Car Insurance Renewal
Premium starts at ₹2072 ^

ಪ್ರೀಮಿಯಂ ಆರಂಭವಾಗುತ್ತದೆ

₹2072ರಿಂದ*
7100+ Cashless Network Garages ^

7100+ ನಗದುರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
Overnight Car Repair Services ^

ಓವರ್‌ನೈಟ್ ಕಾರ್

ರಿಪೇರಿ ಸೇವೆಗಳು ¯
4.4 Customer Ratings ^

4.4

ಗ್ರಾಹಕರ ರೇಟಿಂಗ್‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ ನವೀಕರಣ

ಕಾರ್ ಇನ್ಶೂರೆನ್ಸ್

 renewal made easy!
Car insurance renewal made easy!
ನೀವು ಮೊದಲ ಬಾರಿಗೆ ಕಾರು ಚಾಲನೆ ಮಾಡಿದ ದಿನ ನೆನಪಿದೆಯೇ? ಆ ಅಗಾಧ ಭಾವನೆ ಮತ್ತು ನಂತರ ನಿಮ್ಮ ಕಾರನ್ನು ಸುರಕ್ಷಿತಗೊಳಿಸುವ ಭರವಸೆ ಏನೇ ಬಂದರೂ ಸರಿಯೇ, ಆ ಭರವಸೆಯನ್ನು ನವೀಕರಿಸುವ ಸಮಯ ಇದಾಗಿದೆ. ಕಾರ್ ಇನ್ಶೂರೆನ್ಸ್ ನವೀಕರಣ ಎಂದಾಕ್ಷಣ ಕಂತೆಕಂತೆ ಕಾಗದಪತ್ರಗಳು ಮತ್ತು ಸಮಯ ತಿನ್ನುವ ಪ್ರಕ್ರಿಯೆಗಳೇ ಕಣ್ಣಮುಂದೆ ಬರಬಹುದು, ಆದರೆ ಈಗ ಅದು ನಿಜಕ್ಕೂ ತಲೆಬಿಸಿ ಇಲ್ಲದ ಕೆಲಸ ಎಂದರೆ ನೀವು ನಂಬಲೇಬೇಕು. ಈಗ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ, ಆನ್ಲೈನ್‌ನಲ್ಲಿ ಕಾರ್ ಇನ್ಶೂರೆನ್ಸ್ ನವೀಕರಣವು ಸುಲಭ, ತ್ವರಿತ ಮತ್ತು ಕೆಲವೇ ಕ್ಲಿಕ್‌ಗಳಲ್ಲಿ ಮುಗಿಯುವ ಕೆಲಸವಾಗಿದೆ. ಹಾಗಾಗಿ, ನಿಮ್ಮ ಕಾರಿನ ಭದ್ರತೆಯ ಶಪಥವನ್ನು ಹೆಚ್ಚಿನ ವಿಳಂಬವಿಲ್ಲದೇ ನವೀಕರಿಸಿ!

 ಎಚ್‌ಡಿಎಫ್‌ಸಿ ಎರ್ಗೋದ ಕಾರ್ ಇನ್ಶೂರೆನ್ಸ್ ನಿಮ್ಮ ಮೊದಲ ಆಯ್ಕೆಯಾಗಿರಬೇಕು ಎಂಬುದಕ್ಕೆ 6 ಕಾರಣಗಳು

Zero Documentation & Instant Policy
ಶೂನ್ಯ ಡಾಕ್ಯುಮೆಂಟೇಶನ್ ಮತ್ತು ತ್ವರಿತ ಪಾಲಿಸಿ
ರಾಶಿರಾಶಿ ಪೇಪರ್‌ವರ್ಕ್‌ ಬದಲು ಅತಿಕಡಿಮೆ ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಕಾರನ್ನು ಸುರಕ್ಷಿತವಾಗಿರಿಸುವ ಸುಲಭ ಮತ್ತು ತ್ವರಿತ ಮಾರ್ಗಕ್ಕೆ ಕಾಲಿಡಿ.
7100+ Network of Cashless Garages**
7100+ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್**
ದೇಶದ ಯಾವುದೇ ಮೂಲೆಯಲ್ಲಿ ನಿಮ್ಮ ಆದ್ಯತೆಯ ಗ್ಯಾರೇಜ್‌ಗಳಲ್ಲಿ ಟಾಪ್-ಆಫ್-ದಿ-ಆರ್ಡರ್ ಸೇವೆಗಳು ಮತ್ತು ತ್ವರಿತ ನಗದುರಹಿತ ಸೆಟಲ್ಮೆಂಟ್ ಪಡೆಯಿರಿ.
Immediate Claim Settlement for Minor Damages~
ಸಣ್ಣ ಹಾನಿಗಳಿಗೆ ತಕ್ಷಣದ ಕ್ಲೈಮ್ ಸೆಟಲ್ಮೆಂಟ್~
ಗಂಟೆಗಟ್ಟಲೆ ಕಾಯುವುದು ಯಾರಿಗೂ ಇಷ್ಟವಿಲ್ಲ, ಅದು ನಮಗೆ ಅರ್ಥವಾಗುತ್ತದೆ! ಸಣ್ಣಸಣ್ಣ ಕ್ಲೈಮ್‌‌ಗಳಿಗೂ ನಿಮ್ಮನ್ನು ಕಾಯಿಸುವುದು ನಮಗೆ ಇಷ್ಟವಿಲ್ಲ, ಅಂತಹ ಕ್ಲೇಮ್‌ಗಳನ್ನು ತಕ್ಷಣ ಸೆಟಲ್ ಮಾಡುತ್ತೇವೆ
Personal accident cover of Rs. 15 Lacs
₹15 ಲಕ್ಷಗಳ ಪರ್ಸನಲ್ ಆಕ್ಸಿಡೆಂಟ್ ಕವರ್
ಜೀವದ ವಿಷಯದಲ್ಲೂ, ಹಣಕಾಸಿನ ವಿಷಯದಲ್ಲೂ ಸುರಕ್ಷತೆ ಬಹಳ ಮುಖ್ಯ. ನಮ್ಮ ಪರ್ಸನಲ್ ಆಕ್ಸಿಡೆಂಟ್ ಕವರ್ ಆ ಸುರಕ್ಷತೆಯನ್ನು ಖಚಿತಪಡಿಸುತ್ತದೆ.
24x7 Roadside Assistance^^
24x7 ರಸ್ತೆಬದಿಯ ನೆರವು^^
ಯಾರೂ ಸಹಾಯಕ್ಕೆ ಸಿಗದ ರಸ್ತೆಯಲ್ಲಿ ಕಾರು ಕೆಟ್ಟು ನಿಂತಿದೆಯೇ? ನಮ್ಮ 24x7 ರಸ್ತೆಬದಿ ನೆರವಿನೊಂದಿಗೆ, ಆ ಅಸಹಾಯಕ ಪರಿಸ್ಥಿತಿಗೆ ವಿದಾಯ ಹೇಳಿ.
Overnight Repair Service¯
ತಡರಾತ್ರಿಯ ರಿಪೇರಿ ಸೇವೆ ¯
ರೋಡ್ ಟ್ರಿಪ್ ಪ್ಲಾನ್ ಮಾಡಿದ್ದೀರಿ, ಆದರೆ ಹಿಂದಿನ ರಾತ್ರಿ ಕಾರು ಕೆಟ್ಟು ನಿಂತಿತೇ? ನಮ್ಮ ತಡರಾತ್ರಿಯ ರಿಪೇರಿ ಸೇವೆಯೊಂದಿಗೆ, ಬೆಳಗಾಗುವ ಹೊತ್ತಿಗೆ ನಿಮ್ಮ ಕಾರು ಮೊದಲಿನಂತೆಯೇ ಆಗಲಿದೆ.

ಕಾರ್ ಇನ್ಶೂರೆನ್ಸ್ ನವೀಕರಣ ಯೋಜನೆಗಳ ಆಯ್ಕೆ ಪಟ್ಟಿ

ಆಲ್-ರೌಂಡ್ ಪ್ರೊಟೆಕ್ಷನ್ ಮತ್ತು ಕನಿಷ್ಠ ರಿನೀವಲ್ ತೊಂದರೆಯೇ ನಿಮ್ಮ ಆದ್ಯತೆಯಾದರೆ, ಈ ಪ್ಲಾನ್ ಪಡೆದುಕೊಳ್ಳಿ. ಆಕ್ಸಿಡೆಂಟ್, ಕಳ್ಳತನ ಮತ್ತು ಬೆಂಕಿ ಅನಾಹುತದಿಂದ ಹಿಡಿದು, ನೈಸರ್ಗಿಕ ವಿಕೋಪ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಯವರೆಗೆ, ಇದು ಬಹುತೇಕ ಎಲ್ಲಾ ವೆಚ್ಚಗಳನ್ನು ಕವರ್ ಮಾಡುತ್ತದೆ.

X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದೆ. ಈ ಪ್ಲಾನ್, ಇವುಗಳನ್ನು ಕವರ್‌ ಮಾಡುತ್ತದೆ:

ಅಪಘಾತ

ವೈಯಕ್ತಿಕ ಅಪಘಾತ ಕವರ್

ನೈಸರ್ಗಿಕ ವಿಕೋಪಗಳು,

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಇನ್ನಷ್ಟು ಹುಡುಕಿ

ಮೋಟಾರ್ ವಾಹನ ಕಾಯ್ದೆ 1988 ರ ಪ್ರಕಾರ ಇದು ಕಡ್ಡಾಯವಾಗಿದೆ ಹಾಗೂ ವೈಯಕ್ತಿಕ ಅಪಘಾತಗಳು ಮತ್ತು ಥರ್ಡ್ ಪಾರ್ಟಿ ವಾಹನ ಅಥವಾ ವ್ಯಕ್ತಿಗೆ ಉಂಟಾದ ಯಾವುದೇ ಹಾನಿ ಅಥವಾ ಗಾಯವನ್ನು ಕವರ್ ಮಾಡುತ್ತದೆ.

