Multi Year Bike Insurance Policy
Two Wheeler Insurance with HDFC ERGO
Annual Premium starting at just ₹538*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
7400+ Cashless Network Garages ^

2000+ ನಗದುರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
Emergency Roadside Assistance

ತುರ್ತು ರಸ್ತೆಬದಿ

ಸಹಾಯ
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಮಲ್ಟಿ ಇಯರ್ ಟೂ ವೀಲರ್ ಇನ್ಶೂರೆನ್ಸ್

ಬಹು-ವಾರ್ಷಿಕ ಬೈಕ್ ಇನ್ಶೂರೆನ್ಸ್ ಆನ್ಲೈನ್

Multi-Year Bike Insurance

ಬಹು-ವಾರ್ಷಿಕ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಹಾನಿ, ಕಳ್ಳತನ ಅಥವಾ ಥರ್ಡ್ ಪಾರ್ಟಿ ಹೊಣೆಗಾರಿಕೆಯಿಂದ ಆಗುವ ಹಣಕಾಸು ನಷ್ಟಗಳ ವಿರುದ್ಧ ದೀರ್ಘಾವಧಿ ರಕ್ಷಣೆ ನೀಡುತ್ತದೆ. ಸಾಂಪ್ರದಾಯಿಕ ಒಂದು-ವರ್ಷದ ಪ್ಲಾನ್‌ಗಳನ್ನು ವರ್ಷಕ್ಕೊಮ್ಮೆ ನವೀಕರಿಸಬೇಕು. ಆದರೆ ಬಹು-ವಾರ್ಷಿಕ ಪಾಲಿಸಿಗಳು ಪ್ರತಿ ವರ್ಷ ನವೀಕರಿಸುವ ಕಿರಿಕಿರಿ ಇಲ್ಲದೆ, ಹಲವಾರು ವರ್ಷಗಳವರೆಗೆ ಕವರೇಜ್ ನೀಡುತ್ತವೆ. ಇದು ಮಾನ್ಯ ಪಾಲಿಸಿ ಇಲ್ಲದೆ ಸವಾರಿ ಮಾಡುವುದರಿಂದ ಆಗುವ ದುಷ್ಪರಿಣಾಮಗಳನ್ನು ತಡೆಯುತ್ತದೆ. ಎಚ್‌ಡಿಎಫ್‌ಸಿ ಎರ್ಗೋದ ಬಹು-ವಾರ್ಷಿಕ ಬೈಕ್ ಇನ್ಶೂರೆನ್ಸ್ ಮೂಲಕ, ನೀವು ಪ್ರತಿ ವರ್ಷ ಪಾಲಿಸಿಯನ್ನು ನವೀಕರಿಸುವ ತಲೆ ಬಿಸಿ ಇಲ್ಲದೆ ಮೂರು ವರ್ಷಗಳವರೆಗೆ ರಕ್ಷಣೆಯೊಂದಿಗೆ ನಿಮ್ಮ ರೈಡ್ ಅನ್ನು ಆನಂದಿಸಬಹುದು.

ನಿಮಗೆ ಬಹು-ವಾರ್ಷಿಕ ಟೂ ವೀಲರ್ ಇನ್ಶೂರೆನ್ಸ್ ಏಕೆ ಬೇಕು?

ಬಹು-ವಾರ್ಷಿಕ ಇನ್ಶೂರೆನ್ಸ್‌ಗಳು ಒಂದೇ ಬಾರಿಯ ಪ್ರೀಮಿಯಂ ಪಾವತಿಯೊಂದಿಗೆ ಒಂದೇ ಪ್ಲಾನ್‌ನಲ್ಲಿ ದೀರ್ಘಾವಧಿಯ ಕವರೇಜ್ ಒದಗಿಸುತ್ತವೆ. ವಾರ್ಷಿಕ ನವೀಕರಣದ ಚಿಂತೆಯಿಲ್ಲದೇ, ಇದೊಂದೇ ಪಾಲಿಸಿಯು ಹಲವಾರು ವರ್ಷಗಳವರೆಗೆ ಇರುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಮಲ್ಟಿ-ಇಯರ್ ಇನ್ಶೂರೆನ್ಸ್ ಪಾಲಿಸಿಗಳ ಪ್ರೀಮಿಯಂ ಬೆಲೆಗಳ ಮೇಲೆ ನಿಮಗೆ ಕೆಲವು ರಿಯಾಯಿತಿಗಳನ್ನು ಒದಗಿಸುತ್ತದೆ. ನೀವು ಇತ್ತೀಚೆಗೆ ಹೊಸ ಟೂ ವೀಲರ್ ಖರೀದಿಸಿದ್ದರೆ ಅಥವಾ ಇನ್ನೂ ಹಲವಾರು ವರ್ಷಗಳವರೆಗೆ ನಿಮ್ಮ ನೆಚ್ಚಿನ ಬೈಕ್ ಮೇಲೆ ಸವಾರಿ ಮಾಡಲು ಯೋಜಿಸಿದ್ದರೆ, ಬಹು-ವಾರ್ಷಿಕ ಪಾಲಿಸಿಯೇ ನಿಮ್ಮ ಆದ್ಯತೆಯ ಇನ್ಶೂರೆನ್ಸ್ ಪ್ಲಾನ್ ಆಗಿರಬೇಕು, ಇದರಿಂದ ನೀವು ದೀರ್ಘ ಕಾಲದವರೆಗೆ ಒತ್ತಡ-ರಹಿತ ರೈಡ್ ಆನಂದಿಸಬಹುದು.

