ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಟೂ ವೀಲರ್ ಇನ್ಶೂರೆನ್ಸ್
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಟೂ ವೀಲರ್ ಇನ್ಶೂರೆನ್ಸ್
₹538 ರಲ್ಲಿ ಪ್ರೀಮಿಯಂ ಆರಂಭ*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
2000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

2000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳುˇ
ತುರ್ತು ರಸ್ತೆಬದಿಯ ನೆರವು

ತುರ್ತು ರಸ್ತೆಬದಿ

ಸಹಾಯ
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಬಜಾಜ್ ಟೂ ವೀಲರ್ ಇನ್ಶೂರೆನ್ಸ್

ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿ/ನವೀಕರಿಸಿ

ಬಜಾಜ್ ಆಟೋ ಟೂ ವೀಲರ್ ಇನ್ಶೂರೆನ್ಸ್

ಬಜಾಜ್ ಗ್ರೂಪ್ ಭಾರತದ ಹಲವು ಉದ್ಯಮಗಳಿಗೆ ವಿಸ್ತರಿಸಿರುವ ಸುಪ್ರಸಿದ್ಧ ಕಂಪನಿಯಾಗಿದೆ. 1926 ರಲ್ಲಿ ಸ್ಥಾಪಿಸಲಾದ, ಬಜಾಜ್ ಆಟೋ ಈಗ ವಿಶ್ವದ ನಾಲ್ಕನೇ ಅತಿದೊಡ್ಡ ಟೂ ವೀಲರ್-ಮತ್ತು ಥ್ರೀ ವೀಲರ್ ತಯಾರಕರಾಗಿದ್ದು, ವಿಶ್ವದಾದ್ಯಂತ ರೂ. 120 ಬಿಲಿಯನ್ ಆದಾಯದೊಂದಿಗೆ 70 ದೇಶಗಳಿಗೆ ರಫ್ತು ಮಾಡುತ್ತಿದೆ.

ಅದರ ಥ್ರೀ ವೀಲರ್ ಆಟೋ ರಿಕ್ಷಾಗಳು ಅಸಮಾನ ಮಾರುಕಟ್ಟೆ ಪ್ರಾಬಲ್ಯವನ್ನು ಆನಂದಿಸುತ್ತಿರುವಾಗ, ಬಜಾಜ್ ಆಟೋ ಭಾರತದಲ್ಲಿ ಅದರ ಪಲ್ಸರ್ ಶ್ರೇಣಿಯ ಬೈಕ್‌ಗಳೊಂದಿಗೆ ಟೂ ವೀಲರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇದು ವಿಶೇಷವಾಗಿ KTM ಬೈಕ್‌ಗಳ ಡ್ಯೂಕ್ ಶ್ರೇಣಿಯನ್ನು ತಯಾರಿಸುತ್ತದೆ, ಇದು ದೇಶದಲ್ಲಿ ಮೋಟಾರ್‌ಸೈಕಲ್ ರೇಸಿಂಗ್‌ಗೆ ದಾರಿ ಮಾಡಿಕೊಟ್ಟಿದೆ.

ಜನಪ್ರಿಯ ಬಜಾಜ್ ಟೂ ವೀಲರ್ ಮಾಡೆಲ್‌ಗಳು

1
ಬಜಾಜ್ ಪಲ್ಸರ್ 150
ಈ ವಿಭಾಗದ ಕ್ರಾಂತಿಕಾರಿ ಬೈಕ್, ಪಲ್ಸರ್ 150 ಖರೀದಿಸಲು ಬೇಕಾದ ಎಲ್ಲ ಕಾರಣಗಳನ್ನೂ ಹೊಂದಿದೆ - ಸ್ಟೈಲ್, ಪವರ್ ಮತ್ತು ಮೈಲೇಜ್. ಬಜಾಜ್ ಅತ್ಯುತ್ತಮ ಸೇವೆಯೊಂದಿಗೆ ಸಂಯೋಜನೆಗೊಂಡಿರುವ ಪಲ್ಸರ್ 150 ತನ್ನ ವರ್ಗದಲ್ಲಿ ಅತಿ ಹೆಚ್ಚು ಮಾರಾಟವಾಗುವ ಬೈಕ್ ಆಗಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಹೊಸ ನಿಯಾನ್ ಆವೃತ್ತಿಯು ನಿಯಾನ್ ಟ್ರೇಲ್‌ಗಳೊಂದಿಗೆ ಹಾಗೂ ಹೊಸ ಮ್ಯಾಟ್ ಪೇಂಟ್ ಫಿನಿಶ್‌ನೊಂದಿಗೆ ಈ ಶ್ರೇಣಿಗೆ ಇನ್ನಷ್ಟು ಮೆರುಗು ಸೇರಿಸುತ್ತದೆ ಹಾಗೂ ಗುಂಪಿನಲ್ಲಿ ಇದನ್ನು ಎದ್ದು ಕಾಣುವಂತೆ ಮಾಡುತ್ತದೆ.
2
ಬಜಾಜ್ ಪಲ್ಸರ್ NS200
ಅತ್ಯಂತ ಜನಪ್ರಿಯ 200 cc ಬೈಕ್‌ಗಳಲ್ಲಿ ಒಂದಾದ ಬಜಾಜ್ ಪಲ್ಸರ್ NS200 220F ಗಿಂತ ಸ್ವಲ್ಪ ಮೇಲಿದ್ದು, 24.13 PS ಪವರ್ ಹೊಂದಿದೆ. ಇದು ಒಂದೇ ಚಾನೆಲ್ ABS ನೊಂದಿಗೆ ಅತ್ಯುತ್ತಮ ಟ್ವಿನ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ. ಅದರ ಆಕ್ರಮಣಕಾರಿ ಸ್ಟೈಲಿಂಗ್, ಸ್ಟ್ರೈಕಿಂಗ್ ಪೇಂಟ್ ಸ್ಕೀಮ್ ಆಯ್ಕೆಗಳೊಂದಿಗೆ, ಅದನ್ನು ಬೀದಿಗಳಲ್ಲಿ ಇತರ ಬೈಕ್‌ಗಳಿಂದ ಪ್ರತ್ಯೇಕಿಸುತ್ತದೆ.
3
ಬಜಾಜ್ ಪಲ್ಸರ್ 220F
2007 ರಲ್ಲಿ ಪರಿಚಯಿಸಿದ್ದ ಶರವೇಗದ ಈ ಹಳೆಯ ಬೈಕ್ ಆ ಕಾಲದಲ್ಲಿ ಅದರ ಸಹಜ ಪವರ್ ಮತ್ತು ಆಕ್ರಮಣಕಾರಿ ನಿಲುವಿಗೆ ಹೆಸರುವಾಸಿಯಾಗಿತ್ತು. ಬೈಕ್‌ನ BS VI ಆವೃತ್ತಿಯು ಅದರ ಸಿಂಗಲ್-ಸಿಲಿಂಡರ್, 220 cc ಎಂಜಿನ್‌ನಿಂದ 20.4 PS ನೀಡುತ್ತವೆ. ಇದು ಏರೋಡೈನಮಿಕ್ ವಿನ್ಯಾಸದೊಂದಿಗೆ ಮುಂದುವರೆಯುತ್ತದೆ ಮತ್ತು ಒಂದೇ ABS ಚಾನೆಲ್‌ನೊಂದಿಗೆ ಜೋಡಿಸಲಾದ ಟ್ವಿನ್ ಡಿಸ್ಕ್ ಬ್ರೇಕ್‌ಗಳೊಂದಿಗೆ ಬರುತ್ತದೆ.
4
ಬಜಾಜ್ ಅವೆಂಜರ್ ಕ್ರೂಸ್ 220
ಕ್ರೋಮ್ ಹೈಲೈಟ್‌ಗಳು ಮತ್ತು ನಯವಾದ ಕರ್ವ್‌ಗಳೊಂದಿಗೆ ಟೈಮ್‌ಲೆಸ್ ಕ್ರೂಸರ್ ವಿನ್ಯಾಸವು ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಮಾಡುತ್ತದೆ. ಆರಾಮದಾಯಕವಾಗಿ ಕುಳಿತು ಚಾಲನೆ ಮಾಡುವ ಸೌಕರ್ಯವು ದೂರದ ಪ್ರಯಾಣಗಳನ್ನು ಅನುಕೂಲಕರವಾಗಿಸುತ್ತದೆ. ಇದರ ಪೇಟೆಂಟ್ ಪಡೆದ DTS-i ತಂತ್ರಜ್ಞಾನದ 220 cc ಎಂಜಿನ್ ಹೆದ್ದಾರಿಗಳಲ್ಲಿ ಸವಾರಿ ಮಾಡಲು 18.4 PS ಶಕ್ತಿಯನ್ನು ಉತ್ಪಾದಿಸುತ್ತದೆ. ಸಿಂಗಲ್-ಚಾನೆಲ್ ABS ತನ್ನ ವರ್ಗದಲ್ಲಿ ಪ್ರಮಾಣಿತ ಸುರಕ್ಷತಾ ಫೀಚರ್ ಆಗಿದೆ ಮತ್ತು ಇದು ಅವೆಂಜರ್ ಅನ್ನು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟಕುವ ಕ್ರೂಜರ್‌ಗಳಲ್ಲಿ ಒಂದಾಗಿಸಿದೆ.
5
ಬಜಾಜ್ ಡಾಮಿನಾರ್ 400
ಬಜಾಜ್ ಪಾಳಯದ ಅತ್ಯಂತ ಪವರ್‌ಫುಲ್ ಬೈಕ್ ಡಾಮಿನಾರ್ 400 373 cc ಡೈರೆಕ್ಟ್ ಓವರ್‌ಹೆಡ್ ಕ್ಯಾಮ್‌ಶಾಫ್ಟ್ (DOHC), ಲಿಕ್ವಿಡ್ ಕೂಲ್ಡ್, ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ನೊಂದಿಗೆ ಬರುತ್ತದೆ, 40 PS ಶಕ್ತಿಯನ್ನು ಉತ್ಪಾದಿಸುತ್ತದೆ. ಇದರ ಪ್ರಬಲ ನೋಟ ಹಾಗೂ ಸಮರ್ಥ ಎಕ್ಸಾಸ್ಟ್ ಗಮನ ಸೆಳೆಯುವಂತೆ ಮಾಡುತ್ತವೆ. ಅಲ್ಲದೆ ಇದರ ನೇರ ಸ್ಪೋರ್ಟ್ಸ್ ಟೂರರ್ ವಿನ್ಯಾಸವು ಇಡೀ ದಿನದ ಸವಾರಿಯ ನಂತರವೂ ಆರಾಮದಿಂದ ಇರುವಂತೆ ಮಾಡುತ್ತದೆ. ಸುರಕ್ಷತೆಗಾಗಿ ಇದು ಅತ್ಯುತ್ತಮ ದರ್ಜೆಯ USD ಫೋರ್ಕ್‌ಗಳು ಮತ್ತು ಟ್ವಿನ್-ಚಾನೆಲ್ ABS ನೊಂದಿಗೆ ಬರುತ್ತದೆ.
6
ಬಜಾಜ್ ಚೇತಕ್
ಬಜಾಜ್ ಚೇತಕ್ ತನ್ನ ಐಕಾನಿಕ್ ಸ್ಕೂಟರ್ ವಿನ್ಯಾಸದೊಂದಿಗೆ ಬ್ರ್ಯಾಂಡ್‌ನ ಪಾಳಯದ ಇನ್ನೊಂದು ಅಪರೂಪದ ಬೈಕ್ ಆಗಿದೆ. ಈಗ ಎಲೆಕ್ಟ್ರಿಕ್ ಅವತಾರದಲ್ಲಿ ಲಭ್ಯವಿದ್ದು, ಕಾಲಕ್ಕೆ ತಕ್ಕಂತೆ ಆಧುನಿಕವಾಗಿದೆ. ಇದು 12-ಇಂಚ್ ಅಲಾಯ್ ವೀಲ್‌ಗಳೊಂದಿಗೆ ಬರುತ್ತದೆ. ಇಬ್ಬರು ಆರಾಮಾಗಿ ಕುಳಿತುಕೊಳ್ಳಬಹುದಾದ ನಯವಾದ ವಿನ್ಯಾಸದೊಂದಿಗೆ ಬರುತ್ತದೆ ಮತ್ತು ಪೂರ್ತಿ ಚಾರ್ಜ್ ಮಾಡಿದರೆ 95 ಕಿಲೋಮೀಟರ್‌ಗಳವರೆಗೆ ಸವಾರಿ ಮಾಡಬಹುದು. 4080 W ಮೋಟಾರ್ ಸ್ಕೂಟರನ್ನು 70 kmph ಟಾಪ್ ಸ್ಪೀಡ್ ತಲುಪಲು ಅವಕಾಶ ನೀಡುತ್ತದೆ. ಬ್ಯಾಟರಿ ಬೇಗ ಚಾರ್ಜ್ ಆಗುತ್ತದೆ ಹೀಗಾಗಿ ದೂರದ ಸವಾರಿಗಳಿಗೆ ಯಾವ ಸಮಸ್ಯೆಯೂ ಆಗುವುದಿಲ್ಲ.

ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಎಚ್‌ಡಿಎಫ್‌ಸಿ ಎರ್ಗೋ ಆಫರ್‌ಗಳ ವಿಧಗಳು

ನಿಮ್ಮ ಬಜಾಜ್ ಮೋಟಾರ್‌ಸೈಕಲ್ ಸವಾರಿ ಮಾಡಲು ಸಿದ್ಧವಾಗಿದ್ದರೂ, ಸವಾರಿ ಮಾಡುವ ಮೊದಲು ಅದಕ್ಕೆ ಇನ್ಶೂರೆನ್ಸ್ ಬೇಕು. ಹೌದು, ಇದು ಕಾನೂನುಬದ್ಧ ಅವಶ್ಯಕತೆಯಾಗಿದೆ, ಆದರೆ ಸಂಭಾವ್ಯ ದುರದೃಷ್ಟಕರ ಘಟನೆಗಳಿಂದ ಉಂಟಾಗುವ ನಷ್ಟಗಳಿಂದ ನಿಮ್ಮನ್ನು ರಕ್ಷಿಸುವುದರಿಂದ ಬೈಕ್ ಇನ್ಶೂರೆನ್ಸ್ ಪಡೆಯುವುದು ಕೂಡ ಬುದ್ಧಿವಂತಿಕೆಯ ಹಣಕಾಸಿನ ನಿರ್ಧಾರವಾಗಿದೆ. ಬೇಸಿಕ್ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಇನ್ಶೂರೆನ್ಸ್ ಅಥವಾ ಮಲ್ಟಿ ಇಯರ್ ಕಾಂಪ್ರಹೆನ್ಸಿವ್ ಪ್ಯಾಕೇಜ್ ಇನ್ಶೂರೆನ್ಸ್ ಆರಿಸಿಕೊಳ್ಳಿ. ನಿಮ್ಮ ಬಜಾಜ್ ಮೋಟಾರ್ ಸೈಕಲ್ ಸವಾರಿ ಮಾಡುವುದನ್ನು ಇನ್ನಷ್ಟು ಆನಂದದಾಯಕವಾಗಿಸುವ ಹಣಕಾಸಿನ ಸುರಕ್ಷತಾ ಕವಚ ಪಡೆದುಕೊಳ್ಳಿ.

ಇದು ಥರ್ಡ್ ಪಾರ್ಟಿ ಹೊಣೆಗಾರಿಕೆ, ಪರ್ಸನಲ್ ಆಕ್ಸಿಡೆಂಟ್ ಕವರ್ ಮತ್ತು ನಿರ್ಣಾಯಕವಾಗಿ ಸ್ಟ್ಯಾಂಡ್‌ಅಲೋನ್ ಓನ್ ಡ್ಯಾಮೇಜ್ ಬೈಕ್ ಇನ್ಶೂರೆನ್ಸ್ ಕವರ್ ಅನ್ನು ಒಳಗೊಂಡಿರುವುದರಿಂದ ಇದು ಅತ್ಯಂತ ಶಿಫಾರಸು ಮಾಡಲಾದ ಆಯ್ಕೆಯಾಗಿದೆ. ನೀವು ಯಾರಿಗಾದರೂ ಆಕ್ಸಿಡೆಂಟ್‌ ಮಾಡಿದಾಗ, ಇದು ನಿಮಗೆ, ನಿಮ್ಮ ಬೈಕ್‌ಗೆ ಮತ್ತು ನಿಮ್ಮ ಹೊಣೆಗಾರಿಕೆಗಳಿಗೆ ಸಂಪೂರ್ಣ ಹಣಕಾಸು ರಕ್ಷಣೆ ಒದಗಿಸುತ್ತದೆ. ಆಯ್ದ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕವರೇಜ್ ಹೆಚ್ಚಿಸಬಹುದು.

X
ಎಲ್ಲ ರೀತಿಯ ರಕ್ಷಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಸೂಕ್ತವಾಗಿದೆ. ಈ ಪ್ಲಾನ್ ಕೆಳಗಿನ ಕವರೇಜ್‌ ನೀಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಇನ್ನಷ್ಟು ಹುಡುಕಿ

ಇದು ಮೋಟಾರ್ ವಾಹನ ಕಾಯ್ದೆ, 1988 ಅಡಿಯಲ್ಲಿ ಕಡ್ಡಾಯವಾಗಿರುವ ಇನ್ಶೂರೆನ್ಸ್ ವಿಧವಾಗಿದೆ. ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಮರಣ ಅಥವಾ ಅಂಗವಿಕಲತೆ ಅಥವಾ ಅವರ ಆಸ್ತಿಗೆ ಆದ ಹಾನಿ, ಇತ್ಯಾದಿಗಳಿಂದ ಉಂಟಾಗುವ ಯಾವುದೇ ನಷ್ಟಗಳ ವಿರುದ್ಧ ಇದು ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದು ಆಕ್ಸಿಡೆಂಟ್ ಕಾರಣದಿಂದ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಗಳನ್ನೂ ಕವರ್ ಮಾಡುತ್ತದೆ.

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಈಗಾಗಲೇ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದು, ಕವರೇಜ್ ವ್ಯಾಪ್ತಿ ಹೆಚ್ಚಿಸಲು ಬಯಸುವವರಿಗೆ ಈ ಪಾಲಿಸಿಯು ಸೂಕ್ತವಾಗಿದೆ. ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಯಿಂದ ಆಗುವ ನಷ್ಟಗಳ ವಿರುದ್ಧ ಇದು ನಿಮಗೆ ರಕ್ಷಣೆ ನೀಡುತ್ತದೆ. ಇದಲ್ಲದೆ, ನಿಮ್ಮ ಕವರೇಜ್ ಹೆಚ್ಚಿಸಲು ನೀವು ಆ್ಯಡ್-ಆನ್‌ಗಳ ಆಯ್ಕೆಯನ್ನು ಅನ್ಲಾಕ್ ಮಾಡಬಹುದು.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ಆ್ಯಡ್-ಆನ್‌ಗಳ ಆಯ್ಕೆ

ನಿಮ್ಮ ಬೈಕ್ ಮಾಲೀಕತ್ವದ ಅನುಭವಕ್ಕೆ ಅನುಕೂಲತೆ ಮತ್ತು ಸರ್ವತೋಮುಖ ರಕ್ಷಣೆಯನ್ನು ನೀಡಲು ವಿನ್ಯಾಸಗೊಳಿಸಲಾದ ಪ್ಲಾನ್, ಮಲ್ಟಿ ಇಯರ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಐದು ವರ್ಷದ ಥರ್ಡ್ ಪಾರ್ಟಿ ಹೊಣೆಗಾರಿಕೆ ಅಂಶ ಮತ್ತು ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಹಾನಿ ಇನ್ಶೂರೆನ್ಸ್ ಘಟಕವನ್ನು ಒಳಗೊಂಡಿದೆ. ಓನ್ ಡ್ಯಾಮೇಜ್ ಅಂಶವನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲು ಮರೆತರೂ ನಿಮಗೆ ಆರ್ಥಿಕ ರಕ್ಷಣೆ ನೀಡಲಾಗುತ್ತದೆ.

X
ಹೊಚ್ಚ ಹೊಸ ಟೂ ವೀಲರ್ ಖರೀದಿಸಿದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಒಳಗೊಳ್ಳುವುದೇನೆಂದರೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಒಳಗೊಳ್ಳುವ ಮತ್ತು ಒಳಗೊಳ್ಳದ ಅಂಶಗಳು ಬಜಾಜ್ ಟೂ ವೀಲರ್ ಇನ್ಶೂರೆನ್ಸ್

ನಿಮ್ಮ ಬಜಾಜ್ ಆಟೋ ಬೈಕ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಪಾಲಿಸಿ ಪ್ರಕಾರವನ್ನು ಅವಲಂಬಿಸಿ ಕವರೇಜ್ ಒದಗಿಸುತ್ತದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಹಾನಿಯ ವಿರುದ್ಧ ಮಾತ್ರ ಕವರೇಜ್ ಒದಗಿಸಿದರೆ, ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:

ಅಪಘಾತಗಳು

ಅಪಘಾತಗಳು

ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿಯಾಗುವುದರಿಂದ ಉಂಟಾಗುವ ಹಣಕಾಸು ನಷ್ಟಗಳು ಕವರ್ ಆಗುತ್ತವೆ.

ಬೆಂಕಿ ಮತ್ತು ಸ್ಫೋಟ

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಬೈಕ್‌ಗೆ ಉಂಟಾದ ಹಾನಿಯು ಕವರ್ ಆಗುತ್ತದೆ.

ಕಳ್ಳತನ

ಕಳ್ಳತನ

ನಿಮ್ಮ ಬೈಕ್ ಕಳುವಾದರೆ, ಬೈಕ್‌ನ IDV ಮೊತ್ತಕ್ಕೆ ಸಮನಾದ ಪರಿಹಾರ ಪಡೆಯುತ್ತೀರಿ.

ವಿಪತ್ತುಗಳು

ನೈಸರ್ಗಿಕ/ಮಾನವನಿರ್ಮಿತ ವಿಕೋಪಗಳು

ಭೂಕಂಪ, ಬಿರುಗಾಳಿ, ಪ್ರವಾಹ, ಗಲಭೆ, ವಿಧ್ವಂಸಕ ಕೃತ್ಯ, ಮುಂತಾದ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಕವರ್ ಮಾಡಲಾಗುತ್ತದೆ.

ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

₹15 ಲಕ್ಷದೊಳಗಿನ ನಿಮ್ಮ ಚಿಕಿತ್ಸೆ ಶುಲ್ಕಗಳನ್ನು ಭರಿಸಲಾಗುತ್ತದೆ.

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಅಂಗವೈಕಲ್ಯ ಅಥವಾ ಸಾವು ಮತ್ತು ಅವರ ಆಸ್ತಿಗೆ ಆದ ಹಾನಿಯನ್ನು ಕೂಡ ಕವರ್ ಮಾಡಲಾಗುತ್ತದೆ.

ಆನ್ಲೈನ್‌ನಲ್ಲಿ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ಅನ್ನು ನವೀಕರಿಸುವುದು ಹೇಗೆ?

ನಿಮ್ಮ ಬಜಾಜ್ ಟೂ ವೀಲರ್ ಇನ್ಶೂರೆನ್ಸ್ ನವೀಕರಣ ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇದನ್ನು ನೀವು ಮನೆಯಿಂದಲೇ ಆರಾಮವಾಗಿ ಕೆಲವೇ ಕ್ಲಿಕ್‌ಗಳೊಂದಿಗೆ ಮಾಡಬಹುದು. ಈ ಕೆಳಗೆ ತಿಳಿಸಿದ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ತ್ವರಿತವಾಗಿ ಕವರ್ ಪಡೆದುಕೊಳ್ಳಿ!

  • ಹಂತ #1
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಾಲಿಸಿಯನ್ನು ಖರೀದಿಸಲು ಅಥವಾ ನವೀಕರಿಸಲು ಆಯ್ಕೆ ಮಾಡಿ
  • ಹಂತ #2
    ಹಂತ #2
    ನಿಮ್ಮ ಬೈಕ್ ವಿವರಗಳು, ನೋಂದಣಿ, ನಗರ ಮತ್ತು ಯಾವುದಾದರೂ ಹಿಂದಿನ ಪಾಲಿಸಿಗಳಿದ್ದಲ್ಲಿ, ಅದರ ವಿವರಗಳನ್ನೂ ನಮೂದಿಸಿ
  • ಹಂತ #3
    ಹಂತ #3
    ಕೋಟ್ ಸ್ವೀಕರಿಸಲು, ನಿಮ್ಮ ಇಮೇಲ್ ID, ಮತ್ತು ಫೋನ್ ನಂಬರ್ ಒದಗಿಸಿ
  • ಹಂತ #4
    ಹಂತ #4
    ಆನ್ಲೈನ್ ಪಾವತಿ ಮಾಡಿ, ತಕ್ಷಣ ಕವರ್ ಪಡೆಯಿರಿ!

ಎಚ್‌ಡಿಎಫ್‌ಸಿ ಎರ್ಗೋ ಏಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು?

ಬಜಾಜ್ ಬೈಕ್ ಇನ್ಶೂರೆನ್ಸ್ ಮೋಟಾರ್ ಸೈಕಲ್ ಸವಾರಿ ಮಾಡಲು ಪ್ರಮುಖವಾಗಿದೆ. ನಿಮಗೆ ಆಕ್ಸಿಡೆಂಟ್ ಆದರೆ, ಅಥವಾ ನಿಮ್ಮ ಬೈಕ್ ಕಳುವಾದರೆ, ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಹಣಕಾಸಿನ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ, ಪ್ರವಾಹ, ತುಫಾನು, ಭೂಕಂಪ, ಗಲಭೆ ಅಥವಾ ವಿಧ್ವಂಸಕ ರೀತಿಯ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳ ಕಾರಣದಿಂದ ನಿಮ್ಮ ಬೈಕ್‌ಗೆ ಆಗುವ ಯಾವುದೇ ಹಾನಿಯನ್ನು ಬಜಾಜ್ ಕಾಂಪ್ರೆಹೆನ್ಸಿವ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಇದಕ್ಕಾಗಿ ನೀವು ಕೈಯಾರೆ ಖರ್ಚು ಮಾಡದಂತೆ ಪಾಲಿಸಿಯು ನೋಡಿಕೊಳ್ಳುತ್ತದೆ. ಈ ಕೆಳಗಿನ ಕಾರಣಗಳಿಗಾಗಿ ನಿಮ್ಮ ಬಜಾಜ್ ಬೈಕ್ ಇನ್ಶೂರೆನ್ಸ್ ಪಾಲಿಸಿ ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಆಯ್ಕೆಮಾಡಿ:

ವ್ಯಾಪಕ ಸೇವೆ

ವ್ಯಾಪಕ ಸೇವೆ

ನಿಮ್ಮ ನೆರೆಹೊರೆಯಲ್ಲಿ ಮತ್ತು ದೇಶದಾದ್ಯಂತ ಗಣನೀಯ ಉಪಸ್ಥಿತಿ ಹೊಂದಿರುವ ವಿಮಾದಾತರನ್ನು ನೀವು ಆಯ್ದುಕೊಳ್ಳಬೇಕು. ಭಾರತದಾದ್ಯಂತ 2000 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿರುವ ಎಚ್‌ಡಿಎಫ್‌ಸಿ ಎರ್ಗೋ, ಸದಾ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.

24x7 ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು ಸೌಲಭ್ಯದಿಂದಾಗಿ, ವಾಹನದ ಬ್ರೇಕ್‌ಡೌನ್ ಸಂದರ್ಭದಲ್ಲಿ ನೀವು ಎಂದಿಗೂ ಕೈಚೆಲ್ಲಿ ಕೂರಬೇಕಾಗಿಲ್ಲ.

ಒಂದು ಕೋಟಿಗಿಂತ ಹೆಚ್ಚು ಗ್ರಾಹಕರು

ಒಂದು ಕೋಟಿಗಿಂತ ಹೆಚ್ಚು ಗ್ರಾಹಕರು

ಎಚ್‌ಡಿಎಫ್‌ಸಿ ಎರ್ಗೋ 1.5 ಕೋಟಿಗೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಹಾಗಾಗಿ, ನಿಮ್ಮ ಅಗತ್ಯಗಳ ಪೂರೈಕೆಯ ಬಗ್ಗೆ ಯಾವ ಚಿಂತೆಯೂ ಬೇಡ.

ಓವರ್‌ನೈಟ್ ಸೇವೆ

ಓವರ್‌ನೈಟ್ ಸೇವೆ

ನಿಮ್ಮ ಕಾರನ್ನು ಸರ್ವಿಸ್‌ಗೆ ಕೊಟ್ಟಾಗ, ನಿಮ್ಮ ದಿನಚರಿ ಏರುಪೇರಾಗಬಹುದು. ಆದರೆ, ನಾವು ಸಣ್ಣಪುಟ್ಟ ಹಾನಿಗಳಿಗೆ ಓವರ್‌ನೈಟ್ ಸೇವೆ ಒದಗಿಸುವುದರಿಂದ, ನೀವು ರಾತ್ರಿಯಿಡೀ ನೆಮ್ಮದಿಯಿಂದ ನಿದ್ದೆ ಮಾಡಿ. ನಿಮ್ಮ ಬೆಳಗಿನ ಪ್ರಯಾಣದ ವೇಳೆಗೆಲ್ಲಾ ಕಾರು ನಿಮ್ಮ ಮನೆಬಾಗಿಲಿಗೆ ಬಂದಿರುತ್ತದೆ.

ಸುಲಭ ಕ್ಲೈಮ್‌ಗಳು

ಸುಲಭ ಕ್ಲೈಮ್‌ಗಳು

ಉತ್ತಮ ವಿಮಾದಾತರು ಕ್ಲೈಮ್‌ಗಳನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪ್ರಕ್ರಿಯೆಗೊಳಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ಮಾಡುವುದು ಅದನ್ನೇ. ನಾವು ಮೊದಲನೇ ದಿನವೇ ಸುಮಾರು 50% ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವ ಮೂಲಕ, ನಿಮ್ಮ ಚಿಂತೆಗಳನ್ನು ಕಡಿಮೆ ಮಾಡುತ್ತೇವೆ.

ಭಾರತದಾದ್ಯಂತ 2000+ ನೆಟ್ವರ್ಕ್ ಗ್ಯಾರೇಜ್‌ಗಳು
2000+ˇ ನೆಟ್ವರ್ಕ್ ಗ್ಯಾರೇಜ್‌ಗಳು
ಭಾರತದಾದ್ಯಂತ

ಬೈಕ್ ಇನ್ಶೂರೆನ್ಸ್ ಕುರಿತಾದ ಇತ್ತೀಚಿನ ಸುದ್ದಿಗಳು

ಬಜಾಜ್ ಭಾರತದಲ್ಲಿ ಶೀಘ್ರದಲ್ಲೇ RS200 ಬಿಡುಗಡೆ ಮಾಡಲಿದೆ

ಬಜಾಜ್ ಭಾರತದಲ್ಲಿ ಮುಂಬರುವ ತಿಂಗಳುಗಳಲ್ಲಿ RS200 ಅನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಬಜಾಜ್ ಪಲ್ಸರ್ RS200 ಅನೇಕ ಫೀಚರ್ ಅಪ್ಡೇಟ್‌ಗಳು ಮತ್ತು ಹೊಸ ಬಣ್ಣದ ಸ್ಕೀಮ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಮೋಟಾರ್‌ಸೈಕಲ್ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಶನ್‌ನೊಂದಿಗೆ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕನ್ಸೋಲ್ ಹೊಂದಿರಬಹುದು. RS200 LED ಹೆಡ್‌ಲ್ಯಾಂಪ್‌ಗಳು ಮತ್ತು ಹೊಸ ಪೇಂಟ್ ಸ್ಕೀಮ್‌ಗಳನ್ನು ಕೂಡ ಒಳಗೊಂಡಿರಬಹುದು. ಹೊಸ ಪಲ್ಸರ್ RS200 ಕಡಿಮೆ ಬೆಲೆ ಏರಿಕೆಯನ್ನು ಹೊಂದಬಹುದು ಮತ್ತು ಹೀರೋ ಕರೀಷ್ಮಾ XMR ಮತ್ತು ಸುಜುಕಿ ಜಿಕ್ಸರ್ SF250 ನೊಂದಿಗೆ ಸ್ಪರ್ಧಿಸಲಿದೆ.



ಪ್ರಕಟಿಸಲಾದ ದಿನಾಂಕ: ಏಪ್ರಿಲ್ 18, 2024

ಬಜಾಜ್‌ನ CNG ಬೈಕ್ ಮಾಸಿಕ ಇಂಧನದ ಅರ್ಧ ವೆಚ್ಚವನ್ನು ಕಡಿಮೆ ಮಾಡಬಹುದು

ವಿಶ್ವದ ಮೊದಲ ಕಂಪ್ರೆಸ್ಡ್ ನೈಸರ್ಗಿಕ ಗ್ಯಾಸ್ ಪ್ರಾರಂಭದೊಂದಿಗೆ ಬಜಾಜ್ ಆಟೋ ಪ್ರವೇಶ ಮಟ್ಟದ ದೇಶೀಯ ಮೋಟಾರ್‌ಸೈಕಲ್ ಮಾರುಕಟ್ಟೆಗೆ ಹೊಸ ಆಯಾಮ ನೀಡಿದೆ. ಇದಲ್ಲದೆ, ಬಜಾಜ್ ತನ್ನ CNG ಬೈಕ್ ಮಾಸಿಕ ಇಂಧನ ವೆಚ್ಚದ ಅರ್ಧದಷ್ಟು ಹೊಂದಿರುತ್ತದೆ ಎಂದು ಹೇಳಿಕೊಂಡಿದೆ. ಪ್ರೀಮಿಯಂ ಬೆಲೆಯ ದ್ವಿ-ಇಂಧನ ಮೋಟಾರ್‌ಸೈಕಲ್‌ಗಳು ಹೀರೋ ಮೋಟೋಕಾರ್ಪ್‌ನ ಪ್ರಾಬಲ್ಯಕ್ಕೆ ಸವಾಲು ಹಾಕುತ್ತವೆ. ಮೈಲೇಜ್-ಕೇಂದ್ರಿತ ಎಂಟ್ರಿ-ಲೆವೆಲ್ ವಿಭಾಗದಲ್ಲಿ ಬಂಡವಾಳ ಪಡೆಯುವ ಗುರಿಯನ್ನು ಬಜಾಜ್ ಹೊಂದಿದೆ. ಇದು ಸದ್ಯಕ್ಕೆ ಪ್ರವೇಶ ಮಟ್ಟದ ವಿಭಾಗದಲ್ಲಿ 8% ಮಾರುಕಟ್ಟೆ ಪಾಲನ್ನು ಹೊಂದಿದೆ. ಈ ಕ್ರಮವು ಸರ್ಕಾರಿ ಕಾರ್ಬನ್ ಕಡಿತಗೊಳಿಸುವ ಗುರಿಗಳೊಂದಿಗೆ ಹೊಂದಿಕೆಯಾಗುತ್ತದೆ. ಬಜಾಜ್ ಮೊದಲು ಮಹಾರಾಷ್ಟ್ರ ಮತ್ತು ಗುಜರಾತಿನಲ್ಲಿ ಬೈ-ಇಂಧನ ಬೈಕ್ ಪ್ರಾರಂಭಿಸುತ್ತದೆ ಮತ್ತು ನಂತರ ಭಾರತದ ಇತರ ಭಾಗಗಳಲ್ಲಿ ತನ್ನ CNG ಪೋರ್ಟ್‌ಫೋಲಿಯೋವನ್ನು ವಿಸ್ತರಿಸುತ್ತದೆ.

ಪ್ರಕಟಿಸಲಾದ ದಿನಾಂಕ: ಏಪ್ರಿಲ್ 08, 2024

ಆಗಾಗ್ಗೆ ಕೇಳಲಾದ ಪ್ರಶ್ನೆಗಳು


ಹೊಸ ಬೈಕ್ ಖರೀದಿಸಿದ್ದಕ್ಕೆ ಅಭಿನಂದನೆಗಳು! ಡೀಲರ್ ನಿಮಗೆ ಇನ್ಶೂರೆನ್ಸ್ ಒದಗಿಸುವ ಸಾಧ್ಯತೆ ಇದೆ, ಆದರೆ ಅದನ್ನು ಕೂಡಲೇ ಖರೀದಿಸಬೇಕು ಎಂದೇನಿಲ್ಲ. ಸ್ವಲ್ಪ ಸಮಯ ತಡೆದು ನಿಮ್ಮದೇ ಆದ ಸಂಶೋಧನೆ ಮಾಡಿದ ನಂತರ ಇನ್ಶೂರೆನ್ಸ್ ಖರೀದಿಸಬಹುದು. ಡೀಲರ್‌ಶಿಪ್‌ಗಳು ನಿಮಗೆ ಸೂಕ್ತವಾಗುವ ಇನ್ಶೂರೆನ್ಸ್ ಪಾಲಿಸಿಗಳನ್ನು ಶಿಫಾರಸು ಮಾಡಬಹುದು. ಆದರೆ, ಆನ್ಲೈನ್‌ನಲ್ಲಿ ತ್ವರಿತವಾಗಿ ಒಂದು ಸಂಶೋಧನೆ ಮಾಡುವುದು ನಿಮ್ಮ ಅವಶ್ಯಕತೆಗಳಿಗೆ ಸೂಕ್ತವಾಗುವ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಹೌದು, ಇದು ನಿಜ. ಮೋಟಾರ್ ವಾಹನ ಕಾಯ್ದೆಯ ಪ್ರಕಾರ 250W ಮೋಟಾರ್ ಹೊಂದಿರುವ ವಾಹನಗಳು ಮತ್ತು 25-30 kmph ವೇಗ ಹೊಂದಿರುವ ವಾಹನಗಳಿಗೆ ಇನ್ಶೂರೆನ್ಸ್ ಅಥವಾ ನೋಂದಣಿ ಅಥವಾ ಲೈಸೆನ್ಸ್ ಅಗತ್ಯವಿಲ್ಲ. ಆದರೆ ಬಜಾಜ್ ಚೇತಕ್ ಶಕ್ತಿಶಾಲಿ 4080 W ಮೋಟಾರ್ ಹೊಂದಿರುವುದರಿಂದ ಇದಕ್ಕೆ ಎಂದಿನ ಟೂ ವೀಲರ್ ನಿಯಮಗಳು ಅನ್ವಯವಾಗುತ್ತವೆ. ಗರಿಷ್ಠ ರಕ್ಷಣೆ ಪಡೆಯಲು ನಿಮ್ಮ ಬಜಾಜ್ ಚೇತಕ್‌ಗಾಗಿ ಸಮಗ್ರ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಲು ನಾವು ಶಿಫಾರಸು ಮಾಡುತ್ತೇವೆ.
ನೀವು ಎಚ್‌ಡಿಎಫ್‌ಸಿ ಎರ್ಗೋ ಪೋರ್ಟಲ್‌ಗೆ ಲಾಗಿನ್ ಆಗಿ ನಿಮ್ಮ ಪಾಲಿಸಿ ವಿವರಗಳನ್ನು ನಮೂದಿಸಬಹುದು. ಮೊಬೈಲ್ ಆ್ಯಪ್ ಮೂಲಕ ಬೈಕ್‌ಗೆ ಆದ ಹಾನಿಯ ಬಗ್ಗೆ ಸ್ವಯಂ-ತಪಾಸಣೆ ಮಾಡಬೇಕಾಗಬಹುದು ಮತ್ತು ಅದರ ಚಿತ್ರಗಳನ್ನು ಕಳುಹಿಸಬೇಕಾಗಬಹುದು. ನೀವು ಟೋಲ್‌ಫ್ರೀ ಸಂಖ್ಯೆಗೂ ಸಹ ಕರೆ ಮಾಡಬಹುದು ಮತ್ತು ಕ್ಲೈಮ್ ನೋಂದಣಿ ಮಾಡಬಹುದು. ನಿಮ್ಮ ಪಾಲಿಸಿ ಡಾಕ್ಯುಮೆಂಟ್ ಅನ್ನು ಜೊತೆಯಲ್ಲೇ ಇಟ್ಟುಕೊಳ್ಳಿ. ಇವೆಲ್ಲವನ್ನೂ ಆಕ್ಸಿಡೆಂಟ್ ಆದ 24 ಗಂಟೆಗಳ ಒಳಗೆ, ಸಾಧ್ಯವಾದಷ್ಟು ಬೇಗ ಮಾಡಬೇಕು.
ಇದರ ಉತ್ತರವು ನಿಮ್ಮ ಟೈರ್‌ಗಳು ಹಾನಿಗೊಳಗಾದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಆಕ್ಸಿಡೆಂಟ್ ಆದಾಗ ಟೈರ್‌ಗಳು ಹಾನಿಗೊಳಗಾದರೆ, ಬಜಾಜ್ ಆಟೋ ಕಾಂಪ್ರೆಹೆನ್ಸಿವ್ ಇನ್ಶೂರೆನ್ಸ್ ಪ್ಲಾನ್ ಆ ಹಾನಿಯ ವಿರುದ್ಧ ಕವರೇಜ್ ನೀಡುತ್ತದೆ ಮತ್ತು ಟೈರ್‌ಗಳನ್ನು ಬದಲಾಯಿಸುತ್ತದೆ. ಆದರೆ, ವಿಧ್ವಂಸಕ ಕೃತ್ಯದ ಸಂದರ್ಭದಲ್ಲಿ ಅದನ್ನು ಕವರ್ ಮಾಡಲಾಗುವುದಿಲ್ಲ.