Two Wheeler Insurance with HDFC ERGO
Two Wheeler Insurance with HDFC ERGO
Annual Premium starting at just ₹538*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
7400+ Cashless Network Garages ^

2000+ ನಗದುರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
Emergency Roadside Assistance

ತುರ್ತು ರಸ್ತೆಬದಿ

ಸಹಾಯ
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್

ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್

Mahindra Two Wheeler Insurance

ನೀವು ಯಾವುದೇ ಬೈಕ್ ಮಾಲೀಕರನ್ನು ಆ ಬೈಕ್ ನಿಮಗೆ ಎಷ್ಟು ಮುಖ್ಯ ಎಂದು ಕೇಳಿದರೆ, ನನ್ನ ಪಾಲಿಗೆ ಅದು ಅತ್ಯಮೂಲ್ಯ ಎಂದೇ ಉತ್ತರಿಸುತ್ತಾರೆ. ಅವರು ಪ್ರತಿದಿನ ಅದರ ಮೇಲೆಯೇ ಪ್ರಯಾಣಿಸುವುದರಿಂದ, ಆ ವಾಹನ ಅವರ ಪಾಲಿಗೆ ಬೆಲೆಕಟ್ಟಲಾಗದ ಆಸ್ತಿಯೇ ಸರಿ. ಅವರೇನಾದರೂ ಭಾರತೀಯ ರಸ್ತೆಗಳು ಮತ್ತು ಅಗತ್ಯಗಳಿಗೆ ತಕ್ಕಂತೆ ರೂಪಿಸಲಾದ ಮಹೀಂದ್ರಾ ತರಹದ ಹೈ-ಎಂಡ್ ಬ್ರ್ಯಾಂಡ್ ವಾಹನ ಹೊಂದಿದ್ದರೆ, ಅದು ಇನ್ನಷ್ಟು ಅಮೂಲ್ಯವಾಗುತ್ತದೆ. ಹೀಗಾಗಿ, ಅದನ್ನು ರಕ್ಷಿಸಲೇಬೇಕು. ಇಲ್ಲಿ ನಾವು, ಕೆಲವು ಹಳೆಯ ಮತ್ತು ಹೊಸ ಮಹೀಂದ್ರಾ ಮಾಡೆಲ್‌ಗಳ ಬಗ್ಗೆ ಹಾಗೂ ಅವುಗಳ ಇನ್ಶೂರೆನ್ಸ್ ಅಗತ್ಯಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಹೇಗೆ ಪೂರೈಸುತ್ತದೆ ಎಂಬುದರ ಬಗ್ಗೆ ಚರ್ಚಿಸಲಿದ್ದೇವೆ.

ಜನಪ್ರಿಯ ಮಹೀಂದ್ರಾ ಟೂ ವೀಲರ್ ಮಾಡೆಲ್‌ಗಳು

1
ಮಹಿಂದ್ರಾ ಡ್ಯೂರೋ Dz
ಇದು ಮಹೀಂದ್ರಾದ ಅತ್ಯಂತ ಕೈಗೆಟುಕುವ ದರದ ಬೈಕ್‌ಗಳಲ್ಲಿ ಒಂದಾಗಿದೆ. ಇದರ 125cc ಎಂಜಿನ್, 8.1 PS ಮತ್ತು 9 NM ಟಾರ್ಕ್ ನೀಡುತ್ತದೆ. ಇದರ ಸೀಟಿನ ಕೆಳಗೆ ಮತ್ತು ಮುಂಭಾಗದಲ್ಲಿ ಸ್ಟೋರೇಜ್ ಸೌಲಭ್ಯ ಇದೆ. ಇದರ ಶೋರೂಮ್ ಬೆಲೆ, ₹ 46.24 k ರಿಂದ ₹ 47k ವರೆಗೆ ಇರುತ್ತದೆ.
2
ಮಹಿಂದ್ರಾ ಮೋಜೋ
ಮೋಜೋ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ದಿನದಿಂದ, ಅದು ತನ್ನ ವರ್ಗದ ಅಗ್ರ ಬೈಕ್‌ಗಳಲ್ಲಿ ಒಂದು ಎನಿಸಿಕೊಂಡಿದೆ. ಮಹಿಂದ್ರಾದ ಫ್ಲಾಗ್‌ಶಿಪ್ ಮಾಡೆಲ್ ಆದ ಮೋಜೋ, ಈ ಕಂಪನಿಯ ಅತ್ಯಂತ ಶಕ್ತಿಶಾಲಿ ಮತ್ತು ಕ್ರೀಡಾಸ್ನೇಹಿ ಮೋಟಾರ್‌ಸೈಕಲ್ ಆಗಿದೆ. ಮೋಜೋನಲ್ಲಿ 295cc ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್, DOHC, 4-ವಾಲ್ವ್ ಎಂಜಿನ್ ಇದ್ದು, ಅದು 27 PS ಮತ್ತು 30 NM ಒದಗಿಸುತ್ತದೆ. ನಿಮ್ಮ ವಾಸಸ್ಥಳದ ಆಧಾರದ ಮೇಲೆ, ಶೋರೂಮ್ ಬೆಲೆಗಳು ₹ 1.73 ಲಕ್ಷಗಳವರೆಗೆ ಇರುತ್ತವೆ.
3
ಮಹಿಂದ್ರಾ ಗಸ್ಟೋ
ಗಸ್ಟೋ 110, ಭಾರತದ ಅತ್ಯಂತ ಫೀಚರ್-ಪ್ಯಾಕ್ಡ್ ಸ್ಕೂಟರ್‌ಗಳಲ್ಲಿ ಒಂದಾಗಿದೆ. ಫೀಚರ್‌ಗಳ ವಿಷಯದಲ್ಲಿ, ಅದರ ದಾಯಾದಿ ಗಸ್ಟೋ 125 ಮಾತ್ರವೇ ಅದಕ್ಕೆ ಸರಿಸಾಟಿಯಾಗಿದೆ. ಇದು 12-ಇಂಚ್ ವೀಲ್‌ಗಳು ಮತ್ತು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಹೊಂದಿದೆ. ಇದರ ಬೆಲೆ ₹47.32k ರಿಂದ ₹54.06k ವರೆಗೆ ಇರುತ್ತದೆ.
4
ಮಹೀಂದ್ರಾ ರೋಡಿಯೋ
ಮಹೀಂದ್ರಾ ರೋಡಿಯೋ ಯೂಜೋ 125 ಕೂಡಾ ಡ್ಯೂರೋ DZನಲ್ಲಿ ಇರುವಂತಹದೇ ಎಂಜಿನ್‌ ಹೊಂದಿರುವ ಆಕರ್ಷಕ 125cc ಗೇರ್‌ಲೆಸ್ ಮೋಟಾರ್‌ಸೈಕಲ್ ಆಗಿದೆ. ಈ 125cc ಎಂಜಿನ್, 8.1 ಹಾರ್ಸ್‌ಪವರ್ ಮತ್ತು 9 ನ್ಯೂಟನ್-ಮೀಟರ್‌ಗಳ ಟಾರ್ಕ್ ಉತ್ಪಾದಿಸುತ್ತದೆ. ಹೆಚ್ಚು ಆಹ್ಲಾದಕರ ಮತ್ತು ಸ್ಥಿರ ರೈಡಿಂಗ್‌ಗಾಗಿ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್‌ಗಳು ಕೂಡ ಇವೆ. ಈ ಸ್ಕೂಟರ್‌ನ ಶೋರೂಮ್ ಬೆಲೆ ₹47.46 ರಿಂದ ₹49.96K ನಡುವೆ ಇರುತ್ತದೆ.
5
ಮಹೀಂದ್ರಾ ಸೆಂಚುರೋ
ಮಹೀಂದ್ರಾ ಸೆಂಚುರೋ XT ಕಮ್ಯೂಟರ್ ಮೋಟಾರ್ ಸೈಕಲ್, 106.7cc ಎಂಜಿನ್ ಹೊಂದಿದೆ. ಈ ಎಂಜಿನ್ ಅನ್ನು Mci-5 (ಮೈಕ್ರೋಚಿಪ್ ಇಗ್ನೈಟೆಡ್) ಕರ್ವ್ ಎಂಜಿನ್ ಎಂದು ಕರೆಯಲಾಗುತ್ತದೆ ಹಾಗೂ ಇದು 7,500 RPM ನಲ್ಲಿ 8.5 PS ಪವರ್ ಔಟ್ಪುಟ್ ಮತ್ತು 5,500 RPM ನಲ್ಲಿ 8.5 NM ಟಾರ್ಕ್ ಔಟ್ಪುಟ್ ಹೊಂದಿದೆ. ಇದರ ಬೆಲೆ ₹43.25 - ₹53.13 K ನಡುವೆ ಇರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ನೀಡುವ ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್ ವಿಧಗಳು

