ಹೋಮ್ / ಹೋಮ್ ಇನ್ಶೂರೆನ್ಸ್ / ಆಭರಣಗಳಿಗೆ ಇನ್ಶೂರೆನ್ಸ್

ನಿಮ್ಮ ಮನೆಗೆ ಜ್ಯುವೆಲರಿ ಇನ್ಶೂರೆನ್ಸ್ ಕವರೇಜ್

ನಿಮ್ಮ ತಾಯಿ ಉಡುಗೊರೆಯಾಗಿ ನೀಡಿದ ಚಿನ್ನದ ನೆಕ್ಲೇಸ್ ಆಗಲಿ, ನಿಮ್ಮ ಪತಿ ಪ್ರೀತಿಯನ್ನು ನಿವೇದಿಸುವಾಗ ಕೊಟ್ಟ ವಜ್ರದ ಉಂಗುರವಾಗಲಿ, ಶುಭ ಸಂದರ್ಭಗಳಲ್ಲಿ ನೀವು ಖರೀದಿಸಿದ ಚಿನ್ನ- ಬೆಳ್ಳಿಯ ನಾಣ್ಯಗಳಾಗಲಿ, ಆಭರಣಗಳು ಸಾಮಾಜಿಕ ಕೂಟಗಳಲ್ಲಿ ನಮ್ಮ ನಿಲುವನ್ನು ತೋರಿಸುವ ಸಾಧನ ಮಾತ್ರವಲ್ಲ, ಅವುಗಳ ಜೊತೆ ಅನೇಕ ಭಾವನೆಗಳು ಸೇರಿಹೋಗಿರುತ್ತವೆ. ಮತ್ತು ಆರ್ಥಿಕ ದೃಷ್ಟಿಯಿಂದ, ಅವು ಹೂಡಿಕೆಯ ಉತ್ತಮ ಸಾಧನಗಳು ಎನಿಸಿಕೊಂಡಿವೆ. ವಂಶಪಾರಂಪರಿಕವಾಗಿ ಬಂದದ್ದಾಗಲಿ ಅಥವಾ ಇತ್ತೀಚಿನ ಖರೀದಿಯಾಗಲಿ, ಆಭರಣಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದು.

ಅವರ ಹಣಕಾಸಿನ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು, ಆಕಸ್ಮಿಕ ನಷ್ಟ, ಹಾನಿ, ದರೋಡೆ ಮತ್ತು ಕಳ್ಳತನದಿಂದ ಅವರನ್ನು ರಕ್ಷಿಸುವುದು ಮಾತ್ರ ವಿವೇಚನೆಯಾಗಿದೆ. ಬ್ಯಾಂಕ್ ಲಾಕರ್‌ಗಳು ಅದನ್ನು ಮಾಡಲು ಒಂದು ಮಾರ್ಗವಾಗಿದ್ದರೂ, ಸಮಯಕ್ಕೆ ಸರಿಯಾಗಿ, ಜನರು ತಮ್ಮ ಆಭರಣಗಳನ್ನು ಇನ್ಶೂರ್ ಮಾಡಿಸಿಕೊಳ್ಳುವ ಕಲ್ಪನೆಯೊಂದಿಗೆ ಹೆಚ್ಚು ಆರಾಮದಾಯಕವಾಗುತ್ತಿದ್ದಾರೆ. ಇನ್ಶೂರೆನ್ಸ್ ಕಂಪನಿಗಳು ಸ್ಟ್ಯಾಂಡ್‌ಅಲೋನ್ ಜ್ಯುವೆಲ್ಲರಿ ಇನ್ಶೂರೆನ್ಸ್ ಒದಗಿಸುತ್ತಿರುವಾಗ, ಹೆಚ್ಚಾಗಿ ಇದು ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಲಭ್ಯವಿದೆ. ಮತ್ತು ಅದಕ್ಕಾಗಿ ನೀವು ಸಮಗ್ರ ಹೋಮ್ ಪ್ಲಾನ್ ಖರೀದಿಸಬೇಕಾಗಿಲ್ಲ; ನಿಮ್ಮ ಆಭರಣಗಳಿಗೆ ರಕ್ಷಣೆ ನೀಡುವ ಕಸ್ಟಮೈಜ್ ಮಾಡಿದ ಪ್ಲಾನ್ ಅನ್ನು ನೀವು ಆಯ್ಕೆ ಮಾಡಬಹುದು.

ದಯವಿಟ್ಟು ಗಮನಿಸಿ: ಮನೆಯ ಆವರಣದ ಒಳಗೆ ಆಭರಣವನ್ನು ಸುರಕ್ಷಿತವಾಗಿ ಇರಿಸಿದ್ದರೆ ಮಾತ್ರ ಅದಕ್ಕೆ ಕವರೇಜ್ ನೀಡಲಾಗುತ್ತದೆ.

ಪ್ರಯೋಜನಗಳು

ಆಭರಣಗಳನ್ನು ಮನೆಯಲ್ಲಿ ಇರಿಸುವುದು ಯಾವಾಗಲೂ ಅಪಾಯವೇ. ದುರದೃಷ್ಟಕರ ಘಟನೆಯಿಂದಾಗಿ ನೀವು ಬೆಲೆಬಾಳುವ ವಸ್ತುಗಳನ್ನು ಕಳೆದುಕೊಳ್ಳಬಹುದು. ಆದ್ದರಿಂದ, ಅವುಗಳಿಗೆ ಹೋಮ್ ಇನ್ಶೂರೆನ್ಸ್ ಕವರೇಜ್ ಮೂಲಕ ರಕ್ಷಣೆ ನೀಡಿ. ಅಗತ್ಯವಿರುವ ಸಮಯದಲ್ಲಿ ಆಭರಣಗಳನ್ನು ಮಾರಾಟ ಮಾಡಿ ಕುಟುಂಬದ ಆರ್ಥಿಕತೆಯನ್ನು ಸುಧಾರಿಸಬಹುದಾದ್ದರಿಂದ ಅದಕ್ಕೆ ಇನ್ಶೂರೆನ್ಸ್ ಕವರೇಜ್ ನೀಡುವುದು ಹೆಚ್ಚು ಅಗತ್ಯ. ಜೊತೆಗೆ, ಬ್ಯಾಂಕ್ ಲಾಕರ್‌ಗಳಿಗೆ ಹೋಲಿಸಿದರೆ, ಇನ್ಶೂರೆನ್ಸ್ ಕವರ್‌ ಹೆಚ್ಚಿನ ಪ್ರಯೋಜನ ನೀಡುತ್ತದೆ.

ಉದಾಹರಣೆಗೆ, ಬಹುತೇಕ ಎಲ್ಲ ರೀತಿಯ ಅಪಾಯಗಳನ್ನು ಗಣೆನೆಗೆ ತೆಗೆದುಕೊಳ್ಳುವ ಸಮಗ್ರ ಯೋಜನೆಗಳನ್ನು ನೀವು ಆಯ್ಕೆ ಮಾಡಬಹುದು. ಬ್ಯಾಂಕ್ ಲಾಕರ್‌ಗಳು ಈ ಸೌಲಭ್ಯ ಒದಗಿಸುವುದಿಲ್ಲ. ಬ್ಯಾಂಕ್‌ ಲಾಕರ್‌ಗಳಿಗೆ ಕಡಿಮೆ ಪೇಪರ್‌ವರ್ಕ್ ಇದ್ದರೂ, ಅವು ಸಾಮಾನ್ಯವಾಗಿ ನಷ್ಟದ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ಅಪಾಯ ಹೆಚ್ಚು. ಇತ್ತೀಚೆಗೆ ಮದುವೆಯಾಗಿ ಮನೆಯಲ್ಲಿ ಹೆಚ್ಚು ಆಭರಣಗಳನ್ನು ಹೊಂದಿರುವವರಿಗೆ, ಆಗಾಗ ಪ್ರಯಾಣ ಮಾಡಬೇಕಾಗಿ ಮನೆಯಲ್ಲಿ ಕಳ್ಳತನ ಆಗುವ ಸಾಧ್ಯತೆ ಹೆಚ್ಚಿರುವವರಿಗೆ ಆಭರಣದ ಇನ್ಶೂರೆನ್ಸ್ ಅತ್ಯಗತ್ಯ.

ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿರ್ಧರಿಸುವ ಅಂಶಗಳು

ಪ್ರೀಮಿಯಂ ವೆಚ್ಚ ಹಾಗೂ ಕವರೇಜ್ ಮೊತ್ತವನ್ನು ನಿರ್ಧರಿಸುವ ಅನೇಕ ಅಂಶಗಳನ್ನು ಇದು ಅವಲಂಬಿಸಿದೆ. ಅದರ ವಿವರ ಹೀಗಿದೆ:

  • ವಸ್ತುಗಳ ಸಂಖ್ಯೆ: ಮೊದಲು, ನೀವು ರಕ್ಷಿಸಬೇಕಾದ ಆಭರಣಗಳ ಸಂಖ್ಯೆಯನ್ನು ಪಟ್ಟಿ ಮಾಡಬೇಕು

  • ಮೌಲ್ಯಮಾಪನ: ಪಟ್ಟಿ ಮಾಡಿದ ನಂತರ, ಆಭರಣಗಳ ಮಾರುಕಟ್ಟೆ ಬೆಲೆಯನ್ನು ತಿಳಿದುಕೊಂಡು ಎಷ್ಟು ಮೊತ್ತಕ್ಕೆ ಇನ್ಶೂರೆನ್ಸ್ ಬೇಕು ಎನ್ನುವುದನ್ನು ನಿರ್ಧರಿಸಿ. ಆಭರಣಗಳ ಮೌಲ್ಯಮಾಪನದ ಪ್ರಮಾಣಪತ್ರಗಳನ್ನು ಯಾವುದೇ ಪ್ರತಿಷ್ಠಿತ ಆಭರಣದ ವ್ಯಾಪಾರಿಗಳಿಂದ ಪಡೆಯಬಹುದು. ನಿಮ್ಮ ಪ್ರೀಮಿಯಂ ಮೊತ್ತ ಒಟ್ಟು ವಿಮಾ ಮೊತ್ತವನ್ನು ಹೆಚ್ಚಾಗಿ ಅವಲಂಬಿಸಿರುತ್ತದೆ.

  • ಸಂಶೋಧಿಸಿ ಮತ್ತು ಹೋಲಿಸಿ ನೋಡಿ: ಸ್ಟ್ಯಾಂಡ್‌ಅಲೋನ್ ಜ್ಯುವೆಲ್ಲರಿ ಇನ್ಶೂರೆನ್ಸ್ ಅಥವಾ ಆಭರಣಗಳಿಗೆ ಕವರೇಜ್ ಸೌಲಭ್ಯ ಇರುವ ಹೋಮ್ ಇನ್ಶೂರೆನ್ಸ್ ಪಾಲಿಸಿ ನೀಡುವ ಕಂಪನಿಗಳ ಬಗ್ಗೆ ತಿಳಿದುಕೊಂಡು, ವಿವಿಧ ವಿಮಾದಾತರಿಂದ ಕೋಟ್‌ಗಳನ್ನು ಪಡೆಯುವುದು ಮುಂದಿನ ಹಂತ. ನಿಯಮ ಮತ್ತು ಷರತ್ತುಗಳನ್ನು ಓದಿ ಯೋಜನೆಗಳ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಿ. ಕಡಿಮೆ ಪ್ರೀಮಿಯಂ ಹಾಗೂ ಕಡಿಮೆ ಹೊರಪಡಿಕೆ ಜೊತೆಗೆ ಹೆಚ್ಚಿನ ಕವರೇಜ್ ನೀಡುವ ಪಾಲಿಸಿ ಆಯ್ಕೆ ಮಾಡಿ. ಕಂಪನಿಯ ಬಗ್ಗೆ ತಿಳಿದುಕೊಳ್ಳುವಾಗ, ಆ ಕಂಪನಿಯ ಕ್ಲೈಮ್ ಸೆಟಲ್ಮೆಂಟ್ ಅನುಪಾತ ಹಾಗೂ ರಿಯಾಯಿತಿಗಳ ಬಗ್ಗೆ ಗಮನವಿಡಿ.

  • ಕವರೇಜ್ ವ್ಯಾಪ್ತಿ: 'ಆಲ್-ರಿಸ್ಕ್ ಕವರ್' ಮಾತ್ರ ಬಹುತೇಕ ಸಂಭಾವ್ಯ ಅಪಾಯಗಳ ವಿರುದ್ಧ ಕವರೇಜ್‌ ಒದಗಿಸುತ್ತದೆ. ಕೆಲವು ಇನ್ಶೂರೆನ್ಸ್‌ಗಳು 100% ಕವರೇಜ್ ನೀಡುತ್ತವೆ. ಅಂದರೆ, ನೀವು ಇನ್ಶೂರೆನ್ಸ್ ಮಾಡಿಸಿದ ಆಭರಣಗಳ ವೆಚ್ಚದ 100% ವರೆಗೆ ಪಡೆಯಬಹುದು. ಸಾಮಾನ್ಯ ಇನ್ಶೂರೆನ್ಸ್‌ಗಳು ಆಭರಣಗಳ ಮೌಲ್ಯದ ಸ್ವಲ್ಪ ಭಾಗಕ್ಕೆ ಮಾತ್ರ ಕವರೇಜ್ ನೀಡುತ್ತವೆ.


ಏನನ್ನು ಒಳಗೊಂಡಿದೆ?

cov-acc

ಬೆಂಕಿ

ನಮ್ಮ ಯೋಜನೆಗಳು ಬೆಂಕಿಯಿಂದ ಉಂಟಾದ ಹಾನಿಯ ವಿರುದ್ಧ ಆಭರಣಗಳಿಗೆ ಕವರೇಜ್ ನೀಡುತ್ತವೆ.

cov-acc

ದರೋಡೆ ಮತ್ತು ಕಳ್ಳತನ

ನಿಮ್ಮ ಆಭರಣ ಕಳ್ಳತನವಾಗುವ ಬಗ್ಗೆ ಯೋಚಿಸುವುದು ಕೂಡ ಕಷ್ಟ. ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಕಳ್ಳತನ/ದರೋಡೆಯ ವಿರುದ್ಧ ಅವುಗಳನ್ನು ಇನ್ಶೂರ್ ಮಾಡಿಸಿ ನೆಮ್ಮದಿಯಾಗಿರಿ.

cov-acc

ನೈಸರ್ಗಿಕ ವಿಕೋಪಗಳು

ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಗೊತ್ತಿರಲಿಕ್ಕಿಲ್ಲ  ಇನ್ನಷ್ಟು ಓದಿ...

cov-acc

ಮನೆಯಲ್ಲಿರುವ ವಸ್ತುಗಳು

ಮನೆಯಲ್ಲಿ, ಮಳಿಗೆಗಳಲ್ಲಿ, ಲಾಕರ್‌ಗಳಲ್ಲಿ ಅಥವಾ ಪ್ರದರ್ಶನಗಳಲ್ಲಿ ಇರಿಸಿದ ವಸ್ತುಗಳಿಗೆ ಕವರೇಜ್ ನೀಡಬಹುದು.

ಏನನ್ನು ಒಳಗೊಂಡಿಲ್ಲ?

cov-acc

ಸವೆತ

ಸಾಮಾನ್ಯ ಹಾನಿ ಮತ್ತು ದುರಸ್ತಿ, ಚಾಲನೆ ಮಾಡುವಾಗ ಅಪರೂಪದ ನಡವಳಿಕೆ ಅಥವಾ ಸ್ವಚ್ಛಗೊಳಿಸುವಾಗ, ಸೇವೆ ನೀಡುವಾಗ ಅಥವಾ ದುರಸ್ತಿ ಮಾಡುವಾಗ ಉಂಟಾದ ಹಾನಿಗಳಿಂದಾಗಿ ಉಂಟಾಗುವ ಹಾನಿ

cov-acc

ಉದ್ದೇಶಪೂರ್ವಕ ನಿರ್ಲಕ್ಷ್ಯ

ಇನ್ಶೂರೆನ್ಸ್ ಮಾಡಿಸಿದ ನಂತರ ಮಾಲೀಕರ ಅಜಾಗರೂಕತೆಯಿಂದ ಉಂಟಾಗುವ ಹಾನಿಗಳು.

cov-acc

ಸೇಲ್

ನೀವು ಇನ್ಶೂರೆನ್ಸ್ ಮಾಡಿಸಿದ ವಸ್ತುಗಳನ್ನು ಬದಲಾಯಿಸಿದರೆ, ಅಂದರೆ, ಹಳೆಯ ವಸ್ತುಗಳನ್ನು ಮಾರಿ ಹೊಸದನ್ನು ಖರೀದಿಸಿದರೆ, ಹೊಸ ವಸ್ತುಗಳಿಗೆ ಇನ್ಶೂರೆನ್ಸ್ ಪಾಲಿಸಿ ತಂತಾನೇ ವರ್ಗವಾಗುವುದಿಲ್ಲ. ಇನ್ಶೂರೆನ್ಸ್ ಖರೀದಿಸುವ ಸಮಯದಲ್ಲಿ ಪಟ್ಟಿ ಮಾಡಲಾದ ವಸ್ತುಗಳಿಗೆ ಮಾತ್ರ ಕವರೇಜ್ ಸಿಗುತ್ತದೆ

cov-acc

ಮುಚ್ಚುಮರೆ

ಪಾಲಿಸಿ ಖರೀದಿಸುವಾಗ, ವಿಮಾದಾರರು ತಮ್ಮ ಪ್ರಾಡಕ್ಟ್‌ ಬಗ್ಗೆ ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿ ಒದಗಿಸಬೇಕು. ಯಾವುದೇ ಪ್ರಮುಖ ಮಾಹಿತಿ ನೀಡದಿದ್ದರೆ ಅಥವಾ ಉದ್ದೇಶಪೂರ್ವಕವಾಗಿ ಬಚ್ಚಿಟ್ಟರೆ, ವಾಶಿಂಗ್ ಮಷೀನ್ ಇನ್ಶೂರೆನ್ಸ್‌ನಿಂದ ಕವರೇಜ್‌ ಸಿಗುವುದಿಲ್ಲ

cov-acc

ಬದಲಿಸುವಿಕೆ

ನೀವು ಇನ್ಶೂರೆನ್ಸ್ ಮಾಡಿಸಿದ ವಸ್ತುಗಳನ್ನು ಬದಲಾಯಿಸಿದರೆ, ಅಂದರೆ, ಹಳೆಯ ವಸ್ತುಗಳನ್ನು ಮಾರಿ ಹೊಸದನ್ನು ಖರೀದಿಸಿದರೆ, ಹೊಸ ವಸ್ತುಗಳಿಗೆ ಇನ್ಶೂರೆನ್ಸ್ ಪಾಲಿಸಿ ತಂತಾನೇ ವರ್ಗವಾಗುವುದಿಲ್ಲ. ಇನ್ಶೂರೆನ್ಸ್ ಖರೀದಿಸುವ ಸಮಯದಲ್ಲಿ ಪಟ್ಟಿ ಮಾಡಲಾದ ವಸ್ತುಗಳಿಗೆ ಮಾತ್ರ ಕವರೇಜ್ ಸಿಗುತ್ತದೆ

cov-acc

ಜಪ್ತಿ

EMI ಪಾವತಿಸದೆ ಇರುವುದರಿಂದ ನಿಮ್ಮ ಆಭರಣ ಜಪ್ತಿಯಾದರೆ, ವಿಮಾ ಸಂಸ್ಥೆ ನಿಮ್ಮ ನಷ್ಟವನ್ನು ಭರಿಸುವುದಿಲ್ಲ

Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Awards

ಸುರಕ್ಷಿತ #1.5+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
Awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
ಅಪ್ಡೇಟ್‌ ಪಡೆಯಿರಿ

ನಿಮ್ಮ ಆದ್ಯತೆಯ
ಕ್ಲೈಮ್‌ ಸಲ್ಲಿಕೆ ವಿಧಾನ ಆರಿಸಿ

ಹೋಮ್ ಇನ್ಶೂರೆನ್ಸ್ ಸಂಬಂಧಿತ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಏಕೆಂದರೆ ದುರ್ಘಟನೆಯ ಸಂದರ್ಭದಲ್ಲಿ ಬ್ಯಾಂಕ್‌ಗಳು ವಸ್ತುಗಳಿಗೆ ಯಾವುದೇ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಈ ಅಪಾಯವನ್ನು ನಿವಾರಿಸಲು, ಜ್ಯುವೆಲ್ಲರಿ ಇನ್ಶೂರೆನ್ಸ್ ಪಡೆಯುವುದು ಸೂಕ್ತ
ಮೂಲಭೂತ ಹೋಮ್ ಇನ್ಶೂರೆನ್ಸ್ ಎಲೆಕ್ಟ್ರಿಕಲ್ ಗ್ಯಾಜೆಟ್‌ಗಳು, ಆಭರಣಗಳು, ವಾಲ್ ಹ್ಯಾಂಗಿಂಗ್‌ಗಳು, ಪೀಠೋಪಕರಣಗಳು ಮುಂತಾದ ವಸ್ತುಗಳಿಗೆ ಇನ್ಶೂರೆನ್ಸ್ ಕವರೇಜ್ ನೀಡುವುದಿಲ್ಲ. ಇದು ಮನೆಯ ಕಟ್ಟಡವನ್ನು ಮಾತ್ರ ರಕ್ಷಿಸುತ್ತದೆ. ಕಂಟೆಂಟ್ಸ್ ಇನ್ಶೂರೆನ್ಸ್ ಹೋಮ್ ಇನ್ಶೂರೆನ್ಸ್‌ನ ಭಾಗವಾಗಿದೆ. ನೀವು ಇದನ್ನು ಆಯ್ಕೆ ಮಾಡಿದ್ದರೂ, ಎಲ್ಲಾ ಆಭರಣಗಳಿಗೂ ಕವರೇಜ್ ಸಿಗುತ್ತದೆ ಎಂದೇನಲ್ಲ. ಪಾಲಿಸಿಯಲ್ಲಿ ಪಟ್ಟಿ ಮಾಡಲಾದ ವಸ್ತುಗಳನ್ನು ಮಾತ್ರ ಕಂಟೆಂಟ್ ಇನ್ಶೂರೆನ್ಸ್ ಪಾಲಿಸಿ ರಕ್ಷಿಸುತ್ತದೆ. ಕೆಲವು ವಿಮಾ ಸಂಸ್ಥೆಗಳು ವಸ್ತುಗಳ ಪಟ್ಟಿಯ ಅಗತ್ಯವಿಲ್ಲದೇ ಸಮಗ್ರ ಪ್ಲಾನ್‌ಗಳನ್ನು ನೀಡುತ್ತವೆ
ಪಾಲಿಸಿಯ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳು, ಇತರ ನಿಯಮ ಹಾಗೂ ಷರತ್ತುಗಳ ಬಗ್ಗೆ ನೀವು ಚೆನ್ನಾಗಿ ತಿಳಿದುಕೊಂಡ ನಂತರ, ಮೊದಲು ನಿಮ್ಮ ವಿಮಾದಾರರನ್ನು ಕರೆ, ಇಮೇಲ್ ಅಥವಾ ಫ್ಯಾಕ್ಸ್ ಮೂಲಕ ಸಂಪರ್ಕಿಸಿ, ವಸ್ತುಗಳ ಹಾನಿ ಅಥವಾ ನಷ್ಟದ ಬಗ್ಗೆ ತಿಳಿಸಿ. ಕಡ್ಡಾಯವಲ್ಲದಿದ್ದರೂ, ಹಾನಿಯ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಕ್ಷ್ಯವಾಗಿ ತೆಗೆದುಕೊಳ್ಳಿ. ಪಾಲಿಸಿ ಪೇಪರ್‌ಗಳು, ID ಪುರಾವೆಗಳು, ಮೊದಲ ಮಾಹಿತಿ ವರದಿ (FIR) ಪ್ರತಿ, ಬಾಡಿಗೆ ಒಪ್ಪಂದ, ಅಗ್ನಿಶಾಮಕ ದಳದ ವರದಿ, ನೀವು ಹೊಂದಿರುವ ವಸ್ತುಗಳ ಇನ್ವಾಯ್ಸ್‌ಗಳು ಮುಂತಾದ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿರಿಸಿ. ಹಾನಿಯ ಪ್ರಮಾಣವನ್ನು ನಿರ್ಣಯಿಸಲು ವಿಮಾ ಸಂಸ್ಥೆ ಸಮೀಕ್ಷಕರನ್ನು ನೇಮಿಸುತ್ತದೆ. ಕ್ಲೈಮ್ ಮಾನ್ಯಗೊಳಿಸಿದ ನಂತರ, ನಿಮಗೆ ಸೂಕ್ತ ಹಣ ನೀಡಲಾಗುತ್ತದೆ
ಹೌದು, ಎಚ್‌ಡಿಎಫ್‌ಸಿ ಎರ್ಗೋ ನೀಡುವ ಜ್ಯುವೆಲರಿ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಲಭ್ಯವಿರುವ ಕವರೇಜ್ ವ್ಯಾಪ್ತಿಯನ್ನು ನೀವು ವಿಸ್ತರಿಸಬಹುದು. ಹೋಮ್ ಶೀಲ್ಡ್ ಅಡಿಯಲ್ಲಿ ವಿಶ್ವಾದ್ಯಂತ ಕವರೇಜನ್ನು ಸೇರಿಸಲು ಕವರನ್ನು ವಿಸ್ತರಿಸಬಹುದು. ಆದಾಗ್ಯೂ, ಅಂತಹ ವಿಸ್ತರಣೆಗಾಗಿ, ನೀವು ಇನ್ಶೂರ್ಡ್ ಆಭರಣದ ದರದ ಮೇಲೆ 25% ಹೆಚ್ಚುವರಿ ಪ್ರೀಮಿಯಂ ಅನ್ನು ಪಾವತಿಸಬೇಕಾಗುತ್ತದೆ.

ಜ್ಯುವೆಲರಿ ಇನ್ಶೂರೆನ್ಸ್ ಖರೀದಿಸುವುದು ಅಗತ್ಯವಿಲ್ಲದಿದ್ದರೂ ಕೂಡ, ಈಗಲೂ ಪಾಲಿಸಿಯನ್ನು ಶಿಫಾರಸು ಮಾಡಲಾಗುತ್ತದೆ. ಅದಕ್ಕೆ ಕೆಲವು ಕಾರಣಗಳು ಹೀಗಿವೆ –

● ಸಂಭ್ರಮಾಚರಣೆಗಳಿಗಾಗಿ ನೀವು ಆಭರಣವನ್ನು ಲಾಕರ್‌ನಿಂದ ಹೊರಗೆ ತೆಗೆದುಕೊಂಡಾಗ, ಕಳ್ಳತನ, ನಷ್ಟ ಅಥವಾ ಹಾನಿಯ ಅಪಾಯದ ಭಯವನ್ನು ನೀವು ಹೊಂದಿರುತ್ತೀರಿ. ಅಂತಹ ಸಂದರ್ಭಗಳಲ್ಲಿ, ಜ್ಯುವೆಲರಿ ಇನ್ಶೂರೆನ್ಸ್ ಪಾಲಿಸಿಯು ಸಹಾಯ ಮಾಡುತ್ತದೆ

● ಕಳ್ಳತನ ಅಥವಾ ಹಾನಿಯ ಸಂದರ್ಭದಲ್ಲಿ ಬ್ಯಾಂಕ್ ಲಾಕರ್‌ಗಳು ನಿಮ್ಮ ಜ್ಯುವೆಲರಿ ಅಥವಾ ಹಣಕಾಸಿನ ಪರಿಹಾರದ ಸುರಕ್ಷತೆಯನ್ನು ಖಾತರಿಪಡಿಸುವುದಿಲ್ಲ. ಜ್ಯುವೆಲರಿ ಇನ್ಶೂರೆನ್ಸ್ ಇದನ್ನು ಮಾಡುತ್ತದೆ.

● ಜ್ಯುವೆಲರಿಗಳನ್ನು ನಿಮ್ಮ ಲಾಕರ್‌ನಿಂದ ಕಳ್ಳತನವನ್ನು ಮಾಡಬಹುದು. ಪರ್ಯಾಯವಾಗಿ, ಲಾಕರ್‌ನಲ್ಲಿ ಇರಿಸಿದಾಗಲೂ ಅದು ಹಾನಿಗೊಳಗಾಗಬಹುದು. ಅಂತಹ ಸಂದರ್ಭಗಳಲ್ಲಿ, ಜ್ಯುವೆಲರಿ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ಆರ್ಥಿಕ ನಷ್ಟದಿಂದ ರಕ್ಷಿಸುತ್ತದೆ

ನಿಮ್ಮ ಆಭರಣಗಳನ್ನು ಲಾಕರ್‌ನಲ್ಲಿ ಇರಿಸುವುದರಿಂದ ಅದನ್ನು ರಕ್ಷಿಸಬಹುದು, ಆದರೆ ಸಂಭವನೀಯ ಕಳ್ಳತನ ಅಥವಾ ಹಾನಿಯ ಸಂದರ್ಭದಲ್ಲಿ ನೀವು ಆರ್ಥಿಕ ನಷ್ಟವನ್ನು ಅನುಭವಿಸಬಹುದು. ಅಂತೆಯೇ, ಜ್ಯುವೆಲರಿ ಇನ್ಶೂರೆನ್ಸ್ ಪಾಲಿಸಿಯು ಉಪಯುಕ್ತವಾಗಿದೆ ಎಂದು ಸಾಬೀತುಪಡಿಸುತ್ತದೆ.

ಹೌದು, ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹೋಮ್ ಇನ್ಶೂರೆನ್ಸ್ ಪಾಲಿಸಿಗೆ ಆ್ಯಡ್-ಆನ್ ಆಗಿ ಜ್ಯುವೆಲರಿ ಮತ್ತು ಮೌಲ್ಯಯುತ ವಸ್ತುಗಳಿಗೆ ಕವರೇಜನ್ನು ಒದಗಿಸುತ್ತದೆ. ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ನೀವು ಈ ಕವರೇಜನ್ನು ಆಯ್ಕೆ ಮಾಡಬಹುದು. ವಿಮಾ ಮೊತ್ತವು ಮನೆಯ ವಸ್ತುಗಳ ವಿಮಾ ಮೊತ್ತದ ಗರಿಷ್ಠ 20% ಗೆ ಒಳಪಟ್ಟು ವಿಮಾದಾರ ಜ್ಯುವೆಲರಿಗಳ ಮಾರುಕಟ್ಟೆ ಮೌಲ್ಯವನ್ನು ಅವಲಂಬಿಸಿರುತ್ತದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x