡೆನ್ಸಿಟಿ ಲಿಪೋಪ್ರೊಟೀನ್ (LDL), ಟ್ರೈಗ್ಲಿಸರೈಡ್ಸ್ (TG), ಟೋಟಲ್ ಪ್ರೊಟೀನ್, ಸೀರಮ್ ಅಲ್ಬುಮಿನ್, ಗಮ್ಮಾ-ಗ್ಲೂಟಮಿಲ್ ಟ್ರಾನ್ಸ್‌ಫರೇಸ್ (GGT), ಸೀರಮ್ ಗ್ಲೂಟಾಮಿಕ್ ಆಕ್ಸಾಲೋಸೆಟಿಕ್ ಟ್ರಾನ್ಸಾಮಿನೇಸ್ (SGOT), ಸೀರಮ್ ಗ್ಲುಟಾಮಿಕ್ ಪೈರುವಿಕ್ ಟ್ರಾನ್ಸಾಮಿನೇಸ್ (SGPT), ಬಿಲ್ಲಿರುಬಿನ್, ಟೋಟಲ್ ಕೊಲೆಸ್ಟ್ರಾಲ್: HDL ಕೊಲೆಸ್ಟ್ರಾಲ್, ECG, ಬ್ಲಡ್ ಪ್ರೆಶರ್ ಮಾನಿಟರಿಂಗ್, BMI, ಡಾಕ್ಟರ್ ಕನ್ಸಲ್ಟೇಶನ್.
ವೆಲ್‌‌ನೆಸ್ ಸಪೋರ್ಟ್
  • ನಿಮ್ಮ ಆರೋಗ್ಯ ದಾಖಲೆಗಾಗಿ ವೆಬ್ ಪೋರ್ಟಲ್‌ಗೆ ಅಕ್ಸೆಸ್
  • ನಿಮ್ಮ ಆಹಾರ ಮತ್ತು ಫಿಟ್ನೆಸ್ ಗುರಿಗಳನ್ನು ಯೋಜಿಸಲು ಮತ್ತು ಸಾಧಿಸಲು ವೈಯಕ್ತಿಕಗೊಳಿಸಿದ ಹೆಲ್ತ್ ಕೋಚ್
  • ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಕೇಂದ್ರೀಕೃತ ಸಹಾಯವಾಣಿ
ವೆಲ್ನೆಸ್ ರಿವಾರ್ಡ್‌ಗಳು
  • ಆರೋಗ್ಯ ಸ್ಥಿತಿಗಳ ನಿರ್ವಹಣೆಗಾಗಿ 25% ವರೆಗಿನ ನವೀಕರಣ ಪ್ರೀಮಿಯಂ ರಿಯಾಯಿತಿಗಳು
  • ನಿಮ್ಮ ವೈದ್ಯಕೀಯ ವೆಚ್ಚಗಳಿಗೆ ನವೀಕರಣ ಪ್ರೀಮಿಯಂನ 25% ವರೆಗೆ ರಿಯಂಬ್ರಸ್ಮೆಂಟ್ (ಸಮಾಲೋಚನೆ ಶುಲ್ಕಗಳು, ಔಷಧಗಳು ಮತ್ತು ಡ್ರಗ್ಸ್, ಡಯಾಗ್ನಸಿಸ್‌ ಫೀಸು, ದಂತ ವೆಚ್ಚಗಳು ಮತ್ತು ಯಾವುದೇ ವೈದ್ಯಕೀಯ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗದ ಇತರ ವಿವಿಧ ವೆಚ್ಚಗಳು)
ವೆಲ್ನೆಸ್ ಕಾರ್ಯಕ್ರಮದ ಪ್ರತಿಯೊಂದು ಫೀಚರ್ ನಿಮ್ಮ ಜೀವನವನ್ನು ಉತ್ತಮ ಮತ್ತು ಆರೋಗ್ಯಕರವಾಗಿಸುವ ಗುರಿಯನ್ನು ಹೊಂದಿದೆ.
