ಹೋಮ್ / ಹೋಮ್ ಇನ್ಶೂರೆನ್ಸ್ / ಸ್ಟ್ಯಾಂಡರ್ಡ್ ಫೈರ್ ಮತ್ತು ಸ್ಪೆಷಲ್ ಪೆರಿಲ್ಸ್
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?
  • FAQ

ಹೌಸ್ ಇನ್ಶೂರೆನ್ಸ್ ಫೈರ್ ಮತ್ತು ಸ್ಪೆಷಲ್ ಪೆರಿಲ್ಸ್ ಪ್ಲಾನ್

ಭಾರತದಲ್ಲಿ ಬಹುತೇಕ ಕಟ್ಟಡಗಳು ಸೂಚಿತ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸುವುದಿಲ್ಲ. ಹೀಗಾಗಿ ಅವು ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆ ಇರುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದರೆ, ಚಿಂತಿಸಬೇಡಿ.! ಅಂತಹ ಅನಿರೀಕ್ಷಿತ ಘಟನೆಗಳು ಸಂಭವಿಸಿದರೆ ನಾವು ನಿಮಗೆ ಪರಿಹಾರ ಒದಗಿಸುವ ಭರವಸೆ ನೀಡುತ್ತೇವೆ. ಸ್ಟ್ಯಾಂಡರ್ಡ್ ಫೈರ್ ಮತ್ತು ಸ್ಪೆಷಲ್ ಪೆರಿಲ್ಸ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ಪ್ರವಾಹ, ಗಲಭೆ, ಮುಷ್ಕರ ಮುಂತಾದ ಅನಿರೀಕ್ಷಿತ ಘಟನೆಗಳ ವಿರುದ್ಧ ಸುರಕ್ಷಿತವಾಗಿರಿ.

ನಿಮ್ಮ ಮನೆಯೇ ನಿಮ್ಮ ಸುರಕ್ಷಾ ಕವಚ! ಅದನ್ನೇಕೆ ರಕ್ಷಿಸಬಾರದು?

ಒಂದು ಇನ್ಶೂರೆನ್ಸ್; ದೊಡ್ಡ ರಿಯಾಯಿತಿಗಳು
ಒಂದು ಇನ್ಶೂರೆನ್ಸ್, ದೊಡ್ಡ ರಿಯಾಯಿತಿಗಳು
ಒಂದು ಸಮಗ್ರ ಮತ್ತು ಸಂಪೂರ್ಣವಾಗಿ ಕಸ್ಟಮೈಸ್ ಮಾಡಬಹುದಾದ ಇನ್ಶೂರೆನ್ಸ್ ಪ್ಲಾನ್ ಪಡೆಯುವುದಕ್ಕಿಂತ ಒಳ್ಳೆಯದೇನಿದೆ? ಈಗ ಅದು 50% ರಿಯಾಯಿತಿಯಲ್ಲಿ ಸಿಗುತ್ತಿದೆ! ಸರಿಯಾದ ಹೋಮ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ಹೆಚ್ಚಿನ ಉಳಿತಾಯ ಮಾಡುವುದರ ಜೊತೆಗೆ ನಿಮ್ಮ ಸ್ವತ್ತುಗಳನ್ನು ಸುರಕ್ಷಿತವಾಗಿಸಿ.
ದೊಡ್ಡ ಆಸ್ತಿಗಳು, ಹೆಚ್ಚಿನ ಕವರೇಜ್
ದೊಡ್ಡ ಆಸ್ತಿಗಳು, ಹೆಚ್ಚಿನ ಕವರೇಜ್
ನಿಮ್ಮ ಅಗತ್ಯಗಳ ಅನುಸಾರ, ನಿಮಗೆ ಸಾಕಾಗುತ್ತದೆ ಎನ್ನುವಷ್ಟು ಕವರೇಜ್ ಮೊತ್ತವನ್ನು ಆಯ್ಕೆ ಮಾಡುವ ಅನುಕೂಲತೆ ಪಡೆಯುತ್ತೀರಿ. 1 ಲಕ್ಷದಿಂದ 3 ಕೋಟಿಯವರೆಗೆ ನಿಮಗೆ ಸೂಕ್ತವೆನಿಸುವ ಯಾವುದಾದರೂ ಮೊತ್ತ ಆಯ್ಕೆ ಮಾಡಿ ನಿಮ್ಮ ಮನೆಯನ್ನು ಅಪಾಯಗಳ ವಿರುದ್ಧ ಸುರಕ್ಷಿತವಾಗಿಸಿ.
15 ವರ್ಷಗಳವರೆಗೆ ರಕ್ಷಣೆ ಪಡೆಯಿರಿ
15 ವರ್ಷಗಳವರೆಗೆ ರಕ್ಷಣೆ ಪಡೆಯಿರಿ
ನಿಮ್ಮ ನೆಮ್ಮದಿಯ ಗೂಡಿಗೆ ವಿಶೇಷ ರಕ್ಷಣೆ ಬೇಕು. ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪ್ಲಾನ್ ಮೂಲಕ ನಿಮ್ಮ ಮನೆಯನ್ನು ಸುರಕ್ಷಿತಗೊಳಿಸಿ. 15 ವರ್ಷಗಳವರೆಗೆ ಮುಂದುವರೆಯುವ ಒಂದೇ ಇನ್ಶೂರೆನ್ಸ್‌ನೊಂದಿಗೆ ಮನಃಶಾಂತಿ ಪಡೆಯಿರಿ.
ಹೆಚ್ಚಿನ ಜವಾಬ್ದಾರಿಗಳು, ಹೆಚ್ಚಿನ ಕವರೇಜ್
ಹೆಚ್ಚಿನ ಜವಾಬ್ದಾರಿಗಳು, ಹೆಚ್ಚಿನ ಕವರೇಜ್
ಬೆಳೆಯುತ್ತಿರುವ ಹೌಸಿಂಗ್ ಸೊಸೈಟಿಯ ಭದ್ರತಾ ಅವಶ್ಯಕತೆಗಳನ್ನು ಪೂರೈಸಲು ನಮ್ಮ ಇನ್ಶೂರೆನ್ಸ್ ಪ್ಲಾನ್ ಅನ್ನು ಸುಲಭವಾಗಿ ವಿಸ್ತರಿಸಬಹುದು. ಈಗ ನೀವು ಪ್ರತಿ ವರ್ಷದ ಕೊನೆಯಲ್ಲಿ ವಿಮಾ ಮೊತ್ತವನ್ನು 10% ರಷ್ಟು ಹೆಚ್ಚಿಸಬಹುದು.

ಏನನ್ನು ಒಳಗೊಂಡಿದೆ?

ಬೆಂಕಿ
ಬೆಂಕಿ

ಬೆಂಕಿಯಿಂದ ನಿಮ್ಮ ಹುಮ್ಮಸ್ಸನ್ನು ಕುಗ್ಗಿಸಲು ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಬೆಂಕಿಯು ನಿಮ್ಮ ಮನೆಯ ವಸ್ತುಗಳನ್ನೂ ಹಾನಿ ಮಾಡಲಾರದು ಎಂಬ ಭರವಸೆಯನ್ನು ನಾವು ನಿಮಗೆ ನೀಡುತ್ತೇವೆ. ನಾವು ಅದನ್ನು ಕವರ್ ಮಾಡುತ್ತೇವೆ.

ನೈಸರ್ಗಿಕ ವಿಕೋಪಗಳು
ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಕೋಪಗಳನ್ನು ಯಾವಾಗ ಬರುತ್ತದೆಂದು ಊಹಿಸುವುದು ನಿಮ್ಮಿಂದ ಸಾಧ್ಯವಿಲ್ಲ. ಆದರೆ ಭೂಕಂಪ, ಪ್ರವಾಹ, ಬಿರುಗಾಳಿ, ಚಂಡಮಾರುತ ಇತ್ಯಾದಿಗಳ ವಿರುದ್ಧ ನಿಮ್ಮ ಸ್ವತ್ತುಗಳಿಗೆ ರಕ್ಷಣೆ ಒದಗಿಸಬಹುದು.

ಮಾನವನಿರ್ಮಿತ ಅಪಾಯಗಳು
ಮಾನವನಿರ್ಮಿತ ಅಪಾಯಗಳು

ಸಂಕಷ್ಟದ ಸಮಯಗಳು ನಿಮ್ಮ ಮನೆ, ಮನಸ್ಸುಗಳೆರಡರ ಮೇಲೆಯೂ ಪರಿಣಾಮ ಬೀರಬಲ್ಲವು. ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಕಾರ್ಯಗಳ ವಿರುದ್ಧ ಅದನ್ನು ಸುರಕ್ಷಿತವಾಗಿಸಿ.

ಆಕ್ಸಿಡೆಂಟಲ್ ಹಾನಿ
ಆಕ್ಸಿಡೆಂಟಲ್ ಹಾನಿ

ನೀರಿನ ಟ್ಯಾಂಕ್‌ಗಳು ಒಡೆಯುವುದರಿಂದ ಅಥವಾ ಸ್ವಯಂಚಾಲಿತ ಸ್ಪ್ರಿಂಕ್ಲರ್‌ಗಳ ಸೋರಿಕೆಯ ಕಾರಣದಿಂದ ನಿಮ್ಮ ಕಟ್ಟಡಕ್ಕೆ ಯಾವುದೇ ಹಾನಿಯಾದಲ್ಲಿ, ಅದಕ್ಕೆ ನಾವು ಖಂಡಿತವಾಗಿ ಪರಿಹಾರ ನೀಡುತ್ತೇವೆ.

ಏನನ್ನು ಒಳಗೊಂಡಿಲ್ಲ?

ದೀರ್ಘಾವಧಿ ಯೋಜನೆಗಳು
ದೀರ್ಘಾವಧಿ ಯೋಜನೆಗಳು

ಸಹಕಾರಿ ವಸತಿ ಸೊಸೈಟಿಗಳಿಗೆ ನಾವು ದೀರ್ಘಾವಧಿ ಯೋಜನೆಗಳನ್ನು ಒದಗಿಸುವುದಿಲ್ಲ.

ಅಡ್ಡ ಪರಿಣಾಮದಿಂದಾದ ನಷ್ಟ
ಅಡ್ಡ ಪರಿಣಾಮದಿಂದಾದ ನಷ್ಟ

ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ

ಭೂಮಿಯ ವೆಚ್ಚ
ಭೂಮಿಯ ವೆಚ್ಚ

ನಿಮ್ಮ ಭೂಮಿಗೆ ಬೆಲೆ ಇದೆ ಎಂದು ನಮಗೆ ತಿಳಿದಿದೆ. ಆದರೆ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

ನಿರ್ಮಾಣದ ಹಂತದಲ್ಲಿರುವ ಆಸ್ತಿ
ನಿರ್ಮಾಣದ ಹಂತದಲ್ಲಿರುವ ಆಸ್ತಿ

ನೀವು ಈಗ ವಾಸಿಸುತ್ತಿರುವ ಮನೆಯನ್ನು ಕವರ್ ಮಾಡುತ್ತೇವೆ, ನಿಮ್ಮ ಸ್ವಾಧೀನದಲ್ಲಿಲ್ಲದ ಅಥವಾ ಇನ್ನೂ ನಿರ್ಮಾಣವಾಗುತ್ತಿರುವ ಆಸ್ತಿಯು ಕವರ್ ಆಗುವುದಿಲ್ಲ.

ಉದ್ದೇಶಪೂರ್ವಕ ದುರ್ನಡತೆ
ಉದ್ದೇಶಪೂರ್ವಕ ದುರ್ನಡತೆ

ನಾವು ಅನಿರೀಕ್ಷಿತವಾಗಿ ಆಗುವ ನಷ್ಟಗಳನ್ನು ಕವರ್ ಮಾಡುವ ಭರವಸೆ ನೀಡುತ್ತೇವೆ, ಆದರೆ ನಿಮ್ಮ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಪಾಲಿಸಿಯ ಕವರೇಜ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ.

ಶಿಥಿಲಗೊಳ್ಳುವಿಕೆ
ಶಿಥಿಲಗೊಳ್ಳುವಿಕೆ

ನಿಮ್ಮ ಆಸ್ತಿಯು ಬರುಬರುತ್ತಾ ಹಳೆಯದಾಗುತ್ತ ಹೋಗುತ್ತದೆ ಹಾಗೂ ಬಿರುಕುಗಳು ಕಾಣಿಸಿಕೊಳ್ಳುವುದು, ರಿಪೇರಿಗಳು ಸಾಮಾನ್ಯ ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ ಕಟ್ಟಡದ ನಿರ್ವಹಣೆಗೆ ಯಾವುದೇ ಇನ್ಶೂರೆನ್ಸ್ ಕೂಡಾ ಕವರೇಜ್ ಒದಗಿಸುವುದಿಲ್ಲ.

Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Awards

ಸುರಕ್ಷಿತ #1.5+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
Awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ಇತರ ಸಂಬಂಧಪಟ್ಟ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಭಾರತ್ ಗೃಹ ರಕ್ಷಾ ಇನ್ಶೂರೆನ್ಸ್ ಪಾಲಿಸಿಯು ವಸತಿ ಆಸ್ತಿಯ ಸ್ಟ್ರಕ್ಚರ್ ಮತ್ತು ಅದರ ವಸ್ತುಗಳಿಗೆ ಕವರೇಜನ್ನು ಒದಗಿಸುತ್ತದೆ. ಇದು ಬೆಂಕಿ, ಭೂಕಂಪ, ಬಿರುಗಾಳಿ, ಪ್ರವಾಹ ಮತ್ತು ಇತರ ಅಂತಹ ಅಪಾಯಗಳಿಂದ ಉಂಟಾದ ನಷ್ಟ/ಹಾನಿಯ ವಿರುದ್ಧ ಮನೆಯಲ್ಲಿನ ವಸ್ತುಗಳನ್ನು ಕವರ್ ಮಾಡುತ್ತದೆ.
ಈ ಕವರ್ ವಿಮಾದಾರರ ಮನೆಯ ಸ್ಟ್ರಕ್ಚರ್‌ಗಾಗಿ ಇದೆ. ಗ್ಯಾರೇಜ್, ವೆರಾಂಡಾ, ನಿವಾಸದ ಡೊಮೆಸ್ಟಿಕ್ ಔಟ್‌ಹೌಸ್‌ಗಳು, ಕಾಂಪೌಂಡ್ ವಾಲ್‌ಗಳು, ರಿಟೈನಿಂಗ್ ಗೋಡೆಗಳು, ಪಾರ್ಕಿಂಗ್ ಸ್ಥಳ, ಸೋಲಾರ್ ಪ್ಯಾನೆಲ್‌ಗಳು, ನೀರಿನ ಟ್ಯಾಂಕ್‌ಗಳು ಅಥವಾ ನಿವಾಸ, ಶಾಶ್ವತ ಫಿಕ್ಸ್ಚರ್‌ಗಳು ಮತ್ತು ಫಿಟ್ಟಿಂಗ್‌ಗಳು ಮತ್ತು ಆಂತರಿಕ ರಸ್ತೆಗಳಂತಹ ಹೆಚ್ಚುವರಿ ಸ್ಟ್ರಕ್ಚರ್‌ಗಳನ್ನು ಕೂಡ ಕವರ್ ಮಾಡಬಹುದು. ಕಚ್ಚಾ ನಿರ್ಮಾಣ/ನಿರ್ಮಾಣ ಹಂತದಲ್ಲಿರುವ ಆಸ್ತಿಯು ಈ ಪಾಲಿಸಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ ಎಂಬುದನ್ನು ಗಮನಿಸಿ.
ಸಾಮಾನ್ಯವಾಗಿ ಯಾವುದೇ ಮನೆಯಲ್ಲಿರುವ ವಸ್ತುಗಳು ಅಂದರೆ, ಫರ್ನಿಚರ್ ಮತ್ತು ಫಿಟ್ಟಿಂಗ್‌ಗಳು, ಟೆಲಿವಿಷನ್ ಸೆಟ್‌ಗಳು, ಟೆಲಿವಿಷನ್, ಎಲೆಕ್ಟ್ರಾನಿಕ್ ವಸ್ತುಗಳು, ಆಂಟೆನಾ, ನೀರಿನ ಸಂಗ್ರಹಣಾ ಉಪಕರಣಗಳು, ಏರ್ ಕಂಡೀಶನರ್, ಕಿಚನ್ ಅಪ್ಲಾಯನ್ಸಸ್ ಮತ್ತು ಮನೆಯ ಇತರ ವಸ್ತುಗಳನ್ನು ಕಂಟೆಂಟ್ ಕವರ್ ಅಡಿಯಲ್ಲಿ ಕವರ್ ಮಾಡಬಹುದು.
ಅಮೂಲ್ಯ ವಸ್ತುಗಳೆಂದರೆ ಜ್ಯುವೆಲರಿ, ಸಿಲ್ವರ್‌ವೇರ್, ಪೇಂಟಿಂಗ್ಸ್, ಆರ್ಟ್ ವರ್ಕ್, ಮೌಲ್ಯಯುತ ಕಾರ್ಪೆಟ್‌ಗಳು, ಪ್ರಾಚೀನ ವಸ್ತುಗಳು, ಕ್ಯೂರಿಯೋ, ಪೇಂಟಿಂಗ್ಸ್. ಬುಲಿಯನ್ ಅಥವಾ ಅನ್‌ಸೆಟ್ ಅಮೂಲ್ಯ ಕಲ್ಲುಗಳು, ಹಸ್ತಪ್ರತಿಗಳು, ವಾಹನಗಳು, ಸ್ಫೋಟಕ ವಸ್ತುಗಳಂತಹ ಕೆಲವು ವಸ್ತುಗಳು ಪಾಲಿಸಿಯ ಅಡಿಯಲ್ಲಿ ಕವರ್ ಆಗುವುದಿಲ್ಲ.
ಯಾವುದೇ ಮನೆ ಮಾಲೀಕರು ಅಥವಾ ಬಾಡಿಗೆದಾರರು ಭಾರತ್ ಗೃಹ ರಕ್ಷಾ ಪಾಲಿಸಿಯನ್ನು ಖರೀದಿಸಲು ಅರ್ಹರಾಗಿರುತ್ತಾರೆ. ಯಾವುದೇ BGR ಪಾಲಿಸಿಗಾಗಿ ವಿಮಾದಾರರು ಮನೆ ಸ್ಟ್ರಕ್ಚರ್ ಅಥವಾ ಮನೆ ವಸ್ತುವನ್ನು ಅಥವಾ ಎರಡನ್ನೂ ಆಯ್ಕೆ ಮಾಡಬೇಕು ಎಂಬುದನ್ನು ದಯವಿಟ್ಟು ಗಮನಿಸಿ.
BGR ಅನ್ನು ಒಂದು ವರ್ಷ ಅಥವಾ ಒಂದಕ್ಕಿಂತ ಹೆಚ್ಚು ವರ್ಷಕ್ಕೆ ನೀಡಬಹುದು ಆದರೆ ವೈಯಕ್ತಿಕ ಮನೆ ಮಾಲೀಕರಾಗಿದ್ದಲ್ಲಿ 10 ವರ್ಷಗಳಿಗಿಂತ ಹೆಚ್ಚು ಇರಬಾರದು. ಸಹಕಾರಿ ಸಂಘಗಳು ಅಥವಾ ಮನೆಗಳು ವ್ಯಕ್ತಿಗಳಲ್ಲದ ಹೆಸರಿನಲ್ಲಿ ಇದ್ದರೆ ಪಾಲಿಸಿಯ ಅವಧಿಯು 1 ವರ್ಷಕ್ಕಿಂತ ಹೆಚ್ಚು ಇರಬಾರದು.
ಹೌದು, ಭಾರತ್ ಗೃಹ ರಕ್ಷಾ ಪಾಲಿಸಿಯು ಈ ಎಲ್ಲಾ ವೆಚ್ಚಗಳನ್ನು ಸಹ ಪಾವತಿಸುತ್ತದೆ:
• ಆರ್ಕಿಟೆಕ್ಟ್, ಸರ್ವೇಯರ್, ಕನ್ಸಲ್ಟಿಂಗ್ ಎಂಜಿನಿಯರ್‌ಗಳ ಸಮಂಜಸವಾದ ಶುಲ್ಕಗಳಿಗಾಗಿ ಕ್ಲೈಮ್ ಮೊತ್ತದ 5% ವರೆಗೆ;
• ಸೈಟಿನಿಂದ ಡೆಬ್ರಿಗಳನ್ನು ತೆಗೆದುಹಾಕುವ ಸಮಂಜಸವಾದ ವೆಚ್ಚಗಳಿಗಾಗಿ ಕ್ಲೈಮ್ ಮೊತ್ತದ 2% ವರೆಗೆ.
• BGR ಪಾಲಿಸಿಯ ಅಡಿಯಲ್ಲಿ ಇನ್ಶೂರ್ಡ್ ಈವೆಂಟ್‌ನಿಂದ ಉಂಟಾಗುವ ಫಿಸಿಕಲ್ ಹಾನಿಯಿಂದಾಗಿ ಮನೆಯ ಬಿಲ್ಡಿಂಗ್ ವಾಸಿಸಲು ಯೋಗ್ಯವಾಗಿಲ್ಲದೇ ಇದ್ದಾಗ ಇನ್ಶೂರ್ಡ್ ವ್ಯಕ್ತಿಯು ಬಾಡಿಗೆ ನಷ್ಟ ಮತ್ತು ಪರ್ಯಾಯ ವಸತಿಗಾಗಿ ಬಾಡಿಗೆಗೆ ಕವರೇಜ್ ಅನ್ನು ಕೂಡ ಪಡೆಯುತ್ತಾರೆ.
• ಕಳ್ಳತನ ಅಥವಾ ಯಾವುದೇ ಇನ್ಶೂರ್ಡ್ ಘಟನೆಗಳ ಕಾರಣದಿಂದ ಉಂಟಾದರೆ 7 ದಿನಗಳ ಒಳಗೆ.
ಭಾರತ್ ಗೃಹ ರಕ್ಷಾ ಮನೆ ಬಿಲ್ಡಿಂಗ್ ಮತ್ತು/ಅಥವಾ ಮನೆಯ ವಸ್ತುಗಳಿಗೆ ಇನ್ಶೂರೆನ್ಸ್ ಕವರ್ ಒದಗಿಸುವುದು ಮಾತ್ರವಲ್ಲದೆ, ಇದು ಒಪ್ಪಿದ ಮೌಲ್ಯದ ಆಧಾರದ ಮೇಲೆ ಮೌಲ್ಯಯುತ ವಸ್ತುಗಳಿಗೂ ಕೂಡ ಕವರ್ ಒದಗಿಸಬಹುದು. ಸೇರಿಸಬಹುದಾದ ಇತರ ಆ್ಯಡ್ ಆನ್‌ಗಳು ಈ ಕೆಳಗಿನಂತಿವೆ:
• ಹೆಚ್ಚುವರಿ ಪ್ರೀಮಿಯಂಗಾಗಿ ಸ್ವಯಂ ಮತ್ತು ಸಂಗಾತಿಗೆ ವೈಯಕ್ತಿಕ ಆಕ್ಸಿಡೆಂಟ್ ರಕ್ಷಣೆ. ವೈಯಕ್ತಿಕ ಆಕ್ಸಿಡೆಂಟ್ ಇನ್ಶೂರೆನ್ಸ್ ಕವರ್ ವಿಮಾದಾರರಿಗೆ ಅಪಾಯದಿಂದ ಉಂಟಾಗುವ ಆಕ್ಸಿಡೆಂಟಲ್ ಸಾವಿನ ವಿರುದ್ಧ ಸಂಪೂರ್ಣ ಆರ್ಥಿಕ ರಕ್ಷಣೆ ನೀಡುತ್ತದೆ.
• ಕಠಿಣ ಭತ್ಯೆ - ಆಹಾರ, ಔಷಧಿಗಳು, ಬಟ್ಟೆಗಳು ಮತ್ತು ಶಿಶುಗಳ ಅಗತ್ಯ ವಸ್ತುಗಳ ತುರ್ತು ಖರೀದಿಗಳಿಗೆ ವಿಮಾದಾರರಿಂದ ಉಂಟಾಗುವ ವೆಚ್ಚಗಳು
• ಮನೆಕೆಲಸದ ಸಿಬ್ಬಂದಿಗಳ ಆಕಸ್ಮಿಕ ಆಸ್ಪತ್ರೆ ದಾಖಲಾತಿ - ಕವರ್‌ಗಳು ಆಸ್ಪತ್ರೆ ದಾಖಲಾತಿ ವಿಮಾದಾರರಿಂದ ನೇಮಕಗೊಂಡ ಮನೆಕೆಲಸದ ಸಿಬ್ಬಂದಿ ಇನ್ಶೂರ್ಡ್ ಸ್ಥಳದಲ್ಲಿ ಕರ್ತವ್ಯದಲ್ಲಿರುವಾಗ ಆಕಸ್ಮಿಕವಾಗಿ ಆಸ್ಪತ್ರೆಗೆ ದಾಖಲಾದರೆ, ಇನ್ಶೂರ್ಡ್ ವ್ಯಕ್ತಿಯು ಆಸ್ಪತ್ರೆಗೆ ದಾಖಲಾತಿಯ ಅಪಾಯವು ಕವರ್ ಆಗುತ್ತದೆ.
ಪಾಲಿಸಿಯ ಅವಧಿಯಲ್ಲಿ ಸಂಭವಿಸುವ ಈ ಕೆಳಗಿನ ಅನಿರೀಕ್ಷಿತ ಘಟನೆಗಳಿಂದ ಇನ್ಶೂರೆನ್ಸ್ ಮಾಡಿದ ಆಸ್ತಿಗೆ ಉಂಟಾದ ಭೌತಿಕ ನಷ್ಟ ಅಥವಾ ಹಾನಿ ಅಥವಾ ವಿನಾಶವನ್ನು ಪಾಲಿಸಿಯು ಕವರ್ ಮಾಡುತ್ತದೆ.
• ಬೆಂಕಿ
• ಎಕ್ಸ್‌ಪ್ಲೋಶನ್ ಅಥವಾ ಇಂಪ್ಲೋಶನ್
• ಮಿಂಚು
• ಭೂಕಂಪ, ಜ್ವಾಲಾಮುಖಿ ಆಸ್ಫೋಟ ಅಥವಾ ಇತರ ಪ್ರಕೃತಿಯ ಕನ್ವಲ್ಷನ್‌ಗಳು
• ಬಿರುಗಾಳಿ, ಸೈಕ್ಲೋನ್, ಟೈಫೂನ್, ಟೆಂಪೆಸ್ಟ್, ಹರಿಕೇನ್, ಟೋರ್ನಾಡೋ, ಸುನಾಮಿ, ಪ್ರವಾಹ ಮತ್ತು ಜಲಪ್ರಳಯ
• ನಿಮ್ಮ ಮನೆಯ ಬಿಲ್ಡಿಂಗ್ ಭೂಮಿಯ ಸಬ್ಸಿಡೆನ್ಸ್, ಲ್ಯಾಂಡ್‌ಸ್ಲೈಡ್, ರಾಕ್‌ಸ್ಲೈಡ್ ಇತ್ಯಾದಿ.
• ಬುಶ್ ಫೈರ್, ಫಾರೆಸ್ಟ್ ಫೈರ್, ಜಂಗಲ್ ಫೈರ್
• ಗಲಭೆ, ಮುಷ್ಕರ, ದುರುದ್ದೇಶಪೂರಿತ ಹಾನಿಗಳು
• ಆಟೋಮ್ಯಾಟಿಕ್ ಸ್ಪ್ರಿಂಕ್ಲರ್ ಇನ್ಸ್ಟಾಲೇಶನ್‌ಗಳಿಂದ ಸೋರಿಕೆ
• ಭಯೋತ್ಪಾದನೆ
ಈ ಕೆಳಗೆ ತಿಳಿಸಲಾದ ಘಟನೆಗಳಿಂದ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಅಥವಾ ಉಂಟಾದ ಅಥವಾ ಉಂಟಾಗಬಹುದಾದ ವಿಮಾದಾರ ಆಸ್ತಿಯ ಯಾವುದೇ ನಷ್ಟ ಅಥವಾ ಹಾನಿ ಅಥವಾ ವಿನಾಶದ ನಷ್ಟಗಳು ಮತ್ತು ವೆಚ್ಚಗಳನ್ನು ಪಾಲಿಸಿಯು ಒಳಗೊಂಡಿರುವುದಿಲ್ಲ:
• ಉದ್ದೇಶಪೂರ್ವಕ, ಹಠ ಸಾಧನೆ ಅಥವಾ ತಿಳಿದೂ ಮಾಡಿದ ಕ್ರಿಯೆ ಅಥವಾ ಲೋಪ, ಅಥವಾ ವಿಮೆದಾರರ ಪರವಾಗಿ ಅಥವಾ ವಿಮಾದಾರರ ಸಹಕಾರದೊಂದಿಗೆ.
• ಯುದ್ಧ, ಆಕ್ರಮಣ, ವಿದೇಶಿ ಶತ್ರುಗಳ ಹಗೆತನ ಅಥವಾ ಯುದ್ಧದಂತಹ ಕಾರ್ಯಾಚರಣೆಗಳು ಇತ್ಯಾದಿ.
• ಯಾವುದೇ ಪರಮಾಣು ಇಂಧನದಿಂದ ಅಥವಾ ಪರಮಾಣು ಇಂಧನದ ದಹನದಿಂದ, ಯಾವುದೇ ಪರಮಾಣು ತ್ಯಾಜ್ಯದಿಂದ, ವಿಷಕಾರಿ, ಸ್ಫೋಟಕ ಇತ್ಯಾದಿಗಳಿಂದ ಉಂಟಾಗುವ ರೇಡಿಯೋಆ್ಯಕ್ಟಿವ್ ಅಯೋನೈಸಿಂಗ್ ರೇಡಿಯೇಶನ್ ಅಥವಾ ಮಾಲಿನ್ಯ.
• ಕಾಣೆಯಾಗಿರುವ ಅಥವಾ ತಪ್ಪುದಾರಿಗೆಳೆಯಲಾದ ಯಾವುದೇ ಇನ್ಶೂರ್ಡ್ ಆಸ್ತಿಯ ನಷ್ಟ ಅಥವಾ ಅದರ ಕಣ್ಮರೆಯನ್ನು ಯಾವುದೇ ಗುರುತಿಸಬಹುದಾದ ಈವೆಂಟ್‌ಗೆ ಲಿಂಕ್ ಮಾಡಲಾಗುವುದಿಲ್ಲ.
• ಗಳಿಕೆಯ ನಷ್ಟ, ವಿಳಂಬದಿಂದ ನಷ್ಟ, ಮಾರುಕಟ್ಟೆಯ ನಷ್ಟ ಅಥವಾ ಇತರ ಪರಿಣಾಮವಾಗಿ ಅಥವಾ ಪರೋಕ್ಷ ನಷ್ಟ ಅಥವಾ ಯಾವುದೇ ರೀತಿಯ ಹಾನಿ ಅಥವಾ ವಿವರಣೆ.
• ಯಾವುದೇ ಕ್ಲೈಮ್ ತಯಾರಿಸಲು ವೆಚ್ಚಗಳು, ಫೀಸ್ ಅಥವಾ ವೆಚ್ಚಗಳು..
ಹೋಮ್ ಬಿಲ್ಡಿಂಗ್ ಕವರ್ ಮತ್ತು ಹೋಮ್ ಕಂಟೆಂಟ್ ಕವರ್‌ನ ಪ್ರೀಮಿಯಂ ನಿಮ್ಮ ಮನೆ ಬಿಲ್ಡಿಂಗ್ ಮತ್ತು ಮನೆ ವಸ್ತುಗಳ ರಿಸ್ಕ್ ಪ್ರೊಫೈಲನ್ನು ವ್ಯಾಖ್ಯಾನಿಸುವ ವಿಮಾ ಮೊತ್ತ ಮತ್ತು ಇತರ ವಿವಿಧ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ.
ನೀವು ಕೆಲವು ಜವಾಬ್ದಾರಿಗಳನ್ನು ಪೂರೈಸಬೇಕಾಗುತ್ತದೆ.
ನೀವು:
• ನೀವು ಪ್ರಪೋಸಲ್ ಅನ್ನು ಸಲ್ಲಿಸಿದಾಗ ನಿಮ್ಮ ಮನೆ ಮತ್ತು ಮನೆಯ ಒಳಗೆ ಇರುವ ನಿಮ್ಮ ಸಾಮಗ್ರಿಗಳು ಅಥವಾ ವಸ್ತುಗಳ ಬಗ್ಗೆ ಎಲ್ಲಾ ಮತ್ತು ನಿಜವಾದ ಮಾಹಿತಿಯನ್ನು ತಿಳಿಸಿ
• ನಿಮ್ಮ ಮನೆ ಬಿಲ್ಡಿಂಗ್ ಮತ್ತು ಮನೆ ವಸ್ತುಗಳ ಕಳ್ಳತನ, ನಷ್ಟ ಅಥವಾ ಹಾನಿಯನ್ನು ತಡೆಗಟ್ಟಲು ಕಾಳಜಿ ವಹಿಸಿ, ಮತ್ತು ಅನಧಿಕೃತ ವ್ಯಕ್ತಿಗಳು ನಿಮ್ಮ ಮನೆ ಬಿಲ್ಡಿಂಗ್‌ನಲ್ಲಿ ವಾಸಿಸುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ,
• ಕ್ಲೈಮ್ ಅನ್ನು ಬೆಂಬಲಿಸುವ ನಿಮ್ಮ ಕ್ಲೈಮ್ ಮತ್ತು ಡಾಕ್ಯುಮೆಂಟ್‌ಗಳಲ್ಲಿ ನೈಜವಾದ ಮತ್ತು ಪೂರ್ಣ ಮಾಹಿತಿಯನ್ನು ಬಹಿರಂಗಪಡಿಸಿ,
• ನೀವು ಮಾಡುವ ಕ್ಲೈಮ್ ಅನ್ನು ಪರಿಶೀಲಿಸಲು ಮತ್ತು ತನಿಖೆ ಮಾಡಲು ನಮಗೆ ಸಂಪೂರ್ಣ ಸಹಕಾರವನ್ನು ನೀಡಿ,
• ನಿಮಗೆ ನಷ್ಟವಾದಾಗ ಕ್ಲೈಮ್ ಮಾಡಿ, ಮತ್ತು ಕ್ಲೈಮ್ ಪ್ರಕ್ರಿಯೆಯನ್ನು ಅನುಸರಿಸಿ,
• ಬದಲಾವಣೆಯ ಬಗ್ಗೆ ನಮಗೆ ತಿಳಿಸಿ
- ನಿಮ್ಮ ವಿಳಾಸ,
- ನಿಮ್ಮ ಮನೆ ಕಟ್ಟಡದ ರಚನೆಗೆ ಯಾವುದೇ ಸೇರ್ಪಡೆ, ಮಾರ್ಪಾಡು, ವಿಸ್ತರಣೆ,
- ನಿಮ್ಮ ಮನೆ ಕಟ್ಟಡದ ಬಳಕೆ, (ನೀವು ನಿಮ್ಮ ಮನೆ ಕಟ್ಟಡವನ್ನು ಬಾಡಿಗೆ ಕೊಟ್ಟಿದ್ದರೆ ಮಾಹಿತಿ ನೀಡಿ,
- ನಿಮ್ಮ ಮನೆ ಕಟ್ಟಡದಲ್ಲಿ ನೀವು ಮಾತ್ರವೇ ವಾಸವಿಲ್ಲದಿದ್ದರೆ.
ಕ್ಲೈಮ್ ಮೊತ್ತವನ್ನು ಪಡೆಯುವ ಮೊದಲು ನಿಮ್ಮ ಸಾವಿನ ಸಂದರ್ಭದಲ್ಲಿ, ಎಚ್‌ಡಿಎಫ್‌ಸಿ ಎರ್ಗೋ ಅದನ್ನು ನಿಮ್ಮ ನಾಮಿನಿ/ಕಾನೂನು ಪ್ರತಿನಿಧಿಗಳಿಗೆ ಪಾವತಿಸುತ್ತದೆ. ಕ್ಲೈಮ್ ವೇಗವಾಗಿ ಸೆಟಲ್ ಆಗಲು ನಮ್ಮೊಂದಿಗೆ ದಯವಿಟ್ಟು ನಿಮ್ಮ ನಾಮಿನಿಯನ್ನು ನೋಂದಣಿ ಮಾಡಿ.
ನಿಮ್ಮ ಮನೆಯನ್ನು ಮರುನಿರ್ಮಾಣ ಮಾಡಲು ಅಗತ್ಯವಿರುವ ಮೊತ್ತಕ್ಕೆ ಕವರೇಜ್ ನೀಡಲಾಗುತ್ತದೆ, ಪಾಲಿಸಿ ಪ್ರಾರಂಭದ ದಿನಾಂಕದಂದು ನಿಮ್ಮ ಮನೆ ಬಿಲ್ಡಿಂಗ್ ನಿರ್ಮಾಣದ ಚಾಲ್ತಿಯಲ್ಲಿರುವ ವೆಚ್ಚದ ದರದಲ್ಲಿ ಲೆಕ್ಕಹಾಕಲಾಗುತ್ತದೆ. ಇದು ಬಿಲ್ಡಿಂಗ್‌ನ ವಿಮಾ ಮೊತ್ತವಾಗಿದೆ. ನಿಮ್ಮ ಮನೆಯಲ್ಲಿನ ಸಾಮಗ್ರಿಗಳು ಅಥವಾ ವಸ್ತುಗಳನ್ನು ಅವುಗಳನ್ನು ಬದಲಾಯಿಸಲು ಅಗತ್ಯವಿರುವ ಮೊತ್ತಕ್ಕೆ ಕವರ್ ಮಾಡಲಾಗುತ್ತದೆ. ನಿಮ್ಮ ಮನೆ ಅಥವಾ ಸಾಮಗ್ರಿಗಳು ಅಥವಾ ವಸ್ತುಗಳು ಹಾನಿಗೊಳಗಾದರೆ, ನೀವು ದುರಸ್ತಿಗೆ ಖರ್ಚು ಮಾಡಿದ ಮೊತ್ತವನ್ನು ಎಚ್‌ಡಿಎಫ್‌ಸಿ ಎರ್ಗೋ ಪಾವತಿಸುತ್ತದೆ. ನಿಮ್ಮ ಮನೆ ಅಥವಾ ಸಾಮಗ್ರಿಗಳು ಅಥವಾ ವಸ್ತುಗಳು ಕಳೆದುಹೋದರೆ ಅಥವಾ ಸಂಪೂರ್ಣವಾಗಿ ನಷ್ಟವಾದರೆ, ಎಚ್‌ಡಿಎಫ್‌ಸಿ ಎರ್ಗೋ ಆ ವಸ್ತುವಿಗೆ ವಿಮಾ ಮೊತ್ತವನ್ನು ಪಾವತಿಸುತ್ತದೆ.
ಅನುಮತಿಸಲಾದಂತೆ ಈ ಪಾಲಿಸಿಯ ಕವರ್‌ಗಳಿಗೆ ನೀವು ಬದಲಾವಣೆಗಳನ್ನು ಮಾಡಲು ಆಯ್ಕೆ ಮಾಡಬಹುದು. ನೀವು ಪ್ರಸ್ತಾಪವನ್ನು ಮಾಡಬೇಕು ಅಥವಾ ಯಾವುದೇ ಬದಲಾವಣೆಗಾಗಿ ಕೋರಿಕೆ ಸಲ್ಲಿಸಬೇಕು. ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಪ್ರಸ್ತಾವನೆಯನ್ನು ಅಂಗೀಕರಿಸಿದ ನಂತರ ಮತ್ತು ಅನ್ವಯವಾಗುವ ಹೆಚ್ಚುವರಿ ಪ್ರೀಮಿಯಂ ಅನ್ನು ನೀವು ಪಾವತಿಸಿದ ನಂತರ ಮಾತ್ರ ಅದು ಪರಿಣಾಮಕಾರಿಯಾಗುತ್ತದೆ.
ಪಾಲಿಸಿ ಅವಧಿಯಲ್ಲಿ ನೀವು ಯಾವುದೇ ಸಮಯದಲ್ಲಿ ಈ ಪಾಲಿಸಿಯನ್ನು ರದ್ದು ಮಾಡಬಹುದು. BGR ಪಾಲಿಸಿ ನಿಯಮಾವಳಿಗಳ ಅಡಿಯಲ್ಲಿ ನಮೂದಿಸಲಾದ ರದ್ದತಿ ಮಾರ್ಗಸೂಚಿಗಳ ಪ್ರಕಾರ ಎಚ್‌ಡಿಎಫ್‌ಸಿ ಎರ್ಗೋ ಪ್ರೀಮಿಯಂನ ಭಾಗವನ್ನು ಹಿಂದಿರುಗಿಸುತ್ತದೆ. ಒಂದು ವೇಳೆ ನೀಡಲಾದ ಪಾಲಿಸಿಗೆ ಈಗಾಗಲೇ ಕ್ಲೈಮ್ ಅನ್ನು ಪಾವತಿಸಲಾಗಿದ್ದರೆ, ನೀಡಲಾದ ಪಾಲಿಸಿಗೆ ರಿಫಂಡ್ ಮಾಡಲಾಗುವುದಿಲ್ಲ.
ನೀವು ಕಂಪನಿಯ ಯಾವುದೇ ಏಜೆಂಟನ್ನು ಅಥವಾ ಮಧ್ಯವರ್ತಿ ಅಥವಾ ಇತರ ಅನುಮೋದಿತ ವಿತರಣೆ ಚಾನೆಲನ್ನು ಸಂಪರ್ಕಿಸಬಹುದು. ಪ್ರಾಡಕ್ಟ್ ಬಗ್ಗೆ ಎಲ್ಲಾ ಮಾಹಿತಿಯನ್ನು ನೋಡಬಹುದು ಮತ್ತು ನಮ್ಮ ವೆಬ್‌ಸೈಟ್ ಮೂಲಕ ಪ್ರಾಡಕ್ಟ್ ಅನ್ನು ಖರೀದಿಸಬಹುದು. ನೀವು ನಮ್ಮ ಕಾಲ್ ಸೆಂಟರ್ ಅನ್ನು ಕೂಡ ಸಂಪರ್ಕಿಸಬಹುದು ಅಥವಾ ಪ್ರಾಡಕ್ಟ್ ಸಂಬಂಧಿತ ಮಾಹಿತಿ ಅಥವಾ ಪಾಲಿಸಿ ಖರೀದಿಗಾಗಿ ನಿಮ್ಮ ಹತ್ತಿರದ ನಮ್ಮ ಆಫೀಸ್ ಅನ್ನು ಸಂಪರ್ಕಿಸಬಹುದು.
ಪಾಲಿಸಿ ಅವಧಿಯ ಕೊನೆಯಲ್ಲಿ ಈ ಪಾಲಿಸಿಯ ಅವಧಿ ಮುಗಿಯುತ್ತದೆ. ನೀವು ಪಾಲಿಸಿಯನ್ನು ನವೀಕರಿಸಲು ಬಯಸಿದರೆ, ಪಾಲಿಸಿ ಅವಧಿ ಮುಗಿಯುವ ಮೊದಲು ನೀವು ನವೀಕರಣಕ್ಕಾಗಿ ಅಪ್ಲೈ ಮಾಡಬೇಕು ಮತ್ತು ಅಗತ್ಯವಿರುವ ಪ್ರೀಮಿಯಂ ಮೊತ್ತವನ್ನು ಪಾವತಿಸಬೇಕು. ಈ ಪಾಲಿಸಿಯ ನವೀಕರಣವು ಸ್ವಯಂಚಾಲಿತವಾಗಿಲ್ಲ, ನವೀಕರಣದ ಉದ್ದೇಶಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋ ನಿಮ್ಮಿಂದ ಸಂಬಂಧಿತ ಮಾಹಿತಿಯನ್ನು ಪಡೆಯಬಹುದು.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x