Knowledge Centre
HDFC ERGO #1.6 Crore+ Happy Customers
#1.6 ಕೋಟಿ+

ಸಂತೋಷಭರಿತ ಗ್ರಾಹಕರು

HDFC ERGO 1Lac+ Cashless Hospitals
1 ಲಕ್ಷ+

ನಗದುರಹಿತ ಆಸ್ಪತ್ರೆಗಳು

HDFC
                            ERGO 24x7 In-house Claim Assistance
24x7 ಇನ್-ಹೌಸ್

ಕ್ಲೈಮ್ ಸಹಾಯ

ಹೋಮ್ / ಟ್ರಾವೆಲ್ ಇನ್ಶೂರೆನ್ಸ್ / ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ - ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್

What is International Travel Insurance?

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ನಿಶ್ಚಿಂತರಾಗಿ ಮತ್ತು ಆರಾಮಾಗಿ ವಿದೇಶವನ್ನು ಸುತ್ತಾಡಲು ಭದ್ರತೆ ಮತ್ತು ನೆಮ್ಮದಿಯನ್ನು ನೀಡುತ್ತದೆ. ವಿದೇಶಿ ನೆಲದಲ್ಲಿ ಹೊಸ ಸಂಸ್ಕೃತಿ ಮತ್ತು ಅಲ್ಲಿನ ಜನರ ವಿಶಿಷ್ಟತೆಯನ್ನು ಅನುಭವಿಸುತ್ತಾ ನೀವು ನೆನಪುಗಳನ್ನು ಸೃಷ್ಟಿಸುತ್ತಿರುವಾಗ, ಯಾವುದೇ ಅನಿರೀಕ್ಷಿತ ಘಟನೆಯ ವಿರುದ್ಧ ನೀವು ಆರ್ಥಿಕವಾಗಿ ಸುರಕ್ಷಿತರಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನೆನಪಿಡಿ, ವೈದ್ಯಕೀಯ ಮತ್ತು ದಂತ ತುರ್ತುಸ್ಥಿತಿಗಳು ಯಾವಾಗ ಬೇಕಾದರೂ ಎದುರಾಗಬಹುದು ಮತ್ತು ನಿಮ್ಮ ರಜಾದಿನದಲ್ಲಿಯೂ ಅದು ಕಾಡಬಹುದು. ವಿದೇಶದಲ್ಲಿ ಅಂತಹ ವೆಚ್ಚಗಳು ನಿಮಗೆ ದುಬಾರಿ ಆಗಬಹುದು. ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಥವಾ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಅಂತಹ ಸಂಕಟದಿಂದ ನಿಮ್ಮನ್ನು ರಕ್ಷಿಸಬಹುದು.

ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ, ವಿಮಾನ ಅಥವಾ ಬ್ಯಾಗೇಜ್ ವಿಳಂಬಗಳಂತಹ ಇತರ ದುರದೃಷ್ಟಕರ ಘಟನೆಗಳು ನಿಮ್ಮ ಸಂತೋಷವನ್ನು ಹಾಳು ಮಾಡಬಹುದು. ಅಂತಾರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ, ಚೆಕ್-ಇನ್ ಬ್ಯಾಗೇಜ್ ನಷ್ಟ ತುಂಬಾ ಸಾಮಾನ್ಯವಾಗಿದೆ. ಈ ಪರಿಸ್ಥಿತಿಗಳು ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಬಹುದು ಮತ್ತು ನಿಮ್ಮ ಪ್ರಯಾಣದ ಬಜೆಟ್ ಅನ್ನು ಹೆಚ್ಚಿಸಬಹುದು. ಆದರೆ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್‌ನ ಭರವಸೆಯೊಂದಿಗೆ, ಅಂತಹ ದುರ್ಘಟನೆಗಳ ಬಗ್ಗೆ ಚಿಂತಿಸದೆ ನೀವು ನಿಮ್ಮ ರಜಾದಿನಗಳನ್ನು ಆನಂದಿಸಬಹುದು. ಇದಲ್ಲದೆ, ಪಾಸ್‌ಪೋರ್ಟ್‌ನಂಥ ಅಗತ್ಯ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನ ಅಥವಾ ದರೋಡೆಯಂಥ ಸಂದರ್ಭದಲ್ಲಿ, ಅಗತ್ಯವಿರುವ ಕವರ್ ಮತ್ತು ಭದ್ರತೆಯನ್ನು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ನೀಡುತ್ತದೆ. ನೀವು ಕೆಲಸ ಅಥವಾ ವಿರಾಮಕ್ಕಾಗಿ ವಿದೇಶಿ ಪ್ರವಾಸವನ್ನು ಯೋಜಿಸುತ್ತಿದ್ದರೆ ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಆಯ್ಕೆ ಮಾಡಿ ಮತ್ತು ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಿ.

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಎಂದರೇನು?

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಎಂಬುದು ವಿವಿಧ ದುರದೃಷ್ಟಕರ ಘಟನೆಗಳ ವಿರುದ್ಧ ನಿಮ್ಮ ವಿದೇಶಿ ಪ್ರಯಾಣವನ್ನು ಆರ್ಥಿಕವಾಗಿ ಕವರ್ ಮಾಡುವ ಪಾಲಿಸಿಯಾಗಿದೆ. ಸರಳವಾಗಿ ಹೇಳುವುದಾದರೆ, ವಿಮಾನ ವಿಳಂಬಗಳು, ವೈದ್ಯಕೀಯ ತುರ್ತುಸ್ಥಿತಿಗಳು, ಟ್ರಿಪ್ ಕಡಿತ, ಚೆಕ್-ಇನ್ ಬ್ಯಾಗೇಜ್ ನಷ್ಟ ಇತ್ಯಾದಿಗಳಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾದ ಹಠಾತ್ ವೆಚ್ಚಗಳಿಗೆ ಕವರೇಜ್ ಒದಗಿಸುವ ಮೂಲಕ ಇದು ಹಣಕಾಸಿನ ಸುರಕ್ಷತಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ, ಪ್ರಯಾಣಿಕರು ತಮ್ಮ ವಿದೇಶ ಪ್ರವಾಸದಲ್ಲಿರುವಾಗ ಮನಸ್ಸಿನ ಶಾಂತಿಯನ್ನು ಆನಂದಿಸಬಹುದು. ತುರ್ತು ವೈದ್ಯಕೀಯ, ಬ್ಯಾಗೇಜ್ ಮತ್ತು ಪ್ರಯಾಣ ಸಂಬಂಧಿತ ತೊಂದರೆಗಳನ್ನು ಸುಲಭವಾಗಿ ನಿಭಾಯಿಸಲು ಇದು ನಿಮಗೆ ಅವಕಾಶ ನೀಡುತ್ತದೆ, ನಿಮ್ಮ ಪ್ರಯಾಣವು ಸುಗಮವಾಗಿ ಸಾಗುವುದನ್ನು ಖಚಿತಪಡಿಸುತ್ತದೆ. ಇದು ವಿದೇಶದಲ್ಲಿ ವೈಯಕ್ತಿಕ ಹೊಣೆಗಾರಿಕೆಗೆ ಕವರೇಜ್ ಒದಗಿಸುವುದಕ್ಕೂ ವಿಸ್ತರಿಸುತ್ತದೆ.

ಈಗ, ಪ್ರವಾಸೋದ್ಯಮಕ್ಕಾಗಿ ಕೆಲವು ದೇಶಗಳನ್ನು ಪ್ರವೇಶಿಸಲು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯ ಅವಶ್ಯಕತೆಯನ್ನಾಗಿ ಮಾಡಲಾಗಿದೆ, ಆದರೆ ಇದು ಉಳಿದ ಸಮಯದಲ್ಲಿ ಸ್ವಯಂಪ್ರೇರಿತ ಆಯ್ಕೆಯಾಗಿದೆ. ಅದರ ಅವಶ್ಯಕತೆಯನ್ನು ಲೆಕ್ಕಿಸದೆ, ನಿಮ್ಮ ವಿದೇಶಿ ಪ್ರಯಾಣಕ್ಕಾಗಿ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಲು ಅದರ ವ್ಯಾಪಕ ಕವರೇಜ್ ಪ್ರಯೋಜನಗಳಿಗೆ ಹೆಚ್ಚು ಶಿಫಾರಸು ಮಾಡಲಾಗುತ್ತದೆ.

Buy International Travel insurance plan
ವಿಶ್ವಾಸಾರ್ಹ ಇನ್ಶೂರೆನ್ಸ್ ಪ್ಲಾನ್‌ನ ಬೆಂಬಲದೊಂದಿಗೆ ಆತ್ಮವಿಶ್ವಾಸದಿಂದ ವಿದೇಶದಲ್ಲಿ ಪ್ರಯಾಣಿಸಿ!

ನಿಮಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಏಕೆ ಬೇಕು?

Why do You Need International Travel Insurance?

ವಿದೇಶದಲ್ಲಿ ಪ್ರಯಾಣಿಸುವಾಗ, ಈ ಹಿಂದೆ ಯೋಜಿಸಿದ ಪ್ರವಾಸವು ಕಾರ್ಯರೂಪಕ್ಕೆ ಬರದಿದ್ದರೆ ನಿಮ್ಮ ಸಮಯದ ಸದುಪಯೋಗ ಪಡೆಯಲು ಬ್ಯಾಕಪ್ ಪ್ಲಾನ್ ಸಿದ್ಧವಾಗಿ ಇರಿಸಿಕೊಳ್ಳಿ. ಕಳೆದುಹೋದ ಲಗೇಜ್, ವಿಮಾನದ ವಿಳಂಬಗಳು, ಸರಕು ವಿಳಂಬಗಳು ಅಥವಾ ಯಾವುದೇ ಅನಿರೀಕ್ಷಿತ ಘಟನೆಗಳ ವಿರುದ್ಧ ನಷ್ಟಕ್ಕೆ ಸಾಗರೋತ್ತರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಕವರೇಜನ್ನು ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಸುಲಭವಾಗಿ ಸೆಟಲ್ ಮಾಡಲು 1 ಲಕ್ಷ+ ನಗದುರಹಿತ ಆಸ್ಪತ್ರೆಗಳ ನೆಟ್ವರ್ಕ್ ಮತ್ತು 24x7 ಬೆಂಬಲವನ್ನು ಒದಗಿಸುತ್ತದೆ.

ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಾಗಿ ಈ ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಸುರಕ್ಷಿತವಾಗಿರುತ್ತದೆ:

ಎಚ್‌ಡಿಎಫ್‌ಸಿ ಎರ್ಗೋದಿಂದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು

International Travel plan for Individuals by HDFC ERGO

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ - ವೈಯಕ್ತಿಕ

ಒಬ್ಬರೇ ಪ್ರಯಾಣಿಸುವವರಿಗೆ ಮತ್ತು ಅನ್ವೇಷಕರಿಗಾಗಿ

ಒಬ್ಬಂಟಿಯಾಗಿ ಪ್ರವಾಸ ಮಾಡುತ್ತಿರುವಾಗ, ಎಚ್‌ಡಿಎಫ್‌ಸಿ ಎರ್ಗೋ ಎಕ್ಸ್‌ಪ್ಲೋರರ್ ವೈಯಕ್ತಿಕ ಪ್ಲಾನ್ ಬೆಂಬಲದ ಮೂಲಕ ನಿಮ್ಮ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಸಂಬಂಧಿಸಿದಂತೆ ನಿಮ್ಮ ಕುಟುಂಬವು ಶಾಂತಿಯಿಂದ ಇರುವುದನ್ನು ಖಚಿತಪಡಿಸಿಕೊಳ್ಳಿ. ವೈಯಕ್ತಿಕ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ಲಗೇಜ್ ನಷ್ಟ/ವಿಳಂಬಗಳು, ವಿಮಾನ ವಿಳಂಬಗಳು, ಕಳ್ಳತನ ಅಥವಾ ವೈಯಕ್ತಿಕ ಡಾಕ್ಯುಮೆಂಟ್‌ಗಳ ನಷ್ಟ ಮುಂತಾದ ಯಾವುದೇ ಅನಿರೀಕ್ಷಿತ ಘಟನೆಗಳಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ.

International Travel plan for Families by HDFC ERGO

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ - ಕುಟುಂಬ

ಒಟ್ಟಿಗೆ ವಿಮಾನ ಹಾರಾಟ ಮಾಡುವ ಕುಟುಂಬಗಳಿಗೆ

ನೀವು ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸುವಾಗ, ಪ್ರಯಾಣದ ಸಮಯದಲ್ಲಿ ಅವರ ಸುರಕ್ಷತೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀವು ಹೊಂದಿರುತ್ತೀರಿ. ನಿಮ್ಮ ಕುಟುಂಬಕ್ಕಾಗಿ ಇರುವ ಎಚ್‌ಡಿಎಫ್‌ಸಿ ಎರ್ಗೋ ಎಕ್ಸ್‌ಪ್ಲೋರರ್ ಪ್ಲಾನ್‌ಗಳೊಂದಿಗೆ ನಿಮ್ಮ ಕುಟುಂಬದ ರಜಾದಿನವನ್ನು ಸುರಕ್ಷಿತವಾಗಿರಿಸಿ.

International Travel plan for Frequent Flyer by HDFC ERGO

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ - ವಿದ್ಯಾರ್ಥಿ

ದೊಡ್ಡ ಕನಸು ಕಾಣುವ ವಿದ್ಯಾರ್ಥಿಗಳಿಗೆ

ನೀವು ವಿದೇಶದಲ್ಲಿ ಅಧ್ಯಯನ ಉದ್ದೇಶಕ್ಕಾಗಿ ಪ್ರಯಾಣಿಸುತ್ತಿದ್ದಾಗ, ವಿದ್ಯಾರ್ಥಿಗಳಿಗಾಗಿ ಸರಿಯಾದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಕಳ್ಳತನ, ಸಾಮಾನು ನಷ್ಟ/ವಿಳಂಬಗಳು, ವಿಮಾನ ವಿಳಂಬಗಳು ಮುಂತಾದ ಯಾವುದೇ ದುರದೃಷ್ಟಕರ ಘಟನೆಯಿಂದಾಗಿ ಉಂಟಾಗಬಹುದಾದ ಯಾವುದೇ ಅನಿಶ್ಚಿತತೆಯನ್ನು ತಪ್ಪಿಸಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗಾಗಿ ಇರುವ ಎಚ್‌ಡಿಎಫ್‌ಸಿ ಎರ್ಗೋ ಎಕ್ಸ್‌ಪ್ಲೋರರ್ ಪಾಲಿಸಿಯೊಂದಿಗೆ, ನೀವು ವಿದೇಶದಲ್ಲಿ ವಾಸಿಸುವಾಗ ಅಧ್ಯಯನದ ಮೇಲೆ ಸಂಪೂರ್ಣವಾಗಿ ಗಮನ ಹರಿಸಬಹುದು.

International Travel plan for Frequent Fliers

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ - ಆಗಾಗ್ಗೆ ವಿಮಾನಯಾನ ಮಾಡುವರು

ಆಗಾಗ್ಗೆ ವಿಮಾನ ಹಾರಾಟ ಮಾಡುವವರಿಗಾಗಿ

ಒಂದು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ, ನೀವು ಅನೇಕ ಟ್ರಿಪ್‌ಗಳನ್ನು ಸುರಕ್ಷಿತವಾಗಿರಿಸಬಹುದು. ಎಚ್‌ಡಿಎಫ್‌ಸಿ ಎರ್ಗೋ ಎಕ್ಸ್‌ಪ್ಲೋರರ್‌ನೊಂದಿಗೆ ನೀವು ಕೇವಲ ಒಂದು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ಅನೇಕ ಟ್ರಿಪ್‌ಗಳನ್ನು ಶಾಂತಿಯಿಂದ ಆನಂದಿಸಬಹುದು.

International Travel Plan for Senior Citizens

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ - ಹಿರಿಯ ನಾಗರಿಕರು

ಉತ್ಸಾಹಿ ಯುವ ಪ್ರಯಾಣಿಕರಿಗಾಗಿ

ವಿರಾಮದ ರಜಾದಿನವನ್ನು ಕಳೆಯಲು ಹೋಗಲು ಅಥವಾ ಪ್ರೀತಿಪಾತ್ರರನ್ನು ಭೇಟಿ ಮಾಡಲು ಪ್ಲಾನ್ ಮಾಡುತ್ತಿದ್ದರೆ, ಹಿರಿಯ ನಾಗರಿಕರ ಎಚ್‌ಡಿಎಫ್‌ಸಿ ಎರ್ಗೋ ಅನ್ವೇಷಕದೊಂದಿಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಿ, ವಿದೇಶದಲ್ಲಿ ನಿಮ್ಮನ್ನು ರಕ್ಷಿಸಿಕೊಳ್ಳಬಹುದಾದ ಯಾವುದೇ ವೈದ್ಯಕೀಯ ಅಥವಾ ದಂತ ತುರ್ತುಸ್ಥಿತಿಗಳಿಂದ ಕವರ್ ಪಡೆಯಿರಿ.

Buy International Travel insurance plan
ನಿಮ್ಮ ಪಾಲಿಸಿಯು ಅನಿರೀಕ್ಷಿತ ವೆಚ್ಚಗಳನ್ನು ಕವರ್‌ ಮಾಡುವುದರಿಂದ ನೀವು ಪ್ರತಿ ವಿದೇಶಿ ಪ್ರಯಾಣವನ್ನು ಆನಂದಿಸಿ.

ಎಚ್‌ಡಿಎಫ್‌ಸಿ ಎರ್ಗೋ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಫೀಚರ್‌ಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ನಗದುರಹಿತ ಆಸ್ಪತ್ರೆಗಳು ವಿಶ್ವದಾದ್ಯಂತ 1,00,000+ ನಗದುರಹಿತ ಆಸ್ಪತ್ರೆಗಳು.
ಒಳಗೊಂಡಿರುವ ದೇಶಗಳು 25 ಷೆಂಗೆನ್ ದೇಶಗಳು + 18 ಇತರೆ ದೇಶಗಳು.
ವಿಮಾ ಮೊತ್ತ $40K ರಿಂದ $1000K
ಹೆಲ್ತ್ ಚೆಕ್-ಅಪ್ ಅವಶ್ಯಕತೆ ಪ್ರಯಾಣದ ಮೊದಲು ಯಾವುದೇ ಹೆಲ್ತ್ ಚೆಕ್-ಅಪ್ ಅಗತ್ಯವಿಲ್ಲ.
ಕೋವಿಡ್-19 ಕವರೇಜ್ ಕೋವಿಡ್-19 ಆಸ್ಪತ್ರೆ ದಾಖಲಾತಿಗೆ ಕವರೇಜ್.

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಯೋಜನಗಳು

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಹೊಂದುವ ಕೆಲವು ಪ್ರಯೋಜನಗಳು ಇಲ್ಲಿವೆ -

  • ವೈದ್ಯಕೀಯ ವೆಚ್ಚಗಳಿಗೆ ಕವರ್‌ಗಳು: ಅಂತಾರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ ವೈದ್ಯಕೀಯ ವೆಚ್ಚಗಳು ನಿಮ್ಮ ಜೇಬಿಗೆ ಕತ್ತರಿ ಹಾಕಬಹುದು. ಆದರೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಖಚಿತತೆಯೊಂದಿಗೆ ನೀವು ವಿದೇಶಿ ಭೂಮಿಯಲ್ಲಿ ಚಿಕಿತ್ಸೆ ಪಡೆಯಬಹುದು. ಆದರೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಂತಹ ತುರ್ತುಸ್ಥಿತಿಗಳಿಗೆ ನೀವು ಕವರ್ ಆಗುತ್ತೀರಿ ಎಂಬುದನ್ನು ಖಚಿತಪಡಿಸುತ್ತದೆ, ಸರಿಯಾದ ಚಿಕಿತ್ಸೆ ಮತ್ತು ಆರೈಕೆಯ ಖಚಿತತೆಯೊಂದಿಗೆ ನಿಮ್ಮ ಬಹಳಷ್ಟು ಹಣವನ್ನು ಉಳಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಆಸ್ಪತ್ರೆ ಬಿಲ್‌ಗಳ ಮೇಲೆ ನಗದು ವೆಚ್ಚ ಮರಳಿಸುವಿಕೆ ಮತ್ತು ವಿಶ್ವದಾದ್ಯಂತ 1 ಲಕ್ಷ+ ಆಸ್ಪತ್ರೆ ನೆಟ್ವರ್ಕ್‌ಗಳಿಗೆ ಸುಲಭ ಅಕ್ಸೆಸ್ ಒದಗಿಸುತ್ತದೆ.
  • ಬ್ಯಾಗೇಜ್ ಭದ್ರತೆಯ ಭರವಸೆ ನೀಡುತ್ತದೆ: ಚೆಕ್-ಇನ್ ಬ್ಯಾಗೇಜ್ ನಷ್ಟ ಅಥವಾ ವಿಳಂಬಗಳು ನಿಮ್ಮ ಹಾಲಿಡೇ ಪ್ಲಾನ್‌ಗಳನ್ನು ಹಾಳು ಮಾಡಬಹುದು, ಆದರೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ, ಕಳೆದುಹೋದ ಅಥವಾ ವಿಳಂಬವಾದ ಲಗೇಜ್‌ಗಳಂತಹ ಅಗತ್ಯ ವಸ್ತುಗಳಿಗೆ ನೀವು ಕವರ್ ಪಡೆಯುತ್ತೀರಿ. ದುರದೃಷ್ಟವಶಾತ್, ಲಗೇಜ್‌ನ ಈ ಸಮಸ್ಯೆಗಳು ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ತುಂಬಾ ಸಾಮಾನ್ಯವಾಗಿವೆ. ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ, ನೀವು ಕಳೆದುಹೋದ ಅಥವಾ ವಿಳಂಬವಾದ ಲಗೇಜ್ ವಿರುದ್ಧ ಸುರಕ್ಷಿತರಾಗಿರುತ್ತೀರಿ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ತಡೆರಹಿತವಾಗಿ ಆನಂದಿಸಬಹುದು.
  • ಅನಿರೀಕ್ಷಿತ ಪರಿಸ್ಥಿತಿಗಳ ವಿರುದ್ಧ ಕವರ್‌ ನೀಡುತ್ತದೆ: ರಜಾದಿನಗಳು ನಗು ಮತ್ತು ಆನಂದದ ಸಮಯವಾಗಿದ್ದರೂ, ಜೀವನವು ಕೆಲವೊಮ್ಮೆ ಕಠಿಣವಾಗಿರಬಹುದು. ವಿಮಾನದ ಹೈಜಾಕ್‌ಗಳು, ಥರ್ಡ್ ಪಾರ್ಟಿ ಆಸ್ತಿ ಹಾನಿ ನಿಮ್ಮ ರಜಾದಿನದ ಖುಷಿಯನ್ನು ಕಳೆಯಬಹುದು. ಆದರೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಂತಹ ಸಮಯದಲ್ಲಿ ನಿಮ್ಮ ಒತ್ತಡವನ್ನು ಕಡಿಮೆ ಮಾಡಬಹುದು. ಅಂತಹ ಘಟನೆಗಳಿಂದಲೂ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮನ್ನು ಸುರಕ್ಷಿತಗೊಳಿಸುತ್ತದೆ.
  • ನಿಮ್ಮ ಪ್ರಯಾಣದ ಬಜೆಟ್ ಮೀರದಂತೆ ಖಚಿತಪಡಿಸುತ್ತದೆ: ವೈದ್ಯಕೀಯ ಅಥವಾ ದಂತ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ನಿಮ್ಮ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಮೀರಬಹುದು. ಕೆಲವೊಮ್ಮೆ ನಿಮ್ಮ ವೈದ್ಯಕೀಯ ಚಿಕಿತ್ಸೆಯನ್ನು ಪೂರ್ಣಗೊಳಿಸಲು ನೀವು ನಿಮ್ಮ ಉಳಿದುಕೊಳ್ಳುವಿಕೆಯನ್ನು ವಿಸ್ತರಿಸಬೇಕಾಗಬಹುದು, ಅದು ನಿಮ್ಮ ವೆಚ್ಚಗಳನ್ನು ಮೀರಿಸಬಹುದು. ಆದರೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಆ ಹೆಚ್ಚುವರಿ ಹೋಟೆಲ್ ವೆಚ್ಚಗಳನ್ನು ಕೂಡ ಕವರ್ ಮಾಡುತ್ತದೆ.
  • ನಿರಂತರ ಸಹಾಯ: ವಿದೇಶದಲ್ಲಿ ಪಾಸ್‌ಪೋರ್ಟ್ ದರೋಡೆ, ಕಳ್ಳತನ ಅಥವಾ ನಷ್ಟ ಕೇಳಲಾಗದ ಸುದ್ದಿಯಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೊಂದುವುದು ಯಾವುದೇ ಹಣಕಾಸಿನ ನಷ್ಟಗಳ ವಿರುದ್ಧ ನಿಮ್ಮನ್ನು ರಕ್ಷಿಸುವ ಮೂಲಕ ಮನಸ್ಸಿನ ಶಾಂತಿಯನ್ನು ಒದಗಿಸಬಹುದು
Buy International Travel insurance plan
ಸರಿಯಾದ ಟ್ರಾವೆಲ್ ಪ್ಲಾನ್‌ನೊಂದಿಗೆ ಗಡಿಗಳಾದ್ಯಂತ ಚಿಂತೆ ರಹಿತವಾಗಿ ಪ್ರಯಾಣ ಮಾಡಿ.

ಎಚ್‌ಡಿಎಫ್‌ಸಿ ಎರ್ಗೋ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ?

Emergency Medical Expenses

ತುರ್ತು ವೈದ್ಯಕೀಯ ವೆಚ್ಚಗಳು

ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.

Emergency dental expenses coverage by HDFC ERGO Travel Insurance

ದಂತ ಚಿಕಿತ್ಸೆಯ ವೆಚ್ಚಗಳು

ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Personal Accident

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.

Personal Accident : Common Carrier

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.

Hospital cash - accident & illness

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.

Flight Delay coverage by HDFC ERGO Travel Insurance

ವಿಮಾನ ವಿಳಂಬ ಮತ್ತು ರದ್ದತಿ

ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

Trip Delay & Cancellation

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Loss Of Baggage & Personal Documents by HDFC ERGO Travel Insurance

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ

ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.

Trip Curtailment

ಟ್ರಿಪ್ ಮೊಟಕುಗೊಳಿಸುವಿಕೆ

ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ರಿಯಂಬ್ರಸ್ಮೆಂಟ್ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ.

Personal Liability coverage by HDFC ERGO Travel Insurance

ವೈಯಕ್ತಿಕ ಹೊಣೆಗಾರಿಕೆ

ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Trip Curtailment

ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ತುರ್ತು ಹೋಟೆಲ್ ವಸತಿ

ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ

Missed Flight Connection flight

ತಪ್ಪಿಹೋದ ಫ್ಲೈಟ್ ಕನೆಕ್ಷನ್

ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ.

Loss of Passport & International driving license :

ಹೈಜಾಕ್ ಅಪಾಯದ ಭತ್ಯೆ

ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.

Hospital cash - accident & illness

ತುರ್ತು ನಗದು ಸಹಾಯ ಸೇವೆ

ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Loss Of Checked-In Baggage by HDFC ERGO Travel Insurance

ಚೆಕ್-ಇನ್ ಬ್ಯಾಗೇಜ್ ನಷ್ಟ

ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Delay Of Checked-In Baggage by HDFC ERGO Travel Insurance

ಚೆಕ್-ಇನ್ ಬ್ಯಾಗೇಜ್ ವಿಳಂಬ

ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.

Loss of Passport & International driving license :

ಬ್ಯಾಗೇಜ್ ಮತ್ತು ಅದರ ವಸ್ತುಗಳ ಕಳ್ಳತನ

ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.

ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಏನನ್ನು ಕವರ್ ಮಾಡುವುದಿಲ್ಲ?

Breach of Law

ಕಾನೂನು ಉಲ್ಲಂಘನೆ

ಯುದ್ಧ ಅಥವಾ ಕಾನೂನಿನ ಉಲ್ಲಂಘನೆಯಿಂದಾಗಿ ಉಂಟಾದ ಅಸ್ವಸ್ಥತೆ ಅಥವಾ ಆರೋಗ್ಯ ಸಮಸ್ಯೆಗಳನ್ನು ಪ್ಲಾನ್ ಕವರ್ ಮಾಡುವುದಿಲ್ಲ.

Consumption Of Intoxicant Substances not covered by HDFC ERGO Travel Insurance

ಮಾದಕ ಪದಾರ್ಥಗಳ ಬಳಕೆ

ಯಾವುದೇ ಪ್ರಕಾರದ ಅಮಲಿನ ಪದಾರ್ಥಗಳು ಅಥವಾ ನಿಷೇಧಿತ ಪದಾರ್ಥಗಳನ್ನು ಸೇವಿಸಿದರೆ, ಪಾಲಿಸಿಯು ಯಾವುದೇ ಕ್ಲೇಮ್‌ಗಳನ್ನು ಸ್ವೀಕರಿಸುವುದಿಲ್ಲ.

Pre Existing Diseases not covered by HDFC ERGO Travel Insurance

ಮೊದಲೇ ಇದ್ದ ಕಾಯಿಲೆಗಳು

ಇನ್ಶೂರ್ಡ್ ಪ್ರಯಾಣ ಕೈಗೊಳ್ಳುವ ಮೊದಲು ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೆ ಹಾಗೂ ಹಾಗೆ ಮೊದಲೇ ಇದ್ದ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದಿದ್ದರೆ, ಆ ಖರ್ಚುಗಳನ್ನು ಪಾಲಿಸಿ ಕವರ್ ಮಾಡುವುದಿಲ್ಲ.

Cosmetic And Obesity Treatment not covered by HDFC ERGO Travel Insurance

ಕಾಸ್ಮೆಟಿಕ್ ಮತ್ತು ಬೊಜ್ಜಿನ ಚಿಕಿತ್ಸೆ

ಇನ್ಶೂರ್ಡ್ ಪ್ರಯಾಣದ ಸಮಯದಲ್ಲಿ ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಮಾಡಿಸಿಕೊಳ್ಳುವ ಆಯ್ಕೆ ಮಾಡಿದರೆ, ಅದರ ಖರ್ಚುಗಳು ಕವರ್ ಆಗುವುದಿಲ್ಲ.

Self Inflicted Injury not covered by HDFC ERGO Travel Insurance

ತಾವೇ ಮಾಡಿಕೊಂಡ ಗಾಯಗಳು

ತಾವಾಗಿಯೇ ಮಾಡಿಕೊಂಡ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾದರೆ, ಆ ವೈದ್ಯಕೀಯ ಖರ್ಚುಗಳನ್ನು ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಕವರ್ ಮಾಡುವುದಿಲ್ಲ.

Buy International Travel insurance plan
ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ವಿದೇಶಿ ಪ್ರಯಾಣವನ್ನು ಚಿಂತೆ-ಮುಕ್ತಗೊಳಿಸಿ!

ನಿಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಯಾವ ಅಂಶಗಳು ಪರಿಣಾಮ ಬೀರುತ್ತವೆ?

ನಿಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನೇಕ ಅಂಶಗಳನ್ನು ಅವಲಂಬಿಸಿರುತ್ತದೆ, ಅವುಗಳೆಂದರೆ:

1. ನಿಮ್ಮ ಪ್ರಯಾಣದ ತಾಣ: ಪ್ರಯಾಣದ ತಾಣವು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರೀಮಿಯಂ ಅನ್ನು ಪ್ರಭಾವಿಸುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಉದಾಹರಣೆಗೆ, ನೀವು ಸುರಕ್ಷಿತ ದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಪ್ರಯಾಣವನ್ನು ಕಡಿಮೆ ಅಪಾಯವೆಂದು ಪರಿಗಣಿಸಲಾಗುತ್ತದೆ ಮತ್ತು ವಿಧಿಸಲಾದ ಪ್ರೀಮಿಯಂ ಕೂಡ ಕಡಿಮೆ ಇರುತ್ತದೆ. ಅದೇ ರೀತಿಯಲ್ಲಿ, ಹೆಚ್ಚಿನ ಅಪಾಯವನ್ನು ಪರಿಗಣಿಸುವ ದೇಶಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂಗಳು ಹೆಚ್ಚಾಗಿರುತ್ತವೆ.

2. ಒಟ್ಟು ಪ್ರಯಾಣಿಕರು ಮತ್ತು ಅವರ ವಯಸ್ಸು: ಒಟ್ಟು ಪ್ರಯಾಣಿಕರ ಸಂಖ್ಯೆಯು ಕೂಡಾ ನಿಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚವು ಗ್ರೂಪ್ ಟ್ರಾವೆಲ್ ಇನ್ಶೂರೆನ್ಸ್‌ಗಿಂತ ಕಡಿಮೆ ಇದೆ. ಅಲ್ಲದೆ, ಪ್ರಯಾಣಿಕರ ವಯಸ್ಸು ಪಾಲಿಸಿ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಹಿರಿಯ ವಯಸ್ಸಿನವರು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುವುದರಿಂದ, ಅವರ ಟ್ರಾವೆಲ್ ಇನ್ಶೂರೆನ್ಸ್ ಹೆಚ್ಚಿನ ಪ್ರೀಮಿಯಂ ಹೊಂದಿರಬಹುದು.

3. ಮುಂಚಿತ-ಅಸ್ತಿತ್ವದಲ್ಲಿರುವ ಆರೋಗ್ಯ ಪರಿಸ್ಥಿತಿಗಳು: ವೈದ್ಯಕೀಯ ಇತಿಹಾಸ ಮತ್ತು ವ್ಯಕ್ತಿಗಳ ಅಸ್ತಿತ್ವದಲ್ಲಿರುವ ಅನಾರೋಗ್ಯ ಪರಿಸ್ಥಿತಿಯು ಕೂಡಾ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ, ಹೆಚ್ಚಿನ ವಿಮಾದಾತರು ಮುಂಚಿತ-ಅಸ್ತಿತ್ವದಲ್ಲಿರುವ ರೋಗಗಳನ್ನು ಕವರ್ ಮಾಡುವುದಿಲ್ಲ ಮತ್ತು ಕವರ್ ಮಾಡುವವರು ಕೂಡಾ ಹೆಚ್ಚಿನ ಅಪಾಯದಿಂದಾಗಿ ಹೆಚ್ಚಿನ ಪ್ರೀಮಿಯಂ ವಿಧಿಸುತ್ತಾರೆ.

4. ಆಯ್ಕೆ ಮಾಡಿದ ಇನ್ಶೂರೆನ್ಸ್ ಪ್ಲಾನ್: ವಿಮಾದಾತರು ಅನೇಕ ರೀತಿಯ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತಾರೆ. ನೀವು ಹುಡುಕುತ್ತಿರುವ ಪ್ರಯೋಜನಗಳ ಆಧಾರದ ಮೇಲೆ ನೀವು ನಿಮ್ಮ ಆಯ್ಕೆಯನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ಹೆಚ್ಚಿನ ಪ್ರಯೋಜನಗಳನ್ನು ನೀಡುವ ಪ್ಲಾನ್‌ಗಳಿಗೆ ನೀವು ಹೆಚ್ಚಿನ ಪ್ರೀಮಿಯಂ ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.

5. ಪ್ರಯಾಣದ ಅವಧಿ: ಒಟ್ಟು ಪ್ರಯಾಣದ ಅವಧಿಯು ನಿಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪ್ರಭಾವ ಬೀರುವಲ್ಲಿ ಗಣನೀಯ ಪಾತ್ರವನ್ನು ವಹಿಸುತ್ತದೆ. ನಿಮ್ಮ ಪ್ರಯಾಣದ ಅವಧಿ ಹೆಚ್ಚಿನ ದಿನಗಳದ್ದಾಗಿದ್ದರೆ, ದುರದೃಷ್ಟಕರ ಘಟನೆಯನ್ನು ಎದುರಿಸುವ ಹೆಚ್ಚಿನ ಅಪಾಯ ಇರುತ್ತದೆ. ಸರಳವಾಗಿ ಹೇಳುವುದಾದರೆ, ವಿಮಾದಾತರು ದೀರ್ಘ ಪ್ರಯಾಣಗಳಿಗೆ ಅಧಿಕ ಟ್ರಾವೆಲ್ ಇನ್ಶೂರೆನ್ಸ್‌ ಪ್ರೀಮಿಯಂ ವಿಧಿಸುತ್ತಾರೆ.

6. ಆಯ್ದ ವಿಮಾ ಮೊತ್ತ: ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ, ನಿಮ್ಮ ಅವಶ್ಯಕತೆಗಳನ್ನು ಆಧರಿಸಿ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ನೀವು $40k ಮತ್ತು $1000k ನಡುವೆ ಕವರೇಜ್ ಆಯ್ಕೆ ಮಾಡಬಹುದು. ಹೆಚ್ಚಿನ ವಿಮಾ ಮೊತ್ತ ಎಂದರೆ ಉತ್ತಮ ಕವರೇಜ್ ಹಾಗೂ ಹೆಚ್ಚಿನ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂ ಎಂದರ್ಥ.

ನಿಮ್ಮ ಅಂತರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

Trip Duration and Travel Insurance

ನೀವು ಪ್ರಯಾಣಿಸುತ್ತಿರುವ ದೇಶ

ನೀವು ಸುರಕ್ಷಿತ ಅಥವಾ ಆರ್ಥಿಕವಾಗಿ ಹೆಚ್ಚು ಸ್ಥಿರವಾದ ದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆಯಾಗುತ್ತದೆ. ಅಲ್ಲದೆ, ತಲುಪುವ ಸ್ಥಳವು ನಿಮ್ಮ ಮನೆಯಿಂದ ಹೆಚ್ಚು ದೂರ ಇದ್ದರೆ, ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ.

Trip Destination & Travel Insurance

ನಿಮ್ಮ ಪ್ರಯಾಣದ ಅವಧಿ

ನೀವು ಹೆಚ್ಚು ಸಮಯದಿಂದ ದೂರವಿದ್ದರೆ, ನೀವು ಅನಾರೋಗ್ಯಕ್ಕೆ ಒಳಗಾಗುವ ಅಥವಾ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ನಿಮ್ಮ ಪ್ರಯಾಣದ ಅವಧಿಯು ಹೆಚ್ಚಾಗಿದ್ದರೆ, ಪ್ರೀಮಿಯಂ ಅಧಿಕವಾಗಿರುತ್ತದೆ.

Age of the Traveller & Travel Insurance

ಪ್ರಯಾಣಿಕ(ರ) ವಯಸ್ಸು

ಪ್ರೀಮಿಯಂ ನಿರ್ಧರಿಸುವಲ್ಲಿ ವಿಮಾದಾರರ ವಯಸ್ಸು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿರಿಯ ನಾಗರಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂಗಳು ಸ್ವಲ್ಪ ಹೆಚ್ಚಾಗಿರಬಹುದು ಏಕೆಂದರೆ ಅವರ ಅನಾರೋಗ್ಯ ಮತ್ತು ಗಾಯದ ಅಪಾಯವು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ.

Renewal or Extention Options in Travel Insurance

ನೀವು ಆಯ್ಕೆ ಮಾಡಿದ ಕವರೇಜ್ ವ್ಯಾಪ್ತಿ

ಇನ್ಶೂರೆನ್ಸ್ ಮಾಡಿದ ವ್ಯಕ್ತಿಯು ತಮ್ಮ ಪಾಲಿಸಿಯ ಪ್ರೀಮಿಯಂ ಅನ್ನು ನಿರ್ಧರಿಸುವ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ವಿಧ. ಹೆಚ್ಚು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಹೆಚ್ಚಿನ ಪ್ರಾಥಮಿಕ ಕವರೇಜ್‌ಗಿಂತ ನೈಸರ್ಗಿಕವಾಗಿ ಹೆಚ್ಚಿನ ವೆಚ್ಚವನ್ನು ಹೊಂದಿರುತ್ತದೆ.

Buy International Travel insurance plan
ವಿದೇಶದಲ್ಲಿ ಹಠಾತ್ ತುರ್ತುಸ್ಥಿತಿಗಳಿಗೆ ತ್ವರಿತ ಸಹಾಯದ ಅಗತ್ಯವಿರುವುದರಿಂದ, ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಸಿದ್ಧರಾಗಿರಿ!

ಸಾಗರೋತ್ತರ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಖರೀದಿಸಿ

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ಒಂದು ಕ್ಲಿಕ್ ದೂರದಲ್ಲಿದೆ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮನೆ ಅಥವಾ ಕಚೇರಿಯಿಂದ ಆರಾಮದಿಂದ ಮಾಡಬಹುದು. ಆದ್ದರಿಂದ, ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಆನ್ಲೈನ್ ಖರೀದಿಯು ಹೆಚ್ಚಾಗುತ್ತಿದೆ ಮತ್ತು ಪ್ರತಿ ದಿನವೂ ಬೆಳೆಯುತ್ತಿದೆ.

• ನಮ್ಮ ಪಾಲಿಸಿಯನ್ನು ಖರೀದಿಸಲು ಇಲ್ಲಿ ಲಿಂಕ್ ಕ್ಲಿಕ್ ಮಾಡಿ, ಅಥವಾ ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ವೆಬ್‌ಪೇಜಿಗೆ ಭೇಟಿ ನೀಡಿ.

• ಪ್ರಯಾಣಿಕರ ವಿವರಗಳು, ತಲುಪುವ ಮಾಹಿತಿ ಮತ್ತು ಪ್ರಯಾಣದ ಆರಂಭ ಮತ್ತು ಕೊನೆಯ ದಿನಾಂಕಗಳನ್ನು ನಮೂದಿಸಿ.

• ನಮ್ಮ ಮೂರು ರೂಪಿಸಲಾದ ಆಯ್ಕೆಗಳಿಂದ ನಿಮ್ಮ ಆದ್ಯತೆಯ ಪ್ಲಾನ್ ಅನ್ನು ಆಯ್ಕೆಮಾಡಿ.

• ನಿಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಿ.

• ಪ್ರಯಾಣಿಕರ ಬಗ್ಗೆ ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್ಲೈನ್ ಪಾವತಿ ವಿಧಾನಗಳನ್ನು ಬಳಸಿ ಪಾವತಿಸಲು ಮುಂದುವರಿಯಿರಿ.

• ಅದನ್ನು ಮಾಡಲು ಉಳಿದಿರುವುದು ಏನೆಂದರೆ- ನಿಮ್ಮ ಪಾಲಿಸಿಯನ್ನು ತಕ್ಷಣವೇ ಡೌನ್ಲೋಡ್ ಮಾಡಿ!

3 ಸುಲಭ ಹಂತಗಳಲ್ಲಿ ನಿಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂ ತಿಳಿಯಿರಿ

know your Travel insurance premium
Know Your Travel Insurance Premium with HDFC ERGO Step 1

ಹಂತ 1

ನಿಮ್ಮ ಪ್ರಯಾಣದ ವಿವರಗಳನ್ನು ಸೇರಿಸಿ

Phone Frame
Know Your Travel Insurance Premium with HDFC ERGO Step 2

ಹಂತ 2

ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ

slider-right
slider-left
Buy International Travel insurance plan
ಸಮಗ್ರ ಟ್ರಾವೆಲ್ ಪಾಲಿಸಿಯೊಂದಿಗೆ ನಿಮ್ಮ ಅಂತಾರಾಷ್ಟ್ರೀಯ ಪ್ರಯಾಣವನ್ನು ಸುರಕ್ಷಿತಗೊಳಿಸಿ!

  ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್ ಮಾಡುವುದುಹೇಗೆ?

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ನೇರವಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನಗದುರಹಿತವಾಗಿ ಹಾಗೂ ವೆಚ್ಚ ತುಂಬಿಕೊಡುವ ಆಧಾರದ ಮೇಲೆ ಕ್ಲೈಮ್ ಮಾಡಬಹುದು.

Intimation
1

ಸೂಚನೆ

travelclaims@hdfcergo.com ಗೆ ಬರೆದು ಕ್ಲೈಮ್ ಬಗ್ಗೆ ತಿಳಿಸಿ ಮತ್ತು TPA ನಿಂದ ನಮ್ಮ ನೆಟ್ವರ್ಕ್‌ಗೆ ಒಳಪಡುವ ಆಸ್ಪತ್ರೆಗಳ ಪಟ್ಟಿ ಪಡೆಯಿರಿ.

Checklist
2

ಚೆಕ್‌ಲಿಸ್ಟ್

Medical.services@allianz.com ನಗದುರಹಿತ ಕ್ಲೇಮ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುತ್ತದೆ.

Mail Documents
3

ಡಾಕ್ಯುಮೆಂಟ್‌ಗಳನ್ನು ಮೇಲ್ ಮಾಡಿ

ಇಲ್ಲಿಂದ ಡಿಜಿಟಲ್ ಕ್ಲೈಮ್ ಫಾರ್ಮ್ ಡೌನ್‌ಲೋಡ್ ಮಾಡಿಕೊಳ್ಳಿ

Processing
4

ಪ್ರಕ್ರಿಯೆಗೊಳ್ಳುತ್ತಿದೆ

ROMIF ನೊಂದಿಗೆ ಡಿಜಿಟಲ್ ಕ್ಲೈಮ್ ಫಾರ್ಮ್ ಅನ್ನು medical.services@allianz.comಗೆ ಕಳುಹಿಸಿ.

Hospitalization
1

ಸೂಚನೆ

ಕ್ಲೈಮ್ ಬಗ್ಗೆ travelclaims@hdfcergo.comಗೆ ತಿಳಿಸಿ ಅಥವಾ ಗ್ಲೋಬಲ್ ಟೋಲ್-ಫ್ರೀ ನಂಬರ್: +800 08250825 ಗೆ ಕರೆ ಮಾಡಿ

claim registration
2

ಚೆಕ್‌ಲಿಸ್ಟ್

Travelclaims@hdfcergo.comಮರುಪಾವತಿಗಾಗಿ ಅಗತ್ಯ ಚೆಕ್‌ಲಿಸ್ಟ್/ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುತ್ತದೆ

claim verifcation
3

ಡಾಕ್ಯುಮೆಂಟ್‌ಗಳನ್ನು ಮೇಲ್ ಮಾಡಿ

ಕ್ಲೈಮ್ ಫಾರ್ಮ್ ಜೊತೆಗೆ ಕ್ಲೈಮ್ ಡಾಕ್ಯುಮೆಂಟ್‌ಗಳನ್ನುtravelclaims@hdfcergo.com ಅಥವಾ processing@hdfergo.com ಗೆ ಕಳಿಸಬೇಕು

Processing
3

ಪ್ರಕ್ರಿಯೆಗೊಳ್ಳುತ್ತಿದೆ

ಆಯಾ ಕ್ಲೈಮ್ ವ್ಯವಸ್ಥೆಯಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ಕಾರ್ಯನಿರ್ವಾಹಕರು ಕ್ಲೈಮ್ ನೋಂದಣಿ ಮಾಡಿಕೊಳ್ಳುತ್ತಾರೆ.

ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್ ಭರ್ತಿ ಮಾಡುವಾಗ, ಕ್ಲೈಮ್ ಪ್ರಕ್ರಿಯೆಯ ಭಾಗವಾಗಿ ನೀವು ಕೆಲವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು. ಸಲ್ಲಿಸಬೇಕಾದ ನಿಖರವಾದ ಡಾಕ್ಯುಮೆಂಟ್‌ಗಳು ಫೈಲ್ ಮಾಡಲಾದ ಕ್ಲೈಮ್ ಪ್ರಕಾರ ಅಥವಾ ಘಟನೆಯ ಸ್ವರೂಪವನ್ನು ಅವಲಂಬಿಸಿರುತ್ತವೆ, ಅವುಗಳು ಸಾಮಾನ್ಯವಾಗಿ ಇವುಗಳನ್ನು ಒಳಗೊಂಡಿವೆ:

• ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ನಂಬರ್

• ಅನಾರೋಗ್ಯ ಅಥವಾ ಗಾಯದ ಸ್ವರೂಪ ಮತ್ತು ಅದರ ವ್ಯಾಪ್ತಿಯನ್ನು ತೋರಿಸುವ ಮತ್ತು ಸ್ಪಷ್ಟ ಡಯಾಗ್ನಸಿಸ್ ಚಿತ್ರಣ ನೀಡುವ ಆರಂಭಿಕ ವೈದ್ಯಕೀಯ ವರದಿ

• ID ಮತ್ತು ವಯಸ್ಸಿನ ಪುರಾವೆ

• ಪ್ರಿಸ್ಕ್ರಿಪ್ಷನ್‌ಗಳು, ಆಸ್ಪತ್ರೆ ವೆಚ್ಚಗಳು, ರಿಪೋರ್ಟ್‌ಗಳು ಇತ್ಯಾದಿಗಳಿಗೆ ಸಂಬಂಧಿಸಿದ ಎಲ್ಲಾ ಬಿಲ್‌ಗಳು ಮತ್ತು ಇನ್ವಾಯ್ಸ್‌ಗಳು.

• ಅಧಿಕೃತ ಮರಣ ಪ್ರಮಾಣಪತ್ರ (ಮರಣದ ಸಂದರ್ಭದಲ್ಲಿ)

• ಕಾನೂನು ಉತ್ತರಾಧಿಕಾರಿಯ ಪುರಾವೆ (ಅನ್ವಯವಾದರೆ)

• ಥರ್ಡ್ ಪಾರ್ಟಿ ಸಂಪರ್ಕ ವಿವರಗಳು (ಥರ್ಡ್ ಪಾರ್ಟಿ ಹಾನಿಯ ಸಂದರ್ಭದಲ್ಲಿ)

• ಹೆಚ್ಚುವರಿ ಡಾಕ್ಯುಮೆಂಟೇಶನ್ (ಕ್ಲೈಮ್ ಅಧಿಕಾರಿ ಸೂಚಿಸಿದಂತೆ).

ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆದ ಅನಾರೋಗ್ಯದ ಸಂದರ್ಭದಲ್ಲಿ, ನೀವು ಇವುಗಳನ್ನು ಸಲ್ಲಿಸಬೇಕು:

• ಅನಾರೋಗ್ಯದ ಲಕ್ಷಣಗಳು ಆರಂಭವಾದ ದಿನಾಂಕ

• ಚಿಕಿತ್ಸೆಗಾಗಿ ವೈದ್ಯರನ್ನು ಸಮಾಲೋಚಿಸಿದ ದಿನಾಂಕ

• ವೈದ್ಯರ ಸಂಪರ್ಕ ಮಾಹಿತಿ.

ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆದ ಆಕ್ಸಿಡೆಂಟ್‌ನ ಸಂದರ್ಭದಲ್ಲಿ, ನೀವು ಇವುಗಳನ್ನು ಸಲ್ಲಿಸಬೇಕು:

• ಆಕ್ಸಿಡೆಂಟ್‌ನ ವಿವರವಾದ ವರದಿ ಮತ್ತು ಸಾಕ್ಷಿ(ಗಳ) ಮಾಹಿತಿ (ಯಾವುದಾದರೂ ಇದ್ದರೆ)

• ಸಂಬಂಧಿತ ಗಾಯ/ಗಾಯಗಳಿಗಾಗಿ ವೈದ್ಯರನ್ನು ಸಂಪರ್ಕಿಸಿದ ದಿನಾಂಕ

• ಆಕ್ಸಿಡೆಂಟ್‌ಗೆ ಸಂಬಂಧಿಸಿದ ಪೊಲೀಸ್ ವರದಿಯ ಕಾಪಿ (ಯಾವುದಾದರೂ ಇದ್ದರೆ)

• ವೈದ್ಯರ ಸಂಪರ್ಕ ಮಾಹಿತಿ.

Buy International Travel insurance plan
ವಿದೇಶದಲ್ಲಿ ಪಾಸ್‌ಪೋರ್ಟ್ ಕಳೆದುಕೊಳ್ಳುವುದು ಚಿಂತೆಗೀಡು ಮಾಡುವ ವಿಷಯ, ವಿಶ್ವಾಸಾರ್ಹ ಟ್ರಾವೆಲ್ ಪಾಲಿಸಿಯೊಂದಿಗೆ ಅದನ್ನು ರಕ್ಷಿಸಿ.

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ದೇಶಗಳು

ಕಡ್ಡಾಯವಾಗಿ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ಕೆಲವು ದೇಶಗಳು ಹೀಗಿವೆ: ಇದು ಅಂತಹ ದೇಶಗಳನ್ನು ಸೂಚಿಸುವ ಪಟ್ಟಿಯಷ್ಟೇ. ಹೊರಡುವ ಮೊದಲು ಪ್ರತ್ಯೇಕವಾಗಿ ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದು ಒಳ್ಳೆಯದು.

ಮೂಲ: VisaGuide.World

ಹೆಚ್ಚಾಗಿ ಭೇಟಿ ನೀಡಿದ ದೇಶಗಳಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್

ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ

Travel Insurance Fact by HDFC ERGO
ಅನೇಕ ವಿದೇಶಗಳ ನಿಯಮಗಳ ಪ್ರಕಾರ ನೀವು ಆ ದೇಶದ ಗಡಿ ಪ್ರವೇಶಿಸುವ ಮೊದಲೇ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಹೊಂದುವ ಅಗತ್ಯವಿದೆ.

  ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಕೋವಿಡ್-19 ಅನ್ನು ಕವರ್ ಮಾಡುತ್ತದೆಯೇ?

Travel Insurance With COVID 19 Cover by HDFC ERGO
ಹೌದು, ಇದು ನೀಡುತ್ತದೆ!

ಪ್ರಪಂಚವು ಸಾಮಾನ್ಯ ಸ್ಥಿತಿಗೆ ವಾಪಸಾದಾಗ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮತ್ತೆ ಸಜ್ಜಾಗುತ್ತಿರುವಾಗ, ಕೋವಿಡ್-19 ಭಯವು ನಮ್ಮನ್ನು ಇನ್ನೂ ದೊಡ್ಡದಾಗಿ ಕಾಡುತ್ತಿದೆ. ಇತ್ತೀಚೆಗೆ ಹೊಸ ರೂಪಾಂತರದ ಹೊರಹೊಮ್ಮುವಿಕೆ - ಆರ್ಕ್ಟರಸ್ ಕೋವಿಡ್ ರೂಪಾಂತರಿ - ಸಾರ್ವಜನಿಕ ಮತ್ತು ಆರೋಗ್ಯ ತಜ್ಞರಲ್ಲಿ ಹೆಚ್ಚಿನ ಕಳಕಳಿಯನ್ನು ಉಂಟುಮಾಡಿದೆ. ಹೆಚ್ಚಿನ ದೇಶಗಳು ಕೋವಿಡ್-19 ಗೆ ಸಂಬಂಧಿಸಿದ ತಮ್ಮ ಟ್ರಾವೆಲ್ ಪ್ರೋಟೋಕಾಲ್‌ಗಳನ್ನು ಸಡಿಲಗೊಳಿಸಿದರೂ, ಮುನ್ನೆಚ್ಚರಿಕೆ ಮತ್ತು ಎಚ್ಚರಿಕೆಯು ಇನ್ನೊಂದು ಅಲೆಯನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. ಸವಾಲಿನ ಅಂಶವೆಂದರೆ ಹೊಸ ರೂಪಾಂತರದ ಯಾವುದೇ ಹೊರಹೊಮ್ಮುವಿಕೆಯು ಹಿಂದಿನ ತಳಿಗಳಿಗಿಂತ ಹೆಚ್ಚು ಹರಡುತ್ತದೆ ಎಂಬ ವರದಿಯಿದೆ. ಈ ಅನಿಶ್ಚಿತತೆಯ ಅರ್ಥವೇನೆಂದರೆ, ನಾವು ಏನನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಮತ್ತು ಸೋಂಕು ಪ್ರಸರಣವನ್ನು ತಡೆಯಲು ಮೂಲಭೂತ ಮುನ್ನೆಚ್ಚರಿಕೆಗಳನ್ನು ಅನುಸರಿಸಲೇಬೇಕು. ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಮತ್ತು ಕಡ್ಡಾಯ ಸ್ವಚ್ಛತೆಯು ಈಗಲೂ ನಮ್ಮ ಆದ್ಯತೆಯಾಗಿದೆ.
ಹೊಸ ರೂಪಾಂತರವು ತನ್ನ ಉಪಸ್ಥಿತಿಯನ್ನು ಅನುಭವಕ್ಕೆ ತಂದಾಗಲೆಲ್ಲಾ, ಕೋವಿಡ್ ಪ್ರಕರಣಗಳು ಭಾರತ ಮತ್ತು ವಿದೇಶದಲ್ಲಿ ವೇಗವಾಗಿ ಹೆಚ್ಚಾಗುತ್ತಾ ವ್ಯಾಕ್ಸಿನೇಶನ್‌ಗಳು ಮತ್ತು ಬೂಸ್ಟರ್ ಡೋಸ್‌ಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ನೀವು ಇದುವರೆಗೂ ವ್ಯಾಕ್ಸಿನ್ ಪಡೆಯದಿದ್ದರೆ, ನಿಮಗೆ ತಗಲುವ ಸಾಧ್ಯತೆಯು ಹೆಚ್ಚಾಗಿದೆ. ನಿಮ್ಮ ಬೂಸ್ಟರ್ ಡೋಸ್‌ಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಲು ನೆನಪಿಡಿ. ನೀವು ಅಗತ್ಯ ಡೋಸ್‌ಗಳನ್ನು ತೆಗೆದುಕೊಳ್ಳದಿದ್ದರೆ ಅಂತಾರಾಷ್ಟ್ರೀಯ ಭೇಟಿಗಳಿಗೆ ಅಡಚಣೆ ಉಂಟಾಗಬಹುದು, ಏಕೆಂದರೆ ಇದು ವಿದೇಶಿ ಪ್ರಯಾಣದ ಅಗತ್ಯತೆಗಳಲ್ಲಿ ಒಂದಾಗಿದೆ. ಕೆಮ್ಮು, ಜ್ವರ, ಆಯಾಸ, ವಾಸನೆ ಅಥವಾ ರುಚಿ ನಷ್ಟ ಮತ್ತು ಉಸಿರಾಟದ ತೊಂದರೆ ಮುಂತಾದ ಲಕ್ಷಣಗಳ ಬಗ್ಗೆ ಎಚ್ಚರಿಕೆಯಿಂದಿರಿ. ಇವು ಕಳಕಳಿಯ ವಿಷಯವಾಗಿರಬಹುದು, ಅದರಲ್ಲೂ ವಿಶೇಷವಾಗಿ ನೀವು ಅಂತಾರಾಷ್ಟ್ರೀಯ ಪ್ರಯಾಣವನ್ನು ಯೋಜಿಸುತ್ತಿದ್ದರೆ ಅಥವಾ ವಿದೇಶದಲ್ಲಿದ್ದರೆ ಆದಷ್ಟು ಬೇಗ ತಪಾಸಣೆ ಮಾಡಿಸಿಕೊಳ್ಳಿ. ವಿದೇಶದಲ್ಲಿ ವೈದ್ಯಕೀಯ ವೆಚ್ಚಗಳು ದುಬಾರಿಯಾಗಬಹುದು, ಆದ್ದರಿಂದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಸಹಾಯವನ್ನು ಹೊಂದುವುದು ತುಂಬಾ ಸಹಾಯಕವಾಗಬಹುದು. ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನೀವು ಕೋವಿಡ್-19 ಅನ್ನು ಹೊಂದಿದ್ದರೆ ನಿಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಕೋವಿಡ್-19 ಗಾಗಿ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ ಎಂಬುದು ಇಲ್ಲಿದೆ -

• ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು

• ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ

• ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ದೈನಂದಿನ ನಗದು ಭತ್ಯೆ

• ವೈದ್ಯಕೀಯ ಸ್ಥಳಾಂತರ

• ಚಿಕಿತ್ಸೆಗಾಗಿ ವಿಸ್ತರಿತ ಹೋಟೆಲ್ ಸ್ಟೇ

• ಚಿಕಿತ್ಸೆ ಮತ್ತು ಮೃತದೇಹದ ವಾಪಸಾತಿ

ವಿದೇಶಕ್ಕೆ ಪ್ರಯಾಣಿಸುವಾಗ ನೆನಪಿಡಬೇಕಾದ ವಿಷಯಗಳು

ವಿದೇಶ ಪ್ರವಾಸಕ್ಕೆ ಹೋಗುವಾಗ, ಈ ಕೆಳಗಿನ ವಿಷಯಗಳನ್ನು ಪರಿಗಣಿಸುವುದನ್ನು ಖಚಿತಪಡಿಸಿಕೊಳ್ಳಿ:

1. ಸ್ಥಳೀಯ ಕಾನೂನುಗಳು ಮತ್ತು ನಿಬಂಧನೆಗಳ ಬಗ್ಗೆ ಎಚ್ಚರದಿಂದಿರಿ

ಸಾಗರೋತ್ತರ ಪ್ರವಾಸಕ್ಕೆ ಹೋಗುವ ಮೊದಲು, ಸಂಪೂರ್ಣವಾಗಿ ತಾಣದ ಕುರಿತು ಸಂಶೋಧಿಸಲು ಸಲಹೆ ನೀಡಲಾಗುತ್ತದೆ. ಈ ರೀತಿಯಲ್ಲಿ, ನೀವು ಸ್ಥಳೀಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ನಿಮ್ಮ ಭೇಟಿಯ ಸಮಯದಲ್ಲಿ ಅವುಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬಹುದು. ನಿಮ್ಮ ಅಂತಾರಾಷ್ಟ್ರೀಯ ರಜಾದಿನದಲ್ಲಿ ಅನಗತ್ಯ ತೊಂದರೆಯನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

2. ಎಲ್ಲಾ ಪ್ರಯಾಣದ ಡಾಕ್ಯುಮೆಂಟ್‌ಗಳನ್ನು ಕೊಂಡೊಯ್ಯಿರಿ

ಅಂತಾರಾಷ್ಟ್ರೀಯ ರಜಾದಿನಕ್ಕಾಗಿ ನಿಮ್ಮ ಲಗೇಜನ್ನು ಪ್ಯಾಕ್ ಮಾಡುವಾಗ, ನಿಮ್ಮ ಎಲ್ಲಾ ಅಗತ್ಯ ಟ್ರಾವೆಲ್ ಡಾಕ್ಯುಮೆಂಟ್‌ಗಳನ್ನು ನೀವು ಕೊಂಡೊಯ್ಯುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇದು ಸರಿಯಾದ ಫೋಟೋ ID ಪುರಾವೆ, ಪಾಸ್‌ಪೋರ್ಟ್, ವೀಸಾ ಪೇಪರ್‌ಗಳು, ಟ್ರಾವೆಲ್ ಇನ್ಶೂರೆನ್ಸ್, ಬುಕಿಂಗ್ ಸ್ಲಿಪ್‌ಗಳು ಮತ್ತು ಇನ್ನಷ್ಟನ್ನು ಒಳಗೊಂಡಿರಬೇಕು. ಭೌತಿಕ ಮತ್ತು/ಅಥವಾ ಡಿಜಿಟಲ್ ಪ್ರತಿಗಳಲ್ಲಿ ಅಂತಹ ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕೊಂಡೊಯ್ಯಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ.

3. ಮುಂಚಿತವಾಗಿ ಪ್ಲಾನ್ ಮಾಡಿ

ರಜಾದಿನದಲ್ಲಿ ಹಠಾತ್ ಆಗಿ ಹೊರಡುವುದು ಸಾಹಸದಂತೆ ತೋರುತ್ತದೆಯಾದರೂ, ಅಂತಾರಾಷ್ಟ್ರೀಯ ಟ್ರಿಪ್ ನಡೆಸಲು ಮುಂಚಿತವಾಗಿ ಎಲ್ಲವನ್ನೂ ಯೋಜಿಸುವುದು ಮತ್ತು ಬುಕ್ ಮಾಡುವುದು ಸರಿಯಾದ ಮಾರ್ಗವಾಗಿದೆ. ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡುವಂತೆ, ನಿಮ್ಮ ವಸತಿ ಸೌಲಭ್ಯಗಳು, ವಿಮಾನಗಳು, ಚಟುವಟಿಕೆಗಳು ಇತ್ಯಾದಿಗಳನ್ನು ಮುಂಚಿತವಾಗಿ ಬುಕ್ ಮಾಡುವುದು ನಿಮಗೆ ಅಗತ್ಯವಿರುವ ಮನಸ್ಸಿನ ಶಾಂತಿಯನ್ನು ನೀಡುತ್ತದೆ.

4. ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಿ

ರಷ್ಯಾ, ಷೆಂಗೆನ್ ದೇಶಗಳು, ಕ್ಯೂಬಾ, UAE ಮುಂತಾದ ಅನೇಕ ದೇಶಗಳಲ್ಲಿ ಪ್ರವೇಶಕ್ಕೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯ ಅವಶ್ಯಕತೆಯಾಗಿದೆ ಎಂಬುದನ್ನು ಗಮನಿಸಿ. USA ಯಂತಹ ಕಡ್ಡಾಯ ಅವಶ್ಯಕತೆಯಿಲ್ಲದ ದೇಶಗಳಲ್ಲಿಯೂ, ಅದರ ಕವರೇಜ್ ಪ್ರಯೋಜನಗಳಿಂದಾಗಿ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಇದು ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಪ್ರಯಾಣವನ್ನು ಆರ್ಥಿಕವಾಗಿ ರಕ್ಷಿಸುತ್ತದೆ.

5. ಸುರಕ್ಷತಾ ಸಲಹೆಗಳು

ವಿದೇಶದಲ್ಲಿರುವಾಗ, ಅಧಿಕೃತ ಡೀಲರ್‌ಗಳಿಂದ ಮಾತ್ರ ಕರೆನ್ಸಿಯನ್ನು ವಿನಿಮಯ ಮಾಡಿಕೊಳ್ಳುವುದು, ಏಕಾಂತ ಸ್ಥಳಗಳಲ್ಲಿ ATM ಗಳಿಂದ ಹಣವನ್ನು ವಿತ್‌ಡ್ರಾ ಮಾಡದಿರುವುದು, ನಿಮ್ಮ ಹೋಟೆಲ್ ರೂಮ್‌ನ ಹೊರಗೆ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯದಿರುವುದು, ಸ್ಥಳ ಮತ್ತು ಸೀಸನ್ ಪ್ರಕಾರ ಪ್ಯಾಕಿಂಗ್ ಇತ್ಯಾದಿಗಳಂತಹ ಸಾಮಾನ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಿ.

6. ಸ್ಥಳೀಯ ತುರ್ತು ಸಂಖ್ಯೆಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ

ಸ್ಥಳೀಯ ತುರ್ತು ಸಂದರ್ಭದ ಮತ್ತು ಪ್ರಮುಖ ನಂಬರ್‌ಗಳ ಸಂಪರ್ಕ ವಿವರಗಳನ್ನು ಸುಲಭವಾಗಿ ಇರಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ, ಇದರಲ್ಲಿ ಆ ವಿದೇಶಿ ರಾಷ್ಟ್ರದಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಸ್ಥಳೀಯ ಅಗ್ನಿಶಾಮಕ ಇಲಾಖೆ, ಪೊಲೀಸ್ ಇಲಾಖೆ, ಆಂಬ್ಯುಲೆನ್ಸ್ ಸೇವೆ ಇತ್ಯಾದಿಗಳ ಸಂಖ್ಯೆಗಳು ಸೇರಿವೆ.

Buy International Travel insurance plan
ಪ್ರತಿ ಅಂತಾರಾಷ್ಟ್ರೀಯ ಪ್ರಯಾಣವು ಹೂಡಿಕೆಯಾಗಿದೆ, ವಿಶ್ವಾಸಾರ್ಹ ಟ್ರಾವೆಲ್ ಪಾಲಿಸಿಯೊಂದಿಗೆ ಅದನ್ನು ರಕ್ಷಿಸಿ

ಭಾರತದಿಂದ ಕಡಿಮೆ ಹಣದಲ್ಲಿ ಭೇಟಿ ನೀಡಬಹುದಾದ ವಿದೇಶಿ ದೇಶಗಳು

ಭಾರತದಿಂದ ವಿದೇಶ ಪ್ರವಾಸವು ನಿಮ್ಮ ಬ್ಯಾಂಕ್ ಖಾತೆಗೆ ಹೆಚ್ಚಿನ ಹೊರೆಯಾಗಬೇಕಾಗಿಲ್ಲ. ಭಾರತದಿಂದ ಭೇಟಿ ನೀಡಬೇಕಾದ ಕೆಲವು ಜನಪ್ರಿಯ ಮತ್ತು ಕೈಗೆಟಕುವ ಖರ್ಚಿನ ವಿದೇಶಿ ದೇಶಗಳು ಇಲ್ಲಿವೆ:

ದೇಶದ ಹೆಸರುಭಾರತೀಯರಿಗೆ ವೀಸಾ ವಿವರಗಳುಸರಾಸರಿ ರೌಂಡ್-ಟ್ರಿಪ್ ವಿಮಾನ ವೆಚ್ಚದೈನಂದಿನ ಬಜೆಟ್ಪ್ರಮುಖ ಆಕರ್ಷಣೆಗಳುಟ್ರಾವೆಲ್ ಇನ್ಶೂರೆನ್ಸ್ ಸಲಹೆಗಳು
ನೇಪಾಳವೀಸಾ-ಮುಕ್ತ ಪ್ರವೇಶ ; ಮಾನ್ಯ ಫೋಟೋ ID ಅಗತ್ಯವಿದೆ₹ 12,000 - 15,000₹ 1,200 - 4,000ಪಶುಪತಿನಾಥ ದೇವಾಲಯ, ಸ್ವಯಂಭುನಾಥ ದೇವಾಲಯ, ಪೋಖರಾ, ಲುಂಬಿನಿ, ಸಾಗರ್‌ಮಾತಾ ನ್ಯಾಷನಲ್ ಪಾರ್ಕ್, ಮುಸ್ತಾಂಗ್ ಇತ್ಯಾದಿ.ಕಡ್ಡಾಯವಲ್ಲ, ಆದರೆ ಹೆಚ್ಚು ಶಿಫಾರಸು ಮಾಡಲಾಗಿದೆ.
ಶ್ರೀಲಂಕಾಮುಂಚಿತ-ಅನುಮೋದಿತ ಪ್ರವಾಸಿ ವೀಸಾ ಅಗತ್ಯವಿದೆ₹ 22,000 - 30,000₹ 2,000 - 4,000ಕ್ಯಾಂಡಿ, ಕೊಲಂಬೋ, ಎಲ್ಲಾ, ಸಿಗಿರಿಯಾ, ಬೆಂಟೋಟಾ, ನುವಾರ ಎಲಿಯಾ ಇತ್ಯಾದಿ. ಕಡ್ಡಾಯವಲ್ಲ, ಆದರೆ ಹೆಚ್ಚು ಶಿಫಾರಸು ಮಾಡಲಾಗಿದೆ.
ಭೂತಾನ್ಆಗಮನದ ನಂತರ ನೀಡಲಾಗುವ ಪ್ರವೇಶ ಅನುಮತಿಯೊಂದಿಗೆ ವೀಸಾ-ಮುಕ್ತ₹ 20,000 - 35,000₹ 2,500 - 5,000 ಥಿಂಪು, ಪಾರೋ, ಪರೋ ತಕ್ತ್ಸಂಗ್, ಪುನಖಾ, ಬುದ್ಧ ಡೋರ್ಡೆನ್ಮಾ ಇತ್ಯಾದಿ. ಇನ್ನು ಮುಂದೆ ಕಡ್ಡಾಯವಲ್ಲ, ಆದರೆ ಪಡೆಯುವಂತೆ ಸಲಹೆ ನೀಡಲಾಗಿದೆ.
ಥಾಯ್ಲ್ಯಾಂಡ್ವೀಸಾ-ಮುಕ್ತ ಪ್ರವೇಶ (60 ದಿನಗಳವರೆಗೆ ಪ್ರವಾಸೋದ್ಯಮಕ್ಕಾಗಿ)₹ 18,000 - 40,000₹ 2,000 - 5,000ಪಟ್ಟಾಯ, ಫುಕೆಟ್, ಬ್ಯಾಂಕಾಕ್, ಫಿ ಫಿ ದ್ವೀಪಗಳು, ಕ್ರಾಬಿ, ಆಯುತ್ತಯ, ಕೊಹ್ ಸಮುಯಿ ಇತ್ಯಾದಿ.ಕಡ್ಡಾಯವಲ್ಲ, ಆದರೆ ಹೆಚ್ಚು ಶಿಫಾರಸು ಮಾಡಲಾಗಿದೆ.
ವಿಯೆಟ್ನಾಂಇ-ವೀಸಾ ₹ 20,000 - 25,000₹ 2,500 - ₹ 6,000ಹೋಯ್ ಆನ್, ಹಾಲಾಂಗ್ ಬೇ, ಹೋ ಚಿ ಮಿನ್ ಸಿಟಿ, ಹನೋಯ್, ದಾ ನಾಂಗ್, ಫಾಂಗ್ ನಾ-ಕೆ ಬ್ಯಾಂಗ್ ನ್ಯಾಷನಲ್ ಪಾರ್ಕ್ ಇತ್ಯಾದಿ. ಕಡ್ಡಾಯವಲ್ಲ ಆದರೆ ಹೆಚ್ಚು ಶಿಫಾರಸು ಮಾಡಲಾಗಿದೆ.

2025 ರಲ್ಲಿ ಭೇಟಿ ನೀಡಬೇಕಾದ ಟಾಪ್ ಅಂತಾರಾಷ್ಟ್ರೀಯ ತಾಣಗಳು

2025 ರಲ್ಲಿ ಭೇಟಿ ನೀಡಬೇಕಾದ ಕೆಲವು ಟ್ರೆಂಡಿಂಗ್ ಹಾಲಿಡೇ ತಾಣಗಳು ಇಲ್ಲಿವೆ:

ಕ್ರಮಾಂಕತಲುಪುವ ಸ್ಥಳದ ಹೆಸರುಭೇಟಿಯ ಕಾರಣಭೇಟಿ ನೀಡಲು ಉತ್ತಮ ಸಮಯ
1ಬಾಕು, ಅಜರ್ಬೈಜಾನ್ಅಜರ್‌ಬೈಜಾನ್‌ನ ಶ್ರೀಮಂತ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಆಳವಾದ ಒಳನೋಟವನ್ನು ಪಡೆಯಲು ಬಾಕುಗೆ ಭೇಟಿ ನೀಡಿ. ಅದರ ಪ್ರಮುಖ ಪ್ರವಾಸಿ ಆಕರ್ಷಣೆಗಳು ಮತ್ತು ಅರಳುವ ಕಾಡು ಹೂವುಗಳನ್ನು ಅನ್ವೇಷಿಸಿ. ಏಪ್ರಿಲ್ ಮತ್ತು ಜೂನ್ ನಡುವೆ
2ಟೋಕಿಯೋ, ಜಪಾನ್ನಿಮ್ಮ ಎಲ್ಲಾ ಜಪಾನೀಸ್ ಪಾಪ್ ಸಂಸ್ಕೃತಿಯ ‌ರೆಫರೆನ್ಸ್‌ಗಳನ್ನು ಅನುಭವಿಸಲು ಟೋಕಿಯೊದ ನಿಯಾನ್ ಮಹಾನಗರಕ್ಕೆ ಭೇಟಿ ನೀಡಿ. ಅದರ ಐಕಾನಿಕ್ ಸ್ಥಳಗಳು, ಸ್ವಾದಿಷ್ಟ ಬೀದಿ ಆಹಾರ ಮತ್ತು ಇನ್ನೂ ಹೆಚ್ಚಿನದನ್ನು ಅನ್ವೇಷಿಸಿ. ಮಾರ್ಚ್ ಮತ್ತು ಮೇ ಹಾಗೂ ಅಕ್ಟೋಬರ್ ಮತ್ತು ನವೆಂಬರ್ ನಡುವೆ
3ಟ್ರೋಮ್ಸೋ, ನಾರ್ವೇವಿಶಾಲ ಸಮುದ್ರ ತೀರಗಳು ಮತ್ತು ಉತ್ತರ ದೀಪಗಳನ್ನು ವೀಕ್ಷಿಸಲು ನಾರ್ವೆಯ ಸುಂದರ ನಗರವಾದ ಟ್ರೋಮ್ಸೊಗೆ ಭೇಟಿ ನೀಡಿ.ಅಕ್ಟೋಬರ್ ಮತ್ತು ಏಪ್ರಿಲ್ ನಡುವೆ
4ಅಲ್-ಉಲಾ, ಸೌದಿ ಅರೇಬಿಯಾKSA ಯಲ್ಲಿ ಅಲ್-ಉಲಾಗೆ ಭೇಟಿ ನೀಡುವ ಮೂಲಕ ಹಿಂದಿನ ಕಾಲಕ್ಕೆ ಹೆಜ್ಜೆ ಹಾಕಿ. ಪ್ರದೇಶದ ಪ್ರಾಚೀನ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯನ್ನು ಅನ್ವೇಷಿಸಿ, ಮೋಜಿನ ಸಾಹಸಗಳಲ್ಲಿ ಭಾಗವಹಿಸಿ, ನೈಸರ್ಗಿಕ ಮರುಭೂಮಿಯ ಸೌಂದರ್ಯವನ್ನು ಆನಂದಿಸಿ ಮತ್ತು ಇನ್ನಷ್ಟನ್ನು ಮಾಡಿ.ನವೆಂಬರ್ ಮತ್ತು ಫೆಬ್ರವರಿ ನಡುವೆ
5ಕ್ರಾಬಿ, ಥೈಲ್ಯಾಂಡ್ಥೈಲ್ಯಾಂಡ್‌ನಲ್ಲಿ ಉಷ್ಣವಲಯದ ರಜಾ ತಾಣಗಳ ಅದ್ಭುತ ಅನುಭವ ಪಡೆಯಲು ಮತ್ತು ಅದರ ಉಸಿರುಬಿಗಿ ಹಿಡಿದು ನೋಡುವಂತಹ ದೃಶ್ಯಾವಳಿಗಳಿಗಾಗಿ, ಜಲಕ್ರೀಡೆಗಳ ಲಭ್ಯತೆ ಮತ್ತು ಐಷಾರಾಮಿ ಜಲಮುಖಿ ರೆಸಾರ್ಟ್‌ಗಳಿಗಾಗಿ ಕ್ರಾಬಿಗೆ ಭೇಟಿ ನೀಡಿ.ನವೆಂಬರ್ ಮತ್ತು ಮಾರ್ಚ್ ನಡುವೆ
Buy International Travel insurance plan
ಅನಿರೀಕ್ಷಿತ ವೆಚ್ಚಗಳು ನಿಮ್ಮ ವಿದೇಶಿ ಪ್ರಯಾಣವನ್ನು ಹಾಳುಗೆಡವಲು ಬಿಡಬೇಡಿ. ನೀವು ಪ್ರಯಾಣ ಆರಂಭಿಸುವ ಮೊದಲು ಇನ್ಶೂರೆನ್ಸ್ ಪಡೆಯಿರಿ!

ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

4.4/5 ಸ್ಟಾರ್‌ಗಳು
rating

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

quote-icons
female-face
ಜಾಗೃತಿ ದಹಿಯಾ

ವಿದ್ಯಾರ್ಥಿ ಸುರಕ್ಷಾ ಸಾಗರೋತ್ತರ ಟ್ರಾವೆಲ್

10 ಸೆಪ್ಟೆಂಬರ್ 2021

ಸೇವೆಯಿಂದ ಸಂತೋಷವಾಗಿದೆ

quote-icons
male-face
ವೈದ್ಯನಾಥನ್ ಗಣೇಶನ್

ನನ್ನ:ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್

05 ಜುಲೈ 2019

ಎಚ್‌ಡಿಎಫ್‌ಸಿ ಇನ್ಶೂರೆನ್ಸ್ ಆಯ್ಕೆ ಮಾಡುವ ಮೊದಲು, ನಾನು ಕೆಲವು ಬೇರೆಬೇರೆ ಇನ್ಶೂರೆನ್ಸ್ ಪಾಲಿಸಿಗಳನ್ನೂ ನೋಡಿದ್ದೇನೆ. ಪ್ರತಿ ತಿಂಗಳು ನನ್ನ ಕಾರ್ಡ್‌ನಿಂದ ನಿಗದಿತ ಮೊತ್ತ ಸ್ವಯಂ ಕಡಿತವಾಗುವ ಜೊತೆಗೆ, ಗಡುವು ದಿನಾಂಕದ ರಿಮೈಂಡರ್ ಸಹ ಕಳುಹಿಸಲಾಗುತ್ತದೆ. ಇವರ ಆ್ಯಪ್‌ ಬಳಸಲು ಸುಲಭವಾಗಿದ್ದು, ಬೇರೆ ಇನ್ಶೂರೆನ್ಸ್ ಕಂಪನಿಗಳಿಗೆ ಹೋಲಿಸಿದರೆ, ನನಗೆ ಉತ್ತಮ ಅನುಭವ ನೀಡುತ್ತಿದೆ.

quote-icons
female-face
ಸಾಕ್ಷಿ ಅರೋರಾ

ನನ್ನ:ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್

05 ಜುಲೈ 2019

ಒಳ್ಳೆಯ ಅಂಶಗಳು: - ಅತ್ಯುತ್ತಮ ಬೆಲೆ: ಕಳೆದ ಮೂರು ನಾಲ್ಕು ವರ್ಷಗಳಿಂದ ಬೇರೆ ವಿಮಾದಾತರು ಕೋಟ್‌ ಮಾಡಿದ ಬೆಲೆಯು ಎಲ್ಲಾ ರೀತಿಯ ರಿಯಾಯಿತಿಗಳು ಮತ್ತು ಸದಸ್ಯತ್ವದ ಪ್ರಯೋಜನಗಳನ್ನು ಒಳಗೊಂಡ ಮೇಲೂ, 50-100% ಹೆಚ್ಚಾಗಿತ್ತು - ಅತ್ಯುತ್ತಮ ಸೇವೆ: ಬಿಲ್ಲಿಂಗ್, ಪಾವತಿ, ಡಾಕ್ಯುಮೆಂಟೇಶನ್ ಆಯ್ಕೆಗಳು ಸಿಗುತ್ತವೆ - ಅತ್ಯುತ್ತಮ ಗ್ರಾಹಕ ಸೇವೆ: ಕಾಲಕಾಲಕ್ಕೆ ಸುದ್ದಿಪತ್ರಗಳು, ಪ್ರತಿನಿಧಿಗಳಿಂದ ತ್ವರಿತ ಮತ್ತು ವೃತ್ತಿಪರ ಉತ್ತರಗಳು ಸಿಗುತ್ತವೆ. ಕೆಟ್ಟ ಅಂಶಗಳು: - ಇಲ್ಲಿಯವರೆಗೂ ಯಾವುದೂ ಇಲ್ಲ

ಇತ್ತೀಚಿನ ಟ್ರಾವೆಲ್ ಇನ್ಶೂರೆನ್ಸ್ ಬ್ಲಾಗ್‌ ಗಳನ್ನು ಓದಿ

slider-right
GST Rate Cuts 2025: Big Savings On Dining, Travel & Everyday Services

GST ದರ ಕಡಿತ 2025: ಡೈನಿಂಗ್, ಪ್ರಯಾಣ ಮತ್ತು ದೈನಂದಿನ ಸೇವೆಗಳಲ್ಲಿ ದೊಡ್ಡ ಉಳಿತಾಯ

ಇನ್ನಷ್ಟು ಓದಿ
ಸೆಪ್ಟೆಂಬರ್ 5, 2025 ರಂದು ಪ್ರಕಟಿಸಲಾಗಿದೆ
GST Reforms 2025: How Will It Impact Your Travel Cost?

GST ಸುಧಾರಣೆಗಳು 2025: ಇದು ನಿಮ್ಮ ಪ್ರಯಾಣದ ವೆಚ್ಚದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

ಇನ್ನಷ್ಟು ಓದಿ
ಸೆಪ್ಟೆಂಬರ್ 5, 2025 ರಂದು ಪ್ರಕಟಿಸಲಾಗಿದೆ
GST Transition 2025: Key Things Air Travellers Should Know Before Booking Tickets

GST ಪರಿವರ್ತನೆ 2025: ಟಿಕೆಟ್‌ಗಳನ್ನು ಬುಕ್ ಮಾಡುವ ಮೊದಲು ವಿಮಾನ ಪ್ರಯಾಣಿಕರು ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

ಇನ್ನಷ್ಟು ಓದಿ
ಸೆಪ್ಟೆಂಬರ್ 5, 2025 ರಂದು ಪ್ರಕಟಿಸಲಾಗಿದೆ
The must-visit destination of Egypt

ಈಜಿಪ್ಟ್‌ಗೆ ಭೇಟಿ ನೀಡಬೇಕಾದ ತಾಣ

ಇನ್ನಷ್ಟು ಓದಿ
ಆಗಸ್ಟ್ 4, 2025 ರಂದು ಪ್ರಕಟಿಸಲಾಗಿದೆ
Travel Insurance for Pilgrimages

ಶಿಕೋಕು ಅಥವಾ ಕೈಲಾಸ ಪರ್ವತದಂತಹ ತೀರ್ಥಯಾತ್ರೆಗಳಿಗೆ ಟ್ರಾವೆಲ್ ಇನ್ಶೂರೆನ್ಸ್: ಅಪಾಯಗಳನ್ನು ಒಳಗೊಳ್ಳುತ್ತದೆ

ಇನ್ನಷ್ಟು ಓದಿ
ಆಗಸ್ಟ್ 4, 2025 ರಂದು ಪ್ರಕಟಿಸಲಾಗಿದೆ
slider-left

ಸಾಗರೋತ್ತರ ಟ್ರಾವೆಲ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

1 ಲಕ್ಷ+ ನಗದುರಹಿತ ಆಸ್ಪತ್ರೆಗಳ ವಿಶಾಲ ನೆಟ್ವರ್ಕ್‌ನಿಂದ ಪೂರಕವಾದ 24x7 ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ಸೇವೆಗಳು ಎಚ್‌ಡಿಎಫ್‌ಸಿ ಎರ್ಗೋದ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್‌ನ ವಿಶೇಷ ಫೀಚರ್ ಆಗಿದೆ

ಟ್ರಾವೆಲ್ ಇನ್ಶೂರೆನ್ಸ್ ಮೇಲಿನ ಪ್ರೀಮಿಯಂ ನಿಮ್ಮ ತಲುಪುವ ಸ್ಥಳ ಮತ್ತು ನಿಮ್ಮ ವಾಸ್ತವ್ಯದ ಅವಧಿಯನ್ನು ಅವಲಂಬಿಸಿರುತ್ತದೆ. ವಿಮಾದಾರರ ವಯಸ್ಸು ಮತ್ತು ಆಯ್ಕೆ ಮಾಡಿದ ವಿವಿಧ ರೀತಿಯ ಯೋಜನೆಗಳು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ವೆಚ್ಚವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ನಿಮ್ಮ ಪಾಲಿಸಿ ಕವರ್ ನಿಮ್ಮ ದೇಶದ ಇಮಿಗ್ರೇಶನ್ ಕೌಂಟರ್‌ನಿಂದ ಆರಂಭವಾಗುತ್ತದೆ ಮತ್ತು ನಿಮ್ಮ ರಜಾದಿನದ ನಂತರ ನೀವು ಹಿಂದಿರುಗಿದ ನಂತರ ಮತ್ತು ನಿಮ್ಮ ಇಮಿಗ್ರೇಶನ್ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಕೊನೆಗೊಳ್ಳುತ್ತದೆ. ಇದಕ್ಕಾಗಿಯೇ ನೀವು ವಿದೇಶದಲ್ಲಿದ್ದಾಗ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ, ಪ್ರಯಾಣ ಆರಂಭದ ನಂತರ ಖರೀದಿಸಿದ ಟ್ರಾವೆಲ್ ಇನ್ಶೂರೆನ್ಸನ್ನು ಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ.

ವಿದೇಶ ತಲುಪಿದ ಮೇಲೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಇನ್ನೂ ಮಾನ್ಯವಾಗಿದ್ದರೆ ನೀವು ಪಾಲಿಸಿಯನ್ನು ವಿಸ್ತರಿಸಬಹುದು. ಆದಾಗ್ಯೂ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಮಾತ್ರ ವಿಸ್ತರಿಸಬಹುದು ಎಂಬುದನ್ನು ನೆನಪಿಡಿ. ನೀವು ವಿದೇಶದಲ್ಲಿ ಇರುವಾಗ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ.

ಹೌದು, ನೀವು ಕೊನೆಯ ನಿಮಿಷದಲ್ಲಿಯೂ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಆದ್ದರಿಂದ ಅದು ನಿಮ್ಮ ನಿರ್ಗಮನ ದಿನವಾಗಿದ್ದರೂ ನೀವು ಇನ್ಶೂರ್ ಮಾಡಿಲ್ಲದಿದ್ದರೂ, ನೀವು ಟ್ರಾವೆಲ್ ಇನ್ಶೂರೆನ್ಸ್ ಕವರ್ ಖರೀದಿಸಬಹುದು.

ಹೌದು, ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವುದರಿಂದ ನೀವು ವಿದೇಶದಲ್ಲಿರುವಾಗ ವೈದ್ಯರ ಸಹಾಯವನ್ನು ಪಡೆಯಬಹುದು.

ನೀವು ಷೆಂಗೆನ್ ದೇಶಗಳಿಗೆ ಪ್ರಯಾಣಿಸುತ್ತಿದ್ದರೆ, ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ವೀಸಾ ಪಡೆಯಲು ಕಡ್ಡಾಯವಾಗಿದೆ. ಇದಲ್ಲದೆ, ಅನೇಕ ದೇಶಗಳು ವೀಸಾ ಪಡೆಯಲು ಕಡ್ಡಾಯ ಟ್ರಾವೆಲ್ ಇನ್ಶೂರೆನ್ಸ್ ಹೊಂದಿವೆ. ಆದ್ದರಿಂದ, ಪ್ರಯಾಣ ಮಾಡುವ ಮೊದಲು ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದಕ್ಕೆ ಸಲಹೆ ನೀಡಲಾಗುತ್ತದೆ.

ಹೌದು, ಅನಿರೀಕ್ಷಿತ ಪರಿಸ್ಥಿತಿಗಳಾದ ಮನೆಯಲ್ಲಿ ತುರ್ತುಸ್ಥಿತಿ, ಕುಟುಂಬದ ಸದಸ್ಯರ ಹಠಾತ್ ಮರಣ, ರಾಜಕೀಯ ಪ್ರಕ್ಷುಬ್ಧತೆ ಅಥವಾ ಭಯೋತ್ಪಾದಕ ದಾಳಿಯಂತಹ ಅನಿರೀಕ್ಷಿತ ಪರಿಸ್ಥಿತಿಗಳಿಂದಾಗಿ ನೀವು ನಿರ್ಗಮನ ದಿನಾಂಕದ ಮೊದಲು ಪ್ರಯಾಣವನ್ನು ರದ್ದುಗೊಳಿಸಿದರೆ ನೀವು ಟ್ರಿಪ್ ರದ್ದತಿಗಾಗಿ ರಿಫಂಡ್ ಅನ್ನು ಪಡೆಯಬಹುದು. ಪಾಲಿಸಿಯನ್ನು ರದ್ದುಪಡಿಸಿದ ನಂತರ ಅಂತಹ ಸಂದರ್ಭಗಳಲ್ಲಿ ನಿಮ್ಮ ಪ್ರೀಮಿಯಂನ ಸಂಪೂರ್ಣ ರಿಫಂಡ್ ಸಾಧ್ಯವಾಗುತ್ತದೆ.

ವಿಸ್ತರಣೆಗಳು ಸೇರಿದಂತೆ ಒಟ್ಟು ಪಾಲಿಸಿ ಅವಧಿಯು 360 ದಿನಗಳನ್ನು ಮೀರುವುದಿಲ್ಲ.

ಹೌದು, ವಿದೇಶದಲ್ಲಿ ವಿಮಾನವನ್ನು ಬುಕ್ ಮಾಡುವ ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸುವುದನ್ನು ಸಲಹೆ ನೀಡಲಾಗುತ್ತದೆ. ನೀವು ಪ್ರತಿ ಬಾರಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ತೊಂದರೆಯಿಂದ ನಿಮ್ಮನ್ನು ಉಳಿಸುವ ಮಲ್ಟಿ ಟ್ರಿಪ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸುವ ಮೂಲಕ ನೀವು ಇದನ್ನು ಮಾಡಬಹುದು ಮತ್ತು ಇದು ವೆಚ್ಚ-ಪರಿಣಾಮಕಾರಿಯಾಗಿದೆ ಎಂಬುದನ್ನು ಕೂಡ ಸಾಬೀತುಪಡಿಸುತ್ತದೆ.

ಹೌದು, ನಿಮ್ಮ ನಿರ್ಗಮನದ ದಿನದಂದು ವಿಮಾನವನ್ನು ಬುಕ್ ಮಾಡಿದ ನಂತರವೂ ನೀವು ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಆದಾಗ್ಯೂ, ನಿಮ್ಮ ರಜಾದಿನವನ್ನು ಬುಕ್ ಮಾಡಿದ 14 ದಿನಗಳ ಒಳಗೆ ಟ್ರಾವೆಲ್ ಇನ್ಶೂರೆನ್ಸ್ ಕವರ್ ಖರೀದಿಸಲು ಸಲಹೆ ನೀಡಲಾಗುತ್ತದೆ.

ನೀವು ನಿಮ್ಮ ಪಾಲಿಸಿಯನ್ನು ಉಚಿತವಾಗಿ ರಿಶೆಡ್ಯೂಲ್ ಮಾಡಬಹುದು; ಆದಾಗ್ಯೂ, ಪಾಲಿಸಿಯ ವಿಸ್ತರಣೆಯು ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚದ ಹೆಚ್ಚಳವು ನೀವು ವಿಸ್ತರಿಸುವ ದಿನಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.

ಇಲ್ಲ, ನಿಗದಿತ ದಿನಾಂಕಕ್ಕಿಂತ ಮೊದಲು ನೀವು ಭಾರತಕ್ಕೆ ಹಿಂತಿರುಗಿದರೆ ನೀವು ಭಾಗಶಃ ರಿಫಂಡ್ ಅನ್ನು ಪಡೆಯುವುದಿಲ್ಲ.

ಹೌದು, ಇದು ದಂತ ಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಪಘಾತದ ಗಾಯದಿಂದ ಉಂಟಾಗುವ ತುರ್ತು ದಂತ ಕೆಲಸದ ವೆಚ್ಚಗಳನ್ನು $500* ವರೆಗೆ ಕವರ್ ಮಾಡುತ್ತದೆ.

ಹೌದು, ಇದು ಶಿಪ್ ಅಥವಾ ವಿದೇಶದಲ್ಲಿ ರೈಲು ಪ್ರಯಾಣ ಮಾಡುವಾಗ ಉಂಟಾದ ಗಾಯಕ್ಕೆ ಕವರೇಜನ್ನು ಒದಗಿಸುತ್ತದೆ.

ವೈದ್ಯಕೀಯ ತುರ್ತುಸ್ಥಿತಿ, ಅಪಘಾತ ಅಥವಾ ಗಾಯದಿಂದಾಗಿ ನಿಮ್ಮ ಪ್ರಯಾಣದ ಕೊನೆಯ ದಿನದಂದು ನೀವು ನಿಮ್ಮ ವಾಸ್ತವ್ಯವನ್ನು ವಿಸ್ತರಿಸುತ್ತೀರಿ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಯಾವುದೇ ಪ್ರೀಮಿಯಂ ಪಾವತಿಸದೆ ನೀವು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು 7 ರಿಂದ 15 ದಿನಗಳವರೆಗೆ ವಿಸ್ತರಿಸಬಹುದು. 

ಹೌದು, ಭಾರತಕ್ಕೆ ಹಿಂತಿರುಗಿದ ನಂತರ ಕ್ಲೈಮ್ ಫೈಲ್ ಮಾಡುವುದು ಸಾಧ್ಯ. ಆದಾಗ್ಯೂ, ನಿಮ್ಮ ವಿಮಾದಾತರು ಹೇಳಿರುವುದನ್ನು ಹೊರತುಪಡಿಸಿ, ವೈದ್ಯಕೀಯ ತುರ್ತುಸ್ಥಿತಿ ಅಥವಾ ಡಾಕ್ಯುಮೆಂಟ್‌ಗಳ ನಷ್ಟದಂತಹ ಯಾವುದೇ ದುರದೃಷ್ಟಕರ ಘಟನೆ ನಡೆದ 90 ದಿನಗಳ ಒಳಗೆ ನೀವು ಕ್ಲೈಮ್ ಫೈಲ್ ಮಾಡಬೇಕು ಎಂಬುದನ್ನು ನೆನಪಿಡಿ.

ನಿಮಗೆ ಮೇಲ್ ಮಾಡಲಾದ ವಿಮಾದಾತರ ಸಾಫ್ಟ್ ಕಾಪಿಯು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್‌ಗೆ ಪುರಾವೆಯಾಗಿ ಕೆಲಸ ಮಾಡಲು ಸಾಕಾಗುತ್ತದೆ. ಆದಾಗ್ಯೂ, ನಿಮ್ಮ ಪಾಲಿಸಿ ಸಂಖ್ಯೆಯನ್ನು ಬರೆದಿಡಲು ಸಲಹೆ ನೀಡಲಾಗುತ್ತದೆ ಮತ್ತು, ಹೆಚ್ಚು ಪ್ರಮುಖವಾಗಿ, ನಿಮ್ಮೊಂದಿಗೆ ನಮ್ಮ 24-ಗಂಟೆಗಳ ಸಹಾಯ ಸೇವೆ ಒದಗಿಸುವ ಟೆಲಿಫೋನ್ ನಂಬರನ್ನು ಹೊಂದಿರಿ, ಆದ್ದರಿಂದ ನೀವು ದೂರವಿರುವಾಗ ನಮ್ಮ ಸಹಾಯದ ಅಗತ್ಯವಿದ್ದರೆ ನೀವು ನಮ್ಮನ್ನು ಸಂಪರ್ಕಿಸಬಹುದು.

ನಿಮ್ಮ ಪ್ರಯಾಣದ ಸಮಯದಲ್ಲಿ ಪ್ರಯಾಣ, ವೈದ್ಯಕೀಯ ಸಲಹೆ ಮತ್ತು ಸಹಾಯಕ್ಕಾಗಿ 24-ಗಂಟೆಯ ಅಲಾರಂ ಕೇಂದ್ರದಲ್ಲಿ ನಮ್ಮ ತುರ್ತು ಪ್ರಯಾಣ ಸಹಾಯ ಪಾಲುದಾರರಿಗೆ ಕರೆ ಮಾಡಿ.

• ಇ-ಮೇಲ್: travelclaims@hdfcergo.com

• ಟೋಲ್ ಫ್ರೀ ನಂಬರ್ (ಜಾಗತಿಕವಾಗಿ): +80008250825

• ಲ್ಯಾಂಡ್‌ಲೈನ್ (ಶುಲ್ಕ ವಿಧಿಸಲಾಗುತ್ತದೆ):+91-120-4507250

ಗಮನಿಸಿ: ಸಂಪರ್ಕ ಸಂಖ್ಯೆಯನ್ನು ಡಯಲ್ ಮಾಡುವಾಗ ದಯವಿಟ್ಟು ದೇಶದ ಕೋಡನ್ನು ಸೇರಿಸಿ.

ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ದೇಶದ ಇಮಿಗ್ರೇಶನ್ ಕೌಂಟರಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ದೇಶಕ್ಕೆ ಹಿಂತಿರುಗಿದ ನಂತರ ಇಮಿಗ್ರೇಶನ್ ಪೂರ್ಣಗೊಳ್ಳುವವರೆಗೆ ಮುಂದುವರಿಯುತ್ತದೆ.

ಹೌದು, ನಿಮ್ಮ ಮೇಲೆ ಕೋವಿಡ್-19 ಪ್ರಭಾವ ಬೀರಿದ್ದರೆ ಮತ್ತು ವೈದ್ಯಕೀಯ ವೃತ್ತಿಪರರು ಕ್ವಾರಂಟೈನ್‌ನಲ್ಲಿರಲು ಸೂಚಿಸಿದ್ದರೆ, ಎಚ್‌ಡಿಎಫ್‌ಸಿ ಎರ್ಗೋ ಟ್ರಿಪ್ ರದ್ಧತಿಗಳನ್ನು ಭರಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ 6 ತಿಂಗಳು ಮತ್ತು 70 ವರ್ಷಗಳ ನಡುವಿನ ವ್ಯಕ್ತಿಗಳಿಗೆ ಸಿಂಗಲ್-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಮತ್ತು 18 ವರ್ಷ ಮತ್ತು 70 ವರ್ಷಗಳ ನಡುವಿನ ವ್ಯಕ್ತಿಗಳಿಗೆ ವಾರ್ಷಿಕ ಮಲ್ಟಿ-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ.

ಹೌದು. ರಜಾದಿನಗಳ (ವಿರಾಮ) ಜೊತೆಗೆ, ಎಚ್‌ಡಿಎಫ್‌ಸಿ ಎರ್ಗೋ ಉದ್ಯೋಗ ಮತ್ತು ಬಿಸಿನೆಸ್/ಅಧಿಕೃತ ಉದ್ದೇಶಗಳಿಗಾಗಿ ಸಾಗರೋತ್ತರ ಪ್ರಯಾಣವನ್ನು ಯೋಜಿಸುವ ವ್ಯಕ್ತಿಗಳಿಗೆ ಕೂಡಾ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ.

ನೀವು ಒಂದೇ ಪ್ರಯಾಣದಲ್ಲಿ ಅನೇಕ ದೇಶಗಳಿಗೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ನೀವು ಅವುಗಳಿಗೆ ಪ್ರತ್ಯೇಕ ಪಾಲಿಸಿಗಳನ್ನು ಖರೀದಿಸಬೇಕಾಗಿಲ್ಲ. ಎಚ್‌ಡಿಎಫ್‌ಸಿ ಎರ್ಗೋದಿಂದ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವಾಗ, ನಿಮ್ಮ ಪ್ರಯಾಣದಲ್ಲಿ ನೀವು ಭೇಟಿ ನೀಡಲು ಯೋಜಿಸುತ್ತಿರುವ ಎಲ್ಲಾ ದೇಶಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀವು ಪಡೆಯುತ್ತೀರಿ. ಅವುಗಳೆಲ್ಲವನ್ನೂ ಆಯ್ಕೆ ಮಾಡುವ ಮೂಲಕ, ಆ ಪ್ರವಾಸದಲ್ಲಿ ನಿಮ್ಮ ಸಂಪೂರ್ಣ ಪ್ರಯಾಣವನ್ನು ಕವರ್ ಮಾಡುವ ಒಂದೇ ಪಾಲಿಸಿಯನ್ನು ನೀವು ಪಡೆಯಬಹುದು.

ಹೌದು. ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಗದುರಹಿತ ಮತ್ತು ಮರುಪಾವತಿ ಕ್ಲೈಮ್‌ಗಳನ್ನು ಒದಗಿಸುತ್ತದೆ.

ಇಲ್ಲ. ಎಲ್ಲಾ ವಿದೇಶ ಪ್ರಯಾಣಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಲ್ಲ. ಆದಾಗ್ಯೂ, ಅನೇಕ ದೇಶಗಳು ಪ್ರವೇಶ ವೀಸಾಗೆ ಅಪ್ಲೈ ಮಾಡುವ ಪ್ರವಾಸಿಗರಿಗೆ ಇದನ್ನು ಕಡ್ಡಾಯ ಅವಶ್ಯಕತೆಯನ್ನಾಗಿಸಿವೆ. ಉದಾಹರಣೆಗೆ, ಷೆಂಗೆನ್ ಪ್ರದೇಶದ 29 ದೇಶಗಳು ತಮ್ಮ ಪ್ರವಾಸಿ ವೀಸಾಗೆ ಅಪ್ಲೈ ಮಾಡಲು ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸಿವೆ.

ಹೌದು. ಹಿರಿಯ ನಾಗರಿಕರು ಎಚ್‌ಡಿಎಫ್‌ಸಿ ಎರ್ಗೋದಿಂದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು. ಹಿರಿಯರ ಸಾಗರೋತ್ತರ ಪ್ರಯಾಣವನ್ನು ಕವರ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ನಾವು ಒದಗಿಸುತ್ತೇವೆ. ಇಲ್ಲಿ ಅದರ ಬಗ್ಗೆ ಹೆಚ್ಚಿನ ವಿವರಗಳನ್ನು ಹುಡುಕಿ.

ಸಾಮಾನ್ಯವಾಗಿ, ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವಾಗ, ನೀವು ಯಾವುದೇ ವೈದ್ಯಕೀಯ ಫಿಟ್ನೆಸ್ ಪುರಾವೆಯನ್ನು ಸಲ್ಲಿಸಬೇಕಾಗಿಲ್ಲ. ಪ್ರಯಾಣ ಮಾಡುವ ಮೊದಲು ಎಚ್‌ಡಿಎಫ್‌ಸಿ ಎರ್ಗೋಗೆ ಕಡ್ಡಾಯ ಹೆಲ್ತ್ ಚೆಕ್-ಅಪ್ ಅಗತ್ಯವಿಲ್ಲ. ಆದಾಗ್ಯೂ, ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ, ನೀವು ಮುಂಚಿತ-ಅಸ್ತಿತ್ವದಲ್ಲಿರುವ ಯಾವುದೇ ರೋಗ ಅಥವಾ ಆರೋಗ್ಯ ಪರಿಸ್ಥಿತಿಗಳನ್ನು ಬಹಿರಂಗಪಡಿಸಬೇಕು.

ಸಿಂಗಲ್-ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನಿರ್ದಿಷ್ಟ ಪ್ರಯಾಣವನ್ನು ಕವರ್ ಮಾಡುವ ಪ್ಲಾನ್ ಆಗಿದೆ. ಇದರ ಕವರೇಜ್ ಒಂದು ಪ್ರಯಾಣಕ್ಕೆ ಸೀಮಿತವಾಗಿದೆ ಮತ್ತು ನಮೂದಿಸಿದ ಪ್ರಯಾಣದ ಅವಧಿ ಮುಗಿದಾಗ ಇನ್ಶೂರೆನ್ಸ್ ಅವಧಿ ಮುಗಿಯುತ್ತದೆ.

ಅವುಗಳು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ವೈದ್ಯಕೀಯ ತುರ್ತು-ಸಂಬಂಧಿತ ಕವರೇಜ್‌ನ ಭಾಗವಾಗಿವೆ. ಉದಾಹರಣೆಗೆ, ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ನಿಮಗೆ ವೈದ್ಯಕೀಯ ಸ್ಥಳಾಂತರದ ಅಗತ್ಯವಿದ್ದರೆ, ನಿಮ್ಮನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸುವ ವೆಚ್ಚಗಳಿಗೆ ಪಾಲಿಸಿಯು ಪಾವತಿಸುತ್ತದೆ. ಆಸ್ಪತ್ರೆಗೆ ದಾಖಲಾದ ನಂತರ ನಿಮ್ಮ ಪ್ರಯಾಣವನ್ನು ಮುಂದುವರಿಸಲು ನಿಮಗೆ ಸಾಧ್ಯವಾಗದಿದ್ದರೆ ಇದು ನಿಮ್ಮನ್ನು ಭಾರತಕ್ಕೆ ಮರಳಿ ಸಾಗಿಸುವ ವೆಚ್ಚಗಳನ್ನು ಕೂಡಾ ಪಾವತಿಸಬಹುದು.

ಹೌದು. ಎಚ್‌ಡಿಎಫ್‌ಸಿ ಎರ್ಗೋ ಆಯ್ದ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳ ಮೇಲೆ ಫ್ರೀ-ಲುಕ್ ಅವಧಿಯನ್ನು ಒದಗಿಸುತ್ತದೆ. ಆದಾಗ್ಯೂ, ಇದು ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಗಮನಿಸಿ. ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ನಮ್ಮ ಟೋಲ್-ಫ್ರೀ ನಂಬರ್‌ಗೆ ಕರೆ ಮಾಡುವ ಮೂಲಕ ಅಥವಾ care@hdfcergo.com ಗೆ ಇಮೇಲ್ ಕಳುಹಿಸುವ ಮೂಲಕ ನಮ್ಮ ತಜ್ಞರನ್ನು ಸಂಪರ್ಕಿಸಿ.

ಇಲ್ಲ. ನೀವು ಭಾರತದಿಂದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ನಿಮ್ಮ ಪ್ರಯಾಣ ಆರಂಭವಾಗುವ ಮೊದಲು ಅಂದರೆ ಭಾರತದಿಂದ ಹೊರಡುವ ಮೊದಲು ನೀವು ಅದನ್ನು ಪಡೆಯಬೇಕು. ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ತುಂಬಾ ಸುಲಭ ಮತ್ತು ವೇಗವಾಗಿದೆ, ಮತ್ತು ಎಚ್‌ಡಿಎಫ್‌ಸಿ ಎರ್ಗೋದ ಅಧಿಕೃತ ವೆಬ್‌ಸೈಟ್ ಅಥವಾ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

Image

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಅವಾರ್ಡ್ಸ್ 2014-15

Image

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್ 2015

Image

iAAA ರೇಟಿಂಗ್

Image

ISO ಪ್ರಮಾಣೀಕರಣ

Image

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

Scroll Right
Scroll Left
ಎಲ್ಲಾ ಪ್ರಶಸ್ತಿಗಳನ್ನು ನೋಡಿ
Buy Travel Insurance Plan Online From HDFC ERGO

ಪೂರ್ತಿಯಾಗಿ ಓದಿದಿರಾ? ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?