""
ಅಪಘಾತಗಳು, ನೈಸರ್ಗಿಕ ವಿಕೋಪಗಳು ಅಥವಾ ಮಾನವ ನಿರ್ಮಿತ ಘಟನೆಗಳಿಂದ ಉಂಟಾಗುವ ದೊಡ್ಡ ಮೊತ್ತದ ರಿಪೇರಿ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸುವುದರಿಂದ ಪ್ರತಿ ಟಿವಿಎಸ್ ಬೈಕ್ ಅಥವಾ ಸ್ಕೂಟರ್ ಮಾಲೀಕರಿಗೆ ಟಿವಿಎಸ್ ಬೈಕ್ ಇನ್ಶೂರೆನ್ಸ್ ಅಗತ್ಯವಾಗಿದೆ. ನೀವು ಸುಲಭವಾಗಿ ಆನ್‌ಲೈನ್‌ನಲ್ಲಿ TVS ಟೂ ವೀಲರ್ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ಶೂನ್ಯ ಸವಕಳಿ ಮತ್ತು ನೋ ಕ್ಲೈಮ್ ಬೋನಸ್ ರಕ್ಷಣೆಯಂತಹ ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಕವರೇಜ್ ಹೆಚ್ಚಿಸಬಹುದು.
TVS ಮೋಟಾರ್ ಕಂಪನಿಯು ಸಂಸ್ಥಾಪಕ TV ಸುಂದರಂ ಅಯ್ಯಂಗಾರ್ ಅವರ ಹೆಸರಿನಲ್ಲಿ 1911 ರಲ್ಲಿ ಸ್ಥಾಪಿಸಲ್ಪಟ್ಟಿತು ಮತ್ತು TVS 50 ಮೊಪೆಡ್‌ಗಳ ಮೂಲಕ 1970 ದಶಕದ ಉತ್ತರಾರ್ಧದಲ್ಲಿ ಟೂ ವೀಲರ್ ವಿಭಾಗಕ್ಕೆ ಕಾಲಿಟ್ಟಿತು. ಇಂದು, TVS ಭಾರತದ ಅತಿದೊಡ್ಡ ಟೂ ವೀಲರ್ ಉತ್ಪಾದಕರಲ್ಲಿ ಒಂದಾಗಿದ್ದು, ವಿಶಾಲ ಶ್ರೇಣಿಯ ಮೊಪೆಡ್‌ಗಳು, ಸ್ಕೂಟರ್‌ಗಳು, ಕಮ್ಯೂಟರ್ ಬೈಕ್‌ಗಳು ಮತ್ತು ಸ್ಪೋರ್ಟಿ ಮೋಟಾರ್‌ಸೈಕಲ್‌ಗಳನ್ನು ತಯಾರಿಸುತ್ತಿದೆ. ಭಾರತ ಮತ್ತು ಇಂಡೋನೇಷ್ಯಾದಲ್ಲಿ 44 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರು ಮತ್ತು ನಾಲ್ಕು ಉತ್ಪಾದನಾ ಘಟಕಗಳೊಂದಿಗೆ, TVS ರೈಡರ್‌ಗಳಿಗೆ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದೆ.
TVS ಬೈಕ್ ಇನ್ಶೂರೆನ್ಸ್‌ನ ಕೆಲವು ಪ್ರಮುಖ ಫೀಚರ್‌ಗಳನ್ನು ಕೆಳಗೆ ಹೈಲೈಟ್ ಮಾಡಲಾಗಿದೆ ;
| ಪ್ರಮುಖ ಫೀಚರ್‌ಗಳು | ವಿವರಗಳು |
| ಸ್ವಂತ ಹಾನಿಯ ಕವರೇಜ್ | ಅಪಘಾತಗಳು, ವಿಕೋಪಗಳು, ಕಳ್ಳತನ, ಬೆಂಕಿ ಇತ್ಯಾದಿಗಳಿಂದಾಗಿ ಇನ್ಶೂರ್ಡ್ TVS ಬೈಕ್‌ಗೆ ಉಂಟಾದ ಹಾನಿಗಳನ್ನು ಕವರ್ ಮಾಡುತ್ತದೆ. |
| ನಗದುರಹಿತ ನೆಟ್ವರ್ಕ್ | ಭಾರತದಾದ್ಯಂತ 2000+ ನಗದುರಹಿತ ಗ್ಯಾರೇಜ್‌ಗಳು. |
| IDV ಕಸ್ಟಮೈಸೇಶನ್ | ವಾಹನದ IDV ಮಾರ್ಪಾಡು ಮಾಡುವ ಆಯ್ಕೆಯನ್ನು ಆಫರ್ ಮಾಡುತ್ತದೆ. |
| ಆ್ಯಡ್-ಆನ್‌ಗಳು | ವರ್ಧಿತ ಕವರೇಜ್ಗೆ 8+ ಆ್ಯಡ್-ಆನ್‌ಗಳು ಲಭ್ಯವಿವೆ. |
| ಥರ್ಡ್-ಪಾರ್ಟಿ ಡ್ಯಾಮೇಜ್ ಕವರ್ | ಥರ್ಡ್ ಪಾರ್ಟಿ ವೈಯಕ್ತಿಕ ಮತ್ತು ಆಸ್ತಿ ಹಾನಿಯಿಂದ ಉಂಟಾಗುವ ಕಾನೂನು ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ. |
| ತೊಂದರೆ ರಹಿತ ಕ್ಲೈಮ್‌ಗಳು | AI-ಸಕ್ರಿಯಗೊಳಿಸಿದ ಟೂಲ್ ಐಡಿಯಾಗಳೊಂದಿಗೆ ತ್ವರಿತ ಮತ್ತು ಸುಲಭ ಕ್ಲೈಮ್ ಪ್ರಕ್ರಿಯೆ. |
| ನೋ ಕ್ಲೈಮ್ ಬೋನಸ್ | 50% ವರೆಗಿನ NCB ಯೊಂದಿಗೆ ಹೆಚ್ಚಿನ ಉಳಿತಾಯಗಳು. |
ಟಿವಿಎಸ್ ಬೈಕ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ, ಅವುಗಳೆಂದರೆ ;
| ಪ್ರಯೋಜನಗಳು | ವಿವರಗಳು |
| 360-ಡಿಗ್ರಿ ಭದ್ರತೆ | ಥರ್ಡ್ ಪಾರ್ಟಿ ಹೊಣೆಗಾರಿಕೆಗಳು ಮತ್ತು ಇನ್ಶೂರ್ಡ್ TVS ಬೈಕ್‌ಗೆ ಸ್ವಂತ ಹಾನಿ ಎರಡಕ್ಕೂ ಕವರೇಜ್ ಒದಗಿಸುತ್ತದೆ. |
| ವಿವಿಧ ಅಪಾಯಗಳು ಕವರ್ ಆಗುತ್ತವೆ | ಅಪಘಾತಗಳು, ಕಳ್ಳತನ, ಬೆಂಕಿ, ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳು ಮುಂತಾದ ಅಪಾಯಗಳಿಂದಾಗಿ ಉಂಟಾದ ಹಾನಿಗಳನ್ನು ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. |
| ಫ್ಲೆಕ್ಸಿಬಲ್ ಕವರೇಜ್ | ಆ್ಯಡ್-ಆನ್‌ಗಳನ್ನು ಸೇರಿಸುವ ಮತ್ತು IDV ಯನ್ನು ಕಸ್ಟಮೈಜ್ ಮಾಡುವ ಆಯ್ಕೆಗಳೊಂದಿಗೆ, ನಿಮ್ಮ TVS ಟೂ ವೀಲರ್‌ಗೆ ಸೂಕ್ತ ಕವರೇಜನ್ನು ನೀವು ಖಚಿತಪಡಿಸಿಕೊಳ್ಳಬಹುದು. |
| ಹಣಕಾಸಿನ ಸುರಕ್ಷತಾ ನೆಟ್ | TVS ಬೈಕ್ ಇನ್ಶೂರೆನ್ಸ್ ಇನ್ಶೂರ್ಡ್ ಅಪಾಯಗಳಿಂದಾಗಿ ಸ್ವಂತ ಹಾನಿಗೆ ಥರ್ಡ್ ಪಾರ್ಟಿ ಕಾನೂನು ಹೊಣೆಗಾರಿಕೆಗಳು ಮತ್ತು ದುರಸ್ತಿಗಳನ್ನು ಕವರ್ ಮಾಡುವ ಮೂಲಕ ಹಣಕಾಸಿನ ಸುರಕ್ಷತಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. |
| ಕೈಗೆಟಕುವ ರಕ್ಷಣೆ | ಕಡಿಮೆ ವೆಚ್ಚದಲ್ಲಿ ಸಮಗ್ರ ಬೈಕ್ ಇನ್ಶೂರೆನ್ಸ್ ಕವರೇಜ್ ಪಡೆಯಲು ನೀವು 50% ವರೆಗಿನ NCB ಗಳಿಸಬಹುದು ಮತ್ತು ಬಳಸಬಹುದು. |
| ಚಿಂತೆ-ಮುಕ್ತ ಮಾಲೀಕತ್ವ | ನಿಮ್ಮ TVS ಬೈಕ್ ಅನಿರೀಕ್ಷಿತ ಘಟನೆಗಳ ವಿರುದ್ಧ ಕವರ್ ಆಗಿದೆ ಎಂದು ತಿಳಿದುಕೊಂಡು ನೀವು ಚಿಂತೆ-ಮುಕ್ತ ವಾಹನ ಮಾಲೀಕತ್ವವನ್ನು ಆನಂದಿಸಬಹುದು. |
ಎಚ್‌ಡಿಎಫ್‌ಸಿ ಎರ್ಗೋ 4 ವಿಧದ ಟೂ ವೀಲರ್ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ, ಅವುಗಳು ಸಮಗ್ರ ಥರ್ಡ್ ಪಾರ್ಟಿ ಇನ್ಶೂರೆನ್ಸ್, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮತ್ತು ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಕಾರ್ ಮತ್ತು ಹೊಚ್ಚ ಹೊಸ ಬೈಕ್ ಕವರ್ ಆಗಿವೆ. ನಿಮ್ಮ ಸಮಗ್ರ ಬೈಕ್ ಇನ್ಶೂರೆನ್ಸ್ ಗೆ ಆ್ಯಡ್-ಆನ್ ಕವರ್‌ಗಳನ್ನು ಸೇರಿಸುವ ಮೂಲಕ ನೀವು ನಿಮ್ಮ ಬೈಕಿನ ರಕ್ಷಣೆಯನ್ನು ಮತ್ತಷ್ಟು ಹೆಚ್ಚಿಸಬಹುದು.
ಇದು ಮೂರನೇ ವ್ಯಕ್ತಿಯ ಹೊಣೆಗಾರಿಕೆ, ವೈಯಕ್ತಿಕ ಆಕ್ಸಿಡೆಂಟ್ ಕವರ್ ಮತ್ತು ಮುಖ್ಯವಾಗಿ - ಸ್ವಂತ ಹಾನಿ ಕವರ್ ಒಳಗೊಂಡಿರುವುದರಿಂದ ಇದೊಂದು ಶಿಫಾರಿತ ಆಯ್ಕೆಯಾಗಿದೆ. ನೀವು ಯಾರಿಗಾದರೂ ಆಕ್ಸಿಡೆಂಟ್ ಮಾಡಿದಾಗ, ಇದು ನಿಮಗೆ, ನಿಮ್ಮ ಬೈಕ್‌ಗೆ ಮತ್ತು ನಿಮ್ಮ ಹೊಣೆಗಾರಿಕೆಗಳಿಗೆ ಸಂಪೂರ್ಣ ಹಣಕಾಸು ರಕ್ಷಣೆ ಒದಗಿಸುತ್ತದೆ. ಆಯ್ದ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕವರೇಜ್ ಹೆಚ್ಚಿಸಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.
ವೈಯಕ್ತಿಕ ಅಪಘಾತ ಕವರ್
ನೈಸರ್ಗಿಕ ವಿಕೋಪಗಳು,
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ಇದು ಮೋಟಾರ್ ವಾಹನ ಕಾಯ್ದೆ, 1988 ಅಡಿಯಲ್ಲಿ ಕಡ್ಡಾಯವಾಗಿರುವ ಇನ್ಶೂರೆನ್ಸ್ ವಿಧವಾಗಿದೆ. ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಮರಣ ಅಥವಾ ಅಂಗವಿಕಲತೆ ಅಥವಾ ಅವರ ಆಸ್ತಿಗೆ ಆದ ಹಾನಿ, ಇತ್ಯಾದಿಗಳಿಂದ ಉಂಟಾಗುವ ಯಾವುದೇ ನಷ್ಟಗಳ ವಿರುದ್ಧ ಇದು ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದು ಆಕ್ಸಿಡೆಂಟ್ ಕಾರಣದಿಂದ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಗಳನ್ನೂ ಕವರ್ ಮಾಡುತ್ತದೆ.
ವೈಯಕ್ತಿಕ ಅಪಘಾತ ಕವರ್
ಥರ್ಡ್-ಪಾರ್ಟಿ ಆಸ್ತಿ ಹಾನಿ
ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ
ಈಗಾಗಲೇ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದು, ಕವರೇಜ್ ವ್ಯಾಪ್ತಿ ಹೆಚ್ಚಿಸಲು ಬಯಸುವವರಿಗೆ ಈ ಪಾಲಿಸಿಯು ಸೂಕ್ತವಾಗಿದೆ. ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಯಿಂದ ಆಗುವ ನಷ್ಟಗಳ ವಿರುದ್ಧ ಇದು ನಿಮಗೆ ರಕ್ಷಣೆ ನೀಡುತ್ತದೆ. ಇದಲ್ಲದೆ, ನಿಮ್ಮ ಕವರೇಜ್ ಹೆಚ್ಚಿಸಲು ನೀವು ಆ್ಯಡ್-ಆನ್‌ಗಳ ಆಯ್ಕೆಯನ್ನು ಅನ್ಲಾಕ್ ಮಾಡಬಹುದು.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು,
ಆ್ಯಡ್-ಆನ್‌ಗಳ ಆಯ್ಕೆ
ನಿಮ್ಮ ಬೈಕ್ ಮಾಲೀಕತ್ವದ ಅನುಭವಕ್ಕೆ ಅನುಕೂಲತೆ ಮತ್ತು ಆಲ್-ರೌಂಡ್ ಪ್ರೊಟೆಕ್ಷನ್ ಸೇರಿಸಲು ವಿನ್ಯಾಸಗೊಳಿಸಲಾದ ಪ್ಲಾನ್, ಮಲ್ಟಿ ಇಯರ್ ಬೈಕ್ ಇನ್ಶೂರೆನ್ಸ್ ಪ್ಯಾಕೇಜ್ ಐದು ವರ್ಷದ ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಹಾನಿ ಇನ್ಶೂರೆನ್ಸ್ ಅಂಶವನ್ನು ಒಳಗೊಂಡಿದೆ. ಸ್ವಂತ ಹಾನಿ ಅಂಶವನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲು ಮರೆತರೂ ನಿಮಗೆ ಆರ್ಥಿಕ ರಕ್ಷಣೆ ನೀಡಲಾಗುತ್ತದೆ.
ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ
ನೈಸರ್ಗಿಕ ವಿಕೋಪಗಳು,
ವೈಯಕ್ತಿಕ ಆಕ್ಸಿಡೆಂಟ್
ಥರ್ಡ್-ಪಾರ್ಟಿ ಹೊಣೆಗಾರಿಕೆ
ಆ್ಯಡ್-ಆನ್‌ಗಳ ಆಯ್ಕೆ
ನಿಮ್ಮ TVS ಬೈಕ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಪಾಲಿಸಿ ಪ್ರಕಾರವನ್ನು ಅವಲಂಬಿಸಿ ಕವರೇಜ್ ಒದಗಿಸುತ್ತದೆ. ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಹಾನಿಗಳಿಗೆ ಮಾತ್ರ ಕವರೇಜ್ ಒದಗಿಸುತ್ತದೆ, ಸಮಗ್ರ TVS ಬೈಕ್ ಇನ್ಶೂರೆನ್ಸ್ ಪಾಲಿಸಿ ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:
ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿಯಾಗುವುದರಿಂದ ಉಂಟಾಗುವ ಹಣಕಾಸು ನಷ್ಟಗಳು ಕವರ್ ಆಗುತ್ತವೆ.
ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಬೈಕ್‌ಗೆ ಉಂಟಾದ ಹಾನಿಯು ಕವರ್ ಆಗುತ್ತದೆ.
ನಿಮ್ಮ ಬೈಕ್ ಕಳ್ಳತನವಾದರೆ, ನಿಮಗೆ ಬೈಕಿನ IDV ಪರಿಹಾರ ನೀಡಲಾಗುತ್ತದೆ.
ಭೂಕಂಪ, ಬಿರುಗಾಳಿ, ಪ್ರವಾಹ, ಗಲಭೆ, ವಿಧ್ವಂಸಕ ಕೃತ್ಯ, ಮುಂತಾದ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಕವರ್ ಮಾಡಲಾಗುತ್ತದೆ.
₹15 ಲಕ್ಷದೊಳಗಿನ ನಿಮ್ಮ ಚಿಕಿತ್ಸೆ ಶುಲ್ಕಗಳನ್ನು ಭರಿಸಲಾಗುತ್ತದೆ.
ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಅಂಗವೈಕಲ್ಯ ಅಥವಾ ಸಾವು ಮತ್ತು ಅವರ ಆಸ್ತಿಗೆ ಆದ ಹಾನಿಯನ್ನು ಕೂಡ ಕವರ್ ಮಾಡಲಾಗುತ್ತದೆ.
TVS ಭಾರತದ ಪ್ರಮುಖ ಟೂ ವೀಲರ್ ಉತ್ಪಾದಕ ಕಂಪನಿಗಳಲ್ಲಿ ಒಂದಾಗಿದೆ. ನೀವು TVS ಬೈಕ್ ಅಥವಾ ಸ್ಕೂಟರ್‌ನ ಹೆಮ್ಮೆಯ ಮಾಲೀಕರಾಗಿದ್ದರೆ, ಅನಿರೀಕ್ಷಿತ ಹಾನಿಯಿಂದ ಅವುಗಳನ್ನು ರಕ್ಷಿಸಲು ನೀವು ನಮ್ಮ ಮೇಲೆ ನಂಬಿಕೆ ಇಡಬಹುದು. ಇಂದೇ ಎಚ್‌ಡಿಎಫ್‌ಸಿ ಎರ್ಗೋದಿಂದ TVS ಟೂ ವೀಲರ್ ಇನ್ಶೂರೆನ್ಸ್ ಪಡೆಯಿರಿ!
ನೀವು TVS ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ನೀವು ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಹಾಗೆ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋದಿಂದ TVS ಬೈಕ್‌ಗಳಿಗೆ ಟೂ ವೀಲರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಲು ಹಂತಗಳು ಇಲ್ಲಿವೆ:
1. ಟೂ ವೀಲರ್ ಇನ್ಶೂರೆನ್ಸ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಪುಟಕ್ಕೆ ಭೇಟಿ ನೀಡಿ.
2. ನೋಂದಣಿ ನಂಬರ್, ಮಾಡೆಲ್, ವೇರಿಯಂಟ್ ಮುಂತಾದ TVS ಬೈಕಿನ ವಿವರಗಳನ್ನು ಒದಗಿಸಿ.
3. ಆದ್ಯತೆಯ ಕವರೇಜ್ ಪ್ರಕಾರ ಮತ್ತು ಪಾಲಿಸಿ ಅವಧಿಯನ್ನು ಆಯ್ಕೆ ಮಾಡಿ.
4. ಆ್ಯಡ್-ಆನ್‌ಗಳನ್ನು ಆರಿಸಿ ಮತ್ತು IDV ಅನ್ನು ಕಸ್ಟಮೈಜ್ ಮಾಡಿ (ಅಗತ್ಯವಿರುವಂತೆ).
5. ಹಿಂದಿನ ಇನ್ಶೂರೆನ್ಸ್ ಪಾಲಿಸಿಯ ವಿವರಗಳನ್ನು ನಮೂದಿಸಿ (ಅನ್ವಯವಾದರೆ).
6. ಪ್ರೀಮಿಯಂ ಕೋಟ್ ಪಡೆಯಿರಿ ಮತ್ತು ಅದರ ಪಾವತಿಯನ್ನು ಆನ್ಲೈನಿನಲ್ಲಿ ಪೂರ್ಣಗೊಳಿಸಿ.
ಕಾನೂನಿನ ಪ್ರಕಾರ, ಸೆಕೆಂಡ್-ಹ್ಯಾಂಡ್ TVS ಬೈಕ್ ಕೂಡ ಮಾನ್ಯ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ಎಚ್‌ಡಿಎಫ್‌ಸಿ ಎರ್ಗೋದಿಂದ ಸೆಕೆಂಡ್-ಹ್ಯಾಂಡ್ ಟೂ ವೀಲರ್‌ಗೆ TVS ಬೈಕ್ ಇನ್ಶೂರೆನ್ಸ್ ಖರೀದಿಸಲು ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ:
1. ಎಚ್‌ಡಿಎಫ್‌ಸಿ ಎರ್ಗೋ ಬೈಕ್ ಇನ್ಶೂರೆನ್ಸ್ ಪುಟಕ್ಕೆ ಹೋಗಿ.
2. ಸೆಕೆಂಡ್-ಹ್ಯಾಂಡ್ ಟಿವಿಎಸ್ ಬೈಕಿನ ನೋಂದಣಿ ಸಂಖ್ಯೆಯನ್ನು ಟೈಪ್ ಮಾಡಿ ಮತ್ತು "ಕೋಟ್ ಪಡೆಯಿರಿ" ಒತ್ತಿ.
3. ಆ್ಯಡ್-ಆನ್‌ಗಳು, IDV, ಕಾಲಾವಧಿ ಇತ್ಯಾದಿಗಳನ್ನು ಒಳಗೊಂಡಂತೆ ಬಯಸಿದ ಪ್ಲಾನ್ ಪ್ರಕಾರ ಮತ್ತು ಕವರೇಜನ್ನು ಆಯ್ಕೆ ಮಾಡಿ.
4. ವಾಹನದ ಕೊನೆಯ ಪಾಲಿಸಿ ವಿವರಗಳನ್ನು ನೀಡಿ.
5. ಖರೀದಿಯನ್ನು ಪೂರ್ಣಗೊಳಿಸಲು ಕೋಟ್ ಮಾಡಿದ ಬೆಲೆಯನ್ನು ಆನ್ಲೈನಿನಲ್ಲಿ ಪಾವತಿಸಿ.
ಟೂ ವೀಲರ್ ಚಲಾಯಿಸುವ ಪ್ರತಿಯೊಬ್ಬರೂ ಬೈಕ್ ಇನ್ಶೂರೆನ್ಸ್ ಹೊಂದಿರಬೇಕು. ಆಗ ಮಾತ್ರವೇ ಮಾಲೀಕ-ಸವಾರರು ನಮ್ಮ ದೇಶದಲ್ಲಿ ಕಾನೂನುಬದ್ಧವಾಗಿ ಸವಾರಿ ಮಾಡಬಹುದು. ಜೊತೆಗೆ, ನೀವು ಆರ್ಥಿಕವಾಗಿ ಸುರಕ್ಷಿತವಾಗಿರುವುದು ಕೂಡ ಮುಖ್ಯ. ನೈಸರ್ಗಿಕ ವಿಪತ್ತುಗಳು ನಿಮ್ಮ ಬೈಕ್‌ಗೆ ಗಮನಾರ್ಹ ಹಾನಿ ಮಾಡಬಹುದು. ಅದನ್ನು ರಿಪೇರಿ ಮಾಡಿಸಲು ಆಗುವ ಖರ್ಚು ಅಷ್ಟಿಷ್ಟಲ್ಲ. ಯಾವುದೇ ಮನ್ಸೂಚನೆ ಇಲ್ಲದೆ ಆಕ್ಸಿಡೆಂಟ್ ಮತ್ತು ಕಳ್ಳತನ ಸಂಭವಿಸಬಹುದು. ನೀವು ಅತ್ಯುತ್ತಮ ರೈಡರ್ ಆಗಿದ್ದರೂ, ನಿಮ್ಮ ಬೈಕ್ ಎಷ್ಟೇ ಸುರಕ್ಷತಾ ಫೀಚರ್‌ಗಳನ್ನು ಹೊಂದಿದ್ದರೂ ಅನಾಹುತ ಸಂಭವಿಸಬಹುದು. ಎಚ್‌ಡಿಎಫ್‌ಸಿ ಎರ್ಗೋದ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಈ ಅನಗತ್ಯ ಖರ್ಚುಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ. ನಿಮ್ಮ TVS ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನಮ್ಮ ಬಳಿಯೇ ಏಕೆ ಖರೀದಿಸಬೇಕು ಎಂಬುದಕ್ಕೆ ಅಸಂಖ್ಯಾತ ಕಾರಣಗಳಿವೆ. ಅದರಲ್ಲಿ ಕೆಲವು ಪ್ರಮುಖ ಕಾರಣಗಳು ಇಲ್ಲಿವೆ ನೋಡಿ:
ನಿಮ್ಮ ನೆರೆಹೊರೆಯಲ್ಲಿ ಮತ್ತು ದೇಶದಾದ್ಯಂತ ಗಣನೀಯ ಉಪಸ್ಥಿತಿ ಹೊಂದಿರುವ ವಿಮಾದಾತರನ್ನು ನೀವು ಆಯ್ದುಕೊಳ್ಳಬೇಕು. ಮತ್ತು ಭಾರತದಾದ್ಯಂತ 2000+ ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳೊಂದಿಗೆ, ಎಚ್‌ಡಿಎಫ್‌ಸಿ ಎರ್ಗೋ ಯಾವಾಗಲೂ ಸಹಾಯವನ್ನು ಖಚಿತಪಡಿಸುತ್ತದೆ.

24x7 ರಸ್ತೆಬದಿಯ ನೆರವು ಸೌಲಭ್ಯದಿಂದಾಗಿ, ವಾಹನದ ಬ್ರೇಕ್‌ಡೌನ್ ಸಂದರ್ಭದಲ್ಲಿ ನೀವು ಎಂದಿಗೂ ಕೈಚೆಲ್ಲಿ ಕೂರಬೇಕಾಗಿಲ್ಲ.
ಎಚ್‌ಡಿಎಫ್‌ಸಿ ಎರ್ಗೋ 1.6 ಕೋಟಿಗೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಹಾಗಾಗಿ, ನಿಮ್ಮ ಅಗತ್ಯಗಳ ಪೂರೈಕೆಯ ಬಗ್ಗೆ ಯಾವ ಚಿಂತೆಯೂ ಬೇಡ.
ನಿಮ್ಮ ಕಾರನ್ನು ಸರ್ವಿಸ್‌ಗೆ ಕೊಟ್ಟಾಗ, ನಿಮ್ಮ ದಿನಚರಿ ಏರುಪೇರಾಗಬಹುದು. ಆದರೆ, ನಾವು ಸಣ್ಣಪುಟ್ಟ ಹಾನಿಗಳಿಗೆ ಓವರ್‌ನೈಟ್ ಸೇವೆ ಒದಗಿಸುವುದರಿಂದ, ನೀವು ರಾತ್ರಿಯಿಡೀ ನೆಮ್ಮದಿಯಿಂದ ನಿದ್ದೆ ಮಾಡಿ. ನಿಮ್ಮ ಬೆಳಗಿನ ಪ್ರಯಾಣದ ವೇಳೆಗೆಲ್ಲಾ ಕಾರು ನಿಮ್ಮ ಮನೆಬಾಗಿಲಿಗೆ ಬಂದಿರುತ್ತದೆ.
ಉತ್ತಮ ವಿಮಾದಾತರು ಕ್ಲೈಮ್‌ಗಳನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪ್ರಕ್ರಿಯೆಗೊಳಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ಮಾಡುವುದು ಅದನ್ನೇ. ನಾವು ಮೊದಲನೇ ದಿನವೇ ಸುಮಾರು 50% ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವ ಮೂಲಕ, ನಿಮ್ಮ ಚಿಂತೆಗಳನ್ನು ಕಡಿಮೆ ಮಾಡುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋದ ನಗದುರಹಿತ TVS ಬೈಕ್ ಇನ್ಶೂರೆನ್ಸ್ ಕ್ಲೈಮ್‌ಗಳಿಗಾಗಿ, ನೀವು ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ ;
1. ನಮ್ಮ ಅಧಿಕೃತ ಟೋಲ್-ಫ್ರೀ ನಂಬರ್‌ಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಟೆಕ್ಸ್ಟ್ ಕಳುಹಿಸುವ ಮೂಲಕ ಕ್ಲೈಮ್ ಬಗ್ಗೆ ನಮಗೆ ತಿಳಿಸಿ.
2. ನೋಂದಾಯಿತ ಸರ್ವೇಯರ್‌ನಿಂದ ಹಾನಿಗಳು/ನಷ್ಟಗಳನ್ನು ತಪಾಸಣೆ ಮಾಡಲು ಟೂ ವೀಲರ್‌ನೊಂದಿಗೆ ಹತ್ತಿರದ ನೆಟ್ವರ್ಕ್ ಗ್ಯಾರೇಜಿಗೆ ಭೇಟಿ ನೀಡಿ.
3. ಅಲ್ಲದೆ, ನಗದುರಹಿತ ಕ್ಲೈಮ್‌ಗಾಗಿ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಿ.
4. ನಿಮ್ಮ ನೋಂದಾಯಿತ ಕಾಂಟ್ಯಾಕ್ಟ್ ನಂಬರ್‌ನಲ್ಲಿ ಕ್ಲೈಮ್ ಬಗ್ಗೆ ಅಪ್ಡೇಟ್‌ಗಳನ್ನು ನೀವು ಪಡೆಯುತ್ತೀರಿ. ಅನುಮೋದನೆಯ ನಂತರ, ಗ್ಯಾರೇಜ್ ರಿಪೇರಿ ಆರಂಭಿಸುತ್ತದೆ.
5. ನಿಮ್ಮ TVS ಬೈಕ್/ಸ್ಕೂಟರ್ ಅನ್ನು ನಗದುರಹಿತ ಗ್ಯಾರೇಜ್‌ನಲ್ಲಿ ರಿಪೇರಿ ಮಾಡಿದ ನಂತರ, ಗ್ಯಾರೇಜಿಗೆ ನಿಮ್ಮ ಪಾಲನ್ನು (ಅಂದರೆ, ಕಡಿತ, ಸವಕಳಿ ಇತ್ಯಾದಿ) ಪಾವತಿಸಿ ಮತ್ತು ನಿಮ್ಮ ವಾಹನವನ್ನು ಮನೆಗೆ ತನ್ನಿ. ಬ್ಯಾಲೆನ್ಸ್ ಮೊತ್ತವನ್ನು ನೇರವಾಗಿ ನೆಟ್ವರ್ಕ್ ಗ್ಯಾರೇಜ್ ಮತ್ತು ವಿಮಾದಾತರ ನಡುವೆ ಸೆಟಲ್ ಮಾಡಲಾಗುತ್ತದೆ.
ಗಮನಿಸಿ: ಕಳ್ಳತನ ಮತ್ತು ಥರ್ಡ್ ಪಾರ್ಟಿ ಹಾನಿಗಳ ಸಂದರ್ಭದಲ್ಲಿ, FIR ಅಗತ್ಯವಿದೆ. ಪ್ರಮುಖ ಆಕಸ್ಮಿಕ ಹಾನಿಗಳಿಗೆ, ಆನ್-ಸ್ಪಾಟ್ ತಪಾಸಣೆಯನ್ನು ವ್ಯವಸ್ಥೆ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ TVS ಬೈಕ್ ಇನ್ಶೂರೆನ್ಸ್ ಮರುಪಾವತಿ ಕ್ಲೈಮ್‌ಗಳಿಗೆ, ಅನುಸರಿಸಬೇಕಾದ ಹಂತಗಳು ಹೀಗಿವೆ ;
1. ಟೋಲ್-ಫ್ರೀ ನಂಬರ್ ಅಥವಾ ಅಧಿಕೃತ ವಾಟ್ಸಾಪ್ ನಂಬರ್ ಮೂಲಕ ಕ್ಲೈಮ್ ಮಾಹಿತಿ.
2. ನಮ್ಮ ನೋಂದಾಯಿತ ಸರ್ವೇಯರ್‌ನಿಂದ ಮೌಲ್ಯಮಾಪನ ಮಾಡಲಾದ ಹಾನಿಗಳು/ನಷ್ಟಗಳನ್ನು ಪಡೆಯಿರಿ.
3. ಕ್ಲೈಮ್ ಫಾರ್ಮ್, ಹಾನಿ ಅಂದಾಜುಗಳು, ಪಾವತಿ ಬಿಲ್‌ಗಳು ಇತ್ಯಾದಿಗಳೊಂದಿಗೆ ಕ್ಲೈಮ್ ಡಾಕ್ಯುಮೆಂಟೇಶನ್ ಸಲ್ಲಿಸಿ.
4. ಎಲ್ಲಾ ಡಾಕ್ಯುಮೆಂಟ್‌ಗಳನ್ನು ಯಶಸ್ವಿಯಾಗಿ ಅಪ್ಲೋಡ್ ಮಾಡಿದ ನಂತರ ಕ್ಲೈಮ್ ಅನ್ನು ಪ್ರಕ್ರಿಯೆಗೊಳಿಸಲಾಗುತ್ತದೆ.
5. ಮರುಪಾವತಿ ಕ್ಲೈಮ್‌ನ ಅನುಮೋದನೆಗೆ ಸಂಬಂಧಿಸಿದಂತೆ ನೀವು SMS/ಇ-ಮೇಲ್ ಮೂಲಕ ನೋಟಿಫಿಕೇಶನ್ ಪಡೆಯುತ್ತೀರಿ.
6. ಚೆಕ್ ಅಥವಾ NEFT ಮೂಲಕ ಪಾವತಿಯನ್ನು ಮಾಡಲಾಗುತ್ತದೆ.
ನಷ್ಟ/ಹಾನಿಯ ಸ್ವರೂಪದ ಆಧಾರದ ಮೇಲೆ, ನಿಮ್ಮ TVS ಇನ್ಶೂರೆನ್ಸ್ ಪಾಲಿಸಿ ಕ್ಲೈಮ್‌ಗಳಿಗೆ ನೀವು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕು ;
1. ಟೂ ವೀಲರ್ ಇನ್ಶೂರೆನ್ಸ್ ಪುರಾವೆ
2. ವಾಹನದ ನೋಂದಣಿ ಪ್ರಮಾಣಪತ್ರ ಮತ್ತು ತೆರಿಗೆ ರಶೀದಿಗಳ ಪ್ರತಿ.
3. FIR ಪ್ರತಿ (ಥರ್ಡ್ ಪಾರ್ಟಿ ಹಾನಿ ಪ್ರಕರಣಗಳಿಗೆ)
4. ಡ್ರೈವಿಂಗ್ ಲೈಸೆನ್ಸ್ ಅಥವಾ DL ಕಾಪಿ
5. ರಿಪೇರಿ ಅಂದಾಜು
6. Bill of repair and payment slips
1. ಟೂ ವೀಲರ್ ಇನ್ಶೂರೆನ್ಸ್ ಪುರಾವೆ
2. ತೆರಿಗೆ ಪಾವತಿ ಮತ್ತು ವಾಹನದ RC ಯ ರಶೀದಿ
3. RTO-ಪಡೆದ ಕಳ್ಳತನದ ಅನುಮೋದನೆ
4. ಹಿಂದಿನ ಇನ್ಶೂರೆನ್ಸ್ ಪಾಲಿಸಿ ಮಾಹಿತಿ
5. ವಾಹನದ ವಾರಂಟಿ ಕಾರ್ಡ್ ಮತ್ತು ಸೇವಾ ಬುಕ್/ಕೀಗಳು
6. FIR / JMFC ವರದಿ/ ಅಂತಿಮ ತನಿಖೆಯ ವರದಿ ಪ್ರತಿ
7. ನಿಮ್ಮ TVS ಟೂ ವೀಲರ್‌ನ ಕಳ್ಳತನವನ್ನು ವರದಿ ಮಾಡುವ ಮತ್ತು ಅದು ಬಳಕೆಯಲ್ಲಿಲ್ಲ ಎಂದು ಘೋಷಿಸುವ RTO ನೀಡಿರುವ ಪತ್ರದ ಪ್ರಮಾಣೀಕೃತ ಕಾಪಿ.
1. ಟೂ ವೀಲರ್ ಇನ್ಶೂರೆನ್ಸ್ ಪುರಾವೆ
2. ಡ್ರೈವಿಂಗ್ ಲೈಸೆನ್ಸ್ ಕಾಪಿ
3. ವಾಹನದ RC ಕಾಪಿ
4. ಫೈರ್ ಬ್ರಿಗೇಡ್ ರಿಪೋರ್ಟ್ (ಯಾವುದಾದರೂ ಇದ್ದರೆ)
5. FIR (ಅಗತ್ಯವಿದ್ದರೆ)
6. ಫೋಟೋಗಳು/ವಿಡಿಯೋಗಳ ಮೂಲಕ ಘಟನೆಯ ಸಾಕ್ಷ್ಯ
TVS ಮೋಟಾರ್ ಭಾರತದಲ್ಲಿ ನೆಲೆಗೊಂಡಿರುವ ಬಹುರಾಷ್ಟ್ರೀಯ ಮೋಟಾರ್‌ಸೈಕಲ್ ಉತ್ಪಾದಕ ಕಂಪನಿಯಾಗಿದೆ. ಅದರ ಪ್ರಧಾನ ಕಚೇರಿ ಚೆನ್ನೈನಲ್ಲಿದೆ ಮತ್ತು ಆದಾಯದ ವಿಷಯದಲ್ಲಿ ಅದು ಭಾರತದ ಮೂರನೇ ಅತಿದೊಡ್ಡ ಮೋಟಾರ್‌ಸೈಕಲ್ ಕಂಪನಿಯಾಗಿದೆ. ಭಾರತೀಯ ಉಪಖಂಡದ ಹೊರತಾಗಿ, TVS ನ ಹೆಜ್ಜೆಗುರುತುಗಳನ್ನು ಆಗ್ನೇಯ ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ, ಲ್ಯಾಟಿನ್ ಮತ್ತು ಮಧ್ಯ ಅಮೆರಿಕಾ ಮತ್ತಿತರ ಸ್ಥಳಗಳಲ್ಲಿ ಕಾಣಬಹುದು. ಕಂಪನಿಯು ವಾರ್ಷಿಕ 4.95 ಮಿಲಿಯನ್ ಟೂ ವೀಲರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಂಪನಿಯು ತ್ರಿಚಕ್ರ ವಾಹನಗಳು ಮತ್ತು ವಿವಿಧ ಆಟೋಮೊಬೈಲ್ ಭಾಗಗಳನ್ನು ಉತ್ಪಾದಿಸುವುದಕ್ಕೂ ಹೆಸರುವಾಸಿಯಾಗಿದೆ. ಹೆಸರಾಂತ ನಾರ್ಟನ್ ಮೋಟಾರ್‌ಸೈಕಲ್ಸ್ ಕೂಡಾ TVS ಮೋಟಾರ್ ಕಂಪನಿಯ ಮಾಲೀಕತ್ವದಲ್ಲಿವೆ.
ನಿಮ್ಮ TVS ಬೈಕ್ ಇನ್ಶೂರೆನ್ಸ್ ನವೀಕರಣ ಕೆಲವೇ ನಿಮಿಷಗಳಲ್ಲಿ ಆಗಿಬಿಡುತ್ತದೆ. ಇದನ್ನು ನೀವು ನಿಮ್ಮ ಮನೆಯಲ್ಲೇ ಕುಳಿತು ಕೆಲವೇ ಕ್ಲಿಕ್‌ಗಳಲ್ಲಿ ಮುಗಿಸಬಹುದು. ಈ ಕೆಳಗೆ ನಮೂದಿಸಿದ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ, ತ್ವರಿತವಾಗಿ ಕವರೇಜ್ ಪಡೆಯಿರಿ!
ನಿಮ್ಮ ಎಚ್‌ಡಿಎಫ್‌ಸಿ ಎರ್ಗೋ TVS ಟೂ ವೀಲರ್ ಇನ್ಶೂರೆನ್ಸ್ ಅವಧಿ ಮುಗಿದಿದ್ದರೆ ಹಾಗೂ ಗ್ರೇಸ್ ಅವಧಿಯೊಳಗೆ ಇದ್ದರೆ, ನೀವು ಅದನ್ನು ಹೇಗೆ ನವೀಕರಿಸಬಹುದು ಎಂಬುದು ಇಲ್ಲಿದೆ:
1. ಎಚ್‌ಡಿಎಫ್‌ಸಿ ಎರ್ಗೋ ಬೈಕ್ ಇನ್ಶೂರೆನ್ಸ್ ಪೇಜ್‌ಗೆ ಹೋಗಲು ಇಲ್ಲಿ ಕ್ಲಿಕ್ ಮಾಡಿ.
2. ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ನವೀಕರಿಸಲು ಆಯ್ಕೆಯನ್ನು ಆರಿಸಿ.
3. ಅಸ್ತಿತ್ವದಲ್ಲಿರುವ ಪಾಲಿಸಿ ನಂಬರ್ ನಮೂದಿಸಿದ ನಂತರ "ಮುಂದುವರೆಯಿರಿ" ಒತ್ತಿ.
4. ಪ್ಲಾನ್ ವಿವರಗಳನ್ನು ಪರಿಶೀಲಿಸಿ ಮತ್ತು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡಿ.
5. ಆನ್‌ಲೈನ್‌ನಲ್ಲಿ ಪ್ರೀಮಿಯಂ ಪಾವತಿಸುವ ಮೂಲಕ ನವೀಕರಣವನ್ನು ಪೂರ್ಣಗೊಳಿಸಿ.
ಗಮನಿಸಿ: ಗ್ರೇಸ್ ಅವಧಿಯೊಳಗೆ ಕೂಡಾ ನಿಮ್ಮ ಗಡುವು ಮುಗಿದ TVS ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಲು ನೀವು ವಿಫಲರಾದರೆ, ನೀವು ಗಳಿಸಿದ ಪ್ರಯೋಜನಗಳನ್ನು ಕಳೆದುಕೊಳ್ಳುತ್ತೀರಿ ಮತ್ತು ಹೊಸ ಪ್ಲಾನ್ ಖರೀದಿಸಬೇಕು ಮತ್ತು ಹೊಸದಾಗಿ ಆರಂಭಿಸಬೇಕು.

TVS 2025 ರ ಮಧ್ಯ ವರ್ಷದೊಳಗೆ 300cc ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಲು ಯೋಜಿಸಿದೆ
TVS 2025 ರ ಮಧ್ಯಭಾಗದ ಒಳಗೆ 300cc ಅಡ್ವೆಂಚರ್ ಬೈಕ್ ಅನ್ನು ಬಿಡುಗಡೆ ಮಾಡಬಹುದು. ಬೈಕ್ ಸದ್ಯಕ್ಕೆ ಅಭಿವೃದ್ಧಿಯಲ್ಲಿದೆ, ಆದರೆ ಉತ್ಪಾದನೆಗೆ ಹತ್ತಿರವಾಗಿದೆ. ಮುಂಬರುವ ಸಾಹಸಿ ಬೈಕ್ RTR 310 ಮತ್ತು RR 310 ನಿಂದ ಕಲಿಕೆಯನ್ನು ಪಡೆಯಬಹುದು. ಇದನ್ನು ಸಿಕ್ಸ್-ಸ್ಪೀಡ್ ಗೇರ್‌ಬಾಕ್ಸ್‌ಗೆ ಲಿಂಕ್ ಮಾಡಲಾಗುತ್ತದೆ. ಒಟ್ಟಾರೆ ಸ್ಟೈಲಿಂಗ್ ಸಾಮಾನ್ಯ ಸಾಹಸ ಬೈಕ್‌ನಂತೆ ಕಠಿಣವಾಗಿರುತ್ತದೆ ಎಂದು ನಿರೀಕ್ಷಿಸಬಹುದು. TVS 21-ಇಂಚ್ ಮುಂಭಾಗದ ಚಕ್ರವನ್ನು ಒದಗಿಸಬಹುದು. ಸಸ್ಪೆನ್ಶನ್ ಕೆಲಸಗಳನ್ನು USD ಫ್ರಂಟ್ ಫೋರ್ಕ್‌ಗಳು ಮತ್ತು ಮೋನೋಶಾಕ್ ಮಾಡುವ ಸಾಧ್ಯತೆ ಇದೆ.
ಪ್ರಕಟಣೆ ದಿನಾಂಕ: ನವೆಂಬರ್ 14, 2024
TVS ₹ 73,700 ರಲ್ಲಿ ಭಾರತದಲ್ಲಿ ಹೊಸ ಜ್ಯುಪಿಟರ್ 110 ಅನ್ನು ಪರಿಚಯಿಸುತ್ತಿದೆ
TVS ಭಾರತದಲ್ಲಿ ಅದರ ಮುಂದಿನ ಪೀಳಿಗೆಯ ಜ್ಯುಪಿಟರ್ ಅನ್ನು ಪ್ರಾರಂಭಿಸಿದೆ, ಇದು ದಶಕದ ಹಳೆಯ ಜ್ಯುಪಿಟರ್ 110 ಅನ್ನು ಬದಲಾಯಿಸಿದೆ. ಇದು ₹ 73,700 ರಿಂದ ಆರಂಭವಾಗುವ ಬೆಲೆಯೊಂದಿಗೆ ಆರು ಬಣ್ಣಗಳು ಮತ್ತು ನಾಲ್ಕು ವೇರಿಯಂಟ್‌ಗಳಲ್ಲಿ ಲಭ್ಯವಿದೆ. ಈ ಹೊಸ ಫ್ಯಾಮಿಲಿ ಸ್ಕೂಟರ್ ಅನ್ನು ಜ್ಯುಪಿಟರ್ 125 ಮಾಡಲು ಬಳಸಲಾಗುವ ಅದೇ ಚಾಸಿಸ್ ಸುತ್ತಲೂ ನಿರ್ಮಿಸಲಾಗಿದೆ. ಆದಾಗ್ಯೂ, ಒಟ್ಟಾರೆ ಸ್ಟೈಲಿಂಗ್ ಮೊದಲಿಗಿಂತ ತೀಕ್ಷ್ಣವಾಗಿ ಕಾಣುತ್ತದೆ. ಟರ್ನ್ ಇಂಡಿಕೇಟರ್‌ಗಳೊಂದಿಗೆ ವ್ಯಾಪಕ LED DRL ಉಪಸ್ಥಿತಿಯಿಂದಾಗಿ ಮುಂಭಾಗವು ಅತ್ಯುತ್ತಮವಾಗಿ ಕಾಣುತ್ತದೆ. ಹೊಸ ಜ್ಯುಪಿಟರ್ 110 USB ಚಾರ್ಜಿಂಗ್ ಪೋರ್ಟ್ ಮತ್ತು ಫ್ರಂಟ್ ಡಿಸ್ಕ್ ಬ್ರೇಕ್ ಜೊತೆಗೆ LED ಡಿಸ್‌ಪ್ಲೇ ಹೊಂದಿದೆ. ಆದಾಗ್ಯೂ, ಕಡಿಮೆ ವೇರಿಯಂಟ್ ಇದು LED ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರುವುದಿಲ್ಲ.
ಪ್ರಕಟಿಸಲಾದ ದಿನಾಂಕ: ಆಗಸ್ಟ್ 22, 2024