Workmen's Compensation Insurance Policy

ಕಿಸಾನ್ ಸರ್ವ ಸುರಕ್ಷಾ
ಕವಚ್

  • ಪರಿಚಯ
  • ಏನು ಕವರ್ ಆಗುತ್ತದೆ?
  • ಏನನ್ನು ಕವರ್ ಮಾಡಲಾಗಿಲ್ಲ?
  • ಎಚ್‌ಡಿಎಫ್‌ಸಿ ಎರ್ಗೋ ಏಕೆ ಆರಿಸಿಕೊಳ್ಳಬೇಕು ?

ಕಿಸಾನ್ ಸರ್ವ ಸುರಕ್ಷಾ ಕವಚ್

 

ಭಾರತವು ಕೃಷಿ ಆಧಾರಿತ ದೇಶವಾಗಿದೆ. ಭಾರತದ 70% ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಾರೆ. ಆದರೆ ಅವರಿಗೆ ಇನ್ಶೂರೆನ್ಸ್‌ಗೆ ಯಾವುದೇ ಅಕ್ಸೆಸ್ ಇಲ್ಲ ಅಥವಾ ಇದ್ದರೂ ನಗಣ್ಯ ಅಕ್ಸೆಸ್ ಮಾತ್ರ ಇದೆ. ಉತ್ಪನ್ನದ ಕೊಡುಗೆ ಮತ್ತು ವಿತರಣೆಯ ವಿಷಯದಲ್ಲಿ ವಿಮಾದಾತರು ಈ ಮಾರುಕಟ್ಟೆಯನ್ನು ಇನ್ನೂ ಪರೀಕ್ಷಿಸಬೇಕಾಗಿದೆ. ಈಗ ಗ್ರಾಮೀಣ ಪ್ರದೇಶಗಳಿಗೂ ಹೂಡಿಕೆಗಳು ಬರುತ್ತಿರುವುದರಿಂದ ಹಳ್ಳಿಗಳ ಚಿತ್ರಣ ಬದಲಾಗುತ್ತಿದೆ. ಸುಸ್ಥಿರ ಮತ್ತು ಸ್ಥಿರ ಬೆಳವಣಿಗೆಯ ಇತಿಹಾಸ ಸೃಷ್ಟಿಸಲು ಹೊಸ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುವುದು ತುಂಬಾ ಮುಖ್ಯವಾಗಿದೆ. ಈ ವಿಭಾಗದಲ್ಲಿನ ಬೆಳವಣಿಗೆಯನ್ನು ಪರಿಗಣಿಸಿದರೆ, ಗಣನೀಯ ಪ್ರಮಾಣದ ಪ್ರಭಾವ ಬೀರುವ ಸಾಧ್ಯತೆ ಕಂಡುಬರುತ್ತಿದೆ. ಇದು ಇನ್ಶೂರೆನ್ಸ್ ಉದ್ಯಮಕ್ಕೆ ಗ್ರಾಮೀಣ ಮಾರುಕಟ್ಟೆಯನ್ನು ಅನ್ವೇಷಿಸಲು ಅವಕಾಶ ನೀಡುತ್ತದೆ. ಈ ಹಿನ್ನೆಲೆಯಲ್ಲಿ, ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿಯು ಈ ಸಾಮರ್ಥ್ಯವನ್ನು ಅನ್ವೇಷಿಸುವ ನಿಟ್ಟಿನಲ್ಲಿ ಮಾರುಕಟ್ಟೆಗೆ ಪ್ರವೇಶಿಸಲು ನಿರ್ಧರಿಸಿದೆ.

ಕಿಸಾನ್ ಸರ್ವ ಸುರಕ್ಷಾ ಕವಚ್ ಪಾಲಿಸಿಯು ರೈತರು ಮತ್ತು ಕೃಷಿ ವ್ಯಾಪಾರಿಗಳ ವಿವಿಧ ಸ್ವತ್ತುಗಳಿಗೆ ವ್ಯಾಪಕ ಶ್ರೇಣಿಯ ಅಪಾಯಗಳ ವಿರುದ್ಧ ಕವರೇಜ್ ಒದಗಿಸುವ ಸಮಗ್ರ ಪ್ಯಾಕೇಜ್ ಪಾಲಿಸಿಯಾಗಿದೆ. ಈ ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ಒಂದು ಅಥವಾ ಹೆಚ್ಚು ವಿಭಾಗಗಳನ್ನು ಆಯ್ಕೆ ಮಾಡುವ ಮೂಲಕ ಕವರೇಜ್ ಅನ್ನು ಕಸ್ಟಮೈಜ್ ಮಾಡಬಹುದು. ಒಂದೇ ಸೂರಿನ ಅಡಿಯಲ್ಲಿ, ಸಲಕರಣೆಗಳು, ಪಂಪ್ ಸೆಟ್‌ ಮತ್ತು ಪ್ರಾಣಿ ಚಾಲಿತ ವಾಹನಗಳಿಗೆ ಕವರೇಜ್ ಒದಗಿಸಬಹುದು. ಈ ಕವರೇಜ್‌ನೊಂದಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಕೂಡ ನೀಡಬಹುದು.

 

ಏನನ್ನು ಕವರ್ ಮಾಡಲಾಗುತ್ತದೆ?

Standard Fire and Special Perils
ಸ್ಟ್ಯಾಂಡರ್ಡ್ ಬೆಂಕಿ ಮತ್ತು ವಿಶೇಷ ಅಪಾಯಗಳು

ಈ ವಿಭಾಗವು ನಿಮ್ಮ ಕಟ್ಟಡ, ಸಲಕರಣೆಗಳು ಮತ್ತು ಕೃಷಿ ವಸ್ತುಗಳನ್ನು ಬೆಂಕಿ ಮತ್ತು ವಿಶೇಷ ಅಪಾಯಗಳು, ಭೂಕಂಪ, ಸಿಡಿಲು, ಗಲಭೆ, ಮುಷ್ಕರ, ಸೈಕ್ಲೋನ್, ಚಂಡಮಾರುತ ಮತ್ತು ಸುಂಟರಗಾಳಿ, ಭೂಕುಸಿತ, ಸ್ಫೋಟ, ಕಳ್ಳತನ ಮತ್ತು ಮನೆ ಮುರಿಯುವಿಕೆ ಸೇರಿದಂತೆ ವಿವಿಧ ಸಂಭವನೀಯತೆಗಳ ವಿರುದ್ಧ ಕವರೇಜ್ ನೀಡುತ್ತದೆ.

Agriculture Pump set
ಅಗ್ರಿಕಲ್ಚರ್ ಪಂಪ್ ಸೆಟ್ 

ವಿಭಾಗವು ಡ್ರೈವಿಂಗ್ ಯೂನಿಟ್, ಸ್ವಿಚ್‌ಗಳು, ವೈರಿಂಗ್ ಮತ್ತು ಸ್ಟಾರ್ಟರ್‌ ಸೇರಿದಂತೆ ನಿಮ್ಮ ಸಬ್ಮರ್ಸಿಬಲ್ ಅಥವಾ ನಾನ್-ಸಬ್ಮರ್ಸಿಬಲ್ ಪಂಪ್‌ನ ಭಾಗಗಳಿಗೆ ಬೆಂಕಿ, ಸಿಡಿಲು, ಕಳ್ಳತನ, ಮೆಕ್ಯಾನಿಕಲ್/ಎಲೆಕ್ಟ್ರಿಕಲ್ ಬ್ರೇಕ್‌ಡೌನ್, ಗಲಭೆ, ಮುಷ್ಕರ ಅಥವಾ ದುರುದ್ದೇಶಪೂರಿತ ಹಾನಿಯ ವಿರುದ್ಧ ಕವರೇಜ್ ಒದಗಿಸುತ್ತದೆ.

Personal Accident Insurance 
ವೈಯಕ್ತಿಕ ಆಕ್ಸಿಡೆಂಟ್ ಇನ್ಶೂರೆನ್ಸ್ 

ಆಕಸ್ಮಿಕ ಸಾವು ಮತ್ತು ಶಾಶ್ವತ ಅಂಗವೈಕಲ್ಯದ ವಿರುದ್ಧ ನಿಮ್ಮನ್ನು ಮತ್ತು ನಿಮ್ಮ ಕುಟುಂಬದ ಸದಸ್ಯರನ್ನು ಕವರ್ ಮಾಡುತ್ತದೆ.

Animal Driven Cart Insurance
ಪ್ರಾಣಿ ಚಾಲಿತ ಗಾಡಿ ಇನ್ಶೂರೆನ್ಸ್

ನಿಮ್ಮ ಪ್ರಾಣಿ-ಚಾಲಿತ ವಾಹನ ಮತ್ತು ಅದರ ಭಾಗಗಳಿಗೆ ಆಕಸ್ಮಿಕ ಹಾನಿಗಳು, ಬೆಂಕಿ, ಸಿಡಿಲು, ಪ್ರವಾಹ, ದರೋಡೆ, ಮನೆ ಕಳ್ಳತನ ಅಥವಾ ದೋಚುವಿಕೆಯಿಂದ ಉಂಟಾದ ಮತ್ತು ಸಾಗಾಣಿಕೆ ಸಂದರ್ಭದಲ್ಲಿ ಸಂಭವಿಸಿದ ಹಾನಿಗಳ ವಿರುದ್ಧ ರಕ್ಷಿಸುತ್ತದೆ.

ಏನನ್ನು ಕವರ್ ಮಾಡಲಾಗಿಲ್ಲ?

What’s not covered?

ಮಾಲಿನ್ಯ ಮತ್ತು ಕಲ್ಮಶದಿಂದ ಆದ ಆಸ್ತಿ ಹಾನಿ

What’s not covered?

ಸವೆತ, ಕಾಲಕ್ರಮೇಣ ಕೆಟ್ಟು ಹೋಗುವುದು ಅಥವಾ ನಿಧಾನವಾಗಿ ಉಲ್ಬಣಗೊಳ್ಳುವ ದೋಷಗಳಿಂದ ಆದ ನಷ್ಟ ಅಥವಾ ಹಾನಿ.

What’s not covered?

ಅಡ್ಡ ಪರಿಣಾಮದಿಂದಾದ ನಷ್ಟ

What’s not covered?

ಉದ್ದೇಶಪೂರ್ವಕ ದುರ್ನಡತೆ ಅಥವಾ ಅಜಾಗ್ರತೆ

What’s not covered?

ಆಸುಪಾಸಿನಲ್ಲಿ ನಿರ್ಮಾಣ ಕಾರ್ಯ ನಡೆಯುವಾಗ ಅಥವಾ ಗಾಜನ್ನು ತೆಗೆಯುವಾಗ ಗಾಜು ಒಡೆಯುವುದು.

What’s not covered?

ದಂಡ, ಜುಲ್ಮಾನೆ, ಶಿಕ್ಷಾತ್ಮಕ ಅಥವಾ ನಿದರ್ಶನಾತ್ಮಕ ದಂಡಗಳು ಅಥವಾ ಪರಿಹಾರಾರ್ಥ ದಂಡಗಳ ಹೆಚ್ಚಳದಿಂದ ಬಂದೊದಗುವ ಯಾವುದೇ ಇತರ ದಂಡಗಳು.

What’s not covered?

ನಿರ್ದಿಷ್ಟವಾಗಿ ಘೋಷಿಸದ ಹೊರತು ಯಾವುದೇ ರೀತಿಯ ಆಭರಣ, ಅಮೂಲ್ಯ ಹರಳುಗಳು, ಹಣ, ಬುಲಿಯನ್ ಅಥವಾ ಡಾಕ್ಯುಮೆಂಟ್‌ಗಳಿಗೆ ಆದ ನಷ್ಟ ಮತ್ತು/ಅಥವಾ ಹಾನಿ.

What’s not covered?

ಕುಟುಂಬದ ಸದಸ್ಯರಿಂದ ಕಳ್ಳತನ ಮತ್ತು/ಅಥವಾ ಕನ್ನ ಅಥವಾ ದರೋಡೆ.

What’s not covered?

ಜಾನುವಾರು, ಮೋಟಾರ್ ವಾಹನ ಮತ್ತು ಪೆಡಲ್ ಸೈಕಲ್‌ಗಳಿಗೆ ಆದ ಹಾನಿಗಳು.

What’s not covered?

ಪಂಪ್ ಸೆಟ್ ಬಿಚ್ಚುವುದು, ಅದನ್ನು ರಿಪೇರಿ ಅಂಗಡಿಗೆ ಸಾಗಿಸುವುದು ಮತ್ತು ಅಲ್ಲಿಂದ ಮನೆಗೆ ತರುವುದಕ್ಕೆ ಸಂಬಂಧಿಸಿದ ವೆಚ್ಚವನ್ನು ಕವರ್ ಮಾಡುವುದಿಲ್ಲ.

ವಿಮಾ ಮೊತ್ತದ ಪ್ಲಾನ್‌ಗಳು

ನಮ್ಮಲ್ಲಿ ಐದು ಪ್ಲಾನ್‌ಗಳು ದೊರೆಯುತ್ತವೆ ಮತ್ತು ಆಯ್ಕೆ ಮಾಡಿದ ಪ್ಲಾನ್ ಆಧಾರದ ಮೇಲೆ ವಿಮಾದಾರರು ವಿಮಾ ಮೊತ್ತದ ಮಿತಿಗಳನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿ ಹೊಂದಿರುತ್ತಾರೆ.

ಯಾವುದೇ ಪ್ಲಾನ್‌ಗೆ, ಸೆಕ್ಷನ್ I ಕಡ್ಡಾಯವಾಗಿದೆ ಮತ್ತು ಅದರ ಜೊತೆಗೆ ಯಾವುದಾದರೂ ಒಂದು ವಿಭಾಗವನ್ನು ಆಯ್ಕೆ ಮಾಡಬಹುದು.

ಪಾವತಿಸಬೇಕಾದ ಪ್ರೀಮಿಯಂ ಮೊತ್ತವು ವಿಮಾದಾರರು ಆಯ್ಕೆ ಮಾಡಿದ ಪ್ಲಾನ್ ಮತ್ತು ವಿಭಾಗಗಳನ್ನು ಅವಲಂಬಿಸಿರುತ್ತದೆ.

ಇನ್ಶೂರೆನ್ಸ್ ಮಾಡಲಾದ ಮೊತ್ತ

ವಿಭಾಗ ವಿಭಾಗದ ಹೆಸರು ಪ್ಲಾನ್ - I ಪ್ಲಾನ್ - II ಪ್ಲಾನ್ - III ಪ್ಲಾನ್ - IV ಪ್ಲಾನ್ - V
1 ಆಸ್ತಿ ಹಾನಿ 50,000 100,000 150,000 200,000 250,000
2 ಕೃಷಿ ಪಂಪ್‌ಸೆಟ್‌ಗಳು 25,000 25,000 25,000 50,000 75,000
 ವೈಯಕ್ತಿಕ ಆಕ್ಸಿಡೆಂಟ್      
 ಇನ್ಶೂರ್ಡ್ ವ್ಯಕ್ತಿ 25,000 25,000 25,000 50,000 100,000
3 ಸಂಪಾದನೆ ಇಲ್ಲದ ಸಂಗಾತಿ 12,500 12,500 12,500 25,000 50,000
 1 ನೇ 2 ಮಕ್ಕಳು - ಪ್ರತೀ 10,000 10,000 10,000 20,000 40,000
4 ಪ್ರಾಣಿ ಚಾಲಿತ ಗಾಡಿ ಇನ್ಶೂರೆನ್ಸ್ 20,000 20,000 20,000 20,000 20,000
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.

ನಿಮಗೆ ಬೇಕಾದ ಎಲ್ಲಾ ಬೆಂಬಲ need-24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 16 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.

Awards

ನಾವು 18-19 ಹಣಕಾಸು ವರ್ಷದ ICAI ಪ್ರಶಸ್ತಿ ಮತ್ತು ವರ್ಷದ ಹಣಕಾಸು ವರದಿಯಲ್ಲಿನ ಶ್ರೇಷ್ಠತೆಯ ಪ್ರಶಸ್ತಿಗಳನ್ನು ಸ್ವೀಕರಿಸಿದ್ದೇವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x