ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್
₹538 ರಲ್ಲಿ ಪ್ರೀಮಿಯಂ ಆರಂಭ*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
2000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

2000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳುˇ
ತುರ್ತು ರಸ್ತೆಬದಿಯ ನೆರವು

ತುರ್ತು ರಸ್ತೆಬದಿ

ಸಹಾಯ
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಹೋಂಡಾ ಟೂ ವೀಲರ್ ಇನ್ಶೂರೆನ್ಸ್ / ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್

ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್

ಆ್ಯಕ್ಟಿವಾ ಇನ್ಶೂರೆನ್ಸ್

ಭಾರತೀಯರು ಸ್ಕೂಟರ್‌ಗಿಂತಲೂ ಹೆಚ್ಚಾಗಿ ಮೋಟಾರ್‌ಸೈಕಲ್‌ಗಳಿಗೆ ಮನ್ನಣೆ ನೀಡುತ್ತಾರೆ ಎಂಬ ನಂಬಿಕೆ ಇದ್ದರೂ, ಹೋಂಡಾ ಆ್ಯಕ್ಟಿವಾ ಬದಲಾವಣೆಯ ಹೊಸ ಹೆಜ್ಜೆಯನ್ನು ಪರಿಚಯಿಸಿದೆ. 1999 ರಲ್ಲಿ ಮಾರುಕಟ್ಟೆಗೆ ಬಂದು, ಸದ್ಯ ಒಂದೂವರೆ ದಶಕಗಳು ಸಂದಿದ್ದು, ಭಾರತೀಯರು ಹೆಚ್ಚಾಗಿ ಬೇಡಿಕೆ ಇಡುವ ಮತ್ತು ದೈನಂದಿನ ಪ್ರಯಾಣಕ್ಕಾಗಿ ಬಳಸುವ ಟೂ ವೀಲರ್‌ ಎಂದನಿಸಿಕೊಂಡಿದೆ. ಹಾಗಾದರೆ, ಈ ಸಾಧನೆ ಹೇಗಾಯಿತು? ಮೊದಲಿಗೆ, ಇದು ಯುನಿಸೆಕ್ಸ್ ಲುಕ್ ಹೊಂದಿದ್ದು, ಕುಟುಂಬದಲ್ಲಿ ಯಾರು ಬೇಕಾದರೂ ಸ್ಕೂಟರ್‌ ಅನ್ನು ಬಳಸಬಹುದಾಗಿದೆ. ಪ್ರತಿ ಹೊಸ ಆವೃತ್ತಿಯೊಂದಿಗೆ, ಇಂಧನ ಬಳಕೆ ಸಾಮರ್ಥ್ಯವನ್ನು ಸುಧಾರಿಸಲು ಹೋಂಡಾ ಯಾವಾಗಲೂ ಕಷ್ಟಪಟ್ಟು ಕೆಲಸ ಮಾಡುತ್ತದೆ. ಪ್ರತಿ ವರ್ಷವೂ, ತಮ್ಮ ಟೂ ವೀಲರ್‌ಗಳಲ್ಲಿ ನಿಮಗೆ ಉತ್ತಮ ಸ್ಟೈಲಿಂಗ್, ದೊಡ್ಡ ಎಂಜಿನ್, ಆಕರ್ಷಕ ರಂಗುಗಳು ಮತ್ತು ಇನ್ನೂ ಹೆಚ್ಚಿನ ಸ್ಟೋರೇಜ್ ಸ್ಪೇಸ್ ತಂದುಕೊಡುವಲ್ಲಿ ಹೋಂಡಾ ಬ್ರ್ಯಾಂಡ್ ಸಫಲವಾಗಿದೆ. ಆದ್ದರಿಂದ, ಹೋಂಡಾ ಆ್ಯಕ್ಟಿವಾ ಅಷ್ಟು ದೊಡ್ಡ ಹಿಟ್ ಆಗಿ, ಹೆಸರು ಮಾಡಿರುವುದು ಆಶ್ಚರ್ಯವೇನಲ್ಲ.

ಜನಪ್ರಿಯ ಹೋಂಡಾ ಆ್ಯಕ್ಟಿವಾ ವೇರಿಯಂಟ್‌ಗಳು

ಹೋಂಡಾ ಆ್ಯಕ್ಟಿವಾ 7.79PS ಮತ್ತು 8.84Nm ಉತ್ಪಾದಿಸುವ 109.51cc ಸಿಂಗಲ್ ಸಿಲಿಂಡರ್ ಇಂಧನ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿರುವ ಭಾರತದ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಹೋಂಡಾ ಆ್ಯಕ್ಟಿವಾದ ಇತ್ತೀಚಿನ ಆವೃತ್ತಿ 6G ಆಗಿದೆ. ಹೋಂಡಾ ಆ್ಯಕ್ಟಿವಾ 5G ಮತ್ತು ಹೋಂಡಾ ಆ್ಯಕ್ಟಿವಾ 6G ನಡುವೆ ಇರುವ ಅತ್ಯಂತ ಗಮನಾರ್ಹ ವ್ಯತ್ಯಾಸವೆಂದರೆ, ಟೆಲಿಸ್ಕೋಪಿಕ್ ಫೋರ್ಕ್ ಮತ್ತು ದೊಡ್ಡ 12 ಇಂಚಿನ ಮುಂಭಾಗದ ಚಕ್ರದ ಉಪಸ್ಥಿತಿ. ಭಾರತದಲ್ಲಿ ಹೋಂಡಾ ಆ್ಯಕ್ಟಿವಾ 6G ಬೆಲೆ ₹ 76, 234 ರಿಂದ ಆರಂಭವಾಗಿ ₹ 82,734 ವರೆಗೆ ಇದೆ. ಹೋಂಡಾ ಆ್ಯಕ್ಟಿವಾ 6G 5 ವೇರಿಯಂಟ್‌ಗಳೊಂದಿಗೆ ಬರುತ್ತದೆ. ಎಲ್ಲಾ ವೇರಿಯಂಟ್‌ಗಳನ್ನು ಕೆಳಗಿನ ಟೇಬಲ್‌ನಲ್ಲಿ ನೋಡೋಣ.

ಹೋಂಡಾ ಆ್ಯಕ್ಟಿವಾ 6G ಬೆಲೆ (ಎಕ್ಸ್-ಶೋರೂಮ್)
ಹೋಂಡಾ ಆ್ಯಕ್ಟಿವಾ 6G STD ₹ 76,234
ಹೋಂಡಾ ಆ್ಯಕ್ಟಿವಾ 6G DLX ₹ 78,734
ಹೋಂಡಾ ಆ್ಯಕ್ಟಿವಾ 6G DLX ಲಿಮಿಟೆಡ್ ಎಡಿಷನ್ ₹ 80,734
ಹೋಂಡಾ ಆ್ಯಕ್ಟಿವಾ 6G H-ಸ್ಮಾರ್ಟ್ ₹ 82,234
ಹೋಂಡಾ ಆ್ಯಕ್ಟಿವಾ 6G ಸ್ಮಾರ್ಟ್ ಲಿಮಿಟೆಡ್ ಎಡಿಷನ್ ₹ 82,734

ಹೋಂಡಾ ಆ್ಯಕ್ಟಿವಾ - ಮೇಲ್ನೋಟ ಮತ್ತು USP ಗಳು


ಆ್ಯಕ್ಟಿವಾ 125 ನಂತರ ಹೋಂಡಾ ಆ್ಯಕ್ಟಿವಾ 6G ಅನ್ನು ಬಿಡುಗಡೆ ಮಾಡಲಾಗುತ್ತಿದೆ. LED ಹೆಡ್‌ಲೈಟ್ ಡೀಲಕ್ಸ್ ವೇರಿಯಂಟ್‌ನಲ್ಲಿ ಮಾತ್ರ ಲಭ್ಯವಿದೆ. ಆ್ಯಕ್ಟಿವಾ H-ಸ್ಮಾರ್ಟ್ ವೇರಿಯಂಟ್ ಆಟೋಮ್ಯಾಟಿಕ್ ಲಾಕ್/ಅನ್ಲಾಕ್, ಎಂಜಿನ್ ಇಮ್ಮೊಬಿಲೈಜರ್ ಮತ್ತು ಕೀಲೆಸ್ ಸ್ಟಾರ್ಟ್‌ನಂತಹ ಸಂಪೂರ್ಣ ಶ್ರೇಣಿಯ ಕಾರ್ಯಗಳನ್ನು ಒದಗಿಸುವ ಸ್ಮಾರ್ಟ್ ಕೀಯನ್ನು ಪಡೆಯುತ್ತದೆ. H-ಸ್ಮಾರ್ಟ್ ವೇರಿಯಂಟ್ OBD-2 ನಿಯಮಗಳ ಅನುಸರಣೆಯೊಂದಿಗೆ ಬರುತ್ತದೆ. ಇತ್ತೀಚಿನ 6G ಆ್ಯಕ್ಟಿವಾ ಎಂಜಿನ್ ಬಗ್ಗೆ ಹೇಳುವುದಾದರೆ ಇದು 7.79PS ಮತ್ತು 8.84Nm ಉತ್ಪಾದಿಸಲು ಟ್ಯೂನ್ ಆಗಿರುವ 109.51cc ಸಿಂಗಲ್ ಸಿಲಿಂಡರ್‌ನೊಂದಿಗೆ ಬರುತ್ತದೆ. ಇದು ACG ಸ್ಟಾರ್ಟರ್ (ಸೈಲೆಂಟ್ ಸ್ಟಾರ್ಟರ್) ಮತ್ತು ಎಂಜಿನ್ ಕಿಲ್ ಸ್ವಿಚ್ ಕೂಡ ಹೊಂದಿದೆ. ನಾವು ಹೋಂಡಾ ಆ್ಯಕ್ಟಿವಾದ ಕೆಲವು USP ಗಳನ್ನು ನೋಡೋಣ:

1
ಬಜೆಟ್
ಉನ್ನತ ಮಟ್ಟದ ಕಾರ್ಯಕ್ಷಮತೆ, ರೈಡಿಂಗ್ ಅನುಕೂಲತೆ, ಕ್ಲಾಸಿ ವಿನ್ಯಾಸ ಮತ್ತು ಹೋಂಡಾ ಆ್ಯಕ್ಟಿವಾದ ಇತ್ತೀಚಿನ ಫೀಚರ್‌ಗಳ ಹೊರತಾಗಿಯೂ, ಇದು ಬಜೆಟ್-ಸ್ನೇಹಿ ಸ್ಕೂಟರ್ ಆಗಿದೆ. ಅದರ ಬೆಲೆ ಸಾಮಾನ್ಯವಾಗಿ ₹ 76,000 ರಿಂದ ₹ 83,000 ವರೆಗೆ ಇರುತ್ತದೆ. ಈ ಬೆಲೆಯು ಭಾರತದಲ್ಲಿ ಹೆಚ್ಚು ಮಾರಾಟವಾಗುವ ಟೂ ವೀಲರ್ ಆಗಲು ಸಹಾಯ ಮಾಡಿದೆ.
2
ಮೈಲೇಜ್
ಹೋಂಡಾ ಆ್ಯಕ್ಟಿವಾದ ಯಶಸ್ಸಿಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿರುವುದು ಅದರ ಅದ್ಭುತ ಮೈಲೇಜ್. ಹೆಚ್ಚುತ್ತಿರುವ ಇಂಧನ ವೆಚ್ಚಗಳೊಂದಿಗೆ, ಸವಾರರು ಯಾವಾಗಲೂ ಇಂಧನ-ದಕ್ಷ ಸಾಧನಗಳನ್ನು ಹುಡುಕುತ್ತಿದ್ದಾರೆ. ಆ್ಯಕ್ಟಿವಾದಲ್ಲಿ ಸರಾಸರಿ ಮೈಲೇಜ್ ಪ್ರತಿ ಲೀಟರ್‌ಗೆ 60 ಕಿ.ಮೀ.
3
ಸಸ್ಪೆನ್ಶನ್ 
ರಸ್ತೆಗಳ ತುಂಬ ಗುಂಡಿಗಳು ಮತ್ತು ಬಿರುಕುಗಳಿಂದ ತುಂಬಿರುವ ನಗರಗಳಲ್ಲಿ ಸವಾರಿ ಮಾಡಲು ಸುರಕ್ಷಿತ ಚಾಲನಾ ಅನುಭವಕ್ಕಾಗಿ ಉತ್ತಮವಾದ ಸಸ್ಪೆನ್ಶನ್ ಸಿಸ್ಟಮ್ ಅತ್ಯಗತ್ಯವಾಗಿರುತ್ತದೆ. ಈ ಸಮಸ್ಯೆಯನ್ನು ಎದುರಿಸಲು ಆ್ಯಕ್ಟಿವಾ ಸ್ಕೂಟರ್‌ಗಳು ವಿಶಿಷ್ಟ ಸಸ್ಪೆನ್ಶನ್ ಸಿಸ್ಟಮ್‌ನೊಂದಿಗೆ ಬರುತ್ತವೆ.
4
ರೈಡ್ ಗುಣಮಟ್ಟ
ಅತ್ಯುತ್ತಮವಾಗಿ ಮಾರಾಟವಾಗುವ ಪಾಯಿಂಟ್‌ಗಳಲ್ಲಿ ಹೋಂಡಾ ಆ್ಯಕ್ಟಿವಾದ ರೈಡ್ ಗುಣಮಟ್ಟವು ಒಂದಾಗಿದೆ. ಆ್ಯಕ್ಟಿವಾ 6G ದೊಡ್ಡ ಫ್ರಂಟ್ ವೀಲ್ ಮತ್ತು ಉತ್ತಮ ಸಸ್ಪೆನ್ಶನ್ ಸಿಸ್ಟಮ್‌ನೊಂದಿಗೆ ಹೆಚ್ಚಿನ ವೇಗದಲ್ಲಿ ಹೆಚ್ಚು ಸ್ಥಿರತೆಯ ಅನುಭವವನ್ನು ನೀಡುತ್ತದೆ. ಆ್ಯಕ್ಟಿವಾ ಸ್ಕೂಟರ್‌ಗಳಲ್ಲಿ ಫ್ಯೂಯಲ್ ಇಂಜೆಕ್ಷನ್ ಸಿಸ್ಟಮ್ ಎಂಜಿನ್ ಅನ್ನು ಹೆಚ್ಚು ಸಕ್ರಿಯ, ಸುಗಮ ಮತ್ತು ಹೆಚ್ಚು ರಿಫೈನ್ ಮಾಡಲಾದ ಅನುಭವ ನೀಡುತ್ತದೆ. ಇದಲ್ಲದೆ, ಟ್ಯೂನ್ಡ್ ಎಂಜಿನ್ ಕಾರ್ಯಕ್ಷಮತೆಯಿಂದಾಗಿ ಈ ಸ್ಕೂಟರ್ ಟಾಪ್ ಸ್ಪೀಡ್ ಹತ್ತಿರದಲ್ಲಿ ಕೂಡ ಫಾಲ್ಟರ್ ಆಗುವುದಿಲ್ಲ.
5
ಸ್ಟೈಲಿಂಗ್
ವ್ಯಕ್ತಿಗಳು ಹೋಂಡಾ ಆ್ಯಕ್ಟಿವಾ 6G ಆಯ್ಕೆ ಮಾಡಿದರೆ, ಅವರು ಆ್ಯಕ್ಟಿವಾ 125 ವಿನ್ಯಾಸವನ್ನು ಹೋಲುವ ಬೋಲ್ಡರ್ ಲುಕ್‌ ಹೊಂದಿರುವ ಸ್ಕೂಟರ್ ಪಡೆಯುತ್ತಾರೆ.
6
ಸೇಫ್ಟಿ
ಆಧುನಿಕ-ದಿನದ ಹೋಂಡಾ ಆ್ಯಕ್ಟಿವಾ ಸ್ಕೂಟರ್‌ಗಳು ಮುಂಭಾಗದಲ್ಲಿ ಸಿಬಿಎಸ್ (ಸಂಯೋಜಿತ ಬ್ರೇಕಿಂಗ್ ಸಿಸ್ಟಮ್) ಮತ್ತು ಹೆಚ್ಚಿನ ಬ್ರೇಕಿಂಗ್ ದಕ್ಷತೆಗಾಗಿ ಹಿಂಭಾಗವನ್ನು ಹೊಂದಿವೆ. ಇದರಿಂದಾಗಿ, ಬೈಕ್ ಸ್ಕಿಡ್ ಆಗುವ ಸಂಭವಗಳು ಕಡಿಮೆ ಆಗುತ್ತವೆ. ಹೋಂಡಾ ಆ್ಯಕ್ಟಿವಾ 6G ಎಲೆಕ್ಟ್ರಿಕ್ ಸ್ಟಾರ್ಟರ್ ಆಗಿ ಕೂಡ ಕಾರ್ಯನಿರ್ವಹಿಸುವ ಎಂಜಿನ್ ಕಿಲ್ ಸ್ವಿಚ್ ಹೊಂದಿದೆ.

ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್‌ನ ಅಗತ್ಯ

ನೀವು ಆ್ಯಕ್ಟಿವಾ ಹೊಂದಿದ್ದರೆ ಅಥವಾ ಖರೀದಿಸಲು ಯೋಜಿಸಿದ್ದರೆ, ನಿಮ್ಮ ವಾಹನವು ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪ್ರವಾಹ, ಕಳ್ಳತನ, ಭೂಕಂಪ ಇತ್ಯಾದಿಗಳಂತಹ ಇನ್ಶೂರೆಬಲ್ ಅಪಾಯದಿಂದಾಗಿ ನಿಮ್ಮ ವಾಹನಕ್ಕೆ ಉಂಟಾಗುವ ನಷ್ಟದಿಂದ ಬೈಕ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವೆಚ್ಚಗಳನ್ನು ರಕ್ಷಿಸುತ್ತದೆ. ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸಲು ಇನ್ನಷ್ಟು ಕಾರಣಗಳನ್ನು ನೋಡೋಣ

• ಕಾನೂನು ಅವಶ್ಯಕತೆಗಳು – 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಪ್ರತಿ ವಾಹನ ಮಾಲೀಕರು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಥರ್ಡ್ ಪಾರ್ಟಿ ಕವರ್ ಹೊಂದುವುದು ಕಡ್ಡಾಯವಾಗಿದೆ. ಆದ್ದರಿಂದ, ಪ್ರತಿ ಆ್ಯಕ್ಟಿವಾ ಮಾಲೀಕರು ಕನಿಷ್ಠ ಥರ್ಡ್ ಪಾರ್ಟಿ ಆ್ಯಕ್ಟಿವಾ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು.

• ವಾಹನದ ಹಾನಿಗೆ ಕವರೇಜ್ – ನೀವು ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಅಥವಾ ಸಮಗ್ರ ಕವರ್ ಆಯ್ಕೆ ಮಾಡಿದರೆ, ಇನ್ಶೂರೆಬಲ್ ಅಪಾಯದಿಂದಾಗಿ ನಿಮ್ಮ ವಾಹನಕ್ಕೆ ಉಂಟಾದ ಯಾವುದೇ ಹಾನಿಗೆ ನೀವು ಕವರೇಜ್ ಪಡೆಯುತ್ತೀರಿ. ಇದರ ಜೊತೆಗೆ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್, ಶೂನ್ಯ ಸವಕಳಿ, ತುರ್ತು ಸಹಾಯ ಮುಂತಾದ ಆ್ಯಡ್-ಆನ್ ಕವರ್‌ಗಳನ್ನು ಕೂಡ ನೀವು ಆಯ್ಕೆ ಮಾಡಬಹುದು.

• ಥರ್ಡ್ ಪಾರ್ಟಿ ಹೊಣೆಗಾರಿಕೆಗಳು – ಹೋಂಡಾ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ಇನ್ಶೂರ್ಡ್ ವ್ಯಕ್ತಿಯ ವಾಹನವನ್ನು ಒಳಗೊಂಡ ಅಪಘಾತದಲ್ಲಿ ಥರ್ಡ್ ಪಾರ್ಟಿ ವ್ಯಕ್ತಿ/ಆಸ್ತಿಗೆ ಉಂಟಾಗುವ ಯಾವುದೇ ಹಾನಿಗೆ ಕೂಡ ನೀವು ಕವರೇಜ್ ಪಡೆಯುತ್ತೀರಿ. 

ಎಚ್‌ಡಿಎಫ್‌ಸಿ ಎರ್ಗೋದಿಂದ ಹೋಂಡಾ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಪ್ಲಾನ್ ವಿಧಗಳು

ಹೋಂಡಾ ಆ್ಯಕ್ಟಿವಾದಂತಹ ಸ್ಕೂಟರ್ ಕುಟುಂಬದ ಬಳಕೆಗೆ ಅತ್ಯುತ್ತಮವಾಗಿದ್ದೂ, ಬಳಕೆಯಾಗುವ ಇಂಧನದ ಮೇಲೆ ಹಿಡಿತ ತಂದು ಉತ್ತಮ ಮೈಲೇಜ್‌ ನೀಡುವ ಜೊತೆಗೆ, ಭಾರಿ ಟ್ರಾಫಿಕ್ ಇರುವ ಭಾರತೀಯ ರಸ್ತೆಗಳಲ್ಲೂ ಸಮಯಕ್ಕೆ ಸರಿಯಾಗಿ ನಿಮ್ಮ ತಲುಪುದಾಣವನ್ನು ತಲುಪುವಂತೆ ನೋಡಿಕೊಳ್ಳುತ್ತದೆ. ಆದರೆ ನಿಮ್ಮ ಮೆಚ್ಚಿನ ಸ್ಕೂಟರ್ ಇಟ್ಟುಕೊಂಡರಷ್ಟೇ ಸಾಕಾಗುವುದಿಲ್ಲ, ನೀವು ಅದನ್ನು ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಕೂಡ ರಕ್ಷಿಸಬೇಕು. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ, ಆದರೆ ತಜ್ಞರು ನೀವು ಸಮಗ್ರ ಬೈಕ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಸಲಹೆ ನೀಡುತ್ತಾರೆ ಏಕೆಂದರೆ ನಂತರ ಹಲವಾರು ಸಂಭಾವ್ಯ ಅಪಾಯಗಳ ವಿರುದ್ಧ ವ್ಯಾಪಕ ಕವರೇಜನ್ನು ಖಾತರಿಪಡಿಸುತ್ತದೆ. ಆಕ್ಸಿಡೆಂಟ್ ಅಥವಾ ಕಳ್ಳತನದಂತಹ ದುರದೃಷ್ಟಕರ ಘಟನೆಗಳಾದ ಸಂದರ್ಭದಲ್ಲಿ, ನಿಮ್ಮ ಉಳಿತಾಯದ ಹಣವನ್ನು ರಕ್ಷಿಸುವ ವಿವಿಧ ಪ್ಲಾನ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಒದಗಿಸುತ್ತದೆ. ನಿಮಗೆ ಸಿಗುವ ಆಯ್ಕೆಗಳು ಹೀಗಿವೆ:

ನಿಮ್ಮ ಸ್ವಂತ ಬೈಕ್ ಹಾಗೂ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿ ಹಾನಿಗಳಿಂದ ನೀವು ಆಲ್‌ ರೌಂಡ್‌ ರಕ್ಷಣೆ ಬಯಸಿದರೆ, ಇದು ನಿಮಗೆ ಸೂಕ್ತವಾದ ಪ್ಯಾಕೇಜ್ ಆಗಿದೆ. ನೀವು ಒಂದು, ಎರಡು ಅಥವಾ ಮೂರು ವರ್ಷಗಳವರೆಗೆ ಕವರ್ ಆಯ್ಕೆ ಮಾಡಬಹುದು. ಆದಾಗ್ಯೂ, ನೀವು ಪ್ರತಿ ವರ್ಷ ನವೀಕರಣದ ತೊಂದರೆಯನ್ನು ತಪ್ಪಿಸಲು ಬಯಸಿದರೆ, ಮೂರು ವರ್ಷಗಳವರೆಗೆ ನಿಮ್ಮ ಹೋಂಡಾ ಆ್ಯಕ್ಟಿವಾವನ್ನು ಸುರಕ್ಷಿತಗೊಳಿಸಲು ನಾವು ಶಿಫಾರಸು ಮಾಡುತ್ತೇವೆ. ಈ ಪಾಲಿಸಿಯ ಇನ್ನೊಂದು ಹೆಚ್ಚುವರಿ ಪ್ರಯೋಜನವೆಂದರೆ, ನೀವು ನಿಮ್ಮ ಹೋಂಡಾ ಆ್ಯಕ್ಟಿವ್ ಬೈಕ್ ಇನ್ಶೂರೆನ್ಸ್ ಅನ್ನು ಆ್ಯಡ್-ಆನ್‌ಗಳೊಂದಿಗೆ ಹೆಚ್ಚಿನ ಕವರೇಜ್‌ಗಾಗಿ ಕಸ್ಟಮೈಸ್ ಮಾಡಬಹುದು.

X
ಎಲ್ಲ ರೀತಿಯ ರಕ್ಷಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಸೂಕ್ತವಾಗಿದೆ. ಈ ಪ್ಲಾನ್ ಕೆಳಗಿನ ಕವರೇಜ್‌ ನೀಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಇನ್ನಷ್ಟು ಹುಡುಕಿ

ಇದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿ, ಗಾಯ, ಅಂಗವಿಕಲತೆ ಅಥವಾ ನಷ್ಟದಿಂದಾಗಿ ಉಂಟಾಗುವ ಯಾವುದೇ ಹೊಣೆಗಾರಿಕೆಗಳ ಎದುರು ಹಣಕಾಸಿನ ರಕ್ಷಣೆ ಒದಗಿಸುವ ಮೂಲಭೂತ ಇನ್ಶೂರೆನ್ಸ್ ವಿಧವಾಗಿದೆ. ಭಾರತೀಯ ರಸ್ತೆಗಳಲ್ಲಿ ವಾಹನ ಚಾಲನೆ ಮಾಡಲು ಇದನ್ನು ಹೊಂದಿರುವುದು ಕಡ್ಡಾಯವಾಗಿದೆ. ಒಂದು ವೇಳೆ, ನೀವು ಮಾನ್ಯವಾದ ಹೋಂಡಾ ಆ್ಯಕ್ಟಿವಾಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದೆ ಸಿಕ್ಕಿಬಿದ್ದರೆ, ₹ 2000 ದಂಡವನ್ನು ಪಾವತಿಸಲು ಸಿದ್ಧರಾಗಿರಿ.

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಅಪಘಾತ, ಕಳ್ಳತನ ಅಥವಾ ವಿಕೋಪಗಳಿಂದಾಗಿ ನಿಮ್ಮ ಸ್ವಂತ ವಾಹನಕ್ಕೆ ಯಾವುದೇ ಹಾನಿ - ನೈಸರ್ಗಿಕ ಅಥವಾ ಮಾನವ ನಿರ್ಮಿತ, ಸ್ವತಂತ್ರ ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗುತ್ತದೆ. ನೀವು ಈಗಾಗಲೇ ಹೋಂಡಾ ಆ್ಯಕ್ಟಿವ್ ಥರ್ಡ್-ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಹೊಂದಿದ್ದರೆ, ಈ ಕವರ್ ನಿಮಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ಆ್ಯಡ್-ಆನ್‌ಗಳ ಆಯ್ಕೆ

ಒಂದು ವೇಳೆ ನೀವು ಹೊಸ ಬೈಕ್‌ ಖರೀದಿಸಿದ್ದರೆ, ಈ ಕವರ್‌ ನಿಮ್ಮ ಸ್ವಂತ ವಾಹನಕ್ಕೆ ಆದ ನಷ್ಟಗಳನ್ನು ಒಂದು ವರ್ಷದವರೆಗೆ ಕವರ್‌ ಮಾಡುತ್ತದೆ ಮತ್ತು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಗಳಿಂದ 5 ವರ್ಷಗಳವರೆಗೆ ರಕ್ಷಣೆ ಒದಗಿಸುತ್ತದೆ.

X
ಹೊಚ್ಚ ಹೊಸ ಟೂ ವೀಲರ್ ಖರೀದಿಸಿದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಒಳಗೊಳ್ಳುವುದೇನೆಂದರೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್‌ನ ಸೇರ್ಪಡೆಗಳು ಮತ್ತು ಹೊರಪಡಿಕೆಗಳು

ನಿಮ್ಮ ಹೋಂಡಾ ಆ್ಯಕ್ಟಿವಾ ಬೈಕ್‌ಗೆ ಆಯ್ಕೆ ಮಾಡಿರುವ ಪಾಲಿಸಿಯ ಮೇಲೆ ಕವರೇಜ್ ಅವಲಂಬಿತವಾಗಿದೆ. ಒಂದು ವೇಳೆ ಇದು ಥರ್ಡ್ ಪಾರ್ಟಿ ಹೊಣೆಗಾರಿಕೆಯಾಗಿದ್ದರೆ, ಅದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆಗುವ ಯಾವುದೇ ಹಾನಿಗೆ ಮಾತ್ರ ಕವರೇಜ್ ಒದಗಿಸುತ್ತದೆ. ಆದರೆ, ಸಮಗ್ರ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನ ಘಟನೆಗಳಿಂದ ರಕ್ಷಣೆ ನೀಡುತ್ತದೆ:

ಅಪಘಾತಗಳು

ಅಪಘಾತಗಳು

ನಾವು ಆಕ್ಸಿಡೆಂಟ್‌ನಿಂದ ಉಂಟಾಗುವ ಹಣಕಾಸಿನ ನಷ್ಟಗಳನ್ನು ನೋಡಿಕೊಳ್ಳುವುದರಿಂದ, ನಿಮ್ಮ ಉಳಿತಾಯಗಳಿಗೆ ಹಾನಿ ಆಗುವುದಿಲ್ಲ.

ಬೆಂಕಿ ಮತ್ತು ಸ್ಫೋಟ

ಬೆಂಕಿ ಮತ್ತು ಸ್ಫೋಟ

ಬೆಂಕಿ ಅನಾಹುತ ಮತ್ತು ಸ್ಫೋಟದಿಂದ ನಿಮ್ಮ ಬೈಕ್‌ಗೆ ಆಗುವ ಯಾವುದೇ ನಷ್ಟ ಅಥವಾ ಹಾನಿಯನ್ನು ಕವರ್ ಮಾಡುತ್ತದೆ.

ಕಳ್ಳತನ

ಕಳ್ಳತನ

ನಿಮ್ಮ ಹೋಂಡಾ ಆ್ಯಕ್ಟಿವ್ ಕಳ್ಳತನವಾದರೆ, ನಾವು ಬೈಕಿನ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಜೊತೆಗೆ ನಿಮಗೆ ಪರಿಹಾರ ನೀಡುತ್ತೇವೆ.

ವಿಪತ್ತುಗಳು

ನೈಸರ್ಗಿಕ/ಮಾನವನಿರ್ಮಿತ ವಿಕೋಪಗಳು

ನಿಮ್ಮ ಬೈಕ್‌ಗೆ ಪ್ರವಾಹ, ಭೂಕಂಪ, ಬಿರುಗಾಳಿ, ಗಲಭೆ ಮತ್ತು ವಿಧ್ವಂಸಕ ಕೃತ್ಯಗಳಿಂದ ಆಗುವ ಯಾವುದೇ ಹಾನಿಯನ್ನೂ ನಾವು ಕವರ್‌ ಮಾಡುತ್ತೇವೆ.

ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

ಯಾವುದೇ ಆಕ್ಸಿಡೆಂಟ್‌ ಆದ ಸಂದರ್ಭದಲ್ಲಿ, ನಿಮ್ಮ ವೈದ್ಯಕೀಯ ವೆಚ್ಚಗಳನ್ನು ನೋಡಿಕೊಳ್ಳಲು ನೀವು ₹15 ಲಕ್ಷದವರೆಗೆ ವೈಯಕ್ತಿಕ ಆಕ್ಸಿಡೆಂಟ್ ಕವರ್ ಪಡೆಯುತ್ತೀರಿ.

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ಒಂದು ವೇಳೆ ನಿಮ್ಮಿಂದ ಥರ್ಡ್ ಪಾರ್ಟಿ ವ್ಯಕ್ತಿಗೆ ಅಥವಾ ಅವರ ಆಸ್ತಿಗೆ ಹಾನಿ ಅಥವಾ ಗಾಯ ಆದರೆ, ನಿಮ್ಮ ಹಣಕಾಸಿನ ಹೊಣೆಗಾರಿಕೆಗಳಿಗೆ ನಾವು ರಕ್ಷಣೆ ಒದಗಿಸುತ್ತೇವೆ.

ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಆ್ಯಡ್-ಆನ್‌ಗಳು

ಜೀರೋ ಡಿಪ್ರೀಶಿಯೇಷನ್‌ ಬೈಕ್ ಇನ್ಶೂರೆನ್ಸ್
ಶೂನ್ಯ ಸವಕಳಿ
ನಿಮ್ಮ ಆ್ಯಕ್ಟಿವಾ ಇನ್ಶೂರೆನ್ಸ್‌ನಲ್ಲಿ ಶೂನ್ಯ ಸವಕಳಿ ಆ್ಯಡ್-ಆನ್ ಕವರ್‌ನೊಂದಿಗೆ, ಕ್ಲೈಮ್ ಸೆಟಲ್ ಮಾಡುವಾಗ ವಿಮಾದಾತರು ಬೈಕ್ ಅಥವಾ ಸ್ಕೂಟರ್ ಭಾಗಗಳ ಸವಕಳಿಯನ್ನು ಪರಿಗಣಿಸುವುದಿಲ್ಲ. ವಿಮಾದಾತರು ಹಾನಿಗೊಳಗಾದ ಭಾಗಕ್ಕೆ ಸವಕಳಿ ಮೌಲ್ಯವನ್ನು ಕಡಿತಗೊಳಿಸದೆ, ಪೂರ್ಣ ಕ್ಲೈಮ್ ಮೊತ್ತವನ್ನು ಪಾವತಿಸುತ್ತಾರೆ.
ಬೈಕ್ ಇನ್ಶೂರೆನ್ಸ್‌ನಲ್ಲಿ ನೋ ಕ್ಲೈಮ್ ಬೋನಸ್
ನೋ ಕ್ಲೈಮ್ ಬೋನಸ್ (NCB) ರಕ್ಷಣೆ
ಹಿಂದಿನ ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್ ನೋಂದಣಿ ಮಾಡದಿದ್ದರೆ ನೋ ಕ್ಲೈಮ್ ಬೋನಸ್ (NCB) ಆ್ಯಡ್-ಆನ್ ಕವರ್ ಇನ್ಶೂರ್ಡ್ ವ್ಯಕ್ತಿಗೆ NCB ಪ್ರಯೋಜನವನ್ನು ಪಡೆಯಲು ಅರ್ಹತೆ ನೀಡುತ್ತದೆ.
ಟೂ ವೀಲರ್ ಇನ್ಶೂರೆನ್ಸ್‌ನಲ್ಲಿ ತುರ್ತು ಸಹಾಯ ಕವರ್
ತುರ್ತು ಸಹಾಯ ಕವರ್
ಈ ಆ್ಯಡ್-ಆನ್ ಕವರ್ ಅನ್ನು ರಸ್ತೆಬದಿಯ ಸಹಾಯ ಕವರ್ ಎಂದು ಕೂಡ ಕರೆಯಲಾಗುತ್ತದೆ. ಇದು ಇನ್ಶೂರೆನ್ಸ್ ಮಾಡಿಸಿದ ಟೂ-ವೀಲರ್ ಹೈವೇ ಮಧ್ಯದಲ್ಲಿ ಬ್ರೇಕ್ ಡೌನ್ ಆದರೆ ವಿಮಾದಾತರು ವಿಮಾದಾರರಿಗೆ ನೀಡುವ ತುರ್ತು ಸಹಾಯವಾಗಿದೆ. 
ಟೂ ವೀಲರ್ ಇನ್ಶೂರೆನ್ಸ್‌ನಲ್ಲಿ ರಿಟರ್ನ್ ಟು ಇನ್ವಾಯ್ಸ್ ಕವರ್
ರಿಟರ್ನ್ ಟು ಇನ್ವಾಯ್ಸ್
ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾದರೆ, ನೀವು ಖರೀದಿಸಿದಾಗ ಇದ್ದ ನಿಮ್ಮ ಟೂ ವೀಲರ್ ಇನ್ವಾಯ್ಸ್ ಮೌಲ್ಯಕ್ಕೆ ಸಮನಾದ ಕ್ಲೈಮ್ ಮೊತ್ತವನ್ನು ಪಡೆಯಲು ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನಿಮಗೆ ಸಹಾಯ ಮಾಡುತ್ತದೆ.
ಬೈಕ್ ಇನ್ಶೂರೆನ್ಸ್‌ನಲ್ಲಿ ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಟರ್ ಆ್ಯಡ್-ಆನ್ ಕವರ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಚೈಲ್ಡ್ ಪಾರ್ಟ್‌ಗಳ ರಿಪೇರಿ ಮತ್ತು ಬದಲಿ ವೆಚ್ಚಕ್ಕಾಗಿ ವಿಮಾದಾತರಿಗೆ ಕವರೇಜ್ ಒದಗಿಸುತ್ತದೆ. ನೀರಿನ ಪ್ರವೇಶ, ತೈಲ ಸೋರಿಕೆ ಮತ್ತು ಗೇರ್‌ಬಾಕ್ಸ್ ಹಾನಿಯಿಂದಾಗಿ ಹಾನಿ ಉಂಟಾದರೆ ಕವರೇಜ್ ನೀಡಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದ ಆ್ಯಕ್ಟಿವಾ ಇನ್ಶೂರೆನ್ಸ್ ನಿಮ್ಮ ಮೊದಲ ಆಯ್ಕೆಯಾಗಿರಬೇಕು!

ಟೂ ವೀಲರ್ ಇನ್ಶೂರೆನ್ಸ್ ಹೊಂದಿರುವುದು ಮುಖ್ಯವಾಗಿದೆ. ದೇಶದಲ್ಲಿ ಕಾನೂನುಬದ್ಧವಾಗಿ ವಾಹನ ಚಾಲನೆ ಮಾಡಲು, ಮಾಲೀಕ-ಸವಾರ ಪಾಲಿಸಿಯನ್ನು ಹೊಂದಿರಬೇಕು. ಆದರೆ ಮುಖ್ಯವಾಗಿ, ಇದು ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿಸುತ್ತದೆ. ನಿಮ್ಮ ಸ್ಕೂಟರ್‌ಗೆ ದೊಡ್ಡ ಹಾನಿ ಉಂಟುಮಾಡುವ ಅನೇಕ ನೈಸರ್ಗಿಕ ವಿಪತ್ತುಗಳಿವೆ. ಅದರಿಂದ ಬೈಕ್‌ಗೆ ಆದ ಹಾನಿಯನ್ನು ಸರಿಪಡಿಸಲು, ನಿಮ್ಮ ಉಳಿತಾಯದ ಹೆಚ್ಚಿನ ಭಾಗ ಬಳಸಿಕೊಳ್ಳಬೇಕಾಗಬಹುದು. ಅತ್ಯುತ್ತಮ ರೈಡರ್‌ಗಳಿಗೂ ಹಾಗೂ ತಮ್ಮ ಬೈಕ್‌ಗಳಿಗೆ ಎಷ್ಟೇ ಸುರಕ್ಷತೆ ಫೀಚರ್‌ಗಳನ್ನು ಹೊಂದಿದವರಿಗೂ ಇಂತಹ ಅನುಭವ ಆಗಬಹುದು. ಎಚ್‌ಡಿಎಫ್‌ಸಿ ಎರ್ಗೋದ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯು ಈ ಅನಿರೀಕ್ಷಿತ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸುವ ಜೊತೆಗೆ ಮನಸ್ಸಿಗೆ ಶಾಂತಿ ನೀಡುತ್ತದೆ. ಸರಿಯಾದ ಇನ್ಶೂರೆನ್ಸ್ ಎಲ್ಲಿ ಪಡೆಯಬೇಕು ಎಂಬುದೇ ನಿಮ್ಮ ಚಿಂತೆಯಾಗಿದ್ದರೆ, ನಿಮ್ಮ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಪಾಲಿಸಿಗಾಗಿ ನೀವು ಎಚ್‌ಡಿಎಫ್‌ಸಿ ಅನ್ನು ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಉತ್ತಮ ಕಾರಣಗಳು ಹೀಗಿವೆ

ಆ್ಯಕ್ಟಿವಾ ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು

ಬ್ರೇಕ್‌ಡೌನ್ ಸಂದರ್ಭದಲ್ಲಿ, ನೀವು ನಮಗೊಂದು ಕರೆ ಮಾಡಿದರೆ ಸಾಕು. ನಮ್ಮ 24x7 ರೋಡ್‌ಸೈಡ್‌ ಸಹಾಯ ತಂಡ, ನೀವು ಎಲ್ಲೇ ಸಿಲುಕಿಕೊಂಡಿದ್ದರೂ, ನಿಮಗೆ ಬ್ರೇಕ್‌ಡೌನ್ ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡುತ್ತದೆ.

ಆ್ಯಕ್ಟಿವಾ ಇನ್ಶೂರೆನ್ಸ್ ಕ್ಲೈಮ್‌ಗಳು

ಸುಲಭ ಕ್ಲೈಮ್‌ಗಳು

ನಾವು 100% ಕ್ಲೈಮ್ ಸೆಟಲ್ಮೆಂಟ್ ಅನುಪಾತದ ದಾಖಲೆಯನ್ನು ಹೊಂದಿದ್ದೇವೆ. ಹೆಚ್ಚುವರಿಯಾಗಿ, ನಾವು ಕಾಗದರಹಿತ ಕ್ಲೈಮ್‌ಗಳು ಮತ್ತು ಸ್ವಯಂ-ತಪಾಸಣೆ ಆಯ್ಕೆಗಳನ್ನು ಒದಗಿಸುತ್ತೇವೆ. ನಮ್ಮ ಪಾಲಿಸಿದಾರರು ಸುಲಭವಾಗಿ ಕ್ಲೈಮ್‌ಗಳನ್ನು ಸಲ್ಲಿಸಬಹುದು.

ಆ್ಯಕ್ಟಿವಾ ಬೈಕ್‌ಗೆ ತಡರಾತ್ರಿಯ ರಿಪೇರಿ ಸೇವೆ

ತಡರಾತ್ರಿಯ ರಿಪೇರಿ ಸೇವೆ

ಸಣ್ಣ ಆಕ್ಸಿಡೆಂಟ್‌ ರಿಪೇರಿಗಳಿಗಾಗಿ ನಮ್ಮ ತಡರಾತ್ರಿಯ ರಿಪೇರಿ ಸೇವೆಗಳು ಇರುವಾಗ, ಹಾನಿಯಾದ ನಿಮ್ಮ ಬೈಕ್‌ ಅನ್ನು ತಕ್ಷಣ ಸರಿಪಡಿಸಿಕೊಳ್ಳಬಹುದು. ಕಾಯುವ ಅವಶ್ಯಕತೆಯೇ ಇಲ್ಲ. ನಿಮ್ಮ ಬೈಕ್‌ ಅನ್ನು ಬೇಕೆಂದಾಗ ರಿಪೇರಿ ಮಾಡಿಸಿಕೊಂಡು, ತಕ್ಷಣ ಅದನ್ನು ಮೊದಲಿನ ಸ್ಥಿತಿಯಲ್ಲಿ ಪಡೆದುಕೊಳ್ಳಬಹುದು.

ಆ್ಯಕ್ಟಿವಾ ಬೈಕ್‌ಗೆ ನಗದುರಹಿತ ಸಹಾಯ

ನಗದುರಹಿತ ನೆರವು

ಭಾರತದಾದ್ಯಂತ ಇರುವ ಎಚ್‌ಡಿಎಫ್‌ಸಿ ಎರ್ಗೋದ 2000+ ನೆಟ್ವರ್ಕ್ ಗ್ಯಾರೇಜ್‌ಗಳೇ ಇದಕ್ಕೆ ಕಾರಣ. ನಿಮ್ಮ ಬೈಕ್ ರಿಪೇರಿ ಮಾಡಿಸಲು ನಿಮ್ಮ ಸಮೀಪದಲ್ಲೇ ನೆಟ್ವರ್ಕ್ ಗ್ಯಾರೇಜ್‌ ಅನ್ನು ನೀವು ಯಾವಾಗ ಬೇಕಾದರೂ ಕಂಡುಕೊಳ್ಳಬಹುದು.

ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಿ

ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ - ನೋಂದಣಿ ಸಂಖ್ಯೆ

ಹಂತ 1

ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ

ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ - ಪಾಲಿಸಿ ಕವರ್

ಹಂತ 2

ನಿಮ್ಮ ಪಾಲಿಸಿ ಕವರ್ ಆಯ್ಕೆಮಾಡಿ*
(ಒಂದು ವೇಳೆ ನಿಮ್ಮ ವಾಹನದ ವಿವರಗಳನ್ನು ನಾವೇ ಖುದ್ದಾಗಿ ಪಡೆದುಕೊಳ್ಳಲು ಸಾಧ್ಯವಾಗದಿದ್ದರೆ, ನಿಮ್ಮ ವಾಹನದ ಕೆಲವೇ ವಿವರಗಳನ್ನು ಅಂದರೆ,
- ಮೇಕ್, ಮಾಡೆಲ್, ವಿಧ, ನೋಂದಣಿಯಾದ ವರ್ಷ ಮತ್ತು ನೋಂದಣಿಯಾದ ನಗರವನ್ನು ಒದಗಿಸಬೇಕಾಗುತ್ತದೆ)

ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ - NCB ವಿವರಗಳು

ಹಂತ 3

ನಿಮ್ಮ ಈ ಹಿಂದಿನ ಪಾಲಿಸಿ
ಮತ್ತು ನೋ ಕ್ಲೇಮ್ ಬೋನಸ್ (NCB) ಸ್ಟೇಟಸ್ ಒದಗಿಸಿ

ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ
ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ

ಹಂತ 4

ತಕ್ಷಣವೇ ನಿಮ್ಮ ಬೈಕ್ ಇನ್ಶೂರೆನ್ಸ್ ಕೋಟ್ ಪಡೆಯಿರಿ!

ಪ್ರೀಮಿಯಂ ಕ್ಯಾಲ್ಕುಲೇಟ್ ಮಾಡಿ
ಸ್ಲೈಡರ್ ಬಲ
ಸ್ಲೈಡರ್ ಎಡ

ಹೋಂಡಾ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಖರೀದಿಸುವುದು/ನವೀಕರಿಸುವುದು ಹೇಗೆ?


ಕೆಲವೇ ಕ್ಲಿಕ್‌ಗಳೊಂದಿಗೆ, ಮನೆಯಲ್ಲಿ ಕುಳಿತೇ ನಿಮ್ಮ ಆ್ಯಕ್ಟಿವಾಗಾಗಿ ನೀವು ಸುಲಭವಾಗಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ನೀವು ಈಗಾಗಲೇ ಗಡುವು ಮುಗಿಯುವ ಹಂತದಲ್ಲಿರುವ ಸಕ್ರಿಯ ಇನ್ಶೂರೆನ್ಸ್ ಹೊಂದಿದ್ದರೆ, ತಡೆರಹಿತ ಕವರೇಜ್ ಆನಂದಿಸಲು ನಿಮ್ಮ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಅನ್ನು ಸಮಯಕ್ಕೆ ಸರಿಯಾಗಿ ನವೀಕರಿಸಿ. ಈ ಕೆಳಗಿನ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ನಿಮ್ಮ ಬೈಕ್ ಅನ್ನು ತಕ್ಷಣವೇ ಸುರಕ್ಷಿತವಾಗಿರಿಸಿ!

  • ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸಿ/ನವೀಕರಿಸಿ
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಾಲಿಸಿಯನ್ನು ಖರೀದಿಸಲು ಅಥವಾ ನವೀಕರಿಸಲು ಆಯ್ಕೆ ಮಾಡಿ
  • ಆ್ಯಕ್ಟಿವಾ ಬೈಕ್ ವಿವರಗಳು
    ಹಂತ #2
    ಹೊಸ ಪಾಲಿಸಿಯನ್ನು ಖರೀದಿಸಲು, ನಿಮ್ಮ ಬೈಕ್ ವಿವರಗಳು, ನೋಂದಣಿ, ನಗರ ಮತ್ತು ಹಿಂದಿನ ಪಾಲಿಸಿ ವಿವರಗಳು ಯಾವುದಾದರೂ ಇದ್ದರೆ ಅದನ್ನು ನಮೂದಿಸಿ
  • ಆ್ಯಕ್ಟಿವಾ ಇನ್ಶೂರೆನ್ಸ್ ಕೋಟ್ ಜನರೇಶನ್
    ಹಂತ #3
    ಕೋಟ್ ಸ್ವೀಕರಿಸಲು, ನಿಮ್ಮ ಇಮೇಲ್ ID, ಮತ್ತು ಫೋನ್ ನಂಬರ್ ಒದಗಿಸಿ
  • ಆ್ಯಕ್ಟಿವಾ ಇನ್ಶೂರೆನ್ಸ್ ಪ್ರೀಮಿಯಂ ಪಾವತಿ
    ಹಂತ #4
    ಆನ್ಲೈನ್ ಪಾವತಿ ಮಾಡಿ, ತಕ್ಷಣ ಕವರ್ ಪಡೆಯಿರಿ!

ಆನ್ಲೈನ್‌ನಲ್ಲಿ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸುವ ಪ್ರಯೋಜನಗಳು


ನಾವು ಡಿಜಿಟಲ್ ಯುಗದಲ್ಲಿದ್ದು, ಎಲ್ಲವನ್ನೂ ನಮ್ಮ ಬೆರಳತುದಿಯಲ್ಲಿ ಖರೀದಿಸಬಹುದು. ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ನವೀಕರಣದ ವಿಷಯಕ್ಕೆ ಬಂದಾಗ, ನೀವು ಯಾವುದೇ ಚಿಂತೆಯಿಲ್ಲದೆ ಅದನ್ನು ಆನ್ಲೈನ್‌ನಲ್ಲಿ ಖರೀದಿಸಬಹುದು. ಕೆಳಗಿನ ಕೆಲವು ಪ್ರಯೋಜನಗಳನ್ನು ನಾವು ನೋಡೋಣ

1
ತ್ವರಿತ ಕೋಟ್ಸ್ ಅನ್ನು ಪಡೆಯಿರಿ
ನಮ್ಮ ಟೂ ವೀಲರ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್‌ಗಳೊಂದಿಗೆ, ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಪಾಲಿಸಿ ಪ್ರೀಮಿಯಂಗೆ ನೀವು ತ್ವರಿತ ಕೋಟ್‌ಗಳನ್ನು ಪಡೆಯುತ್ತೀರಿ. ನಿಮ್ಮ ಟೂ ವೀಲರ್ ವಿವರಗಳನ್ನು ನಮೂದಿಸಿ ; ತೆರಿಗೆಗಳನ್ನು ಒಳಗೊಂಡ ಮತ್ತು ಒಳಗೊಳ್ಳದ ಪ್ರೀಮಿಯಂ ಅನ್ನು ತೋರಿಸಲಾಗುತ್ತದೆ. ನಿಮ್ಮ ಸಮಗ್ರ ಪಾಲಿಸಿಯೊಂದಿಗೆ ನೀವು ಆ್ಯಡ್-ಆನ್‌ಗಳನ್ನು ಕೂಡ ಆಯ್ಕೆ ಮಾಡಬಹುದು ಮತ್ತು ತ್ವರಿತವಾಗಿ ಅಪ್ಡೇಟ್ ಆದ ಪ್ರೀಮಿಯಂ ಪಡೆಯಬಹುದು.
2
ತ್ವರಿತ ವಿತರಣೆ
ನೀವು ನಿಮಿಷಗಳಲ್ಲಿ ಆನ್ಲೈನ್‌ನಲ್ಲಿ ಆ್ಯಕ್ಟಿವಾ ಇನ್ಶೂರೆನ್ಸ್ ಪ್ಲಾನ್ ಪಡೆಯಬಹುದು. ಆನ್ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸುವಾಗ, ನೀವು ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬೇಕು. ಇದರಲ್ಲಿ, ನೀವು ವಾಹನದ ವಿವರಗಳನ್ನು ಒದಗಿಸಬೇಕು, ಸಮಗ್ರ ಇನ್ಶೂರೆನ್ಸ್ ಮತ್ತು ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಡುವೆ ಒಂದನ್ನು ಆಯ್ಕೆ ಮಾಡಬೇಕು. ನಂತರ, ಅಂತಿಮವಾಗಿ, ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಿ. ಪಾಲಿಸಿಯು ಕೇವಲ ಕೆಲವು ಕ್ಲಿಕ್‌ಗಳ ದೂರದಲ್ಲಿರುವುದರಿಂದ ಗಂಟೆಗಳು, ದಿನಗಳು ಅಥವಾ ವಾರಗಳವರೆಗೆ ಕಾಯಬೇಕಾಗಿಲ್ಲ.
3
ತಡೆರಹಿತತೆ ಮತ್ತು ಪಾರದರ್ಶಕತೆ
ಎಚ್‌ಡಿಎಫ್‌ಸಿ ಎರ್ಗೋದ ಟೂ ವೀಲರ್ ಇನ್ಶೂರೆನ್ಸ್ ಖರೀದಿ ಪ್ರಕ್ರಿಯೆಯು ತಡೆರಹಿತ ಮತ್ತು ಪಾರದರ್ಶಕವಾಗಿದೆ. ಆನ್ಲೈನ್‌ನಲ್ಲಿ ಆ್ಯಕ್ಟಿವಾ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಖರೀದಿಸಲು ನೀವು ಕೆಲವು ಸರಳ ಹಂತಗಳನ್ನು ಅನುಸರಿಸಬೇಕು, ಮತ್ತು ಅದಕ್ಕೆ ಯಾವುದೇ ಗುಪ್ತ ಶುಲ್ಕಗಳಿಲ್ಲ. ನೀವು ಏನನ್ನು ನೋಡುತ್ತೀರೋ ಅದನ್ನೇ ಪಾವತಿಸುತ್ತೀರಿ.
4
ಪಾವತಿ ರಿಮೈಂಡರ್‌ಗಳು
ನಿಮ್ಮ ಆ್ಯಕ್ಟಿವಾ ಇನ್ಶೂರೆನ್ಸ್ ಪಾಲಿಸಿಯು ಲ್ಯಾಪ್ಸ್ ಆಗದಂತೆ ನಾವು ಸಮಯಕ್ಕೆ ಸರಿಯಾಗಿ ಮಾರಾಟದ ನಂತರದ ಸೇವೆಗಳನ್ನು ಒದಗಿಸುತ್ತೇವೆ. ಅಂತೆಯೇ, ನೀವು ಆನ್ಲೈನ್‌ನಲ್ಲಿ ಬೈಕ್ ಇನ್ಶೂರೆನ್ಸ್ ಖರೀದಿಸಿದ ನಂತರ. ನಮ್ಮ ಕಡೆಯಿಂದ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ನವೀಕರಣದ ಕುರಿತು ನೀವು ನಿಯಮಿತ ರಿಮೈಂಡರ್ ಪಡೆಯುತ್ತೀರಿ. ಇದು ನೀವು ತಡೆರಹಿತ ಕವರೇಜ್ ಆನಂದಿಸುತ್ತೀರಿ ಮತ್ತು ಮಾನ್ಯ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವ ಮೂಲಕ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.
5
ಕನಿಷ್ಠ ಕಾಗದ ಪತ್ರಗಳ ಕೆಲಸ
ಆನ್ಲೈನಿನಲ್ಲಿ ಖರೀದಿಸುವುದಕ್ಕೆ ಅನೇಕ ಡಾಕ್ಯುಮೆಂಟ್‌ಗಳ ಅಗತ್ಯವಿಲ್ಲ. ನೀವು ಮೊದಲ ಬಾರಿಗೆ ಪಾಲಿಸಿಯನ್ನು ಖರೀದಿಸುವಾಗ ನಿಮ್ಮ ಹೋಂಡಾ ಆ್ಯಕ್ಟಿವಾದ ನೋಂದಣಿ ಫಾರ್ಮ್‌ಗಳು ಮತ್ತು ವಿವರಗಳು ಹಾಗೂ ನಿಮ್ಮ KYC ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. ಅದರ ನಂತರ, ನೀವು ಬೈಕ್ ಇನ್ಶೂರೆನ್ಸ್ ನವೀಕರಣವನ್ನು ಆಯ್ಕೆ ಮಾಡಬಹುದು ಅಥವಾ ಯಾವುದೇ ಪೇಪರ್‌ವರ್ಕ್ ಇಲ್ಲದೆ ನಿಮ್ಮ ಪ್ಲಾನ್ ಪೋರ್ಟ್ ಮಾಡಬಹುದು.
6
ಅನುಕೂಲಕರ
ಕೊನೆಯದಾಗಿ, ಆ್ಯಕ್ಟಿವಾ ಇನ್ಶೂರೆನ್ಸ್ ಖರೀದಿಸುವುದು ಅನುಕೂಲಕರ ಮತ್ತು ಸುಲಭವಾಗಿದೆ. ನೀವು ನಮ್ಮ ಶಾಖೆಗಳಿಗೆ ಭೇಟಿ ನೀಡಬೇಕಾಗಿಲ್ಲ ಅಥವಾ ಏಜೆಂಟ್ ನಿಮ್ಮನ್ನು ಸಂಪರ್ಕಿಸುವವರೆಗೆ ಕಾಯಬೇಕಾಗಿಲ್ಲ. ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ಸೂಕ್ತವಾದ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಅಲ್ಲದೆ, ದಿನದ ಯಾವುದೇ ಗಂಟೆಯಲ್ಲಿ ಮತ್ತು ಎಲ್ಲಿಂದಲಾದರೂ ಆನ್ಲೈನ್‌ನಲ್ಲಿ ಟೂ ವೀಲರ್ ಇನ್ಶೂರೆನ್ಸ್ ಖರೀದಿಸುವ ಫ್ಲೆಕ್ಸಿಬಿಲಿಟಿಯನ್ನು ಆನಂದಿಸಿ.

ಹೋಂಡಾ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡುವುದು ಹೇಗೆ?

ನಿಮ್ಮ ಹೋಂಡಾ ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ನಗದುರಹಿತ ಕ್ಲೈಮ್ ಮಾಡಲು ನೀವು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:

• ನಮ್ಮ ಸಹಾಯವಾಣಿ ನಂಬರ್‌ಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವ ಮೂಲಕ ಘಟನೆಗೆ ಸಂಬಂಧಿಸಿದಂತೆ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ತಿಳಿಸಿ.

• ನಿಮ್ಮ ಟೂ ವೀಲರ್ ಅನ್ನು ಎಚ್‌ಡಿಎಫ್‌ಸಿ ಎರ್ಗೋ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗೆ ಕೊಂಡೊಯ್ಯಿರಿ. ಇಲ್ಲಿ, ವಿಮಾದಾತರು ನೇಮಕ ಮಾಡಿದ ವ್ಯಕ್ತಿಯಿಂದ ನಿಮ್ಮ ವಾಹನವನ್ನು ಪರಿಶೀಲಿಸಲಾಗುತ್ತದೆ.

• ನಮ್ಮ ಅನುಮೋದನೆಯನ್ನು ಪಡೆದ ನಂತರ, ಗ್ಯಾರೇಜ್ ನಿಮ್ಮ ಬೈಕ್ ರಿಪೇರಿ ಮಾಡಲು ಆರಂಭಿಸುತ್ತದೆ.

• ಇದರ ನಡುವೆ, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್ ಅನ್ನು ನಮಗೆ ಸಲ್ಲಿಸಿ. ಯಾವುದೇ ನಿರ್ದಿಷ್ಟ ಡಾಕ್ಯುಮೆಂಟ್ ಅಗತ್ಯವಿದ್ದರೆ, ನಾವು ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.

• ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡವು ಬೈಕ್ ಇನ್ಶೂರೆನ್ಸ್‌ನಲ್ಲಿ ನಗದುರಹಿತ ಕ್ಲೈಮ್ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಕ್ಲೈಮ್ ಅನ್ನು ಅಂಗೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ.

• ಯಶಸ್ವಿ ಪರಿಶೀಲನೆಯ ನಂತರ, ರಿಪೇರಿ ವೆಚ್ಚಗಳನ್ನು ನೇರವಾಗಿ ಗ್ಯಾರೇಜ್‌ಗೆ ಪಾವತಿಸುವ ಮೂಲಕ ನಾವು ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಸೆಟಲ್ ಮಾಡುತ್ತೇವೆ. ಅನ್ವಯವಾಗುವ ಕಡಿತಗಳು ಯಾವುದಾದರೂ ಇದ್ದರೆ, ಅದನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿಡಿ.

ಗಮನಿಸಿ: ಥರ್ಡ್ ಪಾರ್ಟಿ ಹಾನಿಯ ಸಂದರ್ಭದಲ್ಲಿ, ಅಪಘಾತದಲ್ಲಿ ಒಳಗೊಂಡಿರುವ ಇತರ ವಾಹನದ ಮಾಲೀಕರ ವಿವರಗಳನ್ನು ನೀವು ತೆಗೆದುಕೊಳ್ಳಬಹುದು. ಆದಾಗ್ಯೂ, ನಿಮ್ಮ ವಾಹನದ ಗಮನಾರ್ಹ ಹಾನಿ ಅಥವಾ ಕಳ್ಳತನದ ಸಂದರ್ಭದಲ್ಲಿ, ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ನೀವು ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ವರದಿಯನ್ನು ಸಲ್ಲಿಸಬೇಕು

ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್‌ಗಾಗಿ ಅಗತ್ಯವಿರುವ ಡಾಕ್ಯುಮೆಂಟ್‌ಗಳು

ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡಲು ಬೇಕಾದ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ

1. ನಿಮ್ಮ ಹೋಂಡಾ ಆ್ಯಕ್ಟಿವಾದ ನೋಂದಣಿ ಪ್ರಮಾಣಪತ್ರ (RC) ಬುಕ್ ಪ್ರತಿ.

2. ಘಟನೆ ನಡೆದ ಸಮಯದಲ್ಲಿ ಇನ್ಶೂರ್ಡ್ ವಾಹನವನ್ನು ಚಲಾಯಿಸುತ್ತಿದ್ದ ವ್ಯಕ್ತಿಯ ಡ್ರೈವಿಂಗ್ ಲೈಸೆನ್ಸ್ ಪ್ರತಿ.

3. ಘಟನೆಯ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ ಸಲ್ಲಿಸಿದ FIR ಕಾಪಿ.

4. ಗ್ಯಾರೇಜ್‌ನಿಂದ ದುರಸ್ತಿ ಅಂದಾಜುಗಳು

5. ನಿಮ್ಮ ಗ್ರಾಹಕರನ್ನು ತಿಳಿಯಿರಿ (KYC) ಡಾಕ್ಯುಮೆಂಟ್‌ಗಳು

ಆ್ಯಕ್ಟಿವಾ ಕಳ್ಳತನದ ಕ್ಲೈಮ್‌ಗಳಿಗೆ ಅಗತ್ಯವಿರುವ ಹೆಚ್ಚುವರಿ ಡಾಕ್ಯುಮೆಂಟ್‌ಗಳು

ಆ್ಯಕ್ಟಿವಾ ಕಳ್ಳತನದ ಕ್ಲೈಮ್‌ಗಳನ್ನು ಸಲ್ಲಿಸಲು ಅಗತ್ಯವಿರುವ ಹೆಚ್ಚುವರಿ ಡಾಕ್ಯುಮೆಂಟ್‌ಗಳ ಪಟ್ಟಿ ಇಲ್ಲಿದೆ

• ಆ್ಯಕ್ಟಿವಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೂಲ ಡಾಕ್ಯುಮೆಂಟ್‌ಗಳು

• ಸಂಬಂಧಪಟ್ಟ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಕಳ್ಳತನ ಅನುಮೋದನೆ

• ಸರ್ವಿಸ್ ಬುಕ್ಲೆಟ್‌ಗಳು/ಬೈಕ್ ಕೀಗಳು ಮತ್ತು ವಾರಂಟಿ ಕಾರ್ಡ್

• ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ ನಂಬರ್, ಇನ್ಶೂರೆನ್ಸ್ ಕಂಪನಿಯ ವಿವರಗಳು ಮತ್ತು ಪಾಲಿಸಿ ಅವಧಿಯ ಅವಧಿಯಂತಹ ಹಿಂದಿನ ಟೂ ವೀಲರ್ ಇನ್ಶೂರೆನ್ಸ್ ವಿವರಗಳು

• ಪೊಲೀಸ್ FIR/ JMFC ವರದಿ/ ಅಂತಿಮ ತನಿಖಾ ವರದಿ

• ಕಳ್ಳತನದ ಬಗ್ಗೆ ಬೈಕನ್ನು "ಬಳಕೆಯಲ್ಲಿಲ್ಲ" ಎಂದು ಘೋಷಿಸುವ ಅನುಮೋದಿತ ಸಂಬಂಧಪಟ್ಟ RTO ಗೆ ಉದ್ದೇಶಿಸಿರುವ ಪತ್ರದ ಪ್ರತಿ

ನಿಮ್ಮ ಆ್ಯಕ್ಟಿವಾಗೆ ಟಾಪ್ ಟಿಪ್‌ಗಳು

ನೀವು ಹೋಂಡಾ ಆ್ಯಕ್ಟಿವಾದ ಮಾಲೀಕರಾಗಿದ್ದರೆ, ನಿಮ್ಮ ಸ್ಕೂಟರ್ ಅನ್ನು ಉತ್ತಮ ಸ್ಥಿತಿಯಲ್ಲಿ ಇರಿಸಲು ಕೆಲವು ಅಗತ್ಯ ಸಲಹೆಗಳು ಇಲ್ಲಿವೆ.

• ಓವರ್‌ಸ್ಪೀಡಿಂಗ್ ತಪ್ಪಿಸಿ ಮತ್ತು 40–60 km/hr ವೇಗ ಮಿತಿಯಲ್ಲಿ ನಿಮ್ಮ ವಾಹನ ಚಲಾಯಿಸಿ.

• ಚಲಾಯಿಸುವಾಗ ನಿಮ್ಮ ವಾಹನದ ಮೇಲೆ ಭಾರಿ ಸಾಮಗ್ರಿಗಳನ್ನು ಹೇರಬೇಡಿ. ಇದು ಅಪಾಯಕಾರಿ ಮಾತ್ರವಲ್ಲದೆ, ವಾಹನದ ಇಂಧನ ದಕ್ಷತೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ.

• ಪ್ರತಿ 1800-2000 km ನಂತರ ನಿಮ್ಮ ಆ್ಯಕ್ಟಿವಾ ಸರ್ವಿಸ್ ಮಾಡಿಸಲು ಮರೆಯಬೇಡಿ.

• ಯಾವಾಗಲೂ ಟೈರ್‌ಗಳಲ್ಲಿ ಸರಿಯಾದ ಏರ್‌ಪ್ರೆಶರ್ ಅನ್ನು ನಿರ್ವಹಿಸಿ.

• ರಿಸರ್ವ್‌ನಲ್ಲಿ ವಾಹನ ಚಲಾಯಿಸಬೇಡಿ ಮತ್ತು ಯಾವಾಗಲೂ ಪೆಟ್ರೋಲ್ ಟ್ಯಾಂಕ್ ಅರ್ಧಕ್ಕಿಂತ ಹೆಚ್ಚು ತುಂಬಿರಲಿ.

• ನಿಮ್ಮ ಆ್ಯಕ್ಟಿವಾವನ್ನು ನೆರಳಿನಲ್ಲಿ ಪಾರ್ಕ್ ಮಾಡಿ ಮತ್ತು ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಪಾರ್ಕ್ ಮಾಡಬೇಡಿ.

• ನಿಮ್ಮ ಆ್ಯಕ್ಟಿವಾವನ್ನು ಸ್ವಚ್ಛವಾಗಿರಿಸಿ ಮತ್ತು ಸರಿಯಾದ ಟೂ ವೀಲರ್ ಕ್ಲೀನಿಂಗ್ ಲಿಕ್ವಿಡ್‌ನಿಂದ ಅದನ್ನು ನಿಯಮಿತವಾಗಿ ತೊಳೆಯಿರಿ.

ಭಾರತದಾದ್ಯಂತ 2000+ ನೆಟ್ವರ್ಕ್ ಗ್ಯಾರೇಜ್‌ಗಳು

ಹೋಂಡಾ ಆ್ಯಕ್ಟಿವಾ ಬ್ಲಾಗ್‌ಗಳು

ಹೋಂಡಾ ಆ್ಯಕ್ಟಿವಾ 7G ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ

ಹೋಂಡಾ ಆ್ಯಕ್ಟಿವಾ 7G ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ ಇಲ್ಲಿದೆ

ಪೂರ್ತಿ ಓದಿ
ಜನವರಿ 02, 2023 ರಂದು ಪ್ರಕಟಿಸಲಾಗಿದೆ
ಮುಂಬರುವ Honda Activa ಎಲೆಕ್ಟ್ರಿಕ್ ವೇರಿಯಂಟ್‌ನಿಂದ ನಾವು ಏನನ್ನು ನಿರೀಕ್ಷಿಸಬಹುದು?

ಮುಂಬರುವ Honda Activa ಎಲೆಕ್ಟ್ರಿಕ್ ವೇರಿಯಂಟ್‌ನಿಂದ ನಾವು ಏನನ್ನು ನಿರೀಕ್ಷಿಸಬಹುದು?

ಪೂರ್ತಿ ಓದಿ
ನವೆಂಬರ್ 23, 2022 ರಂದು ಪ್ರಕಟಿಸಲಾಗಿದೆ
ಬಳಸಿದ ಹೋಂಡಾ ಆ್ಯಕ್ಟಿವಾ ಖರೀದಿಸಲು ಕಾರಣಗಳು

ಬಳಸಿದ ಹೋಂಡಾ ಆ್ಯಕ್ಟಿವಾ ಖರೀದಿಸಲು ಕಾರಣಗಳು

ಪೂರ್ತಿ ಓದಿ
ಮೇ 26, 2022 ರಂದು ಪ್ರಕಟಿಸಲಾಗಿದೆ
ವರ್ಷಗಳಲ್ಲಿ ಹೋಂಡಾ ಆ್ಯಕ್ಟಿವಾದ ವಿಕಾಸ

ವರ್ಷಗಳಲ್ಲಿ ಹೋಂಡಾ ಆ್ಯಕ್ಟಿವಾದ ವಿಕಾಸ?

ಪೂರ್ತಿ ಓದಿ
ಏಪ್ರಿಲ್ 21, 2022 ರಂದು ಪ್ರಕಟಿಸಲಾಗಿದೆ
ಹೋಂಡಾ ಆ್ಯಕ್ಟಿವಾ ಸ್ಕೂಟರ್ ಪಡೆಯುವಾಗ ಪರಿಗಣಿಸಬೇಕಾದ ಪ್ರಮುಖ ಕಾರಣಗಳು

ಹೋಂಡಾ ಆ್ಯಕ್ಟಿವಾ ಸ್ಕೂಟರ್ ಪಡೆಯುವಾಗ ಪರಿಗಣಿಸಬೇಕಾದ ಪ್ರಮುಖ ಕಾರಣಗಳು

ಪೂರ್ತಿ ಓದಿ
ಏಪ್ರಿಲ್ 05, 2022 ರಂದು ಪ್ರಕಟಿಸಲಾಗಿದೆ
ಬ್ಲಾಗ್ ಬಲ ಸ್ಲೈಡರ್
ಬ್ಲಾಗ್ ಎಡ ಸ್ಲೈಡರ್
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ
ಈಗಲೇ ಉಚಿತ ಕೋಟ್ ಪಡೆಯಿರಿ
ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಎಲ್ಲಾ ರೀತಿಯಿಂದಲೂ ತಯಾರಾಗಿದ್ದೀರಾ

ಆ್ಯಕ್ಟಿವಾ ಇನ್ಶೂರೆನ್ಸ್ ಕುರಿತು ಆಗಾಗ್ಗೆ ಕೇಳುವ ಪ್ರಶ್ನೆಗಳು


ಹೌದು. ನೀವು ಸ್ವಲ್ಪ ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಆ್ಯಡ್-ಆನ್‌ಗಳನ್ನು ಖರೀದಿಸಬಹುದು. ನಿಮ್ಮ ಸಮಗ್ರ ಇನ್ಶೂರೆನ್ಸ್‌ನಲ್ಲಿ ಆ್ಯಡ್-ಆನ್‌ಗಳನ್ನು ಸೇರಿಸಿರುವುದಿಲ್ಲ. ಆದ್ದರಿಂದ, ನೀವು ನಿಮ್ಮ ಕವರೇಜ್‌ ಹೆಚ್ಚಿಸಲು ಅವುಗಳನ್ನು ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ. ನಾವು ಜೀರೋ ಡಿಪ್ರಿಸಿಯೇಷನ್ ಮತ್ತು ತುರ್ತು ಸಹಾಯ ಆ್ಯಡ್-ಆನ್ ಕವರ್‌ಗಳನ್ನು ಒದಗಿಸುತ್ತೇವೆ.
ನಿಮ್ಮ ಹೋಂಡಾ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಗಡುವು ಮುಗಿದ ಮೇಲೆ, ಆಫ್‌ಲೈನ್‌ನಲ್ಲಿ ನವೀಕರಿಸಿದರೆ, ತಪಾಸಣೆ ಕಡ್ಡಾಯವಾಗಿದೆ. ಅಗತ್ಯವಿರುವ ಡಾಕ್ಯುಮೆಂಟ್‌ಗಳೊಂದಿಗೆ ನೀವು ನಿಮ್ಮ ಬೈಕ್‌ ಅನ್ನು ಇನ್ಶೂರರ್‌ ಬಳಿಗೆ ತೆಗೆದುಕೊಂಡು ಹೋಗಬೇಕು.
ಹೌದು. ಅಪಘಾತ ಅಥವಾ ಕಳ್ಳತನದ 24 ಗಂಟೆಗಳ ಒಳಗೆ ನೀವು ಕ್ಲೈಮ್ ಅನ್ನು ಫೈಲ್ ಮಾಡಬೇಕು, ವಿಫಲವಾದರೆ ನಿಮ್ಮ ಕ್ಲೈಮ್ ನಿರಾಕರಿಸಬಹುದು. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಕ್ಲೈಮ್ ಸಲ್ಲಿಸುವಲ್ಲಿ ವಿಳಂಬಕ್ಕೆ ನಿಜವಾದ ಕಾರಣವಿದ್ದರೆ ಇನ್ಶೂರೆನ್ಸ್ ಒದಗಿಸುವವರು ಪರಿಗಣಿಸಬಹುದು.
ನಿಮ್ಮ ಆ್ಯಕ್ಟಿವಾ ಕಳ್ಳತನವಾದರೆ, ಆ ಘಟನೆ ನಡೆದ ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ. ನಮ್ಮ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ 8169500500 ನಲ್ಲಿ ವಾಟ್ಸಾಪ್ ಮೆಸೇಜ್ ಕಳುಹಿಸುವ ಕ್ಲೈಮ್ ಅನ್ನು ತಿಳಿಸಿ. ಮುಂದಿನ ಪ್ರಕ್ರಿಯೆಗಾಗಿ ನಮ್ಮ ಕ್ಲೈಮ್ ತಂಡವು ನಿಮಗೆ ಮಾರ್ಗದರ್ಶನ ನೀಡುತ್ತದೆ.
ನಿಮ್ಮ ಹೋಂಡಾ ಆ್ಯಕ್ಟಿವಾಗಾಗಿ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಸೆಟ್ ಮಾಡಲು ಅತ್ಯುತ್ತಮ ಮಾರ್ಗವೆಂದರೆ ಅದರ ಪ್ರಸ್ತುತ ಎಕ್ಸ್-ಶೋರೂಮ್ ಬೆಲೆಯನ್ನು ಪರಿಶೀಲಿಸುವುದು ಮತ್ತು ಅದರ ಭಾಗಗಳಲ್ಲಿ ಸವಕಳಿಯಿಂದ ಮೌಲ್ಯವನ್ನು ಕಡಿಮೆ ಮಾಡುವುದು. ನೆನಪಿಡಿ, ಯಾವಾಗಲೂ ನಿಮ್ಮ ವಾಹನದ ಸರಿಯಾದ IDV ಯನ್ನು ಘೋಷಿಸಿ, ಏಕೆಂದರೆ ರಿಪೇರಿ ಅಥವಾ ಕಳೆದುಹೋದಾಗ ನಿಮ್ಮ ವಾಹನಕ್ಕೆ ಹಾನಿಗಾಗಿ ನೀವು ಕ್ಲೈಮ್ ಮಾಡಿದಾಗ ವಿಮಾದಾತರು ಅದೇ ಮೊತ್ತವನ್ನು ಪಾವತಿಸುತ್ತಾರೆ.
ಎಚ್‌ಡಿಎಫ್‌ಸಿ ಎರ್ಗೋ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಹೋಂಡಾ ಆ್ಯಕ್ಟಿವಾ ಇನ್ಶೂರೆನ್ಸ್ ನವೀಕರಣದ ಸಮಯದಲ್ಲಿ ನಿಮ್ಮ ವಾಹನವನ್ನು ತಪಾಸಣೆ ಮಾಡಲು ನೀವು ನಮ್ಮ ಸ್ವಯಂ ತಪಾಸಣೆ ಆ್ಯಪ್‌ ಬಳಸಬಹುದು. ಇದಲ್ಲದೆ, ನಮ್ಮ ಸರ್ವೇಯರ್‌ನೊಂದಿಗೆ ನೀವು ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು, ಆ ವ್ಯಕ್ತಿಯು ನಿಮ್ಮ ಸ್ಥಳಕ್ಕೆ ಬರುತ್ತಾರೆ ಮತ್ತು ನಿಮ್ಮ ವಾಹನದ ಸಮೀಕ್ಷೆ ನಡೆಸುತ್ತಾರೆ.
ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನಮ್ಮ ಹೋಮ್ ಪೇಜಿನಲ್ಲಿರುವ ಸಹಾಯ ಐಕಾನ್ ಮೇಲೆ ಕ್ಲಿಕ್ ಮಾಡಿ. ನಿಮ್ಮ ಪಾಲಿಸಿ ನಂಬರ್ ಅಥವಾ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಮೂದಿಸುವ ಮೂಲಕ ನೀವು ಅಲ್ಲಿಂದ ನಿಮ್ಮ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಡೌನ್ಲೋಡ್ ಮಾಡಬಹುದು.
ಹೌದು, ಆ್ಯಕ್ಟಿವಾ ಇನ್ಶೂರೆನ್ಸ್ ಅನ್ನು ಟ್ರಾನ್ಸ್‌ಫರ್ ಮಾಡಬಹುದು. ವಾಹನವನ್ನು ಮಾರಾಟ ಮಾಡಿದ 14 ದಿನಗಳ ಒಳಗೆ ನಿಮ್ಮ ಆ್ಯಕ್ಟಿವಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಮಾಲೀಕತ್ವವನ್ನು ಹೊಸ ಮಾಲೀಕರಿಗೆ ವರ್ಗಾಯಿಸಬೇಕು. ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳು ಮತ್ತು ಇನ್ಶೂರೆನ್ಸ್ ಸಂಬಂಧಿತ ಟ್ರಾನ್ಸ್‌ಫರ್ ಫಾರ್ಮ್‌ಗಳನ್ನು ಇನ್ಶೂರೆನ್ಸ್ ಕಂಪನಿಗೆ ಸಲ್ಲಿಸುವ ಮೂಲಕ ಇದನ್ನು ಮಾಡಬೇಕು.