How can we help you?
ಹೆಚ್.ಡಿ.ಎಫ್.ಸಿ ಎರ್ಗೊ ಜನರಲ್ ಕಂಪೆನಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ನಿಯೋಜಿಸಿದ್ದು ಅವರ ಮೂಲಕ ಪುನರ್ ರಚನೆಯಾದ ಹಾವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್-ಡಬ್ಲೂ ಬಿ ಸಿ ಐ ಎಸ್) ಅನ್ನು ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲವನ್ನು ಪಡೆಯುವ ರೈತರಿಗೆ ಬೆಂಗಳೂರು (ಗ್ರಾಮಾಂತರ ಮತ್ತು ನಗರ) ಜಿಲ್ಲೆ, ಬೀದರ್ , ದಕ್ಷಿಣ ಕನ್ನಡ , ದಾವಣಗೆರೆ ಜಿಲ್ಲೆಯವರಿಗೆ ಅನ್ವಯವಾಗುವಂತೆ ಹಾಗೂ ಕೆಳಕಾಣಿಸಿರುವ ಬೆಳೆಗಳ ಮೇಲೆ ಮುಂಗಾರು ಹಂಗಾಮಿಗೆ ಜ್ಯಾರಿಯಾಗುವುವು.
ಗೇಣಿದಾರರು ಮತ್ತು ಜಮೀನು ಭೋಗ್ಯಕ್ಕೆ ಪಡೆದು ಬೆಳೆ ಬೆಳೆಯುವ ರೈತರು ಸೇರಿದಂತೆ, ಅಧಿಸೂಚಿತ ಪ್ರದೇಶದಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲ ರೈತರು ವಿಮಾ ಸುರಕ್ಷೆಗೆ ಅರ್ಹರಾಗಿರುತ್ತಾರೆ.
ಅಧಿಸೂಚಿತ/ ವಿಮೆ ಮಾಡಿಸಿದ ಬೆಳೆಗಳಿಗೆ ರೈತರು ವಿಮೆಯ ಖಾತ್ರಿ ಹೊಂದಿರಬೇಕು.ಸಾಲಗಾರರಲ್ಲದ ರೈತರು ರಾಜ್ಯದಲ್ಲಿ ಇರುವ ಭೂ ದಾಖಲೆಗಳ ಅಗತ್ಯ ದಾಖಲೆ ಸಾಕ್ಷ್ಯಗಳನ್ನು (ಹಕ್ಕು ಪತ್ರ (ಆರ್‌ಒಆರ್), ಭೂಸ್ವಾಧೀನ ಪ್ರಮಾಣಪತ್ರ (ಎಲ್‌ಪಿಸಿ) ಇತ್ಯಾದಿ.) ಮತ್ತು/ಅಥವಾ ಅನ್ವಯವಾಗುವ ಗುತ್ತಿಗೆ/ಒಪ್ಪಂದ ವಿವರಗಳು/ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಂದ ಅನುಮತಿಸಲ್ಪಟ್ಟ/ ಅಧಿಸೂಚಿತ ಇತರ ದಾಖಲೆಗಳನ್ನು ಸಲ್ಲಿಸಬೇಕು (ಒಂದು ವೇಳೆ ಗೇಣಿದಾರರು/ ಜಮೀನು ಭೋಗ್ಯ ಪಡೆದ ರೈತರಾಗಿದ್ದಲ್ಲಿ).
a. ಕಡ್ಡಾಯ ಅಂಶ
ಅಧಿಸೂಚಿತ ಬೆಳೆ(ಗಳಿ)ಗೆ ಆರ್ಥಿಕ ಸಂಸ್ಥೆಗಳಿಂದ (ಅಂದರೆ ಸಾಲಗಾರ ರೈತರು) ಋತುಮಾನದ ಕೃಷಿ ಕಾರ್ಯಾಚರಣೆಗಳ (ಎಸ್‌ಎಒ) ಸಾಲಗಳನ್ನು ಪಡೆಯುವ ಎಲ್ಲ ರೈತರಿಗೆ ಕಡ್ಡಾಯವಾಗಿ ವಿಮಾ ಸುರಕ್ಷೆ ಒದಗಿಸಲಾಗುತ್ತದೆ. ಸಾಲ ಪಡೆದಿರುವ ಎಲ್ಲ ಬೇಸಾಯಗಾರರು ಯೋಜನೆಯ ನಿಯಮಗಳ ಅನುಸಾರ ವಿಮಾ ಸುರಕ್ಷೆಗೆ ಒತ್ತಾಯಿಸುವುದು ಕಡ್ಡಾಯವಾಗಿರುತ್ತದೆ.
ಬೆಳೆ ಯೋಜನೆಯಲ್ಲಿ ಯಾವುದೇ ಬದಲಾವಣೆಯನ್ನು ಕಟ್-ಆಫ್ ದಿನಕ್ಕಿಂತ ಕನಿಷ್ಟ 2 ದಿನಗಳಿಗೆ ಮುಂಚೆ ಬ್ಯಾಂಕ್ ಗಮನಕ್ಕೆ ತರಬೇಕು.ಎಸ್‌ಎಲ್‌ಸಿಸಿಸಿ/ ರಾಜ್ಯ ಸರ್ಕಾರದ ಅಧಿಸೂಚನೆಯಲ್ಲಿ ಘೋಷಿಸಿರುವ ನಿರ್ದಿಷ್ಟ ಕಟ್-ಆಫ್ ದಿನಾಂಕದವರೆಗೆ ಮಾತ್ರ ವಿಮಾ ಪ್ರಸ್ತಾವನೆಗಳನ್ನು ಸ್ವೀಕರಿಸಲಾಗುತ್ತದೆ.
b. ಐಚ್ಛಿಕ ಅಂಶ
ಸಾಲಗಾರರಲ್ಲದ ರೈತರಿಗೆ ಯೋಜನೆ ಐಚ್ಛಿಕವಾಗಿರುತ್ತದೆ ಮತ್ತು ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಯಾವುದೇ ಅಧಿಸೂಚಿತ ಬೆಳೆಗೆ ಪಿಎಂಎಫ್‌ಬಿವೈ ಅಡಿಯಲ್ಲಿ ವಿಮೆ ಪಡೆಯಲು ಬಯಸುವ ಬೇಸಾಯಗಾರರು ಕಟ್-ಆಫ್ ದಿನಾಂಕದ ಒಳಗೆ ಸಮೀಪದ ಬ್ಯಾಂಕ್ ಶಾಖೆ/ ಪಿಎಸಿಎಸ್/ ಅಧಿಕೃತ ಮಾಧ್ಯಮ ಸಹಭಾಗಿ/ ವಿಮಾ ಸಂಸ್ಥೆಯ ವಿಮಾ ಮಧ್ಯವರ್ತಿಯನ್ನು ಸಂಪರ್ಕಿಸಿ, ಸೂಚಿಸಿದ ಮಾದರಿಯಲ್ಲಿ ಪ್ರಸ್ತಾವನೆ ನಮೂನೆಯನ್ನು ಭರ್ತಿ ಮಾಡಿ, ವಿಮೆಗೆ ಪ್ರಸ್ತಾವಿಸಿರುವ ಕೃಷಿ ಭೂಮಿ/ ಬೆಳೆಗೆ ಸಂಬಂಧಿಸಿದ ವಿಮಾ ಖಾತ್ರಿಯ ಅಗತ್ಯ ದಾಖಲೆಗಳೊಂದಿಗೆ (ಉದಾಹರಣೆಗೆ ಮಾಲೀಕತ್ವ/ ಭೋಗ್ಯ/ ಬೇಸಾಯದ ಹಕ್ಕುಗಳು) ಬ್ಯಾಂಕ್ ಶಾಖೆ/ ವಿಮಾ ಮಧ್ಯವರ್ತಿ/ ಸಿಎಸ್‌ಸಿ ಕೇಂದ್ರಗಳಿಗೆ ನಮೂನೆ ಮತ್ತು ಪ್ರೀಮಿಯಂ ಠೇವಣಿಯನ್ನು ಸಲ್ಲಿಸಬಹುದು.
ವಿಮಾ ಸುರಕ್ಷೆ ಬಯಸುವ ರೈತರು ನಿಯೋಜಿತ ಬ್ಯಾಂಕ್‌ನ ಶಾಖೆಯಲ್ಲಿ ಒಂದು ಖಾತೆಯನ್ನು ತೆರೆಯಬೇಕು/ ವಹಿವಾಟು ನಡೆಸಬೇಕು, ಮತ್ತು ವಿವರಗಳನ್ನು ಪ್ರಸ್ತಾವನೆ ನಮೂನೆಯಲ್ಲಿ ಒದಗಿಸಬೇಕು.ರೈತರು ತಮ್ಮ ಭೂಮಿ ಗುರುತು ಸಂಖ್ಯೆಯನ್ನು ಪ್ರಸ್ತಾವನೆಯಲ್ಲಿ ನಮೂದಿಸಬೇಕು ಮತ್ತು ಬೇಸಾಯದ ಭೂಮಿಯ ಸ್ವಾಮ್ಯಕ್ಕೆ ಸಂಬಂಧಿಸಿ ದಾಖಲೆ ಸಾಕ್ಷ್ಯವನ್ನು ಕಡ್ಡಾಯವಾಗಿ ಒದಗಿಸಬೇಕು. ಬಿತ್ತನೆ ಮಾಡಿದ ಪ್ರದೇಶದ ದೃಢೀಕರಣ ಪ್ರಮಾಣಪತ್ರವನ್ನು ಬೇಸಾಯಗಾರರು ಕಡ್ಡಾಯವಾಗಿ ಒದಗಿಸಬೇಕು.ರೈತರು ಒಂದು ಹೊಲಕ್ಕೆ ಕೇವಲ ಒಂದು ಮೂಲದಿಂದ ಮಾತ್ರ, ಬೆಳೆದಿರುವ / ಬೆಳೆಯುವ ಪ್ರಸ್ತಾವನೆ ಮಾಡಿರುವ ಅಧಿಸೂಚಿತ ಬೆಳೆಗೆ ವಿಮಾ ಸುರಕ್ಷೆ ಪಡೆಯುವುನ್ನು ಖಾತ್ರಿಪಡಿಸಿಕೊಳ್ಳಬೇಕು. ಯಾವುದೇ ನಕಲು ಅಥವಾ ಎರಡು ವಿಮೆಗೆ ಅವಕಾಶ ಇರುವುದಿಲ್ಲ ಮತ್ತು ಅಂಥ ಪ್ರಕರಣಗಳಲ್ಲಿ ರೈತರು ವಿಮಾ ಸುರಕ್ಷೆಗೆ ಅರ್ಹರಿರುವುದಿಲ್ಲ. ಅಂಥ ಎಲ್ಲ ದಾವೆಗಳನ್ನು ತಿರಸ್ಕರಿಸುವ ಹಕ್ಕನ್ನು ವಿಮಾ ಸಂಸ್ಥೆ ಕಾಯ್ದಿರಿಸಿಕೊಂಡಿರುತ್ತದೆ ಮತ್ತು ಅಂಥ ಪ್ರಕರಣಗಳಲ್ಲಿ ಪ್ರೀಮಿಯಂ ಅನ್ನು ಕೂಡ ಮರುಪಾವತಿಸುವುದಿಲ್ಲ.ಅಂಥ ರೈತರ ವಿರುದ್ಧ ಸಂಸ್ಥೆ ಕಾನೂನು ಕ್ರಮವನ್ನು ಕೂಡ ಕೈಗೊಳ್ಳಬಹುದು.
| ರಾಜ್ಯ | ಅನುಸೂಚಿತ ಜಿಲ್ಲೆ | ವ್ಯಕ್ತಿ | ಸಂಪರ್ಕಿಸಬೇಕಾದ ವ್ಯಕ್ತಿ | ದೂರವಾಣಿ ಸಂಖ್ಯೆ |
|---|---|---|---|---|
| ಕರ್ನಾಟಕ | ಬೀದರ್ | ಕಿರಣ್ ಗೊಲ್ಲಾ | ಲಿಂಗೇಶ್ವರ ಕಾಂಪ್ಲೆಕ್ಸ್, ಶಾಪ್ ನಂ 2, ಮನಹಳ್ಳಿ, ತಾಲೂಕ್ ಅಂಡ ಜಿಲ್ಲೆ ಬೀದರ್ ೫೮೫೪೦೩ | ೯೮೮೫೩೯೬೭೪೪ |
| ಕರ್ನಾಟಕ | ದಕ್ಷಿಣ ಕನ್ನಡ | ಎಂ.ಎಸ್.ಡಿ. ಜ್ಞಾನದೇವ್ | ನೇ ಫ್ಲೋರ್ ಎಸ್ಸೆಲ್ ಸೆಂಟರ್, ಎಂ.ಜಿ ರೋಡ್, ಮಂಗಳೂರು ೫೭೫೦೦೩ | ೯೯೬೩೨೦೪೧೨೨ |
| ಕರ್ನಾಟಕ | ದಾವಣಗೆರೆ | ಗವಲಾ ರಮೇಶ | ಡೋರ್ ನಂ ೩೨೩ /೨ ನೇ ಮೇಯ್ನ್ 2ನೇ ಕ್ರಾಸ್, ಅಧಾರ್ ನಗರ್, ದಾವಣಗೆರೆ ೫೭೭೦೦೧ | ೯೬೨೬೩೨೦೫೬೩ |
ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.