MOTOR INSURANCE
Premium starting at Just ₹2094*

ಪ್ರೀಮಿಯಂ ಆರಂಭ

ಕೇವಲ ₹2094 ಕ್ಕೆ*
9000+ Cashless Network Garages ^

9000+ ನಗದುರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
Overnight Car Repair Services ^

ಓವರ್‌ನೈಟ್ ಕಾರ್

ರಿಪೇರಿ ಸೇವೆಗಳು ¯
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಮೇಕ್ ಮತ್ತು ಮಾಡೆಲ್‌ಗಾಗಿ ಕಾರ್ ಇನ್ಶೂರೆನ್ಸ್ / ಟೊಯೋಟಾ-ಹಳೆಯ / ಇನ್ನೋವಾ ಕ್ರಿಸ್ಟಾ
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಆನ್ಲೈನ್

Toyota Innova Crysta Car Insurance

ಅತ್ಯಂತ ಜನಪ್ರಿಯವಾದ ಕ್ವಾಲಿಸ್‌ಗೆ ಬದಲಾಗಿ 2005 ರಲ್ಲಿ ಇನ್ನೋವಾ ಪ್ರಾರಂಭಿಸಲಾಯಿತು. ಈ ಕಾಂಪ್ಯಾಕ್ಟ್ MPV ಭಾರತೀಯರಿಗೆ ತಕ್ಷಣವೇ ಮೆಚ್ಚುಗೆಯಾಯಿತು, ಹ್ಯಾಚ್‌ಬ್ಯಾಕ್ ಅಥವಾ ಸೆಡಾನ್ ಅಲ್ಲದ ಕಾರಿಗೆ ಈ ರೀತಿಯ ಮೆಚ್ಚುಗೆ ಅಪರೂಪವಾಗಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಮೊಟ್ಟಮೊದಲು ಪ್ರಾರಂಭವಾದ ಮೂರು ಸಾಲು ಇರುವ ಕಾರ್ ಎನಿಸಿ ನಿರೀಕ್ಷೆಗೆ ಮೀರಿದ ಯಶಸ್ಸು ಸಾಧಿಸಿತು.

ಹೆಚ್ಚು ಉತ್ತಮವಾದ ಇಂಟೀರಿಯರ್ ಮತ್ತು ಉತ್ಕೃಷ್ಟ ವೈಶಿಷ್ಟ್ಯಗಳನ್ನು ಹೊಂದಿದ ಎರಡನೇ ತಲೆಮಾರಿನ ಇನ್ನೋವಾ ಕ್ರಿಸ್ಟಾ 2016 ರಲ್ಲಿ ಆರಂಭವಾಯಿತು. ಹೊಸದಾಗಿ ರೂಪಿಸಲಾದ ಗ್ರಿಲ್ ಮತ್ತು ಬಂಪರ್, ಅಲಾಯ್ ವೀಲ್ಸ್ ಮತ್ತು ಇತರ ಸೂಕ್ಷ್ಮ ಆಂತರಿಕ ಸುಧಾರಣೆಗಳೊಂದಿಗೆ ಇನ್ನೋವಾ ಕ್ರಿಸ್ಟಾ 2020 ರಲ್ಲಿ ಫೇಸ್‌ಲಿಫ್ಟ್ ಪಡೆಯಿತು.

ಎಚ್‌ಡಿಎಫ್‌ಸಿ ಎರ್ಗೋ ನೀಡುವ ವಿವಿಧ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಪಾಲಿಸಿಗಳು

ಇನ್ನೋವಾ ಕ್ರಿಸ್ಟಾ ಒಂದು ಹೆಚ್ಚು ಪ್ರೀತಿಪಾತ್ರವಾದ ಎಂಪಿವಿ ಆಗಿದ್ದು, ಇದು ಕುಟುಂಬಕ್ಕೆ ಐಷಾರಾಮಿ ಸವಾರಿಯನ್ನು ಒದಗಿಸುತ್ತದೆ. ಮತ್ತು ನಿಮ್ಮಲ್ಲಿ ಇನ್ನೋವಾ ಇದ್ದರೆ, ನೀವು ದೊಡ್ಡ ಕುಟುಂಬವನ್ನು ಹೊಂದಿದ್ದು, ಅವರ ಸುರಕ್ಷತೆ ಪ್ರಮುಖ ಕಳಕಳಿಯಾಗಿದೆ. ಇನ್ನೋವಾ ಡ್ರೈವರ್ ಮತ್ತು ಪ್ರಯಾಣಿಕರ ಏರ್‌ಬ್ಯಾಗ್‌ಗಳೊಂದಿಗೆ ಬರುತ್ತದೆ, ಯಾವುದೇ ದುರದೃಷ್ಟಕರ ಘಟನೆಗಳ ವಿರುದ್ಧ ನೀವು ಮತ್ತು ನಿಮ್ಮ ಕಾರು ಉತ್ತಮವಾಗಿ ರಕ್ಷಿಸಲ್ಪಡುವುದನ್ನು ಖಚಿತಪಡಿಸಿಕೊಳ್ಳಲು ಕಾರ್ ಇನ್ಶೂರೆನ್ಸ್ ಪಾಲಿಸಿ ಕಡ್ಡಾಯವಾಗಿದೆ. ನಿಮಗೆ ಸಿಗುವ ಆಯ್ಕೆಗಳು ಹೀಗಿವೆ:

ಇನ್ನೋವಾಗಾಗಿಏಕ ವರ್ಷದ ಸಮಗ್ರ ಇನ್ಶೂರೆನ್ಸ್ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಹಾನಿ ಕವರ್ ಮತ್ತು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಂದಾಗಿ ಆಕಸ್ಮಿಕ ಹಾನಿ, ಕಳ್ಳತನ ಮತ್ತು ಹಾನಿಯಿಂದ ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುವ ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರ್‌ನೊಂದಿಗೆ ಬರುತ್ತದೆ. ಅಪಘಾತದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ವೆಚ್ಚಗಳನ್ನು ನೋಡಿಕೊಳ್ಳಲು ಇದು ₹15 ಲಕ್ಷಗಳ ವೈಯಕ್ತಿಕ ಅಪಘಾತ ಕವರ್‌ನೊಂದಿಗೆ ಬರುತ್ತದೆ.

X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದ್ದು, ಈ ಪ್ಲಾನ್, ಇವುಗಳನ್ನು ಕವರ್‌ ಮಾಡುತ್ತದೆ:

ಅಪಘಾತ

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು,

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಇನ್ನಷ್ಟು ಹುಡುಕಿ

ರಸ್ತೆಯಲ್ಲಿ ಯಾವುದೇ ಕಾರಿಗೆ ಕಡ್ಡಾಯ ಕವರ್, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಒಂದು ಬೇಸಿಕ್ ಕಾರ್ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು ಥರ್ಡ್ ಪಾರ್ಟಿ ವ್ಯಕ್ತಿಗೆ, ಅವರಿಗೆ ಗಾಯ ಮಾಡಿರುವುದಕ್ಕಾಗಿ ಅಥವಾ ನಿಮ್ಮ ಕಾರು ಒಳಗೊಂಡಿರುವ ಅಪಘಾತದ ಪರಿಣಾಮವಾಗಿ ಅವರ ಆಸ್ತಿಗೆ ಹಾನಿ ಉಂಟುಮಾಡಿರುವುದಕ್ಕಾಗಿ ಕವರ್ ಮಾಡುತ್ತದೆ.

X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಇದು ಸಮಗ್ರ ಕವರ್‌ನ ಒಂದು ಭಾಗ. ನಿಮ್ಮ ವಾಹನಕ್ಕಾಗಿ ಈಗಾಗಲೇ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇದ್ದಲ್ಲಿ, ಇದನ್ನು ಸ್ಟ್ಯಾಂಡ್‌ಅಲೋನ್ ಪಾಲಿಸಿಯಾಗಿ ಕೂಡ ಪ್ರತ್ಯೇಕವಾಗಿ ಖರೀದಿಸಬಹುದು. ಈ ಪಾಲಿಸಿಯು ಅಪಘಾತ ಅಥವಾ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳ ಪರಿಣಾಮವಾಗಿ ನಿಮ್ಮ ಸ್ವಂತ ವಾಹನಕ್ಕೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ. ಇದು ಭರಿಸಲಾಗದ ಕಳ್ಳತನದ ಸಂದರ್ಭದಲ್ಲಿ ನಿಮಗೆ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಒದಗಿಸುವ ಕಳ್ಳತನ ಕವರ್‌ನೊಂದಿಗೆ ಕೂಡ ಬರುತ್ತದೆ.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ಅಪಘಾತ

ನೈಸರ್ಗಿಕ ವಿಕೋಪಗಳು,

ಬೆಂಕಿ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಇದು ಹೆಚ್ಚು ಶಿಫಾರಸು ಮಾಡಲಾದ ಪಾಲಿಸಿ. ಹೊಸ ವಾಹನ ಖರೀದಿಸುವಾಗ ಈ ಪಾಲಿಸಿ ಆಯ್ಕೆ ಮಾಡುವುದು ಉತ್ತಮ. ಇದು ತ್ರಿವಾರ್ಷಿಕ ಥರ್ಡ್ ಪಾರ್ಟಿ ಲಯೆಬಿಲಿಟಿ ಕವರ್ ಹಾಗೂ ವಾರ್ಷಿಕ ನವೀಕರಣದ ಸ್ವಂತ ಹಾನಿ ಕವರ್‌ ಹೊಂದಿದ್ದು, ನಿಮಗೆ ವಿಸ್ತೃತ ಅವಧಿಯವರೆಗೆ ಕವರೇಜ್ ನೀಡುತ್ತದೆ. ಇದರಲ್ಲಿರುವ ವೈಯಕ್ತಿಕ ಅಪಘಾತ ಕವರ್ ಹಾಗೂ ಕಳುವಿನ ವಿರುದ್ಧದ ರಕ್ಷಣೆಯ ಜೊತೆಗೆ ಅನೇಕ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಬಹುದು.

X
ಹೊಸ ಕಾರನ್ನು ಖರೀದಿಸಿದವರಿಗೆ ಸೂಕ್ತವಾಗಿದೆ, ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ಅಪಘಾತ

ನೈಸರ್ಗಿಕ ವಿಕೋಪಗಳು,

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್‌ನ ಒಳಗೊಳ್ಳುವಿಕೆಗಳು ಮತ್ತು ಹೊರಪಡಿಕೆಗಳಿಗೆ ಕವರೇಜ್ ನೀಡುತ್ತದೆ

ಅಪಘಾತ ಅಥವಾ ಭೂಕಂಪ, ಬೆಂಕಿ, ಬಿರುಗಾಳಿ, ಗಲಭೆ, ವಿಧ್ವಂಸಕ ಕೃತ್ಯಗಳು ಇತ್ಯಾದಿ ಪ್ರಾಕೃತಿಕ ಹಾಗೂ ಮಾನವ ನಿರ್ಮಿತ ವಿಕೋಪಗಳ ಪರಿಣಾಮವಾಗಿ ನಿಮ್ಮ ವಾಹನಕ್ಕೆ ಉಂಟಾಗುವ ಹಾನಿಯನ್ನು ಸಮಗ್ರ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಪಾಲಿಸಿ ಕವರ್ ಮಾಡುತ್ತದೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಚಿಕಿತ್ಸಾ ಶುಲ್ಕಗಳು ಹಾಗೂ ಇತರ ವೆಚ್ಚಗಳಿಗೆ ಕೂಡ ಕವರೇಜ್ ಸಿಗುತ್ತದೆ. ಇದಲ್ಲದೆ, ಥರ್ಡ್ ಪಾರ್ಟಿ ವ್ಯಕ್ತಿ ಹಾನಿಗೊಳಗಾಗಿದ್ದಲ್ಲಿ ನಿಮ್ಮ ಆರ್ಥಿಕ ಬಾಧ್ಯತೆಗಳ ನಿರ್ವಹಣೆಗೆ ನೆರವು ನೀಡುವ ಮೂಲಕ, ಇದು ಎಲ್ಲ ರೀತಿಯ ರಕ್ಷಣೆ ನೀಡುತ್ತದೆ.

Covered in Car insurance policy - Accident coverage

ಅಪಘಾತ ಕವರೇಜ್

ಅಪಘಾತಗಳು ಸಾಮಾನ್ಯವಾಗಿ ಅನಿರೀಕ್ಷಿತ. ಜೊತೆಗೆ, ಕೆಲವೊಮ್ಮೆ ಅವುಗಳನ್ನು ತಪ್ಪಿಸಲಾಗುವುದಿಲ್ಲ. ಆದಾಗ್ಯೂ, ಸ್ವಂತ ಹಾನಿಯ ಕವರ್‌ನೊಂದಿಗೆ ನಿಮ್ಮ ವಾಹನದ ದುರಸ್ತಿಗೆ ತಗಲುವ ವೆಚ್ಚವನ್ನು ಕಡಿಮೆಗೊಳಿಸಬಹುದು.

Covered in Car insurance policy -Natural or manmade calamities

ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು

ದುರಂತಗಳು ಸೂಚನೆ ಇಲ್ಲದೆಯೇ ಹಠಾತ್ ಆಗಿ ಎರಗಬಹುದು. ಭೂಕಂಪ, ಪ್ರವಾಹ, ಬಿರುಗಾಳಿ, ಬೆಂಕಿ, ವಿಧ್ವಂಸ, ಗಲಭೆ ಇತ್ಯಾದಿಗಳಿಂದ ಉಂಟಾಗುವ ಹಾನಿಯ ವಿರುದ್ಧ ನಿಮ್ಮ ಕಾರಿಗೆ ಆರ್ಥಿಕ ಸುರಕ್ಷೆ ನೀಡಿ.

Covered in Car insurance policy - theft

ಕಳ್ಳತನ

ಕಾರ್ ಇನ್ಶೂರೆನ್ಸ್ ಇಲ್ಲದೆ ನಿಮ್ಮ ಇನ್ನೋವಾ ಕಳುವಾದರೆ ದೊಡ್ಡ ಮಟ್ಟದ ಆರ್ಥಿಕ ನಷ್ಟಕ್ಕೆ ಕಾರಣವಾಗಬಹುದು. ಆದರೆ, ಇನ್ಶೂರೆನ್ಸ್‌ ಇದ್ದಲ್ಲಿ, ನೀವು ವಾಹನದ IDV ಮೊತ್ತ ಪಡೆಯುತ್ತೀರಿ. ನೀವು ರಿಟರ್ನ್ ಟು ಇನ್ವಾಯ್ಸ್ ಕವರ್‌ ಹೊಂದಿದ್ದರೆ, ಕಾರಿನ ಸಂಪೂರ್ಣ ಆನ್-ರೋಡ್ ಬೆಲೆ ಪಡೆಯುತ್ತೀರಿ.

Covered in Car insurance policy - Personal accident

ವೈಯಕ್ತಿಕ ಆಕ್ಸಿಡೆಂಟ್

ಅಪಘಾತದ ಸಂದರ್ಭದಲ್ಲಿ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಲು ಎಲ್ಲಾ ಮಾಲೀಕರಿಗೆ ಕನಿಷ್ಠ ₹ 15 ಲಕ್ಷಗಳ ಪರ್ಸನಲ್ ಆಕ್ಸಿಡೆಂಟ್ ಕವರ್ ಕಡ್ಡಾಯವಾಗಿದೆ.

Covered in Car insurance policy - Third party liability

ಥರ್ಡ್-ಪಾರ್ಟಿ ಹೊಣೆಗಾರಿಕೆ

ನಿಮ್ಮಿಂದ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಹಾನಿಯಾದಲ್ಲಿ, ನಿಮ್ಮ ಹಣಕಾಸಿನ ಬಾಧ್ಯತೆಯನ್ನು ನಿಭಾಯಿಸಲು ನೆರವು ನೀಡುತ್ತದೆ.

ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ನವೀಕರಿಸುವುದು ಹೇಗೆ?

ಕಾರುಗಳು ಸ್ಮಾರ್ಟ್ ಆಗುತ್ತಿವೆ, ಹಾಗೆಯೇ ಇನ್ಶೂರೆನ್ಸ್ ಕಂಪನಿಗಳು ಕೂಡ. ವಿಮೆ ಕಚೇರಿಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ದಿನಗಳು ಈಗಿಲ್ಲ. ಈಗ ನಿಮ್ಮ ಸ್ವಂತ ಮನೆಯಿಂದಲೇ, ಕೆಲವೇ ನಿಮಿಷಗಳಲ್ಲಿ, ಸುಲಭವಾಗಿ ನಿಮ್ಮಟೊಯೋಟಾ ಇನ್ನೋವಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ನವೀಕರಿಸಬಹುದು. ಅದು ಹೀಗೆ:

  • Step #1
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಅಥವಾ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನವೀಕರಣ ಆಯ್ಕೆಯನ್ನು ಆರಿಸಿ
  • Step #2
    ಹಂತ #2
    ನೋಂದಣಿ, ಸ್ಥಳ, ಹಿಂದಿನ ಪಾಲಿಸಿ ವಿವರಗಳು, NCB ಇತ್ಯಾದಿ ಕಾರಿನ ವಿವರಗಳನ್ನು ನಮೂದಿಸಿ.
  • Step #3
    ಹಂತ #3
    ಕೋಟ್ ಪಡೆಯಲು ನಿಮ್ಮ ಇಮೇಲ್ ID ಮತ್ತು ಫೋನ್ ನಂಬರ್ ಒದಗಿಸಿ
  • Step #4
    ಹಂತ #4
    ಪಾವತಿ ಮಾಡಿ ಅಷ್ಟೇ, ನೀವು ಸುರಕ್ಷಿತ!.

ಎಚ್‌ಡಿಎಫ್‌ಸಿ ಎರ್ಗೋದಿಂದ ಟೊಯೋಟಾ ಇನ್ನೋವಾ ಕ್ರಿಸ್ಟಾ ಕಾರ್ ಇನ್ಶೂರೆನ್ಸ್ ಏಕೆ ಖರೀದಿಸಬೇಕು?

ವಿಮಾದಾತರನ್ನು ಆಯ್ಕೆ ಮಾಡುವಾಗ, ನೀವು ಅದರ ಕ್ಲೈಮ್ ಸೆಟಲ್ಮೆಂಟ್ ರೇಶಿಯೋ ಮತ್ತು ಪ್ರಕ್ರಿಯೆ, ಗ್ರಾಹಕರ ಸಂಖ್ಯೆ ಮತ್ತು ನಿಮ್ಮ ಪ್ರದೇಶದಾದ್ಯಂತ ಅವರ ಇರುವಿಕೆಯನ್ನು ಪರಿಶೀಲಿಸಬೇಕು. ಆಗ ಮಾತ್ರ ನಿಮಗೆ ಉತ್ತಮ ಅನುಭವದ ಭರವಸೆ ಇರುತ್ತದೆ. ನೀವು ಎಚ್‌ಡಿಎಫ್‌ಸಿ ಎರ್ಗೋ ಏಕೆ ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ:

Cashless facility

ನಗದು ರಹಿತ ಸೌಲಭ್ಯ

ನಮ್ಮ ನಗದುರಹಿತ ಗ್ಯಾರೇಜ್‌ಗಳೊಂದಿಗೆ ತಾತ್ಕಾಲಿಕವಾಗಿಯೂ ಸಹ ನಿಮ್ಮ ಹಣಕಾಸಿಗೆ ತೊಂದರೆಯಾಗದಂತೆ ಕಾರ್ ರಿಪೇರಿ ಮಾಡಿಸಿಕೊಳ್ಳಿ. ದೇಶಾದ್ಯಂತ 8700 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‍ಗಳೊಂದಿಗೆ ನೀವು ಯಾವಾಗಲೂ ಕವರ್ ಆಗುತ್ತೀರಿ.

Easy claims

ಸುಲಭ ಕ್ಲೈಮ್‌ಗಳು

80% ಕ್ಕೂ ಹೆಚ್ಚು ಕಾರ್ ಇನ್ಶೂರೆನ್ಸ್ ಕ್ಲೇಮ್‌ಗಳನ್ನು ಅವುಗಳನ್ನು ಸಲ್ಲಿಸಿದ ದಿನದಂದೇ ಪ್ರಕ್ರಿಯೆಗೊಳಿಸುತ್ತೇವೆ. ಇದರಿಂದ ಕಾರ್ ಹಾನಿಗೊಳಗಾಗಿ ಅದು ರಿಪೇರಿಯಾಗುವ ಮಧ್ಯದ ಸಮಯದ ಅಂತರ ಕಡಿಮೆಯಾಗುತ್ತದೆ.

Overnight repair service

ತಡರಾತ್ರಿಯ ರಿಪೇರಿ ಸೇವೆ

ನಮ್ಮ ವಿಶಿಷ್ಟ ಓವರ್‍‍ನೈಟ್ ರಿಪೇರಿ ಸೇವೆಯು ಆಕ್ಸಿಡೆಂಟ್ ಆದಾಗ ಮಾಡಬೇಕಾದ ಸಣ್ಣ ಪುಟ್ಟ ರಿಪೇರಿ ಕೆಲಸಗಳನ್ನು ನೀವು ನಿದ್ದೆ ಮಾಡುವ ಸಮಯದಲ್ಲಿ ಮಾಡಿ ಮುಗಿಸುತ್ತದೆ. ಮರುದಿನ ಬೆಳಿಗ್ಗೆ ನಿಮ್ಮ ಕಾರು ಉಪಯೋಗಿಸಲು ಸಿದ್ಧವಾಗಿರುತ್ತದೆ.

24x7 assistance

24x7 ಸಹಾಯ

ವಾಹನ ಕೆಟ್ಟು ನಿಂತಾಗ, ಅದನ್ನು ಟೋ ಮಾಡಿಕೊಂಡು ಹೋದಾಗ ನಮ್ಮ 24x7 ನೆರವಿನ ಸೇವೆಯ ದೆಸೆಯಿಂದ ನೀವು ಎಲ್ಲಿಯೂ ಸಿಲುಕಿಕೊಳ್ಳಲಾರಿರಿ.

9000+ cashless Garagesˇ Across India

ಆಗಾಗ ಕೇಳುವ ಪ್ರಶ್ನೆಗಳು


ಇನ್ನೋವಾ ಒಂದು ಸಧೃಡವಾಗಿ ನಿರ್ಮಿಸಿದ ಕಾರ್ ಆಗಿದೆ ಹಾಗೂ ಅದರ ಹಿಂದಿನ ಆವೃತ್ತಿಗಳಲ್ಲಿ ಅನೇಕ ವರ್ಷಗಳಿಂದ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತುಪಡಿಸಿದೆ. ಆದಾಗ್ಯೂ, ಆಕ್ಸಿಡೆಂಟ್‍ಗಳು ಮತ್ತು ಇತರ ನೈಸರ್ಗಿಕ ಅಥವಾ ಮಾನವ ನಿರ್ಮಿತ ಕಾರಣಗಳಿಂದ ಹಾನಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಇದಕ್ಕೆ ಸಮಗ್ರ ಕಾರ್ ಇನ್ಶೂರೆನ್ಸ್ ಸೂಕ್ತ ಪರಿಹಾರವಾಗಿದೆ. ನಿರ್ವಹಣಾ ವೆಚ್ಚಗಳನ್ನು ಕಡಿಮೆ ಮಾಡಲು ಕನ್ಸ್ಯೂಮೆಬಲ್ಸ್ ಕವರ್ ಪಡೆದುಕೊಳ್ಳಿ.
ನೀವು ನಿಮ್ಮ ಇನ್ನೋವಾದಲ್ಲಿ ಪ್ರಮಾಣೀಕೃತ ಆ್ಯಂಟಿ-ಥೆಫ್ಟ್ ಡಿವೈಸ್‌ಗಳನ್ನು ಅಳವಡಿಸಬಹುದು ಮತ್ತು ನೀವು ಸಂಗ್ರಹಿಸಿದ NCB ಬಳಸಿ ಪ್ರೀಮಿಯಂ ಕಡಿಮೆ ಮಾಡಿಕೊಳ್ಳಬಹುದು. ಜೊತೆಗೆ, ನಿಮ್ಮ ಆಡಳಿತಾತ್ಮಕ ವೆಚ್ಚ ಕಡಿಮೆ ಮಾಡಲು ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ ಮೂಲಕ ಖರೀದಿಸಿ. ಇದಲ್ಲದೆ, ನಿಮ್ಮ ಪ್ರೀಮಿಯಂ ಕಡಿಮೆ ಮಾಡಲು ನಿಮ್ಮ ಡಿಡಕ್ಟಿಬಲ್‌ಗಳನ್ನು ಹೆಚ್ಚಿಸಬಹುದು.
ಇನ್ನೋವಾ ಸಾಕಷ್ಟು ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ, ಆದರೆ ಪ್ರವಾಹದ ಸಂಭವ ಇಲ್ಲದ ಪ್ರದೇಶದಲ್ಲಿ ಪಾರ್ಕ್ ಮಾಡುವುದು ಸೂಕ್ತ. ನೀರು ಹೊರಹೋಗುವ ಹಾದಿ ನಿರ್ಮಿಸುವುದು ಉತ್ತಮ. ಅಲ್ಲದೆ, ನಿಮ್ಮ ಇನ್ನೋವಾದ ಅತ್ಯಂತ ಪ್ರಮುಖ ಮತ್ತು ಸುಲಭವಾಗಿ ಹಾನಿಯಾಗುವ ಘಟಕವಾದ ಎಂಜಿನ್‌ಗೆ ಮತ್ತಷ್ಟು ಸುರಕ್ಷತೆ ನೀಡಲು ಎಂಜಿನ್ ಪ್ರೊಟೆಕ್ಷನ್ ಆ್ಯಡ್-ಆನ್ ಕವರ್ ಪಡೆಯಬಹುದು.
ಹೈವೇನಲ್ಲಿ ಇನ್ನೋವಾ ಸವಾರಿ ಸುಗಮ ಹಾಗೂ ಆರಾಮದಾಯಕ. ಎಲ್ಲ ಸೀಟ್‌ಗಳು ತುಂಬಿದ್ದಾಗಲೂ, ಡ್ರೈವ್ ಮಾಡುವಾಗ ದೊಡ್ಡ ಕಾರ್ ಎನಿಸುವುದಿಲ್ಲ. ಹೆಚ್ಚು ವೇಗದಲ್ಲಿ ಚಲಿಸುವಾಗಲೂ ಅತಿ ಕಡಿಮೆ ಬಾಡಿ ರೋಲ್ ಇರುವ ಕಾರಣ, ಇದರ ಹ್ಯಾಂಡ್ಲಿಂಗ್ ಬಗ್ಗೆ ಚಿಂತಿಸುವಂತಿಲ್ಲ. ಆದರೆ ನೀವು ಸಾಮಾನ್ಯವಾಗಿ ಹೊರಗೆ ಪ್ರಯಾಣ ಮಾಡುವುದಾದರೆ, 24x7 ರಸ್ತೆಬದಿ ಸಹಾಯದ ಆ್ಯಡ್-ಆನ್ ಪಡೆಯಲು ಸಲಹೆ ನೀಡುತ್ತೇವೆ. ಇದರಿಂದಾಗಿ ನಿರ್ಜನ ಪ್ರದೇಶದಲ್ಲಿ ಪಂಕ್ಚರ್‌, ಬ್ರೇಕ್‌ಡೌನ್‌ ಇತ್ಯಾದಿ ಆದಾಗ ತೊಂದರೆಗೆ ಸಿಲುಕುವುದನ್ನು ತಪ್ಪಿಸಬಹುದು.