bike insurance calculator
Two Wheeler Insurance with HDFC ERGO
Annual Premium starting at just ₹538*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
7400+ Cashless Network Garages ^

2000+ ನಗದುರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
Emergency Roadside Assistance

ತುರ್ತು ರಸ್ತೆಬದಿ

ಸಹಾಯ
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

ಟೂ ವೀಲರ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್

bike insurance calculator online

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಟೂಲ್ ಆಗಿದ್ದು, ಇದು ಪಾಲಿಸಿದಾರರಿಗೆ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಾಹನದ ಕೆಲವು ವಿವರಗಳಾದ ಮೇಕ್, ಮಾಡೆಲ್/ವೇರಿಯಂಟ್, ವಾಹನ ನೋಂದಣಿ ನಂಬರ್, RTO ಸ್ಥಳ ಮತ್ತು ಟೂ ವೀಲರ್ ಖರೀದಿಸಿದ ವರ್ಷಗಳನ್ನು ಒದಗಿಸಿದರೆ ಸಾಕಾಗುತ್ತದೆ. ಟೂ ವೀಲರ್ ಪಾಲಿಸಿ ಖರೀದಿಸುವ ಮೊದಲು ಪ್ರೀಮಿಯಂ ಲೆಕ್ಕ ಹಾಕುವುದರಿಂದ ವಿವಿಧ ವಿಮಾದಾತರ ಪಾಲಿಸಿ ಕೋಟ್‌ಗಳ ಸ್ಪಷ್ಟ ಚಿತ್ರಣ ದೊರೆಯುತ್ತದೆ ಮತ್ತು ಇದರಿಂದ ಸರಿಯಾದ ಖರೀದಿ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವ ಪ್ರಾಮುಖ್ಯತೆ

ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವುದು ತುಂಬಾ ಮುಖ್ಯವಾಗಿದೆ ಮತ್ತು ಪಾಲಿಸಿಯ ವಿರುದ್ಧ ನೀವು ಪಾವತಿಸುತ್ತಿರುವ ಪ್ರೀಮಿಯಂ ಮೊತ್ತವನ್ನು ಪರಿಶೀಲಿಸಿ. ಈ ಕೆಳಗಿನ ಕಾರಣಗಳು ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವುದು ಏಕೆ ಮುಖ್ಯ ಎಂಬುದನ್ನು ಅರ್ಥ ಮಾಡಿಸುತ್ತವೆ.

• ಖರೀದಿಸುವ ಮೊದಲು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

• ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದಂತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

• ಹಣ ಉಳಿಸುತ್ತದೆ ಹಾಗೂ ಸುಲಭವಾಗಿ ಕೈಗೆಟಕುತ್ತದೆ

• ಯಾವುದೇ ರೀತಿಯ ಆನ್ಲೈನ್/ಆಫ್ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ಆನ್ಲೈನ್ ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಪ್ರಯೋಜನಗಳು

Select perfect premium plan that suits your budget

ನಿಮ್ಮ ಬಜೆಟ್‌ಗೆ ಹೊಂದುವಂತಹ ಸೂಕ್ತವಾದ ಪ್ರೀಮಿಯಂ ಪ್ಲಾನ್ ಆಯ್ಕೆಮಾಡಿ

Pick the right combination of Add-on covers

ಆ್ಯಡ್-ಆನ್ ಕವರ್‌ಗಳ ಸರಿಯಾದ ಸಂಯೋಜನೆಯನ್ನು ಆರಿಸಿಕೊಳ್ಳಿ

No Agent required

ಏಜೆಂಟ್‌ಗಳ ಅಗತ್ಯವಿಲ್ಲ

ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

1
ಇನ್ಶೂರೆನ್ಸ್ ಪಾಲಿಸಿಯ ವಿಧ
ಪ್ರತಿ ಇನ್ಶೂರೆನ್ಸ್ ಕಂಪನಿಯು ಟೂ-ವೀಲರ್‌ಗಳಿಗೆ ಎರಡು ರೀತಿಯ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುತ್ತದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಭಾರತೀಯ ಕಾನೂನು ಪ್ರಕಾರ ಕಡ್ಡಾಯವಾಗಿರುವ ಕನಿಷ್ಠ ಪಾಲಿಸಿಯಾಗಿದೆ ಮತ್ತು ಇದು ಥರ್ಡ್ ಪಾರ್ಟಿ ಹಾನಿಯನ್ನು ಮಾತ್ರ ಕವರ್ ಮಾಡುತ್ತದೆ. ಸಮಗ್ರ ಬೈಕ್ ಇನ್ಶೂರೆನ್ಸ್ ಎಲ್ಲಾ ರೀತಿಯ ರಕ್ಷಣೆಯನ್ನು ಒದಗಿಸುತ್ತದೆ ಮತ್ತು ಥರ್ಡ್ ಪಾರ್ಟಿ ಹಾನಿಗಳಷ್ಟೇ ಅಲ್ಲದೆ, ಕಳ್ಳತನ, ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರ್ಘಟನೆಗಳು ಹಾಗೂ ಅಪಘಾತಗಳ ವಿರುದ್ಧವೂ ಕವರೇಜ್ ಒದಗಿಸುತ್ತದೆ. ಅದು ನೀಡುವ ಪ್ರಯೋಜನಗಳನ್ನು ಪರಿಗಣಿಸಿ ಹೋಲಿಸಿದರೆ, ಸಮಗ್ರ ಕವರ್‌ನ ಪ್ರೀಮಿಯಂ, ಥರ್ಡ್ ಪಾರ್ಟಿ ಕವರ್‌ನ ಪ್ರೀಮಿಯಂಗಿಂತ ಹೆಚ್ಚಿರುತ್ತದೆ.
2
ಟೂ ವೀಲರ್ ವಿಧ ಮತ್ತು ಸ್ಥಿತಿ
ಬೇರೆ-ಬೇರೆ ಬೈಕ್‍‍ಗಳು ಬೇರೆ ಬೇರೆ ವಿಶೇಷತೆಗಳನ್ನು ಹೊಂದಿರುತ್ತವೆ. ಹಾಗಾಗಿ, ಅವುಗಳನ್ನು ಇನ್ಶೂರ್ ಮಾಡಿಸುವ ವೆಚ್ಚದಲ್ಲೂ ವ್ಯತ್ಯಾಸವಿರುತ್ತದೆ.. ಬೈಕ್ ಎಂಜಿನ್‌ನ ಕ್ಯೂಬಿಕ್ ಸಾಮರ್ಥ್ಯವು ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶವಾಗಿದೆ. ಕ್ಯುಬಿಕ್ ಸಾಮರ್ಥ್ಯ ಹೆಚ್ಚಾದಂತೆ, ಇನ್ಶೂರೆನ್ಸ್ ಪ್ರೀಮಿಯಂ ಸಹ ಹೆಚ್ಚಾಗುತ್ತದೆ.. ಜೊತೆಗೆ, ವಾಹನದ ಬಳಕೆಯ ವರ್ಷಗಳು, ಬೈಕ್ ಮಾಡೆಲ್, ಅದರ ಪ್ರಕಾರ ಹಾಗೂ ವಾಹನದ ವರ್ಗ, ನೋಂದಾವಣೆ ಮಾಡಿಸಿದ ಸ್ಥಳ, ಇಂಧನದ ವಿಧ ಹಾಗೂ ಎಷ್ಟು ಮೈಲಿ ಓಡಿದೆ ಎಂಬ ಎಲ್ಲಾ ಅಂಶಗಳು ಪ್ರೀಮಿಯಂ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ.
3
ಬೈಕ್‍ ಮಾರುಕಟ್ಟೆ ಮೌಲ್ಯ
ಬೈಕ್‌ನ ಈಗಿನ ಬೆಲೆ ಅಥವಾ ಮಾರುಕಟ್ಟೆ ಮೌಲ್ಯವೂ ಸಹ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಬೈಕ್ ಮಾರುಕಟ್ಟೆ ಮೌಲ್ಯವು ಅದರ ಬ್ರ್ಯಾಂಡ್ ಮತ್ತು ಕಾರ್ಯಕ್ಷಮತೆಯನ್ನು ಅವಲಂಬಿಸಿರುತ್ತದೆ.. ವಾಹನವು ಹಳೆಯದಾಗಿದ್ದರೆ, ವಾಹನದ ಪರಿಸ್ಥಿತಿ ಮತ್ತು ಅದರ ಮರುಮಾರಾಟ ಮೌಲ್ಯದ ಆಧಾರದ ಮೇಲೆ ಪ್ರೀಮಿಯಂ ನಿರ್ಧರಿಸಲಾಗುತ್ತದೆ.
4
ಆ್ಯಡ್-ಆನ್ ಕವರ್‌ಗಳು
ಆ್ಯಡ್-ಆನ್ ಕವರ್‌ಗಳು ಕವರೇಜ್ ಹೆಚ್ಚಿಸಲು ಸಹಾಯ ಮಾಡುತ್ತವೆ. ಆದರೆ ಆ್ಯಡ್-ಆನ್‌ಗಳ ಸಂಖ್ಯೆ ಹೆಚ್ಚಾದಂತೆ, ಪ್ರೀಮಿಯಂ ಕೂಡ ಹೆಚ್ಚಾಗುತ್ತದೆ. ಆದ್ದರಿಂದ, ನೀವು ಅಗತ್ಯವಿರುವ ಕವರ್‌ಗಳನ್ನು ಮಾತ್ರ ಆಯ್ಕೆ ಮಾಡಿ.
5
ಬೈಕ್‌ಗೆ ಮಾಡಲಾದ ಮಾರ್ಪಾಡುಗಳು
ಬಹಳಷ್ಟು ಜನ ತಮ್ಮ ಬೈಕ್‌ಗಳ ಅಂದ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅಕ್ಸೆಸರಿಗಳನ್ನು ಸೇರಿಸಲು ಇಷ್ಟಪಡುತ್ತಾರೆ. ಆದರೆ, ಈ ಮಾರ್ಪಾಡುಗಳನ್ನು ಸಾಮಾನ್ಯವಾಗಿ ಸ್ಟ್ಯಾಂಡರ್ಡ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ ಮತ್ತು ಈ ಮಾರ್ಪಾಡುಗಳಿಗಾಗಿ ನೀವು ಆ್ಯಡ್-ಆನ್ ಕವರ್ ಖರೀದಿಸಬೇಕಾಗಬಹುದು. ಅದಲ್ಲದೆ, ನಿಮ್ಮ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಈ ಮಾರ್ಪಾಡುಗಳನ್ನು ಸೇರಿಸುವುದರಿಂದ ಪ್ರೀಮಿಯಂ ಮೊತ್ತವು ಹೆಚ್ಚಾಗಬಹುದು.

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಬಳಸುವುದು ಹೇಗೆ?

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ತುಂಬಾ ಸುಲಭ. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಪುಟಕ್ಕೆ ಬಂದ ನಂತರ, ನಿಮ್ಮ ಟೂ ವೀಲರ್ ಮತ್ತು ಇನ್ಶೂರೆನ್ಸ್ ಪ್ರಾಡಕ್ಟ್ ವಿಧದ ಕಡ್ಡಾಯ ವಿವರಗಳನ್ನು (ಸಮಗ್ರ/ಹೊಣೆಗಾರಿಕೆ) ನಮೂದಿಸಿ. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಬಗ್ಗೆ ತಿಳಿದುಕೊಳ್ಳಲು ಮತ್ತು ಲೆಕ್ಕ ಹಾಕಲು ಈ ಕೆಳಗಿನ ಹಂತಗಳನ್ನು ನೋಡಿ.

• ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ವಿವರಗಳಾದ ಮೇಕ್ ಮತ್ತು ಮಾಡೆಲ್‌ಗಳನ್ನು ಭರ್ತಿ ಮಾಡಿ

• ವಾಹನದ ಎಕ್ಸ್‌-ಶೋರೂಮ್ ಬೆಲೆ, ಖರೀದಿಸಿದ ನಗರ ಮತ್ತು ವರ್ಷವನ್ನು ನಮೂದಿಸಿ

• ನಿಮ್ಮ ಬೈಕ್‌ನಿಂದ ಕಳೆದ ವರ್ಷ ಮಾಡಲಾದ ಯಾವುದೇ ಕ್ಲೈಮ್ ವಿವರಗಳನ್ನು ಆಯ್ಕೆಮಾಡಿ ಮತ್ತು ಸಲ್ಲಿಸಿ

ಬೈಕ್ ಇನ್ಶೂರೆನ್ಸ್‌ನಲ್ಲಿ IDV ಮತ್ತು ನಿಮ್ಮ ಟೂ ವೀಲರ್‌ನ ಪ್ರೀಮಿಯಂ ಕೋಟ್ ಅನ್ನು ತೋರಿಸಲಾಗುತ್ತದೆ

• ನಿಮ್ಮ ಅವಶ್ಯಕತೆಗೆ ಅನುಗುಣವಾದ ಪ್ಲಾನ್ (ಸಮಗ್ರ/ಥರ್ಡ್ ಪಾರ್ಟಿ) ಆಯ್ಕೆಮಾಡಿ

• ನಿಮ್ಮ ಬೈಕ್ ಇನ್ಶೂರೆನ್ಸ್ಗಾಗಿ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆಮಾಡಿ

ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡುವುದು ಹೇಗೆ

• ಆನ್ಲೈನ್‌ನಲ್ಲಿ ಟೂ ವೀಲರ್ ಇನ್ಶೂರೆನ್ಸ್ ಖರೀದಿಸಿ

• AAI- ಆ್ಯಂಟಿ-ಥೆಫ್ಟ್ ಡಿವೈಸ್ ಇನ್ಸ್ಟಾಲ್ ಮಾಡಿ

ದೀರ್ಘಾವಧಿಯ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿ

• ಆಯ್ಕೆ ಮಾಡಲಾದ ಆ್ಯಡ್ ಆನ್ ಕವರ್‌ಗಳು

• ಸಣ್ಣ ಕ್ಲೇಮ್‌ಗಳನ್ನು ತಪ್ಪಿಸಿ

2000+<sup>**</sup> Network Garages Across India

ಇತ್ತೀಚಿನ ಟೂ ವೀಲರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನುಓದಿ

Tips to Lower Your Two Wheeler Insurance Premium in 2025

2025 ರಲ್ಲಿ ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡಲು ಸಲಹೆಗಳು

ಪೂರ್ತಿ ಓದಿ
ಪ್ರಕಟಣೆ ದಿನಾಂಕ ಡಿಸೆಂಬರ್ 23, 2024
How to Calculate Your Bike Insurance Premiums?

ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಲೆಕ್ಕ ಹಾಕುವುದು ಹೇಗೆ?

ಪೂರ್ತಿ ಓದಿ
ಪ್ರಕಟಣೆ ದಿನಾಂಕ ಡಿಸೆಂಬರ್ 16, 2024
Everything You Should Know About Bike Insurance Premium Calculator

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಸಂಗತಿಗಳು

ಪೂರ್ತಿ ಓದಿ
ನವೆಂಬರ್ 8, 2024 ರಂದು ಪ್ರಕಟಿಸಲಾಗಿದೆ
How to Calculate Bike Insurance Premium in India

ಭಾರತದಲ್ಲಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಹೇಗೆ

ಪೂರ್ತಿ ಓದಿ
ಫೆಬ್ರವರಿ 18, 2019 ರಂದು ಪ್ರಕಟಿಸಲಾಗಿದೆ
Slider Right
Slider Left
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಗ್ಗೆ ಆಗಾಗ ಕೇಳುವ ಪ್ರಶ್ನೆಗಳು


ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಅವಲಂಬಿಸಿರುವ ಹಲವಾರು ಅಂಶಗಳಿವೆ. ಅವುಗಳಲ್ಲಿ ಕೆಲವು ಹೀಗಿವೆ. ಇನ್ಶೂರೆನ್ಸ್ ವಿಧದ ಬೈಕ್ ಪ್ಲಾನ್ (ಸಮಗ್ರ ಅಥವಾ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್), ಬೈಕ್‌ನ ಮೇಕ್, ಮಾಡೆಲ್ ಮತ್ತು ವೇರಿಯಂಟ್, RTO ಲೊಕೇಶನ್, ಬೈಕ್ ನೋಂದಣಿ ನಗರ ಮುಂತಾದವು. ಈ ವಿವರಗಳನ್ನು ನಮೂದಿಸಿ ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಬಹುದು.
ಹೊಸ ಬೈಕ್‌ನಂತೆ ಸೆಕೆಂಡ್-ಹ್ಯಾಂಡ್ ಬೈಕಿನ ಇನ್ಶೂರೆನ್ಸ್ ಪ್ರೀಮಿಯಂ ಸಹ ಬೈಕಿನ ಮೇಕ್, ಮಾಡೆಲ್ ಮತ್ತು ವೇರಿಯಂಟ್, ಆಯ್ಕೆ ಮಾಡಿದ ಪ್ಲಾನ್ ವಿಧ, ಬೈಕ್ ನೋಂದಣಿ ನಗರ ಮುಂತಾದ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಆದರೆ, ಹೊಸದಕ್ಕೆ ಹೋಲಿಸಿದರೆ ಸೆಕೆಂಡ್ ಹ್ಯಾಂಡ್ ಬೈಕಿನ ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ ಏಕೆಂದರೆ ಈ ಮೊತ್ತವು ಬೈಕ್ ಎಷ್ಟು ಹಳೆಯದು ಎಂಬುದನ್ನೂ ಅವಲಂಬಿಸಿರುತ್ತದೆ.
ಆಯ್ದ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗೆ ಪಾವತಿ ಮಾಡಿದ ನಂತರ, ಪಾಲಿಸಿ ಡಾಕ್ಯುಮೆಂಟ್ ಅನ್ನು ಇಮೇಲ್ ಮೂಲಕ ಕಳುಹಿಸಲಾಗುತ್ತದೆ.
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಬಳಸುವ ಪ್ರಯೋಜನಗಳು ಹೀಗಿವೆ:
• ಆನ್ಲೈನ್‌ನಲ್ಲಿ ಇನ್ಶೂರೆನ್ಸ್ ಪಾಲಿಸಿ ಖರೀದಿಸುವ ಪ್ರಕ್ರಿಯೆಯು ಬಹಳ ಸರಳ ಮತ್ತು ಸುಲಭವಾಗಿದೆ.
• ಇದು ವಿವಿಧ ಪ್ರೀಮಿಯಂ ದರಗಳ ನಡುವೆ ಹೋಲಿಕೆ ಮಾಡಿ, ನಿಮ್ಮ ಅವಶ್ಯಕತೆಗಳು ಮತ್ತು ಬಜೆಟ್‌ನ ಆಧಾರದ ಮೇಲೆ ಅತ್ಯುತ್ತಮ ಇನ್ಶೂರೆನ್ಸ್ ಪ್ಲಾನ್‌ ಆಯ್ಕೆ ಮಾಡಲು ಸಹಾಯ ಮಾಡುತ್ತದೆ.
• ಈಗ, ನೀವು ಅವಸರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿಲ್ಲ. ಅದಲ್ಲದೇ, ಕೆಲವು ದಾರಿ ತಪ್ಪಿಸುವ ಇನ್ಶೂರೆನ್ಸ್ ಏಜೆಂಟ್‌ಗಳ ಬಳಿ ಹೋಗಬೇಕಾಗಿಲ್ಲ.
ಹಳೆಯ/ಹೊಸ ಬೈಕ್‌ಗೆ ಪ್ರೀಮಿಯಂ ಲೆಕ್ಕ ಹಾಕಲು ನೋಂದಣಿ ದಿನಾಂಕ, ಮೇಕ್, ಮಾಡೆಲ್, ನೋಂದಣಿ ನಗರ, ವಿಮಾ ಮೊತ್ತ (ವಾಹನದ ಬೆಲೆ), ಪ್ರಾಡಕ್ಟ್ ವಿಧ (ಸಮಗ್ರ/ಹೊಣೆಗಾರಿಕೆ), ಆ್ಯಡ್ ಆನ್ ಕವರ್‌ಗಳಂತಹ ವಿವರಗಳನ್ನು ಒದಗಿಸಬೇಕು. ನೀವು "ಬಳಸಿದ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ" ಮೇಲೆ ಕ್ಲಿಕ್ ಮಾಡಿ ತ್ವರಿತವಾಗಿ ಕೋಟ್‌ಗಳನ್ನು ಪಡೆಯಬಹುದು.
ಕವರೇಜ್ ಮತ್ತು ಪ್ರಯೋಜನಗಳನ್ನು ಆನಂದಿಸುವುದನ್ನು ಮುಂದುವರೆಸಲು ಬೈಕ್ ಇನ್ಶೂರೆನ್ಸ್ ನವೀಕರಣ ಬಹಳ ಮುಖ್ಯ. ಗಡುವು ದಿನಾಂಕಕ್ಕೂ ಮುಂಚೆ ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಸೂಕ್ತ.. "ರಿನೀವಲ್ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ" ಮೇಲೆ ಕ್ಲಿಕ್ ಮಾಡಿ ಕೂಡಲೇ ನಿಮ್ಮ ಈಗಿನ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಪಾಲಿಸಿ ನವೀಕರಿಸಲು ಕೋಟ್‌ಗಳನ್ನು ಜನರೇಟ್ ಮಾಡಬಹುದು.