ವಿದೇಶದಲ್ಲಿ ಅಧ್ಯಯನ ಮಾಡುವುದು ಅನೇಕ ವಿದ್ಯಾರ್ಥಿಗಳಿಗೆ ಕನಸನ್ನು ನನಸಾಗಿಸುತ್ತದೆ, ಏಕೆಂದರೆ ಇದು ತಮ್ಮ ವೃತ್ತಿಜೀವನದಲ್ಲಿ ಅನ್ವೇಷಿಸಲು ಮತ್ತು ಉನ್ನತ ಹುದ್ದೆಯನ್ನು ಹೊಂದಲು ಲಕ್ಷಾಂತರ ಅವಕಾಶಗಳನ್ನು ತೆರೆಯುತ್ತದೆ. ಇದು ಜೀವನ-ಬದಲಾಯಿಸುವ ನಿರ್ಧಾರವಾಗಿದೆ ಮತ್ತು ಜೀವನಕ್ಕೆ ಅನೇಕ ನಿರೀಕ್ಷೆಗಳು, ಮೋಜು ಮತ್ತು ಪಾಠಗಳನ್ನು ಕೊಂಡು ತರುತ್ತದೆ. ಆದಾಗ್ಯೂ, ನಿಮ್ಮ ವೃತ್ತಿಜೀವನಕ್ಕಾಗಿ ದೂರದ ದೇಶದಲ್ಲಿ ವಾಸಿಸುವ ಒಬ್ಬ ವ್ಯಕ್ತಿಯ ಕುಟುಂಬ ಮತ್ತು ಸ್ನೇಹಿತರನ್ನು ಬಿಟ್ಟುಬಿಡುವುದು ಸುಲಭವಲ್ಲ. ಎಲ್ಲಾ ಸಂತೋಷ ಮತ್ತು ಸಂಭ್ರಮಗಳು ವೈದ್ಯಕೀಯ ತುರ್ತುಸ್ಥಿತಿ, ಅಧ್ಯಯನದ ಅಡೆತಡೆ, ಡಾಕ್ಯುಮೆಂಟ್‌ಗಳ ನಷ್ಟ ಅಥವಾ ಇತರ ದುರದೃಷ್ಟಕರ ಘಟನೆಗಳಂತಹ ಯೋಗ್ಯ ಪ್ರಮಾಣದ ಅಪಾಯವನ್ನು ಒಳಗೊಂಡಿರುತ್ತವೆ. ಇದಕ್ಕಾಗಿಯೇ ನೀವು ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸುತ್ತಿದ್ದರೆ ನಿಮ್ಮ ಉಳಿಯುವಿಕೆಯನ್ನು ಸುರಕ್ಷಿತಗೊಳಿಸಲು ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯುವುದು ಅಗತ್ಯವಾಗಿದೆ.
ಆದ್ದರಿಂದ, ಉನ್ನತ ಶಿಕ್ಷಣವನ್ನು ಮುಂದುವರಿಸಲು ನೀವು ವಿದೇಶಕ್ಕೆ ಹೋಗಲು ಬಯಸಿದರೆ, ನಿಮ್ಮ ವಾಸ್ತವ್ಯಕ್ಕೆ ಅಡ್ಡಿಯಾಗಬಹುದಾದ ಯಾವುದೇ ಸವಾಲನ್ನು ಎದುರಿಸಲು ಸರಿಯಾದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಅಪರಿಚಿತ ದೇಶದಲ್ಲಿ ನಿಮ್ಮ ವಾಸ್ತವ್ಯಕ್ಕೆ ಕವರೇಜ್ ಪಡೆಯಲು ಸರಳ ಮತ್ತು ಕೈಗೆಟಕುವ ಮಾರ್ಗವಾಗಿದೆ. ನೀವು ಮನೆಯಿಂದ ಸಾವಿರಾರು ಮೈಲುಗಳ ದೂರದಲ್ಲಿದ್ದಾಗಲೂ, ಸಮಸ್ಯೆ ಎದುರಾದ ಸಂದರ್ಭದಲ್ಲಿ, ನೀವು ಯಾರನ್ನಾದರೂ ಅವಲಂಬಿಸಬೇಕು ಎಂಬ ನೆಮ್ಮದಿಯನ್ನು ನೀವು ಹೊಂದಿರುತ್ತೀರಿ.
ಆದ್ದರಿಂದ, ನೀವು ಪ್ರೋಗ್ರಾಮ್, ವಿಶ್ವವಿದ್ಯಾಲಯ ಮತ್ತು ನಿಮ್ಮ ಆಯ್ಕೆಯ ದೇಶವನ್ನು ಶಾರ್ಟ್‌ಲಿಸ್ಟ್ ಮಾಡಿದ ನಂತರ, ನಿಮ್ಮ ವಾಸ್ತವ್ಯದ ಸಮಯದಲ್ಲಿ ನಿಮಗೆ ಅಗತ್ಯವಾದ ಬೆಂಬಲವನ್ನು ನೀಡಲು ಸರಿಯಾದ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆಮಾಡಿ. ಎಚ್‌ಡಿಎಫ್‌ಸಿ ಎರ್ಗೋ ಸ್ಟೂಡೆಂಟ್ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಒದಗಿಸುತ್ತದೆ, ಇದು ವೈದ್ಯಕೀಯ ವೆಚ್ಚಗಳನ್ನು ತಡೆರಹಿತವಾಗಿ ಕವರ್ ಮಾಡುತ್ತದೆ, ಬ್ಯಾಗೇಜ್‌ನಲ್ಲಿ ಉಂಟಾಗುವ ಅಡಚಣೆ ಮತ್ತು ಪ್ರಯಾಣ ಸಂಬಂಧಿತ ಅಪಾಯಗಳನ್ನು ಕವರ್ ಮಾಡುತ್ತದೆ.
ನಿಮ್ಮ ಸ್ಟೂಡೆಂಟ್ ಟ್ರಾವೆಲ್ ಪ್ಲಾನ್‌ನೊಂದಿಗೆ ನೀವು ನಿರೀಕ್ಷಿಸಬಹುದಾದ ಕೆಲವು ಪ್ರಯೋಜನಗಳನ್ನು ನೋಡೋಣ:
ಆಸ್ಪತ್ರೆ ದಾಖಲಾತಿ, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳಿಗೆ ನೀವು ಕವರೇಜ್ ಪಡೆಯುತ್ತೀರಿ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.
ವಿದೇಶದಲ್ಲಿ ಥರ್ಡ್ ಪಾರ್ಟಿಗೆ ಹಾನಿಯನ್ನು ಉಂಟುಮಾಡಿರುವುದಕ್ಕಾಗಿ ಜವಾಬ್ದಾರಿಯನ್ನು ಹೊತ್ತುಕೊಳ್ಳುವುದು ಭಯಾನಕವಾಗಿರಬಹುದು. ಚಿಂತಿಸಬೇಡಿ, ನಿಮ್ಮ ಪಾಲಿಸಿಯು ನಿಮ್ಮನ್ನು ಉಳಿಸುತ್ತದೆ.
ನೀವು ನಿಮ್ಮ ಚೆಕ್-ಇನ್ ಬ್ಯಾಗೇಜ್ ಕಳೆದುಕೊಂಡರೆ,, ಟ್ರಾವೆಲ್ ಇನ್ಶೂರೆನ್ಸ್ ಕಂಪನಿಯು ನಿಮಗೆ ಪರಿಹಾರ ನೀಡುತ್ತದೆ, ಇದರಿಂದಾಗಿ ನಿಮ್ಮ ಟ್ರಾವೆಲ್ ಪ್ಲಾನ್‌ಗಳಿಗೆ ತೊಂದರೆಯಾಗುವುದಿಲ್ಲ
ಸ್ಥಳೀಯ ಚಿಕಿತ್ಸೆ ಸಾಕಾಗದ ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ತುರ್ತು ಸ್ಥಳಾಂತರಕ್ಕೆ ನಾವು ಕವರೇಜನ್ನು ಒದಗಿಸುತ್ತೇವೆ. ವಾಯು ಅಥವಾ ಭೂಸಾರಿಗೆಯ ಮೂಲಕ, ನೀವು ನಿಮ್ಮ ಸ್ವದೇಶವನ್ನು ತಲುಪಲು ನಾವು ಸಹಾಯ ಮಾಡುತ್ತೇವೆ.
ಪೋಷಕರು ಮನೆಗೆ ಮರಳುವಾಗ, ಅವರ ಮಗುವಿಗೆ ಅಗತ್ಯವಿದ್ದಾಗ ಯಾರಾದರೂ ಅಲ್ಲಿರುತ್ತಾರೆ ಎಂದು ತಿಳಿದಿರುತ್ತದೆ.
ನೀವು ವಿದೇಶದಲ್ಲಿ ಅಧ್ಯಯನ ಮಾಡಲು ಯೋಜಿಸಿದಾಗ, ಅಂತಾರಾಷ್ಟ್ರೀಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಕಡ್ಡಾಯವಾಗಿ ಬೇಕಾಗಿರುತ್ತದೆ. ಏಕೆ ಎಂದು ಯೋಚಿಸುತ್ತಿದ್ದೀರಾ? ಓದಿ:
ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಹಣಕಾಸಿನ ಸುರಕ್ಷತಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ, ಅನೇಕ ದೇಶಗಳಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇದು ಕಡ್ಡಾಯ ಅವಶ್ಯಕತೆಯಾಗಿದೆ. ವೀಸಾಗೆ ಅರ್ಹರಾಗಲು ನೀವು ಅದನ್ನು ಹೊಂದಿರಬೇಕಾಗುತ್ತದೆ.
ವಿದೇಶದಲ್ಲಿ ಹೆಲ್ತ್‌ಕೇರ್ ದುಬಾರಿಯಾಗಿದೆ, ಮತ್ತು ಡಾಕ್ಟರ್ ಬಳಿ ಸರಳ ಭೇಟಿ ನೀಡುವುದು ಕೂಡ ದುಬಾರಿ ವೆಚ್ಚವಾಗಬಹುದು. ಸರಿಯಾದ ಟ್ರಾವೆಲ್ ಇನ್ಶೂರೆನ್ಸ್ ವೈದ್ಯಕೀಯ ವೆಚ್ಚಗಳು, ಆಸ್ಪತ್ರೆ ದಾಖಲಾತಿ ಮತ್ತು ತುರ್ತು ಸ್ಥಳಾಂತರವನ್ನು ಕೂಡ ಕವರ್ ಮಾಡುತ್ತದೆ. ಇದು ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ವಿದ್ಯಾರ್ಥಿಗಳಿಗೆ ಹೊರೆಯಾಗುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
ಅಂತಾರಾಷ್ಟ್ರೀಯ ಪ್ರಯಾಣವು ತನ್ನದೇ ಆದ ಅಪಾಯಗಳೊಂದಿಗೆ ಬರುತ್ತದೆ. ವಿಮಾನ ವಿಳಂಬಗಳು, ಲಗೇಜ್ ನಷ್ಟ ಅಥವಾ ವೈದ್ಯಕೀಯ ತುರ್ತುಸ್ಥಿತಿಗಳು ದುಃಸ್ವಪ್ನವಾಗಿರಬಹುದು. ಟ್ರಾವೆಲ್ ಇನ್ಶೂರೆನ್ಸ್ ಹಣಕಾಸಿನ ಪರಿಹಾರವನ್ನು ಒದಗಿಸುತ್ತದೆ, ಸರಾಗವಾಗಿ ಅಂತಹ ಸಂದರ್ಭಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
ಕುಟುಂಬದ ಬಿಕ್ಕಟ್ಟು ಅಥವಾ ಆರೋಗ್ಯ ಸಮಸ್ಯೆಗಳಂತಹ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ವಿದ್ಯಾಭ್ಯಾಸವು ನಿಂತರೆ ಮುಂಚಿತವಾಗಿ ಪಾವತಿಸಲಾಗುವ ನಿಮ್ಮ ಟ್ಯೂಷನ್ ಶುಲ್ಕವನ್ನು ಇನ್ಶೂರೆನ್ಸ್ ಮರುಪಾವತಿಸುತ್ತದೆ.
ಅಪಘಾತಗಳು, ಕಾನೂನು ಸಮಸ್ಯೆಗಳು ಅಥವಾ ತುರ್ತು ಪರಿಸ್ಥಿತಿಗಳಿಂದಾಗಿ ಅಧ್ಯಯನಗಳಲ್ಲಿ ಅಡಚಣೆಗಳಂತಹ ಅನಿರೀಕ್ಷಿತ ಘಟನೆಗಳು ನಿಮ್ಮ ಯೋಜನೆಗಳನ್ನು ಹಾನಿಗೊಳಿಸಬಹುದು. ಸರಿಯಾದ ಅಂತಾರಾಷ್ಟ್ರೀಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು ಈ ಆಕಸ್ಮಿಕ ಘಟನೆಗಳನ್ನು ಕವರ್ ಮಾಡಬಹುದು.
ಪೋಷಕರು ಮತ್ತು ಇತರ ಕುಟುಂಬದ ಸದಸ್ಯರು ಭಾರತದಲ್ಲಿನ ತಮ್ಮ ಮನೆಗೆ ಹಿಂತಿರುಗಿದ ನಂತರ, ವಿದೇಶದಲ್ಲಿ ಅನಿಶ್ಚಿತತೆಗಳ ವಿರುದ್ಧ ತಮ್ಮ ಮಗುವನ್ನು ರಕ್ಷಿಸಲಾಗುತ್ತದೆ ಎಂದು ತಿಳಿದುಕೊಳ್ಳುವುದರಿಂದ ಖಚಿತವಾಗಿರಬಹುದು.
ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವುದು ಆಕರ್ಷಕ ಸಾಹಸವಾಗಿದೆ, ಆದರೆ ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ತ್ವರಿತ ಹಣಕಾಸಿನ ಒತ್ತಡವಾಗಿ ಬದಲಾಗಬಹುದು. ನಿಮಗೆ ಹಠಾತ್ ಅನಾರೋಗ್ಯ ಎದುರಾದರೆ ಅಥವಾ ಆಸ್ಪತ್ರೆಗೆ ದಾಖಲಾಗುವ ಮಟ್ಟಕ್ಕೆ ಅಪಘಾತವಾದರೆ, ನಮ್ಮ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ನಮ್ಮ ವ್ಯಾಪಕ ಆಸ್ಪತ್ರೆಗಳ ನೆಟ್ವರ್ಕ್‌ನಲ್ಲಿ ನಗದುರಹಿತ ವೈದ್ಯಕೀಯ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸುತ್ತದೆ.
ಹಲ್ಲು ನೋವು ಹಠಾತ್ ಆಗಿ ಬರಬಹುದು ಮತ್ತು ತುಂಬಾ ಯಾತನೆಯಿಂದ ಕೂಡಿರಬಹುದು, ಇದರಿಂದಾಗಿ ನೀವು ನಿಮ್ಮ ಅಧ್ಯಯನಗಳ ಮೇಲೆ ಗಮನಹರಿಸಲು ಕಷ್ಟವಾಗುತ್ತದೆ. ನಿಮ್ಮ ಹಲ್ಲುಗಳಿಗೆ ಗಾಯಗೊಂಡರೆ ಅಥವಾ ತೀವ್ರ ಹಲ್ಲಿನ ನೋವನ್ನು ಅನುಭವಿಸಿದರೆ, ನಮ್ಮ ಪ್ಲಾನ್ ಅಗತ್ಯ ದಂತ ಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುತ್ತದೆ, ಹಣಕಾಸಿನ ಚಿಂತೆಗಳಿಲ್ಲದೆ ಆ ಆತ್ಮವಿಶ್ವಾಸದ ನಗುವನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
ಸ್ಥಳೀಯ ಚಿಕಿತ್ಸೆ ಸಾಕಾಗದ ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ತುರ್ತು ಸ್ಥಳಾಂತರಕ್ಕೆ ನಾವು ಕವರೇಜನ್ನು ಒದಗಿಸುತ್ತೇವೆ. ವಾಯು ಅಥವಾ ಭೂಸಾರಿಗೆಯ ಮೂಲಕ, ನೀವು ಹತ್ತಿರದ ವೈದ್ಯಕೀಯ ಸೌಲಭ್ಯವನ್ನು ತಲುಪುವುದನ್ನು ನಾವು ಖಚಿತಪಡಿಸುತ್ತೇವೆ.
ವಿದ್ಯಾರ್ಥಿಗಳು ಅಸುನೀಗಿದ ದುರದೃಷ್ಟಕರ ಸಂದರ್ಭದಲ್ಲಿ, ಮೃತದೇಹವನ್ನು ತಮ್ಮ ದೇಶಕ್ಕೆ ಮರಳಿ ಸಾಗಿಸುವ ವೆಚ್ಚಗಳನ್ನು ನಾವು ನೋಡಿಕೊಳ್ಳುತ್ತೇವೆ.
ದುರದೃಷ್ಟಕರ ಅಪಘಾತದಿಂದಾಗಿ ಪ್ರಾಣ ಕಳೆದುಕೊಂಡರೆ, ನಮ್ಮ ಅಂತಾರಾಷ್ಟ್ರೀಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ನಾಮಿನಿಗೆ ಲಂಪ್‌ಸಮ್ ಪರಿಹಾರವನ್ನು ಒದಗಿಸುತ್ತದೆ. ಇದು ಅಂತಹ ದುರಂತದ ಸಂದರ್ಭಗಳಲ್ಲಿ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ.
ಅಪಘಾತವು ಶಾಶ್ವತ ಅಂಗವೈಕಲ್ಯಕ್ಕೆ ಕಾರಣವಾದರೆ, ಹಣಕಾಸಿನ ಹೊರೆಗಳನ್ನು ಸುಲಭಗೊಳಿಸುವುದಕ್ಕೆ ಸಹಾಯ ಮಾಡಲು ನಾವು ಲಂಪ್‌ಸಮ್ ಪಾವತಿಯನ್ನು ಒದಗಿಸುತ್ತೇವೆ.
ಅಪಘಾತಗಳು ಸಂಭವಿಸುತ್ತವೆ, ಮತ್ತು ಕೆಲವೊಮ್ಮೆ, ನೀವು ಅನಿರೀಕ್ಷಿತವಾಗಿ ಥರ್ಡ್ ಪಾರ್ಟಿ ಆಸ್ತಿಗೆ ಹಾನಿಯನ್ನು ಉಂಟುಮಾಡಬಹುದು ಅಥವಾ ಅಪಘಾತಕ್ಕೆ ನೀವೇ ಹೊಣೆಯಾಗಬಹುದು.
ನೀವು ಜಾಮೀನು ಪಡೆಯಬಹುದಾದ ಅಪರಾಧಕ್ಕಾಗಿ ಬಂಧನಕ್ಕೊಳಗಾದರೆ, ನಾವು ಜಾಮೀನು ಮೊತ್ತವನ್ನು ಕವರ್ ಮಾಡಲು ಹೆಜ್ಜೆ ಇಡುತ್ತೇವೆ, ಕಾನೂನು ತೊಂದರೆಗಳನ್ನು ಸುಲಭವಾಗಿ ನ್ಯಾವಿಗೇಟ್ ಮಾಡಲು ನಿಮಗೆ ಸಹಾಯ ಮಾಡುತ್ತೇವೆ.
ನಿಮ್ಮ ಶಿಕ್ಷಣ ಪ್ರಾಯೋಜಕರು ಅಕಾಲಿಕ ಮರಣ ಹೊಂದಿದರೆ, ಉಳಿದ ಟ್ಯೂಷನ್ ಶುಲ್ಕವನ್ನು ನಾವು ಮರುಪಾವತಿ ಮಾಡುತ್ತೇವೆ.
ನಿಮ್ಮ ಶಿಕ್ಷಣವು ಒಂದು ಪ್ರಮುಖ ಹೂಡಿಕೆಯಾಗಿದೆ. ಹತ್ತಿರದ ಕುಟುಂಬ ಸದಸ್ಯರ ದೀರ್ಘಕಾಲದ ಆಸ್ಪತ್ರೆ ದಾಖಲಾತಿ ಅಥವಾ ನಿಧನವು ನಿಮ್ಮ ಅಧ್ಯಯನವನ್ನು ಅಡ್ಡಿಪಡಿಸಬಹುದು. ಅಂತಹ ಸಂದರ್ಭಗಳಲ್ಲಿ ನಮ್ಮ ಪಾಲಿಸಿಯು ಟ್ಯೂಷನ್ ಶುಲ್ಕವನ್ನು ರಿಫಂಡ್ ಮಾಡುತ್ತದೆ.
ವಿಸ್ತರಿತ ಅವಧಿಗೆ ಆಸ್ಪತ್ರೆಗೆ ದಾಖಲಾಗುವುದು ಭಾವನಾತ್ಮಕವಾಗಿ ಸವಾಲಾಗಿರಬಹುದು. ಅಂತಹ ಸಂದರ್ಭದಲ್ಲಿ, ನೀವು ಏಳು ದಿನಗಳಿಗಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾದರೆ ನಿಮ್ಮನ್ನು ಭೇಟಿ ಮಾಡಲು ಹತ್ತಿರದ ಕುಟುಂಬದ ಸದಸ್ಯರ ಪ್ರಯಾಣದ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.
ನಿಮ್ಮ ಪಾಸ್‌ಪೋರ್ಟ್‌ನಂತಹ ಪ್ರಮುಖ ಡಾಕ್ಯುಮೆಂಟ್ ಕಳೆದುಕೊಳ್ಳುವುದೆಂದರೆ ಅದೊಂದು ದುಃಸ್ವಪ್ನವೇ ಸರಿ. ನಮ್ಮ ಇನ್ಶೂರೆನ್ಸ್ ಹೊಸ ಪಾಸ್‌ಪೋರ್ಟ್ ಪಡೆಯುವ ವೆಚ್ಚವನ್ನು ಕವರ್ ಮಾಡುತ್ತದೆ, ಆದ್ದರಿಂದ ನೀವು ಅನಗತ್ಯ ವಿಳಂಬಗಳಿಲ್ಲದೆ ನಿಮ್ಮ ಅಧ್ಯಯನಗಳನ್ನು ಮುಂದುವರೆಸಬಹುದು.
ವಿದೇಶದಲ್ಲಿ ನಿಮ್ಮ ಲಗೇಜನ್ನು ಕಳೆದುಕೊಳ್ಳುವುದು ನಂಬಲಾಗದಷ್ಟು ನಿರಾಶೆಯಾಗಬಹುದು. ನಿಮ್ಮ ಪ್ರಮುಖ ವಸ್ತುಗಳನ್ನು ಬದಲಾಯಿಸಲು ನಿಮಗೆ ನಷ್ಟಕ್ಕೆ ಪರಿಹಾರ ನೀಡಲಾಗುತ್ತದೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಬ್ಯಾಗೇಜ್ ವಿಳಂಬವಾದರೆ, ನೀವು ನಿಮ್ಮ ವಿದ್ಯಾರ್ಥಿ ಜೀವನವನ್ನು ಸಿದ್ಧತೆ ಪ್ರಕಾರ ಆರಂಭಿಸಲಾಗುವುದಿಲ್ಲ. ತುರ್ತು ಅಗತ್ಯಗಳ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ, ಆದ್ದರಿಂದ ನೀವು ಆತ್ಮವಿಶ್ವಾಸದೊಂದಿಗೆ ನಿಮ್ಮ ತರಗತಿಗಳಿಗೆ ಹಾಜರಾಗಬಹುದು.
ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಬ್ರೌಶರ್ ಮತ್ತು ಪ್ರಾಸ್ಪೆಕ್ಟಸ್ ಅನ್ನು ಓದಿ.
ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅಥವಾ ಯುದ್ಧ-ಸಂಬಂಧಿತ ಘಟನೆಯಿಂದಾಗಿ ಅನಾರೋಗ್ಯ ಅಥವಾ ಗಾಯವು ಸಂಭವಿಸಿದರೆ, ನಮ್ಮ ಪಾಲಿಸಿಯು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವುದಿಲ್ಲ.
ಮಾದಕ ವಸ್ತುಗಳ ಹೆಚ್ಚಿನ ಬಳಕೆಯಿಂದಾಗಿ ನಿಮಗೆ ವೈದ್ಯಕೀಯ ಸಹಾಯದ ಅಗತ್ಯವಿದ್ದರೆ, ಈ ಪಾಲಿಸಿಯ ಅಡಿಯಲ್ಲಿ ನಿಮ್ಮ ಕ್ಲೈಮ್ ಅನ್ನು ಪರಿಗಣಿಸಲಾಗುವುದಿಲ್ಲ.
ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಸಾಮಾನ್ಯವಾಗಿ ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳಿಂದ ಉಂಟಾಗುವ ಯಾವುದೇ ಸಮಸ್ಯೆಗಳಿಗೆ ಕವರೇಜನ್ನು ವಿಸ್ತರಿಸುವುದಿಲ್ಲ. ಪ್ರಯಾಣ ಮಾಡುವ ಮೊದಲು ಚಾಲ್ತಿಯಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳಿಗೆ ಪ್ರತ್ಯೇಕ ಕವರೇಜ್ ಆಯ್ಕೆಗಳನ್ನು ಪರಿಶೀಲಿಸಲು ಯಾವಾಗಲೂ ಸಲಹೆ ನೀಡಲಾಗುತ್ತದೆ.
ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಗಳು ಮತ್ತು ಬೊಜ್ಜಿನ ಚಿಕಿತ್ಸೆಗಳಂತಹ ಆಯ್ದ ಕಾರ್ಯವಿಧಾನಗಳು ನಮ್ಮ ಪಾಲಿಸಿಯ ಅಡಿಯಲ್ಲಿ ಬರುವುದಿಲ್ಲ.
ಮಾನಸಿಕ ಆರೋಗ್ಯವು ಮುಖ್ಯವಾಗಿದೆ ಮತ್ತು ನೀವು ಕಷ್ಟಪಡುತ್ತಿದ್ದರೆ, ವೃತ್ತಿಪರ ಸಹಾಯವನ್ನು ಪಡೆಯಲು ಹೆಚ್ಚು ಪ್ರೋತ್ಸಾಹಿಸಲಾಗುತ್ತದೆ. ಆದಾಗ್ಯೂ, ಸ್ವಯಂ-ಹಾನಿ ಅಥವಾ ಆತ್ಮಹತ್ಯೆ ಪ್ರಯತ್ನಗಳಿಂದ ಉಂಟಾಗುವ ಯಾವುದೇ ವೈದ್ಯಕೀಯ ವೆಚ್ಚಗಳನ್ನು ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ತೀವ್ರ ಅಥವಾ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ನಿಮಗೆ ಗಾಯವಾದರೆ, ಪಾಲಿಸಿಯು ವೈದ್ಯಕೀಯ ಚಿಕಿತ್ಸೆಗೆ ಹಣಕಾಸಿನ ಕವರೇಜನ್ನು ಒದಗಿಸುವುದಿಲ್ಲ.
ವಿದೇಶದಲ್ಲಿ ಅಧ್ಯಯನ ಮಾಡುವುದು ಜೀವಮಾನದ ಸಾಹಸವಾಗಿದೆ. ಇದು ತನ್ನದೇ ಆದ ಅನಿಶ್ಚಿತತೆಗಳೊಂದಿಗೆ ಕೂಡ ಬರುತ್ತದೆ. ಹೀಗಾಗಿ, ವಿದೇಶಕ್ಕೆ ಹೋಗುವಾಗ, ನೀವು ಹೆಚ್ಚಿನ ಬೇಡಿಕೆಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ. ಏಕಿಲ್ಲ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ವಿರುದ್ಧ ನಿಮ್ಮನ್ನು ರಕ್ಷಿಸುವುದರಿಂದ ಹಿಡಿದು ನಿಮ್ಮ ವೈಯಕ್ತಿಕ ವಸ್ತುಗಳನ್ನು ಕವರ್ ಮಾಡುವವರೆಗೆ, ಸಮಗ್ರ ಕವರೇಜ್ ಅನಿರೀಕ್ಷಿತ ಅಡಚಣೆಗಳ ಒತ್ತಡವಿಲ್ಲದೆ ನಿಮ್ಮ ಅಧ್ಯಯನಗಳನ್ನು ಪೂರ್ಣಗೊಳಿಸಲು ನಿಮಗೆ ಸಹಾಯ ಮಾಡುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ನಿರ್ದಿಷ್ಟ ಅಗತ್ಯಗಳಿಗೆ ಅನುಗುಣವಾಗಿ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ. ಸಿದ್ಧವಾಗಿರುವ ಮೂಲಕ ಸುಗಮ ಶೈಕ್ಷಣಿಕ ಪ್ರಯಾಣ ಮತ್ತು ದುಬಾರಿ ಅಗ್ನಿಪರೀಕ್ಷೆಯ ನಡುವಿನ ಎಲ್ಲಾ ವ್ಯತ್ಯಾಸಗಳನ್ನು ಉಂಟು ಮಾಡಬಹುದು ಎಂದು ನಾವು ನಂಬುತ್ತೇವೆ! ನೀವು ಅಂತಾರಾಷ್ಟ್ರೀಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಏಕೆ ಪರಿಗಣಿಸಬೇಕು ಎಂಬುದು ಇಲ್ಲಿದೆ:
ಪ್ರಮುಖ ಫೀಚರ್‌ಗಳು | ಪ್ರಯೋಜನಗಳು |
---|---|
ಸಮಗ್ರ ಕವರೇಜ್ | ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಹಣಕಾಸಿನ ಭದ್ರತೆಯನ್ನು ಒದಗಿಸಲು ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ವಿನ್ಯಾಸಗೊಳಿಸಲಾಗಿದೆ. |
ಮೆಡಿಕಲ್ ಕವರೇಜ್ | ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಅಥವಾ ಅಪಘಾತಗಳ ಸಂದರ್ಭದಲ್ಲಿ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಡಯಾಗ್ನಸ್ಟಿಕ್ ಪರೀಕ್ಷೆಗಳು, ಆಸ್ಪತ್ರೆ ದಾಖಲಾತಿ ಮತ್ತು ದಂತ ಚಿಕಿತ್ಸೆಗಳನ್ನು ಕೂಡ ಕವರ್ ಮಾಡುತ್ತದೆ. |
ವೈಯಕ್ತಿಕ ಹೊಣೆಗಾರಿಕೆ | ಥರ್ಡ್ ಪಾರ್ಟಿ ಆಸ್ತಿಗೆ ಆಕಸ್ಮಿಕ ಹಾನಿ ಉಂಟುಮಾಡುವುದು ಅಥವಾ ಬೇರೊಬ್ಬರಿಗೆ ಗಾಯವನ್ನು ಉಂಟುಮಾಡುವುದರಿಂದ ಗಮನಾರ್ಹ ಹಣಕಾಸಿನ ಹೊಣೆಗಾರಿಕೆಗಳಿಗೆ ಕಾರಣವಾಗಬಹುದು. |
ಪಾಸ್‌ಪೋರ್ಟ್ ಮತ್ತು ಚೆಕ್ ಇನ್ ಬ್ಯಾಗೇಜ್ ನಷ್ಟ | ನಿಮ್ಮ ಲಗೇಜ್ ಅಥವಾ ಪಾಸ್‌ಪೋರ್ಟ್ ಕಳೆದುಹೋದರೆ ಅಥವಾ ವಿಳಂಬವಾದರೆ, ಇನ್ಶೂರೆನ್ಸ್ ಪ್ಲಾನ್ ಅಗತ್ಯ ಬದಲಿಗಳ ವೆಚ್ಚವನ್ನು ಕವರ್ ಮಾಡುತ್ತದೆ. |
ತುರ್ತುಸ್ಥಿತಿಯ ಸಂದರ್ಭದಲ್ಲಿ ಕುಟುಂಬದ ಭೇಟಿಗಳು | ನೀವು ಅಸ್ವಸ್ಥರಾಗಿದ್ದಾಗ ವಿದೇಶದಲ್ಲಿ ಒಬ್ಬರೇ ಆಗಿರುವುದರಿಂದ ದೈಹಿಕ ಮತ್ತು ಭಾವನಾತ್ಮಕವಾಗಿ ಕಷ್ಟವಾಗಬಹುದು. ಅಂತಹ ಸಮಯದಲ್ಲಿ, ಇನ್ಶೂರ್ಡ್ ವ್ಯಕ್ತಿಯು ಒಂದು ವಾರಕ್ಕಿಂತ ಹೆಚ್ಚು ಕಾಲ ಆಸ್ಪತ್ರೆಗೆ ದಾಖಲಾದಾಗ, ಸಹಾನುಭೂತಿಯ ಭೇಟಿಯನ್ನು ಒದಗಿಸಲಾಗುತ್ತದೆ. |
ಅಧ್ಯಯನಗಳಲ್ಲಿ ಯಾವುದೇ ಅಡಚಣೆಗಳಿಲ್ಲ | ಕುಟುಂಬ ಅಥವಾ ವೈದ್ಯಕೀಯ ಕಾರಣಗಳಿಂದಾಗಿ ನಿಮ್ಮ ಅಧ್ಯಯನಗಳು ಅಡಚಣೆಯಾದರೆ ನಿಮ್ಮ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ರಕ್ಷಿಸುತ್ತದೆ. |
ವಿದೇಶದಲ್ಲಿ ಅಧ್ಯಯನ ಮಾಡಲು ಬಯಸುವ ಪ್ರತಿ ಮಹತ್ವಾಕಾಂಕ್ಷಿ ವಿದ್ಯಾರ್ಥಿಗೆ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಇಂಡಿಯಾ ಪ್ರಮುಖ ಪಾತ್ರವನ್ನು ವಹಿಸುತ್ತದೆ.
1. ನೀವು ಹೋಗುವ ದೇಶದಲ್ಲಿ ಇದು ಕಡ್ಡಾಯವಾದಾಗ
ಹೆಚ್ಚಿನ ದೇಶಗಳಲ್ಲಿ, ವಿದೇಶದಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದು ಅಗತ್ಯವಾಗಿದೆ. ಅದೇ ರೀತಿ, ಕೆಲವು ವಿಶ್ವವಿದ್ಯಾಲಯಗಳಿಗೆ ತಮ್ಮ ದಾಖಲಾತಿ ಮಾನದಂಡದ ಭಾಗವಾಗಿ ವೈದ್ಯಕೀಯ ಕವರೇಜ್‌ಗಾಗಿ ಇನ್ಶೂರೆನ್ಸ್ ಪುರಾವೆಯ ಅಗತ್ಯವಿದೆ.
2. ನೀವು ಪ್ರಯಾಣವನ್ನು ಕವರ್ ಮಾಡಲು ಬಯಸಿದಾಗ
ಪ್ರಯಾಣ ಮಾಡುವಾಗ, ನೀವು ನಿಮ್ಮ ಪ್ರಯಾಣವನ್ನು ಆರಂಭಿಸುವ ಮೊದಲು ಕೂಡ ವಿಳಂಬಗಳು ಅಥವಾ ಬ್ಯಾಗೇಜ್ ಕಳೆದುಹೋಗುವುದು ಮುಂತಾದ ಸವಾಲುಗಳನ್ನು ಎದುರಿಸಬಹುದು. ಟ್ರಾವೆಲ್ ಇನ್ಶೂರೆನ್ಸ್ ಆರಂಭದಿಂದಲೇ ಈ ಅಡಚಣೆಗಳಿಗೆ ನೀವು ಕವರ್ ಆಗುತ್ತೀರಿ ಎಂಬುದನ್ನು ಖಚಿತಪಡಿಸುತ್ತದೆ.
3. ನಿಮ್ಮ ಶಿಕ್ಷಣಕ್ಕೆ ಅಡ್ಡಿಯಾದಾಗ
ಅನಾರೋಗ್ಯ, ರಾಜಕೀಯ ಅಶಾಂತಿ ಅಥವಾ ಕುಟುಂಬದ ತುರ್ತುಸ್ಥಿತಿಗಳಂತಹ ಅನಿರೀಕ್ಷಿತ ಘಟನೆಗಳು ನಿಮ್ಮ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗಲು ಕಾರಣವಾಗಬಹುದು. ಸರಿಯಾದ ರೀತಿಯ ಇನ್ಶೂರೆನ್ಸ್ ಬಳಸುವುದರಿಂದ ಟ್ಯೂಷನ್ ಶುಲ್ಕಗಳಿಗೆ ನಷ್ಟ ಪರಿಹಾರವನ್ನು ಒದಗಿಸಬಹುದು, ಇದು ಪರಿಸ್ಥಿತಿಯನ್ನು ಸರಾಗವಾಗಿ ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.
4. ನೀವು ಕಾನೂನು ತೊಂದರೆಗಳನ್ನು ನೋಡಿಕೊಳ್ಳಬೇಕಾದಾಗ
ವಿದೇಶದಲ್ಲಿ ಮೊಕದ್ದಮೆ ಒಂದು ದುಃಸ್ವಪ್ನವಾಗಿರಬಹುದು. ಥರ್ಡ್ ಪಾರ್ಟಿಗೆ ಉಂಟಾಗುವ ಆಕಸ್ಮಿಕ ಹಾನಿಗಳ ಕಾನೂನು ಹೊಣೆಗಾರಿಕೆಯ ಸಂದರ್ಭದಲ್ಲಿ, ನಿಮ್ಮ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ರಕ್ಷಣೆಗೆ ಬರುತ್ತದೆ.
5. ಪೋಷಕರಿಗೆ ನೆಮ್ಮದಿಯನ್ನು ಖಚಿತಪಡಿಸಿಕೊಳ್ಳಲು ನೀವು ಬಯಸಿದಾಗ
ಅನಿರೀಕ್ಷಿತ ಸಂದರ್ಭಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ ಮತ್ತು ಒಂದು ವೇಳೆ ಕಷ್ಟ ಎದುರಾದಾಗ, ತಮ್ಮ ಮಗುವನ್ನು ನೋಡಿಕೊಳ್ಳಲಾಗುತ್ತದೆ ಎಂದು ಪೋಷಕರು ಭರವಸೆ ಹೊಂದಿರುತ್ತಾರೆ.
ಸರಳವಾಗಿ ಹೇಳುವುದಾದರೆ, ವಿದೇಶದಲ್ಲಿ ನಿಮ್ಮ ಶೈಕ್ಷಣಿಕ ಪ್ರಯಾಣದ ಸಮಯದಲ್ಲಿ ಹಣಕಾಸು ಅಥವಾ ದೈಹಿಕ ಅಪಾಯದ ಸಾಧ್ಯತೆಯಿದ್ದಾಗ ಭಾರತದಿಂದ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದು ಅಗತ್ಯವಿದೆ.
ನೀವು ಈಗಲೂ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದಲ್ಲಿ ನಿಮ್ಮ ಉನ್ನತ ಅಧ್ಯಯನಗಳನ್ನು ಮುಂದುವರಿಸುವ ಆಲೋಚನೆಯ ಹುಡುಕಾಟದಲ್ಲಿದ್ದರೆ, ನೀವು ಅಧ್ಯಯನ ಸ್ಥಳದ ಬಗ್ಗೆ ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಜಗತ್ತಿನಾದ್ಯಂತದ ಹೆಚ್ಚಿನ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಸ್ಟೂಡೆಂಟ್ ಮೆಡಿಕಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿವೆ ಎಂಬುದನ್ನು ನೆನಪಿನಲ್ಲಿಡಿ.
