Knowledge Centre
Customise as per your need
ಕಸ್ಟಮೈಜ್ ಮಾಡಿ

as per your need

Zero deductibles
ಶೂನ್ಯ

7. ಕಡಿತಗಳು

Extend
                            Cover to family
ವಿಸ್ತರಿಸಿ

ಕುಟುಂಬಕ್ಕೆ ಕವರ್

 Multiple Devices Covered
ಅನೇಕ

ಕವರ್ ಮಾಡಲಾದ ಡಿವೈಸ್‌ಗಳು

ಹೋಮ್ / ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಚೆಟ್ ಇನ್ಶೂರೆನ್ಸ್

ಭಾರತದಲ್ಲಿ ಸೈಬರ್ ಇನ್ಶೂರೆನ್ಸ್

Cyber Insurance

ಸೈಬರ್-ದಾಳಿಗಳು ಮತ್ತು ಆನ್ಲೈನ್ ವಂಚನೆಗಳ ವಿರುದ್ಧ ಸೈಬರ್ ಇನ್ಶೂರೆನ್ಸ್ ವ್ಯಕ್ತಿಗಳಿಗೆ ಸುರಕ್ಷತಾ ಕವಚವನ್ನು ಒದಗಿಸುತ್ತದೆ. ಇಂದಿನ ಡಿಜಿಟಲ್ ಲ್ಯಾಂಡ್‌ಸ್ಕೇಪ್‌ನಲ್ಲಿ, ವ್ಯಕ್ತಿಗಳು ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸಬಹುದಾದ ಮತ್ತು ಗಮನಾರ್ಹ ಹಣಕಾಸಿನ ನಷ್ಟಗಳನ್ನು ಉಂಟುಮಾಡಬಹುದಾದ ಸೈಬರ್ ದಾಳಿಗಳ ಅಪಾಯವನ್ನು ಎದುರಿಸುತ್ತಾರೆ. ಸೈಬರ್ ಇನ್ಶೂರೆನ್ಸ್ ಪ್ರಮುಖ ಸುರಕ್ಷತೆಯಾಗಿ ಹೊರಹೊಮ್ಮಿದೆ, ಡೇಟಾ ಉಲ್ಲಂಘನೆಗಳು, ಸೈಬರ್ ಸುಲಿಗೆ ಮತ್ತು ಬಿಸಿನೆಸ್ ಅಡಚಣೆಗಳನ್ನು ಒಳಗೊಂಡಂತೆ ವಿವಿಧ ಸೈಬರ್ ಅಪಾಯಗಳ ವಿರುದ್ಧ ಸಮಗ್ರ ಕವರೇಜನ್ನು ಒದಗಿಸುತ್ತದೆ.

ಬೇರೆ ಬೇರೆ ವ್ಯಕ್ತಿಗಳ ವಿಶಿಷ್ಟ ಅಗತ್ಯಗಳನ್ನು ಪೂರೈಸಲು, ಬಲವಾದ ರಕ್ಷಣೆ ಮತ್ತು ನೆಮ್ಮದಿಯನ್ನು ಖಚಿತಪಡಿಸಿಕೊಳ್ಳಲು ನಾವು ಅನುಗುಣವಾದ ಪಾಲಿಸಿಗಳನ್ನು ಒದಗಿಸುತ್ತೇವೆ. ಸಂಭಾವ್ಯ ಸೈಬರ್ ಅಪಾಯಗಳ ತಗ್ಗಿಸಲು ಸರಿಯಾದ ಸೈಬರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಮುಖ್ಯವಾಗಿದೆ. ನಮ್ಮ ಕಸ್ಟಮೈಜ್ ಮಾಡಬಹುದಾದ ಪರಿಹಾರಗಳು ಹೆಚ್ಚುತ್ತಿರುವ ಪರಸ್ಪರ ಸಂಪರ್ಕಿತ ಜಗತ್ತಿನಲ್ಲಿ ಸೈಬರ್ ಘಟನೆಗಳಿಂದ ಉಂಟಾಗುವ ಬಹುಮುಖ ಸವಾಲುಗಳನ್ನು ಪರಿಹರಿಸುತ್ತವೆ, ನಿಮ್ಮ ಸ್ವತ್ತುಗಳನ್ನು ರಕ್ಷಿಸುತ್ತವೆ ಮತ್ತು ಸೈಬರ್ ಸುರಕ್ಷತೆಯನ್ನು ನಿರ್ವಹಿಸುತ್ತವೆ.

ನಿಮಗೆ ಸೈಬರ್ ಇನ್ಶೂರೆನ್ಸ್ ಏಕೆ ಬೇಕು?

Why Do You Need Cyber Sachet Insurance?

ನಾವು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ನಾವು ಇಂಟರ್ನೆಟ್ ಇಲ್ಲದೆ ನಮ್ಮ ಒಂದು ದಿನವನ್ನೂ ಕಲ್ಪಿಸಲು ಸಾಧ್ಯವಿಲ್ಲ. ವಿಶೇಷವಾಗಿ ಕೊರೋನಾವೈರಸ್ ಸಾಂಕ್ರಮಿಕದೊಂದಿಗೆ, ನಾವು ದಿನನಿತ್ಯದ ಚಟುವಟಿಕೆಗಳಿಗಾಗಿ ವರ್ಚುವಲ್ ಪ್ಲಾಟ್‌ಫಾರ್ಮ್‌ಗಳನ್ನು ಅವಲಂಬಿಸುತ್ತೇವೆ. ಆದಾಗ್ಯೂ, ಇಂಟರ್ನೆಟ್‌ನ ವ್ಯಾಪಕ ಬಳಕೆಯೊಂದಿಗೆ, ಯಾವುದೇ ರೀತಿಯ ಸೈಬರ್-ದಾಳಿಗಳಿಂದ ನಿಮ್ಮ ಡೇಟಾವನ್ನು ರಕ್ಷಿಸುವ ಅಗತ್ಯವಿದೆ.

ಇಂದಿನ ದಿನಗಳಲ್ಲಿ, ಡಿಜಿಟಲ್ ಪಾವತಿಗಳು ಎಲ್ಲಾ ಸಮಯದಲ್ಲೂ ಹೆಚ್ಚಾಗಿರುತ್ತವೆ, ಆದರೆ ಸಂಶಯಾಸ್ಪದ ಆನ್‌ಲೈನ್ ಮಾರಾಟಗಳು ಮತ್ತು ಮೋಸದ ಟ್ರಾನ್ಸಾಕ್ಷನ್‌ಗಳು ಕೂಡ ಹಾಗೆಯೇ ಅಧಿಕವಾಗಿವೆ. ಸೈಬರ್ ಇನ್ಶೂರೆನ್ಸ್‌ನಿಂದ ಆನ್ಲೈನಿನಲ್ಲಿ ನಿಮ್ಮ ನಷ್ಟಗಳನ್ನು ರಕ್ಷಿಸಬಹುದು ಮತ್ತು ಏನಾದರೂ ತಪ್ಪಾಗಿದ್ದರೆ ನೀವು ಸುರಕ್ಷಿತರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಸೈಬರ್ ಬೆದರಿಕೆಗಳಿಂದಾಗಿ ಹಣಕಾಸಿನ ನಷ್ಟಗಳ ನಿರಂತರ ಚಿಂತೆಯಿಲ್ಲದೆ ನಿಮ್ಮ ಆನ್ಲೈನ್ ಚಟುವಟಿಕೆಗಳನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ. ಆನ್ಲೈನಿನಲ್ಲಿ ಸರ್ಫಿಂಗ್ ಮಾಡುವಾಗ, ನಿಮ್ಮ ಚಟುವಟಿಕೆಯ ಸ್ವರೂಪವನ್ನು ಅವಲಂಬಿಸಿ ನೀವು ವಿವಿಧ ರೀತಿಯ ಅಪಾಯಗಳಿಗೆ ಒಡ್ಡಿಕೊಳ್ಳುತ್ತೀರಿ. ಆದ್ದರಿಂದ, ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಚೆಟ್ ಇನ್ಶೂರೆನ್ಸ್ ಅನ್ನು ವಿನ್ಯಾಸಗೊಳಿಸಿದೆ, ಇದನ್ನು ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ಸಂಪೂರ್ಣವಾಗಿ ಕಸ್ಟಮೈಜ್ ಮಾಡಬಹುದು ಮತ್ತು ಇದರಿಂದಾಗಿ ಯಾವುದೇ ಒತ್ತಡ ಅಥವಾ ಚಿಂತೆಯಿಲ್ಲದೆ ಡಿಜಿಟಲ್ ಆಗಿ ಕಾರ್ಯನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.

ಎಲ್ಲರಿಗೂ ಸೈಬರ್ ಇನ್ಶೂರೆನ್ಸ್

slider-right
Student Plan

ವಿದ್ಯಾರ್ಥಿಗಾಗಿ ಸೈಬರ್ ಇನ್ಶೂರೆನ್ಸ್ ಪ್ಲಾನ್

ವಿಶ್ವವಿದ್ಯಾಲಯ/ಕಾಲೇಜು ವಿದ್ಯಾರ್ಥಿಗಳು ನಿರಂತರವಾಗಿ ಆನ್ಲೈನ್ ಆಗಿದ್ದಾರೆ. ಸೋಶಿಯಲ್ ಮೀಡಿಯಾ, ಆನ್ಲೈನ್ ಟ್ರಾನ್ಸಾಕ್ಷನ್‌ಗಳು ಅಥವಾ ಫೈಲ್ ಟ್ರಾನ್ಸ್‌ಫರ್‌ಗಳಾಗಿರಲಿ. ನಮ್ಮ ಕಸ್ಟಮೈಜ್ ಮಾಡಿದ ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಶೆಟ್ ಇನ್ಶೂರೆನ್ಸ್ ಪ್ಲಾನಿನೊಂದಿಗೆ ವಂಚನೆಯ ಆನ್ಲೈನ್ ಟ್ರಾನ್ಸಾಕ್ಷನ್‌ಗಳು, ಸೈಬರ್ ಬೆದರಿಕೆ ಮತ್ತು ಸಾಮಾಜಿಕ ಮಾಧ್ಯಮ ಹೊಣೆಗಾರಿಕೆಯಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ.

ಪ್ಲಾನ್ ಖರೀದಿಸಿ ಇನ್ನಷ್ಟು ತಿಳಿಯಿರಿ
Family Plan

ಕುಟುಂಬಕ್ಕಾಗಿ ಸೈಬರ್ ಇನ್ಶೂರೆನ್ಸ್ ಪ್ಲಾನ್

ಅನಿರೀಕ್ಷಿತ ಮತ್ತು ದುಬಾರಿಯಾಗಿರಬಹುದಾದ ಸೈಬರ್ ಅಪಾಯಗಳ ಶ್ರೇಣಿಯಿಂದ ನಿಮ್ಮ ಕುಟುಂಬಕ್ಕೆ ಸಮಗ್ರ ಕವರೇಜನ್ನು ಆಯ್ಕೆ ಮಾಡಿ. ನಮ್ಮ ಕಸ್ಟಮೈಜ್ ಮಾಡಿದ ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಶೆಟ್ ಇನ್ಶೂರೆನ್ಸ್ ಪ್ಲಾನಿನೊಂದಿಗೆ ವಂಚನೆಯ ಆನ್ಲೈನ್ ಟ್ರಾನ್ಸಾಕ್ಷನ್‌ಗಳು, ಗುರುತಿನ ಕಳ್ಳತನ, ನಿಮ್ಮ ಸಾಧನಗಳು ಮತ್ತು ಮತ್ತು ಸ್ಮಾರ್ಟ್ ಹೋಮ್‌ ಮೇಲೆ ಮಾಲ್‌ವೇರ್ ದಾಳಿಗಳಿಂದ ರಕ್ಷಣೆ ಪಡೆಯಿರಿ

ಪ್ಲಾನ್ ಖರೀದಿಸಿ ಇನ್ನಷ್ಟು ತಿಳಿಯಿರಿ
Working Professional Plan

ವರ್ಕಿಂಗ್ ಪ್ರೊಫೆಶನಲ್‌ಗಾಗಿ ಸೈಬರ್ ಇನ್ಶೂರೆನ್ಸ್ ಪ್ಲಾನ್

ಕೆಲಸ ಮಾಡುತ್ತಿರುವ ವೃತ್ತಿಪರರಾಗಿ, ನೀವು ಎಂದೆಂದಿಗೂ ವರ್ಧಿತ ಸೈಬರ್ ರಕ್ಷಣೆಯ ಅಗತ್ಯಗಳನ್ನು ಹೊಂದಿದ್ದೀರಿ. ನಮ್ಮ ಕಸ್ಟಮೈಜ್ ಮಾಡಿದ ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಶೆಟ್ ಇನ್ಶೂರೆನ್ಸ್ ಪ್ಲಾನಿನೊಂದಿಗೆ ವಂಚನೆಯ ಆನ್ಲೈನ್ ಟ್ರಾನ್ಸಾಕ್ಷನ್‌ಗಳು, ಗುರುತಿನ ಕಳ್ಳತನ, ನಿಮ್ಮ ಡಿವೈಸ್‌ಗಳ ಮೇಲೆ ಮಾಲ್‌ವೇರ್ ದಾಳಿಗಳಿಂದ ನಾವು ನಿಮ್ಮನ್ನು ರಕ್ಷಿಸುತ್ತೇವೆ

ಪ್ಲಾನ್ ಖರೀದಿಸಿ ಇನ್ನಷ್ಟು ತಿಳಿಯಿರಿ
Entrepreneur Plan

ಉದ್ಯಮಿಗಳಿಗೆ ಸೈಬರ್ ಇನ್ಶೂರೆನ್ಸ್ ಪ್ಲಾನ್

ಉದಯೋನ್ಮುಖ ಉದ್ಯಮಿಯಾಗಿ, ಹೆಚ್ಚುತ್ತಿರುವ ಸೈಬರ್ ಅಪಾಯಗಳ ವಿರುದ್ಧ ನೀವು ಒಟ್ಟು ರಕ್ಷಣೆಯನ್ನು ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಮ್ಮ ಕಸ್ಟಮೈಜ್ ಮಾಡಿದ ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಶೆಟ್ ಇನ್ಶೂರೆನ್ಸ್ ಪ್ಲಾನಿನೊಂದಿಗೆ ವಂಚನೆಯ ಆನ್ಲೈನ್ ಟ್ರಾನ್ಸಾಕ್ಷನ್‌ಗಳು, ಗುರುತಿನ ಕಳ್ಳತನ, ಗೌಪ್ಯತೆಯ ಉಲ್ಲಂಘನೆ ಮತ್ತು ಇನ್ನೂ ಹೆಚ್ಚಿನವುಗಳಿಂದ ರಕ್ಷಣೆ ಪಡೆಯಿರಿ

ಪ್ಲಾನ್ ಖರೀದಿಸಿ ಇನ್ನಷ್ಟು ತಿಳಿಯಿರಿ
Shopaholic Plan

ಶಾಪ್‌ಹಾಲಿಕ್‌ಗಾಗಿ ಸೈಬರ್ ಇನ್ಶೂರೆನ್ಸ್ ಪ್ಲಾನ್

ತಮ್ಮ ಸಮಯವನ್ನು ಆನ್ಲೈನ್ ಶಾಪಿಂಗ್‌ನಲ್ಲಿ ಖರ್ಚು ಮಾಡುವ ಶಾಪ್‌ಹಾಲಿಕ್‌‌ಗಳಿಗೆ ಸೈಬರ್ ರಕ್ಷಣೆ ಕಡ್ಡಾಯವಾಗಿದೆ. ನಮ್ಮ ಕಸ್ಟಮೈಜ್ ಮಾಡಿದ ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಚೆಟ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ವಂಚನೆಯ ಆನ್ಲೈನ್ ಟ್ರಾನ್ಸಾಕ್ಷನ್‌ಗಳು, ನಕಲಿ ವೆಬ್‌ಸೈಟ್‌ಗಳಿಂದ ಖರೀದಿಗಳು ಮತ್ತು ಸೋಶಿಯಲ್ ಮೀಡಿಯಾ ಹೊಣೆಗಾರಿಕೆಯಿಂದ ರಕ್ಷಣೆ ಪಡೆಯಿರಿ

ಪ್ಲಾನ್ ಖರೀದಿಸಿ ಇನ್ನಷ್ಟು ತಿಳಿಯಿರಿ
Make Your Own Plan

ನಿಮ್ಮ ಸ್ವಂತ ಸೈಬರ್ ಇನ್ಶೂರೆನ್ಸ್ ಪ್ಲಾನ್ ಮಾಡಿ

ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಶೆಟ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ನಿಮ್ಮ ಕಸ್ಟಮೈಜ್ ಮಾಡಿದ ಸೈಬರ್ ಪ್ಲಾನ್ ಮಾಡುವ ಸ್ವಾತಂತ್ರ್ಯವನ್ನು ಕೂಡ ನೀವು ಹೊಂದಿದ್ದೀರಿ, ಅಲ್ಲಿ ನೀವು ನಿಮ್ಮ ಆಯ್ಕೆಯ ಕವರ್ ಅನ್ನು ಆರಿಸಬಹುದು ಮತ್ತು ನಿಮ್ಮ ಇಚ್ಛೆಯ ಪ್ರಕಾರ ವಿಮಾ ಮೊತ್ತವನ್ನು ಆಯ್ಕೆ ಮಾಡಬಹುದು. ಹೆಚ್ಚುವರಿಯಾಗಿ, ನಿಮ್ಮ ಕುಟುಂಬಕ್ಕೆ ಕವರ್ ಅನ್ನು ವಿಸ್ತರಿಸುವ ಆಯ್ಕೆ ಕೂಡ ಇದೆ.