ಬಹು-ವಾರ್ಷಿಕ ಟೂ ವೀಲರ್ ಇನ್ಶೂರೆನ್ಸ್ ವಿಧಗಳು

ಸಮಗ್ರ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬೈಕ್/ಸ್ಕೂಟರ್‌ಗೆ ಒಟ್ಟಾರೆ ರಕ್ಷಣೆಯನ್ನು ಒದಗಿಸುತ್ತದೆ. ಬೆಂಕಿ, ಕಳ್ಳತನ, ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ಅಪಾಯಗಳು ಮತ್ತು ಇತರ ಅನಿರೀಕ್ಷಿತ ಘಟನೆಗಳಿಂದಾಗಿ ಉಂಟಾಗುವ ನಷ್ಟಕ್ಕೆ ಇದು ನಿಮ್ಮ ವಾಹನಕ್ಕೆ ಕವರೇಜನ್ನು ಒದಗಿಸುತ್ತದೆ. ಮೋಟಾರ್ ವಾಹನ ಕಾಯ್ದೆ, 1988 ಪ್ರಕಾರ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ, ಆದಾಗ್ಯೂ, ಯಾವುದೇ ಬಾಹ್ಯ ಹಾನಿಗಳಿಂದ ನಿಮ್ಮ ಬೈಕ್‌ಗೆ ಪೂರ್ಣ ಹಣಕಾಸಿನ ಭದ್ರತೆಯನ್ನು ಒದಗಿಸಬಹುದಾದ ಸಮಗ್ರ ಟೂ ವೀಲರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ. ಅಲ್ಲದೆ, ಭಾರತದಂತಹ ದೇಶವು ಪ್ರವಾಹ ಮತ್ತು ರಸ್ತೆ ಅಪಘಾತಗಳಿಗೆ ಗುರಿಯಾಗುತ್ತದೆ, ಇದು ನಿಮ್ಮ ವಾಹನವನ್ನು ದುರ್ಬಲಗೊಳಿಸುವ ರೀತಿಯ ಹಾನಿಗಳನ್ನು ಉಂಟುಮಾಡಬಹುದು. ಆದ್ದರಿಂದ, ದೊಡ್ಡ ಹಣಕಾಸಿನ ವೆಚ್ಚಗಳನ್ನು ತಪ್ಪಿಸಲು, ನಿಮ್ಮ ಟೂ ವೀಲರ್‌ಗೆ ಸಮಗ್ರ ಬೈಕ್ ಇನ್ಶೂರೆನ್ಸ್ ಖರೀದಿಸುವುದು ಸೂಕ್ತವಾಗಿದೆ. .

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

Third Party Liability

ಥರ್ಡ್ ಪಾರ್ಟಿ ಹೊಣೆಗಾರಿಕೆ

No fines if valid policy

ಸರಿಯಾದ ಪಾಲಿಸಿಯಾದರೆ ಯಾವುದೇ ದಂಡಗಳಿಲ್ಲ

Choice of useful add-ons

ಉಪಯುಕ್ತ ಆ್ಯಡ್-ಆನ್‌ಗಳ ಆಯ್ಕೆ

This policy gives you long-term coverage against all third-party liabilities such as damage to their property or vehicle, and injury or death of a third party for up to three years. Having a valid third-party insurance cover is mandatory for all two-wheelers as per Motor Vehicles Act, 1988. Although, this policy does not cover damages or theft of your two-wheeler.

X
ಎಲ್ಲ ರೀತಿಯ ರಕ್ಷಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಸೂಕ್ತವಾಗಿದೆ. ಈ ಪ್ಲಾನ್ ಕೆಳಗಿನ ಕವರೇಜ್‌ ನೀಡುತ್ತದೆ:
bike accident

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು,

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಇನ್ನಷ್ಟು ಹುಡುಕಿ

ಥರ್ಡ್ ಪಾರ್ಟಿ ಪಾಲಿಸಿಯು ಏನನ್ನು ಕವರ್ ಮಾಡುತ್ತದೆ ಎಂಬುದರ ಜೊತೆಗೆ, ಈ ಪಾಲಿಸಿಯು ನಿಮ್ಮ ಟೂ ವೀಲರ್‌ನ ಒಟ್ಟಾರೆ ರಕ್ಷಣೆಯ ಸಂಪೂರ್ಣ ಪ್ಯಾಕೇಜನ್ನು 5 ವರ್ಷಗಳವರೆಗೆ ನೀಡುತ್ತದೆ. ನಿಮ್ಮ ಅಗತ್ಯಗಳ ಆಧಾರದ ಮೇಲೆ ನೀವು ಈ ಪಾಲಿಸಿಯ ಕಾಲಾವಧಿಯನ್ನು ಆಯ್ಕೆ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಿಮ್ಮ ಕಾರಿನ ಮೌಲ್ಯ ಇಳಿಕೆಯ ವಿರುದ್ಧ ರಕ್ಷಣೆ ನೀಡುವ 'ಶೂನ್ಯ-ಸವಕಳಿ ಕವರ್' ಅಥವಾ 24x7 ಆನ್-ರೋಡ್ ಸಹಾಯ ಒದಗಿಸುವ 'ತುರ್ತು ಸಹಾಯ ಕವರ್'ನಂತಹ ಹಲವಾರು ಆ್ಯಡ್-ಆನ್‌ಗಳನ್ನು ಖರೀದಿಸುವ ಸುಲಭ ಅವಕಾಶ ಸಿಗುತ್ತದೆ.

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

Did you know
ಹೆಲ್ಮೆಟ್‌ ವಿಷರ್ ಮೇಲ್ಭಾಗದಲ್ಲಿ ಟೇಪ್‌ ಸ್ಟ್ರಿಪ್ ಅಂಟಿಸುವ ಮೂಲಕ ಸೂರ್ಯನ ಕಿರಣಗಳನ್ನು ತಡೆಯಬಹುದು

ಸಿಂಗಲ್ ಇಯರ್ ವರ್ಸಸ್ ಮಲ್ಟಿ-ಇಯರ್ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ

ದಿನಸಿ ಖರೀದಿಸುವಾಗ, ನೀವು ಕೆಲವಾರು ದಿನಗಳಿಗೆ ಸಾಕಾಗುವಷ್ಟು ದಿನಸಿ ಖರೀದಿಸುತ್ತೀರೋ ಅಥವಾ ದಿನ ಬೆಳಗಾದರೆ ಸೂಪರ್‌ಮಾರ್ಕೆಟ್‌ಗೆ ಹೋಗಿ ದಿನಸಿ ತರುತ್ತೀರೋ? ನಮಗೆ ಯಾವ ದಿನಸಿ ಬೇಕಾಗುತ್ತದೆ ಎಂದು ಗೊತ್ತಿರುವ ಬಹುತೇಕ ಮಂದಿ ಕೆಲವಾರು ದಿನಗಳಿಗೆ ಸಾಕಾಗುವಷ್ಟು ದಿನಸಿ ಖರೀದಿಸುತ್ತಾರೆ. ಒಂದು ವರ್ಷದ ಪಾಲಿಸಿಯ ಬದಲು ಬಹು-ವಾರ್ಷಿಕ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಕೂಡಾ ದಿನಸಿ ಖರೀದಿಯ ಹಾಗೆಯೇ. ನೀವು ನಿಮ್ಮ ಟೂ ವೀಲರ್ ಅನ್ನು ಕನಿಷ್ಠ ಮೂರು ವರ್ಷಗಳವರೆಗೆ ಬಳಸುವುದು ಖಚಿತವಾಗಿದ್ದರೆ, ಬಹು-ವಾರ್ಷಿಕ ಪ್ಲಾನ್ ಖರೀದಿಸುವುದರಿಂದ ವಾರ್ಷಿಕ ನವೀಕರಣದ ಕಿರಿಕಿರಿಯಿಂದ ಪಾರಾಗುವ ಜೊತೆಗೆ, ಪ್ರೀಮಿಯಂ ಮೇಲೆ ರಿಯಾಯಿತಿ ಪಡೆದು, ನಿಮ್ಮ ಹಣ ಉಳಿಸಬಹುದು.

