ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಒಂದು ರೀತಿಯ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಅನಿರೀಕ್ಷಿತ ಸನ್ನಿವೇಶಗಳಿಂದಾಗಿ ಉಂಟಾಗುವ ವಾಹನದ ಹಾನಿಗೆ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ಗೆ ಕವರೇಜ್ ಅನ್ನು ಒದಗಿಸುತ್ತದೆ. 1999 ರಲ್ಲಿ ಹಿಂದಿನ ಸಹಸ್ರಮಾನದ ಕೊನೆಯಲ್ಲಿ ಹೋಂಡಾ ಆ್ಯಕ್ಟಿವಾ ಮಾರುಕಟ್ಟೆಯನ್ನು ಪ್ರವೇಶಿಸಿದೆ, ಇದು ಸಾಮಾನ್ಯ ಭಾರತೀಯ ಮನೆಗಳಿಗೆ ಹೊಸ ಸಹಸ್ರಮಾನದ ಉಡುಗೊರೆಯಾಗಿದೆ. ದೈನಂದಿನ ಪ್ರಯಾಣಕ್ಕಾಗಿ ಪ್ರತಿ ಮೂರರಲ್ಲಿ ಒಬ್ಬ ಭಾರತೀಯರು ಇದನ್ನು ಬಳಸುವ ಮೂಲಕ ಇದು ಬಹಳ ಬೇಗ ಹಿಟ್ ಆಯಿತು. ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್‌ನೊಂದಿಗೆ ಈ ವಾಹನವನ್ನು ಸುರಕ್ಷಿತಗೊಳಿಸುವುದರಿಂದ ವಾಹನದ ಹಾನಿಯ ಭಾರಿ ದುರಸ್ತಿ ಬಿಲ್ಗಳಿಂದ ನಿಮ್ಮ ವೆಚ್ಚಗಳನ್ನು ಉಳಿಸುತ್ತದೆ. ನೀವು ಹೋಂಡಾ ಆ್ಯಕ್ಟಿವಾ ಹೊಂದಿದ್ದರೆ, ಸಂಪೂರ್ಣ ನಿರ್ವಹಣೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ನೀವು ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಬಹುದು ಮತ್ತು ಶಾಂತಿಯುತವಾಗಿ ರೈಡ್ ಆನಂದಿಸಬಹುದು.
ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್‌ಲೈನ್‌ನಲ್ಲಿ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸುವುದು ಕನಿಷ್ಠ ಪೇಪರ್‌ವರ್ಕ್ ಅನ್ನು ಒಳಗೊಂಡಿರುತ್ತದೆ. ಆ ನಂತರ, ನೀವು ಕೇವಲ ಅಸ್ತಿತ್ವದಲ್ಲಿರುವ ಪಾಲಿಸಿ ನಂಬರ್‌ನೊಂದಿಗೆ ಪ್ಲಾನ್ ನವೀಕರಿಸಬಹುದು.
ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್‌ನ ಕೆಲವು ಫೀಚರ್‌ಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ:
| ಫೀಚರ್‌ಗಳು | ವಿವರಣೆ |
| ಥರ್ಡ್-ಪಾರ್ಟಿ ಹಾನಿ | ಇನ್ಶೂರೆನ್ಸ್ ಮಾಡಿಸಿದ ವಾಹನದಿಂದ ಆದ ಅಪಘಾತದಲ್ಲಿ ಒಳಗೊಂಡಿರುವ ಯಾವುದೇ ಥರ್ಡ್ ಪಾರ್ಟಿ ಆಸ್ತಿ ಹಾನಿ ಮತ್ತು ಗಾಯಗಳಿಗೆ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಹಣಕಾಸಿನ ಹೊಣೆಗಾರಿಕೆಯನ್ನು ಕವರ್ ಮಾಡುತ್ತದೆ. |
| ಸ್ವಂತ ಹಾನಿಯ ಕವರ್ | ಅಪಘಾತ, ಬೆಂಕಿ, ಕಳ್ಳತನ ಮತ್ತು ನೈಸರ್ಗಿಕ ವಿಕೋಪಗಳಿಂದ ಇನ್ಶೂರೆನ್ಸ್ ಮಾಡಿದ ವಾಹನಕ್ಕೆ ಉಂಟಾದ ಹಾನಿಗೆ ಪಾಲಿಸಿಯು ಪಾವತಿಸುತ್ತದೆ |
| ನೋ ಕ್ಲೈಮ್ ಬೋನಸ್ | ಪಾಲಿಸಿ ಅವಧಿಯಲ್ಲಿ ಕ್ಲೈಮ್ ಸಲ್ಲಿಸುವುದನ್ನು ತಪ್ಪಿಸುವ ಮೂಲಕ ನವೀಕರಣದ ಸಮಯದಲ್ಲಿ ನೀವು ನಿಮ್ಮ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಅರ್ಧದಷ್ಟು ಉಳಿತಾಯ ಮಾಡಬಹುದು. |
| AI-ಆಧಾರಿತ ಕ್ಲೈಮ್ ಸಹಾಯ | ನಿಮ್ಮ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಗೊಳಿಸಲು AI-ಸಕ್ರಿಯ ಟೂಲ್ ಐಡಿಯಾಗಳು ನಗದುರಹಿತ ಕ್ಲೈಮ್ ಸೆಟಲ್ಮೆಂಟ್‌ನ ಸಂಪೂರ್ಣ ಪ್ರಕ್ರಿಯೆಯನ್ನು ಸುಗಮಗೊಳಿಸಲು ಸಹಾಯ ಮಾಡುತ್ತವೆ. |
| ನಗದುರಹಿತ ಗ್ಯಾರೇಜುಗಳು | ಎಚ್‌ಡಿಎಫ್‌ಸಿ ಎರ್ಗೋ ಟೂ ವೀಲರ್ ಇನ್ಶೂರೆನ್ಸ್‌ನೊಂದಿಗೆ 2000+ ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳಲ್ಲಿ ನೀವು ಉಚಿತವಾಗಿ ರಿಪೇರಿಗಳು ಮತ್ತು ಬದಲಿ ಸೇವೆಗಳನ್ನು ಪಡೆಯಬಹುದು. |
| ಸವಾರರು | ನೀವು ಎಚ್‌ಡಿಎಫ್‌ಸಿ ಎರ್ಗೋ ಮೂಲಕ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸಿದರೆ, ಶೂನ್ಯ ಸವಕಳಿ, ರಿಟರ್ನ್ ಟು ಇನ್ವಾಯ್ಸ್ ಮುಂತಾದ 8+ ಆ್ಯಡ್-ಆನ್‌ಗಳೊಂದಿಗೆ ನೀವು ಕವರೇಜ್ ವ್ಯಾಪ್ತಿಯನ್ನು ವಿಸ್ತರಿಸಬಹುದು. |
ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಹೊಂದುವ ಪ್ರಯೋಜನಗಳು ಹೀಗಿವೆ:
| ಪ್ರಯೋಜನ | ವಿವರಣೆ |
| ಸಮಗ್ರ ಕವರೇಜ್ | ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ನಿಮ್ಮ ಕಾರನ್ನು ಹಾನಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ಬಹುತೇಕ ಎಲ್ಲಾ ಘಟನೆಗಳನ್ನು ಕವರ್ ಮಾಡುತ್ತದೆ. |
| ಕಾನೂನು ಶುಲ್ಕಗಳು | ನಿಮ್ಮ ವಾಹನವನ್ನು ಒಳಗೊಂಡಿರುವ ಅಪಘಾತಕ್ಕಾಗಿ ಯಾರಾದರೂ ನಿಮ್ಮ ವಿರುದ್ಧ ಕಾನೂನು ಮೊಕದ್ದಮೆ ಹೂಡಿದರೆ, ಅದರಿಂದ ಉಂಟಾದ ಕಾನೂನು ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುತ್ತದೆ. |
| ಕಾನೂನು ಅನುಸರಣೆ | ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್‌ನಲ್ಲಿ ಥರ್ಡ್ ಪಾರ್ಟಿ ಕವರ್ ಕಾನೂನಿನ ಪ್ರಕಾರ ಕಡ್ಡಾಯವಾಗಿರುವುದರಿಂದ ನೀವು ದಂಡ ಪಾವತಿಯನ್ನು ತಪ್ಪಿಸಬಹುದು. |
| ಫ್ಲೆಕ್ಸಿಬಲ್ | ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್, ಎಂಜಿನ್ ಪ್ರೊಟೆಕ್ಷನ್ ಕವರ್, ರಸ್ತೆಬದಿಯ ನೆರವು ಮುಂತಾದ ಸೂಕ್ತ ರೈಡರ್ ಆಯ್ಕೆ ಮಾಡುವ ಮೂಲಕ ನೀವು ಕವರೇಜ್ ವ್ಯಾಪ್ತಿಯನ್ನು ಹೆಚ್ಚಿಸಬಹುದು. |
| ಕ್ಯಾಶ್‌ಲೆಸ್ ಕ್ಲೇಮ್ಗಳು | ಎಚ್‌ಡಿಎಫ್‌ಸಿ ಎರ್ಗೋದ 2000+ ಅಧಿಕೃತ ಗ್ಯಾರೇಜ್‌ಗಳ ವ್ಯಾಪಕ ನೆಟ್ವರ್ಕ್‌ನೊಂದಿಗೆ, ನೀವು ಮುಂಗಡ ಪಾವತಿ ಮಾಡದೆ ನಿಮ್ಮ ಹೋಂಡಾ ಆ್ಯಕ್ಟಿವಾ ರಿಪೇರಿ ಮಾಡಿಸಬಹುದು. |
ಹೋಂಡಾ ಆ್ಯಕ್ಟಿವಾದಂತಹ ಸ್ಕೂಟರ್ ಕುಟುಂಬದ ಬಳಕೆಗೆ ಅತ್ಯುತ್ತಮವಾಗಿದ್ದೂ, ಬಳಕೆಯಾಗುವ ಇಂಧನದ ಮೇಲೆ ಹಿಡಿತ ತಂದು ಉತ್ತಮ ಮೈಲೇಜ್ ನೀಡುವ ಜೊತೆಗೆ, ಭಾರಿ ಟ್ರಾಫಿಕ್ ಇರುವ ಭಾರತೀಯ ರಸ್ತೆಗಳಲ್ಲೂ ಸಮಯಕ್ಕೆ ಸರಿಯಾಗಿ ನಿಮ್ಮ ತಲುಪುದಾಣವನ್ನು ತಲುಪುವಂತೆ ನೋಡಿಕೊಳ್ಳುತ್ತದೆ. ಆದರೆ ನಿಮ್ಮ ಮೆಚ್ಚಿನ ಸ್ಕೂಟರ್ ಇಟ್ಟುಕೊಂಡರಷ್ಟೇ ಸಾಕಾಗುವುದಿಲ್ಲ, ನೀವು ಅದನ್ನು ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಕೂಡ ರಕ್ಷಿಸಬೇಕು. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ, ಆದರೆ ತಜ್ಞರು ನೀವು ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಲಹೆ ನೀಡುತ್ತಾರೆ ಏಕೆಂದರೆ ನಂತರ ಹಲವಾರು ಸಂಭಾವ್ಯ ಅಪಾಯಗಳ ವಿರುದ್ಧ ವ್ಯಾಪಕ ಕವರೇಜನ್ನು ಖಾತರಿಪಡಿಸುತ್ತದೆ. ಆಕ್ಸಿಡೆಂಟ್ ಅಥವಾ ಕಳ್ಳತನದಂತಹ ದುರದೃಷ್ಟಕರ ಘಟನೆಗಳಾದ ಸಂದರ್ಭದಲ್ಲಿ, ನಿಮ್ಮ ಉಳಿತಾಯದ ಹಣವನ್ನು ರಕ್ಷಿಸುವ ವಿವಿಧ ಪ್ಲಾನ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಒದಗಿಸುತ್ತದೆ. ನಿಮಗೆ ಸಿಗುವ ಆಯ್ಕೆಗಳು ಹೀಗಿವೆ:
ನಿಮ್ಮ ಸ್ವಂತ ಬೈಕ್ ಹಾಗೂ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿ ಹಾನಿಗಳಿಂದ ನೀವು ಆಲ್ ರೌಂಡ್ ರಕ್ಷಣೆ ಬಯಸಿದರೆ, ಇದು ನಿಮಗೆ ಸೂಕ್ತವಾದ ಪ್ಯಾಕೇಜ್ ಆಗಿದೆ. ನೀವು ಒಂದು, ಎರಡು ಅಥವಾ ಮೂರು ವರ್ಷಗಳವರೆಗೆ ಕವರ್ ಆಯ್ಕೆ ಮಾಡಬಹುದು. ಆದಾಗ್ಯೂ, ನೀವು ಪ್ರತಿ ವರ್ಷ ನವೀಕರಣದ ತೊಂದರೆಯನ್ನು ತಪ್ಪಿಸಲು ಬಯಸಿದರೆ, ಮೂರು ವರ್ಷಗಳವರೆಗೆ ನಿಮ್ಮ ಹೋಂಡಾ ಆ್ಯಕ್ಟಿವಾವನ್ನು ಸುರಕ್ಷಿತಗೊಳಿಸಲು ನಾವು ಶಿಫಾರಸು ಮಾಡುತ್ತೇವೆ. ಈ ಪಾಲಿಸಿಯ ಇನ್ನೊಂದು ಹೆಚ್ಚುವರಿ ಪ್ರಯೋಜನವೆಂದರೆ, ನೀವು ನಿಮ್ಮ ಹೋಂಡಾ ಆ್ಯಕ್ಟಿವ್ ಬೈಕ್ ಇನ್ಶೂರೆನ್ಸ್ ಅನ್ನು ಆ್ಯಡ್-ಆನ್‌ಗಳೊಂದಿಗೆ ಹೆಚ್ಚಿನ ಕವರೇಜ್‌ಗಾಗಿ ಕಸ್ಟಮೈಸ್ ಮಾಡಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.
ವೈಯಕ್ತಿಕ ಅಪಘಾತ ಕವರ್
ನೈಸರ್ಗಿಕ ವಿಕೋಪಗಳು,
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಇದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿ, ಗಾಯ, ಅಂಗವಿಕಲತೆ ಅಥವಾ ನಷ್ಟದಿಂದಾಗಿ ಉಂಟಾಗುವ ಯಾವುದೇ ಹೊಣೆಗಾರಿಕೆಗಳ ವಿರುದ್ಧ ನಿಮಗೆ ಹಣಕಾಸಿನ ರಕ್ಷಣೆಯನ್ನು ಒದಗಿಸುವ ಮೂಲಭೂತ ಇನ್ಶೂರೆನ್ಸ್ ಆಗಿದೆ. ಭಾರತೀಯ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಇದನ್ನು ಹೊಂದಿರುವುದು ಕಡ್ಡಾಯವಾಗಿದೆ ಮತ್ತು ನೀವು ಮಾನ್ಯ ಹೋಂಡಾ ಆ್ಯಕ್ಟಿವಾ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದೆ ಸಿಕ್ಕಿಹಾಕಿಕೊಂಡರೆ, ₹ 2000 ದಂಡವನ್ನು ಪಾವತಿಸಲು ಸಿದ್ಧರಾಗಿರಿ.
ವೈಯಕ್ತಿಕ ಅಪಘಾತ ಕವರ್
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಅಪಘಾತ, ಕಳ್ಳತನ ಅಥವಾ ವಿಕೋಪಗಳಿಂದಾಗಿ ನಿಮ್ಮ ಸ್ವಂತ ವಾಹನಕ್ಕೆ ಯಾವುದೇ ಹಾನಿ - ನೈಸರ್ಗಿಕ ಅಥವಾ ಮಾನವ ನಿರ್ಮಿತ, ಸ್ವತಂತ್ರ ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತದೆ. ನೀವು ಈಗಾಗಲೇ ಹೋಂಡಾ ಆ್ಯಕ್ಟಿವ್ ಥರ್ಡ್-ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಹೊಂದಿದ್ದರೆ, ಈ ಕವರ್ ನಿಮಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು,
ಆ್ಯಡ್-ಆನ್‌ಗಳ ಆಯ್ಕೆ
ಒಂದು ವೇಳೆ ನೀವು ಹೊಸ ಬೈಕ್ ಖರೀದಿಸಿದ್ದರೆ, ಈ ಕವರ್ ನಿಮ್ಮ ಸ್ವಂತ ವಾಹನಕ್ಕೆ ಆದ ನಷ್ಟಗಳನ್ನು ಒಂದು ವರ್ಷದವರೆಗೆ ಕವರ್ ಮಾಡುತ್ತದೆ ಮತ್ತು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಗಳಿಂದ 5 ವರ್ಷಗಳವರೆಗೆ ರಕ್ಷಣೆ ಒದಗಿಸುತ್ತದೆ.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು,
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ನಿಮ್ಮ ಹೋಂಡಾ ಆ್ಯಕ್ಟಿವಾ ಬೈಕ್‌ಗೆ ಆಯ್ಕೆ ಮಾಡಿರುವ ಪಾಲಿಸಿಯ ಮೇಲೆ ಕವರೇಜ್ ಅವಲಂಬಿತವಾಗಿದೆ. ಒಂದು ವೇಳೆ ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಯಾಗಿದ್ದರೆ, ಅದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆಗುವ ಯಾವುದೇ ಹಾನಿಗೆ ಮಾತ್ರ ಕವರೇಜ್ ಒದಗಿಸುತ್ತದೆ. ಆದರೆ, ಸಮಗ್ರ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನ ಘಟನೆಗಳಿಂದ ರಕ್ಷಣೆ ನೀಡುತ್ತದೆ:
ನಾವು ಆಕ್ಸಿಡೆಂಟ್‌ನಿಂದ ಉಂಟಾಗುವ ಹಣಕಾಸಿನ ನಷ್ಟಗಳನ್ನು ನೋಡಿಕೊಳ್ಳುವುದರಿಂದ, ನಿಮ್ಮ ಉಳಿತಾಯಗಳಿಗೆ ಹಾನಿ ಆಗುವುದಿಲ್ಲ.
ಬೆಂಕಿ ಅನಾಹುತ ಮತ್ತು ಸ್ಫೋಟದಿಂದ ನಿಮ್ಮ ಬೈಕ್‌ಗೆ ಆಗುವ ಯಾವುದೇ ನಷ್ಟ ಅಥವಾ ಹಾನಿಯನ್ನು ಕವರ್ ಮಾಡುತ್ತದೆ.
ನಿಮ್ಮ ಹೋಂಡಾ ಆ್ಯಕ್ಟಿವ್ ಕಳ್ಳತನವಾದರೆ, ನಾವು ಬೈಕಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಜೊತೆಗೆ ನಿಮಗೆ ಪರಿಹಾರ ನೀಡುತ್ತೇವೆ.
ನಿಮ್ಮ ಬೈಕ್‌ಗೆ ಪ್ರವಾಹ, ಭೂಕಂಪ, ಬಿರುಗಾಳಿ, ಗಲಭೆ ಮತ್ತು ವಿಧ್ವಂಸಕ ಕೃತ್ಯಗಳಿಂದ ಆಗುವ ಯಾವುದೇ ಹಾನಿಯನ್ನೂ ನಾವು ಕವರ್ ಮಾಡುತ್ತೇವೆ.
ಯಾವುದೇ ಆಕ್ಸಿಡೆಂಟ್ ಆದ ಸಂದರ್ಭದಲ್ಲಿ, ನಿಮ್ಮ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳಲು ನೀವು ₹15 ಲಕ್ಷದವರೆಗೆ ವೈಯಕ್ತಿಕ ಆಕ್ಸಿಡೆಂಟ್ ಕವರ್ ಪಡೆಯುತ್ತೀರಿ.
ಒಂದು ವೇಳೆ ನಿಮ್ಮಿಂದ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಅವರ ಆಸ್ತಿಗೆ ಹಾನಿ ಅಥವಾ ಗಾಯ ಆದರೆ, ನಿಮ್ಮ ಹಣಕಾಸಿನ ಹೊಣೆಗಾರಿಕೆಗಳಿಗೆ ನಾವು ರಕ್ಷಣೆ ಒದಗಿಸುತ್ತೇವೆ.
ಹೊಸ ಮತ್ತು ಬಳಸಿದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ಗಳಿಗೆ ನೀವು ಟೂ ವೀಲರ್ ಇನ್ಶೂರೆನ್ಸ್ ಪಡೆಯಬಹುದು. ಇಲ್ಲಿ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸಿ!
ಹೋಂಡಾ ಆ್ಯಕ್ಟಿವಾ 7.79PS ಮತ್ತು 8.84Nm ಉತ್ಪಾದಿಸುವ 109.51cc ಸಿಂಗಲ್ ಸಿಲಿಂಡರ್ ಇಂಧನ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿರುವ ಭಾರತದ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಹೋಂಡಾ ಆ್ಯಕ್ಟಿವಾದ ಇತ್ತೀಚಿನ ಆವೃತ್ತಿ 6G ಆಗಿದೆ. ಹೋಂಡಾ ಆ್ಯಕ್ಟಿವಾ 5G ಮತ್ತು ಹೋಂಡಾ ಆ್ಯಕ್ಟಿವಾ 6G ನಡುವೆ ಇರುವ ಅತ್ಯಂತ ಗಮನಾರ್ಹ ವ್ಯತ್ಯಾಸವೆಂದರೆ, ಟೆಲಿಸ್ಕೋಪಿಕ್ ಫೋರ್ಕ್ ಮತ್ತು ದೊಡ್ಡ 12 ಇಂಚಿನ ಮುಂಭಾಗದ ಚಕ್ರದ ಉಪಸ್ಥಿತಿ. ಭಾರತದಲ್ಲಿ ಹೋಂಡಾ ಆ್ಯಕ್ಟಿವಾ 6G ಬೆಲೆ ₹ 76, 234 ರಿಂದ ಆರಂಭವಾಗಿ ₹ 82,734 ವರೆಗೆ ಇದೆ. ಹೋಂಡಾ ಆ್ಯಕ್ಟಿವಾ 6G 5 ವೇರಿಯಂಟ್‌ಗಳೊಂದಿಗೆ ಬರುತ್ತದೆ. ಎಲ್ಲಾ ವೇರಿಯಂಟ್‌ಗಳನ್ನು ಕೆಳಗಿನ ಟೇಬಲ್‌ನಲ್ಲಿ ನೋಡೋಣ.
| ಹೋಂಡಾ ಆ್ಯಕ್ಟಿವಾ 6G | ಬೆಲೆ (ಎಕ್ಸ್-ಶೋರೂಮ್) |
| ಹೋಂಡಾ ಆ್ಯಕ್ಟಿವಾ 6G STD | ₹ 76,234 |
| ಹೋಂಡಾ ಆ್ಯಕ್ಟಿವಾ 6G DLX | ₹ 78,734 |
| ಹೋಂಡಾ ಆ್ಯಕ್ಟಿವಾ 6G DLX ಲಿಮಿಟೆಡ್ ಎಡಿಷನ್ | ₹ 80,734 |
| ಹೋಂಡಾ ಆ್ಯಕ್ಟಿವಾ 6G H-ಸ್ಮಾರ್ಟ್ | ₹ 82,234 |
| ಹೋಂಡಾ ಆ್ಯಕ್ಟಿವಾ 6G ಸ್ಮಾರ್ಟ್ ಲಿಮಿಟೆಡ್ ಎಡಿಷನ್ | ₹ 82,734 |
ಆ್ಯಕ್ಟಿವಾ 125 ನಂತರ ಹೋಂಡಾ ಆ್ಯಕ್ಟಿವಾ 6G ಅನ್ನು ಬಿಡುಗಡೆ ಮಾಡಲಾಗುತ್ತಿದೆ. LED ಹೆಡ್‌ಲೈಟ್ ಡೀಲಕ್ಸ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ. ಆ್ಯಕ್ಟಿವಾ H-ಸ್ಮಾರ್ಟ್ ವೇರಿಯಂಟ್ ಆಟೋಮ್ಯಾಟಿಕ್ ಲಾಕ್/ಅನ್ಲಾಕ್, ಎಂಜಿನ್ ಇಮ್ಮೊಬಿಲೈಜರ್ ಮತ್ತು ಕೀಲೆಸ್ ಸ್ಟಾರ್ಟ್‌ನಂತಹ ಸಂಪೂರ್ಣ ಶ್ರೇಣಿಯ ಕಾರ್ಯಗಳನ್ನು ಒದಗಿಸುವ ಸ್ಮಾರ್ಟ್ ಕೀಯನ್ನು ಪಡೆಯುತ್ತದೆ. H-ಸ್ಮಾರ್ಟ್ ವೇರಿಯಂಟ್ OBD-2 ನಿಯಮಗಳ ಅನುಸರಣೆಯೊಂದಿಗೆ ಬರುತ್ತದೆ. ಇತ್ತೀಚಿನ 6G ಆ್ಯಕ್ಟಿವಾ ಎಂಜಿನ್ ಬಗ್ಗೆ ಹೇಳುವುದಾದರೆ ಇದು 7.79PS ಮತ್ತು 8.84Nm ಉತ್ಪಾದಿಸಲು ಟ್ಯೂನ್ ಆಗಿರುವ 109.51cc ಸಿಂಗಲ್ ಸಿಲಿಂಡರ್‌ನೊಂದಿಗೆ ಬರುತ್ತದೆ. ಇದು ACG ಸ್ಟಾರ್ಟರ್ (ಸೈಲೆಂಟ್ ಸ್ಟಾರ್ಟರ್) ಮತ್ತು ಎಂಜಿನ್ ಕಿಲ್ ಸ್ವಿಚ್ ಕೂಡ ಹೊಂದಿದೆ. ನಾವು ಹೋಂಡಾ ಆ್ಯಕ್ಟಿವಾದ ಕೆಲವು USP ಗಳನ್ನು ನೋಡೋಣ:
ನೀವು ಆ್ಯಕ್ಟಿವಾ ಹೊಂದಿದ್ದರೆ ಅಥವಾ ಖರೀದಿಸಲು ಯೋಜಿಸಿದ್ದರೆ, ನಿಮ್ಮ ವಾಹನವು ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವಾಹ, ಕಳ್ಳತನ, ಭೂಕಂಪ ಇತ್ಯಾದಿಗಳಂತಹ ಇನ್ಶೂರೆಬಲ್ ಅಪಾಯದಿಂದಾಗಿ ನಿಮ್ಮ ವಾಹನಕ್ಕೆ ಉಂಟಾಗುವ ನಷ್ಟದಿಂದ ಬೈಕ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವೆಚ್ಚಗಳನ್ನು ರಕ್ಷಿಸುತ್ತದೆ. ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸಲು ಇನ್ನಷ್ಟು ಕಾರಣಗಳನ್ನು ನೋಡೋಣ
• ಕಾನೂನು ಅವಶ್ಯಕತೆಗಳು - 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಪ್ರತಿ ವಾಹನ ಮಾಲೀಕರು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಥರ್ಡ್ ಪಾರ್ಟಿ ಕವರ್ ಹೊಂದುವುದು ಕಡ್ಡಾಯವಾಗಿದೆ. ಆದ್ದರಿಂದ, ಪ್ರತಿ ಆ್ಯಕ್ಟಿವಾ ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ಆ್ಯಕ್ಟಿವಾ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.
• ವಾಹನದ ಹಾನಿಗೆ ಕವರೇಜ್ – ನೀವು ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಅಥವಾ ಸಮಗ್ರ ಕವರ್ ಆಯ್ಕೆ ಮಾಡಿದರೆ, ಇನ್ಶೂರೆಬಲ್ ಅಪಾಯದಿಂದಾಗಿ ನಿಮ್ಮ ವಾಹನಕ್ಕೆ ಉಂಟಾದ ಯಾವುದೇ ಹಾನಿಗೆ ನೀವು ಕವರೇಜ್ ಪಡೆಯುತ್ತೀರಿ. ಇದರ ಜೊತೆಗೆ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್, ಶೂನ್ಯ ಸವಕಳಿ, ತುರ್ತು ಸಹಾಯ ಮುಂತಾದ ಆ್ಯಡ್-ಆನ್ ಕವರ್‌ಗಳನ್ನು ಕೂಡ ನೀವು ಆಯ್ಕೆ ಮಾಡಬಹುದು.
• ಥರ್ಡ್ ಪಾರ್ಟಿ ಹೊಣೆಗಾರಿಕೆಗಳು – ಹೋಂಡಾ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ಇನ್ಶೂರ್ಡ್ ವ್ಯಕ್ತಿಯ ವಾಹನವನ್ನು ಒಳಗೊಂಡ ಅಪಘಾತದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಉಂಟಾಗುವ ಯಾವುದೇ ಹಾನಿಗೆ ಕೂಡ ನೀವು ಕವರೇಜ್ ಪಡೆಯುತ್ತೀರಿ.
ಟೂ ವೀಲರ್ ಇನ್ಶೂರೆನ್ಸ್ ಹೊಂದಿರುವುದು ಮುಖ್ಯವಾಗಿದೆ. ದೇಶದಲ್ಲಿ ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡಲು, ಮಾಲೀಕ-ಸವಾರ ಪಾಲಿಸಿಯನ್ನು ಹೊಂದಿರಬೇಕು. ಆದರೆ ಮುಖ್ಯವಾಗಿ, ಇದು ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿಸುತ್ತದೆ. ನಿಮ್ಮ ಸ್ಕೂಟರ್‌ಗೆ ದೊಡ್ಡ ಹಾನಿ ಉಂಟುಮಾಡುವ ಅನೇಕ ನೈಸರ್ಗಿಕ ವಿಪತ್ತುಗಳಿವೆ. ಅದರಿಂದ ಬೈಕ್‌ಗೆ ಆದ ಹಾನಿಯನ್ನು ಸರಿಪಡಿಸಲು, ನಿಮ್ಮ ಉಳಿತಾಯದ ಹೆಚ್ಚಿನ ಭಾಗ ಬಳಸಿಕೊಳ್ಳಬೇಕಾಗಬಹುದು. ಅತ್ಯುತ್ತಮ ರೈಡರ್‌ಗಳಿಗೂ ಹಾಗೂ ತಮ್ಮ ಬೈಕ್‌ಗಳಿಗೆ ಎಷ್ಟೇ ಸುರಕ್ಷತೆ ಫೀಚರ್‌ಗಳನ್ನು ಹೊಂದಿದವರಿಗೂ ಇಂತಹ ಅನುಭವ ಆಗಬಹುದು. ಎಚ್‌ಡಿಎಫ್‌ಸಿ ಎರ್ಗೋದ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯು ಈ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸುವ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಸರಿಯಾದ ಇನ್ಶೂರೆನ್ಸ್ ಎಲ್ಲಿ ಪಡೆಯಬೇಕು ಎಂಬುದೇ ನಿಮ್ಮ ಚಿಂತೆಯಾಗಿದ್ದರೆ, ನಿಮ್ಮ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಎಚ್‌ಡಿಎಫ್‌ಸಿ ಅನ್ನು ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಉತ್ತಮ ಕಾರಣಗಳು ಹೀಗಿವೆ
ಬ್ರೇಕ್‌ಡೌನ್ ಸಂದರ್ಭದಲ್ಲಿ, ನೀವು ನಮಗೊಂದು ಕರೆ ಮಾಡಿದರೆ ಸಾಕು. ನಮ್ಮ 24x7 ರೋಡ್‌ಸೈಡ್ ಸಹಾಯ ತಂಡ, ನೀವು ಎಲ್ಲೇ ಸಿಲುಕಿಕೊಂಡಿದ್ದರೂ, ನಿಮಗೆ ಬ್ರೇಕ್‌ಡೌನ್ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಹೆಚ್ಚುವರಿಯಾಗಿ, ನಾವು ಕಾಗದರಹಿತ ಕ್ಲೈಮ್‌ಗಳು ಮತ್ತು ಸ್ವಯಂ-ತಪಾಸಣೆ ಆಯ್ಕೆಗಳನ್ನು ಒದಗಿಸುತ್ತೇವೆ. ನಮ್ಮ ಪಾಲಿಸಿದಾರರು ಸುಲಭವಾಗಿ ಕ್ಲೈಮ್‌ಗಳನ್ನು ಸಲ್ಲಿಸಬಹುದು.
ಸಣ್ಣ ಆಕ್ಸಿಡೆಂಟ್ ರಿಪೇರಿಗಳಿಗಾಗಿ ನಮ್ಮ ತಡರಾತ್ರಿಯ ರಿಪೇರಿ ಸೇವೆಗಳು ಇರುವಾಗ, ಹಾನಿಯಾದ ನಿಮ್ಮ ಬೈಕ್ ಅನ್ನು ತಕ್ಷಣ ಸರಿಪಡಿಸಿಕೊಳ್ಳಬಹುದು. ಕಾಯುವ ಅವಶ್ಯಕತೆಯೇ ಇಲ್ಲ. ನಿಮ್ಮ ಬೈಕ್ ಅನ್ನು ಬೇಕೆಂದಾಗ ರಿಪೇರಿ ಮಾಡಿಸಿಕೊಂಡು, ತಕ್ಷಣ ಅದನ್ನು ಮೊದಲಿನ ಸ್ಥಿತಿಯಲ್ಲಿ ಪಡೆದುಕೊಳ್ಳಬಹುದು.
ಭಾರತದಾದ್ಯಂತ ಇರುವ ಎಚ್‌ಡಿಎಫ್‌ಸಿ ಎರ್ಗೋದ 2000+ ನೆಟ್ವರ್ಕ್ ಗ್ಯಾರೇಜ್‌ಗಳೇ ಇದಕ್ಕೆ ಕಾರಣ. ನಿಮ್ಮ ಬೈಕ್ ರಿಪೇರಿ ಮಾಡಿಸಲು ನಿಮ್ಮ ಸಮೀಪದಲ್ಲೇ ನೆಟ್ವರ್ಕ್ ಗ್ಯಾರೇಜ್ ಅನ್ನು ನೀವು ಯಾವಾಗ ಬೇಕಾದರೂ ಕಂಡುಕೊಳ್ಳಬಹುದು.
ಕೆಲವೇ ಕ್ಲಿಕ್‌ಗಳೊಂದಿಗೆ, ಮನೆಯಲ್ಲಿ ಕುಳಿತೇ ನಿಮ್ಮ ಆ್ಯಕ್ಟಿವಾಗಾಗಿ ನೀವು ಸುಲಭವಾಗಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ನೀವು ಈಗಾಗಲೇ ಗಡುವು ಮುಗಿಯುವ ಹಂತದಲ್ಲಿರುವ ಸಕ್ರಿಯ ಇನ್ಶೂರೆನ್ಸ್ ಹೊಂದಿದ್ದರೆ, ತಡೆರಹಿತ ಕವರೇಜ್ ಆನಂದಿಸಲು ನಿಮ್ಮ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಅನ್ನು ಸಮಯಕ್ಕೆ ಸರಿಯಾಗಿ ನವೀಕರಿಸಿ. ಈ ಕೆಳಗಿನ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ನಿಮ್ಮ ಬೈಕ್ ಅನ್ನು ತಕ್ಷಣವೇ ಸುರಕ್ಷಿತವಾಗಿರಿಸಿ!
ನಾವು ಡಿಜಿಟಲ್ ಯುಗದಲ್ಲಿದ್ದು, ಎಲ್ಲವನ್ನೂ ನಮ್ಮ ಬೆರಳತುದಿಯಲ್ಲಿ ಖರೀದಿಸಬಹುದು. ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ನವೀಕರಣದ ವಿಷಯಕ್ಕೆ ಬಂದಾಗ, ನೀವು ಯಾವುದೇ ಚಿಂತೆಯಿಲ್ಲದೆ ಅದನ್ನು ಆನ್ಲೈನ್‌ನಲ್ಲಿ ಖರೀದಿಸಬಹುದು. ಕೆಳಗಿನ ಕೆಲವು ಪ್ರಯೋಜನಗಳನ್ನು ನಾವು ನೋಡೋಣ
ನಿಮ್ಮ ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ನಗದುರಹಿತ ಕ್ಲೈಮ್ ಮಾಡಲು ನೀವು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
• ನಮ್ಮ ಸಹಾಯವಾಣಿ ನಂಬರ್‌ಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವ ಮೂಲಕ ಘಟನೆಗೆ ಸಂಬಂಧಿಸಿದಂತೆ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ತಿಳಿಸಿ.
• ನಿಮ್ಮ ಟೂ ವೀಲರ್ ಅನ್ನು ಎಚ್‌ಡಿಎಫ್‌ಸಿ ಎರ್ಗೋ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗೆ ಕೊಂಡೊಯ್ಯಿರಿ. ಇಲ್ಲಿ, ವಿಮಾದಾತರು ನೇಮಕ ಮಾಡಿದ ವ್ಯಕ್ತಿಯಿಂದ ನಿಮ್ಮ ವಾಹನವನ್ನು ಪರಿಶೀಲಿಸಲಾಗುತ್ತದೆ.
• ನಮ್ಮ ಅನುಮೋದನೆಯನ್ನು ಪಡೆದ ನಂತರ, ಗ್ಯಾರೇಜ್ ನಿಮ್ಮ ಬೈಕ್ ರಿಪೇರಿ ಮಾಡಲು ಆರಂಭಿಸುತ್ತದೆ.
• ಇದರ ನಡುವೆ, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್ ಅನ್ನು ನಮಗೆ ಸಲ್ಲಿಸಿ. ಯಾವುದೇ ನಿರ್ದಿಷ್ಟ ಡಾಕ್ಯುಮೆಂಟ್ ಅಗತ್ಯವಿದ್ದರೆ, ನಾವು ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.
• ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡವು ಬೈಕ್ ಇನ್ಶೂರೆನ್ಸ್‌ನಲ್ಲಿ ನಗದುರಹಿತ ಕ್ಲೈಮ್ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಕ್ಲೈಮ್ ಅನ್ನು ಅಂಗೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ.
• ಯಶಸ್ವಿ ಪರಿಶೀಲನೆಯ ನಂತರ, ರಿಪೇರಿ ವೆಚ್ಚಗಳನ್ನು ನೇರವಾಗಿ ಗ್ಯಾರೇಜ್‌ಗೆ ಪಾವತಿಸುವ ಮೂಲಕ ನಾವು ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಸೆಟಲ್ ಮಾಡುತ್ತೇವೆ. ಅನ್ವಯವಾಗುವ ಕಡಿತಗಳು ಯಾವುದಾದರೂ ಇದ್ದರೆ, ಅದನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿಡಿ.
ಗಮನಿಸಿ: ಥರ್ಡ್ ಪಾರ್ಟಿ ಹಾನಿಯ ಸಂದರ್ಭದಲ್ಲಿ, ಅಪಘಾತದಲ್ಲಿ ಒಳಗೊಂಡಿರುವ ಇತರ ವಾಹನದ ಮಾಲೀಕರ ವಿವರಗಳನ್ನು ನೀವು ತೆಗೆದುಕೊಳ್ಳಬಹುದು. ಆದಾಗ್ಯೂ, ನಿಮ್ಮ ವಾಹನದ ಗಮನಾರ್ಹ ಹಾನಿ ಅಥವಾ ಕಳ್ಳತನದ ಸಂದರ್ಭದಲ್ಲಿ, ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ನೀವು ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ವರದಿಯನ್ನು ಸಲ್ಲಿಸಬೇಕು
ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ
1. ನಿಮ್ಮ ಹೋಂಡಾ ಆ್ಯಕ್ಟಿವಾದ ನೋಂದಣಿ ಪ್ರಮಾಣಪತ್ರ (RC) ಬುಕ್ ಪ್ರತಿ.
2. ಘಟನೆ ನಡೆದ ಸಮಯದಲ್ಲಿ ಇನ್ಶೂರ್ಡ್ ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಪ್ರತಿ.
3. ಘಟನೆಯ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ಸಲ್ಲಿಸಿದ FIR ಕಾಪಿ.
4. ಗ್ಯಾರೇಜ್‌ನಿಂದ ದುರಸ್ತಿ ಅಂದಾಜುಗಳು
5. ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ಡಾಕ್ಯುಮೆಂಟ್‌ಗಳು
ಆ್ಯಕ್ಟಿವಾ ಕಳ್ಳತನದ ಕ್ಲೈಮ್‌ಗಳನ್ನು ಸಲ್ಲಿಸಲು ಅಗತ್ಯವಿರುವ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ
• ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೂಲ ಡಾಕ್ಯುಮೆಂಟ್‌ಗಳು
• ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಕಳ್ಳತನ ಅನುಮೋದನೆ
• ಸರ್ವಿಸ್ ಬುಕ್ಲೆಟ್‌ಗಳು/ಬೈಕ್ ಕೀಗಳು ಮತ್ತು ವಾರಂಟಿ ಕಾರ್ಡ್
• ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ ನಂಬರ್, ಇನ್ಶೂರೆನ್ಸ್ ಕಂಪನಿಯ ವಿವರಗಳು ಮತ್ತು ಪಾಲಿಸಿ ಅವಧಿಯ ಅವಧಿಯಂತಹ ಹಿಂದಿನ ಟೂ ವೀಲರ್ ಇನ್ಶೂರೆನ್ಸ್ ವಿವರಗಳು
• ಪೊಲೀಸ್ FIR/ JMFC ವರದಿ/ ಅಂತಿಮ ತನಿಖಾ ವರದಿ
• ಕಳ್ಳತನದ ಬಗ್ಗೆ ಬೈಕನ್ನು "ಬಳಕೆಯಲ್ಲಿಲ್ಲ" ಎಂದು ಘೋಷಿಸುವ ಅನುಮೋದಿತ ಸಂಬಂಧಪಟ್ಟ RTO ಗೆ ಉದ್ದೇಶಿಸಿರುವ ಪತ್ರದ ಪ್ರತಿ
ಖಚಿತ ವಿಷಯಗಳು:
1. ಮುಂಬೈನಲ್ಲಿ ನೋಂದಣಿ
2. ಶಿಫಾರಸು ಮಾಡಲಾದ IDV ತೆಗೆದುಕೊಳ್ಳಲಾಗಿದೆ
3. ಪರ್ಸನಲ್ ಆಕ್ಸಿಡೆಂಟ್ ರೈಡರ್ ತೆಗೆದುಕೊಳ್ಳಲಾಗಿಲ್ಲ
4. ಮಾನ್ಯ 5-ವರ್ಷದ ಥರ್ಡ್-ಪಾರ್ಟಿ-ಮಾತ್ರದ ಇನ್ಶೂರೆನ್ಸ್ ಪ್ಲಾನ್ ಇಲ್ಲದೆ ಹೊಚ್ಚ ಹೊಸ ಬೈಕ್‌ಗಳಿಗೆ ಸ್ಟ್ಯಾಂಡ್‌ಅಲೋನ್ ಸ್ವಂತ-ಹಾನಿ ಇನ್ಶೂರೆನ್ಸ್ ಪ್ಲಾನ್ ಲಭ್ಯವಿಲ್ಲ.
| ವೇರಿಯಂಟ್ ಹೆಸರು | ಎಕ್ಸ್-ಶೋರೂಮ್ ಬೆಲೆ (₹) | 1 ವರ್ಷದ ಸ್ವಂತ-ಹಾನಿ + 5 ವರ್ಷದ ಥರ್ಡ್ ಪಾರ್ಟಿ ಕವರ್‌ನೊಂದಿಗೆ GST ಹೊರತುಪಡಿಸಿ ಸಮಗ್ರ ಕವರ್ ಬೆಲೆ (₹) | ಕಡ್ಡಾಯ 5-ವರ್ಷದ ಕವರ್‌ನೊಂದಿಗೆ ಥರ್ಡ್ ಪಾರ್ಟಿ ಕವರ್ ಬೆಲೆ (₹) |
| ಹೋಂಡಾ ಆ್ಯಕ್ಟಿವಾ 6G ಡಿಲಕ್ಸ್ (110CC) | ₹ 93,155 | 4274 | 3851 |
| ಆ್ಯಕ್ಟಿವಾ 6G ಡಿಲಕ್ಸ್ - ಲಿಮಿಟೆಡ್ ಎಡಿಷನ್ (110 CC) | ₹ 94,801 | 4385 | 3851 |
| ಆ್ಯಕ್ಟಿವಾ 6G ಸ್ಟ್ಯಾಂಡರ್ಡ್ (110 CC) | ₹ 90,448 | 4310 | 3851 |
| ಆ್ಯಕ್ಟಿವಾ 6G H-ಸ್ಮಾರ್ಟ್ - ಲಿಮಿಟೆಡ್ ಎಡಿಷನ್ (110 CC) | ₹ 96,984 | 4394 | 3851 |
| ಆ್ಯಕ್ಟಿವಾ 6G ಪ್ರೀಮಿಯಂ ED BSVI (110 CC) | ₹ 86,313 | 4334 | 3851 |
ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಬೆಲೆಯ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ಅಂಶಗಳು ಹೀಗಿವೆ:
ಸೆಕೆಂಡ್-ಹ್ಯಾಂಡ್ ಬೈಕ್ ಖರೀದಿಸುವಾಗ, ಎಲ್ಲಾ ಕಾನೂನು ನಿಯಮಗಳನ್ನು ಅನುಸರಿಸಿ ನೀವು ಸಂಪೂರ್ಣ ಮಾಲೀಕತ್ವದ ವರ್ಗಾವಣೆಯನ್ನು ಖಚಿತಪಡಿಸಿಕೊಳ್ಳಬೇಕು. ಅದು ಪೂರ್ವ-ಮಾಲೀಕತ್ವದ ವಾಹನವಾಗಿರಲಿ ಅಥವಾ ಹೊಸ ವಾಹನವಾಗಿರಲಿ, ನೀವು ಸರಿಯಾದ ವಾಹನ ಇನ್ಶೂರೆನ್ಸ್ ಅನ್ನು ನಿರ್ವಹಿಸಬೇಕು. ಸೆಕೆಂಡ್-ಹ್ಯಾಂಡ್ ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸಲು ಅಥವಾ ನವೀಕರಿಸಲು ನೀವು ಈ ಹಂತಗಳನ್ನು ಅನುಸರಿಸಬೇಕು:
• ಅಧಿಕೃತ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ
• RC (ನೋಂದಣಿ ಪ್ರಮಾಣಪತ್ರ), ನಿಮ್ಮ ಗುರುತಿನ ಪುರಾವೆ ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಿ.
• ನೀವು ಈ ಪ್ರಕ್ರಿಯೆಯನ್ನು ಆರಂಭಿಸಿದ ನಂತರ, ಸಂಬಂಧಪಟ್ಟ ಇನ್ಶೂರೆನ್ಸ್ ಕಂಪನಿಯು ತಪಾಸಣೆಗಾಗಿ ಪ್ರತಿನಿಧಿಯನ್ನು ಕಳುಹಿಸುತ್ತದೆ.
• ಒಮ್ಮೆ ಅನುಮೋದನೆ ಪಡೆದ ನಂತರ, ನೀವು ಪ್ರೀಮಿಯಂ ಅನ್ನು ಡಿಜಿಟಲ್ ಆಗಿ ಪಾವತಿಸಬಹುದು ಮತ್ತು ಇನ್ಶೂರೆನ್ಸ್ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ನವೀಕರಣದ ಸಂದರ್ಭದಲ್ಲಿ, ಯಾವುದೇ ತಪಾಸಣೆ ಇರುವುದಿಲ್ಲ ಎಂಬುದನ್ನು ಗಮನಿಸಿ. ಹಿಂದಿನ ಪಾಲಿಸಿ ವಿವರಗಳನ್ನು ನಮೂದಿಸುವ ಮೂಲಕ ನೀವು ಅದೇ ವಿಮಾದಾತರನ್ನು ಬಳಸುವುದನ್ನು ಮುಂದುವರೆಸಬಹುದು.
ನೀವು ಹೋಂಡಾ ಆ್ಯಕ್ಟಿವಾದ ಮಾಲೀಕರಾಗಿದ್ದರೆ, ನಿಮ್ಮ ಸ್ಕೂಟರ್ ಅನ್ನು ಉತ್ತಮ ಸ್ಥಿತಿಯಲ್ಲಿ ಇರಿಸಲು ಕೆಲವು ಅಗತ್ಯ ಸಲಹೆಗಳು ಇಲ್ಲಿವೆ.
• ಓವರ್‌ಸ್ಪೀಡಿಂಗ್ ತಪ್ಪಿಸಿ ಮತ್ತು 40–60 km/hr ವೇಗ ಮಿತಿಯಲ್ಲಿ ನಿಮ್ಮ ವಾಹನ ಚಲಾಯಿಸಿ.
• ಚಲಾಯಿಸುವಾಗ ನಿಮ್ಮ ವಾಹನದ ಮೇಲೆ ಭಾರಿ ಸಾಮಗ್ರಿಗಳನ್ನು ಹೇರಬೇಡಿ. ಇದು ಅಪಾಯಕಾರಿ ಮಾತ್ರವಲ್ಲದೆ, ವಾಹನದ ಇಂಧನ ದಕ್ಷತೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ.
• ಪ್ರತಿ 1800-2000 km ನಂತರ ನಿಮ್ಮ ಆ್ಯಕ್ಟಿವಾ ಸರ್ವಿಸ್ ಮಾಡಿಸಲು ಮರೆಯಬೇಡಿ.
• ಯಾವಾಗಲೂ ಟೈರ್‌ಗಳಲ್ಲಿ ಸರಿಯಾದ ಏರ್‌ಪ್ರೆಶರ್ ಅನ್ನು ನಿರ್ವಹಿಸಿ.
• ರಿಸರ್ವ್‌ನಲ್ಲಿ ವಾಹನ ಚಲಾಯಿಸಬೇಡಿ ಮತ್ತು ಯಾವಾಗಲೂ ಪೆಟ್ರೋಲ್ ಟ್ಯಾಂಕ್ ಅರ್ಧಕ್ಕಿಂತ ಹೆಚ್ಚು ತುಂಬಿರಲಿ.
• ನಿಮ್ಮ ಆ್ಯಕ್ಟಿವಾವನ್ನು ನೆರಳಿನಲ್ಲಿ ಪಾರ್ಕ್ ಮಾಡಿ ಮತ್ತು ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಪಾರ್ಕ್ ಮಾಡಬೇಡಿ.
• ನಿಮ್ಮ ಆ್ಯಕ್ಟಿವಾವನ್ನು ಸ್ವಚ್ಛವಾಗಿರಿಸಿ ಮತ್ತು ಸರಿಯಾದ ಟೂ ವೀಲರ್ ಕ್ಲೀನಿಂಗ್ ಲಿಕ್ವಿಡ್‌ನಿಂದ ಅದನ್ನು ನಿಯಮಿತವಾಗಿ ತೊಳೆಯಿರಿ.