ಅಮೆರಿಕಾ ಕನಸನ್ನು ನನಸಾಗಿಸಲು ಬಯಸುವಿರಾ? ಹಾಗಾದರೆ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುವುದು ಖಂಡಿತವಾಗಿಯೂ ನಿಮ್ಮ ಪಟ್ಟಿಯಲ್ಲಿರುತ್ತದೆ. ಸ್ಟ್ಯಾನ್‌ಫೋರ್ಡ್ ಯುನಿವರ್ಸಿಟಿ, ಹಾರ್ವರ್ಡ್ ಯುನಿವರ್ಸಿಟಿ, ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಚಿಕಾಗೋ ಯುನಿವರ್ಸಿಟಿಯಂತಹ ಶೈಕ್ಷಣಿಕ ಸಂಸ್ಥೆಗಳು ನಿಮ್ಮ ಶೈಕ್ಷಣಿಕ ಮತ್ತು ವೃತ್ತಿಜೀವನವನ್ನು ರೂಪಿಸಲು ಅತ್ಯುತ್ತಮ ವೇದಿಕೆಯನ್ನು ಒದಗಿಸುತ್ತವೆ.
ಜರ್ಮನಿಯ ಅನೇಕ ವಿಶ್ವವಿದ್ಯಾಲಯಗಳು ಭಾರತೀಯ ವಿದ್ಯಾರ್ಥಿಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಬೇರೆ ಅನೇಕ ದೇಶಗಳಿಗೆ ಹೋಲಿಸಿದರೆ, ಜರ್ಮನಿ ಹೆಚ್ಚು ಕೈಗೆಟಕುವ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ವೃತ್ತಿಪರ ಅವಕಾಶಗಳನ್ನು ಒದಗಿಸುತ್ತದೆ.
ಸ್ಪೇನ್ ನಿಜವಾಗಿಯೂ ಉನ್ನತ-ಗುಣಮಟ್ಟದ ಶಿಕ್ಷಣಕ್ಕೆ ಉತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತದೆ. ಬಹುಮುಖ ಮತ್ತು ಕೈಗೆಟಕುವ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ, ಯುನಿವರ್ಸಿಟಟ್ ಆಟೋನೋಮಾ ಡಿ ಬಾರ್ಸಿಲೋನಾ, ಯುನಿವರ್ಸಿಟೇಟ್ ಡಿ ಬಾರ್ಸಿಲೋನಾ ಮತ್ತು ಮ್ಯಾಡ್ರಿಡ್ ಕಂಪ್ಲೂಟೆನ್ಸ್ ಯುನಿವರ್ಸಿಟಿಯಂತಹ ಸಂಸ್ಥೆಗಳು ಅನೇಕರಿಗೆ ಆಕರ್ಷಕ ಆಯ್ಕೆಗಳಾಗಿವೆ.
ಮೆಲ್ಬರ್ನ್ ಯುನಿವರ್ಸಿಟಿ, ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿ ಮತ್ತು ಸಿಡ್ನಿ ಯುನಿವರ್ಸಿಟಿಯಂತಹ ತನ್ನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಿಗೆ ಹೆಸರುವಾಸಿಯಾಗಿದ್ದು, ಅವರ ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಅಧ್ಯಯನದ ನಂತರದ ಸ್ಥಾನಗಳಿಗೆ ಹೆಸರುವಾಸಿಯಾಗಿದೆ. ಆಸ್ಟ್ರೇಲಿಯಾ ಬಹುಸಾಂಸ್ಕೃತಿಕ ಪರಿಸರವನ್ನು ಒದಗಿಸುತ್ತದೆ ಮತ್ತು ಅದರ ವೀಸಾ ಪಾಲಿಸಿಗಳು ತುಂಬಾ ಅನುಕೂಲಕರವಾಗಿವೆ.
UK ದೀರ್ಘಕಾಲದಿಂದ ಅಂತರರಾಷ್ಟ್ರೀಯ ಶಿಕ್ಷಣದ ಕೇಂದ್ರವಾಗಿದೆ. ಆಕ್ಸ್‌ಫರ್ಡ್, ಕೇಂಬ್ರಿಡ್ಜ್, ಯುನಿವರ್ಸಿಟಿ ಕಾಲೇಜ್ ಲಂಡನ್ ಮತ್ತು ಎಡಿನ್‌ಬರ್ಗ್ ಯುನಿವರ್ಸಿಟಿಯಂತಹ ವಿಶ್ವದರ್ಜೆಯ ಯುನಿವರ್ಸಿಟಿಗಳು ಭಾರತೀಯ ವಿದ್ಯಾರ್ಥಿಗಳಿಗೆ ಕನಸಿನ ಅಧ್ಯಯನ ತಾಣಗಳಾಗಿವೆ.
ಸಿಂಗಾಪುರ ನಿಮಗೆ ಶ್ರೀಮಂತ ಸಾಂಸ್ಕೃತಿಕ ಅನುಭವಗಳೊಂದಿಗೆ ಅತ್ಯುತ್ತಮ ಶಿಕ್ಷಣದ ಮಿಶ್ರಣವನ್ನು ಒದಗಿಸುತ್ತದೆ. ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ ಮತ್ತು ನಾನ್ಯಾಂಗ್ ಟೆಕ್ನಾಲಜಿಕಲ್ ಯುನಿವರ್ಸಿಟಿ ಕೆಲವು ಜನಪ್ರಿಯ ಆಯ್ಕೆಗಳಾಗಿವೆ.
ನೀವು ಅಂತಾರಾಷ್ಟ್ರೀಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವಾಗ ನೀವು ಅನುಸರಿಸಬೇಕಾದ ಕೆಲವು ಸರಳ ಮತ್ತು ಸುಲಭ ಅರ್ಹತಾ ಮಾನದಂಡಗಳಿವೆ. ಸಾಮಾನ್ಯವಾಗಿ, 16 ರಿಂದ 35 ವರ್ಷಗಳ ನಡುವಿನ ವಯಸ್ಸಿನ ಭಾರತೀಯ ವಿದ್ಯಾರ್ಥಿಗಳು ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಅರ್ಹರಾಗಿರುತ್ತಾರೆ. ನೀವು ಆಯ್ಕೆ ಮಾಡಿದ ಪ್ಲಾನ್ ಪ್ರಕಾರವನ್ನು ಅವಲಂಬಿಸಿ, ಪಾಲಿಸಿ ಅವಧಿಯು 30 ದಿನಗಳಿಂದ 2 ವರ್ಷಗಳ ನಡುವೆ ಇರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ನೀವು ಅಂತಾರಾಷ್ಟ್ರೀಯ ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಮೊದಲು ಯಾವುದೇ ಪಾಲಿಸಿ ಪೂರ್ವ ವೈದ್ಯಕೀಯ ಪರೀಕ್ಷೆಯನ್ನು ನಡೆಸಬೇಕಾಗಿಲ್ಲ.
ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ
ಕಡ್ಡಾಯವಾಗಿ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ಕೆಲವು ದೇಶಗಳು ಹೀಗಿವೆ: ಇದು ಅಂತಹ ದೇಶಗಳನ್ನು ಸೂಚಿಸುವ ಪಟ್ಟಿಯಷ್ಟೇ. ಹೊರಡುವ ಮೊದಲು ಪ್ರತ್ಯೇಕವಾಗಿ ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದು ಒಳ್ಳೆಯದು.
ಮೂಲ: VisaGuide.World
ವಿದೇಶದಲ್ಲಿ ಅಧ್ಯಯನ ಮಾಡಲು ಪ್ಲಾನ್ ಮಾಡುತ್ತಿರುವ 16 ರಿಂದ 35 ವರ್ಷದೊಳಗಿನ ವಿದ್ಯಾರ್ಥಿಗಳು ಪಾಲಿಸಿ ಖರೀದಿಸಬಹುದು.
ಹೌದು. ಪಾಲಿಸಿ ವಿಶ್ವವ್ಯಾಪಿ ಕವರ್ ಅನ್ನು 30 ದಿನಗಳಿಂದ 2 ವರ್ಷಗಳ ತನಕ ಒದಗಿಸುತ್ತದೆ.
ಪಾಲಿಸಿಯ ಸಂಪೂರ್ಣ ಅವಧಿಗೆ ಕವರೇಜ್ ಇರುತ್ತದೆ.
ಇಲ್ಲ. ನಿಮ್ಮ ಪಾಲಿಸಿ ಶುರುವಾಗುವ ದಿನಾಂಕ ಮತ್ತು ಖರೀದಿ ದಿನಾಂಕವು ನಿಮ್ಮ ಪ್ರವಾಸ ಆರಂಭವಾಗುವ ದಿನಾಂಕದ ಒಳಗೆ ಇರಬೇಕು.
ಹೌದು. ಪಾಲಿಸಿ-ಪೂರ್ವ ಕಾಯಿಲೆಯ ಮಾಹಿತಿ ನೀಡಿ ನೀವು ಸ್ಟೂಡೆಂಟ್ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು. ಅದಾಗ್ಯೂ, ಪಾಲಿಸಿ-ಪೂರ್ವ ಕಾಯಿಲೆಯ ವೈದ್ಯಕೀಯ ವೆಚ್ಚಗಳು ಪಾಲಿಸಿಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.
ಪ್ರಾಯೋಜಕರ ಆಕಸ್ಮಿಕ ಸಾವಿನ ಸಂದರ್ಭದಲ್ಲಿ, ಬಾಕಿ ಉಳಿದ ಅವಧಿಯ ಟ್ಯೂಷನ್ ವೆಚ್ಚಗಳನ್ನು ಪಾಲಿಸಿ ಶೆಡ್ಯೂಲ್‌ನಲ್ಲಿ ನಮೂದಿಸಿದಂತೆ ಗರಿಷ್ಠ ಮಿತಿಯವರೆಗೆ ಮರುಪಾವತಿಸಲಾಗುತ್ತದೆ.
ಗಾಯ ಅಥವಾ ಕಾಯಿಲೆಯಿಂದ ಒಂದು ತಿಂಗಳಿಗಿಂತ ಹೆಚ್ಚು ಕಾಲದವರೆಗೆ ಆಸ್ಪತ್ರೆಗೆ ದಾಖಲಾಗುವ ಕಾರಣದಿಂದಾಗಿ, ಅಥವಾ ಪ್ರಾಯೋಜಕರ ಆಕಸ್ಮಿಕ ಸಾವಿನ ಕಾರಣದಿಂದಾಗಿ, ನಿಮ್ಮ ಅಧ್ಯಯನಕ್ಕೆ ಅಡಚಣೆಯಾದರೆ, ಅಂತಹ ಕಾರಣಗಳಿಂದ ಉಳಿದ ಸೆಮಿಸ್ಟರ್ ಅಧ್ಯಯನವನ್ನು ತೊರೆಯಬೇಕಾದರೆ, ಅಂತಹ ಸಂದರ್ಭದಲ್ಲಿ ಶೈಕ್ಷಣಿಕ ಸಂಸ್ಥೆಗೆ ಮುಂಗಡವಾಗಿ ಪಾವತಿಸಲಾದ ಟ್ಯೂಷನ್ ಶುಲ್ಕವನ್ನು, ವಾಸ್ತವಿಕ ಇನ್ಶೂರ್ಡ್ ಮೊತ್ತವನ್ನು ಕಡಿತ ಮಾಡಿಕೊಂಡು ಮರುಪಾವತಿಸಲಾಗುತ್ತದೆ.
ಒಂದು ವೇಳೆ ಇನ್ಶೂರ್ಡ್ ವ್ಯಕ್ತಿಯು ಸತತ 7 ದಿನಗಳವರೆಗೆ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಅವರನ್ನು ನೋಡಿಕೊಳ್ಳಲು ಕುಟುಂಬದ ಸದಸ್ಯರಾರೂ ಇಲ್ಲದ ಪಕ್ಷದಲ್ಲಿ, ಕಂಪನಿಯು ಒಬ್ಬ ಕುಟುಂಬ ಸದಸ್ಯರಿಗೆ ಎರಡೂ ಬದಿಯ ಪ್ರಯಾಣಕ್ಕೆ ಎಕಾನಮಿ ದರ್ಜೆಯ ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿಕೊಡುತ್ತದೆ. ಅವರನ್ನು ನೋಡಿಕೊಳ್ಳಲು ಯಾರಾದರೂ ಬೇಕಾಗುತ್ತಾರೆ ಎಂಬುದನ್ನು ನಮ್ಮ ಪ್ಯಾನೆಲ್ ಡಾಕ್ಟರ್ ಖಚಿತಪಡಿಸಬೇಕು.
ನೀವು ಪಾಲಿಸಿಯ ಆರಂಭದ ದಿನಾಂಕದಿಂದ ಮುಂದಿನ 2 ವರ್ಷಗಳವರೆಗೆ ಅನೇಕ ಬಾರಿ ಪಾಲಿಸಿಯನ್ನು ವಿಸ್ತರಿಸಬಹುದು.