ಹಕ್ಕುತ್ಯಾಗ ಮತ್ತು ಗೌಪ್ಯತಾ ನೀತಿ

ಹಕ್ಕುತ್ಯಾಗ ಮತ್ತು ಗೌಪ್ಯತಾ ನೀತಿ

ಈ ವೆಬ್‌ಸೈಟ್ ಬಳಸುವ ಮೂಲಕ, ನೀವು ಯಾವುದೇ ಮಿತಿಯಿಲ್ಲದೆ ಅಥವಾ ಮಾರ್ಪಾಡಿಲ್ಲದೆ ಈ ಕೆಳಗಿನ ಬಳಕೆಯ ಷರತ್ತುಗಳಿಗೆ ನಿಮ್ಮ ಅನುಮತಿಯನ್ನು ನೀಡುತ್ತೀರಿ. ಈ ವೆಬ್‌ಸೈಟ್ ಬಳಸುವ ಮೊದಲು ದಯವಿಟ್ಟು ಈ ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಈ ಪೋಸ್ಟಿಂಗ್ ಅನ್ನು ಅಪ್ಡೇಟ್ ಮಾಡುವ ಮೂಲಕ ಯಾವುದೇ ಸಮಯದಲ್ಲಿ ಈ ನಿಯಮ ಮತ್ತು ಷರತ್ತುಗಳನ್ನು ಪರಿಷ್ಕರಿಸಬಹುದು. ನೀವು ಅಂತಹ ಯಾವುದೇ ಪರಿಷ್ಕರಣೆಗಳಿಗೆ ಬದ್ಧರಾಗಿದ್ದು, ನಿಯಮ ಮತ್ತು ಷರತ್ತುಗಳಲ್ಲಿ ಆಗುವ ಬದಲಾವಣೆಯನ್ನು ಪರಿಶೀಲಿಸಲು ಈ ಪುಟಕ್ಕೆ ಆಗಾಗ್ಗೆ ಭೇಟಿ ನೀಡುವುದಾಗಿ ಒಪ್ಪುತ್ತೀರಿ.

ಹಕ್ಕುತ್ಯಾಗ
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಎಚ್‌ಡಿಎಫ್‌ಸಿ ಎರ್ಗೋ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾದ ಮಾಹಿತಿಯನ್ನು ಮಾಹಿತಿಯ ಉದ್ದೇಶಗಳಿಗಾಗಿ ಮಾತ್ರ ಬಳಸಬೇಕು. ಇದು ಯಾವುದೇ ಸೂಚನೆಯಿಲ್ಲದೇ ಬದಲಾಗಬಹುದು ಮತ್ತು ಇದನ್ನು ಸಲಹೆಯಾಗಿ ತೆಗೆದುಕೊಳ್ಳಬಾರದು.
ಇಲ್ಲಿ ಪ್ರಚಾರ ಮಾಡುತ್ತಿರುವ ಮತ್ತು/ಅಥವಾ ವಿತರಿಸುವ ಪಾಲಿಸಿ/ಗಳು ಎಚ್‌ಡಿಎಫ್‌ಸಿ ಎರ್ಗೋ ಹೊರತುಪಡಿಸಿ ಬೇರೆ ಯಾವುದೇ ಸಂಸ್ಥೆಗೆ ಸೇರಿವೆ ಎಂಬುದನ್ನು ಎಚ್‌ಡಿಎಫ್‌ಸಿ ಎರ್ಗೋ ಯಾವುದೇ ರೀತಿಯಲ್ಲಿ ಜಾಹೀರು ಮಾಡುತ್ತಿಲ್ಲ, ವ್ಯಕ್ತಪಡಿಸುತ್ತಿಲ್ಲ, ಸೂಚಿಸುತ್ತಿಲ್ಲ ಅಥವಾ ಸ್ಥಾಪಿಸುತ್ತಿಲ್ಲ ಹಾಗೂ ಪಾಲಿಸಿಗಳನ್ನು ಪೇಮೆಂಟ್ ಗೇಟ್‌ವೇ ಸೇವೆ ಪೂರೈಕೆದಾರರಿಗೆ ಮಾರಾಟ, ಪ್ರಚಾರ ಅಥವಾ ವ್ಯಾಪಾರಕ್ಕಿಡುತ್ತಿಲ್ಲ. ಅಂತಹ ಯಾವುದೇ ಊಹೆಯು ಸಂಪೂರ್ಣವಾಗಿ ನಿಮ್ಮ ವಿವೇಚನೆಗೆ ಬಿಟ್ಟ ವಿಷಯವಾಗಿರುತ್ತದೆ.
ನಿರ್ವಹಣಾ ಸೇವೆಗಳು ಅಥವಾ ಯಾವುದೇ ಕಾರಣಕ್ಕಾಗಿ ಯಾವುದೇ ಪ್ರವೇಶದ ನಷ್ಟ ಮತ್ತು/ಅಥವಾ ಪಾವತಿ ಕಾರ್ಯವಿಧಾನದ ಬಳಕೆಯಲ್ಲಿನ ಅಡಚಣೆಗೆ ಎಚ್‌‌ಡಿಎಫ್‌‌ಸಿ ಎರ್ಗೋ ಮತ್ತು ಪಾವತಿ ಗೇಟ್‌ವೇ ಸೇವಾ ಪೂರೈಕೆದಾರರು ಯಾವುದೇ ವ್ಯಕ್ತಿಯಿಂದ ಉಂಟಾಗುವ ಯಾವುದೇ ನಷ್ಟಗಳು ಮತ್ತು / ಅಥವಾ ಹಾನಿಗಳಿಗೆ ಹೊಣೆಗಾರರಾಗಿರುವುದಿಲ್ಲ.
ಈ ವೆಬ್‌ಸೈಟ್‌ ಯಾವುದೇ ವೈರಸ್ ಅಥವಾ ಇತರ ದುರುದ್ದೇಶಪೂರಿತ, ವಿನಾಶಕಾರಿ ಅಥವಾ ಹಾಳುಗೆಡವುವ ಕೋಡ್, ಪ್ರೋಗ್ರಾಂ ಅಥವಾ ಮ್ಯಾಕ್ರೋದಿಂದ ಸಂಪೂರ್ಣವಾಗಿ ಮುಕ್ತವಾಗಿದೆ ಎಂಬುದಕ್ಕೆ ಯಾವುದೇ ಖಾತರಿ ಅಥವಾ ವಾರಂಟಿ ಇಲ್ಲ;
ಪಾವತಿ ಮತ್ತು ಡೆಲಿವರಿ ಕಾರ್ಯವಿಧಾನದ ಪ್ರವೇಶ ಮತ್ತು/ಅಥವಾ ಬಳಕೆಗೆ ಅಡಚಣೆ ಇರುವುದಿಲ್ಲ ಎಂಬುದಕ್ಕೆ ಯಾವುದೇ ಖಾತರಿ ಅಥವಾ ವಾರಂಟಿ ಇಲ್ಲ;

ಹೊಣೆಗಾರಿಕೆಯ ಮಿತಿ
ಈ ವೆಬ್‌ಸೈಟ್‌ನಲ್ಲಿ ಒಳಗೊಂಡಿರುವ ಮಾಹಿತಿಯು ಅದರ ಪ್ರಕಟಣೆಯ ದಿನಾಂಕದಂದು ಪ್ರಸ್ತುತ, ನಿಖರ ಮತ್ತು ಸಂಪೂರ್ಣವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಗತ್ಯ ಎಚ್ಚರಿಕೆಗಳನ್ನು ತೆಗೆದುಕೊಂಡಿದೆ. ಅಂತಹ ಮಾಹಿತಿಯ ವಿಶ್ವಾಸಾರ್ಹತೆ, ನಿಖರತೆ ಅಥವಾ ಪರಿಪೂರ್ಣತೆಗೆ ಯಾವುದೇ ಪ್ರಾತಿನಿಧ್ಯ ಅಥವಾ ವಾರಂಟಿಗಳನ್ನು (ಪ್ರತ್ಯಕ್ಷ ಅಥವಾ ಪರೋಕ್ಷವಾಗಿ) ನೀಡಲಾಗುವುದಿಲ್ಲ. ಈ ವೆಬ್‌ಸೈಟ್‌ನ ಬಳಕೆ, ಅಲ್ಲಿ ತೆಗೆದುಕೊಳ್ಳಬಹುದಾದ ಕ್ರಮಗಳು, ವೆಬ್‌ಸೈಟ್‌ನಲ್ಲಿ ಕಾಣಿಸಿಕೊಳ್ಳುವ ಯಾವುದೇ ಮಾಹಿತಿಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಯಾವುದೇ ನಷ್ಟಕ್ಕೆ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಹೊಣೆಯಲ್ಲ.

ಟ್ರೇಡ್‌ಮಾರ್ಕ್‌ಗಳು ಮತ್ತು ಕಾಪಿರೈಟ್‌ಗಳು
ಎಲ್ಲಾ ಟ್ರೇಡ್‌ಮಾರ್ಕ್‌ಗಳು, ಸೇವೆ ಸಂಕೇತಗಳು, ವ್ಯಾಪಾರದ ಹೆಸರುಗಳು, ಲೋಗೋಗಳು ಮತ್ತು ಐಕಾನ್‌ಗಳು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ನ ಮಾಲೀಕತ್ವದಲ್ಲಿವೆ. ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಥವಾ ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಟ್ರೇಡ್‌ಮಾರ್ಕ್‌ಗಳ ಮಾಲೀಕತ್ವ ಹೊಂದಿರುವ ಥರ್ಡ್‌ ಪಾರ್ಟಿಯ ಲಿಖಿತ ಅನುಮತಿಯಿಲ್ಲದೆ ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಯಾವುದೇ ಟ್ರೇಡ್‌ಮಾರ್ಕ್‌ಗಳ ಬಳಕೆಗೆ ಇಂಗಿತ, ವಚನಬಂಧ ಅಥವಾ ಬೇರೆ ಯಾವುದೇ ಆಧಾರದ ಮೇಲೆ ಯಾವುದೇ ಲೈಸೆನ್ಸ್ ಅಥವಾ ಹಕ್ಕನ್ನು ಒದಗಿಸಿರುವುದಾಗಿ ಪರಿಗಣಿಸುವಂತಿಲ್ಲ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಟ್ರೇಡ್‌ಮಾರ್ಕ್‌ಗಳ ಬಳಕೆಯನ್ನು ಅಥವಾ ಈ ವೆಬ್‌ಸೈಟ್‌ನಲ್ಲಿ ಯಾವುದೇ ಇತರ ಕಂಟೆಂಟನ್ನು ಇಲ್ಲಿ ಒದಗಿಸಿದ ರೀತಿಯ ಹೊರತಾಗಿ ಬೇರೆ ರೀತಿಯಲ್ಲಿ ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾದ ಚಿತ್ರಗಳು ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ಸೇರಿವೆ ಅಥವಾ ಕಂಪನಿಯು ಸೂಕ್ತ ಅನುಮತಿಯೊಂದಿಗೆ ಅವನ್ನು ಬಳಸುತ್ತಿದೆ. ನಿರ್ದಿಷ್ಟವಾಗಿ ಅನುಮತಿಸದ ಹೊರತು, ನೀವು ಅಥವಾ ನೀವು ಅಧಿಕೃತಗೊಳಿಸಿದ ಯಾರಾದರೂ ಈ ಚಿತ್ರಗಳನ್ನು ಬಳಸುವುದನ್ನು ನಿಷೇಧಿಸಲಾಗಿದೆ. ಚಿತ್ರಗಳ ಯಾವುದೇ ಅನಧಿಕೃತ ಬಳಕೆಯು ಹಕ್ಕುಸ್ವಾಮ್ಯ ಕಾನೂನುಗಳು, ಟ್ರೇಡ್‌ಮಾರ್ಕ್ ಕಾನೂನುಗಳು, ಗೌಪ್ಯತೆ ಮತ್ತು ಪ್ರಕಟಣೆಯ ಕಾನೂನುಗಳು, ಹಾಗೂ ಸಂವಹನ ನಿಯಮಾವಳಿಗಳು ಮತ್ತು ಕಾನೂನುಗಳನ್ನು ಉಲ್ಲಂಘಿಸಬಹುದು. ಸೂಚಿಸದ ಹೊರತು, ಈ ಷರತ್ತು ಗೌಪ್ಯತಾ ಸ್ಟೇಟ್ಮೆಂಟ್‌ ಅನ್ನು ಮೀರಿರುತ್ತದೆ.

ಗೌಪ್ಯತಾ ನೀತಿ
ವೈಯಕ್ತಿಕ ಮಾಹಿತಿಯ ಭದ್ರತೆ ಮತ್ತು ಗೌಪ್ಯತೆಗೆ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (HEGI) ಬಹಳಷ್ಟು ಒತ್ತು ನೀಡುತ್ತದೆ. ವ್ಯವಹಾರದ ಸಮಯದಲ್ಲಿ ಸಂಗ್ರಹಿಸುವ, ಪ್ರಕ್ರಿಯೆಗೊಳಿಸುವ ಮತ್ತು ಉಳಿಸಿಕೊಳ್ಳುವ ವೈಯಕ್ತಿಕ ಮಾಹಿತಿಯ ಗೌಪ್ಯತೆ ಮತ್ತು ರಹಸ್ಯದ ರಕ್ಷಣೆ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು HEGI ಬದ್ಧವಾಗಿದೆ. ನೀವು ನೀಡಿದ ಮಾಹಿತಿಯ ಗೌಪ್ಯತೆಯನ್ನು ರಕ್ಷಿಸಲಾಗಿದೆ ಮತ್ತು ಈ ವೈಯಕ್ತಿಕ ಮಾಹಿತಿಯನ್ನು Sr#6 ರಲ್ಲಿ ಸೂಚಿಸಿದ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುವುದು ಎಂಬುದನ್ನು HEGI ಖಚಿತಪಡಿಸಿಕೊಳ್ಳುತ್ತದೆ. ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ಹಾನಿಗೆ ಕಾರಣವಾಗಬಹುದಾದ ಯಾವುದೇ ರೀತಿಯಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಲಾಗುವುದಿಲ್ಲ. HEGIಯು ತನ್ನ ಗ್ರಾಹಕರ ಯಾವುದೇ ವೈಯಕ್ತಿಕ ಮಾಹಿತಿಯನ್ನು ಎಂದಿಗೂ ಮಾರಾಟ ಅಥವಾ ವ್ಯಾಪಾರ ಮಾಡುವುದಿಲ್ಲ.

ನಿಮ್ಮ ವೈಯಕ್ತಿಕ ಮಾಹಿತಿಯ ಸಂಗ್ರಹಣೆ
ಹೆಸರು, ಹುಟ್ಟಿದ ದಿನಾಂಕ, ವೈಯಕ್ತಿಕ ಗುರುತಿನ ಸಂಖ್ಯೆಗಳು, ಇಮೇಲ್ ವಿಳಾಸ, ಸಂಪರ್ಕ ಸಂಖ್ಯೆ, ಸಂಪರ್ಕ ವಿಳಾಸ, ವೈದ್ಯಕೀಯ ವಿವರಗಳು, ಹಣಕಾಸು ವಿವರಗಳು, ಫಲಾನುಭವಿಯ ಹೆಸರು, ಫಲಾನುಭವಿಯ ವಿಳಾಸ, ಫಲಾನುಭವಿಯ ಸಂಬಂಧ ಹಾಗೂ ವೆಬ್‌ಸೈಟ್, ಪ್ರಪೋಸಲ್ ಫಾರ್ಮ್‌ಗಳು, ಇಮೇಲ್‌ಗಳು ಅಥವಾ ವ್ಯವಹಾರದ ವಿವಿಧ ಹಂತಗಳಲ್ಲಿ ನಡೆಸುವ ಗ್ರಾಹಕ ಸಂವಹನಗಳಾದ ಪಾಲಿಸಿ ಸೋರ್ಸಿಂಗ್, ಪಾಲಿಸಿ ಪ್ರಕ್ರಿಯೆ, ಪಾಲಿಸಿ ಸೇವೆ, ಎಂಡಾರ್ಸ್‌ಮೆಂಟ್ ದಾಖಲಾತಿ, ಕ್ಲೇಮ್ ಪ್ರಕ್ರಿಯೆ, ದೂರು ಪರಿಹಾರ, ಯಾವುದೇ ಅಥವಾ ದೂರುಗಳು/ಅನಿಸಿಕೆ, ಇತ್ಯಾದಿ ಸಂದರ್ಭಗಳಲ್ಲಿ ಪಡೆದುಕೊಂಡ ವೈಯಕ್ತಿಕ ಮಾಹಿತಿಯನ್ನು HEGI ಸಂಗ್ರಹಿಸುತ್ತದೆ.

ಬಳಕೆಗಳು, ಆಯ್ಕೆ ಮತ್ತು ಪ್ರಕಟಣೆ
ನೀವು ಮೇಲೆ ತಿಳಿಸಿದ ಯಾವುದೇ ವಿಧಾನಗಳ ಮೂಲಕ, ಯಾವುದೇ ಉದ್ದೇಶಕ್ಕಾಗಿ HEGIಗೆ ಮಾಹಿತಿ ಒದಗಿಸಿದಾಗ, ನಿಮ್ಮ ವೈಯಕ್ತಿಕ ಮಾಹಿತಿ/ಡೇಟಾವನ್ನು ಸ್ಟೋರ್ ಮಾಡಲು ಮತ್ತು ಕೆಳಕಂಡ ರೀತಿಯಲ್ಲಿ ಅದನ್ನು ಬಳಸಲು HEGIಗೆ ಅಧಿಕಾರ ನೀಡಿರುವುದಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ಗಮನದಲ್ಲಿಡಿ:
ನಿಮ್ಮಿಂದ ಸಂಗ್ರಹಿಸಲಾದ ವೈಯಕ್ತಿಕ ಮಾಹಿತಿಯನ್ನು HEGIಯ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಬಳಸಬಹುದು. ವೈಯಕ್ತಿಕ ಮಾಹಿತಿಯನ್ನು ಸರ್ಕಾರಿ ಪ್ರಾಧಿಕಾರಗಳ ಜೊತೆ ಅಥವಾ ಶಾಸನಬದ್ಧ ಮತ್ತು ಕಾನೂನು ಜವಾಬ್ದಾರಿಗಳಿಗೆ ಸಂಬಂಧಪಟ್ಟಂತೆ ಕಾನೂನು ಸಂಸ್ಥೆಗಳಿಗೆ, ಹಣಕಾಸು ಸಂಸ್ಥೆಗಳಿಗೆ, ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳಿಗೆ ಮತ್ತು ಸರ್ಕಾರಿ ಪ್ರಾಧಿಕಾರ ಅಥವಾ ಕಾನೂನುಗಳ ನಿಬಂಧನೆಗಳ ಪ್ರಕಾರ ಶಾಸನಬದ್ಧವಾಗಿ ಅಧಿಕೃತಗೊಂಡ ಪ್ರಾಧಿಕಾರಗಳಿಗೆ ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಪಡೆದ ನಿರ್ದೇಶನಗಳ ಪ್ರಕಾರ ಯಾವುದೇ ಮೂರನೇ ವ್ಯಕ್ತಿಗಳಿಗೆ ಹಂಚಿಕೊಳ್ಳಬಹುದು.
ಕಂಪನಿಯ ಉದ್ಯೋಗಿಗಳು, ಲೈಸೆನ್ಸುದಾರ ಏಜೆಂಟ್‌ಗಳು, ಕಾನೂನು ಸಲಹೆಗಾರರು, ಸಲಹೆಗಾರರು, ಸೇವಾ ಪೂರೈಕೆದಾರರು, ಆಡಿಟರ್‌ಗಳು, ಮರುವಿಮಾದಾತರು, ಸಹ-ವಿಮಾದಾತರು ಹಾಗೂ ನ್ಯಾಯಯುತ ಬಿಸಿನೆಸ್, ಕಾನೂನು, ಶಾಸನ ಅಥವಾ ನಿಯಂತ್ರಕ ಉದ್ದೇಶಕ್ಕಾಗಿ ಇತರ ಯಾವುದೇ ಪಕ್ಷಕಾರರಿಗೂ ಕೂಡ HEGI ನಿಮ್ಮ ವೈಯಕ್ತಿಕ ಮಾಹಿತಿಯನ್ನು ಒದಗಿಸಬಹುದು.
ಡೇಟಾ ವಿಶ್ಲೇಷಣೆ, ಅಂಕಿಅಂಶ ವಿಶ್ಲೇಷಣೆ, ರಿಸ್ಕ್ ವಿಶ್ಲೇಷಣೆ ಮತ್ತು ಇತರ ಡೇಟಾ ವಿಶ್ಲೇಷಣೆ / ಡೇಟಾ ಸಮೃದ್ಧಿ ಚಟುವಟಿಕೆಗಳಿಗಾಗಿ ಹಾಗೂ ಗ್ರಾಹಕ ಸಂತೃಪ್ತಿ ಅಥವಾ ಇತರ ಯಾವುದೇ ಸಮೀಕ್ಷೆಯನ್ನು ನಡೆಸಲು ಕಂಪನಿಯಿಂದ ಅಧಿಕೃತಗೊಂಡ ಏಜೆನ್ಸಿಗಳ ಜೊತೆಗೆ HEGI ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಳಸಬಹುದು ಅಥವಾ ಹಂಚಿಕೊಳ್ಳಬಹುದು.

ನವೀಕರಣ
ಚಾಲ್ತಿಯಲ್ಲಿರುವ ಕಾನೂನುಗಳಿಗೆ ಒಳಪಟ್ಟು, ನೀವು HEGIಯಿಂದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅಪ್ಡೇಟ್ ಮಾಡುವಂತೆ ಕೋರಬಹುದು. ಈ ವೆಬ್‌ಸೈಟ್ ಮೂಲಕ ನಮ್ಮನ್ನು ಸಂಪರ್ಕಿಸಿ- https://www.hdfcergo.com/grievance/grievance-form

ಸುರಕ್ಷತೆ
ಮಾಹಿತಿ ಭದ್ರತೆಗೆ ಸಂಬಂಧಿಸಿದ ಅತ್ಯುತ್ತಮ ಅಭ್ಯಾಸಗಳು, ಮಾನದಂಡಗಳು ಮತ್ತು ಚಾಲ್ತಿಯಲ್ಲಿರುವ ನಿಯಮಾವಳಿಗಳಿಗೆ ಅನುಗುಣವಾಗಿ HEGI ತನ್ನ ಮಾಹಿತಿ ಭದ್ರತಾ ನೀತಿಯ ಪ್ರಕಾರ ಸುರಕ್ಷತಾ ಅಭ್ಯಾಸಗಳು, ಕಾರ್ಯವಿಧಾನಗಳು ಮತ್ತು ಮಾನದಂಡಗಳನ್ನು ಜಾರಿಗೊಳಿಸುತ್ತದೆ.

ಈ ಗೌಪ್ಯತಾ ಸ್ಟೇಟ್ಮೆಂಟ್‌ನಲ್ಲಿ ಬದಲಾವಣೆಗಳು
ಕಂಪನಿಯ ವೆಬ್‌ಸೈಟ್‌ನಲ್ಲಿ ಯಾವುದೇ ಸಮಯದಲ್ಲಿ ಈ ಗೌಪ್ಯತಾ ಸ್ಟೇಟ್ಮೆಂಟ್ ಅನ್ನು ಬದಲಾಯಿಸುವ ಹಕ್ಕನ್ನು HEGI ಕಾಯ್ದಿರಿಸುತ್ತದೆ

ಬಿಸಿನೆಸ್ ಟ್ರಾನ್ಸಿಶನ್
HEGI ವ್ಯವಹಾರ ಪರಿವರ್ತನೆಗೆ - ಅಂದರೆ ಸ್ವಾಧೀನ, ವಿಲೀನ, ಪಾಲು ಮಾರಾಟ, ಇತ್ಯಾದಿಗಳಿಗೆ ಒಳಗಾದಲ್ಲಿ, ಆಗ ಸಂಬಂಧಿತ ಪಕ್ಷಕಾರರಿಗೆ ನಿಮ್ಮ ಮಾಹಿತಿಯನ್ನು ವರ್ಗಾಯಿಸಬೇಕಾಗಬಹುದು

ಲಿಂಕ್‌ಗಳು
ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್‌ಗೆ ಸಂಬಂಧವಿಲ್ಲದ ಹಾಗೂ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತಗೊಳಿಸದ ಯಾವುದೇ ವೆಬ್‌ಸೈಟ್‌(ಗಳ) ಲಿಂಕ್‌ ಅಸ್ತಿತ್ವದಲ್ಲಿದ್ದರೆ, ಆ ವೆಬ್‌ಸೈಟ್ ಮೂಲಕ ನೀಡಲಾದ ಯಾವುದೇ ಪ್ರಾಡಕ್ಟ್‌ಗಳು, ಸೇವೆಗಳು ಅಥವಾ ಇತರ ವಸ್ತುಗಳನ್ನು ಒಳಗೊಂಡಂತೆ ಸದರಿ ವೆಬ್‌ಸೈಟ್‌ನ ಯಾವುದೇ ಕಂಟೆಂಟ್‌ಗೆ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಯಾವುದೇ ರೀತಿಯಲ್ಲಿ ಹೊಣೆಯಲ್ಲ.
ಸೈಟ್ ಮತ್ತು ಪಾವತಿ ಕಾರ್ಯವಿಧಾನದ ನಡುವಿನ ಭದ್ರತೆ ಮತ್ತು ಲಿಂಕ್‌ನ ಸಮಗ್ರತೆಯನ್ನು ಎಚ್‌ಡಿಎಫ್‌ಸಿ ಎರ್ಗೋ ಖಾತರಿಪಡಿಸುವುದಿಲ್ಲ. ಎಲ್ಲಾ ವ್ಯಕ್ತಿಗಳನ್ನು ಸರಿಯಾದ ಲಿಂಕ್‌ಗೆ ನಿರ್ದೇಶಿಸಲಾಗುತ್ತದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಎಚ್‌ಡಿಎಫ್‌ಸಿ ಎರ್ಗೋ ಪ್ರಯತ್ನಿಸುತ್ತದೆ. ಆದಾಗ್ಯೂ, ಸೈಟ್ ಮತ್ತು ಪಾವತಿ ಕಾರ್ಯವಿಧಾನದ ನಡುವಿನ ಲಿಂಕ್‌ ಅನ್ನು ಅಕ್ಸೆಸ್ ಮಾಡುವ ಎಲ್ಲಾ ವ್ಯಕ್ತಿಗಳು ಆ ಕಾರ್ಯವನ್ನು ಸಂಪೂರ್ಣವಾಗಿ ತಮ್ಮದೇ ಆದ ಅಪಾಯದಲ್ಲಿ ಮಾಡುತ್ತಾರೆ ಮತ್ತು ಎಚ್‌ಡಿಎಫ್‌ಸಿ ಎರ್ಗೋ ಈ ನಿಟ್ಟಿನಲ್ಲಿ ಯಾವುದೇ ರೀತಿಯ ಹೊಣೆ ಅಥವಾ ಜವಾಬ್ದಾರಿ ಹೊರುವುದಿಲ್ಲ.

ವಾಗ್ದಾನ
ನೀವು ಆನ್‌ಲೈನ್‌ನಲ್ಲಿ ಇನ್ಶೂರೆನ್ಸ್‌ಗೆ ಅಪ್ಲೈ ಮಾಡುವಾಗ, ಒಬ್ಬ ಸಂಭಾವ್ಯ ಪಾಲಿಸಿದಾರನಾಗಿ ನೀವು ಖರೀದಿಸಲು ಬಯಸಿದ ಪಾಲಿಸಿ/ಪಾಲಿಸಿಗಳ ಸಂಪೂರ್ಣ ಪಠ್ಯ, ವೈಶಿಷ್ಟ್ಯಗಳು, ಪ್ರಕಟಣೆಗಳು, ನಿಯಮ ಮತ್ತು ಷರತ್ತುಗಳನ್ನು ಓದಿದ್ದೀರಿ ಮತ್ತು ಅರ್ಥಮಾಡಿಕೊಂಡಿದ್ದೀರಿ ಹಾಗೂ ಇಲ್ಲಿ ಒಳಗೊಂಡಿರುವ ನಿಯಮ ಮತ್ತು ಷರತ್ತುಗಳನ್ನು ಅರ್ಥಮಾಡಿಕೊಂಡಿದ್ದೀರಿ ಎಂದು ನೀವು ಈ ಮೂಲಕ ಒಪ್ಪಿಕೊಳ್ಳುತ್ತೀರಿ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x
x