ಜ್ಞಾನ ಕೇಂದ್ರ
ಹೋಮ್ / ಹೋಮ್ ಇನ್ಶೂರೆನ್ಸ್ / ಪ್ರಾಪರ್ಟಿ ಇನ್ಶೂರೆನ್ಸ್

ಪ್ರಾಪರ್ಟಿ ಇನ್ಶೂರೆನ್ಸ್

ಪ್ರಾಪರ್ಟಿ ಇನ್ಶೂರೆನ್ಸ್

ಪ್ರಾಪರ್ಟಿ ಇನ್ಶೂರೆನ್ಸ್ ಎಂಬುದು ಆಸ್ತಿ ಮಾಲೀಕರಿಗೆ ಕವರೇಜ್ ಒದಗಿಸುವ ಒಂದು ರೀತಿಯ ಹೋಮ್ ಇನ್ಶೂರೆನ್ಸ್. ನೈಸರ್ಗಿಕ ವಿಕೋಪಗಳು, ಕಳ್ಳತನ, ಬೆಂಕಿ ಇತ್ಯಾದಿಗಳಿಂದ ಆಸ್ತಿ ಮಾಲೀಕರಿಗೆ ಆಗುವ ಹಣಕಾಸು ನಷ್ಟಗಳನ್ನು ತಪ್ಪಿಸಲು ಪ್ರಾಪರ್ಟಿ ಇನ್ಶೂರೆನ್ಸ್ ಸಹಾಯ ಮಾಡುತ್ತದೆ.

ಸ್ವಂತಕ್ಕೊಂದು ಆಸ್ತಿ ಖರೀದಿಸಲು, ಜೀವಮಾನವಿಡೀ ಉಳಿಸಿದ ಹಣವನ್ನು ನೀವು ಹೂಡಿಕೆ ಮಾಡುತ್ತೀರಿ! ಆದರೆ, ಆಸ್ತಿ ಖರೀದಿಸಿದರೆ ಸಾಲದು. ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಆಸ್ತಿಯನ್ನು ಕಾಪಾಡುವುದೂ ಕೂಡಾ ಮುಖ್ಯ. ಹಾಗಾಗಿ, ನಿಮ್ಮ ಆಸ್ತಿಯನ್ನು ಕಾಪಾಡಲು, ನೀವು ಪ್ರಾಪರ್ಟಿ ಇನ್ಶೂರೆನ್ಸ್ ಪಡೆಯಬೇಕು.

ನಿಮ್ಮ ಆಸ್ತಿಗೆ ರಕ್ಷಣೆ ಮತ್ತು ಸುರಕ್ಷತೆಯ ಕವಚ ನೀಡಲು, ಕೈಗೆಟಕುವ ಪ್ರೀಮಿಯಂ ದರಗಳಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಆದ್ದರಿಂದ, ನಿಮ್ಮ ಹಣಕಾಸನ್ನು ಕಾಪಾಡಲು ಮತ್ತು ನೈಸರ್ಗಿಕ ವಿಕೋಪಗಳು, ಕಳ್ಳತನ, ಆಕಸ್ಮಿಕ ಹಾನಿ, ಇತ್ಯಾದಿಗಳಿಂದ ನಿಮ್ಮ ಆಸ್ತಿಗೆ ರಕ್ಷಣೆ ಒದಗಿಸಲು ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸಿ ಮತ್ತು ಅನಿರೀಕ್ಷಿತ ಅನಾಹುತಗಳಿಂದ ನಿಮ್ಮ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಿ.

ಪ್ರಾಪರ್ಟಿ ಇನ್ಶೂರೆನ್ಸ್ ಯಾಕೆ ಬೇಕು?

ಬೆಂಕಿ, ಗಲಭೆ, ನೈಸರ್ಗಿಕ ವಿಕೋಪಗಳು ಮತ್ತಿತರ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಮನೆಯ ವಸ್ತುಗಳು/ಭಾಗಗಳಿಗೆ ಆದ ಹಾನಿಯಿಂದ ಉಂಟಾಗಬಹುದಾದ ಯಾವುದೇ ಹಣಕಾಸು ಹೊರೆಯನ್ನು ತಪ್ಪಿಸಲು, ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸುವುದು ಅಗತ್ಯವಾಗಿದೆ. ಇದಲ್ಲದೆ, ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸಲು ಇನ್ನೂ ಹಲವಾರು ಕಾರಣಗಳಿವೆ. ಅವನ್ನು ಈ ಕೆಳಗೆ ಚರ್ಚಿಸಲಾಗಿದೆ

1. ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಮನೆಯ ವಸ್ತುಗಳು ಮತ್ತು ಭಾಗಗಳು, ಎರಡಕ್ಕೂ ಸಮಗ್ರ ಕವರೇಜ್ ಪಡೆಯಬಹುದು.

2. ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳು ಯಾವುದೇ ಅಪಘಾತದಿಂದ ನಿಮ್ಮ ಅಮೂಲ್ಯ ಆಸ್ತಿಯನ್ನು ಕಾಪಾಡಲು ಸಹಾಯ ಮಾಡುತ್ತವೆ.

3. ನಿಮ್ಮ ಇನ್ಶೂರ್ಡ್ ಆಸ್ತಿಗೆ ಯಾವುದಾದರೂ ಹಾನಿಯಾದಾಗ, ಅದರ ರಿಪೇರಿ ವೆಚ್ಚವನ್ನು ಪ್ರಾಪರ್ಟಿ ಇನ್ಶೂರೆನ್ಸ್ ಕವರ್ ಮಾಡುತ್ತದೆ.

4. ಪ್ರಾಪರ್ಟಿ ಇನ್ಶೂರೆನ್ಸ್ ಖಾಲಿ ಮನೆಗಳಿಗೂ ಕವರೇಜ್ ನೀಡುತ್ತದೆ. ನೀವು ಮನೆಯಿಂದ ದೂರವಿದ್ದರೂ ರಿಪೇರಿ/ಮರುನಿರ್ಮಾಣದ ವೆಚ್ಚವನ್ನು ಕವರ್ ಮಾಡಲಾಗುತ್ತದೆ.

5. ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ಜನರಿಗೆ ಪ್ರಾಪರ್ಟಿ ಇನ್ಶೂರೆನ್ಸ್ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ವಸ್ತುಗಳಿಗೂ ಕವರೇಜ್ ಒದಗಿಸುತ್ತದೆ ಮತ್ತು ಹೀಗೆ ಹಣಕಾಸಿನ ಒತ್ತಡವನ್ನು ತಪ್ಪಿಸುತ್ತದೆ.

6. ಯಾವುದೇ ತೊಂದರೆಯಿಲ್ಲದೆ ಆನ್ಲೈನ್‌ನಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ನಿಮ್ಮ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು ಅಥವಾ ನಿಮ್ಮ ಆಯಾ ಇನ್ಶೂರೆನ್ಸ್ ಪ್ಲಾನ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ಉತ್ತರ ಪಡೆಯಲು ನಮ್ಮ ಗ್ರಾಹಕ ಸಹಾಯ ತಂಡವು 24x7 ಲಭ್ಯವಿದೆ.

ಪ್ರಾಪರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಲೊಕೇಶನ್

ಲೊಕೇಶನ್

ನಿಮ್ಮ ಆಸ್ತಿಯು ಪ್ರವಾಹ ಪೀಡಿತ ಪ್ರದೇಶದಲ್ಲಿ ಅಥವಾ ಆಗಾಗ್ಗೆ ತುಂಬಾ ಭೂಕಂಪವಾಗುವ ಸ್ಥಳದಲ್ಲಿದ್ದರೆ ನಿಮ್ಮ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು.

ನಿಮ್ಮ ಕಟ್ಟಡದ ವಯಸ್ಸು ಮತ್ತು ರಚನೆ

ನಿಮ್ಮ ಕಟ್ಟಡದ ವಯಸ್ಸು ಮತ್ತು ರಚನೆ

ನಿಮ್ಮ ಆಸ್ತಿಯು ಸ್ವಲ್ಪ ಹಳೆಯದಾಗಿದ್ದರೆ ಮತ್ತು ಕಟ್ಟಡದ ಸ್ಥಿತಿಯು ಆಕ್ಷೇಪಾರ್ಹವಾಗಿದ್ದರೆ ನಿಮ್ಮ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು.

ಗೃಹ ಸುರಕ್ಷತೆ

ಗೃಹ ಸುರಕ್ಷತೆ

ನಿಮ್ಮ ಆಸ್ತಿಯು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದು ಕಳ್ಳತನವಾಗುವ ಸಾಧ್ಯತೆ ಕಡಿಮೆ ಇದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಪ್ರೀಮಿಯಂ ಕಡಿಮೆಯಾಗಬಹುದು.

ಅದು ಹೊಂದಿರುವ ವಸ್ತುಗಳ ಮೊತ್ತ

ಅದು ಹೊಂದಿರುವ ವಸ್ತುಗಳ ಮೊತ್ತ

ನಿಮ್ಮ ಆಸ್ತಿಯು ಬೆಲೆಬಾಳುವ ಹಲವು ವಸ್ತುಗಳನ್ನು ಹೊಂದಿದ್ದು, ನೀವು ಅವುಗಳನ್ನು ಇನ್ಶೂರ್ ಮಾಡಿಸುವ ಆಯ್ಕೆ ಮಾಡಿದರೆ ನಿಮ್ಮ ಪ್ರೀಮಿಯಂ ನೀವು ಇನ್ಶೂರ್ ಮಾಡಿಸಲು ಬಯಸುವ ವಸ್ತುಗಳ ಬೆಲೆಯನ್ನು ಅವಲಂಬಿಸುತ್ತದೆ.

ನಿಮ್ಮ ಆಸ್ತಿಯ ವಿಮಾ ಮೊತ್ತ ಅಥವಾ ಒಟ್ಟು ಮೌಲ್ಯ

ನಿಮ್ಮ ಆಸ್ತಿಯ ವಿಮಾ ಮೊತ್ತ ಅಥವಾ ಒಟ್ಟು ಮೌಲ್ಯ

ಪ್ರೀಮಿಯಂ ನಿರ್ಧರಿಸುವ ಸಮಯದಲ್ಲಿ ನಿಮ್ಮ ಆಸ್ತಿಯ ಒಟ್ಟು ಮೌಲ್ಯವು ಪರಿಗಣನೆಗೆ ಬರುತ್ತದೆ. ಒಂದು ವೇಳೆ ನಿಮ್ಮ ಆಸ್ತಿಯ ರಚನಾತ್ಮಕ ಮೌಲ್ಯವು ಹೆಚ್ಚಾಗಿದ್ದರೆ ಪ್ರೀಮಿಯಂ ಹೆಚ್ಚಾಗುತ್ತದೆ, ಕಡಿಮೆ ಇದ್ದರೆ ಕಡಿಮೆಯಾಗುತ್ತದೆ. ಇದನ್ನು ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯವೆಂದು ಕೂಡ ಕರೆಯಬಹುದು. ಏಕೆಂದರೆ ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದ್ದರೆ ವಿಮಾ ಮೊತ್ತವೂ ಹೆಚ್ಚಾಗಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನಿಮ್ಮ ಆಸ್ತಿಯನ್ನು ಕವರ್ ಮಾಡುವ ಕಾರಣಗಳು

ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು

ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು

ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಉಪಯೋಗವಾಗದೆ ಇರಬಹುದು ಎಂದು ಚಿಂತಿಸುತ್ತಿದ್ದೀರಾ? ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ನಿಮ್ಮ ಅಗತ್ಯಕ್ಕೆ ತಕ್ಕ ಅವಧಿಯನ್ನು ಆಯ್ಕೆ ಮಾಡುವ ಅನುಕೂಲತೆಯನ್ನು ಒದಗಿಸುತ್ತದೆ. ಆದರೆ, ಇದು ಕನಿಷ್ಠ ಒಂದು ವರ್ಷವಾಗಿರಲೇಬೇಕು.

45% ವರೆಗೆ ರಿಯಾಯಿತಿ

45% ವರೆಗೆ ರಿಯಾಯಿತಿ

ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ, ಪ್ರೀಮಿಯಂಗಳ ಮೇಲೆ ಆಕರ್ಷಕ ರಿಯಾಯಿತಿಗಳೊಂದಿಗೆ ನಿಮ್ಮ ಮನೆಯನ್ನು ಇನ್ಶೂರ್ಡ್ ಮಾಡಬಹುದು. ಆನ್ಲೈನ್‌ನಲ್ಲಿ ಪಾಲಿಸಿ ಖರೀದಿಸುವ ಸಂಬಳದಾರರು, ದೀರ್ಘಾವಧಿ ಪಾಲಿಸಿ, ಇತ್ಯಾದಿಗಳಿಗೆ ವಿಶೇಷ ರಿಯಾಯಿತಿ ಸಿಗುತ್ತದೆ.

₹25 ಲಕ್ಷದವರೆಗಿನ ವಸ್ತುಗಳಿಗೆ ಕವರೇಜ್

₹25 ಲಕ್ಷದವರೆಗಿನ ವಸ್ತುಗಳಿಗೆ ಕವರೇಜ್

ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್ ಯಾವುದೇ ನಿರ್ದಿಷ್ಟ ಮನೆಯ ವಸ್ತುಗಳ ಪಟ್ಟಿಯನ್ನು ಹಂಚಿಕೊಳ್ಳದೆ, ನಿಮ್ಮ ಸ್ವಾಧೀನದಲ್ಲಿರುವ ಎಲ್ಲಾ ವಸ್ತುಗಳನ್ನೂ (₹25 ಲಕ್ಷಗಳವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತದೆ.

ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ

ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ

ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ ಲ್ಯಾಪ್‌ಟಾಪ್‌, ಸೆಲ್ ಫೋನ್‌ ಮತ್ತು ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇನ್ಶೂರ್ ಮಾಡಿಸಿ ಮತ್ತು ಈ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಉಂಟಾದ ಹಾನಿಯಿಂದಾಗಿ ಬರುವ ಹಣಕಾಸು ನಷ್ಟಗಳನ್ನು ತಪ್ಪಿಸಿ.

ಎಚ್‌ಡಿಎಫ್‌ಸಿ ಎರ್ಗೋ‌ದಿಂದ ಅತ್ಯುತ್ತಮ ಹೋಮ್ ಇನ್ಶೂರೆನ್ಸ್
ಭಾರತವು ಹಠಾತ್ ಪ್ರವಾಹ ಮತ್ತು ಭೂಕುಸಿತಗಳ ರೂಪದಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುತ್ತಿದೆ.. ನೈಸರ್ಗಿಕ ವಿಪತ್ತುಗಳ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳಿ, ನಿಮ್ಮ ಆಸ್ತಿಯನ್ನು ಕಾಪಾಡಿಕೊಳ್ಳಿ.

ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಒದಗಿಸುವ ಕವರೇಜ್ ಬಗ್ಗೆ

ಬೆಂಕಿ

ಬೆಂಕಿ

ನಿಮ್ಮ ಕನಸಿನ ಆಸ್ತಿ ಬೆಂಕಿಗೆ ಸಿಕ್ಕಿ ಬೂದಿಯಾಗಬಹುದು. ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್, ಬೆಂಕಿ ಅನಾಹುತಗಳ ವಿರುದ್ಧ ಕವರೇಜ್ ಒದಗಿಸಿ, ನಿಮ್ಮ ಮನೆಯನ್ನು ಮರುನಿರ್ಮಿಸಲು ನೆರವಾಗುತ್ತದೆ.

ಕಳ್ಳತನ ಮತ್ತು ದರೋಡೆಗಳು

ದರೋಡೆ ಮತ್ತು ಕಳ್ಳತನ

ನಿಮ್ಮ ಬೆಲೆಬಾಳುವ ಒಡವೆ ಅಥವಾ ಇತರ ಅಮೂಲ್ಯ ವಸ್ತುಗಳು ಕಳ್ಳಕಾಕರ ಪಾಲಾಗಬಹುದು. ಅವುಗಳಿಗೆ ರಕ್ಷಣೆ ಒದಗಿಸಿ ನೀವು ನೆಮ್ಮದಿಯಿಂದ ಇರಬಹುದು.

ವಿದ್ಯುತ್ ಅವಘಡ

ವಿದ್ಯುತ್ ಅವಘಡ

ಉಪಕರಣಗಳಿಲ್ಲದೆ ನಮ್ಮ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ! ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಸಂದರ್ಭದಲ್ಲಿ ಕವರೇಜ್ ಪಡೆಯಲು ಅವುಗಳನ್ನು ಇನ್ಶೂರ್ ಮಾಡಿ.

ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಕೋಪಗಳು ಮತ್ತು ಮಾನವನಿರ್ಮಿತ ಅಪಾಯಗಳು

ನಿಮ್ಮ ಆಸ್ತಿಯು ಸೈಕ್ಲೋನ್, ಭೂಕಂಪ, ಪ್ರವಾಹ ಇತ್ಯಾದಿಗಳಿಂದ ಹಾನಿಗೊಳಗಾದರೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ! ಜೊತೆಗೆ, ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಹಾನಿಯ ವಿರುದ್ಧ ನಿಮ್ಮ ಮನೆಗೆ ರಕ್ಷಣೆ ಒದಗಿಸುತ್ತೇವೆ.

Alternative-Accommodation

ಪರ್ಯಾಯ ವಸತಿ

ಇನ್ಶೂರೆಬಲ್ ಅಪಾಯದಿಂದ ಇನ್ಶೂರ್ಡ್ ಆಸ್ತಿಗೆ ಹಾನಿಯಾಗಿದ್ದು, ಆ ಆಸ್ತಿಯು ವಾಸಯೋಗ್ಯವಲ್ಲ ಎಂದು ಪರಿಗಣಿಸಲ್ಪಟ್ಟರೆ, ಆಸ್ತಿ ಮಾಲೀಕರಿಗೆ ವಿಮಾದಾತರು ತಾತ್ಕಾಲಿಕ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುತ್ತಾರೆ.

ಆಕ್ಸಿಡೆಂಟಲ್ ಹಾನಿ

ಆಕ್ಸಿಡೆಂಟಲ್ ಹಾನಿ

ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ, ದುಬಾರಿ ಫಿಟ್ಟಿಂಗ್‌ಗಳು ಮತ್ತು ಫಿಕ್ಸ್‌ಚರ್‌ನಂತಹ ಅಮೂಲ್ಯ ವಸ್ತುಗಳಿಗೆ ಆಕಸ್ಮಿಕ ಹಾನಿಯಾದ ಸಂದರ್ಭದಲ್ಲಿ ಕವರೇಜ್ ನೀಡಲಾಗುತ್ತದೆ.

ಯುದ್ಧ

ಯುದ್ಧ

ಯುದ್ಧ, ಆಕ್ರಮಣ, ವಿದೇಶಿ ಆಕ್ರಮಣ, ಇತ್ಯಾದಿಗಳಿಂದ ಉಂಟಾಗುವ ನಷ್ಟ/ಹಾನಿಗಳನ್ನು ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಕವರ್ ಮಾಡಲಾಗುವುದಿಲ್ಲ.

ಅಮೂಲ್ಯ ಸಂಗ್ರಾಹಕಗಳು

ಅಮೂಲ್ಯ ಸಂಗ್ರಾಹಕಗಳು

ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.

ಹಳೆಯ ವಸ್ತುಗಳು

ಹಳೆಯ ವಸ್ತುಗಳು

ನಿಮ್ಮ ಎಲ್ಲಾ ಅಮೂಲ್ಯ ವಸ್ತುಗಳ ಜೊತೆ ನಿಮಗೆ ಭಾವನಾತ್ಮಕ ನಂಟಿದೆ ಎಂದು ನಮಗೆ ಗೊತ್ತು. ಆದರೆ 10 ವರ್ಷಕ್ಕಿಂತ ಹಳೆಯ ವಸ್ತುಗಳನ್ನು ಈ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡುವುದಿಲ್ಲ.

ಅಡ್ಡ ಪರಿಣಾಮದಿಂದಾದ ನಷ್ಟ

ಅಡ್ಡ ಪರಿಣಾಮದಿಂದಾದ ನಷ್ಟ

ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ.

ಉದ್ದೇಶಪೂರ್ವಕ ದುರ್ನಡತೆ

ಉದ್ದೇಶಪೂರ್ವಕ ದುರ್ನಡತೆ

ಅನಿರೀಕ್ಷಿತ ನಷ್ಟಗಳನ್ನು ನಾವು ಖಂಡಿತ ಕವರ್ ಮಾಡುತ್ತೇವೆ. ಆದರೆ ಉದ್ದೇಶಪೂರ್ವಕ ಹಾನಿಗೆ ಯಾವುದೇ ಕವರೇಜ್ ನೀಡಲಾಗುವುದಿಲ್ಲ.

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

ಶಿಥಿಲಗೊಳ್ಳುವಿಕೆ

ಶಿಥಿಲಗೊಳ್ಳುವಿಕೆ

ಸ್ವಾಭಾವಿಕ ಸವೆತ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.

ಭೂಮಿಯ ವೆಚ್ಚ

ಭೂಮಿಯ ವೆಚ್ಚ

ಈ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

ನಿರ್ಮಾಣ ಹಂತದ ಕಟ್ಟಡ

ನಿರ್ಮಾಣ ಹಂತದ ಕಟ್ಟಡ

ಈ ಪ್ರಾಪರ್ಟಿ ಇನ್ಶೂರೆನ್ಸ್ ಕವರ್ ನೀವು ವಾಸಿಸುವ ಸ್ವಂತ ಮನೆಗೆ ಮಾತ್ರ. ನಿರ್ಮಾಣ ಹಂತದಲ್ಲಿರುವ ಸ್ವತ್ತನ್ನು ಇದು ಕವರ್ ಮಾಡುವುದಿಲ್ಲ.

ಪ್ರಾಪರ್ಟಿ ಕವರೇಜ್ ಗಾಗಿ ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಐಚ್ಛಿಕ ಕವರ್

  • ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಗಳ ಕವರ್

    ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್

  • ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್‌ನಿಂದ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳ ಕವರ್

    ಒಡವೆ ಮತ್ತು ಬೆಲೆಬಾಳುವ ವಸ್ತುಗಳು

  • ಪೆಡಲ್ ಸೈಕಲ್

    ಪೆಡಲ್ ಸೈಕಲ್

  • ಭಯೋತ್ಪಾದನೆಗೆ ಕವರ್

    ಭಯೋತ್ಪಾದನೆಗೆ ಕವರ್

ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್
ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್

ನೀವು ಎಲ್ಲೇ ಇದ್ದರೂ ಸರಿ, ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ರಕ್ಷಣೆ ಒದಗಿಸಿ.

ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ, ಲ್ಯಾಪ್‌ಟಾಪ್, ಕ್ಯಾಮರಾ, ಮ್ಯೂಸಿಕಲ್ ಸಲಕರಣೆಗಳು ಮುಂತಾದ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳಿಗೆ ಆ್ಯಡ್-ಆನ್ ಕವರೇಜ್ ಪಡೆಯಿರಿ. ಆದಾಗ್ಯೂ, 10 ವರ್ಷಕ್ಕಿಂತ ಹಳೆಯ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಯಾವುದೇ ಕವರೇಜ್ ಪ್ರಯೋಜನ ದೊರೆಯುವುದಿಲ್ಲ.

ನೀವು ರಜೆಯ ಮಜಾ ನೋಡಲು ಹೋಗಿದ್ದಾಗ ನಿಮ್ಮ ಕ್ಯಾಮರಾ ಇದ್ದಕ್ಕಿದ್ದಂತೆ ಕೆಟ್ಟುಹೋಯಿತು ಎಂದುಕೊಳ್ಳಿ. ಅದರ ರಿಪೇರಿ ಖರ್ಚನ್ನು ನಾವು ಕವರ್ ಮಾಡುತ್ತೇವೆ. ಆದರೆ ಅದು ಉದ್ದೇಶಪೂರ್ವಕ ಹಾನಿ ಆಗಿರಬಾರದು.

4 ಸುಲಭ ಹಂತಗಳಲ್ಲಿ ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಪ್ರೀಮಿಯಂ ತಿಳಿಯಿರಿ

ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಎಂದಿಗೂ ಇಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಬೇಕಾಗುವುದು ಕೇವಲ 4 ತ್ವರಿತ ಹಂತಗಳು.

ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಬಗ್ಗೆ ತಿಳಿಯಿರಿ
ಹಂತ 1 : ನೀವು ಯಾವುದನ್ನು ಕವರ್ ಮಾಡುತ್ತಿದ್ದೀರಿ?

ಹಂತ 1

ನೀವು ಯಾರನ್ನು ಇನ್ಶೂರ್‌ ಮಾಡಲು ಬಯಸುತ್ತೀರಿ ಎಂಬುದನ್ನು ತಿಳಿಸಿ
ಯಾರು ಬಯಸುತ್ತಾರೆಂದು ನೋಡೋಣ

phone-frame
ಹಂತ 2: ಆಸ್ತಿ ವಿವರಗಳನ್ನು ನಮೂದಿಸಿ

ಹಂತ 2

ಆಸ್ತಿ ವಿವರಗಳನ್ನು ಭರ್ತಿ ಮಾಡಿ

phone-frame
ಹಂತ 3: ಅವಧಿಯನ್ನು ಆಯ್ಕೆಮಾಡಿ

ಹಂತ 3

ವಿಮಾ ಮೊತ್ತವನ್ನು ಆರಿಸಿ

phone-frame
ಹಂತ 4: ಹೋಮ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆಮಾಡಿ

ಹಂತ 4

ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ

ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿ ಗೆ ಕ್ಲೈಮ್ ಮಾಡುವುದು ಹೇಗೆ

ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಕ್ಲೇಮ್ ಮಾಡಿ

ಕ್ಲೈಮ್ ನೋಂದಣಿ ಅಥವಾ ಮಾಹಿತಿಗಾಗಿ, ನೀವು ಸಹಾಯವಾಣಿ ನಂಬರ್ 022 - 6234 6234 ಗೆ ಕರೆ ಮಾಡಬಹುದು ಅಥವಾ ನಮ್ಮ ಗ್ರಾಹಕ ಸೇವಾ ಡೆಸ್ಕ್‌ಗೆ care@hdfcergo.com ನಲ್ಲಿ ಇಮೇಲ್ ಮಾಡಬಹುದು. ಕ್ಲೈಮ್ ನೋಂದಣಿಯ ನಂತರ, ನಮ್ಮ ತಂಡವು ಪ್ರತಿಯೊಂದು ಹಂತದಲ್ಲೂ ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಯಾವುದೇ ತೊಂದರೆಯಿಲ್ಲದೆ ನಿಮ್ಮ ಕ್ಲೈಮ್‌ಗಳನ್ನು ಇತ್ಯರ್ಥಗೊಳಿಸಲು ಸಹಾಯ ಮಾಡುತ್ತದೆ. ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು ಈ ಕೆಳಗಿನ ನಿರ್ದಿಷ್ಟ ಡಾಕ್ಯುಮೆಂಟ್‌ಗಳ ಅಗತ್ಯವಿದೆ:

- ಪಾಲಿಸಿ /ಅಂಡರ್‌ರೈಟಿಂಗ್ ಡಾಕ್ಯುಮೆಂಟ್‌ಗಳು
- ಛಾಯಾಚಿತ್ರಗಳು
- ಕ್ಲೈಮ್ ಫಾರ್ಮ್
- ಲಾಗ್ ಬುಕ್ / ಆಸ್ತಿ ನೋಂದಣಿ / ಕ್ಯಾಪಿಟಲೈಸ್ ಮಾಡಿಕೊಂಡ ವಸ್ತುಗಳ ಪಟ್ಟಿ (ಅನ್ವಯವಾಗುವಲ್ಲಿ)
- ರಸೀತಿಯೊಂದಿಗೆ ರಿಪೇರಿ / ರಿಪ್ಲೇಸ್‌‌ಮೆಂಟ್ ಇನ್ವಾಯ್ಸ್‌ಗಳು
- ಕ್ಲೈಮ್ ಫಾರ್ಮ್
- ಎಲ್ಲಾ ಅನ್ವಯವಾಗುವ ಮಾನ್ಯ ಪ್ರಮಾಣಪತ್ರಗಳು
- FIR ಕಾಪಿ (ಅನ್ವಯವಾದರೆ)

ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?

ಪೂರ್ತಿಯಾಗಿ ಓದಿದಿರಾ? ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಿದ್ಧರಾಗಿದ್ದೀರಾ?
ಈಗಲೇ ಖರೀದಿಸಿ!

ಇತ್ತೀಚಿನ ಪ್ರಾಪರ್ಟಿ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

'ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಅತ್ಯುತ್ತಮ ಮಾರ್ಗದರ್ಶಿ'

'ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಅತ್ಯುತ್ತಮ ಮಾರ್ಗದರ್ಶಿ'

ಇನ್ನಷ್ಟು ಓದಿ
20 ಸೆಪ್ಟೆಂಬರ್ 2021 ರಂದು ಪ್ರಕಟಿಸಲಾಗಿದೆ
ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಜೊತೆ ಆಯ್ಕೆ ಮಾಡಬೇಕಾದ 5 ಆ್ಯಡ್-ಆನ್‌ಗಳು

ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಜೊತೆ ಆಯ್ಕೆ ಮಾಡಬೇಕಾದ 5 ಆ್ಯಡ್-ಆನ್‌ಗಳು

ಇನ್ನಷ್ಟು ಓದಿ
13 ಸೆಪ್ಟೆಂಬರ್ 2021 ರಂದು ಪ್ರಕಟಿಸಲಾಗಿದೆ
ಪ್ರಾಪರ್ಟಿ ಇನ್ಶೂರೆನ್ಸ್: ಇನ್ಶೂರ್ಡ್ ಆಗಿರಿ, ತಿಳುವಳಿಕೆ ಪಡೆಯಿರಿ

ಪ್ರಾಪರ್ಟಿ ಇನ್ಶೂರೆನ್ಸ್: ಇನ್ಶೂರ್ಡ್ ಆಗಿರಿ, ತಿಳುವಳಿಕೆ ಪಡೆಯಿರಿ

ಇನ್ನಷ್ಟು ಓದಿ
8 ಸೆಪ್ಟೆಂಬರ್ 2021 ರಂದು ಪ್ರಕಟಿಸಲಾಗಿದೆ
ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಲು ಸರಳ ಮತ್ತು ಸ್ಮಾರ್ಟ್ ಮಾರ್ಗಗಳು

ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಲು ಸರಳ ಮತ್ತು ಸ್ಮಾರ್ಟ್ ಮಾರ್ಗಗಳು

ಇನ್ನಷ್ಟು ಓದಿ
ಪ್ರಕಟಣೆ: 19 ಆಗಸ್ಟ್ 2021

ಪ್ರಾಪರ್ಟಿ ಇನ್ಶೂರೆನ್ಸ್ ಕುರಿತು ಆಗಾಗ್ಗೆ ಕೇಳುವ ಪ್ರಶ್ನೆಗಳು

ನಿಮ್ಮ ಮನೆಯ ವಸ್ತುಗಳನ್ನು ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಈ ವಸ್ತುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ –

● ಫರ್ನಿಚರ್ ಮತ್ತು ಫಿಕ್ಸ್ಚರ್‌ಗಳು

● ಟೆಲಿವಿಷನ್ ಸೆಟ್‌ಗಳು

● ಹೋಮ್ ಅಪ್ಲಾಯನ್ಸ್‌ಗಳು

● ಕಿಚನ್ ಅಪ್ಲಾಯನ್ಸ್‌ಗಳು

● ನೀರಿನ ಸಂಗ್ರಹಣಾ ಸಲಕರಣೆ

● ಇತರ ಹೌಸ್‌ಹೋಲ್ಡ್ ಐಟಂಗಳು

ಇದಲ್ಲದೆ, ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಜ್ಯುವೆಲರಿ, ಪೀಸ್ ಆಫ್ ಆರ್ಟ್, ಕ್ಯೂರಿಯೋ, ಸಿಲ್ವರ್‌ವೇರ್, ಪೇಂಟಿಂಗ್‌ಗಳು, ಕಾರ್ಪೆಟ್‌ಗಳು, ಪ್ರಾಚೀನ ವಸ್ತುಗಳು ಮುಂತಾದ ನಿಮ್ಮ ಮೌಲ್ಯಯುತ ವಸ್ತುಗಳನ್ನು ಇನ್ಶೂರ್ ಮಾಡಬಹುದು.

ಇಲ್ಲ, ನಿಗದಿತ ಬ್ಯಾಂಕಿನಿಂದ ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸುವುದು ಕಡ್ಡಾಯವಲ್ಲ. ಸಾಮಾನ್ಯವಾಗಿ, ಹೋಮ್ ಲೋನ್‌ಗಳಿಗೆ ಅನುಮತಿ ನೀಡುವ ಬ್ಯಾಂಕ್‌ಗಳು ಹೋಮ್ ಲೋನ್‌ನೊಂದಿಗೆ ಜೋಡಿಸಲಾದ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಫರ್ ಮಾಡಬಹುದು. ಆದಾಗ್ಯೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ ಮತ್ತು ನಿಮ್ಮ ಅಗತ್ಯಕ್ಕೆ ಸೂಕ್ತವಾದ ಪ್ಲಾನನ್ನು ಆಯ್ಕೆಮಾಡಿ.

ಹೋಲಿಕೆ ಮಾಡಲು ನೀವು ಕವರೇಜ್ ಪ್ರಯೋಜನಗಳು, ವಿಮಾ ಮೊತ್ತ ಮತ್ತು ವಿಧಿಸಲಾದ ಪ್ರೀಮಿಯಂಗಳನ್ನು ನೋಡಬೇಕಾಗುತ್ತದೆ. ಅತ್ಯಂತ ಸಮಗ್ರ ಕವರ್ ವ್ಯಾಪ್ತಿಯನ್ನು ಒದಗಿಸುವ ಯೋಜನೆಯನ್ನು ಆಯ್ಕೆಮಾಡಿ, ಇದರಿಂದಾಗಿ ಅತ್ಯಂತ ಸಾಧ್ಯವಾದ ಹಾನಿಗಳನ್ನು ಇನ್ಶೂರ್ಡ್ ಮಾಡಲಾಗುತ್ತದೆ. ಇದಲ್ಲದೆ, ಪ್ರೀಮಿಯಂ ಸ್ಪರ್ಧಾತ್ಮಕವಾಗಿರಬೇಕು, ಇದರಿಂದಾಗಿ ನೀವು ಉತ್ತಮ ಡೀಲ್ ಪಡೆಯುತ್ತೀರಿ.

ಹೌದು, ನೀವು ಒಂದು ಕಟ್ಟಡದಲ್ಲಿ ವಾಸಿಸುತ್ತಿದ್ದರೆ ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನಿಮ್ಮ ಮನೆಯನ್ನು ರಕ್ಷಿಸಬಹುದು. ಪ್ರೀಮಿಯಂ ದರಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

ಖಂಡಿತ ಇಲ್ಲ, ಆದರೆ ನೈಸರ್ಗಿಕ ವಿಕೋಪಗಳು, ಬೆಂಕಿ ಅವಘಡ ಅಥವಾ ಕಳ್ಳತನದ ಸಂದರ್ಭದಲ್ಲಿ ನಿಮ್ಮ ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ಹೋಮ್ ಇನ್ಶೂರೆನ್ಸ್ ಪ್ಲಾನ್‌ ಖರೀದಿಸುವುದು ಒಳ್ಳೆಯದು.

ಹೌದು. ಫರ್ನಿಚರ್, ಬೆಲೆಬಾಳುವ ವಸ್ತುಗಳು ಮತ್ತು ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್ ಮುಂತಾದ ನಿಮ್ಮ ಮನೆಯ ವಸ್ತುಗಳನ್ನು ನಾವು ಸುರಕ್ಷಿತವಾಗಿರಿಸುತ್ತೇವೆ.

ನಿಮ್ಮ ಮನೆಗೆ ರಚನಾತ್ಮಕ ಹಾನಿಯಾದ ಸಂದರ್ಭದಲ್ಲಿ ಪರ್ಯಾಯ ವಸತಿಗಾಗಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. ಆದ್ದರಿಂದ ಪರ್ಯಾಯ ವಾಸದ ಸ್ಥಳಕ್ಕೆ ಹೋಗುವುದು, ಪ್ಯಾಕಿಂಗ್, ಬಾಡಿಗೆ ಮತ್ತು ಬ್ರೋಕರೇಜ್‌ಗಾಗಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.

ಮನೆಯ ನಿಜವಾದ ಮಾಲೀಕರ ಹೆಸರಿನಲ್ಲಿ ಆಸ್ತಿಯನ್ನು ಇನ್ಶೂರ್ ಮಾಡಿಸಬಹುದು. ಅಲ್ಲದೆ, ಮಾಲೀಕರು ಮತ್ತು ನಿಮ್ಮ ಹೆಸರಿನಲ್ಲಿ ಜಂಟಿಯಾಗಿ ಇನ್ಶೂರ್ ಮಾಡಿಸಬಹುದು.

ವೈಯಕ್ತಿಕ ವಸತಿ ನಿವೇಶನಗಳನ್ನು ಇನ್ಶೂರ್ ಮಾಡಿಸಬಹುದು. ಬಾಡಿಗೆದಾರರಾಗಿ ನಿಮ್ಮ ಮನೆಯ ವಸ್ತುಗಳನ್ನು ಕವರ್ ಮಾಡಬಹುದು.

ನಿರ್ಮಾಣಗೊಳ್ಳುತ್ತಿರುವ ಆಸ್ತಿಯನ್ನು ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ಹಾಗೆಯೇ, ಕಚ್ಚಾ ನಿರ್ಮಾಣವನ್ನೂ ಕವರ್ ಮಾಡಲಾಗುವುದಿಲ್ಲ.

ಡೆಬ್ರಿಸ್ ತೆಗೆದುಹಾಕಲು ವಿಮಾ ಮೊತ್ತದ 1% ವರೆಗೆ ಕ್ಲೈಮ್ ಮಾಡಬಹುದು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಪ್ರಶಸ್ತಿಗಳು 2014-15

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

iAAA ರೇಟಿಂಗ್

ISO ಪ್ರಮಾಣೀಕರಣ

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

slider-right
ಸ್ಲೈಡರ್-ಎಡ
ಎಲ್ಲಾ ಪ್ರಶಸ್ತಿಗಳನ್ನು ನೋಡಿ
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?

ಪೂರ್ತಿಯಾಗಿ ಓದಿದಿರಾ? ಹೋಮ್ ಪ್ಲಾನ್ ಖರೀದಿಸಲು ಬಯಸುವಿರಾ?