ಈ ವೆಬ್‌ಸೈಟ್ ಬಳಸುವ ಮೂಲಕ, ನೀವು ಯಾವುದೇ ಮಿತಿಯಿಲ್ಲದೆ ಅಥವಾ ಮಾರ್ಪಾಡಿಲ್ಲದೆ ಈ ಕೆಳಗಿನ ಬಳಕೆಯ ಷರತ್ತುಗಳಿಗೆ ನಿಮ್ಮ ಅನುಮತಿಯನ್ನು ನೀಡುತ್ತೀರಿ. ಈ ವೆಬ್‌ಸೈಟ್ ಬಳಸುವ ಮೊದಲು ದಯವಿಟ್ಟು ಈ ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಈ ಪೋಸ್ಟಿಂಗ್ ಅನ್ನು ಅಪ್ಡೇಟ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಈ ನಿಯಮ ಮತ್ತು ಷರತ್ತುಗಳನ್ನು ಪರಿಷ್ಕರಿಸಬಹುದು. ನೀವು ಅಂತಹ ಯಾವುದೇ ಪರಿಷ್ಕರಣೆಗಳಿಗೆ ಬದ್ಧರಾಗಿದ್ದು, ನಿಯಮ ಮತ್ತು ಷರತ್ತುಗಳಲ್ಲಿ ಆಗುವ ಬದಲಾವಣೆಯನ್ನು ಪರಿಶೀಲಿಸಲು ಈ ಪುಟಕ್ಕೆ ಆಗಾಗ್ಗೆ ಭೇಟಿ ನೀಡುವುದಾಗಿ ಒಪ್ಪುತ್ತೀರಿ.
ಹಕ್ಕುತ್ಯಾಗ
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಎಚ್‌ಡಿಎಫ್‌ಸಿ ಎರ್ಗೋ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಇದು ಯಾವುದೇ ಸೂಚನೆಯಿಲ್ಲದೇ ಬದಲಾಗಬಹುದು ಮತ್ತು ಇದನ್ನು ಸಲಹೆಯಾಗಿ ತೆಗೆದುಕೊಳ್ಳಬಾರದು.
ಇಲ್ಲಿ ಪ್ರಚಾರ ಮಾಡುತ್ತಿರುವ ಮತ್ತು/ಅಥವಾ ವಿತರಿಸುವ ಪಾಲಿಸಿ/ಗಳು ಎಚ್‌ಡಿಎಫ್‌ಸಿ ಎರ್ಗೋ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗೆ ಸೇರಿವೆ ಎಂಬುದನ್ನು ಎಚ್‌ಡಿಎಫ್‌ಸಿ ಎರ್ಗೋ ಯಾವುದೇ ರೀತಿಯಲ್ಲಿ ಜಾಹೀರು ಮಾಡುತ್ತಿಲ್ಲ, ವ್ಯಕ್ತಪಡಿಸುತ್ತಿಲ್ಲ, ಸೂಚಿಸುತ್ತಿಲ್ಲ ಅಥವಾ ಸ್ಥಾಪಿಸುತ್ತಿಲ್ಲ ಹಾಗೂ ಪಾಲಿಸಿಗಳನ್ನು ಪೇಮೆಂಟ್ ಗೇಟ್‌ವೇ ಸೇವೆ ಪೂರೈಕೆದಾರರಿಗೆ ಮಾರಾಟ, ಪ್ರಚಾರ ಅಥವಾ ವ್ಯಾಪಾರಕ್ಕಿಡುತ್ತಿಲ್ಲ. ಅಂತಹ ಯಾವುದೇ ಊಹೆಯು ಸಂಪೂರ್ಣವಾಗಿ ನಿಮ್ಮ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ.
ನಿರ್ವಹಣಾ ಸೇವೆಗಳು ಅಥವಾ ಯಾವುದೇ ಕಾರಣಕ್ಕಾಗಿ ಯಾವುದೇ ಪ್ರವೇಶದ ನಷ್ಟ ಮತ್ತು/ಅಥವಾ ಪಾವತಿ ಕಾರ್ಯವಿಧಾನದ ಬಳಕೆಯಲ್ಲಿನ ಅಡಚಣೆಗೆ ಎಚ್‌ಡಿಎಫ್‌ಸಿ ಎರ್ಗೋ ಮತ್ತು ಪಾವತಿ ಗೇಟ್‌ವೇ ಸೇವಾ ಪೂರೈಕೆದಾರರು ಯಾವುದೇ ವ್ಯಕ್ತಿಯಿಂದ ಉಂಟಾಗುವ ಯಾವುದೇ ನಷ್ಟಗಳು ಮತ್ತು / ಅಥವಾ ಹಾನಿಗಳಿಗೆ ಹೊಣೆಗಾರರಾಗಿರುವುದಿಲ್ಲ.
There is no guarantee or warranty that the site is free from any virus or other malicious, destructive or corrupting code, program or macro;
There is no guarantee or warranty that there will be uninterrupted access to and/or use of the Payment and delivery Mechanism;
ಬಾಧ್ಯತೆಯ ಮಿತಿಗಳು
ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿಯು ಅದರ ಪ್ರಕಟಣೆಯ ದಿನಾಂಕದಂದು ಪ್ರಸ್ತುತ, ನಿಖರ ಮತ್ತು ಸಂಪೂರ್ಣವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಗತ್ಯ ಎಚ್ಚರಿಕೆಗಳನ್ನು ತೆಗೆದುಕೊಂಡಿದೆ. ಅಂತಹ ಮಾಹಿತಿಯ ವಿಶ್ವಾಸಾರ್ಹತೆ, ನಿಖರತೆ ಅಥವಾ ಪರಿಪೂರ್ಣತೆಗೆ ಯಾವುದೇ ಪ್ರಾತಿನಿಧ್ಯ ಅಥವಾ ವಾರಂಟಿಗಳನ್ನು (ಪ್ರತ್ಯಕ್ಷ ಅಥವಾ ಪರೋಕ್ಷವಾಗಿ) ನೀಡಲಾಗುವುದಿಲ್ಲ. ಈ ವೆಬ್‌ಸೈಟ್‌ನ ಬಳಕೆ, ಅಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು, ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುವ ಯಾವುದೇ ಮಾಹಿತಿಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಯಾವುದೇ ನಷ್ಟಕ್ಕೆ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಹೊಣೆಯಲ್ಲ.
ಟ್ರೇಡ್‌ಮಾರ್ಕ್‌ಗಳು ಮತ್ತು ಕಾಪಿರೈಟ್‌ಗಳು
ಎಲ್ಲಾ ಟ್ರೇಡ್‌ಮಾರ್ಕ್‌ಗಳು, ಸೇವೆ ಸಂಕೇತಗಳು, ವ್ಯಾಪಾರದ ಹೆಸರುಗಳು, ಲೋಗೋಗಳು ಮತ್ತು ಐಕಾನ್‌ಗಳು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ಮಾಲೀಕತ್ವದಲ್ಲಿವೆ. ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಥವಾ ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಟ್ರೇಡ್‌ಮಾರ್ಕ್‌ಗಳ ಮಾಲೀಕತ್ವ ಹೊಂದಿರುವ ಥರ್ಡ್ ಪಾರ್ಟಿಯ ಲಿಖಿತ ಅನುಮತಿಯಿಲ್ಲದೆ ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಯಾವುದೇ ಟ್ರೇಡ್‌ಮಾರ್ಕ್‌ಗಳ ಬಳಕೆಗೆ ಇಂಗಿತ, ವಚನಬಂಧ ಅಥವಾ ಬೇರೆ ಯಾವುದೇ ಆಧಾರದ ಮೇಲೆ ಯಾವುದೇ ಲೈಸೆನ್ಸ್ ಅಥವಾ ಹಕ್ಕನ್ನು ಒದಗಿಸಿರುವುದಾಗಿ ಪರಿಗಣಿಸುವಂತಿಲ್ಲ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಟ್ರೇಡ್‌ಮಾರ್ಕ್‌ಗಳ ಬಳಕೆಯನ್ನು ಅಥವಾ ಈ ವೆಬ್‌ಸೈಟ್‌ನಲ್ಲಿ ಯಾವುದೇ ಇತರ ಕಂಟೆಂಟನ್ನು ಇಲ್ಲಿ ಒದಗಿಸಿದ ರೀತಿಯ ಹೊರತಾಗಿ ಬೇರೆ ರೀತಿಯಲ್ಲಿ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಚಿತ್ರಗಳು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ಸೇರಿವೆ ಅಥವಾ ಕಂಪನಿಯು ಸೂಕ್ತ ಅನುಮತಿಯೊಂದಿಗೆ ಅವನ್ನು ಬಳಸುತ್ತಿದೆ. ನಿರ್ದಿಷ್ಟವಾಗಿ ಅನುಮತಿಸದ ಹೊರತು, ನೀವು ಅಥವಾ ನೀವು ಅಧಿಕೃತಗೊಳಿಸಿದ ಯಾರಾದರೂ ಈ ಚಿತ್ರಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಚಿತ್ರಗಳ ಯಾವುದೇ ಅನಧಿಕೃತ ಬಳಕೆಯು ಹಕ್ಕುಸ್ವಾಮ್ಯ ಕಾನೂನುಗಳು, ಟ್ರೇಡ್‌ಮಾರ್ಕ್ ಕಾನೂನುಗಳು, ಗೌಪ್ಯತೆ ಮತ್ತು ಪ್ರಕಟಣೆಯ ಕಾನೂನುಗಳು, ಹಾಗೂ ಸಂವಹನ ನಿಯಮಾವಳಿಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಬಹುದು. ಸೂಚಿಸದ ಹೊರತು, ಈ ಷರತ್ತು ಗೌಪ್ಯತಾ ಸ್ಟೇಟ್ಮೆಂಟ್ ಅನ್ನು ಮೀರಿರುತ್ತದೆ.
ಗೌಪ್ಯತಾ ನೀತಿ
ವೈಯಕ್ತಿಕ ಮಾಹಿತಿಯ ಭದ್ರತೆ ಮತ್ತು ಗೌಪ್ಯತೆಯು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (HEGI) ಗೆ ಅತ್ಯಂತ ಪ್ರಮುಖವಾಗಿದೆ. ವ್ಯವಹಾರದ ಸಮಯದಲ್ಲಿ ಅದು ಸಂಗ್ರಹಿಸುವ, ಪ್ರಕ್ರಿಯೆಗೊಳಿಸುವ ಮತ್ತು ಉಳಿಸಿಕೊಳ್ಳುವ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ಗೌಪ್ಯತೆಯ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು HEGI ಬದ್ಧವಾಗಿದೆ. ಗೌಪ್ಯತೆಯನ್ನು ರಕ್ಷಿಸಲಾಗಿದೆ ಮತ್ತು ನೀವು ನೀಡಿದ ವೈಯಕ್ತಿಕ ಮಾಹಿತಿಯನ್ನು Sr#6 ನಲ್ಲಿ ವಿವರಿಸಲಾದ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂಬುದನ್ನು HEGI ಖಚಿತಪಡಿಸುತ್ತದೆ. ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಾನಿಗೆ ಕಾರಣವಾಗಬಹುದಾದ ಯಾವುದೇ ರೀತಿಯಲ್ಲಿ ವೈಯಕ್ತಿಕ ಮಾಹಿತಿಯನ್ನು ಬಳಸಲಾಗುವುದಿಲ್ಲ. HEGI ತನ್ನ ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಮಾರಾಟ ಮಾಡುವುದಿಲ್ಲ ಅಥವಾ ಟ್ರೇಡ್ ಮಾಡುವುದಿಲ್ಲ.
ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ
ಹೆಸರು, ಹುಟ್ಟಿದ ದಿನಾಂಕ, ವೈಯಕ್ತಿಕ ಗುರುತಿನ ಸಂಖ್ಯೆಗಳು, ಇಮೇಲ್ ವಿಳಾಸ, ಸಂಪರ್ಕ ಸಂಖ್ಯೆ, ಸಂಪರ್ಕ ವಿಳಾಸ, ವೈದ್ಯಕೀಯ ವಿವರಗಳು, ಹಣಕಾಸಿನ ವಿವರಗಳು, ಫಲಾನುಭವಿಯ ಹೆಸರು, ಫಲಾನುಭವಿಯ ವಿಳಾಸ, ಫಲಾನುಭವಿ ಸಂಬಂಧ ಮತ್ತು ಇತರ ವಿವರಗಳಂತಹ ವೈಯಕ್ತಿಕ ಮಾಹಿತಿಯನ್ನು ವೆಬ್‌ಸೈಟ್, ಪ್ರಸ್ತಾವನೆ ಫಾರ್ಮ್‌ಗಳು, ಇಮೇಲ್‌ಗಳು ಅಥವಾ ಪಾಲಿಸಿಯ ಮೂಲ, ಪಾಲಿಸಿ ಪ್ರಕ್ರಿಯೆ, ಪಾಲಿಸಿ ಸೇವೆ, ರೆಕಾರ್ಡಿಂಗ್ ಅನುಮೋದನೆ, ಕ್ಲೈಮ್ ಪ್ರಕ್ರಿಯೆ, ನಿಮ್ಮ ಕುಂದುಕೊರತೆ ಪರಿಹಾರ, ಯಾವುದಾದರೂ ಇದ್ದರೆ ಅಥವಾ ದೂರುಗಳು/ಅಭಿಪ್ರಾಯ ಇತ್ಯಾದಿಗಳಂತಹ ವ್ಯವಹಾರದ ವಿವಿಧ ಹಂತಗಳಲ್ಲಿ ಇತರ ಗ್ರಾಹಕರ ಸಂವಹನಗಳ ಮೂಲಕ HEGI ಆರೋಗ್ಯ ಮತ್ತು ಫಿಟ್ನೆಸ್ ಡೇಟಾ ಆ್ಯಪ್‌ಗಳನ್ನು ಬಳಸಬಹುದು. ಬಳಕೆದಾರರು ತಮ್ಮ ಒಪ್ಪಿಗೆಯನ್ನು ನೀಡಿದ ನಂತರ, ವೈಯಕ್ತಿಕ ಮತ್ತು ಸೂಕ್ಷ್ಮ ಮಾಹಿತಿಯನ್ನು ಒಳಗೊಂಡಿರಬಹುದಾದ ಆರೋಗ್ಯ ಮತ್ತು ಫಿಟ್ನೆಸ್ ಡೇಟಾವನ್ನು ಸಂಗ್ರಹಿಸಲು HEGI ಆರೋಗ್ಯ ಡೇಟಾ ಆ್ಯಪ್‌ಗಳನ್ನು ಬಳಸಬಹುದು. ಬಳಕೆದಾರರು ಇಲ್ಲಿಗೆ ಇಮೇಲ್ ಮಾಡುವ ಮೂಲಕ ಹೆಲ್ತ್ ಕನೆಕ್ಟ್ ಆ್ಯಪ್‌ಗಳು ಸಂಗ್ರಹಿಸಿದ ಡೇಟಾವನ್ನು ಡಿಲೀಟ್ ಮಾಡಲು ಕೋರಿಕೆ ಸಲ್ಲಿಸಬಹುದು
care@hdfcergo.com
ಉಪಯೋಗಗಳು, ಆಯ್ಕೆ ಮತ್ತು ಪ್ರಕಟಣೆ
ನೀವು ಮೇಲೆ ತಿಳಿಸಿದ ಯಾವುದೇ ವಿಧಾನಗಳ ಮೂಲಕ, ಯಾವುದೇ ಉದ್ದೇಶಕ್ಕಾಗಿ HEGIಗೆ ಮಾಹಿತಿ ಒದಗಿಸಿದಾಗ, ನಿಮ್ಮ ವೈಯಕ್ತಿಕ ಮಾಹಿತಿ/ಡೇಟಾವನ್ನು ಸ್ಟೋರ್ ಮಾಡಲು ಮತ್ತು ಕೆಳಕಂಡ ರೀತಿಯಲ್ಲಿ ಅದನ್ನು ಬಳಸಲು HEGIಗೆ ಅಧಿಕಾರ ನೀಡಿರುವುದಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ಗಮನದಲ್ಲಿಡಿ:
ನಿಮ್ಮಿಂದ ಸಂಗ್ರಹಿಸಲಾದ ವೈಯಕ್ತಿಕ ಮಾಹಿತಿಯನ್ನು HEGIಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಬಳಸಬಹುದು. ವೈಯಕ್ತಿಕ ಮಾಹಿತಿಯನ್ನು ಸರ್ಕಾರಿ ಪ್ರಾಧಿಕಾರಗಳ ಜೊತೆ ಅಥವಾ ಶಾಸನಬದ್ಧ ಮತ್ತು ಕಾನೂನು ಜವಾಬ್ದಾರಿಗಳಿಗೆ ಸಂಬಂಧಪಟ್ಟಂತೆ ಕಾನೂನು ಸಂಸ್ಥೆಗಳಿಗೆ, ಹಣಕಾಸು ಸಂಸ್ಥೆಗಳಿಗೆ, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಗೆ ಮತ್ತು ಸರ್ಕಾರಿ ಪ್ರಾಧಿಕಾರ ಅಥವಾ ಕಾನೂನುಗಳ ನಿಬಂಧನೆಗಳ ಪ್ರಕಾರ ಶಾಸನಬದ್ಧವಾಗಿ ಅಧಿಕೃತಗೊಂಡ ಪ್ರಾಧಿಕಾರಗಳಿಗೆ ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಪಡೆದ ನಿರ್ದೇಶನಗಳ ಪ್ರಕಾರ ಯಾವುದೇ ಮೂರನೇ ವ್ಯಕ್ತಿಗಳಿಗೆ ಹಂಚಿಕೊಳ್ಳಬಹುದು.
ಕಂಪನಿಯ ಉದ್ಯೋಗಿಗಳು, ಲೈಸೆನ್ಸುದಾರ ಏಜೆಂಟ್‌ಗಳು, ಕಾನೂನು ಸಲಹೆಗಾರರು, ಸಲಹೆಗಾರರು, ಸೇವಾ ಪೂರೈಕೆದಾರರು, ಆಡಿಟರ್‌ಗಳು, ಮರುವಿಮಾದಾತರು, ಸಹ-ವಿಮಾದಾತರು ಹಾಗೂ ನ್ಯಾಯಯುತ ಬಿಸಿನೆಸ್, ಕಾನೂನು, ಶಾಸನ ಅಥವಾ ನಿಯಂತ್ರಕ ಉದ್ದೇಶಕ್ಕಾಗಿ ಇತರ ಯಾವುದೇ ಪಕ್ಷಕಾರರಿಗೂ ಕೂಡ HEGI ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಬಹುದು.
ಡೇಟಾ ವಿಶ್ಲೇಷಣೆ, ಅಂಕಿಅಂಶ ವಿಶ್ಲೇಷಣೆ, ರಿಸ್ಕ್ ವಿಶ್ಲೇಷಣೆ ಮತ್ತು ಇತರ ಡೇಟಾ ವಿಶ್ಲೇಷಣೆ / ಡೇಟಾ ಸಮೃದ್ಧಿ ಚಟುವಟಿಕೆಗಳಿಗಾಗಿ ಹಾಗೂ ಗ್ರಾಹಕ ಸಂತೃಪ್ತಿ ಅಥವಾ ಇತರ ಯಾವುದೇ ಸಮೀಕ್ಷೆಯನ್ನು ನಡೆಸಲು ಕಂಪನಿಯಿಂದ ಅಧಿಕೃತಗೊಂಡ ಏಜೆನ್ಸಿಗಳ ಜೊತೆಗೆ HEGI ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಬಹುದು ಅಥವಾ ಹಂಚಿಕೊಳ್ಳಬಹುದು.
ನವೀಕರಣ
ಚಾಲ್ತಿಯಲ್ಲಿರುವ ಕಾನೂನುಗಳಿಗೆ ಒಳಪಟ್ಟು, HEGI ಯಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಪ್ಡೇಟ್ ಮಾಡಲು ನೀವು ಕೋರಬಹುದು. ನಮ್ಮನ್ನು ಸಂಪರ್ಕಿಸಲು ವೆಬ್‌ಸೈಟ್ ನೋಡಿ- https://www.hdfcergo.com/customer-care/customer-care
ಸುರಕ್ಷತೆ
ಮಾಹಿತಿ ಭದ್ರತೆಗೆ ಸಂಬಂಧಿಸಿದ ಅತ್ಯುತ್ತಮ ಅಭ್ಯಾಸಗಳು, ಮಾನದಂಡಗಳು ಮತ್ತು ಚಾಲ್ತಿಯಲ್ಲಿರುವ ನಿಯಮಾವಳಿಗಳಿಗೆ ಅನುಗುಣವಾಗಿ HEGI ತನ್ನ ಮಾಹಿತಿ ಭದ್ರತಾ ನೀತಿಯ ಪ್ರಕಾರ ಸುರಕ್ಷತಾ ಅಭ್ಯಾಸಗಳು, ಕಾರ್ಯವಿಧಾನಗಳು ಮತ್ತು ಮಾನದಂಡಗಳನ್ನು ಜಾರಿಗೊಳಿಸುತ್ತದೆ.