  • ವೆಲ್ನೆಸ್ ಟೆಸ್ಟ್‌ಗಳೊಂದಿಗೆ ನಿಮ್ಮ ಆರೋಗ್ಯವನ್ನು ಅರ್ಥಮಾಡಿಕೊಳ್ಳಿ ಮತ್ತು ಮೇಲ್ವಿಚಾರಣೆ ಮಾಡಿ
  • ವೆಲ್ನೆಸ್ ಸಪೋರ್ಟ್‌ನೊಂದಿಗೆ ಆರೋಗ್ಯಕರವಾಗಿರಿ
  • ವೆಲ್ನೆಸ್ ರಿವಾರ್ಡ್‌ಗಳೊಂದಿಗೆ ಹೆಚ್ಚು ಉಳಿತಾಯ ಮಾಡಿ
ಹೌದು, ಈ ಪ್ಲಾನ್ ಖರೀದಿಸಲು ಪೂರ್ವ-ಆರೋಗ್ಯ ತಪಾಸಣೆಯು ಕಡ್ಡಾಯವಾಗಿದೆ. ಎನರ್ಜಿಯು ಡಯಾಬಿಟಿಸ್ ಹೊಂದಿರುವ ಜನರಿಗೆ ಪ್ಲಾನ್ ಆಗಿದೆ. ಅವರ ಅನನ್ಯ ಹೆಲ್ತ್‌ಕೇರ್ ಅಗತ್ಯಗಳನ್ನು ನೋಡಿಕೊಳ್ಳುತ್ತದೆ.
ಪ್ರಿ-ಹೆಲ್ತ್ ಚೆಕ್ಅಪ್ ಟೆಸ್ಟ್‌ಗಳು ನಿಮ್ಮ ಪ್ರಸ್ತುತ ಆರೋಗ್ಯ ಪರಿಸ್ಥಿತಿಗಳು ಮತ್ತು ಅನಾರೋಗ್ಯಗಳನ್ನು ಬೆಳಕಿಗೆ ತರುತ್ತವೆ, ಇದು ನಿಮಗೆ ಅತ್ಯಂತ ಸೂಕ್ತವಾದ ಕವರ್ ಅನ್ನು ಒದಗಿಸಲು ನಮಗೆ ಅನುವು ಮಾಡಿಕೊಡುತ್ತದೆ.
ಇಲ್ಲ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವ ಜನರಿಗೆ ಮಾತ್ರ ಈ ಪ್ಲಾನ್ ಲಭ್ಯವಿದೆ.
ಹೌದು, ಭಾರತದಾದ್ಯಂತ ನಮ್ಮ ಯಾವುದೇ 16000+ ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನೀವು ನಗದುರಹಿತ ಸೌಲಭ್ಯವನ್ನು ಪಡೆಯಬಹುದು.
ಪಾಲಿಸಿ ಅಡಿಯಲ್ಲಿರುವ ಹೊರಗಿಡುವಿಕೆಗಳು ಒಳಗೊಂಡಿರುವ ಅಪಾಯಗಳ ಆಧಾರದ ಮೇಲೆ ಅನೇಕ ಉದ್ದೇಶಗಳನ್ನು ಹೊಂದಿರಬಹುದು. ಈ ಪ್ಲಾನ್‌ನ ಸಾಮಾನ್ಯ ಹೊರಗಿಡುವಿಕೆಗಳ ಪಟ್ಟಿ ಈ ಕೆಳಗಿನಂತಿದೆ:
  • 2 ವರ್ಷಗಳ ಕಾಯುವ ಅವಧಿಗೆ ಯಾವುದೇ ಮುಂಚಿತ-ಅಸ್ತಿತ್ವದಲ್ಲಿರುವ ಸ್ಥಿತಿ (ಡಯಾಬಿಟಿಸ್ ಅಥವಾ ಹೈಪರ್‌ಟೆನ್ಶನ್ ಹೊರತುಪಡಿಸಿ)
  • ಕಣ್ಣಿನ ಪೊರೆ, ಹರ್ನಿಯಾ, ಜಾಯಿಂಟ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆ, ಹೈಡ್ರೋಸೆಲ್ ಶಸ್ತ್ರಚಿಕಿತ್ಸೆ ಇತ್ಯಾದಿಗಳಂತಹ ನಿರ್ದಿಷ್ಟ ರೋಗಗಳು 2 ವರ್ಷಗಳ ಕಾಯುವ ಅವಧಿಯನ್ನು ಹೊಂದಿವೆ.
  • HIV ಅಥವಾ AIDS ಮತ್ತು ಸಂಬಂಧಿತ ರೋಗಗಳಿಂದ ಉಂಟಾಗುವ ವೆಚ್ಚಗಳು
  • ಬಾಹ್ಯ ಜನ್ಮಜಾತ ರೋಗಗಳು, ಮಾನಸಿಕ ಅಸ್ವಸ್ಥತೆ ಅಥವಾ ಬುದ್ಧಿಭ್ರಮಣೆ, ಕಾಸ್ಮೆಟಿಕ್ ಸರ್ಜರಿ ಮತ್ತು ತೂಕ ನಿಯಂತ್ರಣ ಚಿಕಿತ್ಸೆಗಳು
  • ಮಾದಕ ದ್ರವ್ಯಗಳು ಮತ್ತು ಮದ್ಯಪಾನದಂತಹ ಅಮಲು ಅಥವಾ ಭ್ರಮೆ ಹುಟ್ಟಿಸುವ ವಸ್ತುಗಳ ದುರುಪಯೋಗ
  • ಯುದ್ಧ ಅಥವಾ ಯುದ್ಧದ ಕಾರಣದಿಂದಾಗಿ. ಅಥವಾ ಪರಮಾಣು, ರಾಸಾಯನಿಕ ಅಥವಾ ಜೈವಿಕ ಶಸ್ತ್ರ ಮತ್ತು ಯಾವುದೇ ರೀತಿಯ ರೇಡಿಯೇಶನ್ ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವುದು
  • ಗರ್ಭಧಾರಣೆ, ದಂತ ಚಿಕಿತ್ಸೆ, ಬಾಹ್ಯ ಸಾಧನಗಳು ಮತ್ತು ಉಪಕರಣಗಳು
  • ವೈಯಕ್ತಿಕ ಸೌಕರ್ಯ ಮತ್ತು ಅನುಕೂಲತೆಯ ವಸ್ತುಗಳು
  • ಪ್ರಾಯೋಗಿಕ, ತನಿಖಾ ಮತ್ತು ಸಾಬೀತುಪಡಿಸದ ಚಿಕಿತ್ಸೆ ಸಾಧನಗಳು ಮತ್ತು ಫಾರ್ಮಲಾಜಿಕಲ್‌ ವ್ಯವಸ್ಥೆಗಳು
ಇಲ್ಲ, ಈ ಪ್ಲಾನಿನಲ್ಲಿ ಯಾವುದೇ ಉಪ-ಮಿತಿಗಳಿಲ್ಲ.
ಇಲ್ಲ, ನೀವು ಅದನ್ನು ಆಯ್ಕೆ ಮಾಡುವವರೆಗೆ, ಯಾವುದೇ ಸಹ-ಪಾವತಿ ಷರತ್ತು ಇಲ್ಲ.
ನಿಮ್ಮ ಪ್ರೀಮಿಯಂ ಕಡಿಮೆ ಮಾಡಲು ನಿಮ್ಮ ಪಾಲಿಸಿ ಖರೀದಿಯ ಸಮಯದಲ್ಲಿ 20% ಸಹ-ಪಾವತಿ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು.
ಹೌದು, ನೀವು ಫ್ರೀಲುಕ್ ಅವಧಿಯೊಳಗೆ ನಿಮ್ಮ ಪ್ರೀಮಿಯಂ ಅನ್ನು ಮರಳಿ ಪಡೆಯಬಹುದು.
ಹೇಗೆ ಎಂಬುದು ಇಲ್ಲಿದೆ
ನೀವು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಪಡೆದ ದಿನದಿಂದ, ಎಚ್‌ಡಿಎಫ್‌ಸಿ ಎರ್ಗೋ ನಿಮಗೆ 15 ದಿನಗಳ ಫ್ರೀಲುಕ್ ಅವಧಿಯನ್ನು ಒದಗಿಸುತ್ತದೆ. ಈ ಅವಧಿಯಲ್ಲಿ, ನೀವು ನಿಮ್ಮ ಮನಸ್ಸನ್ನು ಬದಲಾಯಿಸಿದರೆ ಅಥವಾ ಯಾವುದೇ ಪಾಲಿಸಿಯ ನಿಯಮ ಮತ್ತು ಷರತ್ತುಗಳಲ್ಲಿ ತೃಪ್ತಿ ಇಲ್ಲದಿದ್ದರೆ, ನೀವು ನಿಮ್ಮ ಪಾಲಿಸಿ ರದ್ದುಗೊಳಿಸಬಹುದಾದ ಆಯ್ಕೆ ಇದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x