ಪ್ಲಾನ್ ಖರೀದಿಸಿ ಇನ್ನಷ್ಟು ತಿಳಿಯಿರಿ
slider-left

ನಮ್ಮ ಸೈಬರ್ ಇನ್ಶೂರೆನ್ಸ್ ನೀಡುವ ಕವರೇಜ್ ಬಗ್ಗೆ ತಿಳಿಯಿರಿ

Theft of Funds - Unauthorized Digital Transactions

ಫಂಡ್‌ಗಳ ಕಳ್ಳತನ - ಅನಧಿಕೃತ ಡಿಜಿಟಲ್ ಟ್ರಾನ್ಸಾಕ್ಷನ್‌ಗಳು

ಅನಧಿಕೃತ ಅಕ್ಸೆಸ್, ಫಿಶಿಂಗ್, ಸ್ಪೂಫಿಂಗ್‌ನಂತಹ ಆನ್ಲೈನ್ ವಂಚನೆಗಳಿಂದ ಉಂಟಾಗುವ ನಿಮ್ಮ ಬ್ಯಾಂಕ್ ಅಕೌಂಟ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಡಿಜಿಟಲ್ ವಾಲೆಟ್‌ಗಳಲ್ಲಿ ಉಂಟಾಗುವ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ. ಇದು ನಮ್ಮ ಬೇಸ್ ಆಫರ್ ಆಗಿದೆ (ಕನಿಷ್ಠ ಅಗತ್ಯ ಕವರೇಜ್). ಪರ್ಯಾಯದೊಂದಿಗೆ ಹೋಲಿಕೆ ಮಾಡಿ

Identity Theft

ಐಡೆಂಟಿಟಿ ಕಳ್ಳತನ

ಬಲಿಯಾಗಿ ಪರಿಣಾಮ ಬೀರಿದವರಿಗೆ ಮಾನಸಿಕ ಸಮಾಲೋಚನೆ ವೆಚ್ಚಗಳೊಂದಿಗೆ ಥರ್ಡ್ ಪಾರ್ಟಿಯಿಂದ ಇಂಟರ್ನೆಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯ ದುರುಪಯೋಗದಿಂದ ಉಂಟಾಗುವ ಹಣಕಾಸಿನ ನಷ್ಟಗಳು, ಕ್ರೆಡಿಟ್ ಮೇಲ್ವಿಚಾರಣೆ ವೆಚ್ಚಗಳು, ಕಾನೂನು ಪ್ರಾಸಿಕ್ಯೂಶನ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ

Data Restoration/ Malware Decontamination

ಡೇಟಾ ಮರುಸ್ಥಾಪನೆ/ ಮಾಲ್‌ವೇರ್ ಸ್ವಚ್ಛಗೊಳಿಸುವುದು

ನಿಮ್ಮ ಸೈಬರ್ ಸ್ಥಳದಲ್ಲಿ ಮಾಲ್‌ವೇರ್ ದಾಳಿಗಳಿಂದ ಉಂಟಾದ ನಿಮ್ಮ ಕಳೆದುಹೋದ ಅಥವಾ ದೋಷಪೂರಿತವಾದ ಡೇಟಾವನ್ನು ಸ್ವಸ್ಥಿತಿಗೆ ತರಲು ಒಳಗೊಂಡಿರುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

Replacement of Hardware

ಹಾರ್ಡ್‌ವೇರ್ ಬದಲಾವಣೆ

ಮಾಲ್‌ವೇರ್ ದಾಳಿಯಿಂದಾಗಿ ಪರಿಣಾಮ ಬೀರುವ ನಿಮ್ಮ ವೈಯಕ್ತಿಕ ಸಾಧನ ಅಥವಾ ಅದರ ಘಟಕಗಳನ್ನು ಬದಲಾಯಿಸುವಲ್ಲಿ ಒಳಗೊಂಡಿರುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

Cyber Bullying, Cyber Stalking and Loss of Reputation

ಸೈಬರ್ ಬೆದರಿಕೆ, ಸೈಬರ್ ಸ್ಟಾಕಿಂಗ್ ಮತ್ತು ಗೌರವದ ನಷ್ಟ

ನಾವು ಕಾನೂನು ವೆಚ್ಚಗಳು, ಸೈಬರ್-ಬುಲ್ಲಿಗಳು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವ ವೆಚ್ಚ ಮತ್ತು ಬಾಧಿತರಿಗೆ ಮಾನಸಿಕ ಸಮಾಲೋಚನೆ ವೆಚ್ಚಗಳನ್ನು ಕವರ್ ಮಾಡುತ್ತೇವೆ

Online Shopping

ಆನ್‌ಲೈನ್‌ ಶಾಪಿಂಗ್

ವಂಚನಾತ್ಮಕ ವೆಬ್‌ಸೈಟ್‌ನಲ್ಲಿ ಆನ್ಲೈನ್ ಶಾಪಿಂಗ್ ಕಾರಣದಿಂದಾಗಿ,ನೀವು ಆನ್ಲೈನಿನಲ್ಲಿ ಪೂರ್ಣ ಪಾವತಿ ಮಾಡಿದ ನಂತರವೂ ಪ್ರಾಡಕ್ಟ್ ಅನ್ನು ಪಡೆಯದೇ ಉಂಟಾದ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ

Online Sales

ಆನ್ಲೈನ್ ಸೇಲ್ಸ್

ನಾವು, ಪಾವತಿ ನೀಡದೆ ಮತ್ತು ಅದೇ ಸಮಯದಲ್ಲಿ ಉತ್ಪನ್ನವನ್ನು ಹಿಂದಿರುಗಿಸಲು ನಿರಾಕರಿಸುವ ಮೋಸದ ಖರೀದಿದಾರರಿಗೆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಉಂಟಾದ ಹಣಕಾಸಿನ ನಷ್ಟವನ್ನು ಕವರ್ ಮಾಡುತ್ತೇವೆ.

Social Media and Media Liability

ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಹೊಣೆಗಾರಿಕೆ

ಒಂದು ವೇಳೆ ನಿಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗೌಪ್ಯತಾ ಉಲ್ಲಂಘನೆ ಅಥವಾ ಕೃತಿಸ್ವಾಮ್ಯತೆ ಉಲ್ಲಂಘನೆಗಳನ್ನು ಮಾಡಿದರೆ, ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

Network Security Liability

ನೆಟ್ವರ್ಕ್ ಸೆಕ್ಯೂರಿಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ, ಒಂದು ವೇಳೆ ಅದೇ ನೆಟ್ವರ್ಕ್‌ನಲ್ಲಿ ಕನೆಕ್ಟ್ ಆದ ನಿಮ್ಮ ಮೂಲ ಡಿವೈಸ್ ಮಾಲ್ವೇರ್ ಸೋಂಕಿತವಾಗಿದ್ದರೆ

Privacy Breach and Data Breach Liability

ಗೌಪ್ಯತೆ ಉಲ್ಲಂಘನೆ ಮತ್ತು ಡೇಟಾ ಉಲ್ಲಂಘನೆ ಹೊಣೆಗಾರಿಕೆ

ನಿಮ್ಮ ಡಿವೈಸ್‌ಗಳು/ಅಕೌಂಟ್‌ಗಳಿಂದ ಗೌಪ್ಯ ಡೇಟಾದ ಅನಿರೀಕ್ಷಿತ ಸೋರಿಕೆಯಿಂದಾಗಿ, ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.

Privacy Breach by a third Party

ಥರ್ಡ್ ಪಾರ್ಟಿಯಿಂದ ಗೌಪ್ಯತಾ ಉಲ್ಲಂಘನೆ

ನಿಮ್ಮ ಗೌಪ್ಯ ಮಾಹಿತಿ ಅಥವಾ ಡೇಟಾ ಸೋರಿಕೆಗೆ ಥರ್ಡ್ ಪಾರ್ಟಿಯ ವಿರುದ್ಧ ಪ್ರಕರಣವನ್ನು ಮುಂದುವರಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ

Smart Home Cover

ಸ್ಮಾರ್ಟ್ ಹೋಮ್ ಕವರ್

ಮಾಲ್‌ವೇರ್ ದಾಳಿಯಿಂದಾಗಿ ಪರಿಣಾಮ ಬೀರುವ ನಿಮ್ಮ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ರಿಸ್ಟೋರ್ ಮಾಡುವ ಅಥವಾ ಸ್ವಚ್ಛಗೊಳಿಸುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ

Liability arising due to Underage Dependent Children

ಅವಲಂಬಿತ ಮಕ್ಕಳಿಂದಾಗಿ ಉಂಟಾಗುವ ಹೊಣೆಗಾರಿಕೆ

ಅಪ್ರಾಪ್ತ ವಯಸ್ಸಿನ ಮಕ್ಕಳ ಸೈಬರ್ ಚಟುವಟಿಕೆಗಳಿಂದಾಗಿ ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ

Theft of Funds - Unauthorized Physical Transactions

ಫಂಡ್‌ಗಳ ಕಳ್ಳತನ - ಅನಧಿಕೃತ ಭೌತಿಕ ಟ್ರಾನ್ಸಾಕ್ಷನ್‌ಗಳು

ಮೋಸದ ATM ವಿತ್‌ಡ್ರಾವಲ್‌ಗಳು, POS ವಂಚನೆಗಳು ಮುಂತಾದ ದೈಹಿಕ ವಂಚನೆಗಳಿಂದ ಉಂಟಾಗುವ ಯಾವುದೇ ನಷ್ಟಗಳನ್ನು ನಿಮ್ಮ ಕ್ರೆಡಿಟ್/ಡೆಬಿಟ್/ಪ್ರಿಪೆಯ್ಡ್ ಕಾರ್ಡ್‌ಗಳಲ್ಲಿ ಕವರ್ ಮಾಡಲಾಗುವುದಿಲ್ಲ

Cyber Extortion

ಸೈಬರ್ ಸುಲಿಗೆ

ಸೈಬರ್ ಸುಲಿಗೆಯನ್ನು ಪರಿಹರಿಸಲು ಪಾವತಿ ಅಥವಾ ಪರಿಹಾರದ ಮೂಲಕ ನಿಮ್ಮಿಂದ ಉಂಟಾದ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ

Coverage to work place

ಕೆಲಸದ ಸ್ಥಳಕ್ಕೆ ಕವರೇಜ್

ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿ ನಿಮ್ಮ ಸಾಮರ್ಥ್ಯದ ಯಾವುದೇ ಚಟುವಟಿಕೆ ಅಥವಾ ಲೋಪದಿಂದಾಗಿ ಉಂಟಾಗುವ ನಷ್ಟವನ್ನು ಮತ್ತು ವೃತ್ತಿಪರ ಅಥವಾ ವ್ಯವಹಾರ ಚಟುವಟಿಕೆಯನ್ನು ಕವರ್ ಮಾಡಲಾಗುವುದಿಲ್ಲ

Coverage for investment activities

ಹೂಡಿಕೆ ಚಟುವಟಿಕೆಗಳಿಗೆ ಕವರೇಜ್

ಸೆಕ್ಯೂರಿಟಿಗಳ ಮಾರಾಟ, ವರ್ಗಾವಣೆ ಅಥವಾ ವಿಲೇವಾರಿ ಮಾಡುವ ಮಿತಿ ಅಥವಾ ಸಾಮರ್ಥ್ಯ ಸೇರಿದಂತೆ ಹೂಡಿಕೆ ಅಥವಾ ಟ್ರೇಡಿಂಗ್ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ

Protection from legal suits from a family member

ಕುಟುಂಬದ ಸದಸ್ಯರಿಂದ ಕಾನೂನು ಮೊಕದ್ದಮೆಗಳಿಂದ ರಕ್ಷಣೆ

any claim arising to defend against legal suits from your family members, any person residing with you is not covered

Cost of upgrading devices

ಡಿವೈಸ್‌ಗಳನ್ನು ಅಪ್ಗ್ರೇಡ್ ಮಾಡುವ ವೆಚ್ಚ

ಇನ್ಶೂರೆನ್ಸ್ ಮಾಡಿದ ಸಂದರ್ಭಕ್ಕೆ ಮುಂಚಿತವಾಗಿ ಅಸ್ತಿತ್ವದಲ್ಲಿರುವ ಸ್ಥಿತಿಗೆ ಹೊರತಾಗಿ ನಿಮ್ಮ ವೈಯಕ್ತಿಕ ಸಾಧನವನ್ನು ಉತ್ತಮಗೊಳಿಸುವ ಯಾವುದೇ ವೆಚ್ಚಗಳನ್ನು ತಪ್ಪಿಸಲಾಗದ ಹೊರತಾಗಿ, ಕವರ್ ಮಾಡಲಾಗುವುದಿಲ್ಲ

losses incurred in crypto-currency

losses incurred in crypto-currency

ಮೇಲೆ ತಿಳಿಸಿದ ಸಂಯೋಜನೆಯಲ್ಲಿ ಬಳಸಲಾಗುತ್ತಿರುವ ಕಾಯಿನ್‌ಗಳು, ಟೋಕನ್‌ಗಳು ಅಥವಾ ಸಾರ್ವಜನಿಕ / ಖಾಸಗಿ ಕೀಗಳನ್ನು ಒಳಗೊಂಡಿರುವ ಕ್ರಿಪ್ಟೋಕರೆನ್ಸಿಗಳೊಂದಿಗೆ ಟ್ರೇಡಿಂಗ್‌ನಲ್ಲಿ ಉಂಟಾಗುವ ಯಾವುದೇ ನಷ್ಟ / ಕಳೆದುಕೊಳ್ಳುವಿಕೆ / ವಿನಾಶ / ಮಾರ್ಪಾಡು / ಲಭ್ಯತೆ / ಅಕ್ಸೆಸ್ ಮಾಡದಿರುವುದು ಮತ್ತು / ಅಥವಾ ವಿಳಂಬ ಕವರ್ ಆಗುವುದಿಲ್ಲ

Use of restricted websites

ನಿರ್ಬಂಧಿತ ವೆಬ್‌ಸೈಟ್‌ಗಳ ಬಳಕೆ

ಇಂಟರ್ನೆಟ್ ಮೂಲಕ ಸಂಬಂಧಿತ ಪ್ರಾಧಿಕಾರವು ನಿಷೇಧಿಸಿದ ಯಾವುದೇ ನಿರ್ಬಂಧಿತ ಅಥವಾ ವೆಬ್‌ಸೈಟ್‌ಗಳನ್ನು ಅಕ್ಸೆಸ್ ಮಾಡುವ ಮೂಲಕ ನಿಮ್ಮಿಂದ ಉಂಟಾದ ಯಾವುದೇ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ

Gambling

ಜೂಜು

ಆನ್‌ಲೈನ್‌ನಲ್ಲಿ ಜೂಜಾಟ ಮತ್ತು ಅಥವಾ ಇನ್ಯಾವುದೇ ರೀತಿಯಲ್ಲಿ, ಕವರ್ ಆಗುವುದಿಲ್ಲ

ಏನನ್ನು ಕವರ್ ಮಾಡಲಾಗಿದೆ/ಕವರ್ ಮಾಡಲಾಗಿಲ್ಲ" ಎಂಬಲ್ಲಿ ನಮೂದಿಸಲಾದ ವಿವರಣೆಗಳು ವಿವರಣಾತ್ಮಕವಾಗಿವೆ ಮತ್ತು ಪಾಲಿಸಿಯ ನಿಯಮಗಳು, ಷರತ್ತುಗಳು ಮತ್ತು ಹೊರಗಿಡುವಿಕೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪಾಲಿಸಿ ಡಾಕ್ಯುಮೆಂಟನ್ನು ನೋಡಿ

ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಇನ್ಶೂರೆನ್ಸ್ ಪಾಲಿಸಿಯ ಪ್ರಮುಖ ಫೀಚರ್‌ಗಳು

ಪ್ರಮುಖ ಫೀಚರ್‌ಗಳು ಪ್ರಯೋಜನಗಳು
ಫಂಡ್‌ಗಳ ಕಳ್ಳತನ ಆನ್ಲೈನ್ ವಂಚನೆಗಳಿಂದ ಉಂಟಾಗುವ ಹಣಕಾಸಿನ ನಷ್ಟಗಳನ್ನು ಕವರ್ ಮಾಡುತ್ತದೆ.
ಶೂನ್ಯ ಕಡಿತಗಳು ಕವರ್ ಮಾಡಲಾದ ಕ್ಲೈಮ್‌ಗೆ ಮುಂದೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ.
ಕವರ್ ಮಾಡಲಾದ ಡಿವೈಸ್‌ಗಳು ಅನೇಕ ಸಾಧನಗಳಿಗೆ ಅಪಾಯವನ್ನು ಕವರ್ ಮಾಡುವ ಸೌಲಭ್ಯ.
ಕೈಗೆಟುಕುವ ಪ್ರೀಮಿಯಂ ಪ್ಲಾನ್ ದಿನಕ್ಕೆ ₹ 2 ರಿಂದ ಆರಂಭ*.
ಐಡೆಂಟಿಟಿ ಕಳ್ಳತನ ಇಂಟರ್ನೆಟ್‌ನಲ್ಲಿ ವೈಯಕ್ತಿಕ ಮಾಹಿತಿಯ ದುರುಪಯೋಗದಿಂದಾಗಿ ಹಣಕಾಸಿನ ನಷ್ಟಕ್ಕೆ ಕವರೇಜ್.
ಪಾಲಿಸಿ ಅವಧಿ 1 ವರ್ಷ
ಇನ್ಶೂರೆನ್ಸ್ ಮಾಡಲಾದ ಮೊತ್ತ ₹10,000 ರಿಂದ ₹5 ಕೋಟಿ
ಹಕ್ಕುತ್ಯಾಗ - ಮೇಲೆ ತಿಳಿಸಿದ ಫೀಚರ್‌ಗಳು ನಮ್ಮ ಕೆಲವು ಸೈಬರ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಲಭ್ಯವಿರುವುದಿಲ್ಲ. ನಮ್ಮ ಸೈಬರ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಬ್ರೋಶರ್ ಮತ್ತು ಪ್ರಾಸ್ಪೆಕ್ಟಸ್ ಓದಿ.

ಆಯ್ಕೆ ಮಾಡಲು ಕಾರಣಗಳು ಎಚ್‌ಡಿಎಫ್‌ಸಿ ಎರ್ಗೋ

Reasons To Choose HDFC ERGO

ನಮ್ಮ ಸೈಬರ್ ಇನ್ಶೂರೆನ್ಸ್ ಪ್ಲಾನ್ ಅನ್ನು ವ್ಯಾಪಕ ಶ್ರೇಣಿಯ ಸೈಬರ್ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕೈಗೆಟಕುವ ಪ್ರೀಮಿಯಂನೊಂದಿಗೆ ವಿನ್ಯಾಸಗೊಳಿಸಲಾಗಿದೆ.

Flexibility to choose your plan
ನಿಮ್ಮ ಸ್ವಂತ ಪ್ಲಾನ್ ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿ
 No deductibles
ಯಾವುದೇ ಕಡಿತಗಳಿಲ್ಲ
Zero sectional sub-limits
ಯಾವುದೇ ಉಪ-ಮಿತಿ ಇಲ್ಲ
Keeps you stress-free
ನಿಮ್ಮ ಎಲ್ಲಾ ಡಿವೈಸ್‌ಗಳಿಗೆ ಕವರೇಜ್ ವಿಸ್ತರಿಸುತ್ತದೆ
 Keeps you stress-free
ನಿಮ್ಮನ್ನು ಒತ್ತಡ-ರಹಿತವಾಗಿರಿಸುತ್ತದೆ
Protection against cyber risks
ಸೈಬರ್ ಅಪಾಯಗಳ ವಿರುದ್ಧ ರಕ್ಷಣೆ

ಸೈಬರ್ ಡಿಫೆನ್ಸ್ ನಲ್ಲಿ ಸೈಬರ್ ಇನ್ಶೂರೆನ್ಸ್ ಪಾತ್ರ

ಸೈಬರ್ ಇನ್ಶೂರೆನ್ಸ್ ಅಪಾಯಗಳನ್ನು ದೂರವಿಡುವ ಮ್ಯಾಜಿಕ್ ಶೀಲ್ಡ್ ಅಲ್ಲ. ಇದನ್ನು ನಿಮ್ಮ ರಕ್ಷಣಾ ಬಲೆಯಂತೆ ಪರಿಗಣಿಸಿ- ವಿಪತ್ತು ಸಂಭವಿಸಿದಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಇದು ಸದೃಢ ಸೈಬರ್‌ಸೆಕ್ಯೂರಿಟಿಗೆ ಬದಲಿಯಾಗಿಲ್ಲ. ಕಂಪನಿಗಳು ಸೈಬರ್ ಇನ್ಶೂರೆನ್ಸ್ ಹೊಂದುವುದು ನಿರ್ಣಾಯಕವಾಗಿದ್ದರೂ, ಸೈಬರ್ ದಾಳಿಯ ನಂತರ ಪರಿಣಾಮವನ್ನು ಕಡಿಮೆ ಮಾಡುವ ಕೆಲಸವನ್ನು ಮಾತ್ರ ಇದು ಮಾಡಬಲ್ಲದು. ಜಾರಿಯಲ್ಲಿರುವ ಭದ್ರತಾ ಕ್ರಮಗಳು ಪೂರಕವಾಗಿದ್ದಾಗ ನಿಮ್ಮ ಇನ್ಶೂರೆನ್ಸ್ ಪಾಲಿಸಿಯು ಉತ್ತಮವಾಗಿ ಕೆಲಸ ಮಾಡುತ್ತದೆ.

ಸೈಬರ್ ಇನ್ಶೂರೆನ್ಸ್ ಪಡೆಯುವಾಗ, ಕವರೇಜ್ ನೀಡುವ ಮೊದಲು ವಿಮಾದಾತರು ನಿಮ್ಮ ಕಂಪನಿಯ ಸೈಬರ್‌ಸೆಕ್ಯೂರಿಟಿ ತಂತ್ರಗಳನ್ನು ಮೌಲ್ಯಮಾಪನ ಮಾಡುತ್ತಾರೆ. ಪ್ರಬಲವಾದ ಭದ್ರತೆಗಾಗಿ ಹೂಡಿಕೆ ಮಾಡುವುದು ಉತ್ತಮ ಅಭ್ಯಾಸವಷ್ಟೇ ಅಲ್ಲ - ಇದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವಂತಿಲ್ಲ. ಅಪಾಯಗಳನ್ನು ನಿರ್ವಹಿಸಲು ಇನ್ಶೂರೆನ್ಸ್ ಸಹಾಯ ಮಾಡುತ್ತದಾದರೂ, ನಿಮ್ಮ ರಕ್ಷಣಾ ತಂತ್ರವು ನಿಜವಾಗಿಯೂ ನಿಮ್ಮನ್ನು ಹಾನಿಯಿಂದ ದೂರವಿಡುತ್ತದೆ.

ಇತ್ತೀಚಿನ ಸೈಬರ್ ಇನ್ಶೂರೆನ್ಸ್ ಸುದ್ದಿಗಳು

slider-right
U.S. court allows Alexa privacy class action to proceed2 ನಿಮಿಷದ ಓದು

ಅಲೆಕ್ಸಾ ಗೌಪ್ಯತೆ ಕ್ಲಾಸ್ ಆ್ಯಕ್ಷನ್ ಸೂಟ್‌ನೊಂದಿಗೆ ಮುಂದುವರಿಯಲು ಅನುಮತಿಸಿದ U.S. ನ್ಯಾಯಾಲಯ

ಸೀಟೆಲ್‌ನ ಫೆಡರಲ್ ನ್ಯಾಯಾಧೀಶರು ಲಕ್ಷಾಂತರ ಅಲೆಕ್ಸಾ ಬಳಕೆದಾರರ ಕ್ಲಾಸ್ ಆ್ಯಕ್ಷನ್ ಸೂಟ್‌ಗೆ ಹಸಿರು ನಿಶಾನೆ ತೋರಿದ್ದಾರೆ, ಅಮೆಜಾನ್ ಒಪ್ಪಿಗೆಯಿಲ್ಲದೆ ಖಾಸಗಿ ಸಂಭಾಷಣೆಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿ ಸಂಗ್ರಹಿಸಿದೆ ಎಂದು ಬಳಕೆದಾರರು ಆರೋಪಿಸಿದ್ದಾರೆ. ವಾದಿಗಳು ಡೇಟಾ ಸಂಗ್ರಹಣೆಯನ್ನು ನಿಲ್ಲಿಸಲು ಮತ್ತು ರೆಕಾರ್ಡಿಂಗ್‌ಗಳನ್ನು ಅಳಿಸಲು ಹಾನಿ ಪರಿಹಾರ ಮತ್ತು ತಡೆಯಾಜ್ಞೆಯನ್ನು ಕೋರಿದ್ದಾರೆ. ಅಮೆಜಾನ್ ತಪ್ಪು ಮಾಡಿರುವುದನ್ನು ನಿರಾಕರಿಸಿದೆ.

ಇನ್ನಷ್ಟು ಓದಿ
ಜುಲೈ 09, 2025 ರಂದು ಪ್ರಕಟಿಸಲಾಗಿದೆ
Nigeria fines MultiChoice ₦766 million over data privacy violations2 ನಿಮಿಷದ ಓದು

ಡೇಟಾ ಗೌಪ್ಯತೆ ಉಲ್ಲಂಘನೆಗಳಿಗೆ ಮಲ್ಟಿಚಾಯ್ಸ್‌ಗೆ ₦766 ಮಿಲಿಯನ್ ದಂಡ ವಿಧಿಸಿದ ನೈಜೀರಿಯಾ

ಚಂದಾದಾರರಲ್ಲದವರ ಡೇಟಾ ಸಂಗ್ರಹಣೆ ಮತ್ತು ಕಾನೂನುಬಾಹಿರ ಕ್ರಾಸ್-ಬಾರ್ಡರ್ ವರ್ಗಾವಣೆ ಸೇರಿದಂತೆ ಡೇಟಾ ಬಳಕೆ ನಿಯಮ ಉಲ್ಲಂಘನೆಗಳಿಗೆ ಮಲ್ಟಿಚಾಯ್ಸ್ ನೈಜೀರಿಯಾ ಕಂಪನಿಗೆ ನೈಜೀರಿಯಾದ ಡೇಟಾ ರಕ್ಷಣಾ ಆಯೋಗವು (NDPC) ₦766,242,500 ದಂಡವನ್ನು ವಿಧಿಸಿದೆ. Q2 2024 ರಲ್ಲಿ ತನಿಖೆಗಳು ಆರಂಭವಾದವು ಮತ್ತು ಸಂಸ್ಥೆಯ ಭದ್ರತಾ ಕ್ರಮಗಳು ಅಸಮರ್ಪಕವೆಂದು ಪರಿಗಣಿಸಲ್ಪಟ್ಟವು. ಆಯೋಗವು ಪ್ರಸ್ತುತ ಎಲ್ಲಾ ಡೇಟಾ-ಸಂಗ್ರಹಣೆ ಔಟ್ಲೆಟ್‌ಗಳ ಆಡಿಟ್ ಮಾಡುತ್ತಿದೆ.

ಇನ್ನಷ್ಟು ಓದಿ
ಜುಲೈ 09, 2025 ರಂದು ಪ್ರಕಟಿಸಲಾಗಿದೆ
Qantas confirms data on over one million customers leaked in major breach2 ನಿಮಿಷದ ಓದು

ಪ್ರಮುಖ ಉಲ್ಲಂಘನೆಯಲ್ಲಿ ಒಂದು ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರ ಡೇಟಾ ಸೋರಿಕೆಯನ್ನು ಖಾಂಟಾಸ್ ಖಚಿತಪಡಿಸಿದೆ

1 ಮಿಲಿಯನ್‌ಗಿಂತ ಹೆಚ್ಚಿನ ಜನರ ಫೋನ್ ನಂಬರ್‌ಗಳು, ಹುಟ್ಟಿದ ದಿನಾಂಕಗಳು ಮತ್ತು ವಿಳಾಸಗಳನ್ನು ಒಳಗೊಂಡ 5.7 ಮಿಲಿಯನ್ ಗ್ರಾಹಕರ ದಾಖಲೆಗಳ ಮೇಲೆ ಪರಿಣಾಮ ಬೀರುವ ಸೈಬರ್ ಭದ್ರತಾ ಉಲ್ಲಂಘನೆಯನ್ನು ಖಾಂಟಾಸ್ ಒಪ್ಪಿಕೊಂಡಿದೆ. ಉಳಿದವರ ಹೆಸರುಗಳು ಮತ್ತು ಇಮೇಲ್‌ಗಳು ಬಹಿರಂಗಗೊಂಡಿದ್ದರೂ, ಯಾವುದೇ ಹಣಕಾಸು, ಪಾಸ್‌ಪೋರ್ಟ್ ಅಥವಾ ಪಾಸ್‌ವರ್ಡ್ ಡೇಟಾವನ್ನು ತೆಗೆದುಕೊಳ್ಳಲಾಗಿಲ್ಲ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ, ಮತ್ತು ಏರ್‌ಲೈನ್ ತನ್ನ ಸೈಬರ್‌ ಸೆಕ್ಯೂರಿಟಿಯನ್ನು ಬಲಪಡಿಸುತ್ತಿದೆ.

ಇನ್ನಷ್ಟು ಓದಿ
ಜುಲೈ 09, 2025 ರಂದು ಪ್ರಕಟಿಸಲಾಗಿದೆ
Agentic AI Sparks Urgent Security Concerns Across Industries2 ನಿಮಿಷದ ಓದು

ಏಜೆಂಟಿಕ್ AI ಉದ್ಯಮಗಳಾದ್ಯಂತ ತುರ್ತು ಭದ್ರತಾ ಕಳಕಳಿಗಳನ್ನು ಹೆಚ್ಚಿಸುತ್ತದೆ

ಹೊಸ ವರದಿಯು ಮಾನವ ಮೇಲ್ವಿಚಾರಣೆ ಇಲ್ಲದೆ ಕಾರ್ಯನಿರ್ವಹಿಸುತ್ತಿರುವ ಏಜೆಂಟಿಕ್ AI ಸ್ವಾಯತ್ತ ವ್ಯವಸ್ಥೆಗಳು ಸೈಬರ್ ಸೆಕ್ಯೂರಿಟಿ ಮತ್ತು ಉತ್ಪಾದನೆಯಂತಹ ವಲಯಗಳಲ್ಲಿ ದಕ್ಷತೆಯ ಭರವಸೆ ನೀಡುತ್ತವೆ, 68% ಸಂಸ್ಥೆಗಳು ಗುರುತಿನ ನಿಯಂತ್ರಣಗಳನ್ನು ಹೊಂದಿಲ್ಲ ಎಂದು ಎಚ್ಚರಿಸುತ್ತದೆ. ಥ್ರೆಟ್ ಮಾಡೆಲ್‌ಗಳು ಮತ್ತು ಆಡಳಿತದ ಅಪ್ಡೇಟ್ ಆಗದಿರುವಿಕೆಯ ಕುರಿತು ಭದ್ರತಾ ತಜ್ಞರು ಎಚ್ಚರಿಕೆ ನೀಡುತ್ತಾರೆ ; ಈ ಸ್ಮಾರ್ಟ್ ಟೂಲ್‌ಗಳು ಶಕ್ತಿಶಾಲಿ ದಾಳಿಯ ವಾಹಕಗಳಾಗಬಹುದು.

ಇನ್ನಷ್ಟು ಓದಿ
ಜುಲೈ 2, 2025 ರಂದು ಪ್ರಕಟಿಸಲಾಗಿದೆ
Digital Fraud in India Is Now a Growing Crisis2 ನಿಮಿಷದ ಓದು

ಭಾರತದಲ್ಲಿ ಡಿಜಿಟಲ್ ವಂಚನೆಯು ಈಗ ಬೆಳೆಯುತ್ತಿರುವ ಸಂಕಷ್ಟವಾಗಿದೆ

ಅನುಮಾನಾಸ್ಪದ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು ಅಥವಾ OTP ಗಳನ್ನು ಹಂಚಿಕೊಳ್ಳುವಂತಹ ದೈನಂದಿನ ಮೊಬೈಲ್ ಹವ್ಯಾಸಗಳು ಭಾರತದಾದ್ಯಂತ ಡಿಜಿಟಲ್ ವಂಚನೆಯಲ್ಲಿ ಹೆಚ್ಚಳವನ್ನು ಉಂಟುಮಾಡುತ್ತಿವೆ. 2023 ರಿಂದ 2024 ವರೆಗೆ 13 ಲಕ್ಷಕ್ಕೂ ಹೆಚ್ಚು UPI-ಸಂಬಂಧಿತ ಹಗರಣಗಳು ವರದಿಯಾಗಿವೆ, ₹4,245 ಕೋಟಿ ನಷ್ಟವಾಗಿದೆ. ಅಪ್ಡೇಟ್ ಆದ ಆ್ಯಪ್‌ಗಳು, ವಿಶಿಷ್ಟ ಪಾಸ್ವರ್ಡ್‌ಗಳು ಮತ್ತು ಅಪರಿಚಿತ ಕಾಲರ್‌ಗಳ ವಿರುದ್ಧ ಎಚ್ಚರಿಕೆಯೊಂದಿಗೆ ತಜ್ಞರು ಬಲವಾದ ಸೈಬರ್ ಹೈಜಿನ್ ಅನ್ನು ಕೋರುತ್ತಾರೆ.

ಇನ್ನಷ್ಟು ಓದಿ
ಜುಲೈ 2, 2025 ರಂದು ಪ್ರಕಟಿಸಲಾಗಿದೆ
Kaspersky Records 24% Sales Surge in India Amid Cybersecurity Boom2 ನಿಮಿಷದ ಓದು

ಸೈಬರ್ ಭದ್ರತಾ ಹೆಚ್ಚಳದ ಮಧ್ಯೆ ಭಾರತದಲ್ಲಿ ಕ್ಯಾಸ್ಪರ್ಸ್ಕಿ ದಾಖಲೆಗಳ 24% ಮಾರಾಟ ಏರಿಕೆ

ಕ್ಯಾಸ್ಪರ್ಸ್ಕಿಯ ಇಂಡಿಯಾ ಬಿಸಿನೆಸ್ 2024 ರಲ್ಲಿ ವರ್ಷದಿಂದ ವರ್ಷಕ್ಕೆ 24% ಹೆಚ್ಚಳವನ್ನು ನೋಡಿದೆ, B2B ಮಾರಾಟ 20% ಮತ್ತು B2C 30% ವರೆಗೆ ಹೆಚ್ಚಾಗಿದೆ. ಬೆದರಿಕೆ ಡೇಟಾ ಫೀಡ್‌ಗಳು 209% ಕ್ಕಿಂತ ಹೆಚ್ಚಾಗಿವೆ, ಆದರೆ ಅದರ EDR ಆಪ್ಟಿಮಮ್ ಪರಿಹಾರವು 44% ಬೆಳೆದಿದೆ. ಭಾರತವು ಪ್ರಮುಖ ಪ್ರಾದೇಶಿಕ ಕೇಂದ್ರವಾಗಿದೆ, ಕ್ಯಾಸ್ಪರ್ಸ್ಕಿ ತನ್ನ ಸ್ಥಳೀಯ ತಂಡವನ್ನು ಮೂರು ಪಟ್ಟು ಹೆಚ್ಚಿಸಿದೆ.

ಇನ್ನಷ್ಟು ಓದಿ
ಜುಲೈ 2, 2025 ರಂದು ಪ್ರಕಟಿಸಲಾಗಿದೆ
slider-left

ಇತ್ತೀಚಿನ ಸೈಬರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

slider-right
Staying Cyber Vigilant: Protect Yourself from Online Scams This Diwali

ಈ ದೀಪಾವಳಿಯ ಆನ್ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಿ

ಇನ್ನಷ್ಟು ಓದಿ
24 ಅಕ್ಟೋಬರ್, 2024 ರಂದು ಪ್ರಕಟಿಸಲಾಗಿದೆ
Importance Of Cyber Insurance During The Festive Season

ಈ ಹಬ್ಬದ ಸಮಯದಲ್ಲಿ ಸೈಬರ್ ಇನ್ಶೂರೆನ್ಸ್ ಏಕೆ ಅಗತ್ಯವಾಗಿದೆ

ಇನ್ನಷ್ಟು ಓದಿ
24 ಅಕ್ಟೋಬರ್, 2024 ರಂದು ಪ್ರಕಟಿಸಲಾಗಿದೆ
Cybersecurity Vulnerabilities: 6 Key Types & Risk Reduction

ಸೈಬರ್ ಸೆಕ್ಯೂರಿಟಿ ದುರ್ಬಲತೆಗಳು: 6 ಪ್ರಮುಖ ವಿಧಗಳು ಮತ್ತು ಅಪಾಯ ಕಡಿತತೆ

ಇನ್ನಷ್ಟು ಓದಿ
10 ಅಕ್ಟೋಬರ್, 2024 ರಂದು ಪ್ರಕಟಿಸಲಾಗಿದೆ
Common Types of Cybercrimes: Threats & Solutions

ಸಾಮಾನ್ಯ ರೀತಿಯ ಸೈಬರ್ ಅಪರಾಧಗಳು: ಅಪಾಯಗಳ ಮತ್ತು ಪರಿಹಾರಗಳು

ಇನ್ನಷ್ಟು ಓದಿ
10 ಅಕ್ಟೋಬರ್, 2024 ರಂದು ಪ್ರಕಟಿಸಲಾಗಿದೆ
Cyber Extortion: What Is It and How to Prevent It?

ಸೈಬರ್ ಸುಲಿಗೆ: ಅದು ಏನು ಮತ್ತು ಅದನ್ನು ತಡೆಯುವುದು ಹೇಗೆ?

ಇನ್ನಷ್ಟು ಓದಿ
08 ಅಕ್ಟೋಬರ್, 2024 ರಂದು ಪ್ರಕಟಿಸಲಾಗಿದೆ
slider-left

ಇನ್ನೂ ಏನೇನಿದೆ

Working Professional
ವರ್ಕಿಂಗ್ ಪ್ರೊಫೆಶನಲ್

ಯಾವುದೇ ಅಪಾಯವಿಲ್ಲದೆ ಆನ್ಲೈನಿನಲ್ಲಿ ಕೆಲಸ ಮಾಡಿ

Student
ವಿದ್ಯಾರ್ಥಿ

ಹೆಚ್ಚುವರಿ ಸುರಕ್ಷತೆಯೊಂದಿಗೆ ಆನ್ಲೈನಿನಲ್ಲಿ ಅಧ್ಯಯನ

Entrepreneur
ಉದ್ಯಮಿ

ಸುರಕ್ಷಿತ ಆನ್ಲೈನ್ ಬಿಸಿನೆಸ್‌ಗಾಗಿ

Make Your Own Plan
ನಿಮ್ಮದೇ ಆದ ಪ್ಲಾನ್ ಮಾಡಿಕೊಳ್ಳಿ

ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ಲಾನನ್ನು ಕಸ್ಟಮೈಸ್ ಮಾಡಿ

ಸೈಬರ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಈ ಪಾಲಿಸಿಯನ್ನು ಖರೀದಿಸಬಹುದು. ಫ್ಯಾಮಿಲಿ ಕವರ್‌ನ ಭಾಗವಾಗಿ ನಿಮ್ಮ ಕಡಿಮೆ ವಯಸ್ಸಿನ ಮಕ್ಕಳನ್ನು ಕೂಡ ನೀವು ಸೇರಿಸಬಹುದು

ಪಾಲಿಸಿ ಅವಧಿ 1 ವರ್ಷ (ವಾರ್ಷಿಕ ಪಾಲಿಸಿ)

ಡಿಜಿಟಲ್ ಜಗತ್ತಿನಲ್ಲಿ ನೀವು ಎದುರಿಸಬಹುದಾದ ಎಲ್ಲಾ ರೀತಿಯ ಸೈಬರ್ ಅಪಾಯಗಳನ್ನು ನಿರ್ವಹಿಸಲು ಪಾಲಿಸಿಯು ವಿಶಾಲ ಶ್ರೇಣಿಯ ವಿಭಾಗಗಳನ್ನು ಒದಗಿಸುತ್ತದೆ. ವಿಭಾಗಗಳನ್ನು ಕೆಳಗೆ ನಮೂದಿಸಲಾಗಿದೆ:

1. ಫಂಡ್‌ಗಳ ಕಳ್ಳತನ (ಅನಧಿಕೃತ ಡಿಜಿಟಲ್ ಟ್ರಾನ್ಸಾಕ್ಷನ್‌ಗಳು ಮತ್ತು ಅನಧಿಕೃತ ಭೌತಿಕ ಟ್ರಾನ್ಸಾಕ್ಷನ್‌ಗಳು)

2. ಐಡೆಂಟಿಟಿ ಕಳ್ಳತನ

3. ಡೇಟಾ ಮರುಸ್ಥಾಪನೆ / ಮಾಲ್‌ವೇರ್ ಡಿಕಾಂಟಾಮಿನೇಶನ್

4. ಹಾರ್ಡ್‌ವೇರ್ ಬದಲಾವಣೆ

5. ಸೈಬರ್ ಬೆದರಿಕೆ, ಸೈಬರ್ ಸ್ಟಾಕಿಂಗ್ ಮತ್ತು ಗೌರವದ ನಷ್ಟ

6. ಸೈಬರ್ ಸುಲಿಗೆ

7. ಆನ್‌ಲೈನ್‌ ಶಾಪಿಂಗ್

8. ಆನ್ಲೈನ್ ಸೇಲ್ಸ್

9. ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಹೊಣೆಗಾರಿಕೆ

10. ನೆಟ್ವರ್ಕ್ ಸೆಕ್ಯೂರಿಟಿ ಹೊಣೆಗಾರಿಕೆ

11. ಗೌಪ್ಯತೆ ಉಲ್ಲಂಘನೆ ಮತ್ತು ಡೇಟಾ ಉಲ್ಲಂಘನೆ ಹೊಣೆಗಾರಿಕೆ

12. ಗೌಪ್ಯತೆ ಉಲ್ಲಂಘನೆ ಮತ್ತು ಥರ್ಡ್ ಪಾರ್ಟಿಯಿಂದ ಡೇಟಾ ಉಲ್ಲಂಘನೆ

13. ಸ್ಮಾರ್ಟ್ ಹೋಮ್ ಕವರ್

14. ಅವಲಂಬಿತ ಮಕ್ಕಳಿಂದಾಗಿ ಉಂಟಾಗುವ ಹೊಣೆಗಾರಿಕೆ

ನಿಮ್ಮ ಸೈಬರ್ ಇನ್ಶೂರೆನ್ಸ್ ಅಗತ್ಯಗಳಿಗೆ ಅನುಗುಣವಾಗಿ ಲಭ್ಯವಿರುವ ಕವರ್‌ಗಳ ಯಾವುದೇ ಸಂಯೋಜನೆಯನ್ನು ನೀವು ಆಯ್ಕೆ ಮಾಡಬಹುದು.

ಈ ಕೆಳಗಿನ ಹಂತಗಳಲ್ಲಿ ನೀವು ನಿಮ್ಮದೇ ಆದ ಪ್ಲಾನ್ ಅನ್ನು ಮಾಡಬಹುದು:

• ನೀವು ಬಯಸುವ ಕವರ್‌ಗಳನ್ನು ಆಯ್ಕೆಮಾಡಿ

• ನೀವು ಬಯಸುವ ವಿಮಾ ಮೊತ್ತವನ್ನು ಆಯ್ಕೆಮಾಡಿ

• ಅಗತ್ಯವಿದ್ದರೆ ಕವರ್ ಅನ್ನು ನಿಮ್ಮ ಕುಟುಂಬಕ್ಕೆ ವಿಸ್ತರಿಸಿ

• ನಿಮ್ಮ ಕಸ್ಟಮೈಜ್ ಮಾಡಿದ ಸೈಬರ್ ಪ್ಲಾನ್ ಸಿದ್ಧವಾಗಿದೆ

ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತದ ಶ್ರೇಣಿಯು ₹ 10,000 ರಿಂದ ₹ 5 ಕೋಟಿಯವರೆಗೆ ಇರುತ್ತದೆ. ಆದಾಗ್ಯೂ, ಇದು ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಇತ್ತೀಚಿನ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ

ಈ ಕೆಳಗಿನ ಆಧಾರದ ಮೇಲೆ ನೀವು ವಿಮಾ ಮೊತ್ತವನ್ನು ಆಯ್ಕೆ ಮಾಡಬಹುದು:

• ಪ್ರತಿ ವಿಭಾಗಕ್ಕೆ: ಪ್ರತಿ ಆಯ್ದ ವಿಭಾಗಕ್ಕೆ ಪ್ರತ್ಯೇಕ ವಿಮಾ ಮೊತ್ತವನ್ನು ಒದಗಿಸಿ ಅಥವಾ

• ಫ್ಲೋಟರ್: ಆಯ್ದ ವಿಭಾಗಗಳಲ್ಲಿ ಫ್ಲೋಟ್ ಆಗುವ ಫಿಕ್ಸೆಡ್ ವಿಮಾ ಮೊತ್ತವನ್ನು ಒದಗಿಸಿ

ಒಂದು ವೇಳೆ ನೀವು ವಿಭಾಗದ ಪ್ರಕಾರ ವಿಮಾ ಮೊತ್ತವನ್ನು ಆಯ್ಕೆ ಮಾಡಿದರೆ, ಈ ಕೆಳಗಿನ ರಿಯಾಯಿತಿಯು ಅನ್ವಯವಾಗುತ್ತದೆ:

• ಮಲ್ಟಿಪಲ್ ಕವರ್ ರಿಯಾಯಿತಿ: ನಿಮ್ಮ ಪಾಲಿಸಿಯಲ್ಲಿ ನೀವು 3 ಅಥವಾ ಅದಕ್ಕಿಂತ ಹೆಚ್ಚಿನ ವಿಭಾಗಗಳು/ಕವರ್‌ಗಳನ್ನು ಆಯ್ಕೆ ಮಾಡಿದಾಗ 10% ರಿಯಾಯಿತಿ ಅನ್ವಯವಾಗುತ್ತದೆ

ಒಂದು ವೇಳೆ ನೀವು ಫ್ಲೋಟರ್ ವಿಮಾ ಮೊತ್ತವನ್ನು ಆಯ್ಕೆ ಮಾಡಿದರೆ, ಈ ಕೆಳಗಿನ ರಿಯಾಯಿತಿಯು ಅನ್ವಯವಾಗುತ್ತದೆ:

• ಫ್ಲೋಟರ್ ರಿಯಾಯಿತಿ: ನೀವು ಫ್ಲೋಟರ್ ವಿಮಾ ಮೊತ್ತದ ಆಧಾರದ ಮೇಲೆ ಪ್ರಾಡಕ್ಟ್ ಅಡಿಯಲ್ಲಿ ಅನೇಕ ಕವರ್‌ಗಳನ್ನು ಆಯ್ಕೆ ಮಾಡಿದಾಗ, ಈ ಕೆಳಗಿನ ರಿಯಾಯಿತಿಗಳನ್ನು ನೀಡಲಾಗುತ್ತದೆ:

ಕವರ್‌ಗಳ ಸಂಖ್ಯೆ % ರಿಯಾಯಿತಿ
2 10%
3 15%
4 25%
5 35%
>=6 40%

ಇಲ್ಲ. ಪಾಲಿಸಿ ಅಡಿಯಲ್ಲಿ ಯಾವುದೇ ಕಡಿತಗಳಿಲ್ಲ

ಇಲ್ಲ. ಯಾವುದೇ ಕಾಯುವ ಅವಧಿ ಅನ್ವಯವಾಗುವುದಿಲ್ಲ

ಇಲ್ಲ. ಪಾಲಿಸಿಯ ಯಾವುದೇ ವಿಭಾಗದ ಅಡಿಯಲ್ಲಿ ಯಾವುದೇ ಉಪ-ಮಿತಿಗಳು ಅನ್ವಯವಾಗುವುದಿಲ್ಲ

ನೀವು ಆಯ್ಕೆ ಮಾಡಿದ ವಿಮಾ ಮೊತ್ತಕ್ಕೆ ಒಳಪಟ್ಟು ಸಂಬಂಧಿತ ಕವರ್‌ಗಳು/ವಿಭಾಗಗಳನ್ನು ಆಯ್ಕೆ ಮಾಡಿದ್ದರೆ, ನೀವು ಪೀಡಿತರಾಗಿರುವ ಎಲ್ಲಾ ಸೈಬರ್ ಅಪರಾಧಗಳಿಗೆ ಕ್ಲೈಮ್ ಮಾಡಲು ನೀವು ಅರ್ಹರಾಗಿರುತ್ತೀರಿ

ಹೌದು. ನೀವು ಕವರ್ ಅನ್ನು ಗರಿಷ್ಠ 4 ಕುಟುಂಬದ ಸದಸ್ಯರಿಗೆ ವಿಸ್ತರಿಸಬಹುದು (ಪ್ರಪೋಸರ್ ಒಳಗೊಂಡಂತೆ). ಫ್ಯಾಮಿಲಿ ಕವರ್ ಅನ್ನು ನಿಮಗೆ, ನಿಮ್ಮ ಸಂಗಾತಿಗೆ, ನಿಮ್ಮ ಮಕ್ಕಳಿಗೆ, ಒಡಹುಟ್ಟಿದವರಿಗೆ, ಪೋಷಕರಿಗೆ ಅಥವಾ ಸಂಗಾತಿಯ ಪೋಷಕರಿಗೆ, ಅದೇ ಮನೆಯಲ್ಲಿ ವಾಸಿಸುತ್ತಿರುವವರಿಗೆ, ಸಂಖ್ಯೆಯಲ್ಲಿ ಗರಿಷ್ಠ 4 ವರೆಗೆ ವಿಸ್ತರಿಸಬಹುದು

ಹೌದು. ನಮ್ಮೊಂದಿಗೆ ಸಮಾಲೋಚನೆಯ ನಂತರ, ಕಾನೂನು ಕಾರ್ಯವಿಧಾನಗಳಿಗಾಗಿ ನೀವು ನಿಮ್ಮ ಸ್ವಂತ ವಕೀಲರನ್ನು ನೇಮಿಸಬಹುದು.

ಹೌದು. ನಮ್ಮ ವೆಬ್‌ಸೈಟ್‌ನಿಂದ ನೇರವಾಗಿ ಖರೀದಿಸಿದ ಪಾಲಿಸಿಗಳಿಗೆ ನೀವು 5% ರಿಯಾಯಿತಿಯನ್ನು ಪಡೆಯುತ್ತೀರಿ

ಕವರ್ ಮಾಡಲಾಗುವ ಸಾಧನಗಳ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧವಿಲ್ಲ

ಈ 5 ತ್ವರಿತ, ಸುಲಭ ಹಂತಗಳನ್ನು ನೆನಪಿಡುವ ಮೂಲಕ ನೀವು ಸೈಬರ್ ದಾಳಿಗಳನ್ನು ತಡೆಯಬಹುದು:

• ಯಾವಾಗಲೂ ಬಲವಾದ ಪಾಸ್ವರ್ಡ್‌ಗಳನ್ನು ಬಳಸಿ ಮತ್ತು ನಿಯಮಿತವಾಗಿ ಪಾಸ್ವರ್ಡ್‌ಗಳನ್ನು ಅಪ್ಡೇಟ್ ಮಾಡಿ

• ನೀವು ಬಳಸುತ್ತಿರುವ ಸಾಫ್ಟ್‌ವೇರ್ ಅನ್ನು ಯಾವಾಗಲೂ ಅಪ್ಡೇಟ್ ಮಾಡಿ

• ನಿಮ್ಮ ಸೋಶಿಯಲ್ ಮೀಡಿಯಾ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ

• ನಿಮ್ಮ ಹೋಮ್ ನೆಟ್ವರ್ಕ್ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ

• ಪ್ರಮುಖ ಭದ್ರತಾ ಉಲ್ಲಂಘನೆಗಳ ಕುರಿತು ಅಪ್ ಟು ಡೇಟ್ ಆಗಿರಿ

ನೀವು ಈ ಪಾಲಿಸಿಯನ್ನು ನಮ್ಮ ಕಂಪನಿಯ ವೆಬ್‌ಸೈಟ್‌ನಿಂದ ಖರೀದಿಸಬಹುದು. ಖರೀದಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ ಮತ್ತು ಈ ಪಾಲಿಸಿಯನ್ನು ಖರೀದಿಸಲು ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ

ಹೌದು. ಅದನ್ನು ತೆಗೆದುಕೊಂಡ ನಂತರ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು. ಕೆಳಗಿನ ಟೇಬಲ್ ಪ್ರಕಾರ ನೀವು ಪ್ರೀಮಿಯಂ ರಿಫಂಡ್‌ಗೆ ಅರ್ಹರಾಗಿರುತ್ತೀರಿ:

ಅಲ್ಪಾವಧಿಯ ಸ್ಕೇಲ್‌ಗಳ ಟೇಬಲ್
ಅಪಾಯದ ಅವಧಿ (ಮೀರದಂತೆ) ವಾರ್ಷಿಕ ಪ್ರೀಮಿಯಂನ % ರಿಫಂಡ್
1 ತಿಂಗಳು 85%
2 ತಿಂಗಳು 70%
3 ತಿಂಗಳು 60%
4 ತಿಂಗಳು 50%
5 ತಿಂಗಳು 40%
6 ತಿಂಗಳು 30%
7 ತಿಂಗಳು 25%
8 ತಿಂಗಳು 20%
9 ತಿಂಗಳು 15%
9 ತಿಂಗಳಿಗಿಂತ ಹೆಚ್ಚಿನ ಅವಧಿಗೆ 0%

ಅವಾರ್ಡ್ಸ್ ಮತ್ತು ಗುರುತಿಸುವಿಕೆ

Image

ಬಿಎಫ್ಎಸ್ಐ ನಾಯಕತ್ವ ಪ್ರಶಸ್ತಿಗಳು 2022 -
ವರ್ಷದ ಪ್ರಾಡಕ್ಟ್ ನಾವೀನ್ಯಕಾರರು (ಸೈಬರ್ ಸ್ಯಾಶೆಟ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಅವಾರ್ಡ್ಸ್ 2014-15

Image

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್ 2015

Image

iAAA ರೇಟಿಂಗ್

Image

ISO ಪ್ರಮಾಣೀಕರಣ

Image

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

slider-right
slider-left
ಎಲ್ಲಾ ಪ್ರಶಸ್ತಿಗಳನ್ನು ನೋಡಿ