ಹೋಮ್ / ಟ್ರಾವೆಲ್ ಇನ್ಶೂರೆನ್ಸ್ / ದುಬೈ ಪ್ರವಾಸಕ್ಕೆ ಟ್ರಾವೆಲ್ ಇನ್ಶೂರೆನ್ಸ್
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • FAQ

ದುಬೈಗಾಗಿ ಟ್ರಾವೆಲ್ ಇನ್ಶೂರೆನ್ಸ್

ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅತ್ಯಂತ ಜನಪ್ರಿಯ ಮತ್ತು ಪ್ರಮುಖ ನಗರಗಳಲ್ಲಿ ಒಂದಾಗಿರುವುದರಿಂದ, ದುಬೈ ವಿಶ್ವವ್ಯಾಪಿಯಾಗಿ ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಎತ್ತರದ ಸ್ಕ್ರಾಪರ್‌ಗಳು ಮತ್ತು ಐಷಾರಾಮಿ ಮಾಲ್‌ಗಳನ್ನು ಹೊಂದಿರುವ ಈ ನಗರವು ನಗರೀಕರಣವು ಹೇಗೆ ಗಗನದೆತ್ತರ ಬೆಳೆದಿದೆ ಎಂಬುದರ ದ್ಯೋತಕದಂತಿದೆ. ಸುಂದರ ದುಬೈ ನಗರ ನಿಮ್ಮನ್ನು ಚಕಿತಗೊಳಿಸುತ್ತದೆ ಮತ್ತು ಮರುಭೂಮಿ ನಾಡಿನ ನಿಮ್ಮ ಈ ಪ್ರವಾಸ ಮನಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ.. ದುಬೈಗೆ ನಿಮ್ಮ ಪ್ರವಾಸವು ಸ್ವಾದಿಷ್ಟ ಆಹಾರ ಮತ್ತು ಮಾಲ್‌ಗಳಲ್ಲಿ ಶಾಪಿಂಗ್ ಮಾಡಲು ಒಂದು ಪರಿಪೂರ್ಣ ಮಾರ್ಗವಾಗಿದೆ. ಆದಾಗ್ಯೂ, ವೈದ್ಯಕೀಯ ಮತ್ತು ದಂತ ತುರ್ತುಸ್ಥಿತಿಗಳು ಮತ್ತು ಬ್ಯಾಗೇಜ್ ಅಥವಾ ವಿಮಾನ ವಿಳಂಬಗಳಂತಹ ಪ್ರಯಾಣ-ಸಂಬಂಧಿತ ಸಮಸ್ಯೆಗಳ ವಿರುದ್ಧ ತಯಾರಾಗಿರಲು ದುಬೈಗಾಗಿ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ದುಬೈಗೆ ಪ್ರಯಾಣಿಸುವುದು ಸೂಕ್ತವಾಗಿದೆ. ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದರಿಂದ ತಾಯ್ನಾಡಿನಿಂದ ದೂರವಿರುವ ತಾಣವನ್ನು ಅನ್ವೇಷಿಸುವಾಗ ತುರ್ತುಸ್ಥಿತಿಯ ಸಂದರ್ಭದಲ್ಲಿ ಹಣಕಾಸಿನ ಒತ್ತಡವಿಲ್ಲದೆ ನಗರವನ್ನು ಅನ್ವೇಷಿಸಲು ಪ್ರಯಾಣಿಕರಿಗೆ ಅವಕಾಶ ನೀಡುತ್ತದೆ.


ದುಬೈ ಪ್ರವಾಸಕ್ಕೆ ಮುಂಚೆ ತಿಳಿದಿರಬೇಕಾದ್ದು


ವರ್ಗ:  ಬಿಡುವು/ ಬಿಸಿನೆಸ್/ ಶಿಕ್ಷಣ 

ಕರೆನ್ಸಿ: ದಿರಾಮ್‌

ಪ್ರವಾಸ ಮಾಡಲು ಉತ್ತಮ ಸಮಯ: ನವೆಂಬರ್‌ನಿಂದ ಏಪ್ರಿಲ್‌

ಭಾರತೀಯರಿಗೆ ವೀಸಾ ವಿಧಾನ: ಆಗಮನಕ್ಕಾಗಿ

ನೋಡಲೇಬೇಕಾದ ಸ್ಥಳಗಳು: ದುಬೈ ಮಿರಾಕಲ್ ಗಾರ್ಡನ್, ಮರೀನ್ ಡ್ರೀಮ್, ದುಬೈ ಕ್ರೀಕ್ ಮತ್ತು ಡೆಸರ್ಟ್ ಸಫಾರಿ

ದುಬೈಗೆ ಪ್ರವಾಸಕ್ಕೆ ಟ್ರಾವೆಲ್ ಇನ್ಶೂರೆನ್ಸ್: ದುಬೈ ಪ್ರವಾಸಿ ಸ್ನೇಹಿ ದೇಶವಾಗಿದ್ದರೂ, ನಿಮ್ಮ ವಸ್ತುಗಳನ್ನು ಮತ್ತು ಪ್ರಯಾಣವನ್ನು ಸುರಕ್ಷಿತಗೊಳಿಸುವುದು ಮುಖ್ಯವಾಗಿದೆ. ಬ್ಯಾಗೇಜ್ ನಷ್ಟ ಅಥವಾ ವಿಮಾನ ವಿಳಂಬಗಳಂತಹ ಸಾಮಾನ್ಯ ದುರ್ಘಟನೆಗಳು, ನಿಮ್ಮ ಪ್ರವಾಸದ ಪ್ಲಾನ್ ಮೇಲೆ ಕಠಿಣ ಪರಿಣಾಮ ಬೀರಬಹುದು. ಆದ್ದರಿಂದ, ನಿಮ್ಮ ಮುಂದಿನ ದುಬೈ ಪ್ರವಾಸಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಮರೆಯದಿರಿ.

#ಮೇಲ್ಕಂಡ ವಿಷಯಗಳು ಮಾಹಿತಿ ಉದ್ದೇಶಕ್ಕಾಗಿ ಮಾತ್ರ. ನಿಮ್ಮ ಪ್ರವಾಸವನ್ನು ಪ್ಲಾನ್‌ ಮಾಡುವ ಮೊದಲು, ನಿಮ್ಮ ಟ್ರಾವೆಲ್ ಏಜೆಂಟ್ ಅಥವಾ ಆಯಾ ಎಂಬಸಿಯನ್ನು ದಯವಿಟ್ಟು ಸಂಪರ್ಕಿಸಿ

 

ಏನನ್ನು ಒಳಗೊಂಡಿದೆ?

ವೈದ್ಯಕೀಯ ಸಂಬಂಧಿತ ಕವರೇಜ್

cov-acc

ತುರ್ತು ವೈದ್ಯಕೀಯ ವೆಚ್ಚಗಳು

ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.

cov-acc

ದಂತ ಚಿಕಿತ್ಸೆಯ ವೆಚ್ಚಗಳು

ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.

cov-acc

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.

ಬ್ಯಾಗ್‌ಗಳಿಗೆ ಸಂಬಂಧಿತ ಕವರೇಜ್

cov-acc

ಚೆಕ್-ಇನ್ ಬ್ಯಾಗೇಜ್ ನಷ್ಟ

ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಚೆಕ್-ಇನ್ ಬ್ಯಾಗೇಜ್ ವಿಳಂಬ

ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.

cov-acc

ಬ್ಯಾಗೇಜ್ ಮತ್ತು ಅದರ ವಸ್ತುಗಳ ಕಳ್ಳತನ

ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಪ್ರಯಾಣ ಸಂಬಂಧಿತ ಕವರೇಜ್

cov-acc

ವಿಮಾನ ವಿಳಂಬ ಮತ್ತು ರದ್ದತಿ

ವಿಮಾನ ವಿಳಂಬಗಳು ಅಥವಾ ರದ್ದತಿಗಳು ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಅವುಗಳಿಂದಾಗಿ ಎದುರಾಗುವ ದುರ್ಬಲತೆಗಳನ್ನು ಕಡಿಮೆಗೊಳಿಸಲು ಸಹಾಯ ಮಾಡಲು ನಾವು ಸ್ವಲ್ಪ ಕೆಲಸ ಮಾಡಬಹುದು ಎಂದು ಖಚಿತಪಡಿಸುತ್ತೇವೆ. ನಮ್ಮ ವೆಚ್ಚ ಮರಳಿ ನೀಡುವ ಫೀಚರ್ ನಿಮಗೆ ಹಿನ್ನಡೆಯಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

cov-acc

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ

ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ನಕಲಿ ಪಾಸ್‌ಪೋರ್ಟ್ ಮತ್ತು/ಅಥವಾ ಅಂತಾರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

cov-acc

ಟ್ರಿಪ್ ಮೊಟಕುಗೊಳಿಸುವಿಕೆ

ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

cov-acc

ವೈಯಕ್ತಿಕ ಹೊಣೆಗಾರಿಕೆ

ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ತುರ್ತು ಹೋಟೆಲ್ ವಸತಿ

ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು.. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ಆ ವಿಷಯ ನಮಗೆ ಬಿಡಿ. ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ತಪ್ಪಿಹೋದ ಫ್ಲೈಟ್ ಕನೆಕ್ಷನ್

ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

cov-acc

ಹೈಜಾಕ್ ಅಪಾಯದ ಭತ್ಯೆ

ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.

cov-acc

ತುರ್ತು ನಗದು ಸಹಾಯ ಸೇವೆ

ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು.

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ನೀವು ದುಬೈಗೆ ಪ್ರಯಾಣಿಸುತ್ತಿದ್ದರೆ, ನಿಮ್ಮ ಪ್ರಯಾಣ ಪ್ರಾರಂಭವಾಗುವ ಮೊದಲು ನೀವು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಈ ಪ್ಲಾನ್ ಅನ್ನು ಹೆಚ್ಚಿನ ಜನರಲ್ ಇನ್ಶೂರೆನ್ಸ್ ಕಂಪನಿಗಳು ಒದಗಿಸುತ್ತವೆ. ನಿಮ್ಮ ದುಬೈ ಪ್ರಯಾಣವನ್ನು ಸುರಕ್ಷಿತವಾಗಿರಿಸಲು ಎಚ್‌ಡಿಎಫ್‌ಸಿ ಎರ್ಗೋ ಕೂಡಾ ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಒದಗಿಸುತ್ತದೆ. ದುಬೈಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಈ ಕೆಳಗಿನ ವಿಧಾನಗಳಲ್ಲಿ ಖರೀದಿಸಬಹುದು –

● ಆಫ್ಲೈನ್

ಆಫ್ಲೈನ್‌ನಲ್ಲಿ ಖರೀದಿಸಲು ನೀವು ಹತ್ತಿರದ ಎಚ್‌ಡಿಎಫ್‌ಸಿ ಎರ್ಗೋದ ಹತ್ತಿರದ ಶಾಖಾ ಕಚೇರಿಗೆ ಭೇಟಿ ನೀಡಬೇಕಾಗುತ್ತದೆ. ಶಾಖೆಯಲ್ಲಿ, ಪ್ರಸ್ತಾವನೆ ಫಾರ್ಮ್ ಪಡೆದುಕೊಳ್ಳಿ ಮತ್ತು ಪ್ರಯಾಣದ ವಿವರಗಳನ್ನು ಭರ್ತಿ ಮಾಡಿ. ಫಾರ್ಮ್ ಸಲ್ಲಿಸಿ ಮತ್ತು ಪ್ರೀಮಿಯಂ ಅನ್ನು ಮುಂಚಿತವಾಗಿ ಪಾವತಿಸಿ. ಕಂಪನಿಯು ಪ್ರಸ್ತಾವನೆ ಫಾರ್ಮ್ ಅನ್ನು ಮೌಲ್ಯಮಾಪನ ಮಾಡುತ್ತದೆ ಮತ್ತು ಪರಿಶೀಲಿಸುತ್ತದೆ ಹಾಗೂ ಪಾಲಿಸಿಯನ್ನು ನೀಡುತ್ತದೆ.

● ಆನ್ಲೈನ್

ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅದರ ವೆಬ್‌ಸೈಟ್ ಮೂಲಕ ಆನ್ಲೈನ್‌ನಲ್ಲಿ ಲಭ್ಯವಿದೆ. https://www.hdfcergo.com/travel-insurance ಗೆ ಭೇಟಿ ನೀಡಿ ಮತ್ತು 'ಈಗಲೇ ಖರೀದಿಸಿ' ಮೇಲೆ ಕ್ಲಿಕ್ ಮಾಡಿ. ಇವುಗಳನ್ನು ಒಳಗೊಂಡಿರುವ ಟ್ರಿಪ್ ಸಂಬಂಧಿತ ವಿವರಗಳನ್ನು ಒದಗಿಸಿ –

● ಪ್ರಯಾಣದ ಪ್ರಕಾರ - ವೈಯಕ್ತಿಕ, ಕುಟುಂಬ ಅಥವಾ ಸ್ಟೂಡೆಂಟ್ ಟ್ರಾವೆಲ್

● ಪ್ರಯಾಣಿಸುವ ಸದಸ್ಯರು

● ಸದಸ್ಯರ ವಯಸ್ಸು

- ಸಿಂಗಲ್ ಟ್ರಿಪ್‌ಗಳು: 6 ತಿಂಗಳಿಂದ 70 ವರ್ಷಗಳು

- ವಾರ್ಷಿಕ ಮಲ್ಟಿ ಟ್ರಿಪ್ ಪ್ಲಾನ್‌ಗಳು: 18 ವರ್ಷಗಳಿಂದ 70 ವರ್ಷಗಳು

- ಫ್ಯಾಮಿಲಿ ಫ್ಲೋಟರ್: ಕನಿಷ್ಠ 3 ತಿಂಗಳ ಪ್ರವೇಶ ವಯಸ್ಸಿನ ಸ್ವಯಂ, ಸಂಗಾತಿ ಮತ್ತು 2 ವರ್ಷದವರೆಗಿನ ಮಕ್ಕಳನ್ನು ಕವರ್ ಮಾಡುವ ಫ್ಯಾಮಿಲಿ ಫ್ಲೋಟರ್ ಪ್ಲಾನ್

● ತಲುಪುವ ಸ್ಥಳ - ದುಬೈ

● ಪ್ರಯಾಣ ಆರಂಭದ ದಿನಾಂಕ

● ಟ್ರಿಪ್ ಮುಗಿಯುವ ದಿನಾಂಕ

ಅಲ್ಲದೆ, ಪ್ಲಾನ್ ಖರೀದಿಸಲು ವೈಯಕ್ತಿಕಗೊಳಿಸಿದ ಸಹಾಯಕ್ಕಾಗಿ ನಿಮ್ಮ ಸಂಪರ್ಕ ಮಾಹಿತಿಯನ್ನು ಒದಗಿಸಿ. ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಳ್ಳಿ ಮತ್ತು ಪ್ಲಾನ್ ಆಯ್ಕೆಗಳು ಮತ್ತು ಅವುಗಳ ಆಯಾ ಪ್ರೀಮಿಯಂಗಳನ್ನು ಪರಿಶೀಲಿಸಲು ಮುಂದುವರೆಯಿರಿ. ನೀವು ಬಯಸುವ ಪ್ಲಾನ್ ಆಯ್ಕೆಮಾಡಿ, ಆನ್ಲೈನ್‌ನಲ್ಲಿ ಪ್ರೀಮಿಯಂ ಪಾವತಿಸಿ ಮತ್ತು ಪಾಲಿಸಿಯನ್ನು ತಕ್ಷಣವೇ ನೀಡಲಾಗುತ್ತದೆ.

ದುಬೈಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗೆ ನೀವು ಎಷ್ಟು ಪಾವತಿಸಬೇಕು ಎಂಬುದು ಬಹಳಷ್ಟು ಅಂಶಗಳನ್ನು ಅವಲಂಬಿಸಿರುತ್ತದೆ. ಈ ಅಂಶಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ –

● ನೀವು ಬಯಸುವ ಪ್ಲಾನ್ ವಿಧ - ವೈಯಕ್ತಿಕ, ಫ್ಯಾಮಿಲಿ ಟ್ರಾವೆಲ್ ಅಥವಾ ಸ್ಟೂಡೆಂಟ್ ಟ್ರಾವೆಲ್ ಪ್ಲಾನ್

● ನೀವು ಆಯ್ಕೆ ಮಾಡುವ ಪ್ಲಾನ್ ರೂಪಾಂತರ - ಕವರೇಜ್ ಫೀಚರ್‌ಗಳನ್ನು ರೂಪಾಂತರವು ನಿರ್ಧರಿಸುತ್ತದೆ. ರೂಪಾಂತರವು ಹೆಚ್ಚಿನ ಕವರೇಜ್ ಫೀಚರ್‌ಗಳನ್ನು ಹೊಂದಿದ್ದರೆ, ಪ್ರೀಮಿಯಂ ಹೆಚ್ಚಾಗಿರುತ್ತದೆ

● ನೀವು ಆಯ್ಕೆ ಮಾಡುವ ಇನ್ಶೂರೆನ್ಸ್ ಮೊತ್ತ - ಇನ್ಶೂರೆನ್ಸ್ ಮೊತ್ತವು ವಿಮಾದಾತರು ಕೈಗೊಳ್ಳುವ ಒಟ್ಟು ಹೊಣೆಗಾರಿಕೆಯನ್ನು ನಿರ್ಧರಿಸುತ್ತದೆ.

● ಸದಸ್ಯರ ವಿವರಗಳು - ಪ್ರಯಾಣಿಸುತ್ತಿರುವ ಸದಸ್ಯರ ಸಂಖ್ಯೆ ಮತ್ತು ಅವರ ವಯಸ್ಸು. ಪ್ರತಿ ಸದಸ್ಯರು ಕೂಡಾ ಪ್ರೀಮಿಯಂ ಅನ್ನು ಹೆಚ್ಚಿಸುತ್ತಾರೆ

● ಪ್ರಯಾಣದ ಅವಧಿ - ನೀವು ಎಷ್ಟು ದಿನ ಪ್ರಯಾಣಿಸುತ್ತಿದ್ದೀರಿ.

ನೀವು ಪ್ಲಾನ್‌ಗೆ ಎಷ್ಟು ಪಾವತಿಸಬೇಕು ಎಂಬುದನ್ನು ಕಂಡುಹಿಡಿಯಲು ಎಚ್‌ಡಿಎಫ್‌ಸಿ ಎರ್ಗೋ ಆನ್ಲೈನ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗಳನ್ನು ಒದಗಿಸುತ್ತದೆ. ಕ್ಯಾಲ್ಕುಲೇಟರ್‌ನಲ್ಲಿ ಮೇಲೆ ತಿಳಿಸಿದ ವಿವರಗಳನ್ನು ನಮೂದಿಸಿ ಮತ್ತು ನೀವು ಪ್ರೀಮಿಯಂ ಮೊತ್ತವನ್ನು ಕಂಡುಹಿಡಿಯಲು ಸಾಧ್ಯವಾಗುತ್ತದೆ.

ಉದಾಹರಣೆಗೆ, ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ 35 ವರ್ಷಗಳ ವಯಸ್ಸಿನವರಾಗಿದ್ದು, 5 ದಿನಗಳವರೆಗೆ ದುಬೈಗೆ ಪ್ರಯಾಣಿಸುತ್ತಿದ್ದರೆ, ವಿವಿಧ ಪ್ಲಾನ್ ರೂಪಾಂತರಗಳಿಗೆ ಪ್ರೀಮಿಯಂ ಈ ರೀತಿಯಾಗಿರುತ್ತದೆ –

● ಸಿಲ್ವರ್ ಪ್ಲಾನ್ – ₹ 728 + GST

● ಗೋಲ್ಡ್ ಪ್ಲಾನ್ – ₹ 880 + GST

● ಪ್ಲಾಟಿನಂ ಪ್ಲಾನ್ – ₹ 1030 + GST

● ಟೈಟಾನಿಯಂ ಪ್ಲಾನ್ – ₹ 1336 + GST

ಇಲ್ಲ, ನಿಮ್ಮ ದುಬೈ ಪ್ರಯಾಣಕ್ಕೆ ಮೆಡಿಕಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಕಡ್ಡಾಯವಲ್ಲ. ಆದಾಗ್ಯೂ, ಕವರೇಜ್ ಬಗ್ಗೆ ನಿರ್ಲಕ್ಷ್ಯ ತೋರುವ ಮೊದಲು, ದುಬೈನಲ್ಲಿ ವೈದ್ಯಕೀಯ ವೆಚ್ಚಗಳು ದುಬಾರಿಯಾಗಿವೆ ಎಂದು ನೀವು ತಿಳಿದುಕೊಳ್ಳಬೇಕು. ದುಬೈ, ಅನಾರೋಗ್ಯಗಳು ಮತ್ತು ಗಾಯಗಳಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸುತ್ತದೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸುವ ಆಸ್ಪತ್ರೆಗಳನ್ನು ಹೊಂದಿದೆ. ಅಂತಹ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಮತ್ತು ಇತರ ವೈದ್ಯಕೀಯ ವೆಚ್ಚಗಳು ಅಗ್ಗವಾಗಿರುವುದಿಲ್ಲ. ನೀವು ಪ್ರಯಾಣದಲ್ಲಿ ಅನಾರೋಗ್ಯಕ್ಕೆ ಈಡಾದರೆ ಅಥವಾ ಗಾಯಗೊಂಡರೆ, ನೀವು ಭರಿಸಲು ಸಾಧ್ಯವಾಗದ ಗಣನೀಯ ವೈದ್ಯಕೀಯ ವೆಚ್ಚಗಳನ್ನು ಖರ್ಚು ಮಾಡಬೇಕಾಗಬಹುದು. ಆದ್ದರಿಂದ, ನೀವು ಅಂತಹ ದುಬಾರಿ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ಸಿದ್ಧರಾಗಬೇಕಾದ ಅಗತ್ಯವಿರುತ್ತದೆ ಮತ್ತು ಇಲ್ಲಿ ಮೆಡಿಕಲ್ ಟ್ರಾವೆಲ್ ಇನ್ಶೂರೆನ್ಸ್ ನೆರವಿಗೆ ಬರುತ್ತದೆ.

ದುಬೈಗೆ ಪ್ರಯಾಣಿಸುವಾಗ ಉಂಟಾಗುವ ವೈದ್ಯಕೀಯ ತುರ್ತುಸ್ಥಿತಿಗಳನ್ನು ಮೆಡಿಕಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುತ್ತದೆ. ಅಂತಹ ಪ್ಲಾನ್‌ಗಳು ವೈದ್ಯಕೀಯ ಕವರೇಜ್‌ನ ಸಮಗ್ರ ವ್ಯಾಪ್ತಿಯನ್ನು ಒದಗಿಸುವ ಮೂಲಕ, ಆಸ್ಪತ್ರೆಯ ಬಿಲ್‌ಗಳು ನಿಮ್ಮ ಹಣಕಾಸಿನ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ನೀವು ಎಚ್‌ಡಿಎಫ್‌ಸಿ ಎರ್ಗೋದ ಮೆಡಿಕಲ್ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆಯ್ಕೆ ಮಾಡಿದರೆ, ನೀವು ಈ ಕೆಳಗಿನವುಗಳಿಗೆ ಕವರೇಜ್ ಪಡೆಯಬಹುದು –

● ದುಬೈನಲ್ಲಿರುವ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಗಳು

● ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವುದು

● ತುರ್ತುಸ್ಥಿತಿಯಲ್ಲಿ ದಂತ ಚಿಕಿತ್ಸೆಗಳು

● ಆಸ್ಪತ್ರೆಗೆ ದಾಖಲಾಗುವ ಪ್ರತಿದಿನಕ್ಕೆ ದೈನಂದಿನ ನಗದು ಭತ್ಯೆ

● ಅಪಘಾತದಿಂದ ಸಾವು ಅಥವಾ ಶಾಶ್ವತ ಅಂಗವೈಕಲ್ಯದ ಸಂದರ್ಭದಲ್ಲಿ ಒಟ್ಟು ಮೊತ್ತದ ಪ್ರಯೋಜನ

ಕವರೇಜ್ USD 50,000 ದಿಂದ USD 500,000 ವರೆಗೆ ಇರುತ್ತದೆ. ನೀವು ಸೂಕ್ತ ಪ್ಲಾನ್ ಆಯ್ಕೆಯನ್ನು ಆರಿಸಿಕೊಳ್ಳಬಹುದು ಮತ್ತು ನಿಮ್ಮ ಪ್ರಯಾಣದ ಬಜೆಟ್ ಅನ್ನು ಹಾನಿ ಮಾಡದೆ ವೈದ್ಯಕೀಯ ತುರ್ತುಸ್ಥಿತಿಗಳ ವಿರುದ್ಧ ಕವರೇಜ್ ಪಡೆಯಬಹುದು. ಆದ್ದರಿಂದ, ಕಡ್ಡಾಯವಲ್ಲದಿದ್ದರೂ ಸಹ ದುಬೈಗಾಗಿ ಮೆಡಿಕಲ್ ಟ್ರಾವೆಲ್ ಪ್ಲಾನ್ ಆಯ್ಕೆ ಮಾಡಿ.

ಇಲ್ಲ, ನೀವು ದುಬೈಗೆ ಪ್ರಯಾಣಿಸುವಾಗ ಕಡ್ಡಾಯವಾಗಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಅಗತ್ಯವಿಲ್ಲ. ಆದಾಗ್ಯೂ, ಹಣಕಾಸಿನ ನಷ್ಟಕ್ಕೆ ಕಾರಣವಾಗುವ ಅನಿರೀಕ್ಷಿತ ಸಂದರ್ಭಗಳಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ನೆರವಿಗೆ ಬರುತ್ತದೆ. ಹಾಗಾಗಿ ಪ್ಲಾನ್ ಹೊಂದಿರುವುದನ್ನು ಶಿಫಾರಸು ಮಾಡಲಾಗುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ನೀವು ಪಡೆಯಬಹುದಾದ ಕವರೇಜ್ ಪ್ರಯೋಜನಗಳನ್ನು ಇಲ್ಲಿ ನೋಡಿ –

● ವೈದ್ಯಕೀಯ ಕವರೇಜ್

ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಅತ್ಯಂತ ಪ್ರಮುಖ ಕವರೇಜ್ ವೈದ್ಯಕೀಯ ತುರ್ತುಸ್ಥಿತಿಗಳಿಗೆ ನೀಡುವ ಕವರೇಜ್ ಆಗಿದೆ. ದುಬೈಗೆ ಪ್ರಯಾಣಿಸುವಾಗ ನೀವು ಯಾವುದೇ ಅನಿರೀಕ್ಷಿತ ಅನಾರೋಗ್ಯ ಅಥವಾ ಗಾಯಗಳಿಗೆ ಈಡಾದರೆ, ಈ ಪ್ಲಾನ್ ಆಸ್ಪತ್ರೆಗೆ ದಾಖಲಾಗುವ ವೆಚ್ಚ ಮತ್ತು ಸಂಬಂಧಿತ ಚಿಕಿತ್ಸೆಗಳನ್ನು ಕವರ್ ಮಾಡುತ್ತದೆ. ಇದಲ್ಲದೆ, ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ನೀವು ವೈದ್ಯಕೀಯ ಸ್ಥಳಾಂತರ ಮತ್ತು ಸ್ವದೇಶ ವಾಪಸಾತಿ, ದಂತ ಚಿಕಿತ್ಸೆಗಳು ಮತ್ತು ಆಸ್ಪತ್ರೆ ದಾಖಲಾತಿಗೆ ದೈನಂದಿನ ಭತ್ಯೆಯ ಕವರೇಜ್ ಪಡೆಯುತ್ತೀರಿ.

● ಟ್ರಿಪ್ ಕವರೇಜ್

ಎಚ್‌ಡಿಎಫ್‌ಸಿ ಎರ್ಗೋದ ಟ್ರಾವೆಲ್ ಪ್ಲಾನ್ ಕೆಲವು ಪ್ಲಾನ್‌ಗಳಲ್ಲಿ ವಿಮಾನ ವಿಳಂಬಗಳಿಗೆ ಕವರೇಜ್ ಒದಗಿಸುತ್ತದೆ.

● ಬ್ಯಾಗೇಜ್ ಕವರ್

ನಿಮ್ಮ ಬ್ಯಾಗೇಜ್ ಸಾಗಣೆಯಲ್ಲಿ ಕಳೆದು ಹೋದರೆ ಅಥವಾ ನಿಮ್ಮ ಚೆಕ್-ಇನ್ ಸರಕುಗಳಲ್ಲಿ ವಿಳಂಬವಾದರೆ, ಅದರಲ್ಲಿ ಉಂಟಾದ ಹಣಕಾಸಿನ ನಷ್ಟವನ್ನು ಕವರ್ ಮಾಡಲಾಗುತ್ತದೆ

● ಹೊಣೆಗಾರಿಕೆ ಕವರ್

ನೀವು ಇನ್ನೊಂದು ವ್ಯಕ್ತಿಗೆ ಯಾವುದೇ ಭೌತಿಕ ಅಥವಾ ಆಸ್ತಿ ಸಂಬಂಧಿತ ಹಾನಿಯನ್ನು ಉಂಟುಮಾಡಿದರೆ, ಅವರ ನಷ್ಟಗಳಿಗೆ ನೀವು ಆರ್ಥಿಕವಾಗಿ ಜವಾಬ್ದಾರರಾಗಿರುತ್ತೀರಿ. ಅಂತಹ ಹೊಣೆಗಾರಿಕೆಯನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವ ಮೂಲಕ ನಿಮ್ಮನ್ನು ಹೊರೆಯಿಂದ ಮುಕ್ತಗೊಳಿಸುತ್ತದೆ

● ಪರ್ಸನಲ್ ಆಕ್ಸಿಡೆಂಟ್ ಕವರ್

ಪ್ರಯಾಣದಲ್ಲಿರುವಾಗ ಅಪಘಾತದಿಂದ ಉಂಟಾದ ಸಾವು ಅಥವಾ ಶಾಶ್ವತ ಅಂಗವೈಕಲ್ಯಕ್ಕೂ ನೀವು ಕವರೇಜ್ ಪಡೆಯುತ್ತೀರಿ.

ಈ ಕವರೇಜ್ ಪ್ರಯೋಜನಗಳೊಂದಿಗೆ, ನೀವು ದುಬೈಗೆ ಪ್ರಯಾಣಿಸುವಾಗ ಕಡ್ಡಾಯವಲ್ಲದಿದ್ದರೂ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಹೊಂದಿರುವುದು ಸಹಾಯಕ್ಕೆ ಬರುತ್ತದೆ.

ಹೌದು, ದುಬೈನಲ್ಲಿ ಉಚಿತ ಹೆಲ್ತ್‌ಕೇರ್ ಸೌಲಭ್ಯಗಳಿವೆ, ಇದರಲ್ಲಿ ವ್ಯಕ್ತಿಗಳು ಸಾರ್ವಜನಿಕ ಸೌಲಭ್ಯಗಳಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯಬಹುದು. ಆದಾಗ್ಯೂ, ದುಬೈ ನಿವಾಸಿಗಳು ಮತ್ತು ನಾಗರಿಕರಿಗೆ ಮಾತ್ರ ಈ ಉಚಿತ ಸೌಲಭ್ಯ ಲಭ್ಯವಿದೆ. ನೀವು ಪ್ರವಾಸ, ಬಿಸಿನೆಸ್ ಅಥವಾ ವಿದ್ಯಾರ್ಥಿಯಾಗಿ ದುಬೈಗೆ ಪ್ರಯಾಣಿಸುತ್ತಿದ್ದರೆ, ಈ ಉಚಿತ ಹೆಲ್ತ್‌ಕೇರ್‌ಗೆ ನೀವು ಅರ್ಹರಾಗಿರುವುದಿಲ್ಲ.

ಅಂತಹ ಸಂದರ್ಭಗಳಲ್ಲಿ, ದುಬೈನಲ್ಲಿ ವೈದ್ಯಕೀಯ ಸಹಾಯದ ಅಗತ್ಯವಿದ್ದರೆ ನೀವು ಎದುರಿಸಬಹುದಾದ ದುಬಾರಿ ವೈದ್ಯಕೀಯ ವೆಚ್ಚಗಳ ವಿರುದ್ಧ ರಕ್ಷಣೆ ಪಡೆಯಲು ನಿಮಗೆ ಹೆಲ್ತ್ ಇನ್ಶೂರೆನ್ಸ್ ಕವರ್ ಬೇಕಾಗುತ್ತದೆ. ಇಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಚಿತ್ರಕ್ಕೆ ಬರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಒದಗಿಸುವ ಅಂತರರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು, ನೀವು ವಿದೇಶದಲ್ಲಿ ಪ್ರಯಾಣಿಸುವಾಗ, ಈ ಉದಾಹರಣೆಯಲ್ಲಿ ದುಬೈನಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳ ವೆಚ್ಚವನ್ನು ಕವರ್ ಮಾಡುತ್ತದೆ. ಅನಿರೀಕ್ಷಿತ ಅಸ್ವಸ್ಥತೆ ಅಥವಾ ಗಾಯದಿಂದಾಗಿ ಅಗತ್ಯವಿರುವ ಒಳರೋಗಿ ಆಸ್ಪತ್ರೆ ದಾಖಲಾತಿಗಳ ವಿರುದ್ಧ ನೀವು ಕವರೇಜ್ ಪಡೆಯುತ್ತೀರಿ. ಚಿಕಿತ್ಸೆಗಳ ವೆಚ್ಚವನ್ನು ಹೊರತುಪಡಿಸಿ, ಕವರೇಜ್ ಇವುಗಳನ್ನು ಕೂಡ ಅನುಮತಿಸುತ್ತದೆ –

● ವೈದ್ಯಕೀಯ ಸ್ಥಳಾಂತರ - ತುರ್ತುಸ್ಥಿತಿಯ ಸಂದರ್ಭದಲ್ಲಿ ರಸ್ತೆ ಅಥವಾ ವಾಯುಯಾನದ ಮೂಲಕ ಆಸ್ಪತ್ರೆಗೆ ಸಾಗಣೆ.

● ಅಸ್ಥಿ ಅವಶೇಷಗಳನ್ನು ವಾಪಸ್ ಕಳುಹಿಸುವುದು - ಇನ್ಶೂರೆನ್ಸ್ ಮಾಡಿಸಿದ ವ್ಯಕ್ತಿ ಪ್ರಯಾಣದಲ್ಲಿ ಸಾವಿಗೀಡಾದರೆ ಮೃತದೇಹವನ್ನು ಭಾರತಕ್ಕೆ ವಾಪಸ್ ತರುವ ಖರ್ಚಿನ ಕವರೇಜ್

● ದಂತ ಚಿಕಿತ್ಸೆಗಳು - ತುರ್ತು ಪರಿಸ್ಥಿತಿಯಿಂದಾಗಿ ಅಗತ್ಯವಿರುವ ಚಿಕಿತ್ಸೆಗಳು

● ಆಸ್ಪತ್ರೆ ನಗದು ಭತ್ಯೆ - ಆಸ್ಪತ್ರೆಗೆ ದಾಖಲಾಗುವ ಪ್ರತಿದಿನಕ್ಕೆ ಪಾವತಿಸಲಾದ ದೈನಂದಿನ ಭತ್ಯೆ

● ಅಪಘಾತದಿಂದ ಸಾವು ಅಥವಾ ಶಾಶ್ವತ ಅಂಗವೈಕಲ್ಯ - ಇನ್ಶೂರೆನ್ಸ್ ಮಾಡಿದವರು ಅಪಘಾತದಿಂದ ಮೃತಪಟ್ಟ ಸಂದರ್ಭದಲ್ಲಿ ದೊಡ್ಡ ಮೊತ್ತದ ಪ್ರಯೋಜನ

ನೀವು USD 500,000 ವರೆಗಿನ ಕವರೇಜ್ ಪಡೆಯಬಹುದು ಮತ್ತು ನೀವು ದುಬೈಗೆ ಪ್ರವಾಸಿ, ಸಂದರ್ಶಕ ಅಥವಾ ವಿದ್ಯಾರ್ಥಿಯಾಗಿ ಪ್ರಯಾಣಿಸುವಾಗ ಉಂಟಾಗುವ ವೈದ್ಯಕೀಯ ವೆಚ್ಚಗಳಿಗೆ ಕವರ್ ಪಡೆಯಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ಮೂಲ: ಎಕ್ಸ್‌ಪ್ಯಾಟ್ ಅರೈವಲ್ಸ್

ವಿದೇಶಿಗರಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುವ ಅನೇಕ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳನ್ನು ದುಬೈ ಹೊಂದಿದೆ. ಆದ್ದರಿಂದ, ನೀವು ದುಬೈನಲ್ಲಿ ವಿದೇಶಿಯಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಆದರೆ, ನೀವು ವಿಸ್ತರಿತ ಅವಧಿಗೆ ದುಬೈನಲ್ಲಿ ವಾಸಿಸುವುದಾದರೆ ಅಂತಹ ಯೋಜನೆಗಳು ಸೂಕ್ತವಾಗಿರುತ್ತವೆ. ನೀವು ಪ್ರವಾಸ ಅಥವಾ ಕೆಲಸಕ್ಕಾಗಿ ದುಬೈಗೆ ಭೇಟಿ ನೀಡುತ್ತಿದ್ದರೆ, ಅಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಒಳ್ಳೆಯ ಯೋಚನೆಯಲ್ಲ. ಉನ್ನತ ಶಿಕ್ಷಣಕ್ಕಾಗಿ ಅಲ್ಲಿ ವಾಸಿಸುವಾಗ ವಿದ್ಯಾರ್ಥಿಗಳು ಕೂಡಾ ದುಬೈನಲ್ಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದನ್ನು ತಪ್ಪಿಸಬೇಕು.

ಬದಲಾಗಿ, ದುಬೈನಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳನ್ನು ಕವರ್ ಮಾಡುವ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ನೀವು ಭಾರತದಲ್ಲಿ ಆಯ್ಕೆ ಮಾಡಬಹುದು. ನಿಮ್ಮ ಪ್ರಯಾಣದ ಅವಧಿಯನ್ನು ಕವರ್ ಮಾಡುವ ಪ್ಲಾನ್ ಖರೀದಿಸಿ ಮತ್ತು ದುಬೈನಲ್ಲಿ ನೀವು ಎದುರಿಸಬಹುದಾದ ವೈದ್ಯಕೀಯ ವೆಚ್ಚಗಳ ವಿರುದ್ಧ ನಿಮ್ಮನ್ನು ಸುರಕ್ಷಿತವಾಗಿರಿಸಲಾಗುತ್ತದೆ. ಹೆಚ್ಚಿನ ವಿಮಾ ಮೊತ್ತವನ್ನು ಆಯ್ಕೆ ಮಾಡಿ ಮತ್ತು ತುರ್ತುಸ್ಥಿತಿಯಲ್ಲಿ ನಿಮ್ಮ ದುಬಾರಿ ವೈದ್ಯಕೀಯ ಚಿಕಿತ್ಸೆಗಳನ್ನು ಈ ಪ್ಲಾನ್ ಕವರ್ ಮಾಡುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ದುಬೈಗಾಗಿ ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಮೂಲಕ ನೀವು ಇವುಗಳನ್ನು ಆನಂದಿಸಬಹುದು –

● ನೆಟ್ವರ್ಕ್ ದುಬೈ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆಗಳು

● ಒಳರೋಗಿ ಆಸ್ಪತ್ರೆ ದಾಖಲಾತಿ

● ವೈದ್ಯಕೀಯ ಸ್ಥಳಾಂತರ ಮತ್ತು ಸ್ವದೇಶಕ್ಕೆ ವಾಪಸಾತಿ

● ದಂತ ಚಿಕಿತ್ಸೆಗಳು

● ಆಸ್ಪತ್ರೆ ನಗದು ಭತ್ಯೆ

ನಿಮ್ಮ ಬಜೆಟ್‌ ಮೇಲೆ ಒತ್ತಡ ಬೀಳದ ರೀತಿಯಲ್ಲಿ ದುಬೈನಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ಈ ಕವರೇಜ್ ಫೀಚರ್‌ಗಳು ನಿಮಗೆ ಸಹಾಯ ಮಾಡುತ್ತವೆ. ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್, ನೀವು ಪ್ರಯಾಣದಲ್ಲಿ ಎದುರಿಸಬಹುದಾದ ಇತರ ತುರ್ತು ಪರಿಸ್ಥಿತಿಗಳ ವಿರುದ್ಧ ರಕ್ಷಣೆ ನೀಡುವ ಹೆಚ್ಚುವರಿ ಕವರೇಜ್ ಪ್ರಯೋಜನಗಳೊಂದಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಗಿ ಕಾರ್ಯನಿರ್ವಹಿಸುತ್ತದೆ. ಅದಲ್ಲದೆ, ಈ ಪ್ಲಾನ್ ವೆಚ್ಚ-ಪರಿಣಾಮಕಾರಿಯಾಗಿದೆ. ಆದ್ದರಿಂದ, ದುಬೈನಲ್ಲಿ ನಿಮ್ಮನ್ನು ಇನ್ಶೂರ್ ಮಾಡುವ ಬದಲು, ಭಾರತದಲ್ಲಿಯೇ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಹೂಡಿಕೆ ಮಾಡುವುದು ಮತ್ತು ನಿಮ್ಮ ಪ್ರಯಾಣವನ್ನು ಪಾಕೆಟ್-ಫ್ರೆಂಡ್ಲಿ ದರಗಳಲ್ಲಿ ಸುರಕ್ಷಿತಗೊಳಿಸುವುದು ಉತ್ತಮವಾಗಿದೆ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x