ನೀವು ಒಂದು ಸಮಗ್ರ ಇನ್ಶೂರೆನ್ಸ್ ಅಡಿಯಲ್ಲಿ ಆ ಎರಡೂ ಪ್ರಯೋಜನಗಳನ್ನು ಪಡೆಯುವಾಗ, ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಕೇವಲ ಥರ್ಡ್ ಪಾರ್ಟಿ ಕವರ್ ಅಥವಾ ನಿಮ್ಮ ಹಾನಿಗಳನ್ನು ಕವರ್ ಮಾಡಲು ಪ್ರತ್ಯೇಕ ಪ್ಲಾನ್‌ಗೆ ಏಕೆ ಮಿತಿಗೊಳಿಸಬೇಕು? ಹೌದು, ನೀವು ಓದಿದ್ದು ಸರಿ. ಎಚ್‌ಡಿಎಫ್‌ಸಿ ಎರ್ಗೋದ ಒಂದು ವರ್ಷದ ಸಮಗ್ರ ಕವರ್‌ನೊಂದಿಗೆ, ನೀವು 1 ವರ್ಷಕ್ಕೆ ಸಂಪೂರ್ಣ ರಕ್ಷಣೆಯನ್ನು ಆನಂದಿಸಬಹುದು. ಇದರ ಜೊತೆಗೆ, ಬೇಸಿಕ್ ಕವರ್‌ನಲ್ಲಿ ದೊರೆಯುವ ಆ್ಯಡ್-ಆನ್‌ಗಳನ್ನು ಮೀರಿ, ನಿಮ್ಮ ಆಯ್ಕೆಯ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಹುಂಡೈಯನ್ನು ರಕ್ಷಿಸಬಹುದು.
ಅಪಘಾತ
ವೈಯಕ್ತಿಕ ಅಪಘಾತ
ನೈಸರ್ಗಿಕ ವಿಕೋಪಗಳು,
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಮೋಟಾರ್ ವಾಹನ ಕಾಯ್ದೆ, 1988ರ ಪ್ರಕಾರ ಭಾರತದಲ್ಲಿ ಥರ್ಡ್ ಪಾರ್ಟಿ ಕವರ್ ಕಡ್ಡಾಯವಾಗಿದೆ. ಆದ್ದರಿಂದ, ನೀವು ನಿಮ್ಮ ಹುಂಡೈ ಕಾರನ್ನು ಜಾಗರೂಕವಾಗಿ ಬಳಸಿದರೂ ಸಹ, ಇದು ಕೇವಲ ಒಂದು ಆಯ್ಕೆ ಮಾತ್ರವಲ್ಲದೆ ಥರ್ಡ್ ಪಾರ್ಟಿ ಕ್ಲೇಮ್‌ಗಳ ವಿರುದ್ಧ ನಿಮ್ಮ ವಾಹನವನ್ನು ಇನ್ಶೂರ್ಡ್ ಆಗಿಸಲು ಒಂದು ಕಡ್ಡಾಯ ಅಗತ್ಯವಾಗಿದೆ. ಈ ರೀತಿಯಲ್ಲಿ, ನೀವು ಇತರ ಜನರಿಗೆ ಹೊಂದಿರಬಹುದಾದ ಯಾವುದೇ ಸಂಭಾವ್ಯ ಹೊಣೆಗಾರಿಕೆಗಳಿಂದ ಮಾತ್ರ ರಕ್ಷಣೆ ಪಡೆದಿರುವುದಿಲ್ಲ, ಜೊತೆಗೆ ಅದಕ್ಕೆ ಸಂಬಂಧಿಸಿದ ದಂಡಗಳ ಬಗ್ಗೆಯೂ ಚಿಂತಿಸಬೇಕಾಗಿಲ್ಲ.
ವೈಯಕ್ತಿಕ ಅಪಘಾತ
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಇನ್ಶೂರೆನ್ಸ್ ಪ್ರಯೋಜನವನ್ನು ಥರ್ಡ್ ಪಾರ್ಟಿ ಕ್ಲೇಮ್‌ಗಳಿಂದಾಚೆಗೆ ವಿಸ್ತರಿಸಿ ಮತ್ತು ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಕವರ್‌ನೊಂದಿಗೆ ಹಣಕಾಸಿನ ನಷ್ಟಗಳ ವಿರುದ್ಧ ನಿಮ್ಮನ್ನು ಸುರಕ್ಷಿತಗೊಳಿಸಿ. ಭಯಾನಕ ವಿಪತ್ತು ಅಥವಾ ಅನಿರೀಕ್ಷಿತ ಆಕ್ಸಿಡೆಂಟ್ ಒಂದರ ನಂತರ ನಿಮ್ಮ ಕಾರಿಗೆ ತಜ್ಞರ ಸಹಾಯ ಅಥವಾ ರಿಪೇರಿಯ ಅಗತ್ಯವಿರಬಹುದು. ಆದರೆ ಅದರೊಂದಿಗೆ ಬರುವ ಖರ್ಚುಗಳು ಸಣ್ಣ ಪುಟ್ಟದ್ದಾಗಿರುವುದಿಲ್ಲ. ನಿಮ್ಮ ಹುಂಡೈಗೆ ಯಾವುದೇ ಹಾನಿಯಾದರೆ ಈ ರೀತಿಯ ಕಾರ್ ಇನ್ಶೂರೆನ್ಸ್ ರಿಪೇರಿಗಳ ವೆಚ್ಚಗಳನ್ನು ಕವರ್ ಮಾಡುತ್ತದೆ. ಅಗತ್ಯವಿರುವ ಥರ್ಡ್ ಪಾರ್ಟಿ ಕವರ್‌ಗಿಂತ ಹೆಚ್ಚುವರಿಯಾಗಿ ಈ ಪ್ಲಾನ್ ಆಯ್ಕೆ ಮಾಡಿ ಮತ್ತು ನಿಮ್ಮ ಹುಂಡೈ ಕಾರಿಗೆ ಹೆಚ್ಚುವರಿ ರಕ್ಷಣೆ ನೀಡಿ.
ಅಪಘಾತ
ನೈಸರ್ಗಿಕ ವಿಕೋಪಗಳು,
ಬೆಂಕಿ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ನಿಮ್ಮ ಹೊಚ್ಚ ಹೊಸ ಹುಂಡೈ ಕಾರನ್ನು ಮನೆಗೆ ಡ್ರೈವ್ ಮಾಡಿಕೊಂಡು ಹೋಗುವ ಖುಷಿಯೊಂದಿಗೆ, ಕೆಲವು ಜವಾಬ್ದಾರಿಗಳೂ ಜೊತೆಗೆ ಬರುತ್ತವೆ. ನೀವು ನಿಮ್ಮ ಹೊಸ ಕಾರನ್ನು ರಕ್ಷಿಸಬೇಕು ಮತ್ತು ಅದು ಒಳ್ಳೆಯ ಸ್ಥಿತಿಯಲ್ಲೇ ಇರುವಂತೆ ನೋಡಿಕೊಳ್ಳಬೇಕು. ಆದರೆ ಇನ್ಶೂರೆನ್ಸ್ ಹೇಗೆ? ಅಷ್ಟಕ್ಕೂ, ಯಾವುದೇ ಅನಿರೀಕ್ಷಿತಗಳ ವಿರುದ್ಧ ಅಂತಿಮವಾಗಿ ಸುರಕ್ಷತೆ ನೀಡುವುದು ಅದೇ ಆಗಿದೆ. ನಿಮ್ಮ ಕಾರ್ ಮತ್ತು ನಿಮ್ಮ ಹಣಕಾಸುಗಳೆರಡಕ್ಕೂ.. ಹೊಚ್ಚ ಹೊಸ ಕಾರುಗಳಿಗೆ ನಮ್ಮ ಕವರ್‌ಗಳೊಂದಿಗೆ, 1 ವರ್ಷದ ಅವಧಿಗೆ ನಿಮ್ಮ ಸ್ವಂತ ಕಾರಿಗೆ ಹಾನಿಯ ವಿರುದ್ಧ ರಕ್ಷಣೆಯನ್ನು ಆನಂದಿಸಬಹುದು ಮತ್ತು 3 ವರ್ಷಗಳ ಅವಧಿಗೆ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗಾಗಿ ಹೊಣೆಗಾರಿಕೆಗಳಿಂದ ರಕ್ಷಣೆ ಪಡೆಯಬಹುದು.
ಅಪಘಾತ
ನೈಸರ್ಗಿಕ ವಿಕೋಪಗಳು,
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಕಳ್ಳತನ
ಬೆಂಕಿ ಅಥವಾ ಸ್ಫೋಟವು ನಿಮ್ಮ ಹುಂಡೈ ಕಾರನ್ನು ಬೂದಿಯಾಗಿಸಿಬಿಡಬಹುದು, ಆದರೆ ಈ ದುರಂತದಿಂದ ನಿಮ್ಮ ಹಣಕಾಸುಗಳಿಗೆ ಯಾವುದೇ ನಷ್ಟವಾಗದಂತೆ ನಾವು ನೋಡಿಕೊಳ್ಳುತ್ತೇವೆ.
ನೈಸರ್ಗಿಕ ವಿಕೋಪಗಳು ಹೇಳಿ ಕೇಳಿ ಬರುವುದಿಲ್ಲ. ಆದರೆ, ಅದಕ್ಕಾಗಿ ಸಿದ್ಧರಾಗಿರದಿದ್ದರೆ ನೀವು ಕಷ್ಟದಲ್ಲಿ ಸಿಲುಕಬಹುದು. ಪ್ರವಾಹ, ಭೂಕಂಪ ಮತ್ತು ಇನ್ನೂ ಮುಂತಾದ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳನ್ನು ನಾವು ಕವರ್ ಮಾಡುವುದರಿಂದ ನಿಮ್ಮ ಕಾರನ್ನು ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ರಕ್ಷಿಸಿ
ಕಾರ್ ಕಳುವಾಗುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ; ಬದಲಾಗಿ, ನಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನಿಮ್ಮ ಹಣಕಾಸನ್ನು ರಕ್ಷಿಸಿ. ಇಂತಹ ದುರ್ಘಟನೆ ನಡೆದಿದ್ದೇ ಆದಲ್ಲಿ, ನಿಮ್ಮ ಹಣವೆಲ್ಲ ಇದಕ್ಕೇ ಪೋಲಾಗದಂತೆ ನಮ್ಮ ಕಾರ್ ಇನ್ಶೂರೆನ್ಸ್ ಕವರೇಜ್ ನೋಡಿಕೊಳ್ಳುತ್ತದೆ!
ರೋಮಾಂಚಕ ರಸ್ತೆ ಪ್ರಯಾಣವು ಅನಿರೀಕ್ಷಿತ ಕಾರು ಅಪಘಾತಗಳನ್ನು ಒಳಗೊಂಡಿರುತ್ತದೆ, ಹಾಗೂ ಅಂತಹ ಅನಿಶ್ಚಿತ ಸಮಯಗಳಲ್ಲಿ, ನಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮನ್ನು ರಕ್ಷಿಸುತ್ತದೆ. ಅಪಘಾತದ ತೀವ್ರತೆ ಎಷ್ಟೇ ಆಗಿದ್ದರೂ, ನಿಮ್ಮ ಕಾರಿಗೆ ಉಂಟಾಗುವ ಹಾನಿಯನ್ನು ತುಂಬಿಕೊಡಲು ನಾವು ಇರುತ್ತೇವೆ.
ನಿಮ್ಮ ಸುರಕ್ಷತೆ ನಮಗೆ ಅತ್ಯುನ್ನತವಾಗಿದೆ! ಹೀಗಾಗಿ, ನಿಮ್ಮ ಕಾರಿನ ಜೊತೆಗೆ, ನಾವು ನಿಮ್ಮ ಕಾಳಜಿಯನ್ನು ಕೂಡಾ ನೋಡಿಕೊಳ್ಳುತ್ತೇವೆ. ನೀವು ಯಾವುದೇ ಗಾಯಗಳಿಂದ ಬಳಲುತ್ತಿದ್ದರೆ, ನಮ್ಮ ಕಾರು ಇನ್ಶೂರೆನ್ಸ್ ಯೋಜನೆಯು ನಿಮ್ಮ ವೈದ್ಯಕೀಯ ಚಿಕಿತ್ಸೆಯ ಶುಲ್ಕವನ್ನು ಸರಿದೂಗಿಸಲು 15 ಲಕ್ಷ ಮೌಲ್ಯದ ವೈಯಕ್ತಿಕ ಅಪಘಾತ ಕವರ್ ನೀಡುತ್ತದೆ.
ನಿಮ್ಮ ಕಾರನ್ನು ಒಳಗೊಂಡಿರುವ ಅಪಘಾತವು ಥರ್ಡ್ ಪಾರ್ಟಿಗೆ ಹಾನಿಯನ್ನು ಉಂಟುಮಾಡಬಹುದು, ಅದು ವ್ಯಕ್ತಿ ಅಥವಾ ಆಸ್ತಿಯಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಆ ಹೊಣೆಗಾರಿಕೆಗಳನ್ನು ಪೂರೈಸಲು ಪಾಕೆಟ್‌ನಿಂದ ಪಾವತಿಸುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ ಏಕೆಂದರೆ ನಮ್ಮ ಕಾರ್ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.
ನಮ್ಮ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಅಮೂಲ್ಯವಾದ ಹ್ಯುಂಡೈ ಕಾರ್‌ಗೆ ರಕ್ಷಣೆಯನ್ನು ಅಪ್‌ಗ್ರೇಡ್ ಮಾಡುವಾಗ ಕೇವಲ ಬೇಸಿಕ್ ಕವರ್‌ನಲ್ಲಿ ಮಾತ್ರವೇ ಏಕೆ ನಿಲ್ಲಿಸಬೇಕು? ಇಲ್ಲಿ ಆಯ್ಕೆಗಳನ್ನು ಪರಿಶೀಲಿಸಿ.
