Standalone Two Wheeler Insurance with HDFC ERGO
Standalone Two Wheeler Insurance with HDFC ERGO
Premium starts at just ₹538*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
2000+ cashless Garagesˇ

2000+

ನಗದುರಹಿತ ಗ್ಯಾರೇಜುಗಳುˇ
Emergency Roadside Assistance°°

ತುರ್ತು ರಸ್ತೆಬದಿ

ಸಹಾಯ°°
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಸ್ಟ್ಯಾಂಡ್ ಅಲೋನ್ ಸ್ವಂತ ಹಾನಿ ಕವರ್ ಟೂ ವೀಲರ್

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್

Standalone own damage two-wheeler insurance
ಬೈಕ್ ಇನ್ಶೂರೆನ್ಸ್ ಪಾಲಿಸಿಯು ವಾಹನದ ಹಾನಿಯಿಂದಾಗಿ ಉಂಟಾದ ನಷ್ಟಗಳಿಂದ ನಿಮ್ಮ ವೆಚ್ಚಗಳನ್ನು ನೋಡಿಕೊಳ್ಳುತ್ತದೆ. ಆದಾಗ್ಯೂ, ನಿರ್ದಿಷ್ಟ ಹಾನಿಗೆ ನೀವು ಕವರೇಜ್ ಪಡೆಯುತ್ತೀರೋ ಅಥವಾ ಇಲ್ಲವೋ ಎಂಬುದನ್ನು ನೀವು ಆಯ್ಕೆ ಮಾಡುವ ಪಾಲಿಸಿಯು ನಿರ್ಧರಿಸುತ್ತದೆ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಪ್ರತಿ ವಾಹನ ಮಾಲೀಕರು ಥರ್ಡ್ ಪಾರ್ಟಿ ಕವರ್ ಹೊಂದಿರಬೇಕು, ಆದಾಗ್ಯೂ, ಇಲ್ಲಿ ನೀವು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಮಾತ್ರ ಕವರೇಜ್ ಪಡೆಯುತ್ತೀರಿ. ನೀವು ಬೈಕ್ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಆಯ್ಕೆ ಮಾಡಿದರೆ, ಅಪಘಾತಗಳು, ಬೆಂಕಿ, ಕಳ್ಳತನ, ದರೋಡೆ, ನೈಸರ್ಗಿಕ ವಿಪತ್ತುಗಳು, ಮಾನವ ನಿರ್ಮಿತ ವಿಪತ್ತುಗಳು ಇತ್ಯಾದಿಗಳಿಂದ ಉಂಟಾಗುವ ಹಾನಿಗಳನ್ನು ಇನ್ಶೂರರ್ ಕವರ್ ಮಾಡುತ್ತಾರೆ. ಆದ್ದರಿಂದ, ರಿಪೇರಿಗೆ ಉಂಟಾದ ವೆಚ್ಚಗಳು ಮತ್ತು ಯಾವುದೇ ಇನ್ಶೂರೆಬಲ್ ಅಪಾಯದಿಂದ ಹಾನಿಗಳಿಂದಾಗಿ ಪಾರ್ಟ್ಸ್ ಬದಲಾವಣೆಯ ವೆಚ್ಚಗಳಿಗೆ ಕವರೇಜ್ ಪಡೆಯಲು, ನೀವು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಮೇಲೆ ಸ್ಟ್ಯಾಂಡ್ಅಲೋನ್ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ನೀವು ಬೈಕ್‌ಗೆ ಸುಲಭವಾಗಿ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಖರೀದಿಸಬಹುದು ಅಥವಾ ನವೀಕರಿಸಬಹುದು.

 ಓನ್ ಡ್ಯಾಮೇಜ್ ಕವರ್ ಏಕೆ ಉಪಯುಕ್ತವಾಗಿದೆ?

