Logo
R-WBCIS States ( राज्य ) - Kharif (खरीफ) 2026

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಭಾರತದಲ್ಲಿನ ಖಾಸಗಿ ವಲಯದ ವಿಮಾ ಸೇವೆ ಒದಗಿಸುವ ಸಂಸ್ಥೆಯಾಗಿದೆ.ಕರ್ನಾಟಕ ಸರ್ಕಾರವು ಸಾಲಗಾರ ಮತ್ತು ಸಾಲರಹಿತ ರೈತರಿಗಾಗಿ 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಯನ್ನು (PMFBY) ಜಾರಿಗೆ ತಂದಿದೆ.ಎಚ್‌ಡಿಎಫ್‌ಸಿ ಎರ್ಗೋಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ಗೆ ದಾವಣಗೆರೆ, ಹಾವೇರಿ,ರಾಮನಗರ,ಜಿಲ್ಲೆಅನುಮೋದನೆ ನೀಡಲಾಗಿದೆ. ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು 'ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ'ಯ ಅಡಿಯಲ್ಲಿ ಅಧಿಸೂಚಿಸಲಾದ ಎಲ್ಲಾ ಬೆಳೆಗಳಿಗೆ ಅನುಮೋದನೆ ನೀಡಿದೆ.

ಸೂಚಿಸಲಾದ ಜಿಲ್ಲೆಗಳಲ್ಲಿ ಸೂಚಿಸಲಾದ ಬೆಳೆಗಳು ಈ ಕೆಳಗಿನಂತಿವೆ

ದಾವಣಗೆರೆ - ಅಡಿಕೆ, ವೀಳ್ಯದೆಲೆ,ಮಾವಿನಹಣ್ಣು, ದಾಳಿಂಬೆ
ಹಾವೇರಿ -ಅಡಿಕೆ, ಶುಂಠಿ, ಹಸಿ ಮೆಣಸಿನಕಾಯಿ,ಮಾವಿನಹಣ್ಣು
ರಾಮನಗರ - ಮಾವಿನಹಣ್ಣು

ಯೋಜನೆ ಸಂಬಂಧಿತ ಮಾಹಿತಿ

ಪುನರ್ ರಚಿತ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯು ಹವಾಮಾನ ಸೂಚಕ ಆಧಾರಿತ ವಿಮಾ ಯೋಜನೆಯಾಗಿದ್ದು ಇದರ ಮೂಲಕ ಮಳೆ, ತಾಪಮಾನ, ಆರ್ದ್ರತೆ ಇತ್ಯಾದಿಯಂತಹ ಹವಾಮಾನದ ವೈಪರಿತ್ಯಗಳಿಂದ ಆಗುವ ಬೆಳೆ ಹಾನಿಗೆ ವಿಮೆಯ ರಕ್ಷಣೆ ಒದಗಿಸುತ್ತದೆ.ಹವಾಮಾನದ ವೈಪರಿತ್ಯದ ಪರಿಣಾಮವಾಗಿ ಆಗುವ ಬೆಳೆ ಹಾನಿಯಿಂದ ಇದು ರಕ್ಷಣೆ ಒದಗಿಸುತ್ತದೆ.

ಮಳೆಯ ಕೊರತೆ/ಅತಿವೃಷ್ಟಿ/ಬರ/ಹವಾಮಾನದ ಏರಿಳಿತ/ಅಧಿಕ ತಾಪಮಾನ, ಆರ್ದ್ರತೆ/ಬಿರುಗಾಳಿ ಮತ್ತು/ಅಥವಾ ಈ ಎಲ್ಲವೂ ಸೇರಿ ಸಂಭವಿಸುವ ವೈಪರಿತ್ಯಗಳು ಹವಾಮಾನದ ವೈಪರಿತ್ಯಗಳಾಗಿವೆ.

ಪ್ರತಿಯೊಂದು ಬೆಳೆಯನ್ನು ಬೆಳೆಯುವುದಕ್ಕೆ ಹವಾಮಾನ ಪೂರ್ವನಿರ್ಧಾರಿತವಾಗಿರುತ್ತದೆ ಮತ್ತು ಸರ್ಕಾರದ ಅಧಿಸೂಚನೆಗಳಲ್ಲಿ ಉಲ್ಲೇಖಿಸಲಾಗುತ್ತದೆ.

ವಿಮಾ ಮೊತ್ತದನಿರ್ಧಾರಣೆ

ಹವಾಮಾನ ಕೇಂದ್ರಗಳಲ್ಲಿ ದಾಖಲಾಗುವ ಹವಾಮಾನದ ಮಾಹಿತಿಗೆ ಅನುಸಾರ ಹವಾಮಾನದ ಮಾಹಿತಿಯನ್ನು ಪಡೆದ ನಂತರ ನೀಡಿರುವ ನಿಯಮಗಳ ಪಟ್ಟಿಯ ಪ್ರಕಾರ ವಿಮಾ ಮೊತ್ತ ಪ್ರಕ್ರಿಯೆಯನ್ನು ಆರಂಭಿಸಲಾಗುವುದು.

ನಿಯಮಗಳ ಪಟ್ಟಿಯಲ್ಲಿನ ನಿಯಮಗಳಿಗೆ ಅನುಗುಣಪವಾಗಿ ವಿಮಾ ಮೊತ್ತ ಪಾವತಿಯ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡು ಯೋಜನಾಬದ್ಧ ರೀತಿಯಲ್ಲಿ ಪಾವತಿಯ ಸ್ವರೂಪವನ್ನು ಶಿಸ್ತುಬದ್ಧಗೊಳಿಸಲಾಗುವುದು.

ಭಾರತೀಯ ಹವಾಮಾನ ಇಲಾಖೆ, ಎನ್ ಸಿಎಂಎಲ್ (ನ್ಯಾಷನಲ್ ಅಸಿಸ್ಟಂಟ್ ಮ್ಯಾನೇಜರ್ ಲಿಮಿಟೆಡ್), ಸ್ಕೈಮೆಟ್ ನಂತಹ ಸ್ವತಂತ್ರ ಮೂಲಗಳಿಂದ ಹವಾಮಾನದ ಮಾಹಿತಿಯನ್ನು ಪಡೆದುಕೊಳ್ಳಲಾಗುವುದು. ಇದು ಸರ್ಕಾರದಿಂದ ಅನುಮೋದಿತಗೊಂಡಿದೆ.

ಬೆಳೆ ಹಾನಿಯ ವಿಮಾ ಮೊತ್ತದ ಪಡೆಯುವುದಕ್ಕೆ ನಿಯಮ ಪಟ್ಟಿಯಲ್ಲಿ ಸರ್ಕಾರವು ನಿರ್ದಿಷ್ಟವಾಗಿ ಸೂಚಿಸದೇ ಇದ್ದ ಪಕ್ಷದಲ್ಲಿಬೆಳೆ ಹಾನಿಯ ಸಮೀಕ್ಷೆ ಕೈಗೊಳ್ಳಬೇಕಾದ ಅವಶ್ಯಕತೆ ಇರುವುದಿಲ್ಲ.

ಬಹುತೇಕ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಆರ್ ಡಬ್ಲ್ಯೂಬಿಸಿಐಎಸ್ ವಿಮಾ ವ್ಯಾಪ್ತಿಗೆ ಒಳಪಟ್ಟಿವೆ.

ವಿಮಾ ಕಂತು ಹಣ

ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ಒಟ್ಟು ವಿಮಾ ಮೊತ್ತದ ಶೇ. 5ರಷ್ಟು ಇಲ್ಲವೇ ಅದಕ್ಕಿಂತ ಯಾವುದು ಕಡಿಮೆ ಇದೆಯೋ ಅದು ವಿಮಾಕಂತು ಆಗಿರುತ್ತದೆ.

ಆರ್ ಡಬ್ಲ್ಯೂಬಿಸಿಐಎಸ್ ಗೆ ರೈತನಿಗೆ ಯಾವ ಅರ್ಹತೆ ಇರಬೇಕು?

ಯೋಜನೆಗಳ ಮತ್ತು ವಿವರವಾದ ಬೆಳೆಗಳ ಪ್ರೀಮಿಯಂ ವಿವರಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಗ್ರಾಹಕ ಮಾಹಿತಿ ಹಾಳೆ ನೋಡಿ:
ರಾಜ್ಯ ಜಿಲ್ಲೆಯ ಹೆಸರು ಸಮನ್ವಯಕಾರರ ಹೆಸರು ಮೊಬೈಲ್ ಸಂಖ್ಯೆ ಕಚೇರಿಯ ವಿಳಾಸ
ಕರ್ನಾಟಕ ಹಾವೇರಿ ಬಸವ ರಾಜು ಹಿರೇಮಠ 8976701462 HDFC ERGO GIC ಲಿಮಿಟೆಡ್ ಸಿ.ಜಿ. ತೊಟ್ಟನ್ನನವರ್ ಕಟ್ಟಡ ಉಜ್ಜೀವನ್ ಬ್ಯಾಂಕ್ ಹಾನಗಲ್ ರಸ್ತೆ, ಹಾವೇರಿ -581110
ಕರ್ನಾಟಕ ದಾವಣಗೆರೆ ಶಶಿಕಿರಣ ಎಸ್ 8431462824 ಕೆಎಸ್‌ಆರ್‌ಟಿಸಿ ಬಸ್ ನಿಲ್ಲು ಹರಿಹರ -577601
ಕರ್ನಾಟಕ ರಾಮನಗರ ಸಂಪತ್ 9535060404 ಬಿಲಗುಂಬ ಗ್ರಾಮ ಕಸಬಾ ರಾಮನಗರ ತಾಲೂಕು -562159
ಹಕ್ಕುಗಳ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿಗಾಗಿ

ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.