ಹೋಮ್ / ಹೆಲ್ತ್ ಇನ್ಶೂರೆನ್ಸ್ / ಕೊರೋನಾ ಕವಚ್ ಪಾಲಿಸಿ
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಐಚ್ಛಿಕ ಕವರ್
  • FAQ

ಕೊರೋನಾ ಕವಚ್ ಪಾಲಿಸಿ

ಎಚ್‌ಡಿಎಫ್‌ಸಿ ಎರ್ಗೋದ ಕೊರೋನಾ ಕವಚ್ ಪಾಲಿಸಿಯನ್ನು ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ವಿನ್ಯಾಸಗೊಳಿಸಲಾಗಿದೆ. ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಕೊರೋನಾ ಕವಚ್ ಪಾಲಿಸಿಯನ್ನು ಪ್ರಾರಂಭಿಸಿದ್ದು, ಭಾರತದ ಎಲ್ಲಾ ಜನರಲ್ ಮತ್ತು ಸ್ಟ್ಯಾಂಡ್‌ಅಲೋನ್ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಕಡ್ಡಾಯವಾಗಿ ಈ ಪಾಲಿಸಿಯನ್ನು ಒದಗಿಸುವಂತೆ ಸೂಚಿಸಿದೆ. ಕೋವಿಡ್-19 ಪಾಸಿಟಿವ್ ಎಂದು ಧೃಢಪಟ್ಟ ಇನ್ಶೂರ್ಡ್ ವ್ಯಕ್ತಿಯ ಆಸ್ಪತ್ರೆ ದಾಖಲಾತಿ, ಆಸ್ಪತ್ರೆ ದಾಖಲಾತಿಗೆ ಮುಂಚೆ ಮತ್ತು ನಂತರದ ವೆಚ್ಚಗಳು, ಹೋಮ್ ಕೇರ್ ಚಿಕಿತ್ಸೆ ವೆಚ್ಚಗಳು ಮತ್ತು ಆಯುಷ್ ಚಿಕಿತ್ಸೆಯನ್ನು ಕವರ್ ಮಾಡುವುದೇ ಇದರ ಗುರಿ. ಎಚ್‌ಡಿಎಫ್‌ಸಿ ಎರ್ಗೋದ ಕೊರೋನಾ ಕವಚ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಿ ಮತ್ತು ಈ ಮಹಾಮಾರಿ ಸಮಯದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳಿಗೆ ಅಕ್ಸೆಸ್ ಪಡೆಯಿರಿ.

ಕೋವಿಡ್-19 ಇನ್ಶೂರೆನ್ಸ್ ಎಂದರೇನು?

ಕೋವಿಡ್-19 ಇನ್ಶೂರೆನ್ಸ್, ಇತರ ಹೆಲ್ತ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳಂತೆ, ಕೊರೋನಾವೈರಸ್ ಆರೋಗ್ಯ ತುರ್ತುಸ್ಥಿತಿಗಳ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. 2020 ರಲ್ಲಿ ಪ್ರಾರಂಭವಾದ ಕೊರೋನಾವೈರಸ್ ಜಾಗತಿಕ ವಿಪತ್ತುಗಳಿಂದಾಗಿ ಕೋವಿಡ್-19 ಇನ್ಶೂರೆನ್ಸ್ ಪ್ಲಾನನ್ನು ಪರಿಚಯಿಸಲಾಯಿತು. ಆ ಸಮಯದಲ್ಲಿ, ಪರಿಸ್ಥಿತಿಯ ತೀವ್ರತೆಯನ್ನು ನೋಡುತ್ತಿರುವಾಗ, ಭಾರತೀಯ ಇನ್ಶೂರೆನ್ಸ್ ನಿಯಂತ್ರಕ ಅಭಿವೃದ್ಧಿ ಪ್ರಾಧಿಕಾರವು (IRDAI) ಕೋವಿಡ್-19 ವೈದ್ಯಕೀಯ ಬಿಲ್‌ಗಳ ವಿರುದ್ಧ ಆರ್ಥಿಕವಾಗಿ ರಕ್ಷಿಸಲು ಗ್ರಾಹಕರಿಗೆ ಸಹಾಯ ಮಾಡಲು ಪ್ರಮುಖ ಕೋವಿಡ್-19 ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾದ ಕೊರೋನಾ ಕವಚ್ ಅನ್ನು ಪ್ರಾರಂಭಿಸಲು ಕಡ್ಡಾಯವಾಗಿಸಿದೆ

ಕೋವಿಡ್-19 ಈಗಾಗಲೇ ವಿಶ್ವದಾದ್ಯಂತ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಕೊರೋನಾವೈರಸ್ ಪ್ಯಾಂಡೆಮಿಕ್ ಇನ್ನೂ ಮುಗಿದಿಲ್ಲ. ಪ್ರಸ್ತುತ ಕೋವಿಡ್-19 ರೂಪಾಂತರಿ BF.7 ಚೀನಾದಲ್ಲಿ ವಿನಾಶವನ್ನೇ ಸೃಷ್ಟಿಸುತ್ತಿದೆ ಮತ್ತು ಕೆಲವು ಕೇಸ್‌ಗಳನ್ನು ಭಾರತದ ಕೆಲವು ಭಾಗಗಳಲ್ಲಿಯೂ ಪತ್ತೆ ಮಾಡಲಾಗಿದೆ. ಆದ್ದರಿಂದ, ಪರಿಸ್ಥಿತಿ ಬಿಗಡಾಯಿಸಿದರೆ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇನ್ನಷ್ಟು ಮುಖ್ಯವಾಗಿದೆ. ಮಾಸ್ಕ್‌ಗಳನ್ನು ಧರಿಸುವುದು, ತೊಳೆಯುವುದು ಮತ್ತು ಸ್ಯಾನಿಟೈಸ್ ಮಾಡಿದ ಹ್ಯಾಂಡ್‌ಗಳು ಇತ್ಯಾದಿಗಳು ಜನರು ಅನುಸರಿಸಬೇಕಾದ ಪ್ರಮುಖ ಪ್ರೋಟೋಕಾಲ್ ಆಗಿವೆ. ಅದಲ್ಲದೆ, ಕೋವಿಡ್-19 ಸಂಬಂಧಿತ ಚಿಕಿತ್ಸೆಗಳನ್ನು ಕವರ್ ಮಾಡುವ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಮುಖ್ಯವಾಗಿದೆ. ನಿಯಮಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊರತುಪಡಿಸಿ, ಕೊರೋನಾ ಕವಚ್ ಪಾಲಿಸಿಯನ್ನು ಪ್ರತ್ಯೇಕವಾಗಿ ಖರೀದಿಸಬಹುದು.

ನಿಮಗೆ ಕೊರೋನಾ ಕವಚ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಏಕೆ ಬೇಕು?

  • PPE ಕಿಟ್‌ಗಳು, ಆಕ್ಸಿಜನ್, ವೆಂಟಿಲೇಟರ್‌ಗಳು ಮತ್ತು ಕನ್ಸಲ್ಟೇಶನ್ ಶುಲ್ಕಗಳಿಗೆ ಸಂಬಂಧಿಸಿದ ನಿಮ್ಮ ಎಲ್ಲಾ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.
  • ಕೋವಿಡ್-19 ಪಾಸಿಟಿವ್ ಆಗಿರುವ ಇನ್ಶೂರ್ಡ್ ವ್ಯಕ್ತಿಗಳು ತಮ್ಮ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುವಾಗ ಬರುವ ಹೋಮ್ ಕೇರ್ ವೆಚ್ಚಗಳನ್ನು ಕೂಡ ಕವರ್ ಮಾಡುತ್ತೇವೆ.
  • ಆಸ್ಪತ್ರೆ ದಾಖಲಾತಿಯ ಮೊದಲು ಮತ್ತು ನಂತರದ ವೆಚ್ಚಗಳು, ಅಂದರೆ ಆಸ್ಪತ್ರೆಗೆ ದಾಖಲಾಗುವ 15 ದಿನಗಳ ಮೊದಲು ಮತ್ತು ಡಿಸ್ಚಾರ್ಜ್ ನಂತರದ 30 ದಿನಗಳವರೆಗಿನ ವೆಚ್ಚಗಳನ್ನು ಮರುಪಾವತಿಸಲಾಗುತ್ತದೆ.
  • ಹೋಮ್‌ಕೇರ್ ಚಿಕಿತ್ಸೆಯ ಸಮಯದಲ್ಲಿ ಉಂಟಾದ ವೈದ್ಯಕೀಯ ವೆಚ್ಚಗಳನ್ನು 14 ದಿನಗಳವರೆಗೆ ಕವರ್ ಮಾಡಲಾಗುತ್ತದೆ.
  • ನೀವು ಆಯುಷ್ ಚಿಕಿತ್ಸೆಯನ್ನು ಆಯ್ಕೆ ಮಾಡಿದರೆ, ಅದನ್ನು ಪಾಲಿಸಿಯ ಭಾಗವಾಗಿ ಕವರ್ ಮಾಡಲಾಗುತ್ತದೆ.
  • ಈ ಪಾಲಿಸಿಯು ರೋಡ್ ಆಂಬ್ಯುಲೆನ್ಸ್ ಕವರ್ ಒದಗಿಸುತ್ತದೆ. ಅಂದರೆ ಮನೆಯಿಂದ ಆಸ್ಪತ್ರೆಗೆ ಅಥವಾ ಆಸ್ಪತ್ರೆಗೆ ಆಂಬ್ಯುಲೆನ್ಸ್‌ನಲ್ಲಿ ವರ್ಗಾಯಿಸುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡುತ್ತದೆ.
  • 12,000 + ಕ್ಕಿಂತ ಹೆಚ್ಚು ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ, ನಿಮ್ಮ ಸಮೀಪದಲ್ಲಿ ಅತ್ಯುತ್ತಮ ಚಿಕಿತ್ಸೆಯನ್ನು ಕಂಡುಕೊಳ್ಳುವುದು ಸುಲಭವಾಗಿರುತ್ತದೆ.
  • 1.3 ಕೋಟಿಗಿಂತ ಹೆಚ್ಚಿನ ಸಂತೃಪ್ತ ಗ್ರಾಹಕರು ಎಚ್‌ಡಿಎಫ್‌ಸಿ ಎರ್ಗೋ ಮೇಲೆ ನಂಬಿಕೆ ಇಟ್ಟಿದ್ದಾರೆ.

ಕೋವಿಡ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ?

ನೀವು ನಿರ್ಧರಿಸಬೇಕಾದ ಮೊದಲ ಮತ್ತು ಪ್ರಮುಖ ವಿಷಯವೆಂದರೆ ನಿಮಗೆ ಅಗತ್ಯವಿರುವ ಕೋವಿಡ್-19 ಇನ್ಶೂರೆನ್ಸ್ ಪಾಲಿಸಿಯ ವಿಧವಾಗಿದೆ. ನೀವು ವೈಯಕ್ತಿಕ ಕೊರೋನಾ ಕವಚ್ ಪಾಲಿಸಿಯನ್ನು ಆಯ್ಕೆ ಮಾಡಬಹುದು ಅಥವಾ ನೀವು ಕೌಟುಂಬಿಕ ಕೊರೋನಾ ಕವಚ್ ಪಾಲಿಸಿಯನ್ನು ಖರೀದಿಸಬಹುದು. ಇದು ನಿಮ್ಮ ಅವಶ್ಯಕತೆಗಳನ್ನು ಅವಲಂಬಿಸಿರುತ್ತದೆ ಮತ್ತು ನಿಮ್ಮ ಪ್ರಸ್ತುತ ಹಣಕಾಸಿನ ಸ್ಥಿತಿ, ಆರೋಗ್ಯ ಸ್ಥಿತಿ, ಭವಿಷ್ಯದ ಅವಶ್ಯಕತೆಗಳು, ವೈದ್ಯಕೀಯ ಹಣದುಬ್ಬರ ಇತ್ಯಾದಿಗಳನ್ನು ನೀವು ಪರಿಗಣಿಸಬೇಕು. ಕೊರೋನಾವೈರಸ್‌ನ ಹೊಸ ರೂಪಾಂತರಗಳನ್ನು ಗುರುತಿಸಲಾಗುತ್ತಿರುವುದರಿಂದ, ಇತ್ತೀಚಿನದು ಕೋವಿಡ್-19 BF.7 ರೂಪಾಂತರವಾಗಿದೆ. ನೀವು ಕೊರೋನಾ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು ಈ ಪಾಲಿಸಿಗಳು ನಿಮಗೆ ಮತ್ತು ನಿಮ್ಮ ಕುಟುಂಬದ ಯೋಗಕ್ಷೇಮಕ್ಕೆ ಸಾಕಾಗುತ್ತವೆಯೇ ಎಂಬುದನ್ನು ನಿರ್ಧರಿಸಬೇಕು. ಈಗ ಕೋವಿಡ್-19 ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಸುಲಭ. ನಿಮ್ಮ ಮನೆಯಿಂದಲೇ ಆರಾಮದಿಂದ ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ನೀವು ಆನ್ಲೈನ್ ಇನ್ಶೂರೆನ್ಸ್ ಖರೀದಿಸುತ್ತೀರಿ. ಆನ್ಲೈನ್ ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ನೀವು ಅನುಸರಿಸಬೇಕಾದ ಕೆಲವು ಹಂತಗಳು ಈ ಕೆಳಗಿನಂತಿವೆ.
  • ಇನ್ಶೂರೆನ್ಸ್ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಕೋವಿಡ್-19 ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಗಳನ್ನು ನೋಡಲು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
  • ನಿಮಗೆ ಸೂಕ್ತವಾದ ವಿಮಾ ಮೊತ್ತವನ್ನು ಆಯ್ಕೆಮಾಡಿ.
  • ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿದ ನಂತರ, ನೀವು ಪ್ರೀಮಿಯಂ ಪಾವತಿಸಬೇಕಾಗುತ್ತದೆ.
  • ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ವಿವರಗಳನ್ನು ಸಲ್ಲಿಸಿದ ನಂತರ, ನಿಮಗೆ ಶೀಘ್ರದಲ್ಲೇ ನಿಮ್ಮ ಕೋವಿಡ್-19 ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್ ಕಳುಹಿಸಲಾಗುತ್ತದೆ.

ಎಚ್‌ಡಿಎಫ್‌ಸಿ ಎರ್ಗೋದ ಕೊರೋನಾ ಕವಚ್ ಪಾಲಿಸಿ ಆಯ್ಕೆ ಮಾಡಲು ಪ್ರಮುಖ ಕಾರಣಗಳು

12,000 + ನಗದುರಹಿತ ನೆಟ್ವರ್ಕ್ ಆಸ್ಪತ್ರೆಗಳು

ಅಗತ್ಯವಿರುವ ಸಮಯದಲ್ಲಿ ಹಣಕಾಸಿನ ನೆರವಿನ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ, ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುವಾಗ ನಾವು ನಗದುರಹಿತ ಆಸ್ಪತ್ರೆ ದಾಖಲಾತಿ ಸೌಲಭ್ಯವನ್ನು ಒದಗಿಸುವುದರಿಂದ, ಹಣಕಾಸಿನ ಬಗ್ಗೆ ನೀವು ಚಿಂತೆ ಮಾಡಬೇಕಾಗಿಲ್ಲ.

1.3 ಕೋಟಿ+ ಸಂತೃಪ್ತ ಗ್ರಾಹಕರ ನಂಬಿಕೆ

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ಕೊರೋನಾ ಕವಚ್ ಪಾಲಿಸಿಯ ಅಡಿಯಲ್ಲಿ ಕೋ-ಮಾರ್ಬಿಡ್ ಪರಿಸ್ಥಿತಿಗಳಿಗೆ ಕವರೇಜ್

ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಕಡ್ಡಾಯಗೊಳಿಸಿರುವ ಕೊರೋನಾ ಕವಚ್ ಪಾಲಿಸಿಯು, ಇನ್ಶೂರ್ಡ್ ವ್ಯಕ್ತಿಗೆ ಕೋವಿಡ್-19 ಧೃಢಪಟ್ಟ ನಂತರ ತಗುಲುವ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡುತ್ತದೆ. ಅಷ್ಟೇ ಅಲ್ಲ, ಆಸ್ಪತ್ರೆ ದಾಖಲಾತಿ ಅವಧಿಯಲ್ಲಿ ಕೋವಿಡ್-19 ಕಾರಣದಿಂದಾಗಿ ಉಲ್ಬಣಗೊಂಡ ಯಾವುದೇ ಕೋ-ಮಾರ್ಬಿಡಿಟಿಯನ್ನೂ ಸಹ ಪಾಲಿಸಿಯು ಕವರ್ ಮಾಡುತ್ತದೆ. ಆದರೆ, ಈ ಪಾಲಿಸಿಯು ಪ್ರಸ್ತುತ ಮಹಾಮಾರಿಗೆ ಸಂಬಂಧಿಸದ ಯಾವುದೇ ಇತರ ಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ. ನೀವು ಇತರ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳ ವಿರುದ್ಧ ಇನ್ಶೂರೆನ್ಸ್ ಪಡೆಯಲು ಬಯಸಿದರೆ, ಒಂದು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಬೇಕು. ಕೊರೋನಾ ಕವಚ್ ಪಾಲಿಸಿಯನ್ನು ವೈಯಕ್ತಿಕವಾಗಿ ಅಥವಾ ಫ್ಯಾಮಿಲಿ ಫ್ಲೋಟರ್ ಪ್ಲಾನ್ ಆಗಿ ಖರೀದಿಸಬಹುದು. ಆದರೆ ಇದನ್ನು 18 ರಿಂದ 65 ವರ್ಷಗಳ ನಡುವಿನ ವ್ಯಕ್ತಿಗಳು ಮಾತ್ರ ಪಡೆಯಬಹುದು.

ಆದರೆ, ಈ ಪಾಲಿಸಿಯು ಪ್ರಸ್ತುತ ಮಹಾಮಾರಿಗೆ ಸಂಬಂಧಿಸದ ಯಾವುದೇ ಇತರ ಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ. ನೀವು ಇತರ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳ ವಿರುದ್ಧ ಇನ್ಶೂರೆನ್ಸ್ ಪಡೆಯಲು ಬಯಸಿದರೆ, ಒಂದು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಬೇಕು. ಕೊರೋನಾ ಕವಚ್ ಪಾಲಿಸಿಯನ್ನು ವೈಯಕ್ತಿಕವಾಗಿ ಅಥವಾ ಫ್ಯಾಮಿಲಿ ಫ್ಲೋಟರ್ ಪ್ಲಾನ್ ಆಗಿ ಖರೀದಿಸಬಹುದು. ಆದರೆ ಇದನ್ನು 18 ರಿಂದ 65 ವರ್ಷಗಳ ನಡುವಿನ ವ್ಯಕ್ತಿಗಳು ಮಾತ್ರ ಪಡೆಯಬಹುದು.

ಕೊರೋನಾ ಕವಚ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೇನು ಕವರ್ ಆಗುತ್ತದೆ?

cov-acc

ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು

ಬೆಡ್-ಶುಲ್ಕ, ನರ್ಸಿಂಗ್ ಶುಲ್ಕ, ರಕ್ತ ಪರೀಕ್ಷೆ, PPE ಕಿಟ್‌ಗಳು, ಆಕ್ಸಿಜನ್, ICU ಮತ್ತು ವೈದ್ಯರ ಸಮಾಲೋಚನೆ ಶುಲ್ಕ ಸೇರಿದಂತೆ ಪ್ರತಿಯೊಂದೂ ಕವರ್ ಆಗುತ್ತದೆ.

cov-acc

ಆಸ್ಪತ್ರೆ ದಾಖಲಾತಿಯ ಮುಂಚಿತ ಕವರ್

ಆಸ್ಪತ್ರೆಗೆ ದಾಖಲಾಗುವ ಮೊದಲು, ವೈದ್ಯರ ಸಮಾಲೋಚನೆ, ಚೆಕ್-ಅಪ್ ಮತ್ತು ಡಯಾಗ್ನೊಸಿಸ್‌ಗೆ ಸಂಬಂಧಿಸಿದ ವೈದ್ಯಕೀಯ ಖರ್ಚುಗಳು ಇರುತ್ತವೆ. ನಾವು ಅಂತಹ ವೆಚ್ಚಗಳ ಕವರೇಜ್ ಅನ್ನು ಆಸ್ಪತ್ರೆ ದಾಖಲಾತಿಯ 15 ದಿನಗಳ ಮೊದಲು ಒದಗಿಸುತ್ತೇವೆ. ನಾವು ಕೋವಿಡ್-19 ಗೆ ಸಂಬಂಧಿಸಿದ ಡಯಾಗ್ನಸ್ಟಿಕ್ಸ್ ವೆಚ್ಚಗಳನ್ನು ಕೂಡ ಕವರ್ ಮಾಡುತ್ತೇವೆ.

cov-acc

ಆಸ್ಪತ್ರೆ ದಾಖಲಾತಿ ನಂತರದ ಕವರ್

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 30 ದಿನಗಳವರೆಗೆ ಉಂಟಾಗುವ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ಪಡೆಯಿರಿ.

ನಗದುರಹಿತ ಹೋಮ್ ಹೆಲ್ತ್ ಕೇರ್**

ಹೋಮ್ ಕೇರ್ ಚಿಕಿತ್ಸೆ ವೆಚ್ಚಗಳು

ನೀವು ಮನೆಯಲ್ಲೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರೆ, ನಾವು ಆರೋಗ್ಯ ಮೇಲ್ವಿಚಾರಣೆ, ಔಷಧಿ ವೆಚ್ಚಗಳಿಗೆ ಸಂಬಂಧಿಸಿದ ವೈದ್ಯಕೀಯ ಖರ್ಚುಗಳನ್ನು 14 ದಿನಗಳವರೆಗೆ ಕವರ್ ಮಾಡುತ್ತೇವೆ.

cov-acc

ಆಯುಷ್ ಚಿಕಿತ್ಸೆ (ಅಲೋಪಥಿಕ್- ಅಲ್ಲದ)

ನಾವು ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ತರಹದ ಚಿಕಿತ್ಸಾ ವಿಧಾನಗಳನ್ನೂ ಬೆಂಬಲಿಸುತ್ತೇವೆ. ನೀವು ಯಾವ ಚಿಕಿತ್ಸೆ ವಿಧಾನ ಆಯ್ಕೆ ಮಾಡಿದರೂ ಸರಿ, ನಾವು ಯಾವಾಗಲೂ ನಿಮ್ಮ ಸಹಾಯಕ್ಕೆ ನಿಲ್ಲುತ್ತೇವೆ.

ರೋಡ್ ಆಂಬ್ಯುಲೆನ್ಸ್ ಕವರ್

ರೋಡ್ ಆಂಬ್ಯುಲೆನ್ಸ್ ಕವರ್

ಆಂಬ್ಯುಲೆನ್ಸ್‌ನಲ್ಲಿ ಮನೆಯಿಂದ ಆಸ್ಪತ್ರೆಗೆ ಅಥವಾ ಆಸ್ಪತ್ರೆಯಿಂದ ಮನೆಗೆ ವರ್ಗಾವಣೆಯನ್ನು ಕೂಡ ಕವರ್ ಮಾಡಲಾಗುತ್ತದೆ. ಪ್ರತಿ ಆಸ್ಪತ್ರೆ ದಾಖಲಾತಿಗೆ ನಾವು ₹2000 ಪಾವತಿಸುತ್ತೇವೆ.

ಕೊರೋನಾ ಕವಚ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನನ್ನು ಕವರ್ ಮಾಡಲಾಗುವುದಿಲ್ಲ?

ಡಯಾಗ್ನಸ್ಟಿಕ್ ವೆಚ್ಚಗಳು

ಡಯಾಗ್ನಸ್ಟಿಕ್ ವೆಚ್ಚಗಳು

ಈಗಿನ ಡಯಾಗ್ನಸ್ಟಿಕ್ಸ್ ಮತ್ತು ಚಿಕಿತ್ಸೆಗೆ ಸಂಬಂಧಪಡದ ಅಥವಾ ಆಕಸ್ಮಿಕವಲ್ಲದ ಡಯಾಗ್ನಸ್ಟಿಕ್ಸ್ ಮತ್ತು ಮೌಲ್ಯಮಾಪನ ಉದ್ದೇಶಗಳಿಗಾಗಿ ಆಸ್ಪತ್ರೆಗೆ ದಾಖಲಾಗುವುದು.

ಪುನಶ್ಚೇತನ ಮತ್ತು ಆರೈಕೆ

ಪುನಶ್ಚೇತನ ಮತ್ತು ಆರೈಕೆ

ಬೆಡ್ ರೆಸ್ಟ್, ಮನೆ ಆರೈಕೆ ಅಥವಾ ವೃತ್ತಿಪರ ಮತ್ತು ವೃತ್ತಿಪರವಲ್ಲದ ನರ್ಸಿಂಗ್ ಸೌಲಭ್ಯಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ.

ಡಯಟರಿ ಸಪ್ಲಿಮೆಂಟ್‌ಗಳು

ಡಯಟರಿ ಸಪ್ಲಿಮೆಂಟ್‌ಗಳು

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದ ಔಷಧಿಯನ್ನು ಖರೀದಿಸಲು ಮಾಡಿದ ಖರ್ಚುಗಳನ್ನು ಕವರ್ ಮಾಡಲಾಗುವುದಿಲ್ಲ.

ಸಾಬೀತಾಗದ ಚಿಕಿತ್ಸೆಗಳು

ಸಾಬೀತಾಗದ ಚಿಕಿತ್ಸೆಗಳು

ತನ್ನ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಗಮನಾರ್ಹ ವೈದ್ಯಕೀಯ ದಾಖಲೆಗಳಿಲ್ಲದ ಯಾವುದೇ ಸಾಬೀತಾಗದ ಚಿಕಿತ್ಸೆ, ಸೇವೆ ಮತ್ತು ಔಷಧಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ. ಆದಾಗ್ಯೂ, ಕೋವಿಡ್-19 ಚಿಕಿತ್ಸೆಗಾಗಿ ಸರ್ಕಾರದಿಂದ ಪ್ರಮಾಣೀಕರಿಸಲ್ಪಟ್ಟ ಚಿಕಿತ್ಸೆಯನ್ನು ಕವರ್ ಮಾಡಲಾಗುತ್ತದೆ.

ಜೈವಿಕ ಯುದ್ಧ

ಜೈವಿಕ ಯುದ್ಧ

ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಯುದ್ಧಗಳಿಗೆ ಸಂಬಂಧಿಸಿದ ಯಾವುದೇ ಕ್ಲೇಮ್ ಅನ್ನು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವುದಿಲ್ಲ.

ಡೇ ಕೇರ್ ಚಿಕಿತ್ಸೆಗಳು

ಡೇ ಕೇರ್ ಚಿಕಿತ್ಸೆಗಳು

OPD ಚಿಕಿತ್ಸೆಗಳು ಅಥವಾ ಡೇ ಕೇರ್ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳು ಕವರ್ ಆಗುವುದಿಲ್ಲ.

ಲಸಿಕೆ ಹಾಕುವಿಕೆ

ಲಸಿಕೆ ಹಾಕುವಿಕೆ

ಇನಾಕ್ಯುಲೇಶನ್‌, ವ್ಯಾಕ್ಸಿನೇಶನ್‌ ಅಥವಾ ಇತರ ಮುಂಜಾಗೃತಾ ಚಿಕಿತ್ಸೆಗಳಿಗೆ ಸಂಬಂಧಿಸಿದ ಯಾವುದೇ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ.

ಭಾರತದ ಹೊರಗಿನ ಡಯಾಗ್ನಸಿಸ್

ಭಾರತದ ಹೊರಗಿನ ಡಯಾಗ್ನಸಿಸ್

ದೇಶದ ಭೌಗೋಳಿಕ ಮಿತಿಗಳ ಹೊರಗೆ ತೆಗೆದುಕೊಳ್ಳಲಾದ ಚಿಕಿತ್ಸೆಗೆ ನಾವು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವುದಿಲ್ಲ.

ಅನಧಿಕೃತ ಟೆಸ್ಟಿಂಗ್

ಅನಧಿಕೃತ ಟೆಸ್ಟಿಂಗ್

ಸರ್ಕಾರದಿಂದ ಅಧಿಕೃತವಾಗಿಲ್ಲದ ಡಯಾಗ್ನಸ್ಟಿಕ್ ಸೆಂಟರ್‌ನಲ್ಲಿ ಮಾಡಲಾದ ಪರೀಕ್ಷೆಯನ್ನು ಈ ಪಾಲಿಸಿಯ ಅಡಿಯಲ್ಲಿ ಪರಿಗಣಿಸುವುದಿಲ್ಲ.

ಐಚ್ಛಿಕ ಕವರ್

ಆಸ್ಪತ್ರೆ ಡೈಲಿ ಕ್ಯಾಶ್‌

ನಿಮ್ಮ ದೈನಂದಿನ ಹಣಕಾಸು ಅಗತ್ಯಗಳಿಗೆ ಭತ್ಯೆ ಪಡೆಯಿರಿ!

ಕೋವಿಡ್-19 ಚಿಕಿತ್ಸೆಗಾಗಿ ನೀವು ಆಸ್ಪತ್ರೆಗೆ ದಾಖಲಾಗುವ ದಿನಾಂಕದಿಂದ ಮುಂದಿನ 15 ದಿನಗಳವರೆಗೆ, ಪ್ರತಿ 24 ಗಂಟೆಗಳಿಗೊಮ್ಮೆ ವಿಮಾ ಮೊತ್ತದ 0.5% ಅನ್ನು ಪಡೆಯುತ್ತೀರಿ.


ಇದು ಹೇಗೆ ಕೆಲಸ ಮಾಡುತ್ತದೆ? ನೀವು ಕೊರೋನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದೀರಿ ಮತ್ತು ನೀವು 1 ಲಕ್ಷದ ಇನ್ಶೂರೆನ್ಸ್ ಮಾಡಿಸಿದ್ದೀರಿ ಎಂದುಕೊಳ್ಳಿ. ಆ ಸಂದರ್ಭದಲ್ಲಿ, ನಿಮ್ಮ ಆಸ್ಪತ್ರೆ ದಾಖಲಾತಿ ಅವಧಿಯ ಗರಿಷ್ಠ 15 ದಿನಗಳವರೆಗೆ ನಿಮ್ಮ ವಿಮಾ ಮೊತ್ತದ 0.5% ಅನ್ನು ನಾವು ಪ್ರತಿದಿನ ಪಾವತಿಸುತ್ತೇವೆ. ಅಂದರೆ, ₹1 ಲಕ್ಷದ ವಿಮಾ ಮೊತ್ತದೊಂದಿಗೆ ನೀವು ಪ್ರತಿ 24 ಗಂಟೆಗೊಮ್ಮೆ ₹500 ಅನ್ನು ಆಸ್ಪತ್ರೆಯ ದೈನಂದಿನ ನಗದು ಭತ್ಯೆಯಾಗಿ ಪಡೆಯುತ್ತೀರಿ

ಕೊರೋನಾ ಕವಚ್ ಪಾಲಿಸಿಗೆ 15 ದಿನಗಳ ಕಾಯುವ ಅವಧಿಯನ್ನು ಸೂಚಿಸಲಾಗಿದೆ.

ಕೊರೋನಾ ಕವಚ್ ಪಾಲಿಸಿ, ಎಚ್‌ಡಿಎಫ್‌ಸಿ ಎರ್ಗೋ UIN: HDFHLIP21078V012021


ಮೇಲೆ ತಿಳಿಸಲಾದ ಸೇರ್ಪಡೆಗಳು, ಪ್ರಯೋಜನಗಳು, ಹೊರತುಪಡಿಸುವಿಕೆಗಳು ಮತ್ತು ಕಾಯುವ ಅವಧಿಗಳು ಸಾರಾಂಶ ರೂಪದಲ್ಲಿವೆ ಮತ್ತು ವಿವರಣಾತ್ಮಕ ಉದ್ದೇಶಕ್ಕಾಗಿ ಮಾತ್ರ ನೀಡಲ್ಪಟ್ಟಿವೆ. ಈ ಪ್ರಾಡಕ್ಟ್, ಅದರ ಕಾಯುವ ಅವಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳ ವಿಮಾ ಮೊತ್ತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ದಾಖಲೆಗಳನ್ನು ನೋಡಿ. ದಯವಿಟ್ಟು ಗಮನಿಸಿ: ಇನ್ಶೂರ್ಡ್‌ ವ್ಯಕ್ತಿಯು ಭಾರತ ಸರ್ಕಾರದಿಂದ ಪ್ರಯಾಣ ನಿರ್ಬಂಧದಲ್ಲಿ ಇರಿಸಲಾದ ಯಾವುದೇ ದೇಶಕ್ಕೆ ಪ್ರಯಾಣಿಸಿದರೆ ನಿಮ್ಮ ಪಾಲಿಸಿ ಕವರೇಜ್ ಅನ್ನು ನಿಲ್ಲಿಸಲಾಗುತ್ತದೆ.

ಕುಟುಂಬಕ್ಕಾಗಿ ಕೊರೋನಾ ಕವಚ್ ಪಾಲಿಸಿ

ಇಡೀ ಕುಟುಂಬಕ್ಕೆ ಒಂದೇ ಅನುಕೂಲಕರ ಪ್ರೀಮಿಯಂ
₹5 ಲಕ್ಷದವರೆಗಿನ ಒಂದೇ ವಿಮಾ ಮೊತ್ತದ ಅಡಿಯಲ್ಲಿ ನಿಮ್ಮ ಇಡೀ ಕುಟುಂಬವನ್ನು ಕವರ್ ಮಾಡಿ. ಇದರರ್ಥ, ನಿಮ್ಮ ಇಡೀ ಕುಟುಂಬಕ್ಕೆ ನೀವು ಒಂದೇ ಪ್ರೀಮಿಯಂ ಪಾವತಿಸುತ್ತೀರಿ ಮತ್ತು ಒಂದೇ ಪ್ಲಾನ್ ಅನ್ನು ಹಂಚಿಕೊಳ್ಳುತ್ತೀರಿ.
ಒಂದೇ ಪ್ಲಾನ್‌ನಲ್ಲಿ 6 ಕುಟುಂಬ ಸದಸ್ಯರವರೆಗೆ ಕವರ್ ಮಾಡಿ
18 ರಿಂದ 65 ವರ್ಷಗಳ ನಡುವಿನ ಯಾವುದೇ ವ್ಯಕ್ತಿಯು ತಾವು, ತಮ್ಮ ಸಂಗಾತಿ, ಪೋಷಕರು ಮತ್ತು ಸಂಗಾತಿಯ ಪೋಷಕರು ಹಾಗೂ 1 ದಿನದಿಂದ 25 ವರ್ಷ ವಯಸ್ಸಿನ ಅವಲಂಬಿತ ಮಕ್ಕಳಿಗೆ ಕೊರೋನಾ ಕವಚ್ ಫ್ಯಾಮಿಲಿ ಫ್ಲೋಟರ್ ಪಾಲಿಸಿ ತೆಗೆದುಕೊಳ್ಳಬಹುದು.

ವ್ಯಕ್ತಿಗಳಿಗಾಗಿ ಕೊರೋನಾ ಕವಚ್ ಪಾಲಿಸಿ

ಉತ್ತಮ ಕವರೇಜ್‌ಗಾಗಿ ವೈಯಕ್ತಿಕ ಯೋಜನೆ
ಪ್ರತಿಯೊಬ್ಬರೂ ತಮ್ಮದೇ ಆದ ವೈದ್ಯಕೀಯ ಅಗತ್ಯಗಳು ಮತ್ತು ಆದ್ಯತೆಗಳನ್ನು ಹೊಂದಿರುತ್ತಾರೆ. ಕೊರೋನಾ ಕವಚ್ ವೈಯಕ್ತಿಕ ಪಾಲಿಸಿಯು ಈ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು, 5 ಲಕ್ಷಗಳವರೆಗಿನ ವಿಮಾ ಮೊತ್ತವನ್ನು ಒದಗಿಸುತ್ತದೆ.
ಹಿರಿಯ ನಾಗರಿಕರು ಮತ್ತು ಪೋಷಕರಿಗೆ ಕವರ್
ನಿಮ್ಮ ಪೋಷಕರು ಮತ್ತು ಹಿರಿಯರು ಕೊರೋನಾ ವೈರಸ್‌ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ. ಅವರ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ, ಅವರಿಗಾಗಿ ವೈಯಕ್ತಿಕ ಪಾಲಿಸಿಯನ್ನು ಪಡೆಯುವುದು ಉತ್ತಮ.

ಕೊರೋನಾ ಕವಚ್ ಹೆಲ್ತ್ ಇನ್ಶೂರೆನ್ಸ್ ಸುದ್ದಿ

ಕೋವಿಡ್-19: ವಿರುದ್ಧ ಹೋರಾಡಲು ಭಾರತವು "ಗಮನಾರ್ಹ ವೈಜ್ಞಾನಿಕ ಕ್ಯಾಲಿಬರ್" ಅನ್ನು ಬಳಸಿತು: ಹರ್ಷ ವರ್ಧನ್

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕೋವಿಡ್-19 ಸಾಂಕ್ರಾಮಿಕವು ಒಂದು ಪರೀಕ್ಷೆ ಎಂದು ಹೇಳಿದರು, ಇದು ಜಾಗತಿಕ ಸವಾಲುಗಳಿಂದ ನಿವಾರಿಸಲು ಅನೇಕ ರೀತಿಯ ಸಹಕಾರದ ಮಾರ್ಗ ತೋರಿಸುತ್ತಿದೆ.

ಮೂಲ: NDTV.com | 24 ನವೆಂಬರ್ 2020 ರಂದು ಪ್ರಕಟಿಸಲಾಗಿದೆ

ಕೊರೋನಾ ಕವಚ್ ಇನ್ಶೂರೆನ್ಸ್ ಪಾಲಿಸಿಗಳು 1 ಕೋಟಿ ಮೈಲಿಗಲ್ಲನ್ನು ದಾಟಿವೆ

ಕೊರೋನಾ ವೈರಸ್ ಆಸ್ಪತ್ರೆ ದಾಖಲಾತಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕೊರೋನಾ ಕವಚ್ ಸರಿಯಾದ ಅಂಶಗಳನ್ನು ಹೊಂದಿದೆ. ಭಾರತದಾದ್ಯಂತದ ವಿಮಾದಾತರು ಅಂಗೀಕರಿಸಿದ್ದಾರೆ.

ಮೂಲ: TOI | 17 ಅಕ್ಟೋಬರ್ 2020 ರಂದು ಪ್ರಕಟಿಸಲಾಗಿದೆ

ಆಗಾಗ ಕೇಳುವ ಪ್ರಶ್ನೆಗಳು

ಇಲ್ಲ, ಈ ಪಾಲಿಸಿಯು ಕೊರೋನಾ ವೈರಸ್ ಆಸ್ಪತ್ರೆ ದಾಖಲಾತಿ ಚಿಕಿತ್ಸೆಯನ್ನು ಮಾತ್ರ ಕವರ್ ಮಾಡುತ್ತದೆ. ನೀವು ಇತರ ಸಂಭವನೀಯ ಕಾಯಿಲೆಗಳ ವಿರುದ್ಧ ಇನ್ಶೂರೆನ್ಸ್ ಪಡೆಯಲು ಬಯಸಿದರೆ, ನಮ್ಮ ಇತರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಗಮನಿಸಬಹುದು
ಇಲ್ಲ, ಕೊರೋನಾ ಕವಚ್‌ಗೆ ಕಂತುಗಳಲ್ಲಿ ಪ್ರೀಮಿಯಂ ಪಾವತಿಸಲು ಸಾಧ್ಯವಿಲ್ಲ. ಆದಾಗ್ಯೂ, ಎಚ್‌ಡಿಎಫ್‌ಸಿ ಎರ್ಗೋದ ಇನ್ನಿತರ ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಕಂತು ಪಾವತಿ ಸೌಲಭ್ಯ ನೀಡುತ್ತವೆ.
ವಯಸ್ಕರಿಗೆ ಕನಿಷ್ಠ ಪ್ರವೇಶಾತಿ ವಯಸ್ಸು 18 ವರ್ಷಗಳು ಮತ್ತು ಮಗುವಿಗೆ 1 ದಿನ ಆಗಿರುತ್ತದೆ. ಹಾಗೆಯೇ, ವಯಸ್ಸಾದವರಿಗೆ ಗರಿಷ್ಠ ಪ್ರವೇಶ ಮಿತಿ 65 ವರ್ಷ ಮತ್ತು ಮಕ್ಕಳಿಗೆ 25 ವರ್ಷ..
ನೀವು ಭಾರತೀಯ, ಅನಿವಾಸಿ ಭಾರತೀಯ, ಇಲ್ಲವೇ ಭಾರತದಲ್ಲಿ ಅಥವಾ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ನಾಗರಿಕರಾಗಿದ್ದರೆ ಈ ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀವು ಕವರ್ ಪಡೆಯಬಹುದು. ಅದಕ್ಕಾಗಿ, ಪಾಲಿಸಿಯನ್ನು ಖರೀದಿಸುವ ಸಮಯದಲ್ಲಿ ನೀವು ಭಾರತದಲ್ಲಿ ಇರಬೇಕು.
ನೀವು ನೆಟ್ವರ್ಕ್ ಆಸ್ಪತ್ರೆಯಲ್ಲಿ ನಗದುರಹಿತ ಕ್ಲೇಮ್ ಆಯ್ಕೆ ಮಾಡಬಹುದು ಅಥವಾ ನಾನ್‌-ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಮರುಪಾವತಿ ಕ್ಲೇಮ್‌ ಸಲ್ಲಿಸಬಹುದು. ವಿವರವಾದ ಕ್ಲೇಮ್ ಪ್ರಕ್ರಿಯೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

ಇನ್ಶೂರ್ಡ್ ವ್ಯಕ್ತಿಯು ಕೊರೋನಾವೈರಸ್ ಪಾಸಿಟಿವ್ ಎಂದು ಕಂಡುಬಂದ ನಂತರ, ಅವರ ಆಸ್ಪತ್ರೆ ದಾಖಲಾತಿ ವೆಚ್ಚಗಳು ಅಥವಾ ಹೋಮ್ ಕೇರ್ ಚಿಕಿತ್ಸೆಯ ವೆಚ್ಚಗಳನ್ನು ಈ ಪಾಲಿಸಿಯು ಕವರ್ ಮಾಡುತ್ತದೆ. ಆದ್ದರಿಂದ, ಕೇವಲ ಕ್ವಾರಂಟೈನ್ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ.
ಹೌದು. ಈ ಸ್ಟ್ಯಾಂಡರ್ಡ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್, ಪಾಸಿಟಿವ್ ಕೇಸ್‌ಗಳಿಗೆ ಮಾತ್ರ ಕೊರೋನಾ ವೈರಸ್‌ಗೆ ಸಂಬಂಧಿಸಿದ ಆರೋಗ್ಯ-ಪರಿಶೀಲನೆ ಅಥವಾ ಡಯಾಗ್ನಸಿಸ್ ವೆಚ್ಚಗಳನ್ನು ಕವರ್ ಮಾಡುತ್ತದೆ.
ಕೊರೋನಾ ಕವಚ್ ಪಾಲಿಸಿಗೆ ವಿಮಾ ಮೊತ್ತದ ಆಯ್ಕೆಗಳು ₹50,000, 1,1.5, 2, 3.5, 4, 4.5, ಮತ್ತು 5 ಲಕ್ಷಗಳಾಗಿವೆ.
ನೀವು ನಿಮಗಾಗಿ ಹಾಗೂ ನಿಮ್ಮ ಕುಟುಂಬಕ್ಕಾಗಿ, ಅಂದರೆ ನಿಮ್ಮ ಸಂಗಾತಿ, ಮಕ್ಕಳು, ಪೋಷಕರು ಮತ್ತು ಸಂಗಾತಿಯ ಪೋಷಕರಿಗೆ ಕೊರೋನಾ ಕವಚ್ ಪಾಲಿಸಿ ಖರೀದಿಸಬಹುದು.
ನೀವು ಅದನ್ನು 3.5 ತಿಂಗಳು, 6.5 ತಿಂಗಳು, 9.5 ತಿಂಗಳು; ಅಂದರೆ 105 ದಿನಗಳು, 195 ದಿನಗಳು ಮತ್ತು 285 ದಿನಗಳವರೆಗೆ ಖರೀದಿಸಬಹುದು.
ಈ ಪ್ರಾಡಕ್ಟ್ ಖರೀದಿಸಲು ಗರಿಷ್ಠ ಪ್ರವೇಶದ ವಯಸ್ಸು 65 ವರ್ಷಗಳು.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x