ಬೆಂಕಿ, ಅಪಘಾತಗಳು, ನೈಸರ್ಗಿಕ ವಿಕೋಪಗಳು, ಕಳ್ಳತನ ಮತ್ತು ಇತರ ಅನಿರೀಕ್ಷಿತ ಘಟನೆಗಳಿಂದಾಗಿ ನಿಮ್ಮ ಇನ್ಶೂರೆನ್ಸ್ ಮಾಡಿದ ಟೂ ವೀಲರ್ ಹಾನಿಗಳನ್ನು ಹೊಂದಿದಾಗ ಸ್ವಂತ ಹಾನಿಯ ಬೈಕ್ ಇನ್ಶೂರೆನ್ಸ್ ಪ್ರಯೋಜನಕಾರಿಯಾಗಿದೆ. ಈ ಸನ್ನಿವೇಶಗಳಿಂದಾಗಿ ನಿಮ್ಮ ಟೂ ವೀಲರ್ ಹಾನಿಗೊಳಗಾದರೆ, ಬೈಕ್ ಸ್ವಂತ ಹಾನಿ ಇನ್ಶೂರೆನ್ಸ್ ಕವರ್ ವಾಹನ ರಿಪೇರಿಗೆ ಕವರೇಜನ್ನು ಒದಗಿಸುತ್ತದೆ. ಈ ಪ್ರಯೋಜನವು ಕಡ್ಡಾಯ ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನಲ್ಲಿ ಲಭ್ಯವಿಲ್ಲ ಏಕೆಂದರೆ ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ಕವರ್ ಮಾಡುತ್ತದೆ. ಬೈಕ್‌ಗಾಗಿ ಸ್ವಂತ ಹಾನಿ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಟೂ ವೀಲರ್ ವಾಹನವನ್ನು ಮನಸ್ಸಿನ ಶಾಂತಿಯೊಂದಿಗೆ ಸವಾರಿ ಮಾಡಲು ನಿಮಗೆ ಸಹಾಯ ಮಾಡುತ್ತದೆ ಏಕೆಂದರೆ ನೀವು ನಿಮ್ಮ ಟೂ ವೀಲರನ್ನು ನಿರ್ಣಾಯಕ ನಷ್ಟಗಳ ವಿರುದ್ಧ ರಕ್ಷಿಸುತ್ತೀರಿ.

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಟೂ ವೀಲರ್ ಇನ್ಶೂರೆನ್ಸ್ ಅನ್ನು WHO ಪಡೆಯಬೇಕು?

ನೀವು ಇತ್ತೀಚೆಗೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿದ್ದರೆ, ನಿಮ್ಮ ಸ್ವಂತ ವಾಹನವನ್ನು ಹಾನಿಗಳು ಮತ್ತು ನಷ್ಟಗಳಿಂದ ರಕ್ಷಿಸಲು ನೀವು ಸ್ಟ್ಯಾಂಡ್ಅಲೋನ್ OD ಬೈಕ್ ಇನ್ಶೂರೆನ್ಸ್ ಖರೀದಿಸಬೇಕು. ಎರಡೂ ಪಾಲಿಸಿಗಳನ್ನು ಒಬ್ಬರೇ ಇನ್ಶೂರೆನ್ಸ್ ಪೂರೈಕೆದಾರರಿಂದ ಖರೀದಿಸುವ ಅಗತ್ಯವಿಲ್ಲ. ಅಂದರೆ, ನೀವು ಯಾವುದೇ ಇತರ ವಿಮಾದಾತರ ಬಳಿ ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಖರೀದಿಸಿದ್ದರೂ ಸಹ, ಎಚ್‌ಡಿಎಫ್‌ಸಿ ಎರ್ಗೋ ಆಥವಾ ನಿಮ್ಮ ಆಯ್ಕೆಯ ಇತರ ವಿಮಾದಾತರಿಂದ ಸ್ಟ್ಯಾಂಡ್ಅಲೋನ್ OD ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ನಿಮ್ಮ ಪ್ಲಾನ್ ಮತ್ತು ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವ ಮೊದಲು ಎಲ್ಲಾ ಸೇರ್ಪಡೆಗಳು, ಹೊರಪಡಿಕೆಗಳು, ಫೀಚರ್‌ಗಳು ಹಾಗೂ ಇತರ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ.

ಸ್ಟ್ಯಾಂಡ್‌ಅಲೋನ್ ಟೂ ವೀಲರ್ ಪಾಲಿಸಿ ಸೇರ್ಪಡಿಕೆ ಮತ್ತು ಹೊರಪಡಿಕೆಗಳು

ಉತ್ತಮ ಯೋಜನೆಯು ನಿಮ್ಮ ವಾಹನಕ್ಕೆ ಹಾನಿ ಉಂಟುಮಾಡುವ ಹಲವಾರು ತೊಂದರೆ ಮತ್ತು ಅಪಾಯಗಳನ್ನು ಗಣನೆಗೆ ತೆಗೆದುಕೊಂಡು, ಅದರಿಂದಾಗುವ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅದರಲ್ಲಿ ಒಳಗೊಂಡ ಅಪಾಯಗಳೆಂದರೆ;:

Accidents

ಅಪಘಾತಗಳು

ನಿಮ್ಮ ವಾಹನಕ್ಕಾದ ಆಕ್ಸಿಡೆಂಟ್‌ ಮತ್ತು ಅದರಿಂದಾದ ಹಾನಿ

Fire & Explosion

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟವು ನಿಮ್ಮ ಹಳೆಯ ಯಂತ್ರವನ್ನು ಬೂದಿಯನ್ನಾಗಿಸಬಹುದು. ಆದರೆ ನಮ್ಮ ಪಾಲಿಸಿಯು ನಿಮ್ಮ ಹಣಕಾಸನ್ನು ಹಾಳಾಗಲು ಅನುವು ಮಾಡಿಕೊಡುವುದಿಲ್ಲ.

Theft

ಕಳ್ಳತನ

ನಿಮ್ಮ ಬೈಕನ್ನು ಕಳ್ಳತನವಾಗುವುದನ್ನು ನಾವು ತಡೆಯಲು ಸಾಧ್ಯವಿಲ್ಲ, ಆದರೆ ನಿಮ್ಮ ಕಳ್ಳತನ ಸಂಬಂಧಿತ ನಷ್ಟಗಳನ್ನು ಕವರ್ ಮಾಡುವ ಮೂಲಕ ನಿಮ್ಮ ಹಣಕಾಸನ್ನು ನಾವು ಸುರಕ್ಷಿತವಾಗಿರಿಸಬಹುದು.

Calamities

ವಿಪತ್ತುಗಳು

ನೈಸರ್ಗಿಕ ವಿಕೋಪಗಳಂತಹ ಕೆಲವು ಸಂದರ್ಭಗಳು ನಮ್ಮ ನಿಯಂತ್ರಣದಿಂದ ಹೊರಗಿರುತ್ತವೆ. ಆದರೆ ನಿಮ್ಮ ಹಣಕಾಸಿಗೆ ತೊಂದರೆ ಇಲ್ಲದಂತೆ ನಿಮ್ಮ ವಾಹನವನ್ನು ಮರುಸ್ಥಾಪಿಸಲು ನಾವು ನಿಮಗೆ ಸಹಾಯ ಮಾಡುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಯಾಕೆ ನಿಮ್ಮ ಮೊದಲ ಆಯ್ಕೆ ಆಗಬೇಕು ಎಂಬುದಕ್ಕೆ 4 ಕಾರಣಗಳು!

ಎಚ್‌ಡಿಎಫ್‌ಸಿ ಎರ್ಗೋ ಅತ್ಯಂತ ಪ್ರಸಿದ್ಧ ಮತ್ತು ಜನಮನ್ನಣೆ ಗಳಿಸಿದ ಇನ್ಶೂರೆನ್ಸ್ ಕಂಪನಿಯಾಗಿದ್ದು, 1.6 ಕೋಟಿಗಿಂತ ಹೆಚ್ಚು ಸಂತೃಪ್ತ ಗ್ರಾಹಕರು ಇವರ ಸೇವೆಗಳನ್ನು ಪಡೆಯುತ್ತಿದ್ದಾರೆ. ಎಚ್‌ಡಿಎಫ್‌ಸಿ ಎರ್ಗೋ ವಾಹನ ಇನ್ಶೂರೆನ್ಸ್‌ನ ಅಪಾರ ಜನಪ್ರಿಯತೆಗೆ ಹಲವಾರು ಕಾರಣಗಳಿವೆ. ಅದರಲ್ಲಿ ಕೆಲವು ಹೇಗಿವೆ;:

100% Claim Settlement Ratio^
99.8% ಕ್ಲೈಮ್ ಸೆಟಲ್ಮೆಂಟ್ ಅನುಪಾತ^
ನಿಮಗೆ ಪರಿಣಾಮಕಾರಿ ಮತ್ತು ಕೈಗೆಟಕುವ ಕವರೇಜ್ ಒದಗಿಸಲು, ಸ್ವಂತ ಹಾನಿ ಕವರ್‌ನ ಈ ಹಿಂದಿನ ದರಗಳ ಮೇಲೆ ಭಾರೀ ರಿಯಾಯಿತಿ.
2000+ cashless Garagesˇ
2000+ ನಗದುರಹಿತ ಗ್ಯಾರೇಜ್
ನೀವು ಪಡೆದ ಸೇವೆಗಳಿಗೆ ಯಾವುದೇ ಮುಂಗಡ ಮೊತ್ತವನ್ನು ಪಾವತಿಸಬೇಕಾದ ಅಗತ್ಯವಿಲ್ಲದೆ ನಿಮಗೆ ಭಾರತದಾದ್ಯಂತ ಸೇವೆಗಳನ್ನು ಒದಗಿಸಲು ಇದು ಇನ್ನಷ್ಟು ವಿಶಾಲವಾಗುತ್ತಿದೆ.
24x7 roadside assistance °°
24x7 ರಸ್ತೆಬದಿಯ ಸಹಾಯ °°
ರಜೆಯ ವೇಳೆಯಲ್ಲೂ ಕೂಡಾ ನೀವು ಯಾವುದಾದರೂ ಕೆಟ್ಟ ಘಳಿಗೆಯಲ್ಲಿ ಆಕ್ಸಿಡೆಂಟ್‌ಗೆ ತುತ್ತಾಗಿ ಅಥವಾ ಗಾಡಿ ಕೆಟ್ಟು ನಿಂತು, ನಿಮಗೆ ಸಹಾಯದ ಅಗತ್ಯವಿದ್ದಾಗ ಇದು ತುಂಬಾ ಉಪಯುಕ್ತವಾಗಿರುತ್ತದೆ.
Door Step Two Wheeler repairs°
ಮನೆಬಾಗಿಲಿನಲ್ಲಿ ಟೂ ವೀಲರ್ ರಿಪೇರಿಗಳು°
ಈಗಲೇ ನಿಮ್ಮ ಮನೆಬಾಗಿಲಿನಲ್ಲಿ ಅನುಕೂಲಕರ ಕಾರ್ ರಿಪೇರಿ ಸೇವೆಯನ್ನು ಪಡೆಯಿರಿ.

ಸ್ವಂತ ಹಾನಿಯ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕಾಚಾರ

ಎಚ್‌ಡಿಎಫ್‌ಸಿ ಎರ್ಗೋ ಒದಗಿಸುವ ಅತ್ಯಂತ ಸಹಾಯಕ ಫೀಚರ್ ಎಂದರೆ ಅದು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಆಗಿದೆ. ಇದೊಂದು ತ್ವರಿತ ಮತ್ತು ದಕ್ಷ ಸಾಧನವಾಗಿದ್ದು, ಪಾಲಿಸಿ ಆಫರ್‌ಗಳ ಎಲ್ಲಾ ಪ್ರಯೋಜನಗಳನ್ನು ಪಡೆಯಲು ನೀವು ಪಾವತಿಸಬೇಕಾದ ಪ್ರೀಮಿಯಂ ಮೊತ್ತದ ಕುರಿತು ಬಹುಪಾಲು ನಿರ್ದಿಷ್ಟ ವಿವರಗಳನ್ನು ನೀಡುತ್ತದೆ. ಅಗತ್ಯ ವಿವರಗಳನ್ನು ಭರ್ತಿ ಮಾಡಿದ ನಂತರ ಬಟನ್ ಕ್ಲಿಕ್ ಮಾಡುವ ಮೂಲಕ, ಅಂದಾಜು ಪ್ರೀಮಿಯಂ ಮೊತ್ತವನ್ನು ತಿಳಿದುಕೊಂಡು, ಅದಕ್ಕೆ ತಕ್ಕಂತೆ ನಿಮ್ಮ ಹಣಕಾಸನ್ನು ಹೊಂದಿಸಬಹುದು.

ನಿಮ್ಮ ಸ್ವಂತ ಹಾನಿ (OD) ಪ್ರೀಮಿಯಂ ಅನ್ನು ಕಡಿಮೆ ಮಾಡುವುದು ಹೇಗೆ

ನಿಮ್ಮ OD ಇನ್ಶೂರೆನ್ಸ್ ಪ್ರೀಮಿಯಂ ಮೊತ್ತದ ಲೆಕ್ಕಾಚಾರದ ಮೇಲೆ ಪರಿಣಾಮ ಬೀರುವ ಕೆಲವು ಅಂಶಗಳನ್ನು ಮುಂದಿನ ವಿಭಾಗದಲ್ಲಿ ಚರ್ಚಿಸಲಾಗುತ್ತದೆ. ಆ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಈ ಸುಲಭ ಸಲಹೆಗಳೊಂದಿಗೆ ನೀವು ನಿಮ್ಮ OD ಪ್ರೀಮಿಯಂ ಕಡಿಮೆ ಮಾಡಬಹುದು:

● ಸ್ವಯಂಪ್ರೇರಿತ ಕಡಿತಗಳು ಎಂದರೆ,‌ ವಿಮಾದಾತರ ಬಳಿ ಕ್ಲೇಮ್‌ ಸಲ್ಲಿಸುವಾಗ ನಿಮ್ಮ ಆಯ್ಕೆಯಂತೆ ನೀವು ಕೈಯಿಂದ ಪಾವತಿಸುವ ಹಣ. ನೀವು ನಿಮ್ಮ ಸ್ವಯಂಪ್ರೇರಿತ ಕಡಿತಗಳ ಶೇಕಡಾವಾರು ಹೆಚ್ಚಿಸುವ ಮೂಲಕ ಓನ್‌ ಡ್ಯಾಮೇಜ್‌ ಪ್ರೀಮಿಯಂ ಕಡಿಮೆ ಮಾಡಬಹುದು. ಅದಕ್ಕೂ ಮೊದಲು ವೆಚ್ಚ-ಪ್ರಯೋಜನದ ವಿಶ್ಲೇಷಣೆ ಮಾಡುವ ಅಗತ್ಯವಿದೆ.

● ವಾಹನದ ಇನ್ಶೂರ್ಡ್ ಡಿಕ್ಲೇರ್ಡ್‌ ವ್ಯಾಲ್ಯೂ (IDV) ನೇರವಾಗಿ OD ಪ್ರೀಮಿಯಂ ಮತ್ತು ವಿತರಣಾ ಮೊತ್ತದ ಮೇಲೆ ಪ್ರಭಾವ ಬೀರುವುದರಿಂದ, ನಿಖರವಾದ IDV ಒದಗಿಸುವುದು ಉತ್ತಮ.

● ಈ ಮುಂಚೆ ಮಾಡಿಸಿದ್ದ OD ಅಥವಾ ಸಮಗ್ರ ಇನ್ಶೂರೆನ್ಸ್ ಪಾಲಿಸಿಗೆ ನೋ ಕ್ಲೈಮ್ ಬೋನಸ್ ಆ್ಯಡ್-ಆನ್ ಇದ್ದರೆ, ಅದರ ಪ್ರಯೋಜನಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಅದನ್ನು ಈಗಿನ ಪಾಲಿಸಿಗೆ ವರ್ಗಾಯಿಸಿಕೊಳ್ಳಬೇಕು.

● ಹಳೆಯ ವಾಹನಗಳನ್ನು ಹೊಂದಿರುವವರು ತಮ್ಮ OD ಪ್ರೀಮಿಯಂ ಕಡಿಮೆ ಮಾಡಲು ಶೂನ್ಯ ಸವಕಳಿ ಬೈಕ್ ಇನ್ಶೂರೆನ್ಸ್ ಕವರ್ ಪಡೆಯಲು ಸಲಹೆ ನೀಡಲಾಗುತ್ತದೆ.

ಸ್ಟ್ಯಾಂಡ್‌ಅಲೋನ್ OD ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

OD ಪ್ರೀಮಿಯಂ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳ ಬಗ್ಗೆ ಹಿಂದಿನ ವಿಭಾಗದಲ್ಲಿ ತಿಳಿಸಿದ್ದೇವೆ. ಅದರ ಕುರಿತ ಇನ್ನಷ್ಟು ವಿವರಗಳು ಇಲ್ಲಿವೆ ನೋಡಿ.

IDV

IDV

ಟೂ ವೀಲರ್ ಇನ್ಶೂರೆನ್ಸ್‌ನಲ್ಲಿ IDV OD ಪ್ರೀಮಿಯಂ ಲೆಕ್ಕಾಚಾರದಲ್ಲಿ ಬಳಸಲಾಗುತ್ತದೆ. ಈ ಮೌಲ್ಯವನ್ನು ಉತ್ಪ್ರೇಕ್ಷಿಸಿ ಹೇಳುವುದರಿಂದ ನಷ್ಟವಾಗಬಹುದು.

Age of Bike

ಬೈಕಿನ ವಯಸ್ಸು

ನಿರಂತರ ಬಳಕೆಯಿಂದಾಗಿ ಹಳೆಯ ಬೈಕ್‌ಗಳು ಹಾಳಾಗಿ ಪ್ರೀಮಿಯಂ ದರ ಹೆಚ್ಚುವುದರಿಂದ, ಬೈಕ್‌ನ ವಯಸ್ಸು ಮತ್ತೊಂದು ಪ್ರಮುಖ ಅಂಶವಾಗಿದೆ.

NCB

NCB

NCB ಎಂದರೆ ನೋ ಕಾಸ್ಟ್ ಬೋನಸ್. ಇದು ಸಾಮಾನ್ಯವಾಗಿ ಹೆಚ್ಚಿನ ಪ್ರೀಮಿಯಂ ಹೊಂದಿರುತ್ತದೆ. ಇದರ ಪ್ರಮುಖ ಪ್ರಯೋಜನವೆಂದರೆ, ಯಾವುದೇ ಕ್ಲೇಮ್‌ಗಳನ್ನು ಮಾಡದಿದ್ದಾಗ, ನೀವು ಪಾವತಿಸುವ ಪ್ರೀಮಿಯಂ ಮೊತ್ತವು ಕಡಿಮೆಯಾಗುತ್ತಾ ಬರುತ್ತದೆ.

Bike Make Model

ಬೈಕ್ ಮೇಕ್ ಮಾಡೆಲ್

ಬೈಕ್‌ನ ಮೇಕ್ ಮಾಡೆಲ್ ಕೂಡಾ ಪ್ರೀಮಿಯಂ ಲೆಕ್ಕಾಚಾರದ ಮೇಲೆ ಪ್ರಭಾವ ಬೀರುತ್ತದೆ. ಹೈ-ಎಂಡ್ ಬೈಕ್‌ಗಳು ಹೆಚ್ಚಿನ ಪ್ರೀಮಿಯಂ ಹೊಂದಿರುತ್ತವೆ. ಮತ್ತೊಂದೆಡೆ, ಹೆಚ್ಚಿನ ಸುರಕ್ಷತಾ ಫೀಚರ್‌ಗಳನ್ನು ಹೊಂದಿರುವ ಬೈಕ್‌ಗಳು ಕಡಿಮೆ ಪ್ರೀಮಿಯಂ ಹೊಂದಿರುತ್ತವೆ. ಏಕೆಂದರೆ ಅವುಗಳಿಗೆ ಇನ್ಶೂರೆನ್ಸ್ ಅಪಾಯಗಳು ಕಡಿಮೆ ಇರುತ್ತವೆ.

ಸ್ವಂತ-ಹಾನಿ ಬೈಕ್ ಇನ್ಶೂರೆನ್ಸ್‌ಗಾಗಿ ಕ್ಲೈಮ್ ಫೈಲ್ ಮಾಡುವುದು ಹೇಗೆ ?

ಸ್ವಂತ ಹಾನಿ ಇನ್ಶೂರೆನ್ಸ್ ಟೂ ವೀಲರ್‌ಗೆ ಕ್ಲೈಮ್ ಸಲ್ಲಿಸುವುದು ಸುಲಭ. ಹಂತಗಳು ಈ ಕೆಳಗಿನಂತಿವೆ:

 

ಹಂತ 1- ನಮ್ಮ ವೆಬ್‌ಸೈಟ್‌ನಲ್ಲಿ ಕ್ಲೈಮ್ ನೋಂದಣಿ ಮಾಡುವ ಮೂಲಕ ನಮ್ಮ ಕ್ಲೈಮ್ ತಂಡವನ್ನು ಸಂಪರ್ಕಿಸಿ. ನಮ್ಮ ಕ್ಲೈಮ್ ತಂಡವು ನಿಮ್ಮನ್ನು ಸಂಪರ್ಕಿಸುತ್ತದೆ ಮತ್ತು ನಮ್ಮ ಏಜೆಂಟ್ ಒದಗಿಸಿದ ಲಿಂಕ್‌ನೊಂದಿಗೆ, ನೀವು ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಅಪ್ಲೋಡ್ ಮಾಡಬಹುದು.

ಹಂತ 2 - ನೀವು ಸ್ವಯಂ ತಪಾಸಣೆ ಅಥವಾ ಆ್ಯಪ್ ಸಕ್ರಿಯಗೊಳಿಸಿದ ಡಿಜಿಟಲ್ ತಪಾಸಣೆಯನ್ನು ಸರ್ವೇಯರ್ ಅಥವಾ ವರ್ಕ್‌ಶಾಪ್ ಪಾಲುದಾರರಿಂದ ಆಯ್ಕೆ ಮಾಡಬಹುದು.

ಹಂತ 3 - ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.

ಹಂತ 4 - ನಿಮ್ಮ ಕ್ಲೈಮ್ ಅನುಮೋದಿಸಿದಾಗ ನೀವು ಮೆಸೇಜ್ ಮೂಲಕ ನೋಟಿಫಿಕೇಶನ್ ಪಡೆಯುತ್ತೀರಿ ಮತ್ತು ಅದನ್ನು ನಗದುರಹಿತ ನೆಟ್ವರ್ಕ್ ಗ್ಯಾರೇಜ್ ಮೂಲಕ ಸೆಟಲ್ ಮಾಡಲಾಗುತ್ತದೆ.

ಸ್ವಂತ-ಡ್ಯಾಮೇಜ್ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್‌ಗೆ ಡಾಕ್ಯುಮೆಂಟ್‌ಗಳು ಅಗತ್ಯವಿದೆ

ಈ ಕೆಳಗಿನ ಷರತ್ತುಗಳ ಅಡಿಯಲ್ಲಿ ಬೈಕ್‌ಗೆ ಸ್ವಂತ ಹಾನಿ ಇನ್ಶೂರೆನ್ಸ್‌ಗೆ ಕ್ಲೈಮ್ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ:

1

ಆಕ್ಸಿಡೆಂಟಲ್ ಹಾನಿ

• ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಪಾಲಿಸಿ ಪುರಾವೆ
• ಪರಿಶೀಲನೆಗಾಗಿ ಬೈಕಿನ RC, ಮತ್ತು ಮೂಲ ತೆರಿಗೆ ರಶೀದಿಗಳ ಪ್ರತಿ
• ಪೊಲೀಸ್ FIR ವರದಿ
• ನಿಮ್ಮ ಮೂಲ ಡ್ರೈವಿಂಗ್ ಲೈಸೆನ್ಸಿನ ಪ್ರತಿ
• ಹಾನಿ ರಿಪೇರಿ ಅಂದಾಜು.
• ಪಾವತಿ ರಶೀದಿಗಳು ಮತ್ತು ರಿಪೇರಿ ಬಿಲ್‌ಗಳು

2

ಕಳ್ಳತನ ಸಂಬಂಧಿತ ಕ್ಲೈಮ್

• ಬೈಕಿಗಾಗಿ ಸ್ವಂತ ಹಾನಿ ಇನ್ಶೂರೆನ್ಸ್‌ನ ಮೂಲ ಪ್ರತಿ
• ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಕಳ್ಳತನ ಅನುಮೋದನೆ
• ಮೂಲ RC ತೆರಿಗೆ ಪಾವತಿ ರಶೀದಿ
• ಸರ್ವಿಸ್ ಬುಕ್ಲೆಟ್‌ಗಳು/ಬೈಕ್ ಕೀಗಳು ಮತ್ತು ವಾರಂಟಿ ಕಾರ್ಡ್
• ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ ನಂಬರ್, ಇನ್ಶೂರೆನ್ಸ್ ಕಂಪನಿಯ ವಿವರಗಳು ಮತ್ತು ಪಾಲಿಸಿ ಅವಧಿಯ ಅವಧಿಯಂತಹ ಹಿಂದಿನ ಟೂ ವೀಲರ್ ಇನ್ಶೂರೆನ್ಸ್ ವಿವರಗಳು
• ಪೊಲೀಸ್ FIR/ JMFC ವರದಿ/ ಅಂತಿಮ ತನಿಖಾ ವರದಿ
• ಕಳ್ಳತನದ ಬಗ್ಗೆ ಬೈಕನ್ನು "ಬಳಕೆಯಲ್ಲಿಲ್ಲ" ಎಂದು ಘೋಷಿಸುವ ಅನುಮೋದಿತ ಸಂಬಂಧಪಟ್ಟ RTO ಗೆ ಉದ್ದೇಶಿಸಿರುವ ಪತ್ರದ ಪ್ರತಿ

3

ಬೆಂಕಿಯಿಂದಾಗಿ ಹಾನಿ:

• ಸ್ವಂತ ಹಾನಿಯ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಮೂಲ ಡಾಕ್ಯುಮೆಂಟ್‌ಗಳು
• ಬೈಕಿನ ನೋಂದಣಿ ಸರ್ಟಿಫಿಕೇಟ್ ಸಾಫ್ಟ್ ಕಾಪಿ
• ರೈಡರ್‌ನ ಡ್ರೈವಿಂಗ್ ಲೈಸೆನ್ಸ್ ಸಾಫ್ಟ್ ಕಾಪಿ
• ಫೋಟೋಗಳು ಅಥವಾ ವಿಡಿಯೋಗಳ ಮೂಲಕ ಘಟನೆಯ ಪ್ರಸ್ತುತ ಸಾಕ್ಷ್ಯ
• FIR (ಅಗತ್ಯವಿದ್ದರೆ)
• ಫೈರ್ ಬ್ರಿಗೇಡ್‌ನ ರಿಪೋರ್ಟ್ (ಯಾವುದಾದರೂ ಇದ್ದರೆ)

2000+ Network Garages Across India

ಇತ್ತೀಚಿನ ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

What is 1-year OD and 5-year TP?

1-ವರ್ಷದ OD ಮತ್ತು 5-ವರ್ಷದ TP ಎಂದರೇನು?

ಪೂರ್ತಿ ಓದಿ
ಪ್ರಕಟಣೆ ದಿನಾಂಕ ಡಿಸೆಂಬರ್ 20, 2024
Can I Claim Insurance for Bike Scratches Under Own Damage Cover

ಸ್ವಂತ ಹಾನಿ ಕವರ್ ಅಡಿಯಲ್ಲಿ ಬೈಕ್ ಸ್ಕ್ರ್ಯಾಚ್‌ಗಳಿಗೆ ನಾನು ಇನ್ಶೂರೆನ್ಸ್ ಕ್ಲೈಮ್ ಮಾಡಬಹುದೇ?

ಪೂರ್ತಿ ಓದಿ
ಡಿಸೆಂಬರ್ 5, 2024 ರಂದು ಪ್ರಕಟಿಸಲಾಗಿದೆ
two wheeler own damage cover

ಸ್ವಂತ ಹಾನಿ ಕವರೇಜ್ ಮೇಲೆ ಟೂ ವೀಲರ್ ವಯಸ್ಸು ಮತ್ತು ಸ್ಥಿತಿಯ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು

ಪೂರ್ತಿ ಓದಿ
ನವೆಂಬರ್ 13, 2024 ರಂದು ಪ್ರಕಟಿಸಲಾಗಿದೆ
Own Damage Cover Vs Zero Depreciation In Bike Insurance

ಸ್ವಂತ ಹಾನಿ ಮತ್ತು ಶೂನ್ಯ ಸವಕಳಿ ನಡುವಿನ ವ್ಯತ್ಯಾಸವೇನು?

ಪೂರ್ತಿ ಓದಿ
ಆಗಸ್ಟ್ 2, 2024 ರಂದು ಪ್ರಕಟಿಸಲಾಗಿದೆ
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ

ಬೈಕ್‌ಗಳಿಗಾಗಿ ಸ್ಟ್ಯಾಂಡ್ ಅಲೋನ್ ಸ್ವಂತ ಹಾನಿ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು


ಇಲ್ಲ, ನಿಮ್ಮ ಇಷ್ಟಾನುಸಾರವಾಗಿ, ಸ್ಟ್ಯಾಂಡ್ಅಲೋನ್ OD ಒದಗಿಸುವ ಯಾವುದೇ ಇನ್ಶೂರೆನ್ಸ್‌ ಪೂರೈಕೆದಾರರಿಂದ ಈ ಪ್ಲಾನ್ ಖರೀದಿಸಬಹುದು. ಪ್ಲಾನ್ ಆಯ್ಕೆ ಮಾಡುವ ಮೊದಲು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಯೋಜನೆಗಳ ಕೂಲಂಕುಷ ಮೌಲ್ಯಮಾಪನ ಮತ್ತು ಹೋಲಿಕೆ ಮಾಡಬೇಕು.
ಮಾನ್ಯವಾದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವ ಯಾವುದೇ ವಾಹನಗಳಿಗೆ, ಸ್ಟ್ಯಾಂಡ್ಅಲೋನ್ OD ಪ್ಲಾನ್‌ ಖರೀದಿಸಬಹುದು.
ಮೂರು ಅತ್ಯಂತ ಸಾಮಾನ್ಯ ರೀತಿಯ ಬೈಕ್ ಇನ್ಶೂರೆನ್ಸ್ ಪಾಲಿಸಿಗಳೆಂದರೆ ಥರ್ಡ್ ಪಾರ್ಟಿ, ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಮತ್ತು ಸಮಗ್ರ ಇನ್ಶೂರೆನ್ಸ್ ಪ್ಲಾನ್‌ಗಳು.
ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲಾನ್ ಅತಿ ಕಡಿಮೆ ಪ್ರೀಮಿಯಂ ಹೊಂದಿರುವ ಮೂಲಭೂತ ಪಾಲಿಸಿ. ಇದು ಭಾರತೀಯ ಕಾನೂನುಗಳ ಪ್ರಕಾರ ಒಂದು ಕಡ್ಡಾಯ ಅವಶ್ಯಕತೆಯಾಗಿದೆ.
ನವೀಕೃತ ನಿಯಮಾವಳಿಗಳ ಪ್ರಕಾರ ಪರ್ಸನಲ್ ಆಕ್ಸಿಡೆಂಟ್ ಕವರ್ ಕಡ್ಡಾಯವಾಗಿದೆ. ಇದನ್ನು ನಿಮ್ಮ OD ಪಾಲಿಸಿಯನ್ನು ಖರೀದಿಸುವಾಗ ಸೇರಿಸಿಕೊಳ್ಳಬಹುದು. ಆದರೆ ಖರೀದಿಸುವ ಮುನ್ನ ಅದನ್ನು ಈಗಾಗಲೇ ನಿಮ್ಮ ಥರ್ಡ್ ಪಾರ್ಟಿ ಕವರ್‌ನಲ್ಲಿ ಸೇರಿಸಲಾಗಿದೆಯೇ ಎಂದು ಪರಿಶೀಲಿಸುವ ಮೂಲಕ, ಎರಡೆರಡು ಸಲ ಕೊಳ್ಳುವುದನ್ನು ತಪ್ಪಿಸಬಹುದು.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

ಎಲ್ಲಾ ಪ್ರಶಸ್ತಿಗಳನ್ನು ನೋಡಿ