ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಟೂ ವೀಲರ್ ಇನ್ಶೂರೆನ್ಸ್
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಟೂ ವೀಲರ್ ಇನ್ಶೂರೆನ್ಸ್
₹538 ರಲ್ಲಿ ಪ್ರೀಮಿಯಂ ಆರಂಭ*

ವಾರ್ಷಿಕ ಪ್ರೀಮಿಯಂ ಆರಂಭ

ಕೇವಲ ₹538 ಕ್ಕೆ*
2000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

2000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳುˇ
ತುರ್ತು ರಸ್ತೆಬದಿಯ ನೆರವು

ತುರ್ತು ರಸ್ತೆಬದಿ

ಸಹಾಯ
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಟೂ ವೀಲರ್ ಇನ್ಶೂರೆನ್ಸ್ / ಹೋಂಡಾ ಟೂ ವೀಲರ್ ಇನ್ಶೂರೆನ್ಸ್

Honda ಟೂ ವೀಲರ್ ಇನ್ಶೂರೆನ್ಸ್

ಹೋಂಡಾ ಬೈಕ್ ಇನ್ಶೂರೆನ್ಸ್ ಆನ್ಲೈನ್

Over the past decade, Honda Motor Company has consistently maintained the trust and expectations of Indian buyers. It was established in 1948 and introduced its first motorcycle in 1949 - the 'Dream' D-type. Honda began its Indian operations in collaboration with the Hero Group in 1984. In 2001, Honda Motorcycle & Scooter India (HMSI) Pvt Ltd. was born, and with its first model - the Honda Activa, the company began to gain a strong foothold in the Indian market. Ten years later, in 2011, it formally split with the Hero Group. Honda motorcycles are worth a buy, considering the low maintenance cost, and if you plan to buy a Honda motorcycle, having a Honda two-wheeler insurance is advisable.

ಹೋಂಡಾ ಈಗ ಭಾರತದಲ್ಲಿ ನಾಲ್ಕು ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ ಮತ್ತು ದೇಶದಲ್ಲಿ ಮತ್ತು ವಿಶ್ವದ ಅತಿದೊಡ್ಡ ಟೂ ವೀಲರ್‌ಗಳ ಎರಡನೇ ಅತಿದೊಡ್ಡ ಉತ್ಪಾದಕರಾಗಿದೆ. ಆ್ಯಕ್ಟಿವಾ ಹೊರತುಪಡಿಸಿ, ಹೋಂಡಾದ ಪ್ರಸಿದ್ಧ ಮಾದರಿಗಳಲ್ಲಿ ಯುನಿಕಾರ್ನ್, ಡಿಯೋ, ಶೈನ್ ಇತ್ಯಾದಿ ಒಳಗೊಂಡಿವೆ. ಎಚ್‌ಡಿಎಫ್‌ಸಿ ಎರ್ಗೋ ನೋ ಕ್ಲೈಮ್ ಬೋನಸ್ ರಕ್ಷಣೆ, ಶೂನ್ಯ ಸವಕಳಿ ಇತ್ಯಾದಿಗಳಂತಹ ವಿವಿಧ ಆ್ಯಡ್ ಆನ್ ಕವರ್‌ಗಳೊಂದಿಗೆ ಹೋಂಡಾ ಬೈಕ್ ಇನ್ಶೂರೆನ್ಸ್ ಒದಗಿಸುತ್ತದೆ.

ಜನಪ್ರಿಯ ಹೋಂಡಾ ಟೂ ವೀಲರ್ ಮಾಡೆಲ್‌ಗಳು

1
ಹೋಂಡಾ ಆ್ಯಕ್ಟಿವಾ
2001 ರಲ್ಲಿ ಹೋಂಡಾದ ಬ್ಯಾಡ್ಜ್‌ ಹೊಂದಿರುವ ಮೊದಲ ಮಾಡೆಲ್ ಆಗಿ ಆಕ್ಟಿವಾ ಅನ್ನು ಪರಿಚಯಿಸಲಾಯಿತು. ಇವತ್ತಿಗೂ ಸಹ ಇದೊಂದು ಬೆಂಚ್‌ಮಾರ್ಕ್ ಸ್ಕೂಟರ್‌ ಆಗಿದೆ. ತನ್ನ ಆರನೇ ಆವೃತ್ತಿ ಹೊರತರುತ್ತಿರುವ ಆ್ಯಕ್ಟಿವಾ, ಸಂಪೂರ್ಣವಾಗಿ ಹೊಸತಾದ ಎಂಜಿನ್ ಪ್ಲಾಟ್‌ಫಾರ್ಮ್, ಹೋಂಡಾದ ಜನಪ್ರಿಯ eSP ತಂತ್ರಜ್ಞಾನ, ಅಡ್ಜಸ್ಟಿಬಲ್ ರೇರ್ ಸಸ್ಪೆನ್ಶನ್, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಶನ್ ಹೊಂದಿರುವ ದೊಡ್ಡ ಚಕ್ರಗಳು, ಮುಂತಾದ ವಿಶೇಷತೆಗಳನ್ನು ಪರಿಚಯಿಸುತ್ತಿದೆ.
2
ಹೋಂಡಾ SP125
ಹೋಂಡಾದ ಮೊದಲ BS VI-ಅನುಸರಣೆಯ ಮೋಟಾರ್‌ಸೈಕಲ್ ಆಗಿರುವ ಇದು, ಸಿಂಗಲ್-ಸಿಲಿಂಡರ್ ಹಾಗೂ ಫ್ಯುಯೆಲ್-ಇಂಜೆಕ್ಟೆಡ್ ಮೋಟಾರ್ ಹೊಂದಿರುವ 125 cc ಬೈಕ್ ಆಗಿದ್ದು, 7,500 RPM ನಲ್ಲಿ 10.8 PS ಜನರೇಟ್ ಮಾಡುತ್ತದೆ. ಇದು ACG ಸ್ಟಾರ್ಟರ್ ಹೊಂದಿದ್ದು, ಯಾವುದೇ ಸದ್ದು ಮಾಡದೇ ಸ್ಟಾರ್ಟ್ ಆಗುತ್ತದೆ. ಇದು ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಡ್ರಮ್ ಮತ್ತು ಡಿಸ್ಕ್ ಬ್ರೇಕ್‌ ಆಯ್ಕೆ ಇರುವ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದೆ.
3
ಹೋಂಡಾ ಯುನಿಕಾರ್ನ್
ಇದು 150-180 cc ವಿಭಾಗದ ನೋ-ನಾನ್‌ಸೆನ್ಸ್ ಕಮ್ಯೂಟರ್ ಬೈಕ್ ಆಗಿದೆ. 160-cc ಮೋಟಾರ್‌ ಹೊಂದಿರುವ ಇದು, 7,500 RPM ನಲ್ಲಿ 12.73 PS ಅನ್ನು ಉತ್ಪಾದಿಸುತ್ತದೆ. ಹೋಂಡಾ ಮಾಲೀಕತ್ವದ HET ಎಂಜಿನ್‌ನೊಂದಿಗೆ, ನೀವು ಯಾವಾಗಲೂ ನಯವಾದ ಮತ್ತು ವಿಶ್ವಾಸಾರ್ಹ ಕಾರ್ಯಕ್ಷಮತೆಯನ್ನು ಆನಂದಿಸಬಹುದು. ಇಂಧನದ ಸಮರ್ಪಕ ಬಳಕೆ ಮತ್ತು ಕಡಿಮೆ ಎಮಿಶನ್ ಖಚಿತಪಡಿಸಲು PGM-FI ವ್ಯವಸ್ಥೆಯು ಎಂಜಿನ್‌ಗೆ ಸೂಕ್ತ ಪ್ರಮಾಣದಲ್ಲಿ ಇಂಧನ ಹಂಚಿಕೆ ಮಾಡುತ್ತದೆ. ಇದರ ಉದ್ದನೆಯ ವೀಲ್‌ಬೇಸ್, ಒರಟಾದ ರಸ್ತೆಗಳಲ್ಲೂ ಹೆಚ್ಚಿನ ಸ್ಥಿರತೆ ಮತ್ತು ಆರಾಮವನ್ನು ಖಚಿತಪಡಿಸುತ್ತದೆ.
4
ಹೋಂಡಾ ಹಾರ್ನೆಟ್ 2.0
ಮೋಟೋ GPಯಿಂದ ಪ್ರೇರಣೆ ಪಡೆದಿರುವ ಹಾರ್ನೆಟ್ 2.0 ಮೂಲಕ, ಹೋಂಡಾ ಕಂಪನಿಯು 180-200cc ವಿಭಾಗಕ್ಕೆ ಪ್ರವೇಶಿಸಿತು. ಇದರ ಸಿಂಗಲ್-ಸಿಲಿಂಡರ್ 185 cc ಮೋಟಾರ್‌ ಹಾಗೂ PGM-FI ಸಿಸ್ಟಮ್‌, ಬಹುತೇಕ ರಸ್ತೆಗಳಲ್ಲಿ ಬೈಕ್‌ನ ಸವಾರಿಯನ್ನು ಬೆಣ್ಣೆಯಷ್ಟೇ ಮೃದುವಾಗಿಸುತ್ತದೆ. ಇದರ ಸ್ಪೋರ್ಟಿ ಮತ್ತು ಮಸ್ಕ್ಯುಲರ್ ಡಿಸೈನ್, ಹೊಸಯುಗದ ಬೈಕ್ ಪ್ರೇಮಿಗಳಿಗೆ ಬಹಳ ಇಷ್ಟವಾಗುತ್ತದೆ. ಜೊತೆಗೆ, ಇದು USD ಸಸ್ಪೆನ್ಶನ್‌ ಹೊಂದಿರುವ ಅತ್ಯಂತ ಕೈಗೆಟಕುವ ಬೈಕ್ ಆಗಿದ್ದು, ನಿಮ್ಮ ಖರೀದಿಗೆ ಹೆಚ್ಚಿನ ಮೌಲ್ಯವನ್ನು ಸೇರಿಸುತ್ತದೆ.
5
ಹೋಂಡಾ ಶೈನ್
100-125 ಸಿಸಿ ಟೂ ವೀಲರ್ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಮುಂಚೂಣಿಯಲ್ಲಿದೆ. ಇದಕ್ಕೆ ಹೋಂಡಾ ಶೈನ್ ಕೂಡಾ ಭಾಗಶಃ ಕಾರಣವಾಗಿದೆ. 124 cc BS VI-ಅನುಸರಣೆ ಎಂಜಿನ್‌ನಿಂದ ಹೊಂದಿರುವ ಈ ಬೈಕ್, 7,500 RPM ನಲ್ಲಿ 10.59 PS ಅನ್ನು ಉತ್ಪಾದಿಸುತ್ತದೆ. ಇದೊಂದು ನೋ-ಫ್ರಿಲ್ಸ್, ಕಮ್ಯೂಟರ್ ಬೈಕ್ ಆಗಿದ್ದು, ಇಂಧನ ದಕ್ಷತೆಯ ಜೊತೆಜೊತೆಗೆ ವಿಶ್ವಾಸಾರ್ಹ ಮತ್ತು ಗೌರವನೀಯ ಬೈಕ್‌ಗಾಗಿ ಹುಡುಕುತ್ತಿರುವ ಜನಸಾಮಾನ್ಯರಿಗೆಂದೇ ಇದನ್ನು ತಯಾರಿಸಲಾಗಿದೆ.
6
ಹೋಂಡಾ ಡಿಯೋ
ಈ ಅತ್ಯಂತ ಜನಪ್ರಿಯ ಸ್ಕೂಟರ್, ಯುವ ಪೀಳಿಗೆಯನ್ನು ಮತ್ತಷ್ಟು ಆಕರ್ಷಿಸಲು ಸ್ಟೈಲಿಶ್ ಮೇಕ್ಓವರ್ ಪಡೆದುಕೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಇದು PGM-FI ಫ್ಯುಯೆಲ್ ಸಿಸ್ಟಮ್ ಇರುವ110-cc ಮೋಟಾರ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಟೆಲಿಸ್ಕೋಪಿಕ್ ಸಸ್ಪೆನ್ಶನ್ ಮತ್ತು ದೊಡ್ಡ ಫ್ರಂಟ್ ವೀಲ್‌ಗಳ ಸೇರ್ಪಡೆಯಿಂದಾಗಿ, ಇದು ಹಿಂದಿನ ಆವೃತ್ತಿಗಿಂತ ಹೆಚ್ಚು ಆರಾಮದಾಯಕವಾಗಿದೆ. ಇದರ ಎಕ್ಸ್‌ಟರ್ನಲ್ ಫ್ಯುಯೆಲ್ ಲಿಡ್‌, ಪೆಟ್ರೋಲ್ ಹಾಕಿಸುವಾಗ ಸೀಟ್‌ನಿಂದ ಕೆಳಗಿಳಿಯುವ ಕಿರಿಕಿರಿ ತಪ್ಪಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ನೀಡುವ ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ವಿಧಗಳು

ಬೈಕ್ ಹೊಂದುವುದು ಸಾಕಾಗುವುದಿಲ್ಲ, ನಿಮಗೆ ಬೈಕ್ ಇನ್ಶೂರೆನ್ಸ್ ಕೂಡ ಬೇಕಾಗುತ್ತದೆ. ಇನ್ನಷ್ಟು ನಿಖರವಾಗಿ ಹೇಳುವುದಾದರೆ, ನಿಮ್ಮ ಕನಸಿನ ಟೂ ವೀಲರ್‌ನಲ್ಲಿ ಭಾರತೀಯ ರಸ್ತೆಗಳಲ್ಲಿ ಸವಾರಿ ಮಾಡಲು, ನಿಮಗೆ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ. ಇದು ಕಾನೂನು ಅವಶ್ಯಕತೆ ಮಾತ್ರವಲ್ಲ; ಆರ್ಥಿಕವಾಗಿಯೂ ಇದೊಂದು ಉತ್ತಮ ನಿರ್ಧಾರ. ಬೇಸಿಕ್ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ನಿಂದ ದೀರ್ಘಾವಧಿಯ ಟೂ ವೀಲರ್ ಸಮಗ್ರ ಇನ್ಶೂರೆನ್ಸ್ ಪ್ಯಾಕೇಜ್‌ವರೆಗೆ, ಅನಿರೀಕ್ಷಿತ ಘಟನೆಯ ಸಂದರ್ಭದಲ್ಲಿ ನಿಮ್ಮ ಪಾಲಿಸಿಯು ಹಣಕಾಸಿನ ಸುರಕ್ಷತಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ. ನಿಮಗೆ ಸಿಗುವ ಆಯ್ಕೆಗಳು ಹೀಗಿವೆ:

ಇದು ಥರ್ಡ್ ಪಾರ್ಟಿ ಹೊಣೆಗಾರಿಕೆ, ವೈಯಕ್ತಿಕ ಅಪಘಾತ ಕವರ್ ಮತ್ತು ನಿರ್ಣಾಯಕವಾಗಿ – ಸ್ವಂತ ಹಾನಿ ಬೈಕ್ ಇನ್ಶೂರೆನ್ಸ್ ಕವರ್ ಅನ್ನು ಒಳಗೊಂಡಿರುವುದರಿಂದ ಇದು ಅತ್ಯಂತ ಶಿಫಾರಸು ಮಾಡಲಾದ ಆಯ್ಕೆಯಾಗಿದೆ. ನೀವು ಯಾರಿಗಾದರೂ ಆಕ್ಸಿಡೆಂಟ್‌ ಮಾಡಿದಾಗ, ಇದು ನಿಮಗೆ, ನಿಮ್ಮ ಬೈಕ್‌ಗೆ ಮತ್ತು ನಿಮ್ಮ ಹೊಣೆಗಾರಿಕೆಗಳಿಗೆ ಸಂಪೂರ್ಣ ಹಣಕಾಸು ರಕ್ಷಣೆ ಒದಗಿಸುತ್ತದೆ. ಆಯ್ದ ಆ್ಯಡ್-ಆನ್‌ಗಳೊಂದಿಗೆ ನೀವು ನಿಮ್ಮ ಕವರೇಜ್ ಹೆಚ್ಚಿಸಬಹುದು.

X
ಎಲ್ಲ ರೀತಿಯ ರಕ್ಷಣೆ ಬಯಸುವ ಬೈಕ್ ಪ್ರೇಮಿಗಳಿಗೆ ಇದು ಸೂಕ್ತವಾಗಿದೆ. ಈ ಪ್ಲಾನ್ ಕೆಳಗಿನ ಕವರೇಜ್‌ ನೀಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ.

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಇನ್ನಷ್ಟು ಹುಡುಕಿ

ಇದು ಮೋಟಾರ್ ವಾಹನ ಕಾಯ್ದೆ, 1988 ಅಡಿಯಲ್ಲಿ ಕಡ್ಡಾಯವಾಗಿರುವ ಇನ್ಶೂರೆನ್ಸ್ ವಿಧವಾಗಿದೆ. ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಮರಣ ಅಥವಾ ಅಂಗವಿಕಲತೆ ಅಥವಾ ಅವರ ಆಸ್ತಿಗೆ ಆದ ಹಾನಿ, ಇತ್ಯಾದಿಗಳಿಂದ ಉಂಟಾಗುವ ಯಾವುದೇ ನಷ್ಟಗಳ ವಿರುದ್ಧ ಇದು ನಿಮಗೆ ಆರ್ಥಿಕ ರಕ್ಷಣೆ ನೀಡುತ್ತದೆ. ಇದು ಆಕ್ಸಿಡೆಂಟ್ ಕಾರಣದಿಂದ ನೀವು ಎದುರಿಸಬಹುದಾದ ಯಾವುದೇ ಕಾನೂನು ಹೊಣೆಗಾರಿಕೆಗಳನ್ನೂ ಕವರ್ ಮಾಡುತ್ತದೆ.

X
ಹೆಚ್ಚಾಗಿ ಬೈಕ್ ಬಳಸದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಕವರ್ ಮಾಡುವ ಅಂಶಗಳೆಂದರೆ,:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿ ಈಗಾಗಲೇ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರುವವರಿಗೆ ಸೂಕ್ತವಾಗಿದೆ ಮತ್ತು ಕವರೇಜ್ ವ್ಯಾಪ್ತಿಯನ್ನು ಹೆಚ್ಚಿಸಲು ಬಯಸುವವರಿಗೆ ಸೂಕ್ತವಾಗಿದೆ. ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ವಾಹನಕ್ಕೆ ಉಂಟಾಗುವ ಹಾನಿಯಿಂದ ಆಗುವ ನಷ್ಟಗಳ ವಿರುದ್ಧ ಇದು ನಿಮಗೆ ರಕ್ಷಣೆ ನೀಡುತ್ತದೆ. ಇದಲ್ಲದೆ, ನಿಮ್ಮ ಕವರೇಜ್ ಹೆಚ್ಚಿಸಲು ನೀವು ಆ್ಯಡ್-ಆನ್‌ಗಳ ಆಯ್ಕೆಯನ್ನು ಅನ್ಲಾಕ್ ಮಾಡಬಹುದು.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ಆ್ಯಡ್-ಆನ್‌ಗಳ ಆಯ್ಕೆ

ನಿಮ್ಮ ಬೈಕ್ ಮಾಲೀಕತ್ವದ ಅನುಭವಕ್ಕೆ ಅನುಕೂಲತೆ ಮತ್ತು ಸರ್ವತೋಮುಖ ರಕ್ಷಣೆ ಒದಗಿಸಲೆಂದೇ ವಿನ್ಯಾಸಗೊಳಿಸಲಾದ ಬಹುವಾರ್ಷಿಕ ಹೋಂಡಾ ಬೈಕ್ ಇನ್ಶೂರೆನ್ಸ್ ಪ್ಯಾಕೇಜ್, ಐದು ವರ್ಷದ ಥರ್ಡ್ ಪಾರ್ಟಿ ಹೊಣೆಗಾರಿಕೆ ಘಟಕ ಮತ್ತು ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಡ್ಯಾಮೇಜ್ ಇನ್ಶೂರೆನ್ಸ್ ಘಟಕವನ್ನು ಒಳಗೊಂಡಿದೆ. ಓನ್ ಡ್ಯಾಮೇಜ್ ಅಂಶವನ್ನು ಸಮಯಕ್ಕೆ ಸರಿಯಾಗಿ ನವೀಕರಿಸಲು ಮರೆತರೂ ನಿಮಗೆ ಆರ್ಥಿಕ ರಕ್ಷಣೆ ನೀಡಲಾಗುತ್ತದೆ.

X
ಹೊಚ್ಚ ಹೊಸ ಟೂ ವೀಲರ್ ಖರೀದಿಸಿದವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಒಳಗೊಳ್ಳುವುದೇನೆಂದರೆ:
ಬೈಕ್ ಆಕ್ಸಿಡೆಂಟ್

ಆಕ್ಸಿಡೆಂಟ್, ಕಳ್ಳತನ, ಬೆಂಕಿ ಅನಾಹುತ ಇತ್ಯಾದಿ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ನಲ್ಲಿ ಸೇರ್ಪಡಿಕೆ ಮತ್ತು ಹೊರಪಡಿಕೆಗಳು

ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ನಿಮ್ಮ ಪಾಲಿಸಿ ಪ್ರಕಾರವನ್ನು ಅವಲಂಬಿಸಿ ಕವರೇಜನ್ನು ಒದಗಿಸುತ್ತದೆ. ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಆದ ಹಾನಿಯ ವಿರುದ್ಧ ಮಾತ್ರ ಕವರೇಜನ್ನು ಒದಗಿಸುತ್ತದೆ, ಹೋಂಡಾಗಾಗಿ ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ:

ಅಪಘಾತಗಳು

ಅಪಘಾತಗಳು

ಆಕ್ಸಿಡೆಂಟ್‌ನಿಂದ ನಿಮ್ಮ ಸ್ವಂತ ಬೈಕ್‌ಗೆ ಹಾನಿಯಾಗುವುದರಿಂದ ಉಂಟಾಗುವ ಹಣಕಾಸು ನಷ್ಟಗಳು ಕವರ್ ಆಗುತ್ತವೆ.

ಬೆಂಕಿ ಮತ್ತು ಸ್ಫೋಟ

ಬೆಂಕಿ ಮತ್ತು ಸ್ಫೋಟ

ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ಬೈಕ್‌ಗೆ ಉಂಟಾದ ಹಾನಿಯು ಕವರ್ ಆಗುತ್ತದೆ.

ಕಳ್ಳತನ

ಕಳ್ಳತನ

ನಿಮ್ಮ ಬೈಕ್ ಕಳ್ಳತನವಾದರೆ, ನಿಮಗೆ ಬೈಕಿನ IDV ಪರಿಹಾರ ನೀಡಲಾಗುತ್ತದೆ.

ವಿಪತ್ತುಗಳು

ವಿಪತ್ತುಗಳು

ಭೂಕಂಪ, ಬಿರುಗಾಳಿ, ಪ್ರವಾಹ, ಗಲಭೆ, ವಿಧ್ವಂಸಕ ಕೃತ್ಯ, ಮುಂತಾದ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ಕವರ್ ಮಾಡಲಾಗುತ್ತದೆ.

ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

₹15 ಲಕ್ಷದೊಳಗಿನ ನಿಮ್ಮ ಚಿಕಿತ್ಸೆ ಶುಲ್ಕಗಳನ್ನು ಭರಿಸಲಾಗುತ್ತದೆ.

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ವ್ಯಕ್ತಿಗೆ ಸಂಭವಿಸುವ ಗಾಯ, ಅಂಗವೈಕಲ್ಯ ಅಥವಾ ಸಾವು ಮತ್ತು ಅವರ ಆಸ್ತಿಗೆ ಆದ ಹಾನಿಯನ್ನು ಕೂಡ ಕವರ್ ಮಾಡಲಾಗುತ್ತದೆ.

ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ಆ್ಯಡ್-ಆನ್‌ಗಳು

ಶೂನ್ಯ ಸವಕಳಿ ಕವರ್ - ವಾಹನಕ್ಕಾಗಿ ಇರುವ ಇನ್ಶೂರೆನ್ಸ್
ಶೂನ್ಯ ಸವಕಳಿ
ಶೂನ್ಯ ಸವಕಳಿ ಆ್ಯಡ್-ಆನ್ ಕವರ್ ನೊಂದಿಗೆ, ಇನ್ಶೂರರ್ ಕ್ಲೈಮ್ ಸೆಟಲ್ ಮಾಡುವಾಗ ಬೈಕ್ ಅಥವಾ ಸ್ಕೂಟರ್ ಭಾಗಗಳಲ್ಲಿ ಸವಕಳಿಯನ್ನು ಪರಿಗಣಿಸುವುದಿಲ್ಲ. ಪಾಲಿಸಿದಾರರು ಸವಕಳಿ ಮೌಲ್ಯದ ಯಾವುದೇ ಕಡಿತವಿಲ್ಲದೆ ಹಾನಿಗೊಳಗಾದ ಭಾಗಕ್ಕೆ ಸಂಪೂರ್ಣ ಕ್ಲೈಮ್ ಮೊತ್ತವನ್ನು ಪಡೆಯುತ್ತಾರೆ.
ನೋ ಕ್ಲೇಮ್‌ ಬೋನಸ್ ರಕ್ಷಣೆ - ಕಾರ್ ಇನ್ಶೂರೆನ್ಸ್ ನವೀಕರಣ
ನೋ ಕ್ಲೈಮ್ ಬೋನಸ್ (NCB) ರಕ್ಷಣೆ
ಹಿಂದಿನ ಪಾಲಿಸಿ ಅವಧಿಯಲ್ಲಿ ಯಾವುದೇ ಕ್ಲೈಮ್ ನೋಂದಣಿ ಮಾಡದಿದ್ದರೆ ನೋ ಕ್ಲೈಮ್ ಬೋನಸ್ (NCB) ಆ್ಯಡ್-ಆನ್ ಕವರ್ ಪಾಲಿಸಿದಾರರಿಗೆ NCB ಪ್ರಯೋಜನವನ್ನು ಪಡೆಯಲು ಅರ್ಹರಾಗಿರುತ್ತದೆ.
ತುರ್ತು ನೆರವಿನ ಕವರ್ - ಕಾರ್ ಇನ್ಶೂರೆನ್ಸ್ ಕ್ಲೇಮ್‌
ತುರ್ತು ಸಹಾಯ ಕವರ್
ಈ ಆ್ಯಡ್-ಆನ್ ಕವರ್ ಅನ್ನು ರಸ್ತೆಬದಿಯ ಸಹಾಯ ಕವರ್ ಎಂದು ಕೂಡ ಕರೆಯಲಾಗುತ್ತದೆ. ಇದು ಪಾಲಿಸಿದಾರರಿಗೆ ಅವರ ಇನ್ಶೂರೆನ್ಸ್ ಮಾಡಿದ ಟೂ ವೀಲರ್ ಹೈವೇ ಮಧ್ಯದಲ್ಲಿ ಬ್ರೇಕ್ ಡೌನ್ ಆದಾಗ ವಿಮಾದಾತರು ನೀಡುವ ತುರ್ತು ಸಹಾಯವಾಗಿದೆ.
ರಿಟರ್ನ್ ಟು ಇನ್ವಾಯ್ಸ್ - ಕಾರಿನ ಇನ್ಶೂರೆನ್ಸ್ ಪಾಲಿಸಿ
ರಿಟರ್ನ್ ಟು ಇನ್ವಾಯ್ಸ್
ನಿಮ್ಮ ಬೈಕ್ ಅಥವಾ ಸ್ಕೂಟರ್ ಕಳ್ಳತನವಾದರೆ ಅಥವಾ ರಿಪೇರಿ ಮಾಡಲಾಗದ ಸ್ಥಿತಿಗೆ ತಲುಪಿದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನೀವು ಅದನ್ನು ಖರೀದಿಸಿದಾಗ ನಿಮ್ಮ ಟೂ ವೀಲರ್ ಇನ್ವಾಯ್ಸ್ ಮೌಲ್ಯಕ್ಕೆ ಸಮನಾದ ಮೊತ್ತವನ್ನು ಕ್ಲೈಮ್ ಮಾಡಲು ಅರ್ಹತೆ ಒದಗಿಸುತ್ತದೆ.
ಇದು ಉತ್ತಮ ಕಾರ್ ಇನ್ಶೂರೆನ್ಸ್ ಪೂರೈಕೆದಾರರು ನೀಡುವ ಎಂಜಿನ್ ಮತ್ತು ಗೇರ್‌ ಬಾಕ್ಸ್ ರಕ್ಷಕ
ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್
ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಟರ್ ಆ್ಯಡ್-ಆನ್ ಕವರ್ ಎಂಜಿನ್ ಮತ್ತು ಗೇರ್‌ಬಾಕ್ಸ್ ಚೈಲ್ಡ್ ಪಾರ್ಟ್‌ಗಳ ರಿಪೇರಿ ಮತ್ತು ಬದಲಿ ವೆಚ್ಚಕ್ಕಾಗಿ ವಿಮಾದಾತರಿಗೆ ಕವರೇಜ್ ಒದಗಿಸುತ್ತದೆ. ನೀರಿನ ಪ್ರವೇಶ, ತೈಲ ಸೋರಿಕೆ ಮತ್ತು ಗೇರ್‌ಬಾಕ್ಸ್ ಹಾನಿಯಿಂದಾಗಿ ಹಾನಿ ಉಂಟಾದರೆ ಕವರೇಜ್ ನೀಡಲಾಗುತ್ತದೆ.

ಹೋಂಡಾ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು ಹೇಗೆ

ನೀವು ಹೋಂಡಾ ಮೋಟಾರ್‌ಸೈಕಲ್‌ನ ಮಾಲೀಕರಾಗಿದ್ದರೆ, ಟೂ ವೀಲರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವುದು ಅಥವಾ ನವೀಕರಿಸುವುದು ಸೂಕ್ತವಾಗಿದೆ. ನೀವು ಹೋಂಡಾ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:
ಹಂತ 1. ನಮ್ಮ ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ಬೈಕ್ ಇನ್ಶೂರೆನ್ಸ್ ಪ್ರಾಡಕ್ಟಿಗೆ ನ್ಯಾವಿಗೇಟ್ ಮಾಡಿ ಮತ್ತು ನಿಮ್ಮ ಬೈಕ್ ನೋಂದಣಿ ನಂಬರ್ ಸೇರಿದಂತೆ ವಿವರಗಳನ್ನು ಭರ್ತಿ ಮಾಡಿ ಮತ್ತು ನಂತರ ಕೋಟ್ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.
ಹಂತ 2: ಸಮಗ್ರ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆ ಕವರ್ ನಡುವೆ ಆಯ್ಕೆ ಮಾಡಿ. ನೀವು ಒಂದು ವರ್ಷದಿಂದ ಮೂರು ವರ್ಷಗಳವರೆಗಿನ ಪ್ಲಾನ್ ಆಯ್ಕೆ ಮಾಡಬಹುದು.
ಹಂತ 3: ನೀವು ಪ್ರಯಾಣಿಕರು ಮತ್ತು ಪಾವತಿಸಿದ ಚಾಲಕರಿಗೆ ವೈಯಕ್ತಿಕ ಅಪಘಾತ ಕವರ್ ಅನ್ನು ಕೂಡ ಸೇರಿಸಬಹುದು. ಇದಲ್ಲದೆ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಕವರ್, ಶೂನ್ಯ ಸವಕಳಿ ಇತ್ಯಾದಿಗಳಂತಹ ಆ್ಯಡ್-ಆನ್ ಆಯ್ಕೆ ಮಾಡುವ ಮೂಲಕ ನೀವು ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು
ಹಂತ 4: ನಿಮ್ಮ ಕೊನೆಯ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ವಿವರಗಳನ್ನು ನೀಡಿ. ಉದಾ. ಹಿಂದಿನ ಪಾಲಿಸಿ ಪ್ರಕಾರ (ಸಮಗ್ರ ಅಥವಾ ಥರ್ಡ್ ಪಾರ್ಟಿ, ಪಾಲಿಸಿ ಗಡುವು ದಿನಾಂಕ, ಮಾಡಲಾದ ನಿಮ್ಮ ಕ್ಲೈಮ್‌ಗಳ ವಿವರಗಳು, ಯಾವುದಾದರೂ ಇದ್ದರೆ)
ಹಂತ 5: ನೀವು ಈಗ ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು
ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪ್ರೀಮಿಯಂ ಪಾವತಿಸಿ.
ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ.

ಸೆಕೆಂಡ್-ಹ್ಯಾಂಡ್ ಹೋಂಡಾ ಬೈಕ್ಗಾಗಿ ಟೂ ವೀಲರ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ

ನೀವು ಸೆಕೆಂಡ್‌ಹ್ಯಾಂಡ್ ಹೋಂಡಾ ಬೈಕ್ ಖರೀದಿಸಿದರೂ, ನೀವು ಅದಕ್ಕಾಗಿ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಸರಿಯಾದ ಬೈಕ್ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಸವಾರಿ ಮಾಡುವುದು ಕಾನೂನುಬಾಹಿರವಾಗಿದೆ.

ಸೆಕೆಂಡ್-ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಖರೀದಿಸುವ ಮುನ್ನ, ಈ ಕೆಳಗಿನ ವಿಷಯಗಳನ್ನು ನೆನಪಿಡಿ:

• ಹೊಸ RC ಹೊಸ ಮಾಲೀಕರ ಹೆಸರಿನಲ್ಲಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ

• ಇನ್ಶೂರ್ಡ್‌ ಡಿಕ್ಲೇರ್ಡ್ ವ್ಯಾಲ್ಯೂ (IDV) ಪರಿಶೀಲಿಸಿ

• ನೀವು ಈಗಾಗಲೇ ಚಾಲ್ತಿ ಇರುವ ಬೈಕ್ ಇನ್ಶೂರೆನ್ಸ್ ಪಾಲಿಸಿ ಹೊಂದಿದ್ದರೆ, ರಿಯಾಯಿತಿ ಪಡೆಯಲು ನೋ ಕ್ಲೇಮ್ ಬೋನಸ್ (NCB) ವರ್ಗಾವಣೆ ಮಾಡಿಸಿಕೊಳ್ಳಿ

• ಹಲವಾರು ಆ್ಯಡ್-ಆನ್ ಕವರ್‌ಗಳಿಂದ ಆಯ್ಕೆಮಾಡಿ (ತುರ್ತು ರಸ್ತೆಬದಿಯ ನೆರವು, ನೋ ಕ್ಲೈಮ್ ಬೋನಸ್ ರಕ್ಷಣೆ, ಶೂನ್ಯ ಸವಕಳಿ ಕವರ್ ಇತ್ಯಾದಿ)

ಸೆಕೆಂಡ್ ಹ್ಯಾಂಡ್ ಹೋಂಡಾ ಬೈಕ್‌ಗಳಿಗಾಗಿ ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಖರೀದಿಸುವ ಹಂತಗಳನ್ನು ಈಗ ನೋಡೋಣ

ಹಂತ 1.. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನ ಬೈಕ್ ಇನ್ಶೂರೆನ್ಸ್ ವಿಭಾಗಕ್ಕೆ ಭೇಟಿ ನೀಡಿ, ನಿಮ್ಮ ಸೆಕೆಂಡ್‌ಹ್ಯಾಂಡ್ ಹೋಂಡಾ ಬೈಕ್ ನೋಂದಣಿ ನಂಬರ್ ನಮೂದಿಸಿ ಮತ್ತು ಕೋಟ್ ಪಡೆಯಿರಿ ಮೇಲೆ ಕ್ಲಿಕ್ ಮಾಡಿ.

ಹಂತ 2: ನಿಮ್ಮ ಸೆಕೆಂಡ್‌ಹ್ಯಾಂಡ್ ಬೈಕ್ ತಯಾರಿಕೆ ಮತ್ತು ಮಾಡೆಲ್ ನಮೂದಿಸಿ.

ಹಂತ 3: ನಿಮ್ಮ ಹಿಂದಿನ ಸೆಕೆಂಡ್‌ಹ್ಯಾಂಡ್ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಬಗ್ಗೆ ವಿವರಗಳನ್ನು ನೀಡಿ.

ಹಂತ 4: ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಮತ್ತು ಸಮಗ್ರ ಕವರ್ ನಡುವೆ ಆಯ್ಕೆಮಾಡಿ.

ಹಂತ 5: ನೀವು ಈಗ ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು.

ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಅನ್ನು ನವೀಕರಿಸುವುದು ಹೇಗೆ?

ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ನವೀಕರಣ ಮಾಡಲು ಕೆಲವೇ ನಿಮಿಷಗಳು ಸಾಕು. ನಿಮ್ಮ ಮನೆಯಲ್ಲೇ ಆರಾಮವಾಗಿ ಕುಳಿತು, ಕೆಲವೇ ಕ್ಲಿಕ್‌ಗಳಲ್ಲಿ ಇದನ್ನು ಮುಗಿಸಬಹುದು. ಈ ಕೆಳಗೆ ನಮೂದಿಸಿದ ನಾಲ್ಕು ಹಂತದ ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಈಗಲೇ ಕವರೇಜ್ ಪಡೆಯಿರಿ!

  • ಹಂತ #1
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಾಲಿಸಿಯನ್ನು ಖರೀದಿಸಲು ಅಥವಾ ನವೀಕರಿಸಲು ಆಯ್ಕೆ ಮಾಡಿ
  • ಹಂತ #2
    ಹಂತ #2
    ನಿಮ್ಮ ಬೈಕ್ ವಿವರಗಳು, ನೋಂದಣಿ, ನಗರ ಮತ್ತು ಯಾವುದಾದರೂ ಹಿಂದಿನ ಪಾಲಿಸಿಗಳಿದ್ದಲ್ಲಿ, ಅದರ ವಿವರಗಳನ್ನೂ ನಮೂದಿಸಿ
  • ಹಂತ #3
    ಹಂತ #3
    ಕೋಟ್ ಸ್ವೀಕರಿಸಲು, ನಿಮ್ಮ ಇಮೇಲ್ ID, ಮತ್ತು ಫೋನ್ ನಂಬರ್ ಒದಗಿಸಿ
  • ಹಂತ #4
    ಹಂತ #4
    ಆನ್ಲೈನ್ ಪಾವತಿ ಮಾಡಿ, ತಕ್ಷಣ ಕವರ್ ಪಡೆಯಿರಿ!

ನಿಮ್ಮ ಹೋಂಡಾ ಟೂ ವೀಲರ್‌ಗಾಗಿ ಗಡುವು ಮುಗಿದ ಪಾಲಿಸಿಯನ್ನು ನವೀಕರಿಸುವುದು ಹೇಗೆ?

ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಅವಧಿ ಮುಗಿದಿದ್ದರೆ, RTO ಗೆ ಹೆಚ್ಚಿನ ದಂಡವನ್ನು ಪಾವತಿಸುವುದನ್ನು ತಪ್ಪಿಸಲು ಅದನ್ನು ನವೀಕರಿಸಲು ಸಲಹೆ ನೀಡಲಾಗುತ್ತದೆ. 1988 ರ ಮೋಟಾರ್ ವಾಹನ ಕಾಯ್ದೆಯು ಪ್ರತಿ ವಾಹನ ಮಾಲೀಕರು ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಕನಿಷ್ಠ ಥರ್ಡ್ ಪಾರ್ಟಿ ಕವರ್ ಹೊಂದಿರಬೇಕು ಎಂದು ಹೇಳುತ್ತದೆ.
ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ನವೀಕರಣದ ಹಂತಗಳನ್ನು ಈಗ ನೋಡೋಣ.

ಹಂತ1:. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಲ್ಲಿ ಬೈಕ್ ಇನ್ಶೂರೆನ್ಸ್ ವಿಭಾಗಕ್ಕೆ ಭೇಟಿ ನೀಡಿ ಮತ್ತು ನಿಮ್ಮ ಹಿಂದಿನ ಪಾಲಿಸಿಯು ಎಚ್‌ಡಿಎಫ್‌ಸಿ ಎರ್ಗೋದಲ್ಲಿದ್ದರೆ, ಪಾಲಿಸಿ ನವೀಕರಣವನ್ನು ಆಯ್ಕೆಮಾಡಿ. ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಇನ್ನೊಂದು ವಿಮಾದಾತರೊಂದಿಗೆ ಇದ್ದರೆ, ನೀವು ನಿಮ್ಮ ಟೂ ವೀಲರ್ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
Step 2: Enter details associated with your HDFC ERGO policy that you want to renew, include or exclude add-on covers, and complete the journey by paying the bike insurance premium online. Choose comprehensive or third-party cover if your policy was with another insurer. After that, you can select add-ons if you opt for comprehensive cover.
ಹಂತ 3: ನವೀಕರಿಸಲಾದ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ಅಥವಾ ನಿಮ್ಮ ವಾಟ್ಸಾಪ್‌ಗೆ ಮೇಲ್ ಮಾಡಲಾಗುತ್ತದೆ.

ಹೋಂಡಾ ಕ್ಯಾಶ್‌ಲೆಸ್ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆ

ನಿಮ್ಮ ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯ ಮೇಲೆ ನಗದುರಹಿತ ಕ್ಲೈಮ್ ಮಾಡಲು ನೀವು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕಾಗುತ್ತದೆ:
• ನಮ್ಮ ಸಹಾಯವಾಣಿ ನಂಬರ್‌ಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವ ಮೂಲಕ ಘಟನೆಗೆ ಸಂಬಂಧಿಸಿದಂತೆ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ತಿಳಿಸಿ.
• ನಿಮ್ಮ ಟೂ ವೀಲರ್ ಅನ್ನು ಎಚ್‌ಡಿಎಫ್‌ಸಿ ಎರ್ಗೋ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗೆ ಕೊಂಡೊಯ್ಯಿರಿ. ಇಲ್ಲಿ, ವಿಮಾದಾತರು ನೇಮಕ ಮಾಡಿದ ವ್ಯಕ್ತಿಯಿಂದ ನಿಮ್ಮ ವಾಹನವನ್ನು ಪರಿಶೀಲಿಸಲಾಗುತ್ತದೆ.
• ನಮ್ಮ ಅನುಮೋದನೆಯನ್ನು ಪಡೆದ ನಂತರ, ಗ್ಯಾರೇಜ್ ನಿಮ್ಮ ಬೈಕ್ ರಿಪೇರಿ ಮಾಡಲು ಆರಂಭಿಸುತ್ತದೆ.
• ಇದರ ನಡುವೆ, ಅಗತ್ಯವಿರುವ ಡಾಕ್ಯುಮೆಂಟ್‌ಗಳು ಮತ್ತು ಸರಿಯಾಗಿ ಭರ್ತಿ ಮಾಡಿದ ಕ್ಲೈಮ್ ಫಾರ್ಮ್ ಅನ್ನು ನಮಗೆ ಸಲ್ಲಿಸಿ. ಯಾವುದೇ ನಿರ್ದಿಷ್ಟ ಡಾಕ್ಯುಮೆಂಟ್ ಅಗತ್ಯವಿದ್ದರೆ, ನಾವು ಅದರ ಬಗ್ಗೆ ನಿಮಗೆ ತಿಳಿಸುತ್ತೇವೆ.
• ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡವು ಬೈಕ್ ಇನ್ಶೂರೆನ್ಸ್‌ನಲ್ಲಿ ನಗದುರಹಿತ ಕ್ಲೈಮ್ ವಿವರಗಳನ್ನು ಪರಿಶೀಲಿಸುತ್ತದೆ ಮತ್ತು ಕ್ಲೈಮ್ ಅನ್ನು ಅಂಗೀಕರಿಸುತ್ತದೆ ಅಥವಾ ತಿರಸ್ಕರಿಸುತ್ತದೆ.
• ಯಶಸ್ವಿ ಪರಿಶೀಲನೆಯ ನಂತರ, ರಿಪೇರಿ ವೆಚ್ಚಗಳನ್ನು ನೇರವಾಗಿ ಗ್ಯಾರೇಜ್‌ಗೆ ಪಾವತಿಸುವ ಮೂಲಕ ನಾವು ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಸೆಟಲ್ ಮಾಡುತ್ತೇವೆ. ಅನ್ವಯವಾಗುವ ಕಡಿತಗಳು ಯಾವುದಾದರೂ ಇದ್ದರೆ, ಅದನ್ನು ನಿಮ್ಮ ಜೇಬಿನಿಂದ ಪಾವತಿಸಬೇಕಾಗಬಹುದು ಎಂಬುದನ್ನು ನೆನಪಿಡಿ.
ಗಮನಿಸಿ: ಥರ್ಡ್ ಪಾರ್ಟಿ ಹಾನಿಯ ಸಂದರ್ಭದಲ್ಲಿ, ಅಪಘಾತದಲ್ಲಿ ಒಳಗೊಂಡಿರುವ ಇತರ ವಾಹನದ ಮಾಲೀಕರ ವಿವರಗಳನ್ನು ನೀವು ತೆಗೆದುಕೊಳ್ಳಬಹುದು. ಆದಾಗ್ಯೂ, ನಿಮ್ಮ ವಾಹನದ ಗಮನಾರ್ಹ ಹಾನಿ ಅಥವಾ ಕಳ್ಳತನದ ಸಂದರ್ಭದಲ್ಲಿ, ನಗದುರಹಿತ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ನೀವು ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ವರದಿಯನ್ನು ಸಲ್ಲಿಸಬೇಕು.

ಹೋಂಡಾ ವೆಚ್ಚ ಮರಳಿಸುವಿಕೆ ಬೈಕ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆ

ಹೋಂಡಾ ಬೈಕ್ ಇನ್ಶೂರೆನ್ಸ್ ಅಥವಾ ಹೋಂಡಾ ಸ್ಕೂಟಿ ಇನ್ಶೂರೆನ್ಸ್ ಪಾಲಿಸಿಗೆ ವೆಚ್ಚ ಮರಳಿಸುವಿಕೆ ಕ್ಲೈಮ್ ಸಲ್ಲಿಸುವಾಗ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕು
• ಹಂತ 1: ಕರೆ ಮೂಲಕ ಅಥವಾ ನಮ್ಮ ವೆಬ್‌ಸೈಟ್ ಮೂಲಕ ನೋಂದಣಿ ಮಾಡುವುದರೊಂದಿಗೆ ಅವರನ್ನು ಸಂಪರ್ಕಿಸುವ ಮೂಲಕ ಘಟನೆಗೆ ಸಂಬಂಧಿಸಿದಂತೆ ಎಚ್‌ಡಿಎಫ್‌ಸಿ ಎರ್ಗೋ ಕ್ಲೈಮ್ ತಂಡಕ್ಕೆ ಕ್ಲೈಮ್ ಮಾಹಿತಿ ನೀಡಿ. ನಮ್ಮ ಸಹಾಯವಾಣಿ ನಂಬರಿಗೆ ಕರೆ ಮಾಡುವ ಮೂಲಕ ಅಥವಾ 8169500500 ರಲ್ಲಿ ವಾಟ್ಸಾಪ್‌ನಲ್ಲಿ ಮೆಸೇಜ್ ಕಳುಹಿಸುವ ಮೂಲಕ ನಮ್ಮ ಕ್ಲೈಮ್ ತಂಡವನ್ನು ಸಂಪರ್ಕಿಸಿ. ನಮ್ಮ ಏಜೆಂಟ್ ಒದಗಿಸಿದ ಲಿಂಕ್‌ನೊಂದಿಗೆ, ನೀವು ಡಾಕ್ಯುಮೆಂಟ್‌ಗಳನ್ನು ಆನ್ಲೈನಿನಲ್ಲಿ ಅಪ್ಲೋಡ್ ಮಾಡಬಹುದು. ಸ್ವಯಂ ತಪಾಸಣೆ ಅಥವಾ ಆ್ಯಪ್ ಮೂಲಕ ಸರ್ವೇಯರ್ ಇಲ್ಲವೇ ವರ್ಕ್‌ಶಾಪ್ ಪಾರ್ಟ್‌ನರ್ ನಡೆಸುವ ಡಿಜಿಟಲ್ ತಪಾಸಣೆಯನ್ನು ಆರಿಸಿಕೊಳ್ಳಬಹುದು.
• ಹಂತ 2: ಅಪಘಾತದಲ್ಲಿ ಒಳಗೊಂಡಿರುವ ವಾಹನಗಳ ನೋಂದಣಿ ಸಂಖ್ಯೆಯನ್ನು ಗಮನಿಸಿ.
• ಹಂತ 3: ಅಗತ್ಯವಿದ್ದರೆ, ಹತ್ತಿರದ ಪೊಲೀಸ್ ಸ್ಟೇಷನ್‌ನಲ್ಲಿ FIR ಫೈಲ್ ಮಾಡಿ. ಕ್ಲೈಮ್ ಫೈಲ್ ಮಾಡಲು FIR ಪ್ರತಿ ಅಗತ್ಯವಿರಬಹುದು.
• ಹಂತ 4: ಸಮಯ ಮತ್ತು ಸ್ಥಳದಂತಹ ಅಪಘಾತದ ವಿವರಗಳನ್ನು ನೋಟ್ ಮಾಡಿ. ಯಾವುದೇ ಸಾಕ್ಷಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ನೋಟ್ ಮಾಡಿ.
• ಹಂತ 5: ಕ್ಲೈಮ್ ಟ್ರ್ಯಾಕರ್ ಮೂಲಕ ನಿಮ್ಮ ಕ್ಲೈಮ್ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.
• ಹಂತ 6: ನಿಮ್ಮ ಕ್ಲೈಮ್ ಅನುಮೋದನೆ ಪಡೆದಾಗ ನೀವು ಮೆಸೇಜ್ ಮೂಲಕ ನೋಟಿಫಿಕೇಶನ್ ಪಡೆಯುತ್ತೀರಿ.

ಎಚ್‌ಡಿಎಫ್‌ಸಿ ಎರ್ಗೋ ಏಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು?

ಬೈಕ್ ಇನ್ಶೂರೆನ್ಸ್, ಬೈಕ್ ಮಾಲೀಕತ್ವದ ನಿರ್ಣಾಯಕ ಅಂಶವಾಗಿದೆ. ಕಾನೂನುಬದ್ಧವಾಗಿ ಸವಾರಿ ಮಾಡಲು ಇನ್ಶೂರೆನ್ಸ್ ಒಂದು ಕಡ್ಡಾಯ ಅವಶ್ಯಕತೆಯಾಗಿದೆ. ಜೊತೆಗೆ, ಅಪಘಾತಗಳು ಯಾವುದೇ ಮುನ್ಸೂಚನೆ ಇಲ್ಲದೆ ಸಂಭವಿಸುವುದರಿಂದ, ಆರ್ಥಿಕವಾಗಿಯೂ ಇದೊಂದು ಜಾಣ್ಮೆಯ ನಿರ್ಧಾರವಾಗಿದೆ. ಇದಲ್ಲದೆ, ನೀವು ಎಷ್ಟೇ ಸುರಕ್ಷತೆ ವಹಿಸಿದರೂ, ನಿಮ್ಮ ಸುರಕ್ಷತೆಯು ರಸ್ತೆಯಲ್ಲಿ ಓಡಾಡುವ ಇತರರನ್ನು ಕೂಡ ಅವಲಂಬಿಸಿರುತ್ತದೆ. ಯಾವುದೇ ಅಪಘಾತವು ಭಾರೀ ಪ್ರಮಾಣದ ರಿಪೇರಿ ಖರ್ಚುಗಳನ್ನು ನಿಮ್ಮ ಮೇಲೆ ಹೇರುತ್ತದೆ. ಈ ಅನಿರೀಕ್ಷಿತ ಮತ್ತು ಕೈಯಾರೆ ಮಾಡಬೇಕಾದ ಖರ್ಚುಗಳನ್ನು ತಡೆಯುವಲ್ಲಿ, ಬೈಕ್ ಇನ್ಶೂರೆನ್ಸ್ ನಿಮಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಸರಿಯಾದ ವಿಮಾದಾತರನ್ನು ಆಯ್ಕೆ ಮಾಡುವ ಅಗತ್ಯವಿದೆ. ನಿಮ್ಮ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋವನ್ನೇ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಕಾರಣಗಳು ಹೀಗಿವೆ

ವ್ಯಾಪಕ ಸೇವೆಗಳು

ವ್ಯಾಪಕ ಸೇವೆ

ನಿಮ್ಮ ನೆರೆಹೊರೆಯಲ್ಲಿ ಮತ್ತು ದೇಶದಾದ್ಯಂತ ಗಣನೀಯ ಉಪಸ್ಥಿತಿ ಹೊಂದಿರುವ ವಿಮಾದಾತರನ್ನು ನೀವು ಆಯ್ದುಕೊಳ್ಳಬೇಕು. ಭಾರತದಾದ್ಯಂತ 7100 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿರುವ ಎಚ್‌ಡಿಎಫ್‌ಸಿ ಎರ್ಗೋ, ಸದಾ ನಿಮ್ಮ ಸಹಾಯಕ್ಕೆ ನಿಲ್ಲುತ್ತದೆ.

24x7 ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು

24x7 ರಸ್ತೆಬದಿಯ ನೆರವು ಸೌಲಭ್ಯದಿಂದಾಗಿ, ವಾಹನದ ಬ್ರೇಕ್‌ಡೌನ್ ಸಂದರ್ಭದಲ್ಲಿ ನೀವು ಎಂದಿಗೂ ಕೈಚೆಲ್ಲಿ ಕೂರಬೇಕಾಗಿಲ್ಲ.

ಒಂದು ಕೋಟಿಗಿಂತ ಹೆಚ್ಚು ಗ್ರಾಹಕರು

ಒಂದು ಕೋಟಿಗಿಂತ ಹೆಚ್ಚು ಗ್ರಾಹಕರು

ಎಚ್‌ಡಿಎಫ್‌ಸಿ ಎರ್ಗೋ 1.5 ಕೋಟಿಗೂ ಹೆಚ್ಚು ಸಂತೃಪ್ತ ಗ್ರಾಹಕರನ್ನು ಹೊಂದಿದೆ. ಹಾಗಾಗಿ, ನಿಮ್ಮ ಅಗತ್ಯಗಳ ಪೂರೈಕೆಯ ಬಗ್ಗೆ ಯಾವ ಚಿಂತೆಯೂ ಬೇಡ.

ತಡರಾತ್ರಿಯ ರಿಪೇರಿಗಳು

ಓವರ್‌ನೈಟ್ ಸೇವೆಗಳು

ನಿಮ್ಮ ಕಾರನ್ನು ಸರ್ವಿಸ್‌ಗೆ ಕೊಟ್ಟಾಗ, ನಿಮ್ಮ ದಿನಚರಿ ಏರುಪೇರಾಗಬಹುದು. ಆದರೆ, ನಾವು ಸಣ್ಣಪುಟ್ಟ ಹಾನಿಗಳಿಗೆ ಓವರ್‌ನೈಟ್ ಸೇವೆ ಒದಗಿಸುವುದರಿಂದ, ನೀವು ರಾತ್ರಿಯಿಡೀ ನೆಮ್ಮದಿಯಿಂದ ನಿದ್ದೆ ಮಾಡಿ. ನಿಮ್ಮ ಬೆಳಗಿನ ಪ್ರಯಾಣದ ವೇಳೆಗೆಲ್ಲಾ ಕಾರು ನಿಮ್ಮ ಮನೆಬಾಗಿಲಿಗೆ ಬಂದಿರುತ್ತದೆ.

ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಕ್ಲೈಮ್‌ಗಳು

ಸುಲಭ ಕ್ಲೈಮ್‌ಗಳು

ಉತ್ತಮ ವಿಮಾದಾತರು ಕ್ಲೈಮ್‌ಗಳನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪ್ರಕ್ರಿಯೆಗೊಳಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ಮಾಡುವುದು ಅದನ್ನೇ. ನಮ್ಮ ಪಾಲಿಸಿದಾರರ ಕ್ಲೈಮ್‌ಗಳನ್ನು ನಾವು ಸಮರ್ಥವಾಗಿ ಪ್ರಕ್ರಿಯೆಗೊಳಿಸುತ್ತೇವೆ. ನಾವು 100% ಕ್ಲೈಮ್ ಸೆಟಲ್ಮೆಂಟ್ ಅನುಪಾತದ ದಾಖಲೆಯನ್ನು ಹೊಂದಿದ್ದೇವೆ.

ಇತ್ತೀಚಿನ ಹೋಂಡಾ ಟೂ ವೀಲರ್ ಇನ್ಶೂರೆನ್ಸ್ ಬ್ಲಾಗ್‌ಗಳನ್ನುಓದಿ

ಹೋಂಡಾ ಆ್ಯಕ್ಟಿವಾದ ವಿಕಾಸ

ವರ್ಷಗಳಲ್ಲಿ ಹೋಂಡಾ ಆ್ಯಕ್ಟಿವಾದ ವಿಕಾಸ

ಪೂರ್ತಿ ಓದಿ
Published on Apr 21, 2022
ಹೋಂಡಾ ಸ್ಪೋರ್ಟ್ಸ್ ಬೈಕ್

ಹೋಂಡಾ ಸ್ಪೋರ್ಟ್ಸ್ ಬೈಕ್ ಏಕೆ ಆಯ್ಕೆ ಮಾಡಿಕೊಳ್ಳಬೇಕು?

ಪೂರ್ತಿ ಓದಿ
Published on Apr 20, 2022
ಹೋಂಡಾ ಆ್ಯಕ್ಟಿವಾ ಖರೀದಿಸಲು ಕಾರಣಗಳು

ಹೋಂಡಾ ಆ್ಯಕ್ಟಿವಾ ಜನಪ್ರಿಯತೆಗೆ ಕಾರಣವಾದ ನೀವು ತಿಳಿದುಕೊಳ್ಳಬೇಕಾದ 6 ವಿಷಯಗಳು

ಪೂರ್ತಿ ಓದಿ
Published on Apr 04, 2022
ಹೋಂಡಾ ಆ್ಯಕ್ಟಿವಾ ಬಗ್ಗೆ ಎಲ್ಲವೂ

ಹೋಂಡಾ ಆ್ಯಕ್ಟಿವಾ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲವೂ

ಪೂರ್ತಿ ಓದಿ
Published on Apr 04, 2022
ಬ್ಲಾಗ್ ಬಲ ಸ್ಲೈಡರ್
ಬ್ಲಾಗ್ ಎಡ ಸ್ಲೈಡರ್
ಇನ್ನಷ್ಟು ಬ್ಲಾಗ್‌ಗಳನ್ನು ನೋಡಿ
ಈಗಲೇ ಉಚಿತ ಕೋಟ್ ಪಡೆಯಿರಿ
ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಎಲ್ಲಾ ರೀತಿಯಿಂದಲೂ ತಯಾರಾಗಿದ್ದೀರಾ
ಭಾರತದಾದ್ಯಂತ 2000+ ನೆಟ್ವರ್ಕ್ ಗ್ಯಾರೇಜ್‌ಗಳು
2000+ˇ ನೆಟ್ವರ್ಕ್ ಗ್ಯಾರೇಜ್‌ಗಳು
ಭಾರತದಾದ್ಯಂತ

ಹೋಂಡಾ ಇತ್ತೀಚಿನ ಸುದ್ದಿಗಳು

ಹೋಂಡಾ ಮೋಟಾರ್‌ಸೈಕಲ್‌ಗಳು ಮತ್ತು ಸ್ಕೂಟರ್ ಇಂಡಿಯಾ ವಾಹನ ಸೇವೆಗಾಗಿ ಮೊಬೈಲ್ ಆ್ಯಪ್‌ ಅನ್ನು ಪ್ರಾರಂಭಿಸಿದೆ

ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ ಇಂಡಿಯಾ ಗ್ರಾಹಕರಿಗೆ ತಮ್ಮ ವಾಹನದ ಸರ್ವೀಸ್ ಪ್ರಗತಿಯ ಬಗ್ಗೆ ನೈಜ ಸಮಯದ ಒಳನೋಟಗಳನ್ನು SMS ನೋಟಿಫಿಕೇಶನ್ ಮೂಲಕ ಒದಗಿಸುವ "ಸ್ಮಾರ್ಟ್ ವರ್ಕ್‌ಶಾಪ್" ಮೊಬೈಲ್ ಆ್ಯಪ್‌ ಅನ್ನು ಪರಿಚಯಿಸಿದೆ. HMSI ನ 'ಸ್ಮಾರ್ಟ್ ವರ್ಕ್‌ಶಾಪ್' ಆ್ಯಪ್‌ ಈಗಾಗಲೇ ಹೈದರಾಬಾದ್, ಜೈಪುರ, ಪುಣೆ ಮತ್ತು ಮುಂಬೈನಲ್ಲಿ ಕಾರ್ಯನಿರ್ವಹಿಸುತ್ತಿದೆ. ಸ್ಮಾರ್ಟ್ ವರ್ಕ್‌ಶಾಪ್ ಆ್ಯಪ್‌ ಪ್ರಮುಖ ಫೀಚರ್‌ಗಳನ್ನು ಹೊಂದಿದೆ, ಇದು ರಿಯಲ್-ಟೈಮ್ ವಾಹನ ರಿಪೇರಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದೆ, ಇದು ಗ್ರಾಹಕರು ಸಂಪೂರ್ಣ ವಾಹನ ಪ್ರಕ್ರಿಯೆಯ ನೈಜ ಸಮಯದ ನೋಟಿಫಿಕೇಶನ್ ಪಡೆಯುವುದರಿಂದ ಪಾರದರ್ಶಕತೆಯನ್ನು ಸೂಚಿಸುತ್ತದೆ. ಅಲ್ಲದೆ, ತಮ್ಮ ಗ್ರಾಹಕರು ತಮ್ಮ ಸೇವೆಗಳಿಂದ ತೃಪ್ತರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ SMS ಮೂಲಕ ಗ್ರಾಹಕರು ಪ್ರತಿಕ್ರಿಯೆಯನ್ನು ನೀಡಬಹುದು ಮತ್ತು ಯಾವುದೇ ಸುಧಾರಣೆಯ ಅಗತ್ಯವಿದ್ದರೆ ಸಹಾಯ ಮಾಡುತ್ತದೆ.

ಪ್ರಕಟಣೆ ದಿನಾಂಕ: ಮಾರ್ಚ್ 27, 2024

2025 ರಲ್ಲಿ ಹೊರಬರಲಿರುವ ಹೋಂಡಾ 350cc ಸ್ಕ್ರಾಂಬ್ಲರ್, ಡಿಸೈನ್ ಲೀಕ್ ಆಗಿದೆ

ಹೊಸ ಹೋಂಡಾ 350cc ಸ್ಕ್ರ್ಯಾಂಬ್ಲರ್ ಯೆಜ್ಡಿ ಸ್ಕ್ರ್ಯಾಂಬ್ಲರ್, ರಾಯಲ್ ಎನ್‌ಫೀಲ್ಡ್ ಸ್ಕ್ರ್ಯಾಮ್ 411 ಮತ್ತು ಟ್ರಿಯಂಫ್ 400X ಮಾಡೆಲ್‌ಗಳೊಂದಿಗೆ ಸ್ಪರ್ಧಿಸುತ್ತದೆ ಮತ್ತು ಬಿಡುಗಡೆಯನ್ನು 2025 ಕ್ಕೆ ಶೆಡ್ಯೂಲ್ ಮಾಡಲಾಗಿದೆ. ಲೀಕ್ ಆದ ವಿನ್ಯಾಸ ಫೋಟೋಗಳು CB350 ವೇದಿಕೆಯಲ್ಲಿ ನಿರ್ಮಿಸಲಾದ ಕಠಿಣ ಸ್ಕ್ರಾಂಬ್ಲರ್ ವೇರಿಯಂಟ್‌ನ ಅಭಿವೃದ್ಧಿಯನ್ನು ಸೂಚಿಸುತ್ತವೆ. ಮೋಟಾರ್‌ಬೀಮ್ ಪ್ರಕಾರ, ಲೀಕ್ ಆದ ಚಿತ್ರವು ಇಂಧನ ಟ್ಯಾಂಕ್, ಫೋರ್ಕ್ ಗೇಟರ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್‌ನಂತಹ ಮೆಟಲ್ ಫ್ರೇಮ್‌ಗಳಂತಹ ಸ್ಕ್ರ್ಯಾಂಬ್ಲರ್‌ನ ವಿನ್ಯಾಸದ ಅಂಶಗಳನ್ನು ತೋರಿಸುತ್ತದೆ. ಹಿಮಾಲಯನ್ 411 ನಂತರ ಮಾಡೆಲ್ ಮಾಡಲಾದ ಬೈಕಿನೊಂದಿಗೆ ಹೋಂಡಾ ಅಡ್ವೆಂಚರ್ ಮಾರುಕಟ್ಟೆಗೆ ಸೇರುವ ಗುರಿಯನ್ನು ಹೊಂದಿದೆ.



ಪ್ರಕಟಿಸಲಾದ ದಿನಾಂಕ: ಫೆಬ್ರವರಿ 08, 2024

ಆಗಾಗ್ಗೆ ಕೇಳಲಾದ ಪ್ರಶ್ನೆಗಳು


ಖಂಡಿತ. ನೀವು ಹಾರ್ನೆಟ್‌ನ ಮೊದಲ ಆವೃತ್ತಿ ಅಥವಾ ಡಿಯೋ ಬೈಕ್ ಹೊಂದಿದ್ದರೆ, ನೀವು ರೈಡ್ ಮಾಡಲು ಬಯಸುವ ಬೈಕ್‌ಗೆ ಕಡ್ಡಾಯವಾಗಿ ಇನ್ಶೂರೆನ್ಸ್ ಖರೀದಿಸಬೇಕು. ಹೊಸ ಮಾಡೆಲ್‌ಗಳಿಗೆ ಹೋಲಿಸಿದರೆ, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರದ ಬೈಕ್‌ಗಳ ಬಿಡಿಭಾಗಗಳನ್ನು ಹುಡುಕುವುದು ಹೆಚ್ಚು ಕಷ್ಟ ಮತ್ತು ದುಬಾರಿಯಾಗಬಹುದು. ಹಾಗಾಗಿ, ಬೈಕ್ ಇನ್ಶೂರೆನ್ಸ್ ಇನ್ನಷ್ಟು ಮುಖ್ಯವಾಗುತ್ತದೆ.
ನೀವು ಬೈಕ್ ಹಸ್ತಾಂತರಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವ ಸಮಯದಲ್ಲಿ ಬೈಕ್ ಇನ್ಶೂರೆನ್ಸ್ ಅನ್ನು ಹಳೆಯ ಮಾಲೀಕರಿಂದ ನಿಮಗೆ ವರ್ಗಾಯಿಸಿಕೊಳ್ಳಬಹುದು. ವಿಮಾದಾತರಿಗೆ ತಿಳಿಸಿ, ಹಾಗೂ ಎರಡೂ ಪಾರ್ಟಿಗಳಿಂದ ಸರಿಯಾದ ಡಾಕ್ಯುಮೆಂಟ್‌ಗಳ ಸಹಾಯದಿಂದ ಹೋಂಡಾ ಬೈಕ್ ಇನ್ಶೂರೆನ್ಸ್ ಪಾಲಿಸಿ ಯನ್ನು ಅತಿ ಕಡಿಮೆ ಖರ್ಚಿನಲ್ಲಿ ವರ್ಗಾಯಿಸಬಹುದು. ಇದು ಬಹಳ ಮುಖ್ಯ ಏಕೆಂದರೆ ಬೈಕ್‌ನ ಈಗಿನ ಮಾಲೀಕರು ನೀವು ಎಂಬುದು ವಿಮಾದಾತರಿಗೆ ಗೊತ್ತಿರದಿದ್ದರೆ, ನಿಮ್ಮ ಕ್ಲೈಮ್ ತಿರಸ್ಕಾರವಾಗಬಹುದು.
ಬಹುತೇಕ ವಿಮಾದಾತರು ಪ್ರೀಮಿಯಂನ 'ಪ್ರೋ ರೇಟಾ ಹೊಂದಾಣಿಕೆ'ಯ ನಂತರ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಸ ಬೈಕ್‌ಗೆ ವರ್ಗಾಯಿಸಲು ಅನುಮತಿ ನೀಡುತ್ತಾರೆ. ಆದಾಗ್ಯೂ, ನೀವು ನಿಮ್ಮ ಹಳೆಯ ವಾಹನವನ್ನು ಮಾರಾಟ ಮಾಡುತ್ತಿದ್ದರೆ, ಹಳೆಯ ಪಾಲಿಸಿಯನ್ನು ಹೊಸ ಮಾಲೀಕರಿಗೆ ವರ್ಗಾಯಿಸಿ, ನಿಮ್ಮ ಹೊಸ ಹೋಂಡಾ ಬೈಕ್‌ಗೆ ಹೊಸ ಪಾಲಿಸಿ ಖರೀದಿಸುವುದು ಉತ್ತಮ. ಏಕೆಂದರೆ, ನಿಮ್ಮ ಹೊಸ ಬೈಕ್‌ಗೆ ಹಳೆಯ ವಾಹನದ ಕವರೇಜ್ ಸಾಕಾಗುವುದಿಲ್ಲ.
ಇನ್ಶೂರೆನ್ಸ್ ಪ್ರೀಮಿಯಂ ದರವು ವಾಹನಗಳ ಎಂಜಿನ್‌ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. SP 125 ನಲ್ಲಿ 125-cc ಎಂಜಿನ್ ಇದೆ. ಆದರೆ ಡಿಯೋದಲ್ಲಿ 110-cc ಎಂಜಿನ್ ಇದೆ. ಹಾಗಾಗಿ, SP 125 ಬೈಕ್‌ನ ಪ್ರೀಮಿಯಂ ದರವು ಹೋಂಡಾ ಡಿಯೋಗಿಂತ ಹೆಚ್ಚಾಗಿರುತ್ತದೆ.