Buy Honda Car Insurance
MOTOR INSURANCE
Premium starts at ₹2072 ^

ಪ್ರೀಮಿಯಂ ಆರಂಭವಾಗುತ್ತದೆ

₹2094ರಿಂದ*
9000+ Cashless Network Garages ^

9000+ ನಗದುರಹಿತ

ಗ್ಯಾರೇಜುಗಳುˇ
Over Night Vehicle Repairs¯

ಓವರ್ ನೈಟ್ ವಾಹನ

ದುರಸ್ತಿ
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡಿ - ಎಚ್‌ಡಿಎಫ್‌ಸಿ ಎರ್ಗೋ
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿ

 Car Insurance Comparison

ಇಂದಿನ ಕಾಲಘಟ್ಟದಲ್ಲಿ, ಹಲವಾರು ಮಂದಿ ತಮ್ಮದೇ ಕಾರಿನಲ್ಲಿ ಸುತ್ತಮುತ್ತಲಿನ ಪಟ್ಟಣಗಳಿಗೆ ಸಂಚಾರ ಮಾಡಲು ಬಯಸುತ್ತಾರೆ. ಕಾರುಗಳು ಸಾರಿಗೆಗೆ ಅನುಕೂಲಕರವಾಗಿದೆ, ಏಕೆಂದರೆ ಅದರಿಂದ ಜನರಿಗೆ ಸರಿಯಾದ ಸಮಯಕ್ಕೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಲು ಸಹಾಯವಾಗುತ್ತದೆ. ಇಂದಿನ ಕಾಲದಲ್ಲಿ ಕಾರ್ ಇದ್ದವರು ಅದರೊಂದಿಗೆ, ತಮ್ಮನ್ನು ರಕ್ಷಿಸಲು ಸಹಾಯ ಮಾಡುವ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದುವುದು ಕೂಡ ಅತಿ ಮುಖ್ಯವಾಗಿದೆ.

ಆಕ್ಸಿಡೆಂಟ್‌ ಅಥವಾ ನೈಸರ್ಗಿಕ ವಿಪತ್ತಿನಲ್ಲಿ ಪಾಲಿಸಿದಾರರ ಕಾರು ಹಾನಿಗೊಳಗಾದರೆ ಅಥವಾ ಕಳ್ಳತನವಾಗಿದ್ದರೆ ಅಥವಾ ವಿಧ್ವಂಸಕ ಕೃತ್ಯಕ್ಕೆ ಒಳಗಾಗಿದ್ದರೆ ಸಿಗುವ ಕವರೇಜ್‌ನಲ್ಲಿ ಕಾರ್‌ ಇನ್ಶೂರೆನ್ಸ್ ಮೌಲ್ಯವು ಅಡಗಿದೆ.. ವಾಹನವು ಎದುರಿಸಬಹುದಾದ ಯಾವುದೇ ಹಾನಿಗಳಿಗೆ ಪಾಕೆಟ್‌ನಿಂದ ಪಾವತಿಸಬೇಕಾದ ವಿರುದ್ಧ, ಪಾಲಿಸಿದಾರರು ತಮ್ಮ ಕಾರ್ ಇನ್ಶೂರೆನ್ಸ್ ಕಂಪನಿಗೆ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಪಾವತಿಯ ಫಲಿತಾಂಶವಾಗಿ, ಕಾರ್ ಇನ್ಶೂರೆನ್ಸ್ ಪೂರೈಕೆದಾರರು ಪಾಲಿಸಿದಾರರ ಆಯಾ ಕಾರ್‌ನ ಹಾನಿಗೆ ಸಂಬಂಧಿಸಿದ ಪೂರ್ತಿ ವೆಚ್ಚವಲ್ಲದಿದ್ದರೂ ಒಂದಿಷ್ಟು ವೆಚ್ಚಗಳನ್ನು ಪಾವತಿಸುತ್ತಾರೆ.

ಕಾರ್ ಇನ್ಶೂರೆನ್ಸ್ ನ ಪ್ರಾಮುಖ್ಯತೆಯನ್ನು 1988 ರ ಮೋಟಾರ್ ವಾಹನ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ, ಇದು ಎಲ್ಲಾ ಕಾರ್ ಮಾಲೀಕರಿಗೆ ಕಾರ್ ಇನ್ಶೂರೆನ್ಸ್ ಅನ್ನು ಕಾನೂನು ಅವಶ್ಯಕತೆ ಎಂದು ನಿಗದಿಪಡಿಸುತ್ತದೆ. ಥರ್ಡ್ ಪಾರ್ಟಿ ಹೊಣೆಗಾರಿಕೆ ಇರುವ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ ಮತ್ತು ಈ ವಿಧದ ಕವರೇಜ್ ಅನ್ನು ಎಲ್ಲಾ ಕನಿಷ್ಠ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಒದಗಿಸಬೇಕು.

ಕಾರ್ ಇನ್ಶೂರೆನ್ಸ್ ಹೋಲಿಕೆ ಏಕೆ ಮುಖ್ಯವಾಗಿದೆ?


ಮಾರುಕಟ್ಟೆಯಲ್ಲಿ ಹಲವಾರು ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಲಭ್ಯವಿದ್ದು, ನೀವು ಎಲ್ಲಾ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿ ಖರೀದಿಸುವುದು ಮುಖ್ಯವಾಗಿದೆ.. ಇಂಟರ್ನೆಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾದ್ದರಿಂದ ಈ ಹೋಲಿಕೆಗಳನ್ನು ಆನ್ಲೈನ್‌ನಲ್ಲಿ ಉತ್ತಮವಾಗಿ ಮಾಡಬಹುದು ಮತ್ತು ವಿವಿಧ ಗುಂಪುಗಳ ಮಧ್ಯದಲ್ಲಿ ಸುಲಭವಾಗಿ ಹೋಲಿಕೆ ಮಾಡಿ ನೋಡಬಹುದು.. ಈ ಹೋಲಿಕೆಗಳು ಕಡಿಮೆ ಬೆಲೆಗೆ ಹಲವಾರು ಪ್ರಯೋಜನಗಳನ್ನು ಒದಗಿಸುವ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ನಿಖರವಾಗಿ ನಿರ್ಧರಿಸಲು ನಿಮಗೆ ಅವಕಾಶ ನೀಡುತ್ತವೆ. ಈ ಹೋಲಿಕೆಗಳಿಗೆ ಸಂಬಂಧಿಸಿದ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.

Value for Money

ಹಣಕ್ಕೆ ತಕ್ಕ ಮೌಲ್ಯ

ಆರಂಭಿಸುವವರಿಗಾಗಿ, ತಮ್ಮ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವ ಮೂಲಕ, ಅವುಗಳು ನಿಮ್ಮ ಬಜೆಟ್‌ಗೆ ಸೂಕ್ತವಾಗಿವೆಯೇ, ಇಲ್ಲವೇ ಎಂಬುದನ್ನು ನಿರ್ಧರಿಸಲು ನಿಮಗೆ ಸಾಧ್ಯವಾಗುತ್ತದೆ.. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಗಿಂತ ಹೆಚ್ಚು ಕೈಗೆಟಕುವಂತಿವೆ. ಆದರೂ ಸಹ, ಎರಡನೆಯದಕ್ಕೆ ಹೋಲಿಸಿದರೆ ಮೊದಲನೆಯದು ಹೆಚ್ಚು ಕವರೇಜ್‌ ಒದಗಿಸುವುದಿಲ್ಲ. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚುವರಿ ಕವರೇಜ್ ಒದಗಿಸುತ್ತವೆ ಏಕೆಂದರೆ ಅವುಗಳು ಶೂನ್ಯ ಸವಕಳಿ ಕವರ್ ರಿಂದ ರಸ್ತೆಬದಿಯ ಸಹಾಯ ಕವರ್ ವರೆಗಿನ ಆ್ಯಡ್-ಆನ್‌ಗಳನ್ನು ಒದಗಿಸುತ್ತವೆ

Coverage Options

ಕವರೇಜ್ ಆಯ್ಕೆಗಳು

ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ನಡುವೆ ಹೋಲಿಕೆ ಮಾಡುವುದರ ಮೂಲಕ, ಯಾವ ಪಾಲಿಸಿಯು ನಿಮಗೆ ಅತ್ಯಂತ ಸೂಕ್ತ ಕವರೇಜ್ ಒದಗಿಸುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಂದ ಹಿಡಿದು ಸಮಗ್ರ ಪಾಲಿಸಿಗಳವರೆಗೆ ಹಲವಾರು ಕವರೇಜ್ ಆಯ್ಕೆಗಳಿವೆ. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಪಾಲಿಸಿದಾರರು, ಸಮಗ್ರ ಪಾಲಿಸಿಗಳಂತೆ ಹಲವಾರು ಐಚ್ಛಿಕ ಆ್ಯಡ್-ಆನ್‌ಗಳನ್ನು ಹೊಂದಿರದೇ ಕನಿಷ್ಠ ಕವರೇಜ್‌ಗಳನ್ನು ಮಾತ್ರ ಪಡೆಯುತ್ತಾರೆ.

Better Service

ಉತ್ತಮ ಸೇವೆ

ನೀವು ಬೇರೆಬೇರೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸಿ ನೋಡಿದಾಗ, ಪ್ರತಿ ಪ್ಲಾನ್ ಅಡಿಯಲ್ಲಿ ನೀಡಲಾಗುವ ಸೇವೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾರ್ ಇನ್ಶೂರೆನ್ಸ್ ನೀಡಿದ ನಂತರದ ಕಾಲದಲ್ಲಿ ಪೂರೈಕೆದಾರರು ಒದಗಿಸುವ ಸೇವೆಗಳನ್ನು ಗಮನಿಸುವುದು ಕೂಡಾ ಮುಖ್ಯ. ಉದಾಹರಣೆಗೆ, ಎಚ್‌ಡಿಎಫ್‌ಸಿ ಎರ್ಗೋ ತನ್ನ ಪಾಲಿಸಿದಾರರಿಗೆ, ಓವರ್‌ನೈಟ್ ಕಾರ್ ರಿಪೇರಿ ಸೇವೆ ಸೇರಿದಂತೆ ಅನೇಕ ಹೆಚ್ಚುವರಿ ಸೇವೆಗಳನ್ನು ಒದಗಿಸುತ್ತದೆ. ಇದು ದೇಶಾದ್ಯಂತ ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್ ಹೊಂದಿದೆ.

Convenience Guaranteed

ಖಚಿತವಾಗಿ ಅನುಕೂಲಕಾರಿಯಾಗಿರುವುದು

ಕೇವಲ ಕಾನೂನು ಅವಶ್ಯಕತೆಗಾಗಿ ಮಾತ್ರವಲ್ಲದೆ, ಕಾರು ಮಾಲೀಕರ ನೆಮ್ಮದಿಯ ದೃಷ್ಟಿಯಿಂದಲೂ ಸರಿಯಾದ ಕಾರ್ ಇನ್ಶೂರೆನ್ಸ್ ಬಹಳ ಮುಖ್ಯವಾಗುತ್ತದೆ. ಕಾರ್ ಇನ್ಶೂರೆನ್ಸ್ ಪಡೆಯುವುದು ಒಂದು ಸರಳ ಮತ್ತು ಸುಲಭ ಪ್ರಕ್ರಿಯೆಯಾಗಿದ್ದು, ಅದನ್ನು ಮನೆಯಲ್ಲಿ ಕುಳಿತೇ ಆರಾಮವಾಗಿ ಮುಗಿಸಬಹುದು. ಆಸಕ್ತ ಅರ್ಜಿದಾರರು ತ್ವರಿತವಾಗಿ ಕೋಟ್ ಪಡೆಯಲು, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.


ಪಾಲಿಸಿ ವಿಧಗಳ ಮೂಲಕ ಕಾರ್ ಇನ್ಶೂರೆನ್ಸ್ ಹೋಲಿಕೆ ಮಾಡುವುದು

ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವ ಮೊದಲು, ನೀವು ವಿವಿಧ ಪಾಲಿಸಿ ವಿಧಗಳ ಬಗ್ಗೆ ತಿಳಿದುಕೊಳ್ಳಬೇಕು. ನೀವು ಆಯ್ಕೆ ಮಾಡಬಹುದಾದ ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲಿದೆ.
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್: ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಇನ್ಶೂರೆನ್ಸ್ ಮಾಡಿಸಿದ ಕಾರನ್ನು ಚಾಲನೆ ಮಾಡುವಾಗ ಬೇರೊಬ್ಬರ ಆಸ್ತಿ/ವಾಹನಕ್ಕೆ ಉಂಟಾದ ಹಾನಿ ಅಥವಾ ಯಾರಿಗಾದರೂ ಆದ ಗಾಯಗಳಿಂದ ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧ ನಿಮ್ಮನ್ನು ಕವರ್ ಮಾಡುತ್ತದೆ. ಆದಾಗ್ಯೂ, ಈ ಕವರ್‌ನೊಂದಿಗೆ ನಿಮ್ಮ ವಾಹನಕ್ಕೆ ಸ್ವಂತ-ಹಾನಿಗಾಗಿ ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲ. 1988 ರ ಮೋಟಾರ್ ವಾಹನ ಕಾಯ್ದೆಯಡಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಡ್ಡಾಯವಾಗಿ ಖರೀದಿಸಬೇಕಿದೆ.
ಸಮಗ್ರವಾದ ಕಾರ್ ಇನ್ಶೂರೆನ್ಸ್: ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಹೋಲಿಸಿದರೆ, ಸಮಗ್ರ ಪಾಲಿಸಿಯು ಥರ್ಡ್ ಪಾರ್ಟಿಗೆ ಆದ ಹಾನಿಗಳು/ಗಾಯಗಳ ಜೊತೆಗೆ ಸ್ವಂತ ಹಾನಿಗಳನ್ನು ಕೂಡಾ ಕವರ್ ಮಾಡುತ್ತದೆ. ಇದರರ್ಥ ಸಮಗ್ರ ಕವರ್ ಆಕ್ಸಿಡೆಂಟ್, ಬೆಂಕಿ, ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ವಿಕೋಪಗಳು, ಕಳ್ಳತನ ಮತ್ತು ಯಾವುದೇ ಇನ್ಶೂರೆಬಲ್ ಅಪಾಯದ ಸಂದರ್ಭದಲ್ಲಿ ನಿಮ್ಮ ಕಾರಿಗೆ ಉಂಟಾದ ಹಾನಿಗಳಿಗೆ ಕವರೇಜನ್ನು ಒದಗಿಸುತ್ತದೆ.
ಸ್ಟ್ಯಾಂಡ್ಅಲೋನ್ ಓನ್‌ ಡ್ಯಾಮೇಜ್‌ ಕವರ್: ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿಯು ಆಕ್ಸಿಡೆಂಟ್ ನೈಸರ್ಗಿಕ ವಿಪತ್ತು, ಭೂಕಂಪ, ಬೆಂಕಿ, ಕಳ್ಳತನ ಇತ್ಯಾದಿಗಳಿಂದಾಗಿ ಕಾರಿಗೆ ಹಾನಿಯಾದಾಗ ಆಗುವ ವೆಚ್ಚದ ನಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ. ಸ್ಟ್ಯಾಂಡರ್ಡ್ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ಗೆ ವಿರುದ್ಧವಾಗಿ, ಸ್ವಂತ ಹಾನಿ ಇನ್ಶೂರೆನ್ಸ್ ಐಚ್ಛಿಕವಾಗಿದೆ. ನೀವು ಈಗಾಗಲೇ ಕಡ್ಡಾಯ ಅವಶ್ಯಕತೆಯಾದ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಸ್ವಂತ ಹಾನಿ ಕವರೇಜನ್ನು ಸೇರಿಸುವುದು ನಿಮ್ಮ ವಾಹನವು ಸದಾ ಸಂಪೂರ್ಣವಾಗಿ ಇನ್ಶೂರ್ಡ್ ಆಗಿರುವುದನ್ನು ಖಾತ್ರಿಪಡಿಸುತ್ತದೆ.

ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡಲು ಬಳಸುವ ಪ್ರಮುಖ ಅಂಶಗಳು


ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸಿ ನೋಡಿದಾಗ, ಅನೇಕ ಅಂಶಗಳು ಕಂಡುಬರುತ್ತದೆ. ಇವುಗಳಲ್ಲಿ ಕೆಲವು ಅತ್ಯಂತ ಪ್ರಮುಖ ಅಂಶಗಳನ್ನು ಕೆಳಗೆ ಪರಿಶೀಲಿಸಲಾಗಿದೆ.

ಬೆಲೆ
ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ತಮ್ಮದೇ ಆದ ಬೆಲೆ ಹೊಂದಿರುತ್ತವೆ. ಒಳ್ಳೆಯ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ, ಕನಿಷ್ಠ ಮೊತ್ತದ ಹಣಕ್ಕೆ ಗರಿಷ್ಠ ಪ್ರಯೋಜನಗಳನ್ನು ಒದಗಿಸಬೇಕು. ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವಾಗ, ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಹೋಲಿಸಿದರೆ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ ಎಂಬುದನ್ನು ಗಮನಿಸಬೇಕು. ಏಕೆಂದರೆ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಒದಗಿಸಲಾದ ಕವರೇಜ್ ಕನಿಷ್ಠ ಮಿತಿಗೆ ಸೀಮಿತವಾಗಿದೆ.
ಕವರೇಜ್
ಇಂದು ಮಾರುಕಟ್ಟೆಯಲ್ಲಿ ಹಲವಾರು ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಲಭ್ಯವಿರುವುದರಿಂದ, ಅವುಗಳು ಒದಗಿಸುವ ರಕ್ಷಣೆಯ ವ್ಯಾಪ್ತಿಯನ್ನು ಕವರೇಜ್‌ಗಳ ಹೋಲಿಕೆಯಿಂದ ತಿಳಿಯಬಹುದು. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಥರ್ಡ್ ಪಾರ್ಟಿ ಹೊಣೆಗಾರಿಕೆಯ ಸಂದರ್ಭದಲ್ಲಿ ಮಾತ್ರ ಕವರೇಜ್ ಒದಗಿಸುತ್ತವೆ ಹಾಗೂ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ಜೊತೆಗೆ ಬೇರೆ ಹಾನಿಗಳಿಗೂ ಕವರೇಜ್ ಒದಗಿಸುತ್ತವೆ. ಪಾಲಿಸಿದಾರರು ತಮ್ಮ ಕವರೇಜ್‌ ವ್ಯಾಪ್ತಿಯನ್ನು ವಿಸ್ತರಿಸಲು ಲಭ್ಯವಿರುವ ಆ್ಯಡ್-ಆನ್‌ಗಳ ಪೈಕಿ ತಮಗೆ ಸೂಕ್ತವಾದುದನ್ನು ಬಳಸಬಹುದು.
ರಿವ್ಯೂಗಳು
ಯಾವುದೇ ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು, ಈಗಾಗಲೇ ಆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಿದವರ ರಿವ್ಯೂಗಳನ್ನು ಹೋಲಿಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಈ ರಿವ್ಯೂಗಳು ಆನ್ಲೈನ್‌ನಲ್ಲಿ ಸಿಗುತ್ತವೆ ಮತ್ತು ಇವು ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಹಾಗೂ ಪೂರೈಕೆದಾರರ ಕುರಿತಾದ ಪಾಲಿಸಿದಾರರ ಅನುಭವಗಳನ್ನು ತಿಳಿಸುತ್ತವೆ. ಉತ್ತಮ ರಿವ್ಯೂಗಳು ನಿಮಗೆ ಪ್ಲಾನ್‌ನ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಹಾಗೆಯೇ, ಕಳಪೆ ರಿವ್ಯೂಗಳು ಪ್ಲಾನ್‌ನಲ್ಲಿರುವ ಹುಳುಕುಗಳನ್ನು ತೋರಿಸುತ್ತವೆ.
ಕ್ಲೈಮ್ ದಾಖಲೆಗಳು
ಕಾರ್ ಇನ್ಶೂರೆನ್ಸ್ ಪೂರೈಕೆದಾರರ ಕ್ಲೈಮ್ ದಾಖಲೆಗಳು, ಪಾಲಿಸಿದಾರರು ಕ್ಲೈಮ್ ಮಾಡಿದಾಗ ಆ ಪೂರೈಕೆದಾರರು ಕ್ಲೈಮ್ ಅನ್ನು ಎಷ್ಟು ವಿಶ್ವಾಸಾರ್ಹತೆ ಮತ್ತು ದಕ್ಷತೆಯಿಂದ ಅನುಮೋದಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಹೆಚ್ಚಿನ ಪ್ರಮಾಣದ ಕ್ಲೈಮ್ ದಾಖಲೆಗಳು ಹೆಚ್ಚು ವಿಶ್ವಾಸಾರ್ಹತೆಯನ್ನು ಸೂಚಿಸುತ್ತವೆ. ಉದಾಹರಣೆಗೆ ಎಚ್‌ಡಿಎಫ್‌ಸಿ ಎರ್ಗೋ 99.8% ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದೆ
ನಗದುರಹಿತ ಗ್ಯಾರೇಜುಗಳು
ಒಂದು ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಬೇರೆ ಪ್ಲಾನ್‌ಗಳಿಗಿಂತ ಭಿನ್ನವಾಗಿಸುವ ಅಂಶವೆಂದರೆ, ಅದರ ಕ್ಯಾಶ್‌ಲೆಸ್ ಗ್ಯಾರೇಜ್‌ಗಳ ಸಂಖ್ಯೆ.. ಕಾರ್ ಇನ್ಶೂರೆನ್ಸ್ ಪೂರೈಕೆದಾರರ ನೆಟ್ವರ್ಕ್‌ಗೆ ಸಂಬಂಧಿಸಿದ ಕ್ಯಾಶ್‌ಲೆಸ್ ಗ್ಯಾರೇಜ್‌ಗಳ ಸಂಖ್ಯೆಯು ಹೆಚ್ಚಾದಂತೆ, ಸೇವೆಗಳ ಲಭ್ಯತೆಯೂ ಅಧಿಕವಾಗಿರುತ್ತದೆ.. ಎಚ್‌ಡಿಎಫ್‌ಸಿ ಎರ್ಗೋ ದೇಶಾದ್ಯಂತ ಹರಡಿರುವ 9000+ ಕ್ಯಾಶ್‌ಲೆಸ್ ಗ್ಯಾರೇಜ್‌ಗಳನ್ನು ಹೊಂದಿದೆ.
ಬೆಲೆ
ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ತಮ್ಮದೇ ಆದ ಬೆಲೆ ಹೊಂದಿರುತ್ತವೆ. ಉತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ, ಕನಿಷ್ಠ ಮೊತ್ತದ ಹಣಕ್ಕೆ ಗರಿಷ್ಠ ಪ್ರಯೋಜನಗಳನ್ನು ಒದಗಿಸಬೇಕು. ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸಿದಾಗ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ನೀಡಲಾಗುತ್ತದೆ ಎನ್ನುವುದನ್ನು ಗಮನಿಸಬಹುದು. ಏಕೆಂದರೆ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಒದಗಿಸಲಾದ ಕವರೇಜ್ ಕನಿಷ್ಠ ಮಿತಿಗೆ ಸೀಮಿತವಾಗಿದೆ.
ಕವರೇಜ್
ಇಂದು ಮಾರುಕಟ್ಟೆಯಲ್ಲಿ ಹಲವಾರು ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಲಭ್ಯವಿರುವುದರಿಂದ, ಅವುಗಳು ಒದಗಿಸುವ ರಕ್ಷಣೆಯ ವ್ಯಾಪ್ತಿಯನ್ನು ಕವರೇಜ್‌ಗಳ ಹೋಲಿಕೆಯಿಂದ ತಿಳಿಯಬಹುದು. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಥರ್ಡ್ ಪಾರ್ಟಿ ಹೊಣೆಗಾರಿಕೆಯ ಸಂದರ್ಭದಲ್ಲಿ ಮಾತ್ರ ಕವರೇಜ್ ಒದಗಿಸುತ್ತವೆ ಹಾಗೂ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ಜೊತೆಗೆ ಬೇರೆ ಹಾನಿಗಳಿಗೂ ಕವರೇಜ್ ಒದಗಿಸುತ್ತವೆ. ಪಾಲಿಸಿದಾರರು ತಮ್ಮ ಕವರೇಜ್‌ ವ್ಯಾಪ್ತಿಯನ್ನು ವಿಸ್ತರಿಸಲು ಲಭ್ಯವಿರುವ ಆ್ಯಡ್-ಆನ್‌ಗಳ ಪೈಕಿ ತಮಗೆ ಸೂಕ್ತವಾದುದನ್ನು ಬಳಸಬಹುದು.
ರಿವ್ಯೂಗಳು
ಯಾವುದೇ ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು, ಈಗಾಗಲೇ ಆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಿದವರ ರಿವ್ಯೂಗಳನ್ನು ಹೋಲಿಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ಈ ರಿವ್ಯೂಗಳು ಆನ್ಲೈನ್‌ನಲ್ಲಿ ಸಿಗುತ್ತವೆ ಮತ್ತು ಇವು ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಹಾಗೂ ಪೂರೈಕೆದಾರರ ಕುರಿತಾದ ಪಾಲಿಸಿದಾರರ ಅನುಭವಗಳನ್ನು ತಿಳಿಸುತ್ತವೆ. ಉತ್ತಮ ರಿವ್ಯೂಗಳು ನಿಮಗೆ ಪ್ಲಾನ್‌ನ ಪ್ರಯೋಜನಗಳನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತವೆ. ಹಾಗೆಯೇ, ಕಳಪೆ ರಿವ್ಯೂಗಳು ಪ್ಲಾನ್‌ನಲ್ಲಿರುವ ಹುಳುಕುಗಳನ್ನು ತೋರಿಸುತ್ತವೆ.
ಕ್ಲೈಮ್ ದಾಖಲೆಗಳು
ಕಾರ್ ಇನ್ಶೂರೆನ್ಸ್ ಪೂರೈಕೆದಾರರ ಕ್ಲೈಮ್ ದಾಖಲೆಗಳು, ಪಾಲಿಸಿದಾರರು ಕ್ಲೈಮ್ ಮಾಡಿದಾಗ ಆ ಪೂರೈಕೆದಾರರು ಕ್ಲೈಮ್ ಅನ್ನು ಎಷ್ಟು ವಿಶ್ವಾಸಾರ್ಹತೆ ಮತ್ತು ದಕ್ಷತೆಯಿಂದ ಅನುಮೋದಿಸುತ್ತಾರೆ ಎಂಬುದನ್ನು ಸೂಚಿಸುತ್ತದೆ. ಹೆಚ್ಚಿನ ಪ್ರಮಾಣದ ಕ್ಲೈಮ್ ದಾಖಲೆಗಳು ಹೆಚ್ಚು ವಿಶ್ವಾಸಾರ್ಹತೆಯನ್ನು ಸೂಚಿಸುತ್ತವೆ. ಉದಾಹರಣೆಗೆ ಎಚ್‌ಡಿಎಫ್‌ಸಿ ಎರ್ಗೋ 100% ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಹೊಂದಿದೆ
ನಗದುರಹಿತ ಗ್ಯಾರೇಜುಗಳು
ಒಂದು ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಬೇರೆ ಪ್ಲಾನ್‌ಗಳಿಗಿಂತ ಭಿನ್ನವಾಗಿಸುವ ಅಂಶವೆಂದರೆ, ಅದರ ಕ್ಯಾಶ್‌ಲೆಸ್ ಗ್ಯಾರೇಜ್‌ಗಳ ಸಂಖ್ಯೆ.. ಕಾರ್ ಇನ್ಶೂರೆನ್ಸ್ ಪೂರೈಕೆದಾರರ ನೆಟ್ವರ್ಕ್‌ಗೆ ಸಂಬಂಧಿಸಿದ ಕ್ಯಾಶ್‌ಲೆಸ್ ಗ್ಯಾರೇಜ್‌ಗಳ ಸಂಖ್ಯೆಯು ಹೆಚ್ಚಾದಂತೆ, ಸೇವೆಗಳ ಲಭ್ಯತೆಯೂ ಅಧಿಕವಾಗಿರುತ್ತದೆ.. ಎಚ್‌ಡಿಎಫ್‌ಸಿ ಎರ್ಗೋ ದೇಶಾದ್ಯಂತ ಹರಡಿರುವ 9000+ ಕ್ಯಾಶ್‌ಲೆಸ್ ಗ್ಯಾರೇಜ್‌ಗಳನ್ನು ಹೊಂದಿದೆ.

ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡುವ ಪ್ರಯೋಜನಗಳು


ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿದಾಗ ಹಲವಾರು ಪ್ರಯೋಜನಗಳಿವೆ. ಕೆಲವು ಪ್ರಯೋಜನಗಳನ್ನು ಈ ಕೆಳಗೆ ನೋಡೋಣ:

1

ಅತ್ಯುತ್ತಮ ಕವರೇಜ್ ಪ್ರಯೋಜನಗಳೊಂದಿಗೆ
ಪಾಲಿಸಿಯನ್ನು ಆಯ್ಕೆಮಾಡುವುದು

ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿದರೆ, ಅತ್ಯುತ್ತಮ ಕವರೇಜ್ ಒದಗಿಸುವ ಪಾಲಿಸಿಯನ್ನು ಆಯ್ಕೆ ಮಾಡಲು ಇದು ನಿಮಗೆ ಅನುವು ಮಾಡಿಕೊಡುತ್ತದೆ. ನೀವು ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಒಂದು ಸ್ವಲ್ಪವೂ ಬಿಡದಂತೆ ಹೋಲಿಕೆ ಮಾಡಬಹುದು ಮತ್ತು ನಿಮ್ಮ ಅವಶ್ಯಕತೆಗಳನ್ನು ಮತ್ತು ಪಾಲಿಸಿಯು ಏನು ಒದಗಿಸುತ್ತದೆ ಎಂಬುದನ್ನು ಮೌಲ್ಯಮಾಪನ ಮಾಡಬಹುದು. ಆ ರೀತಿಯಲ್ಲಿ, ವ್ಯಾಪಕ ಶ್ರೇಣಿಯ ಕವರೇಜ್ ಪ್ರಯೋಜನಗಳೊಂದಿಗೆ ನೀವು ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪ್ಲಾನನ್ನು ಆಯ್ಕೆ ಮಾಡಬಹುದು.
2

ಪ್ರೀಮಿಯಂನಲ್ಲಿ ಉಳಿತಾಯ
ವೆಚ್ಚಗಳು

ಪ್ರತಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಬೆಲೆಯನ್ನು ವಿಭಿನ್ನವಾಗಿ ವಿನ್ಯಾಸಗೊಳಿಸಲಾಗಿದೆ. ಕವರೇಜ್ ಅನ್ನು ರಾಜಿಮಾಡಿಕೊಳ್ಳದೆ ಕಡಿಮೆ ಪ್ರೀಮಿಯಂ ದರದೊಂದಿಗೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಂಡುಕೊಳ್ಳಲು, ಹೋಲಿಕೆ ಮಾಡುವುದು ಅಗತ್ಯವಾಗಿದೆ. ನೀವು ಹೋಲಿಸಿದಾಗ, ವಿವಿಧ ಪಾಲಿಸಿಗಳು ವಿಧಿಸುವ ಪ್ರೀಮಿಯಂಗಳನ್ನು ಅವುಗಳ ಕವರೇಜ್ ಪ್ರಯೋಜನಗಳೊಂದಿಗೆ ನೋಡಬಹುದು ಮತ್ತು ನಂತರ ಅತ್ಯುತ್ತಮ ಡೀಲ್ ಆಯ್ಕೆ ಮಾಡಬಹುದು.
3

ಕ್ಲೈಮ್ ಸೆಟಲ್ಮೆಂಟ್‌ಗಳನ್ನು ಮಾಡುವುದು
ಸುಲಭವಾದುದು

ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿದಾಗ, ನಿಮ್ಮ ಕ್ಲೈಮ್ ಸೆಟಲ್ಮೆಂಟ್‌ಗಳನ್ನು ಸರಳಗೊಳಿಸಲು ಇದು ನಿಮಗೆ ಅನುಮತಿ ನೀಡುತ್ತದೆ. ಸರಿಯಾದ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಲು ನೀವು ವಿಮಾದಾತರೊಂದಿಗೆ ಕೈ ಜೋಡಿಸಿದ ನಗದುರಹಿತ ಗ್ಯಾರೇಜ್‌ಗಳ ಸಂಖ್ಯೆ ಮತ್ತು ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಹೋಲಿಕೆ ಮಾಡಬಹುದು. ವಿವಿಧ ಇನ್ಶೂರೆನ್ಸ್ ಕಂಪನಿಗಳ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಕೂಡ ನೀವು ಹೋಲಿಕೆ ಮಾಡಬಹುದು ಮತ್ತು ನಿಮ್ಮ ಕ್ಲೈಮ್ ಸೆಟಲ್ಮೆಂಟ್‌ಗಳ ಅವಕಾಶಗಳನ್ನು ಹೆಚ್ಚಿಸಲು ಹೆಚ್ಚಿನ ಅನುಪಾತದೊಂದಿಗಿನ ವಿಮಾದಾತರನ್ನು ಆಯ್ಕೆ ಮಾಡಬಹುದು.

ಹೋಲಿಕೆಯ ನಂತರ ನಾನು ಇನ್ಶೂರೆನ್ಸ್ ಪಾಲಿಸಿಯನ್ನು ಹೇಗೆ ಖರೀದಿಸಬಹುದು


  • ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಸಿದ ನಂತರ, ಈ ಕೆಳಗಿನ ಹಂತಗಳನ್ನು ನೋಡುವ ಮೂಲಕ ನೀವು ಅದನ್ನು ಖರೀದಿಸಬಹುದು:

  • ಹಂತ 1 - ವಿಮಾದಾತರ ವೆಬ್‌ಸೈಟ್‌ಗೆ ಭೇಟಿ ನೀಡಿ.

  • ಹಂತ 2 - ಆ ವೆಬ್‌ಸೈಟ್‌ನಿಂದ ಕಾರ್ ಇನ್ಶೂರೆನ್ಸ್ ಪುಟಕ್ಕೆ ನ್ಯಾವಿಗೇಟ್ ಮಾಡಿ.

  • ಹಂತ 3 - ಮೇಕ್ ಮಾಡೆಲ್ ವಿವರಗಳೊಂದಿಗೆ ನಿಮ್ಮ ವಾಹನದ ನೋಂದಣಿ ನಂಬರನ್ನು ನಮೂದಿಸಿ.

  • ಹಂತ 4 - ಸಮಗ್ರ ಅಥವಾ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ನಡುವೆ ಆಯ್ಕೆ ಮಾಡಿ.

  • ಹಂತ 5 - ಶೂನ್ಯ ಸವಕಳಿ, ನೀವು ಸಮಗ್ರ ಕವರ್ ಆಯ್ಕೆ ಮಾಡಿದರೆ ನೋ ಕ್ಲೈಮ್ ಬೋನಸ್ ರಕ್ಷಣೆಯಂತಹ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಿ.

  • ಹಂತ 6 - ಕೋಟ್ ನೋಡಿ, ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸಿ ಮತ್ತು ನಿಮ್ಮ ನೋಂದಾಯಿತ ಇಮೇಲ್ ID ಯಲ್ಲಿ ನೀವು ತಕ್ಷಣವೇ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಪಡೆಯುತ್ತೀರಿ.

ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವಾಗ ನೀವು ನೆನಪಿಡಬೇಕಾದ ವಿಷಯಗಳು!

• ವೆಚ್ಚ: ಲಭ್ಯವಿರುವ ಬೆಲೆಯಲ್ಲಿ ಗರಿಷ್ಠ ಕವರೇಜನ್ನು ಒದಗಿಸುವ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ. ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವಾಗ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಹುಡುಕುವುದನ್ನು ಪರಿಗಣಿಸಿ.
• ರಿವ್ಯೂಗಳು: ನೀವು ಆನ್‌ಲೈನ್‌ಗೆ ಹೋದಾಗ, ಕಾರ್ ಇನ್ಶೂರೆನ್ಸ್ ಎಷ್ಟು ಮುಖ್ಯವಾಗಿದೆ ಮತ್ತು ಅದು ನಿಮ್ಮ ಅಗತ್ಯಗಳನ್ನು ಎಷ್ಟು ಚೆನ್ನಾಗಿ ಪೂರೈಸುತ್ತದೆ ಎಂಬುದರ ಬಗ್ಗೆ ನಿಮಗೆ ತಿಳುವಳಿಕೆಯನ್ನು ನೀಡುವ ಹಲವಾರು ರಿವ್ಯೂಗಳು ನೋಡ ಸಿಗುತ್ತವೆ. ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪರಿಶೀಲಿಸುವಾಗ, ಖರೀದಿ ಬಟನ್ ಕ್ಲಿಕ್ ಮಾಡುವ ಮೊದಲು ಗ್ರಾಹಕರ ರಿವ್ಯೂಗಳನ್ನು ಪರಿಶೀಲಿಸಿ.
• ಕವರೇಜ್: ನೀವು ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡಿದಾಗ, ನೀಡಲಾಗುವ ಕವರೇಜನ್ನು ಯಾವಾಗಲೂ ಪರಿಶೀಲಿಸಿ. ಸಮಗ್ರ ಕವರ್‌ನೊಂದಿಗೆ ಲಭ್ಯವಿರುವ ಆ್ಯಡ್-ಆನ್ ಕವರ್‌ಗಳನ್ನು ಕೂಡ ಪರಿಶೀಲಿಸಿ, ಇದು ಪ್ರೀಮಿಯಂ ವೆಚ್ಚವನ್ನು ಹೆಚ್ಚಿಸುತ್ತದೆ, ಆದರೆ ಕಾರ್ ಇನ್ಶೂರೆನ್ಸ್ ಪಾಲಿಸಿ ನವೀಕರಣದ ಸಮಯದಲ್ಲಿ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
• ಕಾರ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ಸಂಪೂರ್ಣವಾಗಿ ಓದಿ: ಕಾರ್ ಇನ್ಶೂರೆನ್ಸ್ ಒಪ್ಪಂದದಲ್ಲಿ ಇರುವ ವಿವರಗಳನ್ನು ನೋಡುವುದು ಮುಖ್ಯವಾಗಿದೆ, ಇಲ್ಲದಿದ್ದಲ್ಲಿ ಕ್ಲೈಮ್ ಸಮಯದಲ್ಲಿ ವಿಮಾದಾತರೊಂದಿಗೆ ತಪ್ಪು ಸಂವಹನಕ್ಕೆ ಕಾರಣವಾಗಬಹುದು. ಆದ್ದರಿಂದ, ಕ್ಲೈಮ್ ತಿರಸ್ಕಾರವನ್ನು ತಪ್ಪಿಸಲು ಒಪ್ಪಂದವನ್ನು ಸಂಪೂರ್ಣವಾಗಿ ಓದಿ.
• Garages Part of the Network: ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವಾಗ ವಿಮಾದಾತರ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ ಸಂಖ್ಯೆಯನ್ನು ಪರಿಶೀಲಿಸುವುದನ್ನು ಖಂಡಿತಾ ಮರೆಯಬೇಡಿ.
• ಇನ್ಶೂರೆನ್ಸ್ ಕಂಪನಿಯ ಇತಿಹಾಸ: ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವಾಗ ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ಇತಿಹಾಸವನ್ನು ಪರಿಗಣಿಸಬೇಕು. ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತ ಹೊಂದಿರುವ ಕಂಪನಿಯನ್ನು ಆಯ್ಕೆ ಮಾಡಿ.
• ನೋ-ಕ್ಲೈಮ್ ಬೋನಸ್: ನೀವು ಕಾರ್ ಇನ್ಶೂರೆನ್ಸ್ ಕೋಟ್‌ಗಳನ್ನು ಹೋಲಿಕೆ ಮಾಡುವಾಗ, NCB ಇಲ್ಲದೆಯೂ ಕೊಟೇಶನ್ ನೀಡಬಹುದಾದ್ದರಿಂದ NCB ಯನ್ನು ಪರಿಗಣಿಸಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ರಿಯಾಯಿತಿಯು ಸತತ ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯೊಂದಿಗೆ ಬೆಳೆಯುತ್ತದೆ ಮತ್ತು 50% ವರೆಗೆ ತಲುಪಬಹುದು.

9000+ cashless Garagesˇ Across India

ಇತ್ತೀಚಿನ ಕಾರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನು ಓದಿ

How to Choose the Best Car Insurance Plan for Your Vehicle?

ನಿಮ್ಮ ವಾಹನಕ್ಕಾಗಿ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆಯ್ಕೆ ಮಾಡುವುದು ಹೇಗೆ?

ಪೂರ್ತಿ ಓದಿ
ಜುಲೈ 27, 2022 ರಂದು ಪ್ರಕಟಿಸಲಾಗಿದೆ
Tips to get the best insurance plan for your Maruti car

ನಿಮ್ಮ ಮಾರುತಿ ಕಾರಿಗೆ ಅತ್ಯುತ್ತಮ ಇನ್ಶೂರೆನ್ಸ್ ಪ್ಲಾನ್ ಪಡೆಯಲು ಸಲಹೆಗಳು

ಪೂರ್ತಿ ಓದಿ
ಆಗಸ್ಟ್ 17, 2021 ರಂದು ಪ್ರಕಟಿಸಲಾಗಿದೆ
Benefits of Comparing Car Insurance Plans

ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವ ಪ್ರಯೋಜನಗಳು

ಪೂರ್ತಿ ಓದಿ
ಜೂನ್ 25, 2020 ರಂದು ಪ್ರಕಟಿಸಲಾಗಿದೆ
Review of HDFC ERGO Car Insurance Plans

ಎಚ್‌‌ಡಿಎಫ್‌‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಪ್ಲಾನ್‌‌ಗಳ ರಿವ್ಯೂ

ಪೂರ್ತಿ ಓದಿ
ಫೆಬ್ರವರಿ 20, 2019 ರಂದು ಪ್ರಕಟಿಸಲಾಗಿದೆ
A look at Affordable Car Insurance Plans

ಕೈಗೆಟುಕುವ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ನೋಡಿ

ಪೂರ್ತಿ ಓದಿ
ಫೆಬ್ರವರಿ 19, 2019 ರಂದು ಪ್ರಕಟಿಸಲಾಗಿದೆ
slider-right
slider-left
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ
GET A FREE QUOTE NOW
ಕಾರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಿದ್ಧರಿದ್ದೀರಾ? ಅದಕ್ಕೆ ಕೆಲವೇ ನಿಮಿಷಗಳು ಸಾಕು!

ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವಾಗ ಆಗಾಗ ಕೇಳುವ ಪ್ರಶ್ನೆಗಳು


ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವುದರ ಮೂಲಕ, ಪ್ರತಿಯೊಂದು ಪ್ಲಾನ್‌ಗೆ ಕಟ್ಟಬೇಕಾದ ಪ್ರೀಮಿಯಂಗಳಿಗೆ ತಕ್ಕಂತೆ ಅದು ಒದಗಿಸುವ ಪ್ರಯೋಜನಗಳನ್ನು ನಿರ್ಧರಿಸಬಹುದು. ನಿಮ್ಮ ಬಜೆಟ್‌ಗೆ ಯಾವ ಪ್ಲಾನ್ ಅತ್ಯುತ್ತಮವಾಗಿದೆ ಎಂಬುದನ್ನು ನೀವೇ ನಿರ್ಧರಿಸಬಹುದು. ನೀವು ಸಾಮಾನ್ಯ ಬಜೆಟ್ ಹೊಂದಿದ್ದರೆ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್ ಸೂಕ್ತವಾಗಿರುತ್ತದೆ. ಏಕೆಂದರೆ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ನ ಪ್ರೀಮಿಯಂಗಿಂತ ಇದರ ಪ್ರೀಮಿಯಂ ಕಡಿಮೆ ಇರುತ್ತದೆ.

ಈಗ ನೀವು ಮನೆಯಲ್ಲೇ ಕುಳಿತು ಬೇರೆಬೇರೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡಬಹುದು.. ಈ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.

● ಹೊಸಬರಿಗೆ ಇಲ್ಲಿ ಹೆಚ್ಚೆಚ್ಚು ಮಾಹಿತಿ ಸಿಗುವುದರಿಂದ, ಆನ್ಲೈನ್‌ನಲ್ಲಿ ಹೋಲಿಕೆ ಮಾಡುವುದು ತುಂಬಾ ಸುಲಭ.

● ಜೊತೆಗೆ, ವಿವಿಧ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಸಂಬಂಧಿಸಿದ ಹಲವಾರು ರಿವ್ಯೂಗಳನ್ನು ಆನ್ಲೈನ್‌ನಲ್ಲಿ ಓದಬಹುದು.

● ಲಭ್ಯವಿರುವ ವಿವಿಧ ಪಾಲಿಸಿಗಳು ಮತ್ತು ಅವುಗಳ ಪ್ರೀಮಿಯಂಗಳ ಬಗ್ಗೆ ತಿಳಿದುಕೊಳ್ಳಬಹುದು. ಇದು ನಿಮಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

● ಈ ಹೋಲಿಕೆಗಳನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದು ಮತ್ತು ಇನ್ಸೆಂಟಿವ್ ಆಸೆಗೆ ಒಂದು ನಿರ್ದಿಷ್ಟ ಇನ್ಶೂರೆನ್ಸ್ ಪ್ಲಾನ್‌ಗೆ ಹೆಚ್ಚಿನ ಮಹತ್ವ ನೀಡುವ ಸೇಲ್ಸ್‌ಮ್ಯಾನ್‌ನ ಕಿರಿಕಿರಿಯೂ ಇರುವುದಿಲ್ಲ.

ಪಾಲಿಸಿಗಳಿಗೆ ಸಂಬಂಧಿಸಿದ ಈ ಅಂಶಗಳನ್ನು ಗಮನಿಸುವ ಮೂಲಕ ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್ಲೈನ್‌ನಲ್ಲಿ ಪರಿಣಾಮಕಾರಿಯಾಗಿ ಹೋಲಿಕೆ ಮಾಡಬಹುದು. ಆ ಅಂಶಗಳೆಂದರೆ.

● ವಿಧಿಸಲಾದ ಪ್ರೀಮಿಯಂ – ವಿವಿಧ ಪಾಲಿಸಿಗಳು ತಮ್ಮದೇ ಆದ ಪ್ರೀಮಿಯಂಗಳನ್ನು ಹೊಂದಿರುವುದರಿಂದ ನಿಮ್ಮ ಬಜೆಟ್‌ಗೆ ಹೊಂದುವುದನ್ನು ಆಯ್ಕೆ ಮಾಡಿ.

● ಕವರೇಜ್ – ಸಮಗ್ರ ಪಾಲಿಸಿಗಳು ಹೆಚ್ಚಿನ ಕವರೇಜ್ ಒದಗಿಸುತ್ತವೆ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕವರೇಜ್ ಬಹಳ ಸೀಮಿತವಾಗಿರುತ್ತದೆ.

● ಕ್ಲೈಮ್ ರೆಕಾರ್ಡ್‌ಗಳು – ವಿವಿಧ ಕಾರ್ ಇನ್ಶೂರೆನ್ಸ್ ಪೂರೈಕೆದಾರರ ಕವರೇಜ್ ಒದಗಿಸುವ ಸಾಮರ್ಥ್ಯವನ್ನು ನಿರ್ಧರಿಸಲು, ಕ್ಲೈಮ್ ಸೆಟಲ್ಮೆಂಟ್ ಅನುಪಾತಗಳನ್ನು ಹೋಲಿಕೆ ಮಾಡುವುದು ಬಹಳ ಮುಖ್ಯ.

● ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ – ಕಾರ್ ಇನ್ಶೂರೆನ್ಸ್ ಪೂರೈಕೆದಾರರ ಅಡಿಯಲ್ಲಿರುವ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್‌ ಹೆಚ್ಚಾದಷ್ಟೂ, ಆ ಕಾರ್ ಇನ್ಶೂರೆನ್ಸ್ ಪಾಲಿಸಿಯು ಉತ್ತಮವಾಗಿರುತ್ತದೆ.

ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಕನಿಷ್ಠ ಖರ್ಚಿನ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಾಗಿವೆ. ಏಕೆಂದರೆ, ಥರ್ಡ್ ಪಾರ್ಟಿ ಹೊಣೆಗಾರಿಕೆಯ ಸಂದರ್ಭದಲ್ಲಿ ಮಾತ್ರ ಅದು ಕವರೇಜ್ ಒದಗಿಸುತ್ತದೆ ಮತ್ತು ಪೂರ್ಣಪ್ರಮಾಣದ ಕವರೇಜ್‌ಗಳನ್ನು ಒಳಗೊಂಡಿರುವುದಿಲ್ಲ. ಇಚ್ಚೆಯ ಅನುಸಾರ ಆ್ಯಡ್-ಆನ್‌ಗಳನ್ನು ಒದಗಿಸುವ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚು ದುಬಾರಿಯಾಗಿವೆ. ಏಕೆಂದರೆ, ಅವುಗಳ ಕವರೇಜ್‌ನ ವ್ಯಾಪ್ತಿಯು ಹೆಚ್ಚು ವಿಸ್ತಾರವಾಗಿದೆ.
ನಿಮ್ಮ ಕಾರಿಗೆ ಲಭ್ಯವಿರುವ ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ವಿವರಗಳನ್ನು ಪರಿಶೀಲಿಸಲು, ಮೊದಲು ನೀವು ಕಾರ್ ಇನ್ಶೂರೆನ್ಸ್ ಪೂರೈಕೆದಾರರ ವೆಬ್‌ಸೈಟ್‌ನಲ್ಲಿ (ಉದಾಹರಣೆಗೆ, ಎಚ್‌ಡಿಎಫ್‌ಸಿ ಎರ್ಗೋ) ನಿಮ್ಮ ಕಾರಿನ ವಿವರಗಳನ್ನು ನಮೂದಿಸಬೇಕು. ಈ ವಿವರಗಳು ಕಾರಿನ ಬ್ರಾಂಡ್, ಮಾಡೆಲ್ ಮತ್ತು ಆವೃತ್ತಿಯನ್ನು ಒಳಗೊಂಡಿವೆ. ವಾಹನ ಖರೀದಿಸಿದ ಸಮಯವೂ ಬಹಳ ಮುಖ್ಯವಾಗುತ್ತದೆ. ಏಕೆಂದರೆ, ವಾಹನ ಹೊಸದಾದಷ್ಟೂ, ಅದರ ಮೌಲ್ಯ ಹೆಚ್ಚಾಗಿರುತ್ತದೆ. ನಿಮ್ಮ ವಾಹನವನ್ನು ನೊಂದಾಯಿಸಿದ ನಗರ ಮತ್ತು ಹಿಂದಿನ ಕಾರ್ ಇನ್ಶೂರೆನ್ಸ್ ಪಾಲಿಸಿಯ (ಯಾವುದಾದರೂ ಇದ್ದರೆ) ಮಾನ್ಯತೆಯನ್ನು ಸಲ್ಲಿಸಬೇಕಾಗುತ್ತದೆ. ಈ ವಿವರಗಳನ್ನು ಸಲ್ಲಿಸಿದ ನಂತರ, ಆ ವೆಬ್‌ಸೈಟ್ ನಿಮ್ಮ ವಾಹನಕ್ಕೆ ಲಭ್ಯವಿರುವ ವಿವಿಧ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ತೋರಿಸುತ್ತದೆ.
ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಲು ಉತ್ತಮ ಮಾರ್ಗವೆಂದರೆ ವಿಮಾದಾತರು ಉಲ್ಲೇಖಿಸಿದ ಬೆಲೆಯಲ್ಲಿ ನೀಡಲಾಗುವ ಕವರೇಜನ್ನು ಪರಿಶೀಲಿಸುವುದು. ವಿಮಾದಾತರೊಂದಿಗೆ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳ ಸಂಖ್ಯೆ ಮತ್ತು ಅವರ ಕ್ಲೈಮ್ ಸೆಟಲ್ಮೆಂಟ್ ಅನುಪಾತವನ್ನು ಕೂಡ ನೀವು ಪರಿಶೀಲಿಸಬೇಕು.
ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡುವ ಪರಿಣಾಮಕಾರಿ ಮಾರ್ಗವೆಂದರೆ ವಿವಿಧ ವಿಮಾದಾತರೊಂದಿಗೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ಬೆಲೆಗಳನ್ನು ಪರಿಶೀಲಿಸುವುದು. ಕೋಟ್ ಮಾಡಲಾದ ಬೆಲೆಯಲ್ಲಿ ನೀಡಲಾಗುವ ಕವರೇಜನ್ನು ಪರಿಗಣಿಸಬೇಕು.
ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವುದು ಸೂಕ್ತವಾಗಿದೆ ಏಕೆಂದರೆ ಇದು ಅಪಘಾತದಲ್ಲಿ ಇನ್ಶೂರೆಬಲ್ ಅಪಾಯದ ವಾಹನಕ್ಕಾದ ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜನ್ನು ಒದಗಿಸುತ್ತದೆ.
ಪ್ರತಿ ವಿಮಾದಾತರ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್‌ಲೈನ್‌ನಲ್ಲಿ ಹೋಲಿಕೆ ಮಾಡಬಹುದು. ವಿವಿಧ ವಿಮಾದಾತರು ನೀಡುವ ಕವರೇಜನ್ನು ಪರಿಶೀಲಿಸುವುದು ಅಗತ್ಯವಾಗಿದೆ.
ಹೌದು, ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು ಸಂಪೂರ್ಣವಾಗಿ ಸುರಕ್ಷಿತವಾಗಿದೆ. ನೀವು ಕೋಟ್ ಅನ್ನು ಆನ್ಲೈನಿನಲ್ಲಿ ನೋಡಬಹುದು ಮತ್ತು ನೆಟ್ ಬ್ಯಾಂಕಿಂಗ್ ಅಥವಾ UPI ಮೂಲಕ ಪಾವತಿ ಮಾಡಬಹುದು.
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ₹ 2094 ರಿಂದ ಆರಂಭವಾಗುತ್ತದೆ.
ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನೀವು 8+ ಆ್ಯಡ್-ಆನ್ ಕವರ್ ಅನ್ನು ಆಯ್ಕೆ ಮಾಡಬಹುದು.
ಅನಗತ್ಯ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವುದನ್ನು ತಪ್ಪಿಸಿ ಮತ್ತು ನಿಮ್ಮ ಕಾರಿನಲ್ಲಿ ಸುರಕ್ಷತಾ ಸಾಧನಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ ನೀವು ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡಬಹುದು.
ಕಾರ್ ಇನ್ಶೂರೆನ್ಸ್ ಖರೀದಿಸಲು ಉತ್ತಮ ಮಾರ್ಗವೆಂದರೆ ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್, ಏಕೆಂದರೆ ನೀವು ಕೆಲವೇ ನಿಮಿಷಗಳಲ್ಲಿ ಆನ್‌ಲೈನ್‌ನಲ್ಲಿ ಪಾಲಿಸಿಯನ್ನು ಖರೀದಿಸಬಹುದು.