Knowledge Centre
HDFC ERGO 1Lac+ Cashless Hospitals
1 ಲಕ್ಷ+

ನಗದುರಹಿತ ಆಸ್ಪತ್ರೆಗಳು

HDFC ERGO 24x7 In-house Claim Assistance
24x7 ಇನ್-ಹೌಸ್

ಕ್ಲೈಮ್ ಸಹಾಯ

HDFC ERGO No health Check-ups
ಯಾವುದೇ ಹೆಲ್ತ್

ಚೆಕಪ್‌ಗಳು ಬೇಕಿಲ್ಲ

ಹೋಮ್ / ಟ್ರಾವೆಲ್ ಇನ್ಶೂರೆನ್ಸ್ / ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ

ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್

Travel Insurance

ಕುಟುಂಬದೊಂದಿಗೆ ಪ್ರವಾಸ ಹೋಗುವುದು ಮೋಜು ಮತ್ತು ವೈಯಕ್ತಿಕ ವಿಷಯವಾಗಿದೆ. ಇದು ನಿಮ್ಮ ಆತ್ಮೀಯರ ಜೊತೆಗಿನ ಬಾಂಧವ್ಯವನ್ನು ಗಟ್ಟಿ ಮಾಡಲು ಮತ್ತು ಜೀವಮಾನದ ನೆನಪುಗಳನ್ನು ಸೃಷ್ಟಿಸಲು ಇರುವ ಉತ್ತಮ ಮಾರ್ಗ! ಬೀಚ್‌ನಲ್ಲಿ ಆಡುವುದಾಗಲಿ, ಪರ್ವತಗಳನ್ನು ಏರುವುದಾಗಲಿ, ಪ್ರಕೃತಿಯ ಮಡಿಲಿನಲ್ಲಿ ಅಥವಾ ಐಷಾರಾಮಿ ಹೋಟೆಲ್‌ನಲ್ಲಿ ಉಳಿಯುವುದಾಗಲಿ, ನಿಮ್ಮ ಕುಟುಂಬದೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುವ ಆನಂದವನ್ನು ವಿವರಿಸಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಅಥವಾ ಅನಿರೀಕ್ಷಿತ ಘಟನೆಯಿಂದ ನಿಮ್ಮ ಕುಟುಂಬ ಪ್ರವಾಸದ ಸಂತೋಷಕ್ಕೆ ಧಕ್ಕೆಯಾಗದಂತೆ ಖಚಿತಪಡಿಸಿಕೊಳ್ಳುವುದು ಸೂಕ್ತವಾಗಿದೆ. ನೆನಪಿಡಿ, ವೈದ್ಯಕೀಯ ತುರ್ತುಸ್ಥಿತಿಗಳು, ವಿಮಾನ ವಿಳಂಬಗಳು ಮತ್ತು ಬ್ಯಾಗೇಜ್ ಕಳ್ಳತನ ಅನಿರೀಕ್ಷಿತವಾಗಿ ಎದುರಾಗಬಹುದು. ಆದ್ದರಿಂದ, ಅಂತಾರಾಷ್ಟ್ರೀಯ ತಾಣದಲ್ಲಿ ಪ್ರವಾಸ ಮಾಡುವಾಗ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಜಾಣತನ. ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸುವಾಗ, ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿ. ಇದು ನಿಮ್ಮ ಕುಟುಂಬದ ಎಲ್ಲಾ ಸದಸ್ಯರನ್ನು ಒಂದೇ ಬಾರಿಗೆ ಸುರಕ್ಷಿತಗೊಳಿಸುವ ಒಂದು ಇನ್ಶೂರೆನ್ಸ್ ಪ್ಲಾನ್! ಎಚ್‌ಡಿಎಫ್‌ಸಿ ಎರ್ಗೋ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಅಂತಾರಾಷ್ಟ್ರೀಯ ಪ್ರಯಾಣದ ಅವಧಿಯಲ್ಲಿ ಸಂಭವನೀಯ ಅಪಾಯಗಳು ಮತ್ತು ಅನಿಶ್ಚಿತತೆಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ.

ಇಂದು ನೀವು ಎಲ್ಲಿಗೆ ಹೋಗಲು ಬಯಸುತ್ತೀರಿ?

Asia

ಏಷ್ಯಾ

ನಮ್ಮ ಟ್ರಾವೆಲ್‌ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಒಂದಿಷ್ಟೂ ಚಿಂತೆ ಮಾಡದೆ ಏಷ್ಯಾದ ವೈವಿಧ್ಯತೆಯ ಅನುಭವ ಪಡೆದುಕೊಳ್ಳಿ. ಏಷ್ಯಾ ಖಂಡದ ಗಡಿ ಭಾಗಗಳಿಗೆ ಪ್ರವಾಸ ಕೈಗೊಂಡಾಗ, ಮೆಡಿಕಲ್ ಇನ್ಶೂರೆನ್ಸ್ ಕವರೇಜ್ ನಿಜವಾಗಿಯೂ ಪ್ರಯೋಜನಕ್ಕೆ ಬರುತ್ತದೆ.
Schengen countries

ಷೆಂಗೆನ್ ದೇಶಗಳು

ಶೆನ್ಜನ್ ವೀಸಾ ಹೊಂದಲು ಟ್ರಾವೆಲ್‌ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಾಗಿರುವುದು ಮಾತ್ರವಲ್ಲದೇ; ನೀವು ಹೊರಟಿರುವ ದಾರಿಯ ಪ್ರತಿ ಹೆಜ್ಜೆಯಲ್ಲಿಯೂ ಕಾಯುವವರೊಬ್ಬರು ಇದ್ದಾಗ, ಇನ್ನಷ್ಟು ಅದ್ಭುತ ಜಾಗಗಳಿಗೆ ಹೋಗಿ, ಖುಷಿಯಾಗಿ ಮಜಾ ಮಾಡಬಹುದು!
Worldwide, excluding USA and Canada

ಜಗತ್ತಿನಾದ್ಯಂತ, USA ಮತ್ತು ಕೆನಡಾ ಹೊರತುಪಡಿಸಿ

ಒಂದು ದೇಶದಿಂದ ಇನ್ನೊಂದಕ್ಕೆ ನಿರಂತರವಾಗಿ ಪ್ರವಾಸ ಮಾಡುವವರಿಗೆ, ಸಮಗ್ರ ಟ್ರಾವೆಲ್‌ ಇನ್ಶೂರೆನ್ಸ್ ಪ್ಲಾನ್ ಯಾವುದೇ ತೊಂದರೆಗಳಿಲ್ಲದೆ ವಿಶ್ವದ ಯಾವುದೇ ಭಾಗಕ್ಕೆ ಪ್ರಯಾಣ ಮಾಡುವಂತಹ ಸುರಕ್ಷತೆ ಮತ್ತು ಮನಃಶಾಂತಿ ಒದಗಿಸುತ್ತದೆ.
Worldwide coverage

ಜಗತ್ತಿನಾದ್ಯಂತ ಕವರೇಜ್

ಪ್ರತಿ ವಾರ ಬೇರೆ ದೇಶದಿಂದ ಸೂರ್ಯೋದಯವನ್ನು ನೋಡುವುದು ಸುಂದರವಾಗಿದೆ, ಆದರೆ ಜಾಗತಿಕವಾಗಿ, ನೀವು ನಿಮ್ಮ ಸುರಕ್ಷತೆಗೂ ಕೂಡ ಆದ್ಯತೆ ನೀಡಬೇಕು. ನಾವು ನಿಮ್ಮನ್ನು ಮತ್ತು ನಿಮಗೆ ಪ್ರಿಯವಾದ ಎಲ್ಲವನ್ನೂ ರಕ್ಷಿಸುತ್ತಿರುವುದರಿಂದ, ಯಾವುದೇ ಭಯವಿಲ್ಲದೆ ಜಗತ್ತನ್ನು ಸುತ್ತಿ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಏನನ್ನು ಕವರ್ ಮಾಡುತ್ತದೆ?

Emergency Medical Expenses

ತುರ್ತು ವೈದ್ಯಕೀಯ ವೆಚ್ಚಗಳು

ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.

Emergency dental expenses coverage by HDFC ERGO Travel Insurance

ದಂತ ಚಿಕಿತ್ಸೆಯ ವೆಚ್ಚಗಳು

ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Personal Accident

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.

Personal Accident : Common Carrier

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.

Hospital cash - accident & illness

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.

Flight Delay coverage by HDFC ERGO Travel Insurance

ವಿಮಾನ ವಿಳಂಬ ಮತ್ತು ರದ್ದತಿ

ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

Trip Delay & Cancellation

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Loss Of Baggage & Personal Documents by HDFC ERGO Travel Insurance

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ

ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.

Trip Curtailment

ಟ್ರಿಪ್ ಮೊಟಕುಗೊಳಿಸುವಿಕೆ

ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ರಿಯಂಬ್ರಸ್ಮೆಂಟ್ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ.

Personal Liability coverage by HDFC ERGO Travel Insurance

ವೈಯಕ್ತಿಕ ಹೊಣೆಗಾರಿಕೆ

ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Trip Curtailment

ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ತುರ್ತು ಹೋಟೆಲ್ ವಸತಿ

ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ

Missed Flight Connection flight

ತಪ್ಪಿಹೋದ ಫ್ಲೈಟ್ ಕನೆಕ್ಷನ್

ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ.

Loss of Passport & International driving license :

ಹೈಜಾಕ್ ಅಪಾಯದ ಭತ್ಯೆ

ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.

Hospital cash - accident & illness

ತುರ್ತು ನಗದು ಸಹಾಯ ಸೇವೆ

ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Loss Of Checked-In Baggage by HDFC ERGO Travel Insurance

ಚೆಕ್-ಇನ್ ಬ್ಯಾಗೇಜ್ ನಷ್ಟ

ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

Delay Of Checked-In Baggage by HDFC ERGO Travel Insurance

ಚೆಕ್-ಇನ್ ಬ್ಯಾಗೇಜ್ ವಿಳಂಬ

ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.

Loss of Passport & International driving license :

ಬ್ಯಾಗೇಜ್ ಮತ್ತು ಅದರ ವಸ್ತುಗಳ ಕಳ್ಳತನ

ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಏನನ್ನು ಕವರ್ ಮಾಡುವುದಿಲ್ಲ?

Breach of Law

ಕಾನೂನು ಉಲ್ಲಂಘನೆ

ಯುದ್ಧ, ಗಾಯ ಅಥವಾ ಕಾನೂನು ಉಲ್ಲಂಘನೆಯಿಂದ ಉಂಟಾದ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಗಳು.

Consumption Of Intoxicant Substances not covered by HDFC ERGO Travel Insurance

ಮಾದಕ ಪದಾರ್ಥಗಳ ಬಳಕೆ

ನೀವು ಮಾದಕ ಅಥವಾ ನಿಷೇಧಿತ ಪದಾರ್ಥಗಳನ್ನು ಬಳಸಿದರೆ, ಯಾವುದೇ ಕ್ಲೇಮ್‌ಗಳನ್ನು ಪಾಲಿಸಿಯು ಅವಕಾಶ ನೀಡುವುದಿಲ್ಲ.

Pre Existing Diseases not covered by HDFC ERGO Travel Insurance

ಮೊದಲೇ ಇದ್ದ ಕಾಯಿಲೆಗಳು

ಪ್ರಯಾಣ ಮಾಡುವ ಮೊದಲು ನೀವು ರೋಗದಿಂದ ಬಳಲುತ್ತಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾವು ಅದನ್ನು ಕವರ್ ಮಾಡುವುದಿಲ್ಲ.

Cosmetic And Obesity Treatment not covered by HDFC ERGO Travel Insurance

ಕಾಸ್ಮೆಟಿಕ್ ಮತ್ತು ಬೊಜ್ಜಿನ ಚಿಕಿತ್ಸೆ

ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಪಡೆಯಲು ಇಚ್ಛಿಸಿದರೆ, ಪಾಲಿಸಿಯು ಅದನ್ನು ಕವರ್ ಮಾಡುವುದಿಲ್ಲ.

Self Inflicted Injury not covered by HDFC ERGO Travel Insurance

ತಾವೇ ಮಾಡಿಕೊಂಡ ಗಾಯಗಳು

ನಿಮಗೆ ನೀವೇ ಹಾನಿ ಮಾಡಿಕೊಂಡರೆ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ತಲುಪಿದರೆ, ನಾವು ನಿಮಗೆ ಪಾಲಿಸಿಯಡಿ ಕವರ್ ನೀಡಲು ಸಾಧ್ಯವಿಲ್ಲ

Self Inflicted Injury not covered by HDFC ERGO Travel Insurance

ಸಾಹಸ ಕ್ರೀಡೆಗಳು

ಸಾಹಸ ಕ್ರೀಡೆಯಿಂದ ಆದ ಯಾವುದೇ ಹಾನಿಯು ಪಾಲಿಸಿಯಡಿ ಕವರ್ ಆಗುವುದಿಲ್ಲ.

ಹೆಚ್ಚಾಗಿ ಭೇಟಿ ನೀಡಿದ ದೇಶಗಳಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್

ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ

ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು

Trip Duration and Travel Insurance

ಫ್ಯಾಮಿಲಿ ಸಿಂಗಲ್ ಟ್ರಿಪ್ ಇಂಟರ್ನ್ಯಾಷನಲ್ ಇನ್ಶೂರೆನ್ಸ್

ಹೆಸರೇ ಸೂಚಿಸುವಂತೆ, ಸಿಂಗಲ್‌ ಟ್ರಿಪ್ ಇಂಟರ್‌ನ್ಯಾಷನಲ್ ಇನ್ಶೂರೆನ್ಸ್ ಒಂದೇ ಒಂದು ಸಲ ನಿರ್ದಿಷ್ಟ ವಿದೇಶಿ ಸ್ಥಳಕ್ಕೆ ಪ್ರವಾಸ ಮಾಡಲು ಬಯಸುವವರಿಗೆ ಸರಿಹೊಂದುತ್ತದೆ. ನೀವು ಜಾರ್ಜಿಯಾ ಅಥವಾ ಬಹಾಮಾಸ್‌ಗೆ ಸೋಲೋ ಬ್ಯಾಕ್‌ಪ್ಯಾಕಿಂಗ್ ಮಾಡಲು ಅಥವಾ U.S.Aಗೆ ಬಿಸಿನೆಸ್ ಕಾನ್ಫರೆನ್ಸ್‌ಗೆ ಹೋಗಲು ಬಯಸುವವರಾದರೆ, ಈ ಟ್ರಾವೆಲ್‌ ಇನ್ಶೂರೆನ್ಸ್ ನಿಮಗೆ ಸೂಕ್ತವಾಗಿದೆ. ಒಂದು ವೇಳೆ ನೀವು ಸ್ನೇಹಿತರ ಗುಂಪಿನೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸ ಮಾಡಲು ಬಯಸುತ್ತಿದ್ದರೆ, ಇದು ಚೆನ್ನಾಗಿ ಹೊಂದುತ್ತದೆ. ಕಾಯಿಲೆ ಬಿದ್ದಾಗ ಅಥವಾ ಆಕಸ್ಮಿಕ ಗಾಯಗಳಾದಾಗ ವೈದ್ಯಕೀಯ ಕವರ್ ನೀಡುವ ಮೂಲಕ, ಎಚ್‌ಡಿಎಫ್‌ಸಿ ಎರ್ಗೋ ಸಮಗ್ರ ಪ್ರಯೋಜನಗಳನ್ನು ಒದಗಿಸುತ್ತದೆ.


Trip Destination & Travel Insurance

ಫ್ಯಾಮಿಲಿ ಮಲ್ಟಿ ಟ್ರಿಪ್ ವೈಯಕ್ತಿಕ ಇನ್ಶೂರೆನ್ಸ್

ಯಾವಾಗಲೂ ಪ್ರವಾಸ ಮಾಡಲು ಮತ್ತು ಅನೇಕ ದೇಶಗಳಿಗೆ ಹೋಗಲು ಬಯಸುವವರಿಗೆ ಅಥವಾ ವರ್ಷಕ್ಕೆ ಅನೇಕ ಬಾರಿ ಒಂದೇ ದೇಶಕ್ಕೆ ಭೇಟಿ ನೀಡಲು ಬಯಸುವವರಿಗೆ, ಈ ಇನ್ಶೂರೆನ್ಸ್ ಸೂಕ್ತವಾಗಿದೆ.. ಈ ಇನ್ಶೂರೆನ್ಸ್‌ ಅನೇಕ ನವೀಕರಣಗಳ ತೊಂದರೆಯಿಂದ ನಿಮ್ಮನ್ನು ಕಾಪಾಡುತ್ತದೆ.. ನೀವು ಇದನ್ನು ಇಡೀ ವರ್ಷಕ್ಕೆ ಖರೀದಿಸಬಹುದು ಮತ್ತು ಪ್ರತಿಯೊಂದು ಪ್ರವಾಸಕ್ಕೂ ಟ್ರಾವೆಲ್‌ ಇನ್ಶೂರೆನ್ಸ್ ಪಡೆಯುವ ಬಗ್ಗೆ ಚಿಂತಿಸದೆ ಪ್ರಯಾಣ ಮಾಡಬಹುದು.. ಪದೇಪದೇ ವಿಮಾನ ಪ್ರಯಾಣ ಮಾಡುವವರಿಗೆ ಇದು ಉತ್ತಮವಾಗಿದೆ!


Coverage Amount & Travel Insurance

ಫ್ಯಾಮಿಲಿ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್

ವೈದ್ಯಕೀಯ ಅಗತ್ಯತೆಗಳಿಗೆ ಈ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ.! ಅಂತರರಾಷ್ಟ್ರೀಯ ಸ್ಥಳಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿ ಎಂದು ನಮಗೆಲ್ಲಾ ಗೊತ್ತು. ಸಣ್ಣ ಗಾಯ ಅಥವಾ ಜ್ವರದ ಚಿಕಿತ್ಸೆಯೂ ಕೂಡ ನಿಮ್ಮ ಟ್ರಿಪ್‌ ಬಜೆಟ್‌ಗೆ ಘಾಸಿ ಉಂಟುಮಾಡಬಹುದು.. ಆದ್ದರಿಂದ, ಮೆಡಿಕಲ್ ಕವರೇಜ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ನಾವು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತೇವೆ:

● ತುರ್ತು ವೈದ್ಯಕೀಯ ವೆಚ್ಚಗಳು

● ದಂತ ವೆಚ್ಚಗಳು

● ವೈಯಕ್ತಿಕ ಅಪಘಾತ

● ಆಸ್ಪತ್ರೆ ನಗದು


ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿರುವ ದೇಶಗಳ ಪಟ್ಟಿ

ಕಡ್ಡಾಯವಾಗಿ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ಕೆಲವು ದೇಶಗಳು ಹೀಗಿವೆ: ಇದು ಅಂತಹ ದೇಶಗಳನ್ನು ಸೂಚಿಸುವ ಪಟ್ಟಿಯಷ್ಟೇ. ಹೊರಡುವ ಮೊದಲು ಪ್ರತ್ಯೇಕವಾಗಿ ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದು ಒಳ್ಳೆಯದು.

my:health medisure super top-up plan

ಷೆಂಗೆನ್ ದೇಶಗಳು

  • ಫ್ರಾನ್ಸ್
  • ಸ್ಪೇನ್
  • ಬೆಲ್ಜಿಯಂ
  • ಆಸ್ಟ್ರಿಯಾ
  • ಇಟಲಿ
  • ಸ್ವೀಡನ್
  • ಲಿಥುವೇನಿಯಾ
  • ಜರ್ಮನಿ
  • ನೆದರ್‌ಲ್ಯಾಂಡ್ಸ್
  • ಪೋಲೆಂಡ್
  • ಫಿನ್ಲ್ಯಾಂಡ್
  • ನಾರ್ವೆ
  • ಮಾಲ್ಟಾ
  • ಪೋರ್ಚುಗಲ್
  • ಸ್ವಿಜರ್ಲ್ಯಾಂಡ್
  • ಎಸ್ಟೋನಿಯಾ
  • ಡೆನ್ಮಾರ್ಕ್
  • ಗ್ರೀಸ್
  • ಐಸ್‌ಲ್ಯಾಂಡ್
  • ಸ್ಲೊವಾಕಿಯಾ
  • ಜೆಕಿಯಾ
  • ಹಂಗೇರಿ
  • ಲಾಟ್ವಿಯಾ
  • ಸ್ಲೊವೇನಿಯಾ
  • ಲಿಕ್ಟೆನ್‌ಸ್ಟೈನ್ ಮತ್ತು ಲಕ್ಸೆಂಬರ್ಗ್
my:health medisure super top-up plan

ಇತರ ದೇಶಗಳು

  • ಕ್ಯೂಬಾ
  • ಈಕ್ವೆಡಾರ್
  • ಇರಾನ್
  • ಟರ್ಕಿ
  • ಮೊರಾಕೊ
  • ಥಾಯ್ಲ್ಯಾಂಡ್
  • UAE
  • ಟೋಗೊ
  • ಆಲ್ಜೀರಿಯಾ
  • ರೊಮೇನಿಯಾ
  • ಕ್ರೊಯೇಷಿಯಾ
  • ಮೊಲ್ಡೊವಾ
  • ಜಾರ್ಜಿಯಾ
  • ಅರುಬಾ
  • ಕಾಂಬೋಡಿಯ
  • ಲೆಬನಾನ್
  • ಸೇಶೆಲ್ಸ್
  • ಅಂಟಾರ್ಟಿಕಾ

ಮೂಲ: VisaGuide.World

ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

4.4/5 ಸ್ಟಾರ್‌ಗಳು
rating

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

slider-right
quote-icons
female-face
ಜಾಗೃತಿ ದಹಿಯಾ

ವಿದ್ಯಾರ್ಥಿ ಸುರಕ್ಷಾ ಸಾಗರೋತ್ತರ ಟ್ರಾವೆಲ್

10 ಸೆಪ್ಟೆಂಬರ್ 2021

ಸೇವೆಯಿಂದ ಸಂತೋಷವಾಗಿದೆ

quote-icons
male-face
ವೈದ್ಯನಾಥನ್ ಗಣೇಶನ್

ನನ್ನ:ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್

05 ಜುಲೈ 2019

ಎಚ್‌ಡಿಎಫ್‌ಸಿ ಇನ್ಶೂರೆನ್ಸ್ ಆಯ್ಕೆ ಮಾಡುವ ಮೊದಲು, ನಾನು ಕೆಲವು ಬೇರೆಬೇರೆ ಇನ್ಶೂರೆನ್ಸ್ ಪಾಲಿಸಿಗಳನ್ನೂ ನೋಡಿದ್ದೇನೆ. ಪ್ರತಿ ತಿಂಗಳು ನನ್ನ ಕಾರ್ಡ್‌ನಿಂದ ನಿಗದಿತ ಮೊತ್ತ ಸ್ವಯಂ ಕಡಿತವಾಗುವ ಜೊತೆಗೆ, ಗಡುವು ದಿನಾಂಕದ ರಿಮೈಂಡರ್ ಸಹ ಕಳುಹಿಸಲಾಗುತ್ತದೆ. ಇವರ ಆ್ಯಪ್‌ ಬಳಸಲು ಸುಲಭವಾಗಿದ್ದು, ಬೇರೆ ಇನ್ಶೂರೆನ್ಸ್ ಕಂಪನಿಗಳಿಗೆ ಹೋಲಿಸಿದರೆ, ನನಗೆ ಉತ್ತಮ ಅನುಭವ ನೀಡುತ್ತಿದೆ.

quote-icons
female-face
ಸಾಕ್ಷಿ ಅರೋರಾ

ನನ್ನ:ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್

05 ಜುಲೈ 2019

ಒಳ್ಳೆಯ ಅಂಶಗಳು: - ಅತ್ಯುತ್ತಮ ಬೆಲೆ: ಕಳೆದ ಮೂರು ನಾಲ್ಕು ವರ್ಷಗಳಿಂದ ಬೇರೆ ವಿಮಾದಾತರು ಕೋಟ್‌ ಮಾಡಿದ ಬೆಲೆಯು ಎಲ್ಲಾ ರೀತಿಯ ರಿಯಾಯಿತಿಗಳು ಮತ್ತು ಸದಸ್ಯತ್ವದ ಪ್ರಯೋಜನಗಳನ್ನು ಒಳಗೊಂಡ ಮೇಲೂ, 50-100% ಹೆಚ್ಚಾಗಿತ್ತು - ಅತ್ಯುತ್ತಮ ಸೇವೆ: ಬಿಲ್ಲಿಂಗ್, ಪಾವತಿ, ಡಾಕ್ಯುಮೆಂಟೇಶನ್ ಆಯ್ಕೆಗಳು ಸಿಗುತ್ತವೆ - ಅತ್ಯುತ್ತಮ ಗ್ರಾಹಕ ಸೇವೆ: ಕಾಲಕಾಲಕ್ಕೆ ಸುದ್ದಿಪತ್ರಗಳು, ಪ್ರತಿನಿಧಿಗಳಿಂದ ತ್ವರಿತ ಮತ್ತು ವೃತ್ತಿಪರ ಉತ್ತರಗಳು ಸಿಗುತ್ತವೆ. ಕೆಟ್ಟ ಅಂಶಗಳು: - ಇಲ್ಲಿಯವರೆಗೂ ಯಾವುದೂ ಇಲ್ಲ

slider-left

ಇತ್ತೀಚಿನ ಟ್ರಾವೆಲ್ ಇನ್ಶೂರೆನ್ಸ್ ಬ್ಲಾಗ್‌ ಗಳನ್ನು ಓದಿ

slider-right
Critical Benefits That Travel Insurance Must Have

ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕಾದ ನಿರ್ಣಾಯಕ ಪ್ರಯೋಜನಗಳು

ಇನ್ನಷ್ಟು ಓದಿ
27 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ

ಫ್ರಾನ್ಸ್‌ನಲ್ಲಿ UPI ಬಳಸುವುದು: ಇದು ಹೇಗೆ ಕೆಲಸ ಮಾಡುತ್ತದೆ, ಶುಲ್ಕಗಳು ಮತ್ತು ಇನ್ನಷ್ಟು

ಇನ್ನಷ್ಟು ಓದಿ
27 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ
Passport for senior citizens in India

ಭಾರತದ ಹಿರಿಯ ನಾಗರಿಕರಿಗೆ ಪಾಸ್‌ಪೋರ್ಟ್

ಇನ್ನಷ್ಟು ಓದಿ
27 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ
Common Tourist Scams and How to Avoid Them

ಸಾಮಾನ್ಯ ಪ್ರವಾಸಿ ವಂಚನೆಗಳು ಮತ್ತು ಅವುಗಳನ್ನು ತಪ್ಪಿಸುವುದು ಹೇಗೆ

ಇನ್ನಷ್ಟು ಓದಿ
26 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ
slider-left

ಆಗಾಗ ಕೇಳುವ ಪ್ರಶ್ನೆಗಳು

ಹೌದು. ನಿಮಗಿಂತ ಕಿರಿಯ ವಯಸ್ಸಿನ ಸಂಗಾತಿಯು ಪ್ರಪೋಸರ್ ಆಗಬಹುದು.

ಹೌದು, ನಾವು ಟ್ರಿಪ್ ರದ್ದತಿಯನ್ನು ಕವರ್ ಮಾಡುತ್ತೇವೆ. ಟ್ರಿಪ್ ರದ್ದತಿಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ-ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ.

ಹೌದು. ನೀವು ಪಾಲಿಸಿಯ ವೈಯಕ್ತಿಕ ಹೊಣೆಗಾರಿಕೆ ವಿಭಾಗದ ಅಡಿಯಲ್ಲಿ ಇದನ್ನು ಕ್ಲೈಮ್ ಮಾಡಬಹುದು.

ಚೆಕ್‌-ಇನ್‌ ಆದ ಬ್ಯಾಗೇಜ್ ಕೈಸೇರಲು ವಿಳಂಬವಾದರೆ, ಈ ಪ್ರಯೋಜನವು ಇನ್ಶೂರ್ಡ್‌ ವ್ಯಕ್ತಿಗೆ ಟಾಯ್ಲೆಟ್ರಿಗಳು, ಬಟ್ಟೆ, ಔಷಧಿ, ಇತ್ಯಾದಿ ಅಗತ್ಯ ವೈಯಕ್ತಿಕ ವಸ್ತುಗಳ ಖರೀದಿಯ ವೆಚ್ಚವನ್ನು ಮರುಪಾವತಿಸುತ್ತದೆ.

ಚೆಕ್‌-ಇನ್‌ ಆದ ಬ್ಯಾಗೇಜ್‌ ಶಾಶ್ವತ ಹಾನಿಗೊಳಗಾಗಿದ್ದರೆ ಅಥವಾ ಕಳೆದುಹೋದರೆ, ಈ ಪ್ರಯೋಜನವು ಇನ್ಶೂರ್ಡ್ ವ್ಯಕ್ತಿಗೆ ತಮ್ಮ ವೈಯಕ್ತಿಕ ವಸ್ತುಗಳ ಬದಲಾವಣೆ ವೆಚ್ಚವನ್ನು ಮರುಪಾವತಿಸುತ್ತದೆ.

ಇಲ್ಲ. ಚೆಕ್‌-ಇನ್‌ ಆದ ನಂತರ ಬ್ಯಾಗೇಜ್ ಮತ್ತು/ಅಥವಾ ವೈಯಕ್ತಿಕ ವಸ್ತುಗಳು ಕಳೆದುಹೋದರೆ, ಬ್ಯಾಗೇಜ್ ವಿಳಂಬ ವಿಭಾಗದ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಯು ಕ್ಲೈಮ್ ಮಾಡಿ, ಪಾವತಿ ಪಡೆದುಕೊಂಡಿರುವ ಯಾವುದೇ ಮೊತ್ತವನ್ನು, ಬ್ಯಾಗೇಜ್ ನಷ್ಟ ವಿಭಾಗದ ಅಡಿಯಲ್ಲಿ ಪಡೆದುಕೊಂಡಿರುವ ಯಾವುದೇ ಪಾವತಿಯಿಂದ ಕಡಿತಗೊಳಿಸಲಾಗುತ್ತದೆ.

ಹೌದು. ತುರ್ತು ದಂತ ಚಿಕಿತ್ಸೆಯು ರಿಯಂಬ್ರಸ್ಮೆಂಟ್ ಆಧಾರದಲ್ಲಿ ಪಾಲಿಸಿಯಲ್ಲಿ ಕವರ್ ಆಗಿದೆ.

ಚೆಕ್‌-ಇನ್‌ ಆದ ಬ್ಯಾಗೇಜ್ ವಿಳಂಬವಾದ ಸಂದರ್ಭದಲ್ಲಿ ವೈಯಕ್ತಿಕ ಅಗತ್ಯತೆಗಳ ವೆಚ್ಚವನ್ನು ತುಂಬಿಕೊಡುವುದರಿಂದ, ನೀವು ಮನೆಗೆ ಹಿಂತಿರುಗಿದ ಮೇಲೆ ಖರ್ಚಿನ ಬಗ್ಗೆ ಯೋಚಿಸುವ ಅಗತ್ಯ ಇರುವುದಿಲ್ಲ. ಚೆಕ್-ಇನ್ ಆದ ಬ್ಯಾಗೇಜ್ ನಷ್ಟವನ್ನು ಎರಡು ಕಡೆಯಲ್ಲಿಯೂ ಕವರ್ ಮಾಡಲಾಗುತ್ತದೆ. ಆದರೆ ಚೆಕ್-ಇನ್ ಆದ ಬ್ಯಾಗೇಜ್ ವಿಳಂಬದ ನಷ್ಟವನ್ನು, ವಿಳಂಬವಾದ ಮಾರ್ಗದಲ್ಲಿ ಮಾತ್ರ ಕವರ್ ಮಾಡಲಾಗುತ್ತದೆ.

ಹೆಸರೇ ಹೇಳುವಂತೆ, ಸಿಂಗಲ್ ಟ್ರಿಪ್ ಮಲ್ಟಿ ಇನ್ಶೂರೆನ್ಸ್ ಎಂಬುದು ಒಂದೇ ಟ್ರಿಪ್‌ನಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಎಲ್ಲರಿಗೂ ಸೂಕ್ತವಾಗಿದೆ. ಅದು ಲೀಸರ್ ಟ್ರಿಪ್ ಆಗಿದ್ದರೂ ಸರಿ, ಬಿಸಿನೆಸ್ ಕಾನ್ಫರೆನ್ಸ್ ಆದರೂ ಸರಿ. ಸಾಮಾನ್ಯವಾಗಿ, ಮಲ್ಟಿ ಟ್ರಿಪ್ ಇನ್ಶೂರೆನ್ಸ್ ಅನ್ನು ವರ್ಷಕ್ಕೊಮ್ಮೆ ಖರೀದಿಸುತ್ತಾರೆ. ಆಗಾಗ್ಗೆ ವಿದೇಶ ಪ್ರಯಾಣ ಮಾಡುವ ಎಲ್ಲರಿಗೂ ಇದು ಸೂಕ್ತವಾಗುತ್ತದೆ. ಕೇವಲ ಒಂದು ಬಾರಿ ಪ್ರವಾಸ ಹೋಗುವವರಿಗಲ್ಲ, ಬದಲಿಗೆ ಹೆಚ್ಚಿಗೆ ಪ್ರಯಾಣ ಮಾಡುವವರಿಗೆ.. ಇದರ ಮೂಲಕ, ನೀವು ಪ್ರತಿ ಸಲ ವಿದೇಶಕ್ಕೆ ಹಾರುವಾಗಲೂ ಪಾಲಿಸಿ ನವೀಕರಿಸುವ ಮತ್ತು ಹೊಸ ಪಾಲಿಸಿ ಖರೀದಿಸುವ ಕಿರಿಕಿರಿ ತಪ್ಪಿಸಬಹುದು. ನೀವು ಒಂದು ಬಾರಿ ಟ್ರಾವೆಲ್‌ ಇನ್ಶೂರೆನ್ಸ್ ಪಾಲಿಸಿ ಖರೀದಿಸಿ ಮತ್ತು ವರ್ಷ ಪೂರ್ತಿ ಪ್ರಯಾಣ ಮಾಡುತ್ತಿರಿ.

ಅತ್ಯುತ್ತಮ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಬೇರೆಬೇರೆ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವಾಗ, ನೀವು ಕವರೇಜ್ ಮತ್ತು ಪ್ರೀಮಿಯಂ ಅನ್ನು ಹೋಲಿಕೆ ಮಾಡಬೇಕು. ಆಗ, ಕೈಗೆಟಕುವ ಪ್ರೀಮಿಯಂನಲ್ಲಿ ಗರಿಷ್ಠ ಕವರೇಜ್ ಸಿಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಬಹುದು.

ಎಲ್ಲಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳೂ ಒಂದಿಷ್ಟು ಕವರೇಜ್‌ ಮತ್ತು ಹೊರಪಡಿಕೆಗಳನ್ನು ಹೊಂದಿರುತ್ತವೆ. ಒಟ್ಟಿನಲ್ಲಿ, ವಿದೇಶ ಪ್ರವಾಸದ ವೇಳೆ ಆಗುವ ಅನಿರೀಕ್ಷಿತ ಗಾಯ ಅಥವಾ ಅನಾರೋಗ್ಯ, ಫ್ಲೈಟ್ ವಿಳಂಬ ಅಥವಾ ಲಗೇಜ್ ನಷ್ಟ, ಇತ್ಯಾದಿಗಳಿಂದ ಉಂಟಾಗುವ ತುರ್ತು ವೆಚ್ಚಗಳನ್ನು ಕವರ್ ಮಾಡುವ ಯಾವುದೇ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ತುಂಬಾ ಸೂಕ್ತವಾಗುತ್ತದೆ. ಆದಾಗ್ಯೂ, ಅತ್ಯುತ್ತಮ ಟ್ರಾವೆಲ್‌ ಇನ್ಶೂರೆನ್ಸ್ ಪ್ಲಾನ್‌ ಆಯ್ಕೆ ಮಾಡುವ ಮೊದಲು, ಬ್ರ್ಯಾಂಡ್ ಮತ್ತು ಮುಂಚಿತವಾಗಿ ಆ ಪಾಲಿಸಿ ಪಡೆದುಕೊಂಡಿದ್ದ ಗ್ರಾಹಕರ ಅಭಿಪ್ರಾಯವನ್ನೂ ಪರಿಶೀಲಿಸಿ.

ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಎಚ್‌ಡಿಎಫ್‌ಸಿ ಎರ್ಗೋಗೆ ನೀವು ಈ ಕೆಳಗಿನ ವಿವರಗಳನ್ನು ಒದಗಿಸಬೇಕಾಗುತ್ತದೆ -

● ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳು

● ನಿಮ್ಮೊಂದಿಗೆ ಪ್ರಯಾಣಿಸುತ್ತಿರುವ ಎಲ್ಲಾ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು

● ಪ್ರಯಾಣಿಸುವ ಸದಸ್ಯರೊಂದಿಗೆ ಸಂಬಂಧ

● ಭೇಟಿಯ ದೇಶಗಳು

● ಪ್ರಯಾಣದ ಅವಧಿ

● ನಿಮ್ಮ ಪಾಸ್‌ಪೋರ್ಟ್ ವಿವರಗಳು

● ನೀವು ಬಯಸುವ ಪ್ಲಾನ್ ರೂಪಾಂತರ

● ನೀವು ಅಥವಾ ಕುಟುಂಬದ ಯಾವುದೇ ಸದಸ್ಯರು ಮುಂಚಿತವಾಗಿ ಇರುವ ಯಾವುದೇ ಪರಿಸ್ಥಿತಿ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ

● ಇನ್ಶೂರೆನ್ಸ್ ಕಂಪನಿಗೆ ಅಗತ್ಯವಿರುವ ಯಾವುದೇ ಇತರ ವಿವರಗಳು

ಈ ವಿವರಗಳ ಆಧಾರದ ಮೇಲೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಬರೆಯಲಾಗುತ್ತದೆ ಮತ್ತು ನೀಡಲಾಗುತ್ತದೆ.

ಇಲ್ಲ, ಎಚ್‌ಡಿಎಫ್‌ಸಿ ಎರ್ಗೋ 70 ವರ್ಷಗಳವರೆಗಿನ ವಯಸ್ಸಿನ ಸದಸ್ಯರಿಗೆ ಮಾತ್ರ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ.

ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ನೀವು ಎಚ್‌ಡಿಎಫ್‌ಸಿ ಎರ್ಗೋದ TPA ಅಲಾಯನ್ಸ್ ಗ್ಲೋಬಲ್ ಅಸಿಸ್ಟ್ ಅನ್ನು ಸಂಪರ್ಕಿಸಬೇಕು. ನೀವು ಕ್ಲೈಮ್‌ಗಳ ನಗದುರಹಿತ ಸೆಟಲ್ಮೆಂಟ್ ಬಯಸಿದರೆ, ನೀವು TPA ಮತ್ತು ಇನ್ಶೂರೆನ್ಸ್ ಕಂಪನಿಯೊಂದಿಗೆ ಟೈ ಅಪ್ ಆಗಿರುವ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಮತ್ತೊಂದೆಡೆ, ನೀವು ರಿಯಂಬ್ರಸ್ಮೆಂಟ್ ಕ್ಲೈಮ್‌ಗಳನ್ನು ಒಪ್ಪುವುದಾದರೆ, ಯಾವುದೇ ಆಸ್ಪತ್ರೆಗೆ ಕೂಡಾ ಭೇಟಿ ನೀಡಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋದ TPA ಗೆ ತಿಳಿಸಿದ ನಂತರ, ಯಾವ ಆಸ್ಪತ್ರೆಗೆ ಭೇಟಿ ನೀಡಬೇಕು ಎಂಬುದರ ಬಗ್ಗೆ TPA ನಿಮಗೆ ಮಾರ್ಗದರ್ಶನ ನೀಡುತ್ತದೆ.

ಪ್ರಸ್ತುತ, ನಾವು ಪ್ರಯಾಣದ ವಿಸ್ತರಣೆಯನ್ನು ಒದಗಿಸುವುದಿಲ್ಲ

ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಪಡೆಯುವಾಗಲೇ, ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ, ಅದನ್ನು ಮುಂಚಿತ- ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ನೀವು ಅಥವಾ ಕುಟುಂಬದ ಯಾವುದೇ ಸದಸ್ಯರು ಸಕ್ಕರೆ ಕಾಯಿಲೆ ಅಥವಾ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಅವುಗಳನ್ನು ಮುಂಚಿತ- ಅಸ್ತಿತ್ವದಲ್ಲಿರುವ ಕಾಯಿಲೆಗಳೆಂದು ಪರಿಗಣಿಸಲಾಗುತ್ತದೆ.

ಇಲ್ಲ, ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ಪ್ರಯಾಣದ ವೇಳೆ ಮುಂಚಿತ-ಅಸ್ತಿತ್ವದಲ್ಲಿರುವ ಸ್ಥಿತಿಯಿಂದಾಗಿ ನೀವು ಯಾವುದೇ ವೈದ್ಯಕೀಯ ಸಮಸ್ಯೆಯನ್ನು ಎದುರಿಸಿದರೆ, ಕವರೇಜ್ ನೀಡಲಾಗುವುದಿಲ್ಲ.

ಹೌದು, ಅದನ್ನು ಖರೀದಿಸಿದ ನಂತರ ನೀವು ನಿಮ್ಮ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ರದ್ದು ಮಾಡಬಹುದು. ಆದಾಗ್ಯೂ, ಪ್ರಯಾಣ ಪ್ರಾರಂಭವಾಗುವ ಮೊದಲು, ನೀವು ಯೋಜನೆಯ ಮೇಲೆ ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದರೆ ಮಾತ್ರ ಈ ರದ್ದತಿಯನ್ನು ಅನುಮತಿಸಲಾಗುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ರದ್ದುಪಡಿಸುವಾಗ ರದ್ದತಿ ಶುಲ್ಕಗಳು ಅನ್ವಯವಾಗುತ್ತವೆ ಎಂಬುದನ್ನು ಗಮನಿಸಿ.

ನಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಅನೇಕ ಕುಟುಂಬ ಸಂಬಂಧಗಳನ್ನು ಕವರ್ ಮಾಡುತ್ತದೆ, ಆದ್ದರಿಂದ ನೀವು 12 ಕುಟುಂಬದ ಸದಸ್ಯರನ್ನು ಇನ್ಶೂರ್ ಮಾಡಬಹುದು

ಗ್ರಾಹಕರು ಈಗಾಗಲೇ ವಿದೇಶಕ್ಕೆ ಪ್ರಯಾಣಿಸಿದ್ದರೆ ಪಾಲಿಸಿಯನ್ನು ನೀಡಲಾಗುವುದಿಲ್ಲ.

ಹೌದು, ನೀವು US ನಿಂದ ನಿಮ್ಮ ಪೋಷಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಆ ಪ್ಲಾನ್ ಮಾನ್ಯವಾಗಿರುತ್ತದೆ. ಆದಾಗ್ಯೂ, ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ

● ಪ್ರೀಮಿಯಂ ಅನ್ನು ₹ ನಲ್ಲಿ ಪಾವತಿಸಬೇಕು

● ಪೂರ್ವ-ಪ್ರವೇಶ ಆರೋಗ್ಯ ತಪಾಸಣೆಗಳ ಅಗತ್ಯವಿದ್ದರೆ, ನಿಮ್ಮ ಪೋಷಕರು ಭಾರತದಲ್ಲಿ ಅಂತಹ ತಪಾಸಣೆಗಳನ್ನು ಮಾಡಿಸಬೇಕು, ಅದರ ನಂತರ ಪಾಲಿಸಿಯನ್ನು ನೀಡಲಾಗುತ್ತದೆ

ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನವೀಕರಿಸಬಹುದು. https://www.hdfcergo.com/renew-hdfc-ergo-policy ಗೆ ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರ್, ಇಮೇಲ್ ID ಅಥವಾ ಪಾಲಿಸಿ ನಂಬರ್ ನಮೂದಿಸಿ. 'ಈಗಲೇ ನವೀಕರಿಸಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮಿಷಗಳಲ್ಲಿ ಪ್ಲಾನ್ ನವೀಕರಣ ಪ್ರಕ್ರಿಯೆಯನ್ನು ಅನುಸರಿಸಿ. ಆದಾಗ್ಯೂ, ವಾರ್ಷಿಕ ಮಲ್ಟಿ-ಟ್ರಿಪ್ ಪಾಲಿಸಿಗಳಿಗೆ ಮಾತ್ರ ನವೀಕರಣವನ್ನು ಅನುಮತಿಸಲಾಗುತ್ತದೆ. ಸಿಂಗಲ್ ಟ್ರಿಪ್ ಪಾಲಿಸಿಗಳನ್ನು ನವೀಕರಿಸಲು ಸಾಧ್ಯವಿಲ್ಲ.

buy a Traavel insurance plan
ಹಾಗಾದರೆ ನೀವು ಬೇರೆ ಪ್ಲಾನ್‌ಗಳೊಂದಿಗೆ ಹೋಲಿಸಿ ನಿಮಗೆ ಹೆಚ್ಚು ಸೂಕ್ತವಾಗುವ ಪ್ಲಾನ್ ಆರಿಸಿಕೊಂಡಿರುವಿರಾ?

ಅವಾರ್ಡ್ಸ್ ಮತ್ತು ಗುರುತಿಸುವಿಕೆ

Image

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಅವಾರ್ಡ್ಸ್ 2014-15

Image

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್ 2015

Image

iAAA ರೇಟಿಂಗ್

Image

ISO ಪ್ರಮಾಣೀಕರಣ

Image

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

Scroll Right
Scroll Left
ಎಲ್ಲಾ ಪ್ರಶಸ್ತಿಗಳನ್ನು ನೋಡಿ
Buy Travel Insurance Plan Online From HDFC ERGO

ಪೂರ್ತಿಯಾಗಿ ಓದಿದಿರಾ? ಟ್ರಾವೆಲ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?