ಭಾರತ ಸರ್ಕಾರದ ವತಿಯಿಂದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ "ಆಜಾದಿ ಕಾ ಅಮೃತ ಮಹೋತ್ಸವ- India@75" ಪ್ರಯುಕ್ತ ನಡೆದ "ಬೆಳೆ ವಿಮಾ ವಾರ"ದಲ್ಲಿ (ಖಾರಿಫ್ ಮತ್ತು ರಾಬಿ ಎರಡೂ ಋತುವಿಗೆ) ಎಚ್ಡಿಎಫ್ಸಿ ಎರ್ಗೋ ಭಾಗವಹಿಸಿತು. ಈ ಸಪ್ತಾಹವು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ವಿವಿಧ ತೊಡಗುವಿಕೆಗಳು ಮತ್ತು ನಮ್ಮ ರೈತರಿಗೆ ಭದ್ರತೆ ಒದಗಿಸಲು PMFBY ನಡೆಸಿದ ಕಾರ್ಯಗಳ ಮೂಲಕ ನಮ್ಮ ಭಾರತೀಯ ರೈತರು ಸಾಧಿಸಿದ ಪ್ರಗತಿಯನ್ನು ಸ್ಮರಿಸುವ ಗುರಿಯನ್ನು ಹೊಂದಿದೆ. ಆಚರಣೆಯ ಭಾಗವಾಗಿ, ನಾವು PMFBY ಯೋಜನೆಯಲ್ಲಿ ರೈತರ ಅತ್ಯಲ್ಪ ಅಥವಾ ಕಡಿಮೆ ಭಾಗವಹಿಸುವಿಕೆಯನ್ನು ಹೊಂದಿರುವ PMFBY/RWBCIS ಅಡಿಯಲ್ಲಿ ಅಧಿಸೂಚಿತ 10 ಮಹತ್ವಾಕಾಂಕ್ಷಿ ಜಿಲ್ಲೆಗಳನ್ನು ತಲುಪುವ ಗುರಿ ಹೊಂದಿದ್ದೇವೆ. PMFBY/RWBCIS ಯೋಜನೆಯ ಬಗ್ಗೆ ಈ ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿ ಸಮಗ್ರ ಜಾಗೃತಿ ಮೂಡಿಸಲು, ಎಚ್ಡಿಎಫ್ಸಿ ಎರ್ಗೋದ ತೊಡಗುವಿಕೆ "ಕಿಸಾನ್ ಪಾಠಶಾಲಾ" ಅಡಿಯಲ್ಲಿ ಯೋಜನೆಯ ಪ್ರಯೋಜನಗಳ ಬಗ್ಗೆ ರೈತರಿಗೆ ಶಿಕ್ಷಣ ನೀಡುವ ಬಗ್ಗೆ ಗಮನಹರಿಸುವ ಯೋಜನೆಯ ವ್ಯಾಪಕ ಮಾರ್ಕೆಟಿಂಗ್ ಚಟುವಟಿಕೆಗಳನ್ನು ಯೋಜಿಸಲಾಗಿದೆ . ನಮ್ಮ ತಂಡದ ಸದಸ್ಯರು ಸಕ್ರಿಯವಾಗಿ ಸ್ಪಷ್ಟ ಕರಪತ್ರಗಳು ಮತ್ತು ಕೈಪಿಡಿಗಳನ್ನು ವಿತರಿಸಿದ್ದಾರೆ, ಡೆಸ್ಕ್ಟಾಪ್ಗಳೊಂದಿಗೆ ಸಜ್ಜುಗೊಂಡ "ಡಿಜಿಟಲ್ ಬಸ್" ಮೂಲಕ ಜಾಗೃತಿ ಕಾರ್ಯಾಗಾರಗಳು ಮತ್ತು ತರಬೇತಿಗಳನ್ನು ನಡೆಸಿದ್ದಾರೆ. ಎಚ್ಡಿಎಫ್ಸಿ ಎರ್ಗೋ ಸಸಿಗಳ ವಿತರಣೆಯ ಮೂಲಕ ನಮ್ಮ ರೈತರೊಂದಿಗೆ ಪರಿಣಾಮಕಾರಿಯಾಗಿ ಸಂಪರ್ಕ ಹೊಂದಿದೆ ಮತ್ತು ಆ ಮೂಲಕ ಪರಿಸರಕ್ಕೆ ಸುಸ್ಥಿರ ಪ್ರಯತ್ನಗಳನ್ನು ಮಾಡುತ್ತದೆ. ನವೀನ ಡಿಜಿಟಲ್ ರಚನಾತ್ಮಕ ವಿಷಯಗಳು, ಆಡಿಯೋ ವಿಶುವಲ್ಗಳು, ಮಾಹಿತಿಯುಕ್ತ ಪೋಸ್ಟ್ಗಳು ಮತ್ತು ಮೀಸಲಾದ ಹ್ಯಾಶ್ ಟ್ಯಾಗ್ಗಳ ಮೂಲಕ ಜನರನ್ನು ತಲುಪಲು ಸೋಶಿಯಲ್ ಮೀಡಿಯಾ ಕ್ಯಾಂಪೇನ್ಗಳನ್ನು ವಾರವಿಡೀ ವ್ಯಾಪಕವಾಗಿ ಬಳಸಲಾಯಿತು. ಇದಲ್ಲದೆ, ಬೆಳೆ ಇನ್ಶೂರೆನ್ಸ್ ವಾರದ ಆಚರಣೆಯ ಈ ಸಂದರ್ಭದಲ್ಲಿ ನಮ್ಮ ರೈತರ ನಿರಂತರ ಪ್ರಯತ್ನಗಳನ್ನು ಸ್ಮರಿಸಲು ಎಚ್ಡಿಎಫ್ಸಿ ಎರ್ಗೋ, PMFBY ಯೋಜನೆಯಲ್ಲಿ ದಾಖಲಾತಿ, ರೈತರ ಅಪ್ಲಿಕೇಶನ್ ಸ್ಥಿತಿ, ಕ್ಲೈಮ್ ಮಾಹಿತಿ, ಕ್ಲೈಮ್ ಸ್ಥಿತಿ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಪ್ರಾದೇಶಿಕ ಭಾಷೆಗಳಲ್ಲಿ ತ್ವರಿತ ಮೆಸೇಜಿಂಗ್ ಸೇವೆಗಳನ್ನು ಒದಗಿಸುವ ಕೃತಕ ಬುದ್ಧಿಮತ್ತೆಯ ಸಾಧನಗಳೊಂದಿಗೆ ಸಜ್ಜುಗೊಂಡ ಉದ್ಯಮದ ಮೊದಲ ವಾಟ್ಸಾಪ್ ಚಾಟ್ ಬೋಟ್- “PIHU” ಅನಾವರಣಗೊಳಿಸಿದೆ.
I. ಈ ಸ್ಕೀಮ್, ರಾಜ್ಯ ಸರ್ಕಾರಗಳ ಸೂಚನೆಯ ಅನುಸಾರ ಎಲ್ಲಾ ರೈತರಿಗೂ ಬೆಳೆಯ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ
ಗುತ್ತಿಗೆ ರೈತರು ಮತ್ತು ಗೇಣಿದಾರರು ಸೇರಿದಂತೆ ಅಧಿಸೂಚಿತ ಪ್ರದೇಶಗಳಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲಾ ರೈತರೂ ಕವರೇಜ್ಗೆ ಅರ್ಹರಾಗಿರುತ್ತಾರೆ.
ಅಧಿಸೂಚಿತ ಬೆಳೆಗಳಿಗಾಗಿ ಹಣಕಾಸು ಸಂಸ್ಥೆಗಳಿಂದ ಸೀಸನಲ್ ಅಗ್ರಿಕಲ್ಚರಲ್ ಆಪರೇಶನ್ (SAO) ಲೋನ್ಗಳನ್ನು ಪಡೆಯುವ ಎಲ್ಲಾ ರೈತರನ್ನು (ಅಂದರೆ ಲೋನ್ ಇರುವ ರೈತರನ್ನು) ಕಡ್ಡಾಯವಾಗಿ ಕವರ್ ಮಾಡಲಾಗುತ್ತದೆ.
ಸ್ಕೀಮ್ನ ನಿಬಂಧನೆಗಳ ಪ್ರಕಾರ ಎಲ್ಲಾ ಲೋನ್ ಪಡೆದ ರೈತರು ಇನ್ಶೂರೆನ್ಸ್ ಕವರೇಜ್ ಒದಗಿಸುವಂತೆ ಒತ್ತಾಯಿಸುವುದು ಕಡ್ಡಾಯವಾಗಿದೆ.
ಬಿ. ಸ್ವಯಂಪ್ರೇರಿತ ಘಟಕ
ಲೋನ್ ಪಡೆಯದ ರೈತರಿಗೆ ಈ ಸ್ಕೀಮ್ ಐಚ್ಛಿಕವಾಗಿರುತ್ತದೆ ಹಾಗೂ ಯಾವುದೇ ಅಧಿಸೂಚಿತ ಇನ್ಶೂರೆನ್ಸ್ ಯೂನಿಟ್ನಲ್ಲಿ ಯಾವುದೇ ಅಧಿಸೂಚಿತ ಬೆಳೆಗಾಗಿ PMFBY ಅಡಿಯಲ್ಲಿ ಇನ್ಶೂರೆನ್ಸ್ ಪಡೆಯಲು ಬಯಸುವ ರೈತರು ಕಟ್-ಆಫ್ ದಿನಾಂಕದ ಒಳಗೆ ಹತ್ತಿರದ ಬ್ಯಾಂಕ್ ಶಾಖೆ/ PACS/ ಅಧಿಕೃತ ಚಾನೆಲ್ ಪಾಲುದಾರರು /ಇನ್ಶೂರೆನ್ಸ್ ಮಧ್ಯಸ್ಥಿಕೆದಾರರನ್ನು ಸಂಪರ್ಕಿಸಿ, ನಿಗದಿತ ಫಾರ್ಮ್ಯಾಟ್ನಲ್ಲಿ ಪ್ರಪೋಸಲ್ ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಸಲ್ಲಿಸಿದ ನಂತರ ಬ್ಯಾಂಕ್ ಶಾಖೆ/ ಇನ್ಶೂರೆನ್ಸ್ ಮಧ್ಯವರ್ತಿ/CSC ಕೇಂದ್ರಗಳಿಗೆ ಅಗತ್ಯವಾದ ಪ್ರೀಮಿಯಂ ಡೆಪಾಸಿಟ್ ಮಾಡಬಹುದು ಹಾಗೂ ಇನ್ಶೂರೆನ್ಸ್ ಮಾಡಿಸಲು ಬಯಸುವ ಜಮೀನು/ಬೆಳೆಗೆ ಅವರ ಇನ್ಶೂರೆಬಲ್ ಇಂಟರೆಸ್ಟ್ ಖಾತ್ರಿಪಡಿಸಲು ಡಾಕ್ಯುಮೆಂಟರಿ ಸಾಕ್ಷಿಗಳನ್ನು ಸಲ್ಲಿಸಬಹುದು (ಉದಾ. ಮಾಲೀಕತ್ವ/ಗೇಣಿ/ ಬೇಸಾಯದ ಹಕ್ಕುಗಳು).
II. ಕವರ್ ಆಗುವ ಬೆಳೆಗಳು
ಹಿಂದಿನ ಫಸಲಿನ ಡೇಟಾ ಲಭ್ಯವಿರುವ ಆಹಾರದ ಬೆಳೆಗಳು, ಎಣ್ಣೆಕಾಳು ಬೆಳೆಗಳು ಹಾಗೂ ವಾರ್ಷಿಕ ವಾಣಿಜ್ಯ/ತೋಟಗಾರಿಕೆ ಬೆಳೆಗಳಂತಹ ಎಲ್ಲಾ ಬೆಳೆಗಳೂ ಸ್ಕೀಮ್ ಅಡಿಯಲ್ಲಿ ಕವರ್ ಆಗುತ್ತವೆ.
ಬಹುವಾರ್ಷಿಕ ಬೆಳೆಗಳು ಮಾತ್ರವಲ್ಲದೇ, ಫಸಲನ್ನು ಅಂದಾಜಿಸಲು ಪ್ರಮಾಣಿತ ವಿಧಾನ ಹೊಂದಿರುವ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಿಗೂ ಕವರೇಜ್ಗಾಗಿ ಪೈಲಟ್ಗಳನ್ನು ತೆಗೆದುಕೊಳ್ಳಬಹುದು.
III. ಯೋಜನೆಯಡಿ ಅಪಾಯಗಳು ಮತ್ತು ಹೊರಗಿಡುವಿಕೆಗಳ ಕವರೇಜ್
ಈ ಸ್ಕೀಮ್, ಇನ್ಶೂರೆನ್ಸ್ ಯೂನಿಟ್ (IU) ಎಂದು ಕರೆಯಲ್ಪಡುವ ಆಯ್ದ ನಿರ್ದಿಷ್ಟ ಪ್ರದೇಶಗಳಲ್ಲಿ "ಏರಿಯಾ ಅಪ್ರೋಚ್" ತತ್ವದ ಮೇಲೆ ಕಾರ್ಯನಿರ್ವಹಿಸುತ್ತದೆ, ಇದು ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಬೆಳೆ ಇನ್ಶೂರೆನ್ಸ್ ಬಗ್ಗೆ ರಾಜ್ಯಮಟ್ಟದ ಸಮನ್ವಯ ಸಮಿತಿಗಳಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾದ ಬೆಳೆಗಳು ಮತ್ತು ವ್ಯಾಖ್ಯಾನಿತ ಪ್ರದೇಶಗಳನ್ನು ಆಧರಿಸಿದೆ. ಪ್ರಮುಖ ಬೆಳೆಗಳಿಗೆ ಈ ಯೂನಿಟ್ಗಳನ್ನು ಹಳ್ಳಿ/ಗ್ರಾಮ ಪಂಚಾಯ್ತಿ ಅಥವಾ ಇತರ ಯಾವುದೇ ಸಮಾನ ಯೂನಿಟ್ಗೆ ಅನ್ವಯವಾಗುವ ಇನ್ಶೂರೆನ್ಸ್ ಯೂನಿಟ್ ಎಂದು ಸೂಚಿಸಲಾಗುತ್ತದೆ. ಬೇರೆಲ್ಲಾ ಬೆಳೆಗಳಿಗೆ ಇದು ಹಳ್ಳಿ/ಗ್ರಾಮ ಪಂಚಾಯ್ತಿ ಮಟ್ಟಕ್ಕಿಂತ ಮೇಲ್ಪಟ್ಟ ಗಾತ್ರದ ಯೂನಿಟ್ ಆಗಿರಬಹುದು.
ಕೆಳಕಂಡ ಬೆಳವಣಿಗೆ ಹಂತಗಳು ಹಾಗೂ ಬೆಳೆನಷ್ಟಕ್ಕೆ ಕಾರಣವಾಗುವ ಅಪಾಯಗಳು ಈ ಸ್ಕೀಮ್ ವ್ಯಾಪ್ತಿಗೆ ಬರುತ್ತವೆ.
ಎ. ಮುಂಜಾಗೃತಾ ಬಿತ್ತನೆ/ಬಿತ್ತನೆ ಸಮಯದ ಅಪಾಯ: ಅನಾವೃಷ್ಟಿ ಅಥವಾ ಪ್ರತಿಕೂಲ ಹವಾಮಾನದಿಂದಾಗಿ ಅಧಿಸೂಚಿತ ಪ್ರದೇಶದ ಬಹುಪಾಲು ಇನ್ಶೂರ್ಡ್ ಬೆಳೆಗಳ ಬಿತ್ತನೆ/ನಾಟಿ ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ, ಇನ್ಶೂರ್ಡ್ ಬೆಳೆಗಳು ಇನ್ಶೂರೆನ್ಸ್ ಮೊತ್ತದ ಗರಿಷ್ಠ 25% ವರೆಗೆ ನಷ್ಟಭರ್ತಿ ಕ್ಲೇಮ್ಗಳಿಗೆ ಅರ್ಹವಾಗಿರುತ್ತವೆ.
ಬಿ. ಬೆಳೆ ಬೆಳವಣಿಗೆ (ಬಿತ್ತನೆಯಿಂದ ಕೊಯ್ಲಿನವರೆಗೆ): ತಡೆಗಟ್ಟಲಾಗದ ಅಪಾಯಗಳಿಂದ ಉಂಟಾದ ಇಳುವರಿ ನಷ್ಟವನ್ನು ಕವರ್ ಮಾಡಲು ಸಮಗ್ರ ವಿಪತ್ತು ವಿಮೆ ಒದಗಿಸಲಾಗುವುದು. ಅಂತಹ ಅಪಾಯಗಳೆಂದರೆ:. ಬರ, ಅನಾವೃಷ್ಟಿ, ಪ್ರವಾಹ, ಮುಳುಗಡೆ, ಕೀಟ ಮತ್ತು ರೋಗಬಾಧೆ, ಭೂಕುಸಿತ, ನೈಸರ್ಗಿಕ ಬೆಂಕಿ ಮತ್ತು ಸಿಡಿಲು, ಬಿರುಗಾಳಿ ಮಳೆ, ಆಲಿಕಲ್ಲು ಮಳೆ, ತುಫಾನು, ಬಿರುಗಾಳಿ, ಚಂಡಮಾರುತ ಮತ್ತು ಸುಂಟರಗಾಳಿ.
ಸಿ. ಕೊಯ್ಲಿನ ನಂತರದ ನಷ್ಟಗಳು: ಕೊಯ್ಲು ಮಾಡಿದ ನಂತರ ಫಸಲನ್ನು ಹೊಲದಲ್ಲಿ ಹರಡಿ ಒಣಗಿಸಬೇಕಾದ ಬೆಳೆಗಳಿಗೆ ಆಲಿಕಲ್ಲು, ಚಂಡಮಾರುತ ಮತ್ತು ಚಂಡಮಾರುತದಿಂದ ಸುರಿದ ಮಳೆ ಮತ್ತು ಅಕಾಲಿಕ ಮಳೆಗಳ ನಿರ್ದಿಷ್ಟ ಅಪಾಯಗಳ ವಿರುದ್ಧ ಕಟಾವಿನಿಂದ ಗರಿಷ್ಠ ಎರಡು ವಾರಗಳವರೆಗೆ ಮಾತ್ರ ಕವರೇಜ್ ಲಭ್ಯವಿರುತ್ತದೆ. ಕೊಯ್ಲಿನ-ನಂತರದ ನಷ್ಟಗಳಿಂದ ಮತ್ತು ದೇಶಾದ್ಯಂತ ಚಂಡಮಾರುತ ಅಥವಾ ಚಂಡಮಾರುತದಿಂದ ಸುರಿದ ಮಳೆ / ಅಕಾಲಿಕ ಮಳೆಯ ಸ್ಥಳೀಯ ಕಾರಣದಿಂದಾಗಿ, ಕೇವಲ ಒಣಗಿಸುವ ಉದ್ದೇಶಕ್ಕಾಗಿ 'ಕತ್ತರಿಸಿ ಹರಡಿದ' ಸ್ಥಿತಿಯಲ್ಲಿ ಹೊಲದಲ್ಲಿ ಬಿದ್ದಿರುವ ಕೊಯ್ಲು ಮಾಡಿದ ಬೆಳೆಗೆ ಹಾನಿಯಾದರೆ, ಕೊಯ್ಲು ಮಾಡಿದ ದಿನಾಂಕದಿಂದ ಗರಿಷ್ಠ ಎರಡು ವಾರಗಳ (14 ದಿನಗಳು) ಅವಧಿಯವರೆಗಿನ ಬೆಳೆ ಹಾನಿಗೆ ಸಂಬಂಧಿಸಿದ ಕ್ಲೈಮ್ಗಳು ಕವರ್ ಆಗುತ್ತವೆ ಮತ್ತು ವೈಯಕ್ತಿಕ ಕೃಷಿ ಭೂಮಿಯ ಆಧಾರದಲ್ಲಿ ಹಾನಿಯ ಮೌಲ್ಯಮಾಪನವನ್ನು ಮಾಡಲಾಗುತ್ತದೆ.
ಡಿ. ಸ್ಥಳೀಯ ವಿಕೋಪಗಳು: ಅಧಿಸೂಚಿತ ಪ್ರದೇಶದ ಪ್ರತ್ಯೇಕ ಕೃಷಿ ಜಮೀನುಗಳ ಮೇಲೆ ಪರಿಣಾಮ ಬೀರುವ ಆಲಿಕಲ್ಲು ಮಳೆ, ಭೂಕುಸಿತ, ಮುಳುಗಡೆ, ಮೇಘ ಸ್ಫೋಟ ಮತ್ತು ಮಿಂಚಿನಿಂದ ಉಂಟಾಗುವ ನೈಸರ್ಗಿಕ ಬೆಂಕಿಯಂತಹ ಗುರುತಿಸಲ್ಪಟ್ಟ ಸ್ಥಳೀಯ ಅಪಾಯಗಳಿಂದ ಉಂಟಾಗುವ ನಷ್ಟ/ಹಾನಿ.
ಗಮನಿಸಿ: ಯುದ್ಧ, ಪರಮಾಣು ಅಪಾಯಗಳು, ದುರುದ್ದೇಶಪೂರಿತ ಹಾನಿ ಮತ್ತು ಇತರ ತಡೆಗಟ್ಟಬಲ್ಲ ಅಪಾಯಗಳಿಂದ ಆಗುವ ನಷ್ಟಗಳನ್ನು ಹೊರತುಪಡಿಸಲಾಗುತ್ತದೆ.
IV. ವಿವಿಧ ಬೆಳೆಗಳಿಗೆ ಅನ್ವಯವಾಗುವ ನಷ್ಟಭರ್ತಿ ಮಟ್ಟ
ಬೆಳೆಗಳ ವಿಧಕ್ಕೆ ತಕ್ಕಂತೆ ಹೆಚ್ಚಿನ, ಮಧ್ಯಮ ಮತ್ತು ಕಡಿಮೆ ಅಪಾಯದ ಮಟ್ಟಕ್ಕೆ ಕ್ರಮವಾಗಿ, 70%, 80% ಮತ್ತು 90% ನಷ್ಟಭರ್ತಿ ಮಟ್ಟದವರೆಗೆ ಕವರೇಜ್ ನೀಡಲಾಗುತ್ತದೆ ಮತ್ತು ಅದನ್ನು ಅನ್ವಯವಾಗುವ ಅಧಿಸೂಚಿತ ಯೂನಿಟ್ನ ಅನುಸಾರ ಬೆಳೆಗಳು ಮತ್ತು ಪ್ರದೇಶಗಳಿಗೆ ನೋಟಿಫೈ ಮಾಡಲಾಗುತ್ತದೆ.
V. ಪ್ರೀಮಿಯಂ
ಖಾರಿಫ್ನ ಎಲ್ಲಾ ಆಹಾರದ ಮತ್ತು ಎಣ್ಣೆಕಾಳು ಬೆಳೆಗಳಿಗೆ ರೈತರು ಪಾವತಿಸಬೇಕಾದ ಗರಿಷ್ಠ ಪ್ರೀಮಿಯಂ 2% ಆಗಿರುತ್ತದೆ, ರಾಬಿಯ ಆಹಾರದ ಮತ್ತು ಎಣ್ಣೆಕಾಳು ಬೆಳೆಗಳಿಗೆ 1.5% ಆಗಿರುತ್ತದೆ ಮತ್ತು ವಾರ್ಷಿಕ ವಾಣಿಜ್ಯ/ತೋಟಗಾರಿಕೆ ಬೆಳೆಗಳಿಗೆ 5% ಅಥವಾ ವಾಸ್ತವಿಕ ಪ್ರೀಮಿಯಂ ದರ (ಯಾವುದು ಕಡಿಮೆಯೋ ಅದು). ರೈತರು ಪಾವತಿಸಬೇಕಾದ ಪ್ರೀಮಿಯಂ ಮತ್ತು ಇನ್ಶೂರೆನ್ಸ್ ಶುಲ್ಕಗಳ ನಡುವಿನ ವ್ಯತ್ಯಾಸವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಾನವಾಗಿ ಹಂಚಿಕೊಳ್ಳುತ್ತವೆ.
VI. ಕ್ಲೈಮ್ ಇತ್ಯರ್ಥಕ್ಕೆ ಆಧಾರ
ಕ್ಲೇಮ್ಗಳ ಪಾವತಿಯನ್ನು ಏರಿಯಾ ಅಪ್ರೋಚ್ ವಿಧಾನದ ಆಧಾರದಲ್ಲಿ ಈ ಕೆಳಗಿನವುಗಳಿಗೆ ಒಳಪಟ್ಟು ಮಾಡಲಾಗುತ್ತದೆ:
ಪ್ರಮುಖ ಟಿಪ್ಪಣಿ:
ಈ ಸ್ಕೀಮ್, ಇನ್ಶೂರೆನ್ಸ್ ಘಟಕ (IU) ಎಂದು ಕರೆಯಲ್ಪಡುವ ಆಯ್ದ ನಿರ್ದಿಷ್ಟ ಪ್ರದೇಶಗಳಲ್ಲಿ, ಆಯಾ ರಾಜ್ಯ/UT ಸರ್ಕಾರವು ಬೆಳೆ ವಿಮೆಯ ಕುರಿತು ರಾಜ್ಯಮಟ್ಟದ ಸಮನ್ವಯ ಸಮಿತಿಗಳಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಅನುಗುಣವಾದ ಬೆಳೆಗಳು ಮತ್ತು ನಿರ್ದಿಷ್ಟಪಡಿಸಿದ ಪ್ರದೇಶಗಳಲ್ಲಿ "ಏರಿಯಾ ಅಪ್ರೋಚ್" ವಿಧಾನದ ಮೂಲಕ ಕಾರ್ಯನಿರ್ವಹಿಸುತ್ತದೆ. . ಪ್ರಮುಖ ಬೆಳೆಗಳಿಗೆ ಈ ಘಟಕಗಳನ್ನು ಹಳ್ಳಿ/ಗ್ರಾಮ ಪಂಚಾಯತ್ ಅಥವಾ ಇತರ ಯಾವುದೇ ಸಮಾನ ಘಟಕಕ್ಕೆ ಅನ್ವಯವಾಗುವ ಇನ್ಶೂರೆನ್ಸ್ ಘಟಕವೆಂದು ಅಧಿಸೂಚಿಸಲಾಗುತ್ತದೆ. ಬೇರೆಲ್ಲಾ ಬೆಳೆಗಳಿಗಾಗಿ ಇದು ಹಳ್ಳಿ/ಗ್ರಾಮ ಪಂಚಾಯಿತಿ ಮಟ್ಟಕ್ಕಿಂತ ಮೇಲಿನ ಸ್ಥರದ ಘಟಕವಾಗಿರಬಹುದು.
ಪ್ರಮುಖ ಕ್ಲೇಮ್ಗಳ ಪಾವತಿಯನ್ನು, ಈ ಕೆಳಗಿನವುಗಳಿಗೆ ಒಳಪಟ್ಟು, ಏರಿಯಾ ಅಪ್ರೋಚ್ ಆಧಾರದ ಮೇಲೆ ಮಾಡಲಾಗುತ್ತದೆ: