ಆಗಾಗ ಕೇಳುವ ಪ್ರಶ್ನೆಗಳು

ಈಗ ನೀವು ನಿಮ್ಮ ಸಂಪೂರ್ಣ ಕುಟುಂಬಕ್ಕೆ ಆಕ್ಸಿಡೆಂಟ್‌ನಿಂದ ಆಗುವ ಗಾಯಗಳಿಗಾಗಿ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್‌ ಮೂಲಕ ರಕ್ಷಣೆ ಒದಗಿಸಬಹುದು. ಈ ಪಾಲಿಸಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆಕ್ಸಿಡೆಂಟ್‌ನಲ್ಲಿ ಸಂಭವಿಸಿದ ಮರಣ, ಶಾಶ್ವತ ಅಂಗವೈಕಲ್ಯ, ಮೂಳೆಮುರಿತ, ಸುಟ್ಟಗಾಯಗಳಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಆಂಬ್ಯುಲೆನ್ಸ್ ವೆಚ್ಚ ಮತ್ತು ಆಸ್ಪತ್ರೆಗೆ ಪಾವತಿಸಬೇಕಾದ ಹಣ ಒದಗಿಸುತ್ತದೆ.
ಫ್ಯಾಮಿಲಿ ಪ್ಲಾನ್ ಅಡಿಯಲ್ಲಿ ನಿಮ್ಮ ಸಂಗಾತಿ ಮತ್ತು ಇಬ್ಬರು ಅವಲಂಬಿತ ಮಕ್ಕಳನ್ನು ಸೇರಿಸಬಹುದು.
ಹೌದು, 70 ವರ್ಷದವರೆಗಿನ ನಿಮ್ಮ ಅವಲಂಬಿತ ಪೋಷಕರನ್ನು ಸೇರಿಸಬಹುದು. ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಕೈಗೆಟಕುವ ಫ್ಲಾಟ್ ದರದೊಂದಿಗೆ ನಿಮ್ಮ ಅವಲಂಬಿತ ಪೋಷಕರಿಗೆ ಆ್ಯಡ್-ಆನ್ ಪ್ರಯೋಜನಗಳನ್ನು ಒದಗಿಸುತ್ತದೆ. ಅವರು ನಿಮಗೆ ನೀಡಿದ ಪ್ರೀತಿ ಮತ್ತು ಕಾಳಜಿಯ ಒಂದು ಸಣ್ಣ ಭಾಗವನ್ನು ಈಗ ನೀವು ಹಿಂತಿರುಗಿಸಬಹುದು.
ಎಚ್‌ಡಿಎಫ್‌ಸಿ ಎರ್ಗೋ ನಿಮಗೆ ನಾಲ್ಕು ಪ್ಲಾನ್‌ಗಳ ಮೂಲಕ ₹2.5 ಲಕ್ಷದಿಂದ ₹15 ಲಕ್ಷದವರೆಗಿನ ವಿಶಾಲ ಶ್ರೇಣಿಯ ವಿಮಾ ಮೊತ್ತವನ್ನು ನೀಡುತ್ತದೆ.
  1. ಸೆಲ್ಫ್ ಪ್ಲಾನ್
  2. ಸೆಲ್ಫ್ ಮತ್ತು ಫ್ಯಾಮಿಲಿ ಪ್ಲಾನ್
  3. ಸೆಲ್ಫ್ + ಅವಲಂಬಿತ ಪೋಷಕರ ಆ್ಯಡ್-ಆನ್.
  4. ಸೆಲ್ಫ್ ಮತ್ತು ಫ್ಯಾಮಿಲಿ ಪ್ಲಾನ್ + ಅವಲಂಬಿತ ಪೋಷಕರ ಆ್ಯಡ್-ಆನ್
ಅವಲಂಬಿತ ಮಗು ಎಂದರೆ ಇನ್ಶೂರ್ಡ್ ವ್ಯಕ್ತಿಯೊಂದಿಗೆ ವಾಸವಾಗಿರುವ 3 ತಿಂಗಳಿನಿಂದ 18 ವರ್ಷದವರೆಗಿನ ಅಥವಾ ಪೂರ್ಣಾವಧಿ ಶಿಕ್ಷಣ ಪಡೆಯುತ್ತಿದ್ದರೆ 21 ವರ್ಷದವರೆಗಿನ ಮದುವೆಯಾಗದ ಮಕ್ಕಳು ಎಂದರ್ಥ
18 ರಿಂದ 65 ವರ್ಷದವರೆಗಿನ ಪ್ರತಿಯೊಬ್ಬರೂ ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಪಡೆದುಕೊಳ್ಳಬಹುದು.
ನೀವು 022-6234 6234 (ಭಾರತದಿಂದ ಮಾತ್ರ ಆ್ಯಕ್ಸೆಸ್ ಮಾಡಬಹುದು) ಅಥವಾ 022 66384800 ಗೆ (ಸ್ಥಳೀಯ/STD ಶುಲ್ಕಗಳು ಅನ್ವಯ) ಕರೆ ಮಾಡುವ ಮೂಲಕ ಕ್ಲೇಮ್ ಮಾಡಬಹುದು. ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸುವಲ್ಲಿ ನಾವು ನಿಮಗೆ ಸಹಾಯ ಮಾಡುತ್ತೇವೆ ಮತ್ತು ಬೇಕಾದ ಎಲ್ಲಾ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ, 7 ಕೆಲಸದ ದಿನಗಳ ಒಳಗೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು.
ಫಾರ್ಮ್ ಮತ್ತು ಪ್ರೀಮಿಯಂ ಪಾವತಿ ಪಡೆದ ದಿನಾಂಕದಿಂದ 15 ದಿನಗಳ ಒಳಗೆ ಪಾಲಿಸಿಯು ಪ್ರಾರಂಭವಾಗುತ್ತದೆ.
ಈ ಪಾಲಿಸಿಯ ವಿಶೇಷವೆಂದರೆ, ತೊಂದರೆಯಿಲ್ಲದ ಡಾಕ್ಯುಮೆಂಟೇಶನ್. ನೀವು ಮಾಡಬೇಕಾಗಿರುವುದು ಇಷ್ಟೇ: ಸಂಬಂಧಪಟ್ಟ ವಿವರಗಳೊಂದಿಗೆ ಪ್ರಪೋಸಲ್ ಫಾರ್ಮ್ ಭರ್ತಿ ಮಾಡಿ, ಸಹಿ ಮಾಡಿರಿ. ಯಾವುದಾದರೂ ಒಂದು ಪ್ಲಾನ್ ಟಿಕ್ ಮಾಡಿ ಮತ್ತು ಚೆಕ್ ಲಗತ್ತಿಸಿ ಅಥವಾ ಫಾರ್ಮ್‌ನಲ್ಲಿ ಕ್ರೆಡಿಟ್ ಕಾರ್ಡ್ ವಿವರಗಳನ್ನು ನಮೂದಿಸಿ.
ಒಂದು ವೇಳೆ ಆಕ್ಸಿಡೆಂಟ್‌ನಿಂದ ಮೂಳೆ ಮುರಿದರೆ, ವಿಮಾ ಮೊತ್ತದ 10 % ಅನ್ನು 50,000 ದವರೆಗೆ (ಅವಲಂಬಿತ ಪೋಷಕರಿಗೆ) ಪಾವತಿಸುತ್ತದೆ.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
best_bfsi_2011 best_employer_brand best_employer_brand_2012 best_employer_brand_besi_2012 bfsi_2014 cfo_2014 iaaa icai_2013 icai_2014 icai_2015 icai_2016 iir_2012 iir_2016
x