ಹೋಮ್ / ಹೋಮ್ ಇನ್ಶೂರೆನ್ಸ್ / ಕಳ್ಳತನದ ವಿರುದ್ಧ ಹೋಮ್ ಇನ್ಶೂರೆನ್ಸ್

ನಿಮ್ಮ ಮನೆಗೆ ಕಳ್ಳತನ ಮತ್ತು ದರೋಡೆ ಇನ್ಶೂರೆನ್ಸ್ ಕವರೇಜ್

ಕಳ್ಳತನ ಮತ್ತು ದರೋಡೆಯಂತಹ ಅಪಾಯಗಳು ತೀರಾ ಅನಿರೀಕ್ಷಿತವಾಗಿ ಸಂಭವಿಸಬಹುದು. ನಿಮ್ಮ ಮನೆಗೆ ಯಾರಾದರೂ ಕನ್ನ ಹಾಕಿದ್ದಾರೆ ಎಂದು ಕೇಳಿದೊಡನೆಯೇ ಎದೆ ಝಲ್ಲೆನ್ನುತ್ತದೆ. ಇತ್ತೀಚೆಗಂತೂ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಸರ್ವೇಸಾಮಾನ್ಯವಾಗಿವೆ. ನೀವು ಸ್ವಂತ ಮನೆಯಲ್ಲಿದ್ದರೂ, ಬಾಡಿಗೆ ಮನೆಯಲ್ಲಿದ್ದರೂ, ಆ ಮನೆಯಲ್ಲಿ ಒಡವೆಗಳು, ಗ್ಯಾಜೆಟ್‌ಗಳು, ಪೀಠೋಪಕರಣ, ಕಲಾಕೃತಿ ಮತ್ತಿತರ ಅಮೂಲ್ಯ ವಸ್ತುಗಳಿದ್ದರೆ, ಕಳ್ಳತನದಿಂದ ಸಾಕಷ್ಟು ಹಣಕಾಸು ನಷ್ಟ ಉಂಟಾಗಬಹುದು. ನಿಮ್ಮ ಬಳಿ ಹೋಮ್ ಇನ್ಶೂರೆನ್ಸ್ ಇದ್ದರೆ, ಅದು ಕಳ್ಳತನ ಮತ್ತು ದರೋಡೆ ವಿರುದ್ಧ ಹಣಕಾಸು ಕವಚದಂತೆ ವರ್ತಿಸುತ್ತದೆ. ಕಳ್ಳತನ ಅಥವಾ ದರೋಡೆಯಿಂದ ಸಂಭವಿಸಿದ ನಷ್ಟಗಳನ್ನು ಕವರ್ ಮಾಡುತ್ತದೆ. ಹಾಗಾಗಿ, ಕಳ್ಳತನದ ವಿರುದ್ಧ ನಿಮ್ಮ ಮನೆಯ ವಸ್ತುಗಳನ್ನು ರಕ್ಷಿಸುವ ಮೂಲಕ, ನೀವು ಕಷ್ಟಪಟ್ಟು ಸಂಪಾದಿಸಿದ ಸ್ವತ್ತು ಬೇರೆಯವರ ಪಾಲಾಗುವುದನ್ನು ತಪ್ಪಿಸಬೇಕಾದ್ದು ಬಹಳ ಮುಖ್ಯ. ಹಾಗೆ ಮಾಡಿದಾಗ, ನಿಮ್ಮ ಅಮೂಲ್ಯ ವಸ್ತುಗಳು ಕಳುವಾದರೂ ಸಹ, ಅದಕ್ಕೆ ಸಂಬಂಧಿಸಿದ ನಷ್ಟಗಳನ್ನು ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ತಡೆರಹಿತವಾಗಿ ಕವರ್ ಮಾಡುತ್ತದೆ.

ಕಳ್ಳತನ/ದರೋಡೆಗಳ ವಿರುದ್ಧ ನಿಮ್ಮ ಸ್ವತ್ತುಗಳನ್ನು ಇನ್ಶೂರ್ ಮಾಡಿಸಿ ನಿಶ್ಚಿಂತೆಯಿಂದ ಇರಿ. ನಿಮ್ಮ ಮನೆಯ ವಸ್ತುಗಳಿಗೆ ₹25 ಲಕ್ಷದವರೆಗೆ ಕವರೇಜ್‌ ಪಡೆದುಕೊಂಡು, ಅವನ್ನು ಸುರಕ್ಷಿತವಾಗಿಸಿ. ಕಳ್ಳತನದ ವಿರುದ್ಧದ ಹೋಮ್ ಇನ್ಶೂರೆನ್ಸ್ ತುಂಬಾ ಮುಖ್ಯವಾಗಿದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ಕಳ್ಳತನಕ್ಕೆ ಸಂಬಂಧಿತ ನಷ್ಟಗಳನ್ನು ಕವರ್ ಮಾಡಲು ನೀವು ಹೆಚ್ಚುವರಿ ಕವರ್ ಅಥವಾ ಹೊಸ ಹೋಮ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬೇಕಾಗಿಲ್ಲ. ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್, ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ಅಪಾಯಗಳು, ಕಳ್ಳತನ/ದರೋಡೆ ಇತ್ಯಾದಿಗಳಿಂದ ಉಂಟಾದ ಹಾನಿಯ ವಿರುದ್ಧ ಕವರೇಜ್ ಒದಗಿಸುವ ಆಲ್‌-ಇನ್-ಒನ್ ಪ್ಲಾನ್‌ ಆಗಿದೆ.

ಕಳ್ಳತನದ ವಿರುದ್ಧ ನಿಮ್ಮ ಮನೆಯನ್ನು ಹೇಗೆ ರಕ್ಷಿಸಬಹುದು?

ಬೀಗ ಹಾಕುವುದು
ಇದು ಎಷ್ಟೇ ಹಾಸ್ಯಾಸ್ಪದ ಸಲಹೆ ಎನಿಸಿದರೂ, ಸುಮಾರು ಜನ ತಮ್ಮ ಮನೆಯಿಂದ ಹೊರಡುವ ಮುಂಚೆ ಎಲ್ಲಾ ಬಾಗಿಲುಗಳು ಮತ್ತು ಕಿಟಕಿಗಳಿಗೆ ಬೀಗ ಹಾಕುವುದಿಲ್ಲ ಎಂಬುದಂತೂ ವಾಸ್ತವ. ನೀವು ನಿಮ್ಮ ಮನೆಯ ನೆರೆಹೊರೆಯಲ್ಲೇ ಇದ್ದರೂ ಸರಿ, ಮನೆಯ ಮುಖ್ಯ ಬಾಗಿಲಿಗೆ ಬೀಗ ಹಾಕಲು ಮರೆಯಬೇಡಿ. ಕಳ್ಳರು ಸದ್ದಿಲ್ಲದೇ ಒಳನುಗ್ಗಿ, ಅಮೂಲ್ಯ ವಸ್ತುಗಳನ್ನು ಎಗರಿಸಿ ಬಿಡುತ್ತಾರೆ. ಅದಲ್ಲದೇ, ನೀವು ಮನೆಯಲ್ಲಿ ಇಲ್ಲದಿದ್ದಾಗ ಮಾತ್ರವೇ ಕಳ್ಳರು ಕನ್ನ ಹಾಕುತ್ತಾರೆ ಎಂದುಕೊಳ್ಳಬೇಡಿ. ನೀವು ಮನೆಯಲ್ಲೇ ಇದ್ದು, ಮೈನ್ ಡೋರ್ ಅನ್ನು ಸರಿಯಾಗಿ ಲಾಕ್ ಮಾಡದಿದ್ದಾಗಲೂ, ಕಳ್ಳರು ಮನೆಗೆ ನುಗ್ಗಿ, ಕೆಲವೇ ನಿಮಿಷಗಳಲ್ಲಿ ನಿಮ್ಮ ಅಮೂಲ್ಯ ವಸ್ತುಗಳನ್ನು ಕದ್ದುಬಿಡುತ್ತಾರೆ.
ಹೋಮ್ ಅಲಾರಂ ಸಿಸ್ಟಮ್‌ಗಳು
ನಿಮ್ಮ ಬಳಿ ಹೋಮ್ ಅಲಾರಂ ಇದ್ದರೆ, ಮನೆಯಿಂದ ಆಚೆ ಹೋಗುವಾಗ ಅಲಾರಂ ಆನ್ ಮಾಡುವುದನ್ನು ಮರೆಯದಿರಿ. ಇನ್ನೂ ಖರೀದಿಸಿಲ್ಲ ಎಂದರೆ, ತಕ್ಷಣ ಖರೀದಿಸಿಬಿಡಿ. ಅದು ಖಂಡಿತ ಪ್ರಯೋಜನಕ್ಕೆ ಬರುತ್ತದೆ. ಯಾರಾದರೂ ನಿಮ್ಮ ಮನೆಗೆ ನುಸುಳಲು ಪ್ರಯತ್ನಿಸಿದಾಗ ನಿಮಗೆ ಅಲರ್ಟ್ ನೀಡಿ, ನಿಮ್ಮ ಮನೆಯನ್ನು ರಕ್ಷಿಸುವ ರೀತಿಯಲ್ಲಿ ಹೋಮ್ ಅಲರಾಂ ಸಿಸ್ಟಮ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ಇದು ಹೋಮ್ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ಸ್ವಲ್ಪಮಟ್ಟಿಗೆ ಉಳಿತಾಯ ಮಾಡುವುದಕ್ಕೂ ನೆರವಾಗುತ್ತದೆ.
ಸುರಕ್ಷತಾ ವ್ಯವಸ್ಥೆಯನ್ನು ಅಪ್ಗ್ರೇಡ್ ಮಾಡಿ
CCTV ಹಾಕಿಸುವುದು ಒಳ್ಳೆಯ ಆಲೋಚನೆ. ಆದರೆ ಅದನ್ನು ಆಗಾಗ್ಗೆ ಪರಿಶೀಲಿಸುವುದು ಕೂಡ ಮುಖ್ಯ. ನೀವು ಸಮಯಕ್ಕೆ ಸರಿಯಾಗಿ ನಿಮ್ಮ ಸೆಕ್ಯೂರಿಟಿ ಡಿವೈಸ್‌ಗಳನ್ನು ಅಪ್ಗ್ರೇಡ್ ಮಾಡಬೇಕು ಮತ್ತು ನಿರ್ವಹಿಸಬೇಕು. ಜೊತೆಗೆ, ಕಳ್ಳತನ ಆದಾಗ ಮಾತ್ರವೇ ಕ್ಯಾಮರಾ ಪರಿಶೀಲಿಸುವ ಬದಲು, ಯಾರಾದರೂ ಅಪರಿಚಿತರು ಮನೆಯ ಸುತ್ತ ಅನುಮಾನಾಸ್ಪದವಾಗಿ ಓಡಾಡಿದ್ದಾರೆಯೇ ಎಂಬುದನ್ನೂ ಗಮನಿಸಬೇಕು.
ನೀವು ಮನೆಯಲ್ಲಿಲ್ಲ ಎಂದು ಢಂಗುರ ಸಾರಬೇಡಿ
ನಿಮ್ಮ ಮುಂದಿನ ಟ್ರಿಪ್‌ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಬೇಡಿ. ಮನೆ ಮಾಲೀಕರು ಯಾವಾಗ ಮನೆಯಲ್ಲಿ ಇರುವುದಿಲ್ಲ ಎಂಬುದನ್ನು ನೋಡಲು, ಕಳ್ಳರು ನಿಮ್ಮ ಆನ್ಲೈನ್ ಪೋಸ್ಟ್‌ಗಳ ಮೇಲೆ ನಿಗಾ ಇಟ್ಟಿರುತ್ತಾರೆ. ಸಾರ್ವಜನಿಕ ರಜಾದಿನಗಳು, ಬೇಸಿಗೆ ರಜೆ ಮತ್ತು ಚಳಿಗಾಲದ ರಜೆಯ ಸಮಯದಲ್ಲಿ ಅವರು ನಿಮ್ಮ ಪೋಸ್ಟ್‌ಗಳನ್ನು ಹೆಚ್ಚಾಗಿ ಗಮನಿಸುತ್ತಾರೆ. ಒಂದು ವೇಳೆ ನೀವು ಮನೆಯಲ್ಲಿ ಇರುವುದಿಲ್ಲ ಎಂದು ಮೊದಲೇ ಗೊತ್ತಾದರೆ, ಮನೆಗೆ ನುಗ್ಗಿ ದರೋಡೆ ಮಾಡುವುದು ನೀರು ಕುಡಿದಷ್ಟೇ ಸುಲಭವಾಗುತ್ತದೆ. ಅದರ ಬದಲು, ನೀವು ರಜೆಯ ಮೇಲೆ ಎಲ್ಲಿಗಾದರೂ ಹೋಗುತ್ತಿದ್ದರೆ, ನಿಮ್ಮ ನಂಬಿಕಸ್ಥ ನೆರೆಹೊರೆಯವರಿಗೆ ವಿಷಯ ತಿಳಿಸಿ, ನಿಮ್ಮ ಮನೆಯ ಮೇಲೆ ಕಣ್ಣಿಡುವಂತೆ ಕೇಳಿಕೊಳ್ಳಿ.

ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಕಳ್ಳತನದ ವಿರುದ್ಧ ಕವರೇಜ್

ಮನೆಯ ಚೌಕಟ್ಟಿಗೆ ಹಾನಿ
ಎಲ್ಲಾ ಕಳ್ಳರು ಅಥವಾ ದರೋಡೆಕೋರರು ಸದ್ದಿಲ್ಲದೇ ಮನೆಗೆ ನುಗ್ಗುವುದಿಲ್ಲ. ಕೆಲವರು ಬಾಗಿಲು ಅಥವಾ ಗೋಡೆಯಂತಹ ಜಾಗಗಳನ್ನು ಒಡೆದು ಒಳನುಗ್ಗಬಹುದು. ಕಳ್ಳತನದ ಸಂದರ್ಭದಲ್ಲಿ ಸಂಭವಿಸುವ ಈ ರೀತಿಯ ಹಾನಿಯನ್ನು ಕವರ್ ಮಾಡಲಾಗುತ್ತದೆ. ಕಳ್ಳರು ನಿಮ್ಮ ಮನೆಯ ಬಾಗಿಲು ಮುರಿದು, ಮನೆಯ ಚೌಕಟ್ಟಿಗೆ ಹಾನಿ ಮಾಡಿದ್ದರೆ, ಅದರ ದುರಸ್ತಿ ವೆಚ್ಚವನ್ನು ಹೋಮ್ ಇನ್ಶೂರೆನ್ಸ್ ಪಾಲಿಸಿಯೇ ನಿಭಾಯಿಸುತ್ತದೆ. ಏಕೆಂದರೆ, ಕಳ್ಳತನ ನಿಮ್ಮ ಮನೆಯ ಚೌಕಟ್ಟಿಗೆ ಖಂಡಿತ ಹಾನಿ ಉಂಟುಮಾಡುತ್ತವೆ. ಅದನ್ನು ಕವರ್ ಮಾಡುವುದು ನಮ್ಮ ಕರ್ತವ್ಯ.
ಮನೆ ವಸ್ತುಗಳ ನಷ್ಟ
U ಅಂದರೆ ಯುನಾನಿ. ಸುಮಾರು ಹನ್ನೊಂದನೇ ಶತಮಾನದಲ್ಲಿ ಅರಬ್ಬರು ಮತ್ತು ಪರ್ಷಿಯನ್ನರಿಂದ ಪರಿಚಯಿಸಲ್ಪಟ್ಟ ಯುನಾನಿ, ಭಾರತದ ಅತ್ಯಂತ ಪ್ರಮುಖ ಪರ್ಯಾಯ ಚಿಕಿತ್ಸಾ ವಿಧಾನಗಳಲ್ಲಿ ಒಂದಾಗಿದೆ. ಮನುಷ್ಯರ ದೇಹವೂ ಸೇರಿದಂತೆ ಪ್ರಕೃತಿಯಲ್ಲಿ ಅಸ್ತಿತ್ವದಲ್ಲಿರುವ ಎಲ್ಲ ವಸ್ತುಗಳ ಮೂಲ ಧಾತುಗಳಾದ ಗಾಳಿ, ಭೂಮಿ, ನೀರು ಮತ್ತು ಬೆಂಕಿಯಲ್ಲಿನ ಅಸಮತೋಲನವೇ ರೋಗಕ್ಕೆ ಮೂಲ ಕಾರಣ ಎಂಬುದು ಯುನಾನಿ ಪದ್ಧತಿಯ ಪ್ರಮುಖ ನಂಬಿಕೆ. ಯುನಾನಿ ಪದ್ಧತಿಯಲ್ಲಿ, 'ಖಮೀರಾ ಅಬ್ರಶಮ್ ಹಕೀಮ್ ಅರ್ಷದ್ ವಾಲಾ'ದಂತಹ ಗಿಡಮೂಲಿಕೆ ಔಷಧಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಇದರಲ್ಲಿ ಕೇಸರಿ, ಏಲಕ್ಕಿ, ಮಸಾಲೆ ಎಲೆ ಮತ್ತು ಸಿಟ್ರಾನ್‌ನಂತಹ ನೈಸರ್ಗಿಕ ಪದಾರ್ಥಗಳು ಇರುತ್ತವೆ. ಯುನಾನಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡು, ನಾವು ಯುನಾನಿ ಅಡಿಯಲ್ಲಿ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡುತ್ತೇವೆ.
ದರೋಡೆ ಮತ್ತು ಕಳ್ಳತನ ಎರಡನ್ನೂ ಕವರ್ ಮಾಡುತ್ತದೆ
ಕೆಲವು ಹೋಮ್ ಇನ್ಶೂರೆನ್ಸ್ ಪಾಲಿಸಿಗಳು ಕಳ್ಳತನ ಅಥವಾ ದರೋಡೆ - ಎರಡರಲ್ಲಿ ಒಂದನ್ನಷ್ಟೇ ಕವರ್ ಮಾಡುತ್ತವೆ. ಆದರೆ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಇನ್ಶೂರೆನ್ಸ್‌ ಮೂಲಕ, ನಾವು ಒಂದೇ ಪಾಲಿಸಿಯಲ್ಲಿ ಕಳ್ಳತನ ಮತ್ತು ದರೋಡೆ ಎರಡನ್ನೂ ಕವರ್ ಮಾಡುತ್ತೇವೆ. ಯಾವುದೇ ಹಾನಿ ಮಾಡದೆ ನಿಮ್ಮ ಮನೆಯಲ್ಲಿರುವ ವಸ್ತುಗಳನ್ನು ಯಾರಾದರೂ ಕದ್ದಾಗ, ಅದನ್ನು ಕಳ್ಳತನ ಎನ್ನುತ್ತಾರೆ. ಬಹುತೇಕ ಜನರಿಗೆ ಇವೆರಡರ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲ ಎನಿಸಿದರೂ, ಇನ್ಶೂರೆನ್ಸ್ ವಲಯದಲ್ಲಿ ಇವುಗಳು ಎರಡು ವಿಭಿನ್ನ ರೀತಿಯ ಅಪರಾಧಗಳಾಗಿವೆ. ಎಲ್ಲಾ ಪಾಲಿಸಿಗಳು ಇವೆರಡನ್ನೂ ಕವರ್ ಮಾಡುವುದಿಲ್ಲ.

ಕಳ್ಳತನದ ಇನ್ಶೂರೆನ್ಸ್‌ಗಾಗಿ ಎಚ್‌ಡಿಎಫ್‌ಸಿ ಎರ್ಗೋವನ್ನು ಏಕೆ ಆಯ್ಕೆ ಮಾಡಿಕೊಳ್ಳಬೇಕು?

ವಿಶ್ವಾಸಾರ್ಹ ಬ್ರ್ಯಾಂಡ್
ಮನೆಯ ಕಟ್ಟಡ ಹಾಗೂ ಮನೆಯಲ್ಲಿನ ವಸ್ತುಗಳನ್ನು ಕಳುವಾಗುವುದರಿಂದ ಸಂರಕ್ಷಿಸುವ ವಿಷಯಕ್ಕೆ ಬಂದಾಗ, ಕ್ಲೈಮ್ ಪಾವತಿಸುವ ಸಾಮರ್ಥ್ಯವನ್ನು ಹೊಂದಿರಬೇಕಾದ ಮತ್ತು ಅಗತ್ಯವಿರುವ ಸಮಯದಲ್ಲಿ ನಿಮಗೆ ನೆರವಾಗಬಲ್ಲ ಬ್ರ್ಯಾಂಡ್‌ ಆಯ್ಕೆ ಮಾಡಿಕೊಳ್ಳಿ. ಎಚ್‌ಡಿಎಫ್‌ಸಿ ಎರ್ಗೋ ಸರಿಯಾದ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುವ ಮೂಲಕ ಮತ್ತು ಅತ್ಯಂತ ಸುಲಭ ಮತ್ತು ಪಾರದರ್ಶಕತೆಯೊಂದಿಗೆ ಕ್ಲೈಮ್‌ಗಳನ್ನು ಸೆಟಲ್ ಮಾಡುವ ಮೂಲಕ #1.3 ಕೋಟಿ, ಸಂತುಷ್ಠ ಗ್ರಾಹಕರನ್ನು ಸುರಕ್ಷಿತಗೊಳಿಸಿದೆ. 24x7 ಗ್ರಾಹಕ ಸಹಾಯ ಮತ್ತು ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ತಂಡದೊಂದಿಗೆ, ನಿಮ್ಮ ಪ್ರಶ್ನೆಗಳನ್ನು ಪರಿಹರಿಸಲು ನಾವು ಸಿದ್ಧರಾಗಿ ನಿಂತಿದ್ದೇವೆ.
ಆಲ್ ಇನ್ 1 ಕವರ್ ಆಫರ್‌ಗಳು
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನೀವು ಒಂದೇ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಮನೆಯ ಕಟ್ಟಡ ಮತ್ತು ವಸ್ತುಗಳು ಎರಡನ್ನೂ ಕವರ್ ಮಾಡುತ್ತೀರಿ. ಆದ್ದರಿಂದ ನೀವು ಮನೆಯ ಕಟ್ಟಡ ಮತ್ತು ವಸ್ತುಗಳನ್ನು ಪ್ರತ್ಯೇಕವಾಗಿ ಕವರ್ ಮಾಡಬೇಕಾಗಿಲ್ಲ. ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್ ಒಂದು ಸಮಗ್ರ ಕವರ್ ಆಗಿದೆ ಮತ್ತು ಇದು ನಿಮ್ಮ ಮನೆಯನ್ನು ಸಂಪೂರ್ಣವಾಗಿ ಸುರಕ್ಷಿತಗೊಳಿಸುತ್ತದೆ. ನಮ್ಮೊಂದಿಗೆ ಒಂದೇ ಜಾಗದಲ್ಲಿ ಎಲ್ಲವೂ ದೊರಕುವ ಅನುಭವ ಪಡೆಯಿರಿ. ನಾವು ಒಂದೇ ಪ್ಲಾನ್ ಅಡಿಯಲ್ಲಿ ಕಳ್ಳತನ ಮತ್ತು ದರೋಡೆ ಎರಡನ್ನೂ ಕವರ್ ಮಾಡುತ್ತೇವೆ.
ಪ್ರೀಮಿಯಂಗಳ ಮೇಲೆ 45% ವರೆಗೆ ರಿಯಾಯಿತಿ
ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನೀವು ತಕ್ಷಣವೇ ಪ್ರೀಮಿಯಂ ಲೆಕ್ಕ ಹಾಕಬಹುದು, ಸದಸ್ಯರನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು, ಪ್ಲಾನ್‌ಗಳನ್ನು ಕಸ್ಟಮೈಜ್ ಮಾಡಬಹುದು ಮತ್ತು ನಿಮ್ಮ ಬೆರಳತುದಿಯಲ್ಲಿ ಕವರೇಜ್ ಅನ್ನು ಪರಿಶೀಲಿಸಬಹುದು.
₹25 ಲಕ್ಷದವರೆಗಿನ ವಸ್ತುಗಳನ್ನು ಕವರ್ ಮಾಡಲಾಗುತ್ತದೆ
ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ನೀವು ಸುಲಭವಾಗಿ ₹25 ಲಕ್ಷದವರೆಗಿನ ವಸ್ತುಗಳನ್ನು ಸುರಕ್ಷಿತವಾಗಿರಿಸಬಹುದು. ನಿಮ್ಮ ವಸ್ತುಗಳ ಒಟ್ಟು ಮೌಲ್ಯವು ₹25 ಲಕ್ಷ ಮೀರಬಾರದು.
ಆಕರ್ಷಕ ಐಚ್ಛಿಕ ಕವರ್‌ಗಳು
ನಿಮ್ಮ ಮನೆಗೆ ಕವರೇಜ್ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಐಚ್ಛಿಕ ಕವರ್‌ಗಳನ್ನು ಒದಗಿಸುತ್ತೇವೆ. ಇದರಿಂದಾಗಿ ನಿಮ್ಮ ನೆಚ್ಚಿನ ಮನೆಯಲ್ಲಿ ಯಾವುದೂ ಕವರ್ ಆಗದೇ ಉಳಿಯುವುದಿಲ್ಲ. ಮನೆಯ ವಸ್ತುಗಳಿಗಾಗಿ ಹೆಚ್ಚುವರಿ ಪ್ರೀಮಿಯಂ ಪಾವತಿಸಿ ಹೋಮ್ ಶೀಲ್ಡ್ ಇನ್ಶೂರೆನ್ಸ್‌ನೊಂದಿಗೆ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳು, ಆಭರಣ ಮತ್ತು ಬೆಲೆಬಾಳುವ ವಸ್ತುಗಳು ಮತ್ತು ಪೆಡಲ್ ಸೈಕಲ್‌ಗಳನ್ನು ಕವರ್ ಮಾಡಲು ಆಯ್ಕೆ ಮಾಡಬಹುದು. ಭಯೋತ್ಪಾದಕರು ಅಥವಾ ರಕ್ಷಣಾ ಸ್ಕ್ವಾಡ್ ಸರ್ಕಾರದ ರಕ್ಷಣಾ ಸೇವೆಗಳಿಂದ ನಿಮ್ಮ ಮನೆಗೆ ಹಾನಿಯಾದರೆ ನಾವು ಭಯೋತ್ಪಾದನೆಯ ಕವರ್ ಒದಗಿಸುತ್ತೇವೆ.

ಕಳ್ಳತನ ಮತ್ತು ದರೋಡೆ ಕವರ್‌ಗಾಗಿ ಹೋಮ್ ಇನ್ಶೂರೆನ್ಸ್ ಅನ್ನು ಯಾರು ಖರೀದಿಸಬೇಕು?

ಮನೆ ಮಾಲೀಕರು
ಯಾವುದೇ ರೀತಿಯ ಕಳ್ಳತನದಿಂದ ಮನೆಮಾಲೀಕರಿಗೆ ತೊಂದರೆಯಾಗಬಹುದು. ನಿಮ್ಮ ಮನೆಯಲ್ಲಿರುವ ವಸ್ತುಗಳು ಕೇವಲ ಹೆಚ್ಚಿನ ಬೆಲೆಯ ವಸ್ತುಗಳಾಗಿರದೆ, ಅವು ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದೊಂದಿಗೆ ಭಾವನಾತ್ಮಕ ಸಂಬಂಧವನ್ನೂ ಹೊಂದಿರುತ್ತವೆ. ಅದಕ್ಕಾಗಿಯೇ ಕಳ್ಳತನ ಕವರ್‌ನೊಂದಿಗೆ ಸರಿಯಾದ ಹೋಮ್ ಓನರ್ಸ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವುದು ಇಂತಹ ಕೆಟ್ಟ ಸಮಯಗಳಲ್ಲಿ ಅತ್ಯಂತ ಪ್ರಮುಖವಾಗುತ್ತದೆ. ನೀವು ಸ್ವಂತ ಮನೆ ಹೊಂದಿದ್ದರೆ ಮತ್ತು ಮನೆಯಲ್ಲಿ ಎಲೆಕ್ಟ್ರಾನಿಕ್ಸ್, ಜ್ಯುವೆಲರಿ, ಎಲೆಕ್ಟ್ರಾನಿಕ್ ಅಪ್ಲಾಯನ್ಸ್‌ಗಳು ಮತ್ತು ಇತರ ಮೌಲ್ಯಯುತ ವಸ್ತುಗಳಿದ್ದರೆ ಕಳ್ಳತನದ ಕವರ್‌ನೊಂದಿಗೆ ಹೋಮ್ ಇನ್ಶೂರೆನ್ಸ್ ಪಡೆಯಬೇಕು. ಆದ್ದರಿಂದ, ಕಳ್ಳತನವಾದಾಗ ಇನ್ಶೂರೆನ್ಸ್ ಮಾಡಿಸಿದ ಯಾವುದೇ ವಸ್ತುಗಳನ್ನು ಕಳೆದುಕೊಂಡರೆ ಆ ಹಣಕಾಸಿನ ನಷ್ಟಗಳ ವಿರುದ್ಧ ನಿಮ್ಮನ್ನು ಕವರ್ ಮಾಡಲಾಗುತ್ತದೆ. ಹೋಮ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಮನೆಗೆ ಈ ರಕ್ಷಣೆಯ ಅಗತ್ಯವಿದೆ. ನೀವು ಈಗಾಗಲೇ ಹೋಮ್ ಇನ್ಶೂರೆನ್ಸ್ ಹೊಂದಿದ್ದರೆ ಅದು ಕಳ್ಳತನ ಅಥವಾ ದರೋಡೆಯಿಂದಾಗಿ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆಯೇ ಎಂದು ಪರಿಶೀಲಿಸಿ. ಕಳ್ಳತನ ಕವರ್‌ನೊಂದಿಗೆ ಹೋಮ್ ಇನ್ಶೂರೆನ್ಸ್ ಖರೀದಿಸುವುದು ಖಂಡಿತವಾಗಿಯೂ ಮನಸ್ಸಿಗೆ ಶಾಂತಿ ತರುತ್ತದೆ.
ಬಾಡಿಗೆದಾರರು
ನೀವು ಆಸ್ತಿಯ ಮಾಲೀಕರಾಗಿರದೆ ತಾತ್ಕಾಲಿಕವಾಗಿ ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ವಾಸಿಸುವ ಬಾಡಿಗೆದಾರರಾಗಿದ್ದೀರಿ. ಆದರೆ ಆಸ್ತಿಯ ಮಾಲೀಕರಾಗಿಲ್ಲ. ನೀವು ಮನೆಯ ಮಾಲೀಕರಾಗಿರದೆ ಮನೆಯ ವಸ್ತುಗಳು ಮಾತ್ರ ನಿಮ್ಮದಾಗಿರುತ್ತದೆಯಲ್ಲವೇ? ನೀವು ಮನೆಯ ಮಾಲೀಕರಾಗಿರದಿದ್ದರೂ ಮನೆಯ ವಸ್ತುಗಳ ಮಾಲೀಕರಾಗಿರುತ್ತೀರಿ. ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು, ಬೆಲೆಬಾಳುವ ವಸ್ತುಗಳು, ಬಟ್ಟೆಗಳು ಮತ್ತು ಮನೆ ವಸ್ತುಗಳು ಕಳ್ಳತನವಾದರೆ ನಿಮ್ಮ ಮನೆಯಲ್ಲಿರುವ ಈ ಪ್ರಮುಖ ವಸ್ತುಗಳನ್ನು ಮತ್ತೊಮ್ಮೆ ಖರೀದಿಸುವುದು ಭಾರಿ ಹಣಕಾಸಿನ ನಷ್ಟಕ್ಕೆ ದಾರಿಯಾಗಬಹುದು. ಆದ್ದರಿಂದ, ಹೋಮ್ ಇನ್ಶೂರೆನ್ಸ್ ಕವರ್‌ನೊಂದಿಗೆ ಯಾವಾಗಲೂ ನಿಮ್ಮ ಮನೆ ವಸ್ತುಗಳನ್ನು ಸುರಕ್ಷಿತವಾಗಿಸಿ. ನಿಮ್ಮ ಮನೆಯ ಮಾಲೀಕರು ಕೇವಲ ಅವರ ಸ್ವತ್ತನ್ನಷ್ಟೇ ಸುರಕ್ಷಿತವಾಗಿಸಿರಬಹುದು, ನೀವು ಮನೆಯೊಳಗೆ ತಂದ ವಸ್ತುಗಳನ್ನಲ್ಲ. ನಿಮ್ಮ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿಸಿ, ಶಾಂತಿಯಿಂದಿರುವುದು ತುಂಬಾ ಮುಖ್ಯ.

ಕಳ್ಳತನವನ್ನು ಕವರ್ ಮಾಡುವ ಹೋಮ್ ಇನ್ಶೂರೆನ್ಸ್‌ಗೆ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಕವರೇಜ್ ಮೊತ್ತ
ಆಸ್ತಿಯ ಪ್ರಸ್ತುತ ಮೌಲ್ಯವನ್ನು ಅವಲಂಬಿಸಿ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಕವರೇಜ್ ಅಥವಾ ವಿಮಾ ಮೊತ್ತ ಹೆಚ್ಚಾದಷ್ಟೂ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತದೆ. 1 ಕೋಟಿ ಮೊತ್ತದ ಫ್ಲಾಟ್‌ಗೆ ಹೋಲಿಸಿದರೆ ಐದು ಕೋಟಿ ಮೌಲ್ಯದ ಫ್ಲಾಟ್‌ನ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಖಂಡಿತ ಹೆಚ್ಚಾಗಿರುತ್ತದೆ. ನಿಮ್ಮ ವಿಮಾ ಮೊತ್ತವು ನಿಮ್ಮ ಮನೆಯ ಪ್ರಸ್ತುತ ಮಾರುಕಟ್ಟೆ ದರವನ್ನು ಅವಲಂಬಿಸಿರುತ್ತದೆ. ವಸ್ತುಗಳ ವಿಮಾ ಮೊತ್ತವು ಅವುಗಳ ಬದಲಿ ಮೌಲ್ಯದ ಆಧಾರದ ಮೇಲೆ ಇರಬೇಕು.
ಲೊಕೇಶನ್
ಹೋಮ್ ಇನ್ಶೂರೆನ್ಸ್‌ ಪ್ರೀಮಿಯಂ ಲೆಕ್ಕ ಹಾಕುವಾಗ, ನಿಮ್ಮ ಮನೆಯ ಲೊಕೇಶನ್ ಅನ್ನೂ ಗಣನೆಗೆ ತೆಗೆದುಕೊಳ್ಳುತ್ತಾರೆ. ನೀವು ವಾಸವಿರುವ ಜಾಗದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗಿದ್ದರೆ, ನಿಮ್ಮ ಪ್ರೀಮಿಯಂ ಮೊತ್ತವೂ ಸ್ವಲ್ಪಮಟ್ಟಿಗೆ ಹೆಚ್ಚುತ್ತದೆ. ಪ್ರೀಮಿಯಂ ನಿರ್ಧರಿಸುವಲ್ಲಿ ನಿಮ್ಮ ಮನೆಯ ಲೊಕೇಶನ್ ಪ್ರಮುಖ ಪಾತ್ರ ವಹಿಸುತ್ತದೆ.
ಕಟಾವಣೆ
ಕಟಾವಣೆ ಎಂದರೆ, ಕ್ಲೈಮ್ ಸಲ್ಲಿಸಿದಾಗ ನೀವು ಪಾವತಿಸಬೇಕಾದ ಕಡ್ಡಾಯ ಮೊತ್ತ. ನಿಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ಕಟಾವಣೆಯನ್ನು ಒಳಗೊಂಡಿದ್ದರೆ, ಅದು ನಿಮ್ಮ ಪ್ರೀಮಿಯಂ ಮೊತ್ತದ ಮೇಲೆ ಪರಿಣಾಮ ಬೀರುತ್ತದೆ. ಕಟಾವಣೆ ಹೆಚ್ಚಾದಷ್ಟೂ ಪ್ರೀಮಿಯಂ ಕಡಿಮೆ ಆಗುತ್ತದೆ.
ಕಂಟೆಂಟ್ ಮೌಲ್ಯ
ನಿಮ್ಮ ಮನೆಯಲ್ಲಿ ದುಬಾರಿ ಫರ್ನಿಚರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಇದ್ದರೆ, ಪ್ರೀಮಿಯಂ ಮೊತ್ತ ಸ್ವಲ್ಪ ಹೆಚ್ಚಾಗಬಹುದು. ಅದಲ್ಲದೇ, ನೀವು ಆಭರಣ ಮತ್ತು ಅಮೂಲ್ಯ ವಸ್ತುಗಳನ್ನು ಕವರ್ ಮಾಡಲು ಬಯಸಿದರೆ, ಹೆಚ್ಚುವರಿ ಪ್ರೀಮಿಯಂ ಪಾವತಿಸಿ ಅದನ್ನು ಕೂಡ ಕವರ್ ಮಾಡಬಹುದು.
ಭದ್ರತಾ ಕ್ರಮಗಳು
ನಿಮ್ಮ ಮನೆಗೆ ಕವರೇಜ್ ವ್ಯಾಪ್ತಿಯನ್ನು ವಿಸ್ತರಿಸಲು ನಾವು ಐಚ್ಛಿಕ ಕವರ್‌ಗಳನ್ನು ಒದಗಿಸುತ್ತೇವೆ. ಇದರಿಂದಾಗಿ ನಿಮ್ಮ ನೆಚ್ಚಿನ ಮನೆಯಲ್ಲಿ ಯಾವುದೂ ಕವರ್ ಆಗದೇ ಉಳಿಯುವುದಿಲ್ಲ. ಮನೆಯ ವಸ್ತುಗಳಿಗಾಗಿ ಹೆಚ್ಚುವರಿ ಪ್ರೀಮಿಯಂ ಪಾವತಿಸಿ ಹೋಮ್ ಶೀಲ್ಡ್ ಇನ್ಶೂರೆನ್ಸ್‌ನೊಂದಿಗೆ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳು, ಆಭರಣ ಮತ್ತು ಬೆಲೆಬಾಳುವ ವಸ್ತುಗಳು ಮತ್ತು ಪೆಡಲ್ ಸೈಕಲ್‌ಗಳನ್ನು ಕವರ್ ಮಾಡಲು ಆಯ್ಕೆ ಮಾಡಬಹುದು. ಭಯೋತ್ಪಾದಕರು ಅಥವಾ ರಕ್ಷಣಾ ಸ್ಕ್ವಾಡ್ ಸರ್ಕಾರದ ರಕ್ಷಣಾ ಸೇವೆಗಳಿಂದ ನಿಮ್ಮ ಮನೆಗೆ ಹಾನಿಯಾದರೆ ನಾವು ಭಯೋತ್ಪಾದನೆಯ ಕವರ್ ಒದಗಿಸುತ್ತೇವೆ.
ಖರೀದಿ ವಿಧಾನ ಮತ್ತು ನಿಮ್ಮ ಉದ್ಯೋಗ
ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನೀವು ಸಂಬಳದಾರ ಆಗಿದ್ದರೆ ನಿಮಗೆ ಪ್ರೀಮಿಯಂ ರಿಯಾಯಿತಿ ಸಿಗುತ್ತದೆ. ಆನ್ಲೈನ್‌ನಲ್ಲಿ ಖರೀದಿಸಿದರೆ ಇನ್ನಷ್ಟು ರಿಯಾಯಿತಿ ಪಡೆಯಬಹುದು. ಹಾಗಾಗಿ, ನಿಮ್ಮ ಮನೆಗೆ ಹಾನಿ ಮಾಡುವ ಅವಘಡಗಳ ವಿರುದ್ಧ ಪರಿಪೂರ್ಣ ಕವರೇಜ್ ಪಡೆಯಲು, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಕವರ್ ಆಯ್ಕೆ ಮಾಡಿ.
ಹೆಚ್ಚುವರಿ ಅಥವಾ ಐಚ್ಛಿಕ ಕವರ್
ನೀವು ದುಬಾರಿ ಒಡವೆ ಅಥವಾ ಪೆಡಲ್ ಸೈಕಲ್ ಹೊಂದಿದ್ದರೆ, ಹೋಮ್ ಕಂಟೆಂಟ್ ಇನ್ಶೂರೆನ್ಸ್‌ಗೆ ಸ್ವಲ್ಪ ಕಡಿಮೆ ಪ್ರೀಮಿಯಂ ಪಾವತಿಸಲು ನೀವು ಐಚ್ಛಿಕ ಕವರ್‌ಗಳನ್ನು ತೆಗೆದುಕೊಳ್ಳಬೇಕು. ಆಭರಣ, ಬೆಲೆಬಾಳುವ ವಸ್ತು ಮತ್ತು ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್‌ನಂತಹ ವಸ್ತುಗಳಿಗೆ ಐಚ್ಛಿಕ ಕವರ್‌ ಪಡೆದರೆ, ನಿಮ್ಮ ಪ್ರೀಮಿಯಂ ಮೊತ್ತ ಸ್ವಲ್ಪ ಹೆಚ್ಚಾಗಬಹುದು. ಆದರೆ ನಿಮಗೆ ಹೆಚ್ಚಿನ ಕವರೇಜ್ ಸಿಗುತ್ತದೆ.

ಕಳ್ಳತನ ಮತ್ತು ದರೋಡೆ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x