ಮಾನದಂಡಗಳು ಏಕವಾರ್ಷಿಕ ಬಹುವಾರ್ಷಿಕ
ರಿನೀವಲ್ ಪ್ರತಿ ವರ್ಷ 3-5 ವರ್ಷಕ್ಕೊಮ್ಮೆ
ಇನ್ಶೂರೆನ್ಸ್‌ನ ವಾರ್ಷಿಕ ಖರ್ಚು ಹೆಚ್ಚಿನ ಲೋವರ್
ಪ್ರೀಮಿಯಂ ಮೇಲೆ ರಿಯಾಯಿತಿ ಲಭ್ಯವಿಲ್ಲ ಲಭ್ಯವಿದೆ
ಹೊಂದಿಕೊಳ್ಳುವಿಕೆ ಬಹಳ ಫ್ಲೆಕ್ಸಿಬಲ್ ಫ್ಲೆಕ್ಸಿಬಲಿಟಿ ಕಡಿಮೆ
NCB ರಿಯಾಯಿತಿ ಮೋಟಾರ್ ಟ್ಯಾರಿಫ್‌ಗೆ ತಕ್ಕಂತೆ ಅತಿಕಡಿಮೆ NCB
ರಿಯಾಯಿತಿ ಪಡೆಯಬಹುದು
ಮೋಟಾರ್‌ ಟ್ಯಾರಿಫ್‌ಗೆ ತಕ್ಕಂತೆ ಹೆಚ್ಚಿನ NCB
ರಿಯಾಯಿತಿ ಪಡೆಯಬಹುದು
ಇದು ಯಾರಿಗಾಗಿ? ಮುಂದಿನ 3 ವರ್ಷಗಳಲ್ಲಿ ನಿಷ್ಕ್ರಿಯವಾಗುವ ವಾಹನಗಳ ಮಾಲೀಕರಿಗೆ 3 ವರ್ಷಗಳಿಗಿಂತ ಹೆಚ್ಚು ಕಾಲ ಬಾಳಿಕೆ ಬರುವ ಹೊಸ ವಾಹನಗಳ ಮಾಲೀಕರಿಗೆ

ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್‌ನಲ್ಲಿ ಏನನ್ನು ಕವರ್ ಮಾಡಲಾಗುತ್ತದೆ/ಕವರ್ ಮಾಡಲಾಗುವುದಿಲ್ಲ?

ಎಚ್‌ಡಿಎಫ್‌ಸಿ ಎರ್ಗೋ ಮಲ್ಟಿ ಇಯರ್ ಬೈಕ್ ಇನ್ಶೂರೆನ್ಸ್ ಅನ್ನು ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್ ಎಂದು ಕೂಡ ಕರೆಯಲಾಗುತ್ತದೆ, ಇದು ನಿಮಗೆ ಎರಡು ರೀತಿಯ ಪಾಲಿಸಿ ಪ್ಲಾನ್‌ಗಳನ್ನು ಒದಗಿಸುತ್ತದೆ. ದೀರ್ಘಾವಧಿಯ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಐದು ವರ್ಷಗಳವರೆಗೆ ಆಸ್ತಿ ಅಥವಾ ವಾಹನಕ್ಕೆ ಆದ ಹಾನಿ, ವೈಯಕ್ತಿಕ ಗಾಯ ಅಥವಾ ಮರಣದ ಕ್ಲೈಮ್‌ಗಳನ್ನು ಒಳಗೊಂಡಂತೆ ಎಲ್ಲಾ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಂದ ದೀರ್ಘಾವಧಿಯ ರಕ್ಷಣೆಯನ್ನು ಒದಗಿಸುತ್ತದೆ. 1988 ರ ಮೋಟಾರ್ ವಾಹನಗಳ ಕಾಯ್ದೆಯ ಪ್ರಕಾರ, ಪ್ರತಿ ಮೋಟಾರೈಸ್ ಮಾಡಲಾದ ಟೂ ವೀಲರ್ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರೇಜ್ ಹೊಂದಿರಬೇಕು. ಆದಾಗ್ಯೂ, ಈ ಪಾಲಿಸಿಯು ನಿಮ್ಮ ಟೂ ವೀಲರ್ ಕಳ್ಳತನ ಅಥವಾ ಹಾನಿಯ ವಿರುದ್ಧ ರಕ್ಷಿಸುವುದಿಲ್ಲ.

ಮತ್ತೊಂದೆಡೆ, ಖಾಸಗಿ ಬಂಡಲ್ ಕವರ್ ಪಾಲಿಸಿಯು, ಥರ್ಡ್ ಪಾರ್ಟಿ ಪಾಲಿಸಿ ಕವರ್ ಏನೆಲ್ಲಾ ಒಳಗೊಳ್ಳುತ್ತದೆಯೋ ಅದರ ಜೊತೆಗೆ, ಐದು ವರ್ಷಗಳವರೆಗೆ ನಿಮ್ಮ ಟೂ-ವೀಲರ್ ವಾಹನಕ್ಕೆ ಒಟ್ಟಾರೆ ರಕ್ಷಣೆಯ ಸಮಗ್ರ ಪ್ಯಾಕೇಜ್ ಅನ್ನು ಒದಗಿಸುತ್ತದೆ. ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿ, ನೀವು ಈ ಪಾಲಿಸಿಯ ನಿಯಮಗಳನ್ನು ಆಯ್ಕೆ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ, ನಿಮ್ಮ ಆಯ್ಕೆಯ ಆ್ಯಡ್-ಆನ್ ಕವರ್‌ಗಳನ್ನು ಖರೀದಿಸುವ ಆಯ್ಕೆಯನ್ನು ಸಹ ನೀವು ಹೊಂದಿದ್ದೀರಿ, ಉದಾಹರಣೆಗೆ ಕಾಲಾನಂತರದಲ್ಲಿ ನಿಮ್ಮ ದ್ವಿಚಕ್ರ ವಾಹನದ ಮೌಲ್ಯದ ಸವಕಳಿಯಿಂದ ರಕ್ಷಿಸುವ ಶೂನ್ಯ-ಸವಕಳಿ ಕವರ್ ಅಥವಾ ಇಪ್ಪತ್ತನಾಲ್ಕು ಗಂಟೆ ಆನ್-ರೋಡ್ ಸಹಾಯ ಒದಗಿಸುವ "ತುರ್ತು ಸಹಾಯದ ಕವರ್" ಖರೀದಿಸುವ ಆಯ್ಕೆಯನ್ನು ನೀವು ಹೊಂದಿದ್ದೀರಿ.

ದೀರ್ಘಾವಧಿಯ ಟೂ ವೀಲರ್ ಇನ್ಶೂರೆನ್ಸ್ ಫೀಚರ್‌ಗಳು

ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್‌ನ ಫೀಚರ್‌ಗಳು ಹೀಗಿವೆ-

1
ದೀರ್ಘಾವಧಿ ರಕ್ಷಣೆ
5 ವರ್ಷಗಳವರೆಗೆ ಸಾಮಾನ್ಯ ರಕ್ಷಣೆಯನ್ನು ಒದಗಿಸುವ ಎಚ್‌ಡಿಎಫ್‌ಸಿ ಎರ್ಗೋದ ಸಮಗ್ರ ಮಲ್ಟಿ-ಇಯರ್ ಇನ್ಶೂರೆನ್ಸ್‌ನೊಂದಿಗೆ, ನಿಮ್ಮ ಕಾರು ದೀರ್ಘಾವಧಿಯವರೆಗೆ ಸರಾಗವಾಗಿ ಚಲಿಸುತ್ತದೆ.
2
ಪ್ರೀಮಿಯಂ ಮೇಲೆ ರಿಯಾಯಿತಿ
ಹಣವನ್ನು ಉಳಿಸುವುದು ಹಣವನ್ನು ಗಳಿಸುವುದಕ್ಕೆ ಸಮ, ಅಲ್ಲವೇ?? ಎಚ್‌ಡಿಎಫ್‌ಸಿ ಎರ್ಗೋ ಮಲ್ಟಿ-ಇಯರ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನೀವು ಪ್ರೀಮಿಯಂಗಳ ಮೇಲೆ ಕಡಿಮೆ ಖರ್ಚು ಮಾಡಬಹುದು.
3
ವಾರ್ಷಿಕ ನವೀಕರಣ ಬೇಕಿಲ್ಲ
ವಾರ್ಷಿಕವಾಗಿ ನಿಮ್ಮ ಪಾಲಿಸಿಯ ನವೀಕರಣದ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ಪಾಲಿಸಿಯನ್ನು ನವೀಕರಿಸಲು ವಿಫಲವಾಗುವ ದಂಡಗಳಿಂದ ಇದು ನಿಮ್ಮನ್ನು ರಕ್ಷಿಸುತ್ತದೆ.
4
ಸರಳ ರದ್ದತಿ
ನಿಮಗೆ ಇನ್ಶೂರೆನ್ಸ್ ಅಗತ್ಯವಿಲ್ಲದಿದ್ದರೆ, ನೀವು ಚಿಂತಿಸಬೇಕಾಗಿಲ್ಲ! ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ದೀರ್ಘಾವಧಿಯ ಪಾಲಿಸಿಯನ್ನು ರದ್ದುಗೊಳಿಸುವುದನ್ನು ಸರಳಗೊಳಿಸುತ್ತದೆ.
5
ಬೆಲೆ ಹೆಚ್ಚಳದ ಯಾವುದೇ ಪರಿಣಾಮವಿಲ್ಲ
ನಿಮ್ಮ ಕವರೇಜ್ ಅವಧಿಯಲ್ಲಿ ಯಾವುದೇ ಸಮಯದಲ್ಲಿ ಪ್ರೀಮಿಯಂ ವೆಚ್ಚಗಳು ಹೆಚ್ಚಾದರೂ, ನಿಮ್ಮ ಪಾಲಿಸಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಖರೀದಿಯ ಪ್ರಯೋಜನಗಳು ಬಹು-ವಾರ್ಷಿಕ ಟೂ ವೀಲರ್ ಇನ್ಶೂರೆನ್ಸ್

1
ವಾರ್ಷಿಕ ನವೀಕರಣ ಬೇಕಿಲ್ಲ
ಪ್ರತಿ ವರ್ಷ ನಿಮ್ಮ ಪಾಲಿಸಿಯನ್ನು ನವೀಕರಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ. ನಿಮ್ಮ ಇನ್ಶೂರೆನ್ಸ್ ನವೀಕರಣ ಮರೆಯುವುದರಿಂದ ಆಗುವ ದುಷ್ಪರಿಣಾಮಗಳ ವಿರುದ್ಧ ರಕ್ಷಣೆ ನೀಡುತ್ತದೆ.
2
ದೀರ್ಘಾವಧಿ ರಕ್ಷಣೆ
3 ವರ್ಷಗಳವರೆಗೆ ಸಮಗ್ರ ರಕ್ಷಣೆ ಒದಗಿಸುವ ಎಚ್‌ಡಿಎಫ್‌ಸಿ ಎರ್ಗೋದ ಸಮಗ್ರ ಮಲ್ಟಿ-ಇಯರ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಸುಗಮ ಸವಾರಿ ಇನ್ನಷ್ಟು ಸುಗಮವಾಗುತ್ತದೆ.
3
ಸುಲಭ ರದ್ದತಿ
ಬೈಕ್ ಮಾರುತ್ತಿದ್ದೀರಾ? ಇನ್ನು ಮುಂದೆ ಇನ್ಶೂರೆನ್ಸ್ ಅಗತ್ಯವಿಲ್ಲವೇ? ಚಿಂತಿಸಬೇಡಿ! ನಾವು ನಿಮಗೆ ದೀರ್ಘಾವಧಿಯ ಪಾಲಿಸಿಯನ್ನು ಸುಲಭವಾಗಿ ರದ್ದುಪಡಿಸುವ ಆಯ್ಕೆ ಒದಗಿಸುತ್ತೇವೆ.
4
ಪ್ರೀಮಿಯಂ ಮೇಲೆ ರಿಯಾಯಿತಿ
ಉಳಿಸಿದ ದುಡ್ಡು ಗಳಿಸಿದ ದುಡ್ಡಿಗೆ ಸಮ! ಎಚ್‌ಡಿಎಫ್‌ಸಿ ಎರ್ಗೋದ ಮಲ್ಟಿ-ಇಯರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಪ್ರೀಮಿಯಂ ವೆಚ್ಚದ ಮೇಲೆ ನೀವು ಉಳಿತಾಯ ಮಾಡಬಹುದು.
5
ಬೆಲೆ ಹೆಚ್ಚಳದ ಅಪಾಯವಿಲ್ಲ
ನಿಮ್ಮ ಪಾಲಿಸಿ ಅವಧಿಯ ಯಾವುದೇ ಸಮಯದಲ್ಲಿ ಪ್ರೀಮಿಯಂ ಬೆಲೆಗಳು ಹೆಚ್ಚಾದರೂ ಸಹ, ನಿಮ್ಮ ಪಾಲಿಸಿ ಮೇಲೆ ಅದು ಪ್ರಭಾವ ಬೀರುವುದಿಲ್ಲ.

ಬಹು-ವಾರ್ಷಿಕ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಹೇಗೆ?

ಈಗ ನೀವು ನಿಮ್ಮ ಮನೆಯಲ್ಲೇ ಕುಳಿತು ನಿಮ್ಮ ಟೂ ವೀಲರ್‌ನ ರಕ್ಷಣೆ ಮಾಡಬಹುದು. 4 ಸುಲಭ ಹಂತಗಳಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಬಹು-ವಾರ್ಷಿಕ ಇನ್ಶೂರೆನ್ಸ್ ಪಾಲಿಸಿ ಖರೀದಿಸಿ.

  • Ditch the paperwork! Register your claim and share required documents online.
    ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ
  • You can opt for self inspection or an app enabled digital inspection by a surveyor or workshop partner.
    ಬೈಕ್ ಬ್ರ್ಯಾಂಡ್, ಬೈಕ್ ವೇರಿಯಂಟ್ ಆಯ್ಕೆಮಾಡಿ ಹಾಗೂ ನೋಂದಣಿಯ ನಗರ ಮತ್ತು ವರ್ಷವನ್ನು ನಮೂದಿಸಿ.
  • Relax and keep track of your claim status through the claim tracker.
    'ಗೆಟ್ ಕೋಟ್' ಮೇಲೆ ಕ್ಲಿಕ್ ಮಾಡಿ, ನಿಮ್ಮ ಆದ್ಯತೆಯ ಪ್ಲಾನ್ ಆರಿಸಿ.
  • Take it easy while your claim is approved and settled with our 7400+ network garages!
    ನಿಮ್ಮ ಸಂಪರ್ಕ ವಿವರಗಳನ್ನು ನೀಡಿ, ಆನ್ಲೈನ್ ಪಾವತಿ ಮಾಡಿ.
Did you know
ಹೆಲ್ಮೆಟ್‌ ವಿಷರ್ ಮೇಲ್ಭಾಗದಲ್ಲಿ ಟೇಪ್‌ ಸ್ಟ್ರಿಪ್ ಅಂಟಿಸುವ ಮೂಲಕ ಸೂರ್ಯನ ಕಿರಣಗಳನ್ನು ತಡೆಯಬಹುದು

ಬಹು ವರ್ಷದ ಬೈಕ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ಪರಿಣಾಮ ಬೀರುವ ಅಂಶಗಳು

ನಿಮ್ಮ ಬಹು ವರ್ಷದ ಬೈಕ್ ಇನ್ಶೂರೆನ್ಸ್ ಪ್ಲಾನಿನ ಪ್ರೀಮಿಯಂಗಳ ಮೇಲೆ ಪರಿಣಾಮ ಬೀರಬಹುದಾದ ಕೆಲವು ಅಂಶಗಳಿವೆ. ಆ ಅಂಶಗಳು ಈ ರೀತಿಯಾಗಿವೆ-

Vehicle Depreciation

ವಾಹನದ ಸವಕಳಿ

ನೀವು ಸವಾರಿ ಮಾಡುವಾಗ ನಿಮ್ಮ ಬೈಕ್ ಹಾನಿ ಮತ್ತು ಸವೆತವನ್ನು ಎದುರಿಸುತ್ತವೆ, ಅದರ ಬಳಕೆಯ ವಸ್ತುಗಳ ಪೂರೈಕೆಯನ್ನು ಕಡಿಮೆ ಮಾಡುತ್ತವೆ. ಇದು ಮಾರುಕಟ್ಟೆ ಮೌಲ್ಯದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಸವಕಳಿಯನ್ನು ಆಟೋ ಇನ್ಶೂರೆನ್ಸ್ ಕಂಪನಿಗಳು ವಿಭಿನ್ನವಾಗಿ ಲೆಕ್ಕ ಹಾಕುತ್ತವೆ. ನಿಮ್ಮ ಇನ್ಶೂರೆನ್ಸ್ ದರವು ನಿಮ್ಮ ಬೈಕ್ ಹೆಚ್ಚು ಸವಕಳಿಗಳನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ. ಇದು ಟೂ ವೀಲರ್‌ನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಜೊತೆಗೆ ಸಂಯೋಜನೆಯಲ್ಲಿ ಕೆಲಸ ಮಾಡುತ್ತದೆ.

Insured Declared Value

ವಿಮೆ ಮಾಡಲ್ಪಟ್ಟ ಮೌಲ್ಯ

ಇನ್ಶೂರೆನ್ಸ್ ಕಂಪನಿಯ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಅಥವಾ IDV, ನಿಮ್ಮ ಬೈಕಿನ ಪ್ರಸ್ತುತ ಮಾರುಕಟ್ಟೆ ಮೌಲ್ಯವನ್ನು ನಿರ್ಧರಿಸುತ್ತದೆ. ಕ್ಲೈಮ್ ಸಂದರ್ಭದಲ್ಲಿ ಇನ್ಶೂರೆನ್ಸ್ ಪೂರೈಕೆದಾರರು ನಿಮಗೆ ನೀಡುವ ಹೆಚ್ಚಿನ ಪ್ರಮಾಣದ ಹಣವನ್ನು ಇದು ಸೂಚಿಸುತ್ತದೆ. ನಿಮ್ಮ IDV ನೇರವಾಗಿ ನಿಮ್ಮ ಪ್ರೀಮಿಯಂ ಲೆಕ್ಕ ಹಾಕಲು ಕಾರ್ಯನಿರ್ವಹಿಸುತ್ತದೆ. ಉತ್ತಮ ಸುದ್ದಿ ಏನೆಂದರೆ, ಪೂರ್ವನಿರ್ಧರಿತ IDV ಯ ಕೆಲವು ಶ್ರೇಣಿಯೊಳಗೆ ಬರುವವರೆಗೆ, ಇನ್ಶೂರೆನ್ಸ್ ಕಂಪನಿಗಳು ನಿಮ್ಮ ಸ್ವಂತ IDV ಯನ್ನು ಆಯ್ಕೆ ಮಾಡಲು ನಿಮಗೆ ಅವಕಾಶ ನೀಡುತ್ತವೆ. ನೀವು ಆಯ್ಕೆ ಮಾಡುವ IDV ಮೊತ್ತಕ್ಕೆ ನೇರ ಅನುಪಾತದಲ್ಲಿ ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಳವಾಗುತ್ತದೆ.

No Claims Bonus

ನೋ ಕ್ಲೈಮ್ಸ್ ಬೋನಸ್

NCB ಎಂಬುದು ಸುರಕ್ಷಿತ ಡ್ರೈವಿಂಗ್ ಮತ್ತು ನಿಯಮಿತ ಇನ್ಶೂರೆನ್ಸ್ ನವೀಕರಣವನ್ನು ಪ್ರೋತ್ಸಾಹಿಸಲು ಪಾಲಿಸಿಯ ಪ್ರೀಮಿಯಂನಲ್ಲಿ ಇನ್ಶೂರೆನ್ಸ್ ಕಂಪನಿಗಳು ನೀಡುವ ವಿಶೇಷ ಕಡಿತವಾಗಿದೆ. ಕ್ಲೈಮ್ ಫೈಲ್ ಮಾಡದೆ ನೀವು ಐದು ವರ್ಷಗಳನ್ನು ಖರ್ಚು ಮಾಡಿದರೆ, ಕ್ಲೈಮ್-ಮುಕ್ತವಾಗಿರುವ ಮೊದಲ ವರ್ಷದಲ್ಲಿ ರಿಯಾಯಿತಿಯು 20% ರಿಂದ 50% ಗೆ ಹೆಚ್ಚಾಗುತ್ತದೆ. ಆದಾಗ್ಯೂ, ಇದನ್ನು ಸಾಧಿಸಲು, ಇನ್ಶೂರೆನ್ಸ್ ಅನ್ನು ನಿರಂತರವಾಗಿ ನವೀಕರಿಸಲಾಗುತ್ತದೆ ಮತ್ತು ಅವಧಿ ಮೀರುವುದಿಲ್ಲ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕು.

Add-ons

ಆ್ಯಡ್-ಆನ್‌ಗಳು

ರಕ್ಷಣೆಯ ವ್ಯಾಪ್ತಿ ಮತ್ತು ಸ್ವರೂಪವನ್ನು ವಿಸ್ತರಿಸಲು, ಬೈಕ್ ಇನ್ಶೂರೆನ್ಸ್ ಪೂರೈಕೆದಾರರು ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಮೇಲೆ ಹಲವಾರು ಆ್ಯಡ್-ಆನ್‌ಗಳನ್ನು ನಿಮಗೆ ಒದಗಿಸುತ್ತಾರೆ. ಆದಾಗ್ಯೂ, ನೀವು ಆಯ್ಕೆ ಮಾಡಿದ ಹೆಚ್ಚು ಆ್ಯಡ್-ಆನ್‌ಗಳು ನಿಮ್ಮ ಬೈಕ್ ಇನ್ಶೂರೆನ್ಸ್‌ನ ಹೆಚ್ಚಿನ ಬೆಲೆಗೆ ಕಾರಣವಾಗುತ್ತವೆ, ಏಕೆಂದರೆ ಈ ಆ್ಯಡ್-ಆನ್‌ಗಳು ಹೆಚ್ಚುವರಿಯಾಗಿವೆ.

ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್ ಖರೀದಿಸುವ ಮೊದಲು ಪರಿಗಣಿಸಬೇಕಾದ ವಿಷಯಗಳು

ನೀವು ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್ ಖರೀದಿಸಲು ನಿರ್ಧರಿಸುವ ಮೊದಲು, ಕೆಲವು ವಿಷಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಅವುಗಳು ಈ ರೀತಿಯಾಗಿವೆ-

1
ಪ್ರೀಮಿಯಂನಲ್ಲಿ ಏರಿಕೆ
ನೀವು ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಅಪಘಾತ, ನೈಸರ್ಗಿಕ ವಿಪತ್ತು ಅಥವಾ ಮಾನವ ನಿರ್ಲಕ್ಷ್ಯದಿಂದ ಉಂಟಾಗುವ ಯಾವುದೇ ಹಾನಿಯನ್ನು ಇದು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಇದು ಕಳ್ಳತನದಿಂದ ನಿಮ್ಮನ್ನು ರಕ್ಷಿಸುತ್ತದೆ. ಆದಾಗ್ಯೂ, ದೀರ್ಘಾವಧಿಯ ಟೂ ವೀಲರ್ ಇನ್ಶೂರೆನ್ಸ್‌ನ ಪ್ರಮುಖ ಪ್ರಯೋಜನವೆಂದರೆ ನೀವು ವಾರ್ಷಿಕವಾಗಿ ನಿಮ್ಮ ಪಾಲಿಸಿಯನ್ನು ನವೀಕರಿಸಬೇಕಾಗಿಲ್ಲ. ನೀವು ಮೂರು ವರ್ಷಗಳವರೆಗೆ ಲಾಕ್ ಇನ್ ಆಗದಿದ್ದರೆ, ಪ್ರತಿ ವರ್ಷ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗುತ್ತದೆ, ಆದರೆ ನೀವು 5 ವರ್ಷಗಳ ಬೈಕ್ ಇನ್ಶೂರೆನ್ಸ್ ಬೆಲೆಯನ್ನು ಪಾವತಿಸಬಹುದು ಮತ್ತು ಭವಿಷ್ಯದ ಶುಲ್ಕಗಳನ್ನು ತಪ್ಪಿಸಬಹುದು.
2
ಮಾಲೀಕತ್ವದ ಅವಧಿ
ನೀವು ಈಗಷ್ಟೇ ಹೊಸ ಬೈಕನ್ನು ಖರೀದಿಸಿದ್ದರೆ ಮತ್ತು ಕನಿಷ್ಠ ಮೂರು ವರ್ಷಗಳವರೆಗೆ ಅದನ್ನು ಇರಿಸಲು ಯೋಜಿಸಿದರೆ ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್ ಅರ್ಥಪೂರ್ಣವಾಗಿದೆ. ಆದರೆ ನೀವು ನಿಮ್ಮ ಬೈಕನ್ನು ಮೂರು ವರ್ಷಗಳ ಒಳಗೆ ಮಾರಾಟ ಮಾಡಲು ಯೋಜಿಸಿದರೆ ದೀರ್ಘಾವಧಿಯ ಯೋಜನೆಯು ಪರಿಣಾಮಕಾರಿಯಾಗಿಲ್ಲದಿರಬಹುದು. ನಂತರ ಪಾಲಿಸಿಯನ್ನು ಹೊಸ ಬೈಕ್ ಮಾಲೀಕರಿಗೆ ವರ್ಗಾಯಿಸಬೇಕಾಗುತ್ತದೆ. ಇದಲ್ಲದೆ, ನೀವು ಖರೀದಿಸುವ ಯಾವುದೇ ಹೊಸ ವಾಹನಕ್ಕೆ ನೀವು ಇನ್ಶೂರೆನ್ಸ್ ಪಡೆಯಬೇಕು.
3
ವಿಮಾದಾತರ ಸೇವೆ
ಬೈಕ್‌ಗಾಗಿ 5 ವರ್ಷದ ಇನ್ಶೂರೆನ್ಸ್‌ಗಾಗಿ ನೀವು ಇನ್ಶೂರೆನ್ಸ್ ಕಂಪನಿಯೊಂದಿಗೆ ಲಾಕ್ ಆಗುತ್ತೀರಿ, ನಿಮ್ಮ ಇನ್ಶೂರೆನ್ಸ್‌ನ ಕಾನೂನುಬದ್ಧತೆ ಮತ್ತು ಅವುಗಳ ಸೇವೆಯ ಗುಣಮಟ್ಟವು ಪ್ರಮುಖ ಪರಿಗಣನೆಗಳಾಗಿವೆ. ದೊಡ್ಡ ಗ್ಯಾರೇಜ್ ನೆಟ್ವರ್ಕ್ ಮತ್ತು ಉತ್ತಮ ಕ್ಲೈಮ್ ಸೆಟಲ್ಮೆಂಟ್ ಅನುಪಾತ ಹೊಂದಿರುವ ಇನ್ಶೂರೆನ್ಸ್ ಕಂಪನಿಯನ್ನು ಆಯ್ಕೆಮಾಡಿ. ಸಾಧ್ಯವಾದರೆ, ಅಸ್ತಿತ್ವದಲ್ಲಿರುವ ಪಾಲಿಸಿದಾರರೊಂದಿಗೆ ಮಾತನಾಡಿ ಅಥವಾ ಉತ್ತಮ ಮಾರ್ಗವನ್ನು ಪಡೆಯಲು ಇನ್ಶೂರೆನ್ಸ್ ಕಂಪನಿಯ ಆನ್ಲೈನ್ ಮೌಲ್ಯಮಾಪನಗಳನ್ನು ಓದಿ. ಅಲ್ಲದೆ, ಖರೀದಿಸುವಾಗ 5 ವರ್ಷಗಳ ಬೆಲೆಗೆ ಹೊಸ ಬೈಕ್ ಇನ್ಶೂರೆನ್ಸ್ ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ.
4
ಆ್ಯಡ್-ಆನ್‌ಗಳು/ರೈಡರ್‌ಗಳು
ಆ್ಯಡ್-ಆನ್‌ಗಳು 5 ವರ್ಷಗಳ ಬೈಕ್ ಇನ್ಶೂರೆನ್ಸ್ ಬೆಲೆಯನ್ನು ಹೆಚ್ಚಿಸುವುದರಿಂದ, ದೀರ್ಘಾವಧಿಯ ಪಾಲಿಸಿಗಳಿಗೆ ಎಚ್ಚರಿಕೆಯ ಪರಿಗಣನೆ ಅಗತ್ಯವಾಗಿದೆ. ಆದ್ದರಿಂದ, ನೀವು ಪಾಲಿಸಿಯ ಸಮಯದಲ್ಲಿ ಅನ್ವಯವಾಗುವ ಆ್ಯಡ್-ಆನ್‌ಗಳನ್ನು ಆಯ್ಕೆ ಮಾಡಬೇಕು, ಆರಂಭದಲ್ಲಿ ಮಾತ್ರವಲ್ಲ.
5
ಹೆಚ್ಚುವರಿ ಫೀಚರ್‌ಗಳು
ಹೆಚ್ಚು ಇನ್ಶೂರೆನ್ಸ್ ಕಂಪನಿಗಳು ಆನ್ಲೈನ್ ಆಗುತ್ತಿರುವುದರಿಂದ, ಅವುಗಳು ಆಡಳಿತಾತ್ಮಕ ವೆಚ್ಚಗಳ ಮೇಲೆ ಹಣವನ್ನು ಉಳಿಸುತ್ತಿವೆ ಮತ್ತು ಗ್ರಾಹಕರನ್ನು ಆಕರ್ಷಿಸಲು ಹೆಚ್ಚಿನ ಪ್ರಯೋಜನಗಳನ್ನು ಒದಗಿಸುತ್ತಿವೆ. ಉದಾಹರಣೆಗೆ, ಕೆಲವು ವಿಮಾದಾತರು ಈಗ ಅಪಘಾತದ ಕಡೆಯಿಂದ ಗ್ಯಾರೇಜಿಗೆ ಉಚಿತ ಪಿಕಪ್ ಮತ್ತು ಡ್ರಾಪ್-ಆಫ್ ಸೇವೆಯನ್ನು ಒಳಗೊಂಡಿದ್ದಾರೆ ಮತ್ತು ಈ ಮೊದಲು ಅದು ಆ್ಯಡ್-ಆನ್ ಆಗಿತ್ತು. ಆದ್ದರಿಂದ, 3 ವರ್ಷಗಳವರೆಗೆ ಟೂ ವೀಲರ್ ಇನ್ಶೂರೆನ್ಸ್ ಖರೀದಿಸುವಾಗ, ಪಾಲಿಸಿಯನ್ನು ಆಯ್ಕೆ ಮಾಡುವ ಮೊದಲು ಹಲವಾರು ವಿಮಾದಾತರಿಂದ ಅಂತಹ ಪ್ರಯೋಜನಗಳನ್ನು ಹುಡುಕುತ್ತಿರಬೇಕು.
2000+<sup>**</sup> Network Garages Across India

ಇತ್ತೀಚಿನ ಮಲ್ಟಿ-ಇಯರ್ ಬೈಕ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

Benefits of NCB in Long-Term Two Wheeler Insurance

ದೀರ್ಘಾವಧಿಯ ಟೂ ವೀಲರ್ ಇನ್ಶೂರೆನ್ಸ್‌ನಲ್ಲಿ NCB ಯ ಪ್ರಯೋಜನಗಳು

ಪೂರ್ತಿ ಓದಿ
ಮಾರ್ಚ್ 1, 2022 ರಂದು ಪ್ರಕಟಿಸಲಾಗಿದೆ
Know Why Multi-Year Bike Insurance is Better than Annual Policy

ವಾರ್ಷಿಕ ಪಾಲಿಸಿಗಿಂತ ಬಹು-ವರ್ಷದ ಬೈಕ್ ಇನ್ಶೂರೆನ್ಸ್ ಏಕೆ ಉತ್ತಮವಾಗಿದೆ ಎಂಬುದನ್ನು ತಿಳಿಯಿರಿ

ಪೂರ್ತಿ ಓದಿ
ಸೆಪ್ಟೆಂಬರ್ 13, 2021 ರಂದು ಪ್ರಕಟಿಸಲಾಗಿದೆ
Penny Saved is Penny Earned: Savings Guide for Bike Insurance Buyers

ಉಳಿಸಿದ ಹಣ ಗಳಿಸಿದ ಹಣಕ್ಕೆ ಸಮ: ಬೈಕ್ ಇನ್ಶೂರೆನ್ಸ್ ಖರೀದಿದಾರರಿಗೆ ಉಳಿತಾಯ ಮಾರ್ಗದರ್ಶಿ

ಪೂರ್ತಿ ಓದಿ
ಮಾರ್ಚ್ 08, 2021 ರಂದು ಪ್ರಕಟಿಸಲಾಗಿದೆ
Do not commit these mistakes while buying or renewing bike insurance

ಬೈಕ್ ಇನ್ಶೂರೆನ್ಸ್ ಖರೀದಿಸುವಾಗ ಅಥವಾ ನವೀಕರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಪೂರ್ತಿ ಓದಿ
ಅಕ್ಟೋಬರ್ 29, 2020 ರಂದು ಪ್ರಕಟಿಸಲಾಗಿದೆ
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

FAQ

ಬಹು-ವಾರ್ಷಿಕ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ, ವಾರ್ಷಿಕ ನವೀಕರಣಗಳು ಮತ್ತು ಬೆಲೆ ಹೆಚ್ಚಳಗಳ ಬಗ್ಗೆ ಚಿಂತಿಸದೆ ನೀವು ಮೂರರಿಂದ ಐದು ವರ್ಷಗಳ ತೊಂದರೆ ರಹಿತ ರಕ್ಷಣೆಯನ್ನು ಪಡೆಯುತ್ತೀರಿ. ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ನಿಮ್ಮ ಟೂ ವೀಲರ್‌ಗೆ ಬಹು-ವಾರ್ಷಿಕ ಇನ್ಶೂರೆನ್ಸ್ ಕವರೇಜ್ ಖರೀದಿಸಿದಾಗ, ನೀವು ಪ್ರೀಮಿಯಂನಲ್ಲಿ ಅದ್ಭುತ ರಿಯಾಯಿತಿಯನ್ನು ಕೂಡ ಪಡೆಯುತ್ತೀರಿ.
ಪ್ರಸ್ತುತ ದಿನಾಂಕದಂತೆ ಬೈಕಿನ ಅಂದಾಜು ಮಾರುಕಟ್ಟೆಯನ್ನು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಎಂದು ಕರೆಯಲಾಗುತ್ತದೆ. IDV ಪ್ರೀಮಿಯಂ ಮೊತ್ತದ ಆಧಾರವಾಗಿ ಕಾರ್ಯನಿರ್ವಹಿಸುತ್ತದೆ. ವಾರ್ಷಿಕ ಸವಕಳಿಯಿಂದ ಬೈಕ್‌ನ ಎಕ್ಸ್-ಶೋರೂಮ್ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಇದನ್ನು ಅಂದಾಜು ಮಾಡಲಾಗುತ್ತದೆ.
ಟೂ ವೀಲರ್‌ಗೆ ಆದ ವರ್ಷದ ಆಧಾರದ ಮೇಲೆ, ಈ ಕೆಳಗಿನ ಟೇಬಲ್ ಸವಕಳಿಯ ಶೇಕಡಾವಾರನ್ನು ವಿವರಿಸುತ್ತದೆ:
ಬೈಕ್‌ನ ವಯಸ್ಸು ಸವಕಳಿ
6 ತಿಂಗಳಿಗಿಂತ ಕಡಿಮೆ5%
6 ತಿಂಗಳಿಂದ 1 ವರ್ಷದವರೆಗೆ 15%
1 ರಿಂದ 2 ವರ್ಷ 20%
2 ರಿಂದ 3 ವರ್ಷ 30%
3 ರಿಂದ 4 ವರ್ಷ 40%
4 ರಿಂದ 5 ವರ್ಷ 50%

ಜನರ ವಿವಿಧ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಎರಡು ಆಯ್ಕೆಗಳನ್ನು ವಿನ್ಯಾಸಗೊಳಿಸಲಾಗಿದೆ. ಬಹು-ವಾರ್ಷಿಕ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿಗೆ ಗಾಯ ಅಥವಾ ಮರಣಕ್ಕಾಗಿ ಮತ್ತು ಥರ್ಡ್ ಪಾರ್ಟಿ ಆಸ್ತಿ ಅಥವಾ ವಾಹನಗಳಿಗೆ ಹಾನಿ ಉಂಟಾದರೆ ಮೂರರಿಂದ ಐದು ವರ್ಷಗಳವರೆಗೆ ಕವರೇಜ್ ಅನ್ನು ಒದಗಿಸುತ್ತದೆ. ಆದರೆ, ಬಹು-ವಾರ್ಷಿಕ ಸಮಗ್ರ ಪಾಲಿಸಿ, ಥರ್ಡ್ ಪಾರ್ಟಿ ಹೊಣೆಗಾರಿಕೆಯ ಜೊತೆಗೆ, ಕಳ್ಳತನ, ಬೆಂಕಿ, ನೈಸರ್ಗಿಕ ವಿಪತ್ತುಗಳು ಮತ್ತು ಅಪಘಾತಗಳಿಂದ ನಿಮ್ಮ ಕಾರಿಗೆ ಉಂಟಾಗುವ ಹಾನಿಗೆ ಕವರೇಜನ್ನು ಕೂಡ ಒದಗಿಸುತ್ತದೆ. ನಿಮ್ಮ ಅಗತ್ಯಗಳು ಮತ್ತು ಬಜೆಟ್‌ಗೆ ಸೂಕ್ತವಾದ ದೀರ್ಘಾವಧಿಯ ಟೂ ವೀಲರ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದು ಉತ್ತಮ.
ಹೌದು, ಐದು ವರ್ಷಗಳವರೆಗಿನ ನಿಯಮಗಳೊಂದಿಗೆ ನೀವು ದೀರ್ಘಾವಧಿಯ ಬೈಕ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದು. ಬೈಕ್‌ಗಳಿಗೆ 5 ವರ್ಷದವರೆಗಿನ ಇನ್ಶೂರೆನ್ಸ್ ಒದಗಿಸಲು IRDAI ವಿಮಾದಾತರಿಗೆ ಅನುಮತಿಯನ್ನು ನೀಡಿದೆ.
ನೀವು ಬಹು-ವಾರ್ಷಿಕ ಪಾಲಿಸಿಯನ್ನು ಆಯ್ಕೆ ಮಾಡದಿದ್ದರೆ, ಅಂದರೆ ಬೈಕ್‌ಗಳಿಗೆ 5 ವರ್ಷದ ಇನ್ಶೂರೆನ್ಸ್ ಪಡೆಯದಿದ್ದರೆ, ನೀವು ವಾರ್ಷಿಕ ಆಧಾರದ ಮೇಲೆ ನಿಮ್ಮ ಪಾಲಿಸಿಯನ್ನು ನವೀಕರಿಸಬೇಕಾಗುತ್ತದೆ.
ಹೌದು, 15 ವರ್ಷಗಳ ನಂತರ ಟೂ ವೀಲರ್ ಅನ್ನು ಇನ್ಶೂರ್ ಮಾಡಬಹುದು.
ಇಲ್ಲ, 3 ವರ್ಷದ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ಸ್ವಂತ ಹಾನಿ ಕವರ್ ಅನ್ನು ಪ್ರತ್ಯೇಕವಾಗಿ ಪಡೆದುಕೊಳ್ಳಲು ಆಗುವುದಿಲ್ಲ.