ಹೋಮ್ / ಹೋಮ್ ಇನ್ಶೂರೆನ್ಸ್ / ಸಿಡಿಲಿನ ಹಾನಿಯ ವಿರುದ್ಧ ಇನ್ಶೂರೆನ್ಸ್ ಕವರೇಜ್

ನಿಮ್ಮ ಮನೆಗೆ ಲೈಟ್ನಿಂಗ್ ಇನ್ಶೂರೆನ್ಸ್ ಕವರೇಜ್

ನಿಮ್ಮ ಜೀವಮಾನದ ಅತ್ಯಂತ ಪ್ರಮುಖ ಮತ್ತು ದುಬಾರಿ ಹೂಡಿಕೆ ಎಂದರೆ ಮನೆ ಖರೀದಿಸುವುದು. ಹಾಗಾಗಿ, ಸಿಡಿಲು, ಭೂಕಂಪ ಮುಂತಾದ ನೈಸರ್ಗಿಕ ವಿಕೋಪಗಳಿಂದ ಅದನ್ನು ಕಾಪಾಡುವುದು ಬಹಳ ಮುಖ್ಯ. ನೈಸರ್ಗಿಕ ವಿಪತ್ತುಗಳು ಹೇಳಿಕೇಳಿ ಬರುವುದಿಲ್ಲ. ಅದರಲ್ಲೂ ಸಿಡಿಲು, ನಿಮ್ಮ ಆಸ್ತಿಗೆ ಭೀಕರ ಅಪಾಯ ತಂದೊಡ್ಡುತ್ತದೆ. ಏಕೆಂದರೆ ಇದು ಬೆಂಕಿ ಸೃಷ್ಟಿಸುತ್ತದೆ, ವೈರಿಂಗ್‌ ಸುಟ್ಟುಹಾಕುತ್ತದೆ, ಶಾರ್ಟ್‌ ಸರ್ಕ್ಯೂಟ್‌ ಉಂಟುಮಾಡುತ್ತದೆ ಮತ್ತು ಎಲೆಕ್ಟ್ರಿಕಲ್ ಅಪ್ಲಾಯನ್ಸ್‌ಗಳನ್ನು ಹಾಳುಮಾಡುತ್ತದೆ. ಇದು ವಿದ್ಯುತ್ ಏರಿಳಿತಕ್ಕೂ ಕಾರಣವಾಗಬಹುದು. ಇದರಿಂದ ಮನೆಯಲ್ಲಿರುವ ಫಿಟ್ಟಿಂಗ್‌ಗಳು, ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳು ಹಾಳಾಗಬಹುದು. ಕೆಲವು ಸಂದರ್ಭಗಳಲ್ಲಿ, ಸಿಡಿಲು ಬಡಿದ ನಂತರ ಇಡೀ ಮನೆಯ ಮರುನಿರ್ಮಾಣ ಮಾಡಬೇಕಾಗಬಹುದು. ಇದು ನಿಮ್ಮ ಹಣಕಾಸಿಗೂ, ಮನಸ್ಸಿಗೂ ಸಾಕಷ್ಟು ಘಾಸಿ ಮಾಡಬಹುದು.

ಅಂತಹ ವಿಕೋಪಗಳನ್ನು ನಿಯಂತ್ರಿಸಲು ಅಥವಾ ತಡೆಗಟ್ಟಲು ನೀವು ಏನನ್ನೂ ಮಾಡಲು ಸಾಧ್ಯವಿಲ್ಲದಿದ್ದರೂ, ಸಿಡಿಲಿನ ವಿರುದ್ಧ ಕವರೇಜ್‌ ನೀಡುವ ಸಮಗ್ರ ಹೋಮ್ ಇನ್ಶೂರೆನ್ಸ್ ಅಂತೂ ಖಂಡಿತ ಖರೀದಿಸಬಹುದು. ಈ ಕವರ್, ಮನೆಯ ಭಾಗಗಳಿಗೆ ಉಂಟಾದ ಹಾನಿಗಳು ಮಾತ್ರವಲ್ಲದೆ, ಫಿಕ್ಚರ್‌ ಮತ್ತು ಫಿಟ್ಟಿಂಗ್‌ಗಳು, ಎಲೆಕ್ಟ್ರಿಕಲ್ ಅಪ್ಲಾಯನ್ಸ್‌ಗಳು ಮತ್ತಿತರ ವಸ್ತುಗಳಿಗೆ ಉಂಟಾಗುವ ಹಾನಿಗಳನ್ನು ಕೂಡ ಕವರ್ ಮಾಡುತ್ತದೆ. ಲೈಟ್ನಿಂಗ್ ಕವರೇಜ್ ಒಂದು ಸ್ಟ್ಯಾಂಡ್‌ಅಲೋನ್ ಪಾಲಿಸಿಯಾಗಿ ಲಭ್ಯವಿಲ್ಲದಿದ್ದರೂ, ಅದನ್ನು ಹೋಮ್ ಇನ್ಶೂರೆನ್ಸ್ ಪ್ಲಾನ್‌ ಜೊತೆಗೆ ಸೇರಿಸಬಹುದು.

ಪ್ರಯೋಜನಗಳು

ನಿಮ್ಮ ಕನಸಿನ ಮನೆ ಖರೀದಿಸಲು, ಜೀವಮಾನದ ಉಳಿತಾಯವನ್ನೆಲ್ಲಾ ಖರ್ಚು ಮಾಡಿರುತ್ತೀರಿ. ಇದು ನಿಮ್ಮ ಪ್ರೀತಿಪಾತ್ರರೊಂದಿಗೆ ಅಮೂಲ್ಯ ನೆನಪುಗಳನ್ನು ಕಟ್ಟಿಕೊಳ್ಳುವ ಹಾಗೂ ನಿಮ್ಮ ಕನಸುಗಳನ್ನು ನನಸಾಗಿಸುವ ಸ್ಥಳ. ಹಾಗಾಗಿ, ಇದಕ್ಕೆ ಸಾಕಷ್ಟು ಭಾವನಾತ್ಮಕ ಮೌಲ್ಯ ಇರುತ್ತದೆ. ಆದ್ದರಿಂದ, ಸಿಡಿಲಿನ ವಿರುದ್ಧ ಕವರೇಜ್ ಒದಗಿಸುವ ಹೋಮ್ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವುದು ಒಳ್ಳೆಯದು. ಅಂತಹ ಪಾಲಿಸಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ

  • ಇದು ಮನೆಯ ಭಾಗಗಳನ್ನು ಮಾತ್ರವಲ್ಲದೆ ಮನೆಯಲ್ಲಿರುವ ವಸ್ತುಗಳನ್ನೂ ರಕ್ಷಿಸುತ್ತದೆ

  • ಆಭರಣ, ಬೆಳ್ಳಿ ಒಡವೆ, ಪ್ರಾಚೀನ ವಸ್ತುಗಳು, ಸೇರಿದಂತೆ ನಿಮ್ಮ ಎಲ್ಲಾ ಅಮೂಲ್ಯ ಸಂಪತ್ತನ್ನು ರಕ್ಷಿಸಲು ಸಮಗ್ರ ಕವರೇಜ್ ನೀಡಲಾಗುತ್ತದೆ

  • 24x7 ಬೆಂಬಲ ಹಾಗೂ ಸರಳ ಮತ್ತು ತೊಂದರೆ-ರಹಿತ ಕ್ಲೈಮ್ ಪ್ರಕ್ರಿಯೆ ಆನಂದಿಸಿ

  • ಗ್ರಾಹಕರ ಅನುಕೂಲಕ್ಕಾಗಿ ನೆಟ್ ಬ್ಯಾಂಕಿಂಗ್, ಕಾರ್ಡ್‌, UPI, ಮುಂತಾದ ಹಲವಾರು ಪಾವತಿ

  • ಫ್ಲೆಕ್ಸಿಬಲ್ ಅವಧಿ ಆಯ್ಕೆಗಳು ಸಿಗುತ್ತವೆ

ಏನನ್ನು ಒಳಗೊಂಡಿದೆ?

ಬೆಂಕಿ
ಬೆಂಕಿ

ಮನೆಯ ಭಾಗಗಳು ಹಾಗೂ ಎಲೆಕ್ಟ್ರಿಕಲ್ ಸಲಕರಣೆಗಳು, ಇನ್ನಿತರ ಫಿಕ್ಸ್‌ಚರ್‌ಗಳು ಮತ್ತು ಫಿಟ್ಟಿಂಗ್‌ಗಳಿಗೆ ಕವರೇಜ್

ದರೋಡೆ ಮತ್ತು ಕಳ್ಳತನ
ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬ್ರೇಕ್‌ಡೌನ್

ವಿದ್ಯುತ್ ಏರುಪೇರು, ಶಾರ್ಟ್ ಸರ್ಕ್ಯೂಟ್ ಅಥವಾ ಸಿಡಿಲಿನಿಂದ ಉಂಟಾದ ಹಾನಿ

ದರೋಡೆ ಮತ್ತು ಕಳ್ಳತನ
ಡೇಟಾ ನಷ್ಟ

ಎಲ್ಲಾ ಎಲೆಕ್ಟ್ರಾನಿಕ್ ಸಲಕರಣೆಗಳು

ದರೋಡೆ ಮತ್ತು ಕಳ್ಳತನ
ಮರುಸ್ಥಾಪನೆ

ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ದುರಸ್ತಿ ಮತ್ತು ಬದಲಾವಣೆ ವೆಚ್ಚ

ದರೋಡೆ ಮತ್ತು ಕಳ್ಳತನ
ಬದಲಿಸುವಿಕೆ

ಸಿಡಿಲು ಬಡಿದ ನಂತರ ಮನೆಯ ದುರಸ್ಥಿ ಆಗುವವರೆಗೂ ಪರ್ಯಾಯ ವಸತಿ ವ್ಯವಸ್ಥೆ

ಏನನ್ನು ಒಳಗೊಂಡಿಲ್ಲ?

cov-acc
ಉದ್ದೇಶಪೂರ್ವಕ ನಿರ್ಲಕ್ಷ್ಯ

ವಿಮೆ ಮಾಡಿಸಿದ ನಂತರ, ಮಾಲೀಕರ ಅಜಾಗರೂಕತೆಯಿಂದ ಉಂಟಾದ ಯಾವುದೇ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

cov-acc
ಅಮೂಲ್ಯ ವಸ್ತುಗಳು

ಅಮೂಲ್ಯ ಲೋಹದ ಗಟ್ಟಿಗಳು, ನಾಣ್ಯಗಳು, ಕಲಾಕೃತಿಗಳು ಇತ್ಯಾದಿ

cov-acc
1 ವರ್ಷಕ್ಕಿಂತ ಹಳೆಯ ವಸ್ತುಗಳು

ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹೆಚ್ಚು ಹಳೆಯದಾದ ಟೆಲಿವಿಷನ್‌ಗಳಿಗೆ, ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏಕೆಂದರೆ ಈ ಪಾಲಿಸಿಯನ್ನು, TV ಖರೀದಿಸಿದ ಒಂದು ವರ್ಷದೊಳಗೆ ತೆಗೆದುಕೊಳ್ಳಬೇಕು

cov-acc
ಇತರೆ ಕಾರಣಗಳು

ಸಿಡಿಲಿನ ಹೊರತಾಗಿ ಬೇರೆ ಕಾರಣದಿಂದ ಬೆಂಕಿ ಹೊತ್ತಿಕೊಂಡಿದ್ದರೆ

cov-acc
ದೋಷದ ಬಗ್ಗೆ ತಿಳಿಸದೇ ಇರುವುದು

ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದಿದ್ದರೆ ಅಥವಾ ಬೇಕೆಂತಲೇ ಮರೆಮಾಚಿದ್ದರೆ, ಅದನ್ನು ಈ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

cov-acc
ಉದ್ದೇಶಪೂರ್ವಕ ವಿಧ್ವಂಸ

ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ. ಕೈ ಜಾರಿ ನೆಲಕ್ಕೆ ಬೀಳುವುದು ಸೇರಿದಂತೆ, ಯಾವುದೇ ಅಪಘಾತದಿಂದ ಪ್ರಾಡಕ್ಟ್‌ನ ಭಾಗಗಳು ಮುರಿದರೆ ಅಥವಾ ಹಾನಿಯಾದರೆ, ಅದು ಕವರ್ ಆಗುವುದಿಲ್ಲ

Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Awards

ಸುರಕ್ಷಿತ #1.5+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
Awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
ಅಪ್ಡೇಟ್‌ ಪಡೆಯಿರಿ

ನಿಮ್ಮ ಆದ್ಯತೆಯ
ಕ್ಲೈಮ್‌ ಸಲ್ಲಿಕೆ ವಿಧಾನ ಆರಿಸಿ

ಹೋಮ್ ಇನ್ಶೂರೆನ್ಸ್ ಸಂಬಂಧಿತ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಮನೆ ಮಾಲೀಕರಿಗೆ ಮನೆಯ ರಚನೆ ಮತ್ತು ಫಿಕ್ಸರ್‌ಗಳು, ಫಿಟ್ಟಿಂಗ್‌ಗಳು ಮತ್ತು ಇತರ ಮನೆ ಉಪಕರಣಗಳು ಕವರ್ ಆಗುತ್ತವೆ. ಬಾಡಿಗೆದಾರರು ಮನೆಯ ಒಳಗಿನ ವಸ್ತುಗಳಿಗೆ ಮಾತ್ರ ಕವರೇಜ್ ಪಡೆಯಬಹುದು (ಅವರ ವೈಯಕ್ತಿಕ ಸ್ವಾಧೀನಗಳು)
ಒಂದೇ ಮಾನದಂಡವೆಂದರೆ ಆಸ್ತಿಯು ನೋಂದಾಯಿತ ವಸತಿ ಆವರಣದಲ್ಲಿರಬೇಕು ಮತ್ತು ನಿರ್ಮಾಣದ ಹಂತದಲ್ಲಿರಬಾರದು
ಪೇಯಿಂಗ್ ಗೆಸ್ಟ್ ಆಗಿ ನಿಮಗೆ ಸೇರಿದ ಲ್ಯಾಪ್‌ಟಾಪ್, ಮೊಬೈಲ್ ಮತ್ತು ಹೋಮ್ ಅಪ್ಲಾಯನ್ಸ್‌ಗಳಂತಹ ನಿಮ್ಮ ವಸ್ತುಗಳಿಗಾಗಿ ಲೈಟ್ನಿಂಗ್ ಕವರೇಜ್ ಆಯ್ಕೆ ಮಾಡಿಕೊಳ್ಳಬಹುದು.
ಒಂದು ವೇಳೆ ನೀವು ಸ್ವಲ್ಪ ಸಮಯದ ನಂತರ ಆಸ್ತಿಯನ್ನು ಮಾರಾಟ ಮಾಡುವ ಯೋಜನೆ ಹೊಂದಿದ್ದರೆ ಖಂಡಿತವಾಗಿಯೂ ನೀವು ಕಡಿಮೆ ಅವಧಿಯನ್ನು ಆಯ್ಕೆ ಮಾಡಬಹುದು. ಹೌದು, ಪ್ರೀಮಿಯಂ ಮೊತ್ತ ಮತ್ತು ಕವರೇಜ್ ಮೊತ್ತವು ಅದಕ್ಕೆ ಅನುಗುಣವಾಗಿ ಬದಲಾಗಬಹುದು.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x