ಪಾಲಿಸಿ ಶೆಡ್ಯೂಲ್‌ನಲ್ಲಿ ಸೂಚಿಸಿರುವ ಪ್ರಾರಂಭದ ದಿನಾಂಕದಿಂದ ನಿಮ್ಮ ಇನ್ಶೂರೆನ್ಸ್ ಕವರ್ ಶುರುವಾಗುತ್ತದೆ, ಇದು ಪ್ರೀಮಿಯಂ ಪಾವತಿಸಿದ ನಂತರದ ಯಾವುದೇ ಆಯ್ದ ದಿನಾಂಕವಾಗಿರಬಹುದು (15 ದಿನಗಳ ನಂತರ ಅಲ್ಲ).
ಆಸ್ಪತ್ರೆಗೆ ದಾಖಲಾದ 7 ದಿನಗಳ ಒಳಗೆ ನಿಮ್ಮ ಕ್ಲೈಮ್ ನೋಂದಣಿ ಮಾಡಿ ಮತ್ತು 15 ದಿನಗಳ ಒಳಗೆ ಸೂಚಿಸಿದ ಎಲ್ಲಾ ಡಾಕ್ಯುಮೆಂಟ್‌ಗಳೊಂದಿಗೆ ಸರಿಯಾಗಿ ಸಹಿ ಮಾಡಿದ ಕ್ಲೈಮ್ ಫಾರ್ಮ್ ಅನ್ನು ನಮಗೆ ಕಳುಹಿಸಿ, ಅಲ್ಲಿಗೆ ನಿಮ್ಮ ಕೆಲಸ ಮುಗಿಯುತ್ತದೆ. ಅನುಮೋದಿತ ಕ್ಲೈಮ್ ಅನ್ನು 30 ದಿನಗಳ ಒಳಗೆ ಪಾವತಿಸಲಾಗುತ್ತದೆ.
ಮಾಲೀಕತ್ವದ ವರ್ಗಾವಣೆ ಪರಿಣಾಮಕಾರಿಯಾಗುವ ದಿನಾಂಕದಿಂದ, ಪಾಲಿಸಿಯು ರದ್ದಾಗುತ್ತದೆ ಹಾಗೂ ಪಾಲಿಸಿ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಯು ಇನ್ಶೂರ್ಡ್ ಆಗಿ ಮುಂದುವರಿಯುವುದಿಲ್ಲ. ಬಾಕಿ ಉಳಿದ ಇನ್ಶೂರ್ಡ್ ಅವಧಿಯ ಪ್ರೀಮಿಯಂ ಹಿಂತಿರುಗಿಸಲಾಗುವುದು.
ನಿಮ್ಮ ಬ್ಯಾಂಕ್ ನೀಡಿದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ವಾಲೆಟ್/ಕ್ಯಾಶ್ ಕಾರ್ಡ್, EMI, UPI (ಜಿಪೇ, ಫೋನ್‌ಪೇ, ಪೇಟಿಎಂ, ಇತ್ಯಾದಿ), QR ಕೋಡ್ ಮೂಲಕ ನಿಮ್ಮ ಪಾಲಿಸಿ ಪ್ರೀಮಿಯಂ ಅನ್ನು ನೀವು ಪಾವತಿಸಬಹುದು. ದಯವಿಟ್ಟು ಗಮನಿಸಿ, ನಾವು ಯಾವುದೇ ಕ್ಲಬ್ ಕಾರ್ಡ್ ಅಥವಾ ಡೈನರ್ಸ್ ಕಾರ್ಡ್ ಮೂಲಕ ಪಾವತಿಯನ್ನು ಅಂಗೀಕರಿಸುವುದಿಲ್ಲ.