Building insurance provides protection to the structure of a building, providing coverage against fire or other unforeseen damages. It covers the cost of repairing or rebuilding the structure, whether you own a residential building or a commercial property. Building insurance provides financial security by covering the cost of damages during an untoward event. This type of insurance typically covers the physical structure, including walls, roofs, floors, and permanent fixtures. Some policies may also include additional coverage options like protection against legal liabilities or accidental damage. Having comprehensive building insurance ensures that you are prepared for unforeseen events, giving you peace of mind and helping you recover swiftly in the event of a disaster. Explore building insurance plans from HDFC ERGO today to find one that fits your needs.
ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿ ಹೂಡಿಕೆ ಮಾಡುವ ಕೆಲವು ಪ್ರಮುಖ ಪ್ರಯೋಜನಗಳನ್ನು ಈ ಕೆಳಗಿನ ಟೇಬಲ್ನಲ್ಲಿ ನೀಡಲಾಗಿದೆ:
ಪ್ರಯೋಜನಗಳು | ವಿವರಗಳು |
---|---|
ವ್ಯಾಪಕ ಶ್ರೇಣಿಯ ಭದ್ರತೆ | ಬಿಲ್ಡಿಂಗ್ ಇನ್ಶೂರೆನ್ಸ್‌ನೊಂದಿಗೆ, ನೀವು ಕಟ್ಟಡ ರಚನೆ ಮತ್ತು/ಅಥವಾ ಅದರ ವಸ್ತುಗಳಿಗೆ ಕವರೇಜ್ ಪಡೆಯಬಹುದು. |
ಹಲವಾರು ಅಪಾಯಗಳು ಕವರ್ ಆಗುತ್ತವೆ | ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿನ ಕವರೇಜ್ ನೈಸರ್ಗಿಕ ಮತ್ತು ಮಾನವರಿಂದ ನಡೆಯುವ ವಿಕೋಪಗಳು, ದರೋಡೆ ಮತ್ತು ಕಳ್ಳತನ, ಎಲೆಕ್ಟ್ರಿಕಲ್ ಬ್ರೇಕ್ಡೌನ್, ಬೆಂಕಿ ಹಾನಿ, ಆಕಸ್ಮಿಕ ಹಾನಿ ಇತ್ಯಾದಿಗಳನ್ನು ಒಳಗೊಂಡಂತೆ ವಿವಿಧ ರೀತಿಯ ಅಪಾಯಗಳನ್ನು ಒಳಗೊಂಡಿದೆ. |
ಫ್ಲೆಕ್ಸಿಬಲ್ ಕವರೇಜ್ | ಬಿಲ್ಡಿಂಗ್ ಇನ್ಶೂರೆನ್ಸ್‌ನೊಂದಿಗೆ, ನೀವು ಫ್ಲೆಕ್ಸಿಬಲ್ ಕವರೇಜ್ನ ಪ್ರಯೋಜನವನ್ನು ಪಡೆಯುತ್ತೀರಿ. ಕಟ್ಟಡ ರಚನೆ ಮತ್ತು/ಅಥವಾ ಅದರ ವಸ್ತುಗಳನ್ನು ಕವರ್ ಮಾಡುವುದರ ಜೊತೆಗೆ, ಅದರ ಕವರೇಜ್ ವ್ಯಾಪ್ತಿಯನ್ನು ಹೆಚ್ಚಿಸಲು ನೀವು ಆ್ಯಡ್-ಆನ್ಗಳನ್ನು ಸೇರಿಸಬಹುದು. |
ತಡೆರಹಿತ ಜೀವನ | ಇನ್ಶೂರ್ಡ್ ಕಟ್ಟಡವು ಕವರ್ ಆದ ಅಪಾಯದಿಂದಾಗಿ ನಿವಾಸಕ್ಕೆ ಅನರ್ಹವಾದರೆ, ಪರ್ಯಾಯ ವಸತಿ/ತಾತ್ಕಾಲಿಕ ಜೀವನ ವೆಚ್ಚಗಳನ್ನು ಕವರ್ ಮಾಡಲು ಪಾಲಿಸಿಯು ಸಹಾಯ ಮಾಡಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. |
ಹಣಕಾಸಿನ ಸುರಕ್ಷತಾ ನೆಟ್ | ಇನ್ಶೂರ್ಡ್ ಅಪಾಯದಿಂದಾಗಿ ನಿಮ್ಮ ಕಟ್ಟಡಕ್ಕೆ ಆದ ಹಾನಿ/ನಷ್ಟದ ದುರಸ್ತಿ/ಬದಲಿಸುವಿಕೆಗೆ ಬಿಲ್ಡಿಂಗ್ ಇನ್ಶೂರೆನ್ಸ್ ಹಣಕಾಸಿನ ಕವರೇಜ್ ಒದಗಿಸುತ್ತದೆ. ಇದು ನೀವು ಖರ್ಚು ಮಾಡಬೇಕಾದ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿಮ್ಮ ವೈಯಕ್ತಿಕ ಹಣಕಾಸನ್ನು ರಕ್ಷಿಸುತ್ತದೆ. |
ಮನಃಶಾಂತಿ | ಕಟ್ಟಡದ ಮಾಲೀಕರು/ಬಾಡಿಗೆದಾರರಾಗಿ, ಬೆಂಕಿ ಹಾನಿ, ದರೋಡೆ, ನೈಸರ್ಗಿಕ ವಿಕೋಪಗಳು ಮತ್ತು ಇತರ ಅಪಾಯಗಳ ವಿರುದ್ಧ ನಿಮ್ಮ ಮನೆ ಆರ್ಥಿಕವಾಗಿ ಸುರಕ್ಷಿತವಾಗಿದೆ ಎಂದು ತಿಳಿದುಕೊಂಡು ನೀವು ನೆಮ್ಮದಿಯನ್ನು ಪಡೆಯಬಹುದು. |
ಬಿಲ್ಡಿಂಗ್ ಇನ್ಶೂರೆನ್ಸ್ ಅಡಿಯಲ್ಲಿ ನೀಡಲಾಗುವ ಕವರೇಜ್ ವಿಧಗಳ ವಿಷಯಕ್ಕೆ ಬಂದಾಗ, ಅದನ್ನು ಮೂರು ವಿಭಾಗಗಳಾಗಿ ವರ್ಗೀಕರಿಸಬಹುದು. ಈ ವಿಭಾಗಗಳು ಈ ರೀತಿಯಾಗಿವೆ:
ಮನೆಯ ಕಟ್ಟಡ ರಚನೆ ಮತ್ತು ವಸ್ತುಗಳು - ಎರಡಕ್ಕೂ ಕವರೇಜ್ ಒದಗಿಸುವ ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿ ನೀವು ಹೂಡಿಕೆ ಮಾಡಬಹುದು.
ಕಟ್ಟಡ ರಚನೆ ಅಥವಾ ವಸ್ತುಗಳು- ಎರಡರಲ್ಲಿ ಒಂದಕ್ಕೆ ಕವರೇಜ್ ಒದಗಿಸುವ ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿ ನೀವು ಹೂಡಿಕೆ ಮಾಡಬಹುದು.
ಮನೆ ರಚನೆ ಮತ್ತು/ಅಥವಾ ಅದರ ವಸ್ತುಗಳಿಗೆ ಕವರೇಜ್ ಒದಗಿಸುವ ಬಿಲ್ಡಿಂಗ್ ಇನ್ಶೂರೆನ್ಸ್ನಲ್ಲಿ ನೀವು ಹೂಡಿಕೆ ಮಾಡಬಹುದು ಮತ್ತು ಕವರೇಜ್ ವ್ಯಾಪ್ತಿಯನ್ನು ವಿಸ್ತರಿಸಲು ಆಭರಣ ಮತ್ತು ಬೆಲೆಬಾಳುವ ವಸ್ತುಗಳ ಕವರ್, ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳ ಕವರ್ ಮುಂತಾದ ಅಗತ್ಯ ಆ್ಯಡ್-ಆನ್ಗಳನ್ನು ಆಯ್ಕೆ ಮಾಡಬಹುದು.
ನಿಮ್ಮ ಕಟ್ಟಡವು ಪ್ರವಾಹ ಅಥವಾ ಭೂಕಂಪ ಪೀಡಿತ ಸ್ಥಳದಲ್ಲಿದ್ದರೆ, ನಿಮ್ಮ ಪ್ರೀಮಿಯಂ ಮೊತ್ತ ಸ್ವಲ್ಪ ಹೆಚ್ಚಾಗಿರಬಹುದು.
ನಿಮ್ಮ ಕಟ್ಟಡವು ಸ್ವಲ್ಪ ಹಳೆಯದಾಗಿದ್ದರೆ ಮತ್ತು ರಚನಾತ್ಮಕ ಸವಾಲುಗಳನ್ನು ಹೊಂದಿದ್ದರೆ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು.
ನಿಮ್ಮ ಕಟ್ಟಡವು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದರೆ, ಕಳ್ಳತನದ ಅವಕಾಶಗಳು ಕಡಿಮೆ ಇರುತ್ತದೆ. ಹಾಗಾಗಿ, ಅಂತಹ ಸಂದರ್ಭದಲ್ಲಿ ನಿಮ್ಮ ಪ್ರೀಮಿಯಂ ಕಡಿಮೆಯಾಗಬಹುದು.
ನೀವು ಇನ್ಶೂರ್ ಮಾಡಿಸಲು ಬಯಸುತ್ತಿರುವ ಒಂದಷ್ಟು ಅಮೂಲ್ಯ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ, ಆ ವಸ್ತುವಿನ ಮೌಲ್ಯವನ್ನು ಅವಲಂಬಿಸಿ ಪ್ರೀಮಿಯಂ ಮೊತ್ತವು ಏರುಪೇರಾಗಬಹುದು.
ಪ್ರೀಮಿಯಂ ನಿರ್ಧರಿಸುವ ಸಮಯದಲ್ಲಿ ನಿಮ್ಮ ಮನೆಯ ಒಟ್ಟಾರೆ ಮೌಲ್ಯ ಮಹತ್ವ ಪಡೆದುಕೊಳ್ಳುತ್ತದೆ. ನಿಮ್ಮ ಮನೆಯ ರಚನಾತ್ಮಕ ಮೌಲ್ಯ ಹೆಚ್ಚಾಗಿದ್ದರೆ, ಪ್ರೀಮಿಯಂ ದರ ಹೆಚ್ಚಾಗುತ್ತದೆ. ಇದನ್ನು ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯ ಎಂದೂ ಹೇಳಬಹುದು. ಏಕೆಂದರೆ ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದ್ದರೆ ವಿಮಾ ಮೊತ್ತವೂ ಹೆಚ್ಚಾಗಿರುತ್ತದೆ.
ನಿಮ್ಮ ಕನಸಿನ ಮನೆಯು ಬೆಂಕಿಗೆ ಆಹುತಿಯಾಗಬಹುದು.. ಬೆಂಕಿಯಿಂದ ಉಂಟಾದ ಹಾನಿಗಳನ್ನು ನಾವು ಕವರ್ ಮಾಡುತ್ತೇವೆ, ಇದರಿಂದ ನೀವು ಮತ್ತೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಕಳ್ಳರು ನಿಮ್ಮ ಅಮೂಲ್ಯ ಒಡವೆಗಳು, ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಬಹುದು. ಅವುಗಳಿಗೆ ರಕ್ಷಣೆ ಒದಗಿಸಿ ನೀವು ನೆಮ್ಮದಿಯಿಂದ ಇರಬಹುದು
ಗೃಹೋಪಯೋಗಿ ವಸ್ತುಗಳಿಲ್ಲದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ... ಅವು ಕೆಟ್ಟು ಹೋದಾಗ ಕವರೇಜ್ ಪಡೆಯಲು ಅವುಗಳನ್ನು ಇನ್ಶೂರ್ ಮಾಡಿಸಿ
ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ನಿಮಗೆ ಸಾಧ್ಯವಿಲ್ಲ ಇನ್ನಷ್ಟು ಓದಿರಿ...
ಸಂಕಷ್ಟದ ಸಮಯಗಳು ನಿಮ್ಮ ಮನೆ ಹಾಗೂ ಮನಸ್ಸಿನ ನೆಮ್ಮದಿಗಳೆರಡರ ಮೇಲೆಯೂ ಪ್ರಭಾವ ಬೀರಬಹುದು. ನಮ್ಮ ಹೋಮ್ ಇನ್ಶೂರೆನ್ಸ್ ಪರಿಹಾರಗಳೊಂದಿಗೆ ನಿಮ್ಮ ಮನೆಯನ್ನು ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಹಾನಿಯಿಂದ ರಕ್ಷಿಸಿ.
ಫಿಕ್ಸ್ಚರ್‌ಗಳು ಮತ್ತು ಸ್ಯಾನಿಟರಿ ಫಿಟ್ಟಿಂಗ್‌ಗಳಿಗೆ ಖರ್ಚು ಮಾಡಿದಿರಾ? ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಅಪಘಾತದ ಹಾನಿಯ ವಿರುದ್ಧ ಅವುಗಳನ್ನು ಸುರಕ್ಷಿತವಾಗಿಸಿ ನಿಶ್ಚಿಂತೆಯಿಂದಿರಿ.
ಈ ಸಂದರ್ಭದಲ್ಲಿ ಮನೆ ಬದಲಾಯಿಸುವ ಖರ್ಚುಗಳು, ಪರ್ಯಾಯ/ಹೋಟೆಲ್ ವಸತಿಗಾಗಿ ಬಾಡಿಗೆ, ತುರ್ತಿನ ಖರೀದಿಗಳು, ಮತ್ತು ಬ್ರೋಕರೇಜ್ಇನ್ನಷ್ಟು ಓದಿ...
ಯುದ್ಧ, ಆಕ್ರಮಣ, ಅನ್ಯದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆ ಮುಂತಾದವುಗಳಿಂದ ಉಂಟಾಗುವ ನಷ್ಟ/ಹಾನಿಗಳು. ಕವರ್ ಆಗುವುದಿಲ್ಲ.
ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.
ನಿಮ್ಮ ಅಮೂಲ್ಯ ವಸ್ತುಗಳೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧವಿರುತ್ತದೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ 10 ವರ್ಷಕ್ಕಿಂತ ಹಳೆಯದಾದ ವಸ್ತುಗಳನ್ನು ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ
ನಿಮ್ಮ ಅನಿರೀಕ್ಷಿತ ನಷ್ಟಗಳು ಖಂಡಿತವಾಗಿಯೂ ಕವರ್ ಆಗುತ್ತವೆ, ಆದರೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಕವರ್ ಆಗುವುದಿಲ್ಲ
ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.
ಸಾಮಾನ್ಯ ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.
ಕೆಲವು ಸಂದರ್ಭಗಳಲ್ಲಿ, ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.
ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.
ಯುದ್ಧ, ಆಕ್ರಮಣ, ಅನ್ಯದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆ ಮುಂತಾದವುಗಳಿಂದ ಉಂಟಾಗುವ ನಷ್ಟ/ಹಾನಿಗಳು. ಕವರ್ ಆಗುವುದಿಲ್ಲ.
ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.
ನಿಮ್ಮ ಅಮೂಲ್ಯ ವಸ್ತುಗಳೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧವಿರುತ್ತದೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ 10 ವರ್ಷಕ್ಕಿಂತ ಹಳೆಯದಾದ ವಸ್ತುಗಳನ್ನು ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ
ನಿಮ್ಮ ಅನಿರೀಕ್ಷಿತ ನಷ್ಟಗಳು ಖಂಡಿತವಾಗಿಯೂ ಕವರ್ ಆಗುತ್ತವೆ, ಆದರೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಕವರ್ ಆಗುವುದಿಲ್ಲ
ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.
ಸಾಮಾನ್ಯ ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.
ಕೆಲವು ಸಂದರ್ಭಗಳಲ್ಲಿ, ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.
ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.
ಲ್ಯಾಪ್ಟಾಪ್, ಕ್ಯಾಮರಾ, ದುರ್ಬೀನು, ಸಂಗೀತದ ಉಪಕರಣಗಳು ಮುಂತಾದ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು; ಸ್ಪೋರ್ಟ್ಸ್ ಗೇರ್ ದುಬಾರಿಯಷ್ಟೇ ಅಲ್ಲದೆ ಅವುಗಳು ಇಲ್ಲದೆ ನಿಮ್ಮ ದಿನನಿತ್ಯದ ಜೀವನ ಕಷ್ಟವಾಗಬಹುದು, ಅವುಗಳನ್ನು ಇದರಲ್ಲಿ ಕವರ್ ಮಾಡಲಾಗಿದೆ. ಆದರೆ 10 ವರ್ಷಗಳಿಗಿಂತ ಹಳೆಯ ಉಪಕರಣಗಳಿಗೆ ಈ ಪಾಲಿಸಿಯು ಕವರೇಜ್ ನೀಡುವುದಿಲ್ಲ.
ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳೆಂದರೆ ಚಿನ್ನ, ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ಲೋಹದಿಂದ ಮಾಡಿದ ಆಭರಣಗಳು, ವಜ್ರದ ಆಭರಣಗಳು, ಕಲಾಕೃತಿಗಳು ಮತ್ತು ವಾಚ್‌ಗಳು. ಈ ಆ್ಯಡ್ ಆನ್ ಕವರ್ ಅನ್ನು ನಿಮ್ಮ ಹೋಮ್ ಕಂಟೆಂಟ್ (ಮನೆ ವಸ್ತುಗಳು) ವಿಮಾ ಮೊತ್ತದ ಗರಿಷ್ಠ 20% ವರೆಗೆ ಆಯ್ಕೆ ಮಾಡಬಹುದು. ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಆದ ನಷ್ಟವನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಕವರ್ ಮಾಡಲಾಗುತ್ತದೆ
ಈ ಕವರ್ ಅಡಿಯಲ್ಲಿ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್ ಮತ್ತು ಗೇರ್ ಇರುವ ಅಥವಾ ಇಲ್ಲದ ಪೆಡಲ್ ಸೈಕಲ್‌ಗೆ ಆಗುವ ನಷ್ಟವನ್ನು ನಾವು ಇನ್ಶೂರ್ ಮಾಡುತ್ತೇವೆ. ಇದು ಬೆಂಕಿ, ವಿಕೋಪಗಳು, ಕಳ್ಳತನ ಮತ್ತು ಅಪಘಾತಗಳಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ. ನಿಮ್ಮ ಇನ್ಶೂರ್ಡ್ ಸೈಕಲ್‌ನಿಂದ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಆದ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ರಕ್ಷಣೆ ಒದಗಿಸುತ್ತೇವೆ. ಆದರೆ, ಕೇವಲ ನಿಮ್ಮ ಪೆಡಲ್ ಸೈಕಲ್ ಟೈರ್‌ಗಳು ಮಾತ್ರ ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ಅದು ಕವರ್ ಆಗುವುದಿಲ್ಲ.
ಭಯೋತ್ಪಾದಕರ ದಾಳಿಯಿಂದ ನಿಮ್ಮ ಕಟ್ಟಡ/ಮನೆಯ ವಸ್ತುಗಳು ನಷ್ಟವಾದರೆ ನಾವು ಅದನ್ನು ಕವರ್ ಮಾಡುತ್ತೇವೆ