• ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಮನೆ ಮಾಲೀಕರ ಇನ್ಶೂರೆನ್ಸ್

ಸ್ವಂತ ಮನೆಯೊಂದನ್ನು ಖರೀದಿಸಬೇಕು ಎಂಬುದು ಭಾರತದ ಬಹುತೇಕ ಜನರ ಬಹುದಿನಗಳ ಕನಸಾಗಿರುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ತಮ್ಮ ಕನಸನ್ನು ನನಸಾಗಿಸಿಕೊಂಡ ನಂತರ ಮನೆಯನ್ನು ಸುರಕ್ಷಿತಗೊಳಿಸುವ ಅಗತ್ಯವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರು ವಿಫಲರಾಗುತ್ತಾರೆ. ಎಚ್‌ಡಿಎಫ್‌ಸಿ ಎರ್ಗೋದ ಮಾಲೀಕರಿಗಾಗಿನ ಹೋಮ್ ಶೀಲ್ಡ್ ಇನ್ಶೂರೆನ್ಸ್‌‌ನಿಂದ, ನಿಮ್ಮ ಮನೆ ಅಥವಾ ಮನೆಯ ವಸ್ತುಗಳು ಎಂದಾದರೂ ಅಪಾಯಕ್ಕೀಡಾದರೆ, ಅವುಗಳಿಗೆ ರಕ್ಷಣೆ ಒದಗಿಸಲು ನಾವು ಒಂದು ಶೀಲ್ಡ್‌ನೊಂದಿಗೆ ಸಿದ್ಧರಾಗಿದ್ದೇವೆ ಎಂಬುದನ್ನು ತಿಳಿದು ನೆಮ್ಮದಿಯಿಂದ ಇರಬಹುದು.

ಎಚ್ ಡಿ ಎಫ್ ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಖರೀದಿಸಲು ಕಾರಣಗಳು

ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು
ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು

ನಿಮ್ಮ ಹೋಮ್ ಇನ್ಶೂರೆನ್ಸ್ ಉಪಯೋಗವಾಗದೆ ಹೋಗಬಹುದು ಎಂಬ ಚಿಂತೆಯೇ? ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳು ನಿಮ್ಮ ಅಗತ್ಯಗಳಿಗೆ ತಕ್ಕುದಾದ ಇನ್ಶೂರೆನ್ಸ್ ಅವಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಅನುಕೂಲತೆ ಒದಗಿಸುತ್ತವೆ. ಅದು 1 ವರ್ಷದಿಂದ ಶುರುವಾಗಿ 5 ವರ್ಷದವರೆಗೂ ಲಭ್ಯವಿದೆ.

45% ವರೆಗಿನ ರಿಯಾಯಿತಿ ಆನಂದಿಸಿ
45% ವರೆಗಿನ ರಿಯಾಯಿತಿ ಆನಂದಿಸಿ
ಇದು ಎಲ್ಲದರಲ್ಲೂ ಮೌಲ್ಯವನ್ನು ಹುಡುಕುವವರಿಗಾಗಿ! ಎಚ್‌ಡಿಎಫ್‌ಸಿ ಎರ್ಗೋ ರೆಂಟರ್ಸ್ ಹೋಮ್ ಇನ್ಶೂರೆನ್ಸ್‌ನೊಂದಿಗೆ, ನೀವು ಅನೇಕ ರಿಯಾಯಿತಿಗಳನ್ನು ಪಡೆಯುತ್ತೀರಿ - ಭದ್ರತಾ ರಿಯಾಯಿತಿ, ಸಂಬಳದಾರರ ರಿಯಾಯಿತಿ, ಇಂಟರ್ಕಾಮ್ ರಿಯಾಯಿತಿ, ದೀರ್ಘಾವಧಿಯ ರಿಯಾಯಿತಿ, ಇತ್ಯಾದಿ.
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
ನಿಮ್ಮ ವಸ್ತುಗಳು ಕೇವಲ ಭೌತಿಕ ಸ್ವತ್ತುಗಳಲ್ಲ. ಅವು ನೆನಪುಗಳನ್ನು, ಅಚ್ಚಳಿಯದ ಭಾವನಾತ್ಮಕ ನಂಟನ್ನು ಹೊಂದಿವೆ. ಮನೆ ಸಾಮಾನುಗಳ ಯಾವುದೇ ನಿರ್ದಿಷ್ಟ ಪಟ್ಟಿಯನ್ನು ಹಂಚಿಕೊಳ್ಳದೆ ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಸ್ವತ್ತುಗಳನ್ನು (₹25 ಲಕ್ಷದವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತದೆ.
ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ
ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಲ್ಲದೆ ಜೀವನ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಆ ಪರಿಸ್ಥಿತಿ ಬರುವುದು ನಮಗಂತೂ ಇಷ್ಟವಿಲ್ಲ. ದಶಕಗಳ ನೆನಪು ಮತ್ತು ಬೆಲೆಬಾಳುವ ಮಾಹಿತಿ ಇರುವ ಲ್ಯಾಪ್ಟಾಪ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತು ಆಗಿರಬಹುದು, ಇನ್ನಷ್ಟು ಓದಿ...

ಏನನ್ನು ಒಳಗೊಂಡಿದೆ?

ಬೆಂಕಿ
ಬೆಂಕಿ

ಮನೆ ಎನ್ನುವುದು ಅಕ್ಷರಶಃ ಇಟ್ಟಿಗೆ-ಗಾರೆ ರೂಪದಲ್ಲಿ ಬದಲಾದ ನಿಮ್ಮ ಕನಸೇ ಆಗಿರುತ್ತದೆ. ಈ ನಿಮ್ಮ ಕನಸನ್ನು ಬೆಂಕಿ ಅನಾಹುತದಿಂದ ಆಗುವ ಯಾವುದೇ ಹಾನಿಯಿಂದ ರಕ್ಷಿಸಿಕೊಳ್ಳಿ.

ದರೋಡೆ ಮತ್ತು ಕಳ್ಳತನ
ದರೋಡೆ ಮತ್ತು ಕಳ್ಳತನ

ಮನೆ ಒಡೆಯುವ ಬಗ್ಗೆ ಯೋಚಿಸುವುದು ಕೂಡ ಕಷ್ಟ. ಕಳ್ಳತನ/ದರೋಡೆಗಳ ವಿರುದ್ಧ ನಿಮ್ಮ ಸ್ವತ್ತುಗಳನ್ನು ಇನ್ಶೂರ್ ಮಾಡಿಸಿ ನಿಶ್ಚಿಂತೆಯಿಂದ ಇರಿ.

ವಿದ್ಯುತ್ ಅವಘಡ
ವಿದ್ಯುತ್ ಅವಘಡ

ಗೃಹೋಪಯೋಗಿ ಸಾಮಗ್ರಿಗಳು ಕೆಟ್ಟರೆ ದಿನನಿತ್ಯದ ಜೀವನಕ್ಕೆ ಅಡಚಣೆಯಾಗುತ್ತದೆ. ಇಂತಹ ಧಿಡೀರ್ ಖರ್ಚುಗಳನ್ನು ತಪ್ಪಿಸಲು ಅವುಗಳನ್ನು ಇನ್ಶೂರ್ ಮಾಡಿಸಿ.

ನೈಸರ್ಗಿಕ ವಿಕೋಪಗಳು
ನೈಸರ್ಗಿಕ ವಿಕೋಪಗಳು

ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಗೊತ್ತಿರಲಿಕ್ಕಿಲ್ಲ ಇನ್ನಷ್ಟು ಓದಿ...

ಮಾನವನಿರ್ಮಿತ ಅಪಾಯಗಳು
ಮಾನವನಿರ್ಮಿತ ಅಪಾಯಗಳು

ಸಂಕಷ್ಟದ ಸಮಯಗಳು ನಿಮ್ಮ ಮನೆ ಹಾಗೂ ಮನಸ್ಸಿನ ನೆಮ್ಮದಿಗಳೆರಡರ ಮೇಲೆಯೂ ಪ್ರಭಾವ ಬೀರಬಹುದು. ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಕಾರ್ಯಗಳ ವಿರುದ್ಧ ಅದನ್ನು ಸುರಕ್ಷಿತವಾಗಿಸಿ.

ಆಕ್ಸಿಡೆಂಟಲ್ ಹಾನಿ
ಆಕ್ಸಿಡೆಂಟಲ್ ಹಾನಿ

ಫಿಕ್ಸ್ಚರ್‌ಗಳು ಮತ್ತು ಸ್ಯಾನಿಟರಿ ಫಿಟ್ಟಿಂಗ್‌ಗಳಿಗೆ ಖರ್ಚು ಮಾಡಿದಿರಾ? ಆಕಸ್ಮಿಕ ಹಾನಿಯ ವಿರುದ್ಧ ಅವುಗಳನ್ನು ಸುರಕ್ಷಿತವಾಗಿಸಿ ನಿಶ್ಚಿಂತೆಯಿಂದಿರಿ.

ಪರ್ಯಾಯ ವಸತಿ
ಪರ್ಯಾಯ ವಸತಿ

ಈ ಸಂದರ್ಭದಲ್ಲಿ ಮನೆ ಬದಲಾಯಿಸುವ ಖರ್ಚುಗಳು, ಪರ್ಯಾಯ/ಹೋಟೆಲ್ ವಸತಿಗಾಗಿ ಬಾಡಿಗೆ, ತುರ್ತಿನ ಖರೀದಿಗಳು, ಮತ್ತು ಬ್ರೋಕರೇಜ್ಇನ್ನಷ್ಟು ಓದಿ...

ಏನನ್ನು ಒಳಗೊಂಡಿಲ್ಲ?

ಯುದ್ಧ
ಯುದ್ಧ

ಯುದ್ಧ, ಆಕ್ರಮಣ, ಅನ್ಯ ದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆಯಿಂದ ಉಂಟಾಗುವ ನಷ್ಟ ಮತ್ತು/ಅಥವಾ ಹಾನಿಗಳು ಕವರ್ ಆಗುವುದಿಲ್ಲ.

ಅಮೂಲ್ಯ ಸಂಗ್ರಾಹಕಗಳು
ಅಮೂಲ್ಯ ಸಂಗ್ರಾಹಕಗಳು

ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಇತ್ಯಾದಿಗಳನ್ನು ಕವರ್ ಮಾಡಲಾಗುವುದಿಲ್ಲ.

ಹಳೆಯ ವಸ್ತುಗಳು
ಹಳೆಯ ವಸ್ತುಗಳು

ನಿಮ್ಮ ಅಮೂಲ್ಯ ಸ್ವತ್ತುಗಳೊಂದಿಗೆ ನೀವು ಭಾವನಾತ್ಮಕ ಸಂಬಂಧ ಹೊಂದಿರುವುದು ನಮಗೆ ತಿಳಿದಿದೆ. ಆದರೆ 10 ವರ್ಷಕ್ಕೂ ಹಳೆಯ ವಸ್ತುಗಳನ್ನು ಕವರ್ ಮಾಡಲಾಗುವುದಿಲ್ಲ.

ಅಡ್ಡ ಪರಿಣಾಮದಿಂದಾದ ನಷ್ಟ
ಅಡ್ಡ ಪರಿಣಾಮದಿಂದಾದ ನಷ್ಟ

ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ

ಉದ್ದೇಶಪೂರ್ವಕ ದುರ್ನಡತೆ
ಉದ್ದೇಶಪೂರ್ವಕ ದುರ್ನಡತೆ

ನಾವು ಅನಿರೀಕ್ಷಿತವಾಗಿ ಆಗುವ ನಷ್ಟಗಳನ್ನು ಕವರ್ ಮಾಡುವ ಭರವಸೆ ನೀಡುತ್ತೇವೆ, ಆದರೆ ನಿಮ್ಮ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಪಾಲಿಸಿಯ ಕವರೇಜ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ.

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ
ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

 ಶಿಥಿಲಗೊಳ್ಳುವಿಕೆ
ಶಿಥಿಲಗೊಳ್ಳುವಿಕೆ

ಸಾಮಾನ್ಯ ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.

ಭೂಮಿಯ ವೆಚ್ಚ
ಭೂಮಿಯ ವೆಚ್ಚ

ಈ ಸಂದರ್ಭದಲ್ಲಿ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

ನಿರ್ಮಾಣ ಆಗುತ್ತಿರುವ ಕಟ್ಟಡ
ನಿರ್ಮಾಣ ಆಗುತ್ತಿರುವ ಕಟ್ಟಡ

ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.

ಆ್ಯಡ್ ಆನ್ ಕವರ್‌ಗಳು

ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್
ನೀವು ಎಲ್ಲೇ ಇದ್ದರೂ ಸರಿ, ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ರಕ್ಷಣೆ ಒದಗಿಸಿ.

ಲ್ಯಾಪ್‌ಟಾಪ್, ಕ್ಯಾಮರಾ, ದುರ್ಬೀನುಗಳು, ಸಂಗೀತ ಉಪಕರಣಗಳಂತಹ ಎಲ್ಲಾ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳಿಗೆ ಈ ಕವರ್ ಕವರೇಜ್ ನೀಡುತ್ತದೆ; ಸ್ಪೋರ್ಟ್ಸ್ ಗೇರ್ ಪೋರ್ಟೆಬಲ್ ಆಗಿರುವ ಯಾವುದೇ ನಿರ್ದಿಷ್ಟ ವಸ್ತು. ಈ ಪಾಲಿಸಿಯು 10 ವರ್ಷಕ್ಕಿಂತ ಹಳೆಯದಾದ ಉಪಕರಣಗಳನ್ನು ಕವರ್ ಮಾಡುವುದಿಲ್ಲ.


ನೀವು ಪ್ರವಾಸಕ್ಕೆ ಹೋದಾಗ ನಿಮ್ಮ ಕ್ಯಾಮರಾ ಅಕಸ್ಮಾತಾಗಿ ಹಾನಿಗೊಳಗಾದರೆ, ಕ್ಯಾಮರಾಗೆ ಆದ ಈ ನಷ್ಟವನ್ನು ನಾವು ಕವರ್ ಮಾಡುತ್ತೇವೆ, ಆದರೆ ಇದು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಯಾಗಿರಬಾರದು. ಪಾಲಿಸಿ ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ ಆದರೆ ಅದು ತೀರಾ ಕಡಿಮೆಯಾಗಿರುತ್ತದೆ.
ಒಡವೆ ಮತ್ತು ಬೆಲೆಬಾಳುವ ವಸ್ತುಗಳು
ಈಗ, ನಿಮ್ಮ ಅಮೂಲ್ಯ ಒಡವೆಗಳು ಕಳ್ಳತನದ ಯಾವುದೇ ಅಪಾಯದಿಂದ ರಕ್ಷಿಸಲ್ಪಡುತ್ತವೆ

ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳೆಂದರೆ ಚಿನ್ನ, ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ಲೋಹದಿಂದ ಮಾಡಿದ ಆಭರಣಗಳು, ವಜ್ರದ ಆಭರಣಗಳು, ಕಲಾಕೃತಿಗಳು ಮತ್ತು ವಾಚ್‌ಗಳು. ಈ ಆ್ಯಡ್ ಆನ್ ಕವರ್ ಅನ್ನು ನಿಮ್ಮ ಹೋಮ್ ಕಂಟೆಂಟ್ (ಮನೆ ವಸ್ತುಗಳು) ವಿಮಾ ಮೊತ್ತದ ಗರಿಷ್ಠ 20% ವರೆಗೆ ಆಯ್ಕೆ ಮಾಡಬಹುದು. ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಆದ ನಷ್ಟವನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಕವರ್ ಮಾಡಲಾಗುತ್ತದೆ


ಒಂದು ವೇಳೆ ನಿಮ್ಮ ವಿಮಾ ಮೊತ್ತವು ₹5 ಲಕ್ಷವಾಗಿದ್ದರೆ, ನಿಮ್ಮ ಒಡವೆಗಳು ಹಾಗೂ ಬೆಲೆಬಾಳುವ ವಸ್ತುಗಳನ್ನು 1 ಲಕ್ಷದವರೆಗೆ ಸುರಕ್ಷಿತವಾಗಿಸಬಹುದು. ನೀವು ಮನೆಯಲ್ಲಿ ಇಲ್ಲದಿರುವ ಹೊತ್ತಿನಲ್ಲಿ ನಿಮ್ಮ ಇನ್ಶೂರ್ಡ್ ಒಡವೆಗಳು ಹಾಗೂ ಬೆಲೆಬಾಳುವ ವಸ್ತುಗಳ ಕಳ್ಳತನವಾಗಿದೆ ಎಂದುಕೊಳ್ಳಿ, ಅಂತಹ ಸಮಯದಲ್ಲಿ ಕ್ಲೇಮ್‌ಗಳನ್ನು ಪ್ರಕ್ರಿಯೆಗೊಳಿಸಲು ಒಡವೆಗಳ ರಶೀದಿಯ ಮೂಲ ಪ್ರತಿಯನ್ನು ಸಲ್ಲಿಸಬೇಕು. ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ.
ಪೆಡಲ್ ಸೈಕಲ್
₹5 ಲಕ್ಷದವರೆಗೆ ನಿಮ್ಮ ಪೆಡಲ್ ಸೈಕಲ್ ಕವರ್ ಮಾಡಿ

ಈ ಕವರ್ ಅಡಿಯಲ್ಲಿ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್ ಮತ್ತು ಗೇರ್ ಇರುವ ಅಥವಾ ಇಲ್ಲದ ಪೆಡಲ್ ಸೈಕಲ್‌ಗೆ ಆಗುವ ನಷ್ಟವನ್ನು ನಾವು ಇನ್ಶೂರ್ ಮಾಡುತ್ತೇವೆ. ಇದು ಬೆಂಕಿ, ವಿಕೋಪಗಳು, ಕಳ್ಳತನ ಮತ್ತು ಅಪಘಾತಗಳಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ. ನಿಮ್ಮ ಇನ್ಶೂರ್ಡ್ ಸೈಕಲ್‌ನಿಂದ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಆದ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ರಕ್ಷಣೆ ಒದಗಿಸುತ್ತೇವೆ. ಆದರೆ, ಕೇವಲ ನಿಮ್ಮ ಪೆಡಲ್ ಸೈಕಲ್ ಟೈರ್‌ಗಳು ಮಾತ್ರ ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ಅದು ಕವರ್ ಆಗುವುದಿಲ್ಲ.


ಇದು ಹೇಗೆ ಕೆಲಸ ಮಾಡುತ್ತದೆ?: ನಿಮ್ಮ ಮುಂದಿನ ಸೈಕಲ್ ಪ್ರಯಾಣದಲ್ಲಿ ರಸ್ತೆ ಆಕ್ಸಿಡೆಂಟ್‌ನಿಂದ ನಿಮ್ಮ ಸೈಕಲ್ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾಗಿ ಸಂಪೂರ್ಣ ನಷ್ಟಕ್ಕೆ ಒಳಗಾದರೆ, ಇಂತಹ ಸಂದರ್ಭಗಳಲ್ಲಿ ನಾವು ನಷ್ಟಗಳನ್ನು ಕವರ್ ಮಾಡುತ್ತೇವೆ. ಒಂದು ವೇಳೆ ಇನ್ಶೂರ್ಡ್ ಸೈಕಲ್‌ನಿಂದ ಆದ ಅಪಘಾತದಿಂದ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಯು ಗಾಯಗೊಂಡರೆ ನಾವು ಥರ್ಡ್ ಪಾರ್ಟಿ ಕ್ಲೈಮ್ ಕೂಡ ಕವರ್ ಮಾಡುತ್ತೇವೆ. ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ.
ಸಾರ್ವಜನಿಕ ಹೊಣೆಗಾರಿಕೆ
ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ 50 ಲಕ್ಷದವರೆಗೆ ಕವರ್ ಪಡೆಯಿರಿ

ಈ ಕವರ್ ಸುರಕ್ಷತಾ ಕವಚವಾಗಿ ಕೆಲಸ ಮಾಡುತ್ತದೆ ಮತ್ತು ಇನ್ಶೂರ್ಡ್ ವ್ಯಕ್ತಿಗಳನ್ನು ಥರ್ಡ್ ಪಾರ್ಟಿಯ ಆಕಸ್ಮಿಕ ಸಾವು, ಅಂಗವೈಕಲ್ಯ ಅಥವಾ ದೈಹಿಕ ಗಾಯಗಳಿಗೆ ಸಂಬಂಧಪಟ್ಟ ಕ್ಲೇಮ್‌ಗಳ ವಿರುದ್ಧ ರಕ್ಷಿಸುತ್ತದೆ. ಇದು ಇನ್ಶೂರ್ಡ್ ವ್ಯಕ್ತಿಯ ಮನೆಯ ಉದ್ಯೋಗಿ ಅಥವಾ ಮನೆಕೆಲಸದ ಸಿಬ್ಬಂದಿಯನ್ನು ಒಳಗೊಳ್ಳುವುದಿಲ್ಲ. ಹಾಗೆಯೇ, ಇದು ಥರ್ಡ್ ಪಾರ್ಟಿ ಆಸ್ತಿಗೆ ಆದ ಆಕಸ್ಮಿಕ ಹಾನಿಯನ್ನೂ ಕವರ್ ಮಾಡುತ್ತದೆ.


ಪಕ್ಕದ ಮನೆಯವರು ನಿಮ್ಮ ಮನೆಗೆ ಬಂದಾಗ ಇನ್ಶೂರ್ಡ್ ವ್ಯಕ್ತಿಯ ಸ್ಥಳದಲ್ಲಿ ಆಗುತ್ತಿರುವ ದೊಡ್ಡ ನವೀಕರಣದ ಕಾರಣದಿಂದ ಅವರು ಆಕಸ್ಮಿಕವಾಗಿ ಗಾಯಗೊಳ್ಳುತ್ತಾರೆ. ಥರ್ಡ್ ಪಾರ್ಟಿ ಗಾಯಕ್ಕೆ ಸಂಬಂಧಿಸಿದ ಕ್ಲೇಮ್‌ಗಳನ್ನು ನಾವು ಕವರ್ ಮಾಡುತ್ತೇವೆ. ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ.
ಭಯೋತ್ಪಾದನೆಗೆ ಕವರ್
ಭಯೋತ್ಪಾದನೆಯಿಂದ ನಿಮ್ಮ ಮನೆಗಾದ ಹಾನಿಯನ್ನು ಕವರ್ ಮಾಡುತ್ತದೆ

ಭಯೋತ್ಪಾದಕರ ದಾಳಿಯಿಂದ ನಿಮ್ಮ ಕಟ್ಟಡ/ಮನೆಯ ವಸ್ತುಗಳು ನಷ್ಟವಾದರೆ ನಾವು ಅದನ್ನು ಕವರ್ ಮಾಡುತ್ತೇವೆ


ಇದು ಹೇಗೆ ಕೆಲಸ ಮಾಡುತ್ತದೆ?: ಭಯೋತ್ಪಾದಕ ದಾಳಿಯಿಂದಾಗಿ ನಿಮ್ಮ ಮನೆಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ. ಈ ಹಾನಿಯು ಭಯೋತ್ಪಾದಕರ ದಾಳಿಯಿಂದ ಅಥವಾ ಸರ್ಕಾರದ ರಕ್ಷಣಾತ್ಮಕ ಸೇವೆಗಳ ಚಟುವಟಿಕೆಗಳಿಂದಲೂ ಆಗಿರಬಹುದು.
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Awards

ಸುರಕ್ಷಿತ #1.5+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
Awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ಆಗಾಗ ಕೇಳುವ ಪ್ರಶ್ನೆಗಳು

ಕ್ಲೇಮ್ ನೋಂದಣಿಯಾದ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಿದ ನಂತರ, ಕ್ಲೇಮ್ ವಿವರಗಳನ್ನು ಪರಿಶೀಲಿಸಲು ಎಚ್‌ಡಿಎಫ್‌ಸಿ ಎರ್ಗೋ ಒಬ್ಬ ಸರ್ವೇಯರ್ ಅನ್ನು ನೇಮಿಸುತ್ತದೆ. ಸರ್ವೇ ವರದಿ ಪಡೆದ ನಂತರ, ಕ್ಲೇಮ್ ಮೊತ್ತವನ್ನು ನಿರ್ಧರಿಸಲಾಗುತ್ತದೆ ಮತ್ತು ಇನ್ಶೂರ್ಡ್ ವ್ಯಕ್ತಿಗೆ ಪಾವತಿಸಲಾಗುತ್ತದೆ. ದಯವಿಟ್ಟು ಗಮನಿಸಿ, ಈ ಪಾಲಿಸಿ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಯು ಪ್ರತಿ ಕ್ಲೇಮ್‌ಗೆ ₹ 5000/- ಹೆಚ್ಚುವರಿ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ವಿಮಾ ಮೊತ್ತವನ್ನು ಹೆಚ್ಚಿಸಬಹುದು, ಆದರೆ ಕಡಿಮೆ ಮಾಡಲು ಸಾಧ್ಯವಿಲ್ಲ. ಇನ್ಶೂರ್ಡ್ ವ್ಯಕ್ತಿಯ ಕೋರಿಕೆಯ ಮೇರೆಗೆ ರದ್ದುಗೊಳಿಸುವಿಕೆ ಸಾಧ್ಯ. ಇದು ಅಲ್ಪಾವಧಿಯ ಸ್ಕೇಲ್‌ಗಳ ಪ್ರಕಾರ ಪ್ರೀಮಿಯಂ ಉಳಿಸಿಕೊಳ್ಳುವಿಕೆಗೆ ಒಳಪಟ್ಟಿರುತ್ತದೆ.
ಪೂರ್ವಾನುಮತಿಯಿಲ್ಲದೆ ಈ ಇನ್ಶೂರೆನ್ಸ್‌ನ ಯಾವುದೇ ನಿಯೋಜನೆಗೆ ಕಂಪನಿಯು ಬದ್ಧವಾಗಿರುವುದಿಲ್ಲ.
ಹೋಮ್ ಶೀಲ್ಡ್ ಪಾಲಿಸಿಯನ್ನು 5 ವರ್ಷದವರೆಗಿನ ಅವಧಿಗೆ ನೀಡಬಹುದು. ನಿಜ ಹೇಳುವುದಾದರೆ, ದೀರ್ಘಾವಧಿ ಪಾಲಿಸಿಯು ಆಯ್ಕೆ ಮಾಡಿದ ಕಾಲಾವಧಿಯ ಆಧಾರದ ಮೇಲೆ 3% ರಿಂದ 12% ವರೆಗಿನ ರಿಯಾಯಿತಿಯನ್ನು ಆಕರ್ಷಿಸುತ್ತದೆ.
ಹಳೆಯದಕ್ಕೆ ಹೊಸದರ ಆಧಾರದ ಮೇಲೆ: ವಸ್ತುಗಳನ್ನು ಇನ್ಶೂರ್ ಮಾಡಿಸಲು ಈ ವಿಧಾನವನ್ನು ಆಯ್ಕೆ ಮಾಡಿದ್ದರೆ, ರಿಪೇರಿ ಮಾಡಲಾಗದಷ್ಟು ಹಾನಿಗೆ ಒಳಗಾದ ವಸ್ತುಗಳನ್ನು ಹೊಸ ವಸ್ತುಗಳೊಂದಿಗೆ ಬದಲಾಯಿಸಲಾಗುವುದು ಅಥವಾ ಇನ್ಶೂರರ್ ವಸ್ತುವನ್ನು ಬದಲಾಯಿಸುವ ವೆಚ್ಚವನ್ನು ಪೂರ್ಣವಾಗಿ ಪಾವತಿಸುತ್ತಾರೆ, ಇದು ವಿಮಾ ಮೊತ್ತಕ್ಕೆ ಒಳಪಟ್ಟು ಅದು ಎಷ್ಟು ಹಳೆಯದಾಗಿದೆ ಎಂಬುದನ್ನು ಲೆಕ್ಕಿಸದೆ, ಬದಲಾಯಿಸುವ ವೆಚ್ಚವನ್ನು ಪ್ರತಿನಿಧಿಸುತ್ತದೆ.
ನಷ್ಟ ಪರಿಹಾರ ಆಧಾರ: ವಿಮಾ ಮೊತ್ತವು ಅದೇ ರೀತಿಯ ಮತ್ತು ಅದೇ ಸಾಮರ್ಥ್ಯದ ಹೊಸ ಆಸ್ತಿಯೊಂದಿಗೆ ಇನ್ಶೂರ್ಡ್ ಆಸ್ತಿಯನ್ನು ಬದಲಿಸುವ ವೆಚ್ಚಕ್ಕೆ ಸಮನಾಗಿರುತ್ತದೆ. ಇದರಲ್ಲಿ ಬದಲಾಯಿಸುವ ವಸ್ತುವಿನ ಬೆಲೆಯಿಂದ ಸವಕಳಿಯನ್ನು ಕಳೆಯಲಾಗಿರುತ್ತದೆ.
ನಿಮ್ಮ ಆಸ್ತಿಯು ನೋಂದಾಯಿತ ವಸತಿ ನಿವೇಶನವಾಗಿರಬೇಕು, ಅದರ ನಿರ್ಮಾಣ ಪೂರ್ಣಗೊಂಡಿರಬೇಕು.
ನಿಮ್ಮ ಪಾಲಿಸಿಯ ಕವರ್ ನೀವು ಆನ್ಲೈನ್‌ನಲ್ಲಿ ಅದನ್ನು ಖರೀದಿಸಿದ 1 ದಿನದ ನಂತರದಿಂದ ಆರಂಭವಾಗುತ್ತದೆ.
ನಮ್ಮ ಮನೆ ನಮ್ಮ ಅತ್ಯಂತ ಬೆಲೆಬಾಳುವ ಸ್ವತ್ತುಗಳಲ್ಲಿ ಒಂದಾಗಿದೆ. ಅದಕ್ಕಾಗುವ ಯಾವುದೇ ನಷ್ಟವು ನಮ್ಮನ್ನು ತೀವ್ರ ಹಣಕಾಸು ಸಂಕಷ್ಟಕ್ಕೆ ಈಡು ಮಾಡಬಹುದು. ಹೋಮ್ ಇನ್ಶೂರೆನ್ಸ್ ಪಾಲಿಸಿಯು ವಿಕೋಪಗಳು, ಬೆಂಕಿ ಘಟನೆ ಮತ್ತು ಕಳ್ಳತನದಿಂದಾಗಿ ಉಂಟಾದ ನಷ್ಟಗಳಿಂದ ನಿಮ್ಮನ್ನು ರಕ್ಷಿಸಬಲ್ಲದು.
ಒಂದು ವೇಳೆ ನೀವು ಮನೆ ಬಾಡಿಗೆಗೆ ನೀಡಿದ್ದರೆ, ಮನೆಯ ಕಟ್ಟಡವನ್ನು ಕವರ್ ಮಾಡಬಹುದು. ಅಲ್ಲದೆ, ಮನೆಯಲ್ಲಿ ನಿಮಗೆ ಸೇರುವ ವಸ್ತುಗಳಿದ್ದರೆ, ಕಂಟೆಂಟ್ ಹೋಮ್ ಇನ್ಶೂರೆನ್ಸ್ ಕೂಡ ಆಯ್ಕೆ ಮಾಡಬಹುದು.
ಮನೆ ಮಾಲೀಕರ ಇನ್ಶೂರೆನ್ಸ್ ಒಂದು ರೀತಿಯ ಪ್ರಾಪರ್ಟಿ ಇನ್ಶೂರೆನ್ಸ್ ಆಗಿದ್ದು, ಇದು ವ್ಯಕ್ತಿಯ ಮನೆ ಮತ್ತು ಮನೆಯಲ್ಲಿರುವ ಸ್ವತ್ತುಗಳಿಗೆ ಆಗುವ ನಷ್ಟ ಮತ್ತು ಹಾನಿಗಳನ್ನು ಕವರ್ ಮಾಡುತ್ತದೆ. ಇದು ಮನೆಯಲ್ಲಾಗುವ ಅಥವಾ ಆಸ್ತಿಗಳಿಗೆ ಆಗುವ ಅಪಘಾತಗಳ ವಿರುದ್ಧ ಹೊಣೆಗಾರಿಕೆಯ ಕವರೇಜ್ ಒದಗಿಸುತ್ತದೆ.
ಮಾಲೀಕರು ಮನೆಯಲ್ಲಿ ವಾಸವಾಗಿರುವಾಗ ಹಾಗೂ ಆ ಮನೆಗೆ ಅಥವಾ ಅದರಲ್ಲಿರುವ ಸ್ವತ್ತುಗಳಿಗೆ ನಷ್ಟ ಅಥವಾ ಹಾನಿಗಳಾದರೆ, ಓನರ್ ಆಕ್ಯುಪೈಡ್ ಹೋಮ್ ಇನ್ಶೂರೆನ್ಸ್ ಅನ್ವಯವಾಗುತ್ತದೆ, ನಾನ್ ಓನರ್ ಆಕ್ಯುಪೈಡ್ ಹೋಮ್ ಇನ್ಶೂರೆನ್ಸ್ ಮಾಲೀಕರು ಮನೆಯಲ್ಲಿ ವಾಸವಾಗಿರದ ಸಂದರ್ಭದಲ್ಲಿ ಅನ್ವಯವಾಗುತ್ತದೆ. ಒಬ್ಬ ವ್ಯಕ್ತಿಯು ಹೂಡಿಕೆಯ ಉದ್ದೇಶಗಳಿಗೆ ಅಂದರೆ ಬಾಡಿಗೆ ಆದಾಯ ಗಳಿಸಲು ಖರೀದಿಸುವ ನಾಲ್ಕು ಯುನಿಟ್‌ಗಳವರೆಗಿನ ಆಸ್ತಿಗಳನ್ನು ನಾನ್ ಓನರ್ ಆಕ್ಯುಪೈಡ್ ಆಸ್ತಿಗಳೆಂದು ಪರಿಗಣಿಸಲಾಗುತ್ತದೆ. ಇಲ್ಲಿ ಮನೆಯ ವಸ್ತುಗಳಿಗೆ ಮಾತ್ರ ಕವರೇಜ್ ಸಿಗುತ್ತದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x