X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ವೈಯಕ್ತಿಕ ಅಪಘಾತ ಕವರ್

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ನೀವು ಈಗಾಗಲೇ ಥರ್ಡ್ ಪಾರ್ಟಿ ಕವರ್ ಹೊಂದಿದ್ದರೆ, ಈ ಕವರ್ ನಿಮ್ಮ ಒಟ್ಟಾರೆ ಕಾರ್ ಇನ್ಶೂರೆನ್ಸ್ ಒಗಟಿಗೆ ಪರಿಹಾರವಾಗಿದೆ. ಇದು ಆಕ್ಸಿಡೆಂಟ್‌, ನೈಸರ್ಗಿಕ ವಿಕೋಪಗಳು, ಬೆಂಕಿ ಮತ್ತು ಕಳ್ಳತನವನ್ನು ಕವರ್ ಮಾಡುವುದರಿಂದ, ಹೆಚ್ಚುವರಿ ರಕ್ಷಣೆ ನೀಡುತ್ತದೆ.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ಅಪಘಾತ

ನೈಸರ್ಗಿಕ ವಿಕೋಪಗಳು,

ಬೆಂಕಿ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಕಾರ್ ಇನ್ಶೂರೆನ್ಸ್ ಲ್ಯಾಪ್ಸ್ ಆಗಿದೆಯೇ? ಮುಂದೆ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ!


ಮರೆಗುಳಿತನ WHO ತಾನೆ ಕಾಡದೇ ಬಿಡುತ್ತದೆ ಹೇಳಿ? ನಮ್ಮ ದೈನಂದಿನ ಗಡಿಬಿಡಿಯ ನಡುವೆ, ನಾವು ಕಾರ್ ಇನ್ಶೂರೆನ್ಸ್ ನವೀಕರಣದಂತಹ ಮುಖ್ಯ ವಿಷಯಗಳನ್ನು ಮರೆಯುತ್ತೇವೆ, ಇದರಿಂದ ಇನ್ಶೂರೆನ್ಸ್ ಲ್ಯಾಪ್ಸ್‌ ಆಗಿ, ನಮ್ಮಲ್ಲಿ ಸುಖಾಸುಮ್ಮನೇ ಗಾಬರಿ ಹುಟ್ಟಿಸುತ್ತದೆ! ಆದರೆ, ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸೇವಾ ತಂಡದವರು ಸಮಯಕ್ಕೆ ಸರಿಯಾಗಿ ನೀಡುವ ನವೀಕರಣದ ರಿಮೈಂಡರ್‌ಗಳು ಆ ತೊಂದರೆ ತಪ್ಪಿಸಿ, ನಿಮ್ಮ ಕಾರು ಸದಾ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತವೆ. ಇದರ ಹೊರತಾಗಿಯೂ ನೀವು ನಿಮ್ಮ ಕಾರ್ ಇನ್ಶೂರೆನ್ಸ್ ನವೀಕರಣ ತಪ್ಪಿಸಿದ್ದರೆ, ಗಾಬರಿ ಆಗಬೇಡಿ! ಹೊಸ ಕಾರ್ ಇನ್ಶೂರೆನ್ಸ್ ಕವರ್ ಖರೀದಿಸಲು ಸರಳ 4-ಹಂತದ ಪ್ರಕ್ರಿಯೆ ಇಲ್ಲಿದೆ:

Step 1 to calculate car insurance premium

STEP 1

ನಿಮ್ಮ ನೋಂದಣಿ ಸಂಖ್ಯೆ ನಮೂದಿಸಿ

Step 2 - Select policy cover- calculate car insurance premium

STEP 2

Select your policy cover* (In case we are not able to auto fetch
your vehicle detailswe will need just a few details of your vehicle
- Make, model, variant, registration year and registration city)

 

Step 3- Previous car insurance policy details

STEP 3

ನಿಮ್ಮ ಹಿಂದಿನ ಪಾಲಿಸಿ ಮತ್ತು
ನೋ ಕ್ಲೈಮ್ ಬೋನಸ್ (NCB) ಸ್ಟೇಟಸ್ ಒದಗಿಸಿ

Step 4- Get you car insurace premium

STEP 4

ತಕ್ಷಣವೇ ನಿಮ್ಮ ಕಾರ್ ಇನ್ಶೂರೆನ್ಸ್ ಕೋಟ್ ಅನ್ನು ಪಡೆಯಿರಿ!


ಏನನ್ನು ಕವರ್ ಮಾಡಬಹುದು ಮತ್ತು ಏನನ್ನು ಕವರ್ ಮಾಡುವುದಿಲ್ಲ

Covered in Car insurance policy - Accidents

ಅಪಘಾತಗಳು

ಅಪಘಾತಗಳು ಮನಸ್ಸಿಗೆ ನೋವು ಕೊಡುತ್ತವೆ. ಆದರೆ ನಮ್ಮನ್ನು ನಂಬಿ, ನೀವು ಹಾನಿಗಳ ಬಗ್ಗೆ ಚಿಂತಿಸುತ್ತಿರುವಾಗ, ನಾವು ನಿಮ್ಮನ್ನು ಹಣಕಾಸಿನ ವಿಷಯದಲ್ಲಿ ಕವರ್ ಮಾಡುತ್ತೇವೆ.

Covered in Car insurance policy - fire explosion

ಬೆಂಕಿ ಮತ್ತು ಸ್ಫೋಟ

ಬೆಂಕಿ ಮತ್ತು ಸ್ಫೋಟ ಎಂಬ ಪದಗಳು ಎಂತಹ ಜಗಜಟ್ಟಿಗಳ ಎದೆಯನ್ನೂ ನಡುಗಿಸುತ್ತವೆ. ಆದರೆ ನಿಮ್ಮ ಕಾರು ಬೆಂಕಿ ಅಥವಾ ಸ್ಫೋಟಕ್ಕೆ ತುತ್ತಾಗಿದ್ದರೆ, ನಾವು ಹಾನಿಗಳನ್ನು ಕವರ್ ಮಾಡುತ್ತೇವೆ.

Covered in Car insurance policy - theft

ಕಳ್ಳತನ

ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಈ ಕಾಲದಲ್ಲಿ, ಕಾರು ಕಳ್ಳತನ ಸರ್ವೇಸಾಮಾನ್ಯ. ಅಂತಹ ಸನ್ನಿವೇಶದಲ್ಲಿ, ನಾವು ನಿಮ್ಮ ಕಾರನ್ನು ಮರಳಿ ತರಲು ಸಾಧ್ಯವಿಲ್ಲದಿದ್ದರೂ, ಕಳ್ಳತನದಿಂದ ಆಗುವ ಹಣಕಾಸು ನಷ್ಟವನ್ನಂತೂ ಕವರ್ ಮಾಡಬಲ್ಲೆವು.

Covered in Car insurance policy - Calamities

ವಿಪತ್ತುಗಳು

ನೈಸರ್ಗಿಕ ವಿಕೋಪ ಸಾಕಷ್ಟು ಹಾನಿ ಉಂಟುಮಾಡುತ್ತದೆ, ನಿಮ್ಮ ಕಾರು ಖಂಡಿತ ಅದನ್ನು ತಡೆದುಕೊಳ್ಳಲು ಸಾಧ್ಯವಿಲ್ಲ! ಅಂತಹ ವಿಕೋಪದ ನಂತರ ನೀವು ನಿಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳುವಾಗ, ನಾವು ನಿಮ್ಮ ಕಾರಿಗೆ ಉಂಟಾದ ಹಾನಿಯನ್ನು ಕವರ್ ಮಾಡುತ್ತೇವೆ.

Covered in Car insurance policy - Personal accident

ವೈಯಕ್ತಿಕ ಆಕ್ಸಿಡೆಂಟ್

ಮುಂದೆ ಏನಾಗುತ್ತದೆ ಎಂಬುದನ್ನು ಯಾರೂ ಊಹಿಸಲಾರರು. ಅಪಘಾತಗಳ ಬಗ್ಗೆ ಯಾರೂ ಭವಿಷ್ಯ ನುಡಿಯಲಾಗದು. ಆದರೆ ಅಂತಹ ದುರದೃಷ್ಟಕರ ಪರಿಸ್ಥಿತಿ ಎದುರಾದರೆ, ನೀವು ಬದುಕು ಕಟ್ಟಿಕೊಳ್ಳುವುದರ ಬಗ್ಗೆ ಚಿಂತಿಸಿ. ಆಸ್ಪತ್ರೆ ಖರ್ಚುಗಳ ಚಿಂತೆಯನ್ನು ನಮಗೆ ಬಿಡಿ.

Covered in Car insurance policy - third party liability

ಥರ್ಡ್ ಪಾರ್ಟಿ ಹೊಣೆಗಾರಿಕೆ

ನೀವು ಇನ್ನೊಬ್ಬ ವ್ಯಕ್ತಿಗೆ ಅಥವಾ ಅವರ ವಾಹನಕ್ಕೆ ಹಾನಿ ಮಾಡಿದರೆ, ಅವರಿಗೆ ನಷ್ಟ ಪರಿಹಾರ ಪಾವತಿಸಲು ಹೊಣೆಯಾಗಿರುತ್ತೀರಿ. ಆಗ ನಾವು ನಿಮ್ಮನ್ನು ಕವರ್ ಮಾಡುತ್ತೇವೆ ಮತ್ತು ಥರ್ಡ್ ಪಾರ್ಟಿಗೆ ಆಗುವ ಯಾವುದೇ ಹಾನಿಗೆ ಪಾವತಿಸುತ್ತೇವೆ!

ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ ಇನ್ಶೂರೆನ್ಸ್ ನವೀಕರಿಸಲು 3 ಕಾರಣಗಳು

1
ರಸ್ತೆಗೆ ಇಳಿಯಲು ಸಿದ್ಧರಾಗಿ
ಒಬ್ಬ ಕಾರು ಮಾಲೀಕರಾಗಿ, ಮೋಟಾರು ವಾಹನ ಕಾಯ್ದೆಯ ಪ್ರಕಾರ ಭಾರತದಲ್ಲಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಕವರ್ ಒಂದು ಕನಿಷ್ಠ ಮತ್ತು ಕಡ್ಡಾಯ ಅಗತ್ಯವಾಗಿದೆ ಎಂದು ತಿಳಿದಿರುವುದು ಬಹಳ ಮುಖ್ಯ. ಸರಿಯಾದ ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲದಿರುವುದು ಒಂದು ಶಿಕ್ಷಾರ್ಹ ಅಪರಾಧ ಮತ್ತು ಅದು ಭಾರೀ ದಂಡಕ್ಕೆ ಕಾರಣವಾಗಬಹುದು. ಅಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಲುಕಲು ಯಾರಿಗೂ ಇಷ್ಟವಿಲ್ಲ ಅಲ್ಲವೇ? ಹಾಗಾದರೆ ಸಮಯಕ್ಕೆ ಸರಿಯಾಗಿ ಕಾರ್ ಇನ್ಶೂರೆನ್ಸ್ ನವೀಕರಿಸಿ, ನಿಶ್ಚಿಂತೆಯಿಂದ ರಸ್ತೆಗೆ ಇಳಿಯಲು ಸಿದ್ಧರಾಗಿ.
2
ಪ್ರಯೋಜನಗಳು ಕೈತಪ್ಪಿ ಹೋಗಲು ಬಿಡಬೇಡಿ
ನಮ್ಮ ಮಾತು ಸ್ವಲ್ಪ ವಿಚಿತ್ರ ಎನಿಸಿತೇ? ನೀವು ಯಾವುದೇ ಕ್ಲೈಮ್ ಸಲ್ಲಿಸದಿದ್ದರೆ, ವರ್ಷಕ್ಕೆ ಒಮ್ಮೆಯಂತೆ ನಿಮ್ಮ ಪಾಲಿಸಿಯ ಅವಧಿಯ ಉದ್ದಕ್ಕೂ ಪ್ರೀಮಿಯಂ ಮೇಲೆ ರಿಯಾಯಿತಿ ಪ್ರಯೋಜನ ಒದಗಿಸುವ ನೋ ಕ್ಲೈಮ್ ಬೋನಸ್ (NCB) ಒಟ್ಟುಗೂಡುತ್ತಾ ಹೋಗುತ್ತದೆ. ಆದಾಗ್ಯೂ, ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ಲ್ಯಾಪ್ಸ್ ಆದರೆ, ನೀವು ನಿಮ್ಮ NCB ಹಾಗೂ ಅದರಿಂದ ಸಿಗುತ್ತಿದ್ದ ರಿಯಾಯಿತಿ ಪ್ರಯೋಜನವನ್ನು ಕಳೆದುಕೊಳ್ಳಬಹುದು. ಒಂದು ಸರಳ 3-ಕ್ಲಿಕ್ ನವೀಕರಣ ಪ್ರಕ್ರಿಯೆ, ಅಂತಹ ಅನಗತ್ಯ ನಷ್ಟ ತಪ್ಪಿಸುತ್ತದೆ.
3
ಹಣಕಾಸು ನಷ್ಟದ ವಿರುದ್ಧ ಭದ್ರತೆ
ಸರಿಯಾದ ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲದಿದ್ದರೆ, ನೀವು ಕಳ್ಳತನ, ಆಕ್ಸಿಡೆಂಟ್, ನೈಸರ್ಗಿಕ ವಿಕೋಪ ಮುಂತಾದ ಅಪಾಯಗಳಿಗೆ ತುತ್ತಾಗಬಹುದು. ಅದರಿಂದ ಆಗುವ ಹಾನಿ ಅಥವಾ ತೊಂದರೆಯು ಸಾವಿರಾರು ರೂಪಾಯಿಗಳ ಹಣಕಾಸು ನಷ್ಟಕ್ಕೆ ಕಾರಣವಾಗಬಹುದು.

ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ರಕ್ಷಿಸಲು ಆ್ಯಡ್-ಆನ್ ಕವರ್‌ಗಳು

Boost your coverage
Zero Depreciation Cover - Insurance for Vehicle

ಕಾರಿನ ಮೌಲ್ಯವು ಸ್ಥಿರವಾಗಿಲ್ಲ ; ಕಾರನ್ನು ಬಳಸಿದಾಗ, ಅದರ ಮೌಲ್ಯವು ಕಡಿಮೆಯಾಗುತ್ತದೆ. ಅದರ ಪರಿಣಾಮವಾಗಿ, ನೀವು ಕ್ಲೈಮ್ ಫೈಲ್ ಮಾಡಿದಾಗ ಸಂಪೂರ್ಣ ಮೊತ್ತವನ್ನು ಪಡೆಯಲಾಗದು. ಮೌಲ್ಯ ಇಳಿಕೆಯನ್ನು ಕಡಿತಗೊಳಿಸಿ, ಉಳಿದ ಮೊತ್ತವನ್ನು ನಿಮಗೆ ಪಾವತಿಸಲಾಗುತ್ತದೆ. ಆದರೆ ಜೀರೋ ಡಿಪ್ರಿಸಿಯೇಶನ್ ಕವರ್ ಆಯ್ಕೆ ಮಾಡುವ ಮೂಲಕ, ನಿಮ್ಮ ಜೇಬಿನಿಂದ ಒಂದು ರೂಪಾಯಿಯನ್ನೂ ಪಾವತಿಸದೆ, ಸಂಪೂರ್ಣ ಮೊತ್ತವನ್ನು ಪಡೆಯಬಹುದು!

No Claim Bonus Protection:

ತಪ್ಪಿಸಲಾಗದ ಕ್ಲೈಮ್ ಮಾಡಿ, ಈಗ ನಿಮ್ಮ NCB ರಿಯಾಯಿತಿಯ ಬಗ್ಗೆ ಚಿಂತಿಸುತ್ತಿದ್ದೀರಾ? ಚಿಂತಿಸಬೇಡಿ! ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಆ್ಯಡ್-ಆನ್ ಕವರ್ ನಿಮ್ಮ ನೋ ಕ್ಲೈಮ್ ಬೋನಸ್ (NCB) ಅನ್ನು ಇಲ್ಲಿಯವರೆಗೆ ರಕ್ಷಿಸಿದೆ. ಮುಂದಿನ NCB ಸ್ಲ್ಯಾಬ್‌ಗೆ ತೆಗೆದುಕೊಂಡು ಹೋಗಿ, ನಿಮ್ಮ ಪ್ರೀಮಿಯಂನಲ್ಲಿ ಗಮನಾರ್ಹ ರಿಯಾಯಿತಿಯನ್ನು ಗಳಿಸಿಕೊಡುತ್ತದೆ.

Emergency Assistance Cover

ಬೆಳಗಿನ ಜಾವ 3 ಗಂಟೆಗೂ ನಮ್ಮ ಕರೆಗೆ ಓಗೊಡುವ ಪ್ರಾಣಸ್ನೇಹಿತ ಒಬ್ಬನಾದರೂ ಇದ್ದೇ ಇರುತ್ತಾನೆ. ಈ ಕವರ್ ಕೂಡಾ ಅಂತಹ ಒಬ್ಬ ಪ್ರಾಣಸ್ನೇಹಿತ ಮತ್ತು ಆಪದ್ಭಾಂಧವ ಇದ್ದಂತೆ. ರಿಫ್ಯೂಯಲಿಂಗ್, ಟೈರ್ ಬದಲಾವಣೆ, ಟೋಯಿಂಗ್, ಮೆಕ್ಯಾನಿಕ್ ಏರ್ಪಾಟು ಮಾಡುವುದು, ಇಂತಹ ಯಾವುದೇ ಸಂದರ್ಭದಲ್ಲಿ ತುರ್ತು ಸಹಾಯದ ಕವರ್ ನಿಮ್ಮ ಕೈಹಿಡಿದು, 24X7 ಸಹಾಯದ ಭರವಸೆ ನೀಡುತ್ತದೆ.

Boost your coverage
Return to Invoice

ನಿಮಗೆ ನಂಬಲು ಕಷ್ಟವಾಗಬಹುದು. ಆದರೆ ನಿಮ್ಮ ಕಾರು ಸಂಪೂರ್ಣವಾಗಿ ಹಾನಿ ಅಥವಾ ಕಳ್ಳತನಕ್ಕೆ ತುತ್ತಾದಾಗ, ರಿಟರ್ನ್ ಟು ಇನ್ವಾಯ್ಸ್ ಕವರ್ ನಿಮ್ಮ ಸಂಪೂರ್ಣ ಹಣಕಾಸು ನಷ್ಟವನ್ನು ಸರಿದೂಗಿಸಲು ನೆರವಾಗುತ್ತದೆ. ಇದರಲ್ಲಿ ಘೋಷಿತ ಇನ್ಶೂರೆನ್ಸ್ ಮೌಲ್ಯ ಮಾತ್ರವಲ್ಲದೆ, ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಗಣನೆಗೆ ತೆಗೆದುಕೊಳ್ಳುವ ನಿಜವಾದ ಇನ್ವಾಯ್ಸ್ ಮೌಲ್ಯವೂ ಒಳಗೊಂಡಿದೆ.

Engine and Gearbox Protector

ಎಂಜಿನ್ ಮತ್ತು ಗೇರ್‌ಬಾಕ್ಸ್‌ಗಳು, ನಮ್ಮ ಹೃದಯ ಮತ್ತು ಶ್ವಾಸಕೋಶಗಳಂತೆ ನಿಮ್ಮ ಕಾರಿನ ಯೋಗಕ್ಷೇಮಕ್ಕೆ ಬಹಳ ಮುಖ್ಯವಾಗಿವೆ. ಆದ್ದರಿಂದ, ಅವುಗಳಿಗೆ ಹಾನಿಯಾದ ಸಂದರ್ಭದಲ್ಲಿ ಹೆಚ್ಚಿನ ಮೊತ್ತ ಪಾವತಿಸುವುದನ್ನು ತಪ್ಪಿಸಲು, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಟರ್‌ ಆ್ಯಡ್-ಆನ್‌ ಮೂಲಕ ಅವನ್ನು ರಕ್ಷಿಸುವುದು ಬಹಳ ಮುಖ್ಯ.

Downtime Protection

ಅಪಘಾತದ ನಂತರ ಕಾರು ಗ್ಯಾರೇಜ್‌ನಲ್ಲಿ ಇರಬಹುದು, ಆದರೆ ಕೆಲಸ ಹಾಗೆ ಮುಂದುವರಿಯುತ್ತದೆ ಮತ್ತು ಪ್ರಯಾಣದ ವೆಚ್ಚಗಳು ಚಿಂತೆಗೆ ಈಡುಮಾಡಿವೆಯೇ? ಅಂತಹ ಸಂದರ್ಭ ನಿಮಗೆ ಹಿನ್ನೆಡೆಯಾಗದಂತೆ ನೋಡಿಕೊಳ್ಳಿ. ಡೌನ್‌ಟೈಮ್ ಪ್ರೊಟೆಕ್ಷನ್ ಆ್ಯಡ್-ಆನ್ ನಿಮಗೆ ಪೂರ್ವ-ನಿರ್ಧರಿತ ಮೊತ್ತವನ್ನು ಒದಗಿಸುವುದರಿಂದ, ಇದು ನಿಮ್ಮ ಕಾರು ನಿಮ್ಮೊಂದಿಗೆ ಇಲ್ಲದಿರುವುದರಿಂದ ಉಂಟಾಗುವ ವೆಚ್ಚಗಳನ್ನು ಕವರ್ ಮಾಡುತ್ತದೆ.

ಕಾರ್ ಇನ್ಶೂರೆನ್ಸ್ ನವೀಕರಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ 4 ಅಂಶಗಳು

ಕಾರ್ ಇನ್ಶೂರೆನ್ಸ್ ನವೀಕರಣ ಬಾಕಿ ಇದೆಯೇ? ಇದು ಬಹಳ ತುರ್ತಾಗಿ ಮಾಡಬೇಕಾದ ಕೆಲಸವಾದರೂ, ನವೀಕರಣಕ್ಕೆ ಮುಂಚೆ ಈ ಕೆಳಗಿನ 4 ಅಂಶಗಳನ್ನು ಮರೆಯದೇ ಪರಿಗಣಿಸಿ:

Do your research premiums

ಹುಡುಕಾಟ ನಡೆಸಿ

ರಿಸರ್ಚ್ ಸ್ಪ್ರೀಗೆ ಹೋಗಿ, ನಿಮ್ಮ ಅವಶ್ಯಕತೆಗಳು ಮತ್ತು ನಿಮ್ಮ ಬಜೆಟ್‌ಗೆ ಸರಿಹೊಂದುವ ಕಾರ್ ಇನ್ಶೂರೆನ್ಸ್ ಕವರನ್ನು ಹೋಲಿಕೆ ಮಾಡಿ ಮತ್ತು ಆಯ್ಕೆ ಮಾಡಿ. ನಿಮ್ಮ ಜೇಬಿಗೆ ಸುಲಭವಾಗುವಾಗ ಸಮಗ್ರ ಕವರೇಜನ್ನು ನೀಡುವ ಕವರ್ ಅನ್ನು ಆಯ್ಕೆ ಮಾಡಿ. ಅಲ್ಲದೆ, ನೀವು ಆಯ್ಕೆ ಮಾಡುವ ಆ್ಯಡ್-ಆನ್ ಕವರ್‌ಗಳು ಮತ್ತು ಅವುಗಳು ನೀಡುವ ಸೇವೆಯ ಕುರಿತು ಆಯ್ಕೆ ಮಾಡುವಾಗ ಗಣನೀಯವಾಗಿ ಯೋಚಿಸಿ.

Set the right IDV  - Car insurance

ಸರಿಯಾದ IDV ನಿಗದಿಪಡಿಸಿ

ನಿಮ್ಮ ಕಾರ್ ಇನ್ಶೂರೆನ್ಸ್ ನವೀಕರಿಸುವಾಗ ಸರಿಯಾದ IDV ನಿಗದಿಪಡಿಸುವುದು ನಿಮ್ಮ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವಲ್ಲಿ ಬಹಳ ಮುಖ್ಯವಾಗಿದೆ. ನಿಮ್ಮ ಕಾರ್‌ನ ಕಳ್ಳತನ ಅಥವಾ ಸಂಪೂರ್ಣ ಹಾನಿಯ ಸಂದರ್ಭದಲ್ಲಿ ನಿಮ್ಮ ವಿಮಾದಾತರು IDV ಮೊತ್ತವನ್ನೇ ಪರಿಹಾರವಾಗಿ ನೀಡುವುದರಿಂದ, ಅತಿಕಡಿಮೆ IDV ಮತ್ತು ಅತಿಹೆಚ್ಚು IDV ನಡುವೆ ಸಮತೋಲನ ಸಾಧಿಸಬೇಕಾಗುತ್ತದೆ.

Grab your No Claim Bonus

ನಿಮ್ಮ ನೋ ಕ್ಲೈಮ್ ಬೋನಸ್ ಪಡೆಯಿರಿ

ಹಿಂದಿನ ವರ್ಷ ನೀವು ಯಾವುದೇ ಕ್ಲೈಮ್ ಸಲ್ಲಿಸಿಲ್ಲ ಎಂದಾದರೆ, ಈ ವರ್ಷ ನಿಮ್ಮ NCB ಪ್ರಯೋಜನಗಳ ಸದುಪಯೋಗ ಮಾಡಿಕೊಳ್ಳಿ. ಹೀಗಾಗಿ, ನೀವು NCB ಗೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸಿ ಹಾಗೂ ನಿಮ್ಮ ಕಾರ್ ಇನ್ಶೂರೆನ್ಸ್ ನವೀಕರಿಸುವಾಗ ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಗಮನಾರ್ಹ ರಿಯಾಯಿತಿ ಪಡೆಯಿರಿ.

Opt for a voluntary deductible

ಸ್ವಯಂಪ್ರೇರಿತ ಕಡಿತವನ್ನು ಆಯ್ಕೆ ಮಾಡಿ

ದಿನೇದಿನೇ ಹೆಚ್ಚುತ್ತಿರುವ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ದರಗಳು ಗಾಬರಿ ಹುಟ್ಟಿಸುತ್ತಿವೆಯೇ? ಕಾರ್ ಇನ್ಶೂರೆನ್ಸ್ ನವೀಕರಿಸುವಾಗ ಸ್ವಯಂಪ್ರೇರಿತ ಕಡಿತವನ್ನು ಆಯ್ಕೆ ಮಾಡುವುದರಿಂದ ಪ್ರೀಮಿಯಂ ಮೊತ್ತಗಳನ್ನು ಸ್ವಲ್ಪಮಟ್ಟಿಗೆ ತಗ್ಗಿಸಬಹುದು. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಸ್ವಯಂಪ್ರೇರಿತ ಕಡಿತ ಎಂದರೆ ಕ್ಲೈಮ್ ಸಲ್ಲಿಸಿದ ಸಂದರ್ಭದಲ್ಲಿ ನೀವು ನಿಮ್ಮ ಕೈಯಾರೆ ಪಾವತಿಸಬೇಕಾದ ಪೂರ್ವ-ನಿರ್ಧರಿತ ಮೊತ್ತ.

Cashless garage network
7100+** ನೆಟ್ವರ್ಕ್ ಗ್ಯಾರೇಜ್‌ಗಳು
ಭಾರತದಾದ್ಯಂತ

ಅವಾರ್ಡ್ಸ್ ಮತ್ತು ಗುರುತಿಸುವಿಕೆ

ಕೊನೆಯದಾಗಿ ಅಪ್ಡೇಟ್ ಮಾಡಿದ್ದು: 2021-08-09

ಎಲ್ಲಾ ಪ್ರಶಸ್ತಿಗಳನ್ನು ನೋಡಿ