ಈ ಗೌಪ್ಯತೆ ಸ್ಟೇಟ್ಮೆಂಟ್‌ನಲ್ಲಿನ ಬದಲಾವಣೆಗಳು
ಕಂಪನಿಯ ವೆಬ್‌ಸೈಟ್‌ನಲ್ಲಿ ಯಾವುದೇ ಸಮಯದಲ್ಲಿ ಈ ಗೌಪ್ಯತಾ ಸ್ಟೇಟ್ಮೆಂಟ್ ಅನ್ನು ಬದಲಾಯಿಸುವ ಹಕ್ಕನ್ನು HEGI ಕಾಯ್ದಿರಿಸುತ್ತದೆ
ಬಿಸಿನೆಸ್ ಟ್ರಾನ್ಸಿಶನ್
HEGI ವ್ಯವಹಾರ ಪರಿವರ್ತನೆಗೆ - ಅಂದರೆ ಸ್ವಾಧೀನ, ವಿಲೀನ, ಪಾಲು ಮಾರಾಟ, ಇತ್ಯಾದಿಗಳಿಗೆ ಒಳಗಾದಲ್ಲಿ, ಆಗ ಸಂಬಂಧಿತ ಪಕ್ಷಕಾರರಿಗೆ ನಿಮ್ಮ ಮಾಹಿತಿಯನ್ನು ವರ್ಗಾಯಿಸಬೇಕಾಗಬಹುದು
ಲಿಂಕ್‌ಗಳು
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ಸಂಬಂಧವಿಲ್ಲದ ಹಾಗೂ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತಗೊಳಿಸದ ಯಾವುದೇ ವೆಬ್‌ಸೈಟ್(ಗಳ) ಲಿಂಕ್ ಅಸ್ತಿತ್ವದಲ್ಲಿದ್ದರೆ, ಆ ವೆಬ್‌ಸೈಟ್ ಮೂಲಕ ನೀಡಲಾದ ಯಾವುದೇ ಪ್ರಾಡಕ್ಟ್‌ಗಳು, ಸೇವೆಗಳು ಅಥವಾ ಇತರ ವಸ್ತುಗಳನ್ನು ಒಳಗೊಂಡಂತೆ ಸದರಿ ವೆಬ್‌ಸೈಟ್‌ನ ಯಾವುದೇ ಕಂಟೆಂಟ್‌ಗೆ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಯಾವುದೇ ರೀತಿಯಲ್ಲಿ ಹೊಣೆಯಲ್ಲ.
ಸೈಟ್ ಮತ್ತು ಪಾವತಿ ಕಾರ್ಯವಿಧಾನದ ನಡುವಿನ ಭದ್ರತೆ ಮತ್ತು ಲಿಂಕ್‌ನ ಸಮಗ್ರತೆಯನ್ನು ಎಚ್‌ಡಿಎಫ್‌ಸಿ ಎರ್ಗೋ ಖಾತರಿಪಡಿಸುವುದಿಲ್ಲ. ಎಲ್ಲಾ ವ್ಯಕ್ತಿಗಳನ್ನು ಸರಿಯಾದ ಲಿಂಕ್‌ಗೆ ನಿರ್ದೇಶಿಸಲಾಗುತ್ತದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಎರ್ಗೋ ಪ್ರಯತ್ನಿಸುತ್ತದೆ. ಆದಾಗ್ಯೂ, ಸೈಟ್ ಮತ್ತು ಪಾವತಿ ಕಾರ್ಯವಿಧಾನದ ನಡುವಿನ ಲಿಂಕ್ ಅನ್ನು ಅಕ್ಸೆಸ್ ಮಾಡುವ ಎಲ್ಲಾ ವ್ಯಕ್ತಿಗಳು ಆ ಕಾರ್ಯವನ್ನು ಸಂಪೂರ್ಣವಾಗಿ ತಮ್ಮದೇ ಆದ ಅಪಾಯದಲ್ಲಿ ಮಾಡುತ್ತಾರೆ ಮತ್ತು ಎಚ್‌ಡಿಎಫ್‌ಸಿ ಎರ್ಗೋ ಈ ನಿಟ್ಟಿನಲ್ಲಿ ಯಾವುದೇ ರೀತಿಯ ಹೊಣೆ ಅಥವಾ ಜವಾಬ್ದಾರಿ ಹೊರುವುದಿಲ್ಲ.
ಹೊಣೆಗಾರಿಕೆ
ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವಾಗ, ಒಬ್ಬ ಸಂಭಾವ್ಯ ಪಾಲಿಸಿದಾರನಾಗಿ ನೀವು ಖರೀದಿಸಲು ಬಯಸಿದ ಪಾಲಿಸಿ/ಪಾಲಿಸಿಗಳ ಸಂಪೂರ್ಣ ಪಠ್ಯ, ವೈಶಿಷ್ಟ್ಯಗಳು, ಪ್ರಕಟಣೆಗಳು, ನಿಯಮ ಮತ್ತು ಷರತ್ತುಗಳನ್ನು ಓದಿದ್ದೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ ಹಾಗೂ ಇಲ್ಲಿ ಒಳಗೊಂಡಿರುವ ನಿಯಮ ಮತ್ತು ಷರತ್ತುಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ.