ಯೋಜನೆ ಸಂಬಂಧಿತ ಮಾಹಿತಿ

  • ಯೋಜನೆಯ ವೈಶಿಷ್ಟ್ಯಗಳು
  • ಸಾಮಾನ್ಯ ಪ್ರಶ್ನೆ
  • ಸಂಪರ್ಕಿಸಿ
  • ಚಿತ್ರ ಪ್ರದರ್ಶನ
  • ಚಿತ್ರ ಪ್ರದರ್ಶನ
  • ಪ್ರೀಮಿಯಂ
  • ಪ್ರೆಸ್ ಬಿಡುಗಡೆ

    ಈ ಯೋಜನೆ ರಾಜ್ಯ ಸರ್ಕಾರಗಳು ಅಧಿಸೂಚಿಸಿರುವ ಬೆಳೆಗಳಿಗೆ ಎಲ್ಲ ರೈತರಿಗೆ ವಿಮಾ ಸುರಕ್ಷೆಯನ್ನು ಒದಗಿಸುತ್ತದೆ.

    ಗೇಣಿದಾರರು ಮತ್ತು ಜಮೀನು ಭೋಗ್ಯಕ್ಕೆ ಪಡೆದು ಬೆಳೆ ಬೆಳೆಯುವ ರೈತರು ಸೇರಿದಂತೆ, ಅಧಿಸೂಚಿತ ಪ್ರದೇಶದಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲ ರೈತರು ವಿಮಾ ಸುರಕ್ಷೆಗೆ ಅರ್ಹರಾಗಿರುತ್ತಾರೆ.

  • ಅಧಿಸೂಚಿತ/ ವಿಮೆ ಮಾಡಿಸಿದ ಬೆಳೆಗಳಿಗೆ ರೈತರು ವಿಮೆಯ ಖಾತ್ರಿ ಹೊಂದಿರಬೇಕು.
  • ಸಾಲಗಾರರಲ್ಲದ ರೈತರು ರಾಜ್ಯದಲ್ಲಿ ಇರುವ ಭೂ ದಾಖಲೆಗಳ ಅಗತ್ಯ ದಾಖಲೆ ಸಾಕ್ಷ್ಯಗಳನ್ನು (ಹಕ್ಕು ಪತ್ರ (ಆರ್‌ಒಆರ್‌), ಭೂಸ್ವಾಧೀನ ಪ್ರಮಾಣಪತ್ರ (ಎಲ್‌ಪಿಸಿ) ಇತ್ಯಾದಿ.) ಮತ್ತು/ಅಥವಾ ಅನ್ವಯವಾಗುವ ಗುತ್ತಿಗೆ/ಒಪ್ಪಂದ ವಿವರಗಳು/ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಂದ ಅನುಮತಿಸಲ್ಪಟ್ಟ/ ಅಧಿಸೂಚಿತ ಇತರ ದಾಖಲೆಗಳನ್ನು ಸಲ್ಲಿಸಬೇಕು (ಒಂದು ವೇಳೆ ಗೇಣಿದಾರರು/ ಜಮೀನು ಭೋಗ್ಯ ಪಡೆದ ರೈತರಾಗಿದ್ದಲ್ಲಿ).
  • a. ಕಡ್ಡಾಯ ಅಂಶ

    ಅಧಿಸೂಚಿತ ಬೆಳೆ(ಗಳಿ)ಗೆ ಆರ್ಥಿಕ ಸಂಸ್ಥೆಗಳಿಂದ (ಅಂದರೆ ಸಾಲಗಾರ ರೈತರು) ಋತುಮಾನದ ಕೃಷಿ ಕಾರ್ಯಾಚರಣೆಗಳ (ಎಸ್‌ಎಒ) ಸಾಲಗಳನ್ನು ಪಡೆಯುವ ಎಲ್ಲ ರೈತರಿಗೆ ಕಡ್ಡಾಯವಾಗಿ ವಿಮಾ ಸುರಕ್ಷೆ ಒದಗಿಸಲಾಗುತ್ತದೆ. ಸಾಲ ಪಡೆದಿರುವ ಎಲ್ಲ ಬೇಸಾಯಗಾರರು ಯೋಜನೆಯ ನಿಯಮಗಳ ಅನುಸಾರ ವಿಮಾ ಸುರಕ್ಷೆಗೆ ಒತ್ತಾಯಿಸುವುದು ಕಡ್ಡಾಯವಾಗಿರುತ್ತದೆ.

  • ಬೆಳೆ ಯೋಜನೆಯಲ್ಲಿ ಯಾವುದೇ ಬದಲಾವಣೆಯನ್ನು ಕಟ್‌ಆಫ್‌ದಿನಕ್ಕಿಂತ ಕನಿಷ್ಟ 30 ದಿನಗಳಿಗೆ ಮುಂಚೆ ಬ್ಯಾಂಕ್‌ಗಮನಕ್ಕೆ ತರಬೇಕು.
  • ಎಸ್‌ಎಲ್‌ಸಿಸಿಸಿ/ ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಘೋಷಿಸಿರುವ ನಿರ್ದಿಷ್ಟ ಕಟ್-ಆಫ್‌ದಿನಾಂಕದವರೆಗೆ ಮಾತ್ರ ವಿಮಾ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತದೆ.
  • b. ಐಚ್ಛಿಕ ಅಂಶ

    ಸಾಲಗಾರರಲ್ಲದ ರೈತರಿಗೆ ಯೋಜನೆ ಐಚ್ಛಿಕವಾಗಿರುತ್ತದೆ ಮತ್ತು ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಯಾವುದೇ ಅಧಿಸೂಚಿತ ಬೆಳೆಗೆ ಪಿಎಂಎಫ್‌ಬಿವೈ ಅಡಿಯಲ್ಲಿ ವಿಮೆ ಪಡೆಯಲು ಬಯಸುವ ಬೇಸಾಯಗಾರರು ಕಟ್‌ಆಫ್‌ದಿನಾಂಕದ ಒಳಗೆ ಸಮೀಪದ ಬ್ಯಾಂಕ್ ಶಾಖೆ/ ಪಿಎಸಿಎಸ್‌/ ಅಧಿಕೃತ ಮಾಧ್ಯಮ ಸಹಭಾಗಿ/ ವಿಮಾ ಸಂಸ್ಥೆಯ ವಿಮಾ ಮಧ್ಯವರ್ತಿಯನ್ನು ಸಂಪರ್ಕಿಸಿ, ಸೂಚಿಸಿದ ಮಾದರಿಯಲ್ಲಿ ಪ್ರಸ್ತಾವನೆ ನಮೂನೆಯನ್ನು ಭರ್ತಿ ಮಾಡಿ, ವಿಮೆಗೆ ಪ್ರಸ್ತಾವಿಸಿರುವ ಕೃಷಿ ಭೂಮಿ/ ಬೆಳೆಗೆ ಸಂಬಂಧಿಸಿದ ವಿಮಾ ಖಾತ್ರಿಯ ಅಗತ್ಯ ದಾಖಲೆಗಳೊಂದಿಗೆ (ಉದಾಹರಣೆಗೆ ಮಾಲೀಕತ್ವ/ ಭೋಗ್ಯ/ ಬೇಸಾಯದ ಹಕ್ಕುಗಳು) ಬ್ಯಾಂಕ್‌ಶಾಖೆ/ ವಿಮಾ ಮಧ್ಯವರ್ತಿ/ ಸಿಎಸ್‌ಸಿ ಕೇಂದ್ರಗಳಿಗೆ ನಮೂನೆ ಮತ್ತು ಪ್ರೀಮಿಯಂ ಠೇವಣಿಯನ್ನು ಸಲ್ಲಿಸಬಹುದು.

  • ವಿಮಾ ಸುರಕ್ಷೆ ಬಯಸುವ ರೈತರು ನಿಯೋಜಿತ ಬ್ಯಾಂಕ್‌ನ ಶಾಖೆಯಲ್ಲಿ ಒಂದು ಖಾತೆಯನ್ನು ತೆರೆಯಬೇಕು/ ವಹಿವಾಟು ನಡೆಸಬೇಕು, ಮತ್ತು ವಿವರಗಳನ್ನು ಪ್ರಸ್ತಾವನೆ ನಮೂನೆಯಲ್ಲಿ ಒದಗಿಸಬೇಕು.
  • ರೈತರು ತಮ್ಮ ಭೂಮಿ ಗುರುತು ಸಂಖ್ಯೆಯನ್ನು ಪ್ರಸ್ತಾವನೆಯಲ್ಲಿ ನಮೂದಿಸಬೇಕು ಮತ್ತು ಬೇಸಾಯದ ಭೂಮಿಯ ಸ್ವಾಮ್ಯಕ್ಕೆ ಸಂಬಂಧಿಸಿ ದಾಖಲೆ ಸಾಕ್ಷ್ಯವನ್ನು ಕಡ್ಡಾಯವಾಗಿ ಒದಗಿಸಬೇಕು. ಬಿತ್ತನೆ ಮಾಡಿದ ಪ್ರದೇಶದ ದೃಢೀಕರಣ ಪ್ರಮಾಣಪತ್ರವನ್ನು ಬೇಸಾಯಗಾರರು ಕಡ್ಡಾಯವಾಗಿ ಒದಗಿಸಬೇಕು
  • ರೈತರು ಒಂದು ಹೊಲಕ್ಕೆ ಕೇವಲ ಒಂದು ಮೂಲದಿಂದ ಮಾತ್ರ, ಬೆಳೆದಿರುವ / ಬೆಳೆಯುವ ಪ್ರಸ್ತಾವನೆ ಮಾಡಿರುವ ಅಧಿಸೂಚಿತ ಬೆಳೆಗೆ ವಿಮಾ ಸುರಕ್ಷೆ ಪಡೆಯುವುನ್ನು ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ನಕಲು ಅಥವಾ ಎರಡು ವಿಮೆಗೆ ಅವಕಾಶ ಇರುವುದಿಲ್ಲ ಮತ್ತು ಅಂಥ ಪ್ರಕರಣಗಳಲ್ಲಿ ರೈತರು ವಿಮಾ ಸುರಕ್ಷೆಗೆ ಅರ್ಹರಿರುವುದಿಲ್ಲ. ಅಂಥ ಎಲ್ಲ ದಾವೆಗಳನ್ನು ತಿರಸ್ಕರಿಸುವ ಹಕ್ಕನ್ನು ವಿಮಾ ಸಂಸ್ಥೆ ಕಾಯ್ದಿರಿಸಿಕೊಂಡಿರುತ್ತದೆ ಮತ್ತು ಅಂಥ ಪ್ರಕರಣಗಳಲ್ಲಿ ಪ್ರೀಮಿಯಂ ಅನ್ನು ಕೂಡ ಮರುಪಾವತಿಸುವುದಿಲ್ಲ.
  • ಅಂಥ ರೈತರ ವಿರುದ್ಧ ಸಂಸ್ಥೆ ಕಾನೂನು ಕ್ರಮವನ್ನು ಕೂಡ ಕೈಗೊಳ್ಳಬಹುದು.
  • ಬೆಳೆ ಯೋಜನೆಯಲ್ಲಿ ಯಾವುದೇ ಬದಲಾವಣೆಯನ್ನು ಕಟ್‌ಆಫ್‌ದಿನಕ್ಕಿಂತ ಕನಿಷ್ಟ 30 ದಿನಗಳಿಗೆ ಮುಂಚೆ ಬ್ಯಾಂಕ್‌ಗಮನಕ್ಕೆ ತರಬೇಕು.
  • ಎಸ್‌ಎಲ್‌ಸಿಸಿಸಿ/ ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಘೋಷಿಸಿರುವ ನಿರ್ದಿಷ್ಟ ಕಟ್-ಆಫ್‌ದಿನಾಂಕದವರೆಗೆ ಮಾತ್ರ ವಿಮಾ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತದೆ.

1. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ ಎಂದರೇನು?

ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನಾ, ಅನಿಶ್ಚಿತತೆ ಮತ್ತು ಪ್ರತಿಕೂಲ ಹವಾಮಾನ ವೈಪರೀತ್ಯಗಳಿಂದ ಹೊಲದಲ್ಲಿ ಆಗುವ ಬೆಳೆ ನಷ್ಟಗಳಿಂದ ರೈತರಿಗೆ ರಕ್ಷಣೆ ಒದಗಿಸುತ್ತದೆ.

2. ಬೆಳೆಗಳು ಬಾಧಿತವಾಗುವ ಕಾರಣಗಳು ಯಾವುವು ಮತ್ತು ಯಾವ ಅಪಾಯಗಳಿಂದ ಸುರಕ್ಷೆ ಒದಗಿಸಲಾಗುತ್ತೆದೆ?

ನೈಸರ್ಗಿಕ ವಿಪತ್ತು, ಕೀಟ ದಾಳಿಗಳು ಮತ್ತು ಅತಿಯಾದ ಮಳೆ ಅಥವಾ ಮಳೆ ಕೊರತೆಯಂಥ ಹವಾಮಾನ ವೈಪರೀತ್ಯಗಳು, ಅತಿಯಾದ ಅಥವಾ ಕಡಿಮೆ ತಾಪಮಾನ, ಆರ್ದ್ರತೆ, ಹಿಮ, ಬಿರುಗಾಳಿ ಇತ್ಯಾದಿ

3. ದಾವೆಯ ಮೌಲ್ಯಮಾಪನವನ್ನು ಹೇಗೆ ಮಾಡಲಾಗುತ್ತದೆ?

a. ಒಂದು ವೇಳೆ ವಿಮೆ ಮಾಡಿಸಿದ ಋತುವಿನಲ್ಲಿ ವಿಮಾ ಘಟಕಗಳ (ಅಗತ್ಯ ಸಂಖ್ಯೆಯ ಸಿಸಿಗಳ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ) ವಿಮೆ ಮಾಡಿಸಿದ ಬೆಳೆಯ ಪ್ರತಿ ಹೆಕ್ಟೇರ್‌ನೈಜ ಇಳುವರಿ ನಿರ್ದಿಷ್ಟಪಡಿಸಿದ ನಿಗದಿತ ಮಿತಿ ಇಳುವರಿಗಿಂತ ಕಡಿಮೆಯಾದರೆ, ಆ ವ್ಯಾಖ್ಯಾನಿತ ಪ್ರದೇಶದಲ್ಲಿನ ಎಲ್ಲ ರೈತರು ಮತ್ತು ಬೆಳೆಗಳು ಇಳುವರಿ ಕೊರತೆ ಅನುಭವಿಸಿವೆ ಎಂದು ಪರಿಗಣಿಸಲಾಗುತ್ತದೆ.

ಈ ಕೆಳಗಿನ ಸೂತ್ರದ ಅನುಸಾರ ‘ದಾವೆ’ಯನ್ನು ಲೆಕ್ಕಾಚಾರ ಮಾಡಲಾಗುತ್ತದೆ: (ನಿಗದಿತ ಮಿತಿ ಇಳುವರಿ - ನೈಜ ಇಳುವರಿ)_____________________________X ವಿಮೆಯ ಮೊತ್ತ ನಿಗದಿತ ಮಿತಿ ಇಳುವರಿ

ಇಲ್ಲಿ, ಒಂದು ಅಧಿಸೂಚಿತ ವಿಮಾ ಘಟಕದಲ್ಲಿ ಒಂದು ಬೆಳೆಗೆ ನಿಗದಿತ ಮಿತಿ ಇಳುವರಿ (ಟಿವೈ) ಅಂದರೆ ಆ ಬೆಳೆಗೆ ಅನ್ವಯವಾಗುವ ನಷ್ಟಪರಿಹಾರ ಪ್ರಮಾಣದಿಂದ ಗುಣಿಸಲ್ಪಟ್ಟ ಆ ಋತುವಿನ ಕಳೆದ ಏಳು ವರ್ಷಗಳ ಪೈಕಿ ಅತ್ಯುತ್ತಮ ಐದು ವರ್ಷಗಳ ಇಳುವರಿಯ ಸರಾಸರಿಯಾಗಿರುತ್ತದೆ.

b. ಕೇಂದ್ರ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಂದ ಆ ಋತುವಿಗೆ ಪ್ರೀಮಿಯಂ ಸಬ್ಸಿಡಿಯನ್ನು ವಿಮಾ ಸಂಸ್ಥೆ ಸ್ವೀಕರಿಸಿದ ಬಳಿಕ ರೈತರ ದಾವೆಯ ಇತ್ಯರ್ಥ ಆರಂಭವಾಗುತ್ತದೆ.

c. ಸಂಬಂಧಿಸಿದ ವಿಮಾ ಸಂಸ್ಥೆಗಳಿಂದ ದಾವೆ ಮೊತ್ತವನ್ನು ಸ್ವೀಕರಿಸಿದ ಬಳಿಕ, ಆರ್ಥಿಕ ಸಂಸ್ಥೆಗಳು/ ಬ್ಯಾಂಕ್‌ಗಳು ಆ ದಾವೆ ಮೊತ್ತವನ್ನು ಫಲಾನುಭವಿ ರೈತನ ಖಾತೆಗೆ 1 ವಾರದ ಒಳಗೆ ಪಾವತಿಸಬೇಕು ಮತ್ತು 7 ದಿನಗಳ ಒಳಗಾಗಿ ಫಲಾನುಭವಿಗಳ ಸಂಪೂರ್ಣ ವಿವರಗಳನ್ನು ಶಾಖೆಯ ಕಚೇರಿಯಲ್ಲಿ ಪ್ರದರ್ಶಿಸಬೇಕು ಹಾಗೂ ಪರಿಶೀಲನೆ ಮತ್ತು ಲೆಕ್ಕಪರಿಶೋಧನೆಗಾಗಿ ಬಳಕೆ ಪ್ರಮಾಣಪತ್ರದೊಂದಿಗೆ ವಿಮಾ ಸಂಸ್ಥೆಗೆ ವರದಿ ಸಲ್ಲಿಸಬೇಕು.

d. ಒಂದು ವೇಳೆ ರೈತರಿಗೆ ಐಚ್ಛಿಕ ಆಧಾರದಲ್ಲಿ, ಅಂದರೆ ಮಧ್ಯವರ್ತಿಗಳ ಮೂಲಕ ವಿಮಾ ಸುರಕ್ಷೆ ಒದಗಿಸಿದ್ದರೆ, ಪಾವತಿಸಬೇಕಾದ ದಾವೆಯನ್ನು ದಾವೆಯ ವಿವರಗಳ ಮಾಹಿತಿಯೊಂದಿಗೆ ವಿಮಾ ಕಂಪನಿಯಿಂದ ನೇರವಾಗಿ ರೈತರ ವೈಯಕ್ತಿಕ ಖಾತೆಗೆ ಪಾವತಿ ಮಾಡಲಾಗುತ್ತದೆ.

ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರು:

ಕರ್ನಾಟಕಬೀದರ್ಗವ್ವಾಲಾ ರಮೇಶ್ಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. ಸಂಖ್ಯೆ 8-10-166, ಹೊಸ ವಸತಿ ವಸಾಹತು, ಕೆಇಬಿ ರಸ್ತೆ, ಎದುರು. ಶರ್ಮಾ ಸಿಹಿತಿಂಡಿಗಳು, ಬೀದರ್ -5954019626320563
ಕರ್ನಾಟಕದಾವಣಗರೆಸಾಯಿ ಕೃಷ್ಣಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. 4 ನೇ ಮಹಡಿ, ಸವನೂರ್ ಬಾಬು ಆರ್ಕೆಟಕ್ ಕಟ್ಟಡ, ವಕೀಲರ ರಸ್ತೆ, ದಾವಣಗೆರೆ -5770069581851545
ಕರ್ನಾಟಕದಕ್ಷಿಣ ಕನ್ನಡಹರೀಶ್ ಕುಮಾರ್ ರೆಡ್ಡಿಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್, 2 ನೇ ಮಹಡಿ ಎಸ್ಸೆಲ್ ಸೆಂಟರ್, ಎಂ ಜಿ ರಸ್ತೆ, ಮಂಗಳೂರು, 5750039963204122
  • Bank Level meeting
    +
    Bank Level meeting
  • CSC workshop Bidar
    +
    CSC workshop Bidar
  • Farmers Meeitng Davangere
    +
    Farmers Meeitng Davangere
  • Farmers meeting
    +
    Farmers meeting
  • +
  • +
  • +
  • +

ಯೋಜನೆಗಳ ಮತ್ತು ವಿವರವಾದ ಬೆಳೆಗಳ ಪ್ರೀಮಿಯಂ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಗ್ರಾಹಕ ಮಾಹಿತಿ ಹಾಳೆ ನೋಡಿ:

ರಾಜ್ಯಅನುಸೂಚಿತ ಜಿಲ್ಲೆವ್ಯಕ್ತಿಸಂಪರ್ಕಿಸಬೇಕಾದ ವ್ಯಕ್ತಿದೂರವಾಣಿ ಸಂಖ್ಯೆ
ಕರ್ನಾಟಕಬೀದರ್ಗವ್ವಾಲಾ ರಮೇಶ್ಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. ಸಂಖ್ಯೆ 8-10-166, ಹೊಸ ವಸತಿ ವಸಾಹತು, ಕೆಇಬಿ ರಸ್ತೆ, ಎದುರು. ಶರ್ಮಾ ಸಿಹಿತಿಂಡಿಗಳು, ಬೀದರ್ -5954019626320563
ಕರ್ನಾಟಕದಾವಣಗರೆಸಾಯಿ ಕೃಷ್ಣಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್. 4 ನೇ ಮಹಡಿ, ಸವನೂರ್ ಬಾಬು ಆರ್ಕೆಟಕ್ ಕಟ್ಟಡ, ವಕೀಲರ ರಸ್ತೆ, ದಾವಣಗೆರೆ -5770069581851545
ಕರ್ನಾಟಕದಕ್ಷಿಣ ಕನ್ನಡಹರೀಶ್ ಕುಮಾರ್ ರೆಡ್ಡಿಎಚ್‌ಡಿಎಫ್‌ಸಿ ಎರ್ಗೋ ಜಿಐಸಿ ಲಿಮಿಟೆಡ್, 2 ನೇ ಮಹಡಿ ಎಸ್ಸೆಲ್ ಸೆಂಟರ್, ಎಂ ಜಿ ರಸ್ತೆ, ಮಂಗಳೂರು, 5750039963204122

ಹಕ್ಕುಗಳ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.

x

Videos

Awards & Recognition
x
x