ನಿಮ್ಮ ಬ್ಯಾಂಕ್ ಅಕೌಂಟ್, ಕ್ರೆಡಿಟ್/ ಡೆಬಿಟ್ ಕಾರ್ಡ್ ಅಥವಾ ನಿಮ್ಮ ಇ-ವಾಲೆಟ್ ಮೂಲಕ ನಡೆಯುವ ಆನ್ಲೈನ್ ಕಳ್ಳ ವ್ಯವಹಾರಗಳ ವಿರುದ್ಧ 100% ಕವರ್ ಒದಗಿಸುವ ಪ್ಲಾನ್ ಮೂಲಕ ನೀವು ಕಷ್ಟಪಟ್ಟು ಗಳಿಸಿದ ಹಣವನ್ನು ಕಾಪಾಡಿಕೊಳ್ಳಿ.
ಫಿಶಿಂಗ್ ಮತ್ತು ಇಮೇಲ್ ಮೋಸದ ಮೂಲಕ ಹಣ ಕಳೆದುಕೊಳ್ಳಬೇಡಿ. ಇ@ಸೆಕ್ಯೂರ್ ಮೂಲಕ, ಫಿಶಿಂಗ್ ಮತ್ತು ಇಮೇಲ್ ಮೋಸಕ್ಕೆ ಕ್ರಮವಾಗಿ ಪಾಲಿಸಿ ಮಿತಿಯ 15% ಮತ್ತು 25% ವರೆಗೆ ಕವರ್ ಪಡೆಯಿರಿ, ಈ ಪಾಲಿಸಿಯು ಅಂತಹ ದಾಳಿಗಳಿಂದ ಆದ ಹಣಕಾಸು ನಷ್ಟಕ್ಕೆ ನಷ್ಟಭರ್ತಿ ಮಾಡುತ್ತದೆ.
ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಮಾನ ಕಳೆಯಲು, ಸೈಬರ್ ಕಿಡಿಗೇಡಿಗಳಿಗೆ ಕೆಲವೇ ಸೆಕೆಂಡುಗಳು ಸಾಕು. ಇ@ಸೆಕ್ಯೂರ್ ಮೂಲಕ ಅಂತಹ ಅಪಾಯಗಳಿಂದ ಪಾರಾಗಿ.
ಒಬ್ಬ ಸೈಬರ್ ಕಳ್ಳ, ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯಬಹುದು. ನಮ್ಮ ಇ@ಸೆಕ್ಯೂರ್ ಮೂಲಕ ಈ ಆತಂಕವನ್ನು ದೂರ ಮಾಡಿಕೊಳ್ಳಿ.
ಎಚ್‌ಡಿಎಫ್‌ಸಿ ಎರ್ಗೋ ಇ@ಸೆಕ್ಯೂರ್ ಇನ್ಶೂರೆನ್ಸ್‌ನೊಂದಿಗೆ ಪಾಲಿಸಿ ಮಿತಿಯ 10% ವರೆಗೆ ಕವರ್ ಪಡೆಯುವ ಮೂಲಕ, ಸೈಬರ್ ಬೆದರಿಕೆ ವಿರುದ್ಧ ನಿಮ್ಮನ್ನು ಮತ್ತು ನಿಮ್ಮ ಪ್ರೀತಿಪಾತ್ರರನ್ನು ರಕ್ಷಿಸಿ.
ಆನ್ಲೈನ್ ಸುಲಿಗೆ ವಿರುದ್ಧ ಪಾಲಿಸಿ ಮಿತಿಯ 10% ವರೆಗಿನ ಕವರೇಜ್ ಒದಗಿಸುವ ಇ@ಸೆಕ್ಯೂರ್ ಮೂಲಕ ಬ್ಲಾಕ್‌ಮೇಲರ್‌ಗಳು ಮತ್ತು ರಾನ್ಸಮ್‌ವೇರ್ ದಾಳಿಗಳ ವಿರುದ್ಧ ನಿಮ್ಮನ್ನು ರಕ್ಷಿಸಿಕೊಳ್ಳಿ
ಉದ್ದೇಶಪೂರ್ವಕ/ಬೇಕಂತಲೇ ಮಾಡಿದ ಮೋಸಕ್ಕೆ ನಾವು ಪರಿಹಾರ ನೀಡಲು ಸಾಧ್ಯವಿಲ್ಲ.
ನೀವು ಪಾಲಿಸಿಗಾಗಿ ಸೈನ್ ಅಪ್ ಮಾಡಿದ ನಂತರವಷ್ಟೇ ನಮ್ಮ ಪಾಲುದಾರಿಕೆಯ ಪ್ರಯೋಜನಗಳು ಶುರುವಾಗುತ್ತವೆ. ಅದಕ್ಕಿಂತ ಮೊದಲು ನಡೆದ ಹಾನಿಗಳಿಗೆ ನಾವು ಸಹಾಯ ಮಾಡಲು ಸಾಧ್ಯವಿಲ್ಲ.
ನಿಗೂಢತೆಯನ್ನು ಬಯಲು ಮಾಡುವುದಕ್ಕಿಂತ ಕುತೂಹಲದ ಕೆಲಸ ಮತ್ತೊಂದಿಲ್ಲ. ಆದರೆ ನಿಗೂಢ ಅಥವಾ ಕಾರಣ ಹುಡುಕಲಾಗದ ಹಾನಿಗಳು, ಇ@ಸೆಕ್ಯೂರ್ ಅಡಿಯಲ್ಲಿ ಕವರ್ ಆಗುವುದಿಲ್ಲ.
ನಿಮಗೆ ಸೇರಿದ್ದನ್ನು ನಿಮಗೆ ಕೊಡುವುದರಲ್ಲಿ ನಮಗೇನೂ ಅಭ್ಯಂತರವಿಲ್ಲ. ಆದರೆ, ಘಟನೆ ನಡೆದ ಆರು ತಿಂಗಳ ನಂತರ ಕ್ಲೇಮ್ ಸಲ್ಲಿಸಿದಾಗ, ಅದರ ಬಗ್ಗೆ ನಾವು ಹೆಚ್ಚೇನೂ ಮಾಡಲು ಸಾಧ್ಯವಿಲ್ಲ.
ನಾವು ನಿಮಗೆ ಡಿಜಿಟಲ್ ಜಗತ್ತಿನಲ್ಲಿ ರಕ್ಷಣೆ ಒದಗಿಸುತ್ತೇವೆ. ಆದರೆ ಈ ಪ್ಲಾನ್ ಅಡಿಯಲ್ಲಿ, ನಾವು ಆಫ್ಲೈನ್ ಜಗತ್ತಿನಲ್ಲಿ ಹೆಚ್ಚಿನದೇನೂ ಮಾಡಲು ಸಾಧ್ಯವಿಲ್ಲ.
ನೀವು ನಿಜಜೀವನದಲ್ಲಿ ನಿಮ್ಮ ಕುಟುಂಬವನ್ನು ಕಾಪಾಡುವಂತೆಯೇ, ಇಂಟರ್ನೆಟ್ ಬಳಕೆಯಿಂದ ಉಂಟಾಗುವ ನಷ್ಟ/ಹಾನಿಯ ವಿರುದ್ಧ ಆನ್ಲೈನ್‌ನಲ್ಲೂ ನಿಮ್ಮ ಕುಟುಂಬವನ್ನು ಕಾಪಾಡಿ. ನಿಮ್ಮನ್ನು, ನಿಮ್ಮ ಸಂಗಾತಿಯನ್ನು ಮತ್ತು ನಿಮ್ಮ ಎರಡು ಮಕ್ಕಳನ್ನು (ಯಾವುದೇ ವಯಸ್ಸಿನ ಮಿತಿಯಿಲ್ಲದೆ) ರಕ್ಷಿಸಿ ಮತ್ತು ಸಂಪೂರ್ಣ ಕುಟುಂಬಕ್ಕೆ ಸಂಪೂರ್ಣ ಡಿಜಿಟಲ್ ಭದ್ರತೆಯನ್ನು ಖಚಿತಪಡಿಸಿ.
ಬೀಗ ಹಾಕುವ ಮೂಲಕ ನಿಮ್ಮ ಮನೆಯನ್ನು ಕಾಪಾಡುವಂತೆಯೇ, ನಿಮ್ಮ ಡಿಜಿಟಲ್ ಆಸ್ತಿಯನ್ನೂ ಕಾಪಾಡಿಕೊಳ್ಳಿ. ಮಾಲ್ವೇರ್ ಮೂಲಕ ಡಿಜಿಟಲ್ ಸ್ವತ್ತುಗಳಿಗೆ ಆಗುವ ದುರ್ಬಲತೆ ಮತ್ತು ಹಾನಿಯ ವಿರುದ್ಧ ರಕ್ಷಣೆ ಪಡೆಯಿರಿ. ಈ ಆ್ಯಡ್-ಆನ್ ಮೂಲಕ, ರಿಪ್ಲೇಸ್‌ಮೆಂಟ್ ಖರ್ಚುಗಳಿಗೆ ಪಾಲಿಸಿ ಮಿತಿಯ 10% ವರೆಗೆ ಪರಿಹಾರ ಸಿಗುತ್ತದೆ .
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಆಗಾಗ ಕೇಳುವ ಪ್ರಶ್ನೆಗಳು
ಈ ಪಾಲಿಸಿಯ ಅಡಿಯಲ್ಲಿ ಕವರ್ ಆಗುವ ಅಪಾಯಗಳು :
ಆ್ಯಡ್ ಆನ್ ಕವರ್: