ವ್ಯಕ್ತಿಗಳಿಗೆ - ಭಾರತದ ನಿವಾಸಿಯಾಗಿರುವ ಯಾವುದೇ ಆಸ್ತಿ ಮಾಲೀಕರು ಮತ್ತು / ಅಥವಾ ಅದರಲ್ಲಿ ವಾಸವಾಗಿರುವವರು ಹೋಮ್ ಇನ್ಶೂರೆನ್ಸ್ ಪಾಲಿಸಿ ಪಡೆದುಕೊಳ್ಳಬಹುದು. ಆದರೆ ಹೋಮ್ ಇನ್ಶೂರೆನ್ಸ್ - ಮಲ್ಟಿಲೇಯರ್ ಪಾಲಿಸಿಯನ್ನು ಕೇವಲ ಮನೆ ಮಾಲೀಕರಿಗೆ ಮಾತ್ರ ನೀಡಲಾಗುತ್ತದೆ, ಬಾಡಿಗೆದಾರರಿಗೆ ಅಲ್ಲ. ಸೊಸೈಟಿಗೆ - ಸೊಸೈಟಿಯ ನಿರ್ವಹಣಾ ಸಮಿತಿಯ ಯಾವುದೇ ಅಧಿಕೃತ ಸದಸ್ಯರು ಸೊಸೈಟಿ ಕಟ್ಟಡಕ್ಕಾಗಿ ಮತ್ತು ಸಾಮಾನ್ಯ ಸೌಲಭ್ಯಗಳಿಗಾಗಿ ಪಾಲಿಸಿ ತೆಗೆದುಕೊಳ್ಳಬಹುದು. ಇದರಲ್ಲಿ ಪಾಲಿಸಿಯನ್ನು ಸೊಸೈಟಿ ಹೆಸರಿನಲ್ಲಿ ನೀಡಲಾಗುತ್ತದೆ.
ಪಾಲಿಸಿ ಶೆಡ್ಯೂಲ್‌ನಲ್ಲಿ ಸೂಚಿಸಿರುವ ಪ್ರಾರಂಭದ ದಿನಾಂಕದಿಂದ ನಿಮ್ಮ ಇನ್ಶೂರೆನ್ಸ್ ಕವರ್ ಶುರುವಾಗುತ್ತದೆ, ಇದು ಪ್ರೀಮಿಯಂ ಪಾವತಿಸಿದ ನಂತರದ ಯಾವುದೇ ಆಯ್ದ ದಿನಾಂಕವಾಗಿರಬಹುದು (15 ದಿನಗಳ ನಂತರ ಅಲ್ಲ).
ಪ್ರತಿ ಚದರ ಅಡಿ ನಿರ್ಮಾಣದ ವೆಚ್ಚದೊಂದಿಗೆ ಆಸ್ತಿಯ ನಿರ್ಮಿತ ಪ್ರದೇಶವನ್ನು ಗುಣಿಸಿ ಆಸ್ತಿ ಮೌಲ್ಯಮಾಪನ ಮಾಡಲಾಗುತ್ತದೆ. ಪ್ರಸ್ತುತ ಆಸ್ತಿಯ ಸ್ಥಳ ಮತ್ತು ನಿರ್ಮಾಣದ ಪ್ರಕಾರವನ್ನು ಅವಲಂಬಿಸಿ ನಿರ್ಮಾಣದ ವೆಚ್ಚವನ್ನು ಸುಮಾರು 1500 ರಿಂದ 2000 ದವರೆಗೆ ತೆಗೆದುಕೊಳ್ಳಲಾಗುತ್ತದೆ.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.