ಜಪಾನ್ ಮೂಲದ ಕಾರ್ ಮೇಕರ್ ಡಾಟ್ಸನ್, 2014 ರಲ್ಲಿ ಭಾರತದಲ್ಲಿ ಡಾಟ್ಸನ್ ಗೋ ಸ್ಥಾಪಿಸುವ ಮೂಲಕ ಡಾಟ್ಸನ್ ಹೆಸರಿಗೆ ಪುನರುಜ್ಜೀವನ ನೀಡಿದರು. ಇಂಡೋನೇಷಿಯಾ, ಭಾರತ, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದಂತಹ ದೇಶಗಳಿಗೆ ಬಜೆಟ್ ಕಾರ್ ಬ್ರಾಂಡ್ ಆಗಿ ಡಾಟ್ಸನ್ ಸ್ಥಾನ ಪಡೆದುಕೊಂಡಿದೆ. ತನ್ನ ಮೌಲ್ಯ ಮತ್ತು ವಿಶ್ವಾಸಾರ್ಹತೆಯಿಂದ ಜಗತ್ತಿನಾದ್ಯಂತ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಪಾಲು ಪಡೆಯಲು ತಮ್ಮ ಬ್ರ್ಯಾಂಡ್‌ನ ಖ್ಯಾತಿಯು ಸಹಾಯ ಮಾಡುತ್ತದೆ ಎಂಬುದು ಡಾಟ್ಸನ್ ಕಂಪನಿಯ ನಂಬಿಕೆ.
ರೆನಾಲ್ಟ್-ಡಾಟ್ಸನ್ 'V' ವೇದಿಕೆಯಿಂದ ತಯಾರಾದ ಡಾಟ್ಸನ್ ಗೋ, ಡಾಟ್ಸನ್‌ನ ಮೊದಲ ಕಾರ್ ಆಗಿದೆ. ಡಾಟ್ಸನ್ ಗೋ ಕಾರು, ಭಾರತದಲ್ಲಿ ಕಂಪನಿಯು ಸ್ಪರ್ಧಾತ್ಮಕ ಬೆಲೆಯಲ್ಲಿ ದೊರೆಯುತ್ತಿರುವ ಒಂದು ಫ್ಯಾಮಿಲಿ ಹ್ಯಾಚ್‌ಬ್ಯಾಕ್ ಆಗಿದೆ. 'ಗೋ' ಆಧಾರದ ಮೇಲೆ ಡಾಟ್ಸನ್ ಕಂನಿಯು ಒಂದು 7-ಸೀಟ್ ಮಲ್ಟಿ-ಪರ್ಪಸ್ ವಾಹನ (MPV) ಅನ್ನು ಸಹ ಪ್ರಾರಂಭಿಸಿತು. ಗೋ ಪ್ಲಸ್ (ಗೋ ಆಧಾರಿತ MPV) ಕುಟುಂಬಸ್ಥ ಖರೀದಿದಾರರನ್ನು ಗುರಿಯಾಗಿಟ್ಟುಕೊಂಡಿದೆ. 2016 ರಲ್ಲಿ ಮಾರುಕಟ್ಟೆಗೆ ಬಂದ ಮೂರನೇ ಉತ್ಪನ್ನಕ್ಕೆ ರೆಡಿ-ಗೋ ಎಂದು ಹೆಸರಿಡಲಾಯಿತು. ಇದು ನಗರ ಪ್ರದೇಶದ ಜನರನ್ನು ಗುರಿಯಾಗಿಟ್ಟುಕೊಂಡಿರುವ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ. ಖರ್ಚು ಕಡಿಮೆ ಮಾಡುವ ಮೂಲಕ, ಹ್ಯಾಚ್‌ಬ್ಯಾಕ್ ವಿಭಾಗದ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕುವಂತಹ ಬೆಲೆ ನಿಗದಿಪಡಿಸುವಲ್ಲಿ ಡಾಟ್ಸನ್ ಯಶಸ್ವಿಯಾಗಿದೆ.
ಅಲ್ಲದೆ ಡಾಟ್ಸನ್ ಕಾರ್ ಮಾದರಿಗಳಿಗೆ ಉತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅಪಘಾತದ ಸಂದರ್ಭದಲ್ಲಿ ಹೆಚ್ಚು ಅಗತ್ಯವಿರುವ ಹಣಕಾಸಿನ ರಕ್ಷಣೆಯನ್ನು ಒದಗಿಸಬಹುದು.
ಮೂರು ಜನಪ್ರಿಯ ಡಾಟ್ಸನ್ ಮಾಡೆಲ್‌ಗಳು
ಡಾಟ್ಸನ್ ಗೋ: ಡಾಟ್ಸನ್ ಮೈಕ್ರಾನಂತೆಯೇ ಇದೂ ಸಹ 'V' ಪ್ಲಾಟ್‌ಫಾರ್ಮ್ ಆಧಾರಿತ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ, ಇದು ಬೇರೆಲ್ಲಾ ಕಾರುಗಳಿಗಿಂತ ಹೆಚ್ಚಿನ ಕ್ಯಾಬಿನ್ ಸ್ಪೇಸ್ ಒದಗಿಸುತ್ತದೆ ಮತ್ತು ಮೊದಲ ಬಾರಿಯ ಕಾರು ಖರೀದಿಸುವವರ ಅಚ್ಚುಮೆಚ್ಚಿನ ಕಾರ್ ಆಗಿದೆ. 1.3-litre ಪೆಟ್ರೋಲ್ ಮೋಟಾರ್ ಹೊಂದಿರುವ ಡಾಟ್ಸನ್ ಗೋ, ತನ್ನ ಸೆಗ್ಮೆಂಟ್‌ನ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ. 5-ಸ್ಪೀಡ್ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಹೊಂದಿರುವ ಈ ಕಾರ್, 20.6 km/l ಇಂಧನ ದಕ್ಷತೆ ನೀಡುತ್ತದೆ ಎನ್ನಲಾಗಿದೆ.
ಡಾಟ್ಸನ್ ಗೋ ಪ್ಲಸ್: ಗೋ ಹ್ಯಾಚ್‌ಬ್ಯಾಕ್ ಆಧಾರಿತ ಮಿನಿ ವ್ಯಾನ್ ಆಗಿರುವ ಗೋ+, ಏಳು-ಸೀಟ್‌ಗಳ ಬಜೆಟ್ ಕಾರ್ ಆಗಿದ್ದು, ದೊಡ್ಡ ಕುಟುಂಬಗಳಿಗೆ ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ. ಡಾಟ್ಸನ್ ಗೋ ಪ್ಲಸ್‌ನಲ್ಲಿ ಅದೇ 1.3-ಪೆಟ್ರೋಲ್ ಮೋಟಾರ್ ಅನ್ನು 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ಗೆ ಹೊಂದಿಸಲಾಗಿದೆ. ತನ್ನ ಸ್ಪರ್ಧಾತ್ಮಕ ಬೆಲೆಯೊಂದಿಗೆ, ಡಾಟ್ಸನ್ ಗೋ ಪ್ಲಸ್ ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಕಾರ್ ಆಗಿದೆ.
ಡಾಟ್ಸನ್ ರೆಡಿ-ಗೋ: ಡಾಟ್ಸನ್‌ನ ಎಂಟ್ರಿ-ಲೆವೆಲ್ ಕಾರ್ ಆಗಿರುವ ರೆಡಿ-ಗೋ, ರೆನಾಲ್ಟ್ ಕ್ವಿಡ್‌ನೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್ ಹಂಚಿಕೊಳ್ಳುತ್ತದೆ. ಮೊದಲ ಬಾರಿಯ ಕಾರು ಖರೀದಿಸುವ ಯುವಕರನ್ನು ಮನಸ್ಸಿನಲ್ಲಿಟ್ಟುಕೊಂಡು ರೆಡಿ-ಗೋ ವಿನ್ಯಾಸಗೊಂಡಿದೆ. ಅದರ ವಿಶಾಲ ಉದ್ದಗಲ, ಇಂಧನ-ದಕ್ಷ ಎಂಜಿನ್‌ಗಳ ಆಯ್ಕೆ, ಸಲಕರಣೆಗಳ ಪಟ್ಟಿ ಮತ್ತು ರೈಡ್ ಗುಣಮಟ್ಟವು ಈ ಸಿಟಿ-ಹ್ಯಾಚ್‌ನ ಬೇಡಿಕೆ ಹೆಚ್ಚಲು ಕಾರಣವಾಗಿದೆ.
ಅಪಘಾತಗಳು ಅನಿಶ್ಚಿತವಾಗಿವೆ. ನಿಮ್ಮ ಡಾಟ್ಸನ್ ಕಾರು ಅಪಘಾತದಲ್ಲಿ ಹಾನಿಗೊಳಗಾಗಿದೆಯೇ? ಭಯಭೀತರಾಗಬೇಡಿ! ನಾವು ಅದನ್ನು ಕವರ್ ಮಾಡುತ್ತೇವೆ!
ಬೂಮ್! ಬೆಂಕಿ ಅವಘಡ ನಿಮ್ಮ ಡಾಟ್ಸನ್ ಕಾರನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿ ಮಾಡಬಹುದು, ಬೆಂಕಿ ಅಥವಾ ಸ್ಫೋಟದ ಘಟನೆಗಳಿಂದಾಗಿ ಆಗುವ ಯಾವುದೇ ಹಾನಿಯಾದರೂ. ಚಿಂತಿಸಬೇಡಿ, ಅದನ್ನು ನಾವು ನಿಭಾಯಿಸುತ್ತೇವೆ.
ನಿಮ್ಮ ಡೇಟ್ಸನ್ ಕಾರು ಕಳ್ಳತನವಾಗಿದೆಯೇ? ನಿಜಕ್ಕೂ ತುಂಬಾ ದುಃಖದ ಸುದ್ಧಿ ಇದು! ಆದರೆ ದುಃಖ ಪಡುವ ಮೊದಲು, ನಿಮ್ಮ ವಾಹನದ ರಕ್ಷಣೆ ನಮ್ಮ ಹೊಣೆ ಎಂಬುದನ್ನು ನೆನಪಿಡಿ!
ಭೂಕಂಪ, ಭೂಕುಸಿತ, ಪ್ರವಾಹ, ಗಲಭೆಗಳು, ಭಯೋತ್ಪಾದನೆ, ಇತ್ಯಾದಿಗಳು ನಿಮ್ಮ ಮೆಚ್ಚಿನ ವಾಹನಕ್ಕೆ ಹಾನಿ ಮಾಡಬಹುದು. ಆದರೆ ಚಿಂತಿಸಬೇಡಿ. ಇನ್ನಷ್ಟು ನೋಡಿ...
ನೀವು ₹ 15 ಲಕ್ಷಗಳ ಪರ್ಯಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಈ ಕವರ್ ಅನ್ನು ಬಿಟ್ಟುಬಿಡಬಹುದುಇನ್ನಷ್ಟು ಓದಿ...
ಒಂದು ವೇಳೆ ನಿಮ್ಮ ವಾಹನವು ಆಕಸ್ಮಿಕವಾಗಿ ಮೂರನೇ ವ್ಯಕ್ತಿಯ ಆಸ್ತಿಗೆ ಗಾಯ ಅಥವಾ ಹಾನಿ ಮಾಡಿದರೆ, ನಾವು ಅವರ ಕಾನೂನು ಹೊಣೆಗಾರಿಕೆಗಳ ನಿರ್ವಹಣೆಗೆ ಸಂಪೂರ್ಣ ಕವರೇಜ್ ಇನ್ನಷ್ಟು ಓದಿ...
ನಾವು ಕಾರಿನ ಮೌಲ್ಯದಲ್ಲಿ ಸವಕಳಿಯನ್ನು ಒಳಗೊಳ್ಳುವುದಿಲ್ಲ.
ನಮ್ಮ ಡಾಟ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್‌ಡೌನ್‌ಗಳು ಕವರ್ ಆಗುವುದಿಲ್ಲ.
ನೀವು ಸರಿಯಾದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದಿದ್ದರೆ ನಿಮ್ಮ ಡಾಟ್ಸನ್ ಕಾರ್ ಇನ್ಶೂರೆನ್ಸ್ ಸಹಾಯಕ್ಕೆ ಬಾರದೆ ಉಪಯೋಗವಿಲ್ಲದಂತಾಗುತ್ತದೆ. ಮದ್ಯ/ಮಾದಕದ್ರವ್ಯಗಳ ಪ್ರಭಾವದಲ್ಲಿ ಚಾಲನೆ ಮಾಡುವುದು ಕಾರ್ ಇನ್ಶೂರೆನ್ಸ್ ಕವರೇಜ್ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.
ಸಾಮಾನ್ಯವಾಗಿ, ಮೌಲ್ಯ ಇಳಿಕೆ ಮೊತ್ತವನ್ನು ಕಡಿತಗೊಳಿಸಿದ ನಂತರವಷ್ಟೇ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಕ್ಲೈಮ್ ಮೊತ್ತವನ್ನು ಪಾವತಿಸುತ್ತದೆ. ನಿಮ್ಮ ಪಾಲಿಸಿ ವಿವರಗಳು ಸವಕಳಿಯ ವಿವರಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ
ಹೊರಗಿನ ಅಪಾಯ, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಪಾರ್ಕ್ ಮಾಡಲಾದ ವಾಹನಕ್ಕೆ ಅಥವಾ ವಿಂಡ್‌ಶೀಲ್ಡ್ ಗಾಜಿಗೆ ಹಾನಿಯಾದಾಗ
We are here to offer you round-the-clock assistance to deal with any technical or mechanical breakdown issues of your Datsun car! The emergency assistance cover includes minor repairs on site, lost key assistance, duplicate key issue,
ಒಂದು ದಿನ ಇದ್ದಕ್ಕಿದ್ದಂತೆ ನಿಮ್ಮ ಕಾರು ಕಳ್ಳತನವಾದ ಅಥವಾ
ಭಾರೀ ಮಳೆಯಿರಲಿ ಅಥವಾ ಭೋರ್ಗರೆವ ಪ್ರವಾಹವೇ ಬರಲಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಮೂಲಕ ನಿಮ್ಮ ವಾಹನದ ಗೇರ್‌ಬಾಕ್ಸ್ ಮತ್ತು ಎಂಜಿನ್‌ಗೆ ಸುಭದ್ರ ಕವರೇಜ್ ಸಿಗುತ್ತದೆ.! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಕೂಡ ಕವರ್ ಮಾಡುತ್ತದೆ.
ನಿಮ್ಮ ಕೀ ಕಳುವಾಗಿದೆಯೇ ಅಥವಾ ಕಾಣೆಯಾಗಿದೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ!
ನಿಮ್ಮ ಕಾರಿನಲ್ಲಿ ಬಳಸಲಾದ ಎಲ್ಲಾ ಬಳಕೆ ಮಾಡಬಹುದಾದ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ಇದು ನಿಮಗೆ ಈಗಲೇ ಅಗತ್ಯವಿದೆ!! ಇದು ಎಲ್ಲಾ
ನಿಮ್ಮ ಡಾಟ್ಸನ್ ಕಾರು ಕೆಟ್ಟಾಗ ಕ್ಯಾಬ್‌ಗಳಿಗೆ ಹಣ ಪಾವತಿಸುತ್ತಿದ್ದೀರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ತ್ವರಿತ ಮತ್ತು ಸರಳವಾಗಿದೆ. ಇದಕ್ಕೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿರುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೆ ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಅವಧಿ ಮುಗಿಯುವ ಪಾಲಿಸಿಯ ವಿವರಗಳನ್ನು ಆನ್‌ಲೈನ್‌ನಲ್ಲಿ ನೀಡಿ, ಹೊಸ ಪಾಲಿಸಿಯ ವಿವರಗಳನ್ನು ನೋಡಿ ಮತ್ತು ಅನೇಕ ಸುರಕ್ಷಿತ ಪಾವತಿ ಆಯ್ಕೆಗಳ ಮೂಲಕ ತ್ವರಿತ ಆನ್ಲೈನ್ ಪಾವತಿ ಮಾಡಿ. ಅಷ್ಟೆ!
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಡಾಟ್ಸನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿದಾಗ ಸರಳ ಕಾರ್ಯವಿಧಾನಗಳು, ತ್ವರಿತ ವಿತರಣೆ ಮತ್ತು ವಿಶಿಷ್ಟ ಪ್ರಯೋಜನಗಳನ್ನು ಪಡೆಯುತ್ತೀರಿ. ಆದ್ದರಿಂದ, ಯಾವುದೇ ಅನಿರೀಕ್ಷಿತ ಅಪಘಾತದ ನಂತರ, ನೀವು ಡ್ರೈವಿಂಗ್ ಸೀಟಿಗೆ ಸುರಕ್ಷಿತವಾಗಿ ಮತ್ತು ಶೀಘ್ರದಲ್ಲೇ ಮರಳಿ ಬರಲು ಬಯಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲುದಾರರಾಗಿ ಎಚ್‌ಡಿಎಫ್‌ಸಿ ಎರ್ಗೋ ಆಯ್ಕೆಮಾಡಿ!
This is something that may seem difficult to understand to most of you. However, HDFC ERGO has well busted the myth. It has made the claim process swift, smooth, and simple. All you need to do is just register your claim via its mobile app, HDFC ERGO Insurance Portfolio Organizer (IPO) or toll free number, 022 6234 6234.Click Here to know details on claim process.
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |