Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242
ಹೋಮ್ / ಹೋಮ್ ಇನ್ಶೂರೆನ್ಸ್ / ಮನೆಯ ವಸ್ತುಗಳಿಗೆ ಇನ್ಶೂರೆನ್ಸ್

ನಿಮ್ಮ ಮನೆಗಾಗಿ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಕವರೇಜ್

ಈ ಹಬ್ಬದ ಋತುವಿನಲ್ಲಿ ನಿಮ್ಮ ಮನೆಗೆ ಮನೆ ಎಂಬ ಭಾವನೆ ನೀಡುವ ಪ್ರತಿಯೊಂದು ಅಗತ್ಯ ವಸ್ತುಗಳಿಗೆ ರಕ್ಷಣೆ ನೀಡಿ. ನಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಅಮೂಲ್ಯ ಚರಾಸ್ತಿಗಳವರೆಗೆ ನಿಮ್ಮ ಮೌಲ್ಯಯುತ ವಸ್ತುಗಳಿಗೆ ಕವರೇಜನ್ನು ಒದಗಿಸುತ್ತದೆ, ಆದ್ದರಿಂದ ನೀವು ಮನಸ್ಸಿನ ಶಾಂತಿಯನ್ನು ಹೊಂದಬಹುದು ಮತ್ತು ಎಲ್ಲಾ ಸಮಯದಲ್ಲೂ ಸುರಕ್ಷಿತವಾಗಿರಬಹುದು. ನಮ್ಮ ಕಸ್ಟಮೈಜ್ ಮಾಡಿದ ಪ್ಲಾನ್‌ಗಳು ಮತ್ತು ಹಲವಾರು ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಮನೆಯ ನಿಧಿಗಳನ್ನು ಯಾವುದೇ ಅನಿರೀಕ್ಷಿತ ಘಟನೆಗಳ ವಿರುದ್ಧ ರಕ್ಷಿಸಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯು ಬಾಡಿಗೆ ನಷ್ಟ, ಪರ್ಯಾಯ ವಸತಿ ವೆಚ್ಚಗಳು ಮುಂತಾದ ಉಪಯುಕ್ತ ಆ್ಯಡ್-ಆನ್ ಕವರ್‌ಗಳೊಂದಿಗೆ ₹10 ಕೋಟಿಯವರೆಗಿನ ಮನೆ ಕಟ್ಟಡಗಳು ಮತ್ತು ವಸ್ತುಗಳನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಎಲ್ಲಾ-ರಿಸ್ಕ್ ಕವರೇಜನ್ನು ಒದಗಿಸುತ್ತದೆ.

ಹೋಮ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುವ ವಸ್ತುಗಳ ಪಟ್ಟಿ

Insurance for Furnitures and Fixtures
ಪೀಠೋಪಕರಣಗಳು ಮತ್ತು ಜೋಡಣೆಗಳು
ಹೋಮ್ ಇನ್ಶೂರೆನ್ಸ್ ಕವರ್ ಅನ್ನು ಮನೆಯ ಕಟ್ಟಡಕ್ಕೆ ಮಾತ್ರವೇ ಸೀಮಿತಗೊಳಿಸಬೇಡಿ. ನಿಮ್ಮ ಪೀಠೋಪಕರಣಗಳು ಮತ್ತು ಜೋಡಣೆಗಳು ಸಹ ಕಟ್ಟಡದಷ್ಟೇ ಮುಖ್ಯ. ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್, ನಿಮ್ಮ ಪೀಠೋಪಕರಣಗಳಾದ ಸೋಫಾ, TV ಯೂನಿಟ್, ಕಪಾಟು, ಮಂಚ, ಇತ್ಯಾದಿಗಳನ್ನು ಕವರ್ ಮಾಡುತ್ತದೆ. ಇನ್ಶೂರ್ಡ್ ವಸ್ತುಗಳ ವಾರಂಟಿ ಮುಗಿದಮೇಲೂ, ಆ ವಸ್ತುವಿನ ದುರಸ್ತಿಗೆ ತಗುಲುವ ವೆಚ್ಚವನ್ನು ಕೈಯಾರೆ ಪಾವತಿಸುವ ಅಗತ್ಯ ಇಲ್ಲದಿರುವುದರಿಂದ, ನಿಮಗೆ ಮನಶ್ಶಾಂತಿಯೂ ಸಿಗುತ್ತದೆ. ನಿಮ್ಮ ಪೀಠೋಪಕರಣ ಕಳುವಾದಾಗ ಅಥವಾ ಸಂಪೂರ್ಣ/ಭಾಗಶಃ ಹಾನಿಗೊಳಗಾದಾಗ, ಅದರ ದೀರ್ಘಾವಧಿಯ ಮೌಲ್ಯವನ್ನು ರಕ್ಷಿಸಲು ಫರ್ನಿಚರ್ ಇನ್ಶೂರೆನ್ಸ್ ಒಂದು ಉತ್ತಮ ಮಾರ್ಗವಾಗಿದೆ. ಅಂತರ್ಗತ ದೋಷ ಅಥವಾ ಉತ್ಪಾದನಾ ದೋಷವನ್ನು ಕವರೇಜ್‌ನಿಂದ ಹೊರಗಿಡಲಾಗುತ್ತದೆ ಎಂಬುದನ್ನು ಗಮನಿಸಿ.
Insurance for Electronics Equipment
ಎಲೆಕ್ಟ್ರಾನಿಕ್ ಸಲಕರಣೆ
ನಿಮ್ಮ ವಾಶಿಂಗ್ ಮಷೀನ್ ಅಥವಾ ವ್ಯಾಕ್ಯೂಮ್ ಕ್ಲೀನರ್ ಕೆಟ್ಟುನಿಂತರೆ, ದೈನಂದಿನ ಕೆಲಸಗಳನ್ನು ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಿದ್ದಮೇಲೆ, ಅಂತಹ ಪ್ರಮುಖ ಎಲೆಕ್ಟ್ರಾನಿಕ್ ಉಪಕರಣಗಳನ್ನು ಯಾಕೆ ಇನ್ಶೂರ್ ಮಾಡಿಸಬಾರದು? ಹೋಮ್ ಶೀಲ್ಡ್ ಇನ್ಶೂರೆನ್ಸ್‌ನೊಂದಿಗೆ ನೀವು ನಿಮ್ಮ ಏರ್ ಕಂಡೀಶನರ್, ರೆಫ್ರಿಜರೇಟರ್, ಟೆಲಿವಿಷನ್ ಮುಂತಾದ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಸುರಕ್ಷಿತವಾಗಿಸಬಹುದು. ನಿಮ್ಮ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳು ಹಾಳಾದರೆ, ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಅದರ ದುರಸ್ತಿ ವೆಚ್ಚಗಳಿಗೆ ಪಾವತಿಸುತ್ತದೆ.
Insurance for Jewellerys Valuables
ಒಡವೆ ಮತ್ತು ಬೆಲೆಬಾಳುವ ವಸ್ತುಗಳು
ನಿಮ್ಮ ಆಭರಣ ಒಂದು ದುಬಾರಿ ಹೂಡಿಕೆಯಾಗಿದೆ ಮತ್ತು ಭಾವನಾತ್ಮಕ ಮೌಲ್ಯವನ್ನೂ ಹೊಂದಿರುತ್ತದೆ. ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ, ಇನ್ಶೂರೆನ್ಸ್ ಕವರ್‌ ಮೂಲಕ ನಿಮ್ಮ ಆಭರಣವನ್ನು ಸುರಕ್ಷಿತಗೊಳಿಸುವುದು ತುಂಬಾ ಮುಖ್ಯ. ಕಳ್ಳತನದ ವಿರುದ್ಧ ನಿಮ್ಮ ಆಭರಣಗಳನ್ನು ರಕ್ಷಿಸದೇ ಇರುವುದು ಅಷ್ಟೊಂದು ಒಳ್ಳೆಯದಲ್ಲ. ಹಾಗಾಗಿ, ನಿಮ್ಮ ಅಮೂಲ್ಯ ಆಭರಣಗಳನ್ನು ಸುರಕ್ಷಿತಗೊಳಿಸಲು ಹೋಮ್ ಇನ್ಶೂರೆನ್ಸ್ ಖರೀದಿಸುವಂತೆ ನಾವು ಶಿಫಾರಸು ಮಾಡುತ್ತೇವೆ.
Insurance for Portables Electronics
ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್
ಲ್ಯಾಪ್ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಗೇಮಿಂಗ್ ಕನ್ಸೋಲ್‌ಗಳಿಲ್ಲದ ಜೀವನವನ್ನು ಕಲ್ಪಿಸಿಕೊಳ್ಳುವುದೇ ಕಷ್ಟವಾಗಿದೆ, ಅವು ನಮಗೆ ಮನರಂಜನೆ ನೀಡುವುದಷ್ಟೇ ಅಲ್ಲದೇ ಹೊರಜಗತ್ತಿನ ಸಂಪರ್ಕ ಕೊಂಡಿಯಂತೆ ಕಾರ್ಯನಿರ್ವಹಿಸುತ್ತವೆ. ಆದರೆ, ನಿಮ್ಮ ಲ್ಯಾಪ್ಟಾಪ್ ಅಥವಾ ಕ್ಯಾಮರಾ ಕಾಣೆಯಾದರೆ ಅಥವಾ ಆಕಸ್ಮಿಕವಾಗಿ ಹಾನಿಗೊಳಗಾದರೆ ಏನು ಮಾಡುವುದು? ಈ ದುಬಾರಿ ಗ್ಯಾಜೆಟ್‌ಗಳನ್ನು ಮತ್ತೊಮ್ಮೆ ಖರೀದಿಸುವುದರಿಂದ ನಿಮ್ಮ ಹಣಕಾಸಿನ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ; ಆದ್ದರಿಂದ ಮನೆಯಲ್ಲಿನ ವಸ್ತುಗಳನ್ನೂ ಸಹ ಕವರ್ ಮಾಡುವ ಹೋಮ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನಿಮ್ಮ ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್ ಅನ್ನು ಸುರಕ್ಷಿತಗೊಳಿಸಿ.
Insurance For Pedals Cycle
ಪೆಡಲ್ ಸೈಕಲ್
ಸೈಕ್ಲಿಂಗ್ ಒಂದು ಉಲ್ಲಾಸಭರಿತ ಚಟುವಟಿಕೆ ಮತ್ತು ಮಾಲಿನ್ಯದ ಮಟ್ಟ ತಗ್ಗಿಸಲು ಸಹಾಯ ಮಾಡುತ್ತದೆ ಎಂಬುದರಲ್ಲಿ ಎರಡನೇ ಮಾತೇ ಇಲ್ಲ. ಆದರೆ, ನಿಮ್ಮ ಸೈಕಲ್ ಯಾವಾಗ ಬೇಕಾದರೂ ಕಳುವಾಗಬಹುದು ಅಥವಾ ಹಾಳಾಗಬಹುದು ಅಲ್ಲವೇ? ನಿಮ್ಮ ಮನೆಯ ಕಟ್ಟಡ ಮತ್ತು ವಸ್ತುಗಳ ಹಾಗೆಯೇ, ನಿಮ್ಮ ಪೆಡಲ್ ಸೈಕಲ್‌ಗೂ ಸೂಕ್ತ ಕಾಳಜಿ ಮತ್ತು ಗಮನ ಬೇಕಾಗುತ್ತದೆ. ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್‌ ಮೂಲಕ, ನಾವು ಒಂದೇ ಪ್ಲಾನ್ ಅಡಿಯಲ್ಲಿ ನಿಮ್ಮ ಮನೆಯ ಎಲ್ಲಾ ವಸ್ತುಗಳು ಮತ್ತು ಪೆಡಲ್ ಸೈಕಲ್ ಅನ್ನು ಕವರ್ ಮಾಡುತ್ತೇವೆ.

ಹೋಮ್ ಕಂಟೆಂಟ್ ಇನ್ಶೂರೆನ್ಸ್‌ನ ಪ್ರಮುಖ ಪ್ರಯೋಜನಗಳು

ಬಹುತೇಕ ಎಲ್ಲವನ್ನೂ ಕವರ್ ಮಾಡುತ್ತದೆ
ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ನಿಮ್ಮ ಮನೆಯಲ್ಲಿರುವ ವಸ್ತುಗಳಿಗೆ ಕವರೇಜ್ ನೀಡುವುದು ಮಾತ್ರವಲ್ಲ, ನೀವು ಮನೆಯಿಂದ ಹೊರಗೆ ತೆಗೆದುಕೊಂಡುಹೋಗಿರುವ ನಿಮ್ಮ ಆಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳಿಗೆ ಕೂಡ ಕವರೇಜ್ ನೀಡಬಲ್ಲದು. ನಿಮ್ಮ ಎಲ್ಲಾ ಪೋರ್ಟೆಬಲ್ ಉಪಕರಣಗಳು ಮತ್ತು ಆಭರಣಗಳಿಗೆ ಕವರೇಜ್ ಬೇಕಾದರೆ ಅವುಗಳ ಪಟ್ಟಿ ಮತ್ತು ಮೌಲ್ಯವನ್ನು ನಿಮ್ಮ ವಿಮಾದಾತರೊಂದಿಗೆ ಹಂಚಿಕೊಳ್ಳಬೇಕು. ಆದಾಗ್ಯೂ, ಸ್ನೇಹಿತರು ಅಥವಾ ಅತಿಥಿಗಳು ನಿಮ್ಮ ಆವರಣಕ್ಕೆ ತಂದ ವಸ್ತುಗಳನ್ನು ಪಾಲಿಸಿಯಲ್ಲಿ ಪಟ್ಟಿ ಮಾಡದ ಕಾರಣ, ಅವುಗಳಿಗೆ ಕವರೇಜ್ ನೀಡುವುದಿಲ್ಲ.
ಬಾಡಿಗೆದಾರರು ಕೂಡ ಕವರೇಜ್ ಪಡೆಯಬಹುದು
ನನ್ನದು ಸ್ವಂತ ಮನೆಯಲ್ಲ, ಬಾಡಿಗೆ ಮನೆಯಲ್ಲಿದ್ದೇನೆ ಎಂಬ ಚಿಂತೆ ಬಿಡಿ. ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳು, ಪೀಠೋಪಕರಣಗಳು ಮತ್ತು ಫಿಕ್ಸ್ಚರ್‌ಗಳಂತಹ ಮನೆಯೊಳಗಿನ ವಸ್ತುಗಳಿಗೆ ಕವರೇಜ್ ನೀಡಲು ನೀವು ಕಂಟೆಂಟ್ ಓನ್ಲಿ ಇನ್ಶೂರೆನ್ಸ್ ಖರೀದಿಸಬಹುದು. ನಿಮ್ಮಿಂದ ಉಂಟಾಗದ ಆಸ್ತಿಯ ಹಾನಿಗೆ, ನಿಮ್ಮ ಮಾಲೀಕರ ಹೋಮ್ ಸ್ಟ್ರಕ್ಚರ್ ಇನ್ಶೂರೆನ್ಸ್‌ ಕವರೇಜ್ ನೀಡುತ್ತದೆ. ಆದರೆ, ನೀವು ಸ್ವಂತ ಮನೆ ಇಲ್ಲ ಎನ್ನುವ ಕಾರಣಕ್ಕೆ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಖರೀದಿಸದೆ ಇರುವುದು ಒಳ್ಳೆಯದಲ್ಲ. ಮನೆಯ ವಸ್ತುಗಳಿಗೆ ಹಾನಿಯಾದರೆ, ಅದು ನಿಮಗೆ ಆಗುವ ನಷ್ಟವೇ ಹೊರತು ಮನೆಯ ಮಾಲೀಕರಿಗಲ್ಲ. ಆದ್ದರಿಂದ, ನೀವು ಕಂಟೆಂಟ್ ಇನ್ಶೂರೆನ್ಸ್‌ ಖರೀದಿಸಿ ನಿಮ್ಮ ಮನೆಯ ವಸ್ತುಗಳಿಗೆ ರಕ್ಷಣೆ ನೀಡಿ.
ವಿಶಾಲ ವ್ಯಾಪ್ತಿಯಿರುವ ಕವರೇಜ್
ಎಚ್‌ಡಿಎಫ್‌ಸಿ ಎರ್ಗೋ ಒದಗಿಸುವ ಹೋಮ್ ಶೀಲ್ಡ್ ಇನ್ಶೂರೆನ್ಸ್ ವಿಶಾಲ ವ್ಯಾಪ್ತಿಯ ಕವರೇಜ್ ಒದಗಿಸುತ್ತದೆ. ಇದು ನೈಸರ್ಗಿಕ ವಿಕೋಪ ಅಥವಾ ಬೆಂಕಿಯಿಂದ ಆಗುವ ಹಾನಿಗೆ ಮಾತ್ರ ಸೀಮಿತವಾಗಿಲ್ಲ. ಕಳ್ಳತನ, ಆಕಸ್ಮಿಕ ಹಾನಿಗಳು ಅಥವಾ ಎಲೆಕ್ಟ್ರಾನಿಕ್ ಸಲಕರಣೆಗಳ ಬ್ರೇಕ್‌ಡೌನ್ ಅನ್ನು ಕೂಡ ಈ ಪಾಲಿಸಿಯು ಕವರ್ ಮಾಡುತ್ತದೆ. ಅದ್ಭುತ ಅಲ್ಲವೇ? ಇದರರ್ಥ ನಿಮ್ಮ ಮನೆಯ ವಸ್ತುಗಳು ನೈಸರ್ಗಿಕ ವಿಕೋಪ, ಮಾನವ ನಿರ್ಮಿತ ವಿಕೋಪಗಳು, ಆಕಸ್ಮಿಕ ಹಾನಿ ಮತ್ತು ಕಳ್ಳತನದ ವಿರುದ್ಧ ಸುರಕ್ಷತೆ ಹೊಂದಿವೆ.

ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ಲಾನ್‌ಗಳ ವಿಧಗಳು

Home Contents Insurance for Owners
ಮಾಲೀಕರಿಗೆ ಹೋಮ್ ಕಂಟೆಂಟ್ ಇನ್ಶೂರೆನ್ಸ್
ನೀವು ಸ್ವಂತ ಮನೆಯಲ್ಲಿದ್ದು, ಆ ಮನೆಯಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳು, ಪೀಠೋಪಕರಣಗಳು ಮತ್ತಿತರ ವಸ್ತುಗಳಿದ್ದರೆ, ನೀವು ಆ ವಸ್ತುಗಳನ್ನು ಇನ್ಶೂರ್ ಮಾಡಿಸಬೇಕು. ಮನೆಯ ಮಾಲೀಕರಾದ ನೀವು, ನಿಮ್ಮ ಮನೆಯ ಭಾಗಗಳನ್ನು ರಕ್ಷಿಸಬಹುದು ಹಾಗೂ ಅದನ್ನು ನೈಸರ್ಗಿಕ ವಿಕೋಪಗಳು ಮತ್ತು ಕಳ್ಳತನದ ವಿರುದ್ಧ ರಕ್ಷಿಸಬಹುದು. ಜೊತೆಗೆ, ಮನೆಯಲ್ಲಿರುವ ಅಮೂಲ್ಯ ವಸ್ತುಗಳನ್ನು ಕೂಡ ಕಾಪಾಡಬಹುದು. ಒಂದಿಷ್ಟು ಹೆಚ್ಚುವರಿ ಪ್ರೀಮಿಯಂ ಪಾವತಿಸಿ, ನಿಮ್ಮ ಆಭರಣ ಮತ್ತು ಪೆಡಲ್ ಸೈಕಲ್ ಅನ್ನು ಕೂಡ ರಕ್ಷಿಸಬಹುದು.
Home Contents Insurance for Renters
ಬಾಡಿಗೆದಾರರಿಗೆ ಹೋಮ್ ಕಂಟೆಂಟ್ ಇನ್ಶೂರೆನ್ಸ್
ನಿಮಗೆ ಸ್ವಂತ ಮನೆ ಇಲ್ಲದಿದ್ದರೂ, ಒಂದಿಷ್ಟು ಸ್ವಂತದ ವಸ್ತುಗಳಂತೂ ಇದ್ದೇ ಇರುತ್ತವೆ. ಹಾಗಾಗಿ, ಆ ಅಮೂಲ್ಯ ವಸ್ತುಗಳನ್ನು ಕವರ್ ಮಾಡುವ ಹೋಮ್ ಇನ್ಶೂರೆನ್ಸ್ ಖರೀದಿಸುವುದು ಒಳ್ಳೆಯದು. ನಿಮಗೆ ಸರಿಹೊಂದುವ ಕಂಟೆಂಟ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡುವುದು ಸ್ವಲ್ಪ ಕಷ್ಟ ಎನಿಸಬಹುದು. ಈಗ ಆ ಚಿಂತೆ ಬಿಡಿ. ನಿಮ್ಮ ಮನೆ ವಸ್ತುಗಳಿಗೆ ಸಂಪೂರ್ಣ ರಕ್ಷಣೆ ಒದಗಿಸಲು ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಇನ್ಶೂರೆನ್ಸ್ ಆಯ್ಕೆ ಮಾಡಿ. ಏಕೆಂದರೆ ಇದು ಬಾಡಿಗೆದಾರರ ಅಮೂಲ್ಯ ವಸ್ತುಗಳಿಗೆ ಕವರೇಜ್ ಒದಗಿಸುತ್ತದೆ. ಒಂದಿಷ್ಟು ಹೆಚ್ಚುವರಿ ಪ್ರೀಮಿಯಂನಲ್ಲಿ, ನೀವು ನಿಮ್ಮ ಆಭರಣ, ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್ ಮತ್ತು ಪೆಡಲ್ ಸೈಕಲ್ ಅನ್ನು ಕೂಡ ರಕ್ಷಿಸಬಹುದು.
Home Content Insurance - As 'new' or new for 'old'
ಹೋಮ್ ಕಂಟೆಂಟ್ ಇನ್ಶೂರೆನ್ಸ್ - 'ಹೊಸದಾಗಿಸಿ' ಅಥವಾ ಹಳೆಯದಕ್ಕೆ ಹೊಸದನ್ನು ಪಡೆಯಿರಿ'
ನಿಮ್ಮ ಇನ್ಶೂರೆನ್ಸ್ ಮಾಡಿದ ಹೋಮ್ ಕಂಟೆಂಟ್ ಹಾನಿಗೊಳಗಾದರೆ ಈ ರೀತಿಯ ಹೋಮ್ ಕಂಟೆಂಟ್ ಇನ್ಶೂರೆನ್ಸ್ ರಿಪೇರಿಯ ಸಂಪೂರ್ಣ ವೆಚ್ಚವನ್ನು ಮರುಪಾವತಿಸುತ್ತದೆ. ಆದಾಗ್ಯೂ, ಕಳ್ಳತನದ ಸಂದರ್ಭದಲ್ಲಿ, ರಿಯಂಬ್ರಸ್ಮೆಂಟ್ ಮೊತ್ತವು ಅಂಥದೇ ಹೊಸ ಕಂಟೆಂಟ್ ಕೊಳ್ಳಲು ಸಾಕಾಗುತ್ತದೆ. ಈ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವ ವಸ್ತುಗಳ ಪಟ್ಟಿಯು ವಿಮಾದಾತರಿಂದ ವಿಮಾದಾತರಿಗೆ ಭಿನ್ನವಾಗಿರಬಹುದು. ಉದಾಹರಣೆಗೆ, ಈ ರೀತಿಯ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ಬಟ್ಟೆಗಳನ್ನು ಕವರ್ ಮಾಡಲಾಗುವುದಿಲ್ಲ. ಈ ರೀತಿಯ ಇನ್ಶೂರೆನ್ಸ್ ಪ್ಲಾನ್‌ನ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರುತ್ತದೆ.
Home Contents Insurance on Indemnity Basis
ನಷ್ಟಭರ್ತಿ ಆಧಾರದ ಮೇಲೆ ಹೋಮ್ ಕಂಟೆಂಟ್ ಇನ್ಶೂರೆನ್ಸ್
ಈ ರೀತಿಯ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ಲಾನ್‌ಗಳು ಅಗ್ಗವಾಗಿರುತ್ತವೆ. ಏಕೆಂದರೆ ಈ ಕೆಟಗರಿಯಲ್ಲಿನ ಮರುಪಾವತಿಗಳನ್ನು ಕಂಟೆಂಟ್‌ನ ಸವೆತ ಅಥವಾ ಮೌಲ್ಯ ಇಳಿಕೆಯನ್ನು ಪರಿಗಣಿಸಿದ ನಂತರ ನಿಗದಿಪಡಿಸಲಾಗುತ್ತದೆ. ಐದು ವರ್ಷದ ಹಿಂದಿನ ಡಿಜಿಟಲ್ ಕ್ಯಾಮರಾ ಮೇಲಿನ ಕ್ಲೈಮ್, ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ಅವಲಂಬಿಸಿರುತ್ತದೆ. ಮೂಲ ಖರೀದಿ ಬೆಲೆ ಅಥವಾ ಇನ್ವಾಯ್ಸ್ ಮೌಲ್ಯವನ್ನಲ್ಲ. ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್ ಭಾಗಶಃ ಹಾನಿಯ ಸಂದರ್ಭದಲ್ಲಿ ದುರಸ್ತಿ ವೆಚ್ಚಗಳನ್ನು ಕವರ್ ಮಾಡುತ್ತದೆ ಮತ್ತು ಸಂಪೂರ್ಣ ಹಾನಿಯ ಸಂದರ್ಭದಲ್ಲಿ ನಿಮ್ಮ ಕಂಟೆಂಟ್‌ನ ಸವಕಳಿ ಮೌಲ್ಯಕ್ಕೆ ತಕ್ಕಂತೆ ಪಾವತಿಸುತ್ತದೆ.

ಮೇಲೆ ತಿಳಿಸಿದ ಪ್ರಯೋಜನಗಳು ನಿದರ್ಶನಾತ್ಮಕ ಮಾತ್ರ. ಹೆಚ್ಚಿನ ವಿವರಗಳಿಗಾಗಿ ಹೋಮ್ ಶೀಲ್ಡ್ ಇನ್ಶೂರೆನ್ಸ್‌ನ ಪಾಲಿಸಿ ಡಾಕ್ಯುಮೆಂಟ್‌ಗಳನ್ನು ವಿವರವಾಗಿ ನೋಡಿ

-

ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಅನ್ನೇ ಏಕೆ ಆಯ್ಕೆ ಮಾಡಬೇಕು?

ವಿಶ್ವಾಸಾರ್ಹ ಬ್ರ್ಯಾಂಡ್
ನಿಮ್ಮ ಮನೆಯ ವಸ್ತುಗಳನ್ನು ಸುರಕ್ಷಿತಗೊಳಿಸುವ ವಿಷಯಕ್ಕೆ ಬಂದಾಗ, ಅಧಿಕ ಕ್ಲೈಮ್ ಪಾವತಿ ಸಾಮರ್ಥ್ಯ ಹೊಂದಿರುವ ಮತ್ತು ಅಗತ್ಯವಿರುವ ಸಮಯದಲ್ಲಿ ನಿಮ್ಮ ಜೊತೆಗೆ ನಿಲ್ಲುವ ಬ್ರಾಂಡ್ ಅನ್ನು ಆಯ್ಕೆ ಮಾಡಿ. ಎಚ್‌ಡಿಎಫ್‌ಸಿ ಎರ್ಗೋ ಸರಿಯಾದ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುವ ಮೂಲಕ ಮತ್ತು ಅತ್ಯಂತ ಸುಲಭ ಮತ್ತು ಪಾರದರ್ಶಕತೆಯೊಂದಿಗೆ ಕ್ಲೈಮ್‌ಗಳನ್ನು ಸೆಟಲ್ ಮಾಡುವ ಮೂಲಕ #1.3 ಕೋಟಿ, ಸಂತುಷ್ಠ ಗ್ರಾಹಕರನ್ನು ಸುರಕ್ಷಿತಗೊಳಿಸಿದೆ. 24x7 ಗ್ರಾಹಕ ಸಹಾಯ ಮತ್ತು ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ತಂಡದೊಂದಿಗೆ, ನಿಮ್ಮ ಪ್ರಶ್ನೆಗಳನ್ನು ಪರಿಹರಿಸಲು ನಾವು ಸಿದ್ಧರಾಗಿ ನಿಂತಿದ್ದೇವೆ.
ಆಲ್ ಇನ್ 1 ಕವರ್ ಆಫರ್‌ಗಳು
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನೀವು ಒಂದೇ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಮನೆಯ ಕಟ್ಟಡ ಮತ್ತು ವಸ್ತುಗಳು ಎರಡನ್ನೂ ಕವರ್ ಮಾಡುತ್ತೀರಿ. ಆದ್ದರಿಂದ ನೀವು ಮನೆಯ ಕಟ್ಟಡ ಮತ್ತು ವಸ್ತುಗಳನ್ನು ಪ್ರತ್ಯೇಕವಾಗಿ ಕವರ್ ಮಾಡಬೇಕಾಗಿಲ್ಲ. ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್ ಒಂದು ಸಮಗ್ರ ಕವರ್ ಆಗಿದೆ ಮತ್ತು ಇದು ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುತ್ತದೆ. ನಮ್ಮೊಂದಿಗೆ ಒಂದೇ ಜಾಗದಲ್ಲಿ ಎಲ್ಲವೂ ದೊರಕುವ ಅನುಭವ ಪಡೆಯಿರಿ.
ಪ್ರೀಮಿಯಂಗಳ ಮೇಲೆ 45% ವರೆಗೆ ರಿಯಾಯಿತಿ
ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್‌ನ ಪ್ರೀಮಿಯಂ ಹೆಚ್ಚಾಗಿದೆ ಎನಿಸುತ್ತಿದೆಯಾ? ಅದೊಂದು ತಪ್ಪು ಕಲ್ಪನೆ. ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಮೇಲೆ ನಾವು 45% ವರೆಗೆ ರಿಯಾಯಿತಿ ಒದಗಿಸುತ್ತೇವೆ, ಇದರಿಂದ ನಿಮ್ಮ ಪ್ರೀಮಿಯಂ ಸುಲಭವಾಗಿ ಕೈಗೆಟಕುತ್ತದೆ. ಈಗ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ, ನಿಮ್ಮ ಮನೆಯ ಎಲ್ಲಾ ವಸ್ತುಗಳನ್ನು ಕೈಗೆಟಕುವ ಪ್ರೀಮಿಯಂಗಳಲ್ಲಿ ಇನ್ಶೂರ್ ಮಾಡಿಸಬಹುದು.
₹25 ಲಕ್ಷದವರೆಗಿನ ವಸ್ತುಗಳನ್ನು ಕವರ್ ಮಾಡಲಾಗುತ್ತದೆ
ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ನೀವು ಸುಲಭವಾಗಿ ₹25 ಲಕ್ಷದವರೆಗಿನ ವಸ್ತುಗಳನ್ನು ಸುರಕ್ಷಿತವಾಗಿರಿಸಬಹುದು. ನಿಮ್ಮ ವಸ್ತುಗಳ ಒಟ್ಟು ಮೌಲ್ಯವು ₹25 ಲಕ್ಷ ಮೀರಬಾರದು.
ಆಕರ್ಷಕ ಐಚ್ಛಿಕ ಕವರ್‌ಗಳು
ನಿಮ್ಮ ಮನೆಗೆ ಕವರೇಜ್ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಐಚ್ಛಿಕ ಕವರ್‌ಗಳನ್ನು ಒದಗಿಸುತ್ತೇವೆ. ಇದರಿಂದಾಗಿ ನಿಮ್ಮ ನೆಚ್ಚಿನ ಮನೆಯಲ್ಲಿ ಯಾವುದೂ ಕವರ್ ಆಗದೇ ಉಳಿಯುವುದಿಲ್ಲ. ಮನೆಯ ವಸ್ತುಗಳಿಗಾಗಿ ಹೆಚ್ಚುವರಿ ಪ್ರೀಮಿಯಂ ಪಾವತಿಸಿ ಹೋಮ್ ಶೀಲ್ಡ್ ಇನ್ಶೂರೆನ್ಸ್‌ನೊಂದಿಗೆ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳು, ಆಭರಣ ಮತ್ತು ಬೆಲೆಬಾಳುವ ವಸ್ತುಗಳು ಮತ್ತು ಪೆಡಲ್ ಸೈಕಲ್‌ಗಳನ್ನು ಕವರ್ ಮಾಡಲು ಆಯ್ಕೆ ಮಾಡಬಹುದು. ಭಯೋತ್ಪಾದಕರು ಅಥವಾ ರಕ್ಷಣಾ ಸ್ಕ್ವಾಡ್ ಸರ್ಕಾರದ ರಕ್ಷಣಾ ಸೇವೆಗಳಿಂದ ನಿಮ್ಮ ಮನೆಗೆ ಹಾನಿಯಾದರೆ ನಾವು ಭಯೋತ್ಪಾದನೆಯ ಕವರ್ ಒದಗಿಸುತ್ತೇವೆ.

ಹೋಮ್ ಕಂಟೆಂಟ್ ಇನ್ಶೂರೆನ್ಸ್‌ನ ಪ್ರಮುಖ ಪ್ರಯೋಜನಗಳು

ಸಂಪೂರ್ಣ ರಕ್ಷಣೆ
ಸಂಪೂರ್ಣ ರಕ್ಷಣೆಗಾಗಿ ಆಲ್-ರೌಂಡ್ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನಿಮ್ಮ ಮನೆಯ ವಸ್ತುಗಳನ್ನು ಕವರ್ ಮಾಡುವುದು ಒಳ್ಳೆಯದು. ಹೋಮ್ ಕಂಟೆಂಟ್ ಇನ್ಶೂರೆನ್ಸ್ ನಿಮ್ಮ ಮನೆಯ ಅಮೂಲ್ಯ ವಸ್ತುಗಳನ್ನು ರಕ್ಷಿಸುವ ಸುರಕ್ಷತಾ ಕವಚದಂತೆ ಕಾರ್ಯನಿರ್ವಹಿಸುತ್ತದೆ. ಇದಕ್ಕಾಗಿ, ನೀವು ಇನ್ಶೂರ್ ಮಾಡಲು ಬಯಸುವ ವಸ್ತುಗಳು ಮತ್ತು ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯದ ಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು. ಇದು ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ನಿಮ್ಮ ಮನೆ ಕಟ್ಟಡದ ಸುರಕ್ಷತೆ ಎಷ್ಟು ಮುಖ್ಯವೋ, ನಿಮ್ಮ ಮನೆಯಲ್ಲಿನ ದುಬಾರಿ ವಸ್ತುಗಳ ರಕ್ಷಣೆಯೂ ಅಷ್ಟೇ ಮುಖ್ಯ.
ಕೈಗೆಟುಕುವ ಪ್ರೀಮಿಯಂಗಳು
ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್‌ನೊಂದಿಗೆ ದುಬಾರಿ ಪ್ರೀಮಿಯಂಗಳಿಗೆ ವಿದಾಯ ಹೇಳಿ. ಹೌದು, ನಾವು ನಿಮ್ಮ ಮನೆಯ ಕಟ್ಟಡ ಮತ್ತು ವಸ್ತುಗಳು ಎರಡನ್ನೂ ಕವರ್ ಮಾಡುತ್ತೇವೆ. ಹಾಗೆಂದ ಮಾತ್ರಕ್ಕೆ, ನೀವು ನಿಮ್ಮ ಅತ್ಯಮೂಲ್ಯ ವಸ್ತುಗಳನ್ನು ರಕ್ಷಿಸಲು ಸಾಕಷ್ಟು ಹಣ ಖರ್ಚು ಮಾಡಬೇಕು ಎಂದೇನಿಲ್ಲ. ನೀವು ಸ್ವಂತ ಮನೆಯಲ್ಲಿದ್ದರೂ ಅಥವಾ ಬಾಡಿಗೆ ಮನೆಯಲ್ಲಿದ್ದರೂ, ನಾವು ನಿಮ್ಮ ಮನೆಯ ವಸ್ತುಗಳು ಮತ್ತು ಕಟ್ಟಡವನ್ನು ಕೈಗೆಟಕುವ ಮತ್ತು ಸಮಂಜಸ ಪ್ರೀಮಿಯಂಗಳಲ್ಲಿ ಕವರ್ ಮಾಡುತ್ತೇವೆ.
ಮನಶಾಂತಿಯ ಖಾತ್ರಿ
ನೈಸರ್ಗಿಕ ವಿಕೋಪಗಳು ಹೇಳಿಕೇಳಿ ಬರುವುದಿಲ್ಲ. ಹಠಾತ್ ವಿಕೋಪದ ಸಂದರ್ಭದಲ್ಲಿ, ನಿಮ್ಮ ಮನೆಯ ವಸ್ತುಗಳು ಹಾನಿಗೊಳಗಾದರೆ, ಸಂಪೂರ್ಣ ರಿಪೇರಿ ಮತ್ತು ಬದಲಿ ವೆಚ್ಚವನ್ನು ನೀವು ನಿಮ್ಮ ಕೈಯಾರೆ ಪಾವತಿಸಬೇಕಾಗಿಲ್ಲ. ಹಾಗಾಗಿ, ನಿಮ್ಮ ಭವಿಷ್ಯದ ಗುರಿಗಳಿಗಾಗಿ ನೀವು ಕಷ್ಟಪಟ್ಟು ಉಳಿಸಿರುವ ಹಣ, ನಿಮ್ಮ ಬಳಿಯೇ ಸುರಕ್ಷಿತವಾಗಿರುತ್ತದೆ.
ಕಡಿಮೆ ಒತ್ತಡ
ನಿಮ್ಮ ಮನೆಯ ಅಮೂಲ್ಯ ವಸ್ತುಗಳ ಬಗ್ಗೆ ನೀವಿನ್ನು ಚಿಂತಿಸಬೇಕಾಗಿಲ್ಲ. ನೈಸರ್ಗಿಕ ವಿಪತ್ತು ಅಥವಾ ಬೆಂಕಿ ಅಥವಾ ಕಳ್ಳತನದಂತಹ ಸಂದರ್ಭಗಳಲ್ಲಿ, ನಿಮ್ಮ ವಸ್ತುಗಳಿಗೆ ಉಂಟಾದ ನಷ್ಟಗಳನ್ನು ಹೋಮ್ ಕಂಟೆಂಟ್ ಇನ್ಶೂರೆನ್ಸ್ ಕವರ್ ಮಾಡುತ್ತದೆ. ಇದರರ್ಥ, ನೀವು ನಿಮ್ಮ ಮನೆಯ ವಸ್ತುಗಳ ಬಗ್ಗೆ ಮತ್ತು ಅದರ ರಿಪೇರಿ ಅಥವಾ ಬದಲಾವಣೆ ಬಗ್ಗೆ ಒತ್ತಡ ತಂದುಕೊಳ್ಳುವ ಅಗತ್ಯವಿಲ್ಲ. ನಿಮ್ಮ ಪಾಲಿಸಿಯು ಎಷ್ಟು ಸಮಗ್ರವಾಗಿದೆ ಎಂಬುದರ ಆಧಾರದ ಮೇಲೆ, ಇದು ನಿಮ್ಮ ಮನೆಯ ಮರುನಿರ್ಮಾಣದ ವೆಚ್ಚವನ್ನು ಕವರ್ ಮಾಡಬಹುದು ಮತ್ತು ಆ ಅವಧಿಯಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಬಹುದು.

ಕಂಟೆಂಟ್ ಇನ್ಶೂರೆನ್ಸ್ ಏನನ್ನು ಕವರ್ ಮಾಡುತ್ತದೆ?

ಬೆಂಕಿ
ಬೆಂಕಿ, ಸಿಡಿಲು ಅಥವಾ ನೀರಿನ ಟ್ಯಾಂಕ್‌ಗಳ ಸ್ಫೋಟ/ಓವರ್‌ಫ್ಲೋ, ಮುಂತಾದ ಅನಿರೀಕ್ಷಿತ ಅಥವಾ ಹಠಾತ್ ಪರಿಸ್ಥಿತಿಯಿಂದ ನಿಮ್ಮ ಮನೆಯ ವಸ್ತುಗಳು ಹಾನಿಗೊಳಗಾದರೆ, ಅವುಗಳೆಂದರೆ , ನಾವು ಅವಕ್ಕೆ ತಡೆರಹಿತ ಕವರೇಜ್ ನೀಡುತ್ತೇವೆ. ನಷ್ಟ ಮತ್ತು ಹಾನಿಯ ಸ್ವರೂಪವನ್ನು ಅವಲಂಬಿಸಿ, ಪೀಠೋಪಕರಣ ಮತ್ತು ಎಲೆಕ್ಟ್ರಾನಿಕ್ ಸಲಕರಣೆಗಳ ದುರಸ್ತಿ ಮತ್ತು ಬದಲಾವಣೆ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.
ದರೋಡೆ ಮತ್ತು ಕಳ್ಳತನ
ಕಳ್ಳ ಬಂದು ನಿಮ್ಮ ಅಮೂಲ್ಯ ವಸ್ತುಗಳನ್ನು ಕದ್ದಾಗ ಗಾಬರಿಯಾಗಬೇಡಿ. ಕಳ್ಳತನ, ದರೋಡೆ, ಕನ್ನ, ದಾಂಧಲೆ, ಗಲಭೆ, ಮುಷ್ಕರ, ಮುಂತಾದ ಸಮಾಜಘಾತುಕ ಚಟುವಟಿಕೆಗಳಿಂದ ಉಂಟಾಗುವ ಹಣಕಾಸು ನಷ್ಟವನ್ನು ನಾವು ಕವರ್ ಮಾಡುತ್ತೇವೆ. ನಿಮ್ಮ ಮನೆಯ ವಸ್ತುಗಳನ್ನು ಕಳ್ಳತನ ಮತ್ತು ದರೋಡೆಯ ವಿರುದ್ಧ ರಕ್ಷಿಸಲಾಗುತ್ತದೆ. ನಿಮ್ಮ ಮನೆ ಅಥವಾ ಅಪಾರ್ಟ್ಮೆಂಟ್‌ನಲ್ಲಿ ಸುಧಾರಿತ ಭದ್ರತಾ ಫೀಚರ್‌ಗಳಿದ್ದರೆ, ನಿಮ್ಮ ಪ್ರೀಮಿಯಂ ಕೂಡ ಸ್ವಲ್ಪಮಟ್ಟಿಗೆ ಕಡಿಮೆ ಆಗಬಹುದು.
ಆಕ್ಸಿಡೆಂಟಲ್ ಹಾನಿ
ಕೆಲವು ಹಾನಿಗಳು ಆಕಸ್ಮಿಕವಾಗಿ ಆಗುತ್ತವೆ, ಉದ್ದೇಶಪೂರ್ವಕವಾಗಿ ಅಲ್ಲ. ಆದ್ದರಿಂದ, ಹೊರಾಂಗಣ ಅಪಘಾತ ಅಥವಾ ಸಾಗಾಟದ ಸಮಯದಲ್ಲಿ ಉಂಟಾಗುವ ಹಾನಿಗಳಿಗೆ ಹೋಮ್ ಕಂಟೆಂಟ್ ಕವರ್ ಅಡಿಯಲ್ಲಿ ಕವರೇಜ್ ನೀಡಲಾಗುತ್ತದೆ. ಆಕಸ್ಮಿಕ ಹಾನಿ ವೆಚ್ಚಗಳನ್ನು ಕೂಡ ಹೋಮ್ ಶೀಲ್ಡ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಕವರೇಜ್
ನೀವು ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಇನ್ಶೂರ್ ಮಾಡಲು ಬಯಸಿದರೆ, ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್‌ಗಳನ್ನು ನಾವು ಕವರ್ ಮಾಡುತ್ತೇವೆ. ನಿಮ್ಮ ಎಲೆಕ್ಟ್ರಾನಿಕ್ ಹೋಮ್ ಅಪ್ಲಾಯನ್ಸ್‌ಗಳು ಮತ್ತು ಸಲಕರಣೆಗಳ ರಿಪೇರಿ ಮತ್ತು ಬದಲಾವಣೆ ವೆಚ್ಚವನ್ನೂ ಕವರ್ ಮಾಡುತ್ತೇವೆ.

ಯಾವ ವಸ್ತುಗಳನ್ನು ಇನ್ಶೂರೆನ್ಸ್ ಪಾಲಿಸಿಯು ಕವರ್ ಮಾಡುವುದಿಲ್ಲ?

ಇದು ನೀವು ಆಯ್ಕೆ ಮಾಡುವ ಕವರ್ ಪ್ರಕಾರವನ್ನು ಅವಲಂಬಿಸಿರುವಾಗ, ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯು ಸಾಮಾನ್ಯವಾಗಿ ಇದಕ್ಕೆ ಕವರೇಜ್ ಒದಗಿಸುವುದಿಲ್ಲ;

Property under construction

ನಿರ್ಮಾಣದ ಹಂತದಲ್ಲಿರುವ ಆಸ್ತಿ

ನಿರ್ಮಾಣದಲ್ಲಿರುವ ಆಸ್ತಿ ಅಥವಾ ಕಚ್ಚಾ ನಿರ್ಮಾಣವನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ನಿಮ್ಮ ಮನೆಯ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಈ ಪಾಲಿಸಿಗೆ ಅಪ್ಲೈ ಮಾಡಲು ಅರ್ಹರಾಗಲು ನಿಮ್ಮ ಮನೆಯು "ನಿರ್ಮಾಣದಲ್ಲಿರುವ" ಸ್ಥಿತಿಯನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

Old content

ಹಳೆಯ ವಸ್ತುಗಳು

ಹಳೆಯ ಮತ್ತು ಹೊಚ್ಚ ಹೊಸ ವಸ್ತುಗಳು ಮನೆಯ ವಸ್ತುಗಳ ಒಳಗೆ ಬರುತ್ತವೆ. ಆದಾಗ್ಯೂ, 10 ವರ್ಷಕ್ಕಿಂತ ಹಳೆಯ ವಸ್ತುಗಳಿಂದ ಉಂಟಾದ ಹಾನಿಗಳು ಅಥವಾ ನಷ್ಟಗಳನ್ನು ಈ ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

Willful misconduct

ಉದ್ದೇಶಪೂರ್ವಕ ದುರ್ನಡತೆ

ಆಕ್ಸಿಡೆಂಟಲ್ ಹಾನಿಗಳು, ಅದು ಮಾನವ ಅಥವಾ ಪ್ರಕೃತಿ ಸ್ವರೂಪದಿಂದ ಉಂಟಾಗಿರಲಿ, ಅವುಗಳು ಹೋಮ್ ಕಂಟೆಂಟ್ಸ್ ಪ್ಲಾನ್‌ಗಳ ಅಡಿಯಲ್ಲಿ ಕವರ್ ಆಗುತ್ತವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ. ಆದಾಗ್ಯೂ, ಉದ್ದೇಶಪೂರ್ವಕ ತಪ್ಪಾದ ನಡವಳಿಕೆಯಿಂದಾಗಿ ನಿಮ್ಮ ಅಮೂಲ್ಯ ವಸ್ತುಗಳಿಗೆ ಉಂಟಾದ ಹಾನಿಗಳು ಅಥವಾ ನಷ್ಟಗಳನ್ನು ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

Loss due to overloading

ಓವರ್‌ಲೋಡಿಂಗ್ ಕಾರಣದಿಂದಾಗಿ ನಷ್ಟ

ಓವರ್‌ಲೋಡ್ ಅಥವಾ ಸ್ಟ್ರೈನ್, ಅತಿಯಾದ ಒತ್ತಡ, ಅಥವಾ ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಸ್ತುಗಳಿಂದ ಉಂಟಾಗುವ ನಷ್ಟಗಳು ಅಥವಾ ಹಾನಿಗಳು ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಅಡಿಯಲ್ಲಿ ಒಳಗೊಳ್ಳುವುದಿಲ್ಲ. ಪಾಲಿಸಿ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಎಚ್ಚರಿಕೆಯಿಂದ ಓದುವುದನ್ನು ಖಚಿತಪಡಿಸಿಕೊಳ್ಳಿ.

Precious collectibles

ಅಮೂಲ್ಯ ಸಂಗ್ರಾಹಕಗಳು

ಕಲಾಕೃತಿಗಳು, ವಿಂಟೇಜ್ ನಾಣ್ಯಗಳು, ಹಳೆಯ ಸ್ಟ್ಯಾಂಪ್‌ಗಳು ಮುಂತಾದ ಅಮೂಲ್ಯ ಸಂಗ್ರಹಗಳು ತಮ್ಮದೇ ಆದ ಮೌಲ್ಯವನ್ನು ಹೊಂದಿವೆ. ಆದಾಗ್ಯೂ, ಅಂತಹ ವಸ್ತುಗಳಿಗೆ ಆದ ಹಾನಿಗಳನ್ನು ಸಾಮಾನ್ಯವಾಗಿ ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋದಿಂದ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ?

ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ಆನ್ಲೈನಿನಲ್ಲಿ ಮಾಡಬಹುದು;

1. ಎಚ್‌ಡಿಎಫ್‌ಸಿ ಎರ್ಗೋದ ಅಧಿಕೃತ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪುಟಕ್ಕೆ ಭೇಟಿ ನೀಡಿ,

2. ಪೇಜಿನ ಮೇಲ್ಭಾಗದಲ್ಲಿರುವ "ಈಗಲೇ ಖರೀದಿಸಿ" ಮೇಲೆ ಕ್ಲಿಕ್ ಮಾಡಿ,

3. "ಮಾಲೀಕರಿಗೆ ಹೋಮ್ ಕವರ್" ವಿಭಾಗದಿಂದ ನಿಮ್ಮ ಪ್ರಕರಣದಲ್ಲಿ ಅನ್ವಯವಾಗುವ "ಮಾಲೀಕ" ಮತ್ತು "ಬಾಡಿಗೆದಾರ" ನಡುವೆ ಆಯ್ಕೆಮಾಡಿ,

4. "ನಾನು ಕವರ್ ಮಾಡಲು ಬಯಸುತ್ತೇನೆ" ವಿಭಾಗದಿಂದ "ಕಂಟೆಂಟ್" ಅಥವಾ "ಸ್ಟ್ರಕ್ಚರ್ ಮತ್ತು ಕಂಟೆಂಟ್" ನಡುವೆ ಆಯ್ಕೆ ಮಾಡಿ ಮತ್ತು "ಮುಂದುವರಿಯಿರಿ" ಒತ್ತಿ,

5. ನೀವು ಸಂಬಳ ಪಡೆಯುವವರಾಗಿರಲಿ ಅಥವಾ ಇಲ್ಲದಿರಲಿ, ನಿಮ್ಮ ವಸ್ತುಗಳ ಮೌಲ್ಯವನ್ನು ಒಳಗೊಂಡಂತೆ ಅಗತ್ಯ ವಿವರಗಳನ್ನು ಮತ್ತು ನಿಮ್ಮ ಮನೆಯಲ್ಲಿ ಲಭ್ಯವಿರುವ ಭದ್ರತಾ ಕ್ರಮಗಳನ್ನು ಒದಗಿಸಿ ಮತ್ತು "ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ,

6. ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಫೋನ್ ನಂಬರ್ ಸೇರಿದಂತೆ ನಿಮ್ಮ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ ಮತ್ತು "ಮುಂದುವರಿಯಿರಿ" ಆಯ್ಕೆಯನ್ನು ಒತ್ತಿ,

7. ನೀವು ಬಯಸುವ ಹೋಮ್ ಪ್ಲಾನ್ ಪ್ರಕಾರವನ್ನು ಆಯ್ಕೆಮಾಡಿ, ಪಾಲಿಸಿ ಅವಧಿ ಮತ್ತು ಐಚ್ಛಿಕ ಕವರ್‌ಗಳನ್ನು ಆಯ್ಕೆ ಮಾಡಿ (ಅಗತ್ಯವಿದ್ದರೆ) ಮತ್ತು "ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ,

8. ಪ್ಯಾನ್ ಕಾರ್ಡ್ ನಂಬರ್, ನಿಮ್ಮ ಪೂರ್ಣ ಹೆಸರು, ಆಸ್ತಿ ವಿಳಾಸ ಮುಂತಾದ ಹೆಚ್ಚುವರಿ ವಿವರಗಳನ್ನು ನಮೂದಿಸಿ ಮತ್ತು "ಮುಂದಿನದು" ಕ್ಲಿಕ್ ಮಾಡಿ

9. ಅಂತಿಮವಾಗಿ, ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯನ್ನು ಪರಿಶೀಲಿಸಿ ಮತ್ತು ಪ್ಲಾನ್ ಖರೀದಿಯನ್ನು ಪೂರ್ಣಗೊಳಿಸಲು ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸಿ.

ಎಚ್‌ಡಿಎಫ್‌ಸಿ ಎರ್ಗೋದಿಂದ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ರಿನೀವ್ ಮಾಡುವುದು ಹೇಗೆ?

ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಅಸ್ತಿತ್ವದಲ್ಲಿರುವ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೆ ಮತ್ತು ಅದನ್ನು ನವೀಕರಿಸಲು ಬಯಸಿದರೆ, ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ;

1. ಅಧಿಕೃತ ಎಚ್‌ಡಿಎಫ್‌ಸಿ ಎರ್ಗೋ ಹೋಮ್‌ಪೇಜಿಗೆ ಹೋಗಿ,

2. "ರಿನೀವ್" ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಕ್ಲಿಕ್ ಮಾಡಿ,

3. ಅಸ್ತಿತ್ವದಲ್ಲಿರುವ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪ್ಲಾನಿನ ಪಾಲಿಸಿ ನಂಬರ್ ನಮೂದಿಸಿ,

4. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ,

5. ಪ್ಲಾನ್ ವಿವರಗಳನ್ನು ವಿಮರ್ಶಿಸಿ ಮತ್ತು ಪರಿಶೀಲಿಸಿ,

6. ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ನವೀಕರಣವನ್ನು ಪೂರ್ಣಗೊಳಿಸಲು ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸಿ.

ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಫೈಲ್ ಮಾಡುವುದು ಹೇಗೆ?

ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಅದನ್ನು ಪೂರ್ಣಗೊಳಿಸಲು ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ;

1. ಅಧಿಕೃತ ಸಹಾಯವಾಣಿ ನಂಬರ್ ಮೂಲಕ ವಿಮಾದಾತರನ್ನು ಸಂಪರ್ಕಿಸುವ ಮೂಲಕ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಕ್ಲೈಮ್ ಆರಂಭಿಸಿ/ನೋಂದಣಿ ಮಾಡಿ. 022 6158 2020 ಅಥವಾ care@hdfcergo.com ಗೆ ಇಮೇಲ್ ಮಾಡಿ,

2. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಮ್ಮ ತಂಡವು ನೀಡಿದಂತಹ ಮುಂದಿನ ಸೂಚನೆಗಳನ್ನು ಅನುಸರಿಸಿ,

3. ನೀವು ಕ್ಲೈಮ್ ಪ್ರಕ್ರಿಯೆಯ ಭಾಗವಾಗಿ ಕೆಲವು ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು, ಇದು ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಕ್ಲೈಮ್ ಫಾರ್ಮ್, ಪಾಲಿಸಿ ಬುಕ್‌ಲೆಟ್, ಹಾನಿಯ ಫೋಟೋಗಳು, ರಿಪೇರಿ ಇನ್ವಾಯ್ಸ್‌ಗಳು, ಮೊದಲ ವರದಿ ಪ್ರತಿ (ಅನ್ವಯವಾದರೆ) ಇತ್ಯಾದಿಗಳನ್ನು ಒಳಗೊಂಡಿರಬಹುದು.,

4. ನಷ್ಟ/ಹಾನಿ ಸಮೀಕ್ಷೆ ಮತ್ತು ಮೌಲ್ಯಮಾಪನ ಮಾಡಲು ವಿಮಾದಾತರು ಸಮೀಕ್ಷಕರನ್ನು ನೇಮಿಸಿದರೆ ನಿಮ್ಮ ಸಹಕಾರ ಮತ್ತು ಸಹಾಯವನ್ನು ವಿಸ್ತರಿಸಿ,

5. ಹೆಚ್ಚಿನ ಸೂಚನೆಗಳಿಗಾಗಿ ಕಾಯಿರಿ ಮತ್ತು ಅವುಗಳನ್ನು ಹಾಗೆಯೇ ಅನುಸರಿಸಿ.

ಕ್ಲೈಮ್ ಅನುಮೋದನೆಯ ನಂತರ, ಕಂಪನಿಯು ನಿಮ್ಮ ನಷ್ಟಗಳಿಗೆ ಮರುಪಾವತಿಯನ್ನು ಒದಗಿಸುತ್ತದೆ.

ಆನ್ಲೈನ್‌ನಲ್ಲಿ ಅಗ್ಗದ ಬೆಲೆಯ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪಡೆಯುವುದು ಹೇಗೆ?

Home Contents Insurance Quotes

ಕೋಟ್‌ಗಳನ್ನು ಹೋಲಿಕೆ ಮಾಡಿ

ಬೇರೆಬೇರೆ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಕಂಪನಿಗಳು ನೀಡುವ ಕೋಟ್‌ಗಳನ್ನು ಹೋಲಿಕೆ ಮಾಡಿ, ನಿಮಗೆ ಹೆಚ್ಚು ಸೂಕ್ತವಾದ ಪ್ಲಾನ್ ಆಯ್ಕೆ ಮಾಡಿ. ಹೋಲಿಕೆ ಮಾಡುವಾಗ ಪ್ರೀಮಿಯಂ ಅನ್ನು ಮಾತ್ರವೇ ಪರಿಗಣಿಸಬೇಡಿ. ಕ್ಲೈಮ್ ಸಂದರ್ಭದಲ್ಲಿ ನೀವು ಪಡೆಯುವ ಕವರೇಜ್ ಮತ್ತು ಮೌಲ್ಯದ ವ್ಯಾಪ್ತಿಯನ್ನು ಕೂಡ ಗಮನಿಸಿ.

High-End Security Measures

ಹೈ-ಎಂಡ್ ಸೆಕ್ಯೂರಿಟಿ ಕ್ರಮಗಳು

ನಿಮ್ಮ ಮನೆಯಲ್ಲಿ CCTV ಕ್ಯಾಮರಾ, 24-x7-house ಗಾರ್ಡ್ ಮತ್ತು ಇಂಟರ್‌ಕಾಮ್ ಕರೆ ಸೌಲಭ್ಯದಂತಹ ಆಧುನಿಕ ಭದ್ರತಾ ವ್ಯವಸ್ಥೆ ಇದ್ದರೆ, ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್‌ನ ಪ್ರೀಮಿಯಂ ಮೊತ್ತ ಕಡಿಮೆಯಾಗಿರುತ್ತದೆ.

Salaried Discount

ಸಂಬಳದಾರರಿಗೆ ರಿಯಾಯಿತಿ

ನಿಮ್ಮ ಉದ್ಯೋಗವೂ ಸಹ ಒಂದಿಷ್ಟು ರಿಯಾಯಿತಿ ಪಡೆಯುವಲ್ಲಿ ನೆರವಾಗುತ್ತದೆ. ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪಡೆಯಲು ಬಯಸುವ ಸಂಬಳದಾರ ವ್ಯಕ್ತಿಗಳಿಗೆ ನಾವು ರಿಯಾಯಿತಿ ಒದಗಿಸುತ್ತೇವೆ. ಹಾಗೆಂದ ಮಾತ್ರಕ್ಕೆ, ಸ್ವಯಂ-ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ಹೋಮ್ ಕಂಟೆಂಟ್ ಇನ್ಶೂರೆನ್ಸ್ ಕೊಳ್ಳಬಾರದು ಎಂದೇನಿಲ್ಲ.

Discounts On Home Content Insurance Plan

ಆನ್ಲೈನ್ ರಿಯಾಯಿತಿ

ಡಿಜಿಟಲ್ ಆಗಿ ಪಾವತಿಸಿ. ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಿ, ಒಂದಿಷ್ಟು ಹಣ ಉಳಿಸಿ. ನಾವು ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ಲಾನ್ ಮೇಲೆ ಆನ್ಲೈನ್ ರಿಯಾಯಿತಿಯನ್ನು ಒದಗಿಸುತ್ತೇವೆ. ಅದ್ಭುತ ಅಲ್ಲವೇ?

Skip optional covers

ಐಚ್ಛಿಕ ಕವರ್‌ಗಳನ್ನು ಸ್ಕಿಪ್ ಮಾಡಿ

ನಿಮ್ಮ ಬಳಿ ದುಬಾರಿ ಆಭರಣ ಅಥವಾ ಪೆಡಲ್ ಸೈಕಲ್ ಇಲ್ಲದಿದ್ದರೆ, ಹೋಮ್ ಕಂಟೆಂಟ್ ಇನ್ಶೂರೆನ್ಸ್‌ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು, ಐಚ್ಛಿಕ ಕವರ್‌ಗಳನ್ನು ಸ್ಕಿಪ್ ಮಾಡಬಹುದು.

ಇತ್ತೀಚಿನ ಹೋಮ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

 

ಹೋಮ್ ಕಂಟೆಂಟ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಥವಾ ಮನೆಯ ವಸ್ತುಗಳ ಕವರ್, ನಿಮ್ಮ ಮನೆಯ ಅಮೂಲ್ಯ ವಸ್ತುಗಳನ್ನು ನೈಸರ್ಗಿಕ ವಿಕೋಪಗಳು, ಕಳ್ಳತನ, ಬೆಂಕಿ ಅವಘಡ ಮತ್ತು ಬ್ರೇಕ್‌ಡೌನ್‌ಗಳ ವಿರುದ್ಧ ಇನ್ಶೂರ್ ಮಾಡುತ್ತದೆ. ಹಾಗಾಗಿ, ಇನ್ಶೂರ್ಡ್ ಹಾನಿ ಅಥವಾ ನಷ್ಟ ಸಂಭವಿಸಿದಾಗ, ನೀವು ದುರಸ್ತಿ ಅಥವಾ ಬದಲಾವಣೆ ವೆಚ್ಚವನ್ನು ನಿಮ್ಮ ಕೈಯಾರೆ ಪಾವತಿಸಬೇಕಾಗಿಲ್ಲ.
ಹೋಮ್ ಇನ್ಶೂರೆನ್ಸ್ ನಿಮ್ಮ ಮನೆಯ ಭಾಗಗಳು ಮತ್ತು ವಸ್ತುಗಳು ಎರಡನ್ನೂ ಇನ್ಶೂರ್ ಮಾಡಬಹುದು ಅಥವಾ ಮಾಡದೆಯೂ ಇರಬಹುದು. ಆದರೆ, ಹೋಮ್ ಕಂಟೆಂಟ್ ಇನ್ಶೂರೆನ್ಸ್, ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಮಾತ್ರ ರಕ್ಷಿಸುತ್ತದೆ. ಮನೆಯ ಭಾಗಗಳನ್ನಲ್ಲ. ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಮನೆಯ ಭಾಗಗಳು ಮತ್ತು ವಸ್ತುಗಳು ಎರಡನ್ನೂ ರಕ್ಷಿಸುತ್ತದೆ.

ಹೌದು. ನಿಮ್ಮ ಬಟ್ಟೆಗಳು ಮತ್ತು ಇತರ ವಸ್ತುಗಳು ಸಹ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತವೆ.

ಹೌದು. ಖಂಡಿತ. ಹೋಮ್ ಕಂಟೆಂಟ್ ಇನ್ಶೂರೆನ್ಸ್ ಮನೆ ಮಾಲೀಕರಿಗೆ ಮಾತ್ರ ಸೀಮಿತವಾಗಿಲ್ಲ. ನೀವು ಬಾಡಿಗೆ ಮನೆಯಲ್ಲಿದ್ದರೂ ಸಹ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮ ಮನೆಯ ವಸ್ತುಗಳಿಗೆ ಕವರೇಜ್ ನೀಡಬಹುದು.

ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇನ್ಶೂರೆನ್ಸ್ ಅವಧಿಯನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತವೆ. ಇದು 1 ವರ್ಷದಿಂದ ಆರಂಭಿಸಿ 5 ವರ್ಷಗಳವರೆಗೆ ಇರಬಹುದು.
ಖಂಡಿತ. ಯಾವುದೇ ತೊಂದರೆಯಿಲ್ಲದೆ ನೀವು ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಬಹುದು. ನಿಮಗೆ ಇನ್ನಷ್ಟು ವಿವರಗಳು ಬೇಕಾದಲ್ಲಿ, ಹೆಚ್ಚಿನ ಸಹಾಯಕ್ಕಾಗಿ ನಮ್ಮ ಗ್ರಾಹಕ ಸಹಾಯ ಸಂಖ್ಯೆಗೆ ಕರೆ ಮಾಡಬಹುದು.

 

ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್‌ನ ಕ್ಲೈಮ್ ಪ್ರಕ್ರಿಯೆ ಕ್ಲೈಮ್‌ನ ಪ್ರಕಾರ ಮತ್ತು ಸ್ವರೂಪವನ್ನು ಅವಲಂಬಿಸಿರುತ್ತದೆ. ಯಾವುದೇ ಸಂದರ್ಭದಲ್ಲಿ, ಕ್ಲೈಮ್‌ ಮಾಡುವ ಸಂದರ್ಭದಲ್ಲಿ ಇನ್ಶೂರೆನ್ಸ್ ಮಾಡಿಸಿದ ವಸ್ತುಗಳ ಡಾಕ್ಯುಮೆಂಟ್‌ನೊಂದಿಗೆ ಸಂಭವಿಸಿದ ಘಟನೆಯ ಸಾಕ್ಷಿ ಇದ್ದರೆ ಸಾಕು. ಆದಾಗ್ಯೂ, ಹೆಚ್ಚಿನ ಡಾಕ್ಯುಮೆಂಟ್‌ಗಳು ಬೇಕಾದರೆ ನಮ್ಮ ಕ್ಲೈಮ್ಸ್ ತಂಡವು ನಿಮಗೆ ಸಹಾಯ ಮಾಡುತ್ತದೆ.

 

ಹಾಗೇನಿಲ್ಲ, ಮಾಲೀಕರು ಸ್ಟ್ರಕ್ಚರ್ ಕವರ್ ಅಥವಾ ಹೋಮ್ ಕಂಟೆಂಟ್ ಕವರ್ ಖರೀದಿಸಬಹುದು. ಆದಾಗ್ಯೂ, ನಿಮ್ಮ ಮನಶ್ಶಾಂತಿ ಹಾಗೂ ಆರ್ಥಿಕ ಭದ್ರತೆಯ ದೃಷ್ಟಿಯಿಂದ, ಮನೆಯ ಕಟ್ಟಡ ಹಾಗೂ ವಸ್ತುಗಳು- ಎರಡಕ್ಕೂ ಕವರೇಜ್ ನೀಡುವ ಇನ್ಶೂರೆನ್ಸ್ ಖರೀದಿಸುವುದು ಉತ್ತಮ. ನೀವು ಮನೆ ಮಾಲೀಕರಾಗಿದ್ದರೆ, ನಿಮ್ಮ ಇಚ್ಛೆಯಂತೆ ಸ್ಟ್ರಕ್ಚರ್ ಅಥವಾ ಕಂಟೆಂಟ್ ಅಥವಾ ಎರಡನ್ನೂ ರಕ್ಷಿಸುವ ಆಯ್ಕೆ ಮಾಡಬಹುದು.

 

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಕವರೇಜ್ ಆಧರಿಸಿ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಮೇಲೆ ನಾವು 45%ವರೆಗೆ ರಿಯಾಯಿತಿ ನೀಡುತ್ತೇವೆ. ನಾವು ಆನ್ಲೈನ್ ರಿಯಾಯಿತಿ ಮತ್ತು ಸಂಬಳ ಪಡೆಯುವ ವೃತ್ತಿಪರರಿಗಾಗಿ ಕೂಡ ರಿಯಾಯಿತಿ ನೀಡುತ್ತೇವೆ.

 

ಹೌದು. ಸರಿಯಾದ ಡಾಕ್ಯುಮೆಂಟ್‌ಗಳಿದ್ದರೆ, ನೀವೂ ಸಹ ಆನ್ಲೈನ್‌ನಲ್ಲಿ ನಿಮ್ಮ ತಂದೆಯ ಆಸ್ತಿಗೆ ರಕ್ಷಣೆ ನೀಡಬಹುದು.

 

ಕಂಟೆಂಟ್ಸ್ ಎಂದರೆ ಇನ್‌ಬಿಲ್ಟ್ ಕಪ್‌ಬೋರ್ಡ್‌ಗಳು ಸೇರಿದಂತೆ ಎಲ್ಲ ರೀತಿಯ ಕಪ್‌ಬೋರ್ಡ್‌ಗಳು, ವಿದ್ಯುತ್ ಉಪಕರಣಗಳು, ಪೀಠೋಪಕರಣಗಳು, ಇತರ ಫಿಕ್ಸ್ಚರ್ ಹಾಗೂ ಫಿಟ್ಟಿಂಗ್‌ಗಳು, ಸ್ಯಾನಿಟರಿ ಫಿಟ್ಟಿಂಗ್‌ಗಳು, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಅಪ್ಲಾಯನ್ಸ್‌ಗಳು, ಕ್ರಾಕರಿ, ಕಟ್ಲರಿ, ಸ್ಟೀಲ್ ಪಾತ್ರೆಗಳು, ಬಟ್ಟೆ ಮತ್ತು ವೈಯಕ್ತಿಕ ವಸ್ತುಗಳು, ಡ್ರೇಪರಿ, ಪೆಡಲ್ ಸೈಕಲ್‌ಗಳು, ಇನ್ಶೂರೆನ್ಸ್ ಮಾಡಿಸಿದವರ ಕಟ್ಟಡದಲ್ಲಿ ಇರುವ 10 ವರ್ಷಗಳಿಗಿಂತ ಹಳೆಯದಲ್ಲದ ಇತರ ಗೃಹೋಪಯೋಗಿ ವಸ್ತುಗಳು”

 

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x