ನೀವು ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್ ಹುಡುಕುತ್ತಿದ್ದರೆ, ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಅತ್ಯುತ್ತಮ ಆಯ್ಕೆಯಾಗಿದೆ. ಏಕೆಂದರೆ ನಾವು ಅತಿಹೆಚ್ಚಿನ ಪ್ರಾಡಕ್ಟ್‌ಗಳು ಮತ್ತು ಆ್ಯಡ್-ಆನ್‌ಗಳನ್ನು ಹೊಂದಿದ್ದೇವೆ. ಎಚ್‌ಡಿಎಫ್‌ಸಿ ಎರ್ಗೋ ಅತ್ಯಂತ ಮೂಲಭೂತ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕವರೇಜ್‌ನೊಂದಿಗೆ ಆರಂಭಗೊಂಡು ವಿವಿಧ ಸ್ಕೂಟರ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳನ್ನು ಒದಗಿಸುತ್ತದೆ. ನೀವು ಒಂದು ವರ್ಷ ಅಥವಾ ಬಹು-ವರ್ಷದ ಪಾಲಿಸಿಯನ್ನು ಬಯಸುತ್ತಿದ್ದರೂ, ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ಸರಿಹೊಂದುವ ಕವರೇಜ್ ನೀಡುತ್ತದೆ. ಹೊಸ ಸ್ಕೂಟರ್‌ಗಳಿಗೆ ಐದು ವರ್ಷದ ಥರ್ಡ್ ಪಾರ್ಟಿ ವಾರಂಟಿಯನ್ನು ಕೂಡ ನೀಡಲಾಗುತ್ತದೆ. ಇದಲ್ಲದೆ, ನೀವು ಒಂದು ವರ್ಷ ಅಥವಾ ಬಹು-ವರ್ಷದ ಸಮಗ್ರ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಿದ್ಧರಿಲ್ಲದಿದ್ದರೆ, ನೀವು ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಕವರೇಜ್ ಆಯ್ಕೆ ಮಾಡಬಹುದು.

ನೀವು ನಿಮ್ಮ ಸ್ವಂತ ಬೈಕ್ ಮತ್ತು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆಗುವ ಹಾನಿಯ ವಿರುದ್ಧ ಸಂಪೂರ್ಣ ರಕ್ಷಣೆಯನ್ನು ಬಯಸಿದರೆ, ಇದು ನಿಮಗೆ ಸೂಕ್ತವಾದ ಪ್ಯಾಕೇಜ್ ಆಗಿದೆ. ನೀವು ಒಂದು, ಎರಡು ಅಥವಾ ಮೂರು ವರ್ಷಗಳ ಕವರೇಜ್ ಆಯ್ಕೆ ಮಾಡಬಹುದು. ನೀವು ಪ್ರತಿ ವರ್ಷ ನಿಮ್ಮ ಮಹೀಂದ್ರಾ ಬೈಕ್ ಇನ್ಶೂರೆನ್ಸ್‌ ನವೀಕರಿಸುವ ಕಿರಿಕಿರಿಯನ್ನು ತಪ್ಪಿಸಲು ಬಯಸಿದರೆ, ಮೂರು ವರ್ಷಗಳ ಕವರೇಜ್ ಖರೀದಿಸುವುದು ಒಳ್ಳೆಯದು. ಈ ಪಾಲಿಸಿಯ ಇನ್ನೊಂದು ಪ್ರಯೋಜನವೆಂದರೆ, ಹೆಚ್ಚುವರಿ ಕವರೇಜ್‌ ಬೇಕಿದ್ದರೆ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್ ಅನ್ನು ಕಸ್ಟಮೈಜ್ ಮಾಡಬಹುದು.

X
ಎಲ್ಲ ರೀತಿಯ ರಕ್ಷಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಸೂಕ್ತವಾಗಿದೆ. ಈ ಪ್ಲಾನ್ ಕೆಳಗಿನ ಕವರೇಜ್‌ ನೀಡುತ್ತದೆ:
bike accident

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು,

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಇನ್ನಷ್ಟು ಹುಡುಕಿ

ಇದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಹಾನಿ, ಗಾಯ, ಅಂಗವಿಕಲತೆ ಅಥವಾ ನಷ್ಟದ ಪರಿಣಾಮವಾಗಿ ಉಂಟಾಗಬಹುದಾದ ಯಾವುದೇ ಕಾನೂನು ಜವಾಬ್ದಾರಿಗಳ ವಿರುದ್ಧ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುವ ಸ್ಟ್ಯಾಂಡರ್ಡ್ ಕೆಟಗರಿಯ ಇನ್ಶೂರೆನ್ಸ್ ಆಗಿದೆ. ಭಾರತೀಯ ಹೆದ್ದಾರಿಗಳಲ್ಲಿ ಸವಾರಿ ಮಾಡುವಾಗ ಇದು ಕಾನೂನು ಅವಶ್ಯಕತೆಯಾಗಿದೆ, ಮತ್ತು ನೀವು ಮಾನ್ಯ ಮಹೀಂದ್ರಾ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದೆ ವಾಹನ ಚಲಾಯಿಸಿದರೆ, ನಿಮಗೆ ₹ 2000 ದಂಡ ವಿಧಿಸಲಾಗುತ್ತದೆ.

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ನೀವು ಈಗಾಗಲೇ ಮಹೀಂದ್ರಾ ಬೈಕ್ ಥರ್ಡ್ ಪಾರ್ಟಿ ಲಯಬಿಲಿಟಿ ಇನ್ಶೂರೆನ್ಸ್ ಹೊಂದಿದ್ದರೆ, ಈ ಪ್ಲಾನ್ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
bike accident

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು,

ಆ್ಯಡ್-ಆನ್‌ಗಳ ಆಯ್ಕೆ

ನೀವು ಈಗಷ್ಟೇ ಹೊಸ ಬೈಕ್ ಖರೀದಿಸಿದ್ದರೆ, ಈ ಪ್ಲಾನ್ ಮೂಲಕ ನೀವು ಥರ್ಡ್ ಪಾರ್ಟಿಗೆ ಉಂಟಾದ ಹಾನಿಗಳು ಅಥವಾ ಗಾಯಗಳ ವಿರುದ್ಧ ಐದು ವರ್ಷಗಳ ರಕ್ಷಣೆ ಹಾಗೂ ನಿಮ್ಮ ಬೈಕ್‌ಗೆ ಆದ ಯಾವುದೇ ಹಾನಿಗಳ ವಿರುದ್ಧ ಒಂದು ವರ್ಷದ ಕವರೇಜ್ ಪಡೆಯುತ್ತೀರಿ. ಎಲ್ಲಾ ಹೊಸ ಬೈಕ್ ಮಾಲೀಕರಿಗೆ ಇದೊಂದು ಉತ್ತಮ ಹೂಡಿಕೆಯಾಗಿದೆ.

X
ಹೊಚ್ಚ ಹೊಸ ಟೂ ವೀಲರ್ ಖರೀದಿಸಿದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಒಳಗೊಳ್ಳುವುದೇನೆಂದರೆ:
bike accident

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು,

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್ ನಲ್ಲಿ ಸೇರ್ಪಡಿಕೆ ಮತ್ತು ಹೊರಪಡಿಕೆಗಳು

ನಿಮ್ಮ ಮಹೀಂದ್ರಾ ಮೋಟಾರ್‌ಸೈಕಲ್‌ಗೆ ನೀವು ಆಯ್ಕೆ ಮಾಡಿದ ಪಾಲಿಸಿಯ ಪ್ರಕಾರ ಕವರೇಜ್‌ನ ವ್ಯಾಪ್ತಿಯನ್ನು ನಿರ್ಧರಿಸಲಾಗುತ್ತದೆ. ಪಾಲಿಸಿಯು ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ಆಗಿದ್ದರೆ, ಅದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆಗುವ ಹಾನಿಯನ್ನು ಮಾತ್ರ ಕವರ್ ಮಾಡುತ್ತದೆ. ಮತ್ತೊಂದೆಡೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:

Accidents

ಅಪಘಾತಗಳು

ಎಚ್‌ಡಿಎಫ್‌ಸಿ ಎರ್ಗೋ ಅಪಘಾತದಿಂದ ಉಂಟಾದ ಯಾವುದೇ ಹಣಕಾಸು ನಷ್ಟಗಳನ್ನು ಕವರ್ ಮಾಡುವುದರಿಂದ, ಖರ್ಚಿನ ಚಿಂತೆ ಬಿಟ್ಟುಬಿಡಿ.

Fire & Explosion

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟಗಳ ಪರಿಣಾಮವಾಗಿ ನಿಮ್ಮ ಬೈಕ್ ಕಳುವಾದರೆ ಅಥವಾ ಹಾನಿಗೊಳಗಾದರೆ ಅದರ ವೆಚ್ಚವನ್ನು ರಿಯಂಬ್ರಸ್ಮೆಂಟ್ ಮಾಡಲಾಗುತ್ತದೆ.

Theft

ಕಳ್ಳತನ

ನಿಮ್ಮ ಮಹೀಂದ್ರಾ ಬೈಕ್ ಕಳ್ಳತನವಾದರೆ, ನಾವು ಬೈಕ್‌ನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಮೊತ್ತವನ್ನು ನಿಮಗೆ ರಿಯಂಬ್ರಸ್ಮೆಂಟ್ ಮಾಡುತ್ತೇವೆ.

Calamities

ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು

ಪ್ರವಾಹ, ಭೂಕಂಪ, ಬಿರುಗಾಳಿ, ಗಲಭೆ ಮತ್ತು ವಿಧ್ವಂಸಕತೆ - ಇವೆಲ್ಲದರಿಂದ ಆಗುವ ಹಾನಿಯ ವಿರುದ್ಧ ನಿಮ್ಮ ಬೈಕ್‌ಗೆ ಕವರೇಜ್ ನೀಡಲಾಗುತ್ತದೆ.

Personal Accident

ವೈಯಕ್ತಿಕ ಆಕ್ಸಿಡೆಂಟ್

ಅಪಘಾತದ ಸಂದರ್ಭದಲ್ಲಿ, ನಿಮ್ಮ ಮೆಡಿಕಲ್ ಬಿಲ್‌ ಪಾವತಿಸಲು ₹15 ಲಕ್ಷದವರೆಗಿನ ಪರ್ಸನಲ್ ಆಕ್ಸಿಡೆಂಟ್ ಕವರ್ ನೀಡಲಾಗುತ್ತದೆ.

Third Party Liability

ಥರ್ಡ್ ಪಾರ್ಟಿ ಹೊಣೆಗಾರಿಕೆ

ನೀವು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಅವರ ಆಸ್ತಿಗೆ ಹಾನಿ ಮಾಡಿದ ಅಥವಾ ಗಾಯಗೊಳಿಸಿದ ಸಂದರ್ಭದಲ್ಲಿ ನಿಮಗಾದ ಹಣಕಾಸು ನಷ್ಟಕ್ಕೆ ನಾವು ಪರಿಹಾರ ಒದಗಿಸುತ್ತೇವೆ.

ಮಹೀಂದ್ರಾ ಟೂ ವೀಲರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸುವುದು ಹೇಗೆ?

ನಿರಂತರ ಕವರೇಜ್ ಖಚಿತಪಡಿಸಿಕೊಳ್ಳಲು ನಿಮ್ಮ ಮಹೀಂದ್ರಾ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಸಮಯಕ್ಕೆ ಸರಿಯಾಗಿ ನವೀಕರಿಸಬೇಕು. ಈಗ ಕೆಲವೇ ಕ್ಲಿಕ್‌ಗಳೊಂದಿಗೆ ನಿಮ್ಮ ಮನೆಯಿಂದಲೇ ನಿಮ್ಮ ಪಾಲಿಸಿಯನ್ನು ನವೀಕರಿಸಬಹುದು. ನಿಮ್ಮ ಬೈಕನ್ನು ಕೆಲವೇ ನಿಮಿಷಗಳಲ್ಲಿ ಸುರಕ್ಷಿತವಾಗಿಸಲು ಈ ಕೆಳಗೆ ವಿವರಿಸಲಾದ ನಾಲ್ಕು ಹಂತದ ತಂತ್ರವನ್ನು ಅನುಸರಿಸಿ!

  • Step #1
    ಹಂತ #1
    ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ ಅಕೌಂಟ್‌ಗೆ ಲಾಗಿನ್ ಆಗಿ, ನಿಮ್ಮ ಲಾಗಿನ್ ಕ್ರೆಡೆನ್ಶಿಯಲ್‌ಗಳನ್ನು ನಮೂದಿಸಿ
  • Step #2
    ಹಂತ #2
    'ಬೈಕ್ ಇನ್ಶೂರೆನ್ಸ್ ಅಪ್ಡೇಟ್ ಮಾಡಿ' ಬಟನ್ ಕ್ಲಿಕ್ಕಿಸಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
  • Step #3
    ಹಂತ #3
    ಪಾವತಿ ಮಾಡಿ
  • Step #4
    ಹಂತ #4
    ಇಮೇಲ್ ದೃಢೀಕರಣ ಪಡೆಯಿರಿ

ಎಚ್‌ಡಿಎಫ್‌ಸಿ ಎರ್ಗೋ ಏಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು?

ಭಾರತದಲ್ಲಿ, ಎಚ್‌ಡಿಎಫ್‌ಸಿ ಎರ್ಗೋ ಟೂ ವೀಲರ್ ಇನ್ಶೂರೆನ್ಸ್ ನ ಪ್ರಮುಖ ಪೂರೈಕೆದಾರರಲ್ಲಿ ಒಂದಾಗಿದೆ. ಮಹೀಂದ್ರಾ ಬೈಕ್ ಇನ್ಶೂರೆನ್ಸ್ ನೀಡುವ ಬಹಳಷ್ಟು ಸಂಸ್ಥೆಗಳು ಮಾರುಕಟ್ಟೆಯಲ್ಲಿವೆ. ಆದರೆ ನಾವು ಒದಗಿಸುವ ಫೀಚರ್‌ಗಳು ಮತ್ತು ಪ್ರಯೋಜನಗಳಿಗೆ ಕೆಲವರು ಮಾತ್ರವೇ ಸರಿಸಾಟಿ ಆಗಬಲ್ಲರು. ಬೈಕ್ ಇನ್ಶೂರೆನ್ಸ್ ವಿಷಯಕ್ಕೆ ಬಂದಾಗ, ಎಚ್‌ಡಿಎಫ್‌ಸಿ ಎರ್ಗೋ ಇತರ ಕಂಪನಿಗಳಿಗಿಂತ ಯಾವಾಗಲೂ ಒಂದು ಹೆಜ್ಜೆ ಮುಂದಿರುತ್ತದೆ. AI ಮತ್ತು ಆ್ಯಪ್‌-ಆಧಾರಿತ ಕ್ಲೈಮ್‌ಗಳು, ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್, ತುರ್ತು ರಸ್ತೆಬದಿಯ ನೆರವು ಮತ್ತು ಎಂಜಿನ್ ಪ್ರೊಟೆಕ್ಟರ್ ಕವರ್‌ನಂತಹ ನಿರ್ದಿಷ್ಟ ಆ್ಯಡ್-ಆನ್‌ಗಳು, ನಮ್ಮ ಕೆಲವು ವೈಶಿಷ್ಟ್ಯಗಳು. ನಮ್ಮ ಇನ್ಶೂರೆನ್ಸ್ ಆಯ್ಕೆ ಮಾಡಲು ಇನ್ನೂ ಕೆಲವು ಕಾರಣಗಳು ಇಲ್ಲಿವೆ:

24x7 Roadside Assistance

24x7 ರಸ್ತೆಬದಿಯ ನೆರವು

ಬ್ರೇಕ್‌ಡೌನ್ ಸಂದರ್ಭದಲ್ಲಿ, ನಮಗೆ ಒಂದು ಸಲ ಫೋನ್ ಮಾಡಿದರೆ ಸಾಕು. ನೀವು ಎಲ್ಲಿಯೇ ತೊಂದರೆಗೆ ಸಿಲುಕಿದ್ದರೂ, ನಮ್ಮ 24-ಗಂಟೆಗಳ ರಸ್ತೆಬದಿಯ ನೆರವು, ರಿಪೇರಿ ಕುರಿತ ಚಿಂತೆಗಳನ್ನು ದೂರ ಮಾಡುತ್ತದೆ.

Third-Party Liability Cover

ಸುಲಭ ಕ್ಲೈಮ್‌ಗಳು

ಎಚ್‌ಡಿಎಫ್‌ಸಿ ಎರ್ಗೋದ ಕ್ಲೈಮ್ ನೀತಿ ಅತ್ಯಂತ ಸರಳ ಮತ್ತು ಸುಲಭವಾಗಿದೆ. ಗ್ರಾಹಕರು ಸಲ್ಲಿಸುವ ಸುಮಾರು 50% ಕ್ಲೈಮ್‌ಗಳನ್ನು ನಾವು ಅದೇ ದಿನವೇ ಪ್ರಕ್ರಿಯೆಗೊಳಿಸುತ್ತೇವೆ. ನಾವು ಕಾಗದರಹಿತ ಕ್ಲೈಮ್‌ಗಳ ಆಯ್ಕೆ ಮತ್ತು ಸ್ವಯಂ-ತಪಾಸಣೆ ಆಯ್ಕೆಯನ್ನು ಕೂಡ ಹೊಂದಿದ್ದೇವೆ.

Overnight repair service

ತಡರಾತ್ರಿಯ ರಿಪೇರಿ ಸೇವೆ

ನಮ್ಮ ಓವರ್‌ನೈಟ್ ರಿಪೇರಿ ಸೇವೆಯೊಂದಿಗೆ, ಸಣ್ಣಪುಟ್ಟ ಹಾನಿಗಳ ಸಂದರ್ಭದಲ್ಲಿ ನಿಮ್ಮ ಬೈಕ್ ರಿಪೇರಿ ಮಾಡಿಸಲು ಬೆಳಗಾಗುವ ತನಕ ಕಾಯಬೇಕಾಗಿಲ್ಲ. ರಾತ್ರಿಯ ಸವಿನಿದ್ದೆಯನ್ನು ಹಾಳು ಮಾಡಿಕೊಳ್ಳದೇ, ರಾತ್ರೋರಾತ್ರಿ ನಿಮ್ಮ ಬೈಕನ್ನು ರಿಪೇರಿ ಮಾಡಿಸಬಹುದು ಮತ್ತು ಮುಂದಿನ ದಿನ ಬೆಳಗ್ಗೆ ಅದನ್ನು ಉತ್ತಮ ಸ್ಥಿತಿಯಲ್ಲಿ ಪಡೆಯಬಹುದು.

Cashless assistance

ನಗದುರಹಿತ ನೆರವು

ಭಾರತದಾದ್ಯಂತ ಇರುವ ಎಚ್‌ಡಿಎಫ್‌ಸಿ ಎರ್ಗೋದ 2000+ ನೆಟ್ವರ್ಕ್ ಗ್ಯಾರೇಜ್‌ಗಳಿಂದಾಗಿ, ನಿಮ್ಮ ಬೈಕ್ ರಿಪೇರಿ ಮಾಡಿಸಲು ನಿಮ್ಮ ಸುತ್ತಮುತ್ತ ಇರುವ ನೆಟ್ವರ್ಕ್ ಗ್ಯಾರೇಜ್‌ಗೆ ಹೋಗಬಹುದು.

2000+<sup>**</sup> Network Garages Across India

ಆಗಾಗ ಕೇಳುವ ಪ್ರಶ್ನೆಗಳು


ಕಾನೂನುಬದ್ಧತೆ ವಿಷಯದಲ್ಲಿ ನಿಮಗೆ ಹಸಿರು ನಿಶಾನೆ ಇದ್ದರೂ, ನಿಮ್ಮ TVS ಜ್ಯುಪಿಟರ್‌ಗೆ ಸ್ವಂತ ಹಾನಿಯ ಕವರ್ ಖರೀದಿಸದೇ ಇರುವುದು ಒಳ್ಳೆಯದಲ್ಲ. ಕಳ್ಳತನ, ನೈಸರ್ಗಿಕ ವಿಪತ್ತು ಮುಂತಾದವುಗಳಿಂದ ನಿಮ್ಮ ಸ್ಕೂಟರ್‌ಗೆ ಆಗುವ ಆಕಸ್ಮಿಕ ಹಾನಿಯ ವಿರುದ್ಧ ಇನ್ಶೂರೆನ್ಸ್ ಬೇಕಿದ್ದರೆ, ನೀವು ಸ್ವಂತ ಹಾನಿಯ ಕವರೇಜ್ ಆಯ್ಕೆ ಮಾಡಬೇಕು. ನಿಮ್ಮ ಬಳಿ ಥರ್ಡ್ ಪಾರ್ಟಿ ಕವರೇಜ್‌ ಮಾತ್ರವೇ ಇದ್ದರೆ, ಸ್ವಂತ ಹಾನಿಯ ಕವರೇಜ್ ಅನ್ನು ನವೀಕರಿಸುವುದು ಒಳ್ಳೆಯದು.
ಯಾವ ಸಹಾಯವೂ ದೊರೆಯದ ಅಜ್ಞಾತ ಸ್ಥಳವೊಂದರಲ್ಲಿ ಬೈಕ್ ಕೆಟ್ಟು ನಿಂತಾಗ ನಿಮಗೆ ಸಹಾಯ ಮಾಡಲು ತುರ್ತು ರಸ್ತೆಬದಿ ನೆರವನ್ನು ವಿನ್ಯಾಸಗೊಳಿಸಲಾಗಿದೆ. ಈ ಕೆಳಗಿನ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ: ನೀವು ದಿನವಿಡೀ ಕೆಲಸ ಮಾಡಿ ಸುಸ್ತಾಗಿ, ಬೈಕ್ ಮೇಲೆ ಆಫೀಸ್‌ನಿಂದ ಮನೆಗೆ ಹೋಗುತ್ತಿದ್ದೀರಿ. ನಿಮ್ಮ ಟೈರ್ ಹಠಾತ್ತಾಗಿ ಢಂ ಎನ್ನುತ್ತದೆ. ನಿಮ್ಮ ಸುತ್ತಮುತ್ತ ಯಾವುದೇ ಪಂಕ್ಚರ್ ಅಂಗಡಿ ಅಥವಾ ಗ್ಯಾರೇಜ್ ಇಲ್ಲ. ಎಂತಹ ಅಸಹಾಯಕ ಪರಿಸ್ಥಿತಿ ಅಲ್ಲವೇ?! ಹಾಗಾಗಿಯೇ, ಇಂತಹ ಪರಿಸ್ಥಿತಿಗಳನ್ನು ಎದುರಿಸಲು ನೀವು ತುರ್ತು ರಸ್ತೆಬದಿ ಸಹಾಯದ ಆ್ಯಡ್-ಆನ್ ಖರೀದಿಸುವುದು ಒಳ್ಳೆಯದು.
ಇದು ಖಂಡಿತವಾಗಿಯೂ ಒಳ್ಳೆಯ ನಿರ್ಧಾರವಲ್ಲ. ನೈಸರ್ಗಿಕ ವಿಪತ್ತುಗಳು ಸಾಮಾನ್ಯವಾಗಿರುವ ಜಾಗದಲ್ಲಂತೂ ಹೀಗೆಲ್ಲಾ ಮಾಡಲೇಬಾರದು. ಅಪಘಾತದ ಸಂದರ್ಭದಲ್ಲಿ, ಥರ್ಡ್ ಪಾರ್ಟಿ ಕವರೇಜ್ ಬೇರೆ ವ್ಯಕ್ತಿಗಳನ್ನು ಮಾತ್ರ ರಕ್ಷಿಸುತ್ತದೆ. ನಿಮ್ಮ ಮಹೀಂದ್ರಾ ಬೈಕ್ ಅಥವಾ ಸ್ಕೂಟರ್ ಅನ್ನು ರಕ್ಷಿಸುವ ವಿಷಯಕ್ಕೆ ಬಂದಾಗ, ನೀವು ಯಾವಾಗಲೂ ಸಂಪೂರ್ಣ ಕವರೇಜ್ ಪಡೆಯಬೇಕು.