ನೀವು ಹುಂಡೈ ಕಾರ್ ಇನ್ಶೂರೆನ್ಸ್ ಖರೀದಿಸಲು ಅಥವಾ ನವೀಕರಿಸಲು ಯೋಜಿಸುತ್ತಿದ್ದರೆ, ಈ ಕೆಳಗಿನ ಪಟ್ಟಿಯಲ್ಲಿ ನಮೂದಿಸಿದ ಅದರ ಫೀಚರ್ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು.
ಪ್ರಮುಖ ಫೀಚರ್‌ಗಳು | ಪ್ರಯೋಜನಗಳು |
ಸ್ವಂತ ಹಾನಿಯ ಕವರ್ | ಬೆಂಕಿ, ಪ್ರವಾಹ, ಅಪಘಾತ, ಭೂಕಂಪ ಮುಂತಾದ ಇನ್ಶೂರೆಬಲ್ ಅಪಾಯದಿಂದಾಗಿ ವಾಹನಕ್ಕೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ. |
ಥರ್ಡ್ ಪಾರ್ಟಿ ಹಾನಿಗಳು | ಅಪಘಾತದಲ್ಲಿ ಒಳಗೊಂಡಿರುವ ಇನ್ಶೂರೆನ್ಸ್ ಮಾಡಿದ ವಾಹನದ ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ. |
ನೋ ಕ್ಲೈಮ್ ಬೋನಸ್ | ಗರಿಷ್ಠ 50% |
ವೈಯಕ್ತಿಕ ಅಪಘಾತ | ₹15 ಲಕ್ಷಗಳವರೆಗೆ~* |
ನಗದುರಹಿತ ಗ್ಯಾರೇಜುಗಳು | 9000+* all across India |
ಆ್ಯಡ್-ಆನ್ ಕವರ್ಗಳು | ಶೂನ್ಯ ಸವಕಳಿ ಕವರ್, NCB ಪ್ರೊಟೆಕ್ಷನ್ ಕವರ್ ಮುಂತಾದ 8+ ಆ್ಯಡ್-ಆನ್ ಕವರ್ಗಳು. |
ಹುಂಡೈ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು ತುಂಬಾ ಸುಲಭ ಮತ್ತು ಸರಳವಾಗಿದೆ. ನೀವು ಮಾಡಬೇಕಾಗಿರುವುದು ಕೇವಲ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ ಕಾರ್ ಇನ್ಶೂರೆನ್ಸ್ ಮೇಲೆ ಕ್ಲಿಕ್ ಮಾಡಿ. ನೀವು ಹುಂಡೈ ಕಾರ್ ಇನ್ಶೂರೆನ್ಸ್ ಬೆಲೆಯನ್ನು ನೋಡಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ತಕ್ಷಣವೇ ಪಾಲಿಸಿಯನ್ನು ಖರೀದಿಸಬಹುದು. ಆನ್‌ಲೈನ್‌ನಲ್ಲಿ ಕಾರ್ ಇನ್ಶೂರೆನ್ಸ್ ಖರೀದಿಸುವ ಕೆಲವು ಇತರ ಪ್ರಯೋಜನಗಳನ್ನು ನಾವು ನೋಡೋಣ.
SUV ಕೆಟಗರಿಯಲ್ಲಿ ಐದು ಕಾರುಗಳು, ಸೆಡಾನ್ ಕೆಟಗರಿಯಲ್ಲಿ ಒಂದು, ಹ್ಯಾಚ್‌ಬ್ಯಾಕ್ ಕೆಟಗರಿಯಲ್ಲಿ ಮೂರು, ಕಾಂಪ್ಯಾಕ್ಟ್ SUV ಕೆಟಗರಿಯಲ್ಲಿ ಮೂರು ಮತ್ತು ಕಾಂಪ್ಯಾಕ್ಟ್ ಸೆಡಾನ್ ಕೆಟಗರಿಯಲ್ಲಿ ಒಂದು ಸೇರಿದಂತೆ ಭಾರತದಲ್ಲಿ ಹದಿಮೂರು ಕಾರುಗಳ ಮಾಡೆಲ್‌ಗಳನ್ನು ಹುಂಡೈ ಒದಗಿಸುತ್ತದೆ. ಹುಂಡೈ ಸ್ಪರ್ಧಾತ್ಮಕ ಬೆಲೆಗಳಲ್ಲಿ ತನ್ನ ವಿಶ್ವಾಸಾರ್ಹ, ಸ್ಟೈಲಿಶ್ ಮತ್ತು ವಿಶಿಷ್ಟತೆಗಳ-ಶ್ರೀಮಂತ ವಾಹನಗಳಿಗಾಗಿ ಭಾರತದಲ್ಲಿ ಹೆಸರುವಾಸಿಯಾಗಿದೆ. ಆಧುನಿಕ ವಿನ್ಯಾಸ, ನವೀನ ಫೀಚರ್‌ಗಳು ಮತ್ತು ವೈವಿಧ್ಯಮಯ ಗ್ರಾಹಕರ ಆದ್ಯತೆಗಳಿಗೆ ಸರಿಹೊಂದುವಂತೆ ವ್ಯಾಪಕ ಶ್ರೇಣಿಯ ಆಯ್ಕೆಗಳನ್ನು ಒದಗಿಸುವುದರಲ್ಲಿ ಬ್ರ್ಯಾಂಡ್‌ನ ಶಕ್ತಿಯು ಅಡಗಿದೆ. ಹುಂಡೈ ಕಾರಿನ ಅಗ್ಗದ ಮಾಡೆಲ್ ಗ್ರಾಂಡ್ i10 ನಿಯೋಸ್ ಬೆಲೆಯು ₹ 5.84 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ಅತ್ಯಂತ ದುಬಾರಿ ಮಾಡೆಲ್, ಐಯೊನಿಕ್ 5, ₹ 45.95 ಲಕ್ಷದಿಂದ ಪ್ರಾರಂಭವಾಗುತ್ತದೆ.
ಹುಂಡೈನ ಇತರ ಜನಪ್ರಿಯ ಮಾಡೆಲ್‌ಗಳನ್ನು ನೋಡಲು ಬಯಸುವಿರಾ? ಇಲ್ಲಿದೆ ತ್ವರಿತ ನೋಟ.
ಹುಂಡೈ ಮಾಡೆಲ್‌ಗಳು | ಕಾರ್ ಸೆಗ್ಮೆಂಟ್ |
ಹುಂಡೈ i20 | ಹ್ಯಾಚ್‌ಬ್ಯಾಕ್ |
ಹುಂಡೈ ಕೋನಾ ಎಲೆಕ್ಟ್ರಿಕ್ | ಎಸ್‌ಯುವಿ |
ಹುಂಡೈ ವೆರ್ನಾ | ಸೆಡಾನ್ |
ಹುಂಡೈ ಎಲಾಂಟ್ರಾ | ಸೆಡಾನ್ |
ಹುಂಡೈ ಟುಕ್ಸಾನ್ | ಎಸ್‌ಯುವಿ |
ನೀವು ಹೊಸ ಹುಂಡೈ ಕಾರನ್ನು ಖರೀದಿಸಲು ಯೋಜಿಸುತ್ತಿರಬಹುದು. ನೀವು ನಿಮ್ಮ ಸಂಶೋಧನೆಯನ್ನು ಪ್ರಾರಂಭಿಸುವ ಮೊದಲು ಕೆಲವು ಜನಪ್ರಿಯ ಹುಂಡೈ ಮಾಡೆಲ್ಗಳ ಬೆಲೆಗಳನ್ನು ನೋಡೋಣ.
ಹುಂಡೈ ಮಾಡೆಲ್‌ಗಳು | ಬೆಲೆ ಶ್ರೇಣಿ (ಆನ್-ರೋಡ್ ಬೆಲೆ ಮುಂಬೈ) |
ಹುಂಡೈ i20 | ₹ 8.38 ಲಕ್ಷದಿಂದ ₹ 13.86 ಲಕ್ಷದವರೆಗೆ. |
ಹುಂಡೈ ಕೋನಾ ಎಲೆಕ್ಟ್ರಿಕ್ | ₹ 25.12 ಲಕ್ಷದಿಂದ ₹ 25.42 ಲಕ್ಷದವರೆಗೆ |
ಹುಂಡೈ ವೆರ್ನಾ | ₹ 13.06 ಲಕ್ಷದಿಂದ ₹ 16.83 ಲಕ್ಷದವರೆಗೆ |
ಹುಂಡೈ ಎಲಾಂಟ್ರಾ | ₹ 18.83 ಲಕ್ಷದಿಂದ ₹ 25.70 ಲಕ್ಷದವರೆಗೆ |
ಹುಂಡೈ ಟುಕ್ಸಾನ್ | ₹ 34.73 ಲಕ್ಷದಿಂದ ₹ 43.78 ಲಕ್ಷದವರೆಗೆ |
ಹುಂಡೈ ಕ್ರೆಟಾ | ₹ 12.89 ರಿಂದ ₹ 23.02 ಲಕ್ಷ |
ಹುಂಡೈ ಗ್ರ್ಯಾಂಡ್ i10 ನಿಯೋಸ್ | ₹ 6.93 - 9.93 ಲಕ್ಷ (ಪೆಟ್ರೋಲ್) ಮತ್ತು ₹ 8.73 - 9.36 ಲಕ್ಷ (CNG) |
ಹುಂಡೈ ವೆನ್ಯೂ | ₹ 9.28 ಲಕ್ಷದಿಂದ ₹ 16.11 ಲಕ್ಷದವರೆಗೆ |
ಹುಂಡೈ ಆರಾ | ₹ 7.61 ಲಕ್ಷದಿಂದ ₹ 10.40 ಲಕ್ಷ |
ಹುಂಡೈ ಅಯಾನಿಕ್5 | ₹ 48,72,795 |
ಥರ್ಡ್-ಪಾರ್ಟಿ (TP) ಪ್ಲಾನ್‌ಗಳು: ಥರ್ಡ್ ಪಾರ್ಟಿ (TP) ಪ್ಲಾನ್ ಕೇವಲ ಒಂದು ಆಯ್ಕೆಯಾಗಿಲ್ಲ. ಭಾರತದಲ್ಲಿ, ಥರ್ಡ್ ಪಾರ್ಟಿ ಕವರ್‌ನೊಂದಿಗೆ ನಿಮ್ಮ ಕಾರನ್ನು ರಕ್ಷಿಸುವುದು ಕಡ್ಡಾಯವಾಗಿದೆ. ಆದ್ದರಿಂದ, ದಂಡಗಳನ್ನು ತಪ್ಪಿಸಲು ನಿಮಗೆ ಅನುವು ನೀಡುವುದರಿಂದ, ನೀವು ಈ ಕವರ್ ಅನ್ನು ಕನಿಷ್ಠ ಪಕ್ಷ ಖರೀದಿಸುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಹುಂಡೈ ಕಾರು ಥರ್ಡ್ ಪಾರ್ಟಿಗೆ ಯಾವುದೇ ರೀತಿಯ ಹಾನಿಯನ್ನು ಉಂಟುಮಾಡಿದರೆ ಉಂಟಾಗಬಹುದಾದ ಹಣಕಾಸಿನ ಹೊಣೆಗಾರಿಕೆಗಳಿಂದ ಥರ್ಡ್ ಪಾರ್ಟಿ ಪ್ಲಾನ್ ನಿಮ್ಮನ್ನು ರಕ್ಷಿಸುತ್ತದೆ.
ಥರ್ಡ್ ಪಾರ್ಟಿ ಪ್ಲಾನ್‌ಗಳ ಬಗ್ಗೆ ಆಸಕ್ತಿದಾಯಕ ವಿಷಯವೆಂದರೆ ಅವುಗಳು ತುಂಬಾ ಕೈಗೆಟುಕುವ ಮತ್ತು ಸಮಂಜಸವಾದ ಬೆಲೆಯಲ್ಲಿವೆ. ಏಕೆಂದರೆ ಪ್ರತಿ ವಾಹನದ ಕ್ಯುಬಿಕ್ ಸಾಮರ್ಥ್ಯದ ಆಧಾರದ ಮೇಲೆ ಥರ್ಡ್ ಪಾರ್ಟಿ ಪ್ಲಾನ್‌ಗಳಿಗೆ IRDAI ಪ್ರೀಮಿಯಂ ನಿರ್ದಿಷ್ಟಪಡಿಸಿದೆ. ಆದ್ದರಿಂದ, ಸೂಕ್ತ ಪ್ರೀಮಿಯಂನಲ್ಲಿ ಥರ್ಡ್ ಪಾರ್ಟಿ ಕ್ಲೇಮ್‌ಗಳ ವಿರುದ್ಧ ನಿಮ್ಮ ಹಣಕಾಸನ್ನು ರಕ್ಷಿಸಲಾಗುತ್ತದೆ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದು.
ಸ್ವಂತ ಹಾನಿ (OD) ಇನ್ಶೂರೆನ್ಸ್: ನಿಮ್ಮ ಹುಂಡೈ ಕಾರಿಗೆ ಸ್ವಂತ ಹಾನಿ (OD) ಇನ್ಶೂರೆನ್ಸ್ ಐಚ್ಛಿಕವಾಗಿದೆ. ಆದರೆ ನಮ್ಮನ್ನು ನಂಬಿ, ಇದು ನಿಮಗೆ ಹಲವಾರು ರೀತಿಯಲ್ಲಿ ಪ್ರಯೋಜನ ನೀಡಬಹುದು. ಅಪಘಾತದ ಕಾರಣದಿಂದ ಅಥವಾ ಭೂಕಂಪ, ಬೆಂಕಿ ಅಥವಾ ಬಿರುಗಾಳಿಯಂತಹ ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಿ ನಿಮ್ಮ ಹುಂಡೈ ಕಾರು ಹಾನಿಗೊಳಗಾದರೆ, ಅಂತಹ ಹಾನಿಗಳನ್ನು ಸರಿಪಡಿಸುವಲ್ಲಿ ಭಾರಿ ವೆಚ್ಚಗಳು ಉಂಟಾಗಬಹುದು. ಸ್ವಂತ ಹಾನಿ ಇನ್ಶೂರೆನ್ಸ್ ಈ ವೆಚ್ಚಗಳನ್ನು ಕವರ್ ಮಾಡುತ್ತದೆ.
ನೀವು ಸ್ವಂತ ಹಾನಿ ಇನ್ಶೂರೆನ್ಸ್ ಪ್ರೀಮಿಯಂ ಎಷ್ಟೆಂದು ಯೋಚಿಸುತ್ತಿದ್ದೀರಾ? ಥರ್ಡ್ ಪಾರ್ಟಿ ಪ್ಲಾನ್‌ಗಳಿಗೆ ಪ್ರೀಮಿಯಂನಂತಲ್ಲದೆ, ನಿಮ್ಮ ಹುಂಡೈ ಕಾರಿಗೆ ಓನ್ ಡ್ಯಾಮೇಜ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ನಿಮ್ಮ ವಾಹನದ ಕ್ಯೂಬಿಕ್ ಸಾಮರ್ಥ್ಯದಿಂದ ಮಾತ್ರ ನಿರ್ಧರಿಸಲಾಗುವುದಿಲ್ಲ. ಇದು ಇನ್ಶೂರೆನ್ಸ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಮತ್ತು ನಿಮ್ಮ ಕಾರು ನೋಂದಣಿಯಾದ ನಗರದ ಆಧಾರದ ಮೇಲೆ ನಿಮ್ಮ ವಾಹನದ ವಲಯವನ್ನು ಅವಲಂಬಿಸಿರುತ್ತದೆ. ನೀವು ಆಯ್ಕೆ ಮಾಡಿದ ಇನ್ಶೂರೆನ್ಸ್ ಕವರೇಜ್ ಕೂಡ ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ಆ್ಯಡ್-ಆನ್‌ಗಳೊಂದಿಗೆ ವಿಸ್ತರಿಸಬಹುದಾದ ಅಥವಾ ಇಲ್ಲದ ಸ್ಟ್ಯಾಂಡ್‌ಅಲೋನ್ ಸ್ವಂತ-ಹಾನಿ ಕವರ್‌ನ ಪ್ರೀಮಿಯಂಗಿಂತ ಬಂಡಲ್ ಮಾಡಲಾದ ಕವರ್‌ನ ವೆಚ್ಚಗಳು ಭಿನ್ನವಾಗಿರುತ್ತವೆ. ಇದಲ್ಲದೆ, ನೀವು ನಿಮ್ಮ ಹುಂಡೈಗೆ ಯಾವುದೇ ಮಾರ್ಪಾಡುಗಳನ್ನು ಮಾಡಿದ್ದರೆ, ಅದು ವಿಧಿಸಲಾದ ಪ್ರೀಮಿಯಂನಲ್ಲಿಯೂ ಕಾಣಿಸಿಕೊಳ್ಳುತ್ತದೆ.
ನಿಮ್ಮ ಹುಂಡೈ ಕಾರಿಗೆ ಕಾರು ಇನ್ಶೂರೆನ್ಸ್ ಖರೀದಿಸುವುದು ಸುಲಭ. ಅದು ಕೆಲವು ಸರಳ ಮತ್ತು ತ್ವರಿತ ಹಂತಗಳನ್ನು ಒಳಗೊಂಡಿದೆ. ನೀವು ಏನು ಮಾಡಬೇಕು ಎಂಬುದನ್ನು ನೋಡಿ.
ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಅಥವಾ ನವೀಕರಿಸುವಾಗ, ಅದರ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಹಂತವಾರು ಮಾರ್ಗದರ್ಶಿ ಇಲ್ಲಿದೆ
ಹಂತ 1: ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಕಾರ್ ಇನ್ಶೂರೆನ್ಸ್ ಪುಟಕ್ಕೆ ನ್ಯಾವಿಗೇಟ್ ಮಾಡಿ. ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ಅನುಸರಿಸುವ ಇತರ ವಿವರಗಳನ್ನು ಭರ್ತಿ ಮಾಡಿ.
ಹಂತ 2: ಪಾಲಿಸಿ ವಿವರಗಳನ್ನು ನಮೂದಿಸಿ ಮತ್ತು ನೀವು ಹೊಂದಿದ್ದರೆ ನೋ ಕ್ಲೈಮ್ ಬೋನಸ್ ಬಗ್ಗೆ ನಮೂದಿಸಿ. ಹೆಚ್ಚುವರಿಯಾಗಿ, ಆ್ಯಡ್-ಆನ್ ಕವರ್ ಆಯ್ಕೆ ಮಾಡಿ.
ಹಂತ 3: ಆನ್ಲೈನ್ ಪಾವತಿ ಮೂಲಕ ಪ್ರೀಮಿಯಂ ಮೊತ್ತವನ್ನು ಪಾವತಿಸುವುದರೊಂದಿಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
ಹುಂಡೈ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ದೃಢೀಕರಣದ ಮೇಲ್ ಅನ್ನು ನಿಮಗೆ ಮೇಲ್ ಮಾಡಲಾಗುತ್ತದೆ.
ಹಂತ 1- ಎಚ್‌ಡಿಎಫ್‌ಸಿ ಎರ್ಗೋ ಸೈಟ್‌ಗೆ ಭೇಟಿ ನೀಡಿ, ಲಾಗಿನ್ ಮಾಡಿ ಮತ್ತು ಚೆಕ್ ಬಾಕ್ಸಿನಲ್ಲಿ ನಿಮ್ಮ ಹುಂಡೈ ಕಾರ್ ವಿವರಗಳನ್ನು ನಮೂದಿಸಿ. ಎಲ್ಲಾ ವಿವರಗಳನ್ನು ನಮೂದಿಸಿ.
ಹಂತ 2- ಹೊಸ ಪ್ರೀಮಿಯಂ ಮುಖ್ಯವಾಗಿ ಇನ್ಶೂರ್ಡ್ ಘೋಷಿತ ಮೌಲ್ಯವನ್ನು ಅವಲಂಬಿಸಿರುತ್ತದೆ.
ಹಂತ 3- ಇನ್ಶೂರೆನ್ಸ್ ಸಂಬಂಧಿತ ಡಾಕ್ಯುಮೆಂಟ್‌ಗಳ ಎಲ್ಲಾ ಮಾರಾಟ ಮತ್ತು ವರ್ಗಾವಣೆಯನ್ನು ಅಪ್ಲೋಡ್ ಮಾಡಿ. ಸಮಗ್ರ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯ ನಡುವೆ ಆಯ್ಕೆ ಮಾಡಿ. ಸಮಗ್ರ ಪ್ಲಾನ್‌ನೊಂದಿಗೆ ನೀವು ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಬಹುದು.
ಹಂತ 4- ಹುಂಡೈ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಪಾವತಿಸಿ ಮತ್ತು ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಉಳಿಸಿ. ನೀವು ಇನ್ಶೂರೆನ್ಸ್ ಪಾಲಿಸಿಯ ಸಾಫ್ಟ್ ಕಾಪಿಯನ್ನು ಇಮೇಲ್ ಮೂಲಕ ಪಡೆಯುತ್ತೀರಿ.
ಹುಂಡೈ ಇನ್ಶೂರೆನ್ಸ್ ನವೀಕರಣಕ್ಕಾಗಿ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕು
ಹಂತ 1: ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಪಾಲಿಸಿಯನ್ನು ನವೀಕರಿಸಿ ಆಯ್ಕೆಮಾಡಿ.
ಹಂತ 2: ವಿವರಗಳನ್ನು ನಮೂದಿಸಿ, ಆ್ಯಡ್ ಆನ್ ಕವರ್‌ಗಳನ್ನು ಸೇರಿಸಿ/ಹೊರತುಪಡಿಸಿ ಮತ್ತು ಹುಂಡೈ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಆನ್ಲೈನಿನಲ್ಲಿ ಪಾವತಿಸುವ ಮೂಲಕ ಪ್ರಯಾಣವನ್ನು ಪೂರ್ಣಗೊಳಿಸಿ.
ಹಂತ 3: ನವೀಕರಿಸಲಾದ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ID ಗೆ ಮೇಲ್ ಮಾಡಲಾಗುತ್ತದೆ.
ನಿಮ್ಮ ಹುಂಡೈ ಕಾರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ನಗದುರಹಿತ ಕ್ಲೈಮ್ ಮಾಡಲು ನೀವು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕಾಗುತ್ತದೆ:
ನಮ್ಮ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ಗೆ ಮೆಸೇಜ್ ಕಳುಹಿಸುವ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ಕ್ಲೈಮ್ ಸೂಚನೆಯನ್ನು ತಿಳಿಸಿ.
ನಿಮ್ಮ ಹುಂಡೈ ಕಾರನ್ನು ಎಚ್‌ಡಿಎಫ್‌ಸಿ ಎರ್ಗೋ ನಗದುರಹಿತ ನೆಟ್ವರ್ಕ್ ಗ್ಯಾರೇಜಿಗೆ ಕೊಂಡೊಯ್ಯಿರಿ. ಇಲ್ಲಿ, ವಿಮಾದಾತರು ನೇಮಕ ಮಾಡಿದ ವ್ಯಕ್ತಿಯಿಂದ ನಿಮ್ಮ ವಾಹನವನ್ನು ಪರಿಶೀಲಿಸಲಾಗುತ್ತದೆ.
ನಮ್ಮ ಅನುಮೋದನೆಯನ್ನು ಪಡೆದ ನಂತರ, ಗ್ಯಾರೇಜ್ ನಿಮ್ಮ ಕಾರನ್ನು ದುರಸ್ತಿ ಮಾಡಲು ಆರಂಭಿಸುತ್ತದೆ
ಇದರ ನಡುವೆ, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್ ಅನ್ನು ನಮಗೆ ಸಲ್ಲಿಸಿ. ಯಾವುದೇ ನಿರ್ದಿಷ್ಟ ಡಾಕ್ಯುಮೆಂಟ್ ಅಗತ್ಯವಿದ್ದರೆ, ನಾವು ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.
ಎಚ್‌ಡಿಸಿ ಎರ್ಗೋ ಕ್ಲೈಮ್ ತಂಡವು ಕಾರ್ ಇನ್ಶೂರೆನ್ಸ್‌ನಲ್ಲಿ ನಗದುರಹಿತ ಕ್ಲೈಮ್ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಕ್ಲೈಮ್ ಅನ್ನು ಅಂಗೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ.
ಯಶಸ್ವಿ ಪರಿಶೀಲನೆಯ ನಂತರ, ರಿಪೇರಿ ವೆಚ್ಚಗಳನ್ನು ನೇರವಾಗಿ ಗ್ಯಾರೇಜಿಗೆ ಪಾವತಿಸುವ ಮೂಲಕ ನಾವು ನಗದುರಹಿತ ಹುಂಡೈ ಕಾರ್ ಇನ್ಶೂರೆನ್ಸ್ ಕ್ಲೈಮ್ ಸೆಟಲ್ ಮಾಡುತ್ತೇವೆ. ಅನ್ವಯವಾಗುವ ಕಡಿತಗಳು ಯಾವುದಾದರೂ ಇದ್ದರೆ, ಅದನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿಡಿ.
ಹುಂಡೈ ಕಾರ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ
ಹಂತ 1: ನಿಮ್ಮ ಹುಂಡೈ ಕಾರಿನ ನೋಂದಣಿ ಪ್ರಮಾಣಪತ್ರ (RC) ಬುಕ್ ಪ್ರತಿ.
ಹಂತ 2: ಘಟನೆಯ ಸಮಯದಲ್ಲಿ ಇನ್ಶೂರ್ಡ್ ವಾಹನವನ್ನು ಚಾಲನೆ ಮಾಡುವ ವ್ಯಕ್ತಿಯ ಚಾಲಕ ಪರವಾನಗಿ ಪ್ರತಿ.
ಹಂತ 3: ಘಟನೆಯ ಕುರಿತು ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ಸಲ್ಲಿಸಿದ FIR ಪ್ರತಿ.
ಹಂತ 4: ಗ್ಯಾರೇಜಿನಿಂದ ರಿಪೇರಿ ಅಂದಾಜುಗಳು
ಹಂತ 5: ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ಡಾಕ್ಯುಮೆಂಟ್‌ಗಳು
ನೀವು ಹೆಚ್ಚು ಎಚ್ಚರಿಕೆಯ ಚಾಲಕರಾಗಿದ್ದರೆ, ನಿಮ್ಮ ಹುಂಡೈ ಕಾರಿಗೆ ಇನ್ಶೂರೆನ್ಸ್ ಏಕೆ ಅಗತ್ಯವಿದೆ ಎಂಬುದು ನಿಮ್ಮ ಕುತೂಹಲಕಾರಿ ಪ್ರಶ್ನೆ, ಅಲ್ಲವೇ? ನಿಮ್ಮ ಕಾರಿಗೆ ಇನ್ಶೂರೆನ್ಸ್ ಕೇವಲ ಒಂದು ಆಯ್ಕೆ ಮಾತ್ರವಲ್ಲ. ಮೋಟಾರ್ ವಾಹನ ಕಾಯ್ದೆ 1988, ಭಾರತೀಯ ರಸ್ತೆಗಳಲ್ಲಿ ಪ್ರಯಾಣಿಸುವ ಎಲ್ಲಾ ವಾಹನಗಳಿಗೆ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಹೊಂದುವುದನ್ನು ಕಡ್ಡಾಯಗೊಳಿಸಿದೆ. ಆದ್ದರಿಂದ, ನಿಮ್ಮ ಹುಂಡೈ ಕಾರನ್ನು ಇನ್ಶೂರ್ ಮಾಡುವುದು ಕೇವಲ ಬದಲಿ ಪರಿಗಣನೆಯಾಗಿ ಮಾತ್ರವಲ್ಲ, ಕಾರನ್ನು ಹೊಂದುವ ಸಂಪೂರ್ಣ ಅನುಭವದ ಕಾನೂನುಬದ್ಧವಾಗಿ ಕಡ್ಡಾಯವಾದ ಒಂದು ಭಾಗವಾಗಿದೆ.
And that’s not the only reason to insure your treasured Hyundai. Check out the other ways in which you can benefit from purchasing ಕಾರ್ ಇನ್ಶೂರೆನ್ಸ್.
ನಿಮ್ಮ ಹುಂಡೈ ಮೂಲಕ ಉಂಟಾಗುವ ಆಕ್ಸಿಡೆಂಟ್, ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ತರಬಹುದು. ಉದಾಹರಣೆಗೆ, ನೀವು ಆಕಸ್ಮಿಕವಾಗಿ ಬೇರೊಬ್ಬರ ಆಸ್ತಿಗೆ ಹಾನಿ ಉಂಟುಮಾಡಿದರೆ, ಅದರ ಮಾಲೀಕರು ನಿಮ್ಮಿಂದ ಆ ಹಾನಿಗೆ ಪರಿಹಾರ ಕ್ಲೈಮ್ ಮಾಡಬಹುದು. ಈ ಅನಿರೀಕ್ಷಿತ ಖರ್ಚು ಸಾಕಷ್ಟು ಹೆಚ್ಚಾಗಿದ್ದು, ನಿಮ್ಮ ಹಣಕಾಸಿನ ಮೇಲೆ ಭಾರೀ ಹೊರೆಯಾಗಬಹುದು. ಆದರೆ ನಿಮ್ಮ ಬಳಿ ಕಾರ್ ಇನ್ಶೂರೆನ್ಸ್ ಇದ್ದರೆ, ಈ ಹೊಣೆಗಾರಿಕೆಗಳು ಕವರ್ ಆಗುತ್ತವೆ ಮತ್ತು ನಿಮ್ಮ ಜೇಬಿಗೆ ಯಾವುದೇ ಹೊರೆಯಾಗುವುದಿಲ್ಲ ಎಂಬ ಖಾತ್ರಿ ಇರುತ್ತದೆ.
ಕಾರ್ ಇನ್ಶೂರೆನ್ಸ್ ಕೇವಲ ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ನೋಡಿಕೊಳ್ಳುವುದಿಲ್ಲ. ಇದು ನಿಮ್ಮನ್ನು, ನಿಮ್ಮ ಹುಂಡೈ ಕಾರನ್ನು ಮತ್ತು ನಿಮ್ಮ ಹಣಕಾಸನ್ನು ಸಹ ನೋಡಿಕೊಳ್ಳುತ್ತದೆ. ನಿಮ್ಮ ಕಾರಿಗೆ ಆದ ಯಾವುದೇ ಹಾನಿಗಳನ್ನು ದುರಸ್ತಿ ಮಾಡುವ ವೆಚ್ಚಗಳೂ ಸಹ ಕವರ್ ಆಗುತ್ತವೆ. ಇಂತಹ ಇನ್ನಷ್ಟು ಪ್ರಯೋಜನಗಳೂ ಇವೆ. ಕಾರ್ ಇನ್ಶೂರೆನ್ಸ್ ನಿಮಗೆ ಪರ್ಸನಲ್ ಆಕ್ಸಿಡೆಂಟ್ ಕವರ್, ನಿಮ್ಮ ಕಾರು ರಿಪೇರಿಗೆ ಕೊಟ್ಟಾಗ ಪರ್ಯಾಯ ಸಾರಿಗೆ ಖರ್ಚುಗಳ ಕವರೇಜ್ ಮತ್ತು ತುರ್ತು ರಸ್ತೆಬದಿಯ ಸಹಾಯದಂತಹ ಇತರ ಮೌಲ್ಯವರ್ಧಿತ ಪ್ರಯೋಜನಗಳನ್ನು ಕೂಡ ನೀಡುತ್ತದೆ.
ವಾಹನ ಸವಾರಿಯಲ್ಲಿ ನಿಮಗೆ ಎಷ್ಟು ಕಡಿಮೆ ಅಥವಾ ಎಷ್ಟು ಹೆಚ್ಚು ವರ್ಷಗಳ ಅನುಭವ ಇದ್ದರೂ ಸರಿ, ನೀವು ಇನ್ಶೂರೆನ್ಸ್ ಮಾಡಿಸದಿದ್ದರೆ ನಿಮ್ಮ ಹುಂಡೈಯನ್ನು ರಸ್ತೆಗೆ ಇಳಿಸುವಾಗ ಒತ್ತಡವಂತೂ ಇದ್ದೇ ಇರುತ್ತದೆ. ಆಕ್ಸಿಡೆಂಟ್‌ನಿಂದ ನಿಮ್ಮ ಹಣಕಾಸು ಇದ್ದಕ್ಕಿದ್ದಂತೆ ಖಾಲಿಯಾಗುವ ಸಾಧ್ಯತೆಯನ್ನು ಎಂದಿಗೂ ತಳ್ಳಿಹಾಕುವಂತಿಲ್ಲ. ಆದರೆ ನಿಮ್ಮ ಹುಂಡೈಗೆ ಕಾರ್ ಇನ್ಶೂರೆನ್ಸ್ ಮಾಡಿಸಿಬಿಟ್ಟರೆ, ಈ ಎಲ್ಲಾ ಚಿಂತೆಗಳಿಗೆ ಗುಡ್‌ಬೈ ಹೇಳಿ, ಆರಾಮದಾಯಕ ಮತ್ತು ಒತ್ತಡ-ರಹಿತ ಡ್ರೈವಿಂಗ್‌ನ ಅನುಭವ ಪಡೆಯಬಹುದು.
ನಿಮ್ಮ ವಿಶ್ವಾಸಾರ್ಹ ಹುಂಡೈ ಕಾರಿನೊಂದಿಗೆ, ಯಾವುದೇ ಸಂದೇಹವಿಲ್ಲದೇ, ನೀವು ಹೆಚ್ಚು ರಸ್ತೆಗಳಲ್ಲಿ ಪ್ರಯಾಣಿಸುವುದರ ಬಗ್ಗೆ ಮತ್ತು ಹೊಸದಾದ ಮಾರ್ಗಗಳನ್ನು ಕಂಡುಹಿಡಿಯುವುದರ ಬಗ್ಗೆ ಉತ್ಸುಕರಾಗಿರುತ್ತೀರಿ. ಆದರೆ, ಅನಿರೀಕ್ಷಿತ ತೊಡಕುಗಳು ನಿಮ್ಮ ಮುಂದಿನ ತಿರುವಿನಲ್ಲೇ ಬರಬಹುದು. ಕಾರು ಕೆಟ್ಟುನಿಲ್ಲಬಹುದು. ಟೋಯಿಂಗ್ ಸಹಾಯದ ಅಗತ್ಯ ಬೀಳಬಹುದು. ತುರ್ತು ರಿಫ್ಯೂಯಲ್ ಬೇಕಾಗಬಹುದು. ಅಥವಾ ಸಾಮಾನ್ಯ ಯಾಂತ್ರಿಕ ಸಮಸ್ಯೆಗಳಾಗಬಹುದು. ನೀವು ದೂರದ ಜಾಗಗಳಲ್ಲಿದ್ದಾಗ ಅಂತಹ ಅನಿರೀಕ್ಷಿತ ವೆಚ್ಚಗಳ ಪಾವತಿಗಾಗಿ ನಗದು ಹಣ ಹುಡುಕುವುದು ಸಾಧ್ಯವಾಗದೇ ಇರಬಹುದು. ಆದರೆ ನೀವು ಎಚ್‌ಡಿಎಫ್‌ಸಿ ಎರ್ಗೋ ಕಾರ್ ಇನ್ಶೂರೆನ್ಸ್ ಅನ್ನು ಹೊಂದಿದ್ದರೆ, ತುರ್ತು ಸಹಾಯದ ಪಾವತಿಗಾಗಿ ಹಣವನ್ನು ಹುಡುಕಾಡಲು ಚಿಂತಿಸಬೇಕಾಗಿಲ್ಲ. ನಿಮ್ಮ ಹುಂಡೈ ಕಾರನ್ನು ಯಾವಾಗಲೂ ನೋಡಿಕೊಳ್ಳಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀವು ನಮ್ಮ ನಗದುರಹಿತ ಗ್ಯಾರೇಜ್ ಸೌಲಭ್ಯವನ್ನು ಅವಲಂಬಿಸಬಹುದು.
ದೇಶದಾದ್ಯಂತ ಇರುವ, ನಮ್ಮ 9000 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜುಗಳ ವ್ಯಾಪಕ ನೆಟ್ವರ್ಕನ್ನು ನೀವು ಎಲ್ಲಿದ್ದರೂ ಅಕ್ಸೆಸ್ ಮಾಡಬಹುದು ಮತ್ತು ಯಾವುದೇ ಸಮಯದಲ್ಲಿಯೂ ಅದನ್ನು ಪಡೆಯಬಹುದು. ಹಾಗಾಗಿ, ಮುನ್ನುಗ್ಗಿ, ನೀವು ಅನ್ವೇಷಿಸಲು ಉತ್ಸುಕರಾಗಿರುವ ಎಲ್ಲಾ ರಸ್ತೆಗಳಲ್ಲೂ ಪ್ರಯಾಣಿಸಿ. ನಮ್ಮ ಕಾರ್ ಇನ್ಶೂರೆನ್ಸ್ ನಿಮ್ಮನ್ನು ನೋಡಿಕೊಳ್ಳುತ್ತದೆ.
ವರ್ನಾದ ಅನೇಕ ವೇರಿಯೆಂಟ್‌ಗಳಿಗೆ ಹುಂಡೈ ಬೆಲೆಯನ್ನು ಹೆಚ್ಚಿಸಿದೆ
ಸಣ್ಣ ಕಾಸ್ಮೆಟಿಕ್ ಪರಿಷ್ಕರಣೆಗಳಿಂದಾಗಿ, ಹುಂಡೈ ವರ್ನಾದ ಅನೇಕ ವೇರಿಯಂಟ್‌ಗಳಿಗೆ ಬೆಲೆಗಳನ್ನು ಹೆಚ್ಚಿಸಿದೆ. ಆದಾಗ್ಯೂ, ವರ್ನಾ EX 1.5 ಪೆಟ್ರೋಲ್ MT ವೇರಿಯಂಟ್‌ನ ಆರಂಭಿಕ ಬೆಲೆ ₹ 11 ಲಕ್ಷ (ಎಕ್ಸ್-ಶೋರೂಮ್) ಆಗಿರುತ್ತದೆ. ಇತರ ಎಲ್ಲಾ ವೇರಿಯಂಟ್‌ಗಳು ₹ 6000 ರ ಮೇಲ್ಮುಖ ಬೆಲೆ ಪರಿಷ್ಕರಣೆಯನ್ನು ನೋಡಿವೆ. ಇದರಿಂದಾಗಿ ವರ್ನಾ ರೇಂಜ್ ಈಗ ₹ 17.48 ಲಕ್ಷದ ಬೆಲೆ ಟ್ಯಾಗ್ ಹೊಂದಿದೆ. ಗ್ರಾಹಕರು ಆರು ವೇರಿಯಂಟ್‌ಗಳೊಂದಿಗೆ ವರ್ನಾದಲ್ಲಿ 10 ಕಲರ್ ಆಯ್ಕೆಗಳನ್ನು ಹೊಂದಿದ್ದಾರೆ.
ಪ್ರಕಟಣೆ ದಿನಾಂಕ: ನವೆಂಬರ್ 14, 2024
ಎಂಕೆ ಸ್ಟಾಲಿನ್ ಹುಂಡೈ ಮೋಟಾರ್ ಇಂಡಿಯಾದ ಹೈಡ್ರೋಜನ್ ಇನ್ನೋವೇಶನ್ ಸೆಂಟರ್‌ನ ವರ್ಚುವಲ್ ಗ್ರೌಂಡ್ ಬ್ರೇಕಿಂಗ್ ಸಮಾರಂಭವನ್ನು ಮಾಡಿದರು
ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಹುಂಡೈ ಮೋಟಾರ್ ಇಂಡಿಯಾದ ಹೈಡ್ರೋಜನ್ ಇನ್ನೋವೇಶನ್ ಸೆಂಟರ್‌ಗೆ ಅಡಿಪಾಯ ಹಾಕಿದರು. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (HMIL) IIT ಮದ್ರಾಸ್ ಸಹಯೋಗದೊಂದಿಗೆ ಮೀಸಲಾದ ಹೈಡ್ರೋಜನ್ ನಾವೀನ್ಯತೆ ಕೇಂದ್ರವನ್ನು ಸ್ಥಾಪಿಸುತ್ತದೆ. ಈ ಕೇಂದ್ರವು 2026 ರ ಒಳಗೆ ಸಂಪೂರ್ಣವಾಗಿ ಕಾರ್ಯಾಚರಣೆಯಲ್ಲಿರುತ್ತದೆ ಮತ್ತು ಆಟೋಮೋಟಿವ್ ನಾವೀನ್ಯತೆಯ ಕೇಂದ್ರವಾಗಿ ತಮಿಳುನಾಡನ್ನು ಬಲಪಡಿಸುವ HMIL ನ ಗುರಿಗೆ ಅನುಗುಣವಾಗಿದೆ. ಇದು ತಮಿಳುನಾಡಿನಲ್ಲಿ ಕಾರ್ಬನ್ ಹೆಜ್ಜೆಗುರುತನ್ನು ಕಡಿಮೆ ಮಾಡಲು ಪರಿಣಾಮಕಾರಿ ಕ್ರಮ ಕೂಡ ಆಗಿದೆ.
ಪ್ರಕಟಿಸಲಾದ ದಿನಾಂಕ: ಆಗಸ್ಟ್